017: ಮಹಾದೇವಸಹಸ್ರನಾಮಸ್ತೋತ್ರಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಅನುಶಾಸನ ಪರ್ವ

ದಾನಧರ್ಮ ಪರ್ವ

ಅಧ್ಯಾಯ 17

ಸಾರ

ಉಪಮನ್ಯುವು ಕೃಷ್ಣನಿಗೆ ತಂಡಿಕೃತ ಮಹಾದೇವನ ನಾಮಾವಳಿಗಳನ್ನು ಹೇಳುವ ಮೊದಲ ಪೀಠಿಕೆ (1-30). ಶಿವನ ಸಾವಿರದ ಎಂಟು ನಾಮಾವಳಿಗಳು1 (31-150). ಶಿವಸಹಸ್ರನಾಮದ ಮಹಾತ್ಮೆ (151-171).

13017001 ವಾಸುದೇವ ಉವಾಚ।
13017001a ತತಃ ಸ ಪ್ರಯತೋ ಭೂತ್ವಾ ಮಮ ತಾತ ಯುಧಿಷ್ಠಿರ।
13017001c ಪ್ರಾಂಜಲಿಃ ಪ್ರಾಹ ವಿಪ್ರರ್ಷಿರ್ನಾಮಸಂಹಾರಮಾದಿತಃ।। 2

ವಾಸುದೇವನು ಹೇಳಿದನು: “ಅಯ್ಯಾ! ಯುಧಿಷ್ಠಿರ! ಆಗ ನನ್ನ ಎದಿರು ಆ ವಿಪ್ರರ್ಷಿಯು ಕೈಗಳನ್ನು ಮುಗಿದು ವಿನೀತನಾಗಿ ಶಿವನ ನಾಮಸಂಗ್ರಹವನ್ನು ಮೊದಲಿನಿಂದ ಹೇಳತೊಡಗಿದನು.

13017002 ಉಪಮನ್ಯುರುವಾಚ।
13017002a ಬ್ರಹ್ಮಪ್ರೋಕ್ತೈರೃಷಿಪ್ರೋಕ್ತೈರ್ವೇದವೇದಾಂಗಸಂಭವೈಃ।
13017002c ಸರ್ವಲೋಕೇಷು ವಿಖ್ಯಾತೈಃ ಸ್ಥಾಣುಂ ಸ್ತೋಷ್ಯಾಮಿ ನಾಮಭಿಃ।।

ಉಪಮನ್ಯುವು ಹೇಳಿದನು: “ಬ್ರಹ್ಮಪ್ರೋಕ್ತ, ಋಷಿಪ್ರೋಕ್ತ, ಮತ್ತು ವೇದವೇದಾಂಗಗಳಲ್ಲಿ ಮೂಡಿಬಂದಿರುವ ಸರ್ವಲೋಕಗಳಲ್ಲಿಯೂ ವಿಖ್ಯಾತ ನಾಮಗಳಿಂದ ಸ್ಥಾಣುವನ್ನು ಸ್ತುತಿಸುತ್ತೇನೆ.

13017003a ಮಹದ್ಭಿರ್ವಿಹಿತೈಃ ಸತ್ಯೈಃ ಸಿದ್ಧೈಃ ಸರ್ವಾರ್ಥಸಾಧಕೈಃ।
13017003c ಋಷಿಣಾ ತಂಡಿನಾ ಭಕ್ತ್ಯಾ ಕೃತೈರ್ದೇವಕೃತಾತ್ಮನಾ।।
13017004a ಯಥೋಕ್ತೈರ್ಲೋಕವಿಖ್ಯಾತೈರ್ಮುನಿಭಿಸ್ತತ್ತ್ವದರ್ಶಿಭಿಃ।
13017004c ಪ್ರವರಂ ಪ್ರಥಮಂ ಸ್ವರ್ಗ್ಯಂ ಸರ್ವಭೂತಹಿತಂ ಶುಭಮ್।
13017004e ಶ್ರುತೈಃ ಸರ್ವತ್ರ ಜಗತಿ ಬ್ರಹ್ಮಲೋಕಾವತಾರಿತೈಃ।।
13017005a ಯತ್ತದ್ರಹಸ್ಯಂ ಪರಮಂ ಬ್ರಹ್ಮಪ್ರೋಕ್ತಂ ಸನಾತನಮ್।
13017005c ವಕ್ಷ್ಯೇ ಯದುಕುಲಶ್ರೇಷ್ಠ ಶೃಣುಷ್ವಾವಹಿತೋ ಮಮ।।

ಯದುಕುಲಶ್ರೇಷ್ಠ! ಸರ್ವಾರ್ಥಗಳನ್ನು ಸಾಧಿಸಿದ ಸತ್ಯನಿಷ್ಠ ಮಹಾಸಿದ್ಧರಿಂದ ಆವಿಷ್ಕಾರಗೊಂಡಿರುವ; ಕೃತಾತ್ಮ ಋಷಿ ತಂಡಿಯು ಭಕ್ತಿಯಿಂದ ದೇವನನ್ನು ಸ್ತುತಿಸಿದ; ವಿಖ್ಯಾತ ತತ್ತ್ವದರ್ಶಿ ಮುನಿಗಳಿಂದ ಪುನರುಕ್ತವಾದ; ಬ್ರಹ್ಮಲೋಕದಿಂದ ಹಿಡಿದು ಜಗತ್ತಿನ ಎಲ್ಲ ಲೋಕಗಳಲ್ಲಿಯೂ ಕೇಳಿಬರುವ; ಪ್ರವರವೂ, ಪ್ರಥಮವೂ, ಸ್ವರ್ಗದಾಯಕವೂ, ಸರ್ವಭೂತಹಿತರತವೂ, ಶುಭವೂ ಆಗಿರುವ ಸನಾತನ ಬ್ರಹ್ಮನು ಹೇಳಿರುವ ರಹಸ್ಯವನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

13017006a ಪರತ್ವೇನ ಭವಂ ದೇವಂ ಭಕ್ತಸ್ತ್ವಂ ಪರಮೇಶ್ವರಮ್।
13017006c ತೇನ ತೇ ಶ್ರಾವಯಿಷ್ಯಾಮಿ ಯತ್ತದ್ಬ್ರಹ್ಮ ಸನಾತನಮ್।।

ನೀನು ದೇವ ಭವ ಪರಮೇಶ್ವರನ ಪರಮ ಭಕ್ತನಾಗಿರುವುದರಿಂದ ನಿನಗೆ ಈ ಸನಾತನ ಬ್ರಹ್ಮವನ್ನು ಹೇಳುತ್ತಿದ್ದೇನೆ.

13017007a ನ ಶಕ್ಯಂ ವಿಸ್ತರಾತ್ಕೃತ್ಸ್ನಂ ವಕ್ತುಂ ಶರ್ವಸ್ಯ ಕೇನ ಚಿತ್।
13017007c ಯುಕ್ತೇನಾಪಿ ವಿಭೂತೀನಾಮಪಿ ವರ್ಷಶತೈರಪಿ।।

ಶರ್ವನ ಸಂಪೂರ್ಣ ನಾಮಾವಳಿಗಳನ್ನು ವಿಸ್ತಾರವಾಗಿ ಹೇಳಲು ಯಾರಿಗೂ ಶಕ್ಯವಿಲ್ಲ. ಯೋಗಯುಕ್ತನಾಗಿದ್ದರೂ ಅವನ ವಿಭೂತಿಗಳನ್ನು ನೂರು ವರ್ಷ ಹೇಳಿದರೂ ಅದು ಮುಗಿಯಲಾರದು.

13017008a ಯಸ್ಯಾದಿರ್ಮಧ್ಯಮಂತಶ್ಚ ಸುರೈರಪಿ ನ ಗಮ್ಯತೇ।
13017008c ಕಸ್ತಸ್ಯ ಶಕ್ನುಯಾದ್ವಕ್ತುಂ ಗುಣಾನ್ಕಾರ್ತ್ಸ್ನ್ಯೇನ ಮಾಧವ।।

ಮಾಧವ! ಯಾರ ಆದಿ-ಮಧ್ಯ-ಅಂತ್ಯಗಳು ಸುರರಿಗೂ ಅರ್ಥವಾಗುವುದಿಲ್ಲವೋ ಅವನ ಗುಣಗಳನ್ನು ಸಂಪೂರ್ಣವಾಗಿ ಹೇಳಲು ಯಾರಿಗೆ ಶಕ್ಯ?

13017009a ಕಿಂ ತು ದೇವಸ್ಯ ಮಹತಃ ಸಂಕ್ಷಿಪ್ತಾರ್ಥಪದಾಕ್ಷರಮ್।
13017009c ಶಕ್ತಿತಶ್ಚರಿತಂ ವಕ್ಷ್ಯೇ ಪ್ರಸಾದಾತ್ತಸ್ಯ ಚೈವ ಹಿ।।

ಆದರೆ ಅವನ ಪ್ರಸಾದದಿಂದ ನನ್ನ ಶಕ್ತಿಗನುಸಾರವಾಗಿ ಆ ದೇವನ ಮಹತ್ವ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಅರ್ಥಪದಾಕ್ಷರಗಳಿಂದ ಹೇಳುತ್ತೇನೆ.

13017010a ಅಪ್ರಾಪ್ಯೇಹ ತತೋಽನುಜ್ಞಾಂ ನ ಶಕ್ಯಃ ಸ್ತೋತುಮೀಶ್ವರಃ।
13017010c ಯದಾ ತೇನಾಭ್ಯನುಜ್ಞಾತಃ ಸ್ತುವತ್ಯೇವ ಸದಾ ಭವಮ್।।

ಅವನ ಅನುಜ್ಞೆಯನ್ನು ಪಡೆದುಕೊಳ್ಳದೇ ಈಶ್ವರನನ್ನು ಸ್ತುತಿಸಲು ಶಕ್ಯನಾಗುವುದಿಲ್ಲ. ಸದಾ ಅವನ ಅನುಜ್ಞೆಯಾದಾಗ ಮಾತ್ರ ನಾನು ಭವನನ್ನು ಸ್ತುತಿಸುತ್ತೇನೆ.

13017011a ಅನಾದಿನಿಧನಸ್ಯಾಹಂ ಸರ್ವಯೋನೇರ್ಮಹಾತ್ಮನಃ।
13017011c ನಾಮ್ನಾಂ ಕಂ ಚಿತ್ಸಮುದ್ದೇಶಂ ವಕ್ಷ್ಯೇ ಹ್ಯವ್ಯಕ್ತಯೋನಿನಃ।।

ಅನಾದಿನಿಧನ, ಸರ್ವಯೋನಿ, ಮಹಾತ್ಮ, ಅವ್ಯಕ್ತಯೋನಿಯ ಕೆಲವೇ ನಾಮಗಳನ್ನು ನಾನು ನಿನಗೋಸ್ಕರ ಹೇಳುತ್ತೇನೆ.

13017012a ವರದಸ್ಯ ವರೇಣ್ಯಸ್ಯ ವಿಶ್ವರೂಪಸ್ಯ ಧೀಮತಃ।
13017012c ಶೃಣು ನಾಮಸಮುದ್ದೇಶಂ ಯದುಕ್ತಂ ಪದ್ಮಯೋನಿನಾ।।

ಪದ್ಮಯೋನಿ ಬ್ರಹ್ಮನು ಹೇಳಿದ ವರದ, ವರಣ್ಯ, ವಿಶ್ವರೂಪ, ಧೀಮತನ ನಾಮಸಂಗ್ರಹವನ್ನು ಕೇಳು.

13017013a ದಶ ನಾಮಸಹಸ್ರಾಣಿ ಯಾನ್ಯಾಹ ಪ್ರಪಿತಾಮಹಃ।
13017013c ತಾನಿ ನಿರ್ಮಥ್ಯ ಮನಸಾ ದಧ್ನೋ ಘೃತಮಿವೋದ್ಧೃತಮ್।।

ಪ್ರಪಿತಾಮಹನು ಹೇಳಿದ್ದ ಹತ್ತುಸಾವಿರ ನಾಮಗಳನ್ನು ಮನಸ್ಸಿನಲ್ಲಿ ಮಥಿಸಿ, ಮೊಸರಿನಿಂದ ತುಪ್ಪವನ್ನು ಹೇಗೋ ಹಾಗೆ ಉದ್ಧರಿಸಲಾಗಿದೆ.

13017014a ಗಿರೇಃ ಸಾರಂ ಯಥಾ ಹೇಮ ಪುಷ್ಪಾತ್ಸಾರಂ ಯಥಾ ಮಧು।
13017014c ಘೃತಾತ್ಸಾರಂ ಯಥಾ ಮಂಡಸ್ತಥೈತತ್ಸಾರಮುದ್ಧೃತಮ್।।

ಚಿನ್ನವು ಗಿರಿಯ ಸಾರವಾಗಿರುವಂತೆ, ಮಧುವು ಪುಷ್ಪಗಳ ಸಾರವಾಗಿರುವಂತೆ, ತುಪ್ಪವು ಮಜ್ಜಿಗೆಯ ಸಾರವಾಗಿರುವಂತೆ, ಈ ಸಹಸ್ರ ನಾಮಗಳು ಆ ಹತ್ತು ಸಾವಿರ ನಾಮಗಳ ಸಾರವಾಗಿವೆ.

13017015a ಸರ್ವಪಾಪ್ಮಾಪಹಮಿದಂ ಚತುರ್ವೇದಸಮನ್ವಿತಮ್।
13017015c ಪ್ರಯತ್ನೇನಾಧಿಗಂತವ್ಯಂ ಧಾರ್ಯಂ ಚ ಪ್ರಯತಾತ್ಮನಾ।
13017015e ಶಾಂತಿಕಂ ಪೌಷ್ಟಿಕಂ ಚೈವ ರಕ್ಷೋಘ್ನಂ ಪಾವನಂ ಮಹತ್।।

ಚತುರ್ವೇದಸಮನ್ವಿತವಾಗಿರುವ ಇದು ಸರ್ವ ಪಾಪಗಳನ್ನೂ ನಾಶಪಡಿಸುತ್ತದೆ. ಶಾಂತಿಯನ್ನೂ, ಪುಷ್ಠಿಯನ್ನೂ ನೀಡುವ ಮತ್ತು ರಾಕ್ಷಸರನ್ನು ಸಂಹರಿಸುವ ಈ ಮಹಾ ಪಾವನ ನಾಮಗಳನ್ನು ಪ್ರಯತ್ನಪಟ್ಟು ಮನದಟ್ಟುಮಾಡಿಕೊಳ್ಳಬೇಕು. ಪ್ರಯತಾತ್ಮನಾಗಿ ಸದಾ ಮನಸ್ಸಿನಲ್ಲಿ ಧರಿಸಿಕೊಂಡಿರಬೇಕು.

13017016a ಇದಂ ಭಕ್ತಾಯ ದಾತವ್ಯಂ ಶ್ರದ್ದಧಾನಾಸ್ತಿಕಾಯ ಚ।
13017016c ನಾಶ್ರದ್ಧಧಾನರೂಪಾಯ ನಾಸ್ತಿಕಾಯಾಜಿತಾತ್ಮನೇ।।

ಇದನ್ನು ಶ್ರದ್ದೆಯಿರುವ ಆಸ್ತೀಕ ಭಕ್ತನಿಗೆ ನೀಡಬೇಕು. ಶ್ರದ್ಧೆಯಿಲ್ಲದ ಅಜಿತಾತ್ಮ ನಾಸ್ತಿಕನಿಗೆ ಕೊಡಬಾರದು.

13017017a ಯಶ್ಚಾಭ್ಯಸೂಯತೇ ದೇವಂ ಭೂತಾತ್ಮಾನಂ ಪಿನಾಕಿನಮ್।
13017017c ಸ ಕೃಷ್ಣ ನರಕಂ ಯಾತಿ ಸಹ ಪೂರ್ವೈಃ ಸಹಾನುಗೈಃ।।

ಕೃಷ್ಣ! ಭೂತಾತ್ಮನೂ ಪಿನಾಕಿಯೂ ಆದ ದೇವನನ್ನು ಯಾರು ಅಸೂಯೆಪಡುತ್ತಾರೋ ಅವರು ತಮ್ಮ ಪೂರ್ವಜರು ಮತ್ತು ಅನುಯಾಯಿಗಳೊಂದಿಗೆ ನರಕಕ್ಕೆ ಹೋಗುತ್ತಾರೆ.

13017018a ಇದಂ ಧ್ಯಾನಮಿದಂ ಯೋಗಮಿದಂ ಧ್ಯೇಯಮನುತ್ತಮಮ್।
13017018c ಇದಂ ಜಪ್ಯಮಿದಂ ಜ್ಞಾನಂ ರಹಸ್ಯಮಿದಮುತ್ತಮಮ್।
13017018e ಇದಂ ಜ್ಞಾತ್ವಾಂತಕಾಲೇಽಪಿ ಗಚ್ಚೇದ್ಧಿ ಪರಮಾಂ ಗತಿಮ್।।

ಇದು ಧ್ಯಾನ. ಇದು ಯೋಗ. ಇದು ಅನುತ್ತಮ ಧ್ಯೇಯ. ಇದು ಜಪ. ಇದು ರಹಸ್ಯವಾದ ಉತ್ತಮ ಜ್ಞಾನ. ಇದನ್ನು ಅಂತ್ಯಕಾಲದಲ್ಲಿ ತಿಳಿದುಕೊಂಡರೂ ಪರಮ ಗತಿಯನ್ನು ಪಡೆಯುತ್ತಾನೆ ಎಂದು ತಿಳಿ.

13017019a ಪವಿತ್ರಂ ಮಂಗಲಂ ಪುಣ್ಯಂ ಕಲ್ಯಾಣಮಿದಮುತ್ತಮಮ್।
13017019c ನಿಗದಿಷ್ಯೇ ಮಹಾಬಾಹೋ ಸ್ತವಾನಾಮುತ್ತಮಂ ಸ್ತವಮ್।।

ಮಹಾಬಾಹೋ! ಪವಿತ್ರವೂ, ಮಂಗಲವೂ, ಪುಣ್ಯವೂ, ಕಲ್ಯಾಣವೂ ಆದ ಈ ಉತ್ತಮ – ಸ್ತವಗಳಲ್ಲಿಯೇ ಉತ್ತಮವಾಗಿರುವ – ಸ್ತವವನ್ನು ಹೇಳುತ್ತೇನೆ.

13017020a ಇದಂ ಬ್ರಹ್ಮಾ ಪುರಾ ಕೃತ್ವಾ ಸರ್ವಲೋಕಪಿತಾಮಹಃ।
13017020c ಸರ್ವಸ್ತವಾನಾಂ ದಿವ್ಯಾನಾಂ ರಾಜತ್ವೇ ಸಮಕಲ್ಪಯತ್।।

ಹಿಂದೆ ಸರ್ವಲೋಕಪಿತಾಮಹ ಬ್ರಹ್ಮನು ಇದನ್ನು ರಚಿಸಿ ಸರ್ವ ದಿವ್ಯ ಸ್ತವಗಳಲ್ಲಿ ರಾಜತ್ವವನ್ನು ಇದಕ್ಕೆ ಕಲ್ಪಿಸಿಕೊಟ್ಟನು.

13017021a ತದಾಪ್ರಭೃತಿ ಚೈವಾಯಮೀಶ್ವರಸ್ಯ ಮಹಾತ್ಮನಃ।
13017021c ಸ್ತವರಾಜೇತಿ ವಿಖ್ಯಾತೋ ಜಗತ್ಯಮರಪೂಜಿತಃ।
13017021e ಬ್ರಹ್ಮಲೋಕಾದಯಂ ಚೈವ ಸ್ತವರಾಜೋಽವತಾರಿತಃ।।

ಅಂದಿನಿಂದ ಮಹಾತ್ಮ ಈಶ್ವರನ ಈ ಸ್ತವವು ಸ್ತವರಾಜವೆಂದು ವಿಖ್ಯಾತವಾಗಿ ಅಮರರಿಂದ ಪೂಜಿಸಿಕೊಂಡು ಬಂದಿದೆ. ಬ್ರಹ್ಮಲೋಕದಿಂದ ಹಿಡಿದು ಎಲ್ಲಕಡೆ ಇದನ್ನು ಸ್ತವರಾಜವೆಂದೇ ಕರೆಯುತ್ತಾರೆ.

13017022a ಯಸ್ಮಾತ್ತಂಡಿಃ ಪುರಾ ಪ್ರಾಹ ತೇನ ತಂಡಿಕೃತೋಽಭವತ್।
13017022c ಸ್ವರ್ಗಾಚ್ಚೈವಾತ್ರ ಭೂಲೋಕಂ ತಂಡಿನಾ ಹ್ಯವತಾರಿತಃ।।

ಸ್ವರ್ಗಲೋಕದಿಂದ ಭೂಲೋಕಕ್ಕೆ ಇದನ್ನು ತಂಡಿಯು ಇಳಿಸಿದನು. ಹಿಂದೆ ತಂಡಿಯು ಇದನ್ನು ಹೇಳಿದುದರಿಂದ ಇದು ತಂಡಿಕೃತ ಎಂದೆನಿಸಿಕೊಂಡಿತು.

13017023a ಸರ್ವಮಂಗಲಮಂಗಲ್ಯಂ ಸರ್ವಪಾಪಪ್ರಣಾಶನಮ್।
13017023c ನಿಗದಿಷ್ಯೇ ಮಹಾಬಾಹೋ ಸ್ತವಾನಾಮುತ್ತಮಂ ಸ್ತವಮ್।।

ಮಹಾಬಾಹೋ! ಸರ್ವಮಂಗಲಮಂಗಲ್ಯವೂ ಸರ್ವಪಾಪಪ್ರಣಾಶನವೂ ಆದ ಸ್ತವಗಳಲ್ಲಿಯೇ ಉತ್ತಮವಾದ ಈ ಸ್ತವವನ್ನು ಕೇಳು.

13017024a ಬ್ರಹ್ಮಣಾಮಪಿ ಯದ್ಬ್ರಹ್ಮ ಪರಾಣಾಮಪಿ ಯತ್ಪರಮ್।
13017024c ತೇಜಸಾಮಪಿ ಯತ್ತೇಜಸ್ತಪಸಾಮಪಿ ಯತ್ತಪಃ।।
13017025a ಶಾಂತೀನಾಮಪಿ ಯಾ ಶಾಂತಿರ್ದ್ಯುತೀನಾಮಪಿ ಯಾ ದ್ಯುತಿಃ।
13017025c ದಾಂತಾನಾಮಪಿ ಯೋ ದಾಂತೋ ಧೀಮತಾಮಪಿ ಯಾ ಚ ಧೀಃ।।
13017026a ದೇವಾನಾಮಪಿ ಯೋ ದೇವೋ ಮುನೀನಾಮಪಿ ಯೋ ಮುನಿಃ।
13017026c ಯಜ್ಞಾನಾಮಪಿ ಯೋ ಯಜ್ಞಃ ಶಿವಾನಾಮಪಿ ಯಃ ಶಿವಃ।।
13017027a ರುದ್ರಾಣಾಮಪಿ ಯೋ ರುದ್ರಃ ಪ್ರಭುಃ ಪ್ರಭವತಾಮಪಿ।
13017027c ಯೋಗಿನಾಮಪಿ ಯೋ ಯೋಗೀ ಕಾರಣಾನಾಂ ಚ ಕಾರಣಮ್।।
13017028a ಯತೋ ಲೋಕಾಃ ಸಂಭವಂತಿ ನ ಭವಂತಿ ಯತಃ ಪುನಃ।
13017028c ಸರ್ವಭೂತಾತ್ಮಭೂತಸ್ಯ ಹರಸ್ಯಾಮಿತತೇಜಸಃ।।
13017029a ಅಷ್ಟೋತ್ತರಸಹಸ್ರಂ ತು ನಾಮ್ನಾಂ ಶರ್ವಸ್ಯ ಮೇ ಶೃಣು।
13017029c ಯಚ್ಛೃತ್ವಾ ಮನುಜಶ್ರೇಷ್ಠ ಸರ್ವಾನ್ಕಾಮಾನವಾಪ್ಸ್ಯಸಿ।।

ಬ್ರಹ್ಮನಿಗಿಂತಲೂ ಬ್ರಹ್ಮನಾಗಿರುವ, ಉತ್ತಮಕ್ಕೂ ಉತ್ತಮನಾಗಿರುವ, ತೇಜಸ್ಸುಗಳಿಗೂ ತೇಜಸನಾಗಿರುವ, ತಪಸ್ಸುಗಳಿಗೂ ತಪವಾಗಿರುವ, ಶಾಂತಿಗಳಿಗೂ ಶಾಂತನಾಗಿರುವ, ದ್ಯುತಿಗಳಿಗೂ ದ್ಯುತಿಯಾಗಿರುವ, ದಾಂತರಿಗೂ ದಾಂತನಾಗಿರುವ, ಧೀಮಂತರಿಗೂ ಧೀಮಂತನಾಗಿರುವ, ದೇವತೆಗಳಿಗೂ ದೇವನಾಗಿರುವ, ಮುನಿಗಳಿಗೂ ಮುನಿಯಾಗಿರುವ, ಯಜ್ಞಗಳಿಗೂ ಯಜ್ಞವಾಗಿರುವ, ಮಂಗಳಕ್ಕೂ ಮಂಗಳನಾಗಿರುವ, ರುದ್ರರಿಗೂ ರುದ್ರನಾಗಿರುವ, ಪ್ರಭುಗಳಿಗೂ ಪ್ರಭುವಾಗಿರುವ, ಯಾರಿಂದಾಗಿ ಲೋಕಗಳು ಪುನಃ ಪುನಃ ಹುಟ್ಟಿ ಇಲ್ಲವಾಗುತ್ತವೆಯೋ ಆ ಸರ್ವಭೂತಾತ್ಮಭೂತ, ಅಮಿತತೇಜಸ್ವಿ ಹರ ಶರ್ವನ ಸಾವಿರದೆಂಟು ನಾಮಗಳನ್ನು ಕೇಳು. ಮನುಜಶ್ರೇಷ್ಠ! ಇವನ್ನು ಕೇಳಿ ನಿನ್ನ ಸರ್ವ ಕಾಮನೆಗಳನ್ನೂ ಪಡೆದುಕೊಳ್ಳುತ್ತೀಯೆ.

13017030a ಸ್ಥಿರಃ ಸ್ಥಾಣುಃ ಪ್ರಭುರ್ಭಾನುಃ ಪ್ರವರೋ ವರದೋ ವರಃ। 3
13017030c ಸರ್ವಾತ್ಮಾ ಸರ್ವವಿಖ್ಯಾತಃ ಸರ್ವಃ ಸರ್ವಕರೋ ಭವಃ।।

4(೧) ಸ್ಥಿರಃ – ಗಮನಾಗಮರಹಿತನು, ಕೂಟಸ್ಥನು, ನಿತ್ಯನು. (೨) ಸ್ಥಾಣುಃ – ಮನೆಗೆ ಆಧಾರಭೂತವಾದ ಕಂಬದಂತೆ ಜಗತ್ತಿನ ಆಧಾರಸ್ತಂಭನು. (೩) ಪ್ರಭುಃ – ಸಮರ್ಥನು. (೪) ಭಾನುಃ – ಸೂರ್ಯನು. (೫) ಪ್ರವರಃ – ಸರ್ವಶ್ರೇಷ್ಠನು. (೬) ವರದಃ – ವರವನ್ನೀಯುವವನು. (೭) ವರಃ – ವರಿಸಲು ಯೋಗ್ಯನಾದವನು, ವರಸ್ವರೂಪನು. (೮) ಸರ್ವಾತ್ಮಃ – ಸರ್ವರಿಗೂ ಆತ್ಮಸ್ವರೂಪನು. (೯) ಸರ್ವವಿಖ್ಯಾತಃ – ಸರ್ವತ್ರ ವಿಖ್ಯಾತನು. (೧೦) ಸರ್ವಃ – ಸರ್ವಸ್ವರೂಪನು. (೧೧) ಸರ್ವಕರಃ – ಸಂಪೂರ್ಣ ಜಗತ್ತಿನ ಸೃಷ್ಟಿಕರ್ತನು, ಸರ್ವವನ್ನೂ ಮಾಡುವವನು. (೧೨) ಭವಃ – ಚರಾಚರಗಳ ಉತ್ಪತ್ತಿಸ್ಥಾನನು.

13017031a ಜಟೀ ಚರ್ಮೀ ಶಿಖಂಡೀ ಚ ಸರ್ವಾಂಗಃ ಸರ್ವಭಾವನಃ।
13017031c ಹರಿಶ್ಚ ಹರಿಣಾಕ್ಷಶ್ಚ ಸರ್ವಭೂತಹರಃ ಪ್ರಭುಃ।। 5

(೧೩) ಜಟೀ – ಜಟಾಧಾರಿಯು. (೧೪) ಚರ್ಮೀ – ವ್ಯಾಘ್ರಚರ್ಮಧರನು. (೧೫) ಶಿಖಂಡೀ – ಶಿಖೆಯನ್ನಿಟ್ಟುಕೊಂಡಿರುವವನು. (೧೬) ಸರ್ವಾಂಗಃ – ಸಂಪೂರ್ಣ ಅಂಗಗಳಿಂದ ಸಂಪನ್ನನಾಗಿರುವವನು. (೧೭) ಸರ್ವಭಾವನಃ – ಸರ್ವವನ್ನೂ ಸೃಷ್ಟಿಸಿದವನು. (೧೮) ಹರಿಃ – ಸಂಸಾರವನ್ನು ಕಾರಣಸಹಿತವಾಗಿ ಹರಣಮಾಡುವವನು; ಭಕ್ತರ ಆಪತ್ತುಗಳನ್ನು ಹರಣಮಾಡುವವನು. (೧೯) ಹರಿಣಾಕ್ಷಃ – ಜಿಂಕೆಯ ಕಣ್ಣುಗಳಂತೆ ಚಂಚಲ ವಿಶಾಲ ಕಣ್ಣುಗಳುಳ್ಳವನು. (೨೦) ಸರ್ವಭೂತಹರಃ – ಸರ್ವಭೂತಗಳನ್ನೂ ಸಂಹರಿಸುವವನು. (೨೧) ಪ್ರಭುಃ – ಸ್ವಾಮಿಯು.

13017032a ಪ್ರವೃತ್ತಿಶ್ಚ ನಿವೃತ್ತಿಶ್ಚ ನಿಯತಃ ಶಾಶ್ವತೋ ಧ್ರುವಃ।
13017032c ಶ್ಮಶಾನಚಾರೀ ಭಗವಾನ್ಖಚರೋ ಗೋಚರೋಽರ್ದನಃ।।

(೨೨) ಪ್ರವೃತ್ತಿಃ – ಪ್ರವೃತ್ತಿಮಾರ್ಗಸ್ವರೂಪನು. (೨೩) ನಿವೃತ್ತಿಃ – ನಿವೃತ್ತಿಮಾರ್ಗಸ್ವರೂಪನು. (೨೪) ನಿಯತಃ – ನಿಯಮಪರಾಯಣನು. (೨೫) ಶಾಶ್ವತಃ – ನಿತ್ಯನು. (೨೬) ಧ್ರುವಃ – ಅಚಲನು. (೨೭) ಶ್ಮಶಾನಚಾರೀ – ಶ್ಮಶಾನಸಂಚಾರಿಯು. (೨೮) ಭಗವಾನಃ – ಐಶ್ವರ್ಯ, ಜ್ಞಾನ, ಯಶಸ್ಸು, ಶ್ರೀ, ವೈರಾಗ್ಯ ಮತ್ತು ಧರ್ಮಗಳಿಂದ ಸಂಪನ್ನನಾಗಿರುವ ಭಗವಂತನು. (೨೯) ಖಚರಃ – ಆಕಾಶದಲ್ಲಿ ಸಂಚರಿಸುವವನು. (೩೦) ಗೋಚರಃ – ಪೃಥ್ವಿಯಲ್ಲಿ ಸಂಚರಿಸುವವನು, ಇಂದ್ರಿಯಗಳಲ್ಲಿ ಸಂಚರಿಸುತ್ತ ಇಂದ್ರಿಯಸುಖಗಳನ್ನು ಅನುಭವಿಸುವವನು. (೩೧) ಆರ್ದನಃ – ಸಂಹಾರಕನು.

13017033a ಅಭಿವಾದ್ಯೋ ಮಹಾಕರ್ಮಾ ತಪಸ್ವೀ ಭೂತಭಾವನಃ।
13017033c ಉನ್ಮತ್ತವೇಶಪ್ರಚ್ಚನ್ನಃ ಸರ್ವಲೋಕಪ್ರಜಾಪತಿಃ।।

(೩೨) ಅಭಿವಾದ್ಯಃ – ನಮಸ್ಕಾರಕ್ಕೆ ಯೋಗ್ಯನು. (೩೩) ಮಹಾಕರ್ಮಃ – ಮಹತ್ತರ ಕರ್ಮಗಳನ್ನು ಮಾಡುವವನು. (೩೪) ತಪಸ್ವೀ – ತಪಸ್ಸನ್ನಾಚರಿಸುವವನು. (೩೫) ಭೂತಭಾವನಃ – ಸಂಕಲ್ಪಮಾತ್ರದಿಂದಲೇ ಆಕಾಶ ಮೊದಲಾದ ಮಹಾಭೂತಗಳನ್ನು ಸೃಷ್ಟಿಸುವವನು. (೩೬) ಉನ್ಮತ್ತವೇಶಪ್ರಚ್ಛನ್ನಃ – ಉನ್ಮತ್ತನಂತೆ ವೇಷಧರಿಸಿ ನಿಗೂಢನಾಗಿರುವವನು. (೩೭) ಸರ್ವಲೋಕಪ್ರಜಾಪತಿಃ – ಸರ್ವಲೋಕಗಳ ಪ್ರಜೆಗಳನ್ನೂ ಪಾಲಿಸುವವನು.

13017034a ಮಹಾರೂಪೋ ಮಹಾಕಾಯಃ ಸರ್ವರೂಪೋ ಮಹಾಯಶಾಃ।
13017034c ಮಹಾತ್ಮಾ ಸರ್ವಭೂತಶ್ಚ ವಿರೂಪೋ ವಾಮನೋ ಮನುಃ।। 6

(೩೮) ಮಹಾರೂಪಃ – ಮಹಾರೂಪಿಯು. (೩೯) ಮಹಾಕಾಯಃ – ಮಹಾಕಾಯನು. (೪೦) ಸರ್ವರೂಪಃ – ಸರ್ವರೂಪವುಳ್ಳವನು. (೪೧) ಮಹಾಯಶಃ – ಮಹಾಯಶಸ್ವಿಯು. (೪೨) ಮಹಾತ್ಮಃ – ಮಹಾತ್ಮನು. (೪೩) ಸರ್ವಭೂತಃ – ಇರುವ ಎಲ್ಲವೂ ಆದವನು. (೪೪) ವಿರೂಪಃ – ವಿಶ್ವರೂಪನು. (೪೫) ವಾಮನಃ – ಕುಳ್ಳನು. (೪೬) ಮನುಃ – ಮೊದಲನೆಯ ಮನುಷ್ಯನು.

13017035a ಲೋಕಪಾಲೋಽಂತರ್ಹಿತಾತ್ಮಾ ಪ್ರಸಾದೋ ಹಯಗರ್ದಭಿಃ।
13017035c ಪವಿತ್ರಶ್ಚ ಮಹಾಂಶ್ಚೈವ ನಿಯಮೋ ನಿಯಮಾಶ್ರಯಃ।।

(೪೭) ಲೋಕಪಾಲಃ – ಲೋಕರಕ್ಷಕನು. (೪೮) ಅಂತರ್ಹಿತಾತ್ಮಾ – ಅದೃಶ್ಯನಾಗಿರುವವನು. (೪೯) ಪ್ರಸಾದಃ – ಪ್ರಸನ್ನತೆಯಿಂದ ಪೂರ್ಣನಾಗಿರುವವನು. (೫೦) ಹಯಗರ್ದಭಿಃ – ಹೇಸರಗತ್ತೆಗಳನ್ನು ಕಟ್ಟಿದ ರಥದಲ್ಲಿ ಸಂಚರಿಸುವವನು7. (೫೧) ಪವಿತ್ರಃ – ಸಂಸಾರವೆಂಬ ವಜ್ರಪಾತದಿಂದ ರಕ್ಷಿಸುವವನು; ಶುದ್ಧವಸ್ತುಸ್ವರೂಪನು. (೫೨) ಮಹಾನ್ – ಪೂಜನೀಯನು. (೫೩) ನಿಯಮಃ – ನಿಯಮಗಳುಳ್ಳವನು8. (೫೪) ನಿಯಮಾಶ್ರಯಃ – ನಿಯಮಗಳಿಗೆ ಆಶ್ರಯನಾಗಿರುವವನು.

13017036a ಸರ್ವಕರ್ಮಾ ಸ್ವಯಂಭೂಶ್ಚ ಆದಿರಾದಿಕರೋ ನಿಧಿಃ।
13017036c ಸಹಸ್ರಾಕ್ಷೋ ವಿರೂಪಾಕ್ಷಃ ಸೋಮೋ ನಕ್ಷತ್ರಸಾಧಕಃ।।

(೫೫) ಸರ್ವಕರ್ಮಾ – ಸಕಲ ಶಿಲ್ಪಾಚಾರೀ ವಿಶ್ವಕರ್ಮನು. (೫೬) ಸ್ವಯಂಭೂ – ನಿತ್ಯಸಿದ್ಧನು. (೫೭) ಆದಿಃ – ಮೊದಲಿಗನು. (೫೮) ಆದಿಕರಃ – ಆದಿಪುರುಷನನ್ನು ಸೃಷ್ಟಿಸಿದವನು. (೫೯) ನಿಧಿಃ – ಸಕಲ ಐಶ್ವರ್ಯಗಳ ಭಂಡಾರನು. (೬೦) ಸಹಸ್ರಾಕ್ಷಃ – ಸಾವಿರ ಕಣ್ಣುಗಳುಳ್ಳವನು. (೬೧) ವಿರೂಪಾಕ್ಷಃ – ವಿರೂಪಕಣ್ಣುಳ್ಳವನು. (೬೨) ಸೋಮಃ – ಚಂದ್ರಸ್ವರೂಪನು. (೬೩) ನಕ್ಷತ್ರಸಾಧಕಃ – ನಕ್ಷತ್ರಗಳಾಗಬಲ್ಲ ಸಾಧನಗಳಿಗೆ9 ಕಾರಣನಾಗಿರುವವನು.

13017037a ಚಂದ್ರಸೂರ್ಯಗತಿಃ ಕೇತುರ್ಗ್ರಹೋ ಗ್ರಹಪತಿರ್ವರಃ।
13017037c ಅದ್ರಿರದ್ರ್ಯಾಲಯಃ ಕರ್ತಾ ಮೃಗಬಾಣಾರ್ಪಣೋಽನಘಃ।। 10

(೬೪) ಚಂದ್ರಸೂರ್ಯಗತಿಃ – ಚಂದ್ರಸೂರ್ಯರ ಮಾರ್ಗ. (೬೫) ಕೇತುಃ – ಕೇತುಗ್ರಹ ಸ್ವರೂಪನು. (೬೬) ಗ್ರಹಃ – ರಾಹುರೂಪನಾಗಿ ಚಂದ್ರ-ಸೂರ್ಯರನ್ನು ನುಂಗುವವನು. (೬೭) ಗ್ರಹಪತಿಃ – ಗ್ರಹಗಳ ಒಡೆಯನು. (೬೮) ವರಃ – ಪೂಜ್ಯನು. (೬೯) ಅದ್ರಿಃ – ಪರ್ವತನು. (೭೦) ಅದ್ರ್ಯಾಲಯಃ – ಸಮುದ್ರನು. (೭೧) ಕರ್ತಾ – ಕರ್ತೃವು. (೭೨) ಮೃಗಬಾಣಾರ್ಪಣಃ – ಮೃಗರೂಪಿಯಾದ ಯಜ್ಞದ ಮೇಲೆ ಬಾಣವನ್ನು ಪ್ರಯೋಗಿಸಿದವನು. (೭೩) ಅನಘಃ – ಪಾಪರಹಿತನು.

13017038a ಮಹಾತಪಾ ಘೋರತಪಾ ಅದೀನೋ ದೀನಸಾಧಕಃ।
13017038c ಸಂವತ್ಸರಕರೋ ಮಂತ್ರಃ ಪ್ರಮಾಣಂ ಪರಮಂ ತಪಃ।।

(೭೪) ಮಹಾತಪಾಃ – ವಿಶ್ವಸೃಷ್ಟಿಗೆ ಸಮರ್ಥವಾದ ಮಹಾ ತಪಸ್ಸನ್ನು ಮಾಡಿದವನು. (೭೫) ಘೋರತಪಾಃ – ವಿಶ್ವಸಂಹಾರಕ್ಕೆ ಸಮರ್ಥವಾದ ಘೋರ ತಪಸ್ಸನ್ನು ಮಾಡಿದವನು. (೭೬) ಅದೀನಃ – ಮಹಾ ಉದಾರಿಯು. (೭೭) ದೀನಸಾಧಕಃ – ಶರಣಾಗತರ ಇಷ್ಟಸಾಧಕನು. (೭೮) ಸಂವತ್ಸರಕರಃ – ಸಂವತ್ಸರಗಳನ್ನುಂಟುಮಾಡುವವನು, ಕಾಲಚಕ್ರಪ್ರವರ್ತಕನು. (೭೯) ಮಂತ್ರಃ – ಪ್ರಣವಾದಿ ಮಂತ್ರಸ್ವರೂಪನು. (೮೦) ಪ್ರಮಾಣಃ – ವೇದಶಾಸ್ತ್ರಾದಿ ಪ್ರಮಾಣರೂಪನು. (೮೧) ಪರಮಂ ತಪಃ – ಉತ್ಕೃಷ್ಟ ತಪಃಸ್ವರೂಪನು.

13017039a ಯೋಗೀ ಯೋಜ್ಯೋ ಮಹಾಬೀಜೋ ಮಹಾರೇತಾ ಮಹಾತಪಾಃ।
13017039c ಸುವರ್ಣರೇತಾಃ ಸರ್ವಜ್ಞಃ ಸುಬೀಜೋ ವೃಷವಾಹನಃ।। 11

(೮೨) ಯೋಗೀ – ಯೋಗನಿಷ್ಠನು. (೮೩) ಯೋಜ್ಯಃ – ಭಕ್ತರ ಮನಸ್ಸನ್ನು ಪರಬ್ರಹ್ಮನೊಡನೆ ಸೇರಿಸುವವನು. (೮೪) ಮಹಾಬೀಜಃ – ಕಾರಣಕ್ಕೂ ಕಾರಣನು. (೮೫) ಮಹಾರೇತಾಃ – ಮಹಾವೀರ್ಯಶಾಲಿಯು. (೮೬) ಮಹಾತಪಾಃ – ಮಹಾತಪಸ್ವಿಯು. (೮೭) ಸುವರ್ಣರೇತಾ – ಹಿರಣ್ಮಯ ಬ್ರಹ್ಮಾಂಡವನ್ನು ಸೃಷ್ಟಿಸಿದವನು. (೮೮) ಸರ್ವಜ್ಞಃ – ಸರ್ವವನ್ನೂ ತಿಳಿದವನು. (೮೯) ಸುಬೀಜಃ – ಉತ್ತಮ ಬೀಜರೂಪನು. (೯೦) ವೃಷವಾಹನಃ – ವೃಷಭವಾಹನನು.

13017040a ದಶಬಾಹುಸ್ತ್ವನಿಮಿಷೋ ನೀಲಕಂಠ ಉಮಾಪತಿಃ।
13017040c ವಿಶ್ವರೂಪಃ ಸ್ವಯಂಶ್ರೇಷ್ಠೋ ಬಲವೀರೋ ಬಲೋ ಗಣಃ।। 12

(೯೧) ದಶಬಾಹುಃ – ಹತ್ತು ತೋಳುಗಳುಳ್ಳವನು. (೯೨) ಅನಿಮಿಷಃ – ಕಣ್ಣುರೆಪ್ಪಗಳನ್ನು ಮುಚ್ಚದೇ ಇರುವವನು. (೯೩) ನೀಲಕಂಠಃ – ಹಾಲಾಹಲ ವಿಷವನ್ನು ಕಂಠದಲ್ಲಿ ಧರಿಸಿದವನು. (೯೪) ಉಮಾಪತಿಃ – ಉಮೆಯ ಪತಿಯು. (೯೫) ವಿಶ್ವರೂಪಃ – ವಿಶ್ವವೇ ತಾನಾಗಿರುವವನು. (೯೬) ಸ್ವಯಂಶ್ರೇಷ್ಠಃ - ಸ್ವಯಂಸಿದ್ಧವಾದ ಶ್ರೇಷ್ಠತೆಯುಳ್ಳವನು. (೯೭) ಬಲವೀರಃ – ಬಲವೇ ಪರಾಕ್ರಮವಾಗುಳ್ಳವನು. (೯೮) ಬಲೋಗಣಃ – ಬಲಿಷ್ಠ ಗಣಸಮುದಾಯವುಳ್ಳವನು.

13017041a ಗಣಕರ್ತಾ ಗಣಪತಿರ್ದಿಗ್ವಾಸಾಃ ಕಾಮ್ಯ ಏವ ಚ।
13017041c ಪವಿತ್ರಂ ಪರಮಂ ಮಂತ್ರಃ ಸರ್ವಭಾವಕರೋ ಹರಃ।। 13

(೯೯) ಗಣಕರ್ತಾ – ಪಾರ್ಷದಗಣಗಳನ್ನು ಸಂಘಟಿಸುವವನು. (೧೦೦) ಗಣಪತಿಃ – ಪ್ರಮಥಗಣಗಳ ಒಡೆಯನು. (೧೦೧) ದಿಗ್ವಾಸಾಃ – ದಿಗಂಬರನು. (೧೦೨) ಕಾಮ್ಯ – ಬಯಸಲ್ಪಡುವವನು. (೧೦೩) ಪವಿತ್ರಂ – ಪರಿಶುದ್ಧನು. (೧೦೪) ಪರಮಂ – ಉತ್ಕೃಷ್ಟನು. (೧೦೫) ಮಂತ್ರಃ –ಮಂತ್ರಸ್ವರೂಪನು. (೧೦೬) ಸರ್ವಭಾವಕರಃ – ಸಮಸ್ತಗಳ ಸೃಷ್ಟಿಕರ್ತನು. (೧೦೭) ಹರಃ – ದುಃಖವನ್ನು ನಾಶಗೊಳಿಸುವವನು.

13017042a ಕಮಂಡಲುಧರೋ ಧನ್ವೀ ಬಾಣಹಸ್ತಃ ಕಪಾಲವಾನ್।
13017042c ಅಶನೀ ಶತಘ್ನೀ ಖಡ್ಗೀ ಪಟ್ಟಿಶೀ ಚಾಯುಧೀ ಮಹಾನ್।।

(೧೦೮) ಕಮಂಡಲುಧರಃ – ಕಮಂಡಲುವನ್ನು ಹಿಡಿದಿರುವವನು. (೧೦೯) ಧನ್ವೀ – ಧನುಸ್ಸನ್ನು ಹಿಡಿದಿರುವವನು. (೧೧೦) ಬಾಣಹಸ್ತಃ – ಬಾಣವನ್ನು ಹಿಡಿದಿರುವವನು. (೧೧೧) ಕಪಾಲವಾನ್ – ಕಪಾಲವನ್ನು ಹಿಡಿದಿರುವವನು. (೧೧೨) ಅಶನೀ – ವಜ್ರಾಯುಧನ್ನು ಹಿಡಿದಿರುವವನು. (೧೧೩) ಶತಘ್ನೀ – ಶತಘ್ನಿಯನ್ನು ಹಿಡಿದಿರುವವನು. (೧೧೪) ಖಡ್ಗೀ – ಖಡ್ಗವನ್ನು ಹಿಡಿದಿರುವವನು. (೧೧೫) ಪಟ್ಟಿಶೀ – ಪಟ್ಟಿಶವನ್ನು ಹಿಡಿದಿರುವವನು. (೧೧೬) ಆಯುಧೀ – ತ್ರಿಶೂಲಾಯುಧವನ್ನು ಹಿಡಿದಿರುವವನು. (೧೧೭) ಮಹಾನ್ – ಸರ್ವಶ್ರೇಷ್ಠನು.

13017043a ಸ್ರುವಹಸ್ತಃ ಸುರೂಪಶ್ಚ ತೇಜಸ್ತೇಜಸ್ಕರೋ ನಿಧಿಃ।
13017043c ಉಷ್ಣೀಷೀ ಚ ಸುವಕ್ತ್ರಶ್ಚ ಉದಗ್ರೋ ವಿನತಸ್ತಥಾ।।

(೧೧೮) ಸ್ರುವಹಸ್ತಃ – ಕೈಯಲ್ಲಿ ಸ್ರುವ, ಯಜ್ಞಪಾತ್ರೆಯನ್ನು ಹಿಡಿದಿರುವವನು. (೧೧೯) ಸುರೂಪಃ – ಸುಂದರ ರೂಪಿಯು. (೧೨೦) ತೇಜಃ – ತೇಜೋರಾಶಿಯು. (೧೨೧) ತೇಜಸ್ಕರೋ – ತೇಜಸ್ಸನ್ನುಂಟುಮಾಡುವವನು. (೧೨೨) ನಿಧಿಃ – ನಿಧಿಸ್ವರೂಪನು. (೧೨೩) ಉಷ್ಣೀಷೀ – ಕಿರೀಟಧಾರಿಯು. (೧೨೪) ಸುವಕ್ತ್ರಃ – ಸುಂದರ ಮುಖವುಳ್ಳವನು. (೧೨೫) ಉದಗ್ರಃ – ಓಜಸ್ವಿಯು. (೧೨೬) ವಿನತಃ – ವಿನಯಶೀಲನು.

13017044a ದೀರ್ಘಶ್ಚ ಹರಿಕೇಶಶ್ಚ ಸುತೀರ್ಥಃ ಕೃಷ್ಣ ಏವ ಚ।
13017044c ಸೃಗಾಲರೂಪಃ ಸರ್ವಾರ್ಥೋ ಮುಂಡಃ ಕುಂಡೀ ಕಮಂಡಲುಃ।। 14

(೧೨೭) ದೀರ್ಘಃ – ಎತ್ತರವಾಗಿರುವವನು. (೧೨೮) ಹರಿಕೇಶಃ – ಕಂದುಹಳದೀ ಬಣ್ಣದ ಕೂದಲುಗಳುಳ್ಳವನು, ಇಂದ್ರಿಯಗಳನ್ನು ರಶ್ಮಿಗಳನ್ನಾಗಿ ಹಿಡಿದುಕೊಂಡಿರುವನು, ತ್ರಿಮೂರ್ತಿಸ್ವರೂಪನು. (೧೨೯) ಸುತೀರ್ಥಃ – ಉತ್ತಮ ತಿರ್ಥಸ್ವರೂಪನು. (೧೩೦) ಕೃಷ್ಣಃ – ಸಚ್ಚಿದಾನಂದ ಸ್ವರೂಪನು15. (೧೩೧) ಸೃಗಾಲರೂಪಃ – ನರಿಯ ರೂಪವನ್ನು ಧರಿಸಿರುವವನು. (೧೩೨) ಸರ್ವಾರ್ಥಃ – ಸರ್ವಪ್ರಯೋಜನಗಳುಳ್ಳವನು. (೧೩೩) ಮುಂಡಃ – ಮುಂಡನ ಮಾಡಿಸಿಕೊಂಡಿರುವ ಭಿಕ್ಷುವು. (೧೩೪) ಕುಂಡೀ - ಗಿಂಡಿಯನ್ನು ಹಿಡಿದವನು. (೧೩೫) ಕಮಂಡಲುಃ – ಕಮಂಡಲುವನ್ನು ಧರಿಸಿರುವವನು.

13017045a ಅಜಶ್ಚ ಮೃಗರೂಪಶ್ಚ ಗಂಧಧಾರೀ ಕಪರ್ದ್ಯಪಿ। 16
13017045c ಊರ್ಧ್ವರೇತಾ ಊರ್ಧ್ವಲಿಂಗ ಊರ್ಧ್ವಶಾಯೀ ನಭಸ್ತಲಃ।।

(೧೩೬) ಅಜಃ – ಜನ್ಮವಿಲ್ಲದವನು. (೧೩೭) ಮೃಗರೂಪಃ - ಜಿಂಕೆಯ ರೂಪವನ್ನು ತಳೆದಿರುವವನು. (೧೩೮) ಗಂಧಧಾರೀ – ಕಸ್ತೂರೀ-ಚಂದನಾದಿ ಸುಗಂಧದ್ರವ್ಯಗಳನ್ನು ಲೇಪಿಸಿಕೊಂಡಿರುವವನು. (೧೩೯) ಕಪರ್ದೀ – ಜಟಾಸಮೂಹವನ್ನು ಧರಿಸಿರುವವನು. (೧೪೦) ಊರ್ಧ್ವರೇತಾಃ – ಅಸ್ಖಲಿತ ಬ್ರಹ್ಮಚಾರೀ. (೧೪೧) ಊರ್ಧ್ವಲಿಂಗಃ – ಮೇಲ್ಮುಖವಾದ ಲಿಂಗವಿರುವವನಾದುದರಿಂದ ಅಸ್ಖಲಿತರೇತಸ್ಕನು17. (೧೪೨) ಊರ್ಧ್ವಶಾಯೀ – ಮೇಲ್ಮುಖನಾಗಿ ಮಲಗುವವನು. (೧೪೩) ನಭಸ್ಥಲಃ – ಆಕಾಶವೇ ವಾಸಸ್ಥಾನವಾಗುಳ್ಳವನು.

13017046a ತ್ರಿಜಟಶ್ಚೀರವಾಸಾಶ್ಚ ರುದ್ರಃ ಸೇನಾಪತಿರ್ವಿಭುಃ।
13017046c ಅಹಶ್ಚರೋಽಥ ನಕ್ತಂ ಚ ತಿಗ್ಮಮನ್ಯುಃ ಸುವರ್ಚಸಃ।। 18

(೧೪೪) ತ್ರಿಜಟಃ – ಮೂರು ಜಟೆಗಳನ್ನು ಧರಿಸಿದವನು. (೧೪೫) ಚೀರವಾಸಾಃ – ನಾರುಮಡಿಯನ್ನುಟ್ಟಿರುವವನು. (೧೪೬) ರುದ್ರಃ – ಸರ್ವರಿಗೂ ಪ್ರಾಣರೂಪ19. (೧೪೭) ಸೇನಾಪತಿಃ – ಸೇನಾನಾಯಕನು. (೧೪೮) ವಿಭುಃ – ಸರ್ವವ್ಯಾಪಿಯು. (೧೪೯) ಅಹಶ್ಚರಃ – ಹಗಲಿನಲ್ಲಿ ಸಂಚರಿಸುವವನು. (೧೫೦) ನಕ್ತಂಚರಃ – ರಾತ್ರಿಯಲ್ಲಿ ಸಂಚರಿಸುವವನು. (೧೫೧) ತಿಗ್ಮಮನ್ಯುಃ – ತೀಕ್ಷ್ಣ ಕೋಪವುಳ್ಳವನು. (೧೫೨) ಸುವರ್ಚಸಃ – ಅಧ್ಯಯನ-ತಪಸ್ಸುಗಳಿಂದ ಪ್ರಾಪ್ತವಾದ ಸುಂದರ ವರ್ಚಸ್ಸುಳ್ಳವನು.

13017047a ಗಜಹಾ ದೈತ್ಯಹಾ ಲೋಕೋ ಲೋಕಧಾತಾ ಗುಣಾಕರಃ।
13017047c ಸಿಂಹಶಾರ್ದೂಲರೂಪಶ್ಚ ಆರ್ದ್ರಚರ್ಮಾಂಬರಾವೃತಃ।।

(೧೫೩) ಗಜಹಾ – ಗಜಾಸುರನನ್ನು ಕೊಂದವನು. (೧೫೪) ದೈತ್ಯಹಾ – ದೈತ್ಯರನ್ನು ಸಂಹರಿಸಿದವನು. (೧೫೫) ಲೋಕಃ – ಜಗತ್ತು (೧೫೬) ಲೋಕಧಾತಾ – ಲೋಕಗಳ ಧಾರಣೆ-ಪೋಷಣೆಗಳನ್ನು ಮಾಡುವವನು. (೧೫೭) ಗುಣಾಕರಃ – ಸದ್ಗುಣಗಳಿಗೆ ಸಮುದ್ರಪ್ರಾಯನಾಗಿರುವವನು. (೧೫೮) ಸಿಂಹಶಾರ್ದೂಲರೂಪಃ – ಸಿಂಹ ಮತ್ತು ಹುಲಿಗಳ ರೂಪವನ್ನು ಧರಿಸತಕ್ಕವನು. (೧೫೯) ಆರ್ದ್ರಚರ್ಮಾಂಬರಾವೃತಃ – ಗಜಾಸುರನ ರಕ್ತದಿಂದ ಒದ್ದೆಯಾದ ಚರ್ಮವನ್ನೇ ಬಟ್ಟೆಯನ್ನಾಗಿ ಹೊದೆದುಕೊಂಡಿರುವವನು.

13017048a ಕಾಲಯೋಗೀ ಮಹಾನಾದಃ ಸರ್ವವಾಸಶ್ಚತುಷ್ಪಥಃ। 20
13017048c ನಿಶಾಚರಃ ಪ್ರೇತಚಾರೀ ಭೂತಚಾರೀ ಮಹೇಶ್ವರಃ।।

(೧೬೦) ಕಾಲಯೋಗೀ – ಯೋಗಬಲದಿಂದ ಕಾಲನನ್ನೂ ಜಯಿಸಿದವನು. (೧೬೧) ಮಹಾನಾದಃ – ಅನಾಹತಧ್ವನಿಸ್ವರೂಪನು. (೧೬೨) ಸರ್ವವಾಸಃ – ಎಲ್ಲವುಗಳಲ್ಲಿಯೂ ವಾಸಿಸುವವನು. (೧೬೩) ಚತುಷ್ಪಥಃ – ನಾಲ್ಕು ಮಾರ್ಗಗಳಿಂದ21 ಹೊಂದತಕ್ಕವನು. (೧೬೪) ನಿಶಾಚರಃ – ರಾತ್ರಿಯಲ್ಲಿ ಸಂಚರಿಸುವವನು. (೧೬೫) ಪ್ರೇತಚಾರೀ – ಪ್ರೇತಗಳೊಡನೆ ಸಂಚರಿಸುವವನು. (೧೬೬) ಭೂತಚಾರೀ – ಭೂತಗಳೊಡನೆ ಸಂಚರಿಸುವವನು. (೧೬೭) ಮಹೇಶ್ವರಃ – ಇಂದ್ರನೇ ಮೊದಲಾದ ಲೋಕೇಶ್ವರರಿಗೂ ದೊಡ್ಡವನು.

13017049a ಬಹುಭೂತೋ ಬಹುಧನಃ ಸರ್ವಾಧಾರೋಽಮಿತೋ ಗತಿಃ।
13017049c ನೃತ್ಯಪ್ರಿಯೋ ನಿತ್ಯನರ್ತೋ ನರ್ತಕಃ ಸರ್ವಲಾಸಕಃ।। 22

(೧೬೮) ಬಹುಭೂತಃ – ಒಬ್ಬನೇ ಅನೇಕಭೂತನಾಗಿರುವವನು. (೧೬೯) ಬಹುಧನಃ – ಅನೇಕ ಧನಗಳುಳ್ಳವನು. (೧೭೦) ಸರ್ವಾಧಾರಃ – ಎಲ್ಲವಕ್ಕೂ ಆಧಾರಭೂತನು. (೧೭೧) ಅಮಿತಃ – ಅನಂತನು. (೧೭೨) ಗತಿಃ – ಭಕ್ತರಿಗೂ ಯೋಗಿಗಳಿಗೂ ಪರಮಾಶ್ರಯನು. (೧೭೩) ನೃತ್ಯಪ್ರಿಯಃ – ತಾಂಡವ ನೃತ್ಯ ಪ್ರಿಯನು. (೧೭೪) ನಿತ್ಯನರ್ತಃ – ನಿರಂತರವೂ ನರ್ತಿಸುತ್ತಿರುವವನು. (೧೭೫) ನರ್ತಕಃ – ನರ್ತಿಸುವವನು. (೧೭೬) ಸರ್ವಲಾಸಕಃ – ಎಲ್ಲರಲ್ಲಿಯೂ ಪ್ರೇಮವಿರುವವನು.

13017050a ಘೋರೋ ಮಹಾತಪಾಃ ಪಾಶೋ ನಿತ್ಯೋ ಗಿರಿಚರೋ ನಭಃ।
13017050c ಸಹಸ್ರಹಸ್ತೋ ವಿಜಯೋ ವ್ಯವಸಾಯೋ ಹ್ಯನಿಂದಿತಃ।। 23

(೧೭೭) ಘೋರಃ – ಭಯಂಕರ ರೂಪವನ್ನು ಧರಿಸುವವನು. (೧೭೮) ಮಹಾತಪಾಃ – ಮಹಾತಪಸ್ವಿಯು. (೧೭೯) ಪಾಶಃ – ಪ್ರಾಣಿಗಳನ್ನು ಬಂಧಿಸುವ ಮಾಯಾರೂಪದ ಪಾಶವನ್ನು ಹೊಂದಿರುವವನು. (೧೮೦) ನಿತ್ಯಃ – ವಿನಾಶರಹಿತನು. (೧೮೧) ಗಿರಿಚರಃ – ಪರ್ವತಗಳಲ್ಲಿ ಸಂಚರಿಸುವವನು. (೧೮೨) ನಭಃ – ಆಕಾಶದಂತೆ ಸಂಗರಹಿತನು. (೧೮೩) ಸಹಸ್ರಹಸ್ತಃ – ಸಾವಿರ ಕೈಗಳುಳ್ಳವನು. (೧೮೪) ವಿಜಯಃ – ಶತ್ರಗಳನ್ನು ಗೆಲ್ಲುವವನು. (೧೮೫) ವ್ಯವಸಾಯಃ – ದೃಢನಿಶ್ಚಯನು. (೧೮೬) ಅನಿಂದಿತಃ – ನಿಂದನೆಯಿಲ್ಲದವನು.

13017051a ಅಮರ್ಷಣೋ ಮರ್ಷಣಾತ್ಮಾ ಯಜ್ಞಹಾ ಕಾಮನಾಶನಃ। 24
13017051c ದಕ್ಷಯಜ್ಞಾಪಹಾರೀ ಚ ಸುಸಹೋ ಮಧ್ಯಮಸ್ತಥಾ।।

(೧೮೭) ಅಮರ್ಷಣಃ – ಕೋಪಿಷ್ಠನು. (೧೮೮) ಮರ್ಷಣಾತ್ಮಾ – ಕೋಪಸ್ವರೂಪನು. (೧೮೯) ಯಜ್ಞಹಾ – ದಕ್ಷನ ಯಜ್ಞವನ್ನು ನಾಶಗೊಳಿಸಿದವನು. (೧೯೦) ಕಾಮನಾಶನಃ – ಕಾಮದೇವನನ್ನು ವಿನಾಶಗೊಳಿಸಿದವನು. (೧೯೧) ದಕ್ಷಯಜ್ಞಾಪಹಾರೀ – ದಕ್ಷನ ಯಜ್ಞವನ್ನೇ ಅಪಹರಿಸಿದವನು. (೧೯೨) ಸುಸಹಃ – ಅತ್ಯಂತ ಸಹನಶೀಲನು. (೧೯೩) ಮಧ್ಯಮಃ – ಮಧ್ಯಸ್ಥನು.

13017052a ತೇಜೋಪಹಾರೀ ಬಲಹಾ ಮುದಿತೋಽರ್ಥೋ ಜಿತೋ ವರಃ।
13017052c ಗಂಭೀರಘೋಷೋ ಗಂಭೀರೋ ಗಂಭೀರಬಲವಾಹನಃ।।

(೧೯೪) ತೇಜೋಪಹಾರೀ – ಎದುರಾಳಿಗಳ ತೇಜಸ್ಸನ್ನು ಅಪಹರಿಸುವವನು. (೧೯೫) ಬಲಹಾ – ಬಲನೆಂಬ ದೈತ್ಯನನ್ನು ಸಂಹರಿಸಿದವನು. (೧೯೬) ಮುದಿತಃ – ಆನಂದಸ್ವರೂಪನು. (೧೯೭) ಅರ್ಥಃ – ಅರ್ಥಸ್ವರೂಪನು. (೧೯೮) ಜಿತಃ – ಗೆಲ್ಲಲ್ಪಟ್ಟವನು. (೧೯೯) ವರಃ – ಶ್ರೇಷ್ಠನು. (೨೦೦) ಗಂಭೀರಘೋಷಃ – ಗಂಭೀರ ನಿನಾದವುಳ್ಳವನು. (೨೦೧) ಗಂಭೀರಃ – ಗಾಂಭೀರ್ಯಯುಕ್ತನು. (೨೦೨) ಗಂಭೀರಬಲವಾಹನಃ – ಗಂಭೀರನೂ ಬಲಿಷ್ಠನೂ ಆದ ವೃಷಭವನ್ನು ವಾಹನವನ್ನಾಗಿ ಹೊಂದಿರುವವನು.

13017053a ನ್ಯಗ್ರೋಧರೂಪೋ ನ್ಯಗ್ರೋಧೋ ವೃಕ್ಷಕರ್ಣಸ್ಥಿತಿರ್ವಿಭುಃ।
13017053c ತೀಕ್ಷ್ಣತಾಪಶ್ಚ ಹರ್ಯಶ್ವಃ ಸಹಾಯಃ ಕರ್ಮಕಾಲವಿತ್।। 25

(೨೦೩) ನ್ಯಗ್ರೋಧರೂಪಃ – ವಟವೃಕ್ಷಸ್ವರೂಪನು. (೨೦೪) ನ್ಯಗ್ರೋಧಃ – ವಟವೃಕ್ಷದಲ್ಲಿ ವಾಸಿಸುವವನು. (೨೦೫) ವೃಕ್ಷಕರ್ಣಸ್ಥಿತಿಃ – ವಟವೃಕ್ಷದ ಎಲೆಯಮೇಲೆ ಮಲಗಿರುವ ಬಾಲಮುಕುಂದ ಸ್ವರೂಪನು. (೨೦೬) ವಿಭುಃ – ವಿವಿಧ ರೂಪಗಳಿಂದ ಪ್ರಕಟವಾಗುವವನು. (೨೦೭) ತೀಕ್ಷ್ಣತಾಪಃ – ತೀಕ್ಷ್ಣ ತಾಪವನ್ನುಂಟುಮಾಡುವವನು. (೨೦೮) ಹರ್ಯಶ್ವಃ – ಕಂದು-ಹಳದೀ ಬಣ್ಣದ ಕುದುರೆಯ ಸವಾರನು. (೨೦೯) ಸಹಾಯಃ – ಸಹಾಯಕನು. (೨೧೦) ಕರ್ಮಕಾಲವಿದುಃ – ಕರ್ಮಗಳನ್ನು ಮಾಡಬೇಕಾದ ಕಾಲವನ್ನು ಚೆನ್ನಾಗಿ ತಿಳಿದಿರುವವನು.

13017054a ವಿಷ್ಣುಪ್ರಸಾದಿತೋ ಯಜ್ಞಃ ಸಮುದ್ರೋ ವಡವಾಮುಖಃ।
13017054c ಹುತಾಶನಸಹಾಯಶ್ಚ ಪ್ರಶಾಂತಾತ್ಮಾ ಹುತಾಶನಃ।।

(೨೧೧) ವಿಷ್ಣುಪ್ರಸಾದಿತಃ – ವಿಷ್ಣುವಿನಿಂದ ಪ್ರಸನ್ನಗೊಳಿಸಲ್ಪಟ್ಟವನು. (೨೧೨) ಯಜ್ಞಃ – ವಿಷ್ಣುಸ್ವರೂಪನು26. (೨೧೩) ಸಮುದ್ರಃ – ಮಹಾಸಾಗರಸ್ವರೂಪನು. (೨೧೪) ವಡವಾಮುಖಃ – ಸಮುದ್ರದಲ್ಲಿರುವ ವಡವಾನಲ ಸ್ವರೂಪನು. (೨೧೫) ಹುತಾಶನಸಹಾಯಃ – ಅಗ್ನಿಸಖ ವಾಯುವಿನ ಸ್ವರೂಪನು. (೨೧೬) ಪ್ರಶಾಂತಾತ್ಮಾ – ಶಾಂತಚಿತ್ತನು. (೨೧೭) ಹುತಾಶನಃ – ಅಗ್ನಿಸ್ವರೂಪನು.

13017055a ಉಗ್ರತೇಜಾ ಮಹಾತೇಜಾ ಜಯೋ ವಿಜಯಕಾಲವಿತ್।
13017055c ಜ್ಯೋತಿಷಾಮಯನಂ ಸಿದ್ಧಿಃ ಸಂಧಿರ್ವಿಗ್ರಹ ಏವ ಚ।। 27

(೨೧೮) ಉಗ್ರತೇಜಾ – ಉಗ್ರ ತೇಜಸ್ಸುಳ್ಳವನು. (೨೧೯) ಮಹಾತೇಜಾ – ಮಹಾತೇಜಸ್ಸುಳ್ಳವನು. (೨೨೦) ಜಯಃ – ವಿಜಯನು. (೨೨೧) ವಿಜಯಕಾಲವಿದುಃ – ವಿಜಯದೊರೆಯುವ ಕಾಲವನ್ನು ತಿಳಿದುಕೊಂಡಿರುವವನು. (೨೨೨) ಜ್ಯೋತಿಷಾಮಯನಂ – ಸಕಲಜ್ಯೋತಿಗಳಿಗೂ ಆಶ್ರಯಸ್ಥಾನನು. (೨೨೩) ಸಿದ್ಧಿಃ – ಸಿದ್ಧಸ್ವರೂಪನು. (೨೨೪) ಸಂಧಿಃ – ಜೋಡಿಸುವವನು. (೨೨೫) ವಿಗ್ರಹಃ – ಯುದ್ಧಸ್ವರೂಪನು.

13017056a ಶಿಖೀ ದಂಡೀ ಜಟೀ ಜ್ವಾಲೀ ಮೂರ್ತಿಜೋ ಮೂರ್ಧಗೋ ಬಲೀ।
13017056c ವೈಣವೀ ಪಣವೀ ತಾಲೀ ಕಾಲಃ ಕಾಲಕಟಂಕಟಃ।। 28

(೨೨೬) ಶಿಖೀ – ಶಿಖಾಧಾರಿಯಾದ ಗೃಹಸ್ಥನು. (೨೨೭) ದಂಡೀ – ದಂಡವನ್ನು ಹಿಡಿದಿರುವವನು. (೨೨೮) ಜಟೀ – ಜಟಾಧಾರಿಯಾದ ವಾನಪ್ರಸ್ಥನು. (೨೨೯) ಜ್ವಾಲೀ – ಪ್ರಜ್ವಲಿಸುವ ಜ್ವಾಲೆಯಲ್ಲಿ ಸಮಿತ್ತುಗಳನ್ನು ಹಾಕುವ ಬ್ರಹ್ಮಚಾರಿಯು. (೨೩೦) ಮೂರ್ತಿಜಃ – ಸಾಕಾರನಾಗಿ ಕಾಣಿಸಿಕೊಳ್ಳುವವನು. (೨೩೧) ಮೂರ್ಧಗಃ – ಸಹಸ್ರಾರಚಕ್ರದಲ್ಲಿ ಧ್ಯೇಯರೂಪನಾಗಿರುವವನು. (೨೩೨) ಬಲೀ – ಬಲಿಷ್ಠನು. (೨೩೩) ವೈಣವೀ – ಕೊಳಲನ್ನು ಬಾರಿಸುವ ಕೃಷ್ಣಸ್ವರೂಪನು. (೨೩೪) ಪಣವೀ – ಪಣವವೆಂಬ ವಾದ್ಯವನ್ನು ಬಾರಿಸುವವನು. (೨೩೫) ತಾಲೀ – ತಾಳವನ್ನು ಹಾಕುವವನು. (೨೩೬) ಕಾಲಃ – ಕಾಲಸ್ವರೂಪನು. (೨೩೭) ಕಾಲಕಟಂಕಟಃ – ಯಮನಿಗೂ ಈಶ್ವರೀ ಮಾಯೆಯ ಆವರಣವನ್ನು ಹೊದಿಸುವವನು.

13017057a ನಕ್ಷತ್ರವಿಗ್ರಹವಿಧಿರ್ಗುಣವೃದ್ಧಿರ್ಲಯೋಽಗಮಃ।
13017057c ಪ್ರಜಾಪತಿರ್ದಿಶಾಬಾಹುರ್ವಿಭಾಗಃ ಸರ್ವತೋಮುಖಃ।। 29

(೨೩೮) ನಕ್ಷತ್ರವಿಗ್ರಹವಿಧಿಃ – ನಕ್ಷತ್ರಗಳ ನಿಗ್ರಹವನ್ನು ತಿಳಿದಿರುವವನು. (೨೩೯) ಗುಣವೃದ್ಧಿಃ – ಸದ್ಗುಣಗಳನ್ನು ವೃದ್ಧಿಗೊಳಿಸುವವನು. (೨೪೦) ಲಯಃ – ಪ್ರಳಯಸ್ಥಾನನು. (೨೪೧) ಆಗಮಃ – ಸಾಮಾನ್ಯರಿಂದ ಪಡೆಯಲಸಾಧ್ಯನು. (೨೪೨) ಪ್ರಜಾಪತಿಃ – ವಿರಾಟಸ್ವರೂಪನು. (೨೪೩) ದಿಶಾಬಾಹುಃ – ದಿಕ್ಕುಗಳೇ ಬಾಹುಗಳಾಗುಳ್ಳವನು. (೨೪೪) ವಿಭಾಗಃ – ವ್ಯಷ್ಟಿಕಾರ್ಯರೂಪನು. (೨೪೫) ಸರ್ವತೋಮುಖಃ – ಎಲ್ಲಕಡೆ ಮುಖವುಳ್ಳವನು.

13017058a ವಿಮೋಚನಃ ಸುರಗಣೋ ಹಿರಣ್ಯಕವಚೋದ್ಭವಃ।
13017058c ಮೇಢ್ರಜೋ ಬಲಚಾರೀ ಚ ಮಹಾಚಾರೀ ಸ್ತುತಸ್ತಥಾ।। 30

(೨೪೬) ವಿಮೋಚನಃ – ಸಂಸಾರಚಕ್ರದಿಂದ ವಿಮೋಚನಗೊಳಿಸುವವನು. (೨೪೭) ಸುರಗಣಃ – ಸುರರ ಸೇನಾಸ್ವರೂಪನು. (೨೪೮) ಹಿರಣ್ಯಕವಚೋದ್ಭವಃ – ಬ್ರಹ್ಮನ ಉತ್ಪತ್ತಿಸ್ಥಾನನು. (೨೪೯) ಮೇಢ್ರಜಃ – ಲಿಂಗರೂಪದಲ್ಲಿ ಪ್ರಕಟವಾಗಿರುವವನು. (೨೫೦) ಬಲಚಾರೀ – ಅರಣ್ಯ31ದಲ್ಲಿ ಸಂಚರಿಸುವವನು. (೨೫೧) ಮಹಾಚಾರೀ – ಭೂಮಿಯಲ್ಲಿ ಸಂಚರಿಸುವವನು. (೨೫೨) ಸ್ತುತಃ – ಸ್ತುತಿಸಲ್ಪಡುವವನು.

13017059a ಸರ್ವತೂರ್ಯನಿನಾದೀ ಚ ಸರ್ವವಾದ್ಯಪರಿಗ್ರಹಃ।
13017059c ವ್ಯಾಲರೂಪೋ ಬಿಲಾವಾಸೀ ಹೇಮಮಾಲೀ ತರಂಗವಿತ್।। 32

(೨೫೩) ಸರ್ವತೂರ್ಯನಿನಾದೀ – ಸಕಲವಿಧದ ಮಂಗಲವಾದ್ಯಗಳನ್ನೂ ಬಾರಿಸುವವನು. (೨೫೪) ಸರ್ವವಾದ್ಯಪರಿಗ್ರಹಃ – ಸಕಲವಿಧದ ಮಂಗಲವಾದ್ಯಗಳನ್ನೂ ಇರಿಸಿಕೊಂಡಿರುವವನು. (೨೫೫) ವ್ಯಾಲರೂಪಃ – ಶೇಷನಾಗ ಸ್ವರೂಪನು. (೨೫೬) ಬಿಲಾವಾಸೀ – ಎಲ್ಲರ ಹೃದಯಗಳ ಬಿಲಗಳಲ್ಲಿ ವಾಸಿಸಿರುವವನು. (೨೫೭) ಹೇಮಮಾಲೀ – ಚಿನ್ನದ ಮಾಲೆಯನ್ನು ಧರಿಸಿರುವವನು. (೨೫೮) ತರಂಗವಿದುಃ – ತರಂಗಸದೃಶ ವಿಷಯಸುಖಗಳನ್ನು ತಿಳಿದಿರುವವನು.

13017060a ತ್ರಿದಶಸ್ತ್ರಿಕಾಲಧೃಕ್ಕರ್ಮಸರ್ವಬಂಧವಿಮೋಚನಃ।
13017060c ಬಂಧನಸ್ತ್ವಸುರೇಂದ್ರಾಣಾಂ ಯುಧಿ ಶತ್ರುವಿನಾಶನಃ।।

(೨೫೯) ತ್ರಿದಶಃ – ಪ್ರಾಣಿಗಳ ಜನ್ಮ-ಸ್ಥಿತಿ-ಮರಣಗಳಿಗೆ ಕಾರಣನು. (೨೬೦) ತ್ರಿಕಾಲಧೃಕ್ – ಭೂತ-ಭವಿಷ್ಯ-ವರ್ತಮಾನಗಳೆಂಬ ಮೂರು ಕಾಲಗಳನ್ನೂ ಧರಿಸಿರುವವನು. (೨೬೧) ಕರ್ಮಸರ್ವಬಂಧವಿಮೋಚನಃ – ಕರ್ಮಗಳ ಸಮಸ್ತ ಬಂಧನಗಳಿಂದಲೂ ಮುಕ್ತನು. (೨೬೨) ಅಸುರೇಂದ್ರಾಣಾಂ ಬಂಧನಃ – ಬಲಿಯೇ ಮೊದಲಾದ ಅಸುರ ರಾಜರನ್ನು ಬಂಧಿಸಿದವನು. (೨೬೩) ಯುಧಿ ಶತ್ರುವಿನಾಶನಃ – ಯುದ್ಧದಲ್ಲಿ ಶತ್ರುಗಳನ್ನು ವಿನಾಶಗೊಳಿಸುವವನು.

13017061a ಸಾಂಖ್ಯಪ್ರಸಾದೋ ದುರ್ವಾಸಾಃ ಸರ್ವಸಾಧುನಿಷೇವಿತಃ।
13017061c ಪ್ರಸ್ಕಂದನೋ ವಿಭಾಗಶ್ಚ ಅತುಲ್ಯೋ ಯಜ್ಞಭಾಗವಿತ್।। 33

(೨೬೪) ಸಾಂಖ್ಯಪ್ರಸಾದಃ – ಸಾಂಖ್ಯಜ್ಞಾನದಿಂದ ಪ್ರಸನ್ನನಾಗುವವನು. (೨೬೫) ದುರ್ವಾಸಾಃ – ದುರ್ವಾಸಮುನಿ ಸ್ವರೂಪನು. (೨೬೬) ಸರ್ವಸಾಧುನಿಷೇವಿತಃ – ಸಮಸ್ತ ಸಾಧುಪುರುಷರಿಂದಲೂ ಸೇವಿಸಲ್ಪಡುವವನು. (೨೬೭) ಪ್ರಸ್ಕಂದನಃ – ಬ್ರಹ್ಮಾದಿಗಳನ್ನೂ ಸ್ಥಾನಭ್ರಷ್ಟರನ್ನಾಗಿಸುವ ಸಾಮರ್ಥ್ಯವುಳ್ಳವನು. (೨೬೮) ವಿಭಾಗಃ – ಪ್ರಾಣಿಗಳ ಕರ್ಮಗಳನ್ನು ವಿಭಾಗಿಸುವವನು. (೨೬೯) ಅತುಲ್ಯಃ – ಅನನುರೂಪನು. (೨೭೦) ಯಜ್ಞಭಾಗವಿದುಃ – ಯಜ್ಞದ ಹವಿಸ್ಸುಗಳಲ್ಲಿ ಯಾರಿಗೆ ಎಷ್ಟು ಭಾಗಗಳು ಸಲ್ಲಬೇಕೆನ್ನುವದನ್ನು ತಿಳಿದಿರುವವನು.

13017062a ಸರ್ವಾವಾಸಃ ಸರ್ವಚಾರೀ ದುರ್ವಾಸಾ ವಾಸವೋಽಮರಃ।
13017062c ಹೇಮೋ ಹೇಮಕರೋ ಯಜ್ಞಃ ಸರ್ವಧಾರೀ ಧರೋತ್ತಮಃ।। 34

(೨೭೧) ಸರ್ವಾವಾಸಃ – ಸರ್ವತ್ರ ವಾಸಿಸುವವನು. (೨೭೨) ಸರ್ವಚಾರೀ – ಸರ್ವತ್ರ ಸಂಚರಿಸುವವನು. (೨೭೩) ದುರ್ವಾಸಾ – ಅನಂತನೂ ಅಪಾರನೂ ಆದುದರಿಂದ ವಸ್ತ್ರವನ್ನು ಹೊದಿಸಲು ದುಃಸಾಧ್ಯನಾದವನು. (೨೭೪) ವಾಸವಃ – ಇಂದ್ರಸ್ವರೂಪನು. (೨೭೫) ಅಮರಃ – ಅವಿನಾಶಿಯು. (೨೭೬) ಹೇಮಃ – ಚಿನ್ನಸ್ವರೂಪನು. (೨೭೭) ಹೇಮಕರಃ – ಚಿನ್ನದ ಉತ್ಪಾದಕನು. (೨೭೮) ಯಜ್ಞಃ – ಯಜ್ಞಸ್ವರೂಪನು. (೨೭೯) ಸರ್ವಧಾರೀ – ಎಲ್ಲವನ್ನೂ ಧರಿಸಿರುವವನು. (೨೮೦) ಧರೋತ್ತಮಃ – ಧರಿಸುವವರಲ್ಲಿ ಉತ್ತಮನು; ಪರ್ವತಗಳಲ್ಲಿ ಶ್ರೇಷ್ಠ ಮೇರುಪರ್ವತ ಸ್ವರೂಪನು.

13017063a ಲೋಹಿತಾಕ್ಷೋ ಮಹಾಕ್ಷಶ್ಚ ವಿಜಯಾಕ್ಷೋ ವಿಶಾರದಃ।
13017063c ಸಂಗ್ರಹೋ ನಿಗ್ರಹಃ ಕರ್ತಾ ಸರ್ಪಚೀರನಿವಾಸನಃ।।

(೨೮೧) ಲೋಹಿತಾಕ್ಷಃ – ರಕ್ತನೇತ್ರನು. (೨೮೨) ಮಹಾಕ್ಷಃ – ವಿಶಾಲ ಕಣ್ಣುಗಳಿರುವವನು. (೨೮೩) ವಿಜಯಾಕ್ಷಃ – ವಿಜಯಶೀಲ ರಥವಿರುವವನು. (೨೮೪) ವಿಶಾರದಃ – ವಿದ್ವಾಂಸನು. (೨೮೫) ಸಂಗ್ರಹಃ – ಸಂಗ್ರಹಿಸುವವನು. (೨೮೬) ನಿಗ್ರಹಃ – ಉದ್ಧಟರನ್ನು ನಿಗ್ರಹಿಸುವವನು. (೨೮೭) ಕರ್ತಾ – ಯಜಮಾನನು. (೨೮೮) ಸರ್ಪಚೀರನಿವಾಸನಃ – ಸರ್ಪಮಯ ವಸ್ತ್ರವನ್ನು ಧರಿಸಿರುವವನು.

13017064a ಮುಖ್ಯೋಽಮುಖ್ಯಶ್ಚ ದೇಹಶ್ಚ ದೇಹರ್ದ್ಧಿಃ ಸರ್ವಕಾಮದಃ। 35
13017064c ಸರ್ವಕಾಲಪ್ರಸಾದಶ್ಚ ಸುಬಲೋ ಬಲರೂಪಧೃಕ್।।

(೨೮೯) ಮುಖ್ಯಃ – ಸರ್ವಶ್ರೇಷ್ಠನು. (೨೯೦) ಅಮುಖ್ಯಃ – ತನಗಿಂತಲೂ ಅಧಿಕನಾದವನು ಬೇರೆ ಯಾರೂ ಇಲ್ಲದವನು. (೨೯೧) ದೇಹಃ – ದೇಹಸ್ವರೂಪನು. (೨೯೨) ದೇಹರ್ದ್ಧಿಃ – ದೇಹವನ್ನು ತಿಳಿದುಕೊಂಡಿರುವವನು. (೨೯೩) ಸರ್ವಕಾಮದಃ – ಭಕ್ತರ ಸರ್ವಕಾಮನೆಗಳನ್ನೂ ದೊರಕಿಸಿಕೊಡುವವನು. (೨೯೪) ಸರ್ವಕಾಲಪ್ರಸಾದಃ – ಸರ್ವಕಾಲಗಳಲ್ಲಿಯೂ ಕೃಪೆದೋರುವವನು. (೨೯೫) ಸುಬಲಃ – ಉತ್ತಮ ಬಲಸಂಪನ್ನನು. (೨೯೬) ಬಲರೂಪಧೃಕ್ – ಬಲ-ರೂಪಗಳಿಗೆ ಆಧಾರಭೂತನು.

13017065a ಆಕಾಶನಿಧಿರೂಪಶ್ಚ ನಿಪಾತೀ ಉರಗಃ ಖಗಃ।
13017065c ರೌದ್ರರೂಪೋಽಂಶುರಾದಿತ್ಯೋ ವಸುರಶ್ಮಿಃ ಸುವರ್ಚಸೀ।। 36

(೨೯೭) ಆಕಾಶನಿಧಿರೂಪಃ – ಆಕಾಶನಿಧಿಸ್ವರೂಪನು. (೨೯೮) ನಿಪಾತೀ – ಪಾಪಿಷ್ಟರನ್ನು ನರಕದಲ್ಲಿ ಬೀಳಿಸುವವನು. (೨೯೯) ಉರಗಃ – ಸರ್ಪಸ್ವರೂಪನು. (೩೦೦) ಖಗಃ – ಆಕಾಶದಲ್ಲಿ ಸಂಚರಿಸುವವನು. (೩೦೧) ರೌದ್ರರೂಪಃ – ಭಯಂಕರ ರೂಪವುಳ್ಳವನು. (೩೦೨) ಅಂಶುಃ – ಕಿರಣಸ್ವರೂಪನು. (೩೦೩) ಆದಿತ್ಯಃ – ಅದಿತಿಯ ಮಗನು. (೩೦೪) ವಸುರಶ್ಮಿಃ – ಅಸಂಖ್ಯ ಕಿರಣಗಳುಳ್ಳವನು. (೩೦೫) ಸುವರ್ಚಸೀ – ಉತ್ತಮ ತೇಜಸ್ಸಿನಿಂದ ಕೂಡಿದವನು.

13017066a ವಸುವೇಗೋ ಮಹಾವೇಗೋ ಮನೋವೇಗೋ ನಿಶಾಚರಃ।
13017066c ಸರ್ವಾವಾಸೀ ಶ್ರಿಯಾವಾಸೀ ಉಪದೇಶಕರೋ ಹರಃ।। 37

(೩೦೬) ವಸುವೇಗಃ – ವಾಯು38ವೇಗಕ್ಕೆ ಸಮಾನ ವೇಗವುಳ್ಳವನು. (೩೦೭) ಮಹಾವೇಗಃ – ವಾಯುವಿಗಿಂತಲೂ ಅಧಿಕ ವೇಗವುಳ್ಳವನು. (೩೦೮) ಮನೋವೇಗಃ – ಮನಸ್ಸಿನ ವೇಗಕ್ಕೆ ಸಮಾನ ವೇಗವುಳ್ಳವನು. (೩೦೯) ನಿಶಾಚರಃ – ರಾತ್ರಿಯಲ್ಲಿ ಸಂಚರಿಸುವವನು. (೩೧೦) ಸರ್ವಾವಾಸೀ – ಸರ್ವಪ್ರಾಣಿಗಳಲ್ಲಿ ಆತ್ಮಸ್ವರೂಪನಾಗಿ ವಾಸಿಸಿರುವವನು. (೩೧೧) ಶ್ರಿಯಾವಾಸೀ – ಋಕ್ಸಾಮಯಜುಸ್ಸುಗಳೊಡನೆ39 ವಾಸಿಸಿರುವವನು. (೩೧೨) ಉಪದೇಶಕರಃ – ಜಿಜ್ಞಾಸುಗಳಿಗೆ ತತ್ತ್ವೋಪದೇಶಗಳನ್ನು ಮಾಡುವವನು; ಕಾಶಿಯಲ್ಲಿ ಮರಣಹೊಂದುವವರಿಗೆ ತಾರಕಮಂತ್ರೋಪದೇಶವನ್ನು ಮಾಡುವವನು. (೩೧೩) ಹರಃ – ಭಕ್ತರ ದುಃಖಗಳನ್ನು ಹರಣ ಮಾಡುವವನು.

13017067a ಮುನಿರಾತ್ಮಪತಿರ್ಲೋಕೇ ಸಂಭೋಜ್ಯಶ್ಚ ಸಹಸ್ರದಃ।
13017067c ಪಕ್ಷೀ ಚ ಪಕ್ಷಿರೂಪೀ ಚ ಅತಿದೀಪ್ತೋ ವಿಶಾಂ ಪತಿಃ।। 40

(೩೧೪) ಮುನಿಃ – ಮನನಶೀಲನು. (೩೧೫) ಆತ್ಮಪತಿಃ –ಆತ್ಮಗಳ ಒಡೆಯನು. (೩೧೬) ಲೋಕಃ – ಲೋಕಸ್ವರೂಪನು. (೩೧೭) ಸಂಭೋಜ್ಯಃ – ಚೆನ್ನಾಗಿ ಪೂಜಿಸಲ್ಪಡುವವನು. (೩೧೮) ಸಹಸ್ರದಃ – ಸಾವಿರಾರು ವರಗಳನ್ನು ನೀಡುವವನು (೩೧೯) ಪಕ್ಷೀ – ಗರುಡಸ್ವರೂಪಿಯು. (೩೨೦) ಪಕ್ಷಿರೂಪೀ – ಪಕ್ಷಿಯ ರೂಪಧರಿಸುವವನು. (೩೨೧) ಅತಿದೀಪ್ತಃ – ಪರಮಪ್ರಕಾಶನು. (೩೨೨) ವಿಶಾಂಪತಿಃ – ಪ್ರಜೆಗಳ ನಾಯಕನು.

13017068a ಉನ್ಮಾದೋ ಮದನಾಕಾರೋ ಅರ್ಥಾರ್ಥಕರರೋಮಶಃ। 41
13017068c ವಾಮದೇವಶ್ಚ ವಾಮಶ್ಚ ಪ್ರಾಗ್ದಕ್ಷಿಣ್ಯಶ್ಚ ವಾಮನಃ।।

(೩೨೩) ಉನ್ಮಾದಃ – ಪ್ರೇಮದಿಂದ ಉನ್ಮತ್ತನಾಗಿರುವವನು. (೩೨೪) ಮದನಾಕಾರಃ – ಮದನ/ಮನ್ಮಥನ ಆಕಾರದಲ್ಲಿರುವವನು. (೩೨೫) ಅರ್ಥಾರ್ಥಕರಃ – ಗುರಿಗಳನ್ನು ಸಾಧಿಸುವವನು; ಗುರಿಗಳನ್ನು ಸಾಧಿಸುವಂತೆ ಮಾಡುವವನು. (೩೨೬) ರೋಮಶಃ – ರೋಮಗಳುಳ್ಳವನು. (೩೨೭) ವಾಮದೇವಃ – ವಾಮದೇವಮುನಿಸ್ವರೂಪಿಯು. (೩೨೮) ವಾಮಃ – ಪಾಪಿಷ್ಠರಿಗೆ ಪ್ರತಿಕೂಲನು. (೩೨೯) ಪ್ರಾಗ್ದಕ್ಷಿಣ್ಯಃ – ಆಗ್ನೇಯ ದಿಕ್ಕಿನಲ್ಲಿರುವವನು. (೩೩೦) ವಾಮನಃ – ವಾಮನಸ್ವರೂಪನು.

13017069a ಸಿದ್ಧಯೋಗಾಪಹಾರೀ ಚ ಸಿದ್ಧಃ ಸರ್ವಾರ್ಥಸಾಧಕಃ।
13017069c ಭಿಕ್ಷುಶ್ಚ ಭಿಕ್ಷುರೂಪಶ್ಚ ವಿಷಾಣೀ ಮೃದುರವ್ಯಯಃ।। 42

(೩೩೧) ಸಿದ್ಧಯೋಗಾಪಹಾರೀ – ಯೋಗಸಿದ್ಧಿಗಳನ್ನು ಅಪಹರಿಸುವವನು. (೩೩೨) ಸಿದ್ಧಃ – ಯೋಗ ಸಿದ್ಧಿಯನ್ನು ಹೊಂದಿದವನು. (೩೩೩) ಸರ್ವಾರ್ಥಸಾಧಕಃ – ಎಲ್ಲವನ್ನೂ ಸಾಧಿಸುವವನು. (೩೩೪) ಭಿಕ್ಷುಃ – ಸಂನ್ಯಾಸಿಯು. (೩೩೫) ಭಿಕ್ಷುರೂಪಃ – ಪರಮಹಂಸಸ್ವರೂಪನು. (೩೩೬) ವಿಷಾಣೀ – ತಲೆಯ ಮೇಲೆ ಜುಟ್ಟಿರುವವನು. (೩೩೭) ಮೃದುಃ – ಕೋಮಲಸ್ವಭಾವವುಳ್ಳವನು. (೩೩೮) ಅವ್ಯಯಃ – ಅವಿನಾಶಿಯು.

13017070a ಮಹಾಸೇನೋ ವಿಶಾಖಶ್ಚ ಷಷ್ಟಿಭಾಗೋ ಗವಾಂ ಪತಿಃ।
13017070c ವಜ್ರಹಸ್ತಶ್ಚ ವಿಷ್ಕಂಭೀ ಚಮೂಸ್ತಂಭನ43 ಏವ ಚ।।

(೩೩೯) ಮಹಾಸೇನಃ – ದೇವಸೇನಾಪತಿ ಕಾರ್ತಿಕೇಯ ಸ್ವರೂಪನು. (೩೪೦) ವಿಶಾಖಃ – ಕಾರ್ತಿಕೇಯನ ಪಾರ್ಶದ ವಿಶಾಖನ ಸ್ವರೂಪನು. (೩೪೧) ಷಷ್ಟಿಭಾಗಃ – ಅರವತ್ತು ಸಂವತ್ಸರಗಳ ಸ್ವರೂಪನು. (೩೪೨) ಗವಾಂಪತಿಃ – ಇಂದ್ರಿಯಗಳಿಗೆ ಸ್ವಾಮಿಯು. (೩೪೩) ವಜ್ರಹಸ್ತಃ – ಕೈಯಲ್ಲಿ ವಜ್ರಾಯುಧವನ್ನು ಧರಿಸಿರುವ ಇಂದ್ರಸ್ವರೂಪನು. (೩೪೪) ವಿಷ್ಕಂಭೀ – ವಿಸ್ತಾರವಾಗಿ ಹರಡಿಕೊಂಡಿರುವವನು. (೩೪೫) ಚಮೂಸ್ತಂಭನಃ – ದೈತ್ಯರ ಸೈನ್ಯವನ್ನು ಸ್ತಂಭನಗೊಳಿಸುವವನು.

13017071a ಋತುರೃತುಕರಃ ಕಾಲೋ ಮಧುರ್ಮಧುಕರೋಽಚಲಃ।
13017071c ವಾನಸ್ಪತ್ಯೋ ವಾಜಸೇನೋ ನಿತ್ಯಮಾಶ್ರಮಪೂಜಿತಃ।। 44

(೩೪೬) ಋತುಃ – ಋತುಸ್ವರೂಪನು. (೩೪೭) ಋತುಕರಃ – ಋತುಗಳನ್ನುಂಟುಮಾಡುವವನು. (೩೪೮) ಕಾಲಃ – ಕಾಲನು; ಸಮಯ. (೩೪೯) ಮಧುಃ – ವಸಂತಋತು ಸ್ವರೂಪನು. (೩೫೦) ಮಧುಕರಃ – ಮಧುವನ್ನುಂಟುಮಾಡುವವನು. (೩೫೧) ಅಚಲಃ – ಅಲುಗಾಡದೇ ಇರುವವನು. (೩೫೨) ವಾನಸ್ಪತ್ಯಃ – ವೃಕ್ಷಗಳಲ್ಲಿ ನೆಲೆಸಿರುವವನು. (೩೫೩) ವಾಜಸೇನಃ – ಯಜುಗಳಿಂದ ಸ್ತುತಿಸಲ್ಪಡುವವನು. (೩೫೪) ನಿತ್ಯಂ – ನಿತ್ಯಸ್ವರೂಪಿಯು. (೩೫೫) ಆಶ್ರಮಪೂಜಿತಃ – ಚತುರಾಶ್ರಮಿಗಳಿಂದ ಪೂಜಿಸಲ್ಪಡುವವನು.

13017072a ಬ್ರಹ್ಮಚಾರೀ ಲೋಕಚಾರೀ ಸರ್ವಚಾರೀ ಸುಚಾರವಿತ್45
13017072c ಈಶಾನ ಈಶ್ವರಃ ಕಾಲೋ ನಿಶಾಚಾರೀ ಪಿನಾಕಧೃಕ್46।।

(೩೫೬) ಬ್ರಹ್ಮಚಾರೀ – ಬ್ರಹ್ಮನಿಷ್ಠನು. (೩೫೭) ಲೋಕಚಾರೀ – ಎಲ್ಲ ಲೋಕಗಳಲ್ಲಿಯೂ ಸಂಚರಿಸುವವನು. (೩೫೮) ಸರ್ವಚಾರೀ – ಸರ್ವತ್ರ ಸಂಚರಿಸುವವನು. (೩೫೯) ಸುಚಾರವಿತ್ – ಸದ್ವಿಚಾರಗಳನ್ನು ತಿಳಿದಿರುವವನು. (೩೬೦) ಈಶಾನಃ – ನಿಯಂತ್ರಕನು. (೩೬೧) ಈಶ್ವರಃ – ಶಾಸಕನು. (೩೬೨) ಕಾಲಃ – ಕಾಲಸ್ವರೂಪಿಯು. (೩೬೩) ನಿಶಾಚಾರೀ – ಪ್ರಳಯಕಾಲದ ರಾತ್ರಿಯಲ್ಲಿ ಸಂಚರಿಸುವವನು. (೩೬೪) ಪಿನಾಕಧೃಕ್ – ಪಿನಾಕವೆಂಬ ಧನುಸ್ಸನ್ನು ಹಿಡಿದಿರುವವನು.

13017073a ನಂದೀಶ್ವರಶ್ಚ ನಂದೀ ಚ ನಂದನೋ ನಂದಿವರ್ಧನಃ।
13017073c ಭಗಸ್ಯಾಕ್ಷಿನಿಹಂತಾ ಚ ಕಾಲೋ ಬ್ರಹ್ಮವಿದಾಂ ವರಃ।। 47

(೩೬೫) ನಂದೀಶ್ವರಃ – ನಂದೀ ಎಂಬ ಹೆಸರಿನ ಪಾರ್ಷದನ ಸ್ವಾಮಿಯು. (೩೬೬) ನಂದೀ – ಪರಮಾನಂದ ರೂಪೀ ದೇಹವುಳ್ಳವನು. (೩೬೭) ನಂದನಃ – ಪರಮಾನಂದವನ್ನುಂಟುಮಾಡುವವನು. (೩೬೮) ನಂದಿವರ್ಧನಃ – ಸಮೃದ್ಧಿಯನ್ನು ಹೆಚ್ಚಿಸುವವನು. (೩೬೯) ಭಗಸ್ಯಾಕ್ಷಿನಿಹಂತಾ – ಭಗನ ಕಣ್ಣುಗಳನ್ನು ಕಿತ್ತವನು. (೩೭೦) ಕಾಲಃ – ಕಾಲಸ್ವರೂಪಿಯು. (೩೭೧) ಬ್ರಹ್ಮವಿದಾಂ ವರಃ – ಬ್ರಹ್ಮವನ್ನು ತಿಳಿದಿರುವವರಲ್ಲಿ ಶ್ರೇಷ್ಠನು.

13017074a ಚತುರ್ಮುಖೋ ಮಹಾಲಿಂಗಶ್ಚಾರುಲಿಂಗಸ್ತಥೈವ ಚ।
13017074c ಲಿಂಗಾಧ್ಯಕ್ಷಃ ಸುರಾಧ್ಯಕ್ಷೋ ಲೋಕಾಧ್ಯಕ್ಷೋ48 ಯುಗಾವಹಃ।।

(೩೭೨) ಚತುರ್ಮುಖಃ – ನಾಲ್ಕು ಮುಖಗಳುಳ್ಳವನು. (೩೭೩) ಮಹಾಲಿಂಗಃ – ಮಹಾಲಿಂಗಸ್ವರೂಪಿಯು. (೩೭೪) ಚಾರುಲಿಂಗಃ – ರಮಣೀಯ ವೇಷಧಾರಿಯು. (೩೭೫) ಲಿಂಗಾಧ್ಯಕ್ಷಃ – ಪ್ರಮಾಣಗಳಿಗೆ ಅಧ್ಯಕ್ಷನು; ಪ್ರವೃತ್ತಿ-ನಿವೃತ್ತಿಗಳ ನಿಯಾಮಕನು. (೩೭೬) ಸುರಾಧ್ಯಕ್ಷಃ – ದೇವತೆಗಳಿಗೆ ಅಧಿಪತಿಯು. (೩೭೭) ಲೋಕಾಧ್ಯಕ್ಷಃ – ಲೋಕಗಳ ಅಧಿಪತಿಯು. (೩೭೮) ಯುಗಾವಹಃ – ಚತುರ್ಯುಗಗಳ ನಿರ್ವಾಹಕನು.

13017075a ಬೀಜಾಧ್ಯಕ್ಷೋ ಬೀಜಕರ್ತಾ ಅಧ್ಯಾತ್ಮಾನುಗತೋ ಬಲಃ।
13017075c ಇತಿಹಾಸಕರಃ ಕಲ್ಪೋ ಗೌತಮೋಽಥ ಜಲೇಶ್ವರಃ।। 49

(೩೭೯) ಬೀಜಾಧ್ಯಕ್ಷಃ – ಕಾರಣಗಳಿಗೆ ಅಧ್ಯಕ್ಷನು. (೩೮೦) ಬೀಜಕರ್ತಃ – ಕಾರಣಗಳನ್ನುಂಟುಮಾಡುವವನು. (೩೮೧) ಅಧ್ಯಾತ್ಮಾನುಗತಃ – ಆಧ್ಯಾತ್ಮವನ್ನು ಅನುಸರಿಸುವವನು. (೩೮೨) ಬಲಃ – ಬಲಿಷ್ಠನು. (೩೮೩) ಇತಿಹಾಸಕರಃ – ಇತಿಹಾಸವನ್ನುಂಟುಮಾಡುವವನು. (೩೮೪) ಕಲ್ಪಃ – ಕಲ್ಪಸ್ವರೂಪನು. (೩೮೫) ಗೌತಮಃ – ತರ್ಕಶಾಸ್ತ್ರಪ್ರಣೇತಾರ ಗೌತಮ ಮುನಿಸ್ವರೂಪಿಯು. (೩೮೬) ಜಲೇಶ್ವರಃ – ಜಲಗಳಿಗೆ ಒಡೆಯ ವರುಣಸ್ವರೂಪಿಯು.

13017076a ದಂಭೋ ಹ್ಯದಂಭೋ ವೈದಂಭೋ ವಶ್ಯೋ ವಶ್ಯಕರಃ ಕವಿಃ50
13017076c ಲೋಕಕರ್ತಾ ಪಶುಪತಿರ್ಮಹಾಕರ್ತಾ ಮಹೌಷಧಿಃ51।।

(೩೮೭) ದಂಭಃ – ಶತ್ರುಗಳನ್ನು ದಮನಮಾಡುವವನು. (೩೮೮) ಅದಂಭಃ – ದಂಭರಹಿತನು. (೩೮೯) ವೈದಂಭಃ – ದಂಭರಹಿತರಿಗೆ ಪ್ರಿಯನು. (೩೯೦) ವಶ್ಯಃ – ಭಕ್ತರಿಗೆ ವಶನಾದವನು. (೩೯೧) ವಶ್ಯಕರಃ – ಇತರರನ್ನು ವಶೀಕರಿಸಿಕೊಳ್ಳುವವನು. (೩೯೨) ಕವಿಃ – ಸರ್ವವನ್ನೂ ತಿಳಿದಿರುವವನು. (೩೯೩) ಲೋಕಕರ್ತಃ – ಲೋಕಕರ್ತನು. (೩೯೪) ಪಶುಪತಿಃ – ಪಶುಗಳ ಪತಿಯು. (೩೯೫) ಮಹಾಕರ್ತಃ – ಪಂಚಮಹಾಭೂತಗಳನ್ನು ಸೃಷ್ಟಿಸಿದವನು. (೩೯೬) ಮಹೌಷಧಿಃ – ಮಹಾ ಔಷಧಿಸ್ವರೂಪನು.

13017077a ಅಕ್ಷರಂ ಪರಮಂ ಬ್ರಹ್ಮ ಬಲವಾನ್ ಶಕ್ರ52 ಏವ ಚ।
13017077c ನೀತಿರ್ಹ್ಯನೀತಿಃ ಶುದ್ಧಾತ್ಮಾ ಶುದ್ಧೋ ಮಾನ್ಯೋ ಮನೋಗತಿಃ53।।

(೩೯೭) ಅಕ್ಷರಃ – ಅವಿನಾಶೀ ಬ್ರಹ್ಮನು. (೩೯೮) ಪರಮಂ ಬ್ರಹ್ಮಃ – ಸರ್ವೋತ್ಕೃಷ್ಠ ಬ್ರಹ್ಮನು. (೩೯೯) ಬಲವಾನಃ – ಶಕ್ತಿಶಾಲಿಯು. (೪೦೦) ಶಕ್ರಃ – ಶಕ್ರಸ್ವರೂಪಿಯು. (೪೦೧) ನೀತಿಃ – ನ್ಯಾಯಸ್ವರೂಪನು. (೪೦೨) ಅನೀತಿಃ – ಸಾಮ, ದಾನ, ಭೇದ, ದಂಡನೀತಿಗಳ ರಹಿತನು. (೪೦೩) ಶುದ್ಧಾತ್ಮಾ – ಶುದ್ಧಸ್ವರೂಪನು. (೪೦೪) ಶುದ್ಧಃ – ಪರಮಪವಿತ್ರನು. (೪೦೫) ಮಾನ್ಯಃ – ಸನ್ಮಾನಕ್ಕೆ ಯೋಗ್ಯನು. (೪೦೬) ಮನೋಗತಿಃ – ಮನಸ್ಸಿನ ವೇಗದಲ್ಲಿ ಚಲಿಸುವವನು.

13017078a ಬಹುಪ್ರಸಾದಃ ಸ್ವಪನೋ54 ದರ್ಪಣೋಽಥ ತ್ವಮಿತ್ರಜಿತ್।
13017078c ವೇದಕಾರಃ ಸೂತ್ರಕಾರೋ55 ವಿದ್ವಾನ್ ಸಮರಮರ್ದನಃ।।

(೪೦೭) ಬಹುಪ್ರಸಾದಃ – ಅಧಿಕ ಪ್ರಸನ್ನತೆಯುಳ್ಳವನು. (೪೦೮) ಸ್ವಪನಃ – ನಿದ್ರಾ ಮತ್ತು ಸ್ವಪ್ನ ಸ್ವರೂಪನು. (೪೦೯) ದರ್ಪಣಃ – ಕನ್ನಡಿಯಂತೆ ಸ್ವಚ್ಛನಾಗಿರುವವನು. (೪೧೦) ಅಮಿತ್ರಜಿತ್ – ಶತ್ರುಗಳನ್ನು ಜಯಿಸುವವನು. (೪೧೧) ವೇದಕಾರಃ – ವೇದಗಳನ್ನು ಸೃಷ್ಟಿಸಿದವನು. (೪೧೨) ಸೂತ್ರಕಾರಃ – ಸೂತ್ರಗಳನ್ನು ಸೃಷ್ಟಿಸಿದವನು. (೪೧೩) ವಿದ್ವಾನ್ – ಸರ್ವಜ್ಞನು. (೪೧೪) ಸಮರಮರ್ದನಃ – ಯುದ್ಧದಲ್ಲಿ ಶತ್ರುಗಳನ್ನು ಮರ್ದಿಸುವವನು.

13017079a ಮಹಾಮೇಘನಿವಾಸೀ ಚ ಮಹಾಘೋರೋ ವಶೀಕರಃ।
13017079c ಅಗ್ನಿಜ್ವಾಲೋ ಮಹಾಜ್ವಾಲೋ ಅತಿಧೂಮ್ರೋ ಹುತೋ ಹವಿಃ।।

(೪೧೫) ಮಹಾಮೇಘನಿವಾಸೀ – ಪ್ರಳಯಕಾಲದ ಮಹಾಮೇಘದಲ್ಲಿ ವಾಸಿಸುವವನು. (೪೧೬) ಮಹಾಘೋರಃ – ಮಹಾಘೋರ ಪ್ರಳಯವನ್ನುಂಟುಮಾಡುವವನು. (೪೧೭) ವಶೀಕರಃ – ಎಲ್ಲವನ್ನೂ ವಶದಲ್ಲಿಟ್ಟುಕೊಳ್ಳುವವನು. (೪೧೮) ಅಗ್ನಿಜ್ವಾಲಃ – ಅಗ್ನಿಯ ಜ್ವಾಲೆಯ ಸಮನಾದ ತೇಜಸ್ಸುಳ್ಳವನು. (೪೧೯) ಮಹಾಜ್ವಾಲಃ – ಅಗ್ನಿಯ ಜ್ವಾಲೆಗಿಂತಲೂ ಅಧಿಕ ತೇಜಸ್ಸುಳ್ಳವನು. (೪೨೦) ಅತಿಧೂಮ್ರಃ – ಧೂಮ್ರವರ್ಣದವನು. (೪೨೧) ಹುತಃ – ಆಹುತಿಗಳನ್ನು ಸ್ವೀಕರಿಸಿ ಪ್ರಸನ್ನನಾಗುವ ಅಗ್ನಿಸ್ವರೂಪನು. (೪೨೨) ಹವಿಃ – ಆಜ್ಯವೇ ಮೊದಲಾದ ಹವಿಃಸ್ವರೂಪನು.

13017080a ವೃಷಣಃ ಶಂಕರೋ ನಿತ್ಯೋ ವರ್ಚಸ್ವೀ ಧೂಮಕೇತನಃ।
13017080c ನೀಲಸ್ತಥಾಂಗಲುಬ್ಧಶ್ಚ ಶೋಭನೋ ನಿರವಗ್ರಹಃ।।

(೪೨೩) ವೃಷಣಃ – ಕರ್ಮಫಲವನ್ನು ವರ್ಧಿಸುವ ಧರ್ಮಸ್ವರೂಪನು. (೪೨೪) ಶಂಕರಃ – ಕಲ್ಯಾಣಕಾರಿಯು. (೪೨೫) ನಿತ್ಯಃ – ನಿತ್ಯಸ್ವರೂಪನು. (೪೨೬) ವರ್ಚಸ್ವೀ – ತೇಜಃಪುಂಜನು. (೪೨೭) ಧೂಮಕೇತನಃ – ಅಗ್ನಿಸ್ವರೂಪನು. (೪೨೮) ನೀಲಃ – ಶ್ಯಾಮಲವರ್ಣಿ ಶ್ರೀಹರಿಯ ಸ್ವರೂಪನು. (೪೨೯) ಅಂಗಲುಬ್ಧಃ – ತನ್ನ ಅಂಗಗಳ ಕುರಿತು ಹೆಚ್ಚು ಅಭಿಮಾನವುಳ್ಳವನು; ತನ್ನ ಅಂಗಗಳ ಸೌಂದರ್ಯಕ್ಕೆ ನ್ಯೂನತೆಯುಂಟಾದೀತೆಂಬ ಲೋಭದಿಂದಿರುವವನು. (೪೩೦) ಶೋಭನಃ – ಸರ್ವತ್ರ ಶೋಭಿಸುವವನು. (೪೩೧) ನಿರವಗ್ರಹಃ – ಪ್ರತಿಬಂಧರಹಿತನು.

13017081a ಸ್ವಸ್ತಿದಃ ಸ್ವಸ್ತಿಭಾವಶ್ಚ ಭಾಗೀ ಭಾಗಕರೋ ಲಘುಃ।
13017081c ಉತ್ಸಂಗಶ್ಚ ಮಹಾಂಗಶ್ಚ ಮಹಾಗರ್ಭಃ ಪರೋ ಯುವಾ56।।

(೪೩೨) ಸ್ವಸ್ತಿದಃ – ಕಲ್ಯಾಣದಾಯಕನು. (೪೩೩) ಸ್ವಸ್ತಿಭಾವಃ – ಮಂಗಳ ಸ್ವಭಾವವಿರುವವನು. (೪೩೪) ಭಾಗೀ – ಯಜ್ಞದ ಭಾಗವನ್ನು ಪ್ರತಿಗ್ರಹಿಸುವವನು. (೪೩೫) ಭಾಗಕರಃ – ಯಜ್ಞದ ಹವಿಸ್ಸನ್ನು ವಿಭಜನೆ ಮಾಡುವವನು. (೪೩೬) ಲಘುಃ – ಶೀಘ್ರಕಾರಿಯು. (೪೩೭) ಉತ್ಸಂಗಃ – ಸಂಗರಹಿತನು. (೪೩೮) ಮಹಾಂಗಃ – ಶ್ರೇಷ್ಠ ಅಂಗಗಳುಳ್ಳವನು. (೪೩೯) ಮಹಾಗರ್ಭಃ – ಹಿರಣ್ಯಗರ್ಭನು. (೪೪೦) ಪರಃ – ಶ್ರೇಷ್ಠನು. (೪೪೧) ಯುವಃ – ಯುವಕನು.

13017082a ಕೃಷ್ಣವರ್ಣಃ ಸುವರ್ಣಶ್ಚ ಇಂದ್ರಿಯಃ ಸರ್ವದೇಹಿನಾಮ್।
13017082c ಮಹಾಪಾದೋ ಮಹಾಹಸ್ತೋ ಮಹಾಕಾಯೋ ಮಹಾಯಶಾಃ।।

(೪೪೨) ಕೃಷ್ಣವರ್ಣಃ – ಕೃಷ್ಣವರ್ಣದ ವಿಷ್ಣು ಸ್ವರೂಪಿಯು. (೪೪೩) ಸುವರ್ಣಃ – ಉತ್ತಮ ವರ್ಣವಿರುವವನು. (೪೪೪) ಸರ್ವದೇಹಿನಾಂ ಇಂದ್ರಿಯಃ – ಸರ್ವ ದೇಹಧಾರಿಗಳಿಗೂ ಇಂದ್ರಿಯಗ್ರಾಮ ಸ್ವರೂಪನು. (೪೪೫) ಮಹಾಪಾದಃ – ಮಹಾಪಾದಗಳುಳ್ಳ ತ್ರಿವಿಕ್ರಮಸ್ವರೂಪಿಯು. (೪೪೬) ಮಹಾಹಸ್ತಃ – ದೊಡ್ಡದಾದ ಕೈಗಳುಳ್ಳವನು. (೪೪೭) ಮಹಾಕಾಯಃ – ದೊಡ್ಡ ದೇಹವುಳ್ಳ ವಿಶ್ವರೂಪಿಯು. (೪೪೮) ಮಹಾಯಶಾಃ – ಮಹೋಯಶೋವಂತನು.

13017083a ಮಹಾಮೂರ್ಧಾ ಮಹಾಮಾತ್ರೋ ಮಹಾನೇತ್ರೋ ದಿಗಾಲಯಃ57
13017083c ಮಹಾದಂತೋ58 ಮಹಾಕರ್ಣೋ ಮಹಾಮೇಢ್ರೋ59 ಮಹಾಹನುಃ।।

(೪೪೯) ಮಹಾಮೂರ್ಧಃ – ದೊಡ್ಡದಾದ ತಲೆಯುಳ್ಳವನು. (೪೫೦) ಮಹಾಮಾತ್ರಃ – ಮಹಾಗಾತ್ರವುಳ್ಳವನು. (೪೫೧) ಮಹಾನೇತ್ರಃ – ವಿಶಾಲನೇತ್ರನು. (೪೫೨) ದಿಗಾಲಯಃ – ದಿಕ್ಕುಗಳೇ ಮನೆಯಾಗಿರುವವನು. (೪೫೩) ಮಹಾದಂತಃ – ದೊಡ್ಡ ಹಲ್ಲುಗಳುಳ್ಳವನು. (೪೫೪) ಮಹಾಕರ್ಣಃ – ದೊಡ್ಡಕಿವಿಗಳುಳ್ಳವನು. (೪೫೫) ಮಹಾಮೇಢ್ರಃ – ದೊಡ್ಡ ಲಿಂಗವುಳ್ಳವನು. (೪೫೬) ಮಹಾಹನುಃ – ದೊಡ್ಡ ದವಡೆಗಳುಳ್ಳವನು.

13017084a ಮಹಾನಾಸೋ ಮಹಾಕಂಬುರ್ಮಹಾಗ್ರೀವಃ ಶ್ಮಶಾನಧೃಕ್60
13017084c ಮಹಾವಕ್ಷಾ ಮಹೋರಸ್ಕೋ ಅಂತರಾತ್ಮಾ ಮೃಗಾಲಯಃ।।

(೪೫೭) ಮಹಾನಸಃ – ದೊಡ್ಡಮೂಗುಳ್ಳವನು. (೪೫೮) ಮಹಾಕಂಬುಃ – ಕಂಠದಲ್ಲಿ ದೊಡ್ಡ ಶಂಖರೇಖೆಯುಳ್ಳವನು. (೪೫೯) ಮಹಾಗ್ರೀವಃ – ದೊಡ್ಡ ಕುತ್ತಿಗೆಯುಳ್ಳವನು. (೪೬೦) ಶ್ಮಶಾನಧೃಕ್ – ಶ್ಮಶಾನದಲ್ಲಿ ತಿರುಗಾಡುವವನು. (೪೬೧) ಮಹಾವಕ್ಷಃ – ವಿಶಾಲ ವಕ್ಷಸ್ಥಳವುಳ್ಳವನು. (೪೬೨) ಮಹೋರಸ್ಕಃ – ಅಗಲವಾದ ಎದೆಯುಳ್ಳವನು. (೪೬೩) ಅಂತರಾತ್ಮಾ – ಎಲ್ಲರ ಅಂತರಂಗಗಳಲ್ಲಿರುವ ಆತ್ಮಸ್ವರೂಪನು. (೪೬೪) ಮೃಗಾಲಯಃ – ಮೃಗದ ಮರಿಯನ್ನು ತೊಡೆಯಮೇಲಿಟ್ಟುಕೊಂಡಿರುವವನು.

13017085a ಲಂಬನೋ ಲಂಬಿತೋಷ್ಠಶ್ಚ ಮಹಾಮಾಯಃ ಪಯೋನಿಧಿಃ।
13017085c ಮಹಾದಂತೋ ಮಹಾದಂಷ್ಟ್ರೋ ಮಹಾಜಿಹ್ವೋ ಮಹಾಮುಖಃ।।

(೪೬೫) ಲಂಬನಃ – ಅನೇಕ ಬ್ರಹ್ಮಾಂಡಗಳಿಗೆ ಆಶ್ರಯನಾಗಿರುವವನು. (೪೬೬) ಲಂಬಿತೋಷ್ಠಃ – ಪ್ರಳಯಕಾಲದಲ್ಲಿ ವಿಶ್ವವೆಲ್ಲವನ್ನೂ ನುಂಗಲು ದೀರ್ಘತುಟಿಗಳಿಂದ ಕೂಡಿರುವವನು. (೪೬೭) ಮಹಾಮಾಯಃ – ಮಹಾಮಾಯಾವಿಯು. (೪೬೮) ಪಯೋನಿಧಿಃ – ಕ್ಷೀರಸಾಗರಸ್ವರೂಪನು. (೪೬೯) ಮಹಾದಂತಃ – ದೊಡ್ಡ ದಂತಗಳುಳ್ಳವನು. (೪೭೦) ಮಹಾದಂಷ್ಟ್ರಃ – ದೊಡ್ಡ ಕೋರೆದಾಡೆಗಳುಳ್ಳವನು. (೪೭೧) ಮಹಾಜಿಹ್ವಃ – ಉದ್ದ ನಾಲಿಗೆಯುಳ್ಳವನು. (೪೭೨) ಮಹಾಮುಖಃ – ಅಗಲ ಮುಖವುಳ್ಳವನು.

13017086a ಮಹಾನಖೋ ಮಹಾರೋಮಾ ಮಹಾಕೇಶೋ61 ಮಹಾಜಟಃ।
13017086c ಅಸಪತ್ನಃ62 ಪ್ರಸಾದಶ್ಚ ಪ್ರತ್ಯಯೋ ಗಿರಿಸಾಧನಃ।।

(೪೭೩) ಮಹಾನಖಃ – ದೊಡ್ಡ ಉಗುರುಗಳುಳ್ಳ ನರಸಿಂಹಸ್ವರೂಪಿಯು. (೪೭೪) ಮಹಾರೋಮಃ – ಉದ್ದ ರೋಮಗಳುಳ್ಳ ವರಾಹಸ್ವರೂಪಿಯು. (೪೭೫) ಮಹಾಕೇಶಃ – ಉದ್ದ ಕೂದಲುಗಳುಳ್ಳವನು. (೪೭೬) ಮಹಾಜಟಃ – ದೊಡ್ಡ ಜಟೆಯನ್ನು ಧರಿಸಿದವನು. (೪೭೭) ಅಸಪತ್ನಃ – ಸ್ಪರ್ಧಿಸುವವರಿಲ್ಲದವನು. (೪೭೮) ಪ್ರಸಾದಃ – ಪ್ರಸನ್ನತೆಯ ಮೂರ್ತಿಸ್ವರೂಪನು (೪೭೯) ಪ್ರತ್ಯಯಃ – ಜ್ಞಾನಸ್ವರೂಪಿಯು. (೪೮೦) ಗಿರಿಸಾಧನಃ – ಪರ್ವತವನ್ನೇ ಆಯುಧವನ್ನಾಗಿ ಬಳಸುವವನು.

13017087a ಸ್ನೇಹನೋಽಸ್ನೇಹನಶ್ಚೈವ ಅಜಿತಶ್ಚ ಮಹಾಮುನಿಃ।
13017087c ವೃಕ್ಷಾಕಾರೋ ವೃಕ್ಷಕೇತುರನಲೋ ವಾಯುವಾಹನಃ।।

(೪೮೧) ಸ್ನೇಹನಃ – ಅತ್ಯಂತ ಪ್ರೀತಿಯುಳ್ಳವನು. (೪೮೨) ಅಸ್ನೇಹನಃ – ಅನಾಸಕ್ತನು. (೪೮೩) ಅಜಿತಃ – ಅಪರಾಜಿತನು. (೪೮೪) ಮಹಾಮುನಿಃ – ಅತ್ಯಂತ ಮನನಶೀಲನು. (೪೮೫) ವೃಕ್ಷಾಕಾರಃ – ಸಂಸಾರವೃಕ್ಷ ಸ್ವರೂಪಿಯು. (೪೮೬) ವೃಕ್ಷಕೇತುಃ – ವೃಕ್ಷದಂತೆ ಎತ್ತರವಾದ ಧ್ವಜವುಳ್ಳವನು. (೪೮೭) ಅನಲಃ – ಅಗ್ನಿಸ್ವರೂಪಿಯು. (೪೮೮) ವಾಯುವಾಹನಃ – ವಾಯುವನ್ನೇ ವಾಹನವನ್ನಾಗಿ ಬಳಸುವವನು.

13017088a ಮಂಡಲೀ ಮೇರುಧಾಮಾ ಚ ದೇವದಾನವದರ್ಪಹಾ। 63
13017088c ಅಥರ್ವಶೀರ್ಷಃ ಸಾಮಾಸ್ಯ ಋಕ್ಸಹಸ್ರಾಮಿತೇಕ್ಷಣಃ।।

(೪೮೯) ಮಂಡಲೀ – ಮಂಡಲದ ಮಧ್ಯದಲ್ಲಿರುವವನು. (೪೯೦) ಮೇರುಧಾಮಾ – ಮೇರುಪರ್ವತವನ್ನೇ ನಿವಾಸಸ್ಥಾನವನ್ನಾಗಿ ಮಾಡಿಕೊಂಡವನು. (೪೯೧) ದೇವದಾನವದರ್ಪಹಃ – ದೇವದಾನವರ ದರ್ಪವನ್ನು ನಾಶಪಡಿಸಿದವನು. (೪೯೨) ಅಥರ್ವಶೀರ್ಷಃ – ಅಥರ್ವವೇದವೇ ಶಿರವಾಗುಳ್ಳವನು. (೪೯೩) ಸಾಮಾಸ್ಯಃ – ಸಾಮವೇದವೇ ಮುಖವಾಗುಳ್ಳವನು. (೪೯೪) ಋಕ್ಸಹಸ್ರಾಮಿತೇಕ್ಷಣಃ – ಸಾವಿರಾರು ಋಕ್ಕುಗಳೇ ಕಣ್ಣುಗಳಾಗಿರುವವನು.

13017089a ಯಜುಃಪಾದಭುಜೋ ಗುಹ್ಯಃ ಪ್ರಕಾಶೋ ಜಂಗಮಸ್ತಥಾ।
13017089c ಅಮೋಘಾರ್ಥಃ ಪ್ರಸಾದಶ್ಚ ಅಭಿಗಮ್ಯಃ ಸುದರ್ಶನಃ।।

(೪೯೫) ಯಜುಃಪಾದಭುಜಃ – ಯಜುರ್ವೇದವೇ ಪಾದ-ಭುಜಗಳಾಗಿರುವವನು. (೪೯೬) ಗುಹ್ಯಃ – ಗೋಪನೀಯಸ್ವರೂಪಿಯು. (೪೯೭) ಪ್ರಕಾಶಃ – ಸ್ವಯಂ ಪ್ರಕಾಶನು. (೪೯೮) ಜಂಗಮಃ – ತಿರುಗಾಡುವವನು. (೪೯೯) ಅಮೋಘಾರ್ಥಃ – ಮಾಡಿಕೊಂಡ ಪ್ರಾರ್ಥನೆಯನ್ನು ಸಫಲಗೊಳಿಸುವವನು. (೫೦೦) ಪ್ರಸಾದಃ – ಶೀಘ್ರವಾಗಿ ಪ್ರಸನ್ನನಾಗುವವನು. (೫೦೧) ಅಭಿಗಮ್ಯಃ – ಸುಖವಾಗಿ ಹೊಂದಲು ಸಾಧ್ಯನಾದವನು. (೫೦೨) ಸುದರ್ಶನಃ – ಸುಂದರವಾಗಿ ಕಾಣಿಸುವವನು.

13017090a ಉಪಹಾರಪ್ರಿಯಃ64 ಶರ್ವಃ ಕನಕಃ ಕಾಂಚನಃ ಸ್ಥಿರಃ65
13017090c ನಾಭಿರ್ನಂದಿಕರೋ ಭಾವ್ಯಃ ಪುಷ್ಕರಸ್ಥಪತಿಃ ಸ್ಥಿರಃ।।

(೫೦೩) ಉಪಹಾರಪ್ರಿಯಃ – ಉಪಹಾರಗಳನ್ನು ಇಷ್ಟಪಡುವವನು. (೫೦೪) ಶರ್ವಃ – ಶರ್ವನು. (೫೦೫) ಕನಕಃ – ಸುವರ್ಣಸ್ವರೂಪಿಯು. (೫೦೬) ಕಾಂಚನಃ – ಕಾಂಚನಸ್ವರೂಪಿಯು. (೫೦೭) ಸ್ಥಿರಃ – ಸ್ಥಿರನಾದವನು. (೫೦೮) ನಾಭಿಃ – ಸಮಸ್ತಭುವನಗಳಿಗೂ ನಾಭಿಸ್ವರೂಪನಾಗಿರುವವನು. (೫೦೯) ನಂದಿಕರಃ – ಆನಂದವನ್ನುಂಟುಮಾಡುವವನು. (೫೧೦) ಭಾವ್ಯಃ – ಭಾವನೆಗೆ ಸಿಲುಕುವವನು. (೫೧೧) ಪುಷ್ಕರಸ್ಥಪತಿಃ – ಬ್ರಹ್ಮಾಂಡಸ್ವರೂಪೀ ಪುಷ್ಕರವನ್ನು ನಿರ್ಮಿಸಿರುವವನು (೫೧೨) ಸ್ಥಿರಃ – ಸ್ಥಿರಸ್ವರೂಪಿಯು.

13017091a ದ್ವಾದಶಸ್ತ್ರಾಸನಶ್ಚಾದ್ಯೋ ಯಜ್ಞೋ ಯಜ್ಞಸಮಾಹಿತಃ।
13017091c ನಕ್ತಂ ಕಲಿಶ್ಚ ಕಾಲಶ್ಚ ಮಕರಃ ಕಾಲಪೂಜಿತಃ।।

(೫೧೩) ದ್ವಾದಶಃ – ಮೋಕ್ಷಸ್ವರೂಪಿಯು66. (೫೧೪) ತ್ರಾಸನಃ – ಭಯವನ್ನುಂಟುಮಾಡುವವನು. (೫೧೫) ಆದ್ಯಃ – ಮೊದಲಿಗನು. (೫೧೬) ಯಜ್ಞಃ – ಯಜ್ಞಪುರುಷನು. (೫೧೭) ಯಜ್ಞಸಮಾಹಿತಃ – ಯಜ್ಞದಲ್ಲಿ ಉಪಸ್ಥಿತನಾಗಿರುವವನು. (೫೧೮) ನಕ್ತಃ – ಪ್ರಳಯಕಾಲದ ರಾತ್ರಿ ಸ್ವರೂಪಿಯು. (೫೧೯) ಕಲಿಃ – ಕಲಿಸ್ವರೂಪನು. (೫೨೦) ಕಾಲಃ – ಕಾಲಸ್ವರೂಪನು. (೫೨೧) ಮಕರಃ – ಮಕರಾಕಾರದ ಶಿಂಶುಮಾರಚಕ್ರಸ್ವರೂಪಿಯು. (೫೨೨) ಕಾಲಪೂಜಿತಃ – ಮೃತ್ಯುವೂ ಪೂಜಿಸುವವನು.

13017092a ಸಗಣೋ ಗಣಕಾರಶ್ಚ ಭೂತಭಾವನಸಾರಥಿಃ67
13017092c ಭಸ್ಮಶಾಯೀ ಭಸ್ಮಗೋಪ್ತಾ ಭಸ್ಮಭೂತಸ್ತರುರ್ಗಣಃ।।

(೫೨೩) ಸಗಣಃ – ಪ್ರಮಥಗಣಗಳಿಂದ ಕೂಡಿರುವವನು. (೫೨೪) ಗಣಕಾರಃ – ಭಕ್ತರನ್ನು ತನ್ನ ಗಣದಲ್ಲಿ ಸೇರಿಸಿಕೊಳ್ಳುವವನು. (೫೨೫) ಭೂತಭಾವನಸಾರಥಿಃ – ತ್ರಿಪುರಾಸುರಸಂಹಾರ ಸಂದರ್ಭದಲ್ಲಿ ಬ್ರಹ್ಮನನ್ನೇ ಸಾರಥಿಯನ್ನಾಗಿರಿಸಿಕೊಂಡವನು. (೫೨೬) ಭಸ್ಮಶಾಯೀ – ಭಸ್ಮದಮೇಲೆ ಮಲಗುವವನು. (೫೨೭) ಭಸ್ಮಗೋಪ್ತಾ – ಭಸ್ಮದ ಮೂಲಕ ಭಕ್ತರನ್ನು ರಕ್ಷಿಸುವವನು. (೫೨೮) ಭಸ್ಮಭೂತಃ – ಭಸ್ಮಸ್ವರೂಪಿಯು. (೫೨೯) ತರುಃ – ಕಲ್ಪವೃಕ್ಷಸ್ವರೂಪಿಯು. (೫೩೦) ಗಣಃ – ಪಾರ್ಷದ ಗಣ ಸ್ವರೂಪಿಯು.

13017093a ಅಗಣಶ್ಚೈವ ಲೋಪಶ್ಚ68 ಮಹಾತ್ಮಾ ಸರ್ವಪೂಜಿತಃ।
13017093c ಶಂಕುಸ್ತ್ರಿಶಂಕುಃ69 ಸಂಪನ್ನಃ ಶುಚಿರ್ಭೂತನಿಷೇವಿತಃ।।

(೫೩೧) ಅಗಣಃ – ಜೊತೆಗಿಲ್ಲದವನು; ಏಕಾಂಗಿಯು. (೫೩೨) ಲೋಪಃ – ಜಗತ್ತನ್ನು ಲೋಪಗೊಳಿಸುವವನು. (೫೩೩) ಮಹಾತ್ಮಾ – ಮಹಾ ಆತ್ಮವುಳ್ಳವನು. (೫೩೪) ಸರ್ವಪೂಜಿತಃ – ಸರ್ವರಿಂದಲೂ ಪೂಜಿಸಲ್ಪಡುವವನು. (೫೩೫) ಶಂಕುಃ – ಲೋಕಸ್ತಂಭನು; ಜಗತ್ತಿಗೇ ಕಂಬದಂತಿರುವವನು. (೫೩೬) ತ್ರಿಶಂಕುಃ – ತ್ರಿಶಂಕು ಸ್ವರೂಪಿಯು. (೫೩೭) ಸಂಪನ್ನಃ – ಎಲ್ಲವನ್ನೂ ಪಡೆದವನು. (೫೩೮) ಶುಚಿಃ – ಪರಮಪವಿತ್ರನು. (೫೩೯) ಭೂತನಿಷೇವಿತಃ – ಸಮಸ್ತಪ್ರಾಣಿಗಳಿಂದಲೂ ಸೇವಿಸಲ್ಪಡುವವನು.

13017094a ಆಶ್ರಮಸ್ಥಃ ಕಪೋತಸ್ಥೋ ವಿಶ್ವಕರ್ಮಾ ಪತಿರ್ವರಃ।
13017094c ಶಾಖೋ ವಿಶಾಖಸ್ತಾಮ್ರೋಷ್ಠೋ ಹ್ಯಂಬುಜಾಲಃ ಸುನಿಶ್ಚಯಃ।। 70

(೫೪೦) ಆಶ್ರಮಸ್ಥಃ – ನಾಲ್ಕು ಆಶ್ರಮಗಳಲ್ಲಿಯೂ ಧರ್ಮರೂಪದಲ್ಲಿ ಇರುವವನು. (೫೪೧) ಕಪೋತಸ್ಥಃ – ಪಾರಿವಾಳಗಳಲ್ಲಿರುವವನು. (೫೪೨) ವಿಶ್ವಕರ್ಮಾ – ವಿಶ್ವವನ್ನು ನಿರ್ಮಿಸಿದವನು. (೫೪೩) ಪತಿಃ – ಒಡೆಯನು. (೫೪೪) ವರಃ – ಸರ್ವಶ್ರೇಷ್ಠನು. (೫೪೫) ಶಾಖಃ – ವೃಕ್ಷದಂತೆ ಶಾಖೆಗಳುಳ್ಳವನು. (೫೪೬) ವಿಶಾಖಃ – ಶಾಖೆಗಳಿಲ್ಲವನು. (೫೪೭) ತಾಮ್ರೋಷ್ಠಃ - ಕೆಂಪಾದ ತುಟಿಗಳುಳ್ಳವನು. (೫೪೮) ಅಂಬುಜಾಲಃ – ಸಾಗರಸ್ವರೂಪಿಯು. (೫೪೯) ಸುನಿಶ್ಚಯಃ – ಉತ್ತಮ ನಿಶ್ಚಯಗಳುಳ್ಳವನು.

13017095a ಕಪಿಲೋಽಕಪಿಲಃ71 ಶೂರ ಆಯುಶ್ಚೈವ ಪರೋಽಪರಃ।
13017095c ಗಂಧರ್ವೋ ಹ್ಯದಿತಿಸ್ತಾರ್ಕ್ಷ್ಯಃ ಸುವಿಜ್ಞೇಯಃ ಸುಸಾರಥಿಃ72।।

(೫೫೦) ಕಪಿಲಃ – ಕಪಿಲ73ವರ್ಣದವನು. (೫೫೧) ಅಕಪಿಲಃ – ಕಪಿಲವರ್ಣದಲ್ಲದವನು. (೫೫೨) ಶೂರಃ – ಶೂರನು. (೫೫೩) ಆಯುಃ – ಜೀವನಸ್ವರೂಪಿಯು. (೫೫೪) ಪರಃ – ಪ್ರಾಚೀನನು. (೫೫೫) ಅಪರಃ – ಅರ್ವಾಚೀನನು. (೫೫೬) ಗಂಧರ್ವಃ – ಗಂಧರ್ವಸ್ವರೂಪಿಯು. (೫೫೭) ಅದಿತಿಃ – ದೇವಮಾತೆ ಅದಿತಿ ಸ್ವರೂಪಿಯು. (೫೫೮) ತಾರ್ಕ್ಷ್ಯಃ – ಗರುಡಸ್ವರೂಪಿಯು. (೫೫೯) ಸುವಿಜ್ಞೇಯಃ – ಭಕ್ತರಿಂದ ಸುಲಭವಾಗಿ ತಿಳಿಯಲ್ಪಡುವವನು. (೫೬೦) ಸುಸಾರಥಿಃ – ಉತ್ತಮ ಸಾರಥಿಯು.

13017096a ಪರಶ್ವಧಾಯುಧೋ ದೇವ ಅರ್ಥಕಾರೀ74 ಸುಬಾಂಧವಃ।
13017096c ತುಂಬವೀಣೀ ಮಹಾಕೋಪ75 ಊರ್ಧ್ವರೇತಾ ಜಲೇಶಯಃ।।

(೫೬೧) ಪರಶ್ವಾಯುಧಃ – ಪರಶುವನ್ನು ಆಯುಧವನ್ನಾಗಿ ಧರಿಸಿರುವವನು. (೫೬೨) ದೇವಃ – ಮಹಾದೇವನು. (೫೬೩) ಅರ್ಥಕಾರೀ – ಉದ್ದೇಶಗಳನ್ನು ಪರಿಪೂರ್ಣಗೊಳಿಸುವವನು. (೫೬೪) ಸುಬಾಂಧವಃ – ಭಕ್ತರಿಗೆ ಉತ್ತಮ ಬಂಧುವು. (೫೬೫) ತುಂಬವೀಣೀ - ತುಂಬುವೀಣೆಯನ್ನು ನುಡಿಸುವವನು. (೫೬೬) ಮಹಾಕೋಪಃ – ಪ್ರಳಯಕಾಲದಲ್ಲಿ ಮಹಾಕೋಪವನ್ನು ತಾಳುವವನು. (೫೬೭) ಊರ್ಧ್ವರೇತಃ – ಅಸ್ಖಲಿತವೀರ್ಯನು. (೫೬೮) ಜಲೇಶಯಃ – ಕ್ಷೀರಸಾಗರದಲ್ಲಿ ಮಲಗಿರುವ ವಿಷ್ಣುಸ್ವರೂಪಿಯು.

13017097a ಉಗ್ರೋ ವಂಶಕರೋ ವಂಶೋ ವಂಶನಾದೋ ಹ್ಯನಿಂದಿತಃ।
13017097c ಸರ್ವಾಂಗರೂಪೋ ಮಾಯಾವೀ ಸುಹೃದೋ ಹ್ಯನಿಲೋಽನಲಃ।।

(೫೬೯) ಉಗ್ರಃ – ಪ್ರಳಯಕಾಲದಲ್ಲಿ ಭಯಂಕರ ರೂಪತಾಳುವವನು. (೫೭೦) ವಂಶಕರಃ – ವಂಶಪ್ರವರ್ತಕನು. (೫೭೧) ವಂಶಃ – ವಂಶಸ್ವರೂಪಿಯು. (೫೭೨) ವಂಶನಾದಃ – ವೇಣುನಾದಲೋಲನು. (೫೭೩) ಅನಿಂದಿತಃ – ನಿಂದನಾರಹಿತನು. (೫೭೪) ಸರ್ವಾಂಗರೂಪಃ – ಸರ್ವಾಂಗಗಳಲ್ಲಿಯೂ ಪರಿಪೂರ್ಣ ರೂಪವುಳ್ಳವನು. (೫೭೫) ಮಾಯಾವೀ – ಮಾಯಾವಿಯು. (೫೭೬) ಸುಹೃದಃ – ಉತ್ತಮ ಸ್ನೇಹಿತನು. (೫೭೭) ಅನಿಲಃ – ವಾಯುಸ್ವರೂಪಿಯು. (೫೭೮) ಅನಲಃ – ಅಗ್ನಿಸ್ವರೂಪಿಯು.

13017098a ಬಂಧನೋ ಬಂಧಕರ್ತಾ ಚ ಸುಬಂಧನವಿಮೋಚನಃ।
13017098c ಸ ಯಜ್ಞಾರಿಃ76 ಸ ಕಾಮಾರಿ77ರ್ಮಹಾದಂಷ್ಟ್ರೋ ಮಹಾಯುಧಃ।।

(೫೭೯) ಬಂಧನಃ – ಸ್ನೇಹಬಂಧನದಿಂದ ಬಂಧಿಸುವವನು. (೫೮೦) ಬಂಧಕರ್ತಾ – ಬಂಧನರೂಪದ ಸಂಸಾರವನ್ನು ನಿರ್ಮಿಸಿದವನು. (೫೮೧) ಸುಬಂಧನವಿಮೋಚನಃ – ಮಾಯೆಯ ಸುದೃಢ ಬಂಧನದಿಂದ ವಿಮೋಚನಗೊಳಿಸುವವನು. (೫೮೨) ಸಯಜ್ಞಾರಿಃ – ಯಜ್ಞನಾಶಕ ದೈತ್ಯರೊಡನೆಯೂ ಇರುವವನು. (೫೮೩) ಸಕಾಮಾರಿಃ – ಕಾಮನ ಶತ್ರುಗಳಾದ ಯೋಗಿಗಳೊಡನೆಯೂ ಇರುವವನು. (೫೮೪) ಮಹಾದಂಷ್ಟ್ರಃ – ದೊಡ್ಡ ಕೋರೆದಾಡೆಗಳನ್ನುಳ್ಳ ನರಸಿಂಹ ಸ್ವರೂಪಿಯು. (೫೮೫) ಮಹಾಯುಧಃ – ದೊಡ್ಡ ಆಯುಧವನ್ನು ಧರಿಸಿದವನು.

13017099a ಬಾಹುಸ್ತ್ವನಿಂದಿತಃ78 ಶರ್ವಃ ಶಂಕರಃ ಶಂಕರೋಽಧನಃ।
13017099c ಅಮರೇಶೋ ಮಹಾದೇವೋ ವಿಶ್ವದೇವಃ ಸುರಾರಿಹಾ।।

(೫೮೬) ಬಾಹುಃ – ವೀರಬಾಹುಗಳುಳ್ಳವನು. (೫೮೭) ಅನಿಂದಿತಃ – ನಿಂದನೆಯಿಲ್ಲದವನು. (೫೮೮) ಶರ್ವಃ – ಪ್ರಳಯಕಾಲದಲ್ಲಿ ಸರ್ವವನ್ನೂ ನಾಶಗೊಳಿಸುವವನು. (೫೮೯) ಶಂಕರಃ – ಭಕ್ತರಿಗೆ ಆನಂದವನ್ನುಂಟುಮಾಡುವವನು. (೫೯೦) ಶಂಕರಃ – ಮಂಗಳಕರನು. (೫೯೧) ಅಧನಃ – ಧನರಹಿತನಾಗಿರುವವನು. (೫೯೨) ಅಮರೇಶಃ – ಅಮರರ ಒಡೆಯನು. (೫೯೩) ಮಹಾದೇವಃ – ದೇವತೆಗಳಿಗೂ ದೇವನು. (೫೯೪) ವಿಶ್ವದೇವಃ – ಸಂಪೂರ್ಣ ವಿಶ್ವದ ದೇವನು. (೫೯೫) ಸುರಾರಿಹಾ – ದೇವಶತ್ರುಗಳ ಸಂಹಾರಕನು.

13017100a ಅಹಿರ್ಬುಧ್ನೋ ನಿರೃತಿಶ್ಚ ಚೇಕಿತಾನೋ ಹರಿಸ್ತಥಾ। 79
13017100c ಅಜೈಕಪಾಚ್ಚ ಕಾಪಾಲೀ ತ್ರಿಶಂಕುರಜಿತಃ ಶಿವಃ।।

(೫೯೬) ಅಹಿರ್ಬುಧ್ನ್ಯಃ – ಶೇಷನಾಗ ಸ್ವರೂಪಿಯು. (೫೯೭) ನಿರೃತಿಃ – ವಿನಾಶ, ಮೃತ್ಯುವು. (೫೯೮) ಚೇಕಿತಾನಃ – ಅತಿಶಯ ಜ್ಞಾನವುಳ್ಳವನು. (೫೯೯) ಹರಿಃ – ಹರಿ ಸ್ವರೂಪನು. (೬೦೦) ಅಜೈಕಪಾದ – ಏಕಾದಶ ರುದ್ರರಲ್ಲಿ ಒಬ್ಬನಾದ ಅಜೈಕಪಾದನು. (೬೦೧) ಕಾಪಾಲೀ – ಸಕಲ ಬ್ರಹ್ಮಾಂಡಕ್ಕೂ ಅಧೀಶನು. (೬೦೨) ತ್ರಿಶಂಕುಃ – ತ್ರಿಶಂಕು ಸ್ವರೂಪಿಯು. (೬೦೩) ಅಜಿತಃ – ಅಪರಾಜಿತನು. (೬೦೪) ಶಿವಃ – ಮಂಗಳಸ್ವರೂಪಿಯು.

13017101a ಧನ್ವಂತರಿರ್ಧೂಮಕೇತುಃ ಸ್ಕಂದೋ ವೈಶ್ರವಣಸ್ತಥಾ।
13017101c ಧಾತಾ ಶಕ್ರಶ್ಚ ವಿಷ್ಣುಶ್ಚ ಮಿತ್ರಸ್ತ್ವಷ್ಟಾ ಧ್ರುವೋ ಧರಃ।।

(೬೦೫) ಧನ್ವಂತರಿಃ – ಮಹಾವೈದ್ಯ ಧನ್ವಂತರಿ ಸ್ವರೂಪಿಯು. (೬೦೬) ಧೂಮಕೇತುಃ – ಅಗ್ನಿಸ್ವರೂಪಿಯು. (೬೦೭) ಸ್ಕಂದಃ – ಕಾರ್ತಿಕೇಯ ಸ್ವರೂಪಿಯು. (೬೦೮) ವೈಶ್ರವಣಃ – ಕುಬೇರ ಸ್ವರೂಪಿಯು. (೬೦೯) ಧಾತಾ – ಬ್ರಹ್ಮಸ್ವರೂಪಿಯು. (೬೧೦) ಶಕ್ರಃ – ಇಂದ್ರಸ್ವರೂಪಿಯು. (೬೧೧) ವಿಷ್ಣುಃ – ಸರ್ವವ್ಯಾಪೀ ವಿಷ್ಣುಸ್ವರೂಪಿಯು. (೬೧೨) ಮಿತ್ರಃ – ದ್ವಾದಶಾದಿತ್ಯರಲ್ಲಿ ಒಬ್ಬನಾದ ಮಿತ್ರ ಸ್ವರೂಪಿಯು. (೬೧೩) ತ್ವಷ್ಟಃ – ದೇವಶಿಲ್ಪಿ ವಿಶ್ವಕರ್ಮಸ್ವರೂಪಿಯು. (೬೧೪) ಧ್ರುವಃ – ನಿತ್ಯನು. (೬೧೫) ಧರಃ – ಅಷ್ಟವಸುಗಳಲ್ಲಿ ಒಬ್ಬನಾದ ಧರಸ್ವರೂಪಿಯು.

13017102a ಪ್ರಭಾವಃ ಸರ್ವಗೋ ವಾಯುರರ್ಯಮಾ ಸವಿತಾ ರವಿಃ।
13017102c ಉದಗ್ರಶ್ಚ80 ವಿಧಾತಾ ಚ ಮಾಂಧಾತಾ ಭೂತಭಾವನಃ।।

(೬೧೬) ಪ್ರಭಾವಃ – ಉತ್ಕೃಷ್ಟ ಭಾವ ಸಂಪನ್ನನು. (೬೧೭) ಸರ್ವಗೋ ವಾಯುಃ – ಸರ್ವವ್ಯಾಪೀ ವಾಯುಸ್ವರೂಪಿಯು. (೬೧೮) ಅರ್ಯಮಾ – ದ್ವಾದಶಾದಿತ್ಯರಲ್ಲಿ ಒಬ್ಬನಾದ ಆರ್ಯಮ ಸ್ವರೂಪಿಯು. (೬೧೯) ಸವಿತಾ – ಸಂಪೂರ್ಣ ಜಗತ್ತನ್ನೂ ಉತ್ಪತ್ತಿಮಾಡುವವನು. (೬೨೦) ರವಿಃ – ಸೂರ್ಯಸ್ವರೂಪಿಯು. (೬೨೧) ಉದಗ್ರಃ – ಓಜಸ್ವಿಯು. (೬೨೨) ವಿಧಾತಾ – ಪ್ರಾಣಿಗಳ ಧಾರಣ-ಪೋಷಣೆಗಳನ್ನು ಮಾಡುವವನು. (೬೨೩) ಮಾಂಧಾತಾ – ಜೀವಕ್ಕೆ ತೃಪ್ತಿಯನ್ನುಂಟುಮಾಡುವವನು. (೬೨೪) ಭೂತಭಾವನಃ – ಸಮಸ್ತ ಪ್ರಾಣಿಗಳ ಉತ್ಪಾದಕನು.

13017103a ರತಿತೀರ್ಥಶ್ಚ ವಾಗ್ಮೀ ಚ ಸರ್ವಕಾಮಗುಣಾವಹಃ।
13017103c ಪದ್ಮಗರ್ಭೋ ಮಹಾಗರ್ಭಶ್ಚಂದ್ರವಕ್ತ್ರೋ ಮನೋರಮಃ।। 81

(೬೨೫) ರತಿತೀರ್ಥಃ – ಎಲ್ಲ ರತಿಗಳಿಗೆ ಧಾಮನು. (೬೨೬) ವಾಗ್ಮೀ – ಚತುರ ವಾಗ್ಮಿಯು. (೬೨೭) ಸರ್ವಕಾಮಗುಣಾವಹಃ – ಸರ್ವಭೋಗಗಳನ್ನೂ ಗುಣಗಳನ್ನೂ ಪ್ರಾಪ್ತಗೊಳಿಸುವವನು. (೬೨೮) ಪದ್ಮಗರ್ಭಃ – ಪದ್ಮದಲ್ಲಿ ಹುಟ್ಟಿದವನು. (೬೨೯) ಮಹಾಗರ್ಭಃ – ವಿಶಾಲ ಬ್ರಹ್ಮಾಂಡವನ್ನೂ ಉದರದಲ್ಲಿ ಧರಿಸಿದವನು. (೬೩೦) ಚಂದ್ರವಕ್ತ್ರಃ – ಚಂದ್ರಮನಂಥಹ ಮನೋಹರ ಮುಖವುಳ್ಳವನು. (೬೩೧) ಮನೋರಮಃ – ಮನಸ್ಸಿಗೆ ಆನಂದವನ್ನುಂಟುಮಾಡುವ ರೂಪವುಳ್ಳವನು.

13017104a ಬಲವಾಂಶ್ಚೋಪಶಾಂತಶ್ಚ ಪುರಾಣಃ ಪುಣ್ಯಚಂಚುರೀ।
13017104c ಕುರುಕರ್ತಾ ಕಾಲರೂಪೀ ಕುರುಭೂತೋ ಮಹೇಶ್ವರಃ82।।

(೬೩೨) ಬಲವಾನಃ – ಶಕ್ತಿಶಾಲಿಯು. (೬೩೩) ಉಪಶಾಂತಃ – ಶಾಂತ ಸ್ವರೂಪನು. (೬೩೪) ಪುರಾಣಃ – ಪುರಾಣ ಪುರುಷನು. (೬೩೫) ಪುಣ್ಯಚಂಚುಃ – ಪುಣ್ಯದ ಮೂಲಕ ಅರಿಯಲು ಸಾಧ್ಯನಾದವನು. (೬೩೬) ಕುರುಕರ್ತಾ- ಕುರುಕ್ಷೇತ್ರದ ನಿರ್ಮಾತಾ; ಕರ್ಮಗಳನ್ನು ಮಾಡಿಸುವವನು. (೬೩೭) ಕಾಲರೂಪೀ – ಕಾಲರೂಪಿಯು. (೬೩೮) ಕುರುಭೂತಃ – ಕರ್ಮಮಂಡಲವನ್ನು ರಚಿಸುವವನು. (೬೩೯) ಮಹೇಶ್ವರಃ – ಮಹಾ ಈಶ್ವರನು.

13017105a ಸರ್ವಾಶಯೋ ದರ್ಭಶಾಯೀ83 ಸರ್ವೇಷಾಂ ಪ್ರಾಣಿನಾಂ ಪತಿಃ।
13017105c ದೇವದೇವಮುಖೋಽಸಕ್ತಃ84 ಸದಸತ್ಸರ್ವರತ್ನವಿತ್।।

(೬೪೦) ಸರ್ವಾಶಯಃ – ಎಲ್ಲವುಗಳ ಆಶ್ರಯನು. (೬೪೧) ದರ್ಭಶಾಯೀ – ದರ್ಭೆಗಳ ಮೇಲೆ ಮಲಗುವವನು. (೬೪೨) ಸರ್ವೇಷಾಂ ಪ್ರಾಣಿನಾಂ ಪತಿಃ – ಸಮಸ್ತ ಪ್ರಾಣಿಗಳ ಸ್ವಾಮಿಯು. (೬೪೩) ದೇವದೇವಮುಖಃ – ದೇವತೆಗಳಲ್ಲಿಯೇ ಮುಖ್ಯ ದೇವನು. (೬೪೪) ಅಸಕ್ತಃ – ಅಂಟಿಕೊಳ್ಳದವನು. (೬೪೫) ಸದಸತಃ – ಇರುವವನು, ಇಲ್ಲದಿರುವವನು. (೬೪೬) ಸರ್ವರತ್ನವಿದುಃ – ಸಂಪೂರ್ಣ ರತ್ನಗಳ ಜ್ಞಾತಾ.

13017106a ಕೈಲಾಸಶಿಖರಾವಾಸೀ ಹಿಮವದ್ಗಿರಿಸಂಶ್ರಯಃ।
13017106c ಕೂಲಹಾರೀ ಕೂಲಕರ್ತಾ ಬಹುವಿದ್ಯೋ ಬಹುಪ್ರದಃ।।

(೬೪೭) ಕೈಲಾಸಶಿಖರವಾಸೀ – ಕೈಲಾಸಪರ್ವತದ ಮೇಲೆ ನಿವಾಸಿಸುವವನು. (೬೪೮) ಹಿಮವದ್ಗಿರಿಸಂಶ್ರಯಃ – ಹಿಮಾಲಯ ಪರ್ವತದ ನಿವಾಸೀ. (೬೪೯) ಕೂಲಹಾರೀ – ಪ್ರಬಲ ಪ್ರವಾಹದ ರೂಪದಲ್ಲಿ ನದೀತಟಗಳನ್ನು ಕೊಚ್ಚಿಕೊಂಡು ಹೋಗುವವನು. (೬೫೦) ಕೂಲಕರ್ತಾ – ಪುಷ್ಕರಾದಿ ವಿಶಾಲ ಸರೋವರಗಳನ್ನು ನಿರ್ಮಿಸಿದವನು. (೬೫೧) ಬಹುವಿದ್ಯಃ – ಅನೇಕ ವಿದ್ಯೆಗಳನ್ನು ತಿಳಿದಿರುವವನು. (೬೫೨) ಬಹುಪ್ರದಃ – ಅಧಿಕವಾಗಿ ನೀಡುವವನು.

13017107a ವಣಿಜೋ ವರ್ಧನೋ85 ವೃಕ್ಷೋ ನಕುಲ86ಶ್ಚಂದನಶ್ಛದಃ।
13017107c ಸಾರಗ್ರೀವೋ ಮಹಾಜತ್ರುರಲೋಲಶ್ಚ ಮಹೌಷಧಃ।।

(೬೫೩) ವಣಿಜಃ – ವೈಶ್ಯರೂಪನು. (೬೫೪) ವರ್ಧನಃ – ವೃದ್ಧಿಸುವವನು. (೬೫೫) ವೃಕ್ಷಃ – ಸಂಸಾರರೂಪೀ ವೃಕ್ಷಸ್ವರೂಪಿಯು. (೬೫೬) ನಕುಲಃ – ನಕುಲ ವೃಕ್ಷ ಸ್ವರೂಪನು. (೬೫೭) ಚಂದನಃ – ಚಂದನ ವೃಕ್ಷ ಸ್ವರೂಪನು. (೬೫೮) ಛದಃ – ಛಿತವನ ವೃಕ್ಷ ಸ್ವರೂಪನು. (೬೫೯) ಸಾರಗ್ರೀವಃ – ಸದೃಢ ಕಂಠವುಳ್ಳವನು. (೬೬೦) ಮಹಾಜತ್ರುಃ – ಅತಿದೊಡ್ಡ ಕುತ್ತಿಗೆಯುಳ್ಳವನು. (೬೬೧) ಅಲೋಲಃ – ಅಚಂಚಲನು. (೬೬೨) ಮಹೌಷಧಃ – ಮಹಾ ಔಷಧ ಸ್ವರೂಪನು.

13017108a ಸಿದ್ಧಾರ್ಥಕಾರೀ ಸಿದ್ಧಾರ್ಥಶ್ಛಂದೋವ್ಯಾಕರಣೋತ್ತರಃ।
13017108c ಸಿಂಹನಾದಃ ಸಿಂಹದಂಷ್ಟ್ರಃ ಸಿಂಹಗಃ ಸಿಂಹವಾಹನಃ।।

(೬೬೩) ಸಿದ್ಧಾರ್ಥಕಾರೀ – ಆಶ್ರಿತ ಜನರ ಮನೋರಥಗಳನ್ನು ಸಫಲಗೊಳಿಸುವವನು. (೬೬೪) ಸಿದ್ಧಾರ್ಥಃ – ಅರ್ಥಗಳನ್ನು ಸಿದ್ಧಿಸಿದವನು. (೬೬೫) ಛಂದೋವ್ಯಾಕರಣೋತ್ತರಃ - ವೇದಗಳ ವ್ಯಾಖ್ಯೆಗಳು ನಿರ್ಣಯಿಸಿರುವ ಸಿದ್ಧಾಂತಸ್ವರೂಪನು. (೬೬೬) ಸಿಂಹನಾದಃ – ಸಿಂಹದಂತೆ ಗರ್ಜಿಸುವವನು. (೬೬೭) ಸಿಂಹದಂಷ್ಟ್ರಃ – ಸಿಂಹದಂತಹ ಹಲ್ಲುಗಳುಳ್ಳವನು. (೬೬೮) ಸಿಂಹಗಃ – ಸಿಂಹವನ್ನೇರಿ ಚಲಿಸುವವನು; ಸಿಂಹದಂತೆ ನಡೆಯುವವನು. (೬೬೯) ಸಿಂಹವಾಹನಃ – ಸಿಂಹವನ್ನು ಏರುವವನು.

13017109a ಪ್ರಭಾವಾತ್ಮಾ ಜಗತ್ಕಾಲಸ್ತಾಲೋ ಲೋಕಹಿತಸ್ತರುಃ।
13017109c ಸಾರಂಗೋ ನವಚಕ್ರಾಂಗಃ ಕೇತುಮಾಲೀ ಸಭಾವನಃ।।

(೬೭೦) ಪ್ರಭಾವಾತ್ಮಃ – ಉತ್ಕೃಷ್ಟ ಸತ್ತ್ವಸ್ವರೂಪನು. (೬೭೧) ಜಗತ್ಕಾಲಸ್ಥಾಲಃ – ಪ್ರಲಯಕಾಲದಲ್ಲಿ ಜಗತ್ತಿನ ಸಂಹಾರಗೈಯುವ ಕಾಲನ ಸ್ಥಾನದಲ್ಲಿರುವವನು. (೬೭೨) ಲೋಕಹಿತಃ – ಲೋಕಹಿತೈಷಿಯು. (೬೭೩) ತರುಃ – ದಾಟಿಸುವವನು. (೬೭೪) ಸಾರಂಗಃ – ಚಾತಕಸ್ವರೂಪನು. (೬೭೫) ನವಚಕ್ರಾಂಗಃ – ನೂತನ ಹಂಸರೂಪನು. (೬೭೬) ಕೇತುಮಾಲೀ – ಧ್ವಜ-ಪಾತಾಕೆಗಳ ಮಾಲೆಗಳಿಂದ ಅಲಂಕೃತನಾದವನು. (೬೭೭) ಸಭಾವನಃ – ಧರ್ಮಸ್ಥಾನದ ರಕ್ಷಕನು.

13017110a ಭೂತಾಲಯೋ ಭೂತಪತಿರಹೋರಾತ್ರಮನಿಂದಿತಃ।
13017110c ವಾಹಿತಾ ಸರ್ವಭೂತಾನಾಂ ನಿಲಯಶ್ಚ ವಿಭುರ್ಭವಃ।।

(೬೭೮) ಭೂತಾಲಯಃ – ಸಮಸ್ತ ಭೂತಗಳ ಆಲಯನು. (೬೭೯) ಭೂತಪತಿಃ – ಸಮಸ್ತ ಭೂತಗಳ ಸ್ವಾಮಿಯು. (೬೮೦) ಅಹೋರಾತ್ರಃ – ದಿನ-ರಾತ್ರಿ ಸ್ವರೂಪನು. (೬೮೧) ಅನಿಂದಿತಃ – ನಿಂದಾರಹಿತನು. (೬೮೨) ಸರ್ವಭೂತಾನಾಂ ವಾಹಿತಾ – ಸರ್ವಭೂತಗಳ ಭಾರವನ್ನೂ ಹೊತ್ತವನು. (೬೮೩) ಸರ್ವಭೂತಾನಾಂ ನಿಲಯಃ – ಸರ್ವಭೂತಗಳ ನಿಲಯನು. (೬೮೪) ವಿಭುಃ – ಸರ್ವವ್ಯಾಪಿಯು. (೬೮೫) ಭವಃ - ಸತ್ತಾರೂಪನು.

13017111a ಅಮೋಘಃ ಸಂಯತೋ ಹ್ಯಶ್ವೋ ಭೋಜನಃ ಪ್ರಾಣಧಾರಣಃ।
13017111c ಧೃತಿಮಾನ್ ಮತಿಮಾನ್ ದಕ್ಷಃ ಸತ್ಕೃತಶ್ಚ ಯುಗಾಧಿಪಃ।।

(೬೮೬) ಅಮೋಘಃ – ಎಂದೂ ಅಸಫಲನಾಗದಿರುವವನು. (೬೮೭) ಸಂಯತಃ – ಸಂಯಮಶೀಲನು. (೬೮೮) ಅಶ್ವಃ – ಉಚ್ಛೈಶ್ರವವೇ ಮೊದಲಾದ ಉತ್ತಮ ಅಶ್ವರೂಪನು. (೬೮೯) ಭೋಜನಃ – ಅನ್ನದಾತನು. (೬೯೦) ಪ್ರಾಣಧಾರಣಃ – ಸರ್ವಪ್ರಾಣಗಳನ್ನು ರಕ್ಷಿಸುವವನು. (೬೯೧) ಧೃತಿಮಾನಃ – ಧೈರ್ಯಶಾಲಿಯು. (೬೯೨) ಮತಿಮಾನಃ – ಬುದ್ಧಿವಂತನು. (೬೯೩) ದಕ್ಷಃ – ಚತುರನು. (೬೯೪) ಸತ್ಕೃತಃ – ಎಲ್ಲರಿಂದ ಸಮ್ಮಾನಿತನು. (೬೯೫) ಯುಗಾಧಿಪಃ – ಯುಗಗಳ ಸ್ವಾಮಿಯು.

13017112a ಗೋಪಾಲಿರ್ಗೋಪತಿರ್ಗ್ರಾಮೋ ಗೋಚರ್ಮವಸನೋ ಹರಃ87
13017112c ಹಿರಣ್ಯಬಾಹುಶ್ಚ ತಥಾ ಗುಹಾಪಾಲಃ ಪ್ರವೇಶಿನಾಮ್।।

(೬೯೬) ಗೋಪಾಲಿಃ – ಇಂದ್ರಿಯಗಳ ಪಾಲಕನು. (೬೯೭) ಗೋಪತಿಃ – ಗೋವುಗಳ ಸ್ವಾಮಿಯು. (೬೯೮) ಗ್ರಾಮಃ – ಸಮೂಹರೂಪನು. (೬೯೯) ಗೋಚರ್ಮವಸನಃ – ಗೋಚರ್ಮಮಯ ವಸ್ತ್ರವನ್ನು ಧರಿಸಿದವನು. (೭೦೦) ಹರಃ – ಭಕ್ತರ ದುಃಖವನ್ನು ಸಂಹರಿಸುವವನು. (೭೦೧) ಹಿರಣ್ಯಬಾಹುಃ – ಹೊಳೆಯುತ್ತಿರುವ ಕಾಂತಿಯುಕ್ತ ಸುಂದರ ಬಾಹುಗಳಿಂದ ಸುಶೋಭಿತನು. (೭೦೨) ಪ್ರವೇಶಿನಾಂ ಗುಹಾಪಾಲಃ – ಗುಹೆಯೊಳಗೆ ಪ್ರವೇಶಿಸುವ ಯೋಗಿಗಳ ರಕ್ಷಕನು.

13017113a ಪ್ರತಿಷ್ಠಾಯೀ88 ಮಹಾಹರ್ಷೋ ಜಿತಕಾಮೋ ಜಿತೇಂದ್ರಿಯಃ।
13017113c ಗಂಧಾರಶ್ಚ ಸುರಾಲಶ್ಚ ತಪಃಕರ್ಮರತಿರ್ಧನುಃ89।।

(೭೦೩) ಪ್ರತಿಷ್ಠಾಯೀ – ಪ್ರತಿಷ್ಠಾಪಿಸುವವನು. (೭೦೪) ಮಹಾಹರ್ಷಃ – ಪರಮಾನಂದ ಸ್ವರೂಪನು. (೭೦೫) ಜಿತಕಾಮಃ – ಕಾಮವಿಜಯಿಯು. (೭೦೬) ಜಿತೇಂದ್ರಿಯಃ – ಇಂದ್ರಿಯವಿಜಯಿಯು. (೭೦೭) ಗಂಧಾರಃ – ಸಪ್ತಸ್ವರಗಳಲ್ಲಿ ಗಂಧಾರ ಸ್ವರನು. (೭೦೮) ಸುರಾಲಃ – ದೇವತೆಗಳ ಆಲಯನು. (೭೦೯) ತಪಃಕರ್ಮರತಿ – ತಪಸ್ಸನ್ನು ಮಾಡುವುದರಲ್ಲಿಯೇ ಆನಂದವನ್ನು ಹೊಂದುವವನು. (೭೧೦) ಧನುಃ – ಧನುಸ್ಸಿನ ಸ್ವರೂಪಿಯು.

13017114a ಮಹಾಗೀತೋ ಮಹಾನೃತ್ತೋ90 ಹ್ಯಪ್ಸರೋಗಣಸೇವಿತಃ।
13017114c ಮಹಾಕೇತುರ್ಧನುರ್ಧಾತು91ರ್ನೈಕಸಾನುಚರಶ್ಚಲಃ।।

(೭೧೧) ಮಹಾಗೀತಃ – ವೇದಶಾಸ್ತ್ರಗಳಲ್ಲಿ ಯಾರ ಮಹಾತ್ಮೆಯ ಗುಣಗಾನಮಾಡಿದೆಯೋ ಅವನು. (೭೧೨) ಮಹಾನೃತ್ತಃ – ಪ್ರಕಾಂಡ ತಾಂಡವವನ್ನು ನರ್ತಿಸುವವನು. (೭೧೩) ಅಪ್ಸರೋಗಣಸೇವಿತಃ – ಅಪ್ಸರಸಮುದಾಯಗಳಿಂದ ಸೇವಿತನು. (೭೧೪) ಮಹಾಕೇತುಃ – ಧರ್ಮರೂಪ ಮಹಾಧ್ವಜವುಳ್ಳವನು. (೭೧೫) ಧನುಃ – ಧನುಸ್ಸಿನ ಸ್ವರೂಪಿಯು. (೭೧೬) ಧಾತುಃ – ಮೂಲಕಾರಣನು. (೭೧೭) ನೈಕಸಾನುಚರಃ – ಮೇರುಗಿರಿಯ ಅನೇಕ ಶಿಖರಗಳಲ್ಲಿ ಸಂಚರಿಸುವವನು. (೭೧೮) ಚಲಃ – ಯಾರ ಹಿಡಿತಕ್ಕೂ ಸಿಲುಕದವನು.

13017115a ಆವೇದನೀಯ ಆವೇಶಃ92 ಸರ್ವಗಂಧಸುಖಾವಹಃ।
13017115c ತೋರಣಸ್ತಾರಣೋ ವಾಯುಃ ಪರಿಧಾವತಿ ಚೈಕತಃ93।।

(೭೧೯) ಆವೇದನೀಯಃ – ಪ್ರಾರ್ಥಿಸಲು ಯೋಗ್ಯನು. (೭೨೦) ಆವೇಶಃ – ಆವೇಶವುಳ್ಳವನು. (೭೨೧) ಸರ್ವಗಂಧಸುಖಾವಹಃ – ಗಂಧಾದಿ ಸಂಪೂರ್ಣ ವಿಷಯ ಸುಖಗಳನ್ನು ಪ್ರಾಪ್ತಗೊಳಿಸುವವನು. (೭೨೨) ತೋರಣಃ – ಮುಕ್ತಿದ್ವಾರ ಸ್ವರೂಪನು. (೭೨೩) ತಾರಣಃ – ದಾಟಿಸುವವನು. (೭೨೪) ವಾಯುಃ – ವಾಯುಸ್ವರೂಪನು. (೭೨೫) ಏಕತಃ ಪರಿಧಾವತಿಃ – ಒಂದೇಕಡೆ ಕೊಂಡೊಯ್ಯುವವನು.

13017116a ಸಂಯೋಗೋ ವರ್ಧನೋ ವೃದ್ಧೋ ಮಹಾವೃದ್ಧೋ ಗಣಾಧಿಪಃ94
13017116c ನಿತ್ಯ ಆತ್ಮಸಹಾಯಶ್ಚ ದೇವಾಸುರಪತಿಃ ಪತಿಃ।।

(೭೨೬) ವರ್ಧನಃ - ವೃದ್ಧಿಯ ಕಾರಣನು. (೭೨೭) ಸಂಯೋಗಃ – ಸ್ತ್ರೀ-ಪುರುಷ ಸಂಯೋಗನು. (೭೨೮) ವೃದ್ಧಃ – ಗುಣಗಳಲ್ಲಿ ಹಿರಿಯವನು. (೭೨೯) ಮಹಾವೃದ್ಧಃ – ಎಲ್ಲರಿಗಿಂತ ಪುರಾತನನಾದುದರಿಂದ ಮಹಾವೃದ್ಧನು. (೭೩೦) ಗಣಾಧಿಪಃ – ಗಣಗಳ ಒಡೆಯನು. (೭೩೧) ನಿತ್ಯ ಆತ್ಮಸಹಾಯಃ – ಆತ್ಮಕ್ಕೆ ಸದಾ ಸಹಾಯಮಾಡುವವನು. (೭೩೨) ದೇವಾಸುರಪತಿಃ – ದೇವಾಸುರರ ಸ್ವಾಮಿಯು. (೭೩೩) ಪತಿಃ – ಎಲ್ಲರ ಸ್ವಾಮಿಯು.

13017117a ಯುಕ್ತಶ್ಚ ಯುಕ್ತಬಾಹುಶ್ಚ ದ್ವಿವಿಧಶ್ಚ ಸುಪರ್ವಣಃ95
13017117c ಆಷಾಢಶ್ಚ ಸುಷಾಢಶ್ಚ ಧ್ರುವೋ ಹರಿಹಣೋ ಹರಃ96।।

(೭೩೪) ಯುಕ್ತಃ – ಭಕ್ತರ ಉದ್ಧಾರದಲ್ಲಿ ಸದಾ ಯುಕ್ತನಾಗಿರುವವನು. (೭೩೫) ಯುಕ್ತಬಾಹುಃ – ಎಲ್ಲದರ ರಕ್ಷಣೆಗಾಗಿ ಬಾಹುಗಳನ್ನು ಎತ್ತಿಹಿಡಿದಿರುವವನು. (೭೩೬) ದ್ವಿವಿಧಃ – ಎರಡು ವಿಧಗಳಲ್ಲಿರುವನು. (೭೩೭) ಸುಪರ್ವಣಃ – ಉಚ್ಛಸ್ಥಾನದಲ್ಲಿರುವವನು. (೭೩೮) ಆಷಾಢಃ – ಭಕ್ತರಿಗೆ ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿಯನ್ನು ಕೊಡುವವನು. (೭೩೯) ಸುಷಾಢಃ – ಉತ್ತಮ ಸಹನಶೀಲನು. (೭೪೦) ಧ್ರುವಃ – ಅವಿಚಲ ಸ್ವರೂಪನು. (೭೪೧) ಹರಿಹಣಃ – ಹರಿ(ಬ್ರಹ್ಮ)ಯನ್ನು ಸಂಹರಿಸಿದವನು. (೭೪೨) ಹರಃ – ಪಾಪಹಾರಿಯು.

13017118a ವಪುರಾವರ್ತಮಾನೇಭ್ಯೋ ವಸುಶ್ರೇಷ್ಠೋ ಮಹಾಪಥಃ।
13017118c ಶಿರೋಹಾರೀ ವಿಮರ್ಷಶ್ಚ ಸರ್ವಲಕ್ಷಣಭೂಷಿತಃ97।।

(೭೪೩) ಆವರ್ತಮಾನೇಭ್ಯೋ ವಪುಃ – ಸ್ವರ್ಗಲೋಕದಿಂದ ಹಿಂದಿರುಗುವವರಿಗೆ ನೂತನ ಶರೀರವನ್ನು ನೀಡುವವನು. (೭೪೪) ವಸುಶ್ರೇಷ್ಠಃ – ಶ್ರೇಷ್ಠ ಧನಸ್ವರೂಪ ಅರ್ಥಾತ್ ಮುಕ್ತಿಸ್ವರೂಪನು. (೭೪೫) ಮಹಾಪಥಃ – ಸರ್ವೋತ್ತಮ ಮಾರ್ಗಸ್ವರೂಪನು. (೭೪೬) ವಿಮರ್ಶಃ ಶಿರೋಹಾರೀ – ವಿವೇಕಪೂರ್ವಕವಾಗಿ ದುಷ್ಟರ ಶಿರವನ್ನು ಅಪಹರಿಸುವವನು. (೭೪೭) ಸರ್ವಲಕ್ಷಣಭೂಷಿತಃ – ಸಮಸ್ತ ಶುಭ ಲಕ್ಷಣಗಳಿಂದ ವಿಭೂಷಿತನು.

13017119a ಅಕ್ಷಶ್ಚ ರಥಯೋಗೀ ಚ ಸರ್ವಯೋಗೀ ಮಹಾಬಲಃ।
13017119c ಸಮಾಮ್ನಾಯೋಽಸಮಾಮ್ನಾಯಸ್ತೀರ್ಥದೇವೋ ಮಹಾರಥಃ।।

(೭೪೮) ಅಕ್ಷಃ ರಥಯೋಗೀ – ರಥಕ್ಕೆ ಸಂಬಂಧಿಸಿದ ಅಕ್ಷಸ್ವರೂಪಿಯು. (೭೪೯) ಸರ್ವಯೋಗೀ – ಎಲ್ಲ ಕಾಲದಲ್ಲಿಯೂ ಯೋಗಯುಕ್ತನಾಗಿರುವವನು. (೭೫೦) ಮಹಾಬಲಃ – ಅನಂತ ಶಕ್ತಿಸಂಪನ್ನನು. (೭೫೧) ಸಮಾಮ್ನಾಯಃ – ವೇದಸ್ವರೂಪನು. (೭೫೨) ಅಸಮಾಮ್ನಾಯಃ – ವೇದಭಿನ್ನ ಸ್ಮೃತಿ, ಇತಿಹಾಸ, ಪುರಾಣ ಮತ್ತು ಆಗಮ ಸ್ವರೂಪನು. (೭೫೩) ತೀರ್ಥದೇವಃ – ಸಂಪೂರ್ಣ ತೀರ್ಥಗಳ ದೇವಸ್ವರೂಪನು. (೭೫೪) ಮಹಾರಥಃ – ತ್ರಿಪುರಸಂಹಾರದ ಸಮಯದಲ್ಲಿ ಪೃಥ್ವೀರೂಪೀ ವಿಶಾಲ ರಥಾರೂಢನಾಗಿದ್ದವನು.

13017120a ನಿರ್ಜೀವೋ ಜೀವನೋ ಮಂತ್ರಃ ಶುಭಾಕ್ಷೋ ಬಹುಕರ್ಕಶಃ।
13017120c ರತ್ನಪ್ರಭೂತೋ ರಕ್ತಾಂಗೋ98 ಮಹಾರ್ಣವನಿಪಾನವಿತ್।।

(೭೫೫) ನಿರ್ಜೀವಃ – ಜಡಪ್ರಪಂಚ ಸ್ವರೂಪನು. (೭೫೬) ಜೀವನಃ – ಜೀವನದಾತನು. (೭೫೭) ಮಂತ್ರಃ – ಪ್ರಣವಾದಿ ಮಂತ್ರಸ್ವರೂಪನು. (೭೫೮) ಶುಭಾಕ್ಷಃ – ಮಂಗಲಮಯ ದೃಷ್ಟಿಯುಳ್ಳವನು. (೭೫೯) ಬಹುಕರ್ಕಶಃ – ಸಂಹಾರಕಾಲದಲ್ಲಿ ಅತ್ಯಂತ ಕಠೋರ ಸ್ವಭಾವವುಳ್ಳವನು. (೭೬೦) ರತ್ನಪ್ರಭೂತಃ – ಅನೇಕ ರತ್ನಗಳ ಭಂಡಾರರೂಪ. (೭೬೧) ರಕ್ತಾಂಗಃ – ರಕ್ತಮಯ ಅಂಗವುಳ್ಳವನು. (೭೬೨) ಮಹಾರ್ಣವನಿಪಾನವಿತ್ – ಮಹಾಸಾಗರಸ್ವರೂಪೀ ನಿಪಾನಗಳನ್ನು ತಿಳಿದುಕೊಂಡಿರುವವನು.

13017121a ಮೂಲೋ ವಿಶಾಲೋ ಹ್ಯಮೃತೋ ವ್ಯಕ್ತಾವ್ಯಕ್ತಸ್ತಪೋನಿಧಿಃ।
13017121c ಆರೋಹಣೋ ನಿರೋಹಶ್ಚ ಶೈಲಹಾರೀ ಮಹಾತಪಾಃ99।।

(೭೬೩) ಮೂಲಃ – ಸಂಸಾರರೂಪೀ ವೃಕ್ಷದ ಬೇರು. (೭೬೪) ವಿಶಾಲಃ – ಅತ್ಯಂತ ಶೋಭಾಯಮಾನನು. (೭೬೫) ಅಮೃತಃ – ಅಮೃತಸ್ವರೂಪನು, ಮುಕ್ತಿಸ್ವರೂಪನು. (೭೬೬) ವ್ಯಕ್ತಾವ್ಯಕ್ತಃ – ಸಾಕಾರ-ನಿರಾಕಾರ ಸ್ವರೂಪನು. (೭೬೭) ತಪೋನಿಧಿಃ – ತಪಸ್ಸಿನ ಭಂಡಾರನು. (೭೬೮) ಆರೋಹಣಃ – ಪರಮಪದವನ್ನೇರಲು ದ್ವಾರಸ್ವರೂಪನು. (೭೬೯) ನಿರೋಹಃ – ಮೇಲೆ ಹೋಗದವನು. (೭೭೦) ಶೈಲಹಾರೀ – ಪರ್ವತಶಿಖರಗಳ ಮೇಲಿದ್ದುದನ್ನು ತಿನ್ನುವವನು. (೭೭೧) ಮಹಾತಪಾಃ – ಮಹಾತಪಸ್ವಿಯು.

13017122a ಸೇನಾಕಲ್ಪೋ ಮಹಾಕಲ್ಪೋ ಯುಗಾಯುಗಕರೋ100 ಹರಿಃ।
13017122c ಯುಗರೂಪೋ ಮಹಾರೂಪಃ ಪವನೋ ಗಹನೋ ನಗಃ101।।

(೭೭೨) ಸೇನಾಕಲ್ಪಃ – ಸೇನೆಗಳ ಆಭೂಷಣ ಸ್ವರೂಪನು. (೭೭೩) ಮಹಾಕಲ್ಪಃ – ಬಹುಮೂಲ್ಯ ಅಲಂಕಾರಗಳಿಂದ ಅಲಂಕೃತನು. (೭೭೪) ಯುಗಾಯುಗಕರಃ – ಯುಗಪ್ರವರ್ತಕನು. (೭೭೫) ಹರಿಃ – ಭಕ್ತರ ದುಃಖವನ್ನು ಕಳೆಯುವವನು. (೭೭೬) ಯುಗರೂಪಃ – ಯುಗಸ್ವರೂಪನು. (೭೭೭) ಮಹಾರೂಪಃ – ಮಹಾನ್ ರೂಪವಂತನು. (೭೭೮) ಪವನಃ – ವಾಯುಸ್ವರೂಪನು. (೭೭೯) ಗಹನಃ – ಆಳವಾಗಿರುವವನು; ದಟ್ಟವಾಗಿರುವವನು. (೭೮೦) ನಗಃ – ಪರ್ವತ ಸ್ವರೂಪಿಯು.

13017123a ನ್ಯಾಯನಿರ್ವಾಪಣಃ ಪಾದಃ ಪಂಡಿತೋ ಹ್ಯಚಲೋಪಮಃ।
13017123c ಬಹುಮಾಲೋ ಮಹಾಮಾಲಃ ಸುಮಾಲೋ ಬಹುಲೋಚನಃ102।।

(೭೮೧) ನ್ಯಾಯನಿರ್ವಾಪಣಃ – ನ್ಯಾಯೋಚಿತ ದಾನಮಾಡುವವನು. (೭೮೨) ಪಾದಃ – ಶರಣುಹೋಗಲು ಯೋಗ್ಯನು. (೭೮೩) ಪಂಡಿತಃ – ಜ್ಞಾನಿಯು. (೭೮೪) ಅಚಲೋಪಮಃ – ಪರ್ವತ ಸಮಾನ ಅಚಲನು. (೭೮೫) ಬಹುಮಾಲಃ – ಅನೇಕ ಮಾಲೆಗಳನ್ನು ಧರಿಸಿರುವವನು. (೭೮೬) ಮಹಾಮಾಲಃ – ಪಾದಗಳ ವರೆಗೂ ಮುಟ್ಟುವ ದೊಡ್ಡ ಮಾಲೆಯನ್ನು ಧರಿಸಿದವನು. (೭೮೭) ಸುಮಾಲಃ – ಸುಂದರ ಮಾಲೆಯನ್ನು ಧರಿಸಿದವನು. (೭೮೮) ಬಹುಲೋಚನಃ – ಅನೇಕ ಕಣ್ಣುಗಳುಳ್ಳವನು.

13017124a ವಿಸ್ತಾರೋ ಲವಣಃ ಕೂಪಃ ಕುಸುಮಃ103 ಸಫಲೋದಯಃ।
13017124c ವೃಷಭೋ ವೃಷಭಾಂಕಾಂಗೋ ಮಣಿಬಿಲ್ವೋ ಜಟಾಧರಃ104।।

(೭೮೯) ವಿಸ್ತಾರಃ – ವಿಸ್ತೃತನು (೭೯೦) ಲವಣಃ ಕೂಪಃ –ಕ್ಷಾರಸಮುದ್ರಸ್ವರೂಪನು. (೭೯೧) ಕುಸುಮಃ – ಕುಸುಮಸ್ವರೂಪನು. (೭೯೨) ಸಫಲೋದಯಃ – ಯಾರ ಅವತಾರವು ಸಫಲವಾಗುತ್ತದೆಯೋ ಅವನು (೭೯೩) ವೃಷಭಃ – ಹೋರಿಯು. (೭೯೪) ವೃಷಭಾಂಕಾಂಗಃ – ಹೋರಿಯ ಚಿಹ್ನೆಯ ಅಂಗಾಂಗವುಳ್ಳವನು. (೭೯೫) ಮಣಿಬಿಲ್ವಃ – ಬಿಲ್ವವೃಕ್ಷದ ಮಣಿ. (೭೯೬) ಜಟಾಧರಃ - ಜಟಾಧಾರಿಯು.

13017125a ಇಂದುರ್ವಿಸರ್ಗಃ ಸುಮುಖಃ ಸುರಃ ಸರ್ವಾಯುಧಃ ಸಹಃ105
13017125c ನಿವೇದನಃ ಸುಧಾಜಾತಃ106 ಸುಗಂಧಾರೋ ಮಹಾಧನುಃ।।

(೭೯೭) ಇಂದುಃ – ಚಂದ್ರಸ್ವರೂಪನು. (೭೯೮) ವಿಸರ್ಗಃ – ವಿಸರ್ಜನೀಯ ಸ್ವರೂಪನು. (೭೯೯) ಸುಮುಖಃ – ಸುಂದರ ಮುಖವುಳ್ಳವನು. (೮೦೦) ಸುರಃ – ಸುರನು. (೮೦೧) ಸರ್ವಾಯುಧಃ – ಸಂಪೂರ್ಣ ಆಯುಧಗಳಿಂದ ಯುಕ್ತನು. (೮೦೨) ಸಹಃ – ಸಹನಶೀಲನು. (೮೦೩) ನಿವೇದನಃ – ಸರ್ವ ಪ್ರಕಾರದ ವೃತ್ತಿಗಳಿಂದ ರಹಿತ ಜ್ಞಾನಿಯು. (೮೦೪) ಸುಧಾಜಾತಃ – ಸುಧೆಯಲ್ಲಿ ಹುಟ್ಟಿದವನು. (೮೦೫) ಸುಗಂಧಾರಃ – ಉತ್ತಮ ಗಂಧಯುಕ್ತನು. (೮೦೬) ಮಹಾಧನುಃ – ಪಿನಾಕವೆಂಬ ವಿಶಾಲ ಧನುಸ್ಸನ್ನು ಧರಿಸಿರುವವನು.

13017126a ಗಂಧಮಾಲೀ ಚ ಭಗವಾನುತ್ಥಾನಃ ಸರ್ವಕರ್ಮಣಾಮ್।
13017126c ಮಂಥಾನೋ ಬಹುಲೋ ಬಾಹುಃ107 ಸಕಲಃ ಸರ್ವಲೋಚನಃ।।

(೮೦೭) ಭಗವಾನ್ – ಭಗವಂತನು. (೮೦೮) ಗಂಧಮಾಲೀ – ಸುಗಂಧಯುಕ್ತ ಮಾಲೆಗಳನ್ನು ಧರಿಸಿರುವವನು. (೮೦೯) ಸರ್ವಕರ್ಮಾಣಾಂ ಉತ್ಥಾನಃ – ಸಮಸ್ತ ಕರ್ಮಗಳ ಉತ್ಥಾನಸ್ಥಾನನು. (೮೧೦) ಮಂಥಾನೋ ಬಹುಲೋ ಬಾಹುಃ – ವಿಶ್ವವನ್ನೇ ಮಥಿಸಬಲ್ಲ ಅನೇಕ ಬಾಹುಗಳುಳ್ಳವನು. (೮೧೧) ಸಕಲಃ – ಸಂಪೂರ್ಣ ಕಲಾಯುಕ್ತನು. (೮೧೨) ಸರ್ವಲೋಚನಃ – ಎಲ್ಲವನ್ನೂ ನೋಡುವವನು.

13017127a ತರಸ್ತಾಲೀ ಕರಸ್ತಾಲೀ ಊರ್ಧ್ವಸಂಹನನೋ ವಹಃ।
13017127c ಛತ್ರಂ ಸುಚ್ಛತ್ರೋ ವಿಖ್ಯಾತಃ ಸರ್ವಲೋಕಾಶ್ರಯೋ ಮಹಾನ್।।

(೮೧೩) ತರಸ್ತಾಲೀ – ಅಂಗೈಯಿಂದ ಗದೆಗೆ ಹೊಡೆದು ಶಬ್ದವನ್ನುಂಟುಮಾಡುವವನು. (೮೧೪) ಕರಸ್ತಾಲೀ – ಕೈಯನ್ನೇ ಭೋಜನಪಾತ್ರೆಯನ್ನಾಗಿ ಬಳಸುವವನು. (೮೧೫) ಊರ್ಧ್ವಸಂವಹನಃ ಸದೃಢ ಶರೀರೀ – ಹೊಡೆದು ಮೇಲಕ್ಕೆ ಕಳುಹಿಸುವ ಸದೃಢ ಶರೀರಿಯು. (೮೧೬) ವಹಃ – ಹೊರುವವನು. (೮೧೭) ಛತ್ರಂ – ಛತ್ರದಂತೆ ಪಾಪತಾಪದಿಂದ ರಕ್ಷಿಸುವವನು. (೮೧೮) ಸುಚ್ಛತ್ರಃ – ಉತ್ತಮ ಛತ್ರಸ್ವರೂಪನು. (೮೧೯) ವಿಖ್ಯಾತಃ – ವಿಖ್ಯಾತನಾದವನು. (೮೨೦) ಸರ್ವಲೋಕಾಶ್ರಯಃ – ಸರ್ವಲೋಕಗಳಿಗೂ ಆಶ್ರಯನು. (೮೨೧) ಮಹಾನ್ - ಶ್ರೇಷ್ಠತಮನು.

13017128a ಮುಂಡೋ ವಿರೂಪೋ ವಿಕೃತೋ ದಂಡಿಮುಂಡೋ108 ವಿಕುರ್ವಣಃ।
13017128c ಹರ್ಯಕ್ಷಃ ಕಕುಭೋ ವಜ್ರೀ ದೀಪ್ತಜಿಹ್ವಃ109 ಸಹಸ್ರಪಾತ್।।

(೮೨೨) ಮುಂಡಃ – ಮುಂಡನ ಮಾಡಿಕೊಂಡ ಮಸ್ತಕವುಳ್ಳವನು. (೮೨೩) ವಿರೂಪಃ – ವಿಕಟ ರೂಪವುಳ್ಳವನು. (೮೨೪) ವಿಕೃತಃ – ಸಂಪೂರ್ಣ ವಿಪರೀತ ಕ್ರಿಯೆಗಳನ್ನು ಧರಿಸುವವನು. (೮೨೫) ದಂಡಿಮುಂಡಃ – ತಲೆ ಬೋಳಿಸಿಕೊಂಡು ದಂಡವನ್ನು ಹಿಡಿದವನು. (೮೨೬) ವಿಕುರ್ವಣಃ – ಕ್ರಿಯೆಯಿಂದ ಲಭ್ಯವಾಗದವನು. (೮೨೭) ಹರ್ಯಕ್ಷಃ – ಸಿಂಹಸ್ವರೂಪನು. (೮೨೮) ಕಕುಭಃ – ಸಂಪೂರ್ಣದಿಶಾ ಸ್ವರೂಪನು. (೮೨೯) ವಜ್ರೀ – ವಜ್ರಧಾರಿಯು.

13017129a ಸಹಸ್ರಮೂರ್ಧಾ ದೇವೇಂದ್ರಃ ಸರ್ವದೇವಮಯೋ ಗುರುಃ।
13017129c ಸಹಸ್ರಬಾಹುಃ ಸರ್ವಾಂಗಃ ಶರಣ್ಯಃ ಸರ್ವಲೋಕಕೃತ್।।

(೮೩೦) ದೀಪ್ತಜಿಹ್ವಃ – ಉರಿಯುತ್ತಿರುವ ನಾಲಿಗೆಯುಳ್ಳವನು. (೮೩೧) ಸಹಸ್ರಪಾತ್ – ಸಹಸ್ರ ಪಾದವುಳ್ಳವನು. (೮೩೨) ಸಹಸ್ರಮೂರ್ಧಃ – ಸಹಸ್ರ ಶಿರಗಳುಳ್ಳವನು. (೮೩೩) ದೇವೇಂದ್ರಃ – ದೇವತೆಗಳ ರಾಜನು. (೮೩೪) ಸರ್ವದೇವಮಯಃ – ಸಂಪೂರ್ಣ ದೇವಸ್ವರೂಪನು. (೮೩೫) ಗುರುಃ – ಸರ್ವರಿಗೂ ಜ್ಞಾನದಾತನು. (೮೩೬) ಸಹಸ್ರಬಾಹುಃ – ಸಹಸ್ರಭುಜಗಳುಳ್ಳವನು. (೮೩೭) ಸರ್ವಾಂಗಃ – ಸಮಸ್ತ ಅಂಗಗಳಿಂದ ಸಂಪನ್ನನು. (೮೩೮) ಶರಣ್ಯಃ – ಶರಣು ಹೋಗಲು ಯೋಗ್ಯನು. (೮೩೯) ಸರ್ವಲೋಕಕೃತ್ – ಸಂಪೂರ್ಣ ಲೋಕಗಳನ್ನು ಉತ್ಪತ್ತಿಮಾಡುವವನು.

13017130a ಪವಿತ್ರಂ ತ್ರಿಮಧುರ್ಮಂತ್ರಃ110 ಕನಿಷ್ಠಃ ಕೃಷ್ಣಪಿಂಗಲಃ।
13017130c ಬ್ರಹ್ಮದಂಡವಿನಿರ್ಮಾತಾ ಶತಘ್ನೀ ಶತಪಾಶಧೃಕ್111।।

(೮೪೦) ಪವಿತ್ರಃ – ಪರಮ ಪಾವನನು. (೮೪೧) ತ್ರಿಮಧುರ್ಮಂತ್ರಃ – ಋಕ್, ಯಜು ಮತ್ತು ಸಾಮಗಳೆಂಬ ಮೂರು ಮಧುರ ಮಂತ್ರಗಳುಳ್ಳವನು. (೮೪೨) ಕನಿಷ್ಠಃ – ಅದಿತಿಯ ಪುತ್ರರಲ್ಲಿ ಕಿರಿಯವನು, ವಾಮನರೂಪಧಾರೀ ವಿಷ್ಣುವು. (೮೪೩) ಕೃಷ್ಣಪಿಂಗಲಃ – ಕಪ್ಪು-ಬಿಳೀವರ್ಣಗಳ ಹರಿಹರಮೂರ್ತಿಯು. (೮೪೪) ಬ್ರಹ್ಮದಂಡವಿನಿರ್ಮಾತಃ – ಬ್ರಹ್ಮದಂಡವನ್ನು ನಿರ್ಮಿಸಿದವನು. (೮೪೫) ಶತಘ್ನೀ – ಶತಘ್ನಿಯನ್ನು ಹಿಡಿದವನು. (೮೪೬) ಶತಪಾಶಧೃಕ್ – ಶತಪಾಶಗಳಿಂದ ಯುಕ್ತನಾದವನು.

13017131a ಪದ್ಮಗರ್ಭೋ ಮಹಾಗರ್ಭೋ ಬ್ರಹ್ಮಗರ್ಭೋ ಜಲೋದ್ಭವಃ।
13017131c ಗಭಸ್ತಿರ್ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮವಿದ್ಬ್ರಾಹ್ಮಣೋ ಗತಿಃ।।

(೮೪೭) ಪದ್ಮಗರ್ಭಃ – ಬ್ರಹ್ಮಸ್ವರೂಪನು. (೮೪೮) ಮಹಾಗರ್ಭಃ – ಜಗತ್ಸ್ವರೂಪೀ ಗರ್ಭವನ್ನು ಧರಿಸಿರುವುದರಿಂದ ಮಹಾಗರ್ಭನು. (೮೪೯) ಬ್ರಹ್ಮಗರ್ಭಃ – ವೇದಗಳನ್ನು ಉದರದಲ್ಲಿ ಧರಿಸಿರುವವನು. (೮೫೦) ಜಲೋದ್ಭವಃ – ಏಕಾರ್ಣವ ಜಲದಲ್ಲಿ ಪ್ರಕಟನಾಗುವವನು. (೮೫೧) ಗಭಸ್ತಿಃ – ಸೂರ್ಯಸ್ವರೂಪನು. (೮೫೨) ಬ್ರಹ್ಮಕೃದ್ – ವೇದಗಳನ್ನು ಆವಿಷ್ಕರಿಸುವವನು. (೮೫೩) ಬ್ರಹ್ಮಾ – ಬ್ರಹ್ಮನು. (೮೫೪) ಬ್ರಹ್ಮವಿದುಃ – ವೇದಾರ್ಥವಿದುವು. (೮೫೫) ಬ್ರಾಹ್ಮಣಃ – ಬ್ರಹ್ಮನಿಷ್ಠನು. (೮೫೬) ಗತಿಃ – ಬ್ರಹ್ಮನಿಷ್ಠೆಯ ಪರಮಗತಿಯು.

13017132a ಅನಂತರೂಪೋ ನೈಕಾತ್ಮಾ ತಿಗ್ಮತೇಜಾಃ ಸ್ವಯಂಭುವಃ।
13017132c ಊರ್ಧ್ವಗಾತ್ಮಾ ಪಶುಪತಿರ್ವಾತರಂಹಾ ಮನೋಜವಃ।।

(೮೫೭) ಅನಂತರೂಪಃ – ಅನಂತರೂಪಗಳುಳ್ಳವನು. (೮೫೮) ನೈಕಾತ್ಮಾ – ಅನೇಕ ಶರೀರಧಾರಿಯು. (೮೫೯) ತಿಗ್ಮತೇಜಾಃ - ಪ್ರಚಂಡ ತೇಜಸ್ವಿಯು. (೮೬೦) ಸ್ವಯಂಭುವಃ – ಬ್ರಹ್ಮನು. (೮೬೧) ಊರ್ಧ್ವಗಾತ್ಮಾ – ದೇಶ-ಕಾಲ-ವಸ್ತುಗಳ ಉಪಾಧಿಗಳಿಗಿಂತಲೂ ಅತೀತ ಸ್ವರೂಪವುಳ್ಳವನು. (೮೬೨) ಪಶುಪತಿಃ – ಜೀವಿಗಳ ಸ್ವಾಮಿಯು. (೮೬೩) ವಾತರಂಹಾ – ವಾಯುಸಮಾನ ವೇಗಶಾಲಿಯು. (೮೬೪) ಮನೋಜವಃ – ಮನಸ್ಸಿನ ಸಮಾನ ವೇಗಶಾಲಿಯು.

13017133a ಚಂದನೀ ಪದ್ಮಮಾಲಾಗ್ರ್ಯಃ ಸುರಭ್ಯುತ್ತರಣೋ ನರಃ।
13017133c ಕರ್ಣಿಕಾರಮಹಾಸ್ರಗ್ವೀ ನೀಲಮೌಲಿಃ ಪಿನಾಕಧೃಕ್।।

(೮೬೫) ಚಂದನೀ – ಚಂದನ ವಿಭೂಷಿತ ಅಂಗವುಳ್ಳವನು. (೮೬೬) ಪದ್ಮಮಾಲಾಗ್ರ್ಯಃ – ಪದ್ಮನಾಳದ ಅಗ್ರದಲ್ಲಿರುವ ವಿಷ್ಣುಸ್ವರೂಪನು. (೮೬೭) ಸುರಭ್ಯುತ್ತರಣಃ – ಕಾಮಧೇನುವನ್ನು ಶಾಪದ ಮೂಲಕ ಸ್ವರ್ಗದಿಂದ ಭೂಮಿಗಿಳಿಸಿದವನು. (೮೬೮) ನರಃ – ಪುರುಷರೂಪನು. (೮೬೯) ಕರ್ಣಿಕಾರಮಹಾಸ್ರಗ್ವೀ – ಕರ್ಣಿಕಾರ (ಬೆಟ್ಟದ ಕಣಗಿಲೆ) ಪುಷ್ಪಗಳ ಮಹಾ ಮಾಲೆಯನ್ನು ಧರಿಸಿದವನು. (೮೭೦) ನೀಲಮೌಲಿಃ – ತಲೆಯ ಮೇಲೆ ನೀಲಮಣಿಮಯ ಕಿರೀಟವನ್ನು ಧರಿಸಿದವನು. (೮೭೧) ಪಿನಾಕಧೃಕ್ – ಪಿನಾಕವೆಂಬ ಧನುಸ್ಸನ್ನು ಧರಿಸಿದವನು.

13017134a ಉಮಾಪತಿರುಮಾಕಾಂತೋ ಜಾಹ್ನವೀಧೃಗುಮಾಧವಃ।
13017134c ವರೋ ವರಾಹೋ ವರದೋ ವರೇಶಃ112 ಸುಮಹಾಸ್ವನಃ।।

(೮೭೨) ಉಮಾಪತಿಃ – ಬ್ರಹ್ಮವಿದ್ಯೆಯ ಸ್ವಾಮಿಯು. (೮೭೩) ಉಮಾಕಾಂತಃ – ಉಮೆ ಪಾರ್ವತಿಯ ಪ್ರಿಯತಮನು. (೮೭೪) ಜಾಹ್ನವೀಧೃಗ್ – ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿದವನು. (೮೭೫) ಉಮಾಧವಃ – ಉಮೆ ಪಾರ್ವತಿಯ ಪತಿಯು. (೮೭೬) ವರಃ – ಶ್ರೇಷ್ಠನು. (೮೭೭) ವರಾಹಃ –ವರಾಹಸ್ವಾಮಿ ರೂಪನು. (೮೭೮) ವರದಃ – ಭಕ್ತರಿಗೆ ವರವನ್ನೀಯುವವನು. (೮೭೯) ವರೇಶಃ – ಶ್ರೇಷ್ಠ ಸ್ವಾಮಿಯು. (೮೮೦) ಸುಮಹಾಸ್ವನಃ – ಮಹಾಗರ್ಜನೆಯನ್ನು ಮಾಡುವವನು.

13017135a ಮಹಾಪ್ರಸಾದೋ ದಮನಃ ಶತ್ರುಹಾ ಶ್ವೇತಪಿಂಗಲಃ।
13017135c ಪ್ರೀತಾತ್ಮಾ ಪ್ರಯತಾತ್ಮಾ ಚ ಸಂಯತಾತ್ಮಾ ಪ್ರಧಾನಧೃಕ್113।।

(೮೮೧) ಮಹಾಪ್ರಸಾದಃ – ಭಕ್ತರಿಗೆ ಮಹಾನುಗ್ರಹವನ್ನು ಮಾಡುವವನು. (೮೮೨) ದಮನಃ – ದುಷ್ಟರನ್ನು ನಿಗ್ರಹಿಸುವವನು. (೮೮೩) ಶತ್ರುಹಾ – ಶತ್ರುನಾಶಕನು. (೮೮೪) ಶ್ವೇತಪಿಂಗಲಃ – ಅರ್ಧನಾರೀಶ್ವರ ಸ್ವರೂಪದಲ್ಲಿ ಬಲಭಾಗದಲ್ಲಿ ಶ್ವೇತವರ್ಣದಿಂದಲೂ ಎಡಭಾಗದಲ್ಲಿ ಕನಕಪಿಂಗಳ ವರ್ಣದಿಂದಲೂ ಶೋಭಿಸುವವನು. (೮೮೫) ಪ್ರೀತಾತ್ಮಾ – ಪ್ರೀತಾತ್ಮನು. (೮೮೬) ಪ್ರಯತಾತ್ಮಾ – ವಿಶುದ್ಧಚಿತ್ತನು. (೮೮೭) ಸಂಯತಾತ್ಮಾ – ನಿಯಂತ್ರಿತ ಆತ್ಮವುಳ್ಳವನು. (೮೮೮) ಪ್ರಧಾನಧೃಕ್ – ಸೃಷ್ಟಿಗೆ ಕಾರಣವಾದ ತ್ರಿಗುಣಮಯ ಪ್ರಕೃತಿ ಪ್ರಧಾನವನ್ನು ಧರಿಸಿರುವವನು.

13017136a ಸರ್ವಪಾರ್ಶ್ವಸುತಸ್ತಾರ್ಕ್ಷ್ಯೋ ಧರ್ಮಸಾಧಾರಣೋ ವರಃ।
13017136c ಚರಾಚರಾತ್ಮಾ ಸೂಕ್ಷ್ಮಾತ್ಮಾ ಸುವೃಷೋ114 ಗೋವೃಷೇಶ್ವರಃ।।

(೮೮೯) ಸರ್ವಪಾರ್ಶ್ವಸುತಃ – ಎಲ್ಲ ದಿಕ್ಕುಗಳಲ್ಲಿಯೂ ಮುಖಗಳಿರುವವನು. (೮೯೦) ತಾರ್ಕ್ಷ್ಯಃ – ತ್ರಿನೇತ್ರನು. (೮೯೧) ಧರ್ಮಸಾಧಾರಣೋ ವರಃ – ಧರ್ಮಪಾಲನೆಗೆ ಅನುಸಾರವಾಗಿ ವರಗಳನ್ನು ನೀಡುವವನು. (೮೯೨) ಚರಾಚರಾತ್ಮಾ – ಚರಾಚರ ಪ್ರಾಣಿಗಳಿಗೆ ಆತ್ಮಭೂತನಾಗಿರುವವನು. (೮೯೩) ಸೂಕ್ಷ್ಮಾತ್ಮಾ – ಅತಿಸೂಕ್ಷ್ಮ ಸ್ವರೂಪನು. (೮೯೪) ಸುವೃಷಃ – ಸುಂದರ ವೃಷಭನು. (೮೯೫) ಗೋವೃಷೇಶ್ವರಃ – ನಿಷ್ಕಾಮಧರ್ಮಕ್ಕೆ ಅಮೃತರೂಪ ಮೋಕ್ಷವನ್ನು ದಯಪಾಲಿಸುವವನು.

13017137a ಸಾಧ್ಯರ್ಷಿರ್ವಸುರಾದಿತ್ಯೋ ವಿವಸ್ವಾನ್ಸವಿತಾ ಮೃಡಃ।
13017137c ವ್ಯಾಸಃ ಸರ್ವಸ್ಯ ಸಂಕ್ಷೇಪೋ ವಿಸ್ತರಃ ಪರ್ಯಯೋ ನಯಃ।।

(೮೯೬) ಸಾಧ್ಯರ್ಷಿಃ – ಸಾಧ್ಯ ದೇವತೆಗಳ ಆಚಾರ್ಯನು. (೮೯೭) ಆದಿತ್ಯೋ ವಸುಃ – ಅದಿತಿಯ ಮಗನಾದ ವಸುಸ್ವರೂಪನು. (೮೯೮) ವಿವಸ್ವಾನ್ ಸವಿತಾ ಮೃಡಃ – ಕಿರಣಗಳೆಂಬ ಸುಶೋಭಿತ ಜಗತ್ತನ್ನು ಸೃಷ್ಟಿಸುವ ಸೂರ್ಯಸ್ವರೂಪನು. (೮೯೯) ವ್ಯಾಸಃ – ಪುರಾಣ-ಇತಿಹಾಸಗಳನ್ನು ರಚಿಸಿರುವ ವೇದವ್ಯಾಸ ಸ್ವರೂಪನು. (೯೦೦) ಸರ್ವಸ್ಯ ಸಂಕ್ಷೇಪೋ ವಿಸ್ತರಃ – ಎಲ್ಲವುಗಳ ಸಂಕ್ಷಿಪ್ತ ಮತ್ತು ವಿಸ್ತೃತ ಸ್ವರೂಪನು (೯೦೧) ಪರ್ಯಯೋ ನಯಃ – ಸರ್ವತ್ರವ್ಯಾಪ್ತವಾಗಿರುವ ವೈಶ್ವಾನರಾಗ್ನಿಯ ಸ್ವರೂಪನು.

13017138a ಋತುಃ ಸಂವತ್ಸರೋ ಮಾಸಃ ಪಕ್ಷಃ ಸಂಖ್ಯಾಸಮಾಪನಃ।
13017138c ಕಲಾ ಕಾಷ್ಠಾ ಲವೋ ಮಾತ್ರಾ ಮುಹೂರ್ತೋಽಹಃ ಕ್ಷಪಾಃ ಕ್ಷಣಾಃ।।

(೯೦೨) ಋತುಃ – ಋತುಸ್ವರೂಪನು. (೯೦೩) ಸಂವತ್ಸರಃ – ಸವಂತ್ಸರ ಸ್ವರೂಪನು. (೯೦೪) ಮಾಸಃ – ಮಾಸಸ್ವರೂಪನು. (೯೦೫) ಪಕ್ಷಃ – ಪಕ್ಷ ಸ್ವರೂಪನು. (೯೦೬) ಸಂಖ್ಯಾಸಮಾಪನಃ – ಋತು-ಮಾಸಗಳ ಸಂಖ್ಯೆಯನ್ನು ಸಮಾಪನಗೊಳಿಸುವವನು. (೯೦೭) ಕಲಾ – ಕಲಾಸ್ವರೂಪನು. (೯೦೮) ಕಾಷ್ಠಾ – ಕಾಷ್ಠಾ ಸ್ವರೂಪನು. (೯೦೯) ಲವಃ – ಲವ ಸ್ವರೂಪನು. (೯೧೦) ಮಾತ್ರಃ – ಮಾತ್ರಾಕಾಲ ಸ್ವರೂಪನು. (೯೧೧) ಮುಹೂರ್ತಃ – ಮುಹೂರ್ತಸ್ವರೂಪನು. (೯೧೨) ಅಹಃ – ದಿನಸ್ವರೂಪನು. (೯೧೩) ಕ್ಷಪಾಃ – ಕ್ಷಪಾಸ್ವರೂಪನು. (೯೧೪) ಕ್ಷಣಾಃ – ಕ್ಷಣಾಸ್ವರೂಪನು.

13017139a ವಿಶ್ವಕ್ಷೇತ್ರಂ ಪ್ರಜಾಬೀಜಂ ಲಿಂಗಮಾದ್ಯಸ್ತ್ವನಿಂದಿತಃ।
13017139c ಸದಸದ್ವ್ಯಕ್ತಮವ್ಯಕ್ತಂ ಪಿತಾ ಮಾತಾ ಪಿತಾಮಹಃ।।

(೯೧೫) ವಿಶ್ವಕ್ಷೇತ್ರಃ – ಬ್ರಹ್ಮಾಂಡಸ್ವರೂಪ ವೃಕ್ಷಕ್ಕೆ ಆಧಾರನಾಗಿರುವವನು. (೯೧೬) ಪ್ರಜಾಬೀಜಃ – ಪ್ರಜೆಗಳ ಉತ್ಪತ್ತಿಗೆ ಕಾರಣೀಭೂತನು. (೯೧೭) ಲಿಂಗಃ – ಮಹತ್ತತ್ತ್ವಸ್ವರೂಪನು. (೯೧೮) ಆದ್ಯಃ – ಎಲ್ಲರಿಗಿಂತ ಮೊದಲು ಪ್ರಕಟವಾಗುವವನು. (೯೧೯) ಅನಿಂದಿತಃ – ನಿಂದನೆಗಳಿಲ್ಲದವನು. (೯೨೦) ಸತ್ – ಸತ್ಸ್ವರೂಪನು. (೯೨೧) ಅಸತ್ – ಅಸತ್ಸ್ವರೂಪನು. (೯೨೨) ವ್ಯಕ್ತಂ – ಸಾಕಾರಸ್ವರೂಪನು. (೯೨೩) ಅವ್ಯಕ್ತಃ – ನಿರಾಕಾರ ಸ್ವರೂಪನು. (೯೨೪) ಪಿತಃ – ಪಿತೃಸ್ವರೂಪನು. (೯೨೫) ಮಾತಃ – ಮಾತೃಸ್ವರೂಪನು. (೯೨೬) ಪಿತಾಮಹಃ – ಪಿತಾಮಹ ಸ್ವರೂಪನು.

13017140a ಸ್ವರ್ಗದ್ವಾರಂ ಪ್ರಜಾದ್ವಾರಂ ಮೋಕ್ಷದ್ವಾರಂ ತ್ರಿವಿಷ್ಟಪಮ್।
13017140c ನಿರ್ವಾಣಂ ಹ್ಲಾದನಂ ಚೈವ ಬ್ರಹ್ಮಲೋಕಃ ಪರಾ ಗತಿಃ।।

(೯೨೭) ಸ್ವರ್ಗದ್ವಾರಃ – ಸ್ವರ್ಗಕ್ಕೆ ಸಾಧನ ಸ್ವರೂಪನು. (೯೨೮) ಪ್ರಜಾದ್ವಾರಃ – ಪ್ರಜೆಗಳ ಹುಟ್ಟಿಗೆ ಕಾರಣನಾದವನು. (೯೨೯) ಮೋಕ್ಷದ್ವಾರಃ – ಮೋಕ್ಷಕ್ಕೆ ಸಾಧನ ಸ್ವರೂಪನು. (೯೩೦) ತ್ರಿವಿಷ್ಟಪಃ – ಸ್ವರ್ಗ-ಮರ್ತ್ಯ-ಪಾತಾಳಲೋಕ ಸ್ವರೂಪನು. (೯೩೧) ನಿರ್ವಾಣಃ – ಮೋಕ್ಷ ಸ್ವರೂಪನು. (೯೩೨) ಹ್ಲಾದನಃ – ಆನಂದವನ್ನುಂಟುಮಾಡುವವನು. (೯೩೩) ಬ್ರಹ್ಮಲೋಕಃ – ಬ್ರಹ್ಮಲೋಕಸ್ವರೂಪನು. (೯೩೪) ಪರಾಗತಿಃ – ಸರ್ವೋತ್ಕೃಷ್ಟಗತಿ ಸ್ವರೂಪನು.

13017141a ದೇವಾಸುರವಿನಿರ್ಮಾತಾ ದೇವಾಸುರಪರಾಯಣಃ।
13017141c ದೇವಾಸುರಗುರುರ್ದೇವೋ ದೇವಾಸುರನಮಸ್ಕೃತಃ।।

(೯೩೫) ದೇವಾಸುರವಿನಿರ್ಮಾತಃ – ದೇವತೆಗಳಿಗೂ ಅಸುರರಿಗೂ ಜನ್ಮವಿತ್ತವನು. (೯೩೬) ದೇವಾಸುರಪರಾಯಣಃ – ದೇವತೆಗಳಿಗೂ ಅಸುರರಿಗೂ ಪರಮಾಶ್ರಯನು. (೯೩೭) ದೇವಾಸುರಗುರುಃ – ದೇವತೆಗಳಿಗೂ ಅಸುರರಿಗೂ ಗುರುವಾಗಿರುವವನು. (೯೩೮) ದೇವಃ – ಮಹಾದೇವಸ್ವರೂಪನು. (೯೩೯) ದೇವಾಸುರನಮಸ್ಕೃತಃ – ದೇವತೆಗಳಿಂದಲೂ ಅಸುರರಿಂದಲೂ ನಮಸ್ಕರಿಸಲ್ಪಡುವವನು.

13017142a ದೇವಾಸುರಮಹಾಮಾತ್ರೋ ದೇವಾಸುರಗಣಾಶ್ರಯಃ।
13017142c ದೇವಾಸುರಗಣಾಧ್ಯಕ್ಷೋ ದೇವಾಸುರಗಣಾಗ್ರಣೀಃ।।

(೯೪೦) ದೇವಾಸುರಮಹಾಮಾತ್ರಃ – ದೇವಾಸುರರಿಗಿಂತಲೂ ಅತ್ಯಂತ ಶ್ರೇಷ್ಠನಾದವನು. (೯೪೧) ದೇವಾಸುರಗಣಾಶ್ರಯಃ – ದೇವಗಣ ಮತ್ತು ಅಸುರಗಣಗಳಿಗೆ ಆಶ್ರಯದಾತನು. (೯೪೨) ದೇವಾಸುರಗಣಾಧ್ಯಕ್ಷಃ – ದೇವಾಸುರ ಸಮೂಹಕ್ಕೆ ಅಧ್ಯಕ್ಷನು. (೯೪೩) ದೇವಾಸುರಗಣಾಗ್ರಣಿಃ – ದೇವಾಸುರಗಣಗಳ ಅಗ್ರೇಸರನು.

13017143a ದೇವಾತಿದೇವೋ ದೇವರ್ಷಿರ್ದೇವಾಸುರವರಪ್ರದಃ।
13017143c ದೇವಾಸುರೇಶ್ವರೋ ದೇವೋ115 ದೇವಾಸುರಮಹೇಶ್ವರಃ।।

(೯೪೪) ದೇವಾತಿದೇವಃ – ದೇವತೆಗಳನ್ನೂ ಅತಿಕ್ರಮಿಸಿದ ಮಹಾದೇವನು. (೯೪೫) ದೇವರ್ಷಿಃ – ದೇವರ್ಷಿ ನಾರದಸ್ವರೂಪನು. (೯೪೬) ದೇವಾಸುರವರಪ್ರದಃ – ದೇವತೆಗಳಿಗೂ ಅಸುರರಿಗೂ ವರವನ್ನೀಡುವವನು. (೯೪೭) ದೇವಾಸುರೇಶ್ವರಃ – ದೇವತೆಗಳಿಗೂ ಅಸುರರಿಗೂ ಈಶ್ವರನು. (೯೪೮) ದೇವಃ – ಮಹಾದೇವನು. (೯೪೯) ದೇವಾಸುರಮಹೇಶ್ವರಃ – ದೇವತೆಗಳಿಗೂ ಅಸುರರರಿಗೂ ಮಹೇಶ್ವರನು.

13017144a ಸರ್ವದೇವಮಯೋಽಚಿಂತ್ಯೋ ದೇವತಾತ್ಮಾತ್ಮಸಂಭವಃ।
13017144c ಉದ್ಭಿದಸ್ತ್ರಿಕ್ರಮೋ ವೈದ್ಯೋ ವಿರಜೋ ವಿರಜೋಂಬರಃ116।।

(೯೫೦) ಸರ್ವದೇವಮಯಃ – ಸಕಲದೇವತಾ ಸ್ವರೂಪನು. (೯೫೧) ಅಚಿಂತ್ಯಃ – ಅಚಿಂತ್ಯಸ್ವರೂಪನು. (೯೫೨) ದೇವತಾತ್ಮಾ – ದೇವತೆಗಳಿಗೂ ಆತ್ಮಸ್ವರೂಪನು. (೯೫೩) ಆತ್ಮಸಂಭವಃ – ಸ್ವಯಂಭುವು. (೯೫೪) ಉದ್ಭಿದಃ – ಕಾರಂಜಿಯು. (೯೫೫) ತ್ರಿಕ್ರಮೋ – ಮೂರು ಹೆಜ್ಜೆಗಳನ್ನಿಟ್ಟ ತ್ರಿವಿಕ್ರಮ ವಾಮನ ಸ್ವರೂಪನು. (೯೫೬) ವೈದ್ಯಃ – ವೈದ್ಯಸ್ವರೂಪನು. (೯೫೭) ವಿರಜಃ – ರಜೋಗುಣರಹಿತನು. (೯೫೮) ವಿರಜೋಂಬರಃ – ಹಾರಾಡುವ ವಸ್ತ್ರಗಳುಳ್ಳವನು; ಶುಭ್ರವಸ್ತ್ರಗಳನ್ನುಟ್ಟವನು.

13017145a ಈಡ್ಯೋ ಹಸ್ತೀ ಸುರವ್ಯಾಘ್ರೋ ದೇವಸಿಂಹೋ ನರರ್ಷಭಃ।
13017145c ವಿಬುಧಾಗ್ರವರಃ ಶ್ರೇಷ್ಠಃ ಸರ್ವದೇವೋತ್ತಮೋತ್ತಮಃ।।

(೯೫೯) ಈಡ್ಯಃ – ಸ್ತೋತ್ರಾರ್ಹನು. (೯೬೦) ಹಸ್ತೀ – ಹಸ್ತಿಸ್ವರೂಪನು. (೯೬೧) ಸುರವ್ಯಾಘ್ರಃ – ಸುರರಲ್ಲಿಯೇ ವ್ಯಾಘ್ರನು. (೯೬೨) ದೇವಸಿಂಹಃ – ದೇವಶ್ರೇಷ್ಠನು. (೯೬೩) ನರರ್ಷಭಃ – ಪುರುಷಶ್ರೇಷ್ಠನು. (೯೬೪) ವಿಬುಧಃ – ವಿಶೇಷ ಜ್ಞಾನವುಳ್ಳವನು. (೯೬೫) ಅಗ್ರವರಃ – ಯಜ್ಞದಲ್ಲಿ ಎಲ್ಲರಿಗಿಂತಲೂ ಮೊದಲು ಹವಿರ್ಭಾಗವನ್ನು ಪಡೆಯುವವನು. (೯೬೬) ಶ್ರೇಷ್ಠಃ – ಅತ್ಯುತ್ತಮನು. (೯೬೭) ಸರ್ವದೇವಃ – ಸರ್ವರಿಗೂ ದೇವನು. (೯೬೮) ಉತ್ತಮೋತ್ತಮಃ – ಉತ್ತಮರಲ್ಲಿಯೂ ಉತ್ತಮನು.

13017146a ಪ್ರಯುಕ್ತಃ ಶೋಭನೋ ವಜ್ರ ಈಶಾನಃ ಪ್ರಭುರವ್ಯಯಃ117
13017146c ಗುರುಃ ಕಾಂತೋ ನಿಜಃ ಸರ್ಗಃ ಪವಿತ್ರಃ ಸರ್ವವಾಹನಃ118।।

(೯೬೯) ಪ್ರಯುಕ್ತಃ – ಯೋಗಬದ್ಧನು. (೯೭೦) ಶೋಭನಃ – ಕಲ್ಯಾಣಮಯನು. (೯೭೧) ವಜ್ರಃ – ವಜ್ರರೂಪನು. (೯೭೨) ಈಶಾನಃ – ಈಶಾನನು. (೯೭೩) ಪ್ರಭುಃ – ಪ್ರಭುವು. (೯೭೪) ಅವ್ಯಯಃ – ವಿನಾಶರಹಿತನು. (೯೭೫) ಗುರುಃ – ಗುರುವು. (೯೭೬) ಕಾಂತಃ – ಕಮನೀಯ ಸ್ವರೂಪನು. (೯೭೭) ನಿಜಃ ಸರ್ಗಃ – ಸೃಷ್ಟಿಯಿಂದ ಅಭಿನ್ನನಾದವನು. (೯೭೮) ಪವಿತ್ರಃ – ಪರಮ ಪವಿತ್ರನು. (೯೭೯) ಸರ್ವವಾಹನಃ – ಎಲ್ಲವನ್ನೂ ಸಾಗಿಸುವವನು.

13017147a ಶೃಂಗೀ ಶೃಂಗಪ್ರಿಯೋ ಬಭ್ರೂ ರಾಜರಾಜೋ ನಿರಾಮಯಃ।
13017147c ಅಭಿರಾಮಃ ಸುರಗಣೋ ವಿರಾಮಃ ಸರ್ವಸಾಧನಃ।।

(೯೮೦) ಶೃಂಗೀ – ವೃಷಭಾದಿರೂಪನು. (೯೮೧) ಶೃಂಗಪ್ರಿಯಃ – ಪರ್ವತಶಿಖರವಾಸ ಪ್ರಿಯನು. (೯೮೨) ಬಭ್ರುಃ – ವಿಷ್ಣು ಸ್ವರೂಪನು. (೯೮೩) ರಾಜರಾಜಃ – ಕುಬೇರ ಸ್ವರೂಪನು. (೯೮೪) ನಿರಾಮಯಃ – ರೋಗ ರಹಿತನು. (೯೮೫) ಅಭಿರಾಮಃ – ಆನಂದ ದಾಯಕನು. (೯೮೬) ಸುರಗಣಃ – ದೇವಗಣ ಸ್ವರೂಪನು. (೯೮೭) ವಿರಾಮಃ – ಎಲ್ಲದರಿಂದಲೂ ಉಪರತನಾಗಿರುವವನು. (೯೮೮) ಸರ್ವಸಾಧನಃ ಎಲ್ಲ ವಿಧದ ಸಾಧನೆಗಳನ್ನೂ ಹೊಂದಬಲ್ಲವನು.

13017148a ಲಲಾಟಾಕ್ಷೋ ವಿಶ್ವದೇಹೋ ಹರಿಣೋ ಬ್ರಹ್ಮವರ್ಚಸಃ।
13017148c ಸ್ಥಾವರಾಣಾಂ ಪತಿಶ್ಚೈವ ನಿಯಮೇಂದ್ರಿಯವರ್ಧನಃ।।

(೯೮೯) ಲಲಾಟಾಕ್ಷಃ – ಹಣೆಯಲ್ಲಿ ಕಣ್ಣುಳ್ಳವನು. (೯೯೦) ವಿಶ್ವದೇಹಃ – ವಿಶ್ವವನ್ನೇ ದೇಹವಾಗುಳ್ಳವನು. (೯೯೧) ಹರಿಣಃ – ಮೃಗಸ್ವರೂಪನು. (೯೯೨) ಬ್ರಹ್ಮವರ್ಚಸಃ – ಬ್ರಹ್ಮತೇಜಸ್ವಿಯು. (೯೯೩) ಸ್ಥಾವರಾಣಾಂ ಪತಿಃ – ಪರ್ವತಾದಿಗಳಿಗೆ ಒಡೆಯನು. (೯೯೪) ನಿಯಮೇಂದ್ರಿಯವರ್ಧನಃ – ನಿಯಮ ಪೂರ್ವಕ ಮನಸ್ಸಿನಿಂದ ಇಂದ್ರಿಯಗಳನ್ನು ನಿಗ್ರಹಿಸುವವನು.

13017149a ಸಿದ್ಧಾರ್ಥಃ ಸರ್ವಭೂತಾರ್ಥೋಽಚಿಂತ್ಯಃ ಸತ್ಯವ್ರತಃ ಶುಚಿಃ।
13017149c ವ್ರತಾಧಿಪಃ ಪರಂ ಬ್ರಹ್ಮ ಮುಕ್ತಾನಾಂ ಪರಮಾ ಗತಿಃ।।

(೯೯೫) ಸಿದ್ಧಾರ್ಥಃ – ಆಪ್ತಕಾಮನು. (೯೯೬) ಸರ್ವಭೂತಾರ್ಥಃ – ಸರ್ವಭೂತಗಳ ಉದ್ದೇಶನು. (೯೯೭) ಅಚಿಂತ್ಯಃ – ಮನಸ್ಸಿನಿಂದ ಚಿಂತಿಸಲು ಅಶಕ್ಯನಾದವನು. (೯೯೮) ಸತ್ಯವ್ರತಃ – ಸತ್ಯಪ್ರತಿಜ್ಞನು. (೯೯೯) ಶುಚಿಃ – ಸರ್ವಥಾ ಶುದ್ಧನು. (೧೦೦೦) ವ್ರತಾಧಿಪಃ – ವ್ರತಗಳಿಗೆ ಅಧಿಪತಿಯು. (೧೦೦೧) ಪರಂ – ಪರಮಶ್ರೇಷ್ಠನು. (೧೦೦೨) ಬ್ರಹ್ಮಃ – ದೇಶ-ಕಾಲ-ವಸ್ತುಗಳಿಂದ ಅಪರಿಚ್ಛಿನ್ನ ಚಿನ್ಮಯ ತತ್ತ್ವಸ್ವರೂಪನು. (೧೦೦೩) ಮುಕ್ತಾನಾಂ ಪರಮಾಗತಿಃ – ಮುಕ್ತಿಯನ್ನರಸುವವರಿಗೆ ಪರಮಾಶ್ರಯನು.

13017150a ವಿಮುಕ್ತೋ ಮುಕ್ತತೇಜಾಶ್ಚ ಶ್ರೀಮಾನ್ ಶ್ರೀವರ್ಧನೋ ಜಗತ್।
13017150c ಯಥಾಪ್ರಧಾನಂ ಭಗವಾನಿತಿ ಭಕ್ತ್ಯಾ ಸ್ತುತೋ ಮಯಾ।।

(೧೦೦೪) ವಿಮುಕ್ತಃ – ನಿತ್ಯಮುಕ್ತನು. (೧೦೦೫) ಮುಕ್ತತೇಜಾಃ – ಶತ್ರುಗಳ ಮೇಲೆ ತೇಜಸ್ಸನ್ನು ಬೀರುವವನು. (೧೦೦೬) ಶ್ರೀಮಾನಃ – ಯೋಗೈಶ್ವರ್ಯಸಂಪನ್ನನು. (೧೦೦೭) ಶ್ರೀವರ್ಧನಃ – ಭಕ್ತರ ಸಂಪತ್ತನ್ನು ವೃದ್ಧಿಗೊಳಿಸುವವನು. (೧೦೦೮) ಜಗತ್ – ಜಗತ್ ಸ್ವರೂಪನು. ಹೀಗೆ ನಾನು ಪ್ರಧಾನವಾಗಿ ಭಗವಾನನನ್ನು ಭಕ್ತಿಯಿಂದ ಸ್ತುತಿಸಿದ್ದೇನೆ.

13017151a ಯಂ ನ ಬ್ರಹ್ಮಾದಯೋ ದೇವಾ ವಿದುರ್ಯಂ ನ ಮಹರ್ಷಯಃ।
13017151c ತಂ ಸ್ತವ್ಯಮರ್ಚ್ಯಂ ವಂದ್ಯಂ ಚ ಕಃ ಸ್ತೋಷ್ಯತಿ ಜಗತ್ಪತಿಮ್।।

ಯಾರನ್ನು ಬ್ರಹ್ಮಾದಿಗಳೂ ದೇವತೆಗಳೂ ಮತ್ತು ಮಹರ್ಷಿಗಳೂ ಅರಿಯರೋ ಆ ಜಗತ್ಪತಿ, ಸ್ತವ್ಯ, ಅರ್ಚ್ಯ ಮತ್ತು ವಂದ್ಯನನ್ನು ಯಾರುತಾನೇ ತೃಪ್ತಿಗೊಳಿಸಬಲ್ಲರು?

13017152a ಭಕ್ತಿಮೇವ ಪುರಸ್ಕೃತ್ಯ ಮಯಾ ಯಜ್ಞಪತಿರ್ವಸುಃ।
13017152c ತತೋಽಭ್ಯನುಜ್ಞಾಂ ಪ್ರಾಪ್ಯೈವ ಸ್ತುತೋ ಮತಿಮತಾಂ ವರಃ।।

ಹೀಗೆ ಭಕ್ತಿಯನ್ನೇ ಪುರಸ್ಕರಿಸಿ ಆ ಯಜ್ಞಪತಿ, ವಸು, ಮತಿವಂತರಲ್ಲಿ ಶ್ರೇಷ್ಠನ ಅನುಜ್ಞೆಯನ್ನು ಪಡೆದು ಅವನನ್ನು ಸ್ತುತಿಸಿದೆನು.

13017153a ಶಿವಮೇಭಿಃ ಸ್ತುವನ್ದೇವಂ ನಾಮಭಿಃ ಪುಷ್ಟಿವರ್ಧನೈಃ।
13017153c ನಿತ್ಯಯುಕ್ತಃ ಶುಚಿರ್ಭೂತ್ವಾ ಪ್ರಾಪ್ನೋತ್ಯಾತ್ಮಾನಮಾತ್ಮನಾ।।

ಸದಾ ಯೋಗಯುಕ್ತನಾಗಿ ಪವಿತ್ರಭಾವದಿಂದ ಪುಷ್ಟಿವರ್ಧಕವಾದ ಈ ನಾಮಗಳಿಂದ ಶಿವನನ್ನು ಸ್ತೋತ್ರಮಾಡುವ ಭಕ್ತನು ಆತ್ಮರೂಪೀ ಶಿವನನ್ನು ತಾನೂ ಹೊಂದುತ್ತಾನೆ.

13017154a ಏತದ್ಧಿ ಪರಮಂ ಬ್ರಹ್ಮ ಸ್ವಯಂ ಗೀತಂ ಸ್ವಯಂಭುವಾ।
13017154c ಋಷಯಶ್ಚೈವ ದೇವಾಶ್ಚ ಸ್ತುವಂತ್ಯೇತೇನ ತತ್ಪರಮ್।।

ಪರಮ ಬ್ರಹ್ಮವಾಗಿರುವ ಇದನ್ನು ಪಾರಾಯಣಮಾಡುವವನು ಸ್ವಯಂಭು ಸ್ವಯಂ ಶಿವನನ್ನೇ ಹೊಂದುತ್ತಾನೆ. ಋಷಿಗಳು ಮತ್ತು ದೇವತೆಗಳು ಇದರಿಂದಲೇ ಆ ತತ್ಪರನನ್ನು ಸ್ತುತಿಸುತ್ತಾರೆ.

13017155a ಸ್ತೂಯಮಾನೋ ಮಹಾದೇವಃ ಪ್ರೀಯತೇ ಚಾತ್ಮನಾಮಭಿಃ।
13017155c ಭಕ್ತಾನುಕಂಪೀ ಭಗವಾನಾತ್ಮಸಂಸ್ಥಾನ್ಕರೋತಿ ತಾನ್।। 119

ಭಕ್ತಾನುಕಂಪೀ ಭಗವಾನ್ ಮಹಾದೇವನು ತನ್ನ ಈ ನಾಮಗಳಿಂದ ಸ್ತುತಿಸುವವರ ಮೇಲೆ ಪ್ರೀತನಾಗಿ ಅವರನ್ನು ತನ್ನಲ್ಲಿಯೇ ಇರಿಸಿಕೊಳ್ಳುತ್ತಾನೆ.

13017156a ತಥೈವ ಚ ಮನುಷ್ಯೇಷು ಯೇ ಮನುಷ್ಯಾಃ ಪ್ರಧಾನತಃ।
13017156c ಆಸ್ತಿಕಾಃ ಶ್ರದ್ದಧಾನಾಶ್ಚ ಬಹುಭಿರ್ಜನ್ಮಭಿಃ ಸ್ತವೈಃ।।
12013017157a ಜಾಗ್ರತಶ್ಚ ಸ್ವಪಂತಶ್ಚ ವ್ರಜಂತಃ ಪಥಿ ಸಂಸ್ಥಿತಾಃ।
13017157c ಸ್ತುವಂತಿ ಸ್ತೂಯಮಾನಾಶ್ಚ ತುಷ್ಯಂತಿ ಚ ರಮಂತಿ ಚ।

ಹೀಗೆ ಮನುಷ್ಯರು, ಅವರಲ್ಲೂ ಪ್ರಧಾನವಾಗಿ ಆಸ್ತೀಕರು, ಶ್ರದ್ಧೆಯಿರುವವರು, ಅನೇಕ ಜನ್ಮಗಳಲ್ಲಿ ಮಾಡಿದ ಸ್ತವಗಳಿಂದ ಎಚ್ಚರವಾಗಿರುವಾಗ, ಮಲಗಿರುವಾಗ, ಮಾರ್ಗದಲ್ಲಿ ಪ್ರಯಾಣಿಸುತ್ತಿರುವಾಗ ಶಿವನನ್ನು ಸ್ತುತಿಸುತ್ತಿರುತ್ತಾರೆ. ಸ್ತುತಿಸುವವರು ತುಷ್ಟರಾಗಿ ಆನಂದಿಸುತ್ತಾರೆ.

13017157e ಜನ್ಮಕೋಟಿಸಹಸ್ರೇಷು ನಾನಾಸಂಸಾರಯೋನಿಷು।।
13017158a ಜಂತೋರ್ವಿಶುದ್ಧಪಾಪಸ್ಯ ಭವೇ ಭಕ್ತಿಃ ಪ್ರಜಾಯತೇ।

ಸಹಸ್ರಕೋಟಿ ಜನ್ಮಗಳಲ್ಲಿ ನಾನಾವಿಧದ ಸಂಸಾರ ಯೋನಿಗಳಲ್ಲಿ ಹುಟ್ಟಿ ಪಾಪಗಳೆಲ್ಲವನ್ನೂ ಸಂಪೂರ್ಣವಾಗಿ ಕಳೆದುಕೊಂಡ ಮನುಷ್ಯನಿಗೆ ಭವನಲ್ಲಿ ಭಕ್ತಿಯುಂಟಾಗುತ್ತದೆ.

13017158c ಉತ್ಪನ್ನಾ ಚ ಭವೇ ಭಕ್ತಿರನನ್ಯಾ ಸರ್ವಭಾವತಃ।।
13017159a ಕಾರಣಂ ಭಾವಿತಂ ತಸ್ಯ ಸರ್ವಮುಕ್ತಸ್ಯ ಸರ್ವತಃ।

ಸರ್ವಸಾಧನಸಂಪನ್ನನಾಗಿರುವವನಿಗೆ ಜಗತ್ಕಾರಣನಾದ ಭಗವಂತನಾದ ಶಿವನಲ್ಲಿ ಸಂಪೂರ್ಣಭಾವದಿಂದ ಕೂಡಿದ ಅನನ್ಯ ಭಕ್ತಿಯುಂಟಾಗುತ್ತದೆ.

13017159c ಏತದ್ದೇವೇಷು ದುಷ್ಪ್ರಾಪಂ ಮನುಷ್ಯೇಷು ನ ಲಭ್ಯತೇ।।
13017160a ನಿರ್ವಿಘ್ನಾ ನಿಶ್ಚಲಾ ರುದ್ರೇ ಭಕ್ತಿರವ್ಯಭಿಚಾರಿಣೀ।

ರುದ್ರನಲ್ಲಿ ನಿರ್ವಿಘ್ನವಾದ, ನಿಶ್ಚಲವಾದ ಮತ್ತು ಅವ್ಯಭಿಚಾರದ ಭಕ್ತಿಯು ದೇವತೆಗಳಿಗೂ ದುರ್ಲಭವು. ಮನುಷ್ಯರಿಗೆ ಅದು ದೊರಕುವುದಿಲ್ಲ.

13017160c ತಸ್ಯೈವ ಚ ಪ್ರಸಾದೇನ ಭಕ್ತಿರುತ್ಪದ್ಯತೇ ನೃಣಾಮ್।
13017160e ಯಯಾ ಯಾಂತಿ ಪರಾಂ ಸಿದ್ಧಿಂ ತದ್ಭಾವಗತಚೇತಸಃ।।

ಅವನ ಪ್ರಸಾದದಿಂದ ಮಾತ್ರ ಮನುಷ್ಯರಿಗೆ ಅವನಲ್ಲಿ ಭಕ್ತಿಯು ಉತ್ಪನ್ನವಾಗುತ್ತದೆ. ಅಂಥವರು ಅವನ ಭಾವ-ಚಿಂತನೆಗಳಲ್ಲಿಯೇ ತೊಡಗಿ ಪರಮ ಸಿದ್ಧಿಯನ್ನು ಹೊಂದುತ್ತಾರೆ.

13017161a ಯೇ ಸರ್ವಭಾವೋಪಗತಾಃ ಪರತ್ವೇನಾಭವನ್ನರಾಃ। 121
13017161c ಪ್ರಪನ್ನವತ್ಸಲೋ ದೇವಃ ಸಂಸಾರಾತ್ತಾನ್ ಸಮುದ್ಧರೇತ್।।

ಸರ್ವಭಾವಗಳಿಂದ ಯಾವ ಮನುಷ್ಯರು ಇವನ ಶರಣುಹೊಗುತ್ತಾರೋ ಅವರನ್ನು ಪ್ರಪನ್ನವತ್ಸಲ ದೇವನು ಸಂಸಾರದಿಂದ ಉದ್ಧರಿಸುತ್ತಾನೆ.

13017162a ಏವಮನ್ಯೇ ನ ಕುರ್ವಂತಿ ದೇವಾಃ ಸಂಸಾರಮೋಚನಮ್।
13017162c ಮನುಷ್ಯಾಣಾಂ ಮಹಾದೇವಾದನ್ಯತ್ರಾಪಿ ತಪೋಬಲಾತ್।। 122

ಹೀಗೆ ಮಹಾದೇವನನ್ನು ಬಿಟ್ಟು ಅನ್ಯ ಯಾವ ದೇವತೆಗಳೂ ಮನುಷ್ಯರನ್ನು ಸಂಸಾರದಿಂದ ಬಿಡುಗಡೆಮಾಡುವುದಿಲ್ಲ. ತಪೋಬಲದಿಂದಲೂ ಅದು ಸಾಧ್ಯವಿಲ್ಲ.

13017163a ಇತಿ ತೇನೇಂದ್ರಕಲ್ಪೇನ ಭಗವಾನ್ ಸದಸತ್ಪತಿಃ।
13017163c ಕೃತ್ತಿವಾಸಾಃ ಸ್ತುತಃ ಕೃಷ್ಣ ತಂಡಿನಾ ಶುದ್ಧಬುದ್ಧಿನಾ।।

ಕೃಷ್ಣ! ಹೀಗೆ ಇಂದ್ರಕಲ್ಪನಾದ ತಂಡಿಯು ಶುದ್ಧಬುದ್ಧಿಯಿಂದ ಆ ಸದಸತ್ಪತಿ ಭಗವಾನ್ ಕೃತ್ತಿವಾಸಸನನ್ನು ಸ್ತುತಿಸಿದನು.

12313017164a ಸ್ತವಮೇತಂ ಭಗವತೋ ಬ್ರಹ್ಮಾ ಸ್ವಯಮಧಾರಯತ್।124
13017164c ಬ್ರಹ್ಮಾ ಪ್ರೋವಾಚ ಶಕ್ರಾಯ ಶಕ್ರಃ ಪ್ರೋವಾಚ ಮೃತ್ಯವೇ।।

ಭಗವಂತನ ಈ ಸ್ತವವನ್ನು ಸ್ವಯಂ ಬ್ರಹ್ಮನು ತನ್ನ ಹೃದಯದಲ್ಲಿ ಧಾರಣೆಮಾಡಿಕೊಂಡನು. ಬ್ರಹ್ಮನು ಇದನ್ನು ಶಕ್ರನಿಗೆ ಹೇಳಿಕೊಟ್ಟನು. ಶಕ್ರನು ಮೃತ್ಯುವಿಗೆ ಹೇಳಿಕೊಟ್ಟನು.

13017165a ಮೃತ್ಯುಃ ಪ್ರೋವಾಚ ರುದ್ರಾಣಾಂ ರುದ್ರೇಭ್ಯಸ್ತಂಡಿಮಾಗಮತ್।
13017165c ಮಹತಾ ತಪಸಾ ಪ್ರಾಪ್ತಸ್ತಂಡಿನಾ ಬ್ರಹ್ಮಸದ್ಮನಿ।।

ಮೃತ್ಯುವು ರುದ್ರರಿಗೆ ಇದನ್ನು ಹೇಳಿಕೊಟ್ಟನು. ರುದ್ರರಿಂದ ಇದು ತಂಡಿಗೆ ದೊರಕಿತು. ಬ್ರಹ್ಮಲೋಕದಲ್ಲಿ ಮಹಾ ತಪಸ್ಸನ್ನು ಮಾಡಿ ತಂಡಿಯು ಇದನ್ನು ಪಡೆದುಕೊಂಡನು.

13017166a ತಂಡಿಃ ಪ್ರೋವಾಚ ಶುಕ್ರಾಯ ಗೌತಮಾಯಾಹ ಭಾರ್ಗವಃ।
13017166c ವೈವಸ್ವತಾಯ ಮನವೇ ಗೌತಮಃ ಪ್ರಾಹ ಮಾಧವ।।

ಮಾಧವ! ಮುಂದೆ ತಂಡಿಯು ಇದನ್ನು ಶುಕ್ರನಿಗೂ, ಶುಕ್ರನು ಗೌತಮನಿಗೂ, ಗೌತಮನು ವೈವಸ್ವತ ಮನುವಿಗೂ ಕ್ರಮವಾಗಿ ಉಪದೇಶಿಸಿದರು.

13017167a ನಾರಾಯಣಾಯ ಸಾಧ್ಯಾಯ ಮನುರಿಷ್ಟಾಯ ಧೀಮತೇ।
13017167c ಯಮಾಯ ಪ್ರಾಹ ಭಗವಾನ್ಸಾಧ್ಯೋ ನಾರಾಯಣೋಽಚ್ಯುತಃ।।

ಮನುವು ಈ ಸ್ತೋತ್ರವನ್ನು ಸಮಾಧಿನಿಷ್ಟನಾಗಿದ್ದ ಧೀಮತ ನಾರಾಯಣನೆಂಬ ಸಾಧ್ಯನಿಗೆ ಉಪದೇಶಿಸಿದನು. ಅಚ್ಯುತ ಭಗವಾನ್ ಸಾಧ್ಯ ನಾರಾಯಣನು ಇದನ್ನು ಯಮನಿಗೆ ಹೇಳಿಕೊಟ್ಟನು.

13017168a ನಾಚಿಕೇತಾಯ ಭಗವಾನಾಹ ವೈವಸ್ವತೋ ಯಮಃ।
13017168c ಮಾರ್ಕಂಡೇಯಾಯ ವಾರ್ಷ್ಣೇಯ ನಾಚಿಕೇತೋಽಭ್ಯಭಾಷತ।।

ವಾರ್ಷ್ಣೇಯ! ಭಗವಾನ್ ವೈವಸ್ವತ ಯಮನು ಇದನ್ನು ನಾಚಿಕೇತನಿಗೂ ಮತ್ತು ನಾಚಿಕೇತನು ಮಾರ್ಕಂಡೇಯನಿಗೂ ಉಪದೇಶಿಸಿದರು.

13017169a ಮಾರ್ಕಂಡೇಯಾನ್ಮಯಾ ಪ್ರಾಪ್ತಂ ನಿಯಮೇನ ಜನಾರ್ದನ।
13017169c ತವಾಪ್ಯಹಮಮಿತ್ರಘ್ನ ಸ್ತವಂ ದದ್ಮ್ಯದ್ಯ ವಿಶ್ರುತಮ್।
13017169e ಸ್ವರ್ಗ್ಯಮಾರೋಗ್ಯಮಾಯುಷ್ಯಂ ಧನ್ಯಂ ಬಲ್ಯಂ ತಥೈವ ಚ।। 125

ಜನಾರ್ದನ! ಅಮಿತ್ರಘ್ನ! ಮಾರ್ಕಂಡೇಯನಿಂದ ನಾನು ನಿಯಮಪೂರ್ವಕವಾಗಿ ಇದನ್ನು ಪಡೆದುಕೊಂಡೆನು. ವಿಖ್ಯಾತವಾದ ಈ ಸ್ತವವನ್ನು ಇಂದು ನಾನು ನಿನಗೆ ಉಪದೇಶಿಸಿದ್ದೇನೆ. ಈ ಸ್ತೋತ್ರವು ಸ್ವರ್ಗ, ಆರೋಗ್ಯ, ಆಯುಷ್ಯ, ಧನ್ಯತೆ, ಹಾಗೂ ಬಲಗಳನ್ನು ನೀಡುತ್ತದೆ.

13017170a ನ ತಸ್ಯ ವಿಘ್ನಂ ಕುರ್ವಂತಿ ದಾನವಾ ಯಕ್ಷರಾಕ್ಷಸಾಃ।
13017170c ಪಿಶಾಚಾ ಯಾತುಧಾನಾಶ್ಚ ಗುಹ್ಯಕಾ ಭುಜಗಾ ಅಪಿ।।
13017171a ಯಃ ಪಠೇತ ಶುಚಿರ್ಭೂತ್ವಾ ಬ್ರಹ್ಮಚಾರೀ ಜಿತೇಂದ್ರಿಯಃ।
13017171c ಅಭಗ್ನಯೋಗೋ ವರ್ಷಂ ತು ಸೋಽಶ್ವಮೇಧಫಲಂ ಲಭೇತ್।।

ಶುಚಿಯಾಗಿ, ಬ್ರಹ್ಮಚಾರಿಯಾಗಿ ಮತ್ತು ಜಿತೇಂದ್ರಿಯನಾಗಿ ಯಾರು ಇದನ್ನು ಪಠಿಸುತ್ತಾರೋ ಅವರಿಗೆ ದಾನವರಾಗಲೀ, ಯಕ್ಷ-ರಾಕ್ಷಸರಾಗಲೀ, ಪಿಶಾಚಿ-ಯಾತುಧಾನರಾಗಲೀ, ಗುಹ್ಯಕ-ಭುಜಗರಾಗಲೀ ವಿಘ್ನವನ್ನುಂಟುಮಾಡುವುದಿಲ್ಲ. ಇದನ್ನು ಒಂದು ವರ್ಷಕಾಲ ಸತತವಾಗಿ ಪಠಿಸುವವನಿಗೆ ಅಶ್ವಮೇಧದ ಫಲವು ಲಭಿಸುತ್ತದೆ.”””

ಸಮಾಪ್ತಿ

ಇತಿ ಶ್ರೀಮಹಾಭಾರತೇ ಅನುಶಾಸನಪರ್ವಣಿ ದಾನಧರ್ಮಪರ್ವಣಿ ಮಹಾದೇವಸಹಸ್ರನಾಮಸ್ತ್ರೋತ್ರೇ ಸಪ್ತದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಅನುಶಾಸನಪರ್ವದಲ್ಲಿ ದಾನಧರ್ಮಪರ್ವದಲ್ಲಿ ಮಹಾದೇವಸಹಸ್ರನಾಮಸ್ತೋತ್ರ ಎನ್ನುವ ಹದಿನೇಳನೇ ಅಧ್ಯಾಯವು.


  1. ಮಹಾಭಾರತದ ಇಲ್ಲಿ ಬರುವ ಶಿವಸಹಸ್ರನಾಮವಲ್ಲದೇ ಇನ್ನೂ ಐದು ಶಿವಸಹಸ್ರನಾಮಗಳಿವೆ: (1) ಪದ್ಮಪುರಾಣ (2) ಲಿಂಗಪುರಾಣ (3) ಸೌರ ಪುರಾಣ (4) ಶಿವಪುರಾಣ ಮತ್ತು (5) ವೇದಸಾರ. ಇವುಗಳನ್ನು ಅನುಬಂಧದಲ್ಲಿ ನೀಡಲಾಗಿದೆ. ↩︎

  2. ಪ್ರಾಂಜಲಿಃ ಪ್ರಾಹ ವಿಪ್ರರ್ಷಿರ್ನಾಮಸಂಗ್ರಹಮಾದಿತಃ।। (ಭಾರತ ದರ್ಶನ). ↩︎

  3. ಸ್ಥಿರಃ ಸ್ಥಾಣುಃ ಪ್ರಭುರ್ಭೀಮಃ ಪ್ರವರೋ ವರದೋ ವರಃ। (ಭಾರತ ದರ್ಶನ). ↩︎

  4. ಇಲ್ಲಿ ಪ್ರತಿನಾಮಕ್ಕೂ ಸಂಖ್ಯೆಗಳನ್ನು ಕೊಟ್ಟಿದ್ದೇನೆ. ಆದರೆ ಈ ಸಂಖ್ಯೆಗಳು ಬೇರೆ ಬೇರೆ ಅನುವಾದಗಳಲ್ಲಿ ಬೇರೆ ಬೇರೆಯಾಗಿವೆ. ಹಲವಾರು ವಿಧಗಳಲ್ಲಿ ನಾಮಗಳನ್ನು ವಿಭಜಿಸಬಹುದಾಗಿದೆ. ↩︎

  5. ಹರಶ್ಚ ಹರಿಣಾಕ್ಷಶ್ಚ ಸರ್ವಭೂತಹರಃ ಪ್ರಭುಃ।। (ಭಾರತ ದರ್ಶನ). ↩︎

  6. ಮಹಾರೂಪೋ ಮಹಾಕಾಯೋ ವೃಷರೂಪೋ ಮಹಾಯಶಾಃ। ಮಹಾತ್ಮಾ ಸರ್ವಭೂತಾತ್ಮಾ ವಿಶ್ವರೂಪೋ ಮಹಾಹನುಃ।। (ಭಾರತ ದರ್ಶನ). ↩︎

  7. ರುದ್ರೋ ವಾ ಏಷ ಯದಗ್ನಿಃ। ಅಶ್ವತರೀರಥೇನಾಗ್ನಿರಾಜಿಮಧಾವತ್।। ಅರ್ಥಾತ್ ಅಗ್ನಿರೂಪನಾದ ರುದ್ರನು ಹೇಸರಗತ್ತೆಗಳನ್ನು ಕಟ್ಟಿದ ರಥದಲ್ಲಿ ಪ್ರಯಾಣಮಾಡುವವನು ಎಂಬ ಶ್ರುತಿವಾಕ್ಯವಿದೆ. ↩︎

  8. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಐಶ್ವರ್ಯ, ಪ್ರಣಿಧಾನಗಳೆಂಬ ನಿಯಮಗಳು. ↩︎

  9. ಸುಕೃತಾಂ ವಾ ಏತಾನಿ ಜೋತಿಗ್ ಷಿ। ಯನ್ನಕ್ಷತ್ರಾಣಿ।। ಎಂಬ ಶ್ರುತಿವಚನದಂತೆ ಸುಕೃತಿಗಳ ಜ್ಯೋತಿಗಳೇ ನಕ್ಷತ್ರರೂಪವಾಗಿ ಆಕಾಶದಲ್ಲಿ ಬೆಳಗುತ್ತವೆ. ↩︎

  10. ಚಂದ್ರಃ ಸೂರ್ಯಃ ಶನಿಃ ಕೇತುರ್ಗ್ರಹೋ ಗ್ರಹಪತಿರ್ವರಃ। ಅತ್ರಿರತ್ರ್ಯಾ ನಮಸ್ಕರ್ತಾ ಮೃಗಬಾಣಾರ್ಪಣೋಽನಘಃ।। (ಭಾರತ ದರ್ಶನ). ↩︎

  11. ಯೋಗೀ ಯಜ್ಯೋ ಮಹಾಬೀಜೋ ಮಹಾರೇತಾ ಮಹಾಬಲಃ। ಸುವರ್ಣರೇತಾ ಸರ್ವಜ್ಞಃ ಸುಬೀಜೋ ಬೀಜವಾಹನಃ।। (ಗೀತಾ ಪ್ರೆಸ್/ಭಾರತ ದರ್ಶನ). ↩︎

  12. ವಿಶ್ವರೂಪಃ ಸ್ವಯಂ ಶ್ರೇಷ್ಠೋ ಬಲವೀರೋಽಬಲೋ ಗಣಃ।। (ಗೀತಾ ಪ್ರೆಸ್/ ಭಾರತ ದರ್ಶನ). ↩︎

  13. ಗಣಕರ್ತಾ ಗಣಪತಿರ್ದಿಗ್ವಾಸಾಃ ಕಾಮ ಏವ ಚ। ಮಂತ್ರವಿತ್ಪರಮೋ ಮಂತ್ರಃ ಸರ್ವಭಾವಕರೋ ಹರಃ।। (ಭಾರತ ದರ್ಶನ). ↩︎

  14. ಶೃಗಾಲರೂಪಃ ಸಿದ್ಧಾರ್ಥೋ ಮುಂಡಃ ಸರ್ವಶುಭಂಕರಃ।। (ಗೀತಾ ಪ್ರೆಸ್). ↩︎

  15. ಕೃಷಿರ್ಭೂವಾಚಕಃ ಶಬ್ಧೋ ಣಶ್ಚ ನಿರ್ವೃತ್ತಿವಾಚಕಃ। ತಯೋರೈಕ್ಯಂ ಪರಂ ಬ್ರಹ್ಮ ಕೃಷ್ಣ ಇತ್ಯಭಿದೀಯತೇ।। ಅರ್ಥಾತ್ ಕೃಷಿಃ ಎಂಬುದು ಭೂ-ಸತ್ತಾಯಾಂ ಎಂಬ ಭಾವಾರ್ತದಂತೆ ಸತ್ ವಾಚಕಶಬ್ಧವು. ಣಃ ಎಂಬುದು ಆನಂದವಾಚಕ ಶಬ್ಧ. ಈ ಎರಡರ ಐಕ್ಯವೇ ಸದಾನಂದ ಅಥವಾ ಪರಬ್ರಹ್ಮ. ಆ ಪರಬ್ರಹ್ಮವಸ್ತುವೇ ಕೃಷ್ಣ. ↩︎

  16. ಅಜಶ್ಚ ಬಹುರೂಪಶ್ಚ ಗಂಧಧಾರೀ ಕಪರ್ದ್ಯಪಿ। (ಭಾರತ ದರ್ಶನ). ↩︎

  17. ಅಧೋಲಿಂಗೋ ಹಿ ರೇತಃ ಸಿಂಚತಿನ ತೂರ್ಧ್ವಲಿಂಗಃ। ↩︎

  18. ಅಹಶ್ಚರೋ ನಕ್ತಂಚರಸ್ತಿಗ್ಮಮನ್ಯುಃ ಸುವರ್ಚಸ।। (ಭಾರತ ದರ್ಶನ). ↩︎

  19. ಪ್ರಾಣಾ ಏವ ರುದ್ರಾ ಏತೇ ಹೀದಂ ಸರ್ವಂ ರೋದಯಂತಿ! ಎಂಬ ಶೃತಿವಚನವನ್ನು ಆಧರಿಸಿ ವ್ಯಾಖ್ಯಾನಕಾರರು ರುದ್ರ ಎಂಬ ನಾಮಕ್ಕೆ ಪ್ರಾಣಸ್ವರೂಪ ಎಂದು ಅರ್ಥೈಸಿರುತ್ತಾರೆ. ↩︎

  20. ಕಾಲಯೋಗೀ ಮಹಾನಾದಃ ಸರ್ವಕರ್ಮಶ್ಚತುಷ್ಪಥಃ। (ಭಾರತ ದರ್ಶನ). ↩︎

  21. ವೈಶ್ವ, ತೈಜಸ, ಪ್ರಾಜ್ಞ, ಶಿವಧ್ಯಾನಗಳೆಂಬ ನಾಲ್ಕುವಿಧದ ಉಪಾಸನೆಗಳಿಂದ ಲಭಿಸತಕ್ಕವನು ಅಥವಾ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ಅಷ್ಟಾಂಗಯೋಗಗಳೆಂಬ ನಾಲ್ಕುವಿಧದ ಯೋಗಮಾರ್ಗಗಳಿಂದ ಲಭಿಸತಕ್ಕವನು. ↩︎

  22. ಬಹುಭೂತೋ ಬಹುಧರಃ ಸ್ವರ್ಭಾನುರಮಿತೋ ಗತಿಃ। ನೃತ್ಯಪ್ರಿಯೋ ನಿತ್ಯನರ್ತೋ ನರ್ತಕಃ ಸರ್ವಲಾಲಸಃ।। (ಭಾರತ ದರ್ಶನ). ↩︎

  23. ಸಹಸ್ರಹಸ್ತೋ ವಿಜಯೋ ವ್ಯವಸಾಯೋ ಹ್ಯತಂದ್ರಿತಃ।। (ಭಾರತ ದರ್ಶನ). ↩︎

  24. ಅಧರ್ಷಣೋ ಧರ್ಷಣಾತ್ಮಾ ಯಜ್ಞಹಾ ಕಾಮನಾಶಕಃ। (ಭಾರತ ದರ್ಶನ). ↩︎

  25. ಸುತೀಕ್ಷ್ಣದಶನಶ್ಚೈವ ಮಹಾಕಾಯೋ ಮಹಾನನಃ।। (ಭಾರತ ದರ್ಶನ). ↩︎

  26. ಯಜ್ಞೋ ವೈ ವಿಷ್ಣುಃ ಎಂಬ ಶ್ರುತಿವಚನದಂತೆ ಯಜ್ಞವೇ ವಿಷ್ಣುವೆಂದು ಹೇಳುತ್ತಾರೆ. ↩︎

  27. ಉಗ್ರತೇಜಾ ಮಹಾತೇಜಾ ಜನ್ಮೋ ವಿಜಯಕಾಲವಿತ್। ಜ್ಯೋತಿಷಾಮಯನಂ ಸಿದ್ಧಿಃ ಸರ್ವವಿಗ್ರಹ ಏವ ಚ।। (ಭಾರತ ದರ್ಶನ). ↩︎

  28. ಶಿಖೀ ಮುಂಡೀ ಜಟೀ ಜ್ವಾಲೀ ಮೂರ್ತಿಜೋ ಮೂರ್ಧಗೋ ಬಲೀ। ವೇಣವೀ ಪಣವೀ ತಾಲೀ ಖಲೀ ಕಾಲಕಟಂಕಟಃ।। (ಭಾರತ ದರ್ಶನ). ↩︎

  29. ನಕ್ಷತ್ರವಿಗ್ರಹಮತಿರ್ಗುಣಬುದ್ಧಿರ್ಲಯೋಽಗಮಃ। ಪ್ರಜಾಪತಿರ್ವಿಶ್ವಬಾಹುರ್ವಿಭಾಗಃ ಸರ್ವಗೋಽಮುಖಃ।। (ಭಾರತ ದರ್ಶನ). ↩︎

  30. ವಿಮೋಚನಃ ಸುಸರಣೋ ಹಿರಣ್ಯಕವಚೋದ್ಭವಃ। ಮೇಢ್ರಜೋ ಬಲಚಾರೀ ಚ ಮಹೀಚಾರೀ ಸ್ರುತಸ್ತಥಾ।। (ಭಾರತ ದರ್ಶನ). ↩︎

  31. ದೇವಾ ವೈ ಬಲೇ ಗಾಃ ಪರ್ಯಪಶ್ಯನ್ ಎಂಬ ಬ್ರಾಹ್ಮಣಶ್ರುತಿವಚನದಂತೆ ಬಲ ಶಬ್ಧಕ್ಕೆ ವನ ಎಂಬ ಅರ್ಥವಿದೆ. ↩︎

  32. ಸರ್ವತೂರ್ಯನಿನಾದೀ ಚ ಸರ್ವಾತೋದ್ಯಪರಿಗ್ರಹಃ। ವ್ಯಾಲರೂಪೋ ಗುಹಾವಾಸೀ ಗುಹೋ ಮಾಲೀ ತರಂಗವಿತ್।। (ಭಾರತ ದರ್ಶನ). ↩︎

  33. ಪ್ರಸ್ಕಂದನೋ ವಿಭಾಗಜ್ಞೋಽತುಲ್ಯೋ ಯಜ್ಞಭಾಗವಿತ್।। ಎಂಬ ಪಾಠಾಂತರವಿದೆ. ↩︎

  34. ಸರ್ವವಾಸಃ ಸರ್ವಚಾರೀ ದುರ್ವಾಸಾ ವಾಸವೋಽಮರಃ। ಹೈಮೋ ಹೇಮಕರೋಽಯಜ್ಞಃ ಸರ್ವಧಾರೀ ಧರೋತ್ತಮಃ।। (ಭಾರತ ದರ್ಶನ). ↩︎

  35. ಮುಖ್ಯೋಽಮುಖ್ಯಶ್ಚ ದೇಹಶ್ಚ ಕಾಹಲಿಃ ಸರ್ವಕಾಮದಃ। (ಭಾರತ ದರ್ಶನ). ↩︎

  36. ಆಕಾಶನಿರ್ವಿರೂಪಶ್ಚ ನಿಪಾತೀ ಹ್ಯವಶಃ ಖಗಃ। ರೌದ್ರರೂಪೋಂಽಶುರಾದಿತ್ಯೋ ಬಹುರಶ್ಮಿಃ ಸುವರ್ಚಸೀ।। (ಭಾರತ ದರ್ಶನ) ↩︎

  37. ಸರ್ವವಾಸೀ ಶ್ರೀಯಾವಾಸೀ ಉಪದೇಶಕರೋಽಕರಃ।। (ಗೀತಾ ಪ್ರೆಸ್). ↩︎

  38. ವಾಸಯತಿ ಸ್ಥಾಪಯತಿ ಏತತ್ಸರ್ವಂ ಆತ್ಮನಿ ಇತಿ ವಸುಃ – ಎಲ್ಲವನ್ನೂ ಆತ್ಮನಲ್ಲಿ ಸಂಸ್ಥಾಪಿಸಿರುವುದರಿಂದ ವಸು; ಅವನೇ ವಾಯುವು ಎಂದು ವ್ಯಾಖ್ಯಾನಕಾರರು ವಸು ಶಬ್ದಕ್ಕೆ ವಾಯು ಎಂದು ಅರ್ಥೈಸಿರುತ್ತಾರೆ. ↩︎

  39. ಋಚಃ ಸಾಮಾನಿ ಯಜೂಙ್ ಪಿ ಸಾ ಹಿ ಶ್ರೀರಮೃತಾ ಸತಾಂ ಎಂಬ ಶ್ರುತಿವಾಕ್ಯದಂತೆ ಋಗ್ಯಜುಸ್ಸಾಮಗಳೇ ಶ್ರೀ. ↩︎

  40. ಮುನಿರಾತ್ಮನಿರಾಲೋಕಃ ಸಂಭಗ್ನಶ್ಚ ಸಹಸ್ರದಃ। ಪಕ್ಷೀ ಚ ಪಕ್ಷರೂಪಶ್ಚ ಅತಿದೀಪ್ತೋ ವಿಶಾಂಪತಿಃ।। (ಗೀತಾ ಪ್ರೆಸ್). ↩︎

  41. ಉನ್ಮಾದೋ ಮದನಃ ಕಾಮೋ ಹ್ಯಶ್ವತ್ಥೋಽರ್ಥಕರೋ ಯಶಃ। (ಭಾರತ ದರ್ಶನ). ↩︎

  42. ಸಿದ್ಧಯೋಗೀ ಮಹರ್ಷಿಷ್ಚ ಸಿದ್ಧಾರ್ಥಃ ಸಿದ್ಧಸಾಧಕಃ। ಭಿಕ್ಷುಶ್ಚ ಭಿಕ್ಷುರೂಪಶ್ಚ ವಿಪಣೋ ವೃದುರವ್ಯಯಃ।। (ಭಾರತ ದರ್ಶನ). ↩︎

  43. ಚಮೂಸ್ತಂಭವ (ಭಾರತ ದರ್ಶನ). ↩︎

  44. ವೃತ್ತಾವೃತ್ತಕರಸ್ತಾಲೋ ಮಧುರ್ಮಧುಕಲೋಚನಃ। ವಾಚಸ್ಪತ್ಯೋ ವಾಜಸನೋ ನಿತ್ಯಮಾಶ್ರಮಪೂಜಿತಃ।। (ಭಾರತ ದರ್ಶನ). ↩︎

  45. ವಿಚಾರವಿತ್ (ಭಾರತ ದರ್ಶನ). ↩︎

  46. ಪಿನಾಕವಾನ್ (ಭಾರತ ದರ್ಶನ). ↩︎

  47. ಭಗಹಾರೀ ನಿಹಂತಾ ಚ ಕಾಲೋ ಬ್ರಹ್ಮಾ ಪಿತಾಮಹಃ।। (ಭಾರತ ದರ್ಶನ). ↩︎

  48. ಯೋಗಾಧ್ಯಕ್ಷೋ (ಭಾರತ ದರ್ಶನ). ↩︎

  49. ಇತಿಹಾಸಃ ಸಕಲ್ಪಶ್ಚ ಗೌತಮೋಽಥ ನಿಶಾಕರಃ।। (ಭಾರತ ದರ್ಶನ). ↩︎

  50. ಕಲಿಃ (ಭಾರತ ದರ್ಶನ). ↩︎

  51. ಹ್ಯನೌಷಧಃ (ಭಾರತ ದರ್ಶನ). ↩︎

  52. ಬಲವಚ್ಛಕ್ರ (ಭಾರತ ದರ್ಶನ). ↩︎

  53. ಗತಾಗತಃ (ಭಾರತ ದರ್ಶನ). ↩︎

  54. ಸುಸ್ವಪ್ನೋ (ಭಾರತ ದರ್ಶನ). ↩︎

  55. ಮಂತ್ರಕಾರೋ (ಭಾರತ ದರ್ಶನ). ↩︎

  56. ಮಹಾಗರ್ಭಪರಾಯಣಃ (ಭಾರತ ದರ್ಶನ). ↩︎

  57. ನಿಶಾಲಯಃ (ಭಾರತ ದರ್ಶನ). ↩︎

  58. ಮಹಾಂತಕೋ (ಭಾರತ ದರ್ಶನ). ↩︎

  59. ಮಹೋಷ್ಠಶ್ಚ (ಭಾರತ ದರ್ಶನ). ↩︎

  60. ಶ್ಮಶಾನಭಾಕ್ (ಭಾರತ ದರ್ಶನ). ↩︎

  61. ಮಹಾಕೋಶೋ (ಭಾರತ ದರ್ಶನ). ↩︎

  62. ಪ್ರಸನ್ನಶ್ಚ (ಭಾರತ ದರ್ಶನ). ↩︎

  63. ಗಂಡಲೀ ಮೇರುಧಾಮಾ ಚ ದೇವಾಧಿಪತಿರೇವ ಚ। (ಭಾರತ ದರ್ಶನ). ↩︎

  64. ಉಪಕಾರಃ ಪ್ರಿಯಃ (ಭಾರತ ದರ್ಶನ). ↩︎

  65. ಕಾಂಚನಚ್ಛವಿಃ (ಭಾರತ ದರ್ಶನ). ↩︎

  66. ಮನುಷ್ಯನಿಗೆ ಗರ್ಭಾವಾಸದಿಂದ ಮೃತ್ಯುವಿನ ವರೆಗಿನ ಹತ್ತು ದಶಗಳು. ಮೃತ್ಯುವೇ ಹತ್ತನೆಯದು. ಹನ್ನೊಂದನೆಯದು ಸ್ವರ್ಗ ಮತ್ತು ಹನ್ನೆರಡನೆಯದು ಮೋಕ್ಷ. ಆದುದರಿಂದ ದ್ವಾದಶನೆಂದರೆ ಮೋಕ್ಷಸ್ವರೂಪೀ. ↩︎

  67. ಭೂತವಾಹನಸಾರಥಿಃ (ಭಾರತ ದರ್ಶನ). ↩︎

  68. ಲೋಕಪಾಲಸ್ತಥಾಲೋಕೋ (ಭಾರತ ದರ್ಶನ). ↩︎

  69. ಸುಕ್ಲಸ್ತ್ರಿಶುಕ್ಲಃ (ಭಾರತ ದರ್ಶನ). ↩︎

  70. ಆಶ್ರಮಸ್ಥೋ ಕ್ರಿಯಾವಸ್ಥೋ ವಿಶ್ವಕರ್ಮರ್ಮತಿರ್ವರಃ। ವಿಶಾಲಶಾಖಸ್ತಾಮ್ರೋಷ್ಠೋ ಹ್ಯಂಬುಜಾಲಃ ಸುನಿಶ್ಚಲಃ।। (ಭಾರತ ದರ್ಶನ). ↩︎

  71. ಕಪಿಲಃ ಕಪಿಶಃ (ಭಾರತ ದರ್ಶನ). ↩︎

  72. ಸುಶಾರದಃ (ಭಾರತ ದರ್ಶನ). ↩︎

  73. ಕೆಂಪು ಮತ್ತು ಹಳದಿ ಮಿಶ್ರಿತ ಬಣ್ಣ. ↩︎

  74. ಅನುಕಾರೀ (ಭಾರತ ದರ್ಶನ). ↩︎

  75. ಮಹಾಕ್ರೋಧ (ಭಾರತ ದರ್ಶನ). ↩︎

  76. ಸಯಜ್ಞಾರಿಃ (ಭಾರತ ದರ್ಶನ). ↩︎

  77. ಸಕಾಮಾರಿಃ (ಭಾರತ ದರ್ಶನ). ↩︎

  78. ಬಹುಧಾ ನಿಂದಿತಃ (ಭಾರತ ದರ್ಶನ). ↩︎

  79. ಅಹಿರ್ಬುಧ್ನ್ಯೋಽನಿಲಾಭಶ್ಚ (ಭಾರತ ದರ್ಶನ). ↩︎

  80. ಉಷಂಗಶ್ಚ (ಭಾರತ ದರ್ಶನ). ↩︎

  81. ವಿಭೂರ್ವರ್ಣವಿಭಾವೀ ಚ ಸರ್ವಕಾಮಗುಣಾವಹಃ। ಪದ್ಮನಾಭೋ ಮಹಾಗರ್ಭಶ್ಚಂದ್ರವಕ್ತ್ರೋಽನಿಲೋಽನಲಃ।। (ಭಾರತ ದರ್ಶನ). ↩︎

  82. ಕುರುಕರ್ತಾ ಕುರುವಾಸೀ ಕುರುಭೂತೋ ಗುಣೌಷಧಃ।। (ಭಾರತ ದರ್ಶನ). ↩︎

  83. ದರ್ಭಚಾರೀ (ಭಾರತ ದರ್ಶನ). ↩︎

  84. ದೇವದೇವಃ ಸುಖಾಸಕ್ತಃ (ಭಾರತ ದರ್ಶನ). ↩︎

  85. ವರ್ಧಕೀ (ಭಾರತ ದರ್ಶನ). ↩︎

  86. ಬಕುಲಃ (ಭಾರತ ದರ್ಶನ). ↩︎

  87. ಹರಿಃ (ಭಾರತ ದರ್ಶನ). ↩︎

  88. ಪ್ರಕೃಷ್ಟಾರಿ (ಭಾರತ ದರ್ಶನ). ↩︎

  89. ಗಾಂಧಾರಶ್ಚ ಸುವಾಸಶ್ಚ ತಪಃಸಕ್ತೋ ರತಿರ್ನರಃ। (ಭಾರತ ದರ್ಶನ). ↩︎

  90. ಮಹಾನೃತ್ಯಃ (ಭಾರತ ದರ್ಶನ). ↩︎

  91. ಮಹಾಧಾತುಃ (ಭಾರತ ದರ್ಶನ). ↩︎

  92. ಆದೇಶಃ (ಭಾರತ ದರ್ಶನ). ↩︎

  93. ತೋರಣಸ್ತಾರಣೋ ವಾತಃ ಪರಿಧೀ ಪತಿಖೇಚರಃ (ಭಾರತ ದರ್ಶನ). ↩︎

  94. ಅತಿವೃದ್ಧೋ ಗುಣಾಧಿಕಃ (ಭಾರತ ದರ್ಶನ). ↩︎

  95. ದೇವೋ ದಿವಿಸುಪರ್ವಣಃ (ಭಾರತ ದರ್ಶನ). ↩︎

  96. ಧ್ರುವೋಽಥ ಹರಿಣೋ ಹರಃ (ಭಾರತ ದರ್ಶನ). ↩︎

  97. ಸರ್ವಲಕ್ಷಣಲಕ್ಷಿತಃ (ಭಾರತ ದರ್ಶನ). ↩︎

  98. ರತ್ನಾಂಗೋ (ಭಾರತ ದರ್ಶನ). ↩︎

  99. ಆರೋಹಣೋಽಧಿರೋಹಶ್ಚ ಶೀಲಧಾರೀ ಮಹಾಯಶಾಃ। (ಭಾರತ ದರ್ಶನ). ↩︎

  100. ಯೋಗೋ ಯುಗಕರೋ (ಭಾರತ ದರ್ಶನ). ↩︎

  101. ಮಹಾನಾಗಹನೋಽವಧಃ (ಭಾರತ ದರ್ಶನ). ↩︎

  102. ಶಶೀ ಹರಸುಲೋಚನಃ (ಭಾರತ ದರ್ಶನ). ↩︎

  103. ತ್ರಿಯುಗಃ (ಭಾರತ ದರ್ಶನ). ↩︎

  104. ್ರಿಲೋಚನೋ ವಿಷಣ್ಣಾಂಗೋ ಮಣಿವಿದ್ಧೋ ಜಟಾಧರಃ। (ಭಾರತ ದರ್ಶನ). ↩︎

  105. ವಿಂದುರ್ವಿಸರ್ಗಃ ಸುಮುಖಃ ಶರಃ ಸರ್ವಾಯುಧಃ ಸಹಃ। (ಭಾರತ ದರ್ಶನ). ↩︎

  106. ಸುಖಾಜಾತಃ (ಭಾರತ ದರ್ಶನ). ↩︎

  107. ವಾಯುಃ (ಭಾರತ ದರ್ಶನ). ↩︎

  108. ದಂಡೀ ಕುಂಡೀ (ಭಾರತ ದರ್ಶನ). ↩︎

  109. ಶತಜಿಹ್ವಃ (ಭಾರತ ದರ್ಶನ). ↩︎

  110. ತ್ರಿಕಕುನ್ಮಂತ್ರಃ (ಭಾರತ ದರ್ಶನ). ↩︎

  111. ಶತಘ್ನೀಪಾಶಶಕ್ತಿಮಾನ್ (ಭಾರತ ದರ್ಶನ). ↩︎

  112. ವರೇಣ್ಯಃ (ಭಾರತ ದರ್ಶನ). ↩︎

  113. ಪೀತಾತ್ಮಾ ಪರಮಾತ್ಮಾ ಚ ಪ್ರಯತಾತ್ಮಾ ಪ್ರಧಾನದೃತ್। (ಭಾರತ ದರ್ಶನ). ↩︎

  114. ಅಮೃತೋ (ಭಾರತ ದರ್ಶನ). ↩︎

  115. ವಿಶ್ವೋ (ಭಾರತ ದರ್ಶನ). ↩︎

  116. ಉದ್ಭಿತ್ತ್ರಿವಿಕ್ರಮೋ ವೈದ್ಯೋ ವಿರಜೋ ನೀರಜೋಽಮರಃ। (ಭಾರತ ದರ್ಶನ). ↩︎

  117. ವಿಬುಧೋಽಗ್ರವರಃ ಸೂಕ್ಷ್ಮಃ ಸರ್ವದೇವಸ್ತಪೋಮಯಃ। (ಭಾರತ ದರ್ಶನ). ↩︎

  118. ಗುಹಃ ಕಾಂತೋ ನಿಜಃ ಸರ್ಗಃ ಪವಿತ್ರಂ ಸರ್ವಪಾವನಃ। (ಭಾರತ ದರ್ಶನ). ↩︎

  119. ಸ್ತೂಯಮಾನೋ ಮಹಾದೇವಸ್ತುಷ್ಯತೇ ನಿಯತಾತ್ಮಭಿಃ। ಭಕ್ತಾನುಕಂಪೀ ಭಗವಾನಾತ್ಮಸಂಸ್ಥಾಕರೋ ವಿಭುಃ।। (ಭಾರತ ದರ್ಶನ). ↩︎

  120. ಈ ಶ್ಲೋಕದ ಮೊದಲು ಭಕ್ತ್ಯಾಹ್ಯನನ್ಯಮೀಶಾನಂ ಪರಂ ದೇವಂ ಸನಾತನಮ್। ಕರ್ಮಣಾ ಮನಸಾ ವಾಚಾ ಭಾವೇನಾಮಿತತೇಜಸಃ।। ಶಯಾನಾ ಜಾಗ್ರಮಾಣಾಶ್ಚ ವ್ರಜನ್ನುಪವಿಶಂಸ್ತಥಾ। ಉನ್ಮಿಷನ್ನಿಮಿಷಂಶ್ಚೈವ ನಿಂತಯಂತಃ ಪುನಃ ಪುನಃ।। ಶೃಣ್ವಂತಃ ಶ್ರಾವಯಂತಶ್ಚ ಕಥಯಂತಶ್ಚ ತೇ ಭವಮ್। ಎಂಬ ಅಧಿಕ ಶ್ಲೋಕಗಳಿವೆ (ಭಾರತ ದರ್ಶನ). ↩︎

  121. ಯೇ ಸರ್ವಭಾವಾನುಗತಾಃ ಪ್ರಪದ್ಯಂತೇ ಮಹೇಶ್ವರಮ್। (ಭಾರತ ದರ್ಶನ). ↩︎

  122. ಏವಮನ್ಯೇ ವಿಕುರ್ವಂತಿ ದೇವಾಃ ಸಂಸಾರಮೋಚನಮ್। ಮನುಷ್ಯಾಣಾಮೃತ ದೇವಂ ನಾನ್ಯಾ ಶಕ್ತಿಸ್ತಪೋಬಲಮ್।। (ಭಾರತ ದರ್ಶನ). ↩︎

  123. ಇದಕ್ಕೆ ಮೊದಲು ಈ ಕೆಳಗಿನ ಶ್ಲೋಕಗಳಿವೆ: ಇದಂ ಪುಣ್ಯಂ ಪವಿತ್ರಂ ಚ ಸರ್ವದಾ ಪಾಪನಾಶನಮ್। ಯೋಗದಂ ಮೋಕ್ಷದಂ ಚೈವ ಸ್ವರ್ಗದಂ ತೋಷದಂ ತಥಾ।। ಎವಮೇತತ್ಪಠಂತೇ ಯ ಏಕಭಕ್ತ್ಯಾ ತು ಶಂಕರಮ್। ಯಾ ಗತಿಃ ಸಾಂಖ್ಯಯೋಗಾನಾಂ ವ್ರಜನ್ಯೇತಾಂ ಗತಿಂ ತದಾ।। ಸ್ತವಮೇತಂ ಪ್ರಯತ್ನೇನ ಸದಾ ರುದ್ರಸ್ಯ ಸಂನಿಧೌ। ಅಬ್ದಮೇಕಂ ಚರೇದ್ಭಕ್ತಃ ಪ್ರಾಪ್ನುಯಾದೀಪ್ಸಿತಂ ಫಲಮ್।। (ಭಾರತ ದರ್ಶನ) ↩︎

  124. ಏತದ್ರಹಸ್ಯಂ ಪರಮಂ ಬ್ರಹ್ಮಣೋ ಹೃದಿ ಸಂಸ್ಥಿತಮ್। (ಭಾರತ ದರ್ಶನ). ↩︎

  125. ಸ್ವರ್ಗಮಾರೋಗ್ಯಮಾಯುಷ್ಯಂ ಧನ್ಯಂ ವೇದೇನ ಸಮ್ಮಿತಮ್। (ಭಾರತ ದರ್ಶನ). ↩︎