ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 111
ಸಾರ
ಸದಾಚಾರ ಮತ್ತು ಈಶ್ವರಭಕ್ತಿಯ ಮೂಲಕ ಮನುಷ್ಯನು ದುಃಖದಿಂದ ಪಾರಾಗುವ ವಿಧಾನಗಳು (1-29).
12111001 ಯುಧಿಷ್ಠಿರ ಉವಾಚ।
12111001a ಕ್ಲಿಶ್ಯಮಾನೇಷು ಭೂತೇಷು ತೈಸ್ತೈರ್ಭಾವೈಸ್ತತಸ್ತತಃ।
12111001c ದುರ್ಗಾಣ್ಯತಿತರೇದ್ಯೇನ ತನ್ಮೇ ಬ್ರೂಹಿ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಜೀವಿಗಳು ಅವರವರದೇ ಭಾವಗಳಲ್ಲಿ ಅಲ್ಲಲ್ಲಿ ಕಷ್ಟಪಡುತ್ತಿರುತ್ತವೆ. ಯಾವ ಉಪಾಯದಿಂದ ಕಷ್ಟಗಳನ್ನು ದಾಟಬಹುದು ಎನ್ನುವುದನ್ನು ನನಗೆ ಹೇಳು.”
12111002 ಭೀಷ್ಮ ಉವಾಚ।
12111002a ಆಶ್ರಮೇಷು ಯಥೋಕ್ತೇಷು ಯಥೋಕ್ತಂ ಯೇ ದ್ವಿಜಾತಯಃ।
12111002c ವರ್ತಂತೇ ಸಂಯತಾತ್ಮಾನೋ ದುರ್ಗಾಣ್ಯತಿತರಂತಿ ತೇ।।
ಭೀಷ್ಮನು ಹೇಳಿದನು: “ಯಥೋಕ್ತವಾದ ಆಶ್ರಮಗಳಲ್ಲಿ ಯಥೋಕ್ತವಾಗಿ ಸಂಯತಾತ್ಮರಾಗಿ ವರ್ತಿಸುವ ದ್ವಿಜಾತಿಯವರು ಕಷ್ಟಗಳಿಂದ ಪಾರಾಗುತ್ತಾರೆ.
12111003a ಯೇ ದಂಭಾನ್ನ ಜಪಂತಿ1 ಸ್ಮ ಯೇಷಾಂ ವೃತ್ತಿಶ್ಚ ಸಂವೃತಾ2।
12111003c ವಿಷಯಾಂಶ್ಚ ನಿಗೃಹ್ಣಂತಿ ದುರ್ಗಾಣ್ಯತಿತರಂತಿ ತೇ।।
ದಂಬಾಚಾರದಲ್ಲಿ ತೊಡಗದೇ ನಿಯಮಬದ್ಧ ವೃತ್ತಿಯಲ್ಲಿ ತೊಡಗಿರುವವರು ಮತ್ತು ವಿಷಯಾಸಕ್ತಿಯನ್ನು ನಿಗ್ರಹಿಸುವವರು ಕಷ್ಟಗಳಿಂದ ಪಾರಾಗುತ್ತಾರೆ.
12111004a 3ವಾಸಯಂತ್ಯತಿಥೀನ್ನಿತ್ಯಂ ನಿತ್ಯಂ ಯೇ ಚಾನಸೂಯಕಾಃ। 12111004c ನಿತ್ಯಂ ಸ್ವಾಧ್ಯಾಯಶೀಲಾಶ್ಚ ದುರ್ಗಾಣ್ಯತಿತರಂತಿ ತೇ।।
ನಿತ್ಯವೂ ಅತಿಥಿಗಳಿಗೆ ಉಳಿಯಲು ಅನುಕೂಲಮಾಡಿಕೊಡುವ, ನಿತ್ಯವೂ ಅಸೂಯಾರಹಿತರಾಗಿರುವ ಮತ್ತು ನಿತ್ಯವೂ ಸ್ವಾಧ್ಯಾಯಶೀಲರಾಗಿರುವವರು ಕಷ್ಟಗಳಿಂದ ಪಾರಾಗುತ್ತಾರೆ.
12111005a ಮಾತಾಪಿತ್ರೋಶ್ಚ ಯೇ ವೃತ್ತಿಂ ವರ್ತಂತೇ ಧರ್ಮಕೋವಿದಾಃ।
12111005c ವರ್ಜಯಂತಿ ದಿವಾಸ್ವಪ್ನಂ ದುರ್ಗಾಣ್ಯತಿತರಂತಿ ತೇ।।
ಮಾತಾಪಿತೃಗಳ ಸೇವೆಯಲ್ಲಿ ನಿರತರಾದ ಮತ್ತು ಹಗಲು ನಿದ್ದೆಯನ್ನು ಬಿಟ್ಟಿರುವ ಧರ್ಮಕೋವಿದರು ಕಷ್ಟಗಳಿಂದ ಪಾರಾಗುತ್ತಾರೆ.
12111006a ಸ್ವೇಷು ದಾರೇಷು ವರ್ತಂತೇ ನ್ಯಾಯವೃತ್ತೇಷ್ವೃತಾವೃತೌ।
12111006c ಅಗ್ನಿಹೋತ್ರಪರಾಃ ಸಂತೋ ದುರ್ಗಾಣ್ಯತಿತರಂತಿ ತೇ।।
ತಮ್ಮ ಪತ್ನಿಯರಲ್ಲಿ ಮಾತ್ರ ದೇಹಸಂಬಂಧವನ್ನಿಟ್ಟುಕೊಂಡಿರುವ, ನ್ಯಾಯವೃತ್ತಿಯಲ್ಲಿಯೇ ತೊಡಗಿರುವ ಮತ್ತು ಅಗ್ನಿಹೋತ್ರಪರರಾದ ಸಂತರು ಕಷ್ಟಗಳಿಂದ ಪಾರಾಗುತ್ತಾರೆ.
12111007a ಯೇ ನ ಲೋಭಾನ್ನಯಂತ್ಯರ್ಥಾನ್ರಾಜಾನೋ ರಜಸಾವೃತಾಃ।
12111007c ವಿಷಯಾನ್ ಪರಿರಕ್ಷಂತೋ ದುರ್ಗಾಣ್ಯತಿತರಂತಿ ತೇ।।
ರಜೋಗುಣ ಸಂಪನ್ನರಾದ, ಲೋಭದಿಂದ ಪ್ರಜೆಗಳ ಧನವನ್ನು ಅಪಹರಿಸದ ಮತ್ತು ರಾಜ್ಯವನ್ನು ಎಲ್ಲ ಕಡೆಗಳಿಂದ ಸಂರಕ್ಷಿಸುವ ರಾಜರು ಕಷ್ಟಗಳಿಂದ ಪಾರಾಗುತ್ತಾರೆ.
12111008a ಆಹವೇಷು ಚ ಯೇ ಶೂರಾಸ್ತ್ಯಕ್ತ್ವಾ ಮರಣಜಂ ಭಯಮ್।
12111008c ಧರ್ಮೇಣ ಜಯಮಿಚ್ಚಂತೋ ದುರ್ಗಾಣ್ಯತಿತರಂತಿ ತೇ।।
ಯುದ್ಧದಲ್ಲಾಗುವ ಮರಣಸಂಬಂಧೀ ಭಯವನ್ನು ತೊರೆದು ಧರ್ಮದಿಂದ ಜಯವನ್ನು ಬಯಸುವ ಶೂರರು ಕಷ್ಟಗಳಿಂದ ಪಾರಾಗುತ್ತಾರೆ.
12111009a ಯೇ ಪಾಪಾನಿ ನ ಕುರ್ವಂತಿ ಕರ್ಮಣಾ ಮನಸಾ ಗಿರಾ।
12111009c ನಿಕ್ಷಿಪ್ತದಂಡಾ ಭೂತೇಷು ದುರ್ಗಾಣ್ಯತಿತರಂತಿ ತೇ।।
ಕರ್ಮಗಳಿಂದಾಗಲೀ ಮನಸ್ಸಿನಲ್ಲಿಯಾಗಲೀ ಅಥವಾ ಮಾತಿನಲ್ಲಿಯಾಗಲೀ ಪಾಪಗಳನ್ನೆಸಗದ ಮತ್ತು ಯಾವ ಜೀವಿಗಳನ್ನೂ ದಂಡಿಸದವರು ಕಷ್ಟಗಳಿಂದ ಪಾರಾಗುತ್ತಾರೆ.
12111010a ಯೇ ವದಂತೀಹ ಸತ್ಯಾನಿ ಪ್ರಾಣತ್ಯಾಗೇಽಪ್ಯುಪಸ್ಥಿತೇ।
12111010c ಪ್ರಮಾಣಭೂತಾ ಭೂತಾನಾಂ ದುರ್ಗಾಣ್ಯತಿತರಂತಿ ತೇ।।
ಪ್ರಾಣತ್ಯಾಗದ ಸಮಯದಲ್ಲಿಯೂ ಸತ್ಯವನ್ನೇ ಹೇಳುವ ಮತ್ತು ಎಲ್ಲ ಭೂತಗಳಿಗೂ ಪ್ರಮಾಣಭೂತರಾಗಿರುವವರು ಕಷ್ಟಗಳಿಂದ ಪಾರಾಗುತ್ತಾರೆ.
12111011a ಅನಧ್ಯಾಯೇಷು ಯೇ ವಿಪ್ರಾಃ ಸ್ವಾಧ್ಯಾಯಂ ನೈವ ಕುರ್ವತೇ।
12111011c ತಪೋನಿತ್ಯಾಃ ಸುತಪಸೋ ದುರ್ಗಾಣ್ಯತಿತರಂತಿ ತೇ।।
ಅನಧ್ಯಾಯದ ದಿನಗಳಲ್ಲಿ ಸ್ವಾಧ್ಯಾಯವನ್ನು ಮಾಡದಿರುವ ತಪೋನಿತ್ಯ ಉತ್ತಮ ತಪಸ್ವೀ ವಿಪ್ರರು ಕಷ್ಟಗಳಿಂದ ಪಾರಾಗುತ್ತಾರೆ.
12111012a ಕರ್ಮಾಣ್ಯಕುಹಕಾರ್ಥಾನಿ ಯೇಷಾಂ ವಾಚಶ್ಚ ಸೂನೃತಾಃ।
12111012c ಯೇಷಾಮರ್ಥಾಶ್ಚ ಸಾಧ್ವರ್ಥಾ ದುರ್ಗಾಣ್ಯತಿತರಂತಿ ತೇ।।
ತೋರಿಸಿಕೊಳ್ಳಲು ಮಾತ್ರ ಕರ್ಮಗಳನ್ನು ಮಾಡದಿರುವ, ಸುಮಧುರವಾಗಿ ಮಾತನಾಡುವ, ಐಶ್ವರ್ಯವನ್ನು ಸತ್ಕಾರ್ಯಗಳಿಗಾಗಿಯೇ ಮೀಸಲಾಗಿರುವವರು ಕಷ್ಟಗಳಿಂದ ಪಾರಾಗುತ್ತಾರೆ.
12111013a ಯೇ ತಪಶ್ಚ ತಪಸ್ಯಂತಿ ಕೌಮಾರಬ್ರಹ್ಮಚಾರಿಣಃ।
12111013c ವಿದ್ಯಾವೇದವ್ರತಸ್ನಾತಾ ದುರ್ಗಾಣ್ಯತಿತರಂತಿ ತೇ।।
ತಪಸ್ಸನ್ನು ತಪಿಸುವ, ಕೌಮಾರ್ಯದಲ್ಲಿ ಬ್ರಹ್ಮಚಾರಿಗಳಾಗಿರುವ, ವಿದ್ಯಾವೇದಗಳನ್ನು ಪೂರೈಸಿ ಸ್ನಾತಕರಾಗುವವರು ಕಷ್ಟಗಳಿಂದ ಪಾರಾಗುತ್ತಾರೆ.
12111014a ಯೇ ಚ ಸಂಶಾಂತರಜಸಃ ಸಂಶಾಂತತಮಸಶ್ಚ ಯೇ।
12111014c ಸತ್ಯೇ ಸ್ಥಿತಾ ಮಹಾತ್ಮಾನೋ ದುರ್ಗಾಣ್ಯತಿತರಂತಿ ತೇ।।
ರಜೋ-ತಮೋಗುಣಗಳು ಶಾಂತವಾಗಿರುವ ಮತ್ತು ಸತ್ಯದಲ್ಲಿ ಸ್ಥಿತರಾಗಿರುವ ಮಹಾತ್ಮರು ಕಷ್ಟಗಳಿಂದ ಪಾರಾಗುತ್ತಾರೆ.
12111015a ಯೇಷಾಂ ನ ಕಶ್ಚಿತ್ತ್ರಸತಿ ತ್ರಸಂತಿ ನ ಚ ಕಸ್ಯ ಚಿತ್।
12111015c ಯೇಷಾಮಾತ್ಮಸಮೋ ಲೋಕೋ ದುರ್ಗಾಣ್ಯತಿತರಂತಿ ತೇ।।
ಯಾರಿಂದ ಯಾರಿಗೂ ಯಾವ ವಿಧದ ಭಯವೂ ಆಗುವುದಿಲ್ಲವೋ, ಯಾರು ಯಾರಿಗೂ ಭಯಪಡುವುದಿಲ್ಲವೋ, ಯಾರ ದೃಷ್ಟಿಯಲ್ಲಿ ಈ ಸಕಲಜಗತ್ತು ತನ್ನ ಆತ್ಮಕ್ಕೇ ಸಮಾನವಾಗಿರುವುದೋ, ಜಗತ್ತಿನ ಸಮಸ್ತಪ್ರಾಣಿಗಳ ಸುಖ-ದುಃಖಗಳನ್ನೂ ತಮ್ಮವೆಂದೇ ಭಾವಿಸುವರೋ ಅಂಥವರು ಕಷ್ಟಗಳಿಂದ ಪಾರಾಗುತ್ತಾರೆ.
12111016a ಪರಶ್ರಿಯಾ ನ ತಪ್ಯಂತೇ ಯೇ ಸಂತಃ ಪುರುಷರ್ಷಭಾಃ।
12111016c ಗ್ರಾಮ್ಯಾದನ್ನಾನ್ನಿವೃತ್ತಾಶ್ಚ ದುರ್ಗಾಣ್ಯತಿತರಂತಿ ತೇ।।
ಇತರರ ಸಂಪತ್ತನ್ನು ನೋಡಿ ಪರಿತಪಿಸದಿರುವ, ಮತ್ತು ಗ್ರಾಮ್ಯ ವಿಷಯ ಭೋಗಗಳಿಂದ ನಿವೃತ್ತರಾಗಿರುವ ಸಂತ ಪುರುಷರ್ಷಭರು ಕಷ್ಟಗಳಿಂದ ಪಾರಾಗುತ್ತಾರೆ.
12111017a ಸರ್ವಾನ್ದೇವಾನ್ನಮಸ್ಯಂತಿ ಸರ್ವಾನ್ ಧರ್ಮಾಂಶ್ಚ ಶೃಣ್ವತೇ।
12111017c ಯೇ ಶ್ರದ್ದಧಾನಾ ದಾಂತಾಶ್ಚ4 ದುರ್ಗಾಣ್ಯತಿತರಂತಿ ತೇ।।
ಸಕಲ ದೇವತೆಗಳನ್ನೂ ನಮಸ್ಕರಿಸುವ, ಸರ್ವಧರ್ಮಗಳನ್ನೂ ಕೇಳುವ, ಶ್ರದ್ಧಾಸಂಪನ್ನ ಇಂದ್ರಿಯನಿಗ್ರಹಿಗಳು ಕಷ್ಟಗಳಿಂದ ಪಾರಾಗುತ್ತಾರೆ.
12111018a ಯೇ ನ ಮಾನಿತಮಿಚ್ಚಂತಿ ಮಾನಯಂತಿ ಚ ಯೇ ಪರಮ್।
12111018c ಮಾನ್ಯಮಾನಾ ನ ಮನ್ಯಂತೇ ದುರ್ಗಾಣ್ಯತಿತರಂತಿ ತೇ।।
ಇತರರಿಂದ ಸಮ್ಮಾನವನ್ನು ಇಚ್ಛಿಸದ, ಇತರರನ್ನು ಪರಮ ಗೌರವದಿಂದ ಕಾಣುವ, ಮತ್ತು ಗೌರವಾನ್ವಿತರನ್ನು ಗೌರವಿಸುವವರು ಕಷ್ಟಗಳಿಂದ ಪಾರಾಗುತ್ತಾರೆ.
12111019a ಯೇ ಶ್ರಾದ್ಧಾನಿ ಚ ಕುರ್ವಂತಿ ತಿಥ್ಯಾಂ ತಿಥ್ಯಾಂ ಪ್ರಜಾರ್ಥಿನಃ।
12111019c ಸುವಿಶುದ್ಧೇನ ಮನಸಾ ದುರ್ಗಾಣ್ಯತಿತರಂತಿ ತೇ।।
ವಿಶುದ್ಧ ಮನಸ್ಸಿನಿಂದ ತಿಥಿ-ತಿಥಿಗಳಲ್ಲಿ ಶ್ರಾದ್ಧಗಳನ್ನು ಮಾಡುವ ಪ್ರಜಾರ್ಥಿಗಳು ಕಷ್ಟಗಳಿಂದ ಪಾರಾಗುತ್ತಾರೆ.
12111020a ಯೇ ಕ್ರೋಧಂ ನೈವ ಕುರ್ವಂತಿ ಕ್ರುದ್ಧಾನ್ಸಂಶಮಯಂತಿ ಚ।
12111020c ನ ಚ ಕುಪ್ಯಂತಿ ಭೃತ್ಯೇಭ್ಯೋ5 ದುರ್ಗಾಣ್ಯತಿತರಂತಿ ತೇ।।
ತಮ್ಮ ಕ್ರೋಧವನ್ನು ನಿಯಂತ್ರಿಸಿಕೊಳ್ಳುವ, ಕೋಪಿಷ್ಟರಾದವನ್ನು ಸಮಾಧಾನಗೊಳಿಸುವ, ಸೇವಕರ ಮೇಲೆ ಕೋಪಗೊಳ್ಳದವರು ಕಷ್ಟಗಳಿಂದ ಪಾರಾಗುತ್ತಾರೆ.
12111021a ಮಧು ಮಾಂಸಂ ಚ ಯೇ ನಿತ್ಯಂ ವರ್ಜಯಂತೀಹ ಮಾನವಾಃ।
12111021c ಜನ್ಮಪ್ರಭೃತಿ ಮದ್ಯಂ ಚ ದುರ್ಗಾಣ್ಯತಿತರಂತಿ ತೇ।।
ಜನ್ಮಪ್ರಭೃತಿ ಮಧು-ಮಾಂಸ-ಮದ್ಯಗಳನ್ನು ವರ್ಜಿಸುವ ಮಾನವರು ಕಷ್ಟಗಳಿಂದ ಪಾರಾಗುತ್ತಾರೆ.
12111022a ಯಾತ್ರಾರ್ಥಂ ಭೋಜನಂ ಯೇಷಾಂ ಸಂತಾನಾರ್ಥಂ ಚ ಮೈಥುನಮ್।
12111022c ವಾಕ್ಸತ್ಯವಚನಾರ್ಥಾಯ ದುರ್ಗಾಣ್ಯತಿತರಂತಿ ತೇ।।
ಜೀವನಯಾತ್ರೆಗೋಸ್ಕರ ಮಾತ್ರ ಭೋಜನವನ್ನು ಮಾಡುವ, ಸಂತಾನಾರ್ಥಕ್ಕಾಗಿಯೇ ಸ್ತ್ರೀಸಮಾಗಮವನ್ನು ಮಾಡುವ, ಸತ್ಯವಚನಾರ್ಥಕ್ಕಾಗಿಯೇ ಮಾತನಾಡುವವರು ಕಷ್ಟಗಳಿಂದ ಪಾರಾಗುತ್ತಾರೆ.
12111023a ಈಶ್ವರಂ ಸರ್ವಭೂತಾನಾಂ ಜಗತಃ ಪ್ರಭವಾಪ್ಯಯಮ್।
12111023c ಭಕ್ತಾ ನಾರಾಯಣಂ ಯೇ ಚ ದುರ್ಗಾಣ್ಯತಿತರಂತಿ ತೇ।।
ಸರ್ವಭೂತಗಳಿಗೂ ಈಶ್ವರನಾದ ಜಗತ್ತಿನ ಸೃಷ್ಟಿ-ಪಲಯಗಳಿಗೆ ಕಾರಣನಾದ ನಾರಾಯಣನ ಭಕ್ತರು ಕಷ್ಟಗಳಿಂದ ಪಾರಾಗುತ್ತಾರೆ.
12111024a ಯ ಏಷ ರಕ್ತಪದ್ಮಾಕ್ಷಃ ಪೀತವಾಸಾ ಮಹಾಭುಜಃ।
12111024c ಸುಹೃದ್ ಭ್ರಾತಾ ಚ ಮಿತ್ರಂ ಚ ಸಂಬಂಧೀ ಚ ತವಾಚ್ಯುತಃ।।
ಅವನೇ ನಿನ್ನ ಸುಹೃದ್ಭ್ರಾತನೂ ಮಿತ್ರನೂ ಸಂಬಂಧಿಯೂ ಆದ ಈ ರಕ್ತಪದ್ಮಾಕ್ಷ ಪೀತವಾಸಸ ಮಹಾಭುಜ ಅಚ್ಯುತ.
12111025a ಯ ಇಮಾನ್ಸಕಲಾಽಲ್ಲೋಕಾಂಶ್ಚರ್ಮವತ್ ಪರಿವೇಷ್ಟಯೇತ್।
12111025c ಇಚ್ಚನ್ ಪ್ರಭುರಚಿಂತ್ಯಾತ್ಮಾ ಗೋವಿಂದಃ ಪುರುಷೋತ್ತಮಃ।।
ಈ ಪ್ರಭು ಅಚಿಂತ್ಯಾತ್ಮಾ ಪುರುಷೋತ್ತಮ ಗೋವಿಂದನು ಇಚ್ಛಿಸಿದರೆ ಸಕಲ ಲೋಕಗಳನ್ನೂ ಚರ್ಮದಂತೆ ಹೊದೆದುಕೊಳ್ಳಬಲ್ಲನು.
12111026a ಸ್ಥಿತಃ ಪ್ರಿಯಹಿತೇ ಜಿಷ್ಣೋಃ ಸ ಏಷ ಪುರುಷರ್ಷಭ।
12111026c ರಾಜಂಸ್ತವ ಚ ದುರ್ಧರ್ಷೋ ವೈಕುಂಠಃ ಪುರುಷೋತ್ತಮಃ।।
ರಾಜನ್! ಈ ಪುರುಷೋತ್ತಮನು ನಿನ್ನ ಮತ್ತು ಜಿಷ್ಣುವಿನ ಪ್ರಿಯಹಿತದಲ್ಲಿಯೇ ನಿರತನಾಗಿರುವನು. ಇವನು ದುರ್ಧರ್ಷ, ವೈಕುಂಠ ಮತ್ತು ಪುರುಷೋತ್ತಮ.
12111027a ಯ ಏನಂ ಸಂಶ್ರಯಂತೀಹ ಭಕ್ತ್ಯಾ ನಾರಾಯಣಂ ಹರಿಮ್।
12111027c ತೇ ತರಂತೀಹ ದುರ್ಗಾಣಿ ನ ಮೇಽತ್ರಾಸ್ತಿ ವಿಚಾರಣಾ।।
ಭಕ್ತಿಯಿಂದ ಹರಿ ನಾರಾಯಣನನ್ನು ಆಶ್ರಯಿಸುವವರು ಕಷ್ಟಗಳಿಂದ ಪಾರಾಗುತ್ತಾರೆ. ಅದರಲ್ಲಿ ವಿಚಾರಿಸಬೇಕಾಗಿಲ್ಲ.
12111028a 6ದುರ್ಗಾತಿತರಣಂ ಯೇ ಚ ಪಠಂತಿ ಶ್ರಾವಯಂತಿ ಚ। 12111028c ಪಾಠಯಂತಿ ಚ ವಿಪ್ರೇಭ್ಯೋ ದುರ್ಗಾಣ್ಯತಿತರಂತಿ ತೇ।।
ಈ ದುರ್ಗಾತಿತರಣವನ್ನು ಯಾವ ವಿಪ್ರರು ಓದುತ್ತಾರೋ, ಕೇಳುತ್ತಾರೋ ಮತ್ತು ಓದಿಸುತ್ತಾರೋ ಅವರು ಕಷ್ಟಗಳಿಂದ ಪಾರಾಗುತ್ತಾರೆ.
12111029a ಇತಿ ಕೃತ್ಯಸಮುದ್ದೇಶಃ ಕೀರ್ತಿತಸ್ತೇ ಮಯಾನಘ।
12111029c ಸಂತರೇದ್ಯೇನ ದುರ್ಗಾಣಿ ಪರತ್ರೇಹ ಚ ಮಾನವಃ।।
ಅನಘ! ಹೀಗೆ ನಾನು ಕಷ್ಟಗಳಿಂದ ಪಾರಾಗಲು ಮಾಡಬೇಕಾದ ಕರ್ತವ್ಯಗಳ ಕುರಿತು ಸಂಕ್ಷಿಪ್ತವಾಗಿ ಹೇಳಿದ್ದೇನೆ. ಇದರಿಂದ ಮಾನವರು ಇಹ-ಪರಗಳೆರಡರಲ್ಲಿಯೂ ಕಷ್ಟಗಳಿಂದ ಪಾರಾಗುತ್ತಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ದುರ್ಗಾತಿತರಣೇ ಏಕಾದಶಾಧಿಕಶತತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ರಾಜಧರ್ಮ ಪರ್ವದಲ್ಲಿ ದುರ್ಗಾತಿತರಣ ಎನ್ನುವ ನೂರಾಹನ್ನೊಂದನೇ ಅಧ್ಯಾಯವು.
-
ದಂಭಾನ್ನಾಚರಂತಿ (ಭಾರತ ದರ್ಶನ). ↩︎
-
ಸಂಯತಾ (ಭಾರತ ದರ್ಶನ). ↩︎
-
ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕವಿದೆ: ಪ್ರತ್ಯಾಹುರ್ನೋಚ್ಯಮಾನಾ ಯೇ ನ ಹಿಂಸಂತಿ ಚ ಹಿಂಸಿತಾಃ। ಪ್ರಯಚ್ಛಂತಿ ನ ಯಾಚಂತೇ ದುರ್ಗಾಣ್ಯತಿತರಂತಿ ತೇ।। (ಭಾರತ ದರ್ಶನ). ↩︎
-
ಶಾಂತಾಶ್ಚ (ಭಾರತ ದರ್ಶನ). ↩︎
-
ಭೂತೇಭ್ಯೋ (ಭಾರತ ದರ್ಶನ). ↩︎
-
ದಕ್ಷಿಣಾತ್ಯ ಪಾಠದಲ್ಲಿ ಇದಕ್ಕೆ ಮೊದಲು ಈ ಮೂರು ಅಧಿಕ ಶ್ಲೋಕಗಳಿವೆ: ಅಸ್ಮಿನ್ನರ್ಪಿತಕರ್ಮಾಣಃ ಸರ್ವಭಾವೇನ ಭಾರತ। ಕೃಷ್ಣೇ ಕಮಲಪತ್ರಾಕ್ಷೇ ದುರ್ಗಾಣ್ಯತಿತರಂತಿ ತೇ।। ಬ್ರಹ್ಮಾಣಂ ಲೋಕಕರ್ತಾರಂ ಯೇ ನಮಸ್ಯತಿ ಸತ್ಪತಿಮ್। ಯಷ್ಟವ್ಯಂ ಕ್ರತುಭಿರ್ದೇವಂ ದುರ್ಗಾಣ್ಯತಿತರಂತಿ ತೇ।। ಯಂ ವಿಷ್ಣುರಿಂದ್ರಃ ಶಂಭುಶ್ಚ ಬ್ರಹ್ಮಾ ಲೋಕಪಿತಾಮಹಃ। ಸ್ತುವಂತಿ ವಿವಿಧೈಃ ಸ್ತೋತ್ರೈರ್ದೇವದೇವಂ ಮಹೇಶ್ವರಮ್। ತಮರ್ಚಯಂತಿ ಯೇ ಶಶ್ವದ್ದುರ್ಗಾಣ್ಯತಿತರಂತಿ ತೇ।। (ಗೀತಾ ಪ್ರೆಸ್). ↩︎