ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 140
ಸಾರ
ಆಪತ್ಕಾಲದಲ್ಲಿ ರಾಜನ ಧರ್ಮನಿಶ್ಚಯ ಮತ್ತು ಉತ್ತಮ ಬ್ರಾಹ್ಮಣರ ಸೇವೆಯ ಆದೇಶ (1-37).
12140001 ಯುಧಿಷ್ಠಿರ ಉವಾಚ।
12140001a ಯದಿದಂ ಘೋರಮುದ್ದಿಷ್ಟಮಶ್ರದ್ಧೇಯಮಿವಾನೃತಮ್।
12140001c ಅಸ್ತಿ ಸ್ವಿದ್ದಸ್ಯುಮರ್ಯಾದಾ ಯಾಮಹಂ ಪರಿವರ್ಜಯೇ।।
ಯುಧಿಷ್ಠಿರನು ಹೇಳಿದನು: “ಮಹಾಪುರುಷರಿಗೇ ಇಂತಹ ಭಯಂಕರ ಕರ್ಮವನ್ನು ಸಂಕಟಕಾಲದಲ್ಲಿ ಕರ್ತವ್ಯವೆಂದು ವಿಹಿಸಿರುವಾಗ ದುರಾಚಾರೀ ದಸ್ಯುಗಳ ದುಷ್ಕರ್ಮಗಳಿಗೆ ಯಾವ ಸೀಮೆಯು ಉಳಿದುಕೊಂಡಿದೆ? ಯಾವುದನ್ನು ನಾನು ಸದಾ ಪರಿತ್ಯಜಿಸಬೇಕು?
12140002a ಸಂಮುಹ್ಯಾಮಿ ವಿಷೀದಾಮಿ ಧರ್ಮೋ ಮೇ ಶಿಥಿಲೀಕೃತಃ।
12140002c ಉದ್ಯಮಂ ನಾಧಿಗಚ್ಚಾಮಿ ಕುತಶ್ಚಿತ್ ಪರಿಚಿಂತಯನ್।।
ನಿನ್ನಿಂದ ಈ ಉಪಾಖ್ಯಾನವನ್ನು ಕೇಳಿ ನಾನು ಮೋಹಿತನೂ ವಿಷಾದಗ್ರಸ್ತನೂ ಆಗಿದ್ದೇನೆ. ನೀನು ನನ್ನಲ್ಲಿರುವ ಧರ್ಮವಿಷಯಕ ಉತ್ಸಾಹವನ್ನು ಶಿಥಿಲಮಾಡಿಬಿಟ್ಟೆ! ಎಷ್ಟೇ ಆಲೋಚಿಸಿದರೂ ನನಗೆ ಧರ್ಮದ ಕುರಿತಾದ ಉತ್ಸಾಹವನ್ನು ಪಡೆದುಕೊಳ್ಳಲಾಗುತ್ತಿಲ್ಲ.”
12140003 ಭೀಷ್ಮ ಉವಾಚ।
12140003a ನೈತಚ್ಚುದ್ಧಾಗಮಾದೇವ1 ತವ ಧರ್ಮಾನುಶಾಸನಮ್।
12140003c ಪ್ರಜ್ಞಾಸಮವತಾರೋಽಯಂ ಕವಿಭಿಃ ಸಂಭೃತಂ ಮಧು।।
ಭೀಷ್ಮನು ಹೇಳಿದನು: “ನಾನು ಕೇವಲ ಆಗಮಗಳನ್ನು ಕೇಳಿ ನಿನಗೆ ಧರ್ಮಾನುಶಾಸನವನ್ನು ನೀಡುತ್ತಿಲ್ಲ. ದುಂಬಿಗಳು ಅನೇಕ ಸ್ಥಳಗಳಿಂದ ಅನೇಕ ಹೂವುಗಳಿಂದ ರಸವನ್ನು ಸಂಗ್ರಹಿಸುವಂತೆ ವಿದ್ವಾಂಸರು ಇಲ್ಲಿ ನಾನಾ ಪ್ರಕಾರದ ಬುದ್ಧಿ-ವಿಚಾರಗಳ ಸಂಕಲನವನ್ನು ಮಾಡಿದ್ದಾರೆ.
12140004a ಬಹ್ವ್ಯಃ ಪ್ರತಿವಿಧಾತವ್ಯಾಃ ಪ್ರಜ್ಞಾ ರಾಜ್ಞಾ ತತಸ್ತತಃ।
12140004c ನೈಕಶಾಖೇನ ಧರ್ಮೇಣ ಯಾತ್ರೈಷಾ ಸಂಪ್ರವರ್ತತೇ।।
ರಾಜನಾದವನು ಬೇರೆ ಬೇರೆ ಕಡೆಗಳಿಂದ ಮತ್ತು ನಾನಾ ತರಹದ ಮನುಷ್ಯರಿಂದ ಭಿನ್ನ ಭಿನ್ನ ಪ್ರಕಾರದ ಬುದ್ಧಿಗಳನ್ನು ಕಲಿಯಬೇಕು. ಅವನು ಒಂದೇ ಒಂದು ಶಾಖೆಯ ಧರ್ಮವನ್ನು ಹಿಡಿದು ಕುಳಿತುಕೊಳ್ಳಬಾರದು. ಯಾವ ರಾಜನಲ್ಲಿ ಸಂಕಟದ ಸಮಯದಲ್ಲಿ ಈ ಬುದ್ಧಿಯು ಸ್ಫುರಿತಗೊಳ್ಳುವುದೋ ಅವನು ಆತ್ಮರಕ್ಷಣೆಗಾಗಿ ಯಾವುದಾದರೂ ಉಪಾಯವನ್ನು ಹುಡುಕಿಕೊಳ್ಳುತ್ತಾನೆ.
12140005a ಬುದ್ಧಿಸಂಜನನಂ ರಾಜ್ಞಾಂ ಧರ್ಮಮಾಚರತಾಂ ಸದಾ।
12140005c ಜಯೋ ಭವತಿ ಕೌರವ್ಯ ತದಾ ತದ್ವಿದ್ಧಿ ಮೇ ವಚಃ।।
ಕೌರವ್ಯ! ಧರ್ಮ ಮತ್ತು ಸತ್ಪುರುಷರ ಆಚಾರ – ಬುದ್ಧಿಯಿಂದಲೇ ಪ್ರಕಟವಾಗುತ್ತವೆ ಮತ್ತು ಸದಾ ಅದರಿಂದಲೇ ತಿಳಿಯುತ್ತದೆ. ನನ್ನ ಈ ಮಾತನ್ನು ನೀನು ಚೆನ್ನಾಗಿ ಅರ್ಥಮಾಡಿಕೋ.
12140006a ಬುದ್ಧಿಶ್ರೇಷ್ಠಾ ಹಿ ರಾಜಾನೋ ಜಯಂತಿ ವಿಜಯೈಷಿಣಃ।
12140006c ಧರ್ಮಃ ಪ್ರತಿವಿಧಾತವ್ಯೋ ಬುದ್ಧ್ಯಾ ರಾಜ್ಞಾ ತತಸ್ತತಃ।।
ಏಕೆಂದರೆ ವಿಜಯದಲ್ಲಿ ಅಭಿಲಾಷೆಯನ್ನಿಟ್ಟಿರುವ ರಾಜರಿಗೆ ಶ್ರೇಷ್ಠ ಬುದ್ಧಿಯೇ ಜಯವನ್ನು ನೀಡುತ್ತದೆ. ರಾಜನಾದವನು ಇಲ್ಲಿ-ಅಲ್ಲಿಂದ ಬುದ್ಧಿಶಿಕ್ಷಣವನ್ನು ಪಡೆದುಕೊಂಡು ಧರ್ಮವನ್ನು ಚೆನ್ನಾಗಿ ಆಚರಿಸಬೇಕು.
12140007a ನೈಕಶಾಖೇನ ಧರ್ಮೇಣ ರಾಜ್ಞಾಂ ಧರ್ಮೋ ವಿಧೀಯತೇ।
12140007c ದುರ್ಬಲಸ್ಯ ಕುತಃ ಪ್ರಜ್ಞಾ ಪುರಸ್ತಾದನುದಾಹೃತಾ।।
ಒಂದೇ ಶಾಖೆಯ ಧರ್ಮದಿಂದ ರಾಜನ ಧರ್ಮವು ನಿರ್ವಹಿಸುವುದಿಲ್ಲ. ಒಂದೇ ಶಾಖೆಯ ಬುದ್ಧಿಯ ಶಿಕ್ಷಣವನ್ನು ಪಡೆದ ದುರ್ಬಲ ರಾಜನಿಗೆ ಪೂರ್ಣ ಪ್ರಜ್ಞೆಯು ಹೇಗೆ ತಾನೇ ಬರುತ್ತದೆ?
12140008a ಅದ್ವೈಧಜ್ಞಃ ಪಥಿ ದ್ವೈಧೇ ಸಂಶಯಂ ಪ್ರಾಪ್ತುಮರ್ಹತಿ।
12140008c ಬುದ್ಧಿದ್ವೈಧಂ ವೇದಿತವ್ಯಂ ಪುರಸ್ತಾದೇವ ಭಾರತ।।
ಭಾರತ! ಒಂದೇ ಧರ್ಮ ಅಥವಾ ಕರ್ಮವು ಒಂದು ಸಮಯದಲ್ಲಿ ಧರ್ಮವೆನಿಸಿಕೊಳ್ಳುತ್ತದೆ ಮತ್ತು ಇನ್ನೊಂದು ಸಮಯದಲ್ಲಿ ಅಧರ್ಮವೆಂದೆನಿಸಿಕೊಳ್ಳುತ್ತದೆ. ಇದನ್ನು ದ್ವೈಧ ಎಂದು ಕರೆಯುತ್ತಾರೆ. ಈ ದ್ವೈಧವನ್ನು ತಿಳಿಯದವನು ದ್ವೈಧವನ್ನು ತಲುಪಿದಾಗ ಸಂಶಯಕ್ಕೊಳಗಾಗುತ್ತಾನೆ. ಆದುದರಿಂದ ಬುದ್ಧಿಯ ಮೂಲಕ ಈ ದ್ವೈಧವನ್ನು ಮೊದಲೇ ತಿಳಿದುಕೊಂಡಿರಬೇಕು.
12140009a ಪಾರ್ಶ್ವತಃಕರಣಂ ಪ್ರಜ್ಞಾ ವಿಷೂಚೀ ತ್ವಾಪಗಾ ಇವ2।
12140009c ಜನಸ್ತೂಚ್ಚಾರಿತಂ ಧರ್ಮಂ ವಿಜಾನಾತ್ಯನ್ಯಥಾನ್ಯಥಾ।।
ಪ್ರಾಜ್ಞನು ಪ್ರತ್ಯೇಕ ಕಾರ್ಯಗಳನ್ನೂ ಗುಪ್ತವಾಗಿಯೇ ಪ್ರಾರಂಭಿಸಿ ನಂತರ ಅದನ್ನು ಸರ್ವತ್ರ ಪ್ರಕಾಶಗೊಳಿಸಬೇಕು. ಇಲ್ಲದಿದ್ದರೆ ಅವನು ಆಚರಿಸುವ ಧರ್ಮವನ್ನು ಜನರು ಅನ್ಯಥಾ ತಿಳಿದುಕೊಳ್ಳುತ್ತಾರೆ.
12140010a ಸಮ್ಯಗ್ವಿಜ್ಞಾನಿನಃ3 ಕೇ ಚಿನ್ಮಿಥ್ಯಾವಿಜ್ಞಾನಿನೋಽಪರೇ।
12140010c ತದ್ವೈ ಯಥಾತಥಂ ಬುದ್ಧ್ವಾ ಜ್ಞಾನಮಾದದತೇ ಸತಾಮ್।।
ಕೆಲವರು ಉತ್ತಮ ಜ್ಞಾನಿಗಳಾಗಿರುತ್ತಾರೆ ಮತ್ತು ಇನ್ನು ಕೆಲವರು ಮಿಥ್ಯ ಜ್ಞಾನಿಗಳಾಗಿರುತ್ತಾರೆ. ರಾಜನಾದವನು ಈ ವಿಷಯವನ್ನು ಚೆನ್ನಾಗಿ ತಿಳಿದುಕೊಂಡು ಸತ್ಯಜ್ಞಾನಸಂಪನ್ನ ಸತ್ಪುರುಷರಿಂದಲೇ ಜ್ಞಾನವನ್ನು ಪಡೆದುಕೊಳ್ಳಬೇಕು.
12140011a ಪರಿಮುಷ್ಣಂತಿ ಶಾಸ್ತ್ರಾಣಿ ಧರ್ಮಸ್ಯ ಪರಿಪಂಥಿನಃ।
12140011c ವೈಷಮ್ಯಮರ್ಥವಿದ್ಯಾನಾಂ ನೈರರ್ಥ್ಯಾತ್4 ಖ್ಯಾಪಯಂತಿ ತೇ।।
ಧರ್ಮದ್ರೋಹಿಗಳು ಶಾಸ್ತ್ರಗಳನ್ನು ಕೊಳ್ಳೆಹೊಡೆಯುತ್ತಾರೆ. ಅರ್ಥವಿದ್ಯೆಯ ವೈಷಮ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಮಿಥ್ಯಪ್ರಚಾರ ಮಾಡುತ್ತಾರೆ.
12140012a ಆಜಿಜೀವಿಷವೋ ವಿದ್ಯಾಂ ಯಶಸ್ಕಾಮಾಃ ಸಮಂತತಃ।
12140012c ತೇ ಸರ್ವೇ ನರಪಾಪಿಷ್ಠಾ ಧರ್ಮಸ್ಯ ಪರಿಪಂಥಿನಃ।।
ಜೀವನ ಉದ್ಯೋಗಕ್ಕಾಗಿ ವಿದ್ಯೆಯನ್ನು ಕಲಿಯುವವರು, ಸರ್ವತ್ರ ಯಶಸ್ಸನ್ನು ಗಳಿಸಲು ವಿದ್ಯೆಯನ್ನು ಪಡೆದುಕೊಳ್ಳುವವರು ಮತ್ತು ಮನೋವಾಂಛಿತ ಪದಾರ್ಥಗಳನ್ನು ಪಡೆದುಕೊಳ್ಳಲು ವಿದ್ಯೆಯನ್ನು ಕಲಿಯುವವರು – ಅವರೆಲ್ಲರೂ ಪಾಪಿಷ್ಠ ನರರು ಮತ್ತು ಧರ್ಮದ್ರೋಹಿಗಳು.
12140013a ಅಪಕ್ವಮತಯೋ ಮಂದಾ ನ ಜಾನಂತಿ ಯಥಾತಥಮ್।
12140013c ಸದಾ ಹ್ಯಶಾಸ್ತ್ರಕುಶಲಾಃ ಸರ್ವತ್ರಾಪರಿನಿಷ್ಠಿತಾಃ।।
ಬುದ್ಧಿಯು ಪರಿಪಕ್ವವಾಗಿಲ್ಲದ ಮಂದಮತಿ ಜನರು ಯಥಾರ್ಥ ತತ್ತ್ವವನ್ನು ತಿಳಿಯಲಾರರು. ಶಾಸ್ತ್ರಜ್ಞಾನದಲ್ಲಿ ನಿಪುಣರಾಗಿರದೇ ಸರ್ವತ್ರ ಅಸಂಗತ ಯುಕ್ತಿಯನ್ನೇ ಅವರು ಅವಲಂಬಿಸಿರುತ್ತಾರೆ.
12140014a ಪರಿಮುಷ್ಣಂತಿ ಶಾಸ್ತ್ರಾಣಿ ಶಾಸ್ತ್ರದೋಷಾನುದರ್ಶಿನಃ।
12140014c ವಿಜ್ಞಾನಮಥ ವಿದ್ಯಾನಾಂ5 ನ ಸಮ್ಯಗಿತಿ ವರ್ತತೇ।।
ಯಾವಾಗಲೂ ಶಾಸ್ತ್ರಗಳಲ್ಲಿ ದೋಷವನ್ನೇ ಹುಡುಕುವ ಜನರು ಶಾಸ್ತ್ರಗಳ ಮರ್ಯಾದೆಯನ್ನು ಕದಿಯುತ್ತಾರೆ ಮತ್ತು ಈ ವಿಜ್ಞಾನ ವಿದ್ಯೆಯು ಉತ್ತಮವಾದುದಲ್ಲ ಎಂದೂ ಹೇಳುತ್ತಾರೆ.
12140015a ನಿಂದಯಾ ಪರವಿದ್ಯಾನಾಂ ಸ್ವಾಂ ವಿದ್ಯಾಂ ಖ್ಯಾಪಯಂತಿ ಯೇ।
12140015c ವಾಗಸ್ತ್ರಾ ವಾಕ್ಚುರೀಮತ್ತ್ವಾ ದುಗ್ಧವಿದ್ಯಾಫಲಾ ಇವ।
ಯಾರ ಮಾತೇ ಅಸ್ತ್ರವಾಗಿರುವುದೋ ಮತ್ತು ಯಾರ ಮಾತು ಬಾಣದಂತೆ ತಗಲುವುದೋ ಅವರು ವಿದ್ಯೆಯ ಫಲ ತತ್ತ್ವಜ್ಞಾನಕ್ಕೇ ವಿದ್ರೋಹಗೈಯುತ್ತಾರೆ. ಇಂಥಹ ಜನರು ಇನ್ನೊಬ್ಬರ ವಿದ್ಯೆಯನ್ನು ನಿಂದಿಸಿ ತಮ್ಮ ವಿದ್ಯೆಯ ಶ್ರೇಷ್ಠತೆಯನ್ನು ಮಿಥ್ಯವಾಗಿ ಪ್ರಚಾರಮಾಡುತ್ತಾರೆ.
12140015e ತಾನ್ವಿದ್ಯಾವಣಿಜೋ ವಿದ್ಧಿ ರಾಕ್ಷಸಾನಿವ ಭಾರತ।।
12140016a ವ್ಯಾಜೇನ ಕೃತ್ಸ್ನೋ ವಿದಿತೋ ಧರ್ಮಸ್ತೇ ಪರಿಹಾಸ್ಯತೇ।
ಭಾರತ! ಇಂಥಹ ಜನರು ವಿದ್ಯೆಯನ್ನು ವ್ಯಾಪಾರಮಾಡುವವರು ಮತ್ತು ರಾಕ್ಷಸ ಸಮಾನ ಪರದ್ರೋಹಿಗಳು ಎಂದು ತಿಳಿದುಕೋ. ಅವರ ಆಡಂಬರಗಳಿಂದ ನೀನು ಸತ್ಪುರುಷರಿಂದ ಪ್ರತಿಪಾದಿಸಿದ ಆಚಾರ ಧರ್ಮಗಳು ನಷ್ಟವಾಗಿಬಿಡುತ್ತವೆ.
12140016c ನ ಧರ್ಮವಚನಂ ವಾಚಾ ನ ಬುದ್ಧ್ಯಾ ಚೇತಿ ನಃ ಶ್ರುತಮ್।।
12140017a ಇತಿ ಬಾರ್ಹಸ್ಪತಂ ಜ್ಞಾನಂ ಪ್ರೋವಾಚ ಮಘವಾ ಸ್ವಯಮ್।
ಕೇವಲ ಮಾತಿನಿಂದ ಅಥವಾ ಕೇವಲ ಬುದ್ಧಿಯಿಂದ ಧರ್ಮದ ನಿಶ್ಚಯವಾಗುವುದಿಲ್ಲ ಎಂದು ನಾವು ಕೇಳಿದ್ದೇವೆ. ಶಾಸ್ತ್ರವಚನ ಮತ್ತು ತರ್ಕ ಇವೆರಡರ ಸಮುಚ್ಚಯದಿಂದ ಅದರ ನಿರ್ಣಯವಾಗುತ್ತದೆ. ಇದೇ ಸ್ವಯಂ ಇಂದ್ರನು ಹೇಳಿದ ಬೃಹಸ್ಪತಿಯ ಮತ.
12140017c ನ ತ್ವೇವ ವಚನಂ ಕಿಂ ಚಿದನಿಮಿತ್ತಾದಿಹೋಚ್ಯತೇ।।
12140018a ಸ್ವವಿನೀತೇನ ಶಾಸ್ತ್ರೇಣ ವ್ಯವಸ್ಯಂತಿ ತಥಾಪರೇ।
ವಿದ್ವಾನ್ ಪುರುಷನು ಅಕಾರಣವಾಗಿ ಏನನ್ನೂ ಹೇಳುವುದಿಲ್ಲ ಮತ್ತು ಅನ್ಯ ಅನೇಕ ಜನರು ಚೆನ್ನಾಗಿ ಕಲಿತುಕೊಂಡ ಶಾಸ್ತ್ರದ ಅನುಸಾರವಾಗಿ ನಡೆದುಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ.
12140018c ಲೋಕಯಾತ್ರಾಮಿಹೈಕೇ ತು ಧರ್ಮಮಾಹುರ್ಮನೀಷಿಣಃ।।
12140019a ಸಮುದ್ದಿಷ್ಟಂ ಸತಾಂ ಧರ್ಮಂ ಸ್ವಯಮೂಹೇನ್ನ ಪಂಡಿತಃ।
ಈ ಜಗತ್ತಿನಲ್ಲಿ ಕೆಲವು ಮನೀಷಿಗಳು ಶಿಷ್ಠ ಪುರುಷರು ನಡೆದುಕೊಳ್ಳುವ ರೀತಿಯನ್ನೇ ಧರ್ಮವೆಂದು ಹೇಳುತ್ತಾರೆ. ಆದರೆ ವಿದ್ವಾನ್ ಪುರುಷನು ಸ್ವಯಂ ತಾನೇ ಊಹಿಸಿಕೊಂಡು ಸತ್ಪುರುಷರ ಶಾಸ್ತ್ರವಿಹಿತ ಧರ್ಮವನ್ನು ನಿಶ್ಚಯಿಸಿಕೊಳ್ಳಬೇಕು.
12140019c ಅಮರ್ಷಾಚ್ಚಾಸ್ತ್ರಸಂಮೋಹಾದವಿಜ್ಞಾನಾಚ್ಚ ಭಾರತ।।
12140020a ಶಾಸ್ತ್ರಂ ಪ್ರಾಜ್ಞಸ್ಯ ವದತಃ ಸಮೂಹೇ ಯಾತ್ಯದರ್ಶನಮ್।
ಭಾರತ! ಬುದ್ಧಿವಂತನಾಗಿದ್ದರೂ ಶಾಸ್ತ್ರವನ್ನು ಸರಿಯಾಗಿ ತಿಳಿಯದೇ ಮೋಹಬದ್ಧನಾಗಿ ಶಾಸ್ತ್ರದ ಕುರಿತು ಜೋರಾಗಿ ಪ್ರವಚನ ಮಾಡುವುದರಿಂದ ಲೋಕಸಮಾಜದಲ್ಲಿ ಯಾವ ಪ್ರಭಾವವೂ ಬೀಳುವುದಿಲ್ಲ.
12140020c ಆಗತಾಗಮಯಾ ಬುದ್ಧ್ಯಾ ವಚನೇನ ಪ್ರಶಸ್ಯತೇ।।
12140021a ಅಜ್ಞಾನಾಜ್ಜ್ಞಾನಹೇತುತ್ವಾದ್ವಚನಂ ಸಾಧು ಮನ್ಯತೇ।
ವೇದ-ಶಾಸ್ತ್ರಗಳು ಅನುಮೋದಿಸುವ ತರ್ಕಯುಕ್ತ ಬುದ್ಧಿಯ ಮಾತೇ ಜನರಿಗೆ ಮನದಟ್ಟಾಗುತ್ತದೆ. ಕೆಲವರು ತಿಳಿಯದೇ ಇದ್ದ ವಿಷಯವನ್ನು ತಿಳಿಯಲು ಕೇವಲ ತರ್ಕವೇ ಶ್ರೇಷ್ಠವೆಂದು ಅಭಿಪ್ರಾಯಪಡುತ್ತಾರೆ. ಆದರೆ ಇದು ಅವರ ಅಜ್ಞಾನವನ್ನು ತೋರಿಸುತ್ತದೆ.
12140021c ಅನಪಾಹತಮೇವೇದಂ ನೇದಂ ಶಾಸ್ತ್ರಮಪಾರ್ಥಕಮ್।।
12140022a ದೈತೇಯಾನುಶನಾಃ ಪ್ರಾಹ ಸಂಶಯಚ್ಚೇದನೇ ಪುರಾ।
ಕೇವಲ ತರ್ಕಕ್ಕೆ ಪ್ರಧಾನತೆಯನ್ನು ನೀಡಿ ಅಮುಕ ಯುಕ್ತಿಯಿಂದ ಶಾಸ್ತ್ರದ ಈ ಮಾತನ್ನು ಅಪಾರ್ಥಮಾಡಿಕೊಳ್ಳುತ್ತಾರೆ. ಈ ಸಂಶಯವನ್ನು ತೆಗೆದುಹಾಕುವುದಕ್ಕಾಗಿಯೇ ಹಿಂದೆ ಉಶನನು ದೈತ್ಯರಿಗೆ ಈ ಮಾತನ್ನು ಹೇಳಿದ್ದನು.
12140022c ಜ್ಞಾನಮವ್ಯಪದೇಶ್ಯಂ ಹಿ ಯಥಾ ನಾಸ್ತಿ ತಥೈವ ತತ್।।
12140023a ತೇನ ತ್ವಂ ಚಿನ್ನಮೂಲೇನ ಕಂ ತೋಷಯಿತುಮರ್ಹಸಿ।
ಸಂಶಯಾತ್ಮಕವಾದ ಜ್ಞಾನವು ಇದ್ದರೂ ಒಂದೇ ಮತ್ತು ಇಲ್ಲದಿದ್ದರೂ ಒಂದೇ. ಆದುದರಿಂದ ನೀನು ಆ ಸಂಶಯದ ಮೂಲವನ್ನೇ ಛೇದಿಸಿ ದೂರ ಎಸೆ.
12140023c ಅತಥ್ಯವಿಹಿತಂ ಯೋ ವಾ ನೇದಂ ವಾಕ್ಯಮುಪಾಶ್ನುಯಾತ್।।
12140024a ಉಗ್ರಾಯೈವ ಹಿ ಸೃಷ್ಟೋಽಸಿ ಕರ್ಮಣೇ ನ ತ್ವವೇಕ್ಷಸೇ।
ನನ್ನ ಈ ನೀತಿಯುಕ್ತ ಮಾತುಗಳನ್ನು ನೀನು ಸ್ವೀಕರಿಸದೇ ಇದ್ದರೆ ಅದು ಉಚಿತವಲ್ಲ. ಏಕೆಂದರೆ ನೀನು ಉಗ್ರ ಕರ್ಮಕ್ಕಾಗಿಯೇ ವಿಧಾತನಿಂದ ಸೃಷ್ಟಿಸಲ್ಪಟ್ಟಿದ್ದೀಯೆ. ಈ ವಿಷಯದ ಕುರಿತು ನಿನ್ನ ದೃಷ್ಟಿಯು ಹಾಯುತ್ತಿಲ್ಲ.
12140024c ಅಂಗೇಮಾಮನ್ವವೇಕ್ಷಸ್ವ ರಾಜನೀತಿಂ ಬುಭೂಷಿತುಮ್।
12140024e ಯಯಾ ಪ್ರಮುಚ್ಯತೇ ತ್ವನ್ಯೋ ಯದರ್ಥಂ ಚ ಪ್ರಮೋದತೇ।।
ನನ್ನ ಕಡೆ ನೋಡು! ನಾನು ಏನು ಮಾಡಿದ್ದೇನೆನ್ನುವುದನ್ನು ನೋಡು! ಭೂಮಂಡಲದ ರಾಜ್ಯವನ್ನು ಪಡೆದುಕೊಳ್ಳುವ ಇಚ್ಛೆಯಿದ್ದ ಕ್ಷತ್ರಿಯ ರಾಜರೊಂದಿಗೆ ನಾನು ಅವರು ಸಂಸಾರಬಂಧನದಿಂದ ಮುಕ್ತರಾಗುವಂತೆಯೇ ನಡೆದುಕೊಂಡಿದ್ದೇನೆ. ಆದರೂ ನನ್ನ ಈ ಕೃತ್ಯವನ್ನು ಇತರರು ಅನುಮೋದಿಸುತ್ತಿರಲಿಲ್ಲ. ನನ್ನನ್ನು ಕ್ರೂರಿ ಮತ್ತು ಹಿಂಸಕನೆಂದು ಕರೆಯುತ್ತಿದ್ದರು.
12140025a ಅಜೋಽಶ್ವಃ ಕ್ಷತ್ರಮಿತ್ಯೇತತ್ ಸದೃಶಂ ಬ್ರಹ್ಮಣಾ ಕೃತಮ್।
12140025c ತಸ್ಮಾನ್ನತೀಕ್ಷ್ಣಭೂತಾನಾಂ ಯಾತ್ರಾ ಕಾ ಚಿತ್ ಪ್ರಸಿಧ್ಯತಿ।।
ಆಡು, ಕುದುರೆ ಮತ್ತು ಕ್ಷತ್ರಿಯ – ಈ ಮೂವರನ್ನೂ ಬ್ರಹ್ಮನು ಒಂದೇ ರೀತಿಯಲ್ಲಿ ಮಾಡಿದ್ದಾನೆ. ಇವುಗಳ ಮೂಲಕ ಸಮಸ್ತ ಪ್ರಾಣಿಗಳ ಪುನಃ ಪುನಃ ಯಾವುದಾದರೂ ಜೀವನಯಾತ್ರೆಯು ಸಿದ್ಧಿಯಾಗುತ್ತಿರುತ್ತದೆ.
12140026a ಯಸ್ತ್ವವಧ್ಯವಧೇ ದೋಷಃ ಸ ವಧ್ಯಸ್ಯಾವಧೇ ಸ್ಮೃತಃ।
12140026c ಏಷೈವ ಖಲು ಮರ್ಯಾದಾ ಯಾಮಯಂ ಪರಿವರ್ಜಯೇತ್।।
ಅವಧ್ಯನನ್ನು ವಧಿಸುವುದರಲ್ಲಿ ಯಾವ ದೋಷವಿದೆಯೆಂದು ಹೇಳುತ್ತಾರೋ ಅದೇ ವಧ್ಯನನ್ನು ವಧಿಸದೇ ಇರುವುದರಲ್ಲಿಯೂ ಇದೆ. ಆ ದೋಷವೇ ಅಕರ್ತವ್ಯದ ಮರ್ಯಾದೆಯು. ಇದನ್ನು ಕ್ಷತ್ರಿಯ ರಾಜನು ಪರಿತ್ಯಜಿಸಬಾರದು.
12140027a ತಸ್ಮಾತ್ತೀಕ್ಷ್ಣಃ ಪ್ರಜಾ ರಾಜಾ ಸ್ವಧರ್ಮೇ ಸ್ಥಾಪಯೇದುತ।
12140027c ಅನ್ಯೋನ್ಯಂ ಭಕ್ಷಯಂತೋ ಹಿ ಪ್ರಚರೇಯುರ್ವೃಕಾ ಇವ।।
ಆದುದರಿಂದ ತೀಕ್ಷ್ಣಸ್ವಭಾವದ ರಾಜನೇ ಪ್ರಜೆಗಳನ್ನು ಅವರವರ ಧರ್ಮಗಳಲ್ಲಿ ಸ್ಥಾಪಿತಗೊಳಿಸಬಲ್ಲನು. ಅನ್ಯಥಾ ಪ್ರಜಾವರ್ಗದ ಸರ್ವ ಜನರೂ ತೋಳಗಳಂತೆ ಒಬ್ಬರು ಇನ್ನೊಬ್ಬರನ್ನು ಭಕ್ಷಿಸುತ್ತಾ ತಿರುಗಾಡುತ್ತಿರುತ್ತಾರೆ.
12140028a ಯಸ್ಯ ದಸ್ಯುಗಣಾ ರಾಷ್ಟ್ರೇ ಧ್ವಾಂಕ್ಷಾ ಮತ್ಸ್ಯಾನ್ ಜಲಾದಿವ।
12140028c ವಿಹರಂತಿ ಪರಸ್ವಾನಿ ಸ ವೈ ಕ್ಷತ್ರಿಯಪಾಂಸನಃ।।
ಯಾರ ರಾಷ್ಟ್ರದಲ್ಲಿ ದಸ್ಯುಗಣಗಳು ನೀರಿನಿಂದ ಮೀನನ್ನು ಹಿಡಿದು ತಿನ್ನುವ ಬಕಪಕ್ಷಿಯಂತೆ ಪರರ ಧನವನ್ನು ಅಪರಹರಿಸುತ್ತಿರುತ್ತಾರೋ ಆ ರಾಜನು ನಿಶ್ಚಯವಾಗಿಯೂ ಕ್ಷತ್ರಿಯಕುಲಕ್ಕೆ ಕಲಂಕನು.
12140029a ಕುಲೀನಾನ್ ಸಚಿವಾನ್ ಕೃತ್ವಾ ವೇದವಿದ್ಯಾಸಮನ್ವಿತಾನ್।
12140029c ಪ್ರಶಾಧಿ ಪೃಥಿವೀಂ ರಾಜನ್ ಪ್ರಜಾ ಧರ್ಮೇಣ ಪಾಲಯನ್।।
ರಾಜನ್! ಉತ್ತಮ ಕುಲದಲ್ಲಿ ಜನಿಸಿದ, ಮತ್ತು ವೇದವಿದ್ಯಾಸಂಪನ್ನ ಪುರುಷರನ್ನೇ ಮಂತ್ರಿಗಳನ್ನಾಗಿಸಿಕೊಂಡು ಪ್ರಜೆಗಳನ್ನು ಧರ್ಮಪೂರ್ವಕವಾಗಿ ಪಾಲಿಸುತ್ತಾ ನೀನು ಈ ಪೃಥ್ವಿಯನ್ನು ಆಳು.
12140030a ವಿಹೀನಜಮಕರ್ಮಾಣಂ ಯಃ ಪ್ರಗೃಹ್ಣಾತಿ ಭೂಮಿಪಃ।
12140030c ಉಭಯಸ್ಯಾವಿಶೇಷಜ್ಞಸ್ತದ್ವೈ ಕ್ಷತ್ರಂ ನಪುಂಸಕಮ್।।
ಸತ್ಕರ್ಮರಹಿತನಾದ ನ್ಯಾಯಶೂನ್ಯ ಮತ್ತು ಕಾರ್ಯಸಾಧನೆಯ ಉಪಾಯಗಳನ್ನು ತಿಳಿಯದಿರುವ ಪುರುಷನನ್ನು ಸಚಿವನ ರೂಪದಲ್ಲಿ ಸ್ವೀಕರಿಸುವ ರಾಜನು ನಪುಂಸಕನೇ ಸರಿ.
12140031a ನೈವೋಗ್ರಂ ನೈವ ಚಾನುಗ್ರಂ ಧರ್ಮೇಣೇಹ ಪ್ರಶಸ್ಯತೇ।
12140031c ಉಭಯಂ ನ ವ್ಯತಿಕ್ರಾಮೇದುಗ್ರೋ ಭೂತ್ವಾ ಮೃದುರ್ಭವ।।
ರಾಜಧರ್ಮದ ಪ್ರಕಾರ ಕೇವಲ ಉಗ್ರಭಾವವನ್ನಾಗಲೀ ಅಥವಾ ಕೇವಲ ಮೃದುಭಾವವನ್ನಾಗಲೀ ಪ್ರಶಂಸಿಸುವುದಿಲ್ಲ. ಆದರೆ ಅವೆರಡರಲ್ಲಿ ಯಾವುದನ್ನೂ ಪರಿತ್ಯಜಿಸಬಾರದು. ಆದುದರಿಂದ ನೀನು ಮೊದಲು ಉಗ್ರನಾಗಿದ್ದುಕೊಂಡು ನಂತರ ಮೃದುವಾಗು.
12140032a ಕಷ್ಟಃ ಕ್ಷತ್ರಿಯಧರ್ಮೋಽಯಂ ಸೌಹೃದಂ ತ್ವಯಿ ಯತ್ ಸ್ಥಿತಮ್।
12140032c ಉಗ್ರೇ ಕರ್ಮಣಿ ಸೃಷ್ಟೋಽಸಿ ತಸ್ಮಾದ್ರಾಜ್ಯಂ ಪ್ರಶಾಧಿ ವೈ।।
ಕ್ಷತ್ರಿಯ ಧರ್ಮವು ಕಷ್ಟಸಾಧ್ಯವು. ನಿನ್ನ ಮೇಲೆ ನನ್ನ ಸ್ನೇಹವಿದೆ. ಆದುದರಿಂದ ಹೇಳುತ್ತಿದ್ದೇನೆ. ವಿಧಾತನು ನಿನ್ನನ್ನು ಉಗ್ರಕರ್ಮಕ್ಕಾಗಿಯೇ ಹುಟ್ಟಿಸಿದ್ದಾನೆ. ಆದುದರಿಂದ ನೀನು ನಿನ್ನ ಧರ್ಮದಲ್ಲಿಯೇ ಸ್ಥಿತನಾಗಿದ್ದುಕೊಂಡು ರಾಜ್ಯ ಶಾಸನವನ್ನು ಮಾಡು.
12140033a ಅಶಿಷ್ಟನಿಗ್ರಹೋ ನಿತ್ಯಂ ಶಿಷ್ಟಸ್ಯ ಪರಿಪಾಲನಮ್।
12140033c ಇತಿ ಶಕ್ರೋಽಬ್ರವೀದ್ಧೀಮಾನಾಪತ್ಸು ಭರತರ್ಷಭ।।
ಭರತರ್ಷಭ! ಆಪತ್ಕಾಲದಲ್ಲಿಯೂ ಸದಾ ದುಷ್ಟರ ದಮನ ಮತ್ತು ಶಿಷ್ಟರ ಪರಿಪಾಲನೆಯನ್ನು ಮಾಡಬೇಕು ಎಂದು ಬುದ್ಧಿಮಾನ್ ಶುಕ್ರಾಚಾರ್ಯನು ಹೇಳಿದ್ದಾನೆ.”
12140034 ಯುಧಿಷ್ಠಿರ ಉವಾಚ ।
12140034a ಅಸ್ತಿ ಸ್ವಿದ್ದಸ್ಯುಮರ್ಯಾದಾ ಯಾಮನ್ಯೋ ನಾತಿಲಂಘಯೇತ್।
12140034c ಪೃಚ್ಚಾಮಿ ತ್ವಾಂ ಸತಾಂ ಶ್ರೇಷ್ಠ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಸತ್ಪುರುಷರಲ್ಲಿ ಶ್ರೇಷ್ಠ! ಪಿತಾಮಹ! ಈ ಜಗತ್ತಿನಲ್ಲಿ ಬೇರೆ ಯಾವುದೂ ಉಲ್ಲಂಘನ ಮಾಡಲಾರದ ಮರ್ಯಾದೆಯೊಂದಿದ್ದರೆ ಅದರ ಕುರಿತು ಕೇಳ ಬಯಸುತ್ತೇನೆ. ಅದರ ಕುರಿತು ನನಗೆ ಹೇಳು.”
12140035 ಭೀಷ್ಮ ಉವಾಚ ।
12140035a ಬ್ರಾಹ್ಮಣಾನೇವ ಸೇವೇತ ವಿದ್ಯಾವೃದ್ಧಾಂಸ್ತಪಸ್ವಿನಃ।
12140035c ಶ್ರುತಚಾರಿತ್ರವೃತ್ತಾಢ್ಯಾನ್ ಪವಿತ್ರಂ ಹ್ಯೇತದುತ್ತಮಮ್।।
ಭೀಷ್ಮನು ಹೇಳಿದನು: “ವಿದ್ಯಾವೃದ್ಧನೂ ತಪಸ್ವಿಯೂ ಶಾಸ್ತ್ರಜ್ಞಾನ ಮತ್ತು ಉತ್ತಮ ಚಾರಿತ್ರವಂತನೂ ಸದಾಚಾರ ಸಂಪನ್ನನೂ ಆದ ಬ್ರಾಹ್ಮಣನ ಸೇವೆಮಾಡುವುದೇ ಪರಮ ಉತ್ತಮ ಮತ್ತು ಪವಿತ್ರ ಕಾರ್ಯವು.
12140036a ಯಾ ದೇವತಾಸು ವೃತ್ತಿಸ್ತೇ ಸಾಸ್ತು ವಿಪ್ರೇಷು ಸರ್ವದಾ।
12140036c ಕ್ರುದ್ಧೈರ್ಹಿ ವಿಪ್ರೈಃ ಕರ್ಮಾಣಿ ಕೃತಾನಿ ಬಹುಧಾ ನೃಪ।।
ನೃಪ! ದೇವತೆಗಳ ಕುರಿತು ನಿನ್ನ ವರ್ತನೆಯು ಹೇಗಿದೆಯೋ ಅದೇ ಭಾವ ಮತ್ತು ವರ್ತನೆಗಳು ಬ್ರಾಹ್ಮಣರ ಕುರಿತೂ ಸದಾ ಇರಬೇಕು. ಏಕೆಂದರೆ ಕ್ರೋಧದಿಂದ ತುಂಬಿದ ಬ್ರಾಹ್ಮಣರು ಅನೇಕ ಪ್ರಕಾರದ ಅದ್ಭುತ ಕರ್ಮಗಳನ್ನು ಮಾಡಿದ್ದಾರೆ.
12140037a ತೇಷಾಂ ಪ್ರೀತ್ಯಾ ಯಶೋ ಮುಖ್ಯಮಪ್ರೀತ್ಯಾ ತು ವಿಪರ್ಯಯಃ।
12140037c ಪ್ರೀತ್ಯಾ ಹ್ಯಮೃತವದ್ವಿಪ್ರಾಃ ಕ್ರುದ್ಧಾಶ್ಚೈವ ಯಥಾ ವಿಷಮ್।।
ಬ್ರಾಹ್ಮಣರ ಪ್ರಸನ್ನತೆಯಿಂದ ಶ್ರೇಷ್ಠ ಯಶಸ್ಸಿನ ವಿಸ್ತಾರವಾಗುತ್ತದೆ. ಅವರ ಅಪ್ರಸನ್ನತೆಯಿಂದ ಮಹಾ ಭಯವು ಪ್ರಾಪ್ತವಾಗುತ್ತದೆ. ಪ್ರಸನ್ನರಾದರೆ ಬ್ರಾಹ್ಮಣರು ಅಮೃತ ಸಮಾನ ಜೀವನದಾಯಕರಾಗುತ್ತಾರೆ ಮತ್ತು ಕುಪಿತರಾದರೆ ವಿಷ ಸಮಾನ ಭಯಂಕರರಾಗಿಬಿಡುತ್ತಾರೆ.”