ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 86
ಸಾರ
ಕುದುರೆಯೊಂದಿಗೆ ಅರ್ಜುನನು ಹಿಂದಿರುಗುತ್ತಿದ್ದಾನೆಂದು ತಿಳಿದ ಯುಧಿಷ್ಠಿರನ ಸೂಚನೆಯಂತೆ ಭೀಮಸೇನನು ಯಜ್ಞವಾಟಿಕೆಯನ್ನು ಸಿದ್ಧಪಡಿಸಿದುದು (1-21). ಯಜ್ಞಕ್ಕೆ ದ್ವಿಜರ ಆಗಮನ (22-26).
14086001 ವೈಶಂಪಾಯನ ಉವಾಚ
14086001a ಇತ್ಯುಕ್ತ್ವಾನುಯಯೌ ಪಾರ್ಥೋ ಹಯಂ ತಂ ಕಾಮಚಾರಿಣಮ್।
14086001c ನ್ಯವರ್ತತ ತತೋ ವಾಜೀ ಯೇನ ನಾಗಾಹ್ವಯಂ ಪುರಮ್।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಪಾರ್ಥನು ಕಾಮಚಾರೀ ಕುದುರೆಯನ್ನು ಅನುಸರಿಸಿ ಹೊರಟನು. ಆಗ ಆ ಕುದುರೆಯು ಹಸ್ತಿನಾಪುರಕ್ಕೆ ಹಿಂದಿರುಗಿತು.
14086002a ತಂ ನಿವೃತ್ತಂ ತು ಶುಶ್ರಾವ ಚಾರೇಣೈವ ಯುಧಿಷ್ಠಿರಃ।
14086002c ಶ್ರುತ್ವಾರ್ಜುನಂ ಕುಶಲಿನಂ ಸ ಚ ಹೃಷ್ಟಮನಾಭವತ್।।
ಚಾರರ ಮೂಲಕ ಕುದುರೆಯು ಹಿಂದಿರುಗಿದುದನ್ನೂ ಅರ್ಜುನನು ಕುಶಲಿಯಾಗಿರುವನು ಎನ್ನುವುದನ್ನೂ ತಿಳಿದ ಯುಧಿಷ್ಠಿರನು ಹರ್ಷಿತನಾದನು.
14086003a ವಿಜಯಸ್ಯ ಚ ತತ್ಕರ್ಮ ಗಾಂಧಾರವಿಷಯೇ ತದಾ।
14086003c ಶ್ರುತ್ವಾನ್ಯೇಷು ಚ ದೇಶೇಷು ಸ ಸುಪ್ರೀತೋಽಭವನ್ನೃಪಃ।।
ಗಾಂಧಾರದೇಶದಲ್ಲಿ ಮತ್ತು ಹಾಗೆಯೇ ಅನ್ಯ ದೇಶಗಳಲ್ಲಿ ವಿಜಯನ ಆ ಕರ್ಮವನ್ನು ಕೇಳಿ ನೃಪನು ಸುಪ್ರೀತನಾದನು.
14086004a ಏತಸ್ಮಿನ್ನೇವ ಕಾಲೇ ತು ದ್ವಾದಶೀಂ ಮಾಘಪಾಕ್ಷಿಕೀಮ್।
14086004c ಇಷ್ಟಂ ಗೃಹೀತ್ವಾ ನಕ್ಷತ್ರಂ ಧರ್ಮರಾಜೋ ಯುಧಿಷ್ಠಿರಃ।।
14086005a ಸಮಾನಾಯ್ಯ ಮಹಾತೇಜಾಃ ಸರ್ವಾನ್ಭ್ರಾತೄನ್ಮಹಾಮನಾಃ।
14086005c ಭೀಮಂ ಚ ನಕುಲಂ ಚೈವ ಸಹದೇವಂ ಚ ಕೌರವಃ।।
ಆಗ ಅದು ಪುಷ್ಯ ನಕ್ಷತ್ರದಿಂದ ಕೂಡಿದ ಮಾಘ ಶುಕ್ಲ ದ್ವಾದಶಿಯಾಗಿತ್ತು. ಆಗ ಕೌರವ ಧರ್ಮರಾಜ ಯುಧಿಷ್ಠಿರನು ಮಹಾತೇಜಸ್ವಿಗಳೂ ಮಹಾಮನಸ್ವಿಗಳೂ ಆದ ಎಲ್ಲ ಸಹೋದರರನ್ನೂ – ಭೀಮ, ನಕುಲ, ಸಹದೇವರನ್ನು – ಕರೆಯಿಸಿದನು.
14086006a ಪ್ರೋವಾಚೇದಂ ವಚಃ ಕಾಲೇ ತದಾ ಧರ್ಮಭೃತಾಂ ವರಃ।
14086006c ಆಮಂತ್ರ್ಯ ವದತಾಂ ಶ್ರೇಷ್ಠೋ ಭೀಮಂ ಭೀಮಪರಾಕ್ರಮಮ್।।
ಆ ಸಮಯದಲ್ಲಿ ಧರ್ಮಭೃತರಲ್ಲಿ ಶ್ರೇಷ್ಠ ಮತ್ತು ಮಾತನಾಡುವವರಲ್ಲಿ ಶ್ರೇಷ್ಠ ಯುಧಿಷ್ಠಿರನು ಭೀಮಪರಾಕ್ರಮಿ ಭೀಮನನ್ನು ಉದ್ದೇಶಿಸಿ ಈ ಮಾತನ್ನಾಡಿದನು:
14086007a ಆಯಾತಿ ಭೀಮಸೇನಾಸೌ ಸಹಾಶ್ವೇನ ತವಾನುಜಃ।
14086007c ಯಥಾ ಮೇ ಪುರುಷಾಃ ಪ್ರಾಹುರ್ಯೇ ಧನಂಜಯಸಾರಿಣಃ।।
“ಭೀಮಸೇನ! ಇಗೋ ನಿನ್ನ ತಮ್ಮನು ಕುದುರೆಯೊಂದಿಗೆ ಬರುತ್ತಿದ್ದಾನೆ. ಇದನ್ನು ಧನಂಜಯನನ್ನು ಅನುಸರಿಸಿ ಹೋಗಿದ್ದ ಪುರುಷರು ಮೊದಲಾಗಿ ಬಂದು ಹೇಳಿದ್ದಾರೆ.
14086008a ಉಪಸ್ಥಿತಶ್ಚ ಕಾಲೋಽಯಮಭಿತೋ ವರ್ತತೇ ಹಯಃ।
14086008c ಮಾಘೀ ಚ ಪೌರ್ಣಮಾಸೀಯಂ ಮಾಸಃ ಶೇಷೋ ವೃಕೋದರ।।
ಕುದುರೆಯೂ ಕೂಡ ಕಾಲಕ್ಕೆ ಸರಿಯಾಗಿ ಹಿಂದಿರುಗಿ ಬಂದಿದೆ. ವೃಕೋದರ! ಇದು ಮಾಘದ ಹುಣ್ಣಿಮೆ. ಒಂದು ತಿಂಗಳು ಮಾತ್ರ ಉಳಿದಿದೆ.
14086009a ತತ್ಪ್ರಸ್ಥಾಪ್ಯಂತು ವಿದ್ವಾಂಸೋ ಬ್ರಾಹ್ಮಣಾ ವೇದಪಾರಗಾಃ।
14086009c ವಾಜಿಮೇಧಾರ್ಥಸಿದ್ಧ್ಯರ್ಥಂ ದೇಶಂ ಪಶ್ಯಂತು ಯಜ್ಞಿಯಮ್।।
ಆದುದರಿಂದ ವೇದಪಾರಗ ವಿದ್ವಾಂಸ ಬ್ರಾಹ್ಮಣರನ್ನು ಕರೆಯಿಸಬೇಕು. ಅಶ್ವಮೇಧ ಯಜ್ಞಕ್ಕೆ ಪ್ರಶಸ್ತ ಸ್ಥಳವನ್ನು ನೋಡಬೇಕು.”
14086010a ಇತ್ಯುಕ್ತಃ ಸ ತು ತಚ್ಚಕ್ರೇ ಭೀಮೋ ನೃಪತಿಶಾಸನಮ್।
14086010c ಹೃಷ್ಟಃ ಶ್ರುತ್ವಾ ನರಪತೇರಾಯಾಂತಂ ಸವ್ಯಸಾಚಿನಮ್।।
ಸವ್ಯಸಾಚಿಯು ಬರುತ್ತಿದ್ದಾನೆಂದು ನರಪತಿಯಿಂದ ಕೇಳಿದ ಭೀಮನು ಹೃಷ್ಟನಾಗಿ ನೃಪತಿಶಾಸನದಂತೆ ಮಾಡಬೇಕಾದ ಕಾರ್ಯಗಳಲ್ಲಿ ತೊಡಗಿದನು.
14086011a ತತೋ ಯಯೌ ಭೀಮಸೇನಃ ಪ್ರಾಜ್ಞೈಃ ಸ್ಥಪತಿಭಿಃ ಸಹ।
14086011c ಬ್ರಾಹ್ಮಣಾನಗ್ರತಃ ಕೃತ್ವಾ ಕುಶಲಾನ್ಯಜ್ಞಕರ್ಮಸು।।
ಆಗ ಭೀಮಸೇನನು ಪ್ರಾಜ್ಞ ಸ್ಥಪತಿಗಳು ಮತ್ತು ಯಜ್ಞಕರ್ಮಗಳಲ್ಲಿ ಕುಶಲರಾಗಿದ್ದ ಬ್ರಾಹ್ಮಣರನ್ನು ಮುಂದುಮಾಡಿಕೊಂಡು ಹೊರಟನು.
14086012a ತಂ ಸಶಾಲಚಯಗ್ರಾಮಂ ಸಂಪ್ರತೋಲೀವಿಟಂಕಿನಮ್।
14086012c ಮಾಪಯಾಮಾಸ ಕೌರವ್ಯೋ ಯಜ್ಞವಾಟಂ ಯಥಾವಿಧಿ।।
ಕೌರವ್ಯನು ಶಾಲವೃಕ್ಷ ಸಮೂಹಗಳಿಂದ ಕೂಡಿದ್ದ ಭೂಪ್ರದೇಶವನ್ನು ಯಥಾವಿಧಿಯಾಗಿ ಯಜ್ಞವಾಟಿಕೆಗೆ ಅಳತೆಮಾಡಿಸಿದನು.
14086013a ಸದಃ ಸಪತ್ನೀಸದನಂ ಸಾಗ್ನೀಧ್ರಮಪಿ ಚೋತ್ತರಮ್।
14086013c ಕಾರಯಾಮಾಸ ವಿಧಿವನ್ಮಣಿಹೇಮವಿಭೂಷಿತಮ್।।
ರಾಜಮಾರ್ಗಗಳಿಂದಲೂ ಸೌದಗಳಿಂದಲೂ ಕೂಡಿದ ಮಣಿಹೇಮವಿಭೂಷಿತವಾದ ಯಜ್ಞಶಾಲೆಯನ್ನು ಕಟ್ಟಿಸಿದನು.
14086014a ಸ್ತಂಭಾನ್ಕನಕಚಿತ್ರಾಂಶ್ಚ ತೋರಣಾನಿ ಬೃಹಂತಿ ಚ।
14086014c ಯಜ್ಞಾಯತನದೇಶೇಷು ದತ್ತ್ವಾ ಶುದ್ಧಂ ಚ ಕಾಂಚನಮ್।।
ಸ್ತಂಭಗಳಲ್ಲಿ ಚಿನ್ನದ ಚಿತ್ರಗಳಿದ್ದವು. ದೊಡ್ಡ ತೋರಣಗಳಿದ್ದವು. ಯಜ್ಞಾಯತನ ಪ್ರದೇಶದಲ್ಲಿ ಶುದ್ಧ ಕಾಂಚನವನ್ನೇ ಬಳಸಲಾಗಿತ್ತು.
14086015a ಅಂತಃಪುರಾಣಿ ರಾಜ್ಞಾಂ ಚ ನಾನಾದೇಶನಿವಾಸಿನಾಮ್।
14086015c ಕಾರಯಾಮಾಸ ಧರ್ಮಾತ್ಮಾ ತತ್ರ ತತ್ರ ಯಥಾವಿಧಿ।।
ಆ ಧರ್ಮಾತ್ಮನು ಅಲ್ಲಲ್ಲಿ ಯಥಾವಿಧಿಯಾಗಿ ನಾನಾದೇಶನಿವಾಸೀ ರಾಜರಿಗಾಗಿ ಅಂತಃಪುರಗಳನ್ನು ಕಟ್ಟಿಸಿದನು.
14086016a ಬ್ರಾಹ್ಮಣಾನಾಂ ಚ ವೇಶ್ಮಾನಿ ನಾನಾದೇಶಸಮೇಯುಷಾಮ್।
14086016c ಕಾರಯಾಮಾಸ ಭೀಮಃ ಸ ವಿವಿಧಾನಿ ಹ್ಯನೇಕಶಃ।।
ನಾನಾ ದೇಶಗಳಿಂದ ಬಂದು ಸೇರಿದ ಬ್ರಾಹ್ಮಣರಿಗಾಗಿ ಅನೇಕ ವಿವಿಧ ಭವನಗಳನ್ನು ಭೀಮನು ಕಟ್ಟಿಸಿದನು.
14086017a ತಥಾ ಸಂಪ್ರೇಷಯಾಮಾಸ ದೂತಾನ್ನೃಪತಿಶಾಸನಾತ್।
14086017c ಭೀಮಸೇನೋ ಮಹಾರಾಜ ರಾಜ್ಞಾಮಕ್ಲಿಷ್ಟಕರ್ಮಣಾಮ್।।
ಮಹಾರಾಜ! ಹಾಗೆಯೇ ನೃಪತಿಯ ಶಾಸನದಂತೆ ಭೀಮಸೇನನು ಅಕ್ಲಿಷ್ಟಕರ್ಮಿ ರಾಜರಿಗೆ ದೂತರನ್ನು ಕಳುಹಿಸಿದನು.
14086018a ತೇ ಪ್ರಿಯಾರ್ಥಂ ಕುರುಪತೇರಾಯಯುರ್ನೃಪಸತ್ತಮಾಃ।
14086018c ರತ್ನಾನ್ಯನೇಕಾನ್ಯಾದಾಯ ಸ್ತ್ರಿಯೋಽಶ್ವಾನಾಯುಧಾನಿ ಚ।।
ಕುರುಪತಿಗೆ ಪ್ರಿಯವಾಗಲೆಂದು ನೃಪಸತ್ತಮರು ಅನೇಕ ರತ್ನಗಳನ್ನೂ, ಸ್ತ್ರೀಯರನ್ನೂ, ಅಶ್ವ-ಆಯುಧಗಳನ್ನು ತೆಗೆದುಕೊಂಡು ಆಗಮಿಸಿದರು.
14086019a ತೇಷಾಂ ನಿವಿಶತಾಂ ತೇಷು ಶಿಬಿರೇಷು ಸಹಸ್ರಶಃ।
14086019c ನರ್ದತಃ ಸಾಗರಸ್ಯೇವ ಶಬ್ದೋ ದಿವಮಿವಾಸ್ಪೃಶತ್।।
ಅವರು ವಾಸಿಸುತ್ತಿದ್ದ ಆ ಸಹಸ್ರಾರು ಶಿಬಿರಗಳಿಂದ ಬಂದ ಸಮುದ್ರದ ಭೋರ್ಗರೆತದಂತಿದ್ದ ಶಬ್ಧವು ಆಕಾಶವನ್ನೇ ಮುಟ್ಟುತ್ತಿತ್ತು.
14086020a ತೇಷಾಮಭ್ಯಾಗತಾನಾಂ ಸ ರಾಜಾ ರಾಜೀವಲೋಚನಃ।
14086020c ವ್ಯಾದಿದೇಶಾನ್ನಪಾನಾನಿ ಶಯ್ಯಾಶ್ಚಾಪ್ಯತಿಮಾನುಷಾಃ।।
ಆಗಮಿಸಿದ್ದ ಅವರಿಗೆ ರಾಜೀವಲೋಚನ ರಾಜನು ಅತಿಮಾನುಷ ಅನ್ನ-ಪಾನಾದಿಗಳ ಮತ್ತು ಶಯನಗಳ ವ್ಯವಸ್ಥೆಯನ್ನು ಮಾಡಿಸಿದ್ದನು.
14086021a ವಾಹನಾನಾಂ ಚ ವಿವಿಧಾಃ ಶಾಲಾಃ ಶಾಲೀಕ್ಷುಗೋರಸೈಃ।
14086021c ಉಪೇತಾಃ ಪುರುಷವ್ಯಾಘ್ರ ವ್ಯಾದಿದೇಶ ಸ ಧರ್ಮರಾಟ್।।
ಪುರುಷವ್ಯಾಘ್ರ ಧರ್ಮರಾಜನು ವಾಹನಗಳಿಗಾಗಿ ಧಾನ್ಯ, ಕಬ್ಬು ಮತ್ತು ಹಸುವಿನ ಹಾಲಿನಿಂದ ಸಮೃದ್ಧವಾದ ವಿವಿಧ ಭವನಗಳನ್ನು ಬಿಟ್ಟುಕೊಡುವಂತೆ ಆದೇಶವಿತ್ತಿದ್ದನು.
14086022a ತಥಾ ತಸ್ಮಿನ್ಮಹಾಯಜ್ಞೇ ಧರ್ಮರಾಜಸ್ಯ ಧೀಮತಃ।
14086022c ಸಮಾಜಗ್ಮುರ್ಮುನಿಗಣಾ ಬಹವೋ ಬ್ರಹ್ಮವಾದಿನಃ।।
ಧೀಮಂತ ಧರ್ಮರಾಜನ ಆ ಮಹಾಯಜ್ಞಕ್ಕೆ ಅನೇಕ ಬ್ರಹ್ಮವಾದೀ ಮುನಿಗಣಗಳು ಬಂದು ಸೇರಿದವು.
14086023a ಯೇ ಚ ದ್ವಿಜಾತಿಪ್ರವರಾಸ್ತತ್ರಾಸನ್ಪೃಥಿವೀಪತೇ।
14086023c ಸಮಾಜಗ್ಮುಃ ಸಶಿಷ್ಯಾಂಸ್ತಾನ್ ಪ್ರತಿಜಗ್ರಾಹ ಕೌರವಃ।।
ಪೃಥಿವೀಪತೇ! ಶಿಷ್ಯರೊಂದಿಗೆ ಬಂದು ಸೇರಿದ್ದ ಆ ದ್ವಿಜಾತಿಪ್ರವರರನ್ನು ಕೌರವನು ಸ್ವಾಗತಿಸಿ ಸತ್ಕರಿಸಿದನು.
14086024a ಸರ್ವಾಂಶ್ಚ ತಾನನುಯಯೌ ಯಾವದಾವಸಥಾದಿತಿ।
14086024c ಸ್ವಯಮೇವ ಮಹಾತೇಜಾ ದಂಭಂ ತ್ಯಕ್ತ್ವಾ ಯುಧಿಷ್ಠಿರಃ।।
ಮಹಾತೇಜಸ್ವಿ ಯುಧಿಷ್ಠಿರನು ದಂಭವನ್ನು ತ್ಯಜಿಸಿ ಅವರೆಲ್ಲರನ್ನೂ ಅವರವರ ವಾಸಸ್ಥಳಗಳಿಗೆ ತಲುಪುವವರೆಗೂ ಹಿಂಬಾಲಿಸಿ ಹೋಗುತ್ತಿದ್ದನು.
14086025a ತತಃ ಕೃತ್ವಾ ಸ್ಥಪತಯಃ ಶಿಲ್ಪಿನೋಽನ್ಯೇ ಚ ಯೇ ತದಾ।
14086025c ಕೃತ್ಸ್ನಂ ಯಜ್ಞವಿಧಿಂ ರಾಜನ್ಧರ್ಮರಾಜ್ಞೇ ನ್ಯವೇದಯನ್।।
ರಾಜನ್! ಯಜ್ಞವಿಧಿಯೆಲ್ಲವನ್ನೂ ನಿರ್ಮಿಸಿದ ಸ್ಥಪತಿಗಳು ಮತ್ತು ಅನ್ಯ ಶಿಲ್ಪಿಗಳು ಧರ್ಮರಾಜನಿಗೆ ಬಂದು ನಿವೇದಿಸಿದರು.
14086026a ತಚ್ಚ್ರುತ್ವಾ ಧರ್ಮರಾಜಃ ಸ ಕೃತಂ ಸರ್ವಮನಿಂದಿತಮ್।
14086026c ಹೃಷ್ಟರೂಪೋಽಭವದ್ರಾಜಾ ಸಹ ಭ್ರಾತೃಭಿರಚ್ಯುತಃ।।
ಅದನ್ನು ಕೇಳಿ ರಾಜಾ ಅಚ್ಯುತ ಧರ್ಮರಾಜನು ಸಹೋದರರೊಂದಿಗೆ ಎಲ್ಲವೂ ಕುಂದುಗಳಿಲ್ಲದೇ ನೆರವೇರಿತೆಂದು ಹೃಷ್ಟರೂಪನಾದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ಷಡಶೀತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ಎಂಭತ್ತಾರನೇ ಅಧ್ಯಾಯವು.