ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ಆಪದ್ಧರ್ಮ ಪರ್ವ
ಅಧ್ಯಾಯ 130
ಸಾರ
ರಾಜರ್ಷಿಗಳ ಸದಾಚಾರ ವರ್ಣನೆ (1-21).
12130001 ಯುಧಿಷ್ಠಿರ ಉವಾಚ।
12130001a ಹೀನೇ ಪರಮಕೇ ಧರ್ಮೇ ಸರ್ವಲೋಕಾತಿಲಂಘಿನಿ1।
12130001c ಸರ್ವಸ್ಮಿನ್ದಸ್ಯುಸಾದ್ಭೂತೇ ಪೃಥಿವ್ಯಾಮುಪಜೀವನೇ।।
12130002a ಕೇನಾಸ್ಮಿನ್ಬ್ರಾಹ್ಮಣೋ ಜೀವೇಜ್ಜಘನ್ಯೇ ಕಾಲ ಆಗತೇ।
12130002c ಅಸಂತ್ಯಜನ್ಪುತ್ರಪೌತ್ರಾನನುಕ್ರೋಶಾತ್ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಸರ್ವಲೋಕಗಳಿಗೂ ಹಿತಕರವಾದ ಪರಮ ರಾಜಧರ್ಮವು ಹೀನವಗಿ ಭೂಮಿಯ ಮೇಲಿನ ಉಪಜೀವನ ಸಾಧನಗಳೆಲ್ಲವೂ ದಸ್ಯುಗಳ ಅಧಿಕಾರಕ್ಕೆ ಬಂದು ಅತ್ಯಂತ ಸಂಕಟವಾದ ಜೀವಕ್ಕೇ ತೊಂದರೆಯಾಗುವಂತಹ ಕಾಲವು ಬಂದಾಗ ಮಕ್ಕಳು ಮೊಮ್ಮಕ್ಕಳನ್ನು ತೊರೆಯದೇ ದಯಾಪರನಾಗಿರುವ ಬ್ರಾಹ್ಮಣನು ಯಾವ ವೃತ್ತಿಯಿಂದ ಜೀವನವನ್ನು ನಡೆಸಬೇಕು?”
12130003 ಭೀಷ್ಮ ಉವಾಚ।
12130003a ವಿಜ್ಞಾನಬಲಮಾಸ್ಥಾಯ ಜೀವಿತವ್ಯಂ ತಥಾಗತೇ।
12130003c ಸರ್ವಂ ಸಾಧ್ವರ್ಥಮೇವೇದಮಸಾಧ್ವರ್ಥಂ ನ ಕಿಂ ಚನ।।
ಭೀಷ್ಮನು ಹೇಳಿದನು: “ಅಂಥಹ ಕಾಲವು ಬಂದಾಗ ಬ್ರಾಹ್ಮಣನು ತನ್ನ ವಿಜ್ಞಾನಬಲವನ್ನು ಆಶ್ರಯಿಸಿ ಜೀವಿಸಬೇಕು. ಈ ಲೋಕದಲ್ಲಿ ಎಲ್ಲವೂ ಸಾಧುಗಳ ಸಲುವಾಗಿ ಇರುವವೇ ಹೊರತು ಯಾವುದೂ ಅಸಾಧುಗಳಿಗೆ ಇರುವುದಿಲ್ಲ.
12130004a ಅಸಾಧುಭ್ಯೋ ನಿರಾದಾಯ ಸಾಧುಭ್ಯೋ ಯಃ ಪ್ರಯಚ್ಚತಿ।
12130004c ಆತ್ಮಾನಂ ಸಂಕ್ರಮಂ ಕೃತ್ವಾ ಕೃತ್ಸ್ನಧರ್ಮವಿದೇವ2 ಸಃ।।
ತನ್ನನ್ನೇ ಸೇತುವೆಯನ್ನಾಗಿ ಮಾಡಿಕೊಂಡು ಅಸಾಧುಗಳಿಂದ ಧನವನ್ನು ತೆಗೆದುಕೊಂಡು ಸಾಧುಗಳಿಗೆ ಕೊಂಡುವವನೇ ಧರ್ಮವನ್ನು ಸಂಪೂರ್ಣವಾಗಿ ತಿಳಿದುಕೊಂಡವನು.
12130005a ಸುರೋಷೇಣಾತ್ಮನೋ3 ರಾಜನ್ರಾಜ್ಯೇ ಸ್ಥಿತಿಮಕೋಪಯನ್।
12130005c ಅದತ್ತಮಪ್ಯಾದದೀತ ದಾತುರ್ವಿತ್ತಂ ಮಮೇತಿ ವಾ।।
ರಾಜನ್! ರಾಜ್ಯಭ್ರಷ್ಟನಾದ ರಾಜನು ತನ್ನ ರಾಜ್ಯವನ್ನು ಪುನಃ ಪಡೆದುಕೊಳ್ಳಲು ರಾಜ್ಯದ ಪರಿಸ್ಥಿತಿಯನ್ನು ಹದಗೆಡಿಸದೇ ಧನಿಕರಲ್ಲಿರುವ ಧನವು ತನ್ನದೇ ಎಂದು ಭಾವಿಸಿ ಅವರಿಂದ ಬಲಾತ್ಕಾರವಾಗಿ ಧನವನ್ನು ತೆಗೆದುಕೊಳ್ಳಬೇಕು.
12130006a ವಿಜ್ಞಾನಬಲಪೂತೋ ಯೋ ವರ್ತತೇ ನಿಂದಿತೇಷ್ವಪಿ।
12130006c ವೃತ್ತವಿಜ್ಞಾನವಾನ್ಧೀರಃ ಕಸ್ತಂ ಕಿಂ ವಕ್ತುಮರ್ಹತಿ।।
ವಿಜ್ಞಾನಬಲದಿಂದ ವವಿತ್ರನಾದ, ಯಾವುದರಿಂದ ಯಾವುದು ನಿರ್ವಹಿಸುವುದೆಂದು ತಿಳಿದ ಧೀರನು ಆಪತ್ಕಾಲದಲ್ಲಿ ನಿಂದಿತವಾಗಿ ನಡೆದುಕೊಂಡರೂ ಅವನ ಕುರಿತು ಯಾರು ಏನು ಹೇಳಿಯಾರು?
12130007a ಯೇಷಾಂ ಬಲಕೃತಾ ವೃತ್ತಿರ್ನೈಷಾಮನ್ಯಾಭಿರೋಚತೇ4।
12130007c ತೇಜಸಾಭಿಪ್ರವರ್ಧಂತೇ5 ಬಲವಂತೋ ಯುಧಿಷ್ಠಿರ।।
ಯುಧಿಷ್ಠಿರ! ಬಲಕೃತ ವೃತ್ತಿಗಳಲ್ಲಿರುವವರಿಗೆ ಅನ್ಯ ವೃತ್ತಿಗಳು ಹಿಡಿಸುವುದಿಲ್ಲ. ಬಲವಂತರು ತೇಜಸ್ಸಿನಿಂದ ಇನ್ನೂ ವರ್ಧಿಸುತ್ತಾರೆ.
12130008a ಯದೇವ ಪ್ರಕೃತಂ ಶಾಸ್ತ್ರಮವಿಶೇಷೇಣ ವಿಂದತಿ6।
12130008c ತದೇವ ಮಧ್ಯಾಃ ಸೇವಂತೇ ಮೇಧಾವೀ ಚಾಪ್ಯಥೋತ್ತರಮ್7।।
ಮಧ್ಯಮ ವರ್ಗದ ರಾಜರು ಸಂದರ್ಭಕ್ಕೆ ಯಾವುದು ಹೊಳೆಯುತ್ತದೆಯೋ ಅದರಂತೆ ಮಾಡುತ್ತಾರೆ. ವಿಶೇಷವಾದವುಗಳನ್ನೇನೂ ಮಾಡುವುದಿಲ್ಲ. ಆದರೆ ಮೇಧಾವೀ ರಾಜರು ಅದಕ್ಕಿಂತಲೂ ಉತ್ತಮ ಮಾರ್ಗವನ್ನು ಬಳಸುತ್ತಾರೆ.
12130009a ಋತ್ವಿಕ್ಪುರೋಹಿತಾಚಾರ್ಯಾನ್ಸತ್ಕೃತೈರಭಿಪೂಜಿತಾನ್।
12130009c ನ ಬ್ರಾಹ್ಮಣಾನ್ಯಾತಯೇತ ದೋಷಾನ್ಪ್ರಾಪ್ನೋತಿ ಯಾತಯನ್।।
ಎಂತಹ ಆಪತ್ಕಾಲದಲ್ಲಿಯೇ ಆದರೂ ಸತ್ಕೃತರಾದ ಋತ್ವಿಜರನ್ನೂ, ಪೂಜನೀಯ ಆಚಾರ್ಯರನ್ನೂ, ಪುರೋಹಿತರನ್ನೂ ಮತ್ತು ಬ್ರಾಹ್ಮಣರನ್ನೂ, ನೋಯಿಸಬಾರದು. ಅವರನ್ನು ನೋಯಿಸಿದರೆ ಅವನಿಗೆ ದೋಷಗಳುಂಟಾಗುತ್ತವೆ.
12130010a ಏತತ್ಪ್ರಮಾಣಂ ಲೋಕಸ್ಯ ಚಕ್ಷುರೇತತ್ಸನಾತನಮ್।
12130010c ತತ್ಪ್ರಮಾಣೋಽವಗಾಹೇತ ತೇನ ತತ್ಸಾಧ್ವಸಾಧು ವಾ।।
ಈ ಆಪದ್ಧರ್ಮವು ಲೋಕಕ್ಕೇ ಪ್ರಮಾಣಭೂತವಾಗಿದೆ. ಇದು ಸನಾತನ ದೃಷ್ಟಿಕೋಣ. ರಾಜನು ಇದನ್ನೇ ಪ್ರಮಾಣವಾಗಿಟ್ಟುಕೊಂಡು ಸಾಧು-ಅಸಾಧು ಕಾರ್ಯಗಳನ್ನು ನಿರ್ಣಯಿಸಬೇಕು.
12130011a ಬಹೂನಿ ಗ್ರಾಮವಾಸ್ತವ್ಯಾ ರೋಷಾದ್ಬ್ರೂಯುಃ ಪರಸ್ಪರಮ್।
12130011c ನ ತೇಷಾಂ ವಚನಾದ್ರಾಜಾ ಸತ್ಕುರ್ಯಾದ್ಯಾತಯೇತ ವಾ।।
ಅನೇಕ ಗ್ರಾಮವಾಸಿಗಳು ರೋಷದಿಂದ ಪರಸ್ಪರರರ ಕುರಿತು ಹೇಳಿಕೊಳ್ಳುತ್ತಿರುತ್ತಾರೆ. ರಾಜನು ಅವರ ಮಾತಿನ ಆಧಾರದ ಮೇಲೆ ಯಾರನ್ನೂ ಸತ್ಕರಿಸಲೂ ಬಾರದು, ಶಿಕ್ಷಿಸಲೂ ಬಾರದು.
12130012a ನ ವಾಚ್ಯಃ ಪರಿವಾದೋ ವೈ ನ ಶ್ರೋತವ್ಯಃ ಕಥಂ ಚನ।
12130012c ಕರ್ಣಾವೇವ ಪಿಧಾತವ್ಯೌ ಪ್ರಸ್ಥೇಯಂ ವಾ ತತೋಽನ್ಯತಃ।।
ಪರನಿಂದೆಯನ್ನು ಮಾಡಲೂ ಬಾರದು; ಪರನಿಂದೆಯನ್ನು ಯಾವುದೇ ಕಾರಣಕ್ಕೂ ಕೇಳಲೂ ಬಾರದು. ಪರನಿಂದೆಯು ನಡೆಯುತ್ತಿರುವಾಗ ಕಿವಿಗಳನ್ನಾದರೂ ಮುಚ್ಚಿಕೊಳ್ಳಬೇಕು ಅಥವಾ ಬೇರೆ ಕಡೆ ಹೊರಟುಹೋಗಬೇಕು.
12130013a ನ ವೈ ಸತಾಂ ವೃತ್ತಮೇತತ್ಪರಿವಾದೋ ನ ಪೈಶುನಮ್।
12130013c ಗುಣಾನಾಮೇವ ವಕ್ತಾರಃ ಸಂತಃ ಸತ್ಸು ಯುಧಿಷ್ಠಿರ।।
ಯುಧಿಷ್ಠಿರ! ಪರನಿಂದನೆ ಮತ್ತು ಚಾಡಿಹೇಳುವುದು ಸತ್ಪುರುಷರ ನಡತೆಗಳಲ್ಲ. ಸತ್ಪುರುಷರಾದರೋ ಸತ್ಪುರುಷರ ಸಭೆಗಳಲ್ಲಿ ಇತರರ ಗುಣಗಳ ಕುರಿತೇ ಮಾತನಾಡುತ್ತಾರೆ.
12130014a ಯಥಾ ಸಮಧುರೌ ದಮ್ಯೌ ಸುದಾಂತೌ8 ಸಾಧುವಾಹಿನೌ।
12130014c ಧುರಮುದ್ಯಮ್ಯ ವಹತಸ್ತಥಾ ವರ್ತೇತ ವೈ ನೃಪಃ।
ಸುಮಧುರ, ಸುಶಿಕ್ಷಿತ, ನಿಯಂತ್ರಣದಲ್ಲಿರುವ, ಭಾರವನ್ನು ಹೊರಬಲ್ಲ ಎರಡು ಎತ್ತುಗಳಂತೆ ನೃಪನು ರಾಜ್ಯಭಾರವನ್ನು ಚೆನ್ನಾಗಿ ನಿರ್ವಹಿಸಬೇಕು.
12130014e ಯಥಾ ಯಥಾಸ್ಯ ವಹತಃ ಸಹಾಯಾಃ ಸ್ಯುಸ್ತಥಾಪರೇ।।
12130015a ಆಚಾರಮೇವ ಮನ್ಯಂತೇ ಗರೀಯೋ ಧರ್ಮಲಕ್ಷಣಮ್।
ಅನೇಕ ಸಹಾಯಕರನ್ನು ಪಡೆದುಕೊಳ್ಳಲು ಶಕ್ಯವಾದ ಆಚಾರಗಳನ್ನಿಟ್ಟುಕೊಂಡಿರಬೇಕು. ಸದಾಚಾರವೇ ಅತಿ ದೊಡ್ಡ ಧರ್ಮಲಕ್ಷಣವೆಂದು ಮನ್ನಿಸುತ್ತಾರೆ.
12130015c ಅಪರೇ ನೈವಮಿಚ್ಚಂತಿ ಯೇ ಶಂಖಲಿಖಿತಪ್ರಿಯಾಃ।
12130015e ಮಾರ್ದವಾದಥ ಲೋಭಾದ್ವಾ ತೇ ಬ್ರೂಯುರ್ವಾಕ್ಯಮೀದೃಶಮ್9।।
ಆದರೆ ಶಂಖಲಿಖಿತ ಪ್ರಿಯರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಮಾರ್ದವದಿಂದ ಮತ್ತು ಲೋಭದಿಂದ ಅವರು ಹೀಗೆ ಹೇಳುತ್ತಾರೆ.
12130016a ಆರ್ಷಮಪ್ಯತ್ರ ಪಶ್ಯಂತಿ ವಿಕರ್ಮಸ್ಥಸ್ಯ ಯಾಪನಮ್10।
12130016c ನ ಚಾರ್ಷಾತ್ಸದೃಶಂ ಕಿಂ ಚಿತ್ಪ್ರಮಾಣಂ ವಿದ್ಯತೇ11 ಕ್ವ ಚಿತ್।।
ವಿಕರ್ಮಿಯು ಗುರುವೇ ಆಗಿದ್ದರೂ ಶಿಕ್ಷಾರ್ಹನೆಂದು ಹೇಳುತ್ತಾರೆ. ಋಷಿಗಳ ಸದೃಶವಾದ ಪ್ರಮಾಣವು ಬೇರೆ ಯಾವುದೂ ಇಲ್ಲ.
12130017a ದೇವಾ ಅಪಿ ವಿಕರ್ಮಸ್ಥಂ ಯಾತಯಂತಿ ನರಾಧಮಮ್।
12130017c ವ್ಯಾಜೇನ ವಿಂದನ್ವಿತ್ತಂ ಹಿ ಧರ್ಮಾತ್ತು ಪರಿಹೀಯತೇ।।
ದೇವತೆಗಳೂ ಕೂಡ ವಿಕರ್ಮಿ ನರಾಧಮನನ್ನು ಪೀನರಕಕ್ಕೆ ಕೊಂಡೊಯ್ಯುತ್ತಾರೆ. ವ್ಯಾಜ್ಯದಿಂದ ವಿತ್ತವನ್ನು ಪಡೆದುಕೊಳ್ಳುವವನು ಧರ್ಮಭ್ರಷ್ಟನಾಗುತ್ತಾನೆ.
12130018a ಸರ್ವತಃ ಸತ್ಕೃತಃ ಸದ್ಭಿರ್ಭೂತಿಪ್ರಭವಕಾರಣೈಃ।
12130018c ಹೃದಯೇನಾಭ್ಯನುಜ್ಞಾತೋ ಯೋ ಧರ್ಮಸ್ತಂ ವ್ಯವಸ್ಯತಿ।।
ಅಭಿವೃದ್ಧಿಗೆ ಕಾರಣರಾದ ಸಾಧುಪುರುಷರಿಂದ ಸರ್ವತಃ ಸತ್ಕೃತವಾದ ಮತ್ತು ತನ್ನ ಹೃದಯದಿಂದಲೂ ಅನುಜ್ಞಾತ ಧರ್ಮವನ್ನೇ ರಾಜನೂ ಅನುಸರಿಸಬೇಕು.
12130019a ಯಶ್ಚತುರ್ಗುಣಸಂಪನ್ನಂ ಧರ್ಮಂ ವೇದ ಸ ಧರ್ಮವಿತ್।
12130019c ಅಹೇರಿವ ಹಿ ಧರ್ಮಸ್ಯ ಪದಂ ದುಃಖಂ ಗವೇಷಿತುಮ್।।
ಚತುರ್ಗುಣ12ಸಂಪನ್ನವಾದುದನ್ನೇ ಧರ್ಮವೆಂದು ಧರ್ಮವಿದರು ತಿಳಿದಿರುತ್ತಾರೆ. ಸರ್ಪದ ಪದಚಿಹ್ನೆಗಳನ್ನು ತಿಳಿಯುವುದು ಎಷ್ಟು ಕಷ್ಟವೋ ಅಷ್ಟೇ ಕಷ್ಟಕರವಾದುದು ಧರ್ಮವನ್ನು ತಿಳಿದುಕೊಳ್ಳುವುದು.
12130020a ಯಥಾ ಮೃಗಸ್ಯ ವಿದ್ಧಸ್ಯ ಮೃಗವ್ಯಾಧಃ ಪದಂ ನಯೇತ್।
12130020c ಕಕ್ಷೇ ರುಧಿರಪಾತೇನ ತಥಾ ಧರ್ಮಪದಂ ನಯೇತ್।।
ಬಾಣವು ಚುಚ್ಚಿ ಸೋರುತ್ತಿರುವ ರಕ್ತವು ಹೇಗೆ ವ್ಯಾಧನಿಗೆ ಮೃಗವು ಹೋದ ಮಾರ್ಗವನ್ನು ಸೂಚಿಸುತ್ತದೆಯೋ ಹಾಗೆ ಚತುರ್ಗುಣಸಂಪನ್ನ ಆಚರಣೆಗಳು ಧರ್ಮದ ಮಾರ್ಗವನ್ನು ಸೂಚಿಸುತ್ತವೆ.
12130021a ಏವಂ ಸದ್ಭಿರ್ವಿನೀತೇನ ಪಥಾ ಗಂತವ್ಯಮಚ್ಯುತ।
12130021c ರಾಜರ್ಷೀಣಾಂ ವೃತ್ತಮೇತದವಗಚ್ಚ ಯುಧಿಷ್ಠಿರ।।
ಯುಧಿಷ್ಠಿರ! ಹೀಗೆ ಸತ್ಪುರುಷರು ಹೋದ ಮಾರ್ಗವನ್ನು ಅನುಸರಿಸುವುದು ಯುಕ್ತವು. ರಾಜರ್ಷಿಗಳ ಸದಾಚಾರಗಳನ್ನು ನೀನೂ ಮನನಮಾಡು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ರಾಜರ್ಷಿವೃತ್ತಂ ನಾಮ ತ್ರಿಂಶಾತ್ಯಧಿಕಶತತಮೋಽಧ್ಯಾಯಃ।। ಇದು ಶ್ರೀಮಹಾಭಾರತದಲ್ಲಿ ಶಾಂತಿಪರ್ವದಲ್ಲಿ ಆಪದ್ಧರ್ಮಪರ್ವದಲ್ಲಿ ರಾಜರ್ಷಿವೃತ್ತ ಎನ್ನುವ ನೂರಾಮೂವತ್ತನೇ ಅಧ್ಯಾಯವು.-
ಸರ್ವಲೋಕಾಭಿಸಂಹಿತೇ। (ಭಾರತ ದರ್ಶನ). ↩︎
-
ಕೃಚ್ಛ್ರಧರ್ಮವಿದೇವ (ಭಾರತ ದರ್ಶನ). ↩︎
-
ಆಕಾಂಕ್ಷನ್ನಾತ್ಮನೋ (ಭಾರತ ದರ್ಶನ). ↩︎
-
ತೇಷಾಮನ್ಯಾ ನ ರೋಚತೇ (ಭಾರತ ದರ್ಶನ). ↩︎
-
ಪ್ರವರ್ತಂತೇ (ಭಾರತ ದರ್ಶನ). ↩︎
-
ಯದೈವ ಪ್ರಾಕೃತಂ ಶಾಸ್ತ್ರಮವಿಶೇಷೇಣ ವರ್ತತೇ। (ಭಾರತ ದರ್ಶನ). ↩︎
-
ತದೈವಮಭ್ಯಸೇದೇವಂ ಮೇಧಾವೀ ವಾಪ್ಯತೋತ್ತರಮ್। (ಭಾರತ ದರ್ಶನ). ↩︎
-
ಸುದಂತೌ (ಭಾರತ ದರ್ಶನ). ↩︎
-
ಮಾತ್ಸರ್ಯಾದಥವಾ ಲೋಭಾನ್ನ ಬ್ರೂಯುರ್ವಾಕ್ಯಮೀದೃಶಂ। (ಭಾರತ ದರ್ಶನ) ↩︎
-
ಪಾತನಮ್। (ಭಾರತ ದರ್ಶನ). ↩︎
-
ದೃಶ್ಯತೇ (ಭಾರತ ದರ್ಶನ). ↩︎
-
ವೇದವಿಹಿತವಾದ, ಸ್ಮೃತಿಗಳಿಂದ ಅನುಮೋದಿತವಾದ, ಸಜ್ಜನ ಸೇವಿತ ಮತ್ತು ತನಕೂ ಪ್ರಿಯವಾಗಿರುವವೇ ಚತುರ್ಗುಣಸಂಪನ್ನವಾದವುಗಳು (ಭಾರತ ದರ್ಶನ). ↩︎