268: ಮಾಂಡವ್ಯಜನಕಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ಮೋಕ್ಷಧರ್ಮ ಪರ್ವ

ಅಧ್ಯಾಯ 268

ಸಾರ

ತೃಷ್ಣೆಯನ್ನು ತ್ಯಜಿಸುವ ವಿಷಯದಲ್ಲಿ ಮಾಂಡವ್ಯ ಮುನಿ-ಜನಕರ ನಡುವಿನ ಸಂವಾದ (1-20).

12268001 ಯುಧಿಷ್ಠಿರ ಉವಾಚ।
12268001a ಭ್ರಾತರಃ ಪಿತರಃ ಪುತ್ರಾ ಜ್ಞಾತಯಃ ಸುಹೃದಸ್ತಥಾ।
12268001c ಅರ್ಥಹೇತೋರ್ಹತಾಃ ಕ್ರೂರೈರಸ್ಮಾಭಿಃ ಪಾಪಬುದ್ಧಿಭಿಃ।।

ಯುಧಿಷ್ಠಿರನು ಹೇಳಿದನು: “ಸಂಪತ್ತಿಗಾಗಿ ನಮ್ಮ ಕ್ರೂರತನದಿಂದ ಮತ್ತು ಪಾಪಬುದ್ಧಿಯಿಂದ ಸಹೋದರರು, ಪಿತರು, ಪುತ್ರರು, ಬಂಧುಗಳು ಮತ್ತು ಸುಹೃದಯರು ಹತರಾದರು.

12268002a ಯೇಯಮರ್ಥೋದ್ಭವಾ ತೃಷ್ಣಾ ಕಥಮೇತಾಂ ಪಿತಾಮಹ।
12268002c ನಿವರ್ತಯೇಮ ಪಾಪಂ ಹಿ ತೃಷ್ಣಯಾ ಕಾರಿತಾ ವಯಮ್।।

ಪಿತಾಮಹ! ಈ ತೃಷ್ಣೆಯು ಸಂಪತ್ತಿಗಾಗಿಯೇ ಹುಟ್ಟಿಕೊಂಡಿತು. ತೃಷ್ಣೆಯಿಂದ ನಾವು ಮಾಡಿದ ಈ ಪಾಪವನ್ನು ಹೇಗೆ ಕಳೆದುಕೊಳ್ಳಬಹುದು?”

12268003 ಭೀಷ್ಮ ಉವಾಚ।
12268003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್।
12268003c ಗೀತಂ ವಿದೇಹರಾಜೇನ ಮಾಂಡವ್ಯಾಯಾನುಪೃಚ್ಚತೇ।।

ಭೀಷ್ಮನು ಹೇಳಿದನು: “ಈ ವಿಷಯದಲ್ಲಿ ಪುರಾತನ ಇತಿಹಾಸವಾದ ಮಾಂಡವ್ಯನ ಪ್ರಶ್ನೆಗೆ ಉತ್ತರವಾದ ವಿದೇಹರಾಜನ ಗೀತೆಯನ್ನು ಉದಾಹರಿಸುತ್ತಾರೆ.

12268004a ಸುಸುಖಂ ಬತ ಜೀವಾಮಿ ಯಸ್ಯ ಮೇ ನಾಸ್ತಿ ಕಿಂ ಚನ।
12268004c ಮಿಥಿಲಾಯಾಂ ಪ್ರದೀಪ್ತಾಯಾಂ ನ ಮೇ ದಹ್ಯತಿ ಕಿಂ ಚನ।।

“ನನ್ನದೆನ್ನುವುದು ಯಾವುದೂ ಇಲ್ಲ. ಆದರೂ ನಾನು ಅತ್ಯಂತ ಸುಖದಿಂದ ಜೀವಿಸುತ್ತಿದ್ದೇನೆ. ಮಿಥೆಲೆಯು ಹತ್ತಿಕೊಂಡು ಉರಿಯುತ್ತಿದ್ದರೂ ನನ್ನದ್ಯಾವುದೂ ಸುಟ್ಟುಹೋಗುತ್ತಿಲ್ಲ.

12268005a ಅರ್ಥಾಃ ಖಲು ಸಮೃದ್ಧಾ ಹಿ ಬಾಢಂ ದುಃಖಂ ವಿಜಾನತಾಮ್।
12268005c ಅಸಮೃದ್ಧಾಸ್ತ್ವಪಿ ಸದಾ ಮೋಹಯಂತ್ಯವಿಚಕ್ಷಣಾನ್।।

ಸಂಪತ್ತು ಸಮೃದ್ಧಿಯನ್ನು ತರುವುದೇನೋ ಸರಿ. ಆದರೆ ತಿಳಿದವರು ಇದು ದುಃಖಕ್ಕೆ ಕಾರಣವೆಂದು ತಿಳಿದಿದ್ದಾರೆ. ತಿಳಿಯದೇ ಇರುವವರನ್ನು ಸಂಪತ್ತು, ಸಮೃದ್ಧಿಯನ್ನು ತರದಿದ್ದರೂ, ಮೋಹಿಸುತ್ತದೆ.

12268006a ಯಚ್ಚ ಕಾಮಸುಖಂ ಲೋಕೇ ಯಚ್ಚ ದಿವ್ಯಂ ಮಹತ್ಸುಖಮ್।
12268006c ತೃಷ್ಣಾಕ್ಷಯಸುಖಸ್ಯೈತೇ ನಾರ್ಹತಃ ಷೋಡಶೀಂ ಕಲಾಮ್।।

ಈ ಲೋಕದ ಕಾಮಸುಖ ಮತ್ತು ಸ್ವರ್ಗಲೋಕದ ಮಹಾಸುಖ ಇವೆರಡೂ ತೃಷ್ಣಾಕ್ಷಯ ಸುಖದ ಹದಿನಾರನೇ ಒಂದು ಅಂಶಕ್ಕೂ ಸಮನಾಗಿಲ್ಲ.

12268007a ಯಥೈವ ಶೃಂಗಂ ಗೋಃ ಕಾಲೇ ವರ್ಧಮಾನಸ್ಯ ವರ್ಧತೇ।
12268007c ತಥೈವ ತೃಷ್ಣಾ ವಿತ್ತೇನ ವರ್ಧಮಾನೇನ ವರ್ಧತೇ।।

ಕಾಲಕ್ಕೆ ತಕ್ಕಂತೆ ಗೋವು ಬೆಳೆಯುತ್ತಾ ಬಂದಂತೆ ಅದರ ಕೊಂಬೂ ಬೆಳೆಯುತ್ತದೆ. ಅದೇ ರೀತಿ ಸಂಪತ್ತು ಹೆಚ್ಚಾಗುತ್ತಾ ಬಂದಂತೆ ತೃಷ್ಣೆಯೂ ಹೆಚ್ಚಾಗುತ್ತದೆ.

12268008a ಕಿಂ ಚಿದೇವ ಮಮತ್ವೇನ ಯದಾ ಭವತಿ ಕಲ್ಪಿತಮ್।
12268008c ತದೇವ ಪರಿತಾಪಾಯ ನಾಶೇ ಸಂಪದ್ಯತೇ ಪುನಃ।।

ಯಾವ ವಸ್ತುವಿನ ಮೇಲಾದರೂ ಮಮತ್ವವೆನ್ನುವನ್ನು ಕಲ್ಪಿಸಿಕೊಂಡರೆ ಅದು ನಾಶವಾದಾಗ ಪುನಃ ಪರಿತಾಪವುಂಟಾಗುತ್ತದೆ.

12268009a ನ ಕಾಮಾನನುರುಧ್ಯೇತ ದುಃಖಂ ಕಾಮೇಷು ವೈ ರತಿಃ।
12268009c ಪ್ರಾಪ್ಯಾರ್ಥಮುಪಯುಂಜೀತ ಧರ್ಮೇ ಕಾಮಂ ವಿವರ್ಜಯೇತ್।।

ಕಾಮನೆಗಳನ್ನು ಅನುಸರಿಸಿಕೊಂಡು ಹೋಗಬಾರದು. ಕಾಮನೆಗಳಲ್ಲಿಯ ಆಸಕ್ತಿಯು ದುಃಖವನ್ನು ತರುತ್ತದೆ. ಧನಪ್ರಾಪ್ತಿಯಾದರೂ ಅದನ್ನು ಧರ್ಮಕ್ಕೆ ಬಳಸಬೇಕು. ಕಾಮವನ್ನು ವರ್ಜಿಸಬೇಕು.

12268010a ವಿದ್ವಾನ್ಸರ್ವೇಷು ಭೂತೇಷು ವ್ಯಾಘ್ರಮಾಂಸೋಪಮೋ1 ಭವೇತ್।
12268010c ಕೃತಕೃತ್ಯೋ ವಿಶುದ್ಧಾತ್ಮಾ ಸರ್ವಂ ತ್ಯಜತಿ ವೈ ಸಹ।।

ವಿದ್ವಾಂಸನು ಸರ್ವಭೂತಗಳಲ್ಲಿಯೂ – ಹುಲಿ ಮತ್ತು ಮಾಂಸದ ಮುದ್ದೆ – ಎನ್ನುವಂತೆ ಸಮನಾಗಿರಬೇಕು. ವಿಶುದ್ಧಾತ್ಮನಾಗಿ ಕೃತಕೃತ್ಯನಾದವನು ಎಲ್ಲವನ್ನೂ ತ್ಯಜಿಸುತ್ತಾನೆ.

12268011a ಉಭೇ ಸತ್ಯಾನೃತೇ ತ್ಯಕ್ತ್ವಾ ಶೋಕಾನಂದೌ ಪ್ರಿಯಾಪ್ರಿಯೇ।
12268011c ಭಯಾಭಯೇ ಚ ಸಂತ್ಯಜ್ಯ ಸಂಪ್ರಶಾಂತೋ ನಿರಾಮಯಃ।।

ಸತ್ಯ-ಸುಳ್ಳು, ಶೋಕ-ಆನಂದ, ಪ್ರಿಯ-ಅಪ್ರಿಯ, ಭಯ-ಅಭಯ ಈ ದ್ವಂದ್ವಗಳನ್ನು ತ್ಯಜಿಸಿದವನು ಪ್ರಶಾಂತನೂ ನಿರಾಮಯನೂ ಆಗುತ್ತಾನೆ.

12268012a ಯಾ ದುಸ್ತ್ಯಜಾ ದುರ್ಮತಿಭಿರ್ಯಾ ನ ಜೀರ್ಯತಿ ಜೀರ್ಯತಃ।
12268012c ಯೋಽಸೌ ಪ್ರಾಣಾಂತಿಕೋ ರೋಗಸ್ತಾಂ ತೃಷ್ಣಾಂ ತ್ಯಜತಃ ಸುಖಮ್।।

ದುರ್ಮತಿಗಳಿಗೆ ಇದನ್ನು ತ್ಯಜಿಸುವುದು ಕಷ್ಟವು. ದೇಹವು ಜೀರ್ಣವಾದರೂ ಅದು ಜೀರ್ಣವಾಗುವುದಿಲ್ಲ. ಇದು ಪ್ರಾಣಾಂತಿಕ ರೋಗದಂತಿರುತ್ತದೆ. ತೃಷ್ಣೆಯನ್ನು ತ್ಯಜಿಸಿದರೆ ಸುಖವುಂಟಾಗುತ್ತದೆ.

12268013a ಚಾರಿತ್ರಮಾತ್ಮನಃ ಪಶ್ಯಂಶ್ಚಂದ್ರಶುದ್ಧಮನಾಮಯಮ್।
12268013c ಧರ್ಮಾತ್ಮಾ ಲಭತೇ ಕೀರ್ತಿಂ ಪ್ರೇತ್ಯ ಚೇಹ ಯಥಾಸುಖಮ್।।

ಆತ್ಮನಲ್ಲಿ ಧರ್ಮವಿರುವವನು ಶುದ್ಧ ಚಂದ್ರನಂತೆ ತನ್ನ ನಿರ್ಮಲ ಆತ್ಮನನ್ನು ಕಾಣುತ್ತಾನೆ. ಅವನು ಇಲ್ಲಿ ಕೀರ್ತಿಯನ್ನೂ ಮತ್ತು ಮರಣಾನಂತರ ಯಥಾಸುಖವನ್ನೂ ಪಡೆಯುತ್ತಾನೆ.”

12268014a ರಾಜ್ಞಸ್ತದ್ವಚನಂ ಶ್ರುತ್ವಾ ಪ್ರೀತಿಮಾನಭವದ್ದ್ವಿಜಃ।
12268014c ಪೂಜಯಿತ್ವಾ ಚ ತದ್ವಾಕ್ಯಂ ಮಾಂಡವ್ಯೋ ಮೋಕ್ಷಮಾಶ್ರಿತಃ।।

ರಾಜನ ಮಾತನ್ನು ಕೇಳಿ ದ್ವಿಜನು ಪ್ರೀತನಾದನು. ಆ ಮಾತನ್ನು ಪೂಜಿಸಿ ಮಾಂಡವ್ಯನು ಮೋಕ್ಷಮಾರ್ಗವನ್ನಾಶ್ರಯಿಸಿದನು.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಮೋಕ್ಷಧರ್ಮಪರ್ವಣಿ ಮಾಂಡವ್ಯಜನಕಸಂವಾದೇ ಅಷ್ಟಷಷ್ಟ್ಯಧಿಕದ್ವಿಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಮೋಕ್ಷಧರ್ಮಪರ್ವದಲ್ಲಿ ಮಾಂಡವ್ಯಜನಕಸಂವಾದ ಎನ್ನುವ ಇನ್ನೂರಾಅರವತ್ತೆಂಟನೇ ಅಧ್ಯಾಯವು.


  1. ಆತ್ಮನಾ ಸೋಪಮೋ (ಭಾರತ ದರ್ಶನ). ↩︎