ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 147
ಸಾರ
ಬ್ರಹ್ಮಹತ್ಯೆಯ ಅಪರಾಧೀ ಜನಮೇಜಯನಿಗೆ ಇಂದ್ರೋತ ಮುನಿಯು ಆಶ್ರಯವನ್ನಿತ್ತಿದುದು (1-22).
12147001 ಭೀಷ್ಮ ಉವಾಚ।
12147001a ಏವಮುಕ್ತಃ ಪ್ರತ್ಯುವಾಚ ತಂ ಮುನಿಂ ಜನಮೇಜಯಃ।
12147001c ಗರ್ಹ್ಯಂ ಭವಾನ್ಗರ್ಹಯತಿ ನಿಂದ್ಯಂ ನಿಂದತಿ ಮಾ ಭವಾನ್।।
12147002a ಧಿಕ್ಕಾರ್ಯಂ ಮಾ1 ಧಿಕ್ಕುರುತೇ ತಸ್ಮಾತ್ತ್ವಾಹಂ ಪ್ರಸಾದಯೇ।
ಭೀಷ್ಮನು ಹೇಳಿದನು: “ಹೀಗೆ ಹೇಳಲು ಜನಮೇಜಯನು ಮುನಿಗೆ ಉತ್ತರಿಸಿದನು: “ತಿರಸ್ಕೃತನನ್ನು ನೀನು ತಿರಸ್ಕರಿಸುತ್ತಿದ್ದೀಯೆ. ನಿಂದನೀಯನನ್ನು ನೀನು ನಿಂದಿಸುತ್ತಿದ್ದೀಯೆ. ಧಿಕ್ಕರಿಸಬೇಡ. ನನ್ನನ್ನು ಧಿಕ್ಕರಿಸುತ್ತಿರುವ ನಿನ್ನನ್ನು ನಾನು ಪ್ರಸನ್ನಗೊಳಿಸ ಬಯಸುತ್ತೇನೆ.
12147002c ಸರ್ವಂ ಹೀದಂ ಸ್ವಕೃತಂ2 ಮೇ ಜ್ವಲಾಮ್ಯಗ್ನಾವಿವಾಹಿತಃ।।
12147003a ಸ್ವಕರ್ಮಾಣ್ಯಭಿಸಂಧಾಯ ನಾಭಿನಂದತಿ ಮೇ ಮನಃ।
ಇವೆಲ್ಲವೂ ನಾನೇ ಮಾಡಿಕೊಂಡಿದ್ದಾಗಿದೆ. ಇದರಿಂದಾಗಿಯೇ ನನ್ನೊಳಗೆ ಅಗ್ನಿಯನ್ನು ಇಟ್ಟಿದ್ದಾರೋ ಎನ್ನುವಂತೆ ನಾನು ಸುಡುತ್ತಿದ್ದೇನೆ. ನನ್ನದೇ ಕೃತ್ಯಗಳನ್ನು ನೆನಪಿಸಿಕೊಂಡು ನನ್ನ ಮನವು ಪ್ರಸನ್ನವಾಗುತ್ತಿಲ್ಲ.
12147003c ಪ್ರಾಪ್ತಂ ನೂನಂ ಮಯಾ ಘೋರಂ ಭಯಂ ವೈವಸ್ವತಾದಪಿ।।
12147004a ತತ್ತು ಶಲ್ಯಮನಿರ್ಹೃತ್ಯ ಕಥಂ ಶಕ್ಷ್ಯಾಮಿ ಜೀವಿತುಮ್।
12147004c ಸರ್ವಮನ್ಯೂನ್ವಿನೀಯ ತ್ವಮಭಿ ಮಾ ವದ ಶೌನಕ।।
ನಿಜವಾಗಿಯೂ ನನಗೆ ವೈವಸ್ವತ ಯಮನಿಂದಲೂ ಘೋರ ಭಯವು ಪ್ರಾಪ್ತವಾಗಲಿಕ್ಕಿದೆ. ಈ ಮುಳ್ಳನ್ನು ನನ್ನ ಹೃದಯದಿಂದ ಕಿತ್ತೊಗೆಯದೇ ನಾನು ಹೇಗೆ ತಾನೇ ಜೀವಿಸಿರಬಲ್ಲೆನು? ಶೌನಕ! ಸರ್ವಕ್ರೋಧಗಳನ್ನೂ ತ್ಯಜಿಸಿ ನನ್ನ ಉದ್ಧಾರದ ಯಾವುದಾದರೂ ಉಪಾಯವನ್ನು ಹೇಳು.
12147005a ಮಹಾನಸಂ ಬ್ರಾಹ್ಮಣಾನಾಂ ಭವಿಷ್ಯಾಮ್ಯರ್ಥವಾನ್ಪುನಃ3।
12147005c ಅಸ್ತು ಶೇಷಂ ಕುಲಸ್ಯಾಸ್ಯ ಮಾ ಪರಾಭೂದಿದಂ ಕುಲಮ್।।
ಭವಿಷ್ಯದಲ್ಲಿ ಪುನಃ ನಾನು ಉದ್ದೇಶಪೂರ್ವಕವಾಗಿ ಬ್ರಾಹ್ಮಣರ ಮಹಾನ್ ಭಕ್ತನಾಗುತ್ತೇನೆ. ನನ್ನ ಈ ಕುಲವು ಸ್ವಲ್ಪವಾದರೂ ಉಳಿದುಕೊಳ್ಳಲಿ. ಈ ಕುಲವು ಸಂಪೂರ್ಣವಾಗಿ ನಾಶವಾಗದಿರಲಿ.
12147006a ನ ಹಿ ನೋ ಬ್ರಹ್ಮಶಪ್ತಾನಾಂ ಶೇಷೋ ಭವಿತುಮರ್ಹತಿ।
12147006c ಶ್ರುತೀರಲಭಮಾನಾನಾಂ ಸಂವಿದಂ ವೇದನಿಶ್ಚಯಾತ್।।
12147007a ನಿರ್ವಿದ್ಯಮಾನಃ ಸುಭೃಶಂ ಭೂಯೋ ವಕ್ಷ್ಯಾಮಿ ಸಾಂಪ್ರತಮ್।
12147007c ಭೂಯಶ್ಚೈವಾಭಿನಂಕ್ಷಂತಿ ನಿರ್ಧರ್ಮಾ ನಿರ್ಜಪಾ ಇವ।।
ಬ್ರಾಹ್ಮಣರ ಶಾಪದಿಂದ ನಮ್ಮ ಕುಲವು ಸ್ವಲ್ಪವೂ ಉಳಿಯುವುದಿಲ್ಲ. ನನ್ನ ಈ ಪಾಪದ ಕಾರಣದಿಂದ ಸಮಾಜದಲ್ಲಿ ನನಗೆ ಪ್ರಶಂಸೆಯೂ ದೊರೆಯುತ್ತಿಲ್ಲ ಮತ್ತು ಸಜಾತೀಯ ಬಂಧುಗಳೊಂದಿಗೆ ಬೆರೆಯುವಂತೆಯೂ ಇಲ್ಲ. ಆದುದರಿಂದ ಅತ್ಯಂತ ಖೇದ ಮತ್ತು ವಿರಕ್ತಿಯನ್ನು ಹೊಂದಿ ವೇದಗಳ ನಿಶ್ಚಯಾತ್ಮಕ ಜ್ಞಾನವಿರುವ ನಿನ್ನಂಥಹ ಬ್ರಾಹ್ಮಣರಿಗೆ ಪುನಃ ಹೇಳುತ್ತೇನೆ: ನಿರ್ಜನ ಸ್ಥಾನದಲ್ಲಿರುವ ಯೋಗಿಗಳು ಪಾಪಿಪುರುಷರನ್ನು ಹೇಗೆ ರಕ್ಷಿಸುವರೋ ಹಾಗೆ ನೀವೂ ಕೂಡ ನಿಮ್ಮ ದಯೆಯಿಂದ ನನ್ನಂತಹ ದುಃಖೀ ಮನುಷ್ಯನ ರಕ್ಷಣೆಯನ್ನು ಮಾಡಬೇಕು.
12147008a ಅರ್ವಾಕ್ಚ ಪ್ರತಿತಿಷ್ಠಂತಿ ಪುಲಿಂದಶಬರಾ ಇವ।
12147008c ನ ಹ್ಯಯಜ್ಞಾ ಅಮುಂ ಲೋಕಂ ಪ್ರಾಪ್ನುವಂತಿ ಕಥಂ ಚನ।।
ತಮ್ಮ ಪಾಪದ ಕಾರಣದಿಂದ ಯಜ್ಞದ ಅಧಿಕಾರದಿಂದ ವಂಚಿತರಾದವರು ಪುಲಿಂದರು ಮತ್ತು ಶಬರರಂತೆ ನರಕದಲ್ಲಿಯೇ ಬಿದ್ದಿರುತ್ತಾರೆ. ಅವರು ಪರಲೋಕದಲ್ಲಿ ಯಾವುದೇ ಉತ್ತಮ ಗತಿಯನ್ನು ಪಡೆಯುವುದಿಲ್ಲ.
12147009a ಅವಿಜ್ಞಾಯೈವ ಮೇ ಪ್ರಜ್ಞಾಂ ಬಾಲಸ್ಯೇವ ಸುಪಂಡಿತಃ।
12147009c ಬ್ರಹ್ಮನ್ ಪಿತೇವ ಪುತ್ರೇಭ್ಯಃ ಪ್ರತಿ ಮಾಂ ವಾಂಚ ಶೌನಕ।।
ಬ್ರಹ್ಮನ್! ಶೌನಕ! ನೀನು ಪ್ರಾಜ್ಞ ಮತ್ತು ನಾನು ಮೂರ್ಖ. ನೀನು ನನ್ನ ಬಾಲಬುದ್ಧಿಯನ್ನು ತಿಳಿದುಕೊಂಡು ತಂದೆಯು ಪುತ್ರನ ಮೇಲೆ ಸ್ವಭಾವತಃ ಸಂತುಷ್ಟನಾಗುವಂತೆ ನನ್ನ ಮೇಲೂ ಪ್ರಸನ್ನನಾಗು.”
12147010 ಶೌನಕ ಉವಾಚ ।
12147010a ಕಿಮಾಶ್ಚರ್ಯಂ ಯತಃ ಪ್ರಾಜ್ಞೋ ಬಹು ಕುರ್ಯಾದ್ಧಿ ಸಾಂಪ್ರತಮ್4।
12147010c ಇತಿ ವೈ ಪಂಡಿತೋ ಭೂತ್ವಾ ಭೂತಾನಾಂ ನೋಪತಪ್ಯತಿ5।।
ಶೌನಕನು ಹೇಳಿದನು: “ಅತ್ಯಂತ ಪ್ರಾಜ್ಞನಾದವನು ಸಾಂಪ್ರತವಾದುದನ್ನು ಮಾಡಿದರೆ ಅದರಲ್ಲಿ ಆಶ್ಚರ್ಯವೇನಿದೆ? ಇದನ್ನು ತಿಳಿದ ಪಂಡಿತನು ಪ್ರಾಣಿಗಳ ಕುರಿತು ಪರಿತಪಿಸುವುದಿಲ್ಲ.
12147011a ಪ್ರಜ್ಞಾಪ್ರಾಸಾದಮಾರುಹ್ಯ ಅಶೋಚ್ಯಃ ಶೋಚತೇ ಜನಾನ್।
12147011c ಜಗತೀಸ್ಥಾನಿವಾದ್ರಿಸ್ಥಃ ಪ್ರಜ್ಞಯಾ ಪ್ರತಿಪಶ್ಯತಿ6।।
ವಿಶುದ್ಧ ಬುದ್ಧಿಯ ಅಟ್ಟವನ್ನೇರಿ ಸ್ವಯಂ ಶೋಕರಹಿತನಾಗಿದ್ದುಕೊಂಡು ಇತರ ದುಃಖೀ ಮನುಷ್ಯರಿಗಾಗಿ ಶೋಕಿಸುವವನು ಪರ್ವತ ಶಿಖರವನ್ನೇರಿ ಪರ್ವತದ ಸುತ್ತಲಿರುವ ಎಲ್ಲವನ್ನೂ ನೋಡುವಂತೆ ತನ್ನ ಜ್ಞಾನಬಲದಿಂದ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ.
12147012a ನ ಚೋಪಲಭತೇ ತತ್ರ ನ ಚ ಕಾರ್ಯಾಣಿ ಪಶ್ಯತಿ7।
12147012c ನಿರ್ವಿಣ್ಣಾತ್ಮಾ ಪರೋಕ್ಷೋ ವಾ ಧಿಕ್ಕೃತಃ ಸರ್ವಸಾಧುಷು8।।
ಸರ್ವಸಾಧುಗಳಿಂದ ವಿರಕ್ತನಾದ ಮತ್ತು ಅವರ ದೃಷ್ಟಿಪಥದಿಂದ ದೂರವಿರುವ ಅಥವಾ ಅವರಿಂದ ಧಿಕ್ಕರಿಸಲ್ಪಟ್ಟವನಿಗೆ ಜ್ಞಾನವು ಉಪಲಬ್ಧವಾಗುವುದಿಲ್ಲ ಮತ್ತು ಅವನ ಯಾವ ಕಾರ್ಯವೂ ನಡೆಯುವುದಿಲ್ಲ.
12147013a ವಿದಿತ್ವೋಭಯತೋ ವೀರ್ಯಂ ಮಾಹಾತ್ಮ್ಯಂ ವೇದ ಆಗಮೇ।
12147013c ಕುರುಷ್ವೇಹ ಮಹಾಶಾಂತಿಂ ಬ್ರಹ್ಮಾ ಶರಣಮಸ್ತು ತೇ।।
ವೇದ ಮತ್ತು ಆಗಮಗಳು ಹೇಳಿರುವ ಬ್ರಾಹ್ಮಣರ ವೀರ್ಯ ಮತ್ತು ಮಹಾತ್ಮೆಗಳನ್ನು ನೀನು ತಿಳಿದಿದ್ದೀಯೆ. ಇಲ್ಲಿ ಮಹಾಶಾಂತಿಯಿಂದ ಬ್ರಾಹ್ಮಣರು ನಿನಗೆ ನೆಲೆಯನ್ನು ನೀಡುವಂತೆ ಪ್ರಯತ್ನಿಸು.
12147014a ತದ್ವೈ ಪಾರತ್ರಿಕಂ ಚಾರು ಬ್ರಾಹ್ಮಣಾನಾಮಕುಪ್ಯತಾಮ್।
12147014c ಅಥ ಚೇತ್ತಪ್ಯಸೇ ಪಾಪೈರ್ಧರ್ಮಂ ಚೇದನುಪಶ್ಯಸಿ।।
ಕ್ರೋಧರಹಿತನಾಗಿ ಬ್ರಾಹ್ಮಣರಿಗೆ ಮಾಡುವ ಸೇವೆಯು ಪಾರಲೌಕಿಕ ಲಾಭಕ್ಕೆ ಕಾರಣವಾಗುತ್ತದೆ. ನಿನ್ನ ಪಾಪಗಳಿಗೆ ಪಶ್ಚಾತ್ತಾಪ ಪಡುತ್ತಿರುವೆಯಾದರೆ ನಿನ್ನ ದೃಷ್ಟಿಯು ನಿರಂತರವಾಗಿ ಧರ್ಮದ ಮೇಲೆಯೇ ಇರಲಿ.”
12147015 ಜನಮೇಜಯ ಉವಾಚ ।
12147015a ಅನುತಪ್ಯೇ ಚ ಪಾಪೇನ ನ ಚಾಧರ್ಮಂ ಚರಾಮ್ಯಹಮ್।
12147015c ಬುಭೂಷುಂ ಭಜಮಾನಂ ಚ ಪ್ರತಿವಾಂಚಾಮಿ9 ಶೌನಕ।।
ಜನಮೇಜಯನು ಹೇಳಿದನು: “ಶೌನಕ! ನನ್ನ ಪಾಪಗಳಿಗೆ ಪಶ್ಚಾತ್ತಾಪಪಡುತ್ತಿದ್ದೇನೆ. ಅಧರ್ಮದಲ್ಲಿ ನಡೆದುಕೊಳ್ಳುವುದಿಲ್ಲ. ನನ್ನ ಕಲ್ಯಾಣವನ್ನೇ ಬಯಸುತ್ತೇನೆ. ಭರವಸೆಯನ್ನು ನೀಡುತ್ತಿದ್ದೇನೆ.”
12147016 ಶೌನಕ ಉವಾಚ ।
12147016a ಚಿತ್ತ್ವಾ ಸ್ತಂಭಂ10 ಚ ಮಾನಂ ಚ ಪ್ರೀತಿಮಿಚ್ಚಾಮಿ ತೇ ನೃಪ।
12147016c ಸರ್ವಭೂತಹಿತೇ ತಿಷ್ಠ ಧರ್ಮಂ ಚೈವ ಪ್ರತಿಸ್ಮರ।।
ಶೌನಕನು ಹೇಳಿದನು: “ನೃಪ! ನಾನು ನಿನ್ನ ನಿಲುವು ಮತ್ತು ಮಾನವನ್ನು ಛೇದಿಸಿ ನಿನಗೆ ಪ್ರಿಯವಾದುದನ್ನು ಮಾಡುತ್ತೇನೆ. ನೀನು ಧರ್ಮವನ್ನು ಸದಾ ಸ್ಮರಿಸುತ್ತಾ ಸರ್ವಭೂತಗಳ ಹಿತದ ಸಾಧನೆಯನ್ನು ಮಾಡು.
12147017a ನ ಭಯಾನ್ನ ಚ ಕಾರ್ಪಣ್ಯಾನ್ನ ಲೋಭಾತ್ತ್ವಾಮುಪಾಹ್ವಯೇ।
12147017c ತಾಂ ಮೇ ದೇವಾ ಗಿರಂ ಸತ್ಯಾಂ ಶೃಣ್ವಂತು ಬ್ರಾಹ್ಮಣೈಃ ಸಹ।।
ನಾನು ನಿನ್ನನ್ನು ಭಯದಿಂದಾಗಲೀ ಕಾರ್ಪಣ್ಯದಿಂದಾಗಲೀ ಅಥವಾ ಲೋಭದಿಂದಾಗಲೀ ಸ್ವೀಕರಿಸುತ್ತಿಲ್ಲ. ನೀನು ಈ ಬ್ರಾಹ್ಮಣರೊಂದಿಗೆ ದೈವೀ ವಾಣಿಯಂತಿರುವ ನನ್ನ ಈ ಸತ್ಯಮಾತನ್ನು ಕೇಳು.
12147018a ಸೋಽಹಂ ನ ಕೇನ ಚಿಚ್ಚಾರ್ಥೀ ತ್ವಾಂ ಚ ಧರ್ಮಮುಪಾಹ್ವಯೇ।
12147018c ಕ್ರೋಶತಾಂ ಸರ್ವಭೂತಾನಾಮಹೋ ಧಿಗಿತಿ ಕುರ್ವತಾಮ್।।
ನಾನು ನಿನ್ನಿಂದ ಯಾವ ವಸ್ತುವನ್ನೂ ಬಯಸುತ್ತಿಲ್ಲ. ಸರ್ವಭೂತಗಳೂ ನಿನ್ನನ್ನು ಕೂಗಿ ಧಿಕ್ಕರಿಸುತ್ತಿದ್ದರೂ ಕೇವಲ ಧರ್ಮದ ಕಾರಣದಿಂದಾಗಿ ನಿನ್ನನ್ನು ಇಲ್ಲಿ ಸ್ವಾಗತಿಸುತ್ತಿದ್ದೇನೆ.
12147019a ವಕ್ಷ್ಯಂತಿ ಮಾಮಧರ್ಮಜ್ಞಾ ವಕ್ಷ್ಯಂತ್ಯಸುಹೃದೋ ಜನಾಃ।
12147019c ವಾಚಸ್ತಾಃ ಸುಹೃದಃ ಶ್ರುತ್ವಾ ಸಂಜ್ವರಿಷ್ಯಂತಿ ಮೇ ಭೃಶಮ್।।
ಜನರು ನನ್ನನ್ನು ಅಧರ್ಮಜ್ಞನೆಂದು ಹೇಳುವರು. ನನ್ನ ಸುಹೃದ್ ಜನರು ನನ್ನನ್ನು ತ್ಯಜಿಸುತ್ತಾರೆ. ನಾನು ನಿನಗೆ ನೀಡುವ ಧರ್ಮೋಪದೇಶವನ್ನು ಕೇಳಿ ನನ್ನ ಸುಹೃದಯರು ಅತ್ಯಂತ ರೋಷದಿಂದ ಉರಿಯುತ್ತಾರೆ.
12147020a ಕೇ ಚಿದೇವ ಮಹಾಪ್ರಾಜ್ಞಾಃ ಪರಿಜ್ಞಾಸ್ಯಂತಿ ಕಾರ್ಯತಾಮ್।
12147020c ಜಾನೀಹಿ ಮೇ ಕೃತಂ ತಾತ ಬ್ರಾಹ್ಮಣಾನ್ ಪ್ರತಿ ಭಾರತ।।
ಭಾರತ! ಯಾರಾದರೂ ಮಹಾಪ್ರಾಜ್ಞರೇ ನನ್ನ ಈ ಕಾರ್ಯವನ್ನು ಅರ್ಥಮಾಡಿಕೊಳ್ಳಬಲ್ಲರು. ಬ್ರಾಹ್ಮಣರಿಗೆ ಒಳ್ಳೆಯದನ್ನು ಮಾಡಬೇಕೆನ್ನುವುದೇ ನನ್ನ ಈ ಕಾರ್ಯದ ಉದ್ದೇಶವಾಗಿದೆ. ಇದನ್ನು ನೀನು ಚೆನ್ನಾಗಿ ತಿಳಿದುಕೋ.
12147021a ಯಥಾ ತೇ ಮತ್ಕೃತೇ ಕ್ಷೇಮಂ ಲಭೇರಂಸ್ತತ್ತಥಾ ಕುರು।
12147021c ಪ್ರತಿಜಾನೀಹಿ ಚಾದ್ರೋಹಂ ಬ್ರಾಹ್ಮಣಾನಾಂ ನರಾಧಿಪ।।
ಬ್ರಾಹ್ಮಣರು ನನ್ನಲ್ಲಿ ಹೇಗೆ ಕ್ಷೇಮವಾಗಿದ್ದಾರೋ ಹಾಗೆ ನೀನೂ ಅವರ ಕ್ಷೇಮವನ್ನು ನೋಡಿಕೋ. ನರಾಧಿಪ! ಬ್ರಾಹ್ಮಣರ ಕುರಿತು ದ್ರೋಹವನ್ನೆಸಗುವುದಿಲ್ಲ ಎಂದು ಪ್ರತಿಜ್ಞೆಯನ್ನು ಮಾಡು.”
12147022 ಜನಮೇಜಯ ಉವಾಚ ।
12147022a ನೈವ ವಾಚಾ ನ ಮನಸಾ ನ ಪುನರ್ಜಾತು ಕರ್ಮಣಾ।
12147022c ದ್ರೋಗ್ಧಾಸ್ಮಿ ಬ್ರಾಹ್ಮಣಾನ್ವಿಪ್ರ ಚರಣಾವೇವ ತೇ ಸ್ಪೃಶೇ।।
ಜನಮೇಜಯನು ಹೇಳಿದನು: “ವಿಪ್ರ! ನಿನ್ನ ಚರಣಗಳನ್ನು ಮುಟ್ಟಿ ಶಪಥಮಾಡುತ್ತಿದ್ದೇನೆ – ವಾಚಾ, ಮನಸಾ ಅಥವ ಕರ್ಮಗಳಿಂದ ಬ್ರಾಹ್ಮಣರಿಗೆ ದ್ರೋಹವನ್ನೆಸಗುವುದಿಲ್ಲ!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಇಂದ್ರೋತಪಾರಿಕ್ಷಿತೀಯೇ ಸಪ್ತಚತ್ವಾರಿಂಶದಧಿಕಶತತಮೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಇಂದ್ರೋತಪಾರಿಕ್ಷಿತೀಯ ಎನ್ನುವ ನೂರಾನಲ್ವತ್ತೇಳನೇ ಅಧ್ಯಾಯವು.
-
ಮಾಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ದುಷ್ಕೃತಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಮಹಾನಾಸಂ ಬ್ರಾಹ್ಮಣಾನಾಂ ಭೂಯೋ ವಕ್ಷ್ಯಾಮಿ ಸಾಂಪ್ರತಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಕಿಮಾಶ್ಚರ್ಯಂ ಯದಪ್ರಜ್ಞೋ ಬಹು ಕುರ್ಯಾದಸಾಂಪ್ರತಮ್। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ನಾನುಕುಪ್ಯತೇ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಪ್ರತಿಪತ್ಸ್ಯತಿ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ನ ಚೋಲಭ್ಯತೇ ತೇನ ನ ಚಾಶ್ಚರ್ಯಾಣಿ ಕುರ್ವತೇ। ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಪೂರ್ವಸಾಧುಷು ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಪ್ರೀತಿಮಾನ್ ಭವ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ದಂಭಂ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎