047: ಅನುಗೀತಾಯಾಂ ಗುರುಶಿಷ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 47

ಸಾರ

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-16).

14047001 ಬ್ರಹ್ಮೋವಾಚ
14047001a ಸಂನ್ಯಾಸಂ ತಪ ಇತ್ಯಾಹುರ್ವೃದ್ಧಾ ನಿಶ್ಚಿತದರ್ಶಿನಃ।
14047001c ಬ್ರಾಹ್ಮಣಾ ಬ್ರಹ್ಮಯೋನಿಸ್ಥಾ ಜ್ಞಾನಂ ಬ್ರಹ್ಮ ಪರಂ ವಿದುಃ।।

ಬ್ರಹ್ಮನು ಹೇಳಿದನು: “ನಿಶ್ಚಯಗಳನ್ನು ಕಂಡ ಬ್ರಹ್ಮಯೋನಿಸ್ಥ ವೃದ್ಧ ಬ್ರಾಹ್ಮಣರು ಸಂನ್ಯಾಸವೇ ತಪಸ್ಸೆಂದು ಹೇಳುತ್ತಾರೆ. ಬ್ರಹ್ಮಜ್ಞಾನವೇ ಪರಮ ಜ್ಞಾನವೆಂದು ತಿಳಿಯುತ್ತಾರೆ.

14047002a ಅವಿದೂರಾತ್ಪರಂ ಬ್ರಹ್ಮ ವೇದವಿದ್ಯಾವ್ಯಪಾಶ್ರಯಮ್।
14047002c ನಿರ್ದ್ವಂದ್ವಂ ನಿರ್ಗುಣಂ ನಿತ್ಯಮಚಿಂತ್ಯಂ ಗುಹ್ಯಮುತ್ತಮಮ್।।

ವೇದವಿದ್ಯೆಗೆ ಆಶ್ರಯವಾಗಿರುವ ಈ ಬ್ರಹ್ಮಜ್ಞಾನವು ಅಜ್ಞಾನಿಗಳಿಗೆ ಅತಿ ದೂರದ್ದಾಗಿದೆ. ನಿರ್ದ್ವಂದ್ವವೂ, ನಿರ್ಗುಣವೂ, ಅಚಿಂತ್ಯವೂ, ನಿತ್ಯವೂ ಆದ ಬ್ರಹ್ಮವು ಗುಹ್ಯವಾದುದು.

14047003a ಜ್ಞಾನೇನ ತಪಸಾ ಚೈವ ಧೀರಾಃ ಪಶ್ಯಂತಿ ತತ್ಪದಮ್।
14047003c ನಿರ್ಣಿಕ್ತತಮಸಃ ಪೂತಾ ವ್ಯುತ್ಕ್ರಾಂತರಜಸೋಽಮಲಾಃ।।

ಜ್ಞಾನ ಮತ್ತು ತಪಸ್ಸಿನಿಂದ ಮಾತ್ರವೇ ತಮಸ್ಸನ್ನು ತೊಳೆದುಕೊಂಡು ರಜಸ್ಸನ್ನು ದಾಟಿ ಪವಿತ್ರರಾದ ಅಮಲ ಧೀರರು ಆ ಪದವನ್ನು ಕಾಣುತ್ತಾರೆ.

14047004a ತಪಸಾ ಕ್ಷೇಮಮಧ್ವಾನಂ ಗಚ್ಚಂತಿ ಪರಮೈಷಿಣಃ।
14047004c ಸಂನ್ಯಾಸನಿರತಾ ನಿತ್ಯಂ ಯೇ ಬ್ರಹ್ಮವಿದುಷೋ ಜನಾಃ।।

ಪರಮ ಪದವಿಯನ್ನು ಬಯಸುವ ಬ್ರಹ್ಮವಿದುಷ ಜನರು ನಿತ್ಯವೂ ಸಂನ್ಯಾಸನಿರತರಾಗಿ ತಪಸ್ಸಿನಿಂದ ಕ್ಷೇಮಕರ ಮಾರ್ಗದಲ್ಲಿ ಹೋಗುತ್ತಾರೆ.

14047005a ತಪಃ ಪ್ರದೀಪ ಇತ್ಯಾಹುರಾಚಾರೋ ಧರ್ಮಸಾಧಕಃ।
14047005c ಜ್ಞಾನಂ ತ್ವೇವ ಪರಂ ವಿದ್ಮ ಸಂನ್ಯಾಸಸ್ತಪ ಉತ್ತಮಮ್।।

ತಪಸ್ಸನ್ನು ಪ್ರಕಾಶನೀಡುವ ದೀಪವೆಂದು ಹೇಳುತ್ತಾರೆ. ಆಚಾರವು ಧರ್ಮಸಾಧಕವು. ಜ್ಞಾನವು ಶ್ರೇಷ್ಠವಾದುದು. ಸಂನ್ಯಾಸವೇ ಉತ್ತಮ ತಪವು.

14047006a ಯಸ್ತು ವೇದ ನಿರಾಬಾಧಂ ಜ್ಞಾನಂ ತತ್ತ್ವವಿನಿಶ್ಚಯಾತ್।
14047006c ಸರ್ವಭೂತಸ್ಥಮಾತ್ಮಾನಂ ಸ ಸರ್ವಗತಿರಿಷ್ಯತೇ।।

ತತ್ತ್ವವಿನಿಶ್ಚಯದಿಂದ ಸರ್ವಭೂತಸ್ಥನಾಗಿರುವ ಆತ್ಮನ ನಿರಾಬಾಧ ಜ್ಞಾನವನ್ನು ಹೊಂದಿರುವವನು ಸರ್ವವ್ಯಾಪಕನಾಗುತ್ತಾನೆ.

14047007a ಯೋ ವಿದ್ವಾನ್ಸಹವಾಸಂ ಚ ವಿವಾಸಂ ಚೈವ ಪಶ್ಯತಿ।
14047007c ತಥೈವೈಕತ್ವನಾನಾತ್ವೇ ಸ ದುಃಖಾತ್ಪರಿಮುಚ್ಯತೇ।।

ಒಟ್ಟಿಗೇ ಇರುವುದರಲ್ಲಿ ಪ್ರತ್ಯೇಕತೆಯನ್ನೂ ಮತ್ತು ಅನೇಕಗಳಲ್ಲಿ ಏಕತ್ವವನ್ನೂ ಕಾಣುವ ವಿದ್ವಾನನು ದುಃಖದಿಂದ ಮುಕ್ತನಾಗುತ್ತಾನೆ.

14047008a ಯೋ ನ ಕಾಮಯತೇ ಕಿಂ ಚಿನ್ನ ಕಿಂ ಚಿದವಮನ್ಯತೇ।
14047008c ಇಹಲೋಕಸ್ಥ ಏವೈಷ ಬ್ರಹ್ಮಭೂಯಾಯ ಕಲ್ಪತೇ।।

ಏನನ್ನೂ ಬಯಸದೇ ಮತ್ತು ಯಾವುದನ್ನೂ ಬೇಡವೆನ್ನದೇ ಇರುವವನು ಈ ಲೋಕದಲ್ಲಿದ್ದರೂ ಬ್ರಹ್ಮಸ್ವರೂಪನೆಂದೆನಿಸಿಕೊಳ್ಳುತ್ತಾನೆ.

14047009a ಪ್ರಧಾನಗುಣತತ್ತ್ವಜ್ಞಃ ಸರ್ವಭೂತವಿಧಾನವಿತ್।
14047009c ನಿರ್ಮಮೋ ನಿರಹಂಕಾರೋ ಮುಚ್ಯತೇ ನಾತ್ರ ಸಂಶಯಃ।।

ಪ್ರಧಾನಗುಣತತ್ತ್ವಗಳನ್ನು ತಿಳಿದುಕೊಂಡು ಸರ್ವಭೂತಗಳ ವಿಧಾನಗಳನ್ನು ತಿಳಿದುಕೊಂಡಿರುವ ಮಮಕಾರರಹಿತ ನಿರಹಂಕಾರನು ಮುಕ್ತನು ಎನ್ನುವುದರಲ್ಲಿ ಸಂಶಯವಿಲ್ಲ.

14047010a ನಿರ್ದ್ವಂದ್ವೋ ನಿರ್ನಮಸ್ಕಾರೋ ನಿಃಸ್ವಧಾಕಾರ ಏವ ಚ।
14047010c ನಿರ್ಗುಣಂ ನಿತ್ಯಮದ್ವಂದ್ವಂ ಪ್ರಶಮೇನೈವ ಗಚ್ಚತಿ।।

ನಿರ್ದ್ವಂದ್ವನೂ ನಿರ್ನಮಸ್ಕಾರನೂ ಮತ್ತು ನಿಃಸ್ವಧಾಕಾರನೂ ಆಗಿರುವವನು ನಿರ್ಗುಣನೂ, ನಿತ್ಯವೂ, ಅದ್ವಂದ್ವನೂ ಆದ ಪರಮಾತ್ಮನನ್ನು ಹೊಂದುತ್ತಾನೆ.

14047011a ಹಿತ್ವಾ ಗುಣಮಯಂ ಸರ್ವಂ ಕರ್ಮ ಜಂತುಃ ಶುಭಾಶುಭಮ್।
14047011c ಉಭೇ ಸತ್ಯಾನೃತೇ ಹಿತ್ವಾ ಮುಚ್ಯತೇ ನಾತ್ರ ಸಂಶಯಃ।।

ಗುಣಮಯವಾದ ಎಲ್ಲ ಶುಭಾಶುಭ ಕರ್ಮಗಳನ್ನು ತ್ಯಜಿಸಿದವನು ಮತ್ತು ಸತ್ಯ-ಸುಳ್ಳುಗಳೆರಡನ್ನೂ ತ್ಯಜಿಸಿದವನು ಮುಕ್ತನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

14047012a ಅವ್ಯಕ್ತಬೀಜಪ್ರಭವೋ ಬುದ್ಧಿಸ್ಕಂಧಮಯೋ ಮಹಾನ್।
14047012c ಮಹಾಹಂಕಾರವಿಟಪ ಇಂದ್ರಿಯಾಂತರಕೋಟರಃ।।
14047013a ಮಹಾಭೂತವಿಶಾಖಶ್ಚ ವಿಶೇಷಪ್ರತಿಶಾಖವಾನ್।
14047013c ಸದಾಪರ್ಣಃ ಸದಾಪುಷ್ಪಃ ಶುಭಾಶುಭಫಲೋದಯಃ।
14047013e ಆಜೀವಃ ಸರ್ವಭೂತಾನಾಂ ಬ್ರಹ್ಮವೃಕ್ಷಃ ಸನಾತನಃ।।

ಅವ್ಯಕ್ತಬೀಜದಿಂದ ಹುಟ್ಟಿದ, ಬುದ್ಧಿಯೇ ಮಹಾಕಾಂಡವಾಗಿರುವ, ಅಹಂಕಾರವೆಂಬ ಮಹಾ ರೆಂಬೆಗಳಿರುವ, ಇಂದ್ರಿಯಗಳೆಂಬ ಚಿಗುರುಗಳುಳ್ಳ, ಮಹಾಭೂತಗಳು ವಿಸ್ತರಿಸಿ ವಿಶೇಷವಾಗಿ ಶೋಭೆಗೊಳಿಸಿರುವ, ಸದಾ ಪತ್ರಗಳಿರುವ, ಸದಾ ಪುಷ್ಪಗಳಿರುವ, ಶುಭಾಶುಭ ಫಲಗಳನ್ನು ನೀಡುವ ಸರ್ವಭೂತಗಳ ಜೀವವಾಗಿರುವ ಇದು ಸನಾತನವಾದ ಬ್ರಹ್ಮವೃಕ್ಷ.

14047014a ಏತಚ್ಚಿತ್ತ್ವಾ ಚ ಭಿತ್ತ್ವಾ ಚ ಜ್ಞಾನೇನ ಪರಮಾಸಿನಾ।।
14047014c ಹಿತ್ವಾ ಚಾಮರತಾಂ ಪ್ರಾಪ್ಯ ಜಹ್ಯಾದ್ವೈ ಮೃತ್ಯುಜನ್ಮನೀ।
14047014e ನಿರ್ಮಮೋ ನಿರಹಂಕಾರೋ ಮುಚ್ಯತೇ ನಾತ್ರ ಸಂಶಯಃ।।

ಜ್ಞಾನವೆಂಬ ತೀಕ್ಷ್ಣ ಖಡ್ಗದಿಂದ ಇದನ್ನು ಕತ್ತರಿಸಿ ತುಂಡುಮಾಡಿದವನು ಮೃತ್ಯು-ಜನ್ಮ-ಮುಪ್ಪುಗಳಿರುವ ಪಾಶಗಳನ್ನು ಬಿಡಿಸಿಕೊಂಡು ಅಮರತ್ವವನ್ನೂ ತೊರೆದು ನಿರ್ಮಮ ನಿರಹಂಕಾರನಾಗಿ ಮುಕ್ತನಾಗುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.

14047015a ದ್ವಾವೇತೌ ಪಕ್ಷಿಣೌ ನಿತ್ಯೌ ಸಖಾಯೌ ಚಾಪ್ಯಚೇತನೌ।
14047015c ಏತಾಭ್ಯಾಂ ತು ಪರೋ ಯಸ್ಯ ಚೇತನಾವಾನಿತಿ ಸ್ಮೃತಃ।।

ಈ ವೃಕ್ಷದಲ್ಲಿ ಮನಸ್ಸು-ಬುದ್ಧಿಗಳೆಂಬ ಎರಡು ಪಕ್ಷಿಗಳಿವೆ. ಸಖರಾಗಿರುವ ಇವೆರಡೂ ಅಚೇತನಗಳು. ಇವೆರಡರಿಗೂ ಶ್ರೇಷ್ಠವಾದ ಚೇತನವಿದೆ ಎಂದು ತಿಳಿದಿದೆ.

14047016a ಅಚೇತನಃ ಸತ್ತ್ವಸಂಘಾತಯುಕ್ತಃ ಸತ್ತ್ವಾತ್ಪರಂ ಚೇತಯತೇಽಂತರಾತ್ಮಾ।
14047016c ಸ ಕ್ಷೇತ್ರಜ್ಞಃ ಸತ್ತ್ವಸಂಘಾತಬುದ್ಧಿರ್ ಗುಣಾತಿಗೋ ಮುಚ್ಯತೇ ಮೃತ್ಯುಪಾಶಾತ್।।

ಸತ್ತ್ವಸಂಘಾತಯುಕ್ತವಾದುದು ಅಚೇತನವು. ಸತ್ತ್ವಕ್ಕೂ ಭಿನ್ನವಾಗಿರುವ ಅಂತರಾತ್ಮನೇ ಚೇತನವನ್ನು ನೀಡುತ್ತಾನೆ. ಆ ಕ್ಷೇತ್ರಜ್ಞನೇ ಸತ್ತ್ವಸಂಘಾತಗಳನ್ನು ತಿಳಿದು ಗುಣಾತೀತನಾಗಿ ಮೃತ್ಯುಪಾಶದಿಂದ ಮುಕ್ತನಾಗುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಸಪ್ತಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೇಳನೇ ಅಧ್ಯಾಯವು.