096 ವಿಜಿಗೀಷಮಾಣವೃತ್ತಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ

ರಾಜಧರ್ಮ ಪರ್ವ

ಅಧ್ಯಾಯ 96

ಸಾರ

ವಿಜಯಾಭಿಲಾಷೀ ರಾಜನ ಧಾರ್ಮಿಕ ವ್ಯವಹಾರಗಳು ಮತ್ತು ಯುದ್ಧನೀತಿ (1-21).

12001001 ವೈಶಂಪಾಯನ ಉವಾಚ।
12001001a ಕೃತೋದಕಾಸ್ತೇ ಸುಹೃದಾಂ ಸರ್ವೇಷಾಂ ಪಾಂಡುನಂದನಾಃ।
12001001c ವಿದುರೋ ಧೃತರಾಷ್ಟ್ರಶ್ಚ ಸರ್ವಾಶ್ಚ ಭರತಸ್ತ್ರಿಯಃ।।
12001002a ತತ್ರ ತೇ ಸುಮಹಾತ್ಮಾನೋ ನ್ಯವಸನ್ಕುರುನಂದನಾಃ।
12001002c ಶೌಚಂ ನಿವರ್ತಯಿಷ್ಯಂತೋ ಮಾಸಮೇಕಂ ಬಹಿಃ ಪುರಾತ್।।

ವೈಶಂಪಾಯನನು ಹೇಳಿದನು: “ಪಾಂಡುನಂದನರು, ವಿದುರ, ಧೃತರಾಷ್ಟ್ರ ಮತ್ತು ಸರ್ವ ಭರತಸ್ತ್ರೀಯರು ಎಲ್ಲ ಸುಹೃದಯರಿಗೂ ಉದಕ ಕ್ರಿಯೆಗಳನ್ನು ಪೂರೈಸಿದರು. ಬಳಿಕ ಮಹಾತ್ಮ ಕುರುನಂದನರು ಶುದ್ಧಿಕಾರ್ಯಗಳನ್ನಾಚರಿಸುತ್ತಾ ಒಂದು ತಿಂಗಳ ಕಾಲ ಪುರದಿಂದ ಹೊರಗೆ ಗಂಗಾತೀರದಲ್ಲಿಯೇ ಉಳಿದುಕೊಂಡರು.

12001003a ಕೃತೋದಕಂ ತು ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್।
12001003c ಅಭಿಜಗ್ಮುರ್ಮಹಾತ್ಮಾನಃ ಸಿದ್ಧಾ ಬ್ರಹ್ಮರ್ಷಿಸತ್ತಮಾಃ।।

ಉದಕ ಕ್ರಿಯೆಗಳನ್ನು ಪೂರೈಸಿದ ರಾಜಾ ಧರ್ಮಾತ್ಮ ಯುಧಿಷ್ಠಿರನಲ್ಲಿಗೆ ಮಹಾತ್ಮ ಸಿದ್ಧ ಬ್ರಹ್ಮರ್ಷಿಸತ್ತಮರು ಆಗಮಿಸಿದರು.

12001004a ದ್ವೈಪಾಯನೋ ನಾರದಶ್ಚ ದೇವಲಶ್ಚ ಮಹಾನೃಷಿಃ।
12001004c ದೇವಸ್ಥಾನಶ್ಚ ಕಣ್ವಶ್ಚ ತೇಷಾಂ ಶಿಷ್ಯಾಶ್ಚ ಸತ್ತಮಾಃ।।
12001005a ಅನ್ಯೇ ಚ ವೇದವಿದ್ವಾಂಸಃ ಕೃತಪ್ರಜ್ಞಾ ದ್ವಿಜಾತಯಃ।
12001005c ಗೃಹಸ್ಥಾಃ ಸ್ನಾತಕಾಃ ಸರ್ವೇ2 ದದೃಶುಃ ಕುರುಸತ್ತಮಮ್।।

ದ್ವೈಪಾಯನ, ನಾರದ, ಮಹಾನ್ ಋಷಿ ದೇವಲ, ದೇವಸ್ಥಾನ, ಕಣ್ವ ಮತ್ತು ಅವನ ಸತ್ತಮ ಶಿಷ್ಯರು, ಅನ್ಯ ವೇದವಿದ್ವಾಂಸರೂ, ಕೃತಪ್ರಜ್ಞ ದ್ವಿಜಾತಿಯರೂ, ಗೃಹಸ್ಥರೂ, ಸ್ನಾತಕರೂ ಎಲ್ಲರೂ ಕುರುಸತ್ತಮನನ್ನು ಕಂಡರು.

12001006a ಅಭಿಗಮ್ಯ ಮಹಾತ್ಮಾನಃ ಪೂಜಿತಾಶ್ಚ ಯಥಾವಿಧಿ।
12001006c ಆಸನೇಷು ಮಹಾರ್ಹೇಷು ವಿವಿಶುಸ್ತೇ ಮಹರ್ಷಯಃ।।

ಆಗಮಿಸಿದ ಮಹಾಋಷಿಗಳು ಯಥಾವಿಧಿಯಾಗಿ ಪೂಜಿಸಲ್ಪಟ್ಟು ಅಮೂಲ್ಯ ಆಸನಗಳಲ್ಲಿ ಕುಳಿತುಕೊಂಡರು.

12001007a ಪ್ರತಿಗೃಹ್ಯ ತತಃ ಪೂಜಾಂ ತತ್ಕಾಲಸದೃಶೀಂ ತದಾ।
12001007c ಪರ್ಯುಪಾಸನ್ಯಥಾನ್ಯಾಯಂ ಪರಿವಾರ್ಯ ಯುಧಿಷ್ಠಿರಮ್।।
12001008a ಪುಣ್ಯೇ ಭಾಗೀರಥೀತೀರೇ ಶೋಕವ್ಯಾಕುಲಚೇತಸಮ್।
12001008c ಆಶ್ವಾಸಯಂತೋ ರಾಜಾನಂ ವಿಪ್ರಾಃ ಶತಸಹಸ್ರಶಃ।।

ಆ ಶೋಕಸಮಯಕ್ಕೆ ತಕ್ಕುದಾದ ಪೂಜೆಗಳನ್ನು ಸ್ವೀಕರಿಸಿ ನೂರಾರು ಸಹಸ್ರಾರು ವಿಪ್ರರು ಆ ಪುಣ್ಯ ಭಾಗೀರಥೀ ತೀರದಲ್ಲಿ ಶೋಕವ್ಯಾಕುಲ ಚೇತಸ ರಾಜ ಯುಧಿಷ್ಠಿರನನ್ನು ಯಥಾನ್ಯಾಯವಾಗಿ ಗೌರವಿಸಿ ಸುತ್ತುವರೆದು ಕುಳಿತು ಸಮಾಧಾನಪಡಿಸುತ್ತಿದ್ದರು.

12001009a ನಾರದಸ್ತ್ವಬ್ರವೀತ್ಕಾಲೇ ಧರ್ಮಾತ್ಮಾನಂ ಯುಧಿಷ್ಠಿರಮ್।
12001009c ವಿಚಾರ್ಯ ಮುನಿಭಿಃ ಸಾರ್ಧಂ ತತ್ಕಾಲಸದೃಶಂ ವಚಃ3।।

ಆ ಸಮಯದಲ್ಲಿ ಇತರ ಮುನಿಗಳೊಂದಿಗೆ ವಿಚಾರಿಸಿ ನಾರದನು ಆ ಕಾಲಕ್ಕೆ ತಕ್ಕುದಾದ ಈ ಮಾತುಗಳನ್ನು ಧರ್ಮಾತ್ಮ ಯುಧಿಷ್ಠಿರನಿಗೆ ಹೇಳಿದನು:

12001010a ಭವತೋ ಬಾಹುವೀರ್ಯೇಣ ಪ್ರಸಾದಾನ್ಮಾಧವಸ್ಯ ಚ।
12001010c ಜಿತೇಯಮವನಿಃ ಕೃತ್ಸ್ನಾ ಧರ್ಮೇಣ ಚ ಯುಧಿಷ್ಠಿರ।।

“ಯುಧಿಷ್ಠಿರ! ನಿನ್ನ ಬಾಹುವೀರ್ಯದಿಂದ ಮತ್ತು ಮಾಧವನ ಪ್ರಸಾದದಿಂದ ನೀನು ಈ ಇಡೀ ಭೂಮಿಯನ್ನು ಧರ್ಮಪೂರ್ವಕವಾಗಿ
ಗೆದ್ದಿರುವೆ!

12001011a ದಿಷ್ಟ್ಯಾ ಮುಕ್ತಾಃ ಸ್ಥ ಸಂಗ್ರಾಮಾದಸ್ಮಾಲ್ಲೋಕಭಯಂಕರಾತ್।
12001011c ಕ್ಷತ್ರಧರ್ಮರತಶ್ಚಾಪಿ ಕಚ್ಚಿನ್ಮೋದಸಿ ಪಾಂಡವ।।

ಸೌಭಾಗ್ಯವಾಶಾತ್ ನೀನು ಆ ಲೋಕಭಯಂಕರ ಸಂಗ್ರಾಮದಿಂದ ಮುಕ್ತನಾಗಿರುವೆ. ಪಾಂಡವ! ಕ್ಷತ್ರಧರ್ಮರತನಾಗಿದ್ದುಕೊಂಡು ಈಗಲಾದರೂ ಸಂತೋಷದಿಂದಿರುವೆಯಲ್ಲವೇ?

12001012a ಕಚ್ಚಿಚ್ಚ ನಿಹತಾಮಿತ್ರಃ ಪ್ರೀಣಾಸಿ ಸುಹೃದೋ ನೃಪ।
12001012c ಕಚ್ಚಿಚ್ಚ್ರಿಯಮಿಮಾಂ ಪ್ರಾಪ್ಯ ನ ತ್ವಾಂ ಶೋಕಃ ಪ್ರಬಾಧತೇ।।

ನೃಪ! ಅಮಿತ್ರರನ್ನು ಸಂಹರಿಸಿ ಮಿತ್ರರಿಗೆ ಪ್ರೀತಿಯನ್ನುಂಟುಮಾಡಿರುವೆ ತಾನೇ? ಈ ಶ್ರೀಯನ್ನು ಪಡೆದ ನಿನ್ನನ್ನು ಬೇರೆ ಯಾವ ಶೋಕವೂ ಬಾಧಿಸುತ್ತಿಲ್ಲ ತಾನೇ?”

12001013 ಯುಧಿಷ್ಠಿರ ಉವಾಚ।
12001013a ವಿಜಿತೇಯಂ ಮಹೀ ಕೃತ್ಸ್ನಾ ಕೃಷ್ಣಬಾಹುಬಲಾಶ್ರಯಾತ್।
12001013c ಬ್ರಾಹ್ಮಣಾನಾಂ ಪ್ರಸಾದೇನ ಭೀಮಾರ್ಜುನಬಲೇನ ಚ।।

ಯುಧಿಷ್ಠಿರನು ಹೇಳಿದನು: “ಕೃಷ್ಣನ ಬಾಹುಬಲವನ್ನಾಶ್ರಯಿಸಿ, ಬ್ರಾಹ್ಮಣರ ಪ್ರಸಾದದಿಂದ ಮತ್ತು ಭೀಮಾರ್ಜುನರ ಬಲದಿಂದ ಇಡೀ ಭೂಮಿಯನ್ನೇ ಗೆದ್ದಾಯಿತು!

12001014a ಇದಂ ತು ಮೇ ಮಹದ್ದುಃಖಂ ವರ್ತತೇ ಹೃದಿ ನಿತ್ಯದಾ।
12001014c ಕೃತ್ವಾ ಜ್ಞಾತಿಕ್ಷಯಮಿಮಂ ಮಹಾಂತಂ ಲೋಭಕಾರಿತಮ್।।

ಆದರೆ ಲೋಭಕ್ಕಾಗಿ ಈ ಮಹಾ ಜ್ಞಾತಿಕ್ಷಯವನ್ನು ಮಾಡಿದೆನಲ್ಲಾ ಎಂಬ ಮಹಾದುಃಖವು ನಿತ್ಯವೂ ನನ್ನ ಹೃದಯದಲ್ಲಿ ನೆಲೆಗೊಂಡಿದೆ!

12001015a ಸೌಭದ್ರಂ ದ್ರೌಪದೇಯಾಂಶ್ಚ ಘಾತಯಿತ್ವಾ ಪ್ರಿಯಾನ್ಸುತಾನ್।
12001015c ಜಯೋಽಯಮಜಯಾಕಾರೋ ಭಗವನ್ ಪ್ರತಿಭಾತಿ ಮೇ।।

ಭಗವನ್! ಪ್ರಿಯ ಸುತರಾದ ಸೌಭದ್ರ ಮತ್ತು ದ್ರೌಪದೇಯರನ್ನು ಸಾಯಗೊಳಿಸಿ ನನಗೆ ಈ ಜಯವೂ ಸೋಲಾಗಿ ಕಾಣುತ್ತಿದೆ.

12001016a ಕಿಂ ನು ವಕ್ಷ್ಯತಿ ವಾರ್ಷ್ಣೇಯೀ ವಧೂರ್ಮೇ ಮಧುಸೂದನಮ್।
12001016c ದ್ವಾರಕಾವಾಸಿನೀ ಕೃಷ್ಣಮಿತಃ ಪ್ರತಿಗತಂ ಹರಿಮ್।।

ಇಲ್ಲಿಂದ ಕೃಷ್ಣನು ಹಿಂದಿರುಗಿದಾಗ ನನ್ನ ಸೊಸೆ ವಾರ್ಷ್ಣೇಯೀ ಸುಭದ್ರೆಯು ಮಧುಸೂದನನಿಗೆ ಏನೆನ್ನುವಳು? ದ್ವಾರಕಾವಾಸಿಗಳು ಹರಿಯನ್ನು ಏನೆಂದು ಪ್ರಶ್ನಿಸುವರು?

12001017a ದ್ರೌಪದೀ ಹತಪುತ್ರೇಯಂ ಕೃಪಣಾ ಹತಬಾಂಧವಾ।
12001017c ಅಸ್ಮತ್ಪ್ರಿಯಹಿತೇ ಯುಕ್ತಾ ಭೂಯಃ ಪೀಡಯತೀವ ಮಾಮ್।।

ಪುತ್ರರನ್ನೂ ಬಾಂಧವರನ್ನೂ ಕಳೆದುಕೊಂಡ ದ್ರೌಪದಿಯು ದೀನಳಾಗಿದ್ದಾಳೆ. ನಮ್ಮ ಪ್ರಿಯಹಿತದಲ್ಲಿಯೇ ನಿರತಳಾಗಿದ್ದ ಅವಳು ಈಗ ನನ್ನನ್ನು ಪೀಡಿಸುತ್ತಿರುವಳೋ ಎನ್ನುವಂತೆ ನನಗನ್ನಿಸುತ್ತದೆ.

12001018a ಇದಮನ್ಯಚ್ಚ ಭಗವನ್ಯತ್ತ್ವಾಂ ವಕ್ಷ್ಯಾಮಿ ನಾರದ।
12001018c ಮಂತ್ರಸಂವರಣೇನಾಸ್ಮಿ ಕುಂತ್ಯಾ ದುಃಖೇನ ಯೋಜಿತಃ।।

ಭಗವನ್! ನಾರದ! ಜೊತೆಗೆ ಇನ್ನೊಂದು ದುಃಖದ ಕುರಿತು ನಿನಗೆ ಹೇಳುತ್ತೇನೆ. ಕುಂತಿಯು ರಹಸ್ಯವಾಗಿಟ್ಟಿದ್ದುದನ್ನು ಕೇಳಿ ಅತೀವ ದುಃಖಿತನಾಗಿದ್ದೇನೆ.

12001019a ಯೋಽಸೌ ನಾಗಾಯುತಬಲೋ ಲೋಕೇಽಪ್ರತಿರಥೋ ರಣೇ।
12001019c ಸಿಂಹಖೇಲಗತಿರ್ಧೀಮಾನ್ ಘೃಣೀ ದಾಂತೋ4 ಯತವ್ರತಃ।।
12001020a ಆಶ್ರಯೋ ಧಾರ್ತರಾಷ್ಟ್ರಾಣಾಂ ಮಾನೀ ತೀಕ್ಷ್ಣಪರಾಕ್ರಮಃ।
12001020c ಅಮರ್ಷೀ ನಿತ್ಯಸಂರಂಭೀ ಕ್ಷೇಪ್ತಾಸ್ಮಾಕಂ ರಣೇ ರಣೇ।।
12001021a ಶೀಘ್ರಾಸ್ತ್ರಶ್ಚಿತ್ರಯೋಧೀ ಚ ಕೃತೀ ಚಾದ್ಭುತವಿಕ್ರಮಃ।
12001021c ಗೂಢೋತ್ಪನ್ನಃ ಸುತಃ ಕುಂತ್ಯಾ ಭ್ರಾತಾಸ್ಮಾಕಂ ಚ ಸೋದರಃ।।

ಹತ್ತುಸಾವಿರ ಆನೆಗಳ ಬಲವಿದ್ದ, ಲೋಕದಲ್ಲಿಯೇ ಅಪ್ರತಿಮ ಮಹಾರಥ, ರಣದಲ್ಲಿ ಸಿಂಹದಂತೆ ಸಂಚರಿಸುತ್ತಿದ್ದ ಧೀಮಾನ್, ದಯಾಳು, ಅಭಿಮಾನೀ, ತೀಕ್ಷ್ಣ ಪರಾಕ್ರಮಿ, ಧಾರ್ತರಾಷ್ಟ್ರರ ಆಶ್ರಯ, ಅಸಹನಶೀಲ, ನಿತ್ಯಕೋಪೀ, ರಣರಣದಲ್ಲಿಯೂ ನಮ್ಮನ್ನು ಸೋಲಿಸುತ್ತಿದ್ದ ಆ ಶೀಘ್ರಾಸ್ತ್ರ, ಚಿತ್ರಯೋಧೀ, ಧನುರ್ವೇದ ಪಂಡಿತ, ಅದ್ಭುತ ವಿಕ್ರಮಿಯು ರಹಸ್ಯದಲ್ಲಿ ಹುಟ್ಟಿದ ಕುಂತಿಯ ಮಗ ಮತ್ತು ನಮ್ಮ ಸಹೋದರ ಅಣ್ಣನಾಗಿದ್ದನು!

12001022a ತೋಯಕರ್ಮಣಿ ಯಂ ಕುಂತೀ ಕಥಯಾಮಾಸ ಸೂರ್ಯಜಮ್।
12001022c ಪುತ್ರಂ ಸರ್ವಗುಣೋಪೇತಮವಕೀರ್ಣಂ ಜಲೇ ಪುರಾ।।

ಉದಕಕ್ರಿಯೆಗಳನ್ನು ಮಾಡುತ್ತಿದ್ದಾಗ ಕುಂತಿಯು ಸೂರ್ಯನಿಂದ ಹುಟ್ಟಿದ ಆ ಸರ್ವಗುಣೋಪೇತ ಪುತ್ರನನ್ನು ಹಿಂದೆ ನೀರಿನಲ್ಲಿ ತೇಲಿಸಿ ಬಿಟ್ಟಿದುದನ್ನು ನಮಗೆ ಹೇಳಿದಳು. 512001023a ಯಂ ಸೂತಪುತ್ರಂ ಲೋಕೋಽಯಂ ರಾಧೇಯಂ ಚಾಪ್ಯಮನ್ಯತ।

12001023c ಸ ಜ್ಯೇಷ್ಠಪುತ್ರಃ ಕುಂತ್ಯಾ ವೈ ಭ್ರಾತಾಸ್ಮಾಕಂ ಚ ಮಾತೃಜಃ।।

ಈ ಲೋಕವು ಯಾರನ್ನು ರಾಧೇಯ ಸೂತಪುತ್ರನೆಂದು ಅಪಮಾನಿಸುತ್ತಿತ್ತೋ ಅವನು ಕುಂತಿಯ ಜ್ಯೇಷ್ಠಪುತ್ರ ಮತ್ತು ನಮ್ಮ ತಾಯಲ್ಲಿ ಹುಟ್ಟಿದ ನಮ್ಮ ಅಣ್ಣನಾಗಿದ್ದನು.

12001024a ಅಜಾನತಾ ಮಯಾ ಸಂಖ್ಯೇ ರಾಜ್ಯಲುಬ್ಧೇನ ಘಾತಿತಃ।
12001024c ತನ್ಮೇ ದಹತಿ ಗಾತ್ರಾಣಿ ತೂಲರಾಶಿಮಿವಾನಲಃ।।

ಅದನ್ನು ತಿಳಿಯದೇ ನಾನು ರಾಜ್ಯಲೋಭದಿಂದ ರಣದಲ್ಲಿ ಅವನನ್ನು ಕೊಲ್ಲಿಸಿದೆ. ಅಗ್ನಿಯು ಹತ್ತಿಯರಾಶಿಯನ್ನು ಹೇಗೋ ಹಾಗೆ ಅದು ನನ್ನ ಅಂಗಾಂಗಳನ್ನು ಸುಡುತ್ತಿದೆ.

12001025a ನ ಹಿ ತಂ ವೇದ ಪಾರ್ಥೋಽಪಿ ಭ್ರಾತರಂ ಶ್ವೇತವಾಹನಃ।
12001025c ನಾಹಂ ನ ಭೀಮೋ ನ ಯಮೌ ಸ ತ್ವಸ್ಮಾನ್ವೇದ ಸುವ್ರತಃ।।

ಅವನು ಅಣ್ಣನೆಂದು ಶ್ವೇತವಾಹನ ಪಾರ್ಥನಿಗಾಗಲೀ, ನನಗಾಗಲೀ, ಭೀಮನಿಗಾಗಲೀ, ಯಮಳರಿಗಾಗಲೀ ತಿಳಿದಿರಲಿಲ್ಲ. ಆದರೆ ನಾವು ಅವನ ಸಹೊದರರೆಂದು ಆ ಸುವ್ರತನಿಗೆ ತಿಳಿದಿತ್ತು!

12001026a ಗತಾ ಕಿಲ ಪೃಥಾ ತಸ್ಯ ಸಕಾಶಮಿತಿ ನಃ ಶ್ರುತಮ್।
12001026c ಅಸ್ಮಾಕಂ ಶಮಕಾಮಾ ವೈ ತ್ವಂ ಚ ಪುತ್ರೋ ಮಮೇತ್ಯಥ।।

ನಮ್ಮೊಡನೆ ಶಾಂತಿಯನ್ನು ಬಯಸಿ ಪೃಥೆಯು ಅವಳ ಬಳಿ ಹೋಗಿ “ನೀನು ನನ್ನ ಮಗ” ಎಂದು ಹೇಳಿದ್ದಳೆಂದು ನಾವು ಕೇಳಿದ್ದೇವೆ.

12001027a ಪೃಥಾಯಾ ನ ಕೃತಃ ಕಾಮಸ್ತೇನ ಚಾಪಿ ಮಹಾತ್ಮನಾ।
12001027c ಅತಿಪಶ್ಚಾದಿದಂ ಮಾತರ್ಯವೋಚದಿತಿ ನಃ ಶ್ರುತಮ್।।

ಆದರೆ ಆ ಮಹಾತ್ಮನು ಪೃಥೆಯು ಬಯಸಿದಂತೆ ಮಾಡಲಿಲ್ಲ. ಅದೂ ಅಲ್ಲದೆ ಅವನು ತಾಯಿಗೆ ಇದನ್ನು ಹೇಳಿದನೆಂದು ನಾವು ಕೇಳಿದ್ದೇವೆ.

12001028a ನ ಹಿ ಶಕ್ಷ್ಯಾಮ್ಯಹಂ ತ್ಯಕ್ತುಂ ನೃಪಂ ದುರ್ಯೋಧನಂ ರಣೇ।
12001028c ಅನಾರ್ಯಂ ಚ ನೃಶಂಸಂ ಚ ಕೃತಘ್ನಂ ಚ ಹಿ ಮೇ ಭವೇತ್।।

“ರಣದಲ್ಲಿ ನೃಪ ದುರ್ಯೋಧನನ್ನು ತ್ಯಜಿಸಲು ನಾನು ಶಕ್ತನಿಲ್ಲ. ನಾನು ಅನಾರ್ಯನೂ, ಕ್ರೂರಿಯೂ, ಕೃತಘ್ನನು ಆಗುವುದು ಬೇಡ!

12001029a ಯುಧಿಷ್ಠಿರೇಣ ಸಂಧಿಂ ಚ ಯದಿ ಕುರ್ಯಾಂ ಮತೇ ತವ।
12001029c ಭೀತೋ ರಣೇ ಶ್ವೇತವಾಹಾದಿತಿ ಮಾಂ ಮಂಸ್ಯತೇ ಜನಃ।।

ನಿನ್ನ ಸಲಹೆಯಂತೆ ನಾನೇನಾದರೂ ಯುಧಿಷ್ಠಿರನೊಡನೆ ಸಂಧಿಮಾಡಿಕೊಂಡರೆ ರಣದಲ್ಲಿ ಶ್ವೇತವಾಹನನಿಗೆ ಹೆದರಿ ಹೀಗೆ ಮಾಡಿದೆನೆಂದು ಜನರು ತಿಳಿದುಕೊಳ್ಳುತ್ತಾರೆ.

12001030a ಸೋಽಹಂ ನಿರ್ಜಿತ್ಯ ಸಮರೇ ವಿಜಯಂ ಸಹಕೇಶವಮ್।
12001030c ಸಂಧಾಸ್ಯೇ ಧರ್ಮಪುತ್ರೇಣ ಪಶ್ಚಾದಿತಿ ಚ ಸೋಽಬ್ರವೀತ್।।

ಸಮರದಲ್ಲಿ ನಾನು ಕೇಶವನೊಡನೆ ವಿಜಯ ಅರ್ಜುನನನ್ನು ಸೋಲಿಸಿದ ನಂತರ ನಾನು ಧರ್ಮಪುತ್ರನೊಂದಿಗೆ ಸಂಧಿಮಾಡಿಕೊಳ್ಳುತ್ತೇನೆ” ಎಂದು ಅವನು ಹೇಳಿದನಂತೆ.

12001031a ತಮವೋಚತ್ಕಿಲ ಪೃಥಾ ಪುನಃ ಪೃಥುಲವಕ್ಷಸಮ್।
12001031c ಚತುರ್ಣಾಮಭಯಂ ದೇಹಿ ಕಾಮಂ ಯುಧ್ಯಸ್ವ ಫಲ್ಗುನಮ್।।

ಪುನಃ ಪೃಥೆಯು ಆ ವಿಶಾಲವಕ್ಷಸ್ಥಳನಿಗೆ “ಬೇಕಾದರೆ ಫಲ್ಗುನನೊಡನೆ ಯುದ್ಧಮಾಡು, ಆದರೆ ಉಳಿದ ನಾಲ್ವರಿಗೆ ಅಭಯವನ್ನು ನೀಡು” ಎಂದು ಕೇಳಿಕೊಂಡಳಂತೆ!

12001032a ಸೋಽಬ್ರವೀನ್ಮಾತರಂ ಧೀಮಾನ್ವೇಪಮಾನಃ ಕೃತಾಂಜಲಿಃ।
12001032c ಪ್ರಾಪ್ತಾನ್ವಿಷಹ್ಯಾಂಶ್ಚತುರೋ ನ ಹನಿಷ್ಯಾಮಿ ತೇ ಸುತಾನ್।।

ಆಗ ಆ ಧೀಮಂತನು ನಡುಗುತ್ತಾ ಅಂಜಲೀಬದ್ಧನಾಗಿ ತಾಯಿಗೆ “ನಿನ್ನ ಆ ನಾಲ್ವರು ಮಕ್ಕಳೂ ನನ್ನಿಂದಾಗಿ ವಿಷಮ ಸ್ಥಿತಿಯನ್ನು ಹೊಂದಿದರೂ ನಾನು ಅವರನ್ನು ಸಂಹರಿಸುವುದಿಲ್ಲ.

12001033a ಪಂಚೈವ ಹಿ ಸುತಾ ಮಾತ6ರ್ಭವಿಷ್ಯಂತಿ ಹಿ ತೇ ಧ್ರುವಮ್।
12001033c ಸಕರ್ಣಾ ವಾ ಹತೇ ಪಾರ್ಥೇ ಸಾರ್ಜುನಾ ವಾ ಹತೇ ಮಯಿ7।।

ಪಾರ್ಥನು ಹತನಾದರೆ ಕರ್ಣ ಮತ್ತು ನಾನು ಹತನಾದರೆ ಅರ್ಜುನನೂ ಸೇರಿ ನಿನಗೆ ಐವರು ಮಕ್ಕಳು ಇರುತ್ತಾರೆ. ಮಾತೇ! ಇದು ಸತ್ಯ!”

12001034a ತಂ ಪುತ್ರಗೃದ್ಧಿನೀ ಭೂಯೋ ಮಾತಾ ಪುತ್ರಮಥಾಬ್ರವೀತ್।
12001034c ಭ್ರಾತೃಣಾಂ ಸ್ವಸ್ತಿ ಕುರ್ವೀಥಾ ಯೇಷಾಂ ಸ್ವಸ್ತಿ ಚಿಕೀರ್ಷಸಿ।।

ಪುತ್ರಪ್ರಿಯಳಾದ ಆ ಮಾತೆಯು ತನ್ನ ಮಗನಿಗೆ ಪುನಃ “ನೀನು ಯಾರಿಗೆ ಮಂಗಳವನ್ನುಂಟುಮಾಡಲು ಬಯಸುತ್ತೀಯೋ ಆ ಸಹೋದರರಿಗೆ ಮಂಗಳವನ್ನುಂಟುಮಾಡು!” ಎಂದು ಹೇಳಿದಳಂತೆ.

12001035a ತಮೇವಮುಕ್ತ್ವಾ ತು ಪೃಥಾ ವಿಸೃಜ್ಯೋಪಯಯೌ ಗೃಹಾನ್।
12001035c ಸೋಽರ್ಜುನೇನ ಹತೋ ವೀರೋ ಭ್ರಾತಾ ಭ್ರಾತ್ರಾ ಸಹೋದರಃ।।

ಪೃಥೆಯು ಹಾಗೆ ಹೇಳಲು ಅವರಿಬ್ಬರೂ ಬೀಳ್ಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರಂತೆ. ಆ ವೀರನೇ ಅರ್ಜುನನಿಂದ ಹತನಾದನು. ಅಣ್ಣನನ್ನು ತಮ್ಮನು ಸಂಹರಿಸಿದನು!

12001036a ನ ಚೈವ ವಿವೃತೋ ಮಂತ್ರಃ ಪೃಥಾಯಾಸ್ತಸ್ಯ ವಾ ಮುನೇ।
12001036c ಅಥ ಶೂರೋ ಮಹೇಷ್ವಾಸಃ ಪಾರ್ಥೇನಾಸೌ ನಿಪಾತಿತಃ।।

ಮುನೇ! ಈ ರಹಸ್ಯವನ್ನು ಪೃಥೆಯಾಗಲೀ ಕರ್ಣನಾಗಲೀ ಅಂತ್ಯದವರೆಗೂ ಹೊರಗೆಡಹಲೇ ಇಲ್ಲ! ಈಗ ಆ ಶೂರ ಮಹೇಷ್ವಾಸನು ಪಾರ್ಥನಿಂದ ಹತನಾಗಿದ್ದಾನೆ.

12001037a ಅಹಂ ತ್ವಜ್ಞಾಸಿಷಂ ಪಶ್ಚಾತ್ ಸ್ವಸೋದರ್ಯಂ ದ್ವಿಜೋತ್ತಮ।
12001037c ಪೂರ್ವಜಂ ಭ್ರಾತರಂ ಕರ್ಣಂ ಪೃಥಾಯಾ ವಚನಾತ್ ಪ್ರಭೋ।।

ದ್ವಿಜೋತ್ತಮ! ಪ್ರಭೋ! ಅವನ ಮರಣಾನಂತರವೇ ನಾನು ಪೃಥೆಯ ವಚನದಂತೆ ಕರ್ಣನು ನಮ್ಮ ಸಹೋದರನೆಂದೂ, ನಮ್ಮೆಲ್ಲರ ಮೊದಲು ಹುಟ್ಟಿದ ಅಣ್ಣನೆಂದೂ ತಿಳಿದುಕೊಂಡೆನು.

12001038a ತೇನ ಮೇ ದೂಯತೇಽತೀವ ಹೃದಯಂ ಭ್ರಾತೃಘಾತಿನಃ।
12001038c ಕರ್ಣಾರ್ಜುನಸಹಾಯೋಽಹಂ ಜಯೇಯಮಪಿ ವಾಸವಮ್।।

ಸಹೋದರನನ್ನು ಕೊಲ್ಲಿಸಿದ ನನ್ನ ಈ ಹೃದಯವು ಅತೀವವಾಗಿ ದುಃಖಿಸುತ್ತಿದೆ. ಕರ್ಣಾರ್ಜುನರ ಸಹಾಯದಿಂದ ನಾನು ವಾಸವನನ್ನೂ ಜಯಿಸಬಹುದಾಗಿತ್ತು!

12001039a ಸಭಾಯಾಂ ಕ್ಲಿಶ್ಯಮಾನಸ್ಯ ಧಾರ್ತರಾಷ್ಟ್ರೈರ್ದುರಾತ್ಮಭಿಃ।
12001039c ಸಹಸೋತ್ಪತಿತಃ ಕ್ರೋಧಃ ಕರ್ಣಂ ದೃಷ್ಟ್ವಾ ಪ್ರಶಾಮ್ಯತಿ।।

ಸಭೆಯಲ್ಲಿ ದುರಾತ್ಮ ಧಾರ್ತರಾಷ್ಟ್ರರಿಂದ ಕಷ್ಟಕ್ಕೊಳಗಾದಾಗ ಒಮ್ಮೆಲೇ ಮೇಲೇರುತ್ತಿದ್ದ ನನ್ನ ಕ್ರೋಧವು ಕರ್ಣನನ್ನು ನೋಡಿದೊಡನೆಯೇ ತಣ್ಣಗಾಗುತ್ತಿತ್ತು!

12001040a ಯದಾ ಹ್ಯಸ್ಯ ಗಿರೋ ರೂಕ್ಷಾಃ ಶೃಣೋಮಿ ಕಟುಕೋದಯಾಃ।
12001040c ಸಭಾಯಾಂ ಗದತೋ ದ್ಯೂತೇ ದುರ್ಯೋಧನಹಿತೈಷಿಣಃ।।
12001041a ತದಾ ನಶ್ಯತಿ ಮೇ ಕ್ರೋಧಃ ಪಾದೌ ತಸ್ಯ ನಿರೀಕ್ಷ್ಯ ಹ।
12001041c ಕುಂತ್ಯಾ ಹಿ ಸದೃಶೌ ಪಾದೌ ಕರ್ಣಸ್ಯೇತಿ ಮತಿರ್ಮಮ।।

ಸಭೆಯಲ್ಲಿ ದ್ಯೂತವನ್ನಾಡುತ್ತಿದ್ದಾಗ ದುರ್ಯೋಧನನ ಹಿತೈಷಿ ಕರ್ಣನ ಕಠೋರ ಚುಚ್ಚುಮಾತುಗಳನ್ನು ಕೇಳಿ ಉಂಟಾದ ನನ್ನ ಕೋಪವು ಅವನ ಪಾದಗಳನ್ನು ನೋಡಿದೊಡನೆಯೇ ನಾಶವಾಗುತ್ತಿತ್ತು. ಕರ್ಣನ ಆ ಎರಡು ಪಾದಗಳು ಕುಂತಿಯ ಪಾದಗಳಂತಿದ್ದವು ಎಂದು ನನಗೆ ಅನ್ನಿಸುತ್ತಿತ್ತು.

12001042a ಸಾದೃಶ್ಯಹೇತುಮನ್ವಿಚ್ಚನ್ ಪೃಥಾಯಾಸ್ತವ ಚೈವ ಹ।
12001042c ಕಾರಣಂ ನಾಧಿಗಚ್ಚಾಮಿ ಕಥಂ ಚಿದಪಿ ಚಿಂತಯನ್।।

ಪೃಥೆಯ ಮತ್ತು ಅವನ ಪಾದಗಳ ಸಾದೃಶ್ಯತೆಯ ಕಾರಣವೇನೆಂದು ಎಷ್ಟೇ ಚಿಂತಿಸಿದರೂ ನನಗೆ ಆ ಕಾರಣವು ತಿಳಿದಿರಲಿಲ್ಲ.

12001043a ಕಥಂ ನು ತಸ್ಯ ಸಂಗ್ರಾಮೇ ಪೃಥಿವೀ ಚಕ್ರಮಗ್ರಸತ್।
12001043c ಕಥಂ ಚ ಶಪ್ತೋ ಭ್ರಾತಾ ಮೇ ತತ್ತ್ವಂ ವಕ್ತುಮಿಹಾರ್ಹಸಿ।।

ಸಂಗ್ರಾಮದಲ್ಲಿ ಅವನ ರಥಚಕ್ರಗಳನ್ನು ಭೂಮಿಯು ಹೇಗೆ ನುಂಗಿಬಿಟ್ಟಳು? ನನ್ನ ಸಹೋದರನು ಹೇಗೆ ಶಪಿತನಾದನು? ಇದನ್ನು ನೀನು ನನಗೆ ಹೇಳಬೇಕು!

12001044a ಶ್ರೋತುಮಿಚ್ಚಾಮಿ ಭಗವಂಸ್ತ್ವತ್ತಃ ಸರ್ವಂ ಯಥಾತಥಮ್।
12001044c ಭವಾನ್ ಹಿ ಸರ್ವವಿದ್ವಿದ್ವಾಽಲ್ಲೋಕೇ ವೇದ ಕೃತಾಕೃತಮ್।।

ಭಗವನ್! ಅವೆಲ್ಲವನ್ನೂ ಯಥಾವತ್ತಾಗಿ ಕೇಳಬಯಸುತ್ತೇನೆ. ನೀನು ಲೋಕದಲ್ಲಿ ನಡೆದುಹೋದ ಮತ್ತು ನಡೆಯಲಿರುವ ಎಲ್ಲವನ್ನೂ ತಿಳಿದಿದ್ದೀಯೆ.””

12096001 ಯುಧಿಷ್ಠಿರ ಉವಾಚ।
12096001a ಅಥ ಯೋ ವಿಜಿಗೀಷೇತ ಕ್ಷತ್ರಿಯಃ ಕ್ಷತ್ರಿಯಂ ಯುಧಿ।
12096001c ಕಸ್ತಸ್ಯ ಧರ್ಮ್ಯೋ ವಿಜಯ ಏತತ್ ಪೃಷ್ಟೋ ಬ್ರವೀಹಿ ಮೇ।।

ಯುಧಿಷ್ಠಿರನು ಹೇಳಿದನು: “ಓರ್ವ ಕ್ಷತ್ರಿಯನು ಇನ್ನೊಬ್ಬ ಕ್ಷತ್ರಿಯನೊಡನೆ ಯುದ್ಧದದಲ್ಲಿ ವಿಜಯಗಳಿಸಲು ಬಯಸಿದರೆ ವಿಜಯಕ್ಕೆ ಅವನು ನಡೆದುಕೊಳ್ಳಬೇಕಾದ ಧರ್ಮವು ಯಾವುದು? ಕೇಳುತ್ತಿರುವ ನನಗೆ ಹೇಳು.”

12096002 ಭೀಷ್ಮ ಉವಾಚ।
12096002a ಸಸಹಾಯೋಽಸಹಾಯೋ ವಾ ರಾಷ್ಟ್ರಮಾಗಮ್ಯ ಭೂಮಿಪಃ।
12096002c ಬ್ರೂಯಾದಹಂ ವೋ ರಾಜೇತಿ ರಕ್ಷಿಷ್ಯಾಮಿ ಚ ವಃ ಸದಾ।।
12096003a ಮಮ ಧರ್ಮ್ಯಂ ಬಲಿಂ ದತ್ತ ಕಿಂ ವಾ ಮಾಂ ಪ್ರತಿಪತ್ಸ್ಯಥ।
12096003c ತೇ ಚೇತ್ತಮಾಗತಂ ತತ್ರ ವೃಣುಯುಃ ಕುಶಲಂ ಭವೇತ್।।

ಭೀಷ್ಮನು ಹೇಳಿದನು: “ವಿಜಯವನ್ನು ಬಯಸಿದ ರಾಜನು ಸಹಾಯಕರೊಂದಿಗೆ ಅಥವಾ ಸಹಾಯಕರಿಲ್ಲದೇ ಆ ರಾಷ್ಟ್ರಕ್ಕೆ ಹೋಗಿ “ನಾನು ನಿಮ್ಮ ರಾಜ. ನಿಮ್ಮನ್ನು ಸದಾ ರಕ್ಷಿಸುತ್ತೇನೆ. ಧರ್ಮಾನುಸಾರವಾಗಿ ನನಗೆ ತೆರಿಗೆಯನ್ನು ಕೊಡಿ ಅಥವಾ ನನ್ನೊಡನೆ ಯುದ್ಧಮಾಡಿ” ಎಂದು ಹೇಳಬೇಕು. ಆಗಮಿಸಿದ ರಾಜನನ್ನು ಅವರು ಸ್ವೀಕರಿಸಿದರೆ ಎಲ್ಲವೂ ಉಳ್ಳೆಯದೇ ಆಗುತ್ತದೆ.

12096004a ತೇ ಚೇದಕ್ಷತ್ರಿಯಾಃ ಸಂತೋ ವಿರುಧ್ಯೇಯುಃ ಕಥಂ ಚನ।
12096004c ಸರ್ವೋಪಾಯೈರ್ನಿಯಂತವ್ಯಾ ವಿಕರ್ಮಸ್ಥಾ ನರಾಧಿಪ।।

ಒಂದು ವೇಳೆ ಅವರು ಕ್ಷತ್ರಿಯರಾಗಿರದೇ ವಿರೋಧಿಸಿದರೆ ಸರ್ವೋಪಾಯಗಳಿಂದ ನರಾಧಿಪನು ಆ ವಿಕರ್ಮಸ್ಥರನ್ನು ನಿಯಂತ್ರಿಸಬೇಕು.

12096005a ಅಶಕ್ತಂ ಕ್ಷತ್ರಿಯಂ ಮತ್ವಾ ಶಸ್ತ್ರಂ ಗೃಹ್ಣಾತ್ಯಥಾಪರಃ।
12096005c ತ್ರಾಣಾಯಾಪ್ಯಸಮರ್ಥಂ ತಂ ಮನ್ಯಮಾನಮತೀವ ಚ।।

ಕ್ಷತ್ರಿಯನು ಅಶಕ್ತನೆಂದೂ ತಮ್ಮನ್ನು ರಕ್ಷಿಸಲು ಅಸಮರ್ಥನೆಂದೂ ತಿಳಿದು ಇತರರು ಶಸ್ತ್ರವನ್ನು ಹಿಡಿಯುತ್ತಾರೆ.”

12096006 ಯುಧಿಷ್ಠಿರ ಉವಾಚ।
12096006a ಅಥ ಯಃ ಕ್ಷತ್ರಿಯೋ ರಾಜಾ ಕ್ಷತ್ರಿಯಂ ಪ್ರತ್ಯುಪಾವ್ರಜೇತ್।
12096006c ಕಥಂ ಸ ಪ್ರತಿಯೋದ್ಧವ್ಯಸ್ತನ್ಮೇ ಬ್ರೂಹಿ ಪಿತಾಮಹ।।

ಯುಧಿಷ್ಠಿರನು ಹೇಳಿದನು: “ಪಿತಾಮಹ! ಕ್ಷತ್ರಿಯ ರಾಜನು ಇನ್ನೊಬ್ಬ ಕ್ಷತ್ರಿಯನೊಡನೆ ಯುದ್ಧಮಾಡಬೇಕಾಗಿ ಬಂದಾಗ ಅವನು ಯುದ್ಧವನ್ನು ಹೇಗೆ ಮಾಡಬೇಕು? ಇದರ ಕುರಿತು ನನಗೆ ಹೇಳು.”

12096007 ಭೀಷ್ಮ ಉವಾಚ।
12096007a ನಾಸಂನದ್ಧೋ ನಾಕವಚೋ ಯೋದ್ಧವ್ಯಃ ಕ್ಷತ್ರಿಯೋ ರಣೇ।
12096007c ಏಕ ಏಕೇನ ವಾಚ್ಯಶ್ಚ ವಿಸೃಜಸ್ವ ಕ್ಷಿಪಾಮಿ ಚ।।

ಭೀಷ್ಮನು ಹೇಳಿದನು: “ಕವಚವನ್ನು ಧರಿಸಿ ಯುದ್ಧಸನ್ನದ್ಧನಾಗಿರದೇ ಇದ್ದ ಕ್ಷತ್ರಿಯನೊಡನೆ ರಣದಲ್ಲಿ ಯುದ್ಧಮಾಡಬಾರದು. ಪ್ರಯೋಗಿಸುತ್ತೇನೆ ಎಂದು ಪರಸ್ಪರರಲ್ಲಿ ಹೇಳಿಕೊಂಡೇ ಆಯುಧಗಳನ್ನು ಪ್ರಯೋಗಿಸಬೇಕು.

12096008a ಸ ಚೇತ್ಸಂನದ್ಧ ಆಗಚ್ಚೇತ್ಸಂನದ್ಧವ್ಯಂ ತತೋ ಭವೇತ್।
12096008c ಸ ಚೇತ್ಸಸೈನ್ಯ ಆಗಚ್ಚೇತ್ಸಸೈನ್ಯಸ್ತಮಥಾಹ್ವಯೇತ್।।

ಅವನೇನಾದರೋ ಸನ್ನದ್ಧನಾಗಿ ಬಂದರೆ ತಾನು ಸನ್ನದ್ಧನಾಗಬೇಕು. ಅವನೇನಾದರೋ ಸೇನೆಯೊಡನೆ ಯುದ್ಧಕ್ಕೆ ಬಂದರೆ ತಾನೂ ಸೇನಾಸಮೇತ ಯುದ್ಧಮಾಡಬೇಕು.

12096009a ಸ ಚೇನ್ನಿಕೃತ್ಯಾ ಯುಧ್ಯೇತ ನಿಕೃತ್ಯಾ ತಂ ಪ್ರಯೋಧಯೇತ್।
12096009c ಅಥ ಚೇದ್ಧರ್ಮತೋ ಯುಧ್ಯೇದ್ಧರ್ಮೇಣೈವ ನಿವಾರಯೇತ್।।

ಅವನೇನಾದರೋ ಮೋಸದಿಂದ ಯುದ್ಧಮಾಡತೊಡಗಿದರೆ ತಾನೂ ಮೋಸದಿಂದಲೇ ಯುದ್ಧಮಾಡಬೇಕು. ಅವನು ಧರ್ಮದ ಯುದ್ಧವನ್ನು ಮಾಡುತ್ತಿದ್ದರೆ ತಾನೂ ಧರ್ಮಯುದ್ಧವನ್ನೇ ಮಾಡಿ ಅವನನ್ನು ಎದುರಿಸಬೇಕು.

12096010a ನಾಶ್ವೇನ ರಥಿನಂ ಯಾಯಾದುದಿಯಾದ್ರಥಿನಂ ರಥೀ।
12096010c ವ್ಯಸನೇ ನ ಪ್ರಹರ್ತವ್ಯಂ ನ ಭೀತಾಯ ಜಿತಾಯ ಚ।।

ಕುದುರೆಯ ಮೇಲೆ ಕುಳಿತು ರಥದಲ್ಲಿರುವನನ್ನು ಆಕ್ರಮಣಿಸಬಾರದು. ರಥದಲ್ಲಿರುವವನನ್ನು ರಥದಲ್ಲಿರುವವನೇ ಎದುರಿಸಿ ಯುದ್ಧಮಾಡಬೇಕು. ಶತ್ರುವು ಸಂಕಟದಲ್ಲಿರುವಾಗ, ಭಯಪಟ್ಟಿರುವಾಗ ಮತ್ತು ಪರಾಜಿತನಾಗಿರುವಾಗ ಅವನ ಮೇಲೆ ಆಯುಧವನ್ನು ಪ್ರಹರಿಸಬಾರದು.

12096011a ನೇಷುರ್ಲಿಪ್ತೋ ನ ಕರ್ಣೀ ಸ್ಯಾದಸತಾಮೇತದಾಯುಧಮ್।
12096011c ಜಯಾರ್ಥಮೇವ ಯೋದ್ಧವ್ಯಂ ನ ಕ್ರುಧ್ಯೇದಜಿಘಾಂಸತಃ।।

ವಿಷಲಿಪ್ತವಾದ ಬಾಣಗಳನ್ನು ಮತ್ತು ಕರ್ಣಿಗಳನ್ನು ಉಪಯೋಗಿಸಬಾರದು. ಇವು ಅಸತ್ಪುರುಷರ ಆಯುಧಗಳು. ಜಯಕ್ಕಾಗಿಯೇ ಯುದ್ಧಮಾಡಬೇಕು. ತನ್ನನ್ನು ಕೊಲ್ಲಲು ಬಂದವನೊಡನೆ ಕ್ರೋಧದಿಂದ ಯುದ್ಧಮಾಡಬಾರದು.

12096012a ಸಾಧೂನಾಂ ತು ಮಿಥೋಭೇದಾತ್ಸಾಧುಶ್ಚೇದ್ವ್ಯಸನೀ ಭವೇತ್।
12096012c ಸವ್ರಣೋ ನಾಭಿಹಂತವ್ಯೋ ನಾನಪತ್ಯಃ ಕಥಂ ಚನ।।

ಇಬ್ಬರು ಸತ್ಪುರುಷರು ಯುದ್ಧಮಾಡುತ್ತಿದ್ದಾಗ ಒಬ್ಬನು ಸಂಕಟಕ್ಕೊಳಗಾದರೆ ಇನ್ನೊಬ್ಬನು ಅವನನ್ನು ಸಂಹರಿಸಬಾರದು. ಬಲಹೀನನನ್ನೂ ಮಕ್ಕಳಿಲ್ಲದವನನ್ನೂ ಯಾವುದೇ ಕಾರಣದಿಂದಲೂ ಸಂಹರಿಸಬಾರದು.

12096013a ಭಗ್ನಶಸ್ತ್ರೋ ವಿಪನ್ನಾಶ್ವಶ್ಚಿನ್ನಜ್ಯೋ ಹತವಾಹನಃ।
12096013c ಚಿಕಿತ್ಸ್ಯಃ ಸ್ಯಾತ್ಸ್ವವಿಷಯೇ ಪ್ರಾಪ್ಯೋ ವಾ ಸ್ವಗೃಹಾನ್ಭವೇತ್।
12096013e ನಿರ್ವ್ರಣೋಽಪಿ ಚ ಮೋಕ್ತವ್ಯ ಏಷ ಧರ್ಮಃ ಸನಾತನಃ।।

ಶಸ್ತ್ರವು ಭಗ್ನವಾಗಿರುವ, ಆಪತ್ತಿನಲ್ಲಿರುವ, ಧನುಸ್ಸಿನ ಶಿಂಜಿನಿಯು ತುಂಡಾಗಿರುವ ಮತ್ತು ವಾಹನಗಳು ಹತವಾಗಿರುವವನ ಮೇಲೆ ಶಸ್ತ್ರಪ್ರಯೋಗ ಮಾಡಬಾರದು. ಗಾಯಗೊಂಡವನಿಗೆ ತನ್ನ ರಾಜ್ಯದಲ್ಲಿಯೇ ಚಿಕಿತ್ಸೆಯನ್ನು ಕೊಡಿಸಬೇಕು ಅಥವಾ ಅವನನ್ನು ಅವನ ಮನೆಗೆ ಕಳುಹಿಸಬೇಕು. ಗಾಯಗಳು ಮಾಸಿದ ನಂತರ ಅವನನ್ನು ಬಿಟ್ಟುಬಿಡಬೇಕು. ಇದೇ ಸನಾತನ ಧರ್ಮವು.

12096014a ತಸ್ಮಾದ್ಧರ್ಮೇಣ ಯೋದ್ಧವ್ಯಂ ಮನುಃ ಸ್ವಾಯಂಭುವೋಽಬ್ರವೀತ್।
12096014c ಸತ್ಸು ನಿತ್ಯಂ ಸತಾಂ ಧರ್ಮಸ್ತಮಾಸ್ಥಾಯ ನ ನಾಶಯೇತ್।।

ಆದುದರಿಂದ ಧರ್ಮದಿಂದಲೇ ಯುದ್ಧಮಾಡಬೇಕೆಂದು ಸ್ವಾಯಂಭುವ ಮನುವು ಹೇಳಿದ್ದಾನೆ. ಸತ್ಪುರುಷರಲ್ಲಿ ಸದ್ಧರ್ಮವೂ ಸದಾ ನೆಲೆಸಿರುತ್ತದೆ. ಧರ್ಮವನ್ನು ಆಶ್ರಯಿಸಬೇಕು. ವಿನಾಶಗೊಳಿಸಬಾರದು.

12096015a ಯೋ ವೈ ಜಯತ್ಯಧರ್ಮೇಣ ಕ್ಷತ್ರಿಯೋ ವರ್ಧಮಾನಕಃ1
12096015c ಆತ್ಮಾನಮಾತ್ಮನಾ ಹಂತಿ ಪಾಪೋ ನಿಕೃತಿಜೀವನಃ।।

ಅಭಿವೃದ್ಧಿಯನ್ನು ಬಯಸುವ ಯಾವ ಕ್ಷತ್ರಿಯನು ಅಧರ್ಮದಿಂದ ಜಯಿಸುತ್ತಾನೋ ಆ ಪಾಪಿ ಮೋಸಗಾರನು ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ.

12096016a ಕರ್ಮ ಚೈತದಸಾಧೂನಾಮಸಾಧುಂ ಸಾಧುನಾ ಜಯೇತ್।
12096016c ಧರ್ಮೇಣ ನಿಧನಂ ಶ್ರೇಯೋ ನ ಜಯಃ ಪಾಪಕರ್ಮಣಾ।।

ಧರ್ಮಯುದ್ಧವನ್ನು ಆರಂಭಿಸಿ ಅಧರ್ಮಪೂರ್ವಕವಾಗಿ ವಿಜಯಗಳಿಸುವುದು ಪಾಪಾತ್ಮರ ಕರ್ಮವು. ಶ್ರೇಷ್ಠ ಪುರುಷರು ದುಷ್ಟರನ್ನೂ ಧರ್ಮಮಾರ್ಗದಿಂದಲೇ ಜಯಿಸಬೇಕು. ಪಾಪಕರ್ಮದಿಂದ ಗಳಿಸಿದ ಜಯಕ್ಕಿಂತಲೂ ಧರ್ಮದಿಂದ ಹೋರಾಡಿ ನಿಧನಹೊಂದುವುದೇ ಶ್ರೇಯಸ್ಕರವು.

12096017a ನಾಧರ್ಮಶ್ಚರಿತೋ ರಾಜನ್ಸದ್ಯಃ ಫಲತಿ ಗೌರಿವ।
12096017c ಮೂಲಾನ್ಯಸ್ಯ ಪ್ರಶಾಖಾಶ್ಚ ದಹನ್ಸಮನುಗಚ್ಚತಿ।।

ರಾಜನ್! ಬಿತ್ತಿದಾಕ್ಷಣ ಕೂಡಲೇ ಭೂಮಿಯು ಹೇಗೆ ಫಲವನ್ನು ಕೊಡುವುದಿಲ್ಲವುದಿಲ್ಲವೋ ಹಾಗೆ ಮಾಡಿದ ಅಧರ್ಮವು ಕೂಡಲೇ ಫಲವನ್ನು ಕೊಡುವುದಿಲ್ಲ. ಆದರೆ ಫಲಕೊಡಲು ಪ್ರಾರಂಭವಾಯಿತೆಂದರೆ ಬೇರುಗಳನ್ನೂ, ಶಾಖೋಪಶಾಖೆಗಳನ್ನೂ ದಹಿಸಿ ಭಸ್ಮಮಾಡಿಬಿಡುತ್ತದೆ.

12096018a ಪಾಪೇನ ಕರ್ಮಣಾ ವಿತ್ತಂ ಲಬ್ಧ್ವಾ ಪಾಪಃ ಪ್ರಹೃಷ್ಯತಿ।
12096018c ಸ ವರ್ಧಮಾನಃ ಸ್ತೇಯೇನ ಪಾಪಃ ಪಾಪೇ ಪ್ರಸಜ್ಜತಿ।।

ಪಾಪಕರ್ಮಗಳಿಂದ ಧನವನ್ನು ಪಡೆದ ಪಾಪಿಯು ಸಂತೋಷಪಡುತ್ತಾನೆ. ಕಳ್ಳತನದಿಂದ ವೃದ್ಧಿಯನ್ನು ಹೊಂದುವ ಅವನು ಪಾಪಕರ್ಮಗಳಲ್ಲಿಯೇ ಮುಳುಗಿ ಹೋಗುತ್ತಾನೆ.

12096019a ನ ಧರ್ಮೋಽಸ್ತೀತಿ ಮನ್ವಾನಃ ಶುಚೀನವಹಸನ್ನಿವ।
12096019c ಅಶ್ರದ್ದಧಾನಭಾವಾಚ್ಚ ವಿನಾಶಮುಪಗಚ್ಚತಿ।।

ಧರ್ಮವೆನ್ನುವುದೇ ಇಲ್ಲ ಎಂದು ತಿಳಿದು ಶುಚಿಯಾಗಿರುವವರ ಅಪಹಾಸ್ಯಮಾಡುತ್ತಾನೆ. ಧರ್ಮದ ಮೇಲೆ ಶ್ರದ್ಧಾಭಾವವಿಲ್ಲದೇ ವಿನಾಶವನ್ನು ಹೊಂದುತ್ತಾನೆ.

12096020a ಸ ಬದ್ಧೋ ವಾರುಣೈಃ ಪಾಶೈರಮರ್ತ್ಯ ಇವ ಮನ್ಯತೇ।
12096020c ಮಹಾದೃತಿರಿವಾಧ್ಮಾತಃ ಸ್ವಕೃತೇನ ವಿವರ್ಧತೇ।।

ವರುಣನ ಪಾಶಗಳಿಂದ ಬದ್ಧನಾಗಿದ್ದರೂ ತಾನು ಅಮರನೆಂದೇ ತಿಳಿದುಕೊಳ್ಳುತ್ತಾನೆ. ಗಾಳಿತುಂಬಿದ ಚರ್ಮದ ಚೀಲವು ಉಬ್ಬಿಕೊಳ್ಳುವಂತೆ ತನ್ನದೇ ಕರ್ಮಗಳಿಂದ ಉಬ್ಬಿಕೊಳ್ಳುತ್ತಾನೆ.

12096021a ತತಃ ಸಮೂಲೋ ಹ್ರಿಯತೇ ನದೀಕೂಲಾದಿವ ದ್ರುಮಃ।
12096021c ಅಥೈನಮಭಿನಿಂದಂತಿ ಭಿನ್ನಂ ಕುಂಭಮಿವಾಶ್ಮನಿ।
12096021e ತಸ್ಮಾದ್ಧರ್ಮೇಣ ವಿಜಯಂ ಕಾಮಂ ಲಿಪ್ಸೇತ ಭೂಮಿಪಃ।।

ಅನಂತರ ಅವನು ನದೀತೀರದಲ್ಲಿರುವ ವೃಕ್ಷವು ಪ್ರವಾಹದ ರಭಸಕ್ಕೆ ಸಿಲುಕಿ ಬುಡಸಹಿತ ಉರುಳಿ ತೇಲಿಹೋಗುವಂತೆ ಪಾಪಿಷ್ಠನು ಸಮೂಲವಾಗಿ ನಾಶಹೊಂದುತ್ತಾನೆ. ಕಲ್ಲಿನ ಮೇಲೆ ಕುಕ್ಕಿದ ಗಡಿಗೆಯಂತೆ ಒಡೆದು ಹೋಗುತ್ತಾನೆ. ಆದುದರಿಂದ ಭೂಮಿಪನು ವಿಜಯವನ್ನೂ ಐಶ್ವರ್ಯವನ್ನೂ ಧರ್ಮದಿಂದಲೇ ಜಯಿಸಿಕೊಳ್ಳಬೇಕು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ವಿಜಿಗೀಷಮಾಣವೃತ್ತೇ ಷಣ್ಣಾವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ವಿಜಿಗೀಷಮಾಣವೃತ್ತ ಎನ್ನುವ ತೊಂಭತ್ತಾರನೇ ಅಧ್ಯಾಯವು.


  1. ನೈವ ದ್ವಿಷಂತೋ ಹೀಯಂತೇ ರಾಜ್ಞೋ ನಿತ್ಯಮನಿಘ್ನತಃ। (ಭಾರತ ದರ್ಶನ). ↩︎