045: ಅನುಗೀತಾಯಾಂ ಗುರುಶಿಷ್ಯಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅಶ್ವಮೇಧಿಕ ಪರ್ವ

ಅಶ್ವಮೇಧಿಕ ಪರ್ವ

ಅಧ್ಯಾಯ 45

ಸಾರ ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-25).

14045001 ಬ್ರಹ್ಮೋವಾಚ
14045001a ಬುದ್ಧಿಸಾರಂ ಮನಸ್ತಂಭಮಿಂದ್ರಿಯಗ್ರಾಮಬಂಧನಮ್।
14045001c ಮಹಾಭೂತಾರವಿಷ್ಕಂಭಂ ನಿಮೇಷಪರಿವೇಷ್ಟನಮ್।। 1
14045002a ಜರಾಶೋಕಸಮಾವಿಷ್ಟಂ ವ್ಯಾಧಿವ್ಯಸನಸಂಚರಮ್। 2
14045002c ದೇಶಕಾಲವಿಚಾರೀದಂ ಶ್ರಮವ್ಯಾಯಾಮನಿಸ್ವನಮ್।।
14045003a ಅಹೋರಾತ್ರಪರಿಕ್ಷೇಪಂ ಶೀತೋಷ್ಣಪರಿಮಂಡಲಮ್।
14045003c ಸುಖದುಃಖಾಂತಸಂಕ್ಲೇಶಂ ಕ್ಷುತ್ಪಿಪಾಸಾವಕೀಲನಮ್।।
14045004a ಛಾಯಾತಪವಿಲೇಖಂ ಚ ನಿಮೇಷೋನ್ಮೇಷವಿಹ್ವಲಮ್।
14045004c ಘೋರಮೋಹಜನಾಕೀರ್ಣಂ ವರ್ತಮಾನಮಚೇತನಮ್।।
14045005a ಮಾಸಾರ್ಧಮಾಸಗಣಿತಂ ವಿಷಮಂ ಲೋಕಸಂಚರಮ್।
14045005c ತಮೋನಿಚಯಪಂಕಂ ಚ ರಜೋವೇಗಪ್ರವರ್ತಕಮ್।।
14045006a ಸತ್ತ್ವಾಲಂಕಾರದೀಪ್ತಂ ಚ ಗುಣಸಂಘಾತಮಂಡಲಮ್।
14045006c ಸ್ವರವಿಗ್ರಹನಾಭೀಕಂ ಶೋಕಸಂಘಾತವರ್ತನಮ್।। 3
14045007a ಕ್ರಿಯಾಕಾರಣಸಂಯುಕ್ತಂ ರಾಗವಿಸ್ತಾರಮಾಯತಮ್।
14045007c ಲೋಭೇಪ್ಸಾಪರಿಸಂಖ್ಯಾತಂ ವಿವಿಕ್ತಜ್ಞಾನಸಂಭವಮ್।।
14045008a ಭಯಮೋಹಪರೀವಾರಂ ಭೂತಸಂಮೋಹಕಾರಕಮ್।
14045008c ಆನಂದಪ್ರೀತಿಧಾರಂ ಚ ಕಾಮಕ್ರೋಧಪರಿಗ್ರಹಮ್।।
14045009a ಮಹದಾದಿವಿಶೇಷಾಂತಮಸಕ್ತಪ್ರಭವಾವ್ಯಯಮ್।
14045009c ಮನೋಜವನಮಶ್ರಾಂತಂ ಕಾಲಚಕ್ರಂ ಪ್ರವರ್ತತೇ।।

ಮನೋವೇಗದ ಕಾಲಚಕ್ರವು ಆಯಾಸವಿಲ್ಲದೇ ತಿರುಗುತ್ತಲೇ ಇರುತ್ತದೆ. ಈ ಕಾಲಚಕ್ರಕ್ಕೆ ಬುದ್ಧಿಯೇ ಸಾರ, ಮನಸ್ಸೇ ಸ್ಥಂಭ ಮತ್ತು ಇಂದ್ರಿಯಗ್ರಾಮವು ಇದರ ಬಂಧನ. ಪಂಚಮಹಾಭೂತಗಳು ಇದರ ಅವಿಷ್ಕಂಭ ಮತ್ತು ನಿಮೇಷವು ಈ ಚಕ್ರಕ್ಕೆ ಸುತ್ತುವರೆದ ಪಟ್ಟಿ. ಮುಪ್ಪು-ಶೋಕಗಳಿಂದ ಕೂಡಿದ ಈ ಕಾಲಚಕ್ರಕ್ಕೆ ವ್ಯಾಧಿ-ವ್ಯಸನಗಳೇ ಸಂಚಾರಗಳು. ದೇಶ-ಕಾಲಗಳಲ್ಲಿ ಸಂಚರಿಸುವ ಈ ಕಾಲಚಕ್ರಕ್ಕೆ ಶ್ರಮ-ವ್ಯಾಯಾಮಗಳೇ ಶಬ್ಧ. ಹಗಲು-ರಾತ್ರಿಗಳೇ ಈ ಕಾಲಚಕ್ರದ ಸುತ್ತುಗಳು. ಇದು ಶೀತ-ಉಷ್ಣಗಳಿಂದ ಸುತ್ತುವರೆಯಲ್ಪಟ್ಟಿದೆ. ಸುಖ-ದುಃಖಗಳು ಇದರ ಸಂಧಿಗಳು. ಹಸಿವು-ಬಾಯಾರಿಕೆಗಳು ಇದಕ್ಕೆ ಚುಚ್ಚಿದ ಮೊಳೆಗಳು. ಬಿಸಿಲು-ನೆರಳುಗಳು ಇದರ ನಡುಗೆ ಮತ್ತು ರೆಪ್ಪೆಗಳ ಬಡಿತವು ಇದರ ಹಂದಾಡುವಿಕೆ. ಈ ಚಕ್ರವು ಮೋಹವೆಂಬ ಘೋರ ಕೆಸರಿನಲ್ಲಿ ಹುದುಗಿಕೊಂಡಿದೆ ಮತ್ತು ಅರಿವಿಲ್ಲದೆಯೇ ಉರುಳಿಕೊಂಡು ಹೋಗುತ್ತಿರುತ್ತದೆ. ಮಾಸ-ಅರ್ಧಮಾಸಗಳು ಇದರ ಲೆಖ್ಕ. ಬದಲಾಗುತ್ತಲೇ ಇರುವ ಈ ಚಕ್ರವು ಲೋಕದಲ್ಲೆಲ್ಲಾ ಸಂಚರಿಸುತ್ತದೆ. ತಮೋಗುಣವು ಇದರ ಚಲನೆಯನ್ನು ನಿಗ್ರಹಿಸುವ ಕೆಸರು. ರಜೋಗುಣವು ಇದರ ವೇಗವನ್ನು ಹೆಚ್ಚಿಸುವಂಥಹುದು ಮತ್ತು ಸತ್ತ್ವಗುಣವು ಇದರ ಅಲಂಕಾರ-ದೀಪ. ಈ ರೀತಿ ಗುಣಗಳು ಇದರ ಮೇಲೆ ಪ್ರಭಾವಬೀರುತ್ತವೆ. ಸ್ವರವಿಗ್ರಹಗಳೇ ಇದರ ನಾಭಿ. ಶೋಕಸಂಘಾತದಂತೆ ವರ್ತಿಸುತ್ತದೆ. ಕ್ರಿಯಾ-ಕಾರಣಸಂಯುಕ್ತವಾದ ಈ ಕಾಲಚಕ್ರದ ವಿಸ್ತಾರವು ಅನುರಾಗ. ಲೋಭ-ತೃಷ್ಣೆಗಳೇ ಇದು ಮೇಲೆ-ಕೆಳಗೆ ಹೋಗುವಂತೆ ಮಾಡುತ್ತವೆ. ಈ ಚಕ್ರವು ಅಜ್ಞಾನದಿಂದ ಹುಟ್ಟಿದೆ. ಭಯ-ಮೋಹಗಳೇ ಇದರ ಪರಿವಾರವು. ಇದು ಭೂತಗಳ ಸಂಮೋಹನಕ್ಕೆ ಕಾರಣ. ಆನಂದ-ಪ್ರೀತಿಗಳನ್ನೇ ಅರಸಿಕೊಂಡು ಇದು ಹೋಗುತ್ತಿರುತ್ತದೆ. ಕಾಮ-ಕ್ರೋಧಗಳನ್ನು ಸಂಗ್ರಹಿಸಿಕೊಳ್ಳುತ್ತಿರುತ್ತದೆ. ಎಲ್ಲವುಗಳ ಮೂಲವಾದ ಈ ಅವ್ಯಯವು ಮಹತ್ತಿನಿಂದ ಪ್ರಾರಂಭವಾಗಿ ವಿಶೇಷದ ಅಂತ್ಯದವರೆಗೂ ಯಾವುದೇ ತಡೆಯಿಲ್ಲದೆಯೂ ಸುತ್ತುತ್ತಿರುತ್ತದೆ.

14045010a ಏತದ್ದ್ವಂದ್ವಸಮಾಯುಕ್ತಂ ಕಾಲಚಕ್ರಮಚೇತನಮ್।
14045010c ವಿಸೃಜೇತ್ಸಂಕ್ಷಿಪೇಚ್ಚಾಪಿ ಬೋಧಯೇತ್ಸಾಮರಂ ಜಗತ್।।

ದ್ವಂದ್ವಗಳಿಂದ ಕೂಡಿದ ಚೇತನವಿಲ್ಲದ ಈ ಕಾಲಚಕ್ರವು ಅಮರರೊಂದಿಗಿನ ಈ ಜಗತ್ತಿಗೆ ಸೃಷ್ಟಿ-ಲಯಗಳನ್ನು ತಿಳಿಸಿಕೊಡುತ್ತದೆ.

14045011a ಕಾಲಚಕ್ರಪ್ರವೃತ್ತಿಂ ಚ ನಿವೃತ್ತಿಂ ಚೈವ ತತ್ತ್ವತಃ।
14045011c ಯಸ್ತು ವೇದ ನರೋ ನಿತ್ಯಂ ನ ಸ ಭೂತೇಷು ಮುಹ್ಯತಿ।।

ಕಾಲಚಕ್ರದ ಪ್ರವೃತ್ತಿ-ನಿವೃತ್ತಿಗಳನ್ನು ತತ್ತ್ವತಃ ತಿಳಿದುಕೊಂಡ ನರನು ಇರುವವುಗಳಲ್ಲಿ ನಿತ್ಯವೂ ಮೋಹವನ್ನಿಡುವುದಿಲ್ಲ.

14045012a ವಿಮುಕ್ತಃ ಸರ್ವಸಂಕ್ಲೇಶೈಃ ಸರ್ವದ್ವಂದ್ವಾತಿಗೋ ಮುನಿಃ।
14045012c ವಿಮುಕ್ತಃ ಸರ್ವಪಾಪೇಭ್ಯಃ ಪ್ರಾಪ್ನೋತಿ ಪರಮಾಂ ಗತಿಮ್।।

ಅಂಥಹ ಮುನಿಯು ಸರ್ವಸಂಕ್ಲೇಶಗಳಿಂದ ವಿಮುಕ್ತನಾಗಿ, ಸರ್ವದ್ವಂದ್ವಗಳನ್ನು ಮೀರಿ ಸರ್ವಪಾಪಗಳಿಂದ ವಿಮುಕ್ತನಾಗಿ ಪರಮಗತಿಯನ್ನು ಪಡೆಯುತ್ತಾನೆ.

14045013a ಗೃಹಸ್ಥೋ ಬ್ರಹ್ಮಚಾರೀ ಚ ವಾನಪ್ರಸ್ಥೋಽಥ ಭಿಕ್ಷುಕಃ।
14045013c ಚತ್ವಾರ ಆಶ್ರಮಾಃ ಪ್ರೋಕ್ತಾಃ ಸರ್ವೇ ಗಾರ್ಹಸ್ಥ್ಯಮೂಲಕಾಃ।।

ಗ್ರಹಸ್ಥ, ಬ್ರಹ್ಮಚಾರೀ, ವಾನಪ್ರಸ್ಥ ಮತ್ತು ಭಿಕ್ಷುಕ – ಈ ನಾಲ್ಕು ಆಶ್ರಮಗಳಲ್ಲಿ ಗ್ರಹಸ್ಥಾಶ್ರಮವೇ ಮೂಲವಾದುದು.

14045014a ಯಃ ಕಶ್ಚಿದಿಹ ಲೋಕೇ ಚ ಹ್ಯಾಗಮಃ ಸಂಪ್ರಕೀರ್ತಿತಃ।
14045014c ತಸ್ಯಾಂತಗಮನಂ ಶ್ರೇಯಃ ಕೀರ್ತಿರೇಷಾ ಸನಾತನೀ।।

ಈ ಲೋಕದಲ್ಲಿ ಯಾವ ಯಾವ ಆಗಮಗಳಿವೆಯೆಂದು ಹೇಳುತ್ತಾರೋ ಅವುಗಳನ್ನು ತಿಳಿದುಕೊಳ್ಳುವುದು ಶ್ರೇಯಸ್ಸು ಎಂಬ ಸನಾತನ ಉಕ್ತಿಯೇ ಇದೆ.

14045015a ಸಂಸ್ಕಾರೈಃ ಸಂಸ್ಕೃತಃ ಪೂರ್ವಂ ಯಥಾವಚ್ಚರಿತವ್ರತಃ।
14045015c ಜಾತೌ ಗುಣವಿಶಿಷ್ಟಾಯಾಂ ಸಮಾವರ್ತೇತ ವೇದವಿತ್।।

ಮೊದಲು ಸಂಸ್ಕಾರಗಳಿಂದ ಸಂಸ್ಕೃತನಾಗಿ ಯಥಾವತ್ತಾಗಿ ವ್ರತಚರಿತನಾಗಿದ್ದುಕೊಂಡು ಸಮಾವರ್ತವನ್ನು ಮಾಡಿಕೊಂಡು ಗುಣವಿಶಿಷ್ಟಕುಲದಲ್ಲಿ ಹುಟ್ಟಿದವಳನ್ನು ವೇದವತ್ತಾಗಿ ವಿವಾಹವಾಗಬೇಕು.

14045016a ಸ್ವದಾರನಿರತೋ ದಾಂತಃ ಶಿಷ್ಟಾಚಾರೋ ಜಿತೇಂದ್ರಿಯಃ।
14045016c ಪಂಚಭಿಶ್ಚ ಮಹಾಯಜ್ಞೈಃ ಶ್ರದ್ದಧಾನೋ ಯಜೇತ ಹ।।

ತನ್ನ ಪತ್ನಿಯಲ್ಲಿ ಅನುರತನಾಗಿ, ಜಿತೇಂದ್ರಿಯನೂ, ಶಿಷ್ಟಾಚಾರಿಯೂ, ದಾಂತನೂ ಆಗಿದ್ದುಕೊಂಡು, ಐದು ಮಹಾಯಜ್ಞಗಳನ್ನು ಶ್ರದ್ಧಾವಂತನಾಗಿ ಯಜಿಸಬೇಕು.

14045017a ದೇವತಾತಿಥಿಶಿಷ್ಟಾಶೀ ನಿರತೋ ವೇದಕರ್ಮಸು।
14045017c ಇಜ್ಯಾಪ್ರದಾನಯುಕ್ತಶ್ಚ ಯಥಾಶಕ್ತಿ ಯಥಾವಿಧಿ।।

ದೇವತೆಗಳು ಮತ್ತು ಅತಿಥಿಗಳಿಗೆ ನೀಡಿ ಉಳಿದ ಶಿಷ್ಟವನ್ನು ಊಟಮಾಡಬೇಕು. ವೇದಕರ್ಮಗಳಲ್ಲಿ ನಿರತನಾಗಿರಬೇಕು. ಯಥಾಶಕ್ತಿಯಾಗಿ ಯಥಾವಿಧಿಯಾಗಿ ಯಜ್ಞ-ದಾನಗಳಲ್ಲಿ ತೊಡಗಿರಬೇಕು.

14045018a ನ ಪಾಣಿಪಾದಚಪಲೋ ನ ನೇತ್ರಚಪಲೋ ಮುನಿಃ।
14045018c ನ ಚ ವಾಗಂಗಚಪಲ ಇತಿ ಶಿಷ್ಟಸ್ಯ ಗೋಚರಃ।।

ಮುನಿಯಾದವನು ಕೈ-ಕಾಲುಗಳ ಚಪಲತೆ, ಕಣ್ಣುಗಳ ಚಪಲತೆ ಮತ್ತು ಮಾತು-ಅಂಗಗಳ ಚಪಲತೆಯನ್ನಿಟ್ಟುಕೊಂಡಿರಬಾರದು. ಇದೇ ಶಿಷ್ಟನನ್ನು ಗುರುತಿಸುವ ಲಕ್ಷಣವು.

14045019a ನಿತ್ಯಯಜ್ಞೋಪವೀತೀ ಸ್ಯಾಚ್ಚುಕ್ಲವಾಸಾಃ ಶುಚಿವ್ರತಃ।
14045019c ನಿಯತೋ ದಮದಾನಾಭ್ಯಾಂ ಸದಾ ಶಿಷ್ಟೈಶ್ಚ ಸಂವಿಶೇತ್।।

ನಿತ್ಯವೂ ಯಜ್ಞೋಪವೀತವನ್ನು ಧರಿಸಿಕೊಂಡಿರಬೇಕು. ಬಿಳಿಯ ವಸ್ತ್ರಗಳನ್ನು ಉಡಬೇಕು. ಶುಚಿಯಾಗಿರಬೇಕು. ನಿಯತನಾಗಿ, ಸದಾ ದಮ-ದಾನಗಳಲ್ಲಿ ನಿರತನಾಗಿರಬೇಕು. ಮತ್ತು ಶಿಷ್ಟರ ಸಹವಾಸದಲ್ಲಿರಬೇಕು.

14045020a ಜಿತಶಿಶ್ನೋದರೋ ಮೈತ್ರಃ ಶಿಷ್ಟಾಚಾರಸಮಾಹಿತಃ।
14045020c ವೈಣವೀಂ ಧಾರಯೇದ್ಯಷ್ಟಿಂ ಸೋದಕಂ ಚ ಕಮಂಡಲುಮ್।।

ಶಿಶ್ನ-ಉದರಗಳನ್ನು ಗೆದ್ದು, ಎಲ್ಲರೊಡನೆಯೂ ಮೈತ್ರಭಾವದಿಂದಿದ್ದುಕೊಂಡು ಶಿಷ್ಟಾಚಾರಸಮಾಹಿತನಾಗಿರಬೇಕು. ಬಿದಿರಿನ ದಂಡವನ್ನೂ ನೀರುತುಂಬಿದ ಕಮಂಡಲುವನ್ನೂ ಧರಿಸಬೇಕು.

14045021a ಅಧೀತ್ಯಾಧ್ಯಾಪನಂ ಕುರ್ಯಾತ್ತಥಾ ಯಜನಯಾಜನೇ।
14045021c ದಾನಂ ಪ್ರತಿಗ್ರಹಂ ಚೈವ ಷಡ್ಗುಣಾಂ ವೃತ್ತಿಮಾಚರೇತ್।।

ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ ಮತ್ತು ಪ್ರತಿಗ್ರಹಣ ಈ ಆರು ಗುಣಗಳಿರುವ ವೃತ್ತಿಯನ್ನು ಆಚರಿಸಬೇಕು.

14045022a ತ್ರೀಣಿ ಕರ್ಮಾಣಿ ಯಾನೀಹ ಬ್ರಾಹ್ಮಣಾನಾಂ ತು ಜೀವಿಕಾ।
14045022c ಯಾಜನಾಧ್ಯಾಪನೇ ಚೋಭೇ ಶುದ್ಧಾಚ್ಚಾಪಿ ಪ್ರತಿಗ್ರಹಃ।।

ಇವುಗಳಲ್ಲಿ ಯಜ್ಞಮಾಡಿಸುವುದು, ಅಧ್ಯಯನ ಮಾಡಿಸುವುದು ಮತ್ತು ಶುದ್ಧರಿಂದ ದಾನವನ್ನು ಸ್ವೀಕರಿಸುವುದು – ಈ ಮೂರು ಬ್ರಾಹ್ಮಣರ ಜೀವಿಕೆಗೆ ಸಾಧನಗಳು.

14045023a ಅವಶೇಷಾಣಿ ಚಾನ್ಯಾನಿ ತ್ರೀಣಿ ಕರ್ಮಾಣಿ ಯಾನಿ ತು।
14045023c ದಾನಮಧ್ಯಯನಂ ಯಜ್ಞೋ ಧರ್ಮಯುಕ್ತಾನಿ ತಾನಿ ತು।।

ಉಳಿದ ಅನ್ಯ ಮೂರು ಕರ್ಮಗಳು – ದಾನಮಾಡುವುದು, ಅಧ್ಯಯನ ಮಾಡುವುದು ಮತ್ತು ಯಜ್ಞಗಳನ್ನು ಮಾಡುವುದು – ಧರ್ಮಾರ್ಜನೆಯ ಸಾಧನಗಳು.

14045024a ತೇಷ್ವಪ್ರಮಾದಂ ಕುರ್ವೀತ ತ್ರಿಷು ಕರ್ಮಸು ಧರ್ಮವಿತ್।
14045024c ದಾಂತೋ ಮೈತ್ರಃ ಕ್ಷಮಾಯುಕ್ತಃ ಸರ್ವಭೂತಸಮೋ ಮುನಿಃ।।

ಧರ್ಮವಿದುವು ಈ ಮೂರು ಕರ್ಮಗಳಲ್ಲಿ ಅಪ್ರಮಾದನಾಗಿರಬೇಕು - ಜಿತೇಂದ್ರಿಯನೂ, ಮೈತ್ರಭಾವನೆಯುಳ್ಳವನೂ, ಕ್ಷಮಾಯುಕ್ತನೂ, ಸರ್ವಭೂತಗಳಿಗೆ ಸಮನೂ, ಮುನಿಯೂ ಆಗಿರಬೇಕು.

14045025a ಸರ್ವಮೇತದ್ಯಥಾಶಕ್ತಿ ವಿಪ್ರೋ ನಿರ್ವರ್ತಯನ್ಶುಚಿಃ।
14045025c ಏವಂ ಯುಕ್ತೋ ಜಯೇತ್ಸ್ವರ್ಗಂ ಗೃಹಸ್ಥಃ ಸಂಶಿತವ್ರತಃ।।

ಈ ಎಲ್ಲವನ್ನೂ ಶುಚಿಯಾದ ವಿಪ್ರನು ಯಥಾಶಕ್ತಿ ಪಾಲಿಸಿಕೊಂಡು ಬಂದರೆ ಅಂಥಹ ಸಂಶಿತವ್ರತ ಗೃಹಸ್ಥನು ಸ್ವರ್ಗವನ್ನು ಗೆಲ್ಲುತ್ತಾನೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಪಂಚಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೈದನೇ ಅಧ್ಯಾಯವು.


  1. ಮಹಾಭೂತಪರಿಸ್ಕಂಧಂ ನಿವೇಶಪರಿವೇಶನಮ್। ಎಂಬ ಪಾಠಾಂತರವಿದೆ. ↩︎

  2. ಜರಾಶೋಕಸಮಾವಿಷ್ಟಂ ವ್ಯಾಧಿವ್ಯಸನಸಂಭವಮ್। ಎಂಬ ಪಾಠಾಂತರವಿದೆ. ↩︎

  3. ಮಹಾಹಂಕಾರ ದೀಪ್ತಂ ಚ ಗುಣಸಂಜಾತವರ್ತನಮ್। ಅರತಿಗ್ರಹಣಾನೀಕಂ ಶೋಕಸಂಹಾರವರ್ತನಮ್।। ಎಂಬ ಪಾಠಾಂತರವಿದೆ. ↩︎