311: ಶುಕೋತ್ಪತ್ತಿಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 311

ಸಾರ

ವ್ಯಾಸನ ಶುಕ್ರದ ಮಂಥನದಿಂದ ಅರಣಿಗಳಲ್ಲಿ ಶುಕನು ಉತ್ಪನ್ನನಾದುದು (1-11). ಮಹಾದೇವನು ಅವನಿಗೆ ಉಪನಯನವನ್ನು ಮಾಡಿಸಿದ್ದುದು, ದೇವ-ದೇವರ್ಷಿಗಳ ಸನ್ಮಾನ (12-27).

12311001 ಭೀಷ್ಮ ಉವಾಚ।
12311001a ಸ ಲಬ್ಧ್ವಾ ಪರಮಂ ದೇವಾದ್ವರಂ ಸತ್ಯವತೀಸುತಃ।
12311001c ಅರಣೀಂ ತ್ವಥ ಸಂಗೃಹ್ಯ ಮಮಂಥಾಗ್ನಿಚಿಕೀರ್ಷಯಾ।।

ಭೀಷ್ಮನು ಹೇಳಿದನು: “ದೇವನಿಂದ ಆ ಪರಮ ವರವನ್ನು ಪಡೆದು ಸತ್ಯವತೀಸುತನು ಅಗ್ನಿಯನ್ನು ಪಡೆಯುವ ಸಲುವಾಗಿ ಅರಣಿಗಳನ್ನು ಹಿಡಿದುಕೊಂಡು ಮಂಥಿಸತೊಡಗಿದನು.

12311002a ಅಥ ರೂಪಂ ಪರಂ ರಾಜನ್ಬಿಭ್ರತೀಂ ಸ್ವೇನ ತೇಜಸಾ।
12311002c ಘೃತಾಚೀಂ ನಾಮಾಪ್ಸರಸಮಪಶ್ಯದ್ಭಗವಾನೃಷಿಃ।।

ರಾಜನ್! ಆಗ ಭಗವಾನ್ ಋಷಿಯು ತನ್ನದೇ ತೇಜಸ್ಸಿನಿಂದ ಪರಮ ರೂಪದಿಂದ ಬೆಳಗುತ್ತಿದ್ದ ಘೃತಾಚೀ ಎಂಬ ಹೆಸರಿನ ಅಪ್ಸರೆಯನ್ನು ನೋಡಿದನು.

12311003a ಋಷಿರಪ್ಸರಸಂ ದೃಷ್ಟ್ವಾ ಸಹಸಾ ಕಾಮಮೋಹಿತಃ।
12311003c ಅಭವದ್ಭಗವಾನ್ವ್ಯಾಸೋ ವನೇ ತಸ್ಮಿನ್ಯುಧಿಷ್ಠಿರ।।

ಯುಧಿಷ್ಠಿರ! ಆ ವನದಲ್ಲಿ ಅಪ್ಸರೆಯನ್ನು ನೋಡಿ ಋಷಿ ವ್ಯಾಸನು ಕೂಡಲೇ ಕಾಮಮೋಹಿತನಾದನು.

12311004a ಸಾ ಚ ಕೃತ್ವಾ ತದಾ ವ್ಯಾಸಂ ಕಾಮಸಂವಿಗ್ನಮಾನಸಮ್।
12311004c ಶುಕೀ ಭೂತ್ವಾ ಮಹಾರಾಜ ಘೃತಾಚೀ ಸಮುಪಾಗಮತ್।।

ಮಹಾರಾಜ! ಹಾಗೆ ವ್ಯಾಸನನ್ನು ಕಾಮಸಂವಿಗ್ನಮಾನಸನನ್ನಾಗಿ ಮಾಡಿ ಘೃತಾಚಿಯು ಗಿಳಿಯಾಗಿ ಅವನ ಬಳಿಬಂದಳು.

12311005a ಸ ತಾಮಪ್ಸರಸಂ ದೃಷ್ಟ್ವಾ ರೂಪೇಣಾನ್ಯೇನ ಸಂವೃತಾಮ್।
12311005c ಶರೀರಜೇನಾನುಗತಃ ಸರ್ವಗಾತ್ರಾತಿಗೇನ ಹ।।

ಅನ್ಯ ರೂಪವನ್ನು ಧರಿಸಿದ ಆ ಅಪ್ಸರೆಯನ್ನು ನೋಡಿ ಶರೀರದಲ್ಲಿ ಹುಟ್ಟಿದ ಕಾಮವೇದನೆಯಿಂದ ಶರೀರಾದ್ಯಂತ ನೊಂದನು.

12311006a ಸ ತು ಧೈರ್ಯೇಣ ಮಹತಾ ನಿಗೃಹ್ಣನ್ ಹೃಚ್ಚಯಂ ಮುನಿಃ।
12311006c ನ ಶಶಾಕ ನಿಯಂತುಂ ತದ್ವ್ಯಾಸಃ ಪ್ರವಿಸೃತಂ ಮನಃ।

ಆ ಮುನಿಯು ಮಹಾ ಧೈರ್ಯದಿಂದ ಶರೀರವನ್ನು ಸುಡುತ್ತಿದ್ದ ಕಾಮವನ್ನು ನಿಗ್ರಹಿಸಲು ಪ್ರಯತ್ನಿಸಿದನು. ಆದರೂ ಅವಳ ಕಡೆ ಹರಿದಿದ್ದ ಮನವನ್ನು ನಿಯಂತ್ರಿಸಲು ವ್ಯಾಸನಿಗೆ ಸಾಧ್ಯವಾಗಲಿಲ್ಲ.

12311006e ಭಾವಿತ್ವಾಚ್ಚೈವ ಭಾವಸ್ಯ ಘೃತಾಚ್ಯಾ ವಪುಷಾ ಹೃತಃ।।
12311007a ಯತ್ನಾನ್ನಿಯಚ್ಚತಸ್ತಸ್ಯ ಮುನೇರಗ್ನಿಚಿಕೀರ್ಷಯಾ।
12311007c ಅರಣ್ಯಾಮೇವ ಸಹಸಾ ತಸ್ಯ ಶುಕ್ರಮವಾಪತತ್।।

ಘೃತಾಚಿಯ ರೂಪದಿಂದ ಅಪಹೃತವಾದ ಅವನ ಭಾವವನ್ನು ಪ್ರಯತ್ನಪಟ್ಟು ತಡೆಯುತ್ತಿದ್ದರೂ ಒಡನೆಯೇ ಆ ಮುನಿಯನ ವೀರ್ಯವು ಅಗ್ನಿಯನ್ನು ಬಯಸಿ ಮಥಿಸುತ್ತಿದ್ದ ಅರಣಿಗಳ ಮೇಲೆಯೇ ಬಿದ್ದಿತು.

12311008a ಸೋಽವಿಶಂಕೇನ ಮನಸಾ ತಥೈವ ದ್ವಿಜಸತ್ತಮಃ।
12311008c ಅರಣೀಂ ಮಮಂಥ ಬ್ರಹ್ಮರ್ಷಿಸ್ತಸ್ಯಾಂ ಜಜ್ಞೇ ಶುಕೋ ನೃಪ।।

ನೃಪ! ಮನಸ್ಸಿನಲ್ಲಿ ಅವಿಶಂಕನಾಗಿ ಆ ದ್ವಿಜಸತ್ತಮನು ಹಾಗೆಯೇ ಅರಣಿಯನ್ನು ಮಥಿಸುತ್ತಿರಲು ಆ ಅರಣಿಗಳಿಂದ ಶುಕನು ಹುಟ್ಟಿದನು.

12311009a ಶುಕ್ರೇ ನಿರ್ಮಥ್ಯಮಾನೇ ತು ಶುಕೋ ಜಜ್ಞೇ ಮಹಾತಪಾಃ।
12311009c ಪರಮರ್ಷಿರ್ಮಹಾಯೋಗೀ ಅರಣೀಗರ್ಭಸಂಭವಃ।।

ಶುಕ್ರವನ್ನು ಮಥಿಸುತ್ತಿರುವಾಗ ಮಹಾತಪಸ್ವಿ ಶುಕನು ಜನಿಸಿದನು. ಆ ಪರಮ ಋಷಿ ಮಹಾಯೋಗಿಯು ಅರಣೀಗರ್ಭಸಂಭವನಾಗಿದ್ದನು.

12311010a ಯಥಾಧ್ವರೇ ಸಮಿದ್ಧೋಽಗ್ನಿರ್ಭಾತಿ ಹವ್ಯಮುಪಾತ್ತವಾನ್।
12311010c ತಥಾರೂಪಃ ಶುಕೋ ಜಜ್ಞೇ ಪ್ರಜ್ವಲನ್ನಿವ ತೇಜಸಾ।।

ಅಧ್ವರದಲ್ಲಿ ಸಮಿತ್ತನ್ನು ಹಾಕಿ ಹೊತ್ತಿಸಿದ ಅಗ್ನಿಯು ಹವ್ಯವನ್ನು ಹೊತ್ತು ಬೆಳಗುತ್ತಾನೋ ಅದೇ ರೂಪದಲ್ಲಿ ತೇಜಸ್ಸಿನಿಂದ ಪ್ರಜ್ವಲಿಸುತ್ತಾ ಶುಕನು ಹುಟ್ಟಿದನು.

12311011a ಬಿಭ್ರತ್ಪಿತುಶ್ಚ ಕೌರವ್ಯ ರೂಪವರ್ಣಮನುತ್ತಮಮ್।
12311011c ಬಭೌ ತದಾ ಭಾವಿತಾತ್ಮಾ ವಿಧೂಮೋಽಗ್ನಿರಿವ ಜ್ವಲನ್।।

ಕೌರವ್ಯ! ತಂದೆಯ ಅನುತ್ತಮ ರೂಪ-ವರ್ಣಗಳನ್ನು ಒಂದಿದ್ದ ಆ ಭಾವಿತಾತ್ಮನು ಹೊಗೆಯಿಲ್ಲದ ಅಗ್ನಿಯಂತೆ ಪ್ರಜ್ವಲಿಸುತ್ತಾ ಪ್ರಕಾಶಿಸಿದನು.

12311012a ತಂ ಗಂಗಾ ಸರಿತಾಂ ಶ್ರೇಷ್ಠಾ ಮೇರುಪೃಷ್ಠೇ ಜನೇಶ್ವರ।
12311012c ಸ್ವರೂಪಿಣೀ ತದಾಭ್ಯೇತ್ಯ ಸ್ನಾಪಯಾಮಾಸ ವಾರಿಣಾ।।

ಜನೇಶ್ವರ! ಆಗ ಸರಿತ್ತುಗಳಲ್ಲಿ ಶ್ರೇಷ್ಠ ಸ್ವರೂಪಿಣೀ ಗಂಗೆಯು ಮೇರುಪರ್ವದ ಮೇಲೆ ಆಗಮಿಸಿ ನೀರಿನಿಂದ ಅವನಿಗೆ ಸ್ನಾನಮಾಡಿಸಿದಳು.

12311013a ಅಂತರಿಕ್ಷಾಚ್ಚ ಕೌರವ್ಯ ದಂಡಃ ಕೃಷ್ಣಾಜಿನಂ ಚ ಹ।
12311013c ಪಪಾತ ಭುವಿ ರಾಜೇಂದ್ರ ಶುಕಸ್ಯಾರ್ಥೇ ಮಹಾತ್ಮನಃ।।

ಕೌರವ್ಯ! ರಾಜೇಂದ್ರ! ಅಂತರಿಕ್ಷದಿಂದ ದಂಡ, ಕೃಷ್ಣಾಜಿನಗಳು ಮಹಾತ್ಮ ಶುಕನಿಗಾಗಿ ಭೂಮಿಯ ಮೇಲೆ ಬಿದ್ದವು.

12311014a ಜೇಗೀಯಂತೇ ಸ್ಮ ಗಂಧರ್ವಾ ನನೃತುಶ್ಚಾಪ್ಸರೋಗಣಾಃ।
12311014c ದೇವದುಂದುಭಯಶ್ಚೈವ ಪ್ರಾವಾದ್ಯಂತ ಮಹಾಸ್ವನಾಃ।।

ಗಂಧರ್ವರು ಜಯಕಾರಮಾಡಿ ಹಾಡುತ್ತಿದ್ದರೆ ಅಪ್ಸರಗಣಗಳು ನೃತ್ತಿಸಿದವು. ದೇವದುಂದುಭಿಗಳೂ ಕೂಡ ಮಹಾಸ್ವನದಲ್ಲಿ ಮೊಳಗಿದವು.

12311015a ವಿಶ್ವಾವಸುಶ್ಚ ಗಂಧರ್ವಸ್ತಥಾ ತುಂಬುರುನಾರದೌ।
12311015c ಹಾಹಾಹೂಹೂ ಚ ಗಂಧರ್ವೌ ತುಷ್ಟುವುಃ ಶುಕಸಂಭವಮ್।।

ಶುಕಸಂಭವದಿಂದ ಗಂಧರ್ವ ವಿಶ್ವಾವಸು, ತುಂಬುರು-ನಾರದರು ಮತ್ತು ಗಂಧರ್ವರಾದ ಹಾಹಾ ಹೂಹೂ ಇಬ್ಬರೂ ತುಷ್ಟರಾದರು.

12311016a ತತ್ರ ಶಕ್ರಪುರೋಗಾಶ್ಚ ಲೋಕಪಾಲಾಃ ಸಮಾಗತಾಃ।
12311016c ದೇವಾ ದೇವರ್ಷಯಶ್ಚೈವ ತಥಾ ಬ್ರಹ್ಮರ್ಷಯೋಽಪಿ ಚ।।

ಶಕ್ರನನ್ನು ಮುಂದಿರಿಸಿಕೊಂಡು ಅಲ್ಲಿ ಲೋಕಪಾಲಕರು, ದೇವತೆಗಳು, ದೇವರ್ಷಿಗಳು ಮತ್ತು ಬ್ರಹ್ಮರ್ಷಿಗಳು ಸೇರಿದರು.

12311017a ದಿವ್ಯಾನಿ ಸರ್ವಪುಷ್ಪಾಣಿ ಪ್ರವವರ್ಷಾತ್ರ ಮಾರುತಃ।
12311017c ಜಂಗಮಂ ಸ್ಥಾವರಂ ಚೈವ ಪ್ರಹೃಷ್ಟಮಭವಜ್ಜಗತ್।।

ಮಾರುತನು ಅಲ್ಲಿ ಸರ್ವ ದಿವ್ಯಪುಷ್ಪಗಳ ಮಳೆಯನ್ನು ಸುರಿಸಿದನು. ಜಗತ್ತಿನ ಎಲ್ಲ ಸ್ಥಾವರ-ಜಂಗಮಗಳೂ ಪ್ರಹೃಷ್ಟವಾದವು.

12311018a ತಂ ಮಹಾತ್ಮಾ ಸ್ವಯಂ ಪ್ರೀತ್ಯಾ ದೇವ್ಯಾ ಸಹ ಮಹಾದ್ಯುತಿಃ।
12311018c ಜಾತಮಾತ್ರಂ ಮುನೇಃ ಪುತ್ರಂ ವಿಧಿನೋಪಾನಯತ್ತದಾ।।

ಮಹಾತ್ಮಾ ಮಹಾದ್ಯುತಿ ಶಿವನು ಪ್ರೀತನಾಗಿ ದೇವಿಯ ಸಹಿತ ಸ್ವಯಂ ತಾನೇ ಬಂದು ಆಗತಾನೇ ಹುಟ್ಟಿದ್ದ ಮುನಿಯ ಪುತ್ರನಿಗೆ ವಿಧಿವತ್ತಾಗಿ ಉಪನಯನವನ್ನು ಮಾಡಿಸಿದನು.

12311019a ತಸ್ಯ ದೇವೇಶ್ವರಃ ಶಕ್ರೋ ದಿವ್ಯಮದ್ಭುತದರ್ಶನಮ್।
12311019c ದದೌ ಕಮಂಡಲುಂ ಪ್ರೀತ್ಯಾ ದೇವವಾಸಾಂಸಿ ಚಾಭಿಭೋ।।

ವಿಭೋ! ದೇವೇಶ್ವರ ಶಕ್ರನು ಪ್ರೀತಿಯಿಂದ ಅವನಿಗೆ ದಿವ್ಯವಾದ ಅದ್ಭುತವಾಗಿ ಕಾಣುತ್ತಿದ್ದ ಕಮಂಡಲುವನ್ನು ಮತ್ತು ದೇವವಸ್ತ್ರಗಳನ್ನು ನೀಡಿದನು.

12311020a ಹಂಸಾಶ್ಚ ಶತಪತ್ರಾಶ್ಚ ಸಾರಸಾಶ್ಚ ಸಹಸ್ರಶಃ।
12311020c ಪ್ರದಕ್ಷಿಣಮವರ್ತಂತ ಶುಕಾಶ್ಚಾಷಾಶ್ಚ ಭಾರತ।।

ಭಾರತ! ಸಹಸ್ರಾರು ಹಂಸಗಳು, ಶತಪತ್ರಗಳು, ಸಾರಸಗಳು, ಗಿಳಿಗಳು ಮತ್ತು ಆಷಗಳು ಅವನಿಗೆ ಪ್ರದಕ್ಷಿಣೆಮಾಡಿದವು.

12311021a ಆರಣೇಯಸ್ತಥಾ ದಿವ್ಯಂ ಪ್ರಾಪ್ಯ ಜನ್ಮ ಮಹಾದ್ಯುತಿಃ।
12311021c ತತ್ರೈವೋವಾಸ ಮೇಧಾವೀ ವ್ರತಚಾರೀ ಸಮಾಹಿತಃ।।

ಹೀಗೆ ಆರಣೇಯಗಳಿಂದ ದಿವ್ಯ ಜನ್ಮವನ್ನು ಪಡೆದ ಮಹಾದ್ಯುತಿ ಮೇಧಾವೀ ವ್ರತಚಾರೀ ಶುಕನು ಅಲ್ಲಿಯೇ ಸಮಾಹಿತನಾಗಿ ವಾಸಿಸಿದನು.

12311022a ಉತ್ಪನ್ನಮಾತ್ರಂ ತಂ ವೇದಾಃ ಸರಹಸ್ಯಾಃ ಸಸಂಗ್ರಹಾಃ।
12311022c ಉಪತಸ್ಥುರ್ಮಹಾರಾಜ ಯಥಾಸ್ಯ ಪಿತರಂ ತಥಾ।।

ಮಹಾರಾಜ! ಅವನು ಉತ್ಪನ್ನನಾಗುತ್ತಲೇ ರಹಸ್ಯ ಸಂಗ್ರಹಗಳೊಂದಿಗೆ ವೇದಗಳು, ಅವನ ತಂದೆಯನ್ನು ಹೇಗೋ ಹಾಗೆ, ಉಪಾಸಿಸತೊಡಗಿದವು.

12311023a ಬೃಹಸ್ಪತಿಂ ತು ವವ್ರೇ ಸ ವೇದವೇದಾಂಗಭಾಷ್ಯವಿತ್।
12311023c ಉಪಾಧ್ಯಾಯಂ ಮಹಾರಾಜ ಧರ್ಮಮೇವಾನುಚಿಂತಯನ್।।

ಮಹಾರಾಜ! ಧರ್ಮದ ಕುರಿತೇ ಚಿಂತಿಸುತ್ತಾ ಅವನು ವೇದವೇದಾಂಗ ಭಾಷ್ಯವಿದು ಬೃಹಸ್ಪತಿಯನ್ನು ಉಪಾಧ್ಯಾಯನನ್ನಾಗಿ ವರಿಸಿದನು.

12311024a ಸೋಽಧೀತ್ಯ ವೇದಾನಖಿಲಾನ್ಸರಹಸ್ಯಾನ್ಸಸಂಗ್ರಹಾನ್।
12311024c ಇತಿಹಾಸಂ ಚ ಕಾರ್ತ್ಸ್ನ್ಯೇನ ರಾಜಶಾಸ್ತ್ರಾಣಿ ಚಾಭಿಭೋ।।

ವಿಭೋ! ಅವನು ವೇದಗಳನ್ನು ಅವುಗಳ ಅಖಿಲ ರಹಸ್ಯಗಳು ಮತ್ತು ಸಂಗ್ರಹಗಳೊಡನೆ ಹಾಗೂ ಸಂಪೂರ್ಣ ಇತಿಹಾಸ ಮತ್ತು ರಾಜಶಾಸ್ತ್ರಗಳನ್ನೂ ತಿಳಿದುಕೊಂಡನು.

12311025a ಗುರವೇ ದಕ್ಷಿಣಾಂ ದತ್ತ್ವಾ ಸಮಾವೃತ್ತೋ ಮಹಾಮುನಿಃ।
12311025c ಉಗ್ರಂ ತಪಃ ಸಮಾರೇಭೇ ಬ್ರಹ್ಮಚಾರೀ ಸಮಾಹಿತಃ।।

ಗುರುವಿಗೆ ದಕ್ಷಿಣೆಯನ್ನಿತ್ತು ಸಮಾವೃತ್ತನಾದ ಆ ಮಹಾಮುನಿಯು ಬ್ರಹ್ಮಚರ್ಯದಲ್ಲಿಯೇ ಸಮಾಹಿತನಾಗಿ ಉಗ್ರ ತಪಸ್ಸನ್ನು ಪ್ರಾರಂಭಿಸಿದನು.

12311026a ದೇವತಾನಾಮೃಷೀಣಾಂ ಚ ಬಾಲ್ಯೇಽಪಿ ಸ ಮಹಾತಪಾಃ।
12311026c ಸಂಮಂತ್ರಣೀಯೋ ಮಾನ್ಯಶ್ಚ ಜ್ಞಾನೇನ ತಪಸಾ ತಥಾ।।

ತನ್ನ ಜ್ಞಾನ ಮತ್ತು ತಪಸ್ಸುಗಳಿಂದ ಆ ಮಹಾತಪಸ್ವಿಯು ಬಾಲ್ಯದಿಂದಲೇ ದೇವತೆಗಳು ಮತ್ತು ಋಷಿಗಳ ಸಲಹೆಗಾರನೂ ಮಾನ್ಯನೂ ಆಗಿದ್ದನು.

12311027a ನ ತ್ವಸ್ಯ ರಮತೇ ಬುದ್ಧಿರಾಶ್ರಮೇಷು ನರಾಧಿಪ।
12311027c ತ್ರಿಷು ಗಾರ್ಹಸ್ಥ್ಯಮೂಲೇಷು ಮೋಕ್ಷಧರ್ಮಾನುದರ್ಶಿನಃ।।

ನರಾಧಿಪ! ಮೋಕ್ಷಧರ್ಮವನ್ನೇ ಕಂಡಿದ್ದ ಅವನ ಬುದ್ಧಿಯು ಗೃಹಸ್ಥಾಶ್ರಮವೇ ಮೊದಲಾದ ಮೂರು ಆಶ್ರಮಗಳಲ್ಲಿ ರುಚಿಸಲೇ ಇಲ್ಲ.”

ಸಮಾಪ್ತಿ ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಶುಕೋತ್ಪತ್ತೌ ಏಕಾದಶಾಧಿಕತ್ರಿಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಶುಕೋತ್ಪತ್ತಿ ಎನ್ನುವ ಮುನ್ನೂರಾಹನ್ನೊಂದನೇ ಅಧ್ಯಾಯವು.