ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಪುತ್ರದರ್ಶನ ಪರ್ವ
ಅಧ್ಯಾಯ 43
ಸಾರ
ವ್ಯಾಸನು ಜನಮೇಜಯನಿಗೆ ಪರಿಕ್ಷಿತನನ್ನು ತೋರಿಸಿದುದು (1-18).
15043001 ವೈಶಂಪಾಯನ ಉವಾಚ।
15043001a ಅದೃಷ್ಟ್ವಾ ತು ನೃಪಃ ಪುತ್ರಾನ್ದರ್ಶನಂ ಪ್ರತಿಲಬ್ಧವಾನ್।
15043001c ಋಷಿಪ್ರಸಾದಾತ್ಪುತ್ರಾಣಾಂ ಸ್ವರೂಪಾಣಾಂ ಕುರೂದ್ವಹ।।
ವೈಶಂಪಾಯನನು ಹೇಳಿದನು: “ಕುರೂದ್ವಹ! ಈ ಹಿಂದೆ ಎಂದೂ ನೋಡಿರದ ಮಕ್ಕಳನ್ನು ನೃಪ ಧೃತರಾಷ್ಟ್ರನು ಋಷಿಯ ಅನುಗ್ರಹದಿಂದ ದರ್ಶನಮಾಡಿದನು. ಪುತ್ರರ ಸ್ವರೂಪಗಳನ್ನು ಕಂಡನು.
15043002a ಸ ರಾಜಾ ರಾಜಧರ್ಮಾಂಶ್ಚ ಬ್ರಹ್ಮೋಪನಿಷದಂ ತಥಾ।
15043002c ಅವಾಪ್ತವಾನ್ನರಶ್ರೇಷ್ಠೋ ಬುದ್ಧಿನಿಶ್ಚಯಮೇವ ಚ।।
ನರಶ್ರೇಷ್ಠ ರಾಜ ಧೃತರಾಷ್ಟ್ರನು ರಾಜಧರ್ಮಗಳನ್ನು, ಬ್ರಹ್ಮೋಪನಿಷದಗಳನ್ನೂ, ಬುದ್ಧಿನಿಶ್ಚಯವನ್ನೂ ಪಡೆದುಕೊಂಡಿದ್ದನು.
15043003a ವಿದುರಶ್ಚ ಮಹಾಪ್ರಾಜ್ಞೋ ಯಯೌ ಸಿದ್ಧಿಂ ತಪೋಬಲಾತ್।
15043003c ಧೃತರಾಷ್ಟ್ರಃ ಸಮಾಸಾದ್ಯ ವ್ಯಾಸಂ ಚಾಪಿ ತಪಸ್ವಿನಮ್।।
ಮಹಾಪ್ರಾಜ್ಞ ವಿದುರನು ತಪೋಬಲದಿಂದ ಸಿದ್ಧಿಯನ್ನು ಪಡೆದನು. ಧೃತರಾಷ್ಟ್ರನು ತಪಸ್ವಿ ವ್ಯಾಸನ ಅನುಗ್ರಹದಿಂದ ಸಿದ್ಧಿಯನ್ನು ಪಡೆದನು.”
15043004 ಜನಮೇಜಯ ಉವಾಚ।
15043004a ಮಮಾಪಿ ವರದೋ ವ್ಯಾಸೋ ದರ್ಶಯೇತ್ಪಿತರಂ ಯದಿ।
15043004c ತದ್ರೂಪವೇಷವಯಸಂ ಶ್ರದ್ದಧ್ಯಾಂ ಸರ್ವಮೇವ ತೇ।।
ಜನಮೇಜಯನು ಹೇಳಿದನು: “ವರದ ವ್ಯಾಸನು ನನಗೂ ನನ್ನ ತಂದೆಯ ರೂಪ-ವೇಷ-ವಯಸ್ಸುಗಳೊಡನೆ ತೋರಿಸಿದ್ದೇ ಆದರೆ ನೀವು ಹೇಳಿರುವ ವಿಷಯಗಳಲ್ಲಿ ನಾನು ವಿಶ್ವಾಸವನ್ನಿಡುತ್ತೇನೆ.
15043005a ಪ್ರಿಯಂ ಮೇ ಸ್ಯಾತ್ಕೃತಾರ್ಥಶ್ಚ ಸ್ಯಾಮಹಂ ಕೃತನಿಶ್ಚಯಃ।
15043005c ಪ್ರಸಾದಾದೃಷಿಪುತ್ರಸ್ಯ ಮಮ ಕಾಮಃ ಸಮೃಧ್ಯತಾಮ್।।
ಇದರಿಂದ ನಾನು ಕೃತಾರ್ಥನೂ ಸಂತುಷ್ಟನೂ ಆಗಿ ದೃಢವಾದ ನಿರ್ಣಯಕ್ಕೂ ಬರುತ್ತೇನೆ. ಋಷಿಪುತ್ರನ ಅನುಗ್ರದಿಂದ ನನ್ನ ಈ ಕಾಮನೆಯನು ಪೂರ್ಣಗೊಳ್ಳಲಿ!”"
15043006 ಸೂತ ಉವಾಚ।
15043006a ಇತ್ಯುಕ್ತವಚನೇ ತಸ್ಮಿನ್ನೃಪೇ ವ್ಯಾಸಃ ಪ್ರತಾಪವಾನ್।
15043006c ಪ್ರಸಾದಮಕರೋದ್ಧೀಮಾನಾನಯಚ್ಚ ಪರಿಕ್ಷಿತಮ್।।
ಸೂತನು ಹೇಳಿದನು: “ಆ ನೃಪನು ಹೀಗೆ ಹೇಳಲು ಪ್ರತಾಪವಾನ್ ಧೀಮಾನ್ ವ್ಯಾಸನು ಪ್ರಸನ್ನನಾಗಿ ಪರಿಕ್ಷಿತನನ್ನು ಕರೆಯಿಸಿದನು.
15043007a ತತಸ್ತದ್ರೂಪವಯಸಮಾಗತಂ ನೃಪತಿಂ ದಿವಃ।
15043007c ಶ್ರೀಮಂತಂ ಪಿತರಂ ರಾಜಾ ದದರ್ಶ ಜನಮೇಜಯಃ।।
ಅದೇ ರೂಪ-ವಯಸ್ಸಿನಿಂದ ಕೂಡಿ ಸ್ವರ್ಗದಿಂದ ಆಗಮಿಸಿದ ಶ್ರೀಮಂತ ತಂದೆಯನ್ನು ರಾಜಾ ಜನಮೇಜಯನು ನೋಡಿದನು.
15043008a ಶಮೀಕಂ ಚ ಮಹಾತ್ಮಾನಂ ಪುತ್ರಂ ತಂ ಚಾಸ್ಯ ಶೃಂಗಿಣಮ್।
15043008c ಅಮಾತ್ಯಾ ಯೇ ಬಭೂವುಶ್ಚ ರಾಜ್ಞಸ್ತಾಂಶ್ಚ ದದರ್ಶ ಹ।।
ಅವನೊಡನೆ ಮಹಾತ್ಮ ಶಮೀಕನನ್ನೂ, ಅವನ ಮಗ ಶೃಂಗಿಯನ್ನೂ, ಮತ್ತು ರಾಜನೊಡನಿದ್ದ ಮಂತ್ರಿಗಳನ್ನೂ ಅವನು ನೋಡಿದನು.
15043009a ತತಃ ಸೋಽವಭೃಥೇ ರಾಜಾ ಮುದಿತೋ ಜನಮೇಜಯಃ।
15043009c ಪಿತರಂ ಸ್ನಾಪಯಾಮಾಸ ಸ್ವಯಂ ಸಸ್ನೌ ಚ ಪಾರ್ಥಿವಃ।।
ಅನಂತರ ಸಂತೋಷಗೊಂಡ ರಾಜಾ ಪಾರ್ಥಿವ ಜನಮೇಜಯನು ಯಜ್ಞದ ಅವಭೃತದಲ್ಲಿ ತಂದೆಗೆ ಸ್ನಾನವನ್ನು ಮಾಡಿಸಿ ಅನಂತರ ತಾನು ಸ್ನಾನಮಾಡಿದನು.
15043010a ಸ್ನಾತ್ವಾ ಚ ಭರತಶ್ರೇಷ್ಠಃ ಸೋಽಸ್ತೀಕಮಿದಮಬ್ರವೀತ್।
15043010c ಯಾಯಾವರಕುಲೋತ್ಪನ್ನಂ ಜರತ್ಕಾರುಸುತಂ ತದಾ।।
ಸ್ನಾನಮಾಡಿದ ನಂತರ ಆ ಭರತಶ್ರೇಷ್ಠನು ಯಾಯಾವರಕುಲದಲ್ಲಿ ಹುಟ್ಟಿದ್ದ ಜರತ್ಕಾರುಸುತ ಆಸ್ತೀಕನಿಗೆ ಹೀಗೆ ಹೇಳಿದನು:
15043011a ಆಸ್ತೀಕ ವಿವಿಧಾಶ್ಚರ್ಯೋ ಯಜ್ಞೋಽಯಮಿತಿ ಮೇ ಮತಿಃ।
15043011c ಯದದ್ಯಾಯಂ ಪಿತಾ ಪ್ರಾಪ್ತೋ ಮಮ ಶೋಕಪ್ರಣಾಶನಃ।।
“ಆಸ್ತೀಕ! ನನ್ನ ಈ ಯಜ್ಞವು ವಿವಿಧ ಆಶ್ಚರ್ಯಗಳನ್ನು ತೋರಿಸಿಕೊಟ್ಟಿದೆ ಎಂದು ಭಾವಿಸುತ್ತೇನೆ. ಇಂದು ನನ್ನ ತಂದೆಯನ್ನು ಕಂಡು ನನ್ನ ಶೋಕವು ನಾಶವಾಗಿಹೋಯಿತು!”
15043012 ಆಸ್ತೀಕ ಉವಾಚ।
15043012a ಋಷಿರ್ದ್ವೈಪಾಯನೋ ಯತ್ರ ಪುರಾಣಸ್ತಪಸೋ ನಿಧಿಃ।
15043012c ಯಜ್ಞೇ ಕುರುಕುಲಶ್ರೇಷ್ಠ ತಸ್ಯ ಲೋಕಾವುಭೌ ಜಿತೌ।।
ಆಸ್ತೀಕನು ಹೇಳಿದನು: “ಕುರುಕುಲಶ್ರೇಷ್ಠ! ಯಾರ ಯಜ್ಞದಲ್ಲಿ ಪುರಾಣ ತಪಸ್ಸಿನ ನಿಧಿಯಾಗಿರುವ ಋಷಿ ದ್ವೈಪಾಯನನು ಇರುವನೋ ಅವನು ಇಹ-ಪರ ಎರಡೂ ಲೋಕಗಳನ್ನೂ ಗೆದ್ದಂತೆಯೇ!
15043013a ಶ್ರುತಂ ವಿಚಿತ್ರಮಾಖ್ಯಾನಂ ತ್ವಯಾ ಪಾಂಡವನಂದನ।
15043013c ಸರ್ಪಾಶ್ಚ ಭಸ್ಮಸಾನ್ನೀತಾ ಗತಾಶ್ಚ ಪದವೀಂ ಪಿತುಃ।।
ಪಾಂಡವನಂದನ! ನೀನು ವಿಚಿತ್ರವಾದ ಆಖ್ಯಾನವನ್ನು ಕೇಳಿದೆ. ಭಸ್ಮವಾದ ಸರ್ಪಗಳೂ ಕೂಡ ಪಿತೃಗಳ ಪದವಿಯನ್ನು ಪಡೆದವು.
15043014a ಕಥಂ ಚಿತ್ತಕ್ಷಕೋ ಮುಕ್ತಃ ಸತ್ಯತ್ವಾತ್ತವ ಪಾರ್ಥಿವ।
15043014c ಋಷಯಃ ಪೂಜಿತಾಃ ಸರ್ವೇ ಗತಿಂ ದೃಷ್ಟ್ವಾ ಮಹಾತ್ಮನಃ।।
ಪಾರ್ಥಿವ! ನಿನ್ನ ಸತ್ಯದಿಂದಾಗಿ ತಕ್ಷಕನು ಹೇಗೋ ಮುಕ್ತನಾದನು. ಎಲ್ಲ ಋಷಿಗಳನ್ನೂ ಪೂಜಿಸಿರುವ. ಮಹಾತ್ಮ ವ್ಯಾಸನ ತಪೋಗತಿಯನ್ನೂ ಕಂಡೆ.
15043015a ಪ್ರಾಪ್ತಃ ಸುವಿಪುಲೋ ಧರ್ಮಃ ಶ್ರುತ್ವಾ ಪಾಪವಿನಾಶನಮ್।
15043015c ವಿಮುಕ್ತೋ ಹೃದಯಗ್ರಂಥಿರುದಾರಜನದರ್ಶನಾತ್।।
ಪಾಪವಿನಾಶಕ ಈ ಮಹಾಭಾರತವನ್ನು ಕೇಳಿ ವಿಪುಲ ಧರ್ಮವನ್ನು ಗಳಿಸಿರುವೆ. ಸತ್ಪುರುಷರ ದರ್ಶನದಿಂದ ನಿನ್ನ ಹೃದಯದಲ್ಲಿದ್ದ ಗಂಟುಗಳು ಬಿಚ್ಚಿಹೋಗಿವೆ.
15043016a ಯೇ ಚ ಪಕ್ಷಧರಾ ಧರ್ಮೇ ಸದ್ವೃತ್ತರುಚಯಶ್ಚ ಯೇ।
15043016c ಯಾನ್ದೃಷ್ಟ್ವಾ ಹೀಯತೇ ಪಾಪಂ ತೇಭ್ಯಃ ಕಾರ್ಯಾ ನಮಸ್ಕ್ರಿಯಾಃ।।
ಯಾರು ಧರ್ಮದ ಪಕ್ಷಪಾತಿಗಳೋ, ಸದಾಚಾರದ ಪಾಲನೆಯಲ್ಲಿ ಅಭಿರುಚಿಯುಳ್ಳವರೋ, ಮತ್ತು ಯಾರ ದರ್ಶನಮಾತ್ರದಿಂದ ಪಾಪಗಳೆಲ್ಲವೂ ನಾಶವಾಗುವವೋ ಅಂತಹ ಮಹಾತ್ಮರಿಗೆ ಅನುದಿನವು ನಮಸ್ಕರಿಸಬೇಕು!””
15043017 ಸೂತ ಉವಾಚ।
15043017a ಏತಚ್ಛೃತ್ವಾ ದ್ವಿಜಶ್ರೇಷ್ಠಾತ್ಸ ರಾಜಾ ಜನಮೇಜಯಃ।
15043017c ಪೂಜಯಾಮಾಸ ತಮೃಷಿಮನುಮಾನ್ಯ ಪುನಃ ಪುನಃ।।
ಸೂತನು ಹೇಳಿದನು: “ದ್ವಿಜಶ್ರೇಷ್ಠನಿಂದ ಇದನ್ನು ಕೇಳಿದ ರಾಜಾ ಜನಮೇಜಯನು ಆ ಋಷಿ ವ್ಯಾಸನನ್ನು ಪುನಃ ಪುನಃ ಗೌರವಿಸಿ ಪೂಜಿಸಿದನು.
15043018a ಪಪ್ರಚ್ಚ ತಮೃಷಿಂ ಚಾಪಿ ವೈಶಂಪಾಯನಮಚ್ಯುತಮ್।
15043018c ಕಥಾವಶೇಷಂ ಧರ್ಮಜ್ಞೋ ವನವಾಸಸ್ಯ ಸತ್ತಮ।।
ಸತ್ತಮ! ಅನಂತರ ಧರ್ಮಜ್ಞ ಜನಮೇಜಯನು ಧೃತರಾಷ್ಟ್ರನ ವನವಾಸದ ಕಥಾವಶೇಷವನ್ನು ಹೇಳುವಂತೆ ಅಚ್ಯುತ ವೈಶಂಪಾಯನನಲ್ಲಿ ಕೇಳಿಕೊಂಡನು.
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಪುತ್ರದರ್ಶನಪರ್ವಣಿ ಜನಮೇಜಯಯಸ್ಯ ಸ್ವಪಿತೃದರ್ಶನೇ ತ್ರಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಪುತ್ರದರ್ಶನಪರ್ವದಲ್ಲಿ ಜನಮೇಜಯಸ್ಯ ಸ್ವಪಿತೃದರ್ಶನ ಎನ್ನುವ ನಲ್ವತ್ಮೂರನೇ ಅಧ್ಯಾಯವು.