ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 352
ಸಾರ
ಬ್ರಾಹ್ಮಣನು ನಾಗರಾಜನೊಂದಿಗೆ ಮಾತನಾಡಿ ಉಂಛವೃತ್ತಿಯ ವ್ರತವನ್ನು ಕೈಗೊಳ್ಳಲು ನಿಶ್ಚಯಿಸಿ ತನ್ನ ಮನೆಗೆ ತೆರಳಲು ನಾಗರಾಜನ ಅಪ್ಪಣೆಯನ್ನು ಕೇಳಿದುದು (1-10).
12352001 ಬ್ರಾಹ್ಮಣ ಉವಾಚ।
12352001a ಆಶ್ಚರ್ಯಂ ನಾತ್ರ ಸಂದೇಹಃ ಸುಪ್ರೀತೋಽಸ್ಮಿ ಭುಜಂಗಮ।
12352001c ಅನ್ವರ್ಥೋಪಗತೈರ್ವಾಕ್ಯೈಃ ಪಂಥಾನಂ ಚಾಸ್ಮಿ ದರ್ಶಿತಃ।।
ಬ್ರಾಹ್ಮಣನು ಹೇಳಿದನು: “ಭುಜಂಗಮ! ಇದು ಆಶ್ಚರ್ಯವೆನ್ನುವುದರಲ್ಲಿ ಸಂದೇಹವೇನೂ ಇಲ್ಲ. ಸುಪ್ರೀತನಾಗಿದ್ದೇನೆ. ಅನ್ವರ್ಥ ಮಾತುಗಳಿಂದ ನೀನು ನನಗೆ ಮಾರ್ಗವನ್ನು ತೋರಿಸಿಕೊಟ್ಟಿರುವೆ!
12352002a ಸ್ವಸ್ತಿ ತೇಽಸ್ತು ಗಮಿಷ್ಯಾಮಿ ಸಾಧೋ ಭುಜಗಸತ್ತಮ।
12352002c ಸ್ಮರಣೀಯೋಽಸ್ಮಿ ಭವತಾ ಸಂಪ್ರೇಷಣನಿಯೋಜನೈಃ।।
ಸಾಧೋ! ಭುಜಗಸತ್ತಮ! ನಿನಗೆ ಮಂಗಳವಾಗಲಿ! ನಾನು ಹೊರಡುತ್ತೇನೆ. ನನ್ನನ್ನು ಎಲ್ಲಿಯಾದರೂ ಕಳುಹಿಸಬೇಕಾಗಿ ಬಂದರೆ ಅಥವಾ ಯಾವುದಾದರೂ ಕೆಲಸವನ್ನು ನನಗೆ ನಿಯೋಜಿಸಬೇಕಾಗಿ ಬಂದರೆ ನೀನು ನನ್ನನ್ನು ಸ್ಮರಿಸಿಕೊಳ್ಳಬೇಕು.”
12352003 ನಾಗ ಉವಾಚ।
12352003a ಅನುಕ್ತ್ವಾ ಮದ್ಗತಂ ಕಾರ್ಯಂ ಕ್ವೇದಾನೀಂ ಪ್ರಸ್ಥಿತೋ ಭವಾನ್।
12352003c ಉಚ್ಯತಾಂ ದ್ವಿಜ ಯತ್ಕಾರ್ಯಂ ಯದರ್ಥಂ ತ್ವಮಿಹಾಗತಃ।।
ನಾಗನು ಹೇಳಿದನು: “ದ್ವಿಜ! ನನ್ನಲ್ಲಿರುವ ಕಾರ್ಯವನ್ನು ಹೇಳದೆಯೇ ನೀನು ಎಲ್ಲಿಗೆ ಹೋಗುತ್ತಿರುವೆ? ಯಾವ ಕಾರ್ಯಕ್ಕಾಗಿ ಮತ್ತು ಯಾವ ಉದ್ದೇಶದಿಂದ ನೀನು ಇಲ್ಲಿಗೆ ಬಂದಿರುವೆ ಎನ್ನುವುದನ್ನು ಹೇಳಬೇಕು.
12352004a ಉಕ್ತಾನುಕ್ತೇ ಕೃತೇ ಕಾರ್ಯೇ ಮಾಮಾಮಂತ್ರ್ಯ ದ್ವಿಜರ್ಷಭ।
12352004c ಮಯಾ ಪ್ರತ್ಯಭ್ಯನುಜ್ಞಾತಸ್ತತೋ ಯಾಸ್ಯಸಿ ಬ್ರಾಹ್ಮಣ।।
ದ್ವಿಜರ್ಷಭ! ಬ್ರಾಹ್ಮಣ! ನೀನು ಹೇಳು ಅಥವಾ ಹೇಳದೆಯೇ ಇರು. ಆದರೆ ಕಾರ್ಯವು ಮುಗಿದನಂತರ ನನ್ನನ್ನು ಕೇಳಿ ನನ್ನ ಅನುಮತಿಯನ್ನು ಪಡೆದೇ ನೀನು ಇಲ್ಲಿಂದ ಹೊರಡಬೇಕು.
12352005a ನ ಹಿ ಮಾಂ ಕೇವಲಂ ದೃಷ್ಟ್ವಾ ತ್ಯಕ್ತ್ವಾ ಪ್ರಣಯವಾನಿಹ।
12352005c ಗಂತುಮರ್ಹಸಿ ವಿಪ್ರರ್ಷೇ ವೃಕ್ಷಮೂಲಗತೋ ಯಥಾ।।
ವಿಪ್ರರ್ಷೇ! ನನ್ನ ಮೇಲೆ ಪ್ರೀತಿಯನ್ನು ಹೊಂದಿರುವ ನೀನು ಮರದ ಬುಡದಲ್ಲಿಯೇ ಕುಳಿತು ಹೊರಟುಹೋಗುವ ದಾರಿಹೋಕನಂತೆ ನನ್ನನ್ನು ಸುಮ್ಮನ್ನೇ ಸಂದರ್ಶಿಸಿ ಹೊರಟುಹೋಗುವುದು ಸರಿಯಲ್ಲ.
12352006a ತ್ವಯಿ ಚಾಹಂ ದ್ವಿಜಶ್ರೇಷ್ಠ ಭವಾನ್ಮಯಿ ನ ಸಂಶಯಃ।
12352006c ಲೋಕೋಽಯಂ ಭವತಃ ಸರ್ವಃ ಕಾ ಚಿಂತಾ ಮಯಿ ತೇಽನಘ।।
ದ್ವಿಜಶ್ರೇಷ್ಠ! ಅನಘ! ನೀನು ನನ್ನಲ್ಲಿ ಮತ್ತು ನೀನು ನನ್ನಲ್ಲಿ ಇದ್ದೀಯೆ ಎನ್ನುವುದರಲ್ಲಿ ಸಂಶಯವಿಲ್ಲ. ಈ ಲೋಕವೆಲ್ಲವೂ ನಿನ್ನದೇ ಆಗಿರುವಾಗ ನನ್ನ ಮನೆಯಲ್ಲಿಯೇ ಇರಲು ನಿನಗೆ ಯಾವ ಚಿಂತೆಯಿದೆ?”
12352007 ಬ್ರಾಹ್ಮಣ ಉವಾಚ।
12352007a ಏವಮೇತನ್ಮಹಾಪ್ರಾಜ್ಞ ವಿಜ್ಞಾತಾರ್ಥ ಭುಜಂಗಮ।
12352007c ನಾತಿರಿಕ್ತಾಸ್ತ್ವಯಾ ದೇವಾಃ ಸರ್ವಥೈವ ಯಥಾತಥಮ್।।
ಬ್ರಾಹ್ಮಣನು ಹೇಳಿದನು: “ಮಹಾಪ್ರಾಜ್ಞ! ಭುಜಂಗಮ! ನೀನು ಹೇಳಿದಂತೆಯೇ ಆಗಲಿ. ದೇವತೆಗಳೂ ನಿನ್ನನ್ನು ಮೀರಲಾರರು. ಈ ಮಾತು ಸರ್ವಥಾ ಯಥಾರ್ಹವಾದುದು.
12352008a ಯ ಏವಾಹಂ ಸ ಏವ ತ್ವಮೇವಮೇತದ್ ಭುಜಂಗಮ1।
12352008c ಅಹಂ ಭವಾಂಶ್ಚ ಭೂತಾನಿ ಸರ್ವೇ ಸರ್ವತ್ರಗಾಃ ಸದಾ।।
ಭುಜಂಗಮ! ನಾನು ಯಾರೋ ಅವನು ನೀನೂ ಆಗಿರುವೆ. ನಾನು, ನೀನು ಮತ್ತು ಸರ್ವ ಭೂತಗಳೂ ಸದಾ ಸರ್ವತ್ರ ಸಂಚರಿಸುತ್ತಿರುತ್ತೇವೆ.
12352009a ಆಸೀತ್ತು ಮೇ ಭೋಗಪತೇ ಸಂಶಯಃ ಪುಣ್ಯಸಂಚಯೇ।
12352009c ಸೋಽಹಮುಂಚವ್ರತಂ ಸಾಧೋ ಚರಿಷ್ಯಾಮ್ಯರ್ಥದರ್ಶನಮ್।।
ಭೋಗಪತೇ! ಪುಣ್ಯಸಂಚಯದ ಕುರಿತು ನನಗೆ ಸಂಶಯವಿದ್ದಿತು. ಸಾಧೋ! ನನ್ನ ಗುರಿಯನ್ನು ಕಾಣಲು ನಾನು ಉಂಚವ್ರತವನ್ನು ಆಚರಿಸುತ್ತೇನೆ.
12352010a ಏಷ ಮೇ ನಿಶ್ಚಯಃ ಸಾಧೋ ಕೃತಃ ಕಾರಣವತ್ತರಃ।
12352010c ಆಮಂತ್ರಯಾಮಿ ಭದ್ರಂ ತೇ ಕೃತಾರ್ಥೋಽಸ್ಮಿ ಭುಜಂಗಮ।।
ಸಾಧೋ! ಭುಜಂಗಮ! ಇದು ನನ್ನ ನಿಶ್ಚಯವು. ನಾನು ಉದ್ದೇಶಿಸಿದ ಕಾರ್ಯವು ಮುಗಿಯಿತು. ನಿನಗೆ ಮಂಗಳವಾಗಲಿ. ಕೃತಾರ್ಥನಾಗಿದ್ದೇನೆ. ಹೊರಡಲು ಅನುಮತಿಯನ್ನು ನೀಡು.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ದ್ವಿಪಂಚಾಶದಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾಐವತ್ತೆರಡನೇ ಅಧ್ಯಾಯವು.-
ಸ ಏವ ತ್ವಂ ಸ ಏವಾಹಂ ಯೋಽಹಂ ಸ ತು ಭವಾನಪಿ। (ಭಾರತದರ್ಶನ). ↩︎