ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆಶ್ರಮವಾಸಿಕ ಪರ್ವ
ಆಶ್ರಮವಾಸ ಪರ್ವ
ಅಧ್ಯಾಯ 3
ಸಾರ
ಯುಧಿಷ್ಠಿರನು ಧೃತರಾಷ್ಟ್ರನನ್ನು ಪ್ರೀತಿಯಿಂದಲೇ ನೋಡಿಕೊಂಡಿದುದು; ಆದರೆ ಭೀಮನು ಧೃತರಾಷ್ಟ್ರನ ವಿಷಯದಲ್ಲಿ ಬೇರೆಯೇ ಭಾವವನ್ನಿಟ್ಟುಕೊಂಡಿದುದು (1-17).
15003001 ವೈಶಂಪಾಯನ ಉವಾಚ।
15003001a ಸ ರಾಜಾ ಸುಮಹಾತೇಜಾ ವೃದ್ಧಃ ಕುರುಕುಲೋದ್ವಹಃ।
15003001c ನಾಪಶ್ಯತ ತದಾ ಕಿಂ ಚಿದಪ್ರಿಯಂ ಪಾಂಡುನಂದನೇ।।
ವೈಶಂಪಾಯನನು ಹೇಳಿದನು: “ಆ ಮಹಾತೇಜಸ್ವಿ ವೃದ್ಧ ಕುರುಕುಲೋದ್ವಹ ರಾಜಾ ಧೃತರಾಷ್ಟ್ರನು ಪಾಂಡುನಂದನ ಯುಧಿಷ್ಠಿರನಲ್ಲಿ ಅಪ್ರಿಯವಾದ ಏನೊಂದನ್ನೂ ಕಾಣಲಿಲ್ಲ.
15003002a ವರ್ತಮಾನೇಷು ಸದ್ವೃತ್ತಿಂ ಪಾಂಡವೇಷು ಮಹಾತ್ಮಸು।
15003002c ಪ್ರೀತಿಮಾನಭವದ್ರಾಜಾ ಧೃತರಾಷ್ಟ್ರೋಽಂಬಿಕಾಸುತಃ।।
ಮಹಾತ್ಮ ಪಾಂಡವರೊಂದಿಗೆ ಆ ರೀತಿಯ ಸದ್ವೃತ್ತಿಯು ನಡೆಯುತ್ತಿರಲು ಅಂಬಿಕಾಸುತ ರಾಜಾ ಧೃತರಾಷ್ಟ್ರನು ಸಂತೋಷದಿಂದಿದ್ದನು.
15003003a ಸೌಬಲೇಯೀ ಚ ಗಾಂಧಾರೀ ಪುತ್ರಶೋಕಮಪಾಸ್ಯ ತಮ್।
15003003c ಸದೈವ ಪ್ರೀತಿಮತ್ಯಾಸೀತ್ತನಯೇಷು ನಿಜೇಷ್ವಿವ।।
ಸೌಬಲೇಯೀ ಗಾಂಧಾರಿಯೂ ಕೂಡ ಪುತ್ರಶೋಕವನ್ನು ತೊರೆದು ಪಾಂಡವರನ್ನು ತನ್ನ ಮಕ್ಕಳಂತೆಯೇ ಸದೈವ ಪ್ರೀತಿಸುತ್ತಿದ್ದಳು.
15003004a ಪ್ರಿಯಾಣ್ಯೇವ ತು ಕೌರವ್ಯೋ ನಾಪ್ರಿಯಾಣಿ ಕುರೂದ್ವಹ।
15003004c ವೈಚಿತ್ರವೀರ್ಯೇ ನೃಪತೌ ಸಮಾಚರತಿ ನಿತ್ಯದಾ।।
ಕೌರವ ಕುರೂದ್ವಹ ಯುಧಿಷ್ಠಿರನೂ ಕೂಡ ವೈಚಿತ್ರವೀರ್ಯ ನೃಪತಿ ಧೃತರಾಷ್ಟ್ರನಿಗೆ ಅಪ್ರಿಯ ಕರ್ಮಗಳನ್ನು ಮಾಡುತ್ತಿರಲಿಲ್ಲ. ನಿತ್ಯವೂ ಅವನಿಗೆ ಸರಿಯಾಗಿಯೇ ನಡೆದುಕೊಂಡಿದ್ದನು.
15003005a ಯದ್ಯದ್ಬ್ರೂತೇ ಚ ಕಿಂ ಚಿತ್ಸ ಧೃತರಾಷ್ಟ್ರೋ ನರಾಧಿಪಃ।
15003005c ಗುರು ವಾ ಲಘು ವಾ ಕಾರ್ಯಂ ಗಾಂಧಾರೀ ಚ ಯಶಸ್ವಿನೀ।।
15003006a ತತ್ಸ ರಾಜಾ ಮಹಾರಾಜ ಪಾಂಡವಾನಾಂ ಧುರಂಧರಃ।
15003006c ಪೂಜಯಿತ್ವಾ ವಚಸ್ತತ್ತದಕಾರ್ಷೀತ್ಪರವೀರಹಾ।।
ನರಾಧಿಪ ಧೃತರಾಷ್ಟ್ರ ಮತ್ತು ಯಶಸ್ವಿನೀ ಗಾಂಧಾರಿಯರು ಚಿಕ್ಕ ಅಥವಾ ದೊಡ್ಡ ಯಾವ ಕಾರ್ಯವನ್ನೇ ಹೇಳಲಿ ಅವುಗಳನ್ನು ಪಾಂಡವರ ದುರಂಧರ ಪರವೀರಹ ರಾಜಾ ಮಹಾರಾಜ ಯುಧಿಷ್ಠಿರನು, ಅವರ ಮಾತನ್ನು ಗೌರವಿಸಿ, ಮಾಡಿಕೊಡುತ್ತಿದ್ದನು.
15003007a ತೇನ ತಸ್ಯಾಭವತ್ಪ್ರೀತೋ ವೃತ್ತೇನ ಸ ನರಾಧಿಪಃ।
15003007c ಅನ್ವತಪ್ಯಚ್ಚ ಸಂಸ್ಮೃತ್ಯ ಪುತ್ರಂ ಮಂದಮಚೇತಸಮ್।।
ಅವನ ಆ ನಡತೆಯಿಂದ ನರಾಧಿಪ ಧೃತರಾಷ್ಟ್ರನು ಪ್ರೀತನಾಗಿದ್ದನು. ಆದರೂ ಮಂದಚೇತಸನಾಗಿದ್ದ ತನ್ನ ಮಗನನ್ನು ನೆನಪಿಸಿಕೊಂಡು ಪಶ್ಚಾತ್ತಾಪ ಪಡುತ್ತಿದ್ದನು.
15003008a ಸದಾ ಚ ಪ್ರಾತರುತ್ಥಾಯ ಕೃತಜಪ್ಯಃ ಶುಚಿರ್ನೃಪಃ।
15003008c ಆಶಾಸ್ತೇ ಪಾಂಡುಪುತ್ರಾಣಾಂ ಸಮರೇಷ್ವಪರಾಜಯಮ್।।
ಸದಾ ಬೆಳಿಗ್ಗೆ ಎದ್ದು ಶುಚಿಯಾಗಿ ಜಪಾದಿಗಳನ್ನು ಮುಗಿಸಿ ನೃಪನು ಪಾಂಡುಪುತ್ರರಿಗೆ ಸಮರದಲ್ಲಿ ಅಪರಾಜಯವನ್ನು ಆಶೀರ್ವದಿಸುತ್ತಿದ್ದನು.
15003009a ಬ್ರಾಹ್ಮಣಾನ್ವಾಚಯಿತ್ವಾ ಚ ಹುತ್ವಾ ಚೈವ ಹುತಾಶನಮ್।
15003009c ಆಯುಷ್ಯಂ ಪಾಂಡುಪುತ್ರಾಣಾಮಾಶಾಸ್ತೇ ಸ ನರಾಧಿಪಃ।।
ಬ್ರಾಹ್ಮಣರಿಂದ ಸ್ವಸ್ತಿವಾಚನಮಾಡಿಸಿ, ಅಗ್ನಿಯಲ್ಲಿ ಹೋಮಮಾಡಿ ನರಾಧಿಪನು ಪಾಂಡುಪುತ್ರರ ದೀರ್ಘಾಯುಸ್ಸನ್ನು ಪ್ರಾರ್ಥಿಸುತ್ತಿದ್ದನು.
15003010a ನ ತಾಂ ಪ್ರೀತಿಂ ಪರಾಮಾಪ ಪುತ್ರೇಭ್ಯಃ ಸ ಮಹೀಪತಿಃ।
15003010c ಯಾಂ ಪ್ರೀತಿಂ ಪಾಂಡುಪುತ್ರೇಭ್ಯಃ ಸಮವಾಪ ತದಾ ನೃಪಃ।।
ಆಗ ಪಾಂಡುಪುತ್ರರಿಂದ ಯಾವ ಪ್ರೀತಿಯನ್ನು ನೃಪ ಮಹೀಪತಿಯು ಪಡೆದನೋ ಆ ಪ್ರೀತಿಯನ್ನು ತನ್ನ ಪುತ್ರರಿಂದಲೂ ಹಿಂದೆ ಪಡೆದಿರಲಿಲ್ಲ.
15003011a ಬ್ರಾಹ್ಮಣಾನಾಂ ಚ ವೃದ್ಧಾನಾಂ ಕ್ಷತ್ರಿಯಾಣಾಂ ಚ ಭಾರತ।
15003011c ತಥಾ ವಿಟ್ಶೂದ್ರಸಂಘಾನಾಮಭವತ್ಸುಪ್ರಿಯಸ್ತದಾ।।
ಭಾರತ! ಆಗ ಯುಧಿಷ್ಠಿರನು ಬ್ರಾಹ್ಮಣರ, ವೃದ್ಧರ, ಕ್ಷತ್ರಿಯರ, ವೈಶ್ಯರ ಮತ್ತು ಶೂದ್ರ ಸಂಘಗಳ ಪ್ರೀತಿಪಾತ್ರನಾಗಿದ್ದನು.
15003012a ಯಚ್ಚ ಕಿಂ ಚಿತ್ಪುರಾ ಪಾಪಂ ಧೃತರಾಷ್ಟ್ರಸುತೈಃ ಕೃತಮ್।
15003012c ಅಕೃತ್ವಾ ಹೃದಿ ತದ್ರಾಜಾ ತಂ ನೃಪಂ ಸೋಽನ್ವವರ್ತತ।।
ಹಿಂದೆ ಧೃತರಾಷ್ಟ್ರನ ಮಕ್ಕಳು ಏನೆಲ್ಲ ಪಾಪಗಳನ್ನೆಸಗಿದ್ದರೋ ಅವೆಲ್ಲವನ್ನೂ ಹೃದಯಕ್ಕೆ ಹಚ್ಚಿಕೊಳ್ಳದೇ ನೃಪ ಧೃತರಾಷ್ಟ್ರನ ಸೇವೆಗೈಯುತ್ತಿದ್ದನು.
15003013a ಯಶ್ಚ ಕಶ್ಚಿನ್ನರಃ ಕಿಂ ಚಿದಪ್ರಿಯಂ ಚಾಂಬಿಕಾಸುತೇ।
15003013c ಕುರುತೇ ದ್ವೇಷ್ಯತಾಮೇತಿ ಸ ಕೌಂತೇಯಸ್ಯ ಧೀಮತಃ।।
ಅಂಬಿಕಾಸುತನ ವಿಷಯದಲ್ಲಿ ಯಾರೇ ಏನೇ ಅಪ್ರಿಯವಾದುದನ್ನು ಎಸಗಿದರೂ ಅವನು ಧೀಮತ ಕೌಂತೇಯನ ದ್ವೇಷಕ್ಕೆ ಪಾತ್ರನಾಗುತ್ತಿದ್ದನು.
15003014a ನ ರಾಜ್ಞೋ ಧೃತರಾಷ್ಟ್ರಸ್ಯ ನ ಚ ದುರ್ಯೋಧನಸ್ಯ ವೈ।
15003014c ಉವಾಚ ದುಷ್ಕೃತಂ ಕಿಂ ಚಿದ್ಯುಧಿಷ್ಠಿರಭಯಾನ್ನರಃ।।
ಯುಧಿಷ್ಠಿರನ ಭಯದಿಂದಾಗಿ ಯಾರೂ ರಾಜ ಧೃತರಾಷ್ಟ್ರನ ಅಥವಾ ದುರ್ಯೋಧನನ ದುಷ್ಕೃತಗಳ ಕುರಿತು ಮಾತನಾಡುತ್ತಿರಲಿಲ್ಲ.
15003015a ಧೃತ್ಯಾ ತುಷ್ಟೋ ನರೇಂದ್ರಸ್ಯ ಗಾಂಧಾರೀ ವಿದುರಸ್ತಥಾ।
15003015c ಶೌಚೇನ ಚಾಜಾತಶತ್ರೋರ್ನ ತು ಭೀಮಸ್ಯ ಶತ್ರುಹನ್।।
ಶತ್ರುಹನ್! ನರೇಂದ್ರ ಅಜಾತಶತ್ರುವಿನ ಧೃತಿ, ಶೌಚಗಳಿಂದ ಗಾಂಧಾರೀ ಮತ್ತು ವಿದುರರು ತುಷ್ಟರಾಗಿದ್ದರು. ಆದರೆ ಭೀಮನ ಕುರಿತು ಅವರಿಗೆ ತೃಪ್ತಿಯಿರಲಿಲ್ಲ.
15003016a ಅನ್ವವರ್ತತ ಭೀಮೋಽಪಿ ನಿಷ್ಟನನ್ಧರ್ಮಜಂ ನೃಪಮ್।
15003016c ಧೃತರಾಷ್ಟ್ರಂ ಚ ಸಂಪ್ರೇಕ್ಷ್ಯ ಸದಾ ಭವತಿ ದುರ್ಮನಾಃ।।
ಭೀಮನೂ ಕೂಡ ಧರ್ಮಜ ನೃಪನನ್ನು ನಿಷ್ಟೆಯಿಂದ ಅನುಸರಿಸುತ್ತಿದ್ದನು. ಆದರೆ ಧೃತರಾಷ್ಟ್ರನನ್ನು ಕಂಡಾಗಲೆಲ್ಲಾ ಕೆಟ್ಟ ಭಾವವನ್ನು ತಾಳುತ್ತಿದ್ದನು.
15003017a ರಾಜಾನಮನುವರ್ತಂತಂ ಧರ್ಮಪುತ್ರಂ ಮಹಾಮತಿಮ್।
15003017c ಅನ್ವವರ್ತತ ಕೌರವ್ಯೋ ಹೃದಯೇನ ಪರಾಙ್ಮುಖಃ।।
ಆ ಕೌರವ್ಯ ಭೀಮನು ಧರ್ಮಪುತ್ರ ಮಹಾಮತಿ ರಾಜನನ್ನು ಅನುಸರಿಸಿಕೊಂಡಿದ್ದರೂ, ಹೃದಯದಲ್ಲಿ ಬೇರೆಯೇ ಭಾವವನ್ನಿಟ್ಟುಕೊಂಡಿದ್ದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಆಶ್ರಮವಾಸಿಕೇ ಪರ್ವಣಿ ಆಶ್ರಮವಾಸಪರ್ವಣಿ ಧೃತರಾಷ್ಟ್ರಶುಶ್ರೂಷೇ ತೃತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಆಶ್ರಮವಾಸಿಕಪರ್ವದಲ್ಲಿ ಆಶ್ರಮವಾಸಪರ್ವದಲ್ಲಿ ಧೃತರಾಷ್ಟ್ರಶುಶ್ರೂಷ ಎನ್ನುವ ಮೂರನೇ ಅಧ್ಯಾಯವು.