ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 341
ಸಾರ
ಮಹಾಪದ್ಮಪುರದಲ್ಲಿ ವಾಸಿಸುತ್ತಿದ್ದ ಓರ್ವ ಶ್ರೇಷ್ಠ ಬ್ರಾಹ್ಮಣನ ಸದಾಚಾರಗಳ ವರ್ಣನೆ ಮತ್ತು ಅವನ ಮನೆಗೆ ಅತಿಥಿಯೋರ್ವನ ಆಗಮನ (1-9).
12341001 ಭೀಷ್ಮ ಉವಾಚ।
12341001a ಆಸೀತ್ಕಿಲ ಕುರುಶ್ರೇಷ್ಠ ಮಹಾಪದ್ಮೇ ಪುರೋತ್ತಮೇ।
12341001c ಗಂಗಾಯಾ ದಕ್ಷಿಣೇ ತೀರೇ ಕಶ್ಚಿದ್ವಿಪ್ರಃ ಸಮಾಹಿತಃ।।
ಭೀಷ್ಮನು ಹೇಳಿದನು: “ಕುರುಶ್ರೇಷ್ಠ! ಗಂಗೆಯ ದಕ್ಷಿಣ ತೀರದಲ್ಲಿ ಉತ್ತಮ ಪುರವಾದ ಮಹಾಪದ್ಮದಲ್ಲಿ ಓರ್ವ ಸಮಾಹಿತ ವಿಪ್ರನಿದ್ದನು.
12341002a ಸೌಮ್ಯಃ ಸೋಮಾನ್ವಯೇ ವೇದೇ ಗತಾಧ್ವಾ ಚಿನ್ನಸಂಶಯಃ।
12341002c ಧರ್ಮನಿತ್ಯೋ ಜಿತಕ್ರೋಧೋ ನಿತ್ಯತೃಪ್ತೋ ಜಿತೇಂದ್ರಿಯಃ।।
ಸೋಮನ ಕುಲದಲ್ಲಿ ಹುಟ್ಟಿದ್ದ ಅವನು ಸೌಮ್ಯನು ವೇದಗಳಲ್ಲಿ ಪಾರಂಗತನೂ ಆಗಿದ್ದನು. ಆ ಜಿತೇಂದ್ರಿಯನು ಧರ್ಮನಿತ್ಯನೂ, ಜಿತಕ್ರೋಧನೂ ಮತ್ತು ನಿತ್ಯತೃಪ್ತನೂ ಆಗಿದ್ದನು.
12341003a ಅಹಿಂಸಾನಿರತೋ ನಿತ್ಯಂ ಸತ್ಯಃ ಸಜ್ಜನಸಂಮತಃ।
12341003c ನ್ಯಾಯಪ್ರಾಪ್ತೇನ ವಿತ್ತೇನ ಸ್ವೇನ ಶೀಲೇನ ಚಾನ್ವಿತಃ।।
ನಿತ್ಯವೂ ಅಹಿಂಸಾನಿರತನಾಗಿದ್ದ ಅವನು ಸತ್ಯವಂತನೂ ಸಜ್ಜನರ ಸಮ್ಮತಿಗೆ ಪಾತ್ರನೂ ಆಗಿದ್ದನು. ನ್ಯಾಯವಾಗಿ ದೊರಕಿದ ಸ್ವಂತ ಧನದಿಂದಲೇ ಜೀವನವನ್ನು ನಿರ್ವಹಿಸುತ್ತಿದ್ದನು. ಉತ್ತಮ ಶೀಲವಂತನೂ ಆಗಿದ್ದನು.
12341004a ಜ್ಞಾತಿಸಂಬಂಧಿವಿಪುಲೇ ಮಿತ್ರಾಪಾಶ್ರಯಸಂಮತೇ।
12341004c ಕುಲೇ ಮಹತಿ ವಿಖ್ಯಾತೇ ವಿಶಿಷ್ಟಾಂ ವೃತ್ತಿಮಾಸ್ಥಿತಃ।।
ಮಿತ್ರಾಪಾಶ್ರಯಸಂಮತವಾದ ವಿಪುಲ ಜ್ಞಾತಿಬಾಂಧವರಿಂದ ಕೂಡಿದ ಅತಿದೊಡ್ಡ ವಿಖ್ಯಾತ ಕುಲದಲ್ಲಿ ಹುಟ್ಟಿದ್ದ ಅವನು ತನ್ನ ವಿಶೇಷವೃತ್ತಿಯನ್ನು ಮಾಡಿಕೊಂಡಿದ್ದನು.
12341005a ಸ ಪುತ್ರಾನ್ಬಹುಲಾನ್ದೃಷ್ಟ್ವಾ ವಿಪುಲೇ ಕರ್ಮಣಿ ಸ್ಥಿತಃ।
12341005c ಕುಲಧರ್ಮಾಶ್ರಿತೋ ರಾಜನ್ಧರ್ಮಚರ್ಯಾಪರೋಽಭವತ್।।
ರಾಜನ್! ವಿಪುಲ ಕರ್ಮಗಳನ್ನು ಮಾಡುತ್ತಿದ್ದ ಅವನು ಅನೇಕ ಪುತ್ರ-ಪೌತ್ರರನ್ನು ನೋಡಿದನು. ಕುಲಧರ್ಮಾಶ್ರಿತನಾಗಿದ್ದ ಅವನು ಧರ್ಮಾಚರಣೆಯಲ್ಲಿಯೇ ನಿರತನಾಗಿದ್ದನು.
12341006a ತತಃ ಸ ಧರ್ಮಂ ವೇದೋಕ್ತಂ ಯಥಾಶಾಸ್ತ್ರೋಕ್ತಮೇವ ಚ।
12341006c ಶಿಷ್ಟಾಚೀರ್ಣಂ ಚ ಧರ್ಮಂ ಚ ತ್ರಿವಿಧಂ ಚಿಂತ್ಯ ಚೇತಸಾ।।
ಆಗ ಅವನು ವೇದೋಕ್ತ ಧರ್ಮ, ಶಾಸ್ತ್ರೋಕ್ತ ಧರ್ಮ ಮತ್ತು ಶಿಷ್ಟಾಚಾರದಿಂದ ಅನುಮೋದಿತ ಧರ್ಮ – ಈ ಮೂರು ವಿಧದ ಧರ್ಮಗಳ ಕುರಿತು ಆಲೋಚಿಸತೊಡಗಿದನು.
12341007a ಕಿಂ ನು ಮೇ ಸ್ಯಾಚ್ಚುಭಂ ಕೃತ್ವಾ ಕಿಂ ಕ್ಷಮಂ ಕಿಂ ಪರಾಯಣಮ್।
12341007c ಇತ್ಯೇವಂ ಖಿದ್ಯತೇ ನಿತ್ಯಂ ನ ಚ ಯಾತಿ ವಿನಿಶ್ಚಯಮ್।।
“ಇವುಗಳಲ್ಲಿ ಯಾವುದನ್ನು ಆಚರಿಸುವುದರಿಂದ ಶುಭವಾಗುತ್ತದೆ? ಯಾವುದನ್ನು ಮಾಡಬೇಕು? ಯಾವುದನ್ನು ಆಶ್ರಯಿಸಬೇಕು?” ಹೀಗೆ ನಿತ್ಯವೂ ಯೋಚಿಸಿ ಖಿನ್ನನಾಗುತ್ತಿದ್ದ ಅವನು ಯಾವ ನಿಶ್ಚಯಕ್ಕೂ ಬರಲಿಲ್ಲ.
12341008a ತಸ್ಯೈವಂ ಖಿದ್ಯಮಾನಸ್ಯ ಧರ್ಮಂ ಪರಮಮಾಸ್ಥಿತಃ।
12341008c ಕದಾ ಚಿದತಿಥಿಃ ಪ್ರಾಪ್ತೋ ಬ್ರಾಹ್ಮಣಃ ಸುಸಮಾಹಿತಃ।।
ಹೀಗೆ ಅವನು ಯೋಚಿಸಿ ಖಿನ್ನನಾಗಿದ್ದಾಗ ಒಮ್ಮೆ ಅವನಲ್ಲಿಗೆ ಪರಮಧರ್ಮಾತ್ಮ, ಏಕಾಗ್ರಚಿತ್ತ ಬ್ರಾಹ್ಮಣನೋರ್ವನು ಅತಿಥಿಯಾಗಿ ಆಗಮಿಸಿದನು.
12341009a ಸ ತಸ್ಮೈ ಸತ್ಕ್ರಿಯಾಂ ಚಕ್ರೇ ಕ್ರಿಯಾಯುಕ್ತೇನ ಹೇತುನಾ।
12341009c ವಿಶ್ರಾಂತಂ ಚೈನಮಾಸೀನಮಿದಂ ವಚನಮಬ್ರವೀತ್।।
ಅವನನ್ನು ಶಾಸ್ತ್ರೋಕ್ತ ವಿಧಿಯಿಂದ ಸತ್ಕರಿಸಿ, ಅವನು ಕುಳಿತು ವಿಶ್ರಾಂತನಾಗಲು ಅವನಿಗೆ ಈ ಮಾತನ್ನಾಡಿದನು.