ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಅನುಶಾಸನ ಪರ್ವ
ದಾನಧರ್ಮ ಪರ್ವ
ಅಧ್ಯಾಯ 29
ಸಾರ
ತನ್ನ ತಪಸ್ಸನ್ನು ಮುಂದುವರಿಸಿದ ಮತಂಗನಿಗೆ ಇಂದ್ರನು ಚಂಡಾಲತ್ವದಿಂದ ಬ್ರಾಹ್ಮಣತ್ವವನ್ನು ಪಡೆಯಲು ಯಾವ ಯಾವ ಯೋನಿಗಳಲ್ಲಿ ಎಷ್ಟು ಬಾರಿ ಪುನಃ ಪುನಃ ಹುಟ್ಟಿಬರಬೇಕಾಗುತ್ತದೆ ಎನ್ನುವುದನ್ನು ಹೇಳಿದುದು (1-16).
13029001 ಭೀಷ್ಮ ಉವಾಚ।
13029001a ಏವಮುಕ್ತೋ ಮತಂಗಸ್ತು ಸಂಶಿತಾತ್ಮಾ ಯತವ್ರತಃ।
13029001c ಅತಿಷ್ಠದೇಕಪಾದೇನ ವರ್ಷಾಣಾಂ ಶತಮಚ್ಯುತ।।
ಭೀಷ್ಮನು ಹೇಳಿದನು: “ಅಚ್ಯುತ! ಇದನ್ನು ಕೇಳಿದ ಸಂಶಿತಾತ್ಮ ಯತವ್ರತ ಮತಂಗನಾದರೋ ನೂರು ವರ್ಷಗಳು ಒಂದೇ ಕಾಲಿನಮೇಲೆ ನಿಂತುಕೊಂಡನು.
13029002a ತಮುವಾಚ ತತಃ ಶಕ್ರಃ ಪುನರೇವ ಮಹಾಯಶಾಃ।
13029002c ಮತಂಗ ಪರಮಂ ಸ್ಥಾನಂ ಪ್ರಾರ್ಥಯನ್ನತಿದುರ್ಲಭಮ್।।
ಆಗ ಪುನಃ ಮಹಾಯಶಸ್ವೀ ಶಕ್ರನು ಹೇಳಿದನು: “ಮತಂಗ ಅತಿದುರ್ಲಭವಾದ ಪರಮ ಸ್ಥಾನವನ್ನು ಪ್ರಾರ್ಥಿಸುತ್ತಿರುವೆ!
13029003a ಮಾ ಕೃಥಾಃ ಸಾಹಸಂ ಪುತ್ರ ನೈಷ ಧರ್ಮಪಥಸ್ತವ।
13029003c ಅಪ್ರಾಪ್ಯಂ ಪ್ರಾರ್ಥಯಾನೋ ಹಿ ನಚಿರಾದ್ವಿನಶಿಷ್ಯಸಿ।।
ಪುತ್ರ! ಸಾಹಸ ಮಾಡಬಾರದು. ಇದು ನಿನ್ನ ಧರ್ಮಪಥವಲ್ಲ. ಪ್ರಾರ್ಥಿಸುವುದನ್ನು ಪಡೆಯದೇ ಬೇಗನೇ ವಿನಾಶಹೊಂದುತ್ತೀಯೆ!
13029004a ಮತಂಗ ಪರಮಂ ಸ್ಥಾನಂ ವಾರ್ಯಮಾಣೋ ಮಯಾ ಸಕೃತ್।
13029004c ಚಿಕೀರ್ಷಸ್ಯೇವ ತಪಸಾ ಸರ್ವಥಾ ನ ಭವಿಷ್ಯಸಿ।।
ಮತಂಗ! ನಾನು ನಿನಗೆ ಈ ಪರಮ ಸ್ಥಾನವನ್ನು ಕೇಳಬೇಡವೆಂದು ಹೇಳಿದರೂ ಅದನ್ನೇ ಬಯಸುತ್ತಿರುವೆ. ತಪಸ್ಸಿನಿಂದ ಅದು ಸರ್ವಥಾ ಆಗುವುದಿಲ್ಲ.
13029005a ತಿರ್ಯಗ್ಯೋನಿಗತಃ ಸರ್ವೋ ಮಾನುಷ್ಯಂ ಯದಿ ಗಚ್ಚತಿ।
13029005c ಸ ಜಾಯತೇ ಪುಲ್ಕಸೋ ವಾ ಚಂಡಾಲೋ ವಾ ಕದಾ ಚನ।।
ತಿರ್ಯಗ್ಯೋನಿಗಳಾದ ಪಶು-ಪಕ್ಷಿಗಳು ಒಂದು ವೇಳೆ ಮನುಷ್ಯ ಯೋನಿಯಲ್ಲಿ ಹುಟ್ಟುವಂತಾದರೆ ಮೊದಲು ಅವು ಪುಲ್ಕಸ ಅಥವಾ ಚಂಡಾಲ ಯೋನಿಯಲ್ಲಿ ಹುಟ್ಟುತ್ತವೆ. ಇದರಲ್ಲಿ ಸಂಶಯವೇ ಇಲ್ಲ.
13029006a ಪುಂಶ್ಚಲಃ ಪಾಪಯೋನಿರ್ವಾ ಯಃ ಕಶ್ಚಿದಿಹ ಲಕ್ಷ್ಯತೇ।
13029006c ಸ ತಸ್ಯಾಮೇವ ಸುಚಿರಂ ಮತಂಗ ಪರಿವರ್ತತೇ।।
ಮತಂಗ! ಈ ಪಾಪಯೋನಿಗಳಲ್ಲಿ ಒಂದು ವೇಳೆ ಹುಟ್ಟಿಕೊಂಡರೆ ಬಹುಕಾಲದ ವರೆಗೆ ಅವನು ಅದೇ ಯೋನಿಯಲ್ಲಿಯೇ ಸುತ್ತುತ್ತಿರುತ್ತಾನೆ.
13029007a ತತೋ ದಶಗುಣೇ ಕಾಲೇ ಲಭತೇ ಶೂದ್ರತಾಮಪಿ।
13029007c ಶೂದ್ರಯೋನಾವಪಿ ತತೋ ಬಹುಶಃ ಪರಿವರ್ತತೇ।।
ಒಂದು ಸಾವಿರ ವರ್ಷಗಳಲ್ಲಿ ಶೂದ್ರತ್ವವನ್ನು ಪಡೆಯಬಹುದು. ಅನಂತರ ಶೂದ್ರಯೋನಿಯಲ್ಲಿ ಬಹುಕಾಲ ಸುತ್ತುತ್ತಿರುತ್ತಾನೆ.
13029008a ತತಸ್ತ್ರಿಂಶದ್ಗುಣೇ ಕಾಲೇ ಲಭತೇ ವೈಶ್ಯತಾಮಪಿ।
13029008c ವೈಶ್ಯತಾಯಾಂ ಚಿರಂ ಕಾಲಂ ತತ್ರೈವ ಪರಿವರ್ತತೇ।।
ಅರವತ್ತು ಬಾರಿ ಶೂದ್ರನಾಗಿ ಹುಟ್ಟಿದ ಬಳಿಕ ಅವನಿಗೆ ವೈಶ್ಯತ್ವವು ಪ್ರಾಪ್ತವಾಗಬಹುದು. ದೀರ್ಘ ಕಾಲ ಅವನು ವೈಶ್ಯಯೋನಿಯಲ್ಲಿಯೇ ಸುತ್ತುತ್ತಿರುತ್ತಾನೆ.
13029009a ತತಃ ಷಷ್ಟಿಗುಣೇ ಕಾಲೇ ರಾಜನ್ಯೋ ನಾಮ ಜಾಯತೇ।
13029009c ರಾಜನ್ಯತ್ವೇ ಚಿರಂ ಕಾಲಂ ತತ್ರೈವ ಪರಿವರ್ತತೇ।।
ಅರವತ್ತು ಬಾರಿ ವೈಶ್ಯಯೋನಿಯಲ್ಲಿ ಹುಟ್ಟಿದ ನಂತರ ಅವನು ರಾಜನ್ಯ ಕ್ಷತ್ರಿಯನಾಗಿ ಹುಟ್ಟುತ್ತಾನೆ. ದೀರ್ಘ ಕಾಲ ಅವನು ಕ್ಷತ್ರಿಯ ಯೋನಿಯಲ್ಲಿಯೇ ಸುತ್ತುತ್ತಿರುತ್ತಾನೆ.
13029010a ತತಃ ಷಷ್ಟಿಗುಣೇ ಕಾಲೇ ಲಭತೇ ಬ್ರಹ್ಮಬಂಧುತಾಮ್।
13029010c ಬ್ರಹ್ಮಬಂಧುಶ್ಚಿರಂ ಕಾಲಂ ತತ್ರೈವ ಪರಿವರ್ತತೇ।।
ಅರವತ್ತು ಬಾರಿ ಕ್ಷತ್ರಿಯ ಯೋನಿಯಲ್ಲಿ ಹುಟ್ಟಿದ ನಂತರ ಅವನಿಗೆ ಬ್ರಹ್ಮಬಂಧುತ್ವವು ದೊರೆಯುತ್ತದೆ. ಬ್ರಹ್ಮಬಂಧುವಾಗಿ ಅವನು ದೀರ್ಘಕಾಲದಲ್ಲಿ ಸುತ್ತುತ್ತಿರುತ್ತಾನೆ.
13029011a ತತಸ್ತು ದ್ವಿಶತೇ ಕಾಲೇ ಲಭತೇ ಕಾಂಡಪೃಷ್ಠತಾಮ್।
13029011c ಕಾಂಡಪೃಷ್ಠಶ್ಚಿರಂ ಕಾಲಂ ತತ್ರೈವ ಪರಿವರ್ತತೇ।।
ಎರಡು ನೂರು ಆವರ್ತಗಳು ಕಳೆದನಂತರ ಶಸ್ತ್ರಗಳ ಮಾರಾಟದಿಂದ ಬದುಕುವ ಯೋನಿಯು ಲಭ್ಯವಾಗುತ್ತದೆ. ಬಹಳ ಕಾಲ ಅದೇ ಯೋನಿಯಲ್ಲಿ ಸುತ್ತುತ್ತಿರುತ್ತಾನೆ.
13029012a ತತಸ್ತು ತ್ರಿಶತೇ ಕಾಲೇ ಲಭತೇ ದ್ವಿಜತಾಮಪಿ।
13029012c ತಾಂ ಚ ಪ್ರಾಪ್ಯ ಚಿರಂ ಕಾಲಂ ತತ್ರೈವ ಪರಿವರ್ತತೇ।।
ಮುನ್ನೂರು ಆವರ್ತಗಳು ಕಳೆದನಂತರ ದ್ವಿಜತ್ವವು ಲಭಿಸುತ್ತದೆ. ಅದನ್ನು ಪಡೆದು ದೀರ್ಘಕಾಲ ಅದರಲ್ಲಿಯೇ ಸುತ್ತುತ್ತಿರುತ್ತಾನೆ.
13029013a ತತಶ್ಚತುಃಶತೇ ಕಾಲೇ ಶ್ರೋತ್ರಿಯೋ ನಾಮ ಜಾಯತೇ।
13029013c ಶ್ರೋತ್ರಿಯತ್ವೇ ಚಿರಂ ಕಾಲಂ ತತ್ರೈವ ಪರಿವರ್ತತೇ।।
ನಾಲ್ನೂರು ಆವರ್ತಗಳು ಕಳೆದನಂತರ ಶ್ರೋತ್ರಿಯನಾಗಿ ಹುಟ್ಟುತ್ತಾನೆ. ದೀರ್ಘಕಾಲ ಶ್ರೋತ್ರಿಯತ್ವದಲ್ಲಿಯೇ ಸುತ್ತುತ್ತಿರುತ್ತಾನೆ.
13029014a ತದೈವ ಕ್ರೋಧಹರ್ಷೌ ಚ ಕಾಮದ್ವೇಷೌ ಚ ಪುತ್ರಕ।
13029014c ಅತಿಮಾನಾತಿವಾದೌ ತಮಾವಿಶಂತಿ ದ್ವಿಜಾಧಮಮ್।।
ಪುತ್ರಕ! ಆಗಲೂ ಕೂಡ ಕ್ರೋಧ-ಹರ್ಷಗಳು, ಕಾಮ-ದ್ವೇಷಗಳು ಮತ್ತು ಅತಿಮಾನ-ಅತಿವಾದಗಳು ಆ ದ್ವಿಜಾಧಮನನ್ನು ಪ್ರವೇಶಿಸುತ್ತವೆ.
13029015a ತಾಂಶ್ಚೇಜ್ಜಯತಿ ಶತ್ರೂನ್ಸ ತದಾ ಪ್ರಾಪ್ನೋತಿ ಸದ್ಗತಿಮ್।
13029015c ಅಥ ತೇ ವೈ ಜಯಂತ್ಯೇನಂ ತಾಲಾಗ್ರಾದಿವ ಪಾತ್ಯತೇ।।
ಆ ಶತ್ರುಗಳನ್ನು ಜಯಸಿದವನು ಸದ್ಗತಿಯನ್ನು ಹೊಂದುತ್ತಾನೆ. ಅಲ್ಲಿ ಅವುಗಳನ್ನು ಜಯಿಸದವನು ತಾಳೆಯ ಹಣ್ಣಿನಂತೆ ಮೇಲಿನಿಂದ ಬೀಳುತ್ತಾನೆ.
13029016a ಮತಂಗ ಸಂಪ್ರಧಾರ್ಯೈತದ್ಯದಹಂ ತ್ವಾಮಚೂಚುದಮ್।
13029016c ವೃಣೀಷ್ವ ಕಾಮಮನ್ಯಂ ತ್ವಂ ಬ್ರಾಹ್ಮಣ್ಯಂ ಹಿ ಸುದುರ್ಲಭಮ್।।
ಮತಂಗ! ನಿನಗೆ ಹೇಳಿದ ಇದನ್ನು ಚೆನ್ನಾಗಿ ಮನದಟ್ಟುಮಾಡಿಕೊಂಡು ನನ್ನಿಂದ ಬೇರೆಯಾವುದಾದರೂ ವರವನ್ನು ಕೇಳು. ಬ್ರಾಹ್ಮಣ್ಯವು ದುರ್ಲಭವು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಇಂದ್ರಮತಂಗಸಂವಾದೇ ಏಕೋನತ್ರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಇಂದ್ರಮತಂಗಸಂವಾದ ಎನ್ನುವ ಇಪ್ಪತ್ತೊಂಬತ್ತನೇ ಅಧ್ಯಾಯವು.