ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 310
ಸಾರ
ಪುತ್ರಪ್ರಾಪ್ತಿಗಾಗಿ ವ್ಯಾಸನು ತಪಸ್ಸನ್ನು ತಪಿಸಿದುದು (1-25). ಮಹಾದೇವನಿಂದ ವರಪ್ರಾಪ್ತಿ (26-29).
112310001 ಯುಧಿಷ್ಠಿರ ಉವಾಚ।
12310001a ಕಥಂ ವ್ಯಾಸಸ್ಯ ಧರ್ಮಾತ್ಮಾ ಶುಕೋ ಜಜ್ಞೇ ಮಹಾತಪಾಃ।
12310001c ಸಿದ್ಧಿಂ ಚ ಪರಮಾಂ ಪ್ರಾಪ್ತಸ್ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ವ್ಯಾಸನಿಗೆ ಧರ್ಮಾತ್ಮಾ ಮಹಾತಪಸ್ವಿ ಶುಕನು ಹೇಗೆ ಹುಟ್ಟಿದನು? ಅವನು ಪರಮ ಸಿದ್ಧಿಯನ್ನು ಹೇಗೆ ಪಡೆದುಕೊಂಡನು ಎನ್ನುವುದನ್ನು ನನಗೆ ಹೇಳು.
12310002a ಕಸ್ಯಾಂ ಚೋತ್ಪಾದಯಾಮಾಸ ಶುಕಂ ವ್ಯಾಸಸ್ತಪೋಧನಃ।
12310002c ನ ಹ್ಯಸ್ಯ ಜನನೀಂ ವಿದ್ಮ ಜನ್ಮ ಚಾಗ್ರ್ಯಂ ಮಹಾತ್ಮನಃ।।
ತಪೋಧನ ವ್ಯಾಸನು ಶುಕನನ್ನು ಯಾರಲ್ಲಿ ಹುಟ್ಟಿಸಿದನು? ಶುಕನ ಜನನಿಯ ಕುರಿತು ತಿಳಿದಿಲ್ಲ ಮತ್ತು ಆ ಮಹಾತ್ಮನ ಜನ್ಮವೃತ್ತಾಂತವನ್ನು ತಿಳಿದಿಲ್ಲ.
12310003a ಕಥಂ ಚ ಬಾಲಸ್ಯ ಸತಃ ಸೂಕ್ಷ್ಮಜ್ಞಾನೇ ಗತಾ ಮತಿಃ।
12310003c ಯಥಾ ನಾನ್ಯಸ್ಯ ಲೋಕೇಽಸ್ಮಿನ್ದ್ವಿತೀಯಸ್ಯೇಹ ಕಸ್ಯ ಚಿತ್।।
ಬಾಲಕನಾಗಿದ್ದಾಗಲೇ ಶುಕನಿಗೆ ಸೂಕ್ಷ್ಮಜ್ಞಾನದಲ್ಲಿ ಹೇಗೆ ಬುದ್ಧಿಯುಂಟಾಯಿತು? ಈ ಲೋಕದಲ್ಲಿ ಬೇರೆ ಯಾರಿಗೂ ಇಂತಹ ಅದ್ವಿತೀಯ ಸೂಕ್ಷ್ಮಬುದ್ಧಿಯಿಲ್ಲ.
12310004a ಏತದಿಚ್ಚಾಮ್ಯಹಂ ಶ್ರೋತುಂ ವಿಸ್ತರೇಣ ಮಹಾದ್ಯುತೇ।
12310004c ನ ಹಿ ಮೇ ತೃಪ್ತಿರಸ್ತೀಹ ಶೃಣ್ವತೋಽಮೃತಮುತ್ತಮಮ್।।
ಮಹಾದ್ಯುತೇ! ಇದನ್ನು ವಿಸ್ತಾರವಾಗಿ ಕೇಳಬಯಸುತ್ತೇನೆ. ಈ ಉತ್ತಮ ಅಮೃತವನ್ನು ಕೇಳಿ ನನಗೆ ತೃಪ್ತಿಯೇ ಆಗುತ್ತಿಲ್ಲ.
12310005a ಮಾಹಾತ್ಮ್ಯಮಾತ್ಮಯೋಗಂ ಚ ವಿಜ್ಞಾನಂ ಚ ಶುಕಸ್ಯ ಹ।
12310005c ಯಥಾವದಾನುಪೂರ್ವ್ಯೇಣ ತನ್ಮೇ ಬ್ರೂಹಿ ಪಿತಾಮಹ।।
ಪಿತಾಮಹ! ಶುಕನ ಮಹಾತ್ಮೆ, ಆತ್ಮಯೋಗ ಮತ್ತು ವಿಜ್ಞಾನಗಳನ್ನು ಮೊದಲಿನಿಂದ ಯಥಾವತ್ತಾಗಿ ನನಗೆ ಹೇಳು.”
12310006 ಭೀಷ್ಮ ಉವಾಚ।
12310006a ನ ಹಾಯನೈರ್ನ ಪಲಿತೈರ್ನ ವಿತ್ತೇನ ನ ಬಂಧುಭಿಃ।
12310006c ಋಷಯಶ್ಚಕ್ರಿರೇ ಧರ್ಮಂ ಯೋಽನೂಚಾನಃ ಸ ನೋ ಮಹಾನ್।।
ಭೀಷ್ಮನು ಹೇಳಿದನು: “ವಯಸ್ಸಿನಿಂದ, ಕೂದಲು ನೆರೆತುದರಿಂದ, ವಿತ್ತದಿಂದ ಮತ್ತು ಬಂಧುಗಳಿಂದ ಮಹಾತ್ಮನೆನಿಸಿಕೊಳ್ಳುವುದಿಲ್ಲ. ವೇದಗಳನ್ನು ತಿಳಿದಿರುವವನೇ ಮಹಾತ್ಮನೆಂದು ಋಷಿಗಳು ಧರ್ಮನಿಯಮವನ್ನು ಮಾಡಿರುತ್ತಾರೆ.
12310007a ತಪೋಮೂಲಮಿದಂ ಸರ್ವಂ ಯನ್ಮಾಂ ಪೃಚ್ಚಸಿ ಪಾಂಡವ।
12310007c ತದಿಂದ್ರಿಯಾಣಿ ಸಂಯಮ್ಯ ತಪೋ ಭವತಿ ನಾನ್ಯಥಾ।।
ಪಾಂಡವ! ನೀನು ಕೇಳುತ್ತಿರುವ ಎಲ್ಲವಕ್ಕೆ ತಪಸ್ಸೇ ಮೂಲ. ಇಂದ್ರಿಯಗಳನ್ನು ಸಂಯಮದಲ್ಲಿಟ್ಟುಕೊಂಡಾಗ ತಪಸ್ಸಾಗುತ್ತದೆ. ಅನ್ಯಥಾ ಇಲ್ಲ.
12310008a ಇಂದ್ರಿಯಾಣಾಂ ಪ್ರಸಂಗೇನ ದೋಷನೃಚ್ಚತ್ಯಸಂಶಯಮ್।
12310008c ಸಂನಿಯಮ್ಯ ತು ತಾನ್ಯೇವ ಸಿದ್ಧಿಂ ಪ್ರಾಪ್ನೋತಿ ಮಾನವಃ।।
ಇಂದ್ರಿಯಗಳ ಪ್ರಸಂಗದಿಂದ ದೋಷವುಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವುಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಿಂದಲೇ ಮನುಷ್ಯನು ಸಿದ್ಧಿಯನ್ನು ಹೊಂದುತ್ತಾನೆ.
12310009a ಅಶ್ವಮೇಧಸಹಸ್ರಸ್ಯ ವಾಜಪೇಯಶತಸ್ಯ ಚ।
12310009c ಯೋಗಸ್ಯ ಕಲಯಾ ತಾತ ನ ತುಲ್ಯಂ ವಿದ್ಯತೇ ಫಲಮ್।।
ಸಹಸ್ರ ಅಶ್ವಮೇಧ ಮತ್ತು ನೂರು ವಾಜಪೇಯಗಳ ಫಲವು ಯೋಗದಿಂದ ದೊರೆಯುವ ಫಲದ ಹದಿನಾರನೆಯೇ ಒಂದು ಭಾಗಕ್ಕೂ ಸಮನಾಗಿರುವುದಿಲ್ಲ.
12310010a ಅತ್ರ ತೇ ವರ್ತಯಿಷ್ಯಾಮಿ ಜನ್ಮಯೋಗಫಲಂ ಯಥಾ।
12310010c ಶುಕಸ್ಯಾಗ್ರ್ಯಾಂ ಗತಿಂ ಚೈವ ದುರ್ವಿದಾಮಕೃತಾತ್ಮಭಿಃ।।
ಈಗ ನಿನಗೆ ಶುಕನ ಜನ್ಮ, ಯೋಗಫಲ ಮತ್ತು ಅಕೃತಾತ್ಮರಿಗೆ ದೊರೆಯಲು ಅಸಾಧ್ಯವಾದ ಅಗ್ರ ಗತಿಯ ಕುರಿತು ಹೇಳುತ್ತೇನೆ.
12310011a ಮೇರುಶೃಂಗೇ ಕಿಲ ಪುರಾ ಕರ್ಣಿಕಾರವನಾಯುತೇ।
12310011c ವಿಜಹಾರ ಮಹಾದೇವೋ ಭೀಮೈರ್ಭೂತಗಣೈರ್ವೃತಃ।।
ಹಿಂದೆ ಕರ್ಣಿಕಾರವನಗಳಿಂದ ಕೂಡಿದ್ದ ಮೇರು ಶೃಂಗದಲ್ಲಿ ಮಹಾದೇವನು ಭಯಂಕರ ಭೂತಗಣಗಳಿಂದ ಆವೃತನಾಗಿ ವಿಹರಿಸುತ್ತಿದ್ದನು.
12310012a ಶೈಲರಾಜಸುತಾ ಚೈವ ದೇವೀ ತತ್ರಾಭವತ್ಪುರಾ।
12310012c ತತ್ರ ದಿವ್ಯಂ ತಪಸ್ತೇಪೇ ಕೃಷ್ಣದ್ವೈಪಾಯನಃ ಪ್ರಭುಃ।।
ಆಗ ಶೈಲರಾಜಸುತೆ ದೇವಿಯೂ ಕೂಡ ಅವನೊಡನಿದ್ದಳು. ಅಲ್ಲಿಯೇ ಪ್ರಭು ಕೃಷ್ಣದ್ವೈಪಾಯನನು ದಿವ್ಯ ತಪಸ್ಸನ್ನು ತಪಿಸುತ್ತಿದ್ದನು.
12310013a ಯೋಗೇನಾತ್ಮಾನಮಾವಿಶ್ಯ ಯೋಗಧರ್ಮಪರಾಯಣಃ।
12310013c ಧಾರಯನ್ಸ ತಪಸ್ತೇಪೇ ಪುತ್ರಾರ್ಥಂ ಕುರುಸತ್ತಮ।।
ಕುರುಸತ್ತಮ! ಆ ಯೋಗಧರ್ಮಪರಾಯಣನು ಪುತ್ರನಿಗಾಗಿ ಯೋಗದಿಂದ ಆತ್ಮನನ್ನು ಪ್ರವೇಶಿಸಿ ಆತ್ಮನನ್ನು ಧರಿಸಿ ತಪಸ್ಸನ್ನು ತಪಿಸುತ್ತಿದ್ದನು.
12310014a ಅಗ್ನೇರ್ಭೂಮೇರಪಾಂ ವಾಯೋರಂತರಿಕ್ಷಸ್ಯ ಚಾಭಿಭೋ।
12310014c ವೀರ್ಯೇಣ ಸಂಮಿತಃ ಪುತ್ರೋ ಮಮ ಭೂಯಾದಿತಿ ಸ್ಮ ಹ।।
“ನನಗೆ ಅಗ್ನಿ, ಭೂಮಿ, ಜಲ, ವಾಯು ಮತ್ತು ಆಕಾಶ ಇವುಗಳ ವೀರ್ಯಗಳಿಂದ ಸಮ್ಮಿತನಾದ ಪುತ್ರನಾಗಲಿ!”
12310015a ಸಂಕಲ್ಪೇನಾಥ ಸೋಽನೇನ ದುಷ್ಪ್ರಾಪೇಣಾಕೃತಾತ್ಮಭಿಃ।
12310015c ವರಯಾಮಾಸ ದೇವೇಶಮಾಸ್ಥಿತಸ್ತಪ ಉತ್ತಮಮ್।।
ಈ ಸಂಕಲ್ಪದಿಂದ ಉತ್ತಮ ತಪಸ್ಸಿನಲ್ಲಿ ತೊಡಗಿದ್ದ ಅವನು ಅಕೃತಾತ್ಮರಿಗೆ ದೊರಕಲಾಗದ ವರವನ್ನು ದೇವೇಶನಲ್ಲಿ ಕೇಳಿದನು.
12310016a ಅತಿಷ್ಠನ್ಮಾರುತಾಹಾರಃ ಶತಂ ಕಿಲ ಸಮಾಃ ಪ್ರಭುಃ।
12310016c ಆರಾಧಯನ್ಮಹಾದೇವಂ ಬಹುರೂಪಮುಮಾಪತಿಮ್।।
ನೂರು ವರ್ಷಗಳ ಪರ್ಯಂತ ವಾಯುವನ್ನೇ ಆಹಾರವನ್ನಾಗಿ ಸೇವಿಸುತ್ತಾ ಆ ಪ್ರಭುವು ಬಹುರೂಪೀ ಉಮಾಪತಿ ಮಹಾದೇವನನ್ನು ಆರಾಧಿಸಿದನು.
12310017a ತತ್ರ ಬ್ರಹ್ಮರ್ಷಯಶ್ಚೈವ ಸರ್ವೇ ದೇವರ್ಷಯಸ್ತಥಾ।
12310017c ಲೋಕಪಾಲಾಶ್ಚ ಲೋಕೇಶಂ ಸಾಧ್ಯಾಶ್ಚ ವಸುಭಿಃ ಸಹ।।
12310018a ಆದಿತ್ಯಾಶ್ಚೈವ ರುದ್ರಾಶ್ಚ ದಿವಾಕರನಿಶಾಕರೌ।
12310018c ಮರುತೋ ಮಾರುತಶ್ಚೈವ ಸಾಗರಾಃ ಸರಿತಸ್ತಥಾ।।
12310019a ಅಶ್ವಿನೌ ದೇವಗಂಧರ್ವಾಸ್ತಥಾ ನಾರದಪರ್ವತೌ।
12310019c ವಿಶ್ವಾವಸುಶ್ಚ ಗಂಧರ್ವಃ ಸಿದ್ಧಾಶ್ಚಾಪ್ಸರಸಾಂ ಗಣಾಃ।।
ಅಲ್ಲಿ ಬ್ರಹ್ಮರ್ಷಿಗಳೆಲ್ಲರೂ, ದೇವರ್ಷಿಗಳೂ, ಲೋಕಪಾಲರೂ, ವಸುಗಳೊಂದಿಗೆ ಸಾಧ್ಯರು, ಆದಿತ್ಯರು, ರುದ್ರರು, ದಿವಾಕರ-ನಿಶಾಕರರಿಬ್ಬರೂ, ಮರುತನೂ, ಮಾರುತರೂ, ಸಾಗರ-ಸರಿತ್ತುಗಳೂ, ಅಶ್ವಿನೀದೇವತೆಗಳಿಬ್ಬರೂ, ದೇವ-ಗಂಧರ್ವರೂ, ನಾರದ-ಪರ್ವತರೂ, ಗಂಧರ್ವ ವಿಶ್ವಾವಸುವೂ, ಸಿದ್ಧ-ಅಪ್ಸರೆಯರ ಗಣಗಳೂ ಲೋಕೇಶನನ್ನು ಪ್ರಾರ್ಥಿಸುತ್ತಿದ್ದರು.
12310020a ತತ್ರ ರುದ್ರೋ ಮಹಾದೇವಃ ಕರ್ಣಿಕಾರಮಯೀಂ ಶುಭಾಮ್।
12310020c ಧಾರಯಾಣಃ ಸ್ರಜಂ ಭಾತಿ ಜ್ಯೋತ್ಸ್ನಾಮಿವ ನಿಶಾಕರಃ।।
ಅಲ್ಲಿ ಮಹಾದೇವನು ಶುಭ ಕರ್ಣಿಕಾರಗಳ ಹಾರವನ್ನು ಧರಿಸಿ ಬೆಳದಿಂಗಳ ಚಂದ್ರನಂತೆ ಪ್ರಕಾಶಿಸುತ್ತಿದ್ದನು.
12310021a ತಸ್ಮಿನ್ದಿವ್ಯೇ ವನೇ ರಮ್ಯೇ ದೇವದೇವರ್ಷಿಸಂಕುಲೇ।
12310021c ಆಸ್ಥಿತಃ ಪರಮಂ ಯೋಗಮೃಷಿಃ ಪುತ್ರಾರ್ಥಮುದ್ಯತಃ।।
ದೇವದೇವರ್ಷಿಸಂಕುಲ ದಿವ್ಯ ರಮ್ಯ ವನದಲ್ಲಿ ಋಷಿಯು ಪುತ್ರನಿಗಾಗಿ ಪರಮ ಯೋಗದಲ್ಲಿದ್ದನು.
12310022a ನ ಚಾಸ್ಯ ಹೀಯತೇ ವರ್ಣೋ ನ ಗ್ಲಾನಿರುಪಜಾಯತೇ।
12310022c ತ್ರಯಾಣಾಮಪಿ ಲೋಕಾನಾಂ ತದದ್ಭುತಮಿವಾಭವತ್।।
ಅವನ ಬಣ್ಣವು ಕುಂದಲಿಲ್ಲ. ಅವನಿಗೆ ಯಾವ ಆಯಾಸವೂ ಉಂಟಾಗಲಿಲ್ಲ. ಮೂರು ಲೋಕಗಳಲ್ಲಿಯೂ ಇದು ಅದ್ಭುತವಾಗಿ ಕಂಡಿತು.
12310023a ಜಟಾಶ್ಚ ತೇಜಸಾ ತಸ್ಯ ವೈಶ್ವಾನರಶಿಖೋಪಮಾಃ।
12310023c ಪ್ರಜ್ವಲಂತ್ಯಃ ಸ್ಮ ದೃಶ್ಯಂತೇ ಯುಕ್ತಸ್ಯಾಮಿತತೇಜಸಃ।।
ಆ ಅಮಿತತೇಜಸ್ವಿಯ ಜಟೆಯು ವೈಶ್ವಾನರನ ಶಿಖೆಯಂತೆ ತೇಜಸ್ಸಿನಿಂದ ಬೆಳಗುತ್ತಿದುದು ಕಾಣುತ್ತಿತ್ತು.
12310024a ಮಾರ್ಕಂಡೇಯೋ ಹಿ ಭಗವಾನೇತದಾಖ್ಯಾತವಾನ್ಮಮ।
12310024c ಸ ದೇವಚರಿತಾನೀಹ ಕಥಯಾಮಾಸ ಮೇ ಸದಾ।।
ಸದಾ ನನಗೆ ದೇವಚರಿತೆಗಳನ್ನು ಹೇಳುತ್ತಿದ್ದ ಭಗವಾನ್ ಮಾರ್ಕಂಡೇಯನು ನನಗೆ ಇದನ್ನು ಹೇಳಿದ್ದರು.
12310025a ತಾ ಏತಾದ್ಯಾಪಿ ಕೃಷ್ಣಸ್ಯ ತಪಸಾ ತೇನ ದೀಪಿತಾಃ।
12310025c ಅಗ್ನಿವರ್ಣಾ ಜಟಾಸ್ತಾತ ಪ್ರಕಾಶಂತೇ ಮಹಾತ್ಮನಃ।।
ಅಯ್ಯಾ! ಆ ತಪಸ್ಸಿನಿಂದ ಉದ್ದೀಪ್ತವಾಗಿದ್ದ ಮಹಾತ್ಮ ವ್ಯಾಸನ ಜಟೆಯು ಈಗಲೂ ಕೂಡ ಅಗ್ನಿವರ್ಣದಿಂದ ಪ್ರಜ್ವಲಿಸುತ್ತಿದೆ2.
12310026a ಏವಂವಿಧೇನ ತಪಸಾ ತಸ್ಯ ಭಕ್ತ್ಯಾ ಚ ಭಾರತ।
12310026c ಮಹೇಶ್ವರಃ ಪ್ರಸನ್ನಾತ್ಮಾ ಚಕಾರ ಮನಸಾ ಮತಿಮ್।।
ಭಾರತ! ಅವನ ಈ ವಿಧದ ತಪಸ್ಸು ಮತ್ತು ಭಕ್ತಿಗಳಿಂದ ಪ್ರಸನ್ನಾತ್ಮನಾದ ಮಹೇಶ್ವರನು ಅವನಿಗೆ ಒಲಿಯಲು ಮನಸ್ಸು ಮಾಡಿದನು.
12310027a ಉವಾಚ ಚೈನಂ ಭಗವಾಂಸ್ತ್ರ್ಯಂಬಕಃ ಪ್ರಹಸನ್ನಿವ।
12310027c ಏವಂವಿಧಸ್ತೇ ತನಯೋ ದ್ವೈಪಾಯನ ಭವಿಷ್ಯತಿ।।
ಭಗವಾನ್ ತ್ರ್ಯಂಬಕನು ನಸುನಗುತ್ತಾ ಅವನಿಗೆ ಹೇಳಿದನು: “ದ್ವೈಪಾಯನ! ಆ ರೀತಿಯ ತನಯನೇ ನಿನಗಾಗುತ್ತಾನೆ.
12310028a ಯಥಾ ಹ್ಯಗ್ನಿರ್ಯಥಾ ವಾಯುರ್ಯಥಾ ಭೂಮಿರ್ಯಥಾ ಜಲಮ್।
12310028c ಯಥಾ ಚ ಖಂ ತಥಾ ಶುದ್ಧೋ ಭವಿಷ್ಯತಿ ಸುತೋ ಮಹಾನ್।।
ಅಗ್ನಿ, ವಾಯು, ಭೂಮಿ, ಜಲ ಮತ್ತು ಆಕಾಶಗಳು ಎಷ್ಟು ಶುದ್ಧವಾಗಿವೆಯೋ ಅಷ್ಟೇ ಶುದ್ಧಾತ್ಮನಾದ ಮಹಾನ್ ಸುತನು ನಿನಗಾಗುತ್ತಾನೆ.
12310029a ತದ್ಭಾವಭಾವೀ ತದ್ಬುದ್ಧಿಸ್ತದಾತ್ಮಾ ತದಪಾಶ್ರಯಃ।
12310029c ತೇಜಸಾವೃತ್ಯ ಲೋಕಾಂಸ್ತ್ರೀನ್ಯಶಃ ಪ್ರಾಪ್ಸ್ಯತಿ ಕೇವಲಮ್।।
ಅವನು ಅದರ ಭಾವದಲ್ಲಿಯೇ ಇರುತ್ತಾನೆ. ಅವನ ಬುದ್ಧಿಯು ಆತ್ಮನಲ್ಲಿಯೇ ಲೀನವಾಗಿರುತ್ತದೆ. ಅವನು ಆತ್ಮನನ್ನೇ ಆಶ್ರಯಿಸಿರುತ್ತಾನೆ. ತನ್ನ ತೇಜಸ್ಸಿನಿಂದ ಮೂರು ಲೋಕಗಳನ್ನೂ ಆವರಿಸಿ ಕೇವಲ ಯಶಸ್ಸನ್ನು ಪಡೆಯುತ್ತಾನೆ.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಶುಕೋತ್ಪತ್ತೌ ದಶಾಧಿಕತ್ರಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಶುಕೋತ್ಪತ್ತಿ ಎನ್ನುವ ಮುನ್ನೂರಾಹತ್ತನೇ ಅಧ್ಯಾಯವು.
-
ಭಾರತ ದರ್ಶನದಲ್ಲಿ ಈ ಅಧ್ಯಾಯಕ್ಕೆ ಮೊದಲು 20 ಶ್ಲೋಕಗಳ ಇನ್ನೊಂದು ಅಧ್ಯಾಯವಿದೆ. ಯುಧಿಷ್ಠಿರ ಉವಾಚ: ಯದ್ಯಸ್ತಿ ದತ್ತಮಿಷ್ಟಂ ವಾ ತಪಸ್ತಪ್ತಂ ತಥೈವ ಚ। ಗುರೂಣಾಂ ವಾಪಿ ಶುಶ್ರೂಷಾ ತನ್ಮೇ ಬ್ರೂಹಿ ಪಿತಾಮಹ।। 1।। ಭೀಷ್ಮ ಉವಾಚ: ಆತ್ಮನಾನರ್ಥಯುಕ್ತೇನ ಪಾಪೇ ನಿವಿಶತೇ ಮನಃ ಸ ಕಮ್ರ ಕಲುಷಂ ಕೃತ್ವಾ ಕ್ಲೇಶೇ ಮಹತಿ ಧೀಯತೇ।। 2।। ದುರ್ಬಿಕ್ಷಾದೇವ ದುರ್ಭಿಕ್ಷಂ ಕ್ಲೇಶಾತ್ಕ್ಲೇಶಂ ಭಯಾದ್ಭಯಮ್। ಮೃತೇಭ್ಯಃ ಪ್ರಮೃತಾ ಯಾಂತಿ ದರಿದ್ರಾಃ ಪಾಪಕರ್ಮಿಣಃ।। 3।। ಉತ್ಸವಾದುತ್ಸವಂ ಯಾಂತಿ ಸ್ವರ್ಗಾತ್ಸ್ವರ್ಗಂ ಸುಖಾತ್ಸುಖಮ್। ಶ್ರದ್ದಧಾನಾಶ್ಚ ದಾಂತಾಶ್ಚ ಧನಸ್ಥಾಃ ಶುಭಕಾರಿಣಃ।। 4।। ವ್ಯಾಲಕುಂಜರದುರ್ಗೇಷು ಸರ್ಪಚೌರಭಯೇಷು ಚ। ಹಸ್ತಾವಾಪೇನ ಗಚ್ಚಂತಿ ನಾಸ್ತಿಕಾಃ ಕಿಮತಃ ಪರಮ್।। 5।। ಪ್ರಿಯದೇವಾತಿಧೇಯಾಶ್ಚ ವದಾನ್ಯಾಹ ಪ್ರಿಯಸಾಧವಃ। ಕ್ಷೇಮ್ಯಮಾತ್ಮವತಾಂ ಮಾರ್ಗಮಾಸ್ಥಿತಾ ಹಸ್ತದಕ್ಷಿಣಾಃ।। 6।। ಪುಲಕಾ ಇವ ಧಾನ್ಯೇಷು ಪೂತ್ಯಂಡಾ ಇವ ಪಕ್ಷಿಷು। ತದ್ವಿಧಾಸ್ತೇ ಮನುಷ್ಯೇಷು ಯೇಷಾಂ ಧರ್ಮೋ ನ ಕಾರಣಮ್।। 7।। ಸುಶೀಘ್ರಮಪಿ ಧಾವಂತಂ ವಿಧಾನಮನುಧಾವತಿ। ಶೇತೇ ಸಹ ಶಯಾನೇನ ಯೇನ ಯೇನ ಯಥಾ ಕೃತಮ್।। 8।। ಉಪತಿಷ್ಠತಿ ತಿಷ್ಟಂತಂ ಗಚ್ಛಂತಮನುಗಚ್ಛತಿ। ಕರೋತಿ ಕುರ್ವತಃ ಕರ್ಮ ಚ್ಛಾಯೇವಾನುವಿಧೀಯತೇ।। 9।। ಯೇನ ಯೇನ ಯಥಾ ಯದ್ಯತ್ಪುರಾ ಕರ್ಮ ಸುನಿಶ್ಚಿತಮ್। ತತ್ತದೇಕತರೋ ಭುಂಕ್ತೇ ನಿತ್ಯಂ ವಿಹಿತಮಾತ್ಮನಾ।। 10।। ಸ್ವಕರ್ಮಫಲನಿಕ್ಷೇಪಂ ವಿಧಾನಪರಿರಕ್ಷಿತಮ್। ಭೂತಗ್ರಾಮಮಿಮಂ ಕಾಲಃ ಸಮಂತಾದಪಕರ್ಷತಿ।। 11।। ಅಚೋದ್ಯಮಾನಾನಿ ಯಥಾ ಪುಷ್ಪಾಣಿ ಚ ಫಲಾನಿ ಚ। ಸ್ವಂ ಕಾಲಂ ನಾತಿವರ್ತಂತೇ ತಥಾ ಕರ್ಮ ಪುರಾ ಕೃತಮ್।। 12।। ಸಮ್ಮಾನಶ್ಚಾವಮಾನಶ್ಚ ಲಾಭಾಲಾಭೌ ಕ್ಷಯೋದಯೌ। ಪ್ರವೃತ್ತಾ ವಿನಿವರ್ತಂತೇ ನಿಧನಾಂತಾಃ ಪದೇ ಪದೇ।। 13।। ಆತ್ಮನಾ ವಿಹಿತಂ ದುಃಖಮಾತ್ಮನಾ ವಿಹಿತಂ ಸುಖಮ್। ಗರ್ಭಶಯ್ಯಾಮುಪಾದಾಯ ಭುಜ್ಯತೇ ಪೌರ್ವದೇಹಿಕಮ್।। 14।। ಬಾಲೋ ಯುವಾ ವಾ ವೃದ್ಧಶ್ಚ ಯತ್ಕರೋತಿ ಶುಭಾಶುಭಮ್। ತಸ್ಯಾಂ ತಸ್ಯಾಮವಸ್ಥಾಯಾಂ ಭುಂಕ್ತೇ ಜನ್ಮನಿ ಜನ್ಮನಿ।। 15।। ಯಥಾಧೇನುಸಹಸ್ರೇಷು ವತ್ಸೋ ವಿಂದತಿ ಮಾತರಮ್। ತಥಾ ಪೂರ್ವಕೃತಂ ಕರ್ಮ ಕರ್ತಾರಮನುಗಚ್ಛತಿ ।। 16।। ಮಲಿನಂ ಹಿ ಯಥಾ ವಸ್ತ್ರಂ ಪಶ್ಚಾಚ್ಛುದ್ಧ್ಯಯತಿ ವಾರಿಣಾ। ಉಪವಾಸೈಃ ಪ್ರತಪ್ತಾನಾಂ ದೀರ್ಘಂ ಸುಖಮನಂತಕಮ್।। 17।। ದೀರ್ಘಕಾಲೇನ ತಪಸಾ ಸೇವಿತೇನ ಮಹಾಮತೇ। ಧರ್ಮನಿರ್ಧೂತಪಾಪಾನಾಂ ಸಂಸಿಧ್ಯಂತೇ ಮನೋರಥಾಃ।। 18।। ಶಕುನಾನಾಮಿವಾಕಾಶೇ ಮತ್ಸ್ಯಾನಾಮಿವ ಚೋದಕೇ। ಪದಂಯ ಥಾ ನ ದೃಶ್ಯೇತ ತಥಾ ಪುಣ್ಯಕೃತಾಂ ಗತಿಃ।। 19।। ಅಲಮನ್ಯೈರುಪಾಲಬ್ಧೈಃ ಕೀರ್ತಿತೈಶ್ಚ ವ್ಯತಿಕ್ರಮೈಃ। ಪೇಶಲಂ ಚಾನುರೂಪಂ ಚ ಕರ್ತವ್ಯಂ ಹಿತಮಾತ್ಮನಃ।। 20।। ↩︎
-
ಭೀಷ್ಮನು ಯುಧಿಷ್ಠಿರನಿಗೆ ಈ ಕಥೆಯನ್ನು ಹೇಳುತ್ತಿರುವಾಗ ವ್ಯಾಸನೂ ಅಲ್ಲಿದ್ದನು. ↩︎