ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 40
ಸಾರ
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-9).
14040001 ಬ್ರಹ್ಮೋವಾಚ
14040001a ಅವ್ಯಕ್ತಾತ್ಪೂರ್ವಮುತ್ಪನ್ನೋ ಮಹಾನಾತ್ಮಾ ಮಹಾಮತಿಃ।
14040001c ಆದಿರ್ಗುಣಾನಾಂ ಸರ್ವೇಷಾಂ ಪ್ರಥಮಃ ಸರ್ಗ ಉಚ್ಯತೇ।।
ಬ್ರಹ್ಮನು ಹೇಳಿದನು: “ಅವ್ಯಕ್ತ ಪ್ರಕೃತಿಯು ಹುಟ್ಟುವುದರ ಮೊದಲು ಮಹಾ ಆತ್ಮ, ಮಾಹಾ ಮತಿ, ಎಲ್ಲ ಗುಣಗಳ ಆದಿಯಾದ ಮಹತ್ ಹುಟ್ಟಿತೆಂದು ಹೇಳುತ್ತಾರೆ.
14040002a ಮಹಾನಾತ್ಮಾ ಮತಿರ್ವಿಷ್ಣುರ್ವಿಶ್ವಃ ಶಂಭುಶ್ಚ ವೀರ್ಯವಾನ್।
14040002c ಬುದ್ಧಿಃ ಪ್ರಜ್ಞೋಪಲಬ್ಧಿಶ್ಚ ತಥಾ ಖ್ಯಾತಿರ್ಧೃತಿಃ ಸ್ಮೃತಿಃ।।
14040003a ಪರ್ಯಾಯವಾಚಕೈಃ ಶಬ್ದೈರ್ಮಹಾನಾತ್ಮಾ ವಿಭಾವ್ಯತೇ।
14040003c ತಂ ಜಾನನ್ಬ್ರಾಹ್ಮಣೋ ವಿದ್ವಾನ್ನ ಪ್ರಮೋಹಂ ನಿಗಚ್ಚತಿ।।
ಈ ಮಹಾನ್ ಆತ್ಮವನ್ನು ಮಹಾನ್, ಆತ್ಮ, ಮತಿ, ವಿಷ್ಣು, ವಿಶ್ವ, ಶಂಭು, ವೀರ್ಯವಾನ್, ಬುದ್ಧಿ, ಪ್ರಜ್ಞಾ, ಉಪಲಬ್ಧಿ, ಖ್ಯಾತಿ, ಧೃತಿ, ಸ್ಮೃತಿ – ಮೊದಲಾದ ಪರ್ಯಾಯಶಬ್ಧಗಳಿಂದ ಭಾವಿಸುತ್ತಾರೆ. ಈ ತತ್ತ್ವವನ್ನು ತಿಳಿದ ವಿದ್ವಾನ್ ಬ್ರಾಹ್ಮಣನು ಮೋಹವಶನಾಗುವುದಿಲ್ಲ.
14040004a ಸರ್ವತಃಪಾಣಿಪಾದಶ್ಚ ಸರ್ವತೋಕ್ಷಿಶಿರೋಮುಖಃ।
14040004c ಸರ್ವತಃಶ್ರುತಿಮಾಽಲ್ಲೋಕೇ ಸರ್ವಂ ವ್ಯಾಪ್ಯ ಸ ತಿಷ್ಠತಿ।।
ಆ ಪರಮಾತ್ಮನು ಸರ್ವತಃ ಕೈ-ಕಾಲುಗಳನ್ನೂ, ಸರ್ವತಃ ಕಣ್ಣು-ಶಿರಸ್ಸು-ಮುಖವುಳ್ಳವನೂ, ಸರ್ವತಃ ಕಿವಿಗಳುಳ್ಳವನೂ ಆಗಿ, ಲೋಕದ ಸರ್ವವನ್ನೂ ವ್ಯಾಪಿಸಿಕೊಂಡಿರುವನು.
14040005a ಮಹಾಪ್ರಭಾರ್ಚಿಃ ಪುರುಷಃ ಸರ್ವಸ್ಯ ಹೃದಿ ನಿಶ್ರಿತಃ।
14040005c ಅಣಿಮಾ ಲಘಿಮಾ ಪ್ರಾಪ್ತಿರೀಶಾನೋ ಜ್ಯೋತಿರವ್ಯಯಃ।।
ಮಹಾಪ್ರಭೆಯ ಪ್ರಕಾಶವುಳ್ಳ ಆ ಪುರುಷನು ಸರ್ವರ ಹೃದಯದಲ್ಲಿ ವಿರಾಜಮಾನನಾಗಿರುವನು. ಅಣಿಮ-ಲಘಿಮ-ಪ್ರಾಪ್ತಿ ಮೊದಲಾದ ಅಷ್ಟ ಸಿದ್ಧಿಗಳು ಅವನ ಸ್ವರೂಪಗಳು. ಅವನು ಎಲ್ಲವುಗಳ ಸ್ವಾಮಿಯೂ, ಅವ್ಯಯನೂ, ಜ್ಯೋತಿಯೂ ಆಗಿರುವನು.
14040006a ತತ್ರ ಬುದ್ಧಿಮತಾಂ ಲೋಕಾಃ ಸಂನ್ಯಾಸನಿರತಾಶ್ಚ ಯೇ।
14040006c ಧ್ಯಾನಿನೋ ನಿತ್ಯಯೋಗಾಶ್ಚ ಸತ್ಯಸಂಧಾ ಜಿತೇಂದ್ರಿಯಾಃ।।
14040007a ಜ್ಞಾನವಂತಶ್ಚ ಯೇ ಕೇ ಚಿದಲುಬ್ಧಾ ಜಿತಮನ್ಯವಃ।
14040007c ಪ್ರಸನ್ನಮನಸೋ ಧೀರಾ ನಿರ್ಮಮಾ ನಿರಹಂಕೃತಾಃ।
14040007e ವಿಮುಕ್ತಾಃ ಸರ್ವ ಏವೈತೇ ಮಹತ್ತ್ವಮುಪಯಾಂತಿ ವೈ।।
ಲೋಕದಲ್ಲಿ ಬುದ್ಧಿವಂತರು, ಸಂನ್ಯಾಸನಿರತರು, ಧ್ಯಾನಿಗಳು, ನಿತ್ಯಯೋಗಿಗಳು, ಸತ್ಯಸಂಧರು, ಜಿತೇಂದ್ರಿಯರು, ಜ್ಞಾನವಂತರು, ಅಲುಬ್ಧರು, ಕೋಪವನ್ನು ಗೆದ್ದವರು, ಪ್ರಸನ್ನಮನಸರು, ಧೀರರು, ನನ್ನದಲ್ಲವೆನ್ನುವವರು, ನಿರಹಂಕಾರರು – ಇವರೆಲ್ಲರೂ ವಿಮುಕ್ತರಾಗಿ ಇದೇ ಮಹತ್ತನ್ನು ಸೇರುತ್ತಾರೆ.
14040008a ಆತ್ಮನೋ ಮಹತೋ ವೇದ ಯಃ ಪುಣ್ಯಾಂ ಗತಿಮುತ್ತಮಾಮ್।
14040008c ಸ ಧೀರಃ ಸರ್ವಲೋಕೇಷು ನ ಮೋಹಮಧಿಗಚ್ಚತಿ।
14040008e ವಿಷ್ಣುರೇವಾದಿಸರ್ಗೇಷು ಸ್ವಯಂಭೂರ್ಭವತಿ ಪ್ರಭುಃ।।
ಆತ್ಮದ ಮಹತ್ತನ್ನು ತಿಳಿದವರು ಉತ್ತಮ ಪುಣ್ಯಗತಿಯನ್ನು ಹೊಂದುತ್ತಾರೆ. ಆ ಧೀರನು ಸರ್ವಲೋಕಗಳಲ್ಲಿಯೂ ಮೋಹಕ್ಕೊಳಗಾಗುವುದಿಲ್ಲ. ಸೃಷ್ಟಿಯ ಆದಿಯಲ್ಲಿ ಪ್ರಭು ವಿಷ್ಣುವೇ ಸ್ವಯಂಭುವಾಗುತ್ತಾನೆ.
14040009a ಏವಂ ಹಿ ಯೋ ವೇದ ಗುಹಾಶಯಂ ಪ್ರಭುಂ ನರಃ ಪುರಾಣಂ ಪುರುಷಂ ವಿಶ್ವರೂಪಮ್।
14040009c ಹಿರಣ್ಮಯಂ ಬುದ್ಧಿಮತಾಂ ಪರಾಂ ಗತಿಂ ಸ ಬುದ್ಧಿಮಾನ್ಬುದ್ಧಿಮತೀತ್ಯ ತಿಷ್ಠತಿ।।
ಹೀಗೆ ಗುಹಾಶಯ ಪ್ರಭು ಪುರಾಣ ಪುರುಷ ವಿಶ್ವರೂಪ ಹಿರಣ್ಮಯ ಬುದ್ಧಿಯುಳ್ಳವರ ಪರಮ ಗತಿಯನ್ನು ತಿಳಿದ ಬುದ್ಧಿವಂತನು ಬುದ್ಧಿಯ ಎಲ್ಲೆಯನ್ನು ಮೀರಿ ನಿಲ್ಲುತ್ತಾನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತನೇ ಅಧ್ಯಾಯವು.