ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 1421
ಸಾರ
ಪಾರಿವಾಳವು ತನ್ನ ಭಾರ್ಯೆಯ ಗುಣಗಾನವನ್ನು ಮಾಡುವುದು ಮತ್ತು ಪತಿವ್ರತೆಯ ಪ್ರಶಂಸೆ (1-12). ಕಪೋತಿಯು ಶರಣಾಗತ ವ್ಯಾಧನ ಸೇವೆಗೈಯಲು ಪತಿಯಲ್ಲಿ ಕೇಳಿಕೊಂಡಿದುದು (13-20). ಪಾರಿವಾಳದ ಅತಿಥಿಸತ್ಕಾರ ಮತ್ತು ವ್ಯಾಧನಿಗಾಗಿ ತನ್ನ ಶರೀರವನ್ನು ಪರಿತ್ಯಜಿಸುವುದು (21-44).
12142001 ಭೀಷ್ಮ ಉವಾಚ।
12142001a ಅಥ ವೃಕ್ಷಸ್ಯ ಶಾಖಾಯಾಂ ವಿಹಂಗಃ ಸಸುಹೃಜ್ಜನಃ।
12142001c ದೀರ್ಘಕಾಲೋಷಿತೋ ರಾಜಂಸ್ತತ್ರ ಚಿತ್ರತನೂರುಹಃ।।
ಭೀಷ್ಮನು ಹೇಳಿದನು: “ರಾಜನ್! ಆ ವೃಕ್ಷದ ರೆಂಬೆಯ ಮೇಲೆ ಬಹಳ ಕಾಲದಿಂದ ಒಂದು ಪಾರಿವಾಳವು ತನ್ನ ಸುಹೃದಯರೊಂದಿಗೆ ನಿವಾಸಿಸುತ್ತಿತ್ತು. ಅದರ ಶರೀರದ ರೋಮಗಳು ಬಣ್ಣಬಣ್ಣದ್ದಾಗಿದ್ದವು.
12142002a ತಸ್ಯ ಕಾಲ್ಯಂ ಗತಾ ಭಾರ್ಯಾ ಚರಿತುಂ ನಾಭ್ಯವರ್ತತ।
12142002c ಪ್ರಾಪ್ತಾಂ ಚ ರಜನೀಂ ದೃಷ್ಟ್ವಾ ಸ ಪಕ್ಷೀ ಪರ್ಯತಪ್ಯತ।।
ಮುಂಜಾನೆಯೇ ಹೊರಗೆ ತಿರುಗಾಡಲು ಹೋಗಿದ್ದ ಅದರ ಪತ್ನಿಯು ಇನ್ನೂ ಹಿಂದಿರುಗಿರಲಿಲ್ಲ. ರಾತ್ರಿಯಾದುದನ್ನು ನೋಡಿ ಆ ಪಕ್ಷಿಯು ಅವಳಿಗಾಗಿ ಪರಿತಪಿಸಿತು.
12142003a ವಾತವರ್ಷಂ ಮಹಚ್ಚಾಸೀನ್ನ ಚಾಗಚ್ಚತಿ ಮೇ ಪ್ರಿಯಾ।
12142003c ಕಿಂ ನು ತತ್ಕಾರಣಂ ಯೇನ ಸಾದ್ಯಾಪಿ ನ ನಿವರ್ತತೇ।।
“ಭಿರುಗಾಳಿ ಮತ್ತು ಅತಿ ದೊಡ್ಡ ಮಳೆಯು ಸುರಿಯಿತು. ನನ್ನ ಪ್ರಿಯೆಯೂ ಇನ್ನೂ ಹಿಂದುರಿಗಿ ಬಂದಿಲ್ಲ. ಯಾವ ಕಾರಣದಿಂದ ಅವಳು ಇನ್ನೂ ಹಿಂದುರಗಲಿಲ್ಲ?
12142004a ಅಪಿ ಸ್ವಸ್ತಿ ಭವೇತ್ತಸ್ಯಾಃ ಪ್ರಿಯಾಯಾ ಮಮ ಕಾನನೇ।
12142004c ತಯಾ ವಿರಹಿತಂ ಹೀದಂ ಶೂನ್ಯಮದ್ಯ ಗೃಹಂ ಮಮ।।
ನನ್ನ ಪ್ರಿಯೆಯು ಈ ಕಾನನದಲ್ಲಿ ಕುಶಲದಿಂದಿದ್ದಾಳೆಯೇ? ಅವಳಿಲ್ಲದೇ ನನ್ನ ಈ ಮನೆಯು ಇಂದು ಶೂನ್ಯವಾಗಿದೆ.
12142005a 2ಯದಿ ಸಾ ರಕ್ತನೇತ್ರಾಂತಾ ಚಿತ್ರಾಂಗೀ ಮಧುರಸ್ವರಾ। 12142005c ಅದ್ಯ ನಾಭ್ಯೇತಿ ಮೇ ಕಾಂತಾ ನ ಕಾರ್ಯಂ ಜೀವಿತೇನ ಮೇ।।
ಆ ರಕ್ತನೇತ್ರಾಂತಾ, ಚಿತ್ರಾಂಗೀ, ಮಧುಸ್ವರಾ, ನನ್ನ ಕಾಂತೆಯು ಇಂದು ಬರದೇ ಇದ್ದರೆ ನಾನು ಬದುಕಿರುವುದರಿಂದ ಏನು ಪ್ರಯೋಜನ?
12142006a 3ಪತಿಧರ್ಮರತಾ ಸಾಧ್ವೀ ಪ್ರಾಣೇಭ್ಯೋಽಪಿ ಗರೀಯಸೀ। 12142006c ಸಾ ಹಿ ಶ್ರಾಂತಂ ಕ್ಷುಧಾರ್ತಂ ಚ ಜಾನೀತೇ ಮಾಂ ತಪಸ್ವಿನೀ।।
ಪತಿಧರ್ಮರತಳಾಗಿದ್ದ ಆ ಸಾಧ್ವಿಯು ನನಗೆ ಪ್ರಾಣಕ್ಕಿಂತಲೂ ಹೆಚ್ಚಿನದಾಗಿದ್ದಳು. ನಾನು ಬಳಲಿದ್ದೇನೆ ಮತ್ತು ಹಸಿದಿದ್ದೇನೆ ಎಂದು ಆ ತಪಸ್ವಿನಿಯು ತಿಳಿದಿದ್ದಾಳೆ.
12142007a ಅನುರಕ್ತಾ ಹಿತಾ ಚೈವ ಸ್ನಿಗ್ಧಾ ಚೈವ ಪತಿವ್ರತಾ।
12142007c ಯಸ್ಯ ವೈ ತಾದೃಶೀ ಭಾರ್ಯಾ ಧನ್ಯಃ ಸ ಮನುಜೋ ಭುವಿ।।
ಆ ಪತಿವ್ರತೆಯು ನನ್ನಲ್ಲಿಯೇ ಅನುರಕ್ತಳಾಗಿದ್ದಾಳೆ. ನನ್ನ ಹಿತವನ್ನೇ ಬಯಸುತ್ತಾಳೆ. ನನ್ನಲ್ಲಿ ಪರಮ ಸ್ನೇಹವನ್ನಿಟ್ಟುಕೊಂಡಿದ್ದಾಳೆ. ಅಂಥವಳನ್ನು ಭಾರ್ಯೆಯಾಗಿ ಹೊಂದಿದ ಮನುಷ್ಯನು ಈ ಭುವಿಯಲ್ಲಿಯೇ ಧನ್ಯನು.
12142008a 4ಭಾರ್ಯಾ ಹಿ ಪರಮೋ ನಾಥಃ5 ಪುರುಷಸ್ಯೇಹ ಪಠ್ಯತೇ। 12142008c ಅಸಹಾಯಸ್ಯ ಲೋಕೇಽಸ್ಮಿಽಲ್ಲೋಕಯಾತ್ರಾಸಹಾಯಿನೀ।।
ಭಾರ್ಯೆಯೇ ಪುರುಷನ ಪರಮ ನಾಥಳು ಎಂದು ಹೇಳುತ್ತಾರೆ. ಈ ಲೋಕದಲ್ಲಿರುವ ಅಸಹಾಯಕರಿಗೆ ಪತ್ನಿಯೇ ಲೋಕಯಾತ್ರೆಯಲ್ಲಿ ಸಹಾಯಕಳಾಗಿರುತ್ತಾಳೆ.
12142009a ತಥಾ ರೋಗಾಭಿಭೂತಸ್ಯ ನಿತ್ಯಂ ಕೃಚ್ಚ್ರಗತಸ್ಯ ಚ।
12142009c ನಾಸ್ತಿ ಭಾರ್ಯಾಸಮಂ ಕಿಂ ಚಿನ್ನರಸ್ಯಾರ್ತಸ್ಯ ಭೇಷಜಮ್।।
ರೋಗಪೀಡಿತನಾಗಿ ನಿತ್ಯವೂ ಕಷ್ಟದಲ್ಲಿರುವ ಆರ್ತನಿಗೆ ಪತ್ನಿಯ ಸಮನಾದ ಚಿಕಿತ್ಸೆಯು ಬೇರೆ ಯಾವುದೂ ಇಲ್ಲ.
12142010a ನಾಸ್ತಿ ಭಾರ್ಯಾಸಮೋ ಬಂಧುರ್ನಾಸ್ತಿ ಭಾರ್ಯಾಸಮಾ ಗತಿಃ।
12142010c ನಾಸ್ತಿ ಭಾರ್ಯಾಸಮೋ ಲೋಕೇ ಸಹಾಯೋ ಧರ್ಮಸಾಧನಃ6।।
ಭಾರ್ಯೆಯ ಸಮನಾದ ಬಂಧುವಿಲ್ಲ. ಭಾರ್ಯೆಯ ಸಮನಾದ ಗತಿಯಿಲ್ಲ. ಲೋಕದಲ್ಲಿ ಧರ್ಮಸಾಧನೆಗೆ ಭಾರ್ಯೆಯ ಸಮನಾದ ಸಹಾಯಕರಿಲ್ಲ.”
12142011a ಏವಂ ವಿಲಪತಸ್ತಸ್ಯ ದ್ವಿಜಸ್ಯಾರ್ತಸ್ಯ ತತ್ರ ವೈ।
12142011c ಗೃಹೀತಾ ಶಕುನಘ್ನೇನ ಭಾರ್ಯಾ ಶುಶ್ರಾವ ಭಾರತೀಮ್।।
ಹೀಗೆ ವಿಲಪಿಸುತ್ತಿದ್ದ ಪಕ್ಷಿಯ ಆರ್ತ ಸ್ವರವನ್ನು ಹಕ್ಕಿಹಿಡಿಯುವ ವ್ಯಾಧನ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಪಾರಿವಾಳದ ಪತ್ನಿಯು ಕೇಳಿದಳು.
12142012a 7ನ ಸಾ ಸ್ತ್ರೀತ್ಯಭಿಭಾಷಾ ಸ್ಯಾದ್ಯಸ್ಯಾ ಭರ್ತಾ ನ ತುಷ್ಯತಿ।
12142012c 8ಅಗ್ನಿಸಾಕ್ಷಿಕಮಪ್ಯೇತದ್ಭರ್ತಾ ಹಿ ಶರಣಂ ಸ್ತ್ರಿಯಃ9।।
“ಯಾರ ಕುರಿತು ಪತಿಯು ಸಂತುಷ್ಟನಾಗಿಲ್ಲವೋ ಆ ಸ್ತ್ರೀಯನ್ನು ಸ್ತ್ರೀಯೆಂದು ಪರಿಗಣಿಸಬಾರದು. ಅಗ್ನಿಯನ್ನು ಸಾಕ್ಷಿಯಾಗಿರಿಸಿಕೊಂಡು ಯಾರೊಡನೆ ಸ್ತ್ರೀಯ ವಿವಾಹವಾಗಿದೆಯೋ ಅವನೇ ಅವಳ ಪತಿ ಮತ್ತು ಶರಣ್ಯನು.”
12142013a ಇತಿ ಸಂಚಿಂತ್ಯ ದುಃಖಾರ್ತಾ ಭರ್ತಾರಂ ದುಃಖಿತಂ ತದಾ।
12142013c ಕಪೋತೀ ಲುಬ್ಧಕೇನಾಥ ಯತ್ತಾ ವಚನಮಬ್ರವೀತ್।।
ಹೀಗೆ ಆಲೋಚಿಸಿ ವ್ಯಾಧನ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ದುಃಖಾರ್ತ ಕಪೋತಿಯು ದುಃಖಿತನಾಗಿದ್ದ ತನ್ನ ಪತಿಗೆ ಹೀಗೆ ಹೇಳಿದಳು:
12142014a ಹಂತ ವಕ್ಷ್ಯಾಮಿ ತೇ ಶ್ರೇಯಃ ಶ್ರುತ್ವಾ ಚ ಕುರು ತತ್ತಥಾ।
12142014c ಶರಣಾಗತಸಂತ್ರಾತಾ ಭವ ಕಾಂತ ವಿಶೇಷತಃ।।
“ನಿಲ್ಲು! ನಿನಗೆ ಶ್ರೇಯಸ್ಕರವಾದುದನ್ನು ಹೇಳುತ್ತೇನೆ. ಅದನ್ನು ಕೇಳಿ ಅದರಂತೆಯೇ ಮಾಡು. ಕಾಂತ! ಈಗ ಇಲ್ಲಿ ಕಷ್ಟದಲ್ಲಿ ಸಿಲುಕಿ ಶರಣಾಗತನಾಗಿರುವ ಇವನನ್ನು ವಿಶೇಷವಾಗಿ ರಕ್ಷಿಸು!
12142015a ಏಷ ಶಾಕುನಿಕಃ ಶೇತೇ ತವ ವಾಸಂ ಸಮಾಶ್ರಿತಃ।
12142015c ಶೀತಾರ್ತಶ್ಚ ಕ್ಷುಧಾರ್ತಶ್ಚ ಪೂಜಾಮಸ್ಮೈ ಪ್ರಯೋಜಯ।।
ಹಕ್ಕಿ ಹಿಡಿಯುವ ವ್ಯಾಧನು ಇಲ್ಲಿ ಛಳಿ-ಹಸಿವೆಗಳಿಂದ ಆರ್ತನಾಗಿ ನಿನ್ನ ವಾಸಸ್ಥಾನವನ್ನೇ ಆಶ್ರಯಿಸಿ ಮಲಗಿದ್ದಾನೆ. ನೀನು ಇವನನ್ನು ಸತ್ಕರಿಸುವವನಾಗು.
12142016a ಯೋ ಹಿ ಕಶ್ಚಿದ್ದ್ವಿಜಂ ಹನ್ಯಾದ್ಗಾಂ ವಾ ಲೋಕಸ್ಯ ಮಾತರಮ್।
12142016c ಶರಣಾಗತಂ ಚ ಯೋ ಹನ್ಯಾತ್ತುಲ್ಯಂ ತೇಷಾಂ ಚ ಪಾತಕಮ್।।
ಯಾರು ದ್ವಿಜನನ್ನು, ಲೋಕಮಾತೆ ಗೋವನ್ನು ಅಥವಾ ಶರಣಾಗತನನ್ನು ಕೊಲ್ಲುತ್ತಾನೋ ಅವನಿಗೆ ಒಂದೇ ಸಮನಾದ ಪಾಪವು ತಗಲುತ್ತದೆ.
12142017a ಯಾಸ್ಮಾಕಂ ವಿಹಿತಾ ವೃತ್ತಿಃ ಕಾಪೋತೀ ಜಾತಿಧರ್ಮತಃ।
12142017c ಸಾ ನ್ಯಾಯ್ಯಾತ್ಮವತಾ ನಿತ್ಯಂ ತ್ವದ್ವಿಧೇನಾಭಿವರ್ತಿತುಮ್।।
ಜಾತಿಧರ್ಮಕ್ಕನುಸಾರವಾಗಿ ನಮಗೆ ಕಾಪೋತೀ ವೃತ್ತಿಯು ವಿಹಿತವಾಗಿದೆ. ನಿನ್ನಂತಹ ಆತ್ಮವಂತನು ನಿತ್ಯವೂ ಆ ವೃತ್ತಿಯನ್ನು ಪರಿಪಾಲಿಸಬೇಕು.
12142018a ಯಸ್ತು ಧರ್ಮಂ ಯಥಾಶಕ್ತಿ ಗೃಹಸ್ಥೋ ಹ್ಯನುವರ್ತತೇ।
12142018c ಸ ಪ್ರೇತ್ಯ ಲಭತೇ ಲೋಕಾನಕ್ಷಯಾನಿತಿ ಶುಶ್ರುಮ।।
ಯಥಾಶಕ್ತಿ ತನ್ನ ಧರ್ಮವನ್ನು ಪಾಲಿಸುವ ಗೃಹಸ್ಥನು ಮರಣಾನಂತರ ಅಕ್ಷಯ ಲೋಕಗಳನ್ನು ಪಡೆದುಕೊಳ್ಳುತ್ತಾನೆ ಎಂದು ಕೇಳಿದ್ದೇವೆ.
12142019a ಸ ತ್ವಂ ಸಂತಾನವಾನದ್ಯ ಪುತ್ರವಾನಪಿ ಚ ದ್ವಿಜ।
12142019c ತತ್ಸ್ವದೇಹೇ ದಯಾಂ ತ್ಯಕ್ತ್ವಾ ಧರ್ಮಾರ್ಥೌ ಪರಿಗೃಹ್ಯ ವೈ।
12142019e ಪೂಜಾಮಸ್ಮೈ ಪ್ರಯುಂಕ್ಷ್ವ ತ್ವಂ ಪ್ರೀಯೇತಾಸ್ಯ ಮನೋ ಯಥಾ10।।
ದ್ವಿಜ! ಇಂದು ನೀನು ಸಂತಾನವಂತನೂ ಪುತ್ರವಂತನೂ ಆಗಿದ್ದೀಯೆ. ಆದುದರಿಂದ ನಿನ್ನ ದೇಹದ ಮೇಲಿನ ದಯೆಯನ್ನು ತೊರೆದು ಧರ್ಮಾರ್ಥಗಳನ್ನು ಸ್ವೀಕರಿಸಿ ಇವನ ಮನಸ್ಸು ಪ್ರಸನ್ನಗೊಳ್ಳುವ ರೀತಿಯಲ್ಲಿ ಸತ್ಕರಿಸು.”
12142020a ಇತಿ ಸಾ ಶಕುನೀ ವಾಕ್ಯಂ ಕ್ಷಾರಕಸ್ಥಾ ತಪಸ್ವಿನೀ।
12142020c ಅತಿದುಃಖಾನ್ವಿತಾ ಪ್ರೋಚ್ಯ ಭರ್ತಾರಂ ಸಮುದೈಕ್ಷತ11।।
ಆ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ತಪಸ್ವಿನೀ ಹೆಣ್ಣು ಪಕ್ಷಿಯು ಅತಿ ದುಃಖಾನ್ವಿತಳಾಗಿ ಹೀಗೆ ಹೇಳಿ ತನ್ನ ಪತಿಯ ಕಡೆ ನೋಡತೊಡಗಿದಳು.
12142021a ಸ ಪತ್ನ್ಯಾ ವಚನಂ ಶ್ರುತ್ವಾ ಧರ್ಮಯುಕ್ತಿಸಮನ್ವಿತಮ್।
12142021c ಹರ್ಷೇಣ ಮಹತಾ ಯುಕ್ತೋ ಬಾಷ್ಪವ್ಯಾಕುಲಲೋಚನಃ।।
ಪತ್ನಿಯ ಆ ಧರ್ಮಯುಕ್ತಿಸಮನ್ವಿತ ಮಾತನ್ನು ಕೇಳಿ ಗಂಡುಪಾರಿವಾಳವು ಮಹಾ ಹರ್ಷಯುಕ್ತಗೊಂಡು ಕಣ್ಣೀರು ತುಂಬಿ ವ್ಯಾಕುಲಲೋಚನನಾದನು.
12142022a ತಂ ವೈ ಶಾಕುನಿಕಂ ದೃಷ್ಟ್ವಾ ವಿಧಿದೃಷ್ಟೇನ ಕರ್ಮಣಾ।
12142022c ಪೂಜಯಾಮಾಸ ಯತ್ನೇನ ಸ ಪಕ್ಷೀ ಪಕ್ಷಿಜೀವಿನಮ್।।
ಆ ಪಕ್ಷಿಯು ಪಕ್ಷಿಗಳನ್ನು ಹಿಂಸಿಸಿ ಜೀವಿಸುತ್ತಿದ್ದ ವ್ಯಾಧನನ್ನು ನೋಡಿ ವಿಧಿದೃಷ್ಟ ಕರ್ಮಗಳಿಂದ ಪ್ರಯತ್ನಪಟ್ಟು ಪೂಜಿಸತೊಡಗಿತು.
12142023a ಉವಾಚ ಚ ಸ್ವಾಗತಂ ತೇ ಬ್ರೂಹಿ ಕಿಂ ಕರವಾಣ್ಯಹಮ್।
12142023c ಸಂತಾಪಶ್ಚ ನ ಕರ್ತವ್ಯಃ ಸ್ವಗೃಹೇ ವರ್ತತೇ ಭವಾನ್।।
ಅವನು ಹೇಳಿದನು: “ನಿನಗೆ ಸ್ವಾಗತ. ಹೇಳು ನಾನು ನಿನಗೆ ಏನು ಮಾಡಲಿ? ಸಂತಾಪಪಡಬೇಡ. ನೀನು ಈಗ ನಿನ್ನದೇ ಮನೆಯಲ್ಲಿ ಇದ್ದೀಯೆ.
12142024a ತದ್ ಬ್ರವೀತು ಭವಾನ್ ಕ್ಷಿಪ್ರಂ ಕಿಂ ಕರೋಮಿ ಕಿಮಿಚ್ಚಸಿ।
12142024c ಪ್ರಣಯೇನ ಬ್ರವೀಮಿ ತ್ವಾಂ ತ್ವಂ ಹಿ ನಃ ಶರಣಾಗತಃ।।
ಆದುದರಿಂದ ಬೇಗ ಹೇಳು. ನಿನಗೆ ಏನು ಬೇಕು? ನಾನೇನು ಮಾಡಲಿ? ನಾನು ಅತಿ ಪ್ರೀತಿಯಿಂದ ಕೇಳುತ್ತಿದ್ದೇನೆ. ಏಕೆಂದರೆ ನೀನು ನಮ್ಮ ಮನೆಗೆ ಬಂದಿದ್ದೀಯೆ.
12142025a ಶರಣಾಗತಸ್ಯ ಕರ್ತವ್ಯಮಾತಿಥ್ಯಮಿಹ ಯತ್ನತಃ।
12142025c ಪಂಚಯಜ್ಞಪ್ರವೃತ್ತೇನ ಗೃಹಸ್ಥೇನ ವಿಶೇಷತಃ।।
ಮನೆಗೆ ಬಂದಿರುವ ಅತಿಥಿಗೆ ಪ್ರಯತ್ನಪೂರ್ವಕ ಸತ್ಕಾರವನ್ನು ಎಲ್ಲರೂ ಮಾಡಬೇಕಿಂದಿದ್ದರೂ ಪಂಚಯಜ್ಞದ ಅಧಿಕಾರಿಯಾದ ಗೃಹಸ್ಥನಿಗೆ ಇದು ಪ್ರಧಾನ ಧರ್ಮವು.
12142026a ಪಂಚಯಜ್ಞಾಂಸ್ತು ಯೋ ಮೋಹಾನ್ನ ಕರೋತಿ ಗೃಹಾಶ್ರಮೀ।
12142026c ತಸ್ಯ ನಾಯಂ ನ ಚ ಪರೋ ಲೋಕೋ ಭವತಿ ಧರ್ಮತಃ।।
ಗೃಹಸ್ಥಾಶ್ರಮದಲ್ಲಿದ್ದುಕೊಂಡೂ ಮೋಹದಿಂದ ಪಂಚಯಜ್ಞಗಳನ್ನು ಅನುಷ್ಠಾನಮಾಡದ ಗೃಹಸ್ಥನಿಗೆ ಧರ್ಮದ ಅನುಸಾರ ಈ ಲೋಕವೂ ಮತ್ತು ಪರ ಲೋಕವೂ ದೊರಕುವುದಿಲ್ಲ.
12142027a ತದ್ ಬ್ರೂಹಿ ತ್ವಂ ಸುವಿಸ್ರಬ್ಧೋ ಯತ್ತ್ವಂ ವಾಚಾ ವದಿಷ್ಯಸಿ।
12142027c ತತ್ಕರಿಷ್ಯಾಮ್ಯಹಂ ಸರ್ವಂ ಮಾ ತ್ವಂ ಶೋಕೇ ಮನಃ ಕೃಥಾಃ।।
ಆದುದರಿಂದ ನೀನು ಪೂರ್ಣ ವಿಶ್ವಾಸದಿಂದ ನನ್ನಲ್ಲಿ ನಿನ್ನ ಮನಸ್ಸನ್ನು ತಿಳಿಸು. ನೀನು ಏನು ಹೇಳುತ್ತೀಯೋ ಅವೆಲ್ಲವನ್ನೂ ನಾನು ಮಾಡುತ್ತೇನೆ. ಆದುದರಿಂದ ನೀನು ಮನಸ್ಸಿನಲ್ಲಿ ಶೋಕಿಸಬೇಡ.”
12142028a ತಸ್ಯ ತದ್ವಚನಂ ಶ್ರುತ್ವಾ ಶಕುನೇರ್ಲುಬ್ಧಕೋಽಬ್ರವೀತ್।
12142028c ಬಾಧತೇ ಖಲು ಮಾ ಶೀತಂ ಹಿಮತ್ರಾಣಂ ವಿಧೀಯತಾಮ್।।
ಪಕ್ಷಿಯ ಆ ಮಾತನ್ನು ಕೇಳಿ ವ್ಯಾಧನು “ಛಳಿಯು ನನ್ನನ್ನು ಅತಿಯಾಗಿ ಬಾಧಿಸುತ್ತಿದೆ. ಛಳಿಯನ್ನು ಹೋಗಲಾಡಿಸುವಂತೆ ಏನಾದರೂ ಮಾಡು” ಎಂದನು.
12142029a ಏವಮುಕ್ತಸ್ತತಃ ಪಕ್ಷೀ ಪರ್ಣಾನ್ಯಾಸ್ತೀರ್ಯ ಭೂತಲೇ।
12142029c ಯಥಾಶುಷ್ಕಾಣಿ ಯತ್ನೇನ ಜ್ವಲನಾರ್ಥಂ ದ್ರುತಂ ಯಯೌ।।
ಅವನು ಹೀಗೆ ಹೇಳಲು ಪಕ್ಷಿಯು ನೆಲದ ಮೇಲೆ ಬಹಳಷ್ಟು ಎಲೆಗಳನ್ನು ತಂದು ಹಾಕಿತು ಮತ್ತು ಬೆಂಕಿಯನ್ನು ಹೊತ್ತಿಸಲು ತನ್ನ ರೆಕ್ಕೆಗಳನ್ನು ಬೀಸಿ ಆ ಎಲೆಗಳನ್ನು ಒಣಗಿಸಿತು.
12142030a ಸ ಗತ್ವಾಂಗಾರಕರ್ಮಾಂತಂ ಗೃಹೀತ್ವಾಗ್ನಿಮಥಾಗಮತ್।
12142030c ತತಃ ಶುಷ್ಕೇಷು ಪರ್ಣೇಷು ಪಾವಕಂ ಸೋಽಭ್ಯದೀದಿಪತ್।।
ಅವನು ಕುಲುಮೆಯವನಲ್ಲಿಗೆ ಹೋಗಿ ಬೆಂಕಿಯನ್ನು ತಂದು ಅದನ್ನು ಒಣಗಿದ ಎಲೆಗಳ ಮೇಲಿಟ್ಟು ಅಲ್ಲಿ ಅಗ್ನಿಯನ್ನು ಪ್ರಜ್ವಲಿಸಿತು.
12142031a ಸುಸಂದೀಪ್ತಂ ಮಹತ್ ಕೃತ್ವಾ ತಮಾಹ ಶರಣಾಗತಮ್।
12142031c ಪ್ರತಾಪಯ ಸುವಿಸ್ರಬ್ಧಂ ಸ್ವಗಾತ್ರಾಣ್ಯಕುತೋಭಯಃ।।
ಹೀಗೆ ಅಗ್ನಿಯನ್ನು ದೊಡ್ಡದಾಗಿ ಪ್ರಜ್ವಲಿಸಿ ಪಕ್ಷಿಯು ಶರಣಾಗತನಿಗೆ ಹೇಳಿತು: “ಈಗ ನಿನಗೆ ಯಾವ ರೀತಿಯ ಭಯವೂ ಇಲ್ಲ. ನಿಶ್ಚಿಂತನಾಗಿ ನಿನ್ನ ಎಲ್ಲ ಅಂಗಾಗಗಳನ್ನೂ ಚೆನ್ನಾಗಿ ಕಾಯಿಸಿಕೋ.”
12142032a ಸ ತಥೋಕ್ತಸ್ತಥೇತ್ಯುಕ್ತ್ವಾ ಲುಬ್ಧೋ ಗಾತ್ರಾಣ್ಯತಾಪಯತ್।
12142032c ಅಗ್ನಿಪ್ರತ್ಯಾಗತಪ್ರಾಣಸ್ತತಃ ಪ್ರಾಹ ವಿಹಂಗಮಮ್12।।
ಹಾಗೆಯೇ ಆಗಲೆಂದು ಹೇಳಿ ವ್ಯಾಧನು ತನ್ನ ಶರೀರವನ್ನು ಕಾಯಿಸಿಕೊಂಡನು. ಅಗ್ನಿಯ ಹತ್ತಿರ ಕುಳಿತಿದ್ದ ಅವನಿಗೆ ಪ್ರಾಣವು ಪುನಃ ಬಂದಂತಾಯಿತು. ಆಗ ಅವನು ಪಕ್ಷಿಗೆ ಹೇಳಿದನು:
12142033a ದತ್ತಮಾಹಾರಮಿಚ್ಚಾಮಿ ತ್ವಯಾ ಕ್ಷುದ್ಭಾಧತೇ ಹಿ ಮಾಮ್।
12142033c ತದ್ವಚಃ ಸ ಪ್ರತಿಶ್ರುತ್ಯ ವಾಕ್ಯಮಾಹ ವಿಹಂಗಮಃ।।
12142034a ನ ಮೇಽಸ್ತಿ ವಿಭವೋ ಯೇನ ನಾಶಯಾಮಿ ತವ ಕ್ಷುಧಾಮ್।
12142034c ಉತ್ಪನ್ನೇನ ಹಿ ಜೀವಾಮೋ ವಯಂ ನಿತ್ಯಂ ವನೌಕಸಃ।। 12142035a ಸಂಚಯೋ ನಾಸ್ತಿ ಚಾಸ್ಮಾಕಂ ಮುನೀನಾಮಿವ ಕಾನನೇ।
“ಹಸಿವೆಯು ನನ್ನನ್ನು ಬಾಧಿಸುತ್ತಿದೆ. ನೀನು ನೀಡುವ ಆಹಾರವನ್ನು ಬಯಸುತ್ತೇನೆ.” ಅವನ ಆ ಮಾತನ್ನು ಕೇಳಿ ಪಕ್ಷಿಯು ಹೇಳಿತು: “ನಿನ್ನ ಹಸಿವೆಯನ್ನು ನಾಶಪಡಿಸಲು ನನ್ನಲ್ಲಿ ಸಂಪತ್ತಿಲ್ಲ. ನಾನು ಒಂದು ವನವಾಸೀ ಪಕ್ಷಿ. ನಿತ್ಯವೂ ವನೌಕಸ ಉತ್ಪತ್ತಿಗಳಿಂದಲೇ ನಾವು ಜೀವಿಸುತ್ತೇವೆ. ಕಾನನದಲ್ಲಿರುವ ಮುನಿಗಳಂತೆ ನಮ್ಮಲ್ಲಿ ಯಾವ ಭೋಜನ ಸಂಗ್ರಹವೂ ಇಲ್ಲ.”
12142035c ಇತ್ಯುಕ್ತ್ವಾ ಸ ತದಾ ತತ್ರ ವಿವರ್ಣವದನೋಽಭವತ್।।
12142036a ಕಥಂ ನು ಖಲು ಕರ್ತವ್ಯಮಿತಿ ಚಿಂತಾಪರಃ ಸದಾ।
12142036c ಬಭೂವ ಭರತಶ್ರೇಷ್ಠ ಗರ್ಹಯನ್ ವೃತ್ತಿಮಾತ್ಮನಃ।।
ಹೀಗೆ ಹೇಳಿ ಆ ಪಾರಿವಾಳದ ಮುಖವು ಸ್ವಲ್ಪ ಉದಾಸಗೊಂಡಿತು. ಈಗ ನಾನು ಏನು ಮಾಡಬೇಕು ಎಂದು ಚಿಂತಾಪರನಾದನು. ಭರತಶ್ರೇಷ್ಠ! ಅವನು ತನ್ನ ಕಪೋತೀ ವೃತ್ತಿಯನ್ನು ನಿಂದಿಸತೊಡಗಿದನು.
12142037a ಮುಹೂರ್ತಾಲ್ಲಬ್ಧಸಂಜ್ಞಸ್ತು ಸ ಪಕ್ಷೀ ಪಕ್ಷಿಘಾತಕಮ್।
12142037c ಉವಾಚ ತರ್ಪಯಿಷ್ಯೇ ತ್ವಾಂ ಮುಹೂರ್ತಂ ಪ್ರತಿಪಾಲಯ।।
ಸ್ವಲ್ಪವೇ ಸಮಯದಲ್ಲಿ ಅದಕ್ಕೆ ಏನೋ ನೆನಪಾಯಿತು. ಪಕ್ಷಿಯು ಪಕ್ಷಿಘಾತಕನಿಗೆ ಹೇಳಿತು: “ಒಂದು ಕ್ಷಣ ನಿಲ್ಲು. ನಿನ್ನನ್ನು ತೃಪ್ತಿಗೊಳಿಸುತ್ತೇನೆ.”
12142038a ಇತ್ಯುಕ್ತ್ವಾ ಶುಷ್ಕಪರ್ಣೈಃ ಸ ಸಂಪ್ರಜ್ವಾಲ್ಯ ಹುತಾಶನಮ್।
12142038c ಹರ್ಷೇಣ ಮಹತಾ ಯುಕ್ತಃ ಕಪೋತಃ ಪುನರಬ್ರವೀತ್।।
ಹೀಗೆ ಹೇಳಿ ಆ ಪಕ್ಷಿಯು ಒಣಗಿದ ಎಲೆಗಳಿಂದ ಪುನಃ ಅಗ್ನಿಯನ್ನು ಪ್ರಜ್ವಲಿತಗೊಳಿಸಿ ಅತ್ಯಂತ ಹರ್ಷದಿಂದ ವ್ಯಾಧನಿಗೆ ಹೇಳಿತು:
12142039a ದೇವಾನಾಂ ಚ ಮುನೀನಾಂ ಚ ಪಿತೃಣಾಂ ಚ ಮಹಾತ್ಮನಾಮ್।
12142039c ಶ್ರುತಪೂರ್ವೋ ಮಯಾ ಧರ್ಮೋ ಮಹಾನತಿಥಿಪೂಜನೇ।।
“ದೇವತೆಗಳ, ಮುನಿಗಳ, ಮತ್ತು ಮಹಾತ್ಮ ಪಿತೃಗಳ ಪೂಜೆಗಿಂತಲೂ ಅತಿಥಿಪೂಜನವು ಮಹಾ ಧರ್ಮವೆಂದು ಹಿಂದೆ ನಾನು ಕೇಳಿದ್ದೇನೆ13.
12142040a ಕುರುಷ್ವಾನುಗ್ರಹಂ ಮೇಽದ್ಯ ಸತ್ಯಮೇತದ್ ಬ್ರವೀಮಿ ತೇ।
12142040c ನಿಶ್ಚಿತಾ ಖಲು ಮೇ ಬುದ್ಧಿರತಿಥಿಪ್ರತಿಪೂಜನೇ।।
ಇಂದು ನೀನು ನನ್ನನ್ನು ಅನುಗ್ರಹಿಸು. ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ. ಅತಿಥಿಪೂಜನೆಯ ಕುರಿತು ಇಂದು ನನ್ನ ಬುದ್ಧಿಯು ನಿಶ್ಚಯಿಸಿಬಿಟ್ಟಿದೆ.”
12142041a ತತಃ ಸತ್ಯಪ್ರತಿಜ್ಞೋ ವೈ ಸ ಪಕ್ಷೀ ಪ್ರಹಸನ್ನಿವ।
12142041c ತಮಗ್ನಿಂ ತ್ರಿಃ ಪರಿಕ್ರಮ್ಯ ಪ್ರವಿವೇಶ ಮಹೀಪತೇ।।
ಮಹೀಪತೇ! ಅನಂತರ ಅತಿಥಿಪೂಜೆಯ ಸತ್ಯಪ್ರತಿಜ್ಞೆಯನ್ನು ಮಾಡಿದ ಆ ಪಕ್ಷಿಯು ನಗುನಗುತ್ತಲೇ ಮೂರು ಬಾರಿ ಪ್ರದಕ್ಷಿಣೆ ಮಾಡಿ ಅಗ್ನಿಯನ್ನು ಪ್ರವೇಶಿಸಿತು.
12142042a ಅಗ್ನಿಮಧ್ಯಂ ಪ್ರವಿಷ್ಟಂ ತಂ ಲುಬ್ಧೋ ದೃಷ್ಟ್ವಾಥ ಪಕ್ಷಿಣಮ್।
12142042c ಚಿಂತಯಾಮಾಸ ಮನಸಾ ಕಿಮಿದಂ ನು ಕೃತಂ ಮಯಾ।।
ಅಗ್ನಿಮಧ್ಯವನ್ನು ಪ್ರವೇಶಿಸಿದ ಆ ಪಕ್ಷಿಯನ್ನು ನೋಡಿದ ವ್ಯಾಧನು “ಇದೇನು ಮಾಡಿಬಿಟ್ಟೆ!” ಎಂದು ಮನಸ್ಸಿನಲ್ಲಿಯೇ ಚಿಂತಿಸತೊಡಗಿದನು.
12142043a ಅಹೋ ಮಮ ನೃಶಂಸಸ್ಯ ಗರ್ಹಿತಸ್ಯ ಸ್ವಕರ್ಮಣಾ।
12142043c ಅಧರ್ಮಃ ಸುಮಹಾನ್ ಘೋರೋ ಭವಿಷ್ಯತಿ ನ ಸಂಶಯಃ।।
“ಅಯ್ಯೋ! ನನ್ನದೇ ಕ್ರೂರ ಕರ್ಮದಿಂದ ನಿಂದಿತನಾದ ನನ್ನಿಂದ ಮಹಾ ಘೋರ ಅಧರ್ಮವು ನಡೆದುಹೋಯಿತು. ಇದರಲ್ಲಿ ಸಂಶಯವೇ ಇಲ್ಲ.”
12142044a ಏವಂ ಬಹುವಿಧಂ ಭೂರಿ ವಿಲಲಾಪ ಸ ಲುಬ್ಧಕಃ।
12142044c ಗರ್ಹಯನ್ ಸ್ವಾನಿ ಕರ್ಮಾಣಿ ದ್ವಿಜಂ ದೃಷ್ಟ್ವಾ ತಥಾಗತಮ್।।
ಪಕ್ಷಿಯ ಆ ಅವಸ್ಥೆಯನ್ನು ನೋಡಿ ಹೀಗೆ ಬಹುವಿಧದಲ್ಲಿ ತನ್ನ ಕರ್ಮಗಳನ್ನು ನಿಂದಿಸುತ್ತಾ ವ್ಯಾಧನು ಅತಿಯಾಗಿ ವಿಲಪಿಸಿದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿಪರ್ವಣಿ ಆಪದ್ಧರ್ಮಪರ್ವಣಿ ಕಪೋತಲುಬ್ಧಕಸಂವಾದೇ ದ್ವಾಚತ್ವಾರಿಂಶದಧಿಕಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ಕಪೋತಲುಬ್ಧಕಸಂವಾದ ಎನ್ನುವ ನೂರಾನಲ್ವತ್ತೆರಡನೇ ಅಧ್ಯಾಯವು.-
ಗೀತಾ ಪ್ರೆಸ್ ಗೋರಖಪುರದ ಸಂಪುಟದಲ್ಲಿ ಈ ಅಧ್ಯಾಯವು ಮೂರು ಅಧ್ಯಾಯಗಳಲ್ಲಿ ಬರುತ್ತದೆ. ↩︎
-
ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ಪುತ್ರಪೌತ್ರವಧೂಭೃತ್ಯೈರಾಕೀರ್ಣಮಪಿ ಸರ್ವತಃ। ಭಾರ್ಯಾಹೀನಂ ಗೃಹಸ್ಥಸ್ಯ ಶೂನ್ಯಮೇವ ಗೃಹಂ ಭವೇತ್।। ನ ಗೃಹಂ ಗೃಹಮಿತ್ಯಾಹುರ್ಗೃಹಿಣೀ ಗೃಹಮುಚ್ಯತೇ। ಗೃಹಂ ತು ಗೃಹಿಣೀಹೀನಮನರಣ್ಯಸದೃಶಂ ಮತಮ್।। ↩︎
-
ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಮೂರು ಅಧಿಕ ಶ್ಲೋಕಗಳಿವೆ: ನ ಭುಂಕ್ತೇಮಯ್ಯಭುಂಕ್ತೇ ಯಾ ನಾಸ್ನಾತೇ ಸ್ನಾತಿ ಸುವ್ರತಾ। ನಾತಿಷ್ಠತ್ಯುಪತಿಷ್ಠೇತ ಶೇತೇ ಚ ಶಯಿತೇ ಮಯಿ।। ಹೃಷ್ಟೇ ಭವತಿ ಸಾ ಹೃಷ್ಟಾ ದುಃಖಿತೇ ಮಯಿ ದುಃಖಿತಾ। ಪ್ರೋಷಿತೇ ದೀನವದನಾ ಕ್ರುದ್ಧೇ ಚ ಪ್ರಿಯವಾದಿನೀ।। ಪತಿವ್ರತಾ ಪತಿಗತಿಃ ಪತಿಪ್ರಿಯಹಿತೇ ರತಾ। ಯಸ್ಯ ಸ್ಯಾತ್ತಾದೃಶೀ ಭಾರ್ಯಾ ಧನ್ಯಃ ಸ ಪುರುಷೋ ಭುವಿ।। ↩︎
-
ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಎರಡು ಅಧಿಕ ಶ್ಲೋಕಗಳಿವೆ: ವೃಕ್ಷಮೂಲೇಽಪಿ ದಯಿತಾ ಯಸ್ಯ ತಿಷ್ಠತಿ ತದ್ಗೃಹಮ್। ಪ್ರಾಸಾದೋಽಪಿ ತಯಾ ಹೀನಃ ಕಾಂತಾರ ಇತಿ ನಿಶ್ಚಿತಮ್।। ಧರ್ಮಾರ್ಥಕಾಮಕಾಲೇಷು ಭಾರ್ಯಾ ಪುಂಸಃ ಸಹಾಯಿನೀ। ವಿದೇಶಗಮನೇ ಚಾಸ್ಯ ಸೈವ ವಿಶ್ವಾಸಕಾರಿಕಾ।। ↩︎
-
ಹ್ಯರ್ಥಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್). ↩︎
-
ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಯಸ್ಯ ಭಾರ್ಯಾ ಗೃಹೇ ನಾಸ್ತಿ ಸಾಧ್ವೀ ಚ ಪ್ರಿಯವಾದಿನೀ। ಅರಣ್ಯಂ ತೇನ ಗಂತವ್ಯಂ ಯಥಾರಣ್ಯಂ ತಥಾ ಗೃಹಮ್।। ಗೀತಾ ಪ್ರೆಸ್ ನಲ್ಲಿ ಇದರ ನಂತರ ಇನ್ನೊಂದು ಅಧ್ಯಾಯವು ಪ್ರಾರಂಭವಾಗುತ್ತದೆ. ಆದರೆ ಪುಣೆಯ ಸಂಪುಟದಲ್ಲಿ ಎರಡು ಅಧ್ಯಾಯಗಳನ್ನು ಒಂದೇ ಅಧ್ಯಾಯದಲ್ಲಿ ನೀಡಲಾಗಿದೆ. ↩︎
-
ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಕಪೋತ್ಯುವಾಚ। ಅಹೋಽತೀವ ಸುಭಾಗ್ಯಾಹಂ ಯಸ್ಯಾ ಮೇ ದಯಿತಃ ಪತಿಃ। ಅಸತೋ ವಾ ಸತೋ ವಾಪಿ ಗುಣಾನೇವಂ ಪ್ರಭಾಷತೇ।। ↩︎
-
ಇದಕ್ಕೆ ಮೊದಲು ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕಾರ್ಧವಿದೆ: ತುಷ್ಟೇ ಭರ್ತರಿ ನಾರೀಣಾಂ ತುಷ್ಟಾಃ ಸ್ಯುಃ ಸರ್ವದೇವತಾಃ।। ↩︎
-
ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ದಾವಾಗ್ನಿನೇವ ನಿರ್ದಗ್ಧಾ ಸಪುಷ್ಪಸ್ತವಕಾ ಲತಾ। ಭಸ್ಮೀಭವತಿ ಸಾ ನಾರೀ ಯಸ್ಯಾ ಭರ್ತಾ ನ ತುಷ್ಯತಿ।। ↩︎
-
ಇದರ ನಂತರ ಗೀತಾ ಪ್ರೆಸ್ ನಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಮತ್ಕೃತೇ ಮಾ ಚ ಸಂತಾಪಂ ಕುರ್ವೀಥಾಸ್ತ್ವಂ ವಿಹಂಗಮ। ಶರೀರಯಾತ್ರಾಕೃತ್ಯರ್ಥಮನ್ಯಾನ್ ದಾರಾನುಪೈಷ್ಯಸಿ।। ↩︎
-
ಇದರ ನಂತರ ಗೀತಾ ಪ್ರೆಸ್ ನಲ್ಲಿ ಇನ್ನೊಂದು ಅಧ್ಯಾಯವು ಪ್ರಾರಂಭವಾಗುತ್ತದೆ. ↩︎
-
ಇದರ ನಂತರ ಗೀತಾ ಪ್ರೆಸ್ ಗೋರಖಪುರದ ಸಂಪುಟದಲ್ಲಿ ಈ ಒಂದು ಅಧಿಕ ಶ್ಲೋಕವಿದೆ: ಹರ್ಷೇಣ ಮಹತಾಽಽವಿಷ್ಠೋ ವಾಕ್ಯಂ ವ್ಯಾಕುಲಲೋಚನಃ। ತಥೇಮಂ ಶಕುನಿಂ ದೃಷ್ಟ್ವಾ ವಿಧಿದೃಷ್ಟೇನ ಕರ್ಮಣಾ।। ↩︎
-
ನಾನು ಋಷಿಗಳು, ದೇವತೆಗಳು, ಪಿತೃಗಳು ಮತ್ತು ಮಹಾತ್ಮರ ಬಾಯಿಂದ ಅತಿಥಿಪೂಜೆಯು ಮಹಾ ಧರ್ಮವೆಂದು ಈ ಮೊದಲೇ ಕೇಳಿದ್ದೇನೆ (ಗೀತಾ ಪ್ರೆಸ್ ಗೋರಖಪುರ ಸಂಪುಟ). ↩︎