ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅಶ್ವಮೇಧಿಕ ಪರ್ವ
ಅಶ್ವಮೇಧಿಕ ಪರ್ವ
ಅಧ್ಯಾಯ 38
ಸಾರ
ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (1-15).
14038001 ಬ್ರಹ್ಮೋವಾಚ
14038001a ಅತಃ ಪರಂ ಪ್ರವಕ್ಷ್ಯಾಮಿ ತೃತೀಯಂ ಗುಣಮುತ್ತಮಮ್।
14038001c ಸರ್ವಭೂತಹಿತಂ ಲೋಕೇ ಸತಾಂ ಧರ್ಮಮನಿಂದಿತಮ್।।
ಬ್ರಹ್ಮನು ಹೇಳಿದನು: “ಇನ್ನು ಮುಂದೆ ನಾನು ಉತ್ತಮವಾದ, ಲೋಕದಲ್ಲಿ ಸರ್ವಭೂತಗಳಿಗೂ ಹಿತಕರವಾದ, ಸತ್ಪುರುಷರ ಧರ್ಮವಾಗಿರುವ ಅನಿಂದಿತ ಮೂರನೆಯ ಗುಣದ ಕುರಿತು ಹೇಳುತ್ತೇನೆ.
14038002a ಆನಂದಃ ಪ್ರೀತಿರುದ್ರೇಕಃ ಪ್ರಾಕಾಶ್ಯಂ ಸುಖಮೇವ ಚ।
14038002c ಅಕಾರ್ಪಣ್ಯಮಸಂರಂಭಃ ಸಂತೋಷಃ ಶ್ರದ್ದಧಾನತಾ।।
14038003a ಕ್ಷಮಾ ಧೃತಿರಹಿಂಸಾ ಚ ಸಮತಾ ಸತ್ಯಮಾರ್ಜವಮ್।
14038003c ಅಕ್ರೋಧಶ್ಚಾನಸೂಯಾ ಚ ಶೌಚಂ ದಾಕ್ಷ್ಯಂ ಪರಾಕ್ರಮಃ।।
ಆನಂದ, ಪ್ರಸನ್ನತೆ, ಉನ್ನತಿ, ಪ್ರಕಾಶ, ಸುಖ, ಕೃಪಣತೆಯಿಲ್ಲದಿರುವುದು, ನಿರ್ಭಯನಾಗಿರುವುದು, ಸಂತೋಷ, ಶ್ರದ್ಧೆ, ಕ್ಷಮೆ, ಧೈರ್ಯ, ಅಹಿಂಸೆ, ಸಮತಾ, ಸತ್ಯ, ಸರಳತೆ, ಅಕ್ರೋಧ, ಅನಸೂಯಾ, ಶೌಚ, ದಕ್ಷತೆ ಮತ್ತು ಪರಾಕ್ರಮ ಇವು ಸತ್ತ್ವಗುಣದ ಕಾರ್ಯಗಳು.
14038004a ಮುಧಾ ಜ್ಞಾನಂ ಮುಧಾ ವೃತ್ತಂ ಮುಧಾ ಸೇವಾ ಮುಧಾ ಶ್ರಮಃ।
14038004c ಏವಂ ಯೋ ಯುಕ್ತಧರ್ಮಃ ಸ್ಯಾತ್ಸೋಽಮುತ್ರಾನಂತ್ಯಮಶ್ನುತೇ।।
ಜ್ಞಾನವು ವ್ಯರ್ಥ, ವ್ಯವಹಾರಗಳು ವ್ಯರ್ಥ, ಸೇವೆಯು ವ್ಯರ್ಥ, ಶ್ರಮವು ವ್ಯರ್ಥ ಎಂದು ಅರಿತುಕೊಂಡು ಧರ್ಮದಲ್ಲಿಯೇ ನಿರತನಾಗಿರುವವನು ಪರಲೋಕದಲ್ಲಿ ಅಕ್ಷಯ ಲೋಕವನ್ನು ಉಪಭೋಗಿಸುತ್ತಾನೆ.
14038005a ನಿರ್ಮಮೋ ನಿರಹಂಕಾರೋ ನಿರಾಶೀಃ ಸರ್ವತಃ ಸಮಃ।
14038005c ಅಕಾಮಹತ ಇತ್ಯೇಷ ಸತಾಂ ಧರ್ಮಃ ಸನಾತನಃ।।
ನನ್ನದು ಎಂಬ ಮಮಕಾರವಿಲ್ಲದಿರುವುದು, ನಾನು ಎಂಬ ಅಹಂಕಾರವಿಲ್ಲದಿರುವುದು, ಆಸೆಗಳಿಲ್ಲದಿರುವುದು, ಎಲ್ಲ ಸಂದರ್ಭಗಳಲ್ಲಿಯೂ ಎಲ್ಲವುಗಳ ಜೊತೆಯೂ ಸಮನಾಗಿರುವುದು, ನಿಷ್ಕಾಮಭಾವದಿಂದ ಇರುವುದು ಇವೇ ಸತ್ವಯುತರ ಸನಾತನ ಧರ್ಮ.
14038006a ವಿಶ್ರಂಭೋ ಹ್ರೀಸ್ತಿತಿಕ್ಷಾ ಚ ತ್ಯಾಗಃ ಶೌಚಮತಂದ್ರಿತಾ।
14038006c ಆನೃಶಂಸ್ಯಮಸಂಮೋಹೋ ದಯಾ ಭೂತೇಷ್ವಪೈಶುನಮ್।।
14038007a ಹರ್ಷಸ್ತುಷ್ಟಿರ್ವಿಸ್ಮಯಶ್ಚ ವಿನಯಃ ಸಾಧುವೃತ್ತತಾ।
14038007c ಶಾಂತಿಕರ್ಮ ವಿಶುದ್ಧಿಶ್ಚ ಶುಭಾ ಬುದ್ಧಿರ್ವಿಮೋಚನಮ್।।
14038008a ಉಪೇಕ್ಷಾ ಬ್ರಹ್ಮಚರ್ಯಂ ಚ ಪರಿತ್ಯಾಗಶ್ಚ ಸರ್ವಶಃ।
14038008c ನಿರ್ಮಮತ್ವಮನಾಶೀಸ್ತ್ವಮಪರಿಕ್ರೀತಧರ್ಮತಾ।।
ವಿಶ್ವಾಸ, ಲಜ್ಜೆ, ಸಹನೆ, ತ್ಯಾಗ, ಶೌಚ, ಅನಾಲಸ್ಯ, ಕಾರುಣ್ಯ, ಮೋಹವಿಲ್ಲದಿರುವುದು, ಪ್ರಾಣಿಗಳಲ್ಲಿ ದಯೆ, ಚಾಡಿಹೇಳದಿರುವುದು, ಹರ್ಷ, ತುಷ್ಟಿ, ಗರ್ವವಿಲ್ಲದಿರುವುದು, ವಿನಯ, ಸದ್ವ್ಯವಹಾರ, ಶಾಂತಿಕರ್ಮ, ವಿಶುದ್ಧ ಭಾವ, ಶುಭ ಬುದ್ಧಿ, ಭವ-ಬಂಧ ವಿಮೋಚನೆ, ಲೌಕಿಕ ವ್ಯವಹಾರಗಳಲ್ಲಿ ಉಪೇಕ್ಷೆ, ಬ್ರಹ್ಮಚರ್ಯ, ಸರ್ವಪರಿತ್ಯಾಗ, ನಿರ್ಮಮತೆ, ನಿಷ್ಕಾಮನೆ, ಕಾಮನೆಗಳಿಲ್ಲದೇ ಧರ್ಮವನ್ನು ಅನುಸರಿಸುವುದು – ಇವು ಸತ್ತ್ವಗುಣದ ಕಾರ್ಯಗಳು.
14038009a ಮುಧಾ ದಾನಂ ಮುಧಾ ಯಜ್ಞೋ ಮುಧಾಧೀತಂ ಮುಧಾ ವ್ರತಮ್।
14038009c ಮುಧಾ ಪ್ರತಿಗ್ರಹಶ್ಚೈವ ಮುಧಾ ಧರ್ಮೋ ಮುಧಾ ತಪಃ।।
14038010a ಏವಂವೃತ್ತಾಸ್ತು ಯೇ ಕೇ ಚಿಲ್ಲೋಕೇಽಸ್ಮಿನ್ಸತ್ತ್ವಸಂಶ್ರಯಾಃ।
14038010c ಬ್ರಾಹ್ಮಣಾ ಬ್ರಹ್ಮಯೋನಿಸ್ಥಾಸ್ತೇ ಧೀರಾಃ ಸಾಧುದರ್ಶಿನಃ।।
ಈ ಲೋಕದಲ್ಲಿ ದಾನ, ಯಜ್ಞ, ಅಧ್ಯಯನ, ವ್ರತ, ಪರಿಗ್ರಹ, ಧರ್ಮ ಮತ್ತು ತಪಸ್ಸು – ಇವೆಲ್ಲವೂ ವ್ಯರ್ಥವಾದವುಗಳೆಂದು ಅರಿತು ಸತ್ತ್ವಗುಣದಲ್ಲಿದ್ದುಕೊಂಡು ನಡೆದುಕೊಳ್ಳುತ್ತಾ ಬ್ರಹ್ಮಯೋನಿಯಲ್ಲಿ ನಿಷ್ಠೆಯುಳ್ಳವರಾದ ಬ್ರಾಹ್ಮಣರೇ ಧೀರರೂ ಸಾಧುದರ್ಶಿಗಳೂ ಆಗಿರುತ್ತಾರೆ.
14038011a ಹಿತ್ವಾ ಸರ್ವಾಣಿ ಪಾಪಾನಿ ನಿಃಶೋಕಾ ಹ್ಯಜರಾಮರಾಃ।
14038011c ದಿವಂ ಪ್ರಾಪ್ಯ ತು ತೇ ಧೀರಾಃ ಕುರ್ವತೇ ವೈ ತತಸ್ತತಃ।।
ಇವರು ಸರ್ವ ಪಾಪಗಳನ್ನೂ ಹೋಗಲಾಡಿಸಿಕೊಂಡು ಶೋಕರಹಿತರಾಗಿ ಅಜರಾಮರರಾಗುತ್ತಾರೆ. ಆ ಧೀರರು ಸ್ವರ್ಗಕ್ಕೆ ಹೋಗಿ ಅಲ್ಲಿಯೇ ಕರ್ಮಗಳನ್ನು ಮಾಡುತ್ತಿರುತ್ತಾರೆ.
14038012a ಈಶಿತ್ವಂ ಚ ವಶಿತ್ವಂ ಚ ಲಘುತ್ವಂ ಮನಸಶ್ಚ ತೇ।
14038012c ವಿಕುರ್ವತೇ ಮಹಾತ್ಮಾನೋ ದೇವಾಸ್ತ್ರಿದಿವಗಾ ಇವ।।
ಈ ಮಹಾತ್ಮರು ದೇವಲೋಕದಲ್ಲಿ ದೇವತೆಗಳಂತೆ ಈಶಿತ್ವ, ವಶಿತ್ವ ಮತ್ತು ಲಘುತ್ವಗಳೇ ಮೊದಲಾದ ಮಾನಸಿಕ ಸಿದ್ಧಿಗಳನ್ನು ಹೊಂದುತ್ತಾರೆ.
14038013a ಊರ್ಧ್ವಸ್ರೋತಸ ಇತ್ಯೇತೇ ದೇವಾ ವೈಕಾರಿಕಾಃ ಸ್ಮೃತಾಃ।
14038013c ವಿಕುರ್ವತೇ ಪ್ರಕೃತ್ಯಾ ವೈ ದಿವಂ ಪ್ರಾಪ್ತಾಸ್ತತಸ್ತತಃ।
14038013e ಯದ್ಯದಿಚ್ಚಂತಿ ತತ್ಸರ್ವಂ ಭಜಂತೇ ವಿಭಜಂತಿ ಚ।।
ಇವರು ಊರ್ಧ್ವಸ್ರೋತಸರೆಂದೂ ವೈಕಾರಿಕ ದೇವತೆಗಳೆಂದೂ ಕರೆಯಲ್ಪಡುತ್ತಾರೆ. ಸ್ವರ್ಗದಲ್ಲಿ ಅವರು ಅಲ್ಲಿಯ ಭೋಗಜನಿತ ಸಂಸ್ಕಾರಗಳಿಂದ ವಿಕಾರಗೊಳ್ಳುತ್ತಾರೆ. ಅವರು ಏನನ್ನು ಇಚ್ಛಿಸುವರೋ ಅವುಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಪ್ರಾರ್ಥಿಸಿದವರಿಗೂ ಅವುಗಳನ್ನು ವಿಭಜಿಸಿ ನೀಡುತ್ತಾರೆ.
14038014a ಇತ್ಯೇತತ್ಸಾತ್ತ್ವಿಕಂ ವೃತ್ತಂ ಕಥಿತಂ ವೋ ದ್ವಿಜರ್ಷಭಾಃ।
14038014c ಏತದ್ವಿಜ್ಞಾಯ ವಿಧಿವಲ್ಲಭತೇ ಯದ್ಯದಿಚ್ಚತಿ।।
ದ್ವಿಜರ್ಷಭರೇ! ಸತ್ತ್ವಗುಣದ ವರ್ತನೆಯ ಕುರಿತು ನಿಮಗೆ ಹೇಳಿದ್ದೇನೆ. ಇದನ್ನು ತಿಳಿದವನು ಬಯಸಿದುದೆಲ್ಲವನ್ನೂ ಪಡೆದುಕೊಳ್ಳುತ್ತಾನೆ.
14038015a ಪ್ರಕೀರ್ತಿತಾಃ ಸತ್ತ್ವಗುಣಾ ವಿಶೇಷತೋ ಯಥಾವದುಕ್ತಂ ಗುಣವೃತ್ತಮೇವ ಚ।
14038015c ನರಸ್ತು ಯೋ ವೇದ ಗುಣಾನಿಮಾನ್ಸದಾ ಗುಣಾನ್ಸ ಭುಂಕ್ತೇ ನ ಗುಣೈಃ ಸ ಭುಜ್ಯತೇ।।
ಸತ್ತ್ವಗುಣದ ವಿಷಯವನ್ನು ವಿಶೇಷವಾಗಿ ಹೇಳಿದ್ದೇನೆ. ಅದರ ಕಾರ್ಯಗಳನ್ನೂ ಯಥಾವತ್ತಾಗಿ ಹೇಳಿದ್ದೇನೆ. ಈ ಗುಣಗಳನ್ನು ಸದಾ ತಿಳಿದುಕೊಂಡಿರುವವನು ಸತ್ತ್ವಗುಣದ ಫಲಗಳನ್ನೇ ಪಡೆಯುತ್ತಾನೆ ಮತ್ತು ಮುಂದೆ ಯಾವ ಗುಣಗಳಿಂದಲೂ ಬಂಧಿಸಲ್ಪಡುವುದಿಲ್ಲ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಅಷ್ಟತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ಮೂವತ್ತೆಂಟನೇ ಅಧ್ಯಾಯವು.