ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 163
ಸಾರ
ಗೌತಮನು ಸಮುದ್ರದ ಕಡೆ ಪ್ರಯಾಣಬೆಳೆಸುವುದು, ಸಂಜೆ ಒಂದು ದಿವ್ಯ ಬಕಪಕ್ಷಿಗಳ ರಾಜ ರಾಜಧರ್ಮನ ಮನೆಯಲ್ಲಿ ಅತಿಥಿಯಾಗಿ ಉಳಿಯುವುದು (1-23).
12163001 ಭೀಷ್ಮ ಉವಾಚ।
12163001a ತಸ್ಯಾಂ ನಿಶಾಯಾಂ ವ್ಯುಷ್ಟಾಯಾಂ ಗತೇ ತಸ್ಮಿನ್ದ್ವಿಜೋತ್ತಮೇ।
12163001c ನಿಷ್ಕ್ರಮ್ಯ ಗೌತಮೋಽಗಚ್ಚತ್ಸಮುದ್ರಂ ಪ್ರತಿ ಭಾರತ।।
ಭೀಷ್ಮನು ಹೇಳಿದನು: “ಭಾರತ! ರಾತ್ರಿಯು ಕಳೆಯಲು ಆ ದ್ವಿಜೋತ್ತಮನು ಹೊರಟು ಹೋಗನು ಮತ್ತು ಗೌತಮನೂ ಕೂಡ ಹೊರಟು ಸಮುದ್ರದ ಕಡೆ ಪ್ರಯಾಣಬೆಳೆಸಿದನು.
12163002a ಸಾಮುದ್ರಕಾನ್ಸ ವಣಿಜಸ್ತತೋಽಪಶ್ಯತ್ ಸ್ಥಿತಾನ್ಪಥಿ।
12163002c ಸ ತೇನ ಸಾರ್ಥೇನ ಸಹ ಪ್ರಯಯೌ ಸಾಗರಂ ಪ್ರತಿ।।
ಮಾರ್ಗದಲ್ಲಿ ಸಮುದ್ರದ ಹತ್ತಿರ ಕೆಲವು ವಣಿಜರು ತಂಗಿದ್ದುದನ್ನು ನೋಡಿದನು. ಅವರ ಜೊತೆಗೂಡಿ ಅವನು ಸಾಗರದ ಕಡೆ ಪ್ರಯಾಣಿಸಿದನು.
12163003a ಸ ತು ಸಾರ್ಥೋ ಮಹಾರಾಜ ಕಸ್ಮಿಂಶ್ಚಿದ್ಗಿರಿಗಹ್ವರೇ।
12163003c ಮತ್ತೇನ ದ್ವಿರದೇನಾಥ ನಿಹತಃ ಪ್ರಾಯಶೋಽಭವತ್।।
ಮಹಾರಾಜ! ಯಾವುದೋ ಒಂದು ಗಿರಿಯ ಗುಹೆಯಲ್ಲಿ ತಂಗಿದ್ದ ಆ ವೈಶ್ಯರನ್ನು ಒಂದು ಮದಿಸಿದ ಆನೆಯು ಆಕ್ರಮಣಿಸಿ ದಳದ ಬಹಳಷ್ಟು ಮಂದಿ ಹತರಾದರು.
12163004a ಸ ಕಥಂ ಚಿತ್ತತಸ್ತಸ್ಮಾತ್ಸಾರ್ಥಾನ್ಮುಕ್ತೋ ದ್ವಿಜಸ್ತದಾ।
12163004c ಕಾಂದಿಗ್ಭೂತೋ ಜೀವಿತಾರ್ಥೀ ಪ್ರದುದ್ರಾವೋತ್ತರಾಂ ದಿಶಮ್।।
ಹೇಗೋ ಮಾಡಿ ಆ ದ್ವಿಜನು ದಳದಿಂದ ವಿಮುಕ್ತನಾಗಿ ಜೀವನವನ್ನು ಉಳಿಸಿಕೊಳ್ಳಲು ಯಾವ ದಿಕ್ಕಿನಲ್ಲಿ ಹೋಗಬೇಕು ಎಂದು ನಿರ್ಣಯಿಸಿ ಉತ್ತರ ದಿಕ್ಕಿನ ಕಡೆ ಓಡಿದನು.
12163005a ಸ ಸರ್ವತಃ ಪರಿಭ್ರಷ್ಟಃ ಸಾರ್ಥಾದ್ದೇಶಾತ್ತಥಾರ್ಥತಃ।
12163005c ಏಕಾಕೀ ವ್ಯದ್ರವತ್ತತ್ರ ವನೇ ಕಿಂಪುರುಷೋ ಯಥಾ।।
ವರ್ತಕರ ದಳವನ್ನೂ ಬಿಟ್ಟು ಏಕಾಕಿಯಾದ ಅವನು ಆ ದೇಶದಿಂದ ಭ್ರಷ್ಟನಾಗಿ, ಕಿಂಪುರುಷನೋ ಎನ್ನುವಂತೆ ಓರ್ವನೇ ವನದಲ್ಲಿ ತಿರುಗಾಡತೊಡಗಿದನು.
12163006a ಸ ಪಂಥಾನಮಥಾಸಾದ್ಯ ಸಮುದ್ರಾಭಿಸರಂ ತದಾ।
12163006c ಆಸಸಾದ ವನಂ ರಮ್ಯಂ ಮಹತ್ಪುಷ್ಪಿತಪಾದಪಮ್1।।
ಅಲ್ಲಿ ಅವನಿಗೆ ಸಮುದ್ರದ ಕಡೆ ಹೋಗುವ ಮಾರ್ಗವು ದೊರಕಲು ಅದೇ ಮಾರ್ಗವನ್ನು ಹಿಡಿದು ಅನೇಕ ಪುಷ್ಪಭರಿತ ಮರಗಳಿಂದ ಕೂಡಿದ್ದ ಒಂದು ರಮ್ಯ ವನಕ್ಕೆ ಬಂದನು.
12163007a ಸರ್ವರ್ತುಕೈರಾಮ್ರವನೈಃ ಪುಷ್ಪಿತೈರುಪಶೋಭಿತಮ್।
12163007c ನಂದನೋದ್ದೇಶಸದೃಶಂ ಯಕ್ಷಕಿನ್ನನರಸೇವಿತಮ್।।
ಸರ್ವಋತುಗಳಲ್ಲಿಯೂ ಹೂಬಿಡುವ ಮಾವಿನ ಮರಗಳ ಸಾಲಿನಿಂದ ಅದು ಶೋಭಿಸುತ್ತಿತ್ತು. ಯಕ್ಷ-ಕಿನ್ನರರು ಬಳಸುತ್ತಿದ್ದ ಆ ವನವು ನಂದನವನದಂತೆ ತೋರುತ್ತಿತ್ತು.
12163008a ಶಾಲತಾಲಧವಾಶ್ವತ್ಥತ್ವಚಾಗುರುವನೈಸ್ತಥಾ2।
12163008c ಚಂದನಸ್ಯ ಚ ಮುಖ್ಯಸ್ಯ ಪಾದಪೈರುಪಶೋಭಿತಮ್।
12163008e ಗಿರಿಪ್ರಸ್ಥೇಷು ರಮ್ಯೇಷು ಶುಭೇಷು ಸುಸುಗಂಧಿಷು।।
12163009a ಸಮಂತತೋ ದ್ವಿಜಶ್ರೇಷ್ಠಾ ವಲ್ಗು ಕೂಜಂತಿ ತತ್ರ ವೈ।
12163009c ಮನುಷ್ಯವದನಾಸ್ತ್ವನ್ಯೇ ಭಾರುಂಡಾ ಇತಿ ವಿಶ್ರುತಾಃ।
12163009e ಭೂಲಿಂಗಶಕುನಾಶ್ಚಾನ್ಯೇ ಸಮುದ್ರಂ ಸರ್ವತೋಽಭವನ್3।।
ಶಾಲ, ತಾಲ, ಧವಾ, ಅಶ್ವತ್ಥ, ಅಗುರುವಿನ ವನ, ಹಾಗೂ ಶ್ರೇಷ್ಠ ಚಂದನ ವೃಕ್ಷಗಳು ಆ ವನಕ್ಕೆ ಶೋಭೆನೀಡುತ್ತಿದ್ದವು. ಅಲ್ಲಿಯ ರಮಣೀಯ ಮತ್ತು ಸುಗಂಧಿತ ಪರ್ವತ ತಪ್ಪಲು ಪ್ರದೇಶಗಳಲ್ಲಿ ಎಲ್ಲಕಡೆ ಉತ್ತಮೋತ್ತಮ ಪಕ್ಷಿಗಳು ಕಲರವ ಮಾಡುತ್ತಿದ್ದವು. ಕೆಲವು ಮನುಷ್ಯನ ಮುಖವುಳ್ಳ ಭಾರುಂಡ ಎಂಬ ಪಕ್ಷಿಗಳಿದ್ದವು. ಇನ್ನು ಕೆಲವು ಸಮುದ್ರದ ಸುತ್ತಲೂ ಇರುವ ಭೂಲಿಂಗಪಕ್ಷಿಗಳು ಇದ್ದವು.
12163010a ಸ ತಾನ್ಯತಿಮನೋಜ್ಞಾನಿ ವಿಹಂಗಾಭಿರುತಾನಿ ವೈ।
12163010c ಶೃಣ್ವನ್ಸುರಮಣೀಯಾನಿ ವಿಪ್ರೋಽಗಚ್ಚತ ಗೌತಮಃ।।
ಪಕ್ಷಿಗಳ ಆ ಮಧುರ ಮನೋಹರ ಮತ್ತು ರಮಣೀಯ ಕಲರವಗಳನ್ನು ಕೇಳುತ್ತಾ ವಿಪ್ರ ಗೌತಮನು ಮುಂದೆ ನಡೆದನು.
12163011a ತತೋಽಪಶ್ಯತ್ಸುರಮ್ಯೇ ಸ ಸುವರ್ಣಸಿಕತಾಚಿತೇ।
12163011c ದೇಶಭಾಗೇ ಸಮೇ ಚಿತ್ರೇ ಸ್ವರ್ಗೋದ್ದೇಶಸಮಪ್ರಭೇ।।
12163012a ಶ್ರಿಯಾ ಜುಷ್ಟಂ ಮಹಾವೃಕ್ಷಂ ನ್ಯಗ್ರೋಧಂ ಪರಿಮಂಡಲಮ್।
12163012c ಶಾಖಾಭಿರನುರೂಪಾಭಿರ್ಭೂಷಿತಂ ಚತ್ರಸಂನಿಭಮ್।।
ಆಗ ಅವನಿಗೆ ಚಿನ್ನದ ಮರಳಿನ ರಾಶಿಗಳಿಂದ ಸಮಾವೃತವಾಗಿದ್ದ ಒಂದು ಸಮತಲ ಸುರಮ್ಯ ಸ್ಥಳವು ಸಿಕ್ಕಿತು. ಸುಖದಾಯಕವಾದ ಆ ಸ್ಥಳವು ವಿಚಿತ್ರವಾಗಿಯೂ ಸ್ವರ್ಗಕ್ಕೆ ಸಮನಾಗಿಯೂ ಇತ್ತು. ಅಲ್ಲಿ ಮಂಡಲಾಕಾರದ ಅತ್ಯಂತ ಕಾಂತಿಯುಕ್ತವಾದ ಒಂದು ಆಲದ ಮಹಾವೃಕ್ಷವನ್ನು ಕಂಡನು. ತಕ್ಕುದಾದ ದೊಡ್ಡ ದೊಡ್ಡ ರೆಂಬೆಗಳಿಂದ ಕೂಡಿದ್ದ ಆ ವೃಕ್ಷವು ತೆರೆದಿಟ್ಟ ಛತ್ರಿಯಂತೆಯೇ ತೋರುತ್ತಿತ್ತು.
12163013a ತಸ್ಯ ಮೂಲಂ ಸುಸಂಸಿಕ್ತಂ ವರಚಂದನವಾರಿಣಾ।
12163013c ದಿವ್ಯಪುಷ್ಪಾನ್ವಿತಂ ಶ್ರೀಮತ್ಪಿತಾಮಹಸದೋಪಮಮ್।।
ಅದರ ಬುಡವು ಶ್ರೇಷ್ಠ ಚಂದನದ ನೀರಿನಿಂದ ಒದ್ದೆಯಾಗಿತ್ತು. ಪಿತಾಮಹ ಬ್ರಹ್ಮನ ಸಭೆಯಂತೆ ಶೋಭಾಯಮಾನವಾಗಿದ್ದ ಆ ಆಲದ ಮರವು ದಿವ್ಯ ಪುಷ್ಪಗಳಿಂದ ಕೂಡಿತ್ತು.
12163014a ತಂ ದೃಷ್ಟ್ವಾ ಗೌತಮಃ ಪ್ರೀತೋ ಮುನಿಕಾಂತಮನುತ್ತಮಮ್4।
12163014c ಮೇಧ್ಯಂ ಸುರಗೃಹಪ್ರಖ್ಯಂ ಪುಷ್ಪಿತೈಃ ಪಾದಪೈರ್ವೃತಮ್।
12163014e ತಮಾಗಮ್ಯ ಮುದಾ ಯುಕ್ತಸ್ತಸ್ಯಾಧಸ್ತಾದುಪಾವಿಶತ್।।
ಮನಸ್ಸಿಗೆ ಆಹ್ಲಾದಕರವಾಗಿದ್ದ ಆ ಅನುತ್ತಮ ವೃಕ್ಷವನ್ನು ನೋಡಿ ಗೌತಮನು ಪ್ರೀತನಾದನು. ಸುಪುಷ್ಪಿತ ವೃಕ್ಷಗಳಿಂದ ಸುತ್ತುವರೆಯಲ್ಪಟ್ಟಿದ್ದ ಆ ಆಲದಮರವು ಪವಿತ್ರ ದೇವಗೃಹಕ್ಕೆ ಸಮಾನವಾಗಿತ್ತು. ಗೌತಮನು ಆ ವೃಕ್ಷದ ಸಮೀಪ ಹೋಗಿ ಆಶ್ಚರ್ಯದಿಂದ ನೋಡುತ್ತಾ ಅದರ ಕೆಳಗೆ ಕುಳಿತುಕೊಂಡನು.
12163015a ತತ್ರಾಸೀನಸ್ಯ ಕೌರವ್ಯ ಗೌತಮಸ್ಯ ಸುಖಃ ಶಿವಃ।
12163015c ಪುಷ್ಪಾಣಿ ಸಮುಪಸ್ಪೃಶ್ಯ ಪ್ರವವಾವನಿಲಃ ಶುಚಿಃ।
12163015e ಹ್ಲಾದಯನ್ಸರ್ವಗಾತ್ರಾಣಿ ಗೌತಮಸ್ಯ ತದಾ ನೃಪ।।
ಕೌರವ್ಯ! ನೃಪ! ಗೌತಮನು ಅಲ್ಲಿ ಕುಳಿತುಕೊಳ್ಳಲು ಸುಖಕರ ಮತ್ತು ಮಂಗಳಮಯನಾದ ಶುಭ ಶುಚಿ ಅನಿಲನು ಹೂವುಗಳನ್ನು ಸ್ಪರ್ಶಿಸಿ ಗೌತಮನ ಸರ್ವಾಂಗಗಳನ್ನೂ ಆಹ್ಲಾದಗೊಳಿಸುತ್ತಾ ಮಂದಮಂದವಾಗಿ ಅವನ ಮೇಲೆ ಬೀಸತೊಡಗಿದನು.
12163016a ಸ ತು ವಿಪ್ರಃ ಪರಿಶ್ರಾಂತಃ ಸ್ಪೃಷ್ಟಃ ಪುಣ್ಯೇನ ವಾಯುನಾ।
12163016c ಸುಖಮಾಸಾದ್ಯ ಸುಷ್ವಾಪ ಭಾಸ್ಕರಶ್ಚಾಸ್ತಮಭ್ಯಗಾತ್।।
ಪುಣ್ಯ ವಾಯುವಿನ ಸ್ಪರ್ಶದಿಂದ ಪರಿಶ್ರಾಂತನಾಗಿದ್ದ ವಿಪ್ರನು ಸುಖವನ್ನು ಹೊಂದಿ ಅಲ್ಲಿಯೇ ಮಲಗಿಬಿಟ್ಟನು. ಅಷ್ಟರಲ್ಲಿಯೇ ಸೂರ್ಯನೂ ಮುಳುಗಿದನು.
12163017a ತತೋಽಸ್ತಂ ಭಾಸ್ಕರೇ ಯಾತೇ ಸಂಧ್ಯಾಕಾಲ ಉಪಸ್ಥಿತೇ।
12163017c ಆಜಗಾಮ ಸ್ವಭವನಂ ಬ್ರಹ್ಮಲೋಕಾತ್ಖಗೋತ್ತಮಃ।।
ಭಾಸ್ಕರನು ಮುಳುಗಿ ಸಂಧ್ಯಾಕಾಲವಾಗಲು ಬ್ರಹ್ಮಲೋಕದಿಂದ ಪಕ್ಷಿಶ್ರೇಷ್ಠನು ಬ್ರಹ್ಮಲೋಕದಿಂದ ತನ್ನ ಮನೆಗೆ ಹಿಂದಿರುಗಿದನು.
12163018a ನಾಡೀಜಂಘ ಇತಿ ಖ್ಯಾತೋ ದಯಿತೋ ಬ್ರಹ್ಮಣಃ ಸಖಾ।
12163018c ಬಕರಾಜೋ ಮಹಾಪ್ರಾಜ್ಞಃ ಕಶ್ಯಪಸ್ಯಾತ್ಮಸಂಭವಃ।।
ನಾಡೀಜಂಘ ಎಂದು ಖ್ಯಾತನಾಗಿದ್ದ ಅವನು ಬ್ರಹ್ಮನ ಸಖನಾಗಿದ್ದನು. ಕಶ್ಯಪನ ಮಗನಾಗಿದ್ದ ಅವನು ಬಕಪಕ್ಷಿಗಳ ರಾಜನೂ ಆಗಿದ್ದನು.
12163019a ರಾಜಧರ್ಮೇತಿ ವಿಖ್ಯಾತೋ ಬಭೂವಾಪ್ರತಿಮೋ ಭುವಿ।
12163019c ದೇವಕನ್ಯಾಸುತಃ ಶ್ರೀಮಾನ್ವಿದ್ವಾನ್ದೇವಪತಿಪ್ರಭಃ।।
ಅವನು ರಾಜಧರ್ಮನೆಂದು ವಿಖ್ಯಾತನಾಗಿ ಭುವಿಯಲ್ಲಿಯೇ ಅಪ್ರತಿಮನೆನಿಸಿಕೊಂಡಿದ್ದನು. ದೇವಕನ್ಯೆಯ ಸುತನಾಗಿದ್ದ ಆ ಶ್ರೀಮಾನನು ವಿದ್ವತ್ತನ್ನೂ ದೇವಪತಿಯ ಕಾಂತಿಯನ್ನೂ ಹೊಂದಿದ್ದನು.
12163020a ಮೃಷ್ಟಹಾಟಕಸಂಚನ್ನೋ ಭೂಷಣೈರರ್ಕಸಂನಿಭೈಃ।
12163020c ಭೂಷಿತಃ ಸರ್ವಗಾತ್ರೇಷು ದೇವಗರ್ಭಃ ಶ್ರಿಯಾ ಜ್ವಲನ್।।
ಅವನು ಅಂಗಾಂಗಗಳಲ್ಲಿ ಸೂರ್ಯನಂತೆ ಹೊಳೆಯುತ್ತಿದ್ದ ಭೂಷಣಗಳನ್ನು ಧರಿಸಿದ್ದನು. ಆ ದೇವಗರ್ಭನು ತನ್ನ ಸರ್ವ ಅಂಗಾಂಗಗಳಲ್ಲಿಯೂ ದಿವ್ಯ ಆಭರಣಗಳನ್ನು ಧರಿಸಿ ದಿವ್ಯಕಾಂತಿಯಿಂದ ದೇದೀಪ್ಯಮಾನನಾಗಿದ್ದನು.
12163021a ತಮಾಗತಂ ದ್ವಿಜಂ ದೃಷ್ಟ್ವಾ ವಿಸ್ಮಿತೋ ಗೌತಮೋಽಭವತ್।
12163021c ಕ್ಷುತ್ಪಿಪಾಸಾಪರೀತಾತ್ಮಾ ಹಿಂಸಾರ್ಥೀ ಚಾಪ್ಯವೈಕ್ಷತ।।
ಆಗಮಿಸಿದ ಪಕ್ಷಿಯನ್ನು ನೋಡಿ ಗೌತಮನು ವಿಸ್ಮಿತನಾದನು. ಹಸಿವು-ಬಾಯಾರಿಕೆಗಳಿಂದ ಬಳಲಿದ್ದ ಅವನು ಆ ಪಕ್ಷಿಯನ್ನು ಕೊಲ್ಲುವ ಇಚ್ಛೆಯಿಂದ ಅವನ ಕಡೆ ನೋಡಿದನು.
12163022 ರಾಜಧರ್ಮೋವಾಚ।
12163022a ಸ್ವಾಗತಂ ಭವತೇ ವಿಪ್ರ ದಿಷ್ಟ್ಯಾ ಪ್ರಾಪ್ತೋಽಸಿ ಮೇ ಗೃಹಮ್।
12163022c ಅಸ್ತಂ ಚ ಸವಿತಾ ಯಾತಃ ಸಂಧ್ಯೇಯಂ ಸಮುಪಸ್ಥಿತಾ।।
ರಾಜಧರ್ಮನು ಹೇಳಿದನು: “ವಿಪ್ರ! ನಿನಗೆ ಸ್ವಾಗತ! ಒಳ್ಳೆಯದಾಯಿತು ನೀನು ನನ್ನ ಮನೆಗೆ ಬಂದಿದ್ದೀಯೆ. ಸೂರ್ಯನೂ ಮುಳುಗಿದ್ದಾನೆ. ಸಾಯಂಕಾಲವಾಗಿಬಿಟ್ಟಿದೆ.
12163023a ಮಮ ತ್ವಂ ನಿಲಯಂ ಪ್ರಾಪ್ತಃ ಪ್ರಿಯಾತಿಥಿರನಿಂದಿತಃ।
12163023c ಪೂಜಿತೋ ಯಾಸ್ಯಸಿ ಪ್ರಾತರ್ವಿಧಿದೃಷ್ಟೇನ ಕರ್ಮಣಾ।।
ನೀನು ನನ್ನ ಮನೆಗೆ ಬಂದಿರುವ ಪ್ರೀತಿಯ ಮತ್ತು ಉತ್ತಮ ಅತಿಥಿಯು. ಬೆಳಿಗ್ಗೆ ನಾನು ವಿಧಿವತ್ತಾದ ಕರ್ಮಗಳಿಂದ ನಿನ್ನನ್ನು ಪೂಜಿಸಿದ ನಂತರ ನೀನು ಹೊರಡಬಹುದು.””
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಕೃತಘ್ನೋಪಾಖ್ಯಾನೇ ತ್ರಿಷಷ್ಟ್ಯಧಿಕಶತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಕೃತಘ್ನೋಪಾಖ್ಯಾನ ಎನ್ನುವ ನೂರಾಅರವತ್ಮೂರನೇ ಅಧ್ಯಾಯವು.