ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 59
ಸಾರ
ಅಯಾಚಕ ಧರ್ಮಾತ್ಮಾ, ನಿರ್ಧನ ಮತ್ತು ಗುಣವಂತನಿಗೆ ದಾನಮಾಡುವುದರ ವಿಶೇಷ ಫಲ (1-19).
13059001 ಯುಧಿಷ್ಠಿರ ಉವಾಚ।
13059001a ಯೌ ತು ಸ್ಯಾತಾಂ ಚರಣೇನೋಪಪನ್ನೌ ಯೌ ವಿದ್ಯಯಾ ಸದೃಶೌ ಜನ್ಮನಾ ಚ।
13059001c ತಾಭ್ಯಾಂ ದಾನಂ ಕತರಸ್ಮೈ ವಿಶಿಷ್ಟಮ್ ಅಯಾಚಮಾನಾಯ ಚ ಯಾಚತೇ ಚ।।
ಯುಧಿಷ್ಠಿರನು ಹೇಳಿದನು: “ಉತ್ತಮ ಆಚರಣೆ, ವಿದ್ಯೆ ಮತ್ತು ಕುಲದಲ್ಲಿ ಒಂದೇ ಸಮಾನರಾಗಿರುವ ಇಬ್ಬರು ದ್ವಿಜರಲ್ಲಿ ಒಬ್ಬನು ಯಾಚಕ ಮತ್ತು ಇನ್ನೊಬ್ಬನು ಯಾಚಕನಲ್ಲದಿದ್ದರೆ, ಅವರಿಬ್ಬರಲ್ಲಿ ಯಾರಿಗೆ ದಾನ ಮಾಡುವುದರಿಂದ ವಿಶಿಷ್ಟ ಫಲವು ಪ್ರಾಪ್ತವಾಗುತ್ತದೆ?”
13059002 ಭೀಷ್ಮ ಉವಾಚ।
13059002a ಶ್ರೇಯೋ ವೈ ಯಾಚತಃ ಪಾರ್ಥ ದತ್ತಮಾಹುರಯಾಚತೇ।
13059002c ಅರ್ಹತ್ತಮೋ ವೈ ಧೃತಿಮಾನ್ಕೃಪಣಾದಧೃತಾತ್ಮನಃ।।
ಭೀಷ್ಮನು ಹೇಳಿದನು: “ಪಾರ್ಥ! ಯಾಚಕನಿಗಿಂತ ಯಾಚಕನಲ್ಲದವನಿಗೆ ಕೊಡುವ ದಾನವೇ ಶ್ರೇಷ್ಠ ಮತ್ತು ಕಲ್ಯಾಣಕಾರೀ ಎಂದು ಹೇಳುತ್ತಾರೆ. ಹಾಗೆಯೇ ಅಧೀರ ಹೃದಯಿ ಕೃಪಣನ ಕುರಿತು ಧೈರ್ಯತಾಳುವವನೇ ವಿಶೇಷ ಸಮ್ಮಾನದ ಪಾತ್ರನಾಗುತ್ತಾನೆ.
13059003a ಕ್ಷತ್ರಿಯೋ ರಕ್ಷಣಧೃತಿರ್ಬ್ರಾಹ್ಮಣೋಽನರ್ಥನಾಧೃತಿಃ।
13059003c ಬ್ರಾಹ್ಮಣೋ ಧೃತಿಮಾನ್ವಿದ್ವಾನ್ದೇವಾನ್ಪ್ರೀಣಾತಿ ತುಷ್ಟಿಮಾನ್।।
ರಕ್ಷಣಾ ಕಾರ್ಯದಲ್ಲಿ ಧೈರ್ಯವನ್ನು ತಾಳುವ ಕ್ಷತ್ರಿಯ ಮತ್ತು ಯಾಚನೆಯಲ್ಲಿ ದೃಢತೆಯನ್ನು ತಾಳುವ ಬ್ರಾಹ್ಮಣರು ಶ್ರೇಷ್ಠರು. ಯಾವ ಬ್ರಾಹ್ಮಣನು ಧೀರ, ವಿದ್ವಾನ್ ಮತ್ತು ಸಂತೋಷಿಯಾಗಿರುತ್ತಾನೋ ಅವನು ತನ್ನ ವ್ಯವಹಾರಗಳಿಂದ ದೇವತೆಗಳನ್ನು ಸಂತುಷ್ಟಗೊಳಿಸಿರುತ್ತಾನೆ.
13059004a ಯಾಚ್ಛಾಮಾಹುರನೀಶಸ್ಯ ಅಭಿಹಾರಂ ಚ ಭಾರತ।
13059004c ಉದ್ವೇಜಯತಿ ಯಾಚನ್ ಹಿ ಸದಾ ಭೂತಾನಿ ದಸ್ಯುವತ್।।
ಭಾರತ! ದರಿದ್ರನ ಯಾಚನೆಯು ಅವನಿಗೆ ಅವನ ಮೇಲಿನ ತಿರಸ್ಕಾರ ಭಾವನೆಯ ಕಾರಣದಿಂದ ಎಂಬ ಅಭಿಪ್ರಾಯವಿದೆ. ಏಕೆಂದರೆ ಯಾಚಕನು ದಸ್ಯುಗಳಂತೆ ಸದಾ ಜನರನ್ನು ಉದ್ವಿಗ್ನರನ್ನಾಗಿಸುತ್ತಾರೆ.
13059005a ಮ್ರಿಯತೇ ಯಾಚಮಾನೋ ವೈ ತಮನು ಮ್ರಿಯತೇ ದದತ್।
13059005c ದದತ್ಸಂಜೀವಯತ್ಯೇನಮಾತ್ಮಾನಂ ಚ ಯುಧಿಷ್ಠಿರ।।
ಯುಧಿಷ್ಠಿರ! ಯಾಚಕನು ಸತ್ತುಹೋಗುತ್ತಾನೆ. ಆದರೆ ದಾನಿಯು ಎಂದೂ ಸಾಯುವುದಿಲ್ಲ. ದಾನಿಯು ಆ ಯಾಚಕನನ್ನೂ ಮತ್ತು ತನ್ನನ್ನೂ ಜೀವಿತರನ್ನಾಗಿರಿಸುತ್ತಾನೆ.
13059006a ಆನೃಶಂಸ್ಯಂ ಪರೋ ಧರ್ಮೋ ಯಾಚತೇ ಯತ್ಪ್ರದೀಯತೇ।
13059006c ಅಯಾಚತಃ ಸೀದಮಾನಾನ್ಸರ್ವೋಪಾಯೈರ್ನಿಮಂತ್ರಯ।।
ಯಾಚಕನಿಗೆ ದಾನಮಾಡುವುದು ದಯಾರೂಪದ ಪರಮ ಧರ್ಮವು. ಆದರೆ ಕ್ಲೇಶಗಳನ್ನು ಅನುಭವಿಸಿಯೂ ಯಾಚನೆ ಮಾಡದವರನ್ನು ಪತ್ಯೇಕ ಉಪಾಯಗಳಿಂದ ತಮ್ಮ ಬಳಿ ಕರೆಯಿಸಿಕೊಂಡು ದಾನಮಾಡಬೇಕು.
13059007a ಯದಿ ವೈ ತಾದೃಶಾ ರಾಷ್ಟ್ರೇ ವಸೇಯುಸ್ತೇ ದ್ವಿಜೋತ್ತಮಾಃ।
13059007c ಭಸ್ಮಚ್ಚನ್ನಾನಿವಾಗ್ನೀಂಸ್ತಾನ್ಬುಧ್ಯೇಥಾಸ್ತ್ವಂ ಪ್ರಯತ್ನತಃ।।
ಇಂತಹ ಬ್ರಾಹ್ಮಣೋತ್ತಮರು ನಿನ್ನ ರಾಷ್ಟ್ರದಲ್ಲಿ ವಾಸಿಸುತ್ತಿದ್ದರೆ ಅವರು ಬೂದಿಮುಚ್ಚಿದ ಅಗ್ನಿಯಂತಿರುತ್ತಾರೆ. ಪ್ರಯತ್ನಪೂರ್ವಕ ಅಂಥವರನ್ನು ನೀನು ಪತ್ತೇ ಹಚ್ಚಬೇಕು.
13059008a ತಪಸಾ ದೀಪ್ಯಮಾನಾಸ್ತೇ ದಹೇಯುಃ ಪೃಥಿವೀಮಪಿ।
13059008c ಪೂಜ್ಯಾ ಹಿ ಜ್ಞಾನವಿಜ್ಞಾನತಪೋಯೋಗಸಮನ್ವಿತಾಃ।।
ತಪಸ್ಸಿನಿಂದ ಬೆಳಗುತ್ತಿರುವ ಅವರು ಪೃಥ್ವಿಯನ್ನೇ ಸುಟ್ಟುಬಿಡಬಲ್ಲರು. ಏಕೆಂದರೆ ಜ್ಞಾನ-ವಿಜ್ಞಾನ-ತಪೋಯೋಗಸಮನ್ವಿತರಾದ ಅವರು ಪೂಜನೀಯರು.
13059009a ತೇಭ್ಯಃ ಪೂಜಾಂ ಪ್ರಯುಂಜೀಥಾ ಬ್ರಾಹ್ಮಣೇಭ್ಯಃ ಪರಂತಪ।
13059009c ದದದ್ಬಹುವಿಧಾನ್ದಾಯಾನುಪಚ್ಚಂದಾನಯಾಚತಾಮ್।।
ಪರಂತಪ! ಅಂಥಹ ಬ್ರಾಹ್ಮಣರನ್ನು ನೀನು ನಿತ್ಯವೂ ಪೂಜಿಸಬೇಕು. ಯಾಚಿಸದೇ ಇರುವವರ ಬಳಿ ನೀನೇ ಹೋಗಿ ನಾನಾ ವಿಧದ ಪದಾರ್ಥಗಳನ್ನು ಕೊಡಬೇಕು.
13059010a ಯದಗ್ನಿಹೋತ್ರೇ ಸುಹುತೇ ಸಾಯಂಪ್ರಾತರ್ಭವೇತ್ಫಲಮ್।
13059010c ವಿದ್ಯಾವೇದವ್ರತವತಿ ತದ್ದಾನಫಲಮುಚ್ಯತೇ।।
ಸಾಯಂಕಾಲ-ಪ್ರಾತಃಕಾಲಗಳಲ್ಲಿ ಅಗ್ನಿಹೋತ್ರಗಳನ್ನು ಮಾಡುವುದರಿಂದ ಯಾವ ಫಲವು ದೊರೆಯುತ್ತದೆಯೋ ಅದೇ ಫಲವು ವಿದ್ಯಾ-ವೇದ-ವ್ರತನಿರತ ಬ್ರಾಹ್ಮಣನಿಗೆ ದಾನಮಾಡುವುದರಿಂದ ದೊರೆಯುತ್ತದೆ.
13059011a ವಿದ್ಯಾವೇದವ್ರತಸ್ನಾತಾನವ್ಯಪಾಶ್ರಯಜೀವಿನಃ।
13059011c ಗೂಢಸ್ವಾಧ್ಯಾಯತಪಸೋ ಬ್ರಾಹ್ಮಣಾನ್ಸಂಶಿತವ್ರತಾನ್।।
13059012a ಕೃತೈರಾವಸಥೈರ್ಹೃದ್ಯೈಃ ಸಪ್ರೇಷ್ಯೈಃ ಸಪರಿಚ್ಚದೈಃ।
13059012c ನಿಮಂತ್ರಯೇಥಾಃ ಕೌಂತೇಯ ಕಾಮೈಶ್ಚಾನ್ಯೈರ್ದ್ವಿಜೋತ್ತಮಾನ್।।
ಕೌಂತೇಯ! ವೇದವಿದ್ಯಾಪಾರಂಗತರೂ, ವ್ರತಪಾಲಕರೂ, ಗೂಢವಾಗಿ ಸ್ವಾಧ್ಯಾಯ-ತಪಸ್ಸುಗಳಲ್ಲಿ ನಿರತರಾಗಿರುವ ಸಂಶಿತವ್ರತ ಬ್ರಾಹ್ಮಣರನ್ನು ನೀನು ನಿನ್ನಬಳಿ ನಿಮಂತ್ರಿಸು. ಮತ್ತು ಅವರಿಗೆ ಸೇವಕರು, ಆವಶ್ಯಕ ಸಾಮಾಗ್ರಿ, ಹಾಗೂ ಬೇರೆ ಬೇರೆ ಉಪಭೋಗಕ ವಸ್ತುಗಳಿಂದ ಸಂಪನ್ನವಾಗಿರುವ ಗೃಹಗಳನ್ನು ಮಾಡಿಸಿ ಕೊಡು.
13059013a ಅಪಿ ತೇ ಪ್ರತಿಗೃಹ್ಣೀಯುಃ ಶ್ರದ್ಧಾಪೂತಂ ಯುಧಿಷ್ಠಿರ।
13059013c ಕಾರ್ಯಮಿತ್ಯೇವ ಮನ್ವಾನಾ ಧರ್ಮಜ್ಞಾಃ ಸೂಕ್ಷ್ಮದರ್ಶಿನಃ।।
ಯುಧಿಷ್ಠಿರ! ಆ ಧರ್ಮಜ್ಞ ಸೂಕ್ಷ್ಮದರ್ಶಿಗಳು ನಿನ್ನ ಕರ್ತವ್ಯವನ್ನು ಮಾಡಿದ್ದೀಯೆ ಎಂದು ಶ್ರದ್ಧೆಯಿಂದ ಪವಿತ್ರವಾದ ಆ ದಾನವನ್ನು ಸ್ವೀಕರಿಸಬಹುದು.
13059014a ಅಪಿ ತೇ ಬ್ರಾಹ್ಮಣಾ ಭುಕ್ತ್ವಾ ಗತಾಃ ಸೋದ್ಧರಣಾನ್ಗೃಹಾನ್।
13059014c ಯೇಷಾಂ ದಾರಾಃ ಪ್ರತೀಕ್ಷಂತೇ ಪರ್ಜನ್ಯಮಿವ ಕರ್ಷಕಾಃ।।
ಕೃಷಿಕರು ಮಳೆಯನ್ನು ಹೇಗೋ ಹಾಗೆ ಯಾರನ್ನು ಅವರ ಪತ್ನಿಯರು ಪ್ರತೀಕ್ಷೆಮಾಡುತ್ತಿರುತ್ತಾರೋ ಅಂತಹ ಬ್ರಾಹ್ಮಣರು ನಿನ್ನ ಮನೆಯಲ್ಲಿ ಭೋಜನ ಮಾಡಿ ತಮ್ಮ ಮನೆಗಳಲ್ಲಿರುವವರನ್ನು ಉದ್ಧರಿಸಲು ಹೋಗಿದ್ದಾರೆಯೇ?
13059015a ಅನ್ನಾನಿ ಪ್ರಾತಃಸವನೇ ನಿಯತಾ ಬ್ರಹ್ಮಚಾರಿಣಃ।
13059015c ಬ್ರಾಹ್ಮಣಾಸ್ತಾತ ಭುಂಜಾನಾಸ್ತ್ರೇತಾಗ್ನೀನ್ಪ್ರೀಣಯಂತು ತೇ।।
ಮಗೂ! ಪ್ರಾತಃ ಕಾಲದಲ್ಲಿ ನಿಯತ ಬ್ರಹ್ಮಚಾರೀ ಬ್ರಾಹ್ಮಣರು ಅನ್ನವನ್ನು ತಿಂದರೆ ಅದರಿಂದಾಗಿ ಮೂರೂ ಅಗ್ನಿಗಳೂ ಶಾಂತವಾಗುತ್ತವೆ.
13059016a ಮಾಧ್ಯಂದಿನಂ ತೇ ಸವನಂ ದದತಸ್ತಾತ ವರ್ತತಾಮ್।
13059016c ಗಾ ಹಿರಣ್ಯಾನಿ ವಾಸಾಂಸಿ ತೇನೇಂದ್ರಃ ಪ್ರೀಯತಾಂ ತವ।।
ಮಧ್ಯಾಹ್ನದ ಸಮಯದಲ್ಲಿ ನೀನು ಭೋಜನ, ಗೋವು, ಹಿರಣ್ಯಗಳು ಮತ್ತು ವಸ್ತ್ರಗಳನ್ನು ಅಂಥಹ ಬ್ರಾಹ್ಮಣರಿಗಿತ್ತರೆ ಅದರಿಂದ ನಿನ್ನಮೇಲೆ ಇಂದ್ರನು ಪ್ರೀತನಾಗುತ್ತಾನೆ.
13059017a ತೃತೀಯಂ ಸವನಂ ತತ್ತೇ ವೈಶ್ವದೇವಂ ಯುಧಿಷ್ಠಿರ।
13059017c ಯದ್ದೇವೇಭ್ಯಃ ಪಿತೃಭ್ಯಶ್ಚ ವಿಪ್ರೇಭ್ಯಶ್ಚ ಪ್ರಯಚ್ಚಸಿ।।
ಯುಧಿಷ್ಠಿರ! ಮೂರನೇ ಸಮಯದಲ್ಲಿ ನೀನು ದೇವತೆಗಳು, ಪಿತೃಗಳು ಮತ್ತು ಬ್ರಾಹ್ಮಣರಿಗೋಸ್ಕರ ಏನು ದಾನಮಾಡುತ್ತೀಯೋ ಅದು ವೈಶ್ವದೇವನನ್ನು ಸಂತುಷ್ಟಗೊಳಿಸುತ್ತವೆ.
13059018a ಅಹಿಂಸಾ ಸರ್ವಭೂತೇಭ್ಯಃ ಸಂವಿಭಾಗಶ್ಚ ಸರ್ವಶಃ।
13059018c ದಮಸ್ತ್ಯಾಗೋ ಧೃತಿಃ ಸತ್ಯಂ ಭವತ್ವವಭೃಥಾಯ ತೇ।।
ಎಲ್ಲ ಜೀವಿಗಳೊಂದಿಗೂ ಅಹಿಂಸಾಭಾವದಿಂದಿರುವುದು, ಸರ್ವರಿಗೂ ಸರ್ವರ ಯಥಾಯೋಗ್ಯ ಭಾಗಗಳನ್ನು ನೀಡುವುದು, ಇಂದ್ರಿಯ ಸಂಯಮ, ತ್ಯಾಗ, ಧೈರ್ಯ ಮತ್ತು ಸತ್ಯ ಇವೆಲ್ಲವೂ ನಿನಗೆ ಯಜ್ಞಾಂತದಲ್ಲಿ ಮಾಡುವ ಅವಭೃತಸ್ನಾನದ ಫಲವನ್ನು ನೀಡುತ್ತವೆ.
13059019a ಏಷ ತೇ ವಿತತೋ ಯಜ್ಞಃ ಶ್ರದ್ಧಾಪೂತಃ ಸದಕ್ಷಿಣಃ।
13059019c ವಿಶಿಷ್ಟಃ ಸರ್ವಯಜ್ಞೇಭ್ಯೋ ನಿತ್ಯಂ ತಾತ ಪ್ರವರ್ತತಾಮ್।।
ಈ ಪ್ರಕಾರವಾಗಿ ವಿಸ್ತಾರವಾಗುತ್ತಿರುವ ನಿನ್ನ ಈ ಶ್ರದ್ಧಾಪೂತ ಮತ್ತು ದಕ್ಷಿಣಾಯುಕ್ತ ಯಜ್ಞವು ಸರ್ವಯಜ್ಞಗಳಿಗಿಂತಲೂ ವಿಶಿಷ್ಟವಾದುದು ಮತ್ತು ಮಗೂ! ಇದು ನಿತ್ಯವೂ ನಡೆಯುತ್ತಿರಬೇಕು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಏಕೋನಷಷ್ಟಿತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಐವತ್ತೊಂಬತ್ತನೇ ಅಧ್ಯಾಯವು.