128: ಉಮಾಮಹೇಶ್ವರಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 128

ಸಾರ

ಮಹೇಶ್ವರನು ತನ್ನ ರೂಪ-ಲಕ್ಷಣಗಳ ಕುರಿತಾದ ಉಮೆಯ ಪ್ರಶ್ನೆಗೆ ಉತ್ತರಿಸಿದುದು (1-19). ಉಮೆಯ ಪ್ರಶ್ನೆಗೆ ಮಹೇಶ್ವರನು ಧರ್ಮದ ಲಕ್ಷಣಗಳನ್ನು ಹೇಳಿದುದು (20-27). ಚಾತುರ್ವರ್ಣಧರ್ಮಗಳು (28-59).

13128001 ಮಹೇಶ್ವರ ಉವಾಚ।

13128001a ತಿಲೋತ್ತಮಾ ನಾಮ ಪುರಾ ಬ್ರಹ್ಮಣಾ ಯೋಷಿದುತ್ತಮಾ।
13128001c ತಿಲಂ ತಿಲಂ ಸಮುದ್ಧೃತ್ಯ ರತ್ನಾನಾಂ ನಿರ್ಮಿತಾ ಶುಭಾ।।

ಮಹೇಶ್ವರನು ಹೇಳಿದನು: “ಹಿಂದೆ ಬ್ರಹ್ಮನು ಕೋಶ-ಕೋಶವನ್ನೂ ರತ್ನಗಳಿಂದ ತುಂಬಿಸಿ ತಿಲೋತ್ತಮ ಎಂಬ ಹೆಸರಿನ ಉತ್ತಮ ಶುಭ ಸ್ತ್ರೀಯನ್ನು ನಿರ್ಮಿಸಿದನು.

13128002a ಸಾಭ್ಯಗಚ್ಚತ ಮಾಂ ದೇವಿ ರೂಪೇಣಾಪ್ರತಿಮಾ ಭುವಿ।
13128002c ಪ್ರದಕ್ಷಿಣಂ ಲೋಭಯಂತೀ ಮಾಂ ಶುಭೇ ರುಚಿರಾನನಾ।।

ಭುವಿಯಲ್ಲಿಯೇ ಅಪ್ರತಿಮ ರೂಪವತಿಯಾಗಿದ್ದ ಆ ರುಚಿರಾನನೆ ಶುಭೆ ದೇವಿಯು ನನ್ನನ್ನು ಮೋಹಗೊಳಿಸುತ್ತಾ ನನ್ನ ಸುತ್ತಲೂ ಪ್ರದಕ್ಷಿಣೆ ಹಾಕಿದಳು.

13128003a ಯತೋ ಯತಃ ಸಾ ಸುದತೀ ಮಾಮುಪಾಧಾವದಂತಿಕೇ।
13128003c ತತಸ್ತತೋ ಮುಖಂ ಚಾರು ಮಮ ದೇವಿ ವಿನಿರ್ಗತಮ್।।

ದೇವೀ! ಆ ಸುದತಿಯು ನನ್ನನ್ನು ಪ್ರದಕ್ಷಿಣೆಮಾಡುತ್ತಾ ಯಾವ ದಿಕ್ಕಿನಲ್ಲಿ ಹೋಗುತ್ತಿದ್ದಳೋ ಆಯಾ ದಿಕ್ಕುಗಳಲ್ಲಿ ನನ್ನಿಂದ ಮುಖಗಳು ಹೊರಬಂದವು.

13128004a ತಾಂ ದಿದೃಕ್ಷುರಹಂ ಯೋಗಾಚ್ಚತುರ್ಮೂರ್ತಿತ್ವಮಾಗತಃ।
13128004c ಚತುರ್ಮುಖಶ್ಚ ಸಂವೃತ್ತೋ ದರ್ಶಯನ್ಯೋಗಮಾತ್ಮನಃ।।

ಅವಳನ್ನು ನೋಡಲೋಸುಗ ನಾನು ಯೋಗದಿಂದ ಚತುರ್ಮೂರ್ತಿತ್ವವನ್ನು ಪಡೆದುಕೊಂಡೆನು. ಸುತ್ತಲೂ ನೋಡಲೋಸುಗ ಯೋಗದಿಂದ ನನ್ನನ್ನು ಚತುರ್ಮುಖನನ್ನಾಗಿಸಿಕೊಂಡೆನು.

13128005a ಪೂರ್ವೇಣ ವದನೇನಾಹಮಿಂದ್ರತ್ವಮನುಶಾಸ್ಮಿ ಹ।
13128005c ಉತ್ತರೇಣ ತ್ವಯಾ ಸಾರ್ಧಂ ರಮಾಮ್ಯಹಮನಿಂದಿತೇ।।

ನನ್ನ ಪೂರ್ವ ವದನದಿಂದ ನಾನು ಇಂದ್ರತ್ವವನ್ನು ಅನುಶಾಸನಮಾಡುತ್ತೇನೆ. ಅನಿಂದಿತೇ! ಉತ್ತರದ ವದನದಿಂದ ನಿನ್ನೊಡನೆ ರಮಿಸುತ್ತೇನೆ.

13128006a ಪಶ್ಚಿಮಂ ಮೇ ಮುಖಂ ಸೌಮ್ಯಂ ಸರ್ವಪ್ರಾಣಿಸುಖಾವಹಮ್।
13128006c ದಕ್ಷಿಣಂ ಭೀಮಸಂಕಾಶಂ ರೌದ್ರಂ ಸಂಹರತಿ ಪ್ರಜಾಃ।।

ಪಶ್ಚಿಮದ ಸೌಮ್ಯ ಮುಖದಿಂದ ನಾನು ಪ್ರಾಣಿಗಳಿಗೆ ಸುಖವನ್ನು ತರುತ್ತೇನೆ. ದಕ್ಷಿಣದ ಭೀಮಸಂಕಾಶ ರೌದ್ರ ಮುಖದಿಂದ ಪ್ರಜೆಗಳನ್ನು ಸಂಹರಿಸುತ್ತೇನೆ.

13128007a ಜಟಿಲೋ ಬ್ರಹ್ಮಚಾರೀ ಚ ಲೋಕಾನಾಂ ಹಿತಕಾಮ್ಯಯಾ।
13128007c ದೇವಕಾರ್ಯಾರ್ಥಸಿದ್ಧ್ಯರ್ಥಂ ಪಿನಾಕಂ ಮೇ ಕರೇ ಸ್ಥಿತಮ್।।

ಲೋಕಗಳ ಹಿತವನ್ನು ಬಯಸಿ ಜಟಿಲನೂ ಬ್ರಹ್ಮಚಾರಿಯೂ ಆಗಿದ್ದೇನೆ. ದೇವಕಾರ್ಯಾರ್ಥ ಸಿದ್ಧಿಗಾಗಿ ನನ್ನ ಕರದಲ್ಲಿ ಪಿನಾಕವನ್ನು ಹಿಡಿದಿದ್ದೇನೆ.

13128008a ಇಂದ್ರೇಣ ಚ ಪುರಾ ವಜ್ರಂ ಕ್ಷಿಪ್ತಂ ಶ್ರೀಕಾಂಕ್ಷಿಣಾ ಮಮ।
13128008c ದಗ್ಧ್ವಾ ಕಂಠಂ ತು ತದ್ಯಾತಂ ತೇನ ಶ್ರೀಕಂಠತಾ ಮಮ।।

ಶ್ರೀಯನ್ನು ಬಯಸಿ ಇಂದ್ರನು ಹಿಂದೆ ವಜ್ರವನ್ನು ಎಸೆದ ಕಾರಣ ಅದು ನನ್ನ ಕಂಠವನ್ನು ಸುಟ್ಟಿದುದರಿಂದ ನಾನು ಶ್ರೀಕಂಠತ್ವವನ್ನು ಪಡೆದುಕೊಂಡೆನು.”

113128009 ಉಮೋವಾಚ।
13128009a ವಾಹನೇಷು ಪ್ರಭೂತೇಷು ಶ್ರೀಮತ್ಸ್ವನ್ಯೇಷು ಸತ್ಸು ತೇ।
13128009c ಕಥಂ ಗೋವೃಷಭೋ ದೇವ ವಾಹನತ್ವಮುಪಾಗತಃ।।

ಉಮೆಯು ಹೇಳಿದಳು: “ದೇವ! ಅನ್ಯ ಶ್ರೀಮಂತ ವಾಹನಗಳು ಇರುವಾಗ ಗೋವೃಷಭಕ್ಕೆ ಏಕೆ ನಿನ್ನ ವಾಹನತ್ವವು ದೊರಕಿತು?”

13128010 ಮಹೇಶ್ವರ ಉವಾಚ।
13128010a ಸುರಭೀಂ ಸಸೃಜೇ ಬ್ರಹ್ಮಾಮೃತಧೇನುಂ ಪಯೋಮುಚಮ್।
13128010c ಸಾ ಸೃಷ್ಟಾ ಬಹುಧಾ ಜಾತಾ ಕ್ಷರಮಾಣಾ ಪಯೋಽಮೃತಮ್।।

ಮಹೇಶ್ವರನು ಹೇಳಿದನು: “ಅಮೃತವನ್ನು ಹಾಲಾಗಿ ಸುರಿಸುವ ಸುರಭೀ ಎಂಬ ಧೇನುವನ್ನು ಬ್ರಹ್ಮನು ಸೃಷ್ಟಿಸಿದನು. ಅಮೃತಮಯ ಹಾಲನ್ನು ಕೊಡುವ ಅದರಲ್ಲಿ ಅನೇಕ ಜಾತಿಯ ಹಸುಗಳು ಹುಟ್ಟಿಕೊಂಡವು.

13128011a ತಸ್ಯಾ ವತ್ಸಮುಖೋತ್ಸೃಷ್ಟಃ ಫೇನೋ ಮದ್ಗಾತ್ರಮಾಗತಃ।
13128011c ತತೋ ದಗ್ಧಾ ಮಯಾ ಗಾವೋ ನಾನಾವರ್ಣತ್ವಮಾಗತಾಃ।।

ಅವಳ ಕರುವಿನ ಮುಖದಿಂದ ಚೆಲ್ಲಲ್ಪಟ್ಟ ಹಾಲಿನ ನೊರೆಯು ನನ್ನ ಶರೀರದ ಮೇಲೆ ಬಿದ್ದಾಗ ನನ್ನಿಂದ ದಗ್ಧವಾದ ಗೋವುಗಳಿಗೆ ನಾನಾ ಬಣ್ಣಗಳು ಬಂದವು.

13128012a ತತೋಽಹಂ ಲೋಕಗುರುಣಾ ಶಮಂ ನೀತೋಽರ್ಥವೇದಿನಾ।
13128012c ವೃಷಂ ಚೇಮಂ ಧ್ವಜಾರ್ಥಂ ಮೇ ದದೌ ವಾಹನಮೇವ ಚ।।

ಆಗ ನನ್ನನ್ನು ಶಾಂತಗೊಳಿಸಲು ಅರ್ಥವೇದೀ ಲೋಕಗುರು ಬ್ರಹ್ಮನು ವೃಷಭವನ್ನು ನನ್ನ ಧ್ವಜಕ್ಕಾಗಿ ಮತ್ತು ವಾಹನಕ್ಕಾಗಿ ನೀಡಿದನು2.”

13128013 ಉಮೋವಾಚ।
13128013a ನಿವಾಸಾ ಬಹುರೂಪಾಸ್ತೇ ವಿಶ್ವರೂಪಗುಣಾನ್ವಿತಾಃ।
13128013c ತಾಂಶ್ಚ ಸಂತ್ಯಜ್ಯ ಭಗವನ್ ಶ್ಮಶಾನೇ ರಮಸೇ ಕಥಮ್।।
13128014a ಕೇಶಾಸ್ಥಿಕಲಿಲೇ ಭೀಮೇ ಕಪಾಲಘಟಸಂಕುಲೇ।
13128014c ಗೃಧ್ರಗೋಮಾಯುಕಲಿಲೇ ಚಿತಾಗ್ನಿಶತಸಂಕುಲೇ।।
13128015a ಅಶುಚೌ ಮಾಂಸಕಲಿಲೇ ವಸಾಶೋಣಿತಕರ್ದಮೇ।
13128015c ವಿನಿಕೀರ್ಣಾಮಿಷಚಯೇ ಶಿವಾನಾದವಿನಾದಿತೇ।।

ಉಮೆಯು ಹೇಳಿದಳು: “ಭಗವನ್! ನಿನಗೆ ವಿಶ್ವರೂಪಗುಣಾನ್ವಿತ ಬಹುರೂಪದ ನಿವಾಸಗಳಿವೆ. ಅವುಗಳನ್ನು ತ್ಯಜಿಸಿ ನೀನು ಕೂದಲು-ಮೂಳೆಗಳು ಹರಡಿರುವ, ಭಯಂಕರ ಕಪಾಲ-ಮಡಿಕೆಗಳ ರಾಶಿಗಳಿರುವ, ಹದ್ದು-ನರಿಗಳು ಸಂಚರಿಸುವ, ನೂರಾರು ಚಿತಾಗ್ನಿಗಳು ಉರಿಯುತ್ತಿರುವ, ಮಾಂಸದ ಮುದ್ದೆಗಳು-ಕೀವು-ರಕ್ತಗಳಿಂದ ಅಶೌಚವಾಗಿರುವ ಚೆಲ್ಲಿದ್ದ ಮಾಂಸಗಳ ಆಸೆಯಿಂದ ನರಿಗಳು ಕೂಗುತ್ತಿರುವ ಶ್ಮಶಾನದಲ್ಲಿ ಏಕೆ ರಮಿಸುತ್ತೀಯೆ?”

13128016 ಮಹೇಶ್ವರ ಉವಾಚ।
13128016a ಮೇಧ್ಯಾನ್ವೇಷೀ ಮಹೀಂ ಕೃತ್ಸ್ನಾಂ ವಿಚರಾಮಿ ನಿಶಾಸ್ವಹಮ್।
13128016c ನ ಚ ಮೇಧ್ಯತರಂ ಕಿಂ ಚಿಚ್ಚ್ಮಶಾನಾದಿಹ ವಿದ್ಯತೇ।।

ಮಹೇಶ್ವರನು ಹೇಳಿದನು: “ಹಗಲು ರಾತ್ರಿ ನಾನು ಪವಿತ್ರ ಸ್ಥಳವನ್ನು ಹುಡುಕುತ್ತಾ ಇಡೀ ಭೂಮಿಯನ್ನು ಸುತ್ತುತ್ತಿರುತ್ತೇನೆ. ಆದರೆ ಶ್ಮಶಾನದಷ್ಟು ಪುಣ್ಯ ಭೂಮಿಯು ನನಗೆ ಕಾಣಲಿಲ್ಲ.

13128017a ತೇನ ಮೇ ಸರ್ವವಾಸಾನಾಂ ಶ್ಮಶಾನೇ ರಮತೇ ಮನಃ।
13128017c ನ್ಯಗ್ರೋಧಶಾಖಾಸಂಚನ್ನೇ ನಿರ್ಭುಕ್ತಸ್ರಗ್ವಿಭೂಷಿತೇ।।

ಆಲದ ಮರದ ರೆಂಬೆಗಳಿಂದ ಆಚ್ಛಾದಿತವಾಗಿರುವ ಮತ್ತು ತಿರುಚಿಹಾಕಲ್ಪಟ್ಟ ಪುಷ್ಪಹಾರಗಳಿಂದ ವಿಭೂಷಿತವಾಗಿರುವ ಶ್ಮಶಾನವೇ ನನಗೆ ಎಲ್ಲ ಸ್ಥಾನಗಳಿಗಿಂತ ಸಂತೋಷವನ್ನು ನೀಡುತ್ತದೆ.

13128018a ತತ್ರ ಚೈವ ರಮಂತೇ ಮೇ ಭೂತಸಂಘಾಃ ಶುಭಾನನೇ।
13128018c ನ ಚ ಭೂತಗಣೈರ್ದೇವಿ ವಿನಾಹಂ ವಸ್ತುಮುತ್ಸಹೇ।।

ಶುಭಾನನೇ! ಅಲ್ಲಿ ಭೂತಸಂಘಗಳೂ ರಮಿಸುತ್ತಿರುತ್ತವೆ. ದೇವಿ! ಭೂತಗಣಗಳಿಲ್ಲದಿರುವಲ್ಲಿ ನಾನು ವಾಸಿಸಲು ಬಯಸುವುದಿಲ್ಲ.

13128019a ಏಷ ವಾಸೋ ಹಿ ಮೇ ಮೇಧ್ಯಃ ಸ್ವರ್ಗೀಯಶ್ಚ ಮತೋ ಹಿ ಮೇ।
13128019c ಪುಣ್ಯಃ ಪರಮಕಶ್ಚೈವ ಮೇಧ್ಯಕಾಮೈರುಪಾಸ್ಯತೇ।।

ಆದುದರಿಂದ ಶ್ಮಶಾನವು ನನಗೆ ಪರಮ ಪವಿತ್ರವೂ ಸ್ವರ್ಗದಂತಹ ವಾಸಸ್ಥಾನವೂ ಆಗಿದೆ. ಇದು ಪುಣ್ಯಪ್ರದವಾಗಿದೆ. ಪವಿತ್ರ ವಸ್ತುಗಳನ್ನು ಬಯಸುವವರು ಶ್ಮಶಾನಭೂಮಿಯನ್ನೇ ಆಶ್ರಯಿಸುತ್ತಾರೆ3.”

413128020 ಉಮೋವಾಚ।
13128020a ಭಗವನ್ಸರ್ವಭೂತೇಶ ಸರ್ವಧರ್ಮಭೃತಾಂ ವರ।
13128020c ಪಿನಾಕಪಾಣೇ ವರದ ಸಂಶಯೋ ಮೇ ಮಹಾನಯಮ್।।

ಉಮೆಯು ಹೇಳಿದಳು: “ಭಗವನ್! ಸರ್ವಭೂತೇಶ! ಸರ್ವಧರ್ಮಧಾರಿಗಳಲ್ಲಿ ಶ್ರೇಷ್ಠ! ಪಿನಾಕಪಾಣೇ! ವರದ! ನನಗೆ ಇನ್ನೊಂದು ಮಹಾಸಂಶಯವುಂಟಾಗಿದೆ.

13128021a ಅಯಂ ಮುನಿಗಣಃ ಸರ್ವಸ್ತಪಸ್ತಪ ಇತಿ ಪ್ರಭೋ।
13128021c ತಪೋನ್ವೇಷಕರೋ ಲೋಕೇ ಭ್ರಮತೇ ವಿವಿಧಾಕೃತಿಃ।।

ಪ್ರಭೋ! ಈ ಮುನಿಗಣವೆಲ್ಲವೂ ತಪಸ್ಸನ್ನಾಚರಿಸಿ ತಪಸ್ವಿಗಳೆಂದೆನಿಸಿಕೊಂಡಿವೆ. ವಿವಿಧ ಆಕೃತಿಗಳಲ್ಲಿರುವ ಈ ತಪೋನ್ವೇಷಕರು ಲೋಕದಲ್ಲಿ ತಿರುಗಾಡುತ್ತಿರುತ್ತಾರೆ.

13128022a ಅಸ್ಯ ಚೈವರ್ಷಿಸಂಘಸ್ಯ ಮಮ ಚ ಪ್ರಿಯಕಾಮ್ಯಯಾ।
13128022c ಏತಂ ಮಮೇಹ ಸಂದೇಹಂ ವಕ್ತುಮರ್ಹಸ್ಯರಿಂದಮ।।

ಅರಿಂದಮ! ಈ ಋಷಿಸಂಘದ ಮತ್ತು ನನ್ನ ಪ್ರಿಯವನ್ನು ಬಯಸಿ ಈ ಸಂದೇಹವನ್ನು ನೀನು ನಿವಾರಿಸಬೇಕು.

13128023a ಧರ್ಮಃ ಕಿಂಲಕ್ಷಣಃ ಪ್ರೋಕ್ತಃ ಕಥಂ ವಾಚರಿತುಂ ನರೈಃ।
13128023c ಶಕ್ಯೋ ಧರ್ಮಮವಿಂದದ್ಭಿರ್ಧರ್ಮಜ್ಞ ವದ ಮೇ ಪ್ರಭೋ।।

ಧರ್ಮಜ್ಞ! ಪ್ರಭೋ! ಧರ್ಮದ ಲಕ್ಷಣವು ಏನೆಂದು ಹೇಳುತ್ತಾರೆ? ಧರ್ಮವನ್ನು ತಿಳಿಯದವರು ಧರ್ಮವನ್ನು ಆಚರಿಸುವುದಾದರೂ ಹೇಗೆ? ಇದರ ಕುರಿತು ನನಗೆ ಹೇಳು!””

13128024 ನಾರದ ಉವಾಚ।
13128024a ತತೋ ಮುನಿಗಣಃ ಸರ್ವಸ್ತಾಂ ದೇವೀಂ ಪ್ರತ್ಯಪೂಜಯತ್।
13128024c ವಾಗ್ಭಿರ್ಋಗ್ಭೂಷಿತಾರ್ಥಾಭಿಃ ಸ್ತವೈಶ್ಚಾರ್ಥವಿದಾಂ ವರ।।

ನಾರದನು ಹೇಳಿದನು: “ಅರ್ಥವಿದರಲ್ಲಿ ಶ್ರೇಷ್ಠ! ಆಗ ಸರ್ವ ಮುನಿಗಣವೂ ಅರ್ಥಭೂಷಿತವಾದ ವಾಕ್ಕು-ಋಕ್ಕು ಮತ್ತು ಸ್ತವಗಳಿಂದ ದೇವಿಯನ್ನು ಪೂಜಿಸಿತು.

13128025 ಮಹೇಶ್ವರ ಉವಾಚ।
13128025a ಅಹಿಂಸಾ ಸತ್ಯವಚನಂ ಸರ್ವಭೂತಾನುಕಂಪನಮ್।
13128025c ಶಮೋ ದಾನಂ ಯಥಾಶಕ್ತಿ ಗಾರ್ಹಸ್ಥ್ಯೋ ಧರ್ಮ ಉತ್ತಮಃ।।

ಮಹೇಶ್ವರನು ಹೇಳಿದನು: “ಅಹಿಂಸೆ, ಸತ್ಯವಚನ, ಸರ್ವಭೂತಗಳಲ್ಲಿ ಅನುಕಂಪ, ಶಮ, ಮತ್ತು ಯಥಾಶಕ್ತಿ ದಾನ ಇವು ಗೃಹಸ್ಥನ ಉತ್ತಮ ಧರ್ಮಗಳು.

13128026a ಪರದಾರೇಷ್ವಸಂಕಲ್ಪೋ ನ್ಯಾಸಸ್ತ್ರೀಪರಿರಕ್ಷಣಮ್।
13128026c ಅದತ್ತಾದಾನವಿರಮೋ ಮಧುಮಾಂಸಸ್ಯ ವರ್ಜನಮ್।।
13128027a ಏಷ ಪಂಚವಿಧೋ ಧರ್ಮೋ ಬಹುಶಾಖಃ ಸುಖೋದಯಃ।
13128027c ದೇಹಿಭಿರ್ಧರ್ಮಪರಮೈಃ ಕರ್ತವ್ಯೋ ಧರ್ಮಸಂಚಯಃ।।

ಪರದಾರೆಯರನ್ನು ಬಯಸದಿರುವುದು, ನ್ಯಾಸರೂಪದಲ್ಲಿ ಇಟ್ಟುಕೊಂಡಿರುವ ಸ್ತ್ರೀಯನ್ನು ಪರಿರಕ್ಷಿಸುವುದು, ದಾನವಾಗಿ ಕೊಟ್ಟಿರದೇ ಇರುವವುಗಳನ್ನು ತೆಗೆದುಕೊಳ್ಳದೇ ಇರುವುದು, ಮಧು-ಮಾಂಸಗಳ ವರ್ಜನೆ ಈ ಐದುವಿಧದ ಧರ್ಮಗಳು ಸುಖವನ್ನು ನೀಡುತ್ತವೆ ಮತ್ತು ಇವಕ್ಕೆ ಅನೇಕ ಶಾಖೆಗಳಿವೆ. ಧರ್ಮವೇ ಶ್ರೇಯಸ್ಕರವೆಂದು ತಿಳಿದಿರುವವರು ಈ ಧರ್ಮಸಂಚಯವನ್ನು ಮಾಡಬೇಕು.”

13128028 ಉಮೋವಾಚ।
13128028a ಭಗವನ್ಸಂಶಯಂ ಪೃಷ್ಟಸ್ತಂ ಮೇ ವ್ಯಾಖ್ಯಾತುಮರ್ಹಸಿ।
13128028c ಚಾತುರ್ವರ್ಣ್ಯಸ್ಯ ಯೋ ಧರ್ಮಃ ಸ್ವೇ ಸ್ವೇ ವರ್ಣೇ ಗುಣಾವಹಃ।।

ಉಮೆಯು ಹೇಳಿದಳು: “ಭಗವನ್! ನನ್ನಲ್ಲಿ ಮತ್ತೂ ಇನ್ನೊಂದು ಸಂಶಯವು ಉಂಟಾಗಿದೆ. ಅದನ್ನು ಬಗೆಹರಿಸಬೇಕು. ಚಾತುರ್ವಣ್ಯದಲ್ಲಿ ಯಾವ ಯಾವ ಧರ್ಮವು ಯಾವ ಯಾವ ವರ್ಣದವರಿಗೆ ಶ್ರೇಷ್ಠವಾಗಿರುತ್ತದೆ?

13128029a ಬ್ರಾಹ್ಮಣೇ ಕೀದೃಶೋ ಧರ್ಮಃ ಕ್ಷತ್ರಿಯೇ ಕೀದೃಶೋ ಭವೇತ್।
13128029c ವೈಶ್ಯೇ ಕಿಂಲಕ್ಷಣೋ ಧರ್ಮಃ ಶೂದ್ರೇ ಕಿಂಲಕ್ಷಣೋ ಭವೇತ್।।

ಬ್ರಾಹ್ಮಣರ ಧರ್ಮವು ಹೇಗಿರುತ್ತದೆ? ಕ್ಷತ್ರಿಯರ ಧರ್ಮವು ಹೇಗಿರುತ್ತದೆ? ವೈಶ್ಯರ ಧರ್ಮದ ಲಕ್ಷಣವು ಏನು? ಶೂದ್ರರ ಧರ್ಮದ ಲಕ್ಷಣವು ಏನು?”

13128030 ಮಹೇಶ್ವರ ಉವಾಚ।
513128030a ನ್ಯಾಯತಸ್ತೇ ಮಹಾಭಾಗೇ ಸಂಶಯಃ ಸಮುದೀರಿತಃ।
13128030c ಭೂಮಿದೇವಾ ಮಹಾಭಾಗಾಃ ಸದಾ ಲೋಕೇ ದ್ವಿಜಾತಯಃ।।

ಮಹೇಶ್ವರನು ಹೇಳಿದನು: “ಮಹಾಭಾಗೇ! ನಿನ್ನ ಸಂಶಯವನ್ನು ಯಥಾನ್ಯಾಯವಾಗಿಯೇ ವ್ಯಕ್ತಪಡಿಸಿರುವೆ. ಮಹಾಭಾಗ ದ್ವಿಜಾತಿಯವರು ಸದಾ ಲೋಕದಲ್ಲಿ ಭೂಮಿದೇವರೆನಿಸಿಕೊಂಡಿರುತ್ತಾರೆ.

13128031a ಉಪವಾಸಃ ಸದಾ ಧರ್ಮೋ ಬ್ರಾಹ್ಮಣಸ್ಯ ನ ಸಂಶಯಃ।
13128031c ಸ ಹಿ ಧರ್ಮಾರ್ಥಮುತ್ಪನ್ನೋ ಬ್ರಹ್ಮಭೂಯಾಯ ಕಲ್ಪತೇ।।

ಸದಾ ಬ್ರಾಹ್ಮಣನ ಧರ್ಮವು ಉಪವಾಸ6 ಎನ್ನುವುದರಲ್ಲಿ ಸಂಶಯವಿಲ್ಲ. ಅದೇ ಧರ್ಮಾರ್ಥದಿಂದ ಬ್ರಹ್ಮತ್ವವು ಹುಟ್ಟುತ್ತದೆ ಎಂದು ಹೇಳುತ್ತಾರೆ.

13128032a ತಸ್ಯ ಧರ್ಮಕ್ರಿಯಾ ದೇವಿ ವ್ರತಚರ್ಯಾ ಚ ನ್ಯಾಯತಃ।
13128032c ತಥೋಪನಯನಂ ಚೈವ ದ್ವಿಜಾಯೈವೋಪಪದ್ಯತೇ।।

ದೇವೀ! ಧರ್ಮಕ್ರಿಯೆಗಳೂ, ನ್ಯಾಯಯುಕ್ತವಾದ ವ್ರತಚರ್ಯವೂ, ಹಾಗೆಯೇ ಉಪನಯನವೂ ದ್ವಿಜಾತಿಯವರಿಗೆ ಹೇಳಲ್ಪಟ್ಟಿದೆ.

13128033a ಗುರುದೈವತಪೂಜಾರ್ಥಂ ಸ್ವಾಧ್ಯಾಯಾಭ್ಯಸನಾತ್ಮಕಃ।
13128033c ದೇಹಿಭಿರ್ಧರ್ಮಪರಮೈಶ್ಚರ್ತವ್ಯೋ ಧರ್ಮಸಂಭವಃ।।

ಧರ್ಮದಲ್ಲಿ ಪರಮ ನಿಷ್ಠೆಯುಳ್ಳ ಮನುಷ್ಯರು ಗುರು-ದೇವತೆಗಳ ಪೂಜಾರ್ಥವಾಗಿ ಧರ್ಮಕ್ಕೆ ಮೂಲವಾದ ವೇದಾಭ್ಯಾಸವನ್ನು ಮಾಡಬೇಕು.”

13128034 ಉಮೋವಾಚ।
13128034a ಭಗವನ್ಸಂಶಯೋ ಮೇಽತ್ರ ತಂ ಮೇ ವ್ಯಾಖ್ಯಾತುಮರ್ಹಸಿ।
13128034c ಚಾತುರ್ವರ್ಣ್ಯಸ್ಯ ಧರ್ಮಂ ಹಿ ನೈಪುಣ್ಯೇನ ಪ್ರಕೀರ್ತಯ।।

ಉಮೆಯು ಹೇಳಿದಳು: “ಭಗವನ್! ಇದರ ಕುರಿತು ನನಗೆ ಇನ್ನೂ ಸಂಶಯವಿದೆ. ಅದನ್ನು ಹೋಗಲಾಡಿಸಬೇಕು. ಚಾತುರ್ವಣ್ಯದ ಧರ್ಮವನ್ನು ನೈಪುಣ್ಯತೆಯಿಂದ ವರ್ಣಿಸು.”

13128035 ಮಹೇಶ್ವರ ಉವಾಚ।
13128035a ರಹಸ್ಯಶ್ರವಣಂ ಧರ್ಮೋ ವೇದವ್ರತನಿಷೇವಣಮ್।
13128035c ವ್ರತಚರ್ಯಾಪರೋ ಧರ್ಮೋ ಗುರುಪಾದಪ್ರಸಾದನಮ್।।

ಮಹೇಶ್ವರನು ಹೇಳಿದನು: “ಧರ್ಮದ ರಹಸ್ಯಶ್ರವಣ, ವೇದವ್ರತಗಳನ್ನು ನಡೆಸುವುದು, ಮತ್ತು ಗುರುಪಾದವನ್ನು ಪ್ರಸನ್ನಗೊಳಿಸುವುದು ಇವು ಬ್ರಹ್ಮಚರ್ಯದ ಧರ್ಮಗಳು.

13128036a ಭೈಕ್ಷಚರ್ಯಾಪರೋ ಧರ್ಮೋ ಧರ್ಮೋ ನಿತ್ಯೋಪವಾಸಿತಾ।
13128036c ನಿತ್ಯಸ್ವಾಧ್ಯಾಯಿತಾ ಧರ್ಮೋ ಬ್ರಹ್ಮಚರ್ಯಾಶ್ರಮಸ್ತಥಾ।।

ಬ್ರಹ್ಮಚರ್ಯಾಶ್ರಮದಲ್ಲಿ ನಿತ್ಯವೂ ಯಜ್ಞೋಪವೀತವನ್ನು ಧರಿಸಿರುವುದು, ನಿತ್ಯವೂ ಸ್ವಾಧ್ಯಾಯದಲ್ಲಿ ನಿರತನಾಗಿರುವುದು ಮತ್ತು ಭಿಕ್ಷಾಟನಾ ಧರ್ಮವೇ7 ಪರಮ ಧರ್ಮವು.

13128037a ಗುರುಣಾ ತ್ವಭ್ಯನುಜ್ಞಾತಃ ಸಮಾವರ್ತೇತ ವೈ ದ್ವಿಜಃ।
13128037c ವಿಂದೇತಾನಂತರಂ ಭಾರ್ಯಾಮನುರೂಪಾಂ ಯಥಾವಿಧಿ।।

ಅನಂತರ ಗುರುವಿನ ಅನುಜ್ಞೆಯನ್ನು ಪಡೆದು ಸಮಾವರ್ತನೆಯನ್ನು ಮಾಡಿಕೊಳ್ಳಬೇಕು ಮತ್ತು ಯಥಾವಿಧಿಯಾಗಿ ಅನುರೂಪಳಾದವಳನ್ನು ಭಾರ್ಯೆಯನ್ನಾಗಿ ಮಾಡಿಕೊಳ್ಳಬೇಕು.

13128038a ಶೂದ್ರಾನ್ನವರ್ಜನಂ ಧರ್ಮಸ್ತಥಾ ಸತ್ಪಥಸೇವನಮ್।
13128038c ಧರ್ಮೋ ನಿತ್ಯೋಪವಾಸಿತ್ವಂ ಬ್ರಹ್ಮಚರ್ಯಂ ತಥೈವ ಚ।।

ನಂತರ ಗೃಹಸ್ಥಾಶ್ರಮದಲ್ಲಿ ಶೂದ್ರಾನ್ನವನ್ನು ವರ್ಜಿಸುವುದು, ಸತ್ಪಥದಲ್ಲಿ ನಡೆಯುವುದು, ನಿತ್ಯವೂ ಉಪವಾಸಮಾಡುವುದು ಮತ್ತು ಬ್ರಹ್ಮಚರ್ಯ8 ಇವು ಧರ್ಮಗಳು.

13128039a ಆಹಿತಾಗ್ನಿರಧೀಯಾನೋ ಜುಹ್ವಾನಃ ಸಂಯತೇಂದ್ರಿಯಃ।
13128039c ವಿಘಸಾಶೀ ಯತಾಹಾರೋ ಗೃಹಸ್ಥಃ ಸತ್ಯವಾಕ್ಶುಚಿಃ।।

ಗೃಹಸ್ಥನು ಜಿತೇಂದ್ರಿಯನಾಗಿ ಅಗ್ನಿಯನ್ನು ಸಿದ್ಧಪಡಿಸಿ ಅಗ್ನಿಹೋತ್ರವನ್ನು ಮಾಡಬೇಕು. ಎಲ್ಲರೂ ಊಟಮಾಡಿದ ನಂತರ ಯಜ್ಞಶೇಷವನ್ನು ಊಟಮಾಡಬೇಕು, ಯತಾಹಾರಿಯಾಗಿರಬೇಕು. ಸತ್ಯವಾನನೂ ಶುಚಿಯಾಗಿಯೂ ಇರಬೇಕು.

13128040a ಅತಿಥಿವ್ರತತಾ ಧರ್ಮೋ ಧರ್ಮಸ್ತ್ರೇತಾಗ್ನಿಧಾರಣಮ್।
13128040c ಇಷ್ಟೀಶ್ಚ ಪಶುಬಂಧಾಂಶ್ಚ ವಿಧಿಪೂರ್ವಂ ಸಮಾಚರೇತ್।।

ಅತಿಥಿವ್ರತವು ಅವನ ಧರ್ಮ. ಗಾರ್ಹಪತ್ಯಾದಿ ಮೂರು ಅಗ್ನಿಗಳನ್ನು ರಕ್ಷಿಸುವುದು ಅವನ ಧರ್ಮ. ಇಷ್ಟಿ ಮತ್ತು ಪಶುಬಂಧಗಳನ್ನೂ ವಿಧಿಪೂರ್ವಕವಾಗಿ ಆಚರಿಸಬೇಕು.

13128041a ಯಜ್ಞಶ್ಚ ಪರಮೋ ಧರ್ಮಸ್ತಥಾಹಿಂಸಾ ಚ ದೇಹಿಷು।
13128041c ಅಪೂರ್ವಭೋಜನಂ ಧರ್ಮೋ ವಿಘಸಾಶಿತ್ವಮೇವ ಚ।।

ಅವನ ಪರಮ ಧರ್ಮವು ಯಜ್ಞ ಮತ್ತು ದೇಹಿಗಳಿಗೆ ಅಹಿಂಸೆ. ಮೊದಲು ಊಟಮಾಡದೇ ವಿಘಸವನ್ನು ಊಟಮಾಡುವುದೂ ಅವನ ಧರ್ಮವು.

13128042a ಭುಕ್ತೇ ಪರಿಜನೇ ಪಶ್ಚಾದ್ಭೋಜನಂ ಧರ್ಮ ಉಚ್ಯತೇ।
13128042c ಬ್ರಾಹ್ಮಣಸ್ಯ ಗೃಹಸ್ಥಸ್ಯ ಶ್ರೋತ್ರಿಯಸ್ಯ ವಿಶೇಷತಃ।।

ಪರಿಜನರು ಊಟಮಾಡಿದ ನಂತರ ಊಟಮಾಡುವುದು ಧರ್ಮ ಎಂದು ಹೇಳಿದ್ದಾರೆ. ಇದು ವಿಶೇಷವಾಗಿ ಬ್ರಾಹ್ಮಣ ಶ್ರೋತ್ರೀಯ ಗೃಹಸ್ಥನ ಧರ್ಮವಾಗಿರುತ್ತದೆ.

13128043a ದಂಪತ್ಯೋಃ ಸಮಶೀಲತ್ವಂ ಧರ್ಮಶ್ಚ ಗೃಹಮೇಧಿನಾಮ್।
13128043c ಗೃಹ್ಯಾಣಾಂ ಚೈವ ದೇವಾನಾಂ ನಿತ್ಯಂ ಪುಷ್ಪಬಲಿಕ್ರಿಯಾ।।

ದಂಪತಿಗಳಲ್ಲಿ ಸಮಶೀಲತ್ವವಿರಬೇಕು. ಇದು ಗೃಹಸ್ಥನ ಧರ್ಮವು. ಮನೆಯಲ್ಲಿರುವ ದೇವರಿಗೆ ನಿತ್ಯವೂ ಪುಷ್ಪಗಳಿಂದ ಪೂಜಿಸಿ ಅನ್ನದ ಬಲಿಯನ್ನು ನೀಡಬೇಕು.

13128044a ನಿತ್ಯೋಪಲೇಪನಂ ಧರ್ಮಸ್ತಥಾ ನಿತ್ಯೋಪವಾಸಿತಾ।
13128044c ಸುಸಂಮೃಷ್ಟೋಪಲಿಪ್ತೇ ಚ ಸಾಜ್ಯಧೂಮೋದ್ಗಮೇ ಗೃಹೇ।।

ನಿತ್ಯವೂ ಮನೆಯನ್ನು ಸಾರಿಸುವುದು ಮತ್ತು ನಿತ್ಯವೂ ವ್ರತಗಳನ್ನು ನಡೆಸುವುದೂ ಗೃಹಸ್ಥನ ಧರ್ಮಗಳು. ಚೆನ್ನಾಗಿ ಗುಡಿಸಿ ಸಾರಿಸಿದ ಮನೆಯಲ್ಲಿ ಆಜ್ಯದ ಹೋಮದ ಹೊಗೆಯು ಪಸರಿಸಬೇಕು.

13128045a ಏಷ ದ್ವಿಜಜನೇ ಧರ್ಮೋ ಗಾರ್ಹಸ್ಥ್ಯೋ ಲೋಕಧಾರಣಃ।
13128045c ದ್ವಿಜಾತೀನಾಂ ಸತಾಂ ನಿತ್ಯಂ ಸದೈವೈಷ ಪ್ರವರ್ತತೇ।।

ಇದೇ ಬ್ರಾಹ್ಮಣ ಗೃಹಸ್ಥನ ಲೋಕವನ್ನು ರಕ್ಷಿಸುವ ಧರ್ಮವು. ಉತ್ತಮ ಬ್ರಾಹ್ಮಣರು ನಿತ್ಯವೂ ಹೀಗೆಯೇ ನಡೆದುಕೊಳ್ಳುತ್ತಾರೆ.

13128046a ಯಸ್ತು ಕ್ಷತ್ರಗತೋ ದೇವಿ ತ್ವಯಾ ಧರ್ಮ ಉದೀರಿತಃ।
13128046c ತಮಹಂ ತೇ ಪ್ರವಕ್ಷ್ಯಾಮಿ ತಂ ಮೇ ಶೃಣು ಸಮಾಹಿತಾ।।

ಕ್ಷತ್ರಿಯರ ಧರ್ಮದ ಕುರಿತು ಹೇಳಿದುದನ್ನು ನಿನಗೆ ಹೇಳುತ್ತೇನೆ. ಸಮಾಹಿತಳಾಗಿ ಕೇಳು.

13128047a ಕ್ಷತ್ರಿಯಸ್ಯ ಸ್ಮೃತೋ ಧರ್ಮಃ ಪ್ರಜಾಪಾಲನಮಾದಿತಃ।
13128047c ನಿರ್ದಿಷ್ಟಫಲಭೋಕ್ತಾ ಹಿ ರಾಜಾ ಧರ್ಮೇಣ ಯುಜ್ಯತೇ।।

ಕ್ಷತ್ರಿಯನಿಗೆ ಪ್ರಜಾಪರಿಪಾಲನೆಯು ಪ್ರಥಮ ಧರ್ಮವೆಂದು ಹೇಳಿದ್ದಾರೆ. ಪ್ರಜೆಗಳ ನಿರ್ಧಿಷ್ಟ ಫಲವನ್ನು ಪಡೆದುಕೊಳ್ಳುವ ರಾಜನು ಧರ್ಮದ ಫಲವನ್ನು ಪಡೆದುಕೊಳ್ಳುತ್ತಾನೆ.

913128048a ಪ್ರಜಾಃ ಪಾಲಯತೇ ಯೋ ಹಿ ಧರ್ಮೇಣ ಮನುಜಾಧಿಪಃ।
13128048c ತಸ್ಯ ಧರ್ಮಾರ್ಜಿತಾ ಲೋಕಾಃ ಪ್ರಜಾಪಾಲನಸಂಚಿತಾಃ।।

ಧರ್ಮದಿಂದ ಪ್ರಜೆಗಳನ್ನು ಪಾಲಿಸುವ ಮನುಜಾಧಿಪನು ಪ್ರಜಾಪಾಲನದಿಂದ ಸಂಪಾದಿಸಿ ಕೂಡಿಟ್ಟ ಧರ್ಮದಿಂದ ಉತ್ತಮ ಲೋಕಗಳನ್ನು ಪಡೆದುಕೊಳ್ಳುತ್ತಾನೆ.

13128049a ತತ್ರ ರಾಜ್ಞಃ ಪರೋ ಧರ್ಮೋ ದಮಃ ಸ್ವಾಧ್ಯಾಯ ಏವ ಚ।
13128049c ಅಗ್ನಿಹೋತ್ರಪರಿಸ್ಪಂದೋ ದಾನಾಧ್ಯಯನಮೇವ ಚ।।
13128050a ಯಜ್ಞೋಪವೀತಧಾರಣಂ ಯಜ್ಞೋ ಧರ್ಮಕ್ರಿಯಾಸ್ತಥಾ।
13128050c ಭೃತ್ಯಾನಾಂ ಭರಣಂ ಧರ್ಮಃ ಕೃತೇ ಕರ್ಮಣ್ಯಮೋಘತಾ।।
13128051a ಸಮ್ಯಗ್ದಂಡೇ ಸ್ಥಿತಿರ್ಧರ್ಮೋ ಧರ್ಮೋ ವೇದಕ್ರತುಕ್ರಿಯಾಃ।
13128051c ವ್ಯವಹಾರಸ್ಥಿತಿರ್ಧರ್ಮಃ ಸತ್ಯವಾಕ್ಯರತಿಸ್ತಥಾ।।

ಇಂದ್ರಿಯ ಸಂಯಮ, ಸ್ವಾಧ್ಯಾಯ, ಅಗ್ನಿಹೋತ್ರ, ದಾನ, ಅಧ್ಯಯನ, ಯಜ್ಞೋಪವೀತಧಾರಣ, ಯಜ್ಞ, ಧರ್ಮಕಾರ್ಯಗಳು, ಸೇವಕರನ್ನು ಪೋಷಿಸುವುದು, ಪ್ರಾರಂಭಿಸಿದ ಕಾರ್ಯವನ್ನು ಪೂರ್ಣಗೊಳಿಸುವುದು, ಉಚಿತ ದಂಡನೆಯನ್ನು ವಿಧಿಸುವುದು, ವೈದಿಕ ಯಜ್ಞಾದಿ ಕರ್ಮಗಳ ಅನುಷ್ಠಾನ, ವ್ಯವಹಾರಸ್ಥಿತಿ ಧರ್ಮ, ಮತ್ತು ಸತ್ಯವಾಕ್ಯಗಳನ್ನೇ ಆಡುವುದು – ಇವು ರಾಜನ ಪರಮ ಧರ್ಮಗಳು.

13128052a ಆರ್ತಹಸ್ತಪ್ರದೋ ರಾಜಾ ಪ್ರೇತ್ಯ ಚೇಹ ಮಹೀಯತೇ।
13128052c ಗೋಬ್ರಾಹ್ಮಣಾರ್ಥೇ ವಿಕ್ರಾಂತಃ ಸಂಗ್ರಾಮೇ ನಿಧನಂ ಗತಃ।
13128052e ಅಶ್ವಮೇಧಜಿತಾಽಲ್ಲೋಕಾನ್ಪ್ರಾಪ್ನೋತಿ ತ್ರಿದಿವಾಲಯೇ।।

ಆರ್ತರಾಗಿ ಯಾಚಿಸಿದವರಿಗೆ ಕೊಡುವ ರಾಜನು ಇಹ-ಪರಗಳೆರಡರಲ್ಲೂ ಮೆರೆಯುತ್ತಾನೆ. ಗೋ-ಬ್ರಾಹ್ಮಣರಿಗಾಗಿ ಸಂಗ್ರಾಮದಲ್ಲಿ ನಿಧನ ಹೊಂದುವ ವಿಕ್ರಾಂತನು ಅಶ್ವಮೇಧದಿಂದ ಪಡೆಯುವ ಲೋಕಗಳನ್ನು ತ್ರಿದಿವಾಲಯದಲ್ಲಿ ಪಡೆಯುತ್ತಾನೆ.

1013128053a ವೈಶ್ಯಸ್ಯ ಸತತಂ ಧರ್ಮಃ ಪಾಶುಪಾಲ್ಯಂ ಕೃಷಿಸ್ತಥಾ।
13128053c ಅಗ್ನಿಹೋತ್ರಪರಿಸ್ಪಂದೋ ದಾನಾಧ್ಯಯನಮೇವ ಚ।।
13128054a ವಾಣಿಜ್ಯಂ ಸತ್ಪಥಸ್ಥಾನಮಾತಿಥ್ಯಂ ಪ್ರಶಮೋ ದಮಃ।
13128054c ವಿಪ್ರಾಣಾಂ ಸ್ವಾಗತಂ ತ್ಯಾಗೋ ವೈಶ್ಯಧರ್ಮಃ ಸನಾತನಃ।।

ಪಶುಪಾಲನೆ ಮತ್ತು ಕೃಷಿಗಳು ವೈಶ್ಯನ ಸತತ ಧರ್ಮವು. ಅಗ್ನಿಹೋತ್ರ, ದಾನ, ಅಧ್ಯಯನ, ವಾಣಿಜ್ಯ, ಸತ್ಪಥದಲ್ಲಿರುವುದು, ಆತಿಥ್ಯ, ಶಮ, ದಮ, ಬ್ರಾಹ್ಮಣರ ಸ್ವಾಗತ ಮತ್ತು ತ್ಯಾಗ ಇವು ಸನಾತನ ವೈಶ್ಯಧರ್ಮವು.

13128055a ತಿಲಾನ್ಗಂಧಾನ್ರಸಾಂಶ್ಚೈವ ನ ವಿಕ್ರೀಣೀತ ವೈ ಕ್ವ ಚಿತ್।
13128055c ವಣಿಕ್ಪಥಮುಪಾಸೀನೋ ವೈಶ್ಯಃ ಸತ್ಪಥಮಾಶ್ರಿತಃ।।
13128056a ಸರ್ವಾತಿಥ್ಯಂ ತ್ರಿವರ್ಗಸ್ಯ ಯಥಾಶಕ್ತಿ ಯಥಾರ್ಹತಃ।

ಸತ್ಪಥವನ್ನಾಶ್ರಯಿಸಿ ವಾಣಿಜ್ಯವೃತ್ತಿಯನ್ನು ಅವಲಂಬಿಸಿದ ವೈಶ್ಯನು ಎಳ್ಳು, ಗಂಧಗಳು ಮತ್ತು ರಸಗಳನ್ನು ಮಾರಾಟಮಾಡಬಾರದು. ತ್ರಿವರ್ಗದ11 ಎಲ್ಲ ಅತಿಥಿಗಳನ್ನೂ ಯಥಾಶಕ್ತಿಯಾಗಿ ಮತ್ತು ಯಥಾರ್ಹವಾಗಿ ಸತ್ಕರಿಸಬೇಕು.

13128056c ಶೂದ್ರಧರ್ಮಃ ಪರೋ ನಿತ್ಯಂ ಶುಶ್ರೂಷಾ ಚ ದ್ವಿಜಾತಿಷು।।
13128057a ಸ ಶೂದ್ರಃ ಸಂಶಿತತಪಾಃ ಸತ್ಯಸಂಧೋ ಜಿತೇಂದ್ರಿಯಃ।
13128057c ಶುಶ್ರೂಷನ್ನತಿಥಿಂ ಪ್ರಾಪ್ತಂ ತಪಃ ಸಂಚಿನುತೇ ಮಹತ್।।

ನಿತ್ಯವೂ ದ್ವಿಜಾತಿಯವರ ಶುಶ್ರೂಷೆಯೇ ಶೂದ್ರರ ಪರಮ ಧರ್ಮ. ಸಂಶಿತನೂ, ತಪಸ್ವಿಯೂ, ಸತ್ಯಸಂಧನೂ, ಜಿತೇಂದ್ರಿಯನೂ, ಮನೆಗೆ ಬಂದ ಅತಿಥಿಯ ಶುಶ್ರೂಷೆ ಮಾಡುವ ಶೂದ್ರನು ಮಹಾ ತಪಸ್ಸಿನ ಫಲವನ್ನು ಪಡೆದುಕೊಳ್ಳುತ್ತಾನೆ.

13128058a ತ್ಯಕ್ತಹಿಂಸಃ ಶುಭಾಚಾರೋ ದೇವತಾದ್ವಿಜಪೂಜಕಃ।
13128058c ಶೂದ್ರೋ ಧರ್ಮಫಲೈರಿಷ್ಟೈಃ ಸಂಪ್ರಯುಜ್ಯೇತ ಬುದ್ಧಿಮಾನ್।।

ಹಿಂಸೆಯನ್ನು ತ್ಯಜಿಸಿ ಶುಭಾಚಾರಗಳಿಂದ ದೇವತೆಗಳು ಮತ್ತು ದ್ವಿಜರನ್ನು ಪೂಜಿಸುವ ಬುದ್ಧಿಮಾನ್ ಶೂದ್ರನು ಧರ್ಮದ ಮನೋವಾಂಛಿತ ಫಲವನ್ನು ಪಡೆದುಕೊಳ್ಳುತ್ತಾನೆ.

1213128059a ಏತತ್ತೇ ಸರ್ವಮಾಖ್ಯಾತಂ ಚಾತುರ್ವರ್ಣ್ಯಸ್ಯ ಶೋಭನೇ।
13128059c ಏಕೈಕಸ್ಯೇಹ ಸುಭಗೇ ಕಿಮನ್ಯಚ್ಚ್ರೋತುಮಿಚ್ಚಸಿ।।

ಶೋಭನೇ! ಹೀಗೆ ನಾನು ಒಂದೊಂದಾಗಿ ಚಾತುರ್ವಣ್ಯಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ. ಸುಭಗೇ! ಬೇರೆ ಏನನ್ನು ಕೇಳಲು ಇಚ್ಛಿಸುತ್ತೀಯೆ?”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಉಮಾಮಹೇಶ್ವರಸಂವಾದೇ ಅಷ್ಟಾವಿಂಶತ್ಯಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಉಮಾಮಹೇಶ್ವರಸಂವಾದ ಎನ್ನುವ ನೂರಾಇಪ್ಪತ್ತೆಂಟನೇ ಅಧ್ಯಾಯವು.


  1. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಪುರಾ ಯುಗಾಂತರೇ ಯತ್ನಾದಮೃತಾರ್ಥಂ ಸುರಾಸುರೈಃ। ಬಲವದ್ಭಿರ್ವಿಮಥಿತಶ್ಚಿರಕಾಲಂ ಮಹೋದಧಿಃ।। ರಜ್ಜುನಾ ನಾಗರಾಜೇನ ಮಥ್ಯಮಾನೇ ಮಹಾದಧೌ। ವಿಷಂ ತತ್ರ ಸಮುದ್ಭೂತಂ ಸರ್ವಲೋಕವಿನಾಶನಮ್।। ತದ್ದೃಷ್ಟ್ವಾ ವಿಬುಧಾಸ್ಸರ್ವೇ ತದಾ ವಿಮನಸೋಽಭವನ್। ಗ್ರಸ್ತಂ ಹಿ ತನ್ಮಯಾ ದೇವಿ ಲೋಕಾನಾಮ್ ಹಿತಕಾರಣಾತ್।। ತತ್ಕೃತಾ ನೀಲತಾ ಚಾಸೀತ್ ಕಂಠೇ ಬರ್ಹಿನಿಭಾ ಶುಭೇ। ತದಾಪ್ರಭೃತಿಚೈವಾಹಂ ನೀಲಕಂಠ ಇತಿಸ್ಮೃತಃ।। ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಛಸಿ। ಉಮೋವಾಚ। ನೀಲಕಂಠ ನಮಸ್ತೇಽಸ್ತು ಸರ್ವಲೋಕಸುಖಾವಹ। ಬಹೂನಾಮಾಯುಧಾನಾಂ ಚ ಪಿನಾಕಂ ಧರ್ತುಮಿಚ್ಛಸಿ। ಕಿಮರ್ಥಂ ದೇವದೇವೇಶ ತನ್ಮೇ ಶಂಶಿತುಮರ್ಹಸಿ।। ಮಹೇಶ್ವರ ಉವಾಚ। ಶಾಸ್ತ್ರಾಗಮಂ ತೇ ವಕ್ಷ್ಯಾಮಿ ಶೃಣು ಧರ್ಮ್ಯಂ ಶುಚಿಸ್ಮಿತೇ। ಯುಗಾಂತರೇ ಮಹಾದೇವಿ ಕಣ್ವೋ ನಾಮ ಮಹಾಮುನಿಃ।। ಸ ಹಿ ದಿವ್ಯಾಂ ತಪಶ್ಚರ್ಯಾಂ ಕರ್ತುಮೇವೋಪಚಕ್ರಮೇ। ತಥಾ ತಸ್ಯ ತಪೋ ಘೋರಂ ಚರತಃ ಕಾಲಪರ್ಯಯಾತ್।। ವಲ್ಮೀಕಂ ಪುನರುದ್ಭೂತಂ ತಸೈವ ಶಿರಸಿ ಪ್ರಿಯೇ। ಧರಮಾಣಶ್ಚ ತತ್ಸರ್ವಂ ತಪಶ್ಚರ್ಯಾಂ ತಥಾಕರೋತ್।। ತಸ್ಮೈ ಬ್ರಹ್ಮ ವರಂ ದಾತುಂ ಜಗಾಮ ತಪಸಾರ್ಚಿತಃ। ದತ್ವಾ ತಸ್ಮೈ ವರಂ ದೇವೋ ವೇಣುಂ ದೃಷ್ಟ್ವಾ ತ್ವಚಿಂತಯತ್।। ಲೋಕಕಾರ್ಯಂ ಸಮುದ್ದಿಶ್ಯ ವೇಣುನಾನೇನ ಭಾಮಿನಿ। ಚಿಂತಯಿತ್ವಾ ತಮಾದಾಯ ಕಾಮುಕಾರ್ಥೇ ನ್ಯಯೋಜಯತ್।। ವಿಷ್ಣೋರ್ಮಮ ಚ ಸಾಮರ್ಥ್ಯಂ ಜ್ಞಾತ್ವಾ ಲೋಕಪಿತಾಮಹಃ। ಧನುಷೀ ದ್ವೇ ತದಾ ಪ್ರಾದಾದ್ವಿಷ್ಣವೇ ಮಮ ಚೈವ ತು।। ಪಿನಾಕಂ ನಾಮ ಮೇ ಚಾಪಂ ಶಾಂರ್ಙ್ರಂ ನಾಮ ಹರೇರ್ಧನುಃ। ತೃತೀಯಮವಶೇಷೇಣ ಗಾಂಡೀವಮಭವದ್ಧನುಃ।। ತಚ್ಚ ಸೋಮಾಯ ನಿರ್ದಿಶ್ಯ ಬ್ರಹ್ಮಾ ಲೋಕಂ ಗತಃ ಪುನಃ। ಏತತ್ತೇ ಸರ್ವಮಾಖ್ಯಾತಂ ಶಾಸ್ತ್ರಾಗಮಮನಿಂದಿತೇ।। (ಗೀತಾ ಪ್ರೆಸ್). ↩︎

  2. ಈ ಕಥೆಯು ಇದೇ ಅನುಶಾಸನ ಪರ್ವದ ಅಧ್ಯಾಯ 76ರಲ್ಲಿ ಬ್ರಹ್ಮನು ಇಂದ್ರನಿಗೆ ಹೇಳಿದ್ದಿದು ಬಂದಿದೆ. ↩︎

  3. ಶ್ಮಶಾನ ಶಬ್ಧಕ್ಕೆ ಮಹಾಶ್ಮಶಾನವೆನಿಸಿರುವ ಕಾಶಿಯೆಂದೂ ಮೇಧ್ಯ ಎಂಬ ಶಬ್ಧಕ್ಕೆ ಬ್ರಹ್ಮವೆಂದೂ ವ್ಯಾಖ್ಯಾನಮಾಡಿರುತ್ತಾರೆ. ಮೇಧ್ಯಂಬ್ರಹ್ಮ ತತ್ಪಾಪ್ತಿಕಾಮೈಃ ಇದಂ ಶ್ಮಶಾನಂ ಉಪಾಸ್ಯತೇ – ಬ್ರಹ್ಮತ್ವವನ್ನು ಹೊಂದಲು ಇಚ್ಛಿಸುವವರು ಮಹಾಶ್ಮಶಾನವಾದ ಕಾಶಿಕ್ಷೇತ್ರವನ್ನು ಆಶ್ರಯಿಸುತ್ತಾರೆ. ↩︎

  4. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಅಸ್ಮಾಚ್ಛ್ಮಶಾನಮೇಧ್ಯಂ ತು ನಾಸ್ತಿ ಕಿಂಚಿದನಿಂದಿತೇ। ನಿಸ್ಸಂಪಾತಾನ್ಮನುಷ್ಯಾಣಾಂ ತಸ್ಮಾಚ್ಛುಚಿತಮಂ ಸ್ಮೃತಮ್।। ಸ್ಥಾನಂ ಮೇ ತತ್ರ ವಿಹಿತಂ ವೀರಸ್ಥಾನಮಿತಿ ಪ್ರಿಯೇ। ಕಪಾಲಶತಸಂಪೂರ್ಣಮಭಿರೂಪಂ ಭಯಾನಕಮ್।। ಮಧ್ಯಾಹ್ನೇ ಸಂಧ್ಯಯೋಸ್ತತ್ರ ನಕ್ಷತ್ರೇ ರುದ್ರದೈವತೇ। ಆಯುಷ್ಕಾಮೈರಶುದ್ಧೈರ್ವಾ ನ ಗಂತ್ಯವ್ಯಮಿತಿ ಸ್ಥಿತಿಃ।। ಮದನ್ಯೇನ ನ ಶಕ್ಯಂ ಹಿ ನಿಹಂತಂ ಭೂತಜಂ ಭಯಮ್। ತತ್ರಸ್ಥೋಽಹಂ ಪ್ರಜಾಃ ಸರ್ವಾಃ ಪಾಲಯಾಮಿ ದಿನೇ ದಿನೇ।। ಮನ್ನಿಯೋಗಾದ್ಭೂತಸಂಘಾ ನ ಚ ಘ್ನಂತೀಹ ಕಂಚನ। ತಾಂಸ್ತು ಲೋಕಹಿತಾರ್ಥಾಯ ಶ್ಮಶಾನೇ ರಮಮಾಮ್ಯಹಮ್।। ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಛಸಿ। ಉಮೋವಾಚ। ಭಗವನ್ದೇವದೇವೇಶ ತ್ರಿನೇತ್ರ ವೃಷಭಧ್ವಜ। ಪಿಂಗಲಂ ವಿಕೃತಂ ಭಾತಿ ರೂಪಂ ತೇ ತು ಭಯಾನಕಮ್।। ಭಸ್ಮದಿಗ್ಧಂ ವಿರೂಪಾಕ್ಷಂ ತೀಕ್ಷ್ಣದಂಷ್ಟ್ರಂ ಜಟಾಕುಲಮ್। ವ್ಯಾಘ್ರೋದರತ್ವಕ್ಸಂವೀತಂ ಕಪಿಲಶ್ಮಶ್ರುಸಂತತಮ್।। ರೌದ್ರಂ ಭಯಾನಕಂ ಘೋರಂ ಶೂಲಪಟ್ಟಿಶಸಂಯುತಮ್। ಕಿಮರ್ಥಂ ತ್ವೀದೃಶಂ ರೂಪಂ ತನ್ಮೇ ಶಂಸಿತುಮರ್ಹಸಿ।। ಮಹೇಶ್ವರ ಉವಾಚ। ತದಹಂ ಕಥಯಿಷ್ಯಾಮಿ ಶೃತು ತತ್ತ್ವಂ ಸಮಾಹಿತಾ। ದ್ವಿವಿಧೋ ಲೌಕಿಕೋ ಭಾವಃ ಶೀತಮುಷ್ಣಮಿತಿ ಪ್ರಿಯೇ।। ತಯೋರ್ಹಿ ಗ್ರಥಿತಂ ಸರ್ವಂ ಸೌಮ್ಯಾಗ್ನೇಯಮಿದಂ ಜಗತ್। ಸೌಮ್ಯತ್ವಂ ಸತತಂ ವಿಷ್ಣೌ ಮಯ್ಯಾಗ್ನೇಯಂ ಪ್ರತಿಷ್ಠಿತಮ್।। ಅನೇನ ವಪುಷಾ ನಿತ್ಯಂ ಸರ್ವಲೋಕಾನ್ಬಿಭರ್ಮ್ಯಹಮ್। ರೌದ್ರಾಕೃತಿಂ ವಿರೂಪಾಕ್ಷಂ ಶೂಲಪಟ್ಟಿಶಸಂಯುತಮ್। ಆಗ್ನೇಯಮಿತಿ ಮೇ ರೂಪಂ ದೇವಿ ಲೋಕಹಿತೇ ರತಮ್।। ಯದ್ಯಹಂ ವಿಪರೀತಃ ಸ್ಯಾಮೇತತ್ತ್ಯಕ್ತ್ವಾ ಶುಭಾನನೇ। ತದೈವ ಸರ್ವಲೋಕಾನಾಂ ವಿಪರೀತಂ ಪ್ರವರ್ತತೇ।। ತಸ್ಮಾನ್ಮಯೇದಂ ಧ್ರಿಯತೇ ರೂಪಂ ಲೋಕಹಿತೈಷಿಣಾ। ಇತಿ ತೇ ಕಥಿತಂ ದೇವಿ ಕಿಂ ಭೂಯಃ ಶ್ರೋತುಮಿಚ್ಛಸಿ।। ನಾರದ ಉವಾಚ। ಏವಂ ಬ್ರುವತಿ ದೇವೇಶೇ ವಿಸ್ಮಿತಾ ಪರಮರ್ಷಯಃ। ವಾಗ್ಭಿಃಸಾಂಜಲಿಮಾಲಾಭಿರಭಿತುಷ್ಟುವುರೀಶ್ವರಮ್।। ಋಷಯ ಊಚುಃ। ನಮಃ ಶಂಕರ ಸರ್ವೇಶ ನಮಃ ಸರ್ವಜಗದ್ಗುರೋ। ನಮೋ ದೇವಾದಿದೇವಾಯ ನಮಃ ಶಶಿಕಲಾಧರ।। ನಮೋ ಘೋರತರಾದ್ಘೋರ ನಮೋ ರುದ್ರಾಯ ಶಂಕರ। ನಮಃ ಶಾಂತತರಾಚ್ಛಾಂತಂ ನಮಶ್ಚಂದ್ರಸ್ಯ ಪಾಲಕ।। ನಮಃ ಸೋಮಾಯ ದೇವಾಯ ನಮಸ್ತುಭ್ಯಂ ಚತುರ್ಮುಖ। ನಮೋ ಭೂತಪತೇ ಶಂಭೋ ಜಹ್ನುಕನ್ಯಾಂಬುಶೇಖರ।। ನಮಸ್ತ್ರಿಶೂಲಹಸ್ತಾಯ ಪನ್ನಗಾಭರಣಾಯ ಚ। ನಮೋಽಸ್ತು ವಿಷಮಾಕ್ಷಾಯ ದಕ್ಷಯಜ್ಞಪ್ರದಾಹಕ।। ನಮೋಸ್ತು ಬಹುನೇತ್ರಾಯ ಲೋಕರಕ್ಷಣತತ್ಪರ। ಅಹೋ ದೇವಸ್ಯ ಮಾಹಾತ್ಮ್ಯಮಹೋ ದೇವಸ್ಯ ವೈ ಕೃಪಾ।। ಏವಂ ಧರ್ಮ ಪರತ್ವಂ ಚ ದೇವದೇವಸ್ಯ ಚಾರ್ಹತಿ। (ಗೀತಾ ಪ್ರೆಸ್). ↩︎

  5. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಏತತ್ತೇ ಕಥಯಿಷ್ಯಾಮಿ ಯತ್ತೇ ದೇವಿ ಮನಃಪ್ರಿಯಮ್। ಶೃಣು ತತ್ಸರ್ವಮಖಿಲಂ ಧರ್ಮಂ ವರ್ಣಾಶ್ರಮಾಶ್ರಿತಮ್।। ಬ್ರಾಹ್ಮಣಃ ಕ್ಷತ್ರಿಯಾ ವೈಶ್ಯಾಃ ಶೂದ್ರಾಶ್ಚೇತಿ ಚತುರ್ವಿಧಮ್। ಬ್ರಹ್ಮಣಾ ವಿಹಿತಾಃ ಪೂರ್ವಂ ಲೋಕತಂತ್ರಮಭೀಪ್ಸತಾ।। ಕರ್ಮಾಣಿ ಚ ತದರ್ಹಾಣಿ ಶಾಸ್ತ್ರೇಷು ವಿಹಿತಾನಿ ವೈ। ಯದೀದಮೇಕವರ್ಣಂ ಸ್ಯಾಜ್ಜಗತ್ಸರ್ವಂ ವಿನಶ್ಯತಿ।। ಸಹೈವ ದೇವಿ ವರ್ಣಾನಿ ಚತ್ವಾರಿ ವಿಹಿತಾನ್ಯತಃ। ಮುಖತೋ ಬ್ರಾಹ್ಮಣಾಃ ಸೃಷ್ಟಾತ್ತಸ್ಮಾತ್ತೇ ವಾಗ್ವಿಶಾರದಾಃ।। ಬಾಹುಭ್ಯಾಂ ಕ್ಷತ್ರಿಯಾಃ ಸೃಷ್ಟಾತ್ತಸ್ಮಾತ್ತೇ ಬಾಹುಗರ್ವಿತಾಃ। ಉದರಾದುದ್ಗತಾ ವೈಶ್ಯಾಸ್ತಸ್ಮಾದ್ವಾರೋಪಜೀವಿನಃ।। ಶೂದ್ರಶ್ಚ ಪಾದತಃ ಸೃಷ್ಟಾತ್ತಸ್ಮಾತ್ತೇ ಪರಿಚಾರಕಾಃ। ತೇಷಾಂ ಧರ್ಮಾಂಶ್ಚ ಕರ್ಮಾಣಿ ಶೃಣು ದೇವಿ ಸಮಾಹಿತಾ।। ವಿಪ್ರಾಃ ಕೃತಾ ಭೂಮಿದೇವಾ ಲೋಕಾನಾಂ ಧಾರಣೇ ಕೃತಾಃ। ತೇ ಕೈಶ್ಚಿನ್ನಾವಮಂತವ್ಯಾ ಬ್ರಹ್ಮಣಾ ಹಿತಮಿಚ್ಛುಭಿಃ।। ಯದಿ ತೇ ಬ್ರಹ್ಮಣಾ ನ ಸ್ಯುರ್ದಾನಯೋಗವಹಾಃ ಸದಾ। ಉಭಯೋರ್ಲೋಕಯೋರ್ದೇವಿ ಸ್ಥಿತಿರ್ನಸ್ಯಾತ್ಸಮಾಸತಃ।। ಬ್ರಾಹ್ಮಣಾನ್ಯೋಽವಮನ್ಯೇತ ನಿಂದೇಚ್ಚ ಕ್ರೋಧಯೇಚ್ಚ ವಾ। ಪ್ರಹರೇತ ಹರೇದ್ವಾಪಿ ಧನಂ ತೇಷಾಂ ನರಾಧಮಃ।। ಕಾರಯೇದ್ದೀನಕರ್ಮಾಣಿ ಕಾಮಲೋಭವಿಮೋಹನಾತ್। ಸ ಚ ಮಾಮವಮನ್ಯೇತ ಮಾಂ ಕ್ರೋಧಯತಿ ನಿಂದತಿ।। ಮಾಮೇವ ಪ್ರಹರೇನ್ಮೂಢೋ ಮದ್ಧನಸ್ಯಾಪಹಾರಕಃ। ಮಾಮೇವ ಪ್ರೇಷಣಂ ಕೃತ್ವಾ ನಿಂದತೇ ಮೂಢಚೇತನಃ।। ಸ್ವಾಧ್ಯಾಯೋ ಯಜನಂ ದಾನಂ ತಸ್ಯ ಧರ್ಮ ಇತಿ ಸ್ಥಿತಿಃ। ಕರ್ಮಾಣಧ್ಯಾಪನಂ ಚೈವ ಯಾಜನಂ ಚ ಪ್ರತಿಗ್ರಹಃ।। ಸತ್ಯಂ ಶಾಂತಿಸ್ತಪಃ ಶೌಚಂ ತಸ್ಯ ಧರ್ಮಃ ಸನಾತನಃ। ವಿಕ್ರಯೋ ರಸಧಾನ್ಯಾನಾಂ ಬ್ರಾಹ್ಮಣಸ್ಯ ವಿಗರ್ಹಿತಃ।। ತಪ ಏವ ಸದಾ ಧರ್ಮೋ ಬ್ರಾಹ್ಮಣಸ್ಯ ನ ಸಂಶಯಃ। ಸ ತು ಧರ್ಮಾರ್ಥಮುತ್ಪನ್ನಃ ಪೂರ್ವಂ ಧಾತ್ರಾ ತಪೋಬಲಾತ್।। (ಗೀತಾ ಪ್ರೆಸ್). ↩︎

  6. ಪರಮಾತ್ಮನ ಸಮೀಪದಲ್ಲಿ ವಾಸಮಾಡುವುದು ಎಂಬ ಅರ್ಥವೂ ಉಪವಾಸ ಶಬ್ಧಕ್ಕಿದೆ. ಉಪಾವೃತಸ್ಯ ಪಾಪೇಭ್ಯೋ ಯಶ್ಚ ವಾಸೋ ಗುಣೈಃ ಸಹ। ಉಪವಾಸಃ ಸ ವಿಜ್ಞೇಯಃ ಸರ್ವಭೋಗವಿವರ್ಜಿತಃ।। ಅರ್ಥಾತ್ ಪಾಪಕರ್ಮಗಳನ್ನು ಬಿಟ್ಟು ಪ್ರಾಣಿದಯ, ಸಹನೆ, ದ್ವೇಷಾಸೂಯಪರಿತ್ಯಾಗ, ಅಕಾರ್ಪಣ್ಯ, ನಿಃಸ್ಪೃಹತೆ ಇತ್ಯಾದಿ ಗುಣಗಳನ್ನು ಹೊಂದಿ ಸಮಸ್ತ ಭೋಗವಸ್ತುಗಳನ್ನೂ ತ್ಯಾಗಮಾಡುವುದೇ ಉಪವಾಸ. ↩︎

  7. ಭಿಕ್ಷಾಟನೆಯನ್ನು ಮಾಡಿ ಸಂಗ್ರಹಿಸಿದ ಅನ್ನವನ್ನು ಗುರುವಿಗೆ ಸಮರ್ಪಿಸಿ ಅವರ ಅನುಮತಿಯನ್ನು ಪಡೆದು ತಿನ್ನುವುದು. ↩︎

  8. ತನ್ನ ಪತ್ನಿಯಲ್ಲಿ ಮಾತ್ರ ಅವಳು ಋತುಮತಿಯಾಗಿದ್ದಾಗ ಮಾತ್ರ ಸಂಭೋಗಮಾಡುವುದು. ↩︎

  9. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ಕ್ಷತ್ರಿಯಾಸ್ತು ತತೋ ದೇವಿ ದ್ವಿಜಾನಾಂ ಪಾಲನೇ ಸ್ಮೃತಾಃ। ಯದಿ ನ ಕ್ಷತ್ರಿಯೋ ಲೋಕೇ ಜಗತ್ಸ್ಯಾದಧರೋತ್ತರಮ್।। ರಕ್ಷಣಾತ್ ಕ್ಷತ್ರಿಯೈರೇವ ಜಗದ್ಭವತಿ ಶಾಶ್ವತಮ್। ಸಮ್ಯಗ್ಗುಣಹಿತೋ ಧರ್ಮೋ ಧರ್ಮಃ ಪೌರಹಿತಕ್ರಿಯಾ। ವ್ಯವಹಾರಸ್ಥಿತಿರ್ನಿತ್ಯಂ ಗುಣಯುಕ್ತೋ ಮಹೀಪತಿಃ।। (ಗೀತಾ ಪ್ರೆಸ್). ↩︎

  10. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ತಥೈವ ದೇವಿ ವೈಶ್ಯಾಶ್ಚ ಲೋಕಯಾತ್ರಾಹಿತಾಸ್ಮೃತಾಃ। ಅನ್ಯೇ ತಾನುಪಜೀವಂತಿ ಪ್ರತ್ಯಕ್ಷಫಲದಾ ಹಿ ತೇ।। ಯದಿ ನ ಸ್ಯುಸ್ತಥಾ ವೈಶ್ಯಾ ನ ಭವೇಯುಸ್ತಥಾ ಪರೇ। (ಗೀತಾ ಪ್ರೆಸ್). ↩︎

  11. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು ↩︎

  12. ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಅಧಿಕ ಶ್ಲೋಕಗಳಿವೆ: ತಥೈವ ಶೂದ್ರಾ ವಿಹಿತಾಃ ಸರ್ವಧರ್ಮಪ್ರಸಾಧಕಾಃ। ಶೂದ್ರಾಶ್ಚ ಯದಿ ತೇ ನ ಸ್ಯುಃ ಕರ್ಮಕರ್ತಾ ನ ವಿದ್ಯತೇ।। ತ್ರಯಃ ಪೂರ್ವೇ ಶೂದ್ರಮೂಲಾಃ ಸರ್ವೇ ಕರ್ಮಕರಾಃ ಸ್ಮೃತಾಃ। ಬ್ರಾಹ್ಮಣಾದಿಷು ಶುಶ್ರೂಷಾ ದಾಸಧರ್ಮ ಇತಿ ಸ್ಮೃತಃ।। ವಾರ್ತಾ ಚ ಕಾರುಕರ್ಮಾಣಿ ಶಿಲ್ಪಂ ನಾಟ್ಯಂ ತಥೈವ ಚ। ಅಹಿಂಸಕಃ ಶುಭಾಚಾರೋ ದೈವತದ್ವಿಜವಂದಕಃ।। ಶೂದ್ರೋ ಧರ್ಮಫಲೈರಿಷ್ಟೈಃ ಸ್ವಧರ್ಮೇಣೋಪಯುಜ್ಯತೇ। ಏವಮಾದಿ ತಥಾನ್ಯಚ್ಚ ಶೂದ್ರಧರ್ಮ ಇತಿ ಸ್ಮೃತಃ।। (ಗೀತಾ ಪ್ರೆಸ್). ↩︎