ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸ್ವರ್ಗಾರೋಹಣ ಪರ್ವ
ಸ್ವರ್ಗಾರೋಹಣ ಪರ್ವ
ಅಧ್ಯಾಯ 4
ಸಾರ
ಸ್ವರ್ಗದಲ್ಲಿ ಯುಧಿಷ್ಠಿರನು ತನ್ನ ಸಹೋದರರು, ಸುಹೃದರು ಮತ್ತು ದ್ರೌಪದಿಯು ತಮ್ಮ ತಮ್ಮ ಸ್ಥಾನಗಳನ್ನು ಸೇರಿರುವುದನ್ನು ನೋಡಿದುದು (1-19).
18004001 ವೈಶಂಪಾಯನ ಉವಾಚ।
18004001a ತತೋ ಯುಧಿಷ್ಠಿರೋ ರಾಜಾ ದೇವೈಃ ಸರ್ಷಿಮರುದ್ಗಣೈಃ।
18004001c ಪೂಜ್ಯಮಾನೋ ಯಯೌ ತತ್ರ ಯತ್ರ ತೇ ಕುರುಪುಂಗವಾಃ।।
ವೈಶಂಪಾಯನನು ಹೇಳಿದನು: “ಅನಂತರ ರಾಜಾ ಯುಧಿಷ್ಠಿರನು ದೇವತೆಗಳು ಮತ್ತು ಋಷಿ-ಮರುದ್ಗಣಗಳಿಂದ ಪೂಜ್ಯನಾಗಿ ಆ ಕುರುಪುಂಗವರು ಇದ್ದಲ್ಲಿಗೆ ಬಂದನು.
18004002a ದದರ್ಶ ತತ್ರ ಗೋವಿಂದಂ ಬ್ರಾಹ್ಮೇಣ ವಪುಷಾನ್ವಿತಮ್।
18004002c ತೇನೈವ ದೃಷ್ಟಪೂರ್ವೇಣ ಸಾದೃಶ್ಯೇನೋಪಸೂಚಿತಮ್।।
ಅಲ್ಲಿ ಅವನು ಬ್ರಾಹ್ಮೀ ತೇಜಸ್ಸಿನ ದೇಹವನ್ನು ಧರಿಸಿದ್ದ ಗೋವಿಂದನನ್ನು ನೋಡಿದನು. ಅವನು ಹಿಂದೆ ನೋಡಿದ್ದ ರೂಪದಲ್ಲಿಯೇ ಇದ್ದುದರಿಂದ ಗುರುತಿಸಲ್ಪಟ್ಟನು.
18004003a ದೀಪ್ಯಮಾನಂ ಸ್ವವಪುಷಾ ದಿವ್ಯೈರಸ್ತ್ರೈರುಪಸ್ಥಿತಮ್।
18004003c ಚಕ್ರಪ್ರಭೃತಿಭಿರ್ಘೋರೈರ್ದಿವ್ಯೈಃ ಪುರುಷವಿಗ್ರಹೈಃ।
18004003e ಉಪಾಸ್ಯಮಾನಂ ವೀರೇಣ ಫಲ್ಗುನೇನ ಸುವರ್ಚಸಾ।।
ಅವನು ತನ್ನದೇ ದೇಹದ ಕಾಂತಿಯಿಂದ ಬೆಳಗುತ್ತಿದ್ದನು. ಚಕ್ರವೇ ಮೊದಲಾದ ಘೋರ ದಿವ್ಯ ಆಯುಧಗಳು ಪುರುಷಸ್ವರೂಪದಲ್ಲಿ ಅವನ ಸೇವೆಗೈಯುತ್ತಿದ್ದವು. ವೀರ ಸುವರ್ಚಸ ಫಲ್ಗುನನು ಅವನ ಸೇವೆಯಲ್ಲಿ ನಿಂತಿದ್ದನು.
18004004a ಅಪರಸ್ಮಿನ್ನಥೋದ್ದೇಶೇ ಕರ್ಣಂ ಶಸ್ತ್ರಭೃತಾಂ ವರಮ್।
18004004c ದ್ವಾದಶಾದಿತ್ಯಸಹಿತಂ ದದರ್ಶ ಕುರುನಂದನಃ।।
ಆ ಪ್ರದೇಶದ ಇನ್ನೊಂದು ಕಡೆಯಲ್ಲಿ ಕುರುನಂದನನು ದ್ವಾದಶ ಆದಿತ್ಯರ ಸಹಿತ ಕುಳಿತಿದ್ದ ಶಸ್ತ್ರಧಾರಿಗಳಲ್ಲಿ ಶ್ರೇಷ್ಠ ಕರ್ಣನನ್ನು ಕಂಡನು.
18004005a ಅಥಾಪರಸ್ಮಿನ್ನುದ್ದೇಶೇ ಮರುದ್ಗಣವೃತಂ ಪ್ರಭುಮ್।
18004005c ಭೀಮಸೇನಮಥಾಪಶ್ಯತ್ ತೇನೈವ ವಪುಷಾನ್ವಿತಮ್।।
ಆ ಪ್ರದೇಶದ ಇನ್ನೊಂದು ಕಡೆಯಲ್ಲಿ ಮರುದ್ಗಣಗಳಿಂದ ಆವೃತನಾಗಿ ತನ್ನದೇ ಶರೀರವನ್ನು ಧರಿಸಿದ್ದ ಪ್ರಭು ಭೀಮಸೇನನನ್ನು ನೋಡಿದನು.
18004006a ಅಶ್ವಿನೋಸ್ತು ತಥಾ ಸ್ಥಾನೇ ದೀಪ್ಯಮಾನೌ ಸ್ವತೇಜಸಾ।
18004006c ನಕುಲಂ ಸಹದೇವಂ ಚ ದದರ್ಶ ಕುರುನಂದನಃ।।
ಹಾಗೆಯೇ ಅಶ್ವಿನಿಯರ ಸ್ಥಾನದಲ್ಲಿ ತಮ್ಮದೇ ತೇಜಸ್ಸಿನಿಂದ ಬೆಳಗುತ್ತಿರುವ ನಕುಲ-ಸಹದೇವರನ್ನೂ ಕುರುನಂದನನು ನೋಡಿದನು.
18004007a ತಥಾ ದದರ್ಶ ಪಾಂಚಾಲೀಂ ಕಮಲೋತ್ಪಲಮಾಲಿನೀಮ್।
18004007c ವಪುಷಾ ಸ್ವರ್ಗಮಾಕ್ರಮ್ಯ ತಿಷ್ಠಂತೀಮರ್ಕವರ್ಚಸಮ್।।
ಹಾಗೆಯೇ ಅವನು ಕಮಲದ ಹೂವುಗಳ ಮಾಲೆಯನ್ನು ಧರಿಸಿ, ತನ್ನ ದೇಹದ ಸೂರ್ಯತೇಜಸ್ಸಿನಿಂದ ಸ್ವರ್ಗವನ್ನೇ ಬೆಳಗಿಸುತ್ತ ನಿಂತಿರುವ ಪಾಂಚಾಲಿಯನ್ನೂ ನೋಡಿದನು.
18004008a ಅಥೈನಾಂ ಸಹಸಾ ರಾಜಾ ಪ್ರಷ್ಟುಮೈಚ್ಚದ್ಯುಧಿಷ್ಠಿರಃ।
18004008c ತತೋಽಸ್ಯ ಭಗವಾನಿಂದ್ರಃ ಕಥಯಾಮಾಸ ದೇವರಾಟ್।।
ಕೂಡಲೇ ಅವಳ ಕುರಿತು ತಿಳಿಯಲು ಬಯಸಿದ ರಾಜಾ ಯುಧಿಷ್ಠಿರನಿಗೆ ದೇವರಾಜ ಭಗವಾನ್ ಇಂದ್ರನು ಹೇಳತೊಡಗಿದನು:
18004009a ಶ್ರೀರೇಷಾ ದ್ರೌಪದೀರೂಪಾ ತ್ವದರ್ಥೇ ಮಾನುಷಂ ಗತಾ।
18004009c ಅಯೋನಿಜಾ ಲೋಕಕಾಂತಾ ಪುಣ್ಯಗಂಧಾ ಯುಧಿಷ್ಠಿರ।।
“ಯುಧಿಷ್ಠಿರ! ನಿನಗೋಸ್ಕರವಾಗಿ ಈ ಶ್ರೀಯು ಅಯೋನಿಜೆ, ಲೋಕಕಾಂತೆ, ಪುಣ್ಯಗಂಧೀ ದ್ರೌಪದಿಯ ರೂಪವನ್ನು ತಾಳಿ ಮನುಷ್ಯಲೋಕಕ್ಕೆ ಹೋಗಿದ್ದಳು.
18004010a ದ್ರುಪದಸ್ಯ ಕುಲೇ ಜಾತಾ ಭವದ್ಭಿಶ್ಚೋಪಜೀವಿತಾ।
18004010c ರತ್ಯರ್ಥಂ ಭವತಾಂ ಹ್ಯೇಷಾ ನಿರ್ಮಿತಾ ಶೂಲಪಾಣಿನಾ।।
ದ್ರುಪದನ ಕುಲದಲ್ಲಿ ಹುಟ್ಟಿ ನಿಮ್ಮೆಲ್ಲರನ್ನು ಅವಲಂಬಿಸಿದ್ದು ನಿಮ್ಮೆಲ್ಲರ ಪ್ರೀತಿಗಾಗಿ ಇದ್ದ ಇವಳನ್ನು ಶೂಲಪಾಣಿಯೇ ನಿರ್ಮಿಸಿದ್ದನು.
18004011a ಏತೇ ಪಂಚ ಮಹಾಭಾಗಾ ಗಂಧರ್ವಾಃ ಪಾವಕಪ್ರಭಾಃ।
18004011c ದ್ರೌಪದ್ಯಾಸ್ತನಯಾ ರಾಜನ್ಯುಷ್ಮಾಕಮಮಿತೌಜಸಃ।।
ರಾಜನ್! ಈ ಐವರು ಪಾವಕ ಪ್ರಭೆಗಳುಳ್ಳ ಗಂಧರ್ವರು ಅಮಿತ ತೇಜಸ್ವಿ ನಿಮ್ಮಿಂದ ದ್ರೌಪದಿಯಲ್ಲಿ ಹುಟ್ಟಿದ ಮಕ್ಕಳು.
18004012a ಪಶ್ಯ ಗಂಧರ್ವರಾಜಾನಂ ಧೃತರಾಷ್ಟ್ರಂ ಮನೀಷಿಣಮ್।
18004012c ಏನಂ ಚ ತ್ವಂ ವಿಜಾನೀಹಿ ಭ್ರಾತರಂ ಪೂರ್ವಜಂ ಪಿತುಃ।।
ಈ ಗಂಧರ್ವರಾಜನನ್ನು ನೋಡು! ಇವನು ನಿನ್ನ ತಂದೆಯ ಅಣ್ಣ ಮನೀಷಿ ಧೃತರಾಷ್ಟ್ರನೆಂದು ತಿಳಿ.
18004013a ಅಯಂ ತೇ ಪೂರ್ವಜೋ ಭ್ರಾತಾ ಕೌಂತೇಯಃ ಪಾವಕದ್ಯುತಿಃ।
18004013c ಸೂರ್ಯಪುತ್ರೋಽಗ್ರಜಃ ಶ್ರೇಷ್ಠೋ ರಾಧೇಯ ಇತಿ ವಿಶ್ರುತಃ।
18004013e ಆದಿತ್ಯಸಹಿತೋ ಯಾತಿ ಪಶ್ಯೈನಂ ಪುರುಷರ್ಷಭ।।
ಇವನು ನಿನ್ನ ಮೊದಲೇ ಹುಟ್ಟಿದ ಕೌಂತೇಯ, ಅಣ್ಣ. ಪಾವಕನಂತೆ ಬೆಳಗುತ್ತಿದ್ದ ಈ ಅಗ್ರಜ ಶ್ರೇಷ್ಠ ಸೂರ್ಯಪುತ್ರನು ರಾಧೇಯನೆಂದು ವಿಖ್ಯಾತನಾಗಿದ್ದನು. ಪುರುಷರ್ಷಭ! ಆದಿತ್ಯನೊಂದಿಗೆ ಹೋಗುತ್ತಿರುವ ಇವನನ್ನು ನೋಡು!
18004014a ಸಾಧ್ಯಾನಾಮಥ ದೇವಾನಾಂ ವಸೂನಾಂ ಮರುತಾಮಪಿ।
18004014c ಗಣೇಷು ಪಶ್ಯ ರಾಜೇಂದ್ರ ವೃಷ್ಣ್ಯಂಧಕಮಹಾರಥಾನ್।
18004014e ಸಾತ್ಯಕಿಪ್ರಮುಖಾನ್ವೀರಾನ್ಭೋಜಾಂಶ್ಚೈವ ಮಹಾರಥಾನ್।।
ರಾಜೇಂದ್ರ! ಈಗ ದೇವತೆಗಳ, ವಸುಗಳ ಮತ್ತು ಮರುತ್ ಗಣಗಳಲ್ಲಿ ಕುಳಿತಿರುವ ಸಾತ್ಯಕಿಯೇ ಮೊದಲಾದ ವೀರರನ್ನೂ, ಮಹಾರಥ ಭೋಜರನ್ನೂ, ವೃಷ್ಣಿ-ಅಂಧಕ ಮಹಾರಥರನ್ನೂ ನೋಡು!
18004015a ಸೋಮೇನ ಸಹಿತಂ ಪಶ್ಯ ಸೌಭದ್ರಮಪರಾಜಿತಮ್।
18004015c ಅಭಿಮನ್ಯುಂ ಮಹೇಷ್ವಾಸಂ ನಿಶಾಕರಸಮದ್ಯುತಿಮ್।।
ಸೋಮನೊಂದಿಗೆ ನಿಶಾಕರನಂತೆ ಬೆಳಗುತ್ತಿರುವ ಅಪರಾಜಿತ ಸೌಭದ್ರ ಮಹೇಷ್ವಾಸ ಅಭಿಮನ್ಯುವನ್ನು ನೋಡು!
18004016a ಏಷ ಪಾಂಡುರ್ಮಹೇಷ್ವಾಸಃ ಕುಂತ್ಯಾ ಮಾದ್ರ್ಯಾ ಚ ಸಂಗತಃ।
18004016c ವಿಮಾನೇನ ಸದಾಭ್ಯೇತಿ ಪಿತಾ ತವ ಮಮಾಂತಿಕಮ್।।
ಇಗೋ ಇವನು ಸದಾ ವಿಮಾನದಲ್ಲಿ ಕುಂತೀ ಮಾದ್ರಿಯರೊಡನೆ ನನ್ನಲ್ಲಿಗೆ ಬರುವ ನಿನ್ನ ತಂದೆ ಮಹೇಷ್ವಾಸ ಪಾಂಡು!
18004017a ವಸುಭಿಃ ಸಹಿತಂ ಪಶ್ಯ ಭೀಷ್ಮಂ ಶಾಂತನವಂ ನೃಪಮ್।
18004017c ದ್ರೋಣಂ ಬೃಹಸ್ಪತೇಃ ಪಾರ್ಶ್ವೇ ಗುರುಮೇನಂ ನಿಶಾಮಯ।।
ವಸುಗಳೊಂದಿಗಿರುವ ಶಾಂತನವ ನೃಪ ಭೀಷ್ಮನನ್ನು ನೋಡು! ಬೃಹಸ್ಪತಿಯ ಪಕ್ಕದಲ್ಲಿರುವವನು ನಿನ್ನ ಗುರು ದ್ರೋಣನೆನ್ನುವುದನ್ನು ತಿಳಿದುಕೋ!
18004018a ಏತೇ ಚಾನ್ಯೇ ಮಹೀಪಾಲಾ ಯೋಧಾಸ್ತವ ಚ ಪಾಂಡವ।
18004018c ಗಂಧರ್ವೈಃ ಸಹಿತಾ ಯಾಂತಿ ಯಕ್ಷೈಃ ಪುಣ್ಯಜನೈಸ್ತಥಾ।।
ಪಾಂಡವ! ನಿನ್ನ ಪರವಾಗಿ ಯುದ್ಧಮಾಡಿದ ಇನ್ನೂ ಇತರ ಮಹೀಪಾಲರು ಗಂಧರ್ವರು, ಯಕ್ಷರು ಮತ್ತು ಪುಣ್ಯಜನರೊಂದಿಗೆ ಸೇರಿದ್ದಾರೆ.
18004019a ಗುಹ್ಯಕಾನಾಂ ಗತಿಂ ಚಾಪಿ ಕೇ ಚಿತ್ಪ್ರಾಪ್ತಾ ನೃಸತ್ತಮಾಃ।
18004019c ತ್ಯಕ್ತ್ವಾ ದೇಹಂ ಜಿತಸ್ವರ್ಗಾಃ ಪುಣ್ಯವಾಗ್ಬುದ್ಧಿಕರ್ಮಭಿಃ।।
ಇನ್ನೂ ಕೆಲವು ನರಸತ್ತಮರು ದೇಹವನ್ನು ತೊರೆದು ಪುಣ್ಯ ಮಾತು-ಯೋಚನೆ ಮತ್ತು ಕರ್ಮಗಳಿಂದ ದೊರೆಯುವ ಗುಹ್ಯಕರ ಲೋಕವನ್ನು ಸೇರಿದ್ದಾರೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಸ್ವರ್ಗಾರೋಹಣಪರ್ವಣಿ ದ್ರೌಪದ್ಯಾದಿಸ್ವಸ್ವಸ್ಥಾನಗಮನೇ ಚತುರ್ಥೋಽಧ್ಯಾಯಃ ।।
ಇದು ಶ್ರೀಮಹಾಭಾರತದಲ್ಲಿ ಸ್ವರ್ಗಾರೋಹಣಪರ್ವದಲ್ಲಿ ದ್ರೌಪದ್ಯಾದಿಸ್ವಸ್ವಸ್ಥಾನಗಮನ ಎನ್ನುವ ನಾಲ್ಕನೇ ಅಧ್ಯಾಯವು.