ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 327
ಸಾರ
ಭಗವಂತನು ಬ್ರಹ್ಮಾದಿಗಳಿಗೆ ಉಪದೇಶಿಸಿದ ಪ್ರವೃತ್ತಿ-ನಿವೃತ್ತಿ ಧರ್ಮಗಳ ರಹಸ್ಯವನ್ನು ವ್ಯಾಸನು ತನ್ನ ಶಿಷ್ಯರಿಗೆ ಹೇಳಿದುದು (1-107).
12327001 ಜನಮೇಜಯ ಉವಾಚ1।
12327001a ಕಥಂ ಸ ಭಗವಾನ್ದೇವೋ ಯಜ್ಞೇಷ್ವಗ್ರಹರಃ ಪ್ರಭುಃ।
12327001c ಯಜ್ಞಧಾರೀ ಚ ಸತತಂ ವೇದವೇದಾಂಗವಿತ್ತಥಾ।।
ಜನಮೇಜಯನು ಹೇಳಿದನು: “ವೇದವೇದಾಂಗವಿದು ಪ್ರಭು ಭಗವಾನ್ ದೇವ ನಾರಾಯಣನು ಸತತವೂ ಯಜ್ಞದ ಅಗ್ರಭಾಗವವನ್ನು ಸ್ವೀಕರಿಸುವವನೂ ಯಜ್ಞಧಾರಿಯೂ ಹೇಗೆ ಆಗುತ್ತಾನೆ?
12327002a ನಿವೃತ್ತಂ ಚಾಸ್ಥಿತೋ ಧರ್ಮಂ ಕ್ಷೇಮೀ ಭಾಗವತಪ್ರಿಯಃ।
12327002c ಪ್ರವೃತ್ತಿಧರ್ಮಾನ್ವಿದಧೇ ಸ ಏವ ಭಗವಾನ್ಪ್ರಭುಃ।।
ಕ್ಷೇಮೀ ಭಾಗವತಪ್ರಿಯ ಭಗವಾನ್ ಪ್ರಭುವು ನಿವೃತ್ತಧರ್ಮದಲ್ಲಿಯೇ ನಿರತನಾಗಿರುವವನು. ಅವನೇ ಹೇಗೆ ಪ್ರವೃತ್ತಿಧರ್ಮಗಳ ವಿಧಾಯಕನಾಗಿದ್ದಾನೆ?
12327003a ಕಥಂ ಪ್ರವೃತ್ತಿಧರ್ಮೇಷು ಭಾಗಾರ್ಹಾ ದೇವತಾಃ ಕೃತಾಃ।
12327003c ಕಥಂ ನಿವೃತ್ತಿಧರ್ಮಾಶ್ಚ ಕೃತಾ ವ್ಯಾವೃತ್ತಬುದ್ಧಯಃ।।
ಅವನು ಹೇಗೆ ದೇವತೆಗಳನ್ನು ಪ್ರವೃತ್ತಿಧರ್ಮಗಳ ಭಾಗಾರ್ಹರನ್ನಾಗಿ ಮಾಡಿದನು? ಮತ್ತು ವ್ಯಾವೃತ್ತಬುದ್ಧಿ ಋಷಿಗಳನ್ನು ಯಾವ ಕಾರಣದಿಂದ ನಿವೃತ್ತಿಪರಾಯಣರನ್ನಾಗಿ ಮಾಡಿದನು?
12327004a ಏತಂ ನಃ ಸಂಶಯಂ ವಿಪ್ರ ಚಿಂಧಿ ಗುಹ್ಯಂ ಸನಾತನಮ್।
12327004c ತ್ವಯಾ ನಾರಾಯಣಕಥಾ ಶ್ರುತಾ ವೈ ಧರ್ಮಸಂಹಿತಾ।।
ವಿಪ್ರ! ನನ್ನ ಈ ಸಂಶಯವನ್ನು ಹೋಗಲಾಡಿಸು. ಗುಹ್ಯವೂ ಸನಾತನವೂ ಮತ್ತು ಧರ್ಮಸಂಹಿತೆಯೂ ಆದ ನಾರಾಯಣಕಥೆಯನ್ನು ನೀನು ಕೇಳಿದ್ದೀಯೆ.
12327005a ಇಮೇ ಸಬ್ರಹ್ಮಕಾ ಲೋಕಾಃ ಸಸುರಾಸುರಮಾನವಾಃ।
12327005c ಕ್ರಿಯಾಸ್ವಭ್ಯುದಯೋಕ್ತಾಸು ಸಕ್ತಾ ದೃಶ್ಯಂತಿ ಸರ್ವಶಃ।
ಬ್ರಹ್ಮಲೋಕಪರ್ಯಂತವಾದ ಸಮಸ್ತಲೋಕಗಳೂ, ಸುರಾಸುರಮಾನವರೂ ಎಲ್ಲಕಡೆಯೂ ಲೌಕಿಕ ಅಭ್ಯುದಯಕರ್ಮಗಳಲ್ಲಿಯೇ ಆಸಕ್ತರಾಗಿರುವುದು ಕಂಡುಬರುತ್ತದೆ.
12327005e ಮೋಕ್ಷಶ್ಚೋಕ್ತಸ್ತ್ವಯಾ ಬ್ರಹ್ಮನ್ನಿರ್ವಾಣಂ ಪರಮಂ ಸುಖಮ್।।
12327006a ಯೇ ಚ ಮುಕ್ತಾ ಭವಂತೀಹ ಪುಣ್ಯಪಾಪವಿವರ್ಜಿತಾಃ।
12327006c ತೇ ಸಹಸ್ರಾರ್ಚಿಷಂ ದೇವಂ ಪ್ರವಿಶಂತೀತಿ ಶುಶ್ರುಮಃ।।
ಬ್ರಹ್ಮನ್! ಆದರೆ ಮೋಕ್ಷವೇ ಪರಮಶಾಂತಿಸ್ವರೂಪವೆಂದು ನೀನು ಹೇಳುತ್ತಿರುವೆ. ಪುಣ್ಯಪಾಪವಿವರ್ಜಿತರಾಗಿ ಮುಕ್ತರಾದವರು ಸಹಸ್ರಾರ್ಚಿಷ ದೇವನನ್ನು ಪ್ರವೇಶಿಸುತ್ತಾರೆಂದು ನಿನ್ನಿಂದಲೇ ಕೇಳಿದ್ದೇನೆ.
12327007a ಅಹೋ ಹಿ ದುರನುಷ್ಠೇಯೋ ಮೋಕ್ಷಧರ್ಮಃ ಸನಾತನಃ।
12327007c ಯಂ ಹಿತ್ವಾ ದೇವತಾಃ ಸರ್ವಾ ಹವ್ಯಕವ್ಯಭುಜೋಽಭವನ್।।
ಅಯ್ಯೋ! ಈ ಸನಾತನ ಮೋಕ್ಷಧರ್ಮದ ಅನುಷ್ಠಾನವು ಅತ್ಯಂತ ದುಷ್ಕರವಾದುದು. ಆದುದರಿಂದಲೇ ಅದನ್ನು ತೊರೆದು ಸರ್ವ ದೇವತೆಗಳೂ ಹವ್ಯಕವ್ಯಗಳನ್ನು ಭೋಜಿಸುವವರಾದರು.
12327008a ಕಿಂ ನು ಬ್ರಹ್ಮಾ ಚ ರುದ್ರಶ್ಚ ಶಕ್ರಶ್ಚ ಬಲಭಿತ್ಪ್ರಭುಃ।
12327008c ಸೂರ್ಯಸ್ತಾರಾಧಿಪೋ ವಾಯುರಗ್ನಿರ್ವರುಣ ಏವ ಚ।
12327008e ಆಕಾಶಂ ಜಗತೀ ಚೈವ ಯೇ ಚ ಶೇಷಾ ದಿವೌಕಸಃ।।
12327009a ಪ್ರಲಯಂ ನ ವಿಜಾನಂತಿ ಆತ್ಮನಃ ಪರಿನಿರ್ಮಿತಮ್।
12327009c ತತಸ್ತೇ ನಾಸ್ಥಿತಾ ಮಾರ್ಗಂ ಧ್ರುವಮಕ್ಷಯಮವ್ಯಯಮ್।।
ಬ್ರಹ್ಮ, ರುದ್ರ, ಬಲಭಿತ್ ಪ್ರಭು ಶಕ್ರ, ಸೂರ್ಯ, ತಾರಾಧಿಪ, ವಾಯು, ಅಗ್ನಿ, ಮತ್ತು ವರುಣರು, ಆಕಾಶ-ಜಗತ್ತುಗಳೂ ಕೂಡ ಮತ್ತು ಉಳಿದ ದಿವೌಕಸರೂ ಪರಮಾತ್ಮನಿಂದಲೇ ನಿರ್ಮಿತವಾದ ತಮ್ಮ ಪ್ರಲಯವನ್ನು ತಿಳಿದಿಲ್ಲವೇ? ಅದನ್ನು ತಿಳಿದು ಅವರು ಶಾಶ್ವತವೂ ಅವಿನಾಶಿಯೂ ಮತ್ತು ಅಕ್ಷಯವೂ ಆದ ಮೋಕ್ಷಮಾರ್ಗವನ್ನು ಆಶ್ರಯಿಸಿಲ್ಲವೇ?
12327010a ಸ್ಮೃತ್ವಾ ಕಾಲಪರೀಮಾಣಂ ಪ್ರವೃತ್ತಿಂ ಯೇ ಸಮಾಸ್ಥಿತಾಃ।
12327010c ದೋಷಃ ಕಾಲಪರೀಮಾಣೇ ಮಹಾನೇಷ ಕ್ರಿಯಾವತಾಮ್।।
ಕಾಲಪರೀಮಾಣವನ್ನು ಸ್ಮರಿಸಿಕೊಂಡು ಪ್ರವೃತ್ತಿಮಾರ್ಗದಲ್ಲಿ ಸಮಾಸ್ಥಿತರಾದ ಕ್ರಿಯಾವಂತರಲ್ಲಿ ಈ ಕಾಲಪರೀಮಾಣದ ಮಹಾದೋಷವಿದೆಯಲ್ಲವೇ?
12327011a ಏತನ್ಮೇ ಸಂಶಯಂ ವಿಪ್ರ ಹೃದಿ ಶಲ್ಯಮಿವಾರ್ಪಿತಮ್।
12327011c ಚಿಂಧೀತಿಹಾಸಕಥನಾತ್ಪರಂ ಕೌತೂಹಲಂ ಹಿ ಮೇ।।
ವಿಪ್ರ! ಮುಳ್ಳಿನಂತೆ ನನ್ನ ಹೃದಯದಲ್ಲಿ ಚುಚ್ಚಿಕೊಂಡಿರುವ ಈ ಸಂಶಯವನ್ನು ಇತಿಹಾಸ ಕಥನದಿಂದ ಹೋಗಲಾಡಿಸು. ಇದರ ಕುರಿತು ನನಗೆ ಪರಮ ಕುತೂಹಲವಿದೆ.
12327012a ಕಥಂ ಭಾಗಹರಾಃ ಪ್ರೋಕ್ತಾ ದೇವತಾಃ ಕ್ರತುಷು ದ್ವಿಜ।
12327012c ಕಿಮರ್ಥಂ ಚಾಧ್ವರೇ ಬ್ರಹ್ಮನ್ನಿಜ್ಯಂತೇ ತ್ರಿದಿವೌಕಸಃ।।
ದ್ವಿಜ! ಬ್ರಹ್ಮನ್! ಕ್ರತುಗಳಲ್ಲಿ ದೇವತೆಗಳನ್ನು ಭಾಗಹರರೆಂದು ಹೇಗೆ ಹೇಳುತ್ತಾರೆ? ಯಾವಕಾರಣಕ್ಕಾಗಿ ಅಧ್ವರಗಳಲ್ಲಿ ತ್ರಿದಿವೌಕಸರಿಗೆ ಹೋಮಮಾಡಲಾಗುತ್ತದೆ?
12327013a ಯೇ ಚ ಭಾಗಂ ಪ್ರಗೃಹ್ಣಂತಿ ಯಜ್ಞೇಷು ದ್ವಿಜಸತ್ತಮ।
12327013c ತೇ ಯಜಂತೋ ಮಹಾಯಜ್ಞೈಃ ಕಸ್ಯ ಭಾಗಂ ದದಂತಿ ವೈ।।
ದ್ವಿಜಸತ್ತಮ! ಯಜ್ಞಗಳಲ್ಲಿ ಭಾಗವನ್ನು ಪ್ರತಿಗ್ರಹಿಸುವ ದೇವತೆಗಳು ತಾವೇ ಯಜಿಸುವ ಮಹಾಯಜ್ಞಗಳಲ್ಲಿ ಭಾಗವನ್ನು ಯಾರಿಗೆ ನೀಡುತ್ತಾರೆ?”
12327014 ವೈಶಂಪಾಯನ ಉವಾಚ।
12327014a ಅಹೋ ಗೂಢತಮಃ ಪ್ರಶ್ನಸ್ತ್ವಯಾ ಪೃಷ್ಟೋ ಜನೇಶ್ವರ।
12327014c ನಾತಪ್ತತಪಸಾ ಹ್ಯೇಷ ನಾವೇದವಿದುಷಾ ತಥಾ।
12327014e ನಾಪುರಾಣವಿದಾ ಚಾಪಿ ಶಕ್ಯೋ ವ್ಯಾಹರ್ತುಮಂಜಸಾ।।
ವೈಶಂಪಾಯನನು ಹೇಳಿದನು: “ಜನೇಶ್ವರ! ಅಹೋ! ಅತ್ಯಂತ ಗೂಢವಾದ ಪ್ರಶ್ನೆಯನ್ನೇ ನೀನು ಕೇಳಿರುವೆ! ತಪಸ್ಸನ್ನು ತಪಿಸಿರದ, ವೇದಗಳನ್ನು ತಿಳಿಯದಿರುವ ಮತ್ತು ಪುರಾಣಗಳನ್ನು ಅರ್ಥಮಾಡಿಕೊಂಡಿರದವನು ಅನಾಯಾಸವಾಗಿ ಇಂತಹ ಪ್ರಶ್ನೆಗಳನ್ನು ಕೇಳಲಾರನು.
12327015a ಹಂತ ತೇ ಕಥಯಿಷ್ಯಾಮಿ ಯನ್ಮೇ ಪೃಷ್ಟಃ ಪುರಾ ಗುರುಃ।
12327015c ಕೃಷ್ಣದ್ವೈಪಾಯನೋ ವ್ಯಾಸೋ ವೇದವ್ಯಾಸೋ ಮಹಾನೃಷಿಃ।।
ನಿಲ್ಲು! ಹಿಂದೆ ನಾನು ನನ್ನ ಗುರು ಮಹಾನೃಷಿ ವೇದವ್ಯಾಸ ಕೃಷ್ಣದ್ವೈಪಾಯನ ವ್ಯಾಸನಿಗೆ ಇದೇ ಪ್ರಶ್ನೆಯನ್ನು ಕೇಳಿದ್ದೆ. ಅದನ್ನೇ ನಿನಗೆ ಹೇಳುತ್ತೇನೆ.
12327016a ಸುಮಂತುರ್ಜೈಮಿನಿಶ್ಚೈವ ಪೈಲಶ್ಚ ಸುದೃಢವ್ರತಃ।
12327016c ಅಹಂ ಚತುರ್ಥಃ ಶಿಷ್ಯೋ ವೈ ಪಂಚಮಶ್ಚ ಶುಕಃ ಸ್ಮೃತಃ।।
ಸುಮಂತು, ಜೈಮಿನಿ, ಸುದೃಢವ್ರತ ಪೈಲ, ನಾಲ್ಕನೆಯವನಾದ ನಾನು ಮತ್ತು ಐದನೆಯವನು ಶುಕ ಇವರು ಅವನ ಶಿಷ್ಯರೆಂದು ತಿಳಿದಿದ್ದೀಯೆ.
12327017a ಏತಾನ್ಸಮಾಗತಾನ್ಸರ್ವಾನ್ಪಂಚ ಶಿಷ್ಯಾನ್ದಮಾನ್ವಿತಾನ್।
12327017c ಶೌಚಾಚಾರಸಮಾಯುಕ್ತಾನ್ಜಿತಕ್ರೋಧಾನ್ಜಿತೇಂದ್ರಿಯಾನ್।।
12327018a ವೇದಾನಧ್ಯಾಪಯಾಮಾಸ ಮಹಾಭಾರತಪಂಚಮಾನ್।
12327018c ಮೇರೌ ಗಿರಿವರೇ ರಮ್ಯೇ ಸಿದ್ಧಚಾರಣಸೇವಿತೇ।।
ಸಿದ್ಧಚಾರಣ ಸೇವಿತ ರಮ್ಯ ಗಿರಿವರ ಮೇರುವಿನ ಮೇಲೆ ದಮಾನ್ವಿತ ಶೌಚಾಚಾರಸಮಾಯುಕ್ತ ಜಿತಕ್ರೋಧರೂ ಜಿತೇಂದ್ರಿಯರೂ ಆದ ಈ ಐವರು ಶಿಷ್ಯರಿಗೂ ಒಟ್ಟಾಗಿ ವ್ಯಾಸನು ವೇದಾಧ್ಯಯನವನ್ನೂ ಮತ್ತು ಐದನೆಯದಾಗಿ ಮಹಾಭಾರತವನ್ನೂ ಅಧ್ಯಾಪನ ಮಾಡಿಸುತ್ತಿದ್ದನು.
12327019a ತೇಷಾಮಭ್ಯಸ್ಯತಾಂ ವೇದಾನ್ಕದಾ ಚಿತ್ಸಂಶಯೋಽಭವತ್।
12327019c ಏಷ ವೈ ಯಸ್ತ್ವಯಾ ಪೃಷ್ಟಸ್ತೇನ ತೇಷಾಂ ಪ್ರಕೀರ್ತಿತಃ।
12327019e ತತಃ ಶ್ರುತೋ ಮಯಾ ಚಾಪಿ ತವಾಖ್ಯೇಯೋಽದ್ಯ ಭಾರತ।।
ಭಾರತ! ಅವರೆಲ್ಲರಿಗೂ ವೇದಗಳ ಅಭ್ಯಾಸಮಾಡಿಸುತ್ತಿರುವಾಗ ಒಮ್ಮೆ ನನಗೂ ಈ ಸಂಶಯವು ಮೂಡಿತು. ನೀನು ಕೇಳಿದ ಪ್ರಶ್ನೆಯನ್ನೇ ನಾವೂ ಕೇಳಿದೆವು. ಅವನು ಹೇಳಿದುದನ್ನು ನಾನೂ ಕೇಳಿದೆ. ಅದನ್ನೇ ಇಂದು ನಿನಗೆ ಹೇಳುತ್ತೇನೆ.
12327020a ಶಿಷ್ಯಾಣಾಂ ವಚನಂ ಶ್ರುತ್ವಾ ಸರ್ವಾಜ್ಞಾನತಮೋನುದಃ।
12327020c ಪರಾಶರಸುತಃ ಶ್ರೀಮಾನ್ವ್ಯಾಸೋ ವಾಕ್ಯಮುವಾಚ ಹ।।
ಶಿಷ್ಯರ ವಚನವನ್ನು ಕೇಳಿ ಸರ್ವರ ಅಜ್ಞಾನತಮವನ್ನೂ ಹೋಗಲಾಡಿಸಬಲ್ಲ ಪರಾಶರಸುತ ಶ್ರೀಮಾನ್ ವ್ಯಾಸನು ಇದನ್ನು ಹೇಳಿದನು:
12327021a ಮಯಾ ಹಿ ಸುಮಹತ್ತಪ್ತಂ ತಪಃ ಪರಮದಾರುಣಮ್।
12327021c ಭೂತಂ ಭವ್ಯಂ ಭವಿಷ್ಯಚ್ಚ ಜಾನೀಯಾಮಿತಿ ಸತ್ತಮಾಃ।।
“ಸತ್ತಮರೇ! ನಾನು ಭೂತ-ಭವ್ಯ-ಭವಿಷ್ಯಗಳನ್ನು ತಿಳಿಯಬೇಕೆಂದು ಪರಮದಾರುಣ ಮಹಾ ತಪಸ್ಸನ್ನು ತಪಿಸಿದೆ.
12327022a ತಸ್ಯ ಮೇ ತಪ್ತತಪಸೋ ನಿಗೃಹೀತೇಂದ್ರಿಯಸ್ಯ ಚ।
12327022c ನಾರಾಯಣಪ್ರಸಾದೇನ ಕ್ಷೀರೋದಸ್ಯಾನುಕೂಲತಃ।।
12327023a ತ್ರೈಕಾಲಿಕಮಿದಂ ಜ್ಞಾನಂ ಪ್ರಾದುರ್ಭೂತಂ ಯಥೇಪ್ಸಿತಮ್।
ಇಂದ್ರಿಯಗಳನ್ನು ನಿಗ್ರಹಿಸಿ ತಪಸ್ಸನ್ನು ತಪಿಸುತ್ತಿರುವಾಗ ಕ್ಷೀರಸಾಗರದ ತೀರದಲ್ಲಿ ಅನುಕೂಲವಾದ ಮತ್ತು ನಾನು ಬಯಸಿದ ಈ ತ್ರಿಕಾಲಜ್ಞಾನವು ಪ್ರಾದುರ್ಭವಿಸಿತು.
12327023c ತಚ್ಚೃಣುಧ್ವಂ ಯಥಾಜ್ಞಾನಂ ವಕ್ಷ್ಯೇ ಸಂಶಯಮುತ್ತಮಮ್।
12327023e ಯಥಾ ವೃತ್ತಂ ಹಿ ಕಲ್ಪಾದೌ ದೃಷ್ಟಂ ಮೇ ಜ್ಞಾನಚಕ್ಷುಷಾ।।
ನಿಮ್ಮ ಉತ್ತಮ ಸಂಶಯವನ್ನು ಹೋಗಲಾಡಿಸಲು ನನ್ನ ಜ್ಞಾನದೃಷ್ಟಿಯಿಂದ ಕಂಡ ಕಲ್ಪಾದಿಯಲ್ಲಿ ನಡೆದುದನ್ನು ಯಥಾವತ್ತಾಗಿ ಹೇಳುತ್ತೇನೆ. ಕೇಳಿರಿ.
12327024a ಪರಮಾತ್ಮೇತಿ ಯಂ ಪ್ರಾಹುಃ ಸಾಂಖ್ಯಯೋಗವಿದೋ ಜನಾಃ।
12327024c ಮಹಾಪುರುಷಸಂಜ್ಞಾಂ ಸ ಲಭತೇ ಸ್ವೇನ ಕರ್ಮಣಾ।।
12327025a ತಸ್ಮಾತ್ಪ್ರಸೂತಮವ್ಯಕ್ತಂ ಪ್ರಧಾನಂ ತದ್ವಿದುರ್ಬುಧಾಃ।
ಸಾಂಖ್ಯಯೋಗವಿದ ಜನರು ಯಾರನ್ನು ಪರಮಾತ್ಮ ಎಂದು ಕರೆಯುತ್ತಾರೋ ಅವನು ತನ್ನದೇ ಕರ್ಮಗಳಿಂದ ಮಹಾಪುರುಷನೆಂದೂ ಸೂಚಿಸಲ್ಪಟ್ಟಿದ್ದಾನೆ. ಅವನಿಂದಲೇ ಅವ್ಯಕ್ತವು ಹುಟ್ಟಿಕೊಂಡಿತು. ಬುಧರು ಅದನ್ನು ಪ್ರಧಾನವೆಂದೂ ತಿಳಿದಿರುತ್ತಾರೆ.
12327025c ಅವ್ಯಕ್ತಾದ್ವ್ಯಕ್ತಮುತ್ಪನ್ನಂ ಲೋಕಸೃಷ್ಟ್ಯರ್ಥಮೀಶ್ವರಾತ್।
12327026a ಅನಿರುದ್ಧೋ ಹಿ ಲೋಕೇಷು ಮಹಾನಾತ್ಮೇತಿ ಕಥ್ಯತೇ।।
ಲೋಕಸೃಷ್ಟಿಯ ಸಲುವಾಗ ಈಶ್ವರ ಮಹಾಪುರುಷ ಮತ್ತು ಅವ್ಯಕ್ತಗಳಿಂದ ವ್ಯಕ್ತವು ಉತ್ಪನ್ನವಾಯಿತು. ಅವನೇ ಅನಿರುದ್ಧ. ಲೋಕಗಳಲ್ಲಿ ಅವನನ್ನು ಮಹಾತತ್ತ್ವವೆಂದೂ ಹೇಳುತ್ತಾರೆ.
12327026c ಯೋಽಸೌ ವ್ಯಕ್ತತ್ವಮಾಪನ್ನೋ ನಿರ್ಮಮೇ ಚ ಪಿತಾಮಹಮ್।
12327026E ಸೋಽಹಂಕಾರ ಇತಿ ಪ್ರೋಕ್ತಃ ಸರ್ವತೇಜೋಮಯೋ ಹಿ ಸಃ।।
ವ್ಯಕ್ತತ್ವವನ್ನು ಪಡೆದಿದ್ದ ಅವನೇ ಪಿತಾಮಹ ಬ್ರಹ್ಮನನ್ನು ನಿರ್ಮಿಸಿದನು. ಸರ್ವತೇಜೋಮಯನಾದ ಬ್ರಹ್ಮನನ್ನು ಅಹಂಕಾರ ಎಂದೂ ಹೇಳುತ್ತಾರೆ.
12327027a ಪೃಥಿವೀ ವಾಯುರಾಕಾಶಮಾಪೋ ಜ್ಯೋತಿಶ್ಚ ಪಂಚಮಮ್।
12327027c ಅಹಂಕಾರಪ್ರಸೂತಾನಿ ಮಹಾಭೂತಾನಿ ಭಾರತ2।।
ಪೃಥ್ವೀ, ವಾಯು, ಆಕಾಶ, ಆಪ ಮತ್ತು ಐದನೆಯ ಜ್ಯೋತಿ ಇವು ಅಹಂಕಾರದಿಂದ ಹುಟ್ಟಿರುವ ಪಂಚ ಮಹಾಭೂತಗಳು.
12327028a ಮಹಾಭೂತಾನಿ ಸೃಷ್ಟ್ವಾಥ ತದ್ಗುಣಾನ್ನಿರ್ಮಮೇ ಪುನಃ।
12327028c ಭೂತೇಭ್ಯಶ್ಚೈವ ನಿಷ್ಪನ್ನಾ ಮೂರ್ತಿಮಂತೋಽಷ್ಟ ತಾನ್ ಶೃಣು।।
ಮಹಾಭೂತಗಳನ್ನು ಸೃಷ್ಟಿಸಿ ಬ್ರಹ್ಮನು ಅವುಗಳ ಗುಣಗಳನ್ನೂ ಸೃಷ್ಟಿಸಿದನು. ಮಹಾಭೂತಗಳಿಂದ ಎಂತಹ ಮೂರ್ತಸ್ವರೂಪರು ಉತ್ಪನ್ನರಾದರು ಎನ್ನುವುದನ್ನು ಹೇಳುತ್ತೇನೆ. ಕೇಳು.
12327029a ಮರೀಚಿರಂಗಿರಾಶ್ಚಾತ್ರಿಃ ಪುಲಸ್ತ್ಯಃ ಪುಲಹಃ ಕ್ರತುಃ।
12327029c ವಸಿಷ್ಠಶ್ಚ ಮಹಾತ್ಮಾ ವೈ ಮನುಃ ಸ್ವಾಯಂಭುವಸ್ತಥಾ।
12327029e ಜ್ಞೇಯಾಃ ಪ್ರಕೃತಯೋಽಷ್ಟೌ ತಾ ಯಾಸು ಲೋಕಾಃ ಪ್ರತಿಷ್ಠಿತಾಃ।।
ಮರೀಚಿ, ಅಂಗಿರಸ, ಅತ್ರಿ, ಪುಲಸ್ತ್ಯ, ಪುಲಹ, ಕ್ರತು, ಮಹಾತ್ಮಾ ವಸಿಷ್ಠ ಮತ್ತು ಸ್ವಾಯಂಭುವ ಮನು. ಇವರನ್ನು ಅಷ್ಟಪ್ರಕೃತಿಗಳೆಂದು ತಿಳಿಯಬೇಕು. ಇವರಲ್ಲಿಯೇ ಎಲ್ಲ ಲೋಕಗಳೂ ಪ್ರತಿಷ್ಠಿತವಾಗಿವೆ.
12327030a ವೇದಾನ್ವೇದಾಂಗಸಂಯುಕ್ತಾನ್ಯಜ್ಞಾನ್ಯಜ್ಞಾಂಗಸಂಯುತಾನ್।
12327030c ನಿರ್ಮಮೇ ಲೋಕಸಿದ್ಧ್ಯರ್ಥಂ ಬ್ರಹ್ಮಾ ಲೋಕಪಿತಾಮಹಃ।
12327030e ಅಷ್ಟಾಭ್ಯಃ ಪ್ರಕೃತಿಭ್ಯಶ್ಚ ಜಾತಂ ವಿಶ್ವಮಿದಂ ಜಗತ್।।
ಲೋಕ ಪಿತಾಮಹ ಬ್ರಹ್ಮನು ಲೋಕಸಿಧ್ಯರ್ಥಕ್ಕಾಗಿ ವೇದ-ವೇದಾಂಗಗಳಿಂದಲೂ ಯಜ್ಞಾಂಗಗಳಿಂದಲೂ ಸಂಯುಕ್ತವಾದ ಯಜ್ಞಗಳನ್ನು ಸೃಷ್ಟಿಸಿದನು. ಆ ಅಷ್ಟ ಪ್ರಕೃತಿಗಳಿಂದಲೇ ಈ ವಿಶ್ವವನ್ನೇ ವ್ಯಾಪಿಸಿರುವ ಜಗತ್ತು ಹುಟ್ಟಿಕೊಂಡಿದೆ.
12327031a ರುದ್ರೋ ರೋಷಾತ್ಮಕೋ ಜಾತೋ ದಶಾನ್ಯಾನ್ಸೋಽಸೃಜತ್ಸ್ವಯಮ್।
12327031c ಏಕಾದಶೈತೇ ರುದ್ರಾಸ್ತು ವಿಕಾರಾಃ ಪುರುಷಾಃ ಸ್ಮೃತಾಃ।।
ರುದ್ರನು ರೋಷದಿಂದ ಹುಟ್ಟಿದನು. ಹುಟ್ಟುತ್ತಲೇ ಅವನು ಹತ್ತು ಅನ್ಯ ರುದ್ರರನ್ನು ಸೃಷ್ಟಿಸಿದನು. ಈ ಏಕಾದಶ ರುದ್ರರು ವಿಕಾರ ಪುರುಷರೆಂದು ಕರೆಯಲ್ಪಡುತ್ತಾರೆ.
12327032a ತೇ ರುದ್ರಾಃ ಪ್ರಕೃತಿಶ್ಚೈವ ಸರ್ವೇ ಚೈವ ಸುರರ್ಷಯಃ।
12327032c ಉತ್ಪನ್ನಾ ಲೋಕಸಿದ್ಧ್ಯರ್ಥಂ ಬ್ರಹ್ಮಾಣಂ ಸಮುಪಸ್ಥಿತಾಃ।।
ಲೋಕಸಿದ್ಧಿಗಾಗಿ ಉತ್ಪನ್ನರಾದ ಆ ಎಲ್ಲ ರುದ್ರರೂ, ಪ್ರಕೃತಿಗಳೂ ಮತ್ತು ಸುರರ್ಷಿಗಳೂ ಬ್ರಹ್ಮನ ಬಳಿಹೋಗಿ ಹೇಳಿದರು:
12327033a ವಯಂ ಹಿ ಸೃಷ್ಟಾ ಭಗವಂಸ್ತ್ವಯಾ ವೈ ಪ್ರಭವಿಷ್ಣುನಾ।
12327033c ಯೇನ ಯಸ್ಮಿನ್ನಧೀಕಾರೇ ವರ್ತಿತವ್ಯಂ ಪಿತಾಮಹ।।
“ಭಗವನ್! ಪಿತಾಮಹ! ವಿಷ್ಣುವಿನಿಂದ ಹುಟ್ಟಿದ ನಿನ್ನಿಂದ ನಾವು ಸೃಷ್ಟಿಸಲ್ಪಟ್ಟಿದ್ದೇವೆ. ಯಾರು ಯಾವ ಅಧಿಕಾರದಲ್ಲಿರಬೇಕು?
12327034a ಯೋಽಸೌ ತ್ವಯಾ ವಿನಿರ್ದಿಷ್ಟೋ ಅಧಿಕಾರೋಽರ್ಥಚಿಂತಕಃ।
12327034c ಪರಿಪಾಲ್ಯಃ ಕಥಂ ತೇನ ಸೋಽಧಿಕಾರೋಽಧಿಕಾರಿಣಾ।।
ಅರ್ಥಚಿಂತಕವಾದ ಯಾವ ಅಧಿಕಾರವನ್ನು ನೀನು ನಿರ್ದಿಷ್ಟಪಡಿಸುತ್ತೀಯೋ ಆ ಅಧಿಕಾರವನ್ನು ಅಧಿಕಾರಿಯು ಹೇಗೆ ನಿರ್ವಹಿಸಬೇಕು?
12327035a ಪ್ರದಿಶಸ್ವ ಬಲಂ ತಸ್ಯ ಯೋಽಧಿಕಾರಾರ್ಥಚಿಂತಕಃ।
12327035c ಏವಮುಕ್ತೋ ಮಹಾದೇವೋ ದೇವಾಂಸ್ತಾನಿದಮಬ್ರವೀತ್।।
ಆ ಅರ್ಥಚಿಂತಕ ಅಧಿಕಾರಿಗೆ ಬಲವನ್ನೂ ಪ್ರದಾನಿಸು.” ಹೀಗೆ ಹೇಳಲು ಮಹಾದೇವ ಬ್ರಹ್ಮನು ದೇವತೆಗಳಿಗೆ ಹೇಳಿದನು:
12327036a ಸಾಧ್ವಹಂ ಜ್ಞಾಪಿತೋ ದೇವಾ ಯುಷ್ಮಾಭಿರ್ಭದ್ರಮಸ್ತು ವಃ।
12327036c ಮಮಾಪ್ಯೇಷಾ ಸಮುತ್ಪನ್ನಾ ಚಿಂತಾ ಯಾ ಭವತಾಂ ಮತಾ।।
“ದೇವತೆಗಳೇ! ಒಳ್ಳೆಯದಾಯಿತು! ನೀವು ನನಗೆ ಈ ವಿಷಯದ ಕುರಿತು ಜ್ಞಾಪಿಸಿದಿರಿ. ನಿಮಗೆ ಮಂಗಳವಾಗಲಿ! ನಿಮ್ಮಲ್ಲಿರುವ ಈ ಚಿಂತೆಯು ನನ್ನಲ್ಲಿಯೂ ಉತ್ಪನ್ನವಾಗಿತ್ತು.
12327037a ಲೋಕತಂತ್ರಸ್ಯ ಕೃತ್ಸ್ನಸ್ಯ ಕಥಂ ಕಾರ್ಯಃ ಪರಿಗ್ರಹಃ।
12327037c ಕಥಂ ಬಲಕ್ಷಯೋ ನ ಸ್ಯಾದ್ಯುಷ್ಮಾಕಂ ಹ್ಯಾತ್ಮನಶ್ಚ ಮೇ।।
ಲೋಕತಂತ್ರವನ್ನು ಸಂಪೂರ್ಣವಾಗಿ ಹೇಗೆ ನಡೆಸಬೇಕು? ನಿಮ್ಮ ಅಥವಾ ನನ್ನ ಬಲವು ಕ್ಷಯವಾಗದಂತೆ ಹೇಗೆ ಆ ಕಾರ್ಯವನ್ನು ನಿರ್ವಹಿಸಬೇಕು ಎಂಬ ಚಿಂತೆಯು ನನ್ನಲ್ಲಿಯೂ ಇದೆ.
12327038a ಇತಃ ಸರ್ವೇಽಪಿ ಗಚ್ಚಾಮಃ ಶರಣಂ ಲೋಕಸಾಕ್ಷಿಣಮ್।
12327038c ಮಹಾಪುರುಷಮವ್ಯಕ್ತಂ ಸ ನೋ ವಕ್ಷ್ಯತಿ ಯದ್ಧಿತಮ್।।
ಇಲ್ಲಿಂದ ನಾವೆಲ್ಲರೂ ಲೋಕಸಾಕ್ಷಿ, ಮಹಾಪುರುಷ, ಅವ್ಯಕ್ತನ ಶರಣು ಹೋಗೋಣ. ಅವನು ನಮಗೆ ಹಿತವಾದುದನ್ನು ಹೇಳುತ್ತಾನೆ.”
12327039a ತತಸ್ತೇ ಬ್ರಹ್ಮಣಾ ಸಾರ್ಧಮೃಷಯೋ ವಿಬುಧಾಸ್ತಥಾ।
12327039c ಕ್ಷೀರೋದಸ್ಯೋತ್ತರಂ ಕೂಲಂ ಜಗ್ಮುರ್ಲೋಕಹಿತಾರ್ಥಿನಃ।।
ಆಗ ಲೋಕಹಿತಾರ್ಥಿಗಳಾಗಿದ್ದ ಆ ಋಷಿಗಳು ಮತ್ತು ವಿಬುಧರು ಬ್ರಹ್ಮನನ್ನೊಡಗೂಡಿ ಕ್ಷೀರಸಾಗರದ ಉತ್ತರ ತೀರಕ್ಕೆ ಹೋದರು.
12327040a ತೇ ತಪಃ ಸಮುಪಾತಿಷ್ಠನ್ಬ್ರಹ್ಮೋಕ್ತಂ ವೇದಕಲ್ಪಿತಮ್।
12327040c ಸ ಮಹಾನಿಯಮೋ ನಾಮ ತಪಶ್ಚರ್ಯಾ ಸುದಾರುಣಾ।।
ಅಲ್ಲಿ ಅವರು ಬ್ರಹ್ಮನು ಹೇಳಿದ್ದ ವೇದಕಲ್ಪಿತವಾದ ತಪಸ್ಸಿನಲ್ಲಿ ತೊಡಗಿದರು. ಮಹಾನಿಯಮ ಎಂಬ ಹೆಸರಿನ ಆ ತಪಸ್ಸು ಆಚರಿಸಲು ಅತ್ಯಂತ ದಾರುಣವಾಗಿತ್ತು.
12327041a ಊರ್ಧ್ವಂ ದೃಷ್ಟಿರ್ಬಾಹವಶ್ಚ ಏಕಾಗ್ರಂ ಚ ಮನೋಽಭವತ್।
12327041c ಏಕಪಾದಸ್ಥಿತಾಃ ಸಮ್ಯಕ್ಕಾಷ್ಠಭೂತಾಃ ಸಮಾಹಿತಾಃ।।
ದೃಷ್ಟಿಯನ್ನು ಮೇಲಕ್ಕಿಟ್ಟು ಬಾಹುಗಳನ್ನು ಮೇಲಕ್ಕೆತ್ತಿದ್ದ ಅವರ ಮನಸ್ಸು ಏಕಾಗ್ರವಾಗಿತ್ತು. ಸಮಾಹಿತರಾದ ಅವರು ಒಂದೇ ಕಾಲಮೇಲೆ ನಿಂತಿದ್ದರು ಮತ್ತು ಕಟ್ಟಿಗೆಯಂತೆ ನಿಶ್ಚೇಷ್ಟರಾಗಿದ್ದರು.
12327042a ದಿವ್ಯಂ ವರ್ಷಸಹಸ್ರಂ ತೇ ತಪಸ್ತಪ್ತ್ವಾ ತದುತ್ತಮಮ್।
12327042c ಶುಶ್ರುವುರ್ಮಧುರಾಂ ವಾಣೀಂ ವೇದವೇದಾಂಗಭೂಷಿತಾಮ್।।
ಸಹಸ್ರ ದಿವ್ಯ ವರ್ಷಗಳ ಪರ್ಯಂತ ಆ ಉತ್ತಮ ತಪಸ್ಸನ್ನು ತಪಿಸುತ್ತಿರಲು, ನಂತರ ಅವರು ವೇದವೇದಾಂಗಭೂಷಿತವಾದ ಮಧುರ ವಾಣಿಯನ್ನು ಕೇಳಿದರು:
12327043a ಭೋ ಭೋಃ ಸಬ್ರಹ್ಮಕಾ ದೇವಾ ಋಷಯಶ್ಚ ತಪೋಧನಾಃ।
12327043c ಸ್ವಾಗತೇನಾರ್ಚ್ಯ ವಃ ಸರ್ವಾನ್ಶ್ರಾವಯೇ ವಾಕ್ಯಮುತ್ತಮಮ್।।
“ಭೋ! ಭೋ! ಬ್ರಹ್ಮಾದಿ ದೇವತೆಗಳೇ! ತಪೋಧನ ಋಷಿಗಳೇ! ನಿಮ್ಮೆಲ್ಲರನ್ನೂ ಸ್ವಾಗತಿಸಿ ಅರ್ಚಿಸಿ ಈ ಉತ್ತಮ ವಾಕ್ಯವನ್ನು ಹೇಳುತ್ತಿದ್ದೇನೆ.
12327044a ವಿಜ್ಞಾತಂ ವೋ ಮಯಾ ಕಾರ್ಯಂ ತಚ್ಚ ಲೋಕಹಿತಂ ಮಹತ್।
12327044c ಪ್ರವೃತ್ತಿಯುಕ್ತಂ ಕರ್ತವ್ಯಂ ಯುಷ್ಮತ್ಪ್ರಾಣೋಪಬೃಂಹಣಮ್।।
ನೀವು ಯಾವ ಮಹಾ ಲೋಕಹಿತ ಕಾರ್ಯಕ್ಕಾಗಿ ಇಲ್ಲಿಗೆ ಬಂದಿರುವಿರೆಂದು ನಾನು ತಿಳಿದಿದ್ದೇನೆ. ನೀವು ಪ್ರಾಣಪೋಷಣೆಗೂ ಶಕ್ತಿವರ್ಧನೆಗೂ ಪ್ರವೃತ್ತಿಯುಕ್ತವಾದ ಕರ್ತವ್ಯಗಳನ್ನು ಮಾಡಬೇಕು.
12327045a ಸುತಪ್ತಂ ವಸ್ತಪೋ ದೇವಾ ಮಮಾರಾಧನಕಾಮ್ಯಯಾ।
12327045c ಭೋಕ್ಷ್ಯಥಾಸ್ಯ ಮಹಾಸತ್ತ್ವಾಸ್ತಪಸಃ ಫಲಮುತ್ತಮಮ್।।
ಮಹಾಸತ್ತ್ವರೇ! ದೇವತೆಗಳೇ! ನನ್ನನ್ನು ಆರಾಧಿಸಲು ಬಯಸಿ ಉತ್ತಮ ತಪಸ್ಸನ್ನು ತಪಿಸಿದ್ದೀರಿ. ಆ ತಪಸ್ಸಿನ ಉತ್ತಮ ಫಲವನ್ನು ನೀವು ಭೋಗಿಸುವಿರಿ.
12327046a ಏಷ ಬ್ರಹ್ಮಾ ಲೋಕಗುರುಃ ಸರ್ವಲೋಕಪಿತಾಮಹಃ।
12327046c ಯೂಯಂ ಚ ವಿಬುಧಶ್ರೇಷ್ಠಾ ಮಾಂ ಯಜಧ್ವಂ ಸಮಾಹಿತಾಃ।।
ಸರ್ವಲೋಕಪಿತಾಮಹ ಲೋಕಗುರು ಈ ಬ್ರಹ್ಮ ಮತ್ತು ನೀವು ವಿಬುಧಶ್ರೇಷ್ಠರು ಸಮಾಹಿತರಾಗಿ ನನ್ನ ಕುರಿತು ಯಜ್ಞವನ್ನು ಮಾಡಿರಿ.
12327047a ಸರ್ವೇ ಭಾಗಾನ್ಕಲ್ಪಯಧ್ವಂ ಯಜ್ಞೇಷು ಮಮ ನಿತ್ಯಶಃ।
12327047c ತಥಾ ಶ್ರೇಯೋ ವಿಧಾಸ್ಯಾಮಿ ಯಥಾಧೀಕಾರಮೀಶ್ವರಾಃ।।
ಈಶ್ವರರೇ! ಆ ಯಜ್ಞದಲ್ಲಿ ನಿತ್ಯವೂ ನನಗಾಗಿ ಭಾಗವನ್ನು ಕಲ್ಪಿಸಿರಿ. ಆಗ ನಿಮ್ಮ ಅಧಿಕಾರಕ್ಕೆ ತಕ್ಕಂತೆ ನಿಮಗೆ ಶ್ರೇಯವಾದುದನ್ನು ಹೇಳುತ್ತೇನೆ.”
12327048a ಶ್ರುತ್ವೈತದ್ದೇವದೇವಸ್ಯ ವಾಕ್ಯಂ ಹೃಷ್ಟತನೂರುಹಾಃ।
12327048c ತತಸ್ತೇ ವಿಬುಧಾಃ ಸರ್ವೇ ಬ್ರಹ್ಮಾ ತೇ ಚ ಮಹರ್ಷಯಃ।।
ದೇವದೇವನ ಆ ಮಾತನ್ನು ಕೇಳುತ್ತಲೇ ಸರ್ವ ವಿಬುಧರೂ, ಬ್ರಹ್ಮನೂ ಮತ್ತು ಮಹರ್ಷಿಗಳೂ ಹರ್ಷದಿಂದ ರೋಮಾಂಚಿತರಾದರು.
12327049a ವೇದದೃಷ್ಟೇನ ವಿಧಿನಾ ವೈಷ್ಣವಂ ಕ್ರತುಮಾಹರನ್।
12327049c ತಸ್ಮಿನ್ಸತ್ರೇ ತದಾ ಬ್ರಹ್ಮಾ ಸ್ವಯಂ ಭಾಗಮಕಲ್ಪಯತ್।
12327049e ದೇವಾ ದೇವರ್ಷಯಶ್ಚೈವ ಸರ್ವೇ ಭಾಗಾನಕಲ್ಪಯನ್।।
ವೇದದೃಷ್ಟ ವಿಧಿಯಿಂದ ಅವರು ವೈಷ್ಣವ ಯಜ್ಞವನ್ನು ಮಾಡಿದರು. ಅಲ್ಲಿ ಆಗ ಸ್ವಯಂ ಬ್ರಹ್ಮನು ಯಜ್ಞಭಾಗವನ್ನು ಕಲ್ಪಿಸಿದನು. ದೇವತೆಗಳೂ ದೇವರ್ಷಿಗಳು ಎಲ್ಲರೂ ಕೂಡ ಯಜ್ಞಭಾಗಗಳನ್ನು ಕಲ್ಪಿಸಿದರು.
12327050a ತೇ ಕಾರ್ತಯುಗಧರ್ಮಾಣೋ ಭಾಗಾಃ ಪರಮಸತ್ಕೃತಾಃ।
12327050c ಪ್ರಾಪುರಾದಿತ್ಯವರ್ಣಂ ತಂ ಪುರುಷಂ ತಮಸಃ ಪರಮ್।
12327050e ಬೃಹಂತಂ ಸರ್ವಗಂ ದೇವಮೀಶಾನಂ ವರದಂ ಪ್ರಭುಮ್।।
ಕೃತಯುಗದ ಧರ್ಮದಂತೆ ಆ ಯಜ್ಞಭಾಗಗಳು ಪರಮ ಸತ್ಕೃತಗೊಂಡು ಆದಿತ್ಯವರ್ಣ, ಪುರುಷ, ತಮಸ್ಸನ್ನು ಹೋಗಲಾಡಿಸುವ, ಬೃಹಂತ, ಸರ್ವಗ, ದೇವ, ಈಶಾನ, ವರದ ಪ್ರಭುವಿಗೆ ಪ್ರಾಪ್ತವಾದವು.
12327051a ತತೋಽಥ ವರದೋ ದೇವಸ್ತಾನ್ಸರ್ವಾನಮರಾನ್ ಸ್ಥಿತಾನ್।
12327051c ಅಶರೀರೋ ಬಭಾಷೇದಂ ವಾಕ್ಯಂ ಖಸ್ಥೋ ಮಹೇಶ್ವರಃ।।
ಆಗ ವರದ ಮಹೇಶ್ವರನು ಅಲ್ಲಿ ನಿಂತಿದ್ದ ದೇವತೆಗಳನ್ನೂ ಸರ್ವ ಅಮರರನ್ನೂ ಉದ್ದೇಶಿಸಿ ಅಶರೀರಿಯಾಗಿಯೇ ಈ ಮಾತನ್ನಾಡಿದನು:
12327052a ಯೇನ ಯಃ ಕಲ್ಪಿತೋ ಭಾಗಃ ಸ ತಥಾ ಸಮುಪಾಗತಃ।
12327052c ಪ್ರೀತೋಽಹಂ ಪ್ರದಿಶಾಮ್ಯದ್ಯ ಫಲಮಾವೃತ್ತಿಲಕ್ಷಣಮ್।।
“ಯಾರು ಯಾವ ಭಾಗವನ್ನು ಕಲ್ಪಿಸಿದ್ದರೋ ಅವು ಹಾಗೆಯೇ ನನಗೆ ತಲುಪಿವೆ. ನಾನು ಪ್ರೀತನಾಗಿದ್ದೇನೆ. ಈಗ ನಾನು ನಿಮಗೆ ಪುನರಾವೃತ್ತಿಗೊಳ್ಳುವ ಫಲವನ್ನು ಅನುಗ್ರಹಿಸುತ್ತೇನೆ.
12327053a ಏತದ್ವೋ ಲಕ್ಷಣಂ ದೇವಾ ಮತ್ಪ್ರಸಾದಸಮುದ್ಭವಮ್।
12327053c ಯೂಯಂ ಯಜ್ಞೈರಿಜ್ಯಮಾನಾಃ ಸಮಾಪ್ತವರದಕ್ಷಿಣೈಃ।
12327053e ಯುಗೇ ಯುಗೇ ಭವಿಷ್ಯಧ್ವಂ ಪ್ರವೃತ್ತಿಫಲಭೋಗಿನಃ।।
ದೇವತೆಗಳೇ! ನನ್ನ ಪ್ರಸಾದದಿಂದ ಉಂಟಾಗುವ ಈ ಪುನರಾವೃತ್ತಿಗೊಳ್ಳುವ ಫಲದಿಂದಾಗಿ ನೀವೇ ಯುಗ ಯುಗದಲ್ಲಿಯೂ ಆಪ್ತವರದಕ್ಷಿಣೆಗಳಿಂದ ಕೂಡಿದ ಯಜ್ಞಗಳನ್ನು ಯಾಜಿಸುವಿರಿ ಮತ್ತು ಪ್ರವೃತ್ತಿಫಲದ ಭೋಗಿಗಳಾಗುವಿರಿ.
12327054a ಯಜ್ಞೈರ್ಯೇ ಚಾಪಿ ಯಕ್ಷ್ಯಂತಿ ಸರ್ವಲೋಕೇಷು ವೈ ಸುರಾಃ।
12327054c ಕಲ್ಪಯಿಷ್ಯಂತಿ ವೋ ಭಾಗಾಂಸ್ತೇ ನರಾ ವೇದಕಲ್ಪಿತಾನ್।।
ಸುರರೇ! ಎಲ್ಲ ಲೋಕಗಳಲ್ಲಿ ಯಜ್ಞದ ಮೂಲಕ ಯಾರು ನನ್ನನ್ನು ಆರಾಧಿಸಲು ಬಯಸುವರೋ ಆ ನರರು ವೇದಕಲ್ಪಿತ ಭಾಗಗಳನ್ನು ನಿಮಗೇ ಕಲ್ಪಿಸುತ್ತಾರೆ.
12327055a ಯೋ ಮೇ ಯಥಾ ಕಲ್ಪಿತವಾನ್ಭಾಗಮಸ್ಮಿನ್ಮಹಾಕ್ರತೌ।
12327055c ಸ ತಥಾ ಯಜ್ಞಭಾಗಾರ್ಹೋ ವೇದಸೂತ್ರೇ ಮಯಾ ಕೃತಃ।।
ಈ ಮಹಾಕ್ರತುವಿನಲ್ಲಿ ಯಾವ ದೇವತೆಯು ನನಗೆ ಎಷ್ಟು ಯಜ್ಞಭಾಗವನ್ನು ಕಲ್ಪಿಸಿರುವನೋ ಅಷ್ಟೇ ಪ್ರಮಾಣದ ಯಜ್ಞಭಾಗವನ್ನು ಪಡೆದುಕೊಳ್ಳಲು ಅವನು ಅರ್ಹನಾಗುತ್ತಾನೆ. ಇದನ್ನು ನಾನು ವೇದಸೂತ್ರಗಳಲ್ಲಿ ಹೇಳಿಟ್ಟಿದ್ದೇನೆ.
12327056a ಯೂಯಂ ಲೋಕಾನ್ಧಾರಯಧ್ವಂ3 ಯಜ್ಞಭಾಗಫಲೋದಿತಾಃ।
12327056c ಸರ್ವಾರ್ಥಚಿಂತಕಾ ಲೋಕೇ ಯಥಾಧೀಕಾರನಿರ್ಮಿತಾಃ।।
ಯಜ್ಞಫಲಗಳನ್ನು ನೀಡುತ್ತಾ ನೀವು ಲೋಕಗಳನ್ನು ಪೋಷಿಸಿರಿ. ನಿಮ್ಮ ಅಧಿಕಾರಕ್ಕೆ ಸರಿಯಾಗಿ ಎಲ್ಲರ ಮನೋರಥಗಳ ಕುರಿತೂ ಚಿಂತಿಸಿರಿ.
12327057a ಯಾಃ ಕ್ರಿಯಾಃ ಪ್ರಚರಿಷ್ಯಂತಿ ಪ್ರವೃತ್ತಿಫಲಸತ್ಕೃತಾಃ।
12327057c ತಾಭಿರಾಪ್ಯಾಯಿತಬಲಾ ಲೋಕಾನ್ವೈ ಧಾರಯಿಷ್ಯಥ।।
ಪ್ರವೃತ್ತಿಫಲಗಳಿಂದ ಕೂಡಿದ ಯಾವ ಕ್ರಿಯೆಗಳು ಪ್ರಚುರಗೊಳ್ಳುವವೋ ಅವುಗಳಿಂದ ಬಲವನ್ನು ವೃದ್ಧಿಗೊಳಿಸಿಕೊಂಡು ಆ ಬಲದಿಂದಲೇ ಲೋಕಗಳನ್ನು ಧಾರಣೆಮಾಡುವಿರಿ.
12327058a ಯೂಯಂ ಹಿ ಭಾವಿತಾ ಲೋಕೇ ಸರ್ವಯಜ್ಞೇಷು ಮಾನವೈಃ।
12327058c ಮಾಂ ತತೋ ಭಾವಯಿಷ್ಯಧ್ವಮೇಷಾ ವೋ ಭಾವನಾ ಮಮ।।
ಲೋಕದಲ್ಲಿಯ ಮಾನವರ ಸರ್ವಯಜ್ಞಗಳಲ್ಲಿಯೂ ನೀವು ಸಂತುಷ್ಟರಾಗಿ ನಂತರ ನೀವು ನನ್ನನ್ನು ಈ ವೈಷ್ಣವಯಜ್ಞದ ಮೂಲಕ ಪರಿತುಷ್ಟನನ್ನಾಗಿ ಮಾಡಿರಿ. ಇದು ನಾನು ನಿಮಗೆ ನೀಡುವ ಉಪದೇಶ.
12327059a ಇತ್ಯರ್ಥಂ ನಿರ್ಮಿತಾ ವೇದಾ ಯಜ್ಞಾಶ್ಚೌಷಧಿಭಿಃ ಸಹ।
12327059c ಏಭಿಃ ಸಮ್ಯಕ್ ಪ್ರಯುಕ್ತೈರ್ಹಿ ಪ್ರೀಯಂತೇ ದೇವತಾಃ ಕ್ಷಿತೌ।।
ಇದಕ್ಕಾಗಿಯೇ ನಾನು ವೇದಗಳನ್ನೂ ಔಷಧಿಗಳೊಂದಿಗೆ ಯಜ್ಞಗಳನ್ನೂ ನಿರ್ಮಿಸಿದ್ದೇನೆ. ಭೂಮಿಯ ಮೇಲೆ ಇವುಗಳನ್ನು ಚೆನ್ನಾಗಿ ಅನುಷ್ಠಾನಮಾಡುವುದರಿಂದ ದೇವತೆಗಳು ಪ್ರೀತರಾಗುತ್ತಾರೆ.
12327060a ನಿರ್ಮಾಣಮೇತದ್ಯುಷ್ಮಾಕಂ ಪ್ರವೃತ್ತಿಗುಣಕಲ್ಪಿತಮ್।
12327060c ಮಯಾ ಕೃತಂ ಸುರಶ್ರೇಷ್ಠಾ ಯಾವತ್ಕಲ್ಪಕ್ಷಯಾದಿತಿ।
12327060e ಚಿಂತಯಧ್ವಂ ಲೋಕಹಿತಂ ಯಥಾಧೀಕಾರಮೀಶ್ವರಾಃ।।
ಈಶ್ವರರೇ! ಪ್ರವೃತ್ತಿಗುಣಕಲ್ಪಿತವಾದ ಯಜ್ಞಗಳನ್ನು ನಿಮಗಾಗಿಯೇ ನಾನು ನಿರ್ಮಿಸಿದ್ದೇನೆ. ಸುರಶ್ರೇಷ್ಠರೇ! ಕಲ್ಪಾಂತದವರೆಗೂ ನೀವು ಈ ಯಜ್ಞಾದಿಗಳಿಂದ ಬಲಗಳನ್ನು ಹೊಂದಿ ನಿಮ್ಮ ನಿಮ್ಮ ಅಧಿಕಾರಗಳಿಗೆ ಅನುಸಾರವಾಗಿ ಲೋಕಹಿತವನ್ನೇ ಚಿಂತಿಸುತ್ತಿರಿ.
12327061a ಮರೀಚಿರಂಗಿರಾಶ್ಚಾತ್ರಿಃ ಪುಲಸ್ತ್ಯಃ ಪುಲಹಃ ಕ್ರತುಃ।
12327061c ವಸಿಷ್ಠ ಇತಿ ಸಪ್ತೈತೇ ಮಾನಸಾ ನಿರ್ಮಿತಾ ಹಿ ವೈ।।
ಮರೀಚಿ, ಅಂಗಿರಸ, ಅತ್ರಿ, ಪುಲಸ್ತ್ಯ, ಪುಲಹ, ಕ್ರತು ಮತ್ತು ವಸಿಷ್ಠ ಈ ಎಳು ಮಂದಿ ಮನಸ್ಸಿನಿಂದಲೇ ನಿರ್ಮಾಣಗೊಂಡಿರುವವರು.
12327062a ಏತೇ ವೇದವಿದೋ ಮುಖ್ಯಾ ವೇದಾಚಾರ್ಯಾಶ್ಚ ಕಲ್ಪಿತಾಃ।
12327062c ಪ್ರವೃತ್ತಿಧರ್ಮಿಣಶ್ಚೈವ ಪ್ರಾಜಾಪತ್ಯೇನ ಕಲ್ಪಿತಾಃ।।
ಇವರು ವೇದವೇದರೂ ಮತ್ತು ಮುಖ್ಯ ವೇದಾಚಾರ್ಯರೂ ಆಗಿ ಕಲ್ಪಿತರಾಗಿದ್ದಾರೆ. ಪ್ರವೃತ್ತಿಧರ್ಮಿಗಳು ಮತ್ತು ಪ್ರಜಾಪತಿಯ ಸ್ಥಾನದಲ್ಲಿರುವವರೂ ಆಗಿದ್ದಾರೆ.
12327063a ಅಯಂ ಕ್ರಿಯಾವತಾಂ ಪಂಥಾ ವ್ಯಕ್ತೀಭೂತಃ ಸನಾತನಃ।
12327063c ಅನಿರುದ್ಧ ಇತಿ ಪ್ರೋಕ್ತೋ ಲೋಕಸರ್ಗಕರಃ ಪ್ರಭುಃ।।
ಕ್ರಿಯಾವಂತರ ಈ ಸನಾತನ ಮಾರ್ಗವು ವ್ಯಕ್ತೀಭೂತನಾಗಿ ಲೋಕಸೃಷ್ಟಿಕರ ಪ್ರಭು ಅನಿರುದ್ಧ ಎಂದೆನಿಸಿಕೊಂಡಿದ್ದಾನೆ.
12327064a ಸನಃ ಸನತ್ಸುಜಾತಶ್ಚ ಸನಕಃ ಸಸನಂದನಃ।
12327064c ಸನತ್ಕುಮಾರಃ ಕಪಿಲಃ ಸಪ್ತಮಶ್ಚ ಸನಾತನಃ।।
12327065a ಸಪ್ತೈತೇ ಮಾನಸಾಃ ಪ್ರೋಕ್ತಾ ಋಷಯೋ ಬ್ರಹ್ಮಣಃ ಸುತಾಃ।
12327065c ಸ್ವಯಮಾಗತವಿಜ್ಞಾನಾ ನಿವೃತ್ತಂ ಧರ್ಮಮಾಸ್ಥಿತಾಃ।।
ಸನ, ಸನತ್ಸುಜಾತ, ಸನಕ, ಸನಂದನ, ಸನತ್ಕುಮಾರ, ಮತ್ತು ಏಳನೆಯವನು ಸನಾತನ ಕಪಿಲ. ಈ ಏಳು ಋಷಿಗಳು ಬ್ರಹ್ಮನ ಮಾನಸಪುತ್ರರೆಂದು ಕರೆಯಲ್ಪಟ್ಟಿದ್ದಾರೆ. ಹುಟ್ಟಿನಿಂದಲೇ ಸ್ವಯಂ ವಿಜ್ಞಾನವನ್ನು ಹೊಂದಿದ್ದ ಇವರು ನಿವೃತ್ತಿಧರ್ಮವನ್ನು ಆಶ್ರಯಿಸಿದರು.
12327066a ಏತೇ ಯೋಗವಿದೋ ಮುಖ್ಯಾಃ ಸಾಂಖ್ಯಧರ್ಮವಿದಸ್ತಥಾ।
12327066c ಆಚಾರ್ಯಾ ಮೋಕ್ಷಶಾಸ್ತ್ರೇ ಚ ಮೋಕ್ಷಧರ್ಮಪ್ರವರ್ತಕಾಃ।।
ಇವರೆಲ್ಲರೂ ಯೋಗವಿದರು. ಸಾಂಖ್ಯಧರ್ಮವನ್ನು ತಿಳಿದವರಲ್ಲಿ ಮುಖ್ಯರು. ಮೋಕ್ಷಶಾಸ್ತ್ರದ ಆಚಾರ್ಯರು ಮತ್ತು ಮೋಕ್ಷಧರ್ಮಪ್ರವರ್ತಕರು.
12327067a ಯತೋಽಹಂ ಪ್ರಸೃತಃ ಪೂರ್ವಮವ್ಯಕ್ತಾತ್ತ್ರಿಗುಣೋ ಮಹಾನ್।
12327067c ತಸ್ಮಾತ್ಪರತರೋ ಯೋಽಸೌ ಕ್ಷೇತ್ರಜ್ಞ ಇತಿ ಕಲ್ಪಿತಃ।
ಹಿಂದೆ ಅವ್ಯಕ್ತಪ್ರಕೃತಿಯಿಂದ ತ್ರಿಗುಣಗಳು, ಮಹತ್ತು ಮತ್ತು ಅಹಂಕಾರಗಳು ಹುಟ್ಟಿದವು. ಆ ಅವ್ಯಕ್ತಪ್ರಕೃತಿಗಿಂತಲೂ ಶ್ರೇಷ್ಠತರನಾದ ನನ್ನನ್ನು ಕ್ಷೇತ್ರಜ್ಞ ಎಂದು ಕಲ್ಪಿಸುತ್ತಾರೆ.
12327067e ಸೋಽಹಂ ಕ್ರಿಯಾವತಾಂ ಪಂಥಾಃ ಪುನರಾವೃತ್ತಿದುರ್ಲಭಃ।।
12327068a ಯೋ ಯಥಾ ನಿರ್ಮಿತೋ ಜಂತುರ್ಯಸ್ಮಿನ್ಯಸ್ಮಿಂಶ್ಚ ಕರ್ಮಣಿ।
12327068c ಪ್ರವೃತ್ತೌ ವಾ ನಿವೃತ್ತೌ ವಾ ತತ್ಫಲಂ ಸೋಽಶ್ನುತೇಽವಶಃ।।
ಆ ನಾನು ಪುರಾವೃತ್ತಿಹೊಂದುವ ಕರ್ಮಮಾರ್ಗಿಗಳಿಗೆ ದುರ್ಲಭನಾಗಿದ್ದೇನೆ. ಜಂತುವು ಹೇಗೆ ನಿರ್ಮಿತವಾಗಿದೆಯೋ ಆ ಕರ್ಮಗಳಲ್ಲಿ – ಪ್ರವೃತ್ತಿ ಕರ್ಮಗಳಾಗಲಿ ಅಥವಾ ನಿವೃತ್ತಿ ಕರ್ಮಗಳಾಗಲಿ – ಇರುವ ಫಲವನ್ನು ಅವಶ್ಯವಾಗಿ ಪಡೆದುಕೊಳ್ಳುತ್ತದೆ.
12327069a ಏಷ ಲೋಕಗುರುರ್ಬ್ರಹ್ಮಾ ಜಗದಾದಿಕರಃ ಪ್ರಭುಃ।
12327069c ಏಷ ಮಾತಾ ಪಿತಾ ಚೈವ ಯುಷ್ಮಾಕಂ ಚ ಪಿತಾಮಹಃ।
12327069e ಮಯಾನುಶಿಷ್ಟೋ ಭವಿತಾ ಸರ್ವಭೂತವರಪ್ರದಃ।।
ಈ ಲೋಕಗುರು ಬ್ರಹ್ಮ ಜಗದಾದಿಕರ ಪ್ರಭುವು ನಿಮಗೆ ತಾಯಿಯೂ, ತಂದೆಯೂ ಮತ್ತು ಪಿತಾಮಹನೂ ಆಗಿದ್ದಾನೆ. ನನ್ನಿಂದ ಆಜ್ಞಾಪಿಸಲ್ಪಟ್ಟ ಇವನು ಸರ್ವಭೂತಗಳಿಗೂ ವರಪ್ರದನಾಗುತ್ತಾನೆ.
12327070a ಅಸ್ಯ ಚೈವಾನುಜೋ4 ರುದ್ರೋ ಲಲಾಟಾದ್ಯಃ ಸಮುತ್ಥಿತಃ।
12327070c ಬ್ರಹ್ಮಾನುಶಿಷ್ಟೋ ಭವಿತಾ ಸರ್ವತ್ರಸವರಪ್ರದಃ।।
ಇವನ ಅನುಜ ಲಲಾಟದಿಂದ ಹುಟ್ಟಿದ ರುದ್ರನು ಬ್ರಹ್ಮನ ಆಜ್ಞಾನುಸಾರ ಸರ್ವತ್ರ ಉತ್ತಮ ವರಪ್ರದನಾಗುತ್ತಾನೆ.
12327071a ಗಚ್ಚಧ್ವಂ ಸ್ವಾನಧೀಕಾರಾಂಶ್ಚಿಂತಯಧ್ವಂ ಯಥಾವಿಧಿ।
12327071c ಪ್ರವರ್ತಂತಾಂ ಕ್ರಿಯಾಃ ಸರ್ವಾಃ ಸರ್ವಲೋಕೇಷು ಮಾಚಿರಮ್।।
ನೀವಿನ್ನು ಹೊರಡಿರಿ! ನಿಮ್ಮ ಅಧಿಕಾರಗಳ ಕುರಿತು ಚಿಂತಿಸಿ. ಸರ್ವಲೋಕಗಳಲ್ಲಿ ಬೇಗನೇ ಎಲ್ಲ ಕ್ರಿಯೆಗಳೂ ಪ್ರಾರಂಭಗೊಳ್ಳಲಿ.
12327072a ಪ್ರದೃಶ್ಯಂತಾಂ5 ಚ ಕರ್ಮಾಣಿ ಪ್ರಾಣಿನಾಂ ಗತಯಸ್ತಥಾ।
12327072c ಪರಿನಿರ್ಮಿತಕಾಲಾನಿ ಆಯೂಂಷಿ ಚ ಸುರೋತ್ತಮಾಃ।।
ಸುರೋತ್ತಮರೇ! ಪ್ರಾಣಿಗಳಿಗೆ ಕರ್ಮಗಳನ್ನೂ, ಅವುಗಳಿಂದ ಒದಗುವ ಗತಿಗಳನ್ನೂ, ಮತ್ತು ಪೂರ್ಣಕಾಲದವರೆಗಿನ ಆಯುಸ್ಸನ್ನೂ ದಯಪಾಲಿಸಿ.
12327073a ಇದಂ ಕೃತಯುಗಂ ನಾಮ ಕಾಲಃ ಶ್ರೇಷ್ಠಃ ಪ್ರವರ್ತತೇ।
12327073c ಅಹಿಂಸ್ಯಾ ಯಜ್ಞಪಶವೋ ಯುಗೇಽಸ್ಮಿನ್ನೈತದನ್ಯಥಾ।
12327073e ಚತುಷ್ಪಾತ್ಸಕಲೋ ಧರ್ಮೋ ಭವಿಷ್ಯತ್ಯತ್ರ ವೈ ಸುರಾಃ।।
ಈಗ ಕೃತಯುಗವೆಂಬ ಶ್ರೇಷ್ಠ ಕಾಲವು ನಡೆಯುತ್ತಿದೆ. ಈ ಯುಗದಲ್ಲಿ ಯಜ್ಞಪಶುವಿನ ಹಿಂಸೆಯು ನಡೆಯುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಆಗುವುದೇ ಇಲ್ಲ. ಸುರರೇ! ಈ ಕಾಲದಲ್ಲಿ ಧರ್ಮನು ತನ್ನ ನಾಲ್ಕೂ ಕಾಲುಗಳ ಮೇಲೆ ನಿಂತಿರುತ್ತಾನೆ.
12327074a ತತಸ್ತ್ರೇತಾಯುಗಂ ನಾಮ ತ್ರಯೀ ಯತ್ರ ಭವಿಷ್ಯತಿ।
12327074c ಪ್ರೋಕ್ಷಿತಾ ಯತ್ರ ಪಶವೋ ವಧಂ ಪ್ರಾಪ್ಸ್ಯಂತಿ ವೈ ಮಖೇ।
12327074e ತತ್ರ ಪಾದಚತುರ್ಥೋ ವೈ ಧರ್ಮಸ್ಯ ನ ಭವಿಷ್ಯತಿ।।
ಯಾವಾಗ ಧರ್ಮವು ಮೂರೇ ಕಾಲುಗಳ ಮೇಲೆ ನಿಂತಿರುತ್ತದೆಯೋ ಆ ಕಾಲಕ್ಕೆ ತ್ರೇತಾಯುಗವೆನ್ನುವ ಹೆಸರು. ಯಜ್ಞಗಳಲ್ಲಿ ಪ್ರೋಕ್ಷಿತಗೊಂಡ ಪಶುಗಳನ್ನು ವಧಿಸಲಾಗುತ್ತದೆ. ಆಗ ಧರ್ಮನ ನಾಲ್ಕನೆಯ ಕಾಲು ಇರುವುದಿಲ್ಲ.
12327075a ತತೋ ವೈ ದ್ವಾಪರಂ ನಾಮ ಮಿಶ್ರಃ ಕಾಲೋ ಭವಿಷ್ಯತಿ।
12327075c ದ್ವಿಪಾದಹೀನೋ ಧರ್ಮಶ್ಚ ಯುಗೇ ತಸ್ಮಿನ್ ಭವಿಷ್ಯತಿ।।
ಅನಂತರ ದ್ವಾಪರ ಎಂಬ ಹೆಸರಿನ ಮಿಶ್ರಕಾಲವು ಉಂಟಾಗುತ್ತದೆ. ಆ ಯುಗದಲ್ಲಿ ಧರ್ಮನು ಎರಡು ಕಾಲುಗಳನ್ನು ಕಳೆದುಕೊಂಡಿರುತ್ತಾನೆ.
12327076a ತತಸ್ತಿಷ್ಯೇಽಥ ಸಂಪ್ರಾಪ್ತೇ ಯುಗೇ ಕಲಿಪುರಸ್ಕೃತೇ।
12327076c ಏಕಪಾದಸ್ಥಿತೋ ಧರ್ಮೋ ಯತ್ರ ತತ್ರ ಭವಿಷ್ಯತಿ।।
ಅದು ಕಳೆದನಂತರ ಪುಷ್ಯನಕ್ಷತ್ರದಲ್ಲಿ ಕಲಿಯುಗವು ಪ್ರಾರಂಭವಾಗುತ್ತದೆ. ಆ ಕಾಲದಲ್ಲಿ ಧರ್ಮನು ಒಂದೇ ಕಾಲಿನ ಮೇಲೆ ನಿಂತಿರುತ್ತಾನೆ.”
12327077 ದೇವಾ ಊಚುಃ।
12327077a ಏಕಪಾದಸ್ಥಿತೇ ಧರ್ಮೇ ಯತ್ರಕ್ವಚನಗಾಮಿನಿ।
12327077c ಕಥಂ ಕರ್ತವ್ಯಮಸ್ಮಾಭಿರ್ಭಗವಂಸ್ತದ್ವದಸ್ವ ನಃ।।
ದೇವತೆಗಳು ಹೇಳಿದರು: “ನಿನ್ನ ಮಾತಿನಂತೆ ಧರ್ಮನು ಒಂದೇ ಕಾಲಿನ ಮೇಲೆ ನಿಂತಿರುವಾಗ ನಮ್ಮ ಕರ್ತವ್ಯವು ಏನಾಗಿರಬೇಕು ಎನ್ನುವುದನ್ನು ನಮಗೆ ಹೇಳು.”
12327078 ಶ್ರೀಭಗವಾನುವಾಚ।
12327078a ಯತ್ರ ವೇದಾಶ್ಚ ಯಜ್ಞಾಶ್ಚ ತಪಃ ಸತ್ಯಂ ದಮಸ್ತಥಾ।
12327078c ಅಹಿಂಸಾಧರ್ಮಸಂಯುಕ್ತಾಃ ಪ್ರಚರೇಯುಃ ಸುರೋತ್ತಮಾಃ।
12327078e ಸ ವೈ ದೇಶಃ ಸೇವಿತವ್ಯೋ ಮಾ ವೋಽಧರ್ಮಃ ಪದಾ ಸ್ಪೃಶೇತ್।।
ಶ್ರೀಭಗವಂತನು ಹೇಳಿದನು: “ಸುರೋತ್ತಮರೇ! ಎಲ್ಲಿ ವೇದಗಳು, ಯಜ್ಞಗಳು, ತಪಸ್ಸು, ಸತ್ಯ, ದಮ, ಅಹಿಂಸಾಧರ್ಮಗಳು ಪ್ರಚಲಿತವಾಗಿರುವೋ ಆ ದೇಶಗಳಲ್ಲಿಯೇ ನೆಲೆಸಿ. ಅಧರ್ಮವು ನಿಮ್ಮನ್ನು ಕಾಲಿನಿಂದಲೂ ಮುಟ್ಟದಿರಲಿ!””
12327079 ವ್ಯಾಸ ಉವಾಚ।
12327079a ತೇಽನುಶಿಷ್ಟಾ ಭಗವತಾ ದೇವಾಃ ಸರ್ಷಿಗಣಾಸ್ತಥಾ।
12327079c ನಮಸ್ಕೃತ್ವಾ ಭಗವತೇ ಜಗ್ಮುರ್ದೇಶಾನ್ಯಥೇಪ್ಸಿತಾನ್।।
ವ್ಯಾಸನು ಹೇಳಿದನು: “ಆ ಭಗವಂತನಿಂದ ಹೀಗೆ ಉಪದೇಷಿಸಲ್ಪಟ್ಟ ದೇವತೆಗಳು ಋಷಿಗಣಗಳೊಂದಿಗೆ ಭಗವಂತನಿಗೆ ನಮಸ್ಕರಿಸಿ ಬಯಸಿದಲ್ಲಿಗೆ ಹೋದರು.
12327080a ಗತೇಷು ತ್ರಿದಿವೌಕಃಸು ಬ್ರಹ್ಮೈಕಃ ಪರ್ಯವಸ್ಥಿತಃ।
12327080c ದಿದೃಕ್ಷುರ್ಭಗವಂತಂ ತಮನಿರುದ್ಧತನೌ ಸ್ಥಿತಮ್।।
ತ್ರಿದಿವಗಳಲ್ಲಿ ವಾಸಿಸುವವರು ಹೊರಟುಹೋದನಂತರ ಬ್ರಹ್ಮನು ಒಬ್ಬನು ಅಲ್ಲುಳಿದನು. ಅವನು ಅನಿರುದ್ಧನ ರೂಪದಲ್ಲಿದ್ದ ಭಗವಂತನನ್ನು ಕಾಣಲು ಬಯಸಿದನು.
12327081a ತಂ ದೇವೋ ದರ್ಶಯಾಮಾಸ ಕೃತ್ವಾ ಹಯಶಿರೋ ಮಹತ್।
12327081c ಸಾಂಗಾನಾವರ್ತಯನ್ವೇದಾನ್ಕಮಂಡಲುಗಣಿತ್ರಧೃಕ್।।
ಆಗ ದೇವನು ಕಮಂಡಲು-ತ್ರಿದಂಡಗಳನ್ನು ಧರಿಸಿ ಷಡಂಗಗಳೊಂದಿಗೆ ವೇದಗಳನ್ನು ಪಠಿಸುತ್ತಾ ಮಹಾ ಹಯಗ್ರೀವ ರೂಪವನ್ನು ಧರಿಸಿ ಬ್ರಹ್ಮನಿಗೆ ದರ್ಶನವನ್ನಿತ್ತನು.
12327082a ತತೋಽಶ್ವಶಿರಸಂ ದೃಷ್ಟ್ವಾ ತಂ ದೇವಮಮಿತೌಜಸಮ್।
12327082c ಲೋಕಕರ್ತಾ ಪ್ರಭುರ್ಬ್ರಹ್ಮಾ ಲೋಕಾನಾಂ ಹಿತಕಾಮ್ಯಯಾ।।
12327083a ಮೂರ್ಧ್ನಾ ಪ್ರಣಮ್ಯ ವರದಂ ತಸ್ಥೌ ಪ್ರಾಂಜಲಿರಗ್ರತಃ।
12327083c ಸ ಪರಿಷ್ವಜ್ಯ ದೇವೇನ ವಚನಂ ಶ್ರಾವಿತಸ್ತದಾ।।
ಆ ಅಶ್ವಶಿರಸ ದೇವ ಅಮಿತೌಜಸನನ್ನು ನೋಡಿ ಲೋಕಕರ್ತಾ ಪ್ರಭು ಬ್ರಹ್ಮನು ಲೋಕಗಳ ಹಿತವನ್ನು ಬಯಸಿ ತಲೆಬಾಗಿ ವರದನನ್ನು ನಮಸ್ಕರಿಸಿ ಅಂಜಲೀಬದ್ಧನಾಗಿ ಎದಿರು ನಿಂತುಕೊಂಡನು. ದೇವನು ಅವನನ್ನು ಆಲಂಗಿಸಿ ಈ ಮಾತುಗಳನ್ನಾಡಿದನು.
12327084a ಲೋಕಕಾರ್ಯಗತೀಃ ಸರ್ವಾಸ್ತ್ವಂ ಚಿಂತಯ ಯಥಾವಿಧಿ।
12327084c ಧಾತಾ ತ್ವಂ ಸರ್ವಭೂತಾನಾಂ ತ್ವಂ ಪ್ರಭುರ್ಜಗತೋ ಗುರುಃ।
“ನೀನು ಎಲ್ಲ ಲೋಕಗಳ ಸಮಸ್ತಕರ್ಮಗಳನ್ನೂ ಮತ್ತು ಆ ಕರ್ಮಗಳ ಅನುಷ್ಠಾನದಿಂದ ಪ್ರಾಪ್ತವಾಗುವ ಗತಿಯನ್ನೂ ವಿಧಿಪೂರ್ವಕವಾಗಿ ಚಿಂತಿಸು. ನೀನು ಸರ್ವಭೂತಗಳಿಗೂ ಧಾತನೂ, ಪ್ರಭುವೂ ಮತ್ತು ಗುರುವೂ ಆಗಿರುವೆ.
12327084e ತ್ವಯ್ಯಾವೇಶಿತಭಾರೋಽಹಂ ಧೃತಿಂ ಪ್ರಾಪ್ಸ್ಯಾಮ್ಯಥಾಂಜಸಾ।।
12327085a ಯದಾ ಚ ಸುರಕಾರ್ಯಂ ತೇ ಅವಿಷಹ್ಯಂ ಭವಿಷ್ಯತಿ।
12327085c ಪ್ರಾದುರ್ಭಾವಂ ಗಮಿಷ್ಯಾಮಿ ತದಾತ್ಮಜ್ಞಾನದೇಶಿಕಃ।।
ನಿನ್ನ ಮೇಲೆ ಈ ಪ್ರಪಂಚದ ಭಾರವನ್ನು ವಹಿಸಿ ನಾನು ಶೀಘ್ರವಾಗಿ ನಿರ್ವೃತ್ತನಾಗುತ್ತೇನೆ. ಯಾವಗ ನಿನಗೆ ಸುರಕಾರ್ಯವು ಅಸಾಧ್ಯವೆನಿಸುವುದೋ ಆಗ ಆತ್ಮಜ್ಞಾನದೇಶಿಕನಾಗಿ ಪ್ರಾದುರ್ಭವಿಸುತ್ತೇನೆ.”
12327086a ಏವಮುಕ್ತ್ವಾ ಹಯಶಿರಾಸ್ತತ್ರೈವಾಂತರಧೀಯತ।
12327086c ತೇನಾನುಶಿಷ್ಟೋ ಬ್ರಹ್ಮಾಪಿ ಸ್ವಂ ಲೋಕಮಚಿರಾದ್ಗತಃ।।
ಹೀಗೆ ಹೇಳಿ ಹಯಶಿರನು ಅಲ್ಲಿಯೇ ಅಂತರ್ಧಾನನಾದನು. ಅವನಿಂದ ಆಜ್ಞಾಪಿಸಲ್ಪಟ್ಟ ಬ್ರಹ್ಮನೂ ಕೂಡ ಕೂಡಲೇ ತನ್ನ ಲೋಕಕ್ಕೆ ತೆರಳಿದನು.
12327087a ಏವಮೇಷ ಮಹಾಭಾಗಃ ಪದ್ಮನಾಭಃ ಸನಾತನಃ।
12327087c ಯಜ್ಞೇಷ್ವಗ್ರಹರಃ ಪ್ರೋಕ್ತೋ ಯಜ್ಞಧಾರೀ ಚ ನಿತ್ಯದಾ।।
ಹೀಗೆ ಮಹಾಭಾಗ ಸನಾತನ ಪದ್ಮನಾಭನು ಯಜ್ಞಗಳಲ್ಲಿ ಅಗ್ರಹರನೆಂದೂ, ನಿತ್ಯವೂ ಯಜ್ಞಧಾರಿಯೆಂದೂ ಕರೆಯಲ್ಪಟ್ಟಿದ್ದಾನೆ.
12327088a ನಿವೃತ್ತಿಂ ಚಾಸ್ಥಿತೋ ಧರ್ಮಂ ಗತಿಮಕ್ಷಯಧರ್ಮಿಣಾಮ್।
12327088c ಪ್ರವೃತ್ತಿಧರ್ಮಾನ್ವಿದಧೇ ಕೃತ್ವಾ ಲೋಕಸ್ಯ ಚಿತ್ರತಾಮ್।।
ಅವನು ನಿವೃತ್ತಿಧರ್ಮದಲ್ಲಿ ಸ್ಥಿತನಾಗಿದ್ದಾನೆ. ಅಕ್ಷಯಧರ್ಮಿಗಳಿಗೆ ಸದ್ಗತಿಯನ್ನು ನೀಡುತ್ತಾನೆ. ಲೋಕಕ್ಕೆ ವಿಚಿತ್ರ ಚಿತ್ರವೃತ್ತಿಯನ್ನುಂಟುಮಾಡಿ ಅದಕ್ಕೆ ಅನುಗುಣವಾದ ಪ್ರವೃತ್ತಿಧರ್ಮಗಳನ್ನು ರೂಪಿಸಿರುವವನು.
12327089a ಸ ಆದಿಃ ಸ ಮಧ್ಯಃ ಸ ಚಾಂತಃ ಪ್ರಜಾನಾಂ ಸ ಧಾತಾ ಸ ಧೇಯಃ ಸ ಕರ್ತಾ ಸ ಕಾರ್ಯಮ್।
12327089c ಯುಗಾಂತೇ ಸ ಸುಪ್ತಃ ಸುಸಂಕ್ಷಿಪ್ಯ ಲೋಕಾನ್ ಯುಗಾದೌ ಪ್ರಬುದ್ಧೋ ಜಗದ್ಧ್ಯುತ್ಸಸರ್ಜ।।
ಅವನು ಪ್ರಜೆಗಳ ಆದಿಯು. ಮಧ್ಯನು ಮತ್ತು ಅಂತ್ಯನು. ಅವನು ಧಾತಾ. ಅವನು ಧೇಯ. ಅವನು ಕರ್ತ ಮತ್ತು ಅವನೇ ಕಾರ್ಯ. ಯುಗದ ಅಂತ್ಯದಲ್ಲಿ ಲೋಕಗಳನ್ನು ತನ್ನಲ್ಲಿಯೇ ಸಂಕ್ಷಿಪ್ತಗೊಳಿಸಿ ಮಲಗುವವನು. ಯುಗದ ಆದಿಯಲ್ಲಿ ಎಚ್ಚೆತ್ತು ಜಗತ್ತನ್ನು ಹೊರಹೊಮ್ಮಿಸುತ್ತಾನೆ.
12327090a ತಸ್ಮೈ ನಮಧ್ವಂ ದೇವಾಯ ನಿರ್ಗುಣಾಯ ಗುಣಾತ್ಮನೇ।
12327090c ಅಜಾಯ ವಿಶ್ವರೂಪಾಯ ಧಾಮ್ನೇ ಸರ್ವದಿವೌಕಸಾಮ್।।
ನೀವು ದೇವ ನಿರ್ಗುಣ, ಗುಣಾತ್ಮ, ಅಜ, ವಿಶ್ವರೂಪ, ಸರ್ವದಿವೌಕಸರ ಆಶ್ರಯ ಅವನಿಗೆ ನಮಸ್ಕರಿಸಿರಿ.
12327091a ಮಹಾಭೂತಾಧಿಪತಯೇ ರುದ್ರಾಣಾಂ ಪತಯೇ ತಥಾ।
12327091c ಆದಿತ್ಯಪತಯೇ ಚೈವ ವಸೂನಾಂ ಪತಯೇ ತಥಾ।।
ಮಹಾಭೂತಾಧಿಪತಿಯೂ, ರುದ್ರರ ಪತಿಯೂ, ಆದಿತ್ಯಪತಿಯೂ ಮತ್ತು ವಸುಗಳ ಪತಿಗೂ ನಮಸ್ಕರಿಸಿ.
12327092a ಅಶ್ವಿಭ್ಯಾಂ ಪತಯೇ ಚೈವ ಮರುತಾಂ ಪತಯೇ ತಥಾ।
12327092c ವೇದಯಜ್ಞಾಧಿಪತಯೇ ವೇದಾಂಗಪತಯೇಽಪಿ ಚ।।
ಅಶ್ವಿನೀ ದೇವತೆಗಳ ಒಡೆಯ, ಮರುತ್ತರ ಒಡೆಯ, ವೇದಯಜ್ಞಾಧಿಪತಿ ಮತ್ತು ವೇದಾಂಗಪತಿಗೆ ನಮಸ್ಕರಿಸಿ.
12327093a ಸಮುದ್ರವಾಸಿನೇ ನಿತ್ಯಂ ಹರಯೇ ಮುಂಜಕೇಶಿನೇ।
12327093c ಶಾಂತಯೇ ಸರ್ವಭೂತಾನಾಂ ಮೋಕ್ಷಧರ್ಮಾನುಭಾಷಿಣೇ।।
ನಿತ್ಯವೂ ಸಮುದ್ರವಾಸಿ, ಹರಿ, ಮುಂಜಕೇಶೀ, ಶಾಂತ, ಸರ್ವಭೂತಗಳ ಮೋಕ್ಷಧರ್ಮಾನುಭಾಷಿಣೀ ಅವನಿಗೆ ನಮಸ್ಕರಿಸಿ.
12327094a ತಪಸಾಂ ತೇಜಸಾಂ ಚೈವ ಪತಯೇ ಯಶಸೋಽಪಿ ಚ।
12327094c ವಾಚಶ್ಚ ಪತಯೇ ನಿತ್ಯಂ ಸರಿತಾಂ ಪತಯೇ ತಥಾ।।
ತಪಸ್ಸುಗಳಿಗೆ ಒಡೆಯನಾದ, ಸೂರ್ಯ-ಚಂದ್ರಾದಿ ತೇಜಸ್ಸುಗಳಿಗೆ ಸ್ವಾಮಿಯಾದ, ಸಕಲವಿಧದ ಯಶಸ್ಸುಗಳಿಗೂ ಪತಿಯಾದ, ವಾಕ್ಪತಿ, ನಿತ್ಯ, ಸರಿತ್ಪತಿಗೆ ನಮಸ್ಕರಿಸಿ.
12327095a ಕಪರ್ದಿನೇ ವರಾಹಾಯ ಏಕಶೃಂಗಾಯ ಧೀಮತೇ।
12327095c ವಿವಸ್ವತೇಽಶ್ವಶಿರಸೇ ಚತುರ್ಮೂರ್ತಿಧೃತೇ ಸದಾ।।
ಕಪರ್ದಿನಿ, ಏಕಶೃಂಗವರಾಹ, ಧೀಮಂತ, ವಿವಸ್ವತ, ಚತುರ್ಮೂರ್ತಿ, ಅಶ್ವಶಿರಸನಿಗೆ ನಮಸ್ಕರಿಸಿ.
12327096a ಗುಹ್ಯಾಯ ಜ್ಞಾನದೃಶ್ಯಾಯ ಅಕ್ಷರಾಯ ಕ್ಷರಾಯ ಚ।
12327096c ಏಷ ದೇವಃ ಸಂಚರತಿ ಸರ್ವತ್ರಗತಿರವ್ಯಯಃ।।
ಗುಹ್ಯ, ಜ್ಞಾನದೃಶ್ಯ, ಅಕ್ಷರ, ಮತ್ತು ಕ್ಷರನಿಗೆ ನಮಸ್ಕರಿಸಿ. ಈ ಅವ್ಯಯ ದೇವನು ಸರ್ವತ್ರ ಗತಿಯುಳ್ಳವನು.
12327097a ಏವಮೇತತ್ಪುರಾ ದೃಷ್ಟಂ ಮಯಾ ವೈ ಜ್ಞಾನಚಕ್ಷುಷಾ।
12327097c ಕಥಿತಂ ತಚ್ಚ ವಃ ಸರ್ವಂ ಮಯಾ ಪೃಷ್ಟೇನ ತತ್ತ್ವತಃ।।
ಅವನನ್ನೇ ಹಿಂದೆ ನಾನು ಜ್ಞಾನಚಕ್ಷುಷಗಳಿಂದ ನೋಡಿದೆನು. ಕೇಳಿದ ನಿಮತೆ ನಾನು ಎಲ್ಲವನ್ನೂ ತತ್ತ್ವತಃ ಹೇಳಿದ್ದೇನೆ.
12327098a ಕ್ರಿಯತಾಂ ಮದ್ವಚಃ ಶಿಷ್ಯಾಃ ಸೇವ್ಯತಾಂ ಹರಿರೀಶ್ವರಃ।
12327098c ಗೀಯತಾಂ ವೇದಶಬ್ದೈಶ್ಚ ಪೂಜ್ಯತಾಂ ಚ ಯಥಾವಿಧಿ।।
ಶಿಷ್ಯರೇ! ನನ್ನ ಮಾತಿನಂತೆ ಮಾಡಿರಿ. ಹರಿ ಈಶ್ವರನನ್ನು ಸೇವಿಸಿ. ವೇದಶಬ್ಧಗಳಿಂದ ಅವನ ಗಾನಮಾಡಿ. ಯಥಾವಿಧಿಯಾಗಿ ಪೂಜಿಸಿ.”
12327099 ವೈಶಂಪಾಯನ ಉವಾಚ 12327099a ಇತ್ಯುಕ್ತಾಸ್ತು ವಯಂ ತೇನ ವೇದವ್ಯಾಸೇನ ಧೀಮತಾ।
12327099c ಸರ್ವೇ ಶಿಷ್ಯಾಃ ಸುತಶ್ಚಾಸ್ಯ ಶುಕಃ ಪರಮಧರ್ಮವಿತ್।।
ವೈಶಂಪಾಯನನು ಹೇಳಿದನು: “ಆ ಧೀಮಂತ ವೇದವ್ಯಾಸನು ಹೀಗೆ ನಾವು ಶಿಷ್ಯರೆಲ್ಲರಿಗೆ ಮತ್ತು ಅವನ ಮಗ ಪರಮಧರ್ಮವಿದು ಶುಕನಿಗೆ ಹೇಳಿದನು.
12327100a ಸ ಚಾಸ್ಮಾಕಮುಪಾಧ್ಯಾಯಃ ಸಹಾಸ್ಮಾಭಿರ್ವಿಶಾಂ ಪತೇ।
12327100c ಚತುರ್ವೇದೋದ್ಗತಾಭಿಶ್ಚ ಋಗ್ಭಿಸ್ತಮಭಿತುಷ್ಟುವೇ।।
ವಿಶಾಂಪತೇ! ಆ ನಮ್ಮ ಉಪಾಧ್ಯಾಯನು ನಮ್ಮೊಂದಿಗೆ ಚತುರ್ವೇದಗಳ ಋಕ್ಕುಗಳಿಂದ ಅವನನ್ನು ಸ್ತುತಿಸಿದರು.
12327101a ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ।
12327101c ಏವಂ ಮೇಽಕಥಯದ್ರಾಜನ್ಪುರಾ ದ್ವೈಪಾಯನೋ ಗುರುಃ।।
ರಾಜನ್! ಹೀಗೆ ನೀನು ಕೇಳಿದುದಕ್ಕೆ ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಹಿಂದೆ ಗುರು ದ್ವೈಪಾಯನನನು ಇದನ್ನೇ ನಮಗೆ ಹೇಳಿದ್ದನು.
12327102a ಯಶ್ಚೇದಂ ಶೃಣುಯಾನ್ನಿತ್ಯಂ ಯಶ್ಚೇದಂ ಪರಿಕೀರ್ತಯೇತ್।
12327102c ನಮೋ ಭಗವತೇ ಕೃತ್ವಾ ಸಮಾಹಿತಮನಾ ನರಃ।।
12327103a ಭವತ್ಯರೋಗೋ ದ್ಯುತಿಮಾನ್ ಬಲರೂಪಸಮನ್ವಿತಃ।
12327103c ಆತುರೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್।।
ಯಾರು ಸಮಾಹಿತನಾಗಿ ಇದನ್ನು ನಿತ್ಯವೂ ಕೇಳುತ್ತಾನೋ ಮತ್ತು ಇದನ್ನು ಪಠಿಸಿ ಭಗವಂತನಿಗೆ ನಮಸ್ಕರಿಸುತ್ತಾನೋ ಅಂತಹ ರನು ಅರೋಗಿಯಾಗುತ್ತಾನೆ, ದ್ಯುತಿವಂತನಾಗುತ್ತಾನೆ ಮತ್ತು ಬಲರೂಪಸಮನ್ವಿತನಾಗುತ್ತಾನೆ.
12327104a ಕಾಮಕಾಮೀ ಲಭೇತ್ಕಾಮಂ ದೀರ್ಘಮಾಯುರವಾಪ್ನುಯಾತ್।
12327104c ಬ್ರಾಹ್ಮಣಃ ಸರ್ವವೇದೀ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್।
12327104e ವೈಶ್ಯೋ ವಿಪುಲಲಾಭಃ ಸ್ಯಾಚ್ಚೂದ್ರಃ ಸುಖಮವಾಪ್ನುಯಾತ್।।
ಕಾಮವನ್ನು ಬಯಸಿದವನಿಗೆ ಕಾಮವು ದೊರೆಯುತ್ತದೆ. ದೀರ್ಘ ಆಯುಸ್ಸನ್ನು ಪಡೆದುಕೊಳ್ಳುತ್ತಾನೆ. ಬ್ರಹ್ಮಣನು ಎಲ್ಲವನ್ನೂ ತಿಳಿಯುತ್ತಾನೆ. ಕ್ಷತ್ರಿಯನು ವಿಜಯಿಯಾಗುತ್ತಾನೆ. ವೈಶ್ಯನಿಗೆ ವಿಪುಲಲಾಭವುಂಟಾಗುತ್ತದೆ. ಮತ್ತು ಶೂದ್ರನು ಸುಖವನ್ನು ಹೊಂದುತ್ತಾನೆ.
12327105a ಅಪುತ್ರೋ ಲಭತೇ ಪುತ್ರಂ ಕನ್ಯಾ ಚೈವೇಪ್ಸಿತಂ ಪತಿಮ್।
12327105c ಲಗ್ನಗರ್ಭಾ ವಿಮುಚ್ಯೇತ ಗರ್ಭಿಣೀ ಜನಯೇತ್ಸುತಮ್।
12327105e ವಂಧ್ಯಾ ಪ್ರಸವಮಾಪ್ನೋತಿ ಪುತ್ರಪೌತ್ರಸಮೃದ್ಧಿಮತ್।।
ಪುತ್ರನಿಲ್ಲದವನು ಪುತ್ರನನ್ನು ಪಡೆಯುತ್ತಾನೆ. ಕನ್ಯೆಯು ಬಯಸಿದ ಪತಿಯನ್ನು ಪಡೆದುಕೊಳ್ಳುತ್ತಾಳೆ. ಗರ್ಭದ ತೊಂದರೆಗಳಿಂದ ಮುಕ್ತಿದೊರೆಯುತ್ತದೆ. ಗರ್ಭಿಣಿಯು ಸುತನಿಗೆ ಜನ್ಮನೀಡುತ್ತಾಳೆ. ಬಂಜೆಯು ಹಡೆಯುತ್ತಾಳೆ. ಪುತ್ರಪೌತ್ರರ ಸಮೃದ್ಧಿಯಾಗುತ್ತದೆ.
12327106a ಕ್ಷೇಮೇಣ ಗಚ್ಚೇದಧ್ವಾನಮಿದಂ ಯಃ ಪಠತೇ ಪಥಿ।
12327106c ಯೋ ಯಂ ಕಾಮಂ ಕಾಮಯತೇ ಸ ತಮಾಪ್ನೋತಿ ಚ ಧ್ರುವಮ್।।
ಮಾರ್ಗದಲ್ಲಿ ಯಾರು ಇದನ್ನು ಪಠಿಸುತ್ತಾರೋ ಅವರ ಪ್ರಯಾಣವು ಕ್ಷೇಮಕರವಾಗಿ ನಡೆಯುತ್ತದೆ. ಯಾವ ಯಾವ ಕಾಮನೆಗಳನ್ನು ಬಯಸುತ್ತಾನೋ ಅವುಗಳನ್ನು ನಿಶ್ಚಿತವಾಗಿ ಪಡೆದುಕೊಳ್ಳುತ್ತಾನೆ.
12327107a ಇದಂ ಮಹರ್ಷೇರ್ವಚನಂ ವಿನಿಶ್ಚಿತಂ ಮಹಾತ್ಮನಃ ಪುರುಷವರಸ್ಯ ಕೀರ್ತನಮ್।
12327107c ಸಮಾಗಮಂ ಚರ್ಷಿದಿವೌಕಸಾಮಿಮಂ ನಿಶಮ್ಯ ಭಕ್ತಾಃ ಸುಸುಖಂ ಲಭಂತೇ।।
ಮಹರ್ಷಿಯ ಈ ವಿನಿಶ್ಚಿತ ಮಾತುಗಳಲ್ಲಿರುವ ಮಹಾತ್ಮ ಪುರುಷವರನ ಕೀರ್ತನೆ ಮತ್ತು ಋಷಿ-ದಿವೌಕಸರ ಸಮಾಗಮದ ಕುರಿತು ಕೇಳುವ ಭಕ್ತರು ಉತ್ತಮ ಸುಖವನ್ನು ಹೊಂದುತ್ತಾರೆ.”