ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 89
ಸಾರ
ವಿಭಿನ್ನ ನಕ್ಷತ್ರಗಳಲ್ಲಿ ಶ್ರಾದ್ಧಮಾಡುವುದರಿಂದ ಪ್ರಾಪ್ತವಾಗುವ ಫಲಗಳ ವರ್ಣನೆ: ಯಮ-ಶಶಬಿಂದು ಸಂವಾದ (1-15).
13089001 ಭೀಷ್ಮ ಉವಾಚ।
13089001a ಯಮಸ್ತು ಯಾನಿ ಶ್ರಾದ್ಧಾನಿ ಪ್ರೋವಾಚ ಶಶಬಿಂದವೇ।
13089001c ತಾನಿ ಮೇ ಶೃಣು ಕಾಮ್ಯಾನಿ ನಕ್ಷತ್ರೇಷು ಪೃಥಕ್ ಪೃಥಕ್।।
ಭೀಷ್ಮನು ಹೇಳಿದನು: “ಯಮನಾದರೋ ಶಶಬಿಂದುವಿಗೆ ಬೇರೆ ಬೇರೆ ನಕ್ಷತ್ರಗಳಲ್ಲಿ ಮಾಡಿದ ಶ್ರಾದ್ಧಗಳು ಯಾವ ಕಾಮನೆಗಳನ್ನು ಪೂರೈಸುತ್ತವೆ ಎನ್ನುವುದನ್ನು ಹೇಳಿದನು.
13089002a ಶ್ರಾದ್ಧಂ ಯಃ ಕೃತ್ತಿಕಾಯೋಗೇ ಕುರ್ವೀತ ಸತತಂ ನರಃ।
13089002c ಅಗ್ನೀನಾಧಾಯ ಸಾಪತ್ಯೋ ಯಜೇತ ವಿಗತಜ್ವರಃ।।
ಕೃತ್ತಿಕಾ ಯೋಗ1ದಲ್ಲಿ ಅಗ್ನಿಯನ್ನು ಸ್ಥಾಪಿಸಿ ಪುತ್ರಸಹಿತ ಪಿತೃಗಳಿಗೆ ಶ್ರಾದ್ಧವನ್ನು ಯಜನ ಮಾಡುವ ನರನು ಚಿಂತೆ-ರೋಗಗಳಿಂದ ವಿಮುಕ್ತನಾಗುತ್ತಾನೆ2.
13089003a ಅಪತ್ಯಕಾಮೋ ರೋಹಿಣ್ಯಾಮೋಜಸ್ಕಾಮೋ ಮೃಗೋತ್ತಮೇ।
13089003c ಕ್ರೂರಕರ್ಮಾ ದದಚ್ಚ್ರಾದ್ಧಮಾರ್ದ್ರಾಯಾಂ ಮಾನವೋ ಭವೇತ್।।
ಸಂತಾನವನ್ನು ಅಪೇಕ್ಷಿಸುವವನು ರೋಹಿಣೀ ನಕ್ಷತ್ರದಲ್ಲಿಯೂ, ಓಜಸ್ಸನ್ನು ಬಯಸುವವನು ಉತ್ತಮ ಮೃಗಾ ನಕ್ಷತ್ರದಲ್ಲಿಯೂ ಶ್ರಾದ್ಧಮಾಡಬೇಕು. ಆರ್ದ್ರಾನಕ್ಷತ್ರದಲ್ಲಿ ಶ್ರಾದ್ಧಮಾಡುವ ಮಾನವನು ಕ್ರೂರಕರ್ಮಿಯಾಗುತ್ತಾನೆ.
13089004a ಕೃಷಿಭಾಗೀ ಭವೇನ್ಮರ್ತ್ಯಃ3 ಕುರ್ವನ್ ಶ್ರಾದ್ಧಂ ಪುನರ್ವಸೌ।
13089004c ಪುಷ್ಟಿಕಾಮೋಽಥ ಪುಷ್ಯೇಣ ಶ್ರಾದ್ಧಮೀಹೇತ ಮಾನವಃ।।
ಪುನರ್ವಸು ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡಿ ಕೃಷೀಭಾಗಿಯಾಗುತ್ತಾನೆ. ಪುಷ್ಟಿಯನ್ನು ಬಯಸುವ ಮಾನವನು ಪುಷ್ಯಾ ನಕ್ಷತ್ರದಲ್ಲಿ ಶ್ರಾದ್ಧವನ್ನು ಮಾಡಬೇಕು.
13089005a ಆಶ್ಲೇಷಾಯಾಂ ದದಚ್ಚ್ರಾದ್ಧಂ ವೀರಾನ್ಪುತ್ರಾನ್ ಪ್ರಜಾಯತೇ।
13089005c ಜ್ಞಾತೀನಾಂ ತು ಭವೇಚ್ಚ್ರೇಷ್ಠೋ ಮಘಾಸು ಶ್ರಾದ್ಧಮಾವಪನ್।।
ಆಶ್ಲೇಷಾ ನಕ್ಷತ್ರದಲ್ಲಿ ಶ್ರಾದ್ಧವನ್ನಿತ್ತವನು ವೀರಪುತ್ರರನ್ನು ಹುಟ್ಟಿಸುತ್ತಾನೆ. ಮಘಾ ನಕ್ಷತ್ರದಲ್ಲಿ ಶ್ರಾದ್ಧಮಾಡಿ ಜ್ಞಾತಿಬಾಂಧವರಲ್ಲಿ ಶ್ರೇಷ್ಠನಾಗುತ್ತಾನೆ.
13089006a ಫಲ್ಗುನೀಷು ದದಚ್ಚ್ರಾದ್ಧಂ ಸುಭಗಃ ಶ್ರಾದ್ಧದೋ ಭವೇತ್।
13089006c ಅಪತ್ಯಭಾಗುತ್ತರಾಸು ಹಸ್ತೇನ ಫಲಭಾಗ್ಭವೇತ್।।
ಪೂರ್ವಫಾಲ್ಗುನೀ ನಕ್ಷತ್ರದಲ್ಲಿ ಮಾಡಿದ ಶ್ರಾದ್ಧದಿಂದ ಭಾಗ್ಯಶಾಲಿಯಾಗುತ್ತಾನೆ. ಉತ್ತರಫಾಲ್ಗುನೀ ನಕ್ಷತ್ರದಲ್ಲಿ ಶ್ರಾದ್ಧಮಾಡಿದವನು ಪುತ್ರವಂತನಾಗುತ್ತಾನೆ. ಹಸ್ತಾನಕ್ಷತ್ರದಲ್ಲಿ ಶ್ರಾದ್ಧಮಾಡಿದವನು ಅಭೀಷ್ಟ ಫಲಭಾಗಿಯಾಗುತ್ತಾನೆ.
13089007a ಚಿತ್ರಾಯಾಂ ತು ದದಚ್ಚ್ರಾದ್ಧಂ ಲಭೇದ್ರೂಪವತಃ ಸುತಾನ್।
13089007c ಸ್ವಾತಿಯೋಗೇ ಪಿತೄನರ್ಚ್ಯ ವಾಣಿಜ್ಯಮುಪಜೀವತಿ।।
ಚಿತ್ರಾನಕ್ಷತ್ರದಲ್ಲಿ ಶ್ರಾದ್ಧವನ್ನಿತ್ತವನಿಗೆ ರೂಪವಂತ ಸುತರು ದೊರೆಯುತ್ತಾರೆ. ಸ್ವಾತೀನಕ್ಷತ್ರದಲ್ಲಿ ಪಿತೃಗಳನ್ನು ಅರ್ಚಿಸಿದವನು ವಾಣಿಜ್ಯವೃತ್ತಿಯಿಂದ ಜೀವಿಸುತ್ತಾನೆ.
13089008a ಬಹುಪುತ್ರೋ ವಿಶಾಖಾಸು ಪಿತ್ರ್ಯಮೀಹನ್ ಭವೇನ್ನರಃ।
13089008c ಅನುರಾಧಾಸು ಕುರ್ವಾಣೋ ರಾಜಚಕ್ರಂ ಪ್ರವರ್ತಯೇತ್।।
ವಿಶಾಖಾ ನಕ್ಷತ್ರದಲ್ಲಿ ಪಿತೃಶ್ರಾದ್ಧವನ್ನು ಮಾಡಿದ ನರನು ಬಹುಪುತ್ರನಾಗುತ್ತಾನೆ. ಅನುರಾಧಾ ನಕ್ಷತ್ರದಲ್ಲಿ ಮಾಡುವವನು ರಾಜಚಕ್ರವನ್ನು ನಡೆಸುತ್ತಾನೆ4.
13089009a ಆದಿಪತ್ಯಂ ವ್ರಜೇನ್ಮರ್ತ್ಯೋ ಜ್ಯೇಷ್ಠಾಯಾಮಪವರ್ಜಯನ್।
13089009c ನರಃ ಕುರುಕುಲಶ್ರೇಷ್ಠ ಶ್ರದ್ಧಾದಮಪುರಃಸರಃ5।।
ಕುರುಕುಲಶ್ರೇಷ್ಠ! ಜ್ಯೇಷ್ಠಾನಕ್ಷತ್ರದಲ್ಲಿ ಶ್ರದ್ಧೆ-ಇಂದ್ರಿಯಸಂಯಮಗಳಿಂದ ಪಿಂಡಪ್ರದಾನಮಾಡುವ ಮನುಷ್ಯನು ಆದಿಪತ್ಯವನ್ನು ಪಡೆಯುತ್ತಾನೆ.
13089010a ಮೂಲೇ ತ್ವಾರೋಗ್ಯಮರ್ಚ್ಚೇತ ಯಶೋಽಷಾಢಾಸ್ವನುತ್ತಮಮ್।
13089010c ಉತ್ತರಾಸು ತ್ವಷಾಢಾಸು ವೀತಶೋಕಶ್ಚರೇನ್ಮಹೀಮ್।।
ಮೂಲಾನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಆರೋಗ್ಯವಂತನಾಗುತ್ತಾನೆ. ಪೂರ್ವಾಷಾಢಾ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಉತ್ತಮ ಯಶಸ್ಸನ್ನು ಪಡೆಯುತ್ತಾನೆ. ಉತ್ತರಾಷಾಢಾ ನಕ್ಷರದಲ್ಲಿ ಶ್ರಾದ್ಧಮಾಡುವವನು ಶೋಕರಹಿತನಾಗಿ ಪೃಥ್ವಿಯಲ್ಲಿ ಸಂಚರಿಸುತ್ತಾನೆ.
13089011a ಶ್ರಾದ್ಧಂ ತ್ವಭಿಜಿತಾ ಕುರ್ವನ್ವಿದ್ಯಾಂ ಶ್ರೇಷ್ಠಾಮವಾಪ್ನುಯಾತ್6।
13089011c ಶ್ರವಣೇ ತು ದದಚ್ಚ್ರಾದ್ಧಂ ಪ್ರೇತ್ಯ ಗಚ್ಚೇತ್ಪರಾಂ ಗತಿಮ್7।।
ಅಭಿಜಿತ್ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಶ್ರೇಷ್ಠವಿದ್ಯೆಯನ್ನು ಪಡೆಯುತ್ತಾನೆ. ಶ್ರವಣಾ ನಕ್ಷತ್ರದಲ್ಲಿ ಶ್ರಾದ್ಧವನ್ನು ನೀಡಿದವನು ಮರಣಾನಂತರ ಪರಮ ಗತಿಯಲ್ಲಿ ಹೋಗುತ್ತಾನೆ.
13089012a ರಾಜ್ಯಭಾಗೀ ಧನಿಷ್ಠಾಯಾಂ ಪ್ರಾಪ್ನುಯಾನ್ನಾಪದಂ8 ನರಃ।
13089012c ನಕ್ಷತ್ರೇ ವಾರುಣೇ ಕುರ್ವನ್ ಭಿಷಕ್ಸಿದ್ಧಿಮವಾಪ್ನುಯಾತ್।।
ಧನಿಷ್ಠಾನಕ್ಷತ್ರದಲ್ಲಿ ಶ್ರಾದ್ಧಮಾಡಿದ ನರನು ರಾಜ್ಯಭಾಗಿಯಾಗುತ್ತಾನೆ. ವಾರುಣೀ9 ನಕ್ಷತ್ರದಲ್ಲಿ ಶ್ರಾದ್ಧಮಾಡಿದವನು ವೈದ್ಯನಾಗಿ ಸಿದ್ಧಿಯನ್ನು ಪಡೆಯುತ್ತಾನೆ.
13089013a ಪೂರ್ವಪ್ರೋಷ್ಠಪದಾಃ ಕುರ್ವನ್ಬಹು ವಿಂದೇದಜಾವಿಕಮ್।
13089013c ಉತ್ತರಾಸ್ವಥ ಕುರ್ವಾಣೋ ವಿಂದತೇ ಗಾಃ ಸಹಸ್ರಶಃ।।
ಪೂರ್ವಭಾದ್ರಪದ ನಕ್ಷತ್ರದಲ್ಲಿ ಮಾಡುವವನು ಬಹುಸಂಖ್ಯಾತ ಆಡು-ಕುರಿಗಳನ್ನು ಹೊಂದುತ್ತಾನೆ. ಉತ್ತರ ಭಾದ್ರಪದದಲ್ಲಿ ಮಾಡುವವನು ಸಹಸ್ರಾರು ಗೋವುಗಳನ್ನು ಹೊಂದುತ್ತಾನೆ.
13089014a ಬಹುರೂಪ್ಯಕೃತಂ10 ವಿತ್ತಂ ವಿಂದತೇ ರೇವತೀಂ ಶ್ರಿತಃ।
13089014c ಅಶ್ವಾಂಶ್ಚಾಶ್ವಯುಜೇ ವೇತ್ತಿ ಭರಣೀಷ್ವಾಯುರುತ್ತಮಮ್।।
ರೇವತೀ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಬೆಳ್ಳಿಯ ಸಂಪತ್ತನ್ನು ಪಡೆಯುತ್ತಾನೆ. ಅಶ್ವಿನೀ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಕುದುರೆಗಳನ್ನು ಹೊಂದುತ್ತಾನೆ. ಭರಣೀ ನಕ್ಷತ್ರದಲ್ಲಿ ಶ್ರಾದ್ಧಮಾಡುವವನು ಉತ್ತಮ ಆಯುಷ್ಯವನ್ನು ಹೊಂದುತ್ತಾನೆ.”
13089015a ಇಮಂ ಶ್ರಾದ್ಧವಿಧಿಂ ಶ್ರುತ್ವಾ ಶಶಬಿಂದುಸ್ತಥಾಕರೋತ್।
13089015c ಅಕ್ಲೇಶೇನಾಜಯಚ್ಚಾಪಿ ಮಹೀಂ ಸೋಽನುಶಶಾಸ ಹ।।
ಈ ಶ್ರಾದ್ಧವಿಧಿಯನ್ನು ಕೇಳಿ ಶಶಬಿಂದುವು ಹಾಗೆಯೇ ಮಾಡಿ, ಸ್ವಲ್ಪವೂ ಕ್ಲೇಶವಿಲ್ಲದೇ ಪೃಥ್ವಿಯನ್ನು ಜಯಿಸಿ ಆಳಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಶ್ರಾದ್ಧಕಲ್ಪೇ ಏಕೋನನವತಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಶ್ರಾದ್ಧಕಲ್ಪ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.
-
ಕೃತ್ತಿಕಾ ನಕ್ಷತ್ರವಿದ್ದ ದಿನದಲ್ಲಿ (ಭಾರತ ದರ್ಶನ). ↩︎
-
ಕೃತ್ತಿಕಾ ನಕ್ಷತ್ರವಿದ್ದ ದಿನದಲ್ಲಿ ಶ್ರಾದ್ಧಮಾಡುವವನು ಪುತ್ರವಂತನಾಗಿ, ರೋಗಗಳಿಂದಲೂ ಚಿಂತೆಗಳಿಂದಲೂ ವಿಮುಕ್ತನಾಗಿ ಅಗ್ನ್ಯಾಧಾನವನ್ನು ಮಾಡಿ ಯಾಗಗಳನ್ನು ಮಾಡುತ್ತಾನೆ (ಭಾರತ ದರ್ಶನ). ↩︎
-
ಧನಕಾಮೋ ಭವೇನ್ಮರ್ತ್ಯಃ (ಗೀತಾ ಪ್ರೆಸ್). ↩︎
-
ರಾಜ್ಯಮಂಡಲದ ಶಾಸಕನಾಗುತ್ತಾನೆ (ಭಾರತ ದರ್ಶನ). ↩︎
-
ಋದ್ಧೋ ದಮಪುರಃಸರಃ। (ಭಾರತ ದರ್ಶನ). ↩︎
-
ಭಿಷಕ್ಸಿದ್ಧಿಮಾಪ್ನುಯಾತ್ (ಭಾರತ ದರ್ಶನ). ↩︎
-
ಗಚ್ಛೇತ್ಸ ಸದ್ಗತಿಮ್। (ಭಾರತ ದರ್ಶನ). ↩︎
-
ನಿಯತಂ (ಭಾರತ ದರ್ಶನ). ↩︎
-
ಶತಭಿಷಾ ನಕ್ಷತ್ರ (ಭಾರತ ದರ್ಶನ). ↩︎
-
ಬಹುಕುಪ್ಯಕೃತಂ (ಭಾರತ ದರ್ಶನ). ↩︎