ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 150
ಸಾರ
ಭೀಷ್ಮನು ಧರ್ಮವನ್ನು ಪ್ರಶಂಸಿಸಿದುದು (1-9).
13150001 ಭೀಷ್ಮ ಉವಾಚ।
13150001a ಕಾರ್ಯತೇ ಯಚ್ಚ ಕ್ರಿಯತೇ ಸಚ್ಚಾಸಚ್ಚ ಕೃತಂ ತತಃ।
13150001c ತತ್ರಾಶ್ವಸೀತ ಸತ್ಕೃತ್ವಾ ಅಸತ್ಕೃತ್ವಾ ನ ವಿಶ್ವಸೇತ್।।
ಭೀಷ್ಮನು ಹೇಳಿದನು: “ಸತ್ಕಾರ್ಯ ಅಥವಾ ಅಸತ್ಕಾರ್ಯವನ್ನು ಮಾಡಲಿ ಅಥವಾ ಮಾಡಿಸಲಿ, ಸತ್ಕೃತಿಯಿಂದ ಒಳ್ಳೆಯದಾಗುವುದೆಂಬ ವಿಶ್ವಾಸವನ್ನಿಟ್ಟುಕೊಳ್ಳಬೇಕು ಮತ್ತು ಕೆಟ್ಟ ಕೆಲಸದಿಂದ ಕೇಡಾಗುವುದಿಲ್ಲ ಎಂಬ ವಿಶ್ವಾಸವನ್ನಿಟ್ಟುಕೊಳ್ಳಬಾರದು.
13150002a ಕಾಲ ಏವಾತ್ರ ಕಾಲೇನ ನಿಗ್ರಹಾನುಗ್ರಹೌ ದದತ್।
13150002c ಬುದ್ಧಿಮಾವಿಶ್ಯ ಭೂತಾನಾಂ ಧರ್ಮಾರ್ಥೇಷು ಪ್ರವರ್ತತೇ।।
ಸಮಯವು ಪ್ರಾಪ್ತವಾದಾಗ ಕಾಲವೇ ನಿಗ್ರಹ-ಅನುಗ್ರಹಗಳನ್ನು ನೀಡಿ ಜೀವಿಗಳ ಬುದ್ಧಿಯನ್ನು ಪ್ರವೇಶಿಸಿ ಧರ್ಮಾರ್ಥಸಾಧನೆಗಳಲ್ಲಿ ತೊಡಗಿಸುತ್ತದೆ.
13150003a ಯದಾ ತ್ವಸ್ಯ ಭವೇದ್ಬುದ್ಧಿರ್ಧರ್ಮ್ಯಾ ಚಾರ್ಥಪ್ರದರ್ಶಿನೀ।
13150003c ತದಾಶ್ವಸೀತ ಧರ್ಮಾತ್ಮಾದೃಢಬುದ್ಧಿರ್ನ ವಿಶ್ವಸೇತ್।।
ಧರ್ಮಾರ್ಥಸಾರವಾದ ಬುದ್ಧಿಯಿರುವವನು ಧರ್ಮಾತ್ಮನೆಂದು ತೋರಿಸಿಕೊಡುತ್ತದೆ ಮತ್ತು ಅವನಲ್ಲಿ ವಿಶ್ವಾಸವನ್ನಿಡಬೇಕು. ದೃಢಬುದ್ಧಿಯಿಲ್ಲದಿರುವವನ ಮೇಲೆ ವಿಶ್ವಾಸವನ್ನಿಡಬಾರದು.
13150004a ಏತಾವನ್ಮಾತ್ರಮೇತದ್ಧಿ ಭೂತಾನಾಂ ಪ್ರಾಜ್ಞಲಕ್ಷಣಮ್।
13150004c ಕಾಲಯುಕ್ತೋಽಪ್ಯುಭಯವಿಚ್ಚೇಷಮರ್ಥಂ ಸಮಾಚರೇತ್।।
ಇದೇ ಜೀವಿಗಳ ಪ್ರಾಜ್ಞಲಕ್ಷಣವೆಂದು ತಿಳಿ. ಕಾಲಯುಕ್ತನಾದವನು ಧರ್ಮ-ಅರ್ಥ ಎರಡಕ್ಕೂ ಯೋಗ್ಯವಾದ ರೀತಿಯಲ್ಲಿ ನಡೆದುಕೊಳ್ಳಬೇಕು.
13150005a ಯಥಾ ಹ್ಯುಪಸ್ಥಿತೈಶ್ವರ್ಯಾಃ ಪೂಜಯಂತೇ ನರಾ ನರಾನ್1।
13150005c ಏವಮೇವಾತ್ಮನಾತ್ಮಾನಂ ಪೂಜಯಂತೀಹ ಧಾರ್ಮಿಕಾಃ।।
ಐಶ್ವರ್ಯದಿಂದ ಕೂಡಿರುವ ನರರನ್ನು ನರರು ಪೂಜಿಸುವಂತೆ ಧಾರ್ಮಿಕರು ತಮ್ಮನ್ನು ತಾವೇ ಪೂಜಿಸಿಕೊಳ್ಳುತ್ತಾರೆ.
13150006a ನ ಹ್ಯಧರ್ಮತಯಾ ಧರ್ಮಂ ದದ್ಯಾತ್ಕಾಲಃ ಕಥಂ ಚನ।
13150006c ತಸ್ಮಾದ್ವಿಶುದ್ಧಮಾತ್ಮಾನಂ ಜಾನೀಯಾದ್ಧರ್ಮಚಾರಿಣಮ್।।
ಕಾಲವು ಎಂದೂ ಅಧರ್ಮಿಗೆ ಧರ್ಮದ ಫಲವನ್ನು ಕೊಡುವುದಿಲ್ಲ. ಆದುದರಿಂದ ಧರ್ಮಚಾರಿಣಿಯು ವಿಶುದ್ಧಾತ್ಮನೆಂದು ತಿಳಿಯಬೇಕು.
13150007a ಸ್ಪ್ರಷ್ಟುಮಪ್ಯಸಮರ್ಥೋ ಹಿ ಜ್ವಲಂತಮಿವ ಪಾವಕಮ್।
13150007c ಅಧರ್ಮಃ ಸತತೋ ಧರ್ಮಂ ಕಾಲೇನ ಪರಿರಕ್ಷಿತಮ್।।
ಏಕೆಂದರೆ ಅಗ್ನಿಯಂತೆ ಪ್ರಜ್ವಲಿಸುತ್ತಿರುವ ಮತ್ತು ಸತತವೂ ಕಾಲನಿಂದ ಪರಿರಕ್ಷಿತವಾಗಿರುವ ಧರ್ಮವನ್ನು ಅಧರ್ಮವು ಮುಟ್ಟಲೂ ಕೂಡ ಅಸಮರ್ಥವಾಗುತ್ತದೆ.
13150008a ಕಾರ್ಯಾವೇತೌ ಹಿ ಕಾಲೇನ ಧರ್ಮೋ ಹಿ ವಿಜಯಾವಹಃ।
13150008c ತ್ರಯಾಣಾಮಪಿ ಲೋಕಾನಾಮಾಲೋಕಕರಣೋ2 ಭವೇತ್।।
ಕಾಲವು ಈ ಎರಡನ್ನೂ ಮಾಡುತ್ತದೆ. ಧರ್ಮವು ವಿಜಯಪ್ರದವಾದುದು. ಮೂರು ಲೋಕಗಳಲ್ಲಿಯೂ ಧರ್ಮವೇ ಬೆಳಕಾಗಿರುವುದು.
13150009a ತತ್ರ ಕಶ್ಚಿನ್ನಯೇತ್ ಪ್ರಾಜ್ಞೋ3 ಗೃಹೀತ್ವೈವ ಕರೇ ನರಮ್।
13150009c ಉಹ್ಯಮಾನಃ ಸ ಧರ್ಮೇಣ ಧರ್ಮೇ ಬಹುಭಯಚ್ಚಲೇ4।।
ಅಲ್ಲಿ ಯಾರಾದರೂ ಪ್ರಾಜ್ಞನು ಮನುಷ್ಯನನ್ನು ಕೈಹಿಡಿದು ಧರ್ಮಮಾರ್ಗಕ್ಕೆ ಕೊಂಡೊಯ್ಯಬಹುದು. ಅಧರ್ಮದಿಂದಾಗುವ ಭಯವನ್ನು ಊಹಿಸಿಕೊಂಡು ಅವನು ಧರ್ಮಮಾರ್ಗಕ್ಕೆ ಬರಬಹುದು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಧರ್ಮಪ್ರಶಂಸಾಯಾಂ ಪಂಚಾಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಧರ್ಮಪ್ರಶಂಸಾ ಎನ್ನುವ ನೂರಾಐವತ್ತನೇ ಅಧ್ಯಾಯವು.
-
ಪ್ರಜಾಯಂತೇ ನ ರಾಜಸಾಃ। (ಭಾರತ ದರ್ಶನ). ↩︎
-
ಲೋಕಾನಾಮಾಲೋಕಃ ಕಾರಣಂ (ಭಾರತ ದರ್ಶನ). ↩︎
-
ನ ತು ಕಶ್ಚಿನ್ನಯೇತ್ಪ್ರಾಜ್ಞೋ (ಭಾರತ ದರ್ಶನ). ↩︎
-
ಉಚ್ಯಮಾನಸ್ತು ಧರ್ಮೇಣ ಧರ್ಮಲೋಕಭಯಚ್ಛಲೇ।। (ಭಾರತ ದರ್ಶನ). ಭಾರತ ದರ್ಶನದಲ್ಲಿ ಈ ಶ್ಲೋಕದ ನಂತರ ಈ ಅಧ್ಯಾಯದಲ್ಲಿ ೭ ಅಧಿಕ ಶ್ಲೋಕಗಳಿವೆ: ಶೂದ್ರೋಹಂ ನಾಧಿಕಾರೋ ಮೇ ಚಾತುರಾಶ್ರಮ್ಯಸೇವನೇ। ಇತಿ ವಿಜ್ಞಾನಮಪರೇ ನಾತ್ಮನ್ಯುಪದಧತ್ಯುತ।। ೧೦।। ಪಂಚಭೂತಶರೀರಣಾಂ ಸರ್ವೇಷಾಂ ಸದೃಶಾತ್ಮಾನಾಮ್।। । । ೧೧।। ಲೋಕಧರ್ಮೇ ಚ ಧರ್ಮೇ ಚ ವಿಶೇಷಕರಣಂ ಕೃತಮ್। ಯಥೈಕತ್ವಂ ಪುನರ್ಯಾಂತಿ ಪ್ರಾಣಿನಸ್ತತ್ರ ವಿಸ್ತರಃ।। ೧೨।। ಅಧ್ರುವೋ ಹಿ ಕಥಂ ಲೋಕಃ ಸ್ಮೃತೋ ಧರ್ಮಃ ಕಥಂ ಧ್ರುವಃ। ಯತ್ರಕಾ ಲೋ ಧ್ರುವಸ್ತಾತ ತತ್ರ ಧರ್ಮಃ ಸನಾತನಃ।। ೧೩।। ಸರ್ವೇಷಾಂ ತುಲ್ಯದೇಹಾನಾಂ ಸರ್ವೇಷಾಂ ಸದೃಶಾತ್ಮನಾಮ್। ಕಾಲೋ ಧರ್ಮೇಣ ಸಂಯುಕ್ತಃ ಶೇಷ ಏವ ಸ್ವಯಂ ಗುರುಃ।। ೧೪।। ಏವಂ ಸತಿ ನ ದೋಷೋಽಸ್ತಿ ಭೂತಾನಾಂ ಧರ್ಮಸೇವನೇ। ತಿರ್ಯಗ್ಯೋನಾವಪಿ ಸತಾಂ ಲೋಕ ಏವ ಮತೋ ಗುರುಃ।। ೧೫ ।। ↩︎