ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಮೋಕ್ಷಧರ್ಮ ಪರ್ವ
ಅಧ್ಯಾಯ 282
ಸಾರ
ವರ್ಣಾಶ್ರಮಧರ್ಮದ ಪಾಲನೆಯ ಮಹತ್ವ (1-21).
12282001 ಪರಾಶರ ಉವಾಚ।
12282001a ವೃತ್ತಿಃ ಸಕಾಶಾದ್ವರ್ಣೇಭ್ಯಸ್ತ್ರಿಭ್ಯೋ ಹೀನಸ್ಯ ಶೋಭನಾ।
12282001c ಪ್ರೀತ್ಯೋಪನೀತಾ ನಿರ್ದಿಷ್ಟಾ ಧರ್ಮಿಷ್ಠಾನ್ಕುರುತೇ ಸದಾ।।
ಪರಾಶರನು ಹೇಳಿದನು: “ಮೂರು ವರ್ಣದವರ ಸೇವೆಯ ವೃತ್ತಿಯೇ ಶೂದ್ರನಿಗೆ ಶುಭದಾಯಕವಾದುದು. ಪ್ರೀತಿಯಿಂದ ಮಾಡುವ ಈ ವೃತ್ತಿಯೇ ಸದಾ ಅವನನ್ನು ಧರ್ಮಿಷ್ಠನನ್ನಾಗಿ ಮಾಡುತ್ತದೆ.
12282002a ವೃತ್ತಿಶ್ಚೇನ್ನಾಸ್ತಿ ಶೂದ್ರಸ್ಯ ಪಿತೃಪೈತಾಮಹೀ ಧ್ರುವಾ।
12282002c ನ ವೃತ್ತಿಂ ಪರತೋ ಮಾರ್ಗೇಚ್ಚುಶ್ರೂಷಾಂ ತು ಪ್ರಯೋಜಯೇತ್।।
ಪಿತೃಪಿತಾಮಹರ ನಿರ್ದಿಷ್ಟವಾದ ಅನ್ಯ ವೃತ್ತಿಯು ಇಲ್ಲದಿದ್ದರೆ ಶೂದ್ರನು ಬೇರೆ ಯಾವ ವೃತ್ತಿಯನ್ನೂ ಅವಲಂಬಿಸಬಾರದು. ಮೂರು ವರ್ಣದವರ ಸೇವೆಯಲ್ಲಿಯೇ ತೊಡಗಿರಬೇಕು.
12282003a ಸದ್ಭಿಸ್ತು ಸಹ ಸಂಸರ್ಗಃ ಶೋಭತೇ ಧರ್ಮದರ್ಶಿಭಿಃ।
12282003c ನಿತ್ಯಂ ಸರ್ವಾಸ್ವವಸ್ಥಾಸು ನಾಸದ್ಭಿರಿತಿ ಮೇ ಮತಿಃ।।
ಧರ್ಮದರ್ಶಿ ಸತ್ಪುರುಷರ ಸಂಸರ್ಗವು ಶೋಭಿಸುತ್ತದೆ. ನಿತ್ಯವೂ ಸರ್ವಾವಸ್ಥೆಗಳಲ್ಲಿಯೂ ಅಸತ್ಪುರುಷರ ಸಹವಾಸವನ್ನು ಮಾಡಬಾರದೆಂದು ನನ್ನ ಮತವು.
12282004a ಯಥೋದಯಗಿರೌ ದ್ರವ್ಯಂ ಸಂನಿಕರ್ಷೇಣ ದೀಪ್ಯತೇ।
12282004c ತಥಾ ಸತ್ಸಂನಿಕರ್ಷೇಣ ಹೀನವರ್ಣೋಽಪಿ ದೀಪ್ಯತೇ।।
ಉದಯಪರ್ವತದಲ್ಲಿರುವ ವಸ್ತುವು ಸೂರ್ಯನ ನಿಕಟಸಾನ್ನಿಧ್ಯದಿಂದ ಹೇಗೆ ಪ್ರಕಾಶಿಸುತ್ತದೆಯೋ ಹಾಗೆ ಸತ್ಪುರುಷರ ಸಾನ್ನಿಧ್ಯದಿಂದ ಹೀನವರ್ಣದವರೂ ಶೋಭಿಸುತ್ತಾರೆ.
12282005a ಯಾದೃಶೇನ ಹಿ ವರ್ಣೇನ ಭಾವ್ಯತೇ ಶುಕ್ಲಮಂಬರಮ್।
12282005c ತಾದೃಶಂ ಕುರುತೇ ರೂಪಮೇತದೇವಮವೈಹಿ ಮೇ।।
ಬಿಳೀ ಬಟ್ಟೆಯು ಯಾವ ಬಣ್ಣವನ್ನು ಹಾಕುತ್ತೇವೋ ಆ ಬಣ್ಣವನ್ನು ಪಡೆದುಕೊಳ್ಳುವಂತೆ, ಯಾರೊಂದಿಗೆ ಸಂಗಮಾಡುತ್ತೇವೋ ಅವರಂತೆಯೇ ನಾವೂ ಆಗುತ್ತೇವೆ ಎನ್ನುವುದನ್ನು ನನ್ನಿಂದ ತಿಳಿ.1
12282006a ತಸ್ಮಾದ್ಗುಣೇಷು ರಜ್ಯೇಥಾ ಮಾ ದೋಷೇಷು ಕದಾ ಚನ।
12282006c ಅನಿತ್ಯಮಿಹ ಮರ್ತ್ಯಾನಾಂ ಜೀವಿತಂ ಹಿ ಚಲಾಚಲಮ್।।
ಆದುದರಿಂದ ಸದ್ಗುಣಗಳನ್ನು ಪ್ರೀತಿಸು. ದೋಷಗಳಲ್ಲಿ ಎಂದೂ ಪ್ರೀತಿಯಿರದಿರಲಿ. ಇಲ್ಲಿ ಮರ್ತ್ಯರ ಜೀವನವು ಅನಿತ್ಯವೂ ಚಂಚಲವೂ ಆಗಿರುತ್ತದೆ.
12282007a ಸುಖೇ ವಾ ಯದಿ ವಾ ದುಃಖೇ ವರ್ತಮಾನೋ ವಿಚಕ್ಷಣಃ।
12282007c ಯಶ್ಚಿನೋತಿ ಶುಭಾನ್ಯೇವ ಸ ಭದ್ರಾಣೀಹ2 ಪಶ್ಯತಿ।।
ಬುದ್ಧಿವಂತನು ಸುಖ ಅಥವಾ ದುಃಖದಲ್ಲಿರಲಿ, ಶುಭಕರ್ಮಗಳನ್ನೇ ಮಾಡುತ್ತಿದ್ದರೆ ಅವನು ಕಲ್ಯಾಣವನ್ನೇ ಕಾಣುತ್ತಾನೆ.
12282008a ಧರ್ಮಾದಪೇತಂ ಯತ್ಕರ್ಮ ಯದ್ಯಪಿ ಸ್ಯಾನ್ಮಹಾಫಲಮ್।
12282008c ನ ತತ್ಸೇವೇತ ಮೇಧಾವೀ ನ ತದ್ಧಿತಮಿಹೋಚ್ಯತೇ।।
ಒಂದು ವೇಳೆ ಅದು ಮಹಾಫಲವನ್ನು ಕೊಡುತ್ತಾದಾದರೂ ಮೇಧಾವಿಯು ಧರ್ಮವಿರುದ್ಧ ಕರ್ಮಗಳನ್ನು ಮಾಡಬಾರದು. ಏಕೆಂದರೆ ಅಂತಹ ಕರ್ಮಗಳು ಅಹಿತವಾದವು ಎಂದು ಹೇಳಿದ್ದಾರೆ.
12282009a ಯೋ ಹೃತ್ವಾ ಗೋಸಹಸ್ರಾಣಿ ನೃಪೋ ದದ್ಯಾದರಕ್ಷಿತಾ।
12282009c ಸ ಶಬ್ದಮಾತ್ರಫಲಭಾಗ್ರಾಜಾ ಭವತಿ ತಸ್ಕರಃ।।
ಪ್ರಜೆಗಳನ್ನು ರಕ್ಷಿಸದ ರಾಜನು ಸಹಾಸ್ರಾರು ಗೋವುಗಳನ್ನು ಅಪಹರಿಸಿ ದಾನಮಾಡಿದರೆ ಅವನು ಹೆಸರಿಗೆ ಮಾತ್ರ ದಾನಿಯೆನಿಸಿಕೊಳ್ಳುತ್ತಾನೆಯೇ ಹೊರತು ಅಂತಹ ರಾಜನು ಕಳ್ಳನೇ ಆಗುತ್ತಾನೆ.
12282010a ಸ್ವಯಂಭೂರಸೃಜಚ್ಚಾಗ್ರೇ ಧಾತಾರಂ ಲೋಕಪೂಜಿತಮ್।
12282010c ಧಾತಾಸೃಜತ್ ಪುತ್ರಮೇಕಂ ಪ್ರಜಾನಾಂ ಧಾರಣೇ ರತಮ್।।
ಸ್ವಯಂಭುವು ಮೊದಲು ಲೋಕ ಪೂಜಿತ ಬ್ರಹ್ಮನನ್ನು ಸೃಷ್ಟಿಸಿದನು. ಬ್ರಹ್ಮನು ಸರ್ವಲೋಕಗಳ ಧಾರಣೆಮಾಡಲು ಪರ್ಜನ್ಯ ಎಂಬ ಪುತ್ರನನ್ನು ಸೃಷ್ಟಿಸಿದನು.
12282011a ತಮರ್ಚಯಿತ್ವಾ ವೈಶ್ಯಸ್ತು ಕುರ್ಯಾದತ್ಯರ್ಥಮೃದ್ಧಿಮತ್।
12282011c ರಕ್ಷಿತವ್ಯಂ ತು ರಾಜನ್ಯೈರುಪಯೋಜ್ಯಂ ದ್ವಿಜಾತಿಭಿಃ।।
12282012a ಅಜಿಹ್ಮೈರಶಠಕ್ರೋಧೈರ್ಹವ್ಯಕವ್ಯಪ್ರಯೋಕ್ತೃಭಿಃ।
12282012c ಶೂದ್ರೈರ್ನಿರ್ಮಾರ್ಜನಂ ಕಾರ್ಯಮೇವಂ ಧರ್ಮೋ ನ ನಶ್ಯತಿ।।
ಅವನನ್ನು ಅರ್ಚಿಸಿ ವೈಶ್ಯರು ಜೀವಿಕೆಗಾಗಿ ಕೃಷಿ-ವಾಣಿಜ್ಯ-ಪಶುಪಾಲನೆ ಮೊದಲಾದವುಗಳನ್ನು ಮಾಡಿಕೊಂಡು ಸಮೃದ್ಧಶಾಲಿಯಾಗುತ್ತಾರೆ. ಕ್ಷತ್ರಿಯರು ಆ ಸಂಪತ್ತನ್ನು ರಕ್ಷಿಸುವವರಾಗುತ್ತಾರೆ. ಬ್ರಾಹ್ಮಣರು ಕುಟಿಲತೆ, ಶಠತ್ವ ಮತ್ತು ಕ್ರೋಧರಹಿತರಾಗಿ ಹವ್ಯಕವ್ಯಗಳಲ್ಲಿ ನಿಪುಣರಾಗಿ ವೈಶ್ಯರ ಸಂಪತ್ತನ್ನು ಸದುಪಯೋಗಕ್ಕೆ ತೊಡಗಿಸಲಿ. ಶೂದ್ರರು ಭೂಮಿಶುದ್ಧಿ ಮೊದಲಾದ ಕಾರ್ಯಗಳನ್ನು ಮಾಡಲಿ. ಹೀಗೆ ಎಲ್ಲರೂ ಸ್ವಕರ್ಮಗಳನ್ನು ಮಾಡಿದರೆ ಧರ್ಮಭ್ರಷ್ಟವಾಗುವುದಿಲ್ಲ.
12282013a ಅಪ್ರನಷ್ಟೇ ತತೋ ಧರ್ಮೇ ಭವಂತಿ ಸುಖಿತಾಃ ಪ್ರಜಾಃ।
12282013c ಸುಖೇನ ತಾಸಾಂ ರಾಜೇಂದ್ರ ಮೋದಂತೇ ದಿವಿ ದೇವತಾಃ।।
ಧರ್ಮವು ನಷ್ಟವಾಗಿರದೇ ಇದ್ದರೆ ಪ್ರಜೆಗಳು ಸುಖಿಗಳಾಗುತ್ತಾರೆ. ರಾಜೇಂದ್ರ! ಅವರ ಸುಖದಿಂದ ದಿವಿಯಲ್ಲಿ ದೇವತೆಗಳು ಮೋದಿಸುತ್ತಾರೆ.
12282014a ತಸ್ಮಾದ್ಯೋ ರಕ್ಷತಿ ನೃಪಃ ಸ ಧರ್ಮೇಣಾಭಿಪೂಜ್ಯತೇ।
12282014c ಅಧೀತೇ ಚಾಪಿ ಯೋ ವಿಪ್ರೋ ವೈಶ್ಯೋ ಯಶ್ಚಾರ್ಜನೇ ರತಃ।।
12282015a ಯಶ್ಚ ಶುಶ್ರೂಷತೇ ಶೂದ್ರಃ ಸತತಂ ನಿಯತೇಂದ್ರಿಯಃ।
12282015c ಅತೋಽನ್ಯಥಾ ಮನುಷ್ಯೇಂದ್ರ ಸ್ವಧರ್ಮಾತ್ಪರಿಹೀಯತೇ।।
ಮನುಷ್ಯೇಂದ್ರ! ಆದುದರಿಂದ ಸತತವೂ ನಿಯತೇಂದ್ರಿಯನಾಗಿ ಪ್ರಜೆಗಳನ್ನು ರಕ್ಷಿಸುವ ನೃಪ, ವೇದಾಧ್ಯಯನ ಮಾಡುವ ವಿಪ್ರ, ಧನಸಂಪಾದನೆಯಲ್ಲಿರುವ ವೈಶ್ಯ, ಮತ್ತು ಶುಶ್ರೂಷಣೆಯಲ್ಲಿರುವ ಶೂದ್ರ – ಎಲ್ಲರೂ ತಮ್ಮ ಧರ್ಮದಲ್ಲಿರುವುದರಿಂದ ಲೋಕಮಾನ್ಯರಾಗುತ್ತಾರೆ. ಅನ್ಯಥಾ ಅವರು ಸ್ವಧರ್ಮದಿಂದ ಚ್ಯುತರಾಗುತ್ತಾರೆ.
12282016a ಪ್ರಾಣಸಂತಾಪನಿರ್ದಿಷ್ಟಾಃ ಕಾಕಿಣ್ಯೋಽಪಿ ಮಹಾಫಲಾಃ।
12282016c ನ್ಯಾಯೇನೋಪಾರ್ಜಿತಾ ದತ್ತಾಃ ಕಿಮುತಾನ್ಯಾಃ ಸಹಸ್ರಶಃ।।
ಪ್ರಾಣಸಂತಾಪ ಪೂರ್ವಕ ನ್ಯಾಯದಿಂದ ಗಳಿಸಿದ ಒಂದು ಕವಡೆಯ ನಾಣ್ಯವನ್ನಾದರೂ ದಾನವಾಗಿತ್ತರೆ ಅದೇ ಮಹಾಫಲವನ್ನು ನೀಡುತ್ತದೆ. ಹೀಗಿರುವಾಗ ನ್ಯಾಯದಿಂದ ಗಳಿಸಿದ ಸಹಸ್ರಾರು ಅನ್ಯ ಪದಾರ್ಥಗಳನ್ನು ದಾನಮಾಡಿದರೆ ಅದರ ಫಲದ ಕುರಿತು ಹೇಳುವುದೇನಿದೆ?
12282017a ಸತ್ಕೃತ್ಯ ತು ದ್ವಿಜಾತಿಭ್ಯೋ ಯೋ ದದಾತಿ ನರಾಧಿಪ।
12282017c ಯಾದೃಶಂ ತಾದೃಶಂ ನಿತ್ಯಮಶ್ನಾತಿ ಫಲಮೂರ್ಜಿತಮ್।।
ನರಾಧಿಪ! ಬ್ರಾಹ್ಮಣರನ್ನು ಸತ್ಕರಿಸಿ ದಾನಮಾಡುವವನು ಏನನ್ನು ಹೇಗೆ ದಾನಮಾಡುತ್ತಾನೋ ಅದರ ಫಲವನ್ನು ನಿತ್ಯವೂ ಹಾಗೆಯೇ ಬೋಗಿಸುತ್ತಾನೆ.
12282018a ಅಭಿಗಮ್ಯ ದತ್ತಂ ತುಷ್ಟ್ಯಾ ಯದ್ಧನ್ಯಮಾಹುರಭಿಷ್ಟುತಮ್।
12282018c ಯಾಚಿತೇನ ತು ಯದ್ದತ್ತಂ ತದಾಹುರ್ಮಧ್ಯಮಂ ಬುಧಾಃ।।
ಸ್ವಯಂ ಹೋಗಿ ದಾನವನ್ನಿತ್ತು ಸಂತುಷ್ಟಗೊಳಿಸುವುದನ್ನು ಉತ್ತಮ ದಾನವೆಂದು ಪ್ರಶಂಸಿಸುತ್ತಾರೆ. ಕೇಳಿದ ನಂತರ ಕೊಡುವ ದಾನಕ್ಕೆ ಮಧ್ಯಮ ಶ್ರೇಣಿಯ ದಾನವೆಂದು ತಿಳಿದವರು ಹೇಳುತ್ತಾರೆ.
12282019a ಅವಜ್ಞಯಾ ದೀಯತೇ ಯತ್ತಥೈವಾಶ್ರದ್ಧಯಾಪಿ ಚ।
12282019c ತದಾಹುರಧಮಂ ದಾನಂ ಮುನಯಃ ಸತ್ಯವಾದಿನಃ।।
ಅನಾದರಣೆ ಮತ್ತು ಅಶ್ರದ್ಧೆಯಿಂದ ಮಾಡಿದ ದಾನವನ್ನು ಸತ್ಯವಾದೀ ಮುನಿಗಳು ಅಧಮಶ್ರೇಣಿಯ ದಾನವೆನ್ನುತ್ತಾರೆ.
12282020a ಅತಿಕ್ರಮೇ ಮಜ್ಜಮಾನೋ ವಿವಿಧೇನ ನರಃ ಸದಾ।
12282020c ತಥಾ ಪ್ರಯತ್ನಂ ಕುರ್ವೀತ ಯಥಾ ಮುಚ್ಯೇತ ಸಂಶಯಾತ್।।
ನೀರಿನಲ್ಲಿ ಮುಳುಗುತ್ತಿರುವನು ಮೇಲೇಳಲು ವಿವಿಧ ಪ್ರಯತ್ನಗಳನ್ನು ಮಾಡುವಂತೆ, ಮನುಷ್ಯನು ಸಂಸಾರಸಮುದ್ರದಿಂದ ಪಾರಾಗಲು ಸದಾ ಪ್ರಯತ್ನವನ್ನು ಮಾಡುತ್ತಿರಬೇಕು.
12282021a ದಮೇನ ಶೋಭತೇ ವಿಪ್ರಃ ಕ್ಷತ್ರಿಯೋ ವಿಜಯೇನ ತು।
12282021c ಧನೇನ ವೈಶ್ಯಃ ಶೂದ್ರಸ್ತು ನಿತ್ಯಂ ದಾಕ್ಷ್ಯೇಣ ಶೋಭತೇ।।
ವಿಪ್ರನು ದಮೆಯಿಂದ ಶೋಭಿಸುತ್ತಾನೆ. ಕ್ಷತ್ರಿಯನು ವಿಜಯದಿಂದ, ವೈಶ್ಯನು ಧನದಿಂದ ಮತ್ತು ಶೂದ್ರನು ನಿತ್ಯ ದಕ್ಷತೆಯಿಂದ ಶೋಭಿಸುತ್ತಾರೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಪರಾಶರಗೀತಾಯಾಂ ದ್ವಾಶೀತ್ಯತ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಪರಾಶರಗೀತಾ ಎನ್ನುವ ಇನ್ನೂರಾಎಂಭತ್ತೆರಡನೇ ಅಧ್ಯಾಯವು.