ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ವರ್ಗಾರೋಹಣ ಪರ್ವ
ಸ್ವರ್ಗಾರೋಹಣ ಪರ್ವ
ಅಧ್ಯಾಯ 5
ಸಾರ
ಕೌರವ-ಪಾಂಡವರ ಕಡೆಗಳಿಂದ ಯುದ್ಧಮಾಡಿ ಮಡಿದ ಎಲ್ಲರೂ ತಮ್ಮ ತಮ್ಮ ಸ್ಥಾನಗಳಿಗೆ ಹೋದುದನ್ನು ಹೇಳಿ ವೈಶಂಪಾಯನನು ಜನಮೇಜಯನಿಗೆ ಹೇಳುತ್ತಿದ್ದ ಮಹಾಭಾರತ ಕಥೆಯನ್ನು ಮುಕ್ತಾಯಗೊಳಿಸಿದುದು (1-25). ಸೂತ ಉಗ್ರಶ್ರವನು ಶೌನಕಾದಿ ಮುನಿಗಳಿಗೆ ಮಹಾಭಾರತ ಶ್ರವಣ ಫಲವನ್ನು ತಿಳಿಸಿದುದು (26-54).
18005001 ಜನಮೇಜಯ ಉವಾಚ।
18005001a ಭೀಷ್ಮದ್ರೋಣೌ ಮಹಾತ್ಮಾನೌ ಧೃತರಾಷ್ಟ್ರಶ್ಚ ಪಾರ್ಥಿವಃ।
18005001c ವಿರಾಟದ್ರುಪದೌ ಚೋಭೌ ಶಂಖಶ್ಚೈವೋತ್ತರಸ್ತಥಾ।।
18005002a ಧೃಷ್ಟಕೇತುರ್ಜಯತ್ಸೇನೋ ರಾಜಾ ಚೈವ ಸ ಸತ್ಯಜಿತ್।
18005002c ದುರ್ಯೋಧನಸುತಾಶ್ಚೈವ ಶಕುನಿಶ್ಚೈವ ಸೌಬಲಃ।।
18005003a ಕರ್ಣಪುತ್ರಾಶ್ಚ ವಿಕ್ರಾಂತಾ ರಾಜಾ ಚೈವ ಜಯದ್ರಥಃ।
18005003c ಘಟೋತ್ಕಚಾದಯಶ್ಚೈವ ಯೇ ಚಾನ್ಯೇ ನಾನುಕೀರ್ತಿತಾಃ।।
18005004a ಯೇ ಚಾನ್ಯೇ ಕೀರ್ತಿತಾಸ್ತತ್ರ ರಾಜಾನೋ ದೀಪ್ತಮೂರ್ತಯಃ।
18005004c ಸ್ವರ್ಗೇ ಕಾಲಂ ಕಿಯಂತಂ ತೇ ತಸ್ಥುಸ್ತದಪಿ ಶಂಸ ಮೇ।।
ಜನಮೇಜಯನು ಹೇಳಿದನು: “ಭೀಷ್ಮ-ದ್ರೋಣರು, ರಾಜ ಧೃತರಾಷ್ಟ್ರ, ವಿರಾಟ-ದ್ರುಪದರು, ಶಂಖ-ಉತ್ತರರು, ಧೃಷ್ಟಕೇತು-ಜಯತ್ಸೇನರು, ರಾಜಾ ಸತ್ಯಜಿತ್, ದುರ್ಯೋಧನನ ಮಕ್ಕಳು, ಸೌಬಲ ಶಕುನಿ, ಕರ್ಣನ ಮಕ್ಕಳು, ವಿಕ್ರಾಂತ ರಾಜಾ ಜಯದ್ರಥ, ಘಟೋತ್ಕಚಾದಿಗಳು, ಮತ್ತು ಇಲ್ಲಿ ಹೆಸರಿಸದ ಅನ್ಯರು, ಹಾಗೂ ಇಲ್ಲಿ ಹೆಸರಿಸಿದ ಅನ್ಯ ದೀಪ್ತಮೂರ್ತಿ ರಾಜರು – ಇವರು ಎಷ್ಟು ಕಾಲ ಸ್ವರ್ಗದಲ್ಲಿದ್ದರು ಎನ್ನುವುದನ್ನು ನನಗೆ ಹೇಳು!
18005005a ಆಹೋ ಸ್ವಿಚ್ಚಾಶ್ವತಂ ಸ್ಥಾನಂ ತೇಷಾಂ ತತ್ರ ದ್ವಿಜೋತ್ತಮ।
18005005c ಅಂತೇ ವಾ ಕರ್ಮಣಃ ಕಾಂ ತೇ ಗತಿಂ ಪ್ರಾಪ್ತಾ ನರರ್ಷಭಾಃ।
18005005e ಏತದಿಚ್ಚಾಮ್ಯಹಂ ಶ್ರೋತುಂ ಪ್ರೋಚ್ಯಮಾನಂ ತ್ವಯಾ ದ್ವಿಜ।।
ದ್ವಿಜೋತ್ತಮ! ಅವರಿಗೆ ಅಲ್ಲಿಯ ಆ ಸ್ಥಾನವು ಶಾಶ್ವತವಾದುದೇ? ಹಾಗಲ್ಲದಿದ್ದರೆ ಕರ್ಮಫಲಗಳು ಮುಗಿದ ನಂತರ ಆ ನರರ್ಷಭರು ಯಾವ ಗತಿಯನ್ನು ಹೊಂದಿದರು? ದ್ವಿಜ! ಇದನ್ನು ಕೇಳಲು ಬಯಸುತ್ತಿದ್ದೇನಾದುದರಿಂದ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ!”
18005006 ಸೂತ ಉವಾಚ।
18005006a ಇತ್ಯುಕ್ತಃ ಸ ತು ವಿಪ್ರರ್ಷಿರನುಜ್ಞಾತೋ ಮಹಾತ್ಮನಾ।
18005006c ವ್ಯಾಸೇನ ತಸ್ಯ ನೃಪತೇರಾಖ್ಯಾತುಮುಪಚಕ್ರಮೇ।।
ಸೂತನು ಹೇಳಿದನು: “ಅವನು ಹೀಗೆ ಕೇಳಲು ವಿಪ್ರರ್ಷಿ ವೈಶಂಪಾಯನನು ಮಹಾತ್ಮ ವ್ಯಾಸನ ಅನುಮತಿಯನ್ನು ಪಡೆದು ನೃಪತಿ ಜನಮೇಜಯನಿಗೆ ಹೇಳಲು ತೊಡಗಿದನು:
18005007 ವೈಶಂಪಾಯನ ಉವಾಚ।
18005007a ಗಂತವ್ಯಂ ಕರ್ಮಣಾಮಂತೇ ಸರ್ವೇಣ ಮನುಜಾಧಿಪ।
18005007c ಶೃಣು ಗುಹ್ಯಮಿದಂ ರಾಜನ್ದೇವಾನಾಂ ಭರತರ್ಷಭ।
18005007e ಯದುವಾಚ ಮಹಾತೇಜಾ ದಿವ್ಯಚಕ್ಷುಃ ಪ್ರತಾಪವಾನ್।।
18005008a ಮುನಿಃ ಪುರಾಣಃ ಕೌರವ್ಯ ಪಾರಾಶರ್ಯೋ ಮಹಾವ್ರತಃ।
18005008c ಅಗಾಧಬುದ್ಧಿಃ ಸರ್ವಜ್ಞೋ ಗತಿಜ್ಞಃ ಸರ್ವಕರ್ಮಣಾಮ್।।
ವೈಶಂಪಾಯನನು ಹೇಳಿದನು: “ಮನುಜಾಧಿಪ! ಎಲ್ಲರ ಕರ್ಮಗಳೂ ಅಂತ್ಯವಾಗುವವೇ! ರಾಜನ್! ಭರತರ್ಷಭ! ದೇವತೆಗಳ ಈ ರಹಸ್ಯವನ್ನು ಕೇಳು. ಕೌರವ್ಯ! ಮಹಾತೇಜಸ್ವಿ, ದಿವ್ಯಚಕ್ಷುಷಿ, ಪ್ರತಾಪವಾನ್, ಮುನಿ, ಪುರಾಣ, ಮಹಾವ್ರತ, ಅಗಾಧಬುದ್ಧಿ, ಸರ್ವಜ್ಞ, ಸರ್ವಕರ್ಮಗಳ ಮಾರ್ಗವನ್ನು ತಿಳಿದ ಪಾರಶರ್ಯ ವ್ಯಾಸನು ಇದರ ಕುರಿತು ಹೇಳಿದ್ದನು.
18005009a ವಸೂನೇವ ಮಹಾತೇಜಾ ಭೀಷ್ಮಃ ಪ್ರಾಪ ಮಹಾದ್ಯುತಿಃ।
18005009c ಅಷ್ಟಾವೇವ ಹಿ ದೃಶ್ಯಂತೇ ವಸವೋ ಭರತರ್ಷಭ।।
ಭರತರ್ಷಭ! ಮಹಾದ್ಯುತಿ ಭೀಷ್ಮನು ವಸುವಿನ ಮಹಾತೇಜಸ್ಸನ್ನೇ ಪಡೆದನು. ಆದುದರಿಂದ ಈಗ ಎಂಟು ವಸುಗಳು ಕಾಣುತ್ತಾರೆ.
18005010a ಬೃಹಸ್ಪತಿಂ ವಿವೇಶಾಥ ದ್ರೋಣೋ ಹ್ಯಂಗಿರಸಾಂ ವರಮ್।
18005010c ಕೃತವರ್ಮಾ ತು ಹಾರ್ದಿಕ್ಯಃ ಪ್ರವಿವೇಶ ಮರುದ್ಗಣಮ್।।
ದ್ರೋಣನು ಅಂಗಿರಸರಲ್ಲಿ ಶ್ರೇಷ್ಠ ಬೃಹಸ್ಪತಿಯನ್ನು ಪ್ರವೇಶಿಸಿದನು. ಹಾರ್ದಿಕ್ಯ ಕೃತವರ್ಮನು ಮರುದ್ಗಣಗಳನ್ನು ಸೇರಿದನು.
18005011a ಸನತ್ಕುಮಾರಂ ಪ್ರದ್ಯುಮ್ನಃ ಪ್ರವಿವೇಶ ಯಥಾಗತಮ್।
18005011c ಧೃತರಾಷ್ಟ್ರೋ ಧನೇಶಸ್ಯ ಲೋಕಾನ್ಪ್ರಾಪ ದುರಾಸದಾನ್।।
ಪ್ರದ್ಯುಮ್ನನು ಎಲ್ಲಿಂದ ಬಂದಿದ್ದನೋ ಆ ಸನತ್ಕುಮಾರನನ್ನು ಪ್ರವೇಶಿಸಿದನು. ಧೃತರಾಷ್ಟ್ರನು ಧನೇಶ ಕುಬೇರನ ದುರಾಸದ ಲೋಕವನ್ನು ಪಡೆದನು.
18005012a ಧೃತರಾಷ್ಟ್ರೇಣ ಸಹಿತಾ ಗಾಂಧಾರೀ ಚ ಯಶಸ್ವಿನೀ।
18005012c ಪತ್ನೀಭ್ಯಾಂ ಸಹಿತಃ ಪಾಂಡುರ್ಮಹೇಂದ್ರಸದನಂ ಯಯೌ।।
ಧೃತರಾಷ್ಟ್ರನೊಂದಿಗೆ ಯಶಸ್ವಿನೀ ಗಾಂಧಾರಿಯೂ ಹೋದಳು. ಇಬ್ಬರು ಪತ್ನಿಯರೊಂದಿಗೆ ಪಾಂಡುವು ಮಹೇಂದ್ರನ ಸದನಕ್ಕೆ ಹೋದನು.
18005013a ವಿರಾಟದ್ರುಪದೌ ಚೋಭೌ ಧೃಷ್ಟಕೇತುಶ್ಚ ಪಾರ್ಥಿವಃ।
18005013c ನಿಶಠಾಕ್ರೂರಸಾಂಬಾಶ್ಚ ಭಾನುಃ ಕಂಪೋ ವಿಡೂರಥಃ।।
18005014a ಭೂರಿಶ್ರವಾಃ ಶಲಶ್ಚೈವ ಭೂರಿಶ್ಚ ಪೃಥಿವೀಪತಿಃ।
18005014c ಉಗ್ರಸೇನಸ್ತಥಾ ಕಂಸೋ ವಸುದೇವಶ್ಚ ವೀರ್ಯವಾನ್।।
18005015a ಉತ್ತರಶ್ಚ ಸಹ ಭ್ರಾತ್ರಾ ಶಂಖೇನ ನರಪುಂಗವಃ।
18005015c ವಿಶ್ವೇಷಾಂ ದೇವತಾನಾಂ ತೇ ವಿವಿಶುರ್ನರಸತ್ತಮಾಃ।।
ವಿರಾಟ-ದ್ರುಪದರು, ಪಾರ್ಥಿವ ಧೃಷ್ಟಕೇತು, ನಿಶಠ, ಅಕ್ರೂರ, ಸಾಂಬ, ಭಾನು, ಕಂಪ, ವಿಡೂರಥ, ಭೂರಿಶ್ರವ, ಶಲ, ಪೃಥಿವೀಪತಿ ಭೂರಿ, ಉಗ್ರಸೇನ, ಕಂಸ, ವೀರ್ಯವಾನ್ ವಸುದೇವ, ಉತ್ತರ, ಜೊತೆಗೆ ಅವನ ಸಹೋದರ ನರಪುಂಗವ ಶಂಖ ಈ ನರಸತ್ತಮರು ವಿಶ್ವೇ ದೇವತೆಗಳನ್ನು ಪ್ರವೇಶಿಸಿದರು.
18005016a ವರ್ಚಾ ನಾಮ ಮಹಾತೇಜಾಃ ಸೋಮಪುತ್ರಃ ಪ್ರತಾಪವಾನ್।
18005016c ಸೋಽಭಿಮನ್ಯುರ್ನೃಸಿಂಹಸ್ಯ ಫಲ್ಗುನಸ್ಯ ಸುತೋಽಭವತ್।।
ವರ್ಚಾ ಎಂಬ ಹೆಸರಿನ ಮಹಾತೇಜಸ್ವೀ ಪ್ರತಾಪವಾನ್ ಸೋಮಪುತ್ರನು ನರಸಿಂಹ ಫಲ್ಗುನನ ಮಗ ಅಭಿಮನ್ಯುವಾಗಿದ್ದನು.
18005017a ಸ ಯುದ್ಧ್ವಾ ಕ್ಷತ್ರಧರ್ಮೇಣ ಯಥಾ ನಾನ್ಯಃ ಪುಮಾನ್ಕ್ವ ಚಿತ್।
18005017c ವಿವೇಶ ಸೋಮಂ ಧರ್ಮಾತ್ಮಾ ಕರ್ಮಣೋಽಂತೇ ಮಹಾರಥಃ।।
ಬೇರಾವ ಪುರುಷನೂ ಮಾಡಿರದಂಥಹ ಯುದ್ಧವನ್ನು ಕ್ಷತ್ರಧರ್ಮದಂತೆ ಮಾಡಿ ಆ ಧರ್ಮಾತ್ಮ ಮಹಾರಥನು ಕರ್ಮಫಲಗಳು ಅಂತ್ಯವಾಗಲು ಸೋಮನನ್ನು ಪ್ರವೇಶಿಸಿದನು.
18005018a ಆವಿವೇಶ ರವಿಂ ಕರ್ಣಃ ಪಿತರಂ ಪುರುಷರ್ಷಭ।
18005018c ದ್ವಾಪರಂ ಶಕುನಿಃ ಪ್ರಾಪ ಧೃಷ್ಟದ್ಯುಮ್ನಸ್ತು ಪಾವಕಮ್।।
ಪುರುಷರ್ಷಭ! ಕರ್ಣನು ತಂದೆ ರವಿಯನ್ನು ಪ್ರವೇಶಿಸಿದನು. ಶಕುನಿಯು ದ್ವಾಪರನನ್ನೂ ಧೃಷ್ಟದ್ಯುಮ್ನನು ಅಗ್ನಿಯನ್ನೂ ಪ್ರವೇಶಿಸಿದರು.
18005019a ಧೃತರಾಷ್ಟ್ರಾತ್ಮಜಾಃ ಸರ್ವೇ ಯಾತುಧಾನಾ ಬಲೋತ್ಕಟಾಃ।
18005019c ಋದ್ಧಿಮಂತೋ ಮಹಾತ್ಮಾನಃ ಶಸ್ತ್ರಪೂತಾ ದಿವಂ ಗತಾಃ।
18005019e ಧರ್ಮಮೇವಾವಿಶತ್ಕ್ಷತ್ತಾ ರಾಜಾ ಚೈವ ಯುಧಿಷ್ಠಿರಃ।।
ಧೃತರಾಷ್ಟ್ರನ ಮಕ್ಕಳೆಲ್ಲರೂ ಬಲೋತ್ಕಟ ದುಷ್ಟ ರಾಕ್ಷಸರಾಗಿದ್ದರು. ಈಗ ಶಸ್ತ್ರಗಳಿಂದ ಪೂತರೂ, ಮಹಾತ್ಮರೂ, ಉತ್ತಮರೂ ಆಗಿ ಅವರು ಸ್ವರ್ಗಕ್ಕೆ ತೆರಳಿದರು.
18005020a ಅನಂತೋ ಭಗವಾನ್ದೇವಃ ಪ್ರವಿವೇಶ ರಸಾತಲಮ್।
18005020c ಪಿತಾಮಹನಿಯೋಗಾದ್ಧಿ ಯೋ ಯೋಗಾದ್ಗಾಮಧಾರಯತ್।।
ಭಗವಾನ್ ಅನಂತ ದೇವನು ಪಿತಾಮಹನ ನಿಯೋಗದಂತೆ ತನ್ನ ಯೋಗದಿಂದ ಭೂಮಿಯನ್ನು ಹೊರಲು ರಸಾತಲವನ್ನು ಪ್ರವೇಶಿಸಿದನು.
18005021a ಷೋಡಶಸ್ತ್ರೀಸಹಸ್ರಾಣಿ ವಾಸುದೇವಪರಿಗ್ರಹಃ।
18005021c ನ್ಯಮಜ್ಜಂತ ಸರಸ್ವತ್ಯಾಂ ಕಾಲೇನ ಜನಮೇಜಯ।
18005021e ತಾಶ್ಚಾಪ್ಯಪ್ಸರಸೋ ಭೂತ್ವಾ ವಾಸುದೇವಮುಪಾಗಮನ್।।
ಜನಮೇಜಯ! ವಾಸುದೇವನು ಕೈಹಿಡಿದಿದ್ದ ಹದಿನಾರು ಸಾವಿರ ಸ್ತ್ರೀಯರು ಸರಸ್ವತಿಯಲ್ಲಿ ಮುಳುಗಿ ಕಾಲಾಂತರದಲ್ಲಿ ಅಪ್ಸರೆಯರಾಗಿ ವಾಸುದೇವನ ಬಳಿಸೇರಿದರು.
18005022a ಹತಾಸ್ತಸ್ಮಿನ್ಮಹಾಯುದ್ಧೇ ಯೇ ವೀರಾಸ್ತು ಮಹಾರಥಾಃ।
18005022c ಘಟೋತ್ಕಚಾದಯಃ ಸರ್ವೇ ದೇವಾನ್ಯಕ್ಷಾಂಶ್ಚ ಭೇಜಿರೇ।।
ಆ ಮಹಾಯುದ್ಧದಲ್ಲಿ ಹತರಾದ ಘಟೋತ್ಕಚನೇ ಮೊದಲಾದ ಮಹಾರಥ ವೀರರೆಲ್ಲರೂ ದೇವತೆಗಳೂ ಯಕ್ಷರೂ ಆದರು.
18005023a ದುರ್ಯೋಧನಸಹಾಯಾಶ್ಚ ರಾಕ್ಷಸಾಃ ಪರಿಕೀರ್ತಿತಾಃ।
18005023c ಪ್ರಾಪ್ತಾಸ್ತೇ ಕ್ರಮಶೋ ರಾಜನ್ಸರ್ವಲೋಕಾನನುತ್ತಮಾನ್।।
18005024a ಭವನಂ ಚ ಮಹೇಂದ್ರಸ್ಯ ಕುಬೇರಸ್ಯ ಚ ಧೀಮತಃ।
18005024c ವರುಣಸ್ಯ ತಥಾ ಲೋಕಾನ್ವಿವಿಶುಃ ಪುರುಷರ್ಷಭಾಃ।।
ದುರ್ಯೋಧನನ ಸಹಾಯಕರಾಗಿದ್ದ ಆ ಪುರುಷರ್ಷಭರು ರಾಕ್ಷಸರಾಗಿದ್ದರೆಂದು ಹೇಳುತ್ತಾರೆ. ರಾಜನ್! ಅವರೆಲ್ಲರೂ ಕೂಡ ಕ್ರಮೇಣವಾಗಿ ಉತ್ತಮ ಲೋಕಗಳನ್ನು ಪಡೆದು ಮಹೇಂದ್ರ, ಧೀಮಂತ ಕುಬೇರ ಮತ್ತು ವರುಣನ ಭವನ-ಲೋಕಗಳನ್ನು ಪ್ರವೇಶಿಸಿದರು.
18005025a ಏತತ್ತೇ ಸರ್ವಮಾಖ್ಯಾತಂ ವಿಸ್ತರೇಣ ಮಹಾದ್ಯುತೇ।
18005025c ಕುರೂಣಾಂ ಚರಿತಂ ಕೃತ್ಸ್ನಂ ಪಾಂಡವಾನಾಂ ಚ ಭಾರತ।।
ಮಹಾದ್ಯುತೇ! ಭಾರತ! ಇದೂವರೆಗೆ ಕುರುಗಳ ಮತ್ತು ಪಾಂಡವರ ಸಮಗ್ರ ಚರಿತ್ರೆಯನ್ನು ವಿಸ್ತಾರವಾಗಿ ಎಲ್ಲವನ್ನೂ ಹೇಳಿದ್ದಾಯಿತು!”"
18005026 ಸೂತ ಉವಾಚ ।
18005026a ಏತಚ್ಛೃತ್ವಾ ದ್ವಿಜಶ್ರೇಷ್ಠಾತ್ಸ ರಾಜಾ ಜನಮೇಜಯಃ।
18005026c ವಿಸ್ಮಿತೋಽಭವದತ್ಯರ್ಥಂ ಯಜ್ಞಕರ್ಮಾಂತರೇಷ್ವಥ।।
ಸೂತನು ಹೇಳಿದನು: “ಸರ್ಪಯಜ್ಞದ ಕರ್ಮಗಳ ಮಧ್ಯೆ ದ್ವಿಜಶ್ರೇಷ್ಠ ವೈಶಂಪಾಯನನಿಂದ ಇದನ್ನು ಕೇಳಿದ ರಾಜಾ ಜನಮೇಜಯನು ಬಹಳ ವಿಸ್ಮಿತನಾದನು.
18005027a ತತಃ ಸಮಾಪಯಾಮಾಸುಃ ಕರ್ಮ ತತ್ತಸ್ಯ ಯಾಜಕಾಃ।
18005027c ಆಸ್ತೀಕಶ್ಚಾಭವತ್ಪ್ರೀತಃ ಪರಿಮೋಕ್ಷ್ಯ ಭುಜಂಗಮಾನ್।।
ಅನಂತರ ಯಾಜಕರು ಅವನ ಆ ಕರ್ಮವನ್ನು ಮಾಡಿ ಪೂರೈಸಿದರು. ಸರ್ಪಗಳನ್ನು ಉಳಿಸಿ ಆಸ್ತೀಕನೂ ಪ್ರೀತನಾದನು.
18005028a ತತೋ ದ್ವಿಜಾತೀನ್ಸರ್ವಾಂಸ್ತಾನ್ದಕ್ಷಿಣಾಭಿರತೋಷಯತ್।
18005028c ಪೂಜಿತಾಶ್ಚಾಪಿ ತೇ ರಾಜ್ಞಾ ತತೋ ಜಗ್ಮುರ್ಯಥಾಗತಮ್।।
ಆಗ ಅವನು ಅಲ್ಲಿದ್ದ ಸರ್ವ ದ್ವಿಜಾತಿಯವರಿಗೆ ದಕ್ಷಿಣೆಗಳಿಂದ ತೃಪ್ತಿಗೊಳಿಸಿದನು. ರಾಜನಿಂದ ಪೂಜಿತರಾದ ಅವರು ಎಲ್ಲಿಂದ ಬಂದಿದ್ದರೋ ಅಲ್ಲಿಗೆ ಹೊರಟು ಹೋದರು.
18005029a ವಿಸರ್ಜಯಿತ್ವಾ ವಿಪ್ರಾಂಸ್ತಾನ್ರಾಜಾಪಿ ಜನಮೇಜಯಃ।
18005029c ತತಸ್ತಕ್ಷಶಿಲಾಯಾಃ ಸ ಪುನರಾಯಾದ್ಗಜಾಹ್ವಯಮ್।।
ಆ ವಿಪ್ರರನ್ನು ಬೀಳ್ಕೊಟ್ಟು ರಾಜಾ ಜನಮೇಜಯನೂ ಕೂಡ ತಕ್ಷಶಿಲೆಯಿಂದ ಪುನಃ ಹಸ್ತಿನಾಪುರಕ್ಕೆ ಹಿಂದಿರುಗಿದನು.
18005030a ಏತತ್ತೇ ಸರ್ವಮಾಖ್ಯಾತಂ ವೈಶಂಪಾಯನಕೀರ್ತಿತಮ್।
18005030c ವ್ಯಾಸಾಜ್ಞಯಾ ಸಮಾಖ್ಯಾತಂ ಸರ್ಪಸತ್ರೇ ನೃಪಸ್ಯ ಹ।।
ಇದೂವರೆಗೆ ನಾನು ನೃಪನ ಸರ್ಪಸತ್ರದಲ್ಲಿ ವ್ಯಾಸನ ಆಜ್ಞೆಯಂತೆ ವೈಶಂಪಾಯನನು ಹೇಳಿದ್ದ ಎಲ್ಲವನ್ನೂ ನಿಮಗೆ ಹೇಳಿದ್ದಾಯಿತು.
18005031a ಪುಣ್ಯೋಽಯಮಿತಿಹಾಸಾಖ್ಯಃ ಪವಿತ್ರಂ ಚೇದಮುತ್ತಮಮ್।
18005031c ಕೃಷ್ಣೇನ ಮುನಿನಾ ವಿಪ್ರ ನಿಯತಂ ಸತ್ಯವಾದಿನಾ।।
18005032a ಸರ್ವಜ್ಞೇನ ವಿಧಿಜ್ಞೇನ ಧರ್ಮಜ್ಞಾನವತಾ ಸತಾ।
18005032c ಅತೀಂದ್ರಿಯೇಣ ಶುಚಿನಾ ತಪಸಾ ಭಾವಿತಾತ್ಮನಾ।।
ವಿಪ್ರ! ಇತಿಹಾಸವೆಂದು ಕರೆಯಲ್ಪಡುವ ಈ ಪುಣ್ಯ ಉತ್ತಮ ಕೃತಿಯನ್ನು ನಿಯತನೂ ಸತ್ಯವಾದಿಯೂ ಆದ ಸರ್ವಜ್ಞ, ವಿಧಿಜ್ಞ, ಧರ್ಮಜ್ಞ, ಸಾಧು, ಅತೀಂದ್ರಿಯ, ಶುಚಿ, ತಪಸ್ವಿ, ಭಾವಿತಾತ್ಮ, ಮುನಿ ಕೃಷ್ಣನು ರಚಿಸಿದನು.
18005033a ಐಶ್ವರ್ಯೇ ವರ್ತತಾ ಚೈವ ಸಾಂಖ್ಯಯೋಗವಿದಾ ತಥಾ।
18005033c ನೈಕತಂತ್ರವಿಬುದ್ಧೇನ ದೃಷ್ಟ್ವಾ ದಿವ್ಯೇನ ಚಕ್ಷುಷಾ।।
18005034a ಕೀರ್ತಿಂ ಪ್ರಥಯತಾ ಲೋಕೇ ಪಾಂಡವಾನಾಂ ಮಹಾತ್ಮನಾಮ್।
18005034c ಅನ್ಯೇಷಾಂ ಕ್ಷತ್ರಿಯಾಣಾಂ ಚ ಭೂರಿದ್ರವಿಣತೇಜಸಾಮ್।।
ಆ ಸಿದ್ಧೈಶ್ವರ್ಯಗಳಿಂದ ಕೂಡಿದ, ಸಾಂಖ್ಯಯೋಗದ ಜ್ಞಾನಿ, ಅನೇಕತಂತ್ರಗಳ ಜ್ಞಾನಿಯು ಲೋಕದಲ್ಲಿ ಮಹಾತ್ಮ ಪಾಂಡವರ ಮತ್ತು ಭೂರಿದ್ರವಿಣ ತೇಜಸ್ವೀ ಅನ್ಯ ಕ್ಷತ್ರಿಯರ ಕೀರ್ತಿಯನ್ನು ಪ್ರಥಿತಗೊಳಿಸಿದನು.
18005035a ಯ ಇದಂ ಶ್ರಾವಯೇದ್ವಿದ್ವಾನ್ಸದಾ ಪರ್ವಣಿ ಪರ್ವಣಿ।
18005035c ಧೂತಪಾಪ್ಮಾ ಜಿತಸ್ವರ್ಗೋ ಬ್ರಹ್ಮಭೂಯಾಯ ಗಚ್ಚತಿ।।
ಇದನ್ನು ಸದಾ ಪರ್ವ-ಪರ್ವಗಳಲ್ಲಿ ಹೇಳುವ ವಿದ್ವಾಂಸನು ಪಾಪಗಳನ್ನು ತೊಳೆದು ಪೂತಾತ್ಮನಾಗಿ ಸ್ವರ್ಗವನ್ನು ಪಡೆದು ನಂತರ ಬ್ರಹ್ಮನನ್ನು ಸೇರುತ್ತಾನೆ.
18005036a ಯಶ್ಚೇದಂ ಶ್ರಾವಯೇಚ್ಚ್ರಾದ್ಧೇ ಬ್ರಾಹ್ಮಣಾನ್ಪಾದಮಂತತಃ।
18005036c ಅಕ್ಷಯ್ಯಮನ್ನಪಾನಂ ವೈ ಪಿತೄಂಸ್ತಸ್ಯೋಪತಿಷ್ಠತೇ।।
ಶ್ರಾದ್ಧದಲ್ಲಿ ಇದನ್ನು, ಅಥವಾ ಕೊನೆಯದಾಗಿ ಶ್ಲೋಕದ ಕಾಲುಭಾಗವನ್ನಾದರೂ ಬ್ರಾಹ್ಮಣರಿಗೆ ಹೇಳಿ ಕೇಳಿಸಿದರೆ ನೀಡಿದ ಅನ್ನಪಾನಗಳು ಅಕ್ಷಯವಾಗಿ ಪಿತೃಗಳನ್ನು ಸೇರುತ್ತವೆ.
18005037a ಅಹ್ನಾ ಯದೇನಃ ಕುರುತೇ ಇಂದ್ರಿಯೈರ್ಮನಸಾಪಿ ವಾ।
18005037c ಮಹಾಭಾರತಮಾಖ್ಯಾಯ ಪಶ್ಚಾತ್ಸಂಧ್ಯಾಂ ಪ್ರಮುಚ್ಯತೇ।।
ಸಾಯಂಕಾಲ ಈ ಮಹಾಭಾರತವನ್ನು ಹೇಳಿದರೆ ಹಗಲಿನಲ್ಲಿ ಮಾಡಿದ ಮಾನಸಿಕ ಅಥವಾ ಇಂದ್ರಿಯಗಳಿಂದ ಮಾಡಿದ ಪಾಪಗಳಿಂದ ಮುಕ್ತನಾಗುತ್ತಾನೆ.
18005038a ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ।
18005038c ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವ ಚಿತ್।।
ಭರತರ್ಷಭ! ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇದರಲ್ಲಿರುವವು ಬೇರೆಕಡೆಯೂ ಇವೆ. ಆದರೆ ಇಲ್ಲಿ ಇಲ್ಲದೇ ಇರುವುದು ಬೇರೆಲ್ಲಿಯೂ ಇಲ್ಲ.
18005039a ಜಯೋ ನಾಮೇತಿಹಾಸೋಽಯಂ ಶ್ರೋತವ್ಯೋ ಭೂತಿಮಿಚ್ಚತಾ।
18005039c ರಾಜ್ಞಾ ರಾಜಸುತೈಶ್ಚಾಪಿ ಗರ್ಭಿಣ್ಯಾ ಚೈವ ಯೋಷಿತಾ।।
ವೃದ್ಧಿಯನ್ನು ಬಯಸುವ ರಾಜರೂ, ರಾಜಸುತರೂ, ಗರ್ಭಿಣಿ ಸ್ತ್ರೀಯರೂ ಜಯವೆಂಬ ಹೆಸರಿನ ಈ ಇತಿಹಾಸವನ್ನು ಕೇಳಬೇಕು.
18005040a ಸ್ವರ್ಗಕಾಮೋ ಲಭೇತ್ಸ್ವರ್ಗಂ ಜಯಕಾಮೋ ಲಭೇಜ್ಜಯಮ್।
18005040c ಗರ್ಭಿಣೀ ಲಭತೇ ಪುತ್ರಂ ಕನ್ಯಾಂ ವಾ ಬಹುಭಾಗಿನೀಮ್।।
ಸ್ವರ್ಗವನ್ನು ಬಯಸಿದವರಿಗೆ ಸ್ವರ್ಗವು ದೊರಕುತ್ತದೆ. ಜಯವನ್ನು ಬಯಸಿದವರಿಗೆ ಜಯವು ಲಭಿಸುತ್ತದೆ. ಗರ್ಭಿಣಿಯರಿಗೆ ಪುತ್ರನಾಗಲೀ ಅಥವಾ ಬಹುಭಾಗ್ಯವಂತ ಕನ್ಯೆಯರಾಗಲೀ ದೊರೆಯುತ್ತಾರೆ.
18005041a ಅನಾಗತಂ ತ್ರಿಭಿರ್ವರ್ಷೈಃ ಕೃಷ್ಣದ್ವೈಪಾಯನಃ ಪ್ರಭುಃ।
18005041c ಸಂದರ್ಭಂ ಭಾರತಸ್ಯಾಸ್ಯ ಕೃತವಾನ್ಧರ್ಮಕಾಮ್ಯಯಾ।।
ಧರ್ಮದ ಕಾಮನೆಯಿಂದಾಗಿ ಪ್ರಭು ಕೃಷ್ಣದ್ವೈಪಾಯನನು ಮೊದಲು ಇರದಿದ್ದ ಈ ಭಾರತವನ್ನು ಮೂರು ವರ್ಷಗಳ ಕಾಲ ನಿರಂತರವಾಗಿ ರಚಿಸಿದನು.
18005042a ನಾರದೋಽಶ್ರಾವಯದ್ದೇವಾನಸಿತೋ ದೇವಲಃ ಪಿತೄನ್।
18005042c ರಕ್ಷೋ ಯಕ್ಷಾನ್ಶುಕೋ ಮರ್ತ್ಯಾನ್ವೈಶಂಪಾಯನ ಏವ ತು।।
ಅನಂತರ ನಾರದನು ಇದನ್ನು ದೇವತೆಗಳಿಗೆ, ಅಸಿತ ದೇವಲನು ಪಿತೃಗಳಿಗೆ, ಶುಕನು ಯಕ್ಷ-ರಾಕ್ಷಸರಿಗೆ ಮತ್ತು ವೈಶಂಪಾಯನನು ಮನುಷ್ಯರಿಗೆ ಹೇಳಿದರು.
18005043a ಇತಿಹಾಸಮಿಮಂ ಪುಣ್ಯಂ ಮಹಾರ್ಥಂ ವೇದಸಂಮಿತಮ್।
18005043c ಶ್ರಾವಯೇದ್ಯಸ್ತು ವರ್ಣಾಂಸ್ತ್ರೀನ್ಕೃತ್ವಾ ಬ್ರಾಹ್ಮಣಮಗ್ರತಃ।।
18005044a ಸ ನರಃ ಪಾಪನಿರ್ಮುಕ್ತಃ ಕೀರ್ತಿಂ ಪ್ರಾಪ್ಯೇಹ ಶೌನಕ।
18005044c ಗಚ್ಚೇತ್ಪರಮಿಕಾಂ ಸಿದ್ಧಿಮತ್ರ ಮೇ ನಾಸ್ತಿ ಸಂಶಯಃ।।
ಮಹಾ ಅರ್ಥವುಳ್ಳ ವೇದಸಮ್ಮಿತವಾದ ಈ ಪುಣ್ಯ ಇತಿಹಾಸವನ್ನು ಬ್ರಾಹ್ಮಣರೇ ಮೊದಲಾದ ಮೂರು ವರ್ಣದವರಿಗೆ ಹೇಳಬೇಕು. ಶೌನಕ! ಅಂಥಹ ಮನುಷ್ಯನು ಪಾಪದಿಂದ ಮುಕ್ತನಾಗಿ ಕೀರ್ತಿಯನ್ನು ಪಡೆಯುತ್ತಾನಲ್ಲದೇ ಪರಮ ಸಿದ್ಧಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
18005045a ಭಾರತಾಧ್ಯಯನಾತ್ಪುಣ್ಯಾದಪಿ ಪಾದಮಧೀಯತಃ।
18005045c ಶ್ರದ್ಧಧಾನಸ್ಯ ಪೂಯಂತೇ ಸರ್ವಪಾಪಾನ್ಯಶೇಷತಃ।।
ಶ್ರದ್ಧಾವಂತನಾಗಿ ಭಾರತದ ಶ್ಲೋಕದ ಕಾಲುಭಾಗವನ್ನಾದರೂ ಅಧ್ಯಯನ ಮಾಡಿ ಅರ್ಥಮಾಡಿಕೊಂಡರೆ ಆ ಪುಣ್ಯವು ಅವನ ಸರ್ವ ಪಾಪಗಳೂ ಉಳಿಯದಂತೆ ತೊಳೆದು ಶುದ್ಧೀಕರಿಸುತ್ತದೆ.
18005046a ಮಹರ್ಷಿರ್ಭಗವಾನ್ವ್ಯಾಸಃ ಕೃತ್ವೇಮಾಂ ಸಂಹಿತಾಂ ಪುರಾ।
18005046c ಶ್ಲೋಕೈಶ್ಚತುರ್ಭಿರ್ಭಗವಾನ್ಪುತ್ರಮಧ್ಯಾಪಯಚ್ಚುಕಮ್।।
ಹಿಂದೆ ಮಹರ್ಷಿ ಭಗವಾನ್ ವ್ಯಾಸನು ಈ ಕೃತಿಯನ್ನು ಈ ನಾಲ್ಕು ಶ್ಲೋಕಗಳೊಂದಿಗೆ ತನ್ನ ಮಗ ಭಗವಾನ್ ಶುಕನಿಗೆ ಕಲಿಸಿದ್ದನು:
18005047a ಮಾತಾಪಿತೃಸಹಸ್ರಾಣಿ ಪುತ್ರದಾರಶತಾನಿ ಚ।
18005047c ಸಂಸಾರೇಷ್ವನುಭೂತಾನಿ ಯಾಂತಿ ಯಾಸ್ಯಂತಿ ಚಾಪರೇ।।
“ಈ ಸಂಸಾರದಲ್ಲಿ ಸಹಸ್ರಾರು ಮಾತಾಪಿತೃಗಳೂ, ನೂರಾರು ಪತ್ನಿ-ಪುತ್ರರೂ ಆಗಿಹೋಗಿದ್ದಾರೆ ಮತ್ತು ಮುಂದೆ ಕೂಡ ಆಗುತ್ತಾರೆ.
18005048a ಹರ್ಷಸ್ಥಾನಸಹಸ್ರಾಣಿ ಭಯಸ್ಥಾನಶತಾನಿ ಚ।
18005048c ದಿವಸೇ ದಿವಸೇ ಮೂಢಮಾವಿಶಂತಿ ನ ಪಂಡಿತಮ್।।
ಸಹಸ್ರಾರು ಹರ್ಷವನ್ನು ಕೊಡುವ ಮತ್ತು ನೂರಾರು ಭಯವನ್ನು ಕೊಡುವ ಸಂದರ್ಭಗಳು ಪ್ರತಿದಿನ ಮೂಢನನ್ನು ಕಾಡುತ್ತಿರುತ್ತವೆ. ಆದರೆ ಪಂಡಿತನನ್ನಲ್ಲ.
18005049a ಊರ್ಧ್ವಬಾಹುರ್ವಿರೌಮ್ಯೇಷ ನ ಚ ಕಶ್ಚಿಚ್ಚೃಣೋತಿ ಮೇ।
18005049c ಧರ್ಮಾದರ್ಥಶ್ಚ ಕಾಮಶ್ಚ ಸ ಕಿಮರ್ಥಂ ನ ಸೇವ್ಯತೇ।।
ಬಾಹುಗಳನ್ನು ಮೇಲೆತ್ತಿ ಹೀಗೆ ಕೂಗಿಕೊಳ್ಳುತ್ತಿರುವ ನನ್ನನ್ನು ಯಾರೂ ಕೇಳುತ್ತಿಲ್ಲ: “ಅರ್ಥ-ಕಾಮಗಳು ಧರ್ಮದಿಂದಲೇ ದೊರೆಯುತ್ತವೆ. ಆದರೂ ಧರ್ಮದಿಂದ ಏಕೆ ನಡೆದುಕೊಳ್ಳಬಾರದು?”
18005050a ನ ಜಾತು ಕಾಮಾನ್ನ ಭಯಾನ್ನ ಲೋಭಾ ಧರ್ಮಂ ತ್ಯಜೇಜ್ಜೀವಿತಸ್ಯಾಪಿ ಹೇತೋಃ।
18005050c ನಿತ್ಯೋ ಧರ್ಮಃ ಸುಖದುಃಖೇ ತ್ವನಿತ್ಯೇ ಜೀವೋ ನಿತ್ಯೋ ಹೇತುರಸ್ಯಃ ತ್ವನಿತ್ಯಃ।।
ಕಾಮಕ್ಕಾಗಲೀ, ಭಯದಿಂದಾಗಲೀ, ಲೋಭದಿಂದಾಗಲೀ, ಜೀವವನ್ನು ಉಳಿಸಿಕೊಳ್ಳಲಿಕ್ಕೂ ಕೂಡ ಧರ್ಮವನ್ನು ತ್ಯಜಿಸಬಾರದು. ಧರ್ಮವು ಯಾವಾಗಲೂ ಇರುವಂಥಹುದು; ಸುಖ-ದುಃಖಗಳು ಯಾವಾಗಲೂ ಇರುವಂಥವುಗಳಲ್ಲ. ಜೀವವು ನಿತ್ಯ; ಯಾವುದರ ಮೂಲಕ ಅದು ಜೀವಿಸುತ್ತದೆಯೋ ಆ ದೇಹವು ಅನಿತ್ಯವಾದುದು.”
18005051a ಇಮಾಂ ಭಾರತ ಸಾವಿತ್ರೀಂ ಪ್ರಾತರುತ್ಥಾಯ ಯಃ ಪಠೇತ್।
18005051c ಸ ಭಾರತಫಲಂ ಪ್ರಾಪ್ಯ ಪರಂ ಬ್ರಹ್ಮಾಧಿಗಚ್ಛತಿ।।
ಬೆಳಿಗ್ಗೆ ಎದ್ದು ಈ ಭಾರತ ಸಾವಿತ್ರಿಯನ್ನು ಯಾರು ಓದುತ್ತಾರೋ ಅವರು ಸಂಪೂರ್ಣ ಭಾರತವನ್ನು ಓದಿದುರ ಫಲವನ್ನು ಪಡೆದು ಪರಬ್ರಹ್ಮನನ್ನು ಸೇರುತ್ತಾರೆ.
18005052a ಯಥಾ ಸಮುದ್ರೋ ಭಗವಾನ್ಯಥಾ ಚ ಹಿಮವಾನ್ಗಿರಿಃ।
18005052c ಖ್ಯಾತಾವುಭೌ ರತ್ನನಿಧೀ ತಥಾ ಭಾರತಮುಚ್ಯತೇ।।
ಭಗವಾನ್ ಸಮುದ್ರ ಮತ್ತು ಹಿಮವಾನ್ ಗಿರಿಗಳೆರಡನ್ನೂ ಹೇಗೆ ರತ್ನನಿಧಿಗಳೆಂದು ಹೇಳುತ್ತಾರೆಯೋ ಹಾಗೆ ಭಾರತವನ್ನೂ ರತ್ನನಿಧಿಯೆಂದು ಹೇಳುತ್ತಾರೆ.
18005053a ಮಹಾಭಾರತಮಾಖ್ಯಾನಂ ಯಃಪಠೇತ್ಸುಸಮಾಹಿತಃ।
18005053c ಸ ಗಚ್ಛೇತ್ಪರಮಾಂ ಸಿದ್ಧಿಮಿತಿ ಮೇ ನಾಸ್ತಿ ಸಂಶಯಃ।।
ಮಹಾಭಾರತವನ್ನು ಸಮಾಹಿತನಾಗಿ ಓದುವವನು ಪರಮ ಸಿದ್ಧಿಯನ್ನು ಪಡೆಯುತ್ತಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
18005054a ದ್ವೈಪಾಯನೋಷ್ಠಪುಟನಿಃಸೃತಮಪ್ರಮೇಯಂ ಪುಣ್ಯಂ ಪವಿತ್ರಮಥ ಪಾಪಹರಂ ಶಿವಂ ಚ।
18005054c ಯೋ ಭಾರತಂ ಸಮಧಿಗಚ್ಛತಿ ವಾಚ್ಯಮಾನಂ ಕಿಂ ತಸ್ಯ ಪುಷ್ಕರಜಲೈರಭಿಷೇಚನೇನ।।
ದ್ವೈಪಾಯನನ ತುಟಿಗಳಿಂದ ಹೊರಬಂದ ಈ ಅಪ್ರಮೇಯ ಕೃತಿಯು ಪುಣ್ಯ, ಪವಿತ್ರ, ಮಂಗಳಕರ ಮತ್ತು ಪಾಪಗಳನ್ನು ಓಡಿಸುತ್ತದೆ. ಇಂಥಹ ಭಾರತವನ್ನು ಓದುವಾಗ ಕೇಳಿದವನು ಪುಷ್ಕರ ತೀರ್ಥದಲ್ಲಿ ಸ್ನಾನಮಾಡುವ ಅವಶ್ಯಕತೆಯಾದರೂ ಏನಿದೆ?”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ಪಂಚಮೋಽಧ್ಯಾಯಃ ।।
ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ಐದನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಸ್ವರ್ಗಾರೋಹಣಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಸ್ವರ್ಗಾರೋಹಣ ಪರ್ವವು।
ಇತಿ ಶ್ರೀ ಮಹಾಭಾರತಃ।।
ಇದು ಶ್ರೀ ಮಹಾಭಾರತವು।।
ಇದೂವರೆಗಿನ ಒಟ್ಟು ಮಹಾಪರ್ವಗಳು – 18/18, ಉಪಪರ್ವಗಳು-95/100, ಅಧ್ಯಾಯಗಳು-1995/1995, ಶ್ಲೋಕಗಳು-73784/73784