ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 80
ಸಾರ
ಋತ್ವಿಜರ ಲಕ್ಷಣ; ಯಜ್ಞ-ದಕ್ಷಿಣೆಗಳ ಮಹತ್ವ; ತಪಸ್ಸಿನ ಶ್ರೇಷ್ಠತೆ (1-20).
12080001 ಯುಧಿಷ್ಠಿರ ಉವಾಚ।
12080001a ಕ್ವಸಮುತ್ಥಾಃ ಕಥಂಶೀಲಾ ಋತ್ವಿಜಃ ಸ್ಯುಃ ಪಿತಾಮಹ।
12080001c ಕಥಂವಿಧಾಶ್ಚ ರಾಜೇಂದ್ರ ತದ್ಬ್ರೂಹಿ ವದತಾಂ ವರ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಮಾತನಾಡುವವರಲ್ಲಿ ಶ್ರೇಷ್ಠ! ರಾಜೇಂದ್ರ! ಋತ್ವಿಜರ ಉತ್ಪತ್ತಿಯು ಯಾವ ಕಾರಣದಿಂದಾಯಿತು? ಅವರ ಗುಣ-ಸ್ವಭಾವಗಳು ಹೇಗಿರಬೇಕು? ಅವರು ಯಾವ ರೀತಿಯಲ್ಲಿರುತ್ತಾರೆ? ಇದನ್ನು ಹೇಳು.”
12080002 ಭೀಷ್ಮ ಉವಾಚ।
12080002a ಪ್ರತಿಕರ್ಮ ಪುರಾಚಾರ ಋತ್ವಿಜಾಂ ಸ್ಮ ವಿಧೀಯತೇ।
12080002c ಆದೌ ಚಂದಾಂಸಿ ವಿಜ್ಞಾಯ ದ್ವಿಜಾನಾಂ ಶ್ರುತಮೇವ ಚ।।
ಭೀಷ್ಮನು ಹೇಳಿದನು: “ದ್ವಿಜರ ಛಂದಸ್ಸುಗಳ ಮತ್ತು ಶ್ರುತಿಗಳ ಜ್ಞಾನಗಳನ್ನು ತಿಳಿದು ಪ್ರತಿ ಕರ್ಮಗಳಿಗೆ ಉತ್ತಮ ಆಚಾರವುಳ್ಳ ಋತ್ವಿಜರನ್ನು ನಿಯುಕ್ತಗೊಳಿಸಿಕೊಳ್ಳಬೇಕು.
12080003a ಯೇ ತ್ವೇಕರತಯೋ ನಿತ್ಯಂ ಧೀರಾ ನಾಪ್ರಿಯವಾದಿನಃ।
12080003c ಪರಸ್ಪರಸ್ಯ ಸುಹೃದಃ ಸಂಮತಾಃ ಸಮದರ್ಶಿನಃ।।
12080004a ಯೇಷ್ವಾನೃಶಂಸ್ಯಂ ಸತ್ಯಂ ಚಾಪ್ಯಹಿಂಸಾ ತಪ ಆರ್ಜವಮ್।
12080004c ಅದ್ರೋಹೋ ನಾಭಿಮಾನಶ್ಚ ಹ್ರೀಸ್ತಿತಿಕ್ಷಾ ದಮಃ ಶಮಃ।।
12080005a ಹ್ರೀಮಾನ್ಸತ್ಯಧೃತಿರ್ದಾಂತೋ ಭೂತಾನಾಮವಿಹಿಂಸಕಃ।
12080005c ಅಕಾಮದ್ವೇಷಸಂಯುಕ್ತಸ್ತ್ರಿಭಿಃ ಶುಕ್ಲೈಃ ಸಮನ್ವಿತಃ।।
12080006a ಅಹಿಂಸಕೋ ಜ್ಞಾನತೃಪ್ತಃ ಸ ಬ್ರಹ್ಮಾಸನಮರ್ಹತಿ।
12080006c ಏತೇ ಮಹರ್ತ್ವಿಜಸ್ತಾತ ಸರ್ವೇ ಮಾನ್ಯಾ ಯಥಾತಥಮ್।।
ನಿತ್ಯವೂ ಯಜಮಾನನ ಏಕಮಾತ್ರ ಹಿತದಲ್ಲಿಯೇ ನಿರತರಾಗಿರುವ ಧೀರ ಪ್ರಿಯವಾದಿ ಪರಸ್ಪರ ಸೌಹಾರ್ದತೆಯಿಂದಿರುವ ಸಮ್ಮತ ಸಮದರ್ಶಿಗಳು, ಅಕ್ರೂರಿಗಳು, ಸತ್ಯವಂತರು, ಅಹಿಂಸಕರು, ತಪಸ್ವಿಗಳು, ಸರಳಸ್ವಭಾವದವರು, ದ್ರೋಹವನ್ನಿಟ್ಟುಕೊಂಡಿಲ್ಲದವರು, ಅಭಿಮಾನವಿಲ್ಲದವರು, ಮುಜುಗುರ ಸ್ವಾಭಾವವುಳ್ಳವರು, ಸಹನಶೀಲರು, ಜೀವಿಗಳಿಗೆ ಹಿಂಸೆಯನ್ನುಂಟುಮಾಡದವರ್, ಕಾಮ-ದ್ವೇಷಗಳಿಲ್ಲದವರು, ಶಾಸ್ತ್ರಜ್ಞಾನ-ಸದಾಚಾರ-ಸತ್ಕುಲಪ್ರಸೂತಿ ಈ ಮೂರನ್ನೂ ಹೊಂದಿರುವ, ಅಹಿಂಸಕ, ಜ್ಞಾನತೃಪ್ತನು ಬ್ರಹ್ಮತ್ವಕ್ಕೆ ಯೋಗ್ಯನಾಗಿರುತ್ತಾನೆ.”
12080007 ಯುಧಿಷ್ಠಿರ ಉವಾಚ।
12080007a ಯದಿದಂ ವೇದವಚನಂ ದಕ್ಷಿಣಾಸು ವಿಧೀಯತೇ।
12080007c ಇದಂ ದೇಯಮಿದಂ ದೇಯಂ ನ ಕ್ವ ಚಿದ್ವ್ಯವತಿಷ್ಠತೇ।।
ಯುಧಿಷ್ಠಿರನು ಹೇಳಿದನು: “ದಕ್ಷಿಣೆಗಳ ಕುರಿತು “ಇದನ್ನು ಕೊಡಬೇಕು. ಇದನ್ನು ಕೊಡಬೇಕು” ಎಂಬ ವೇದ ವಚನವು ಮುಗಿಯುವುದೇ ಇಲ್ಲ.
12080008a ನೇದಂ ಪ್ರತಿ ಧನಂ ಶಾಸ್ತ್ರಮಾಪದ್ಧರ್ಮಮಶಾಸ್ತ್ರತಃ।
12080008c ಆಜ್ಞಾ ಶಾಸ್ತ್ರಸ್ಯ ಘೋರೇಯಂ ನ ಶಕ್ತಿಂ ಸಮವೇಕ್ಷತೇ।।
ಧನವನ್ನು ದಾನಮಾಡಬೇಕು ಎನ್ನುವ ಈ ವೇದವಚನವು ಆಪದ್ಧರ್ಮಶಾಸ್ತ್ರವನ್ನು ಅನುಸರಿಸುವುದಿಲ್ಲ. ಅಪಾರ ದಕ್ಷಿಣೆಯನ್ನು ಕೊಡುವ ಸಾಮರ್ಥ್ಯವಿದೆಯೋ ಇಲ್ಲವೋ ಎಂದು ಪರಗಣಿಸದೇ ಇರುವ ಈ ಶಾಸ್ತ್ರದ ಆಜ್ಞೆಯು ಘೋರವಾಗಿದೆ.
12080009a ಶ್ರದ್ಧಾಮಾರಭ್ಯ ಯಷ್ಟವ್ಯಮಿತ್ಯೇಷಾ ವೈದಿಕೀ ಶ್ರುತಿಃ।
12080009c ಮಿಥ್ಯೋಪೇತಸ್ಯ ಯಜ್ಞಸ್ಯ ಕಿಮು ಶ್ರದ್ಧಾ ಕರಿಷ್ಯತಿ।।
“ಶ್ರದ್ಧಾವಂತನು ಯಾಗಮಾಡಬೇಕು” ಎನ್ನುವ ವೇದ ಶ್ರುತಿವಾಕ್ಯವೂ ಇದೆ. ಯಥೋಕ್ತ ದಕ್ಷಿಣೆಯನ್ನು ಕೊಡಲು ಆಗದೇ ಇದ್ದರೆ ಯಜ್ಞವು ನಿಷ್ಫಲವಾಗಬಹುದು. ಆಗ ಕೇವಲ ಶ್ರದ್ಧೆಯೇನು ಮಾಡುತ್ತದೆ?”
12080010 ಭೀಷ್ಮ ಉವಾಚ।
12080010a ನ ವೇದಾನಾಂ ಪರಿಭವಾನ್ನ ಶಾಠ್ಯೇನ ನ ಮಾಯಯಾ।
12080010c ಕಶ್ಚಿನ್ಮಹದವಾಪ್ನೋತಿ ಮಾ ತೇ ಭೂದ್ಬುದ್ಧಿರೀದೃಶೀ।।
ಭೀಷ್ಮನು ಹೇಳದನು: “ಉದ್ಧಟತನದಿಂದ ಅಥವಾ ವಂಚನೆಯಿಂದ ವೇದಗಳನ್ನು ನಿಂದಿಸುವುದರಿಂದ ಯಾರೂ ಅಧಿಕನಾಗುವುದಿಲ್ಲ. ಆದುದರಿಂದ ನೀನು ಈ ರೀತಿ ಯೋಚಿಸದಿರು.
12080011a ಯಜ್ಞಾಂಗಂ ದಕ್ಷಿಣಾಸ್ತಾತ ವೇದಾನಾಂ ಪರಿಬೃಂಹಣಮ್।
12080011c ನ ಮಂತ್ರಾ ದಕ್ಷಿಣಾಹೀನಾಸ್ತಾರಯಂತಿ ಕಥಂ ಚನ।।
ಮಗೂ! ಯಜ್ಞಾಂಗವಾದ ದಕ್ಷಿಣೆಗಳು ವದಗಳ ವಿಸ್ತಾರವೇ ಆಗಿದ್ದು ಯಜ್ಞದಲ್ಲಿ ಉಂಟಾಗಬಹುದಾದ ನ್ಯೂನತೆಗಳ ಪರಿಹಾರಕ್ಕೆಂದಿವೆ. ಮಂತ್ರ ಮತ್ತು ದಕ್ಷಿಣೆಗಳಿಂದ ಹೀನವಾದ ಯಜ್ಞವು ಯಜಮಾನನನ್ನು ಉದ್ಧರಿಸುವುದಿಲ್ಲ.
12080012a ಶಕ್ತಿಸ್ತು ಪೂರ್ಣಪಾತ್ರೇಣ ಸಂಮಿತಾನವಮಾ ಭವೇತ್।
12080012c ಅವಶ್ಯಂ ತಾತ ಯಷ್ಟವ್ಯಂ ತ್ರಿಭಿರ್ವರ್ಣೈರ್ಯಥಾವಿಧಿ।।
ಪೂರ್ಣಪಾತ್ರೆ205ಯಿಂದ ಅಸಮ ಸಾಮರ್ಥ್ಯಗಳು ಸಮವಾಗುತ್ತವೆ. ಮಗೂ! ಆದುದರಿಂದ ಮೂರು ವರ್ಣದವರೂ ಯಥಾವಿಧಿಯಾಗಿ ಯಜ್ಞಮಾಡಬೇಕು.
12080013a ಸೋಮೋ ರಾಜಾ ಬ್ರಾಹ್ಮಣಾನಾಮಿತ್ಯೇಷಾ ವೈದಿಕೀ ಶ್ರುತಿಃ।
12080013c ತಂ ಚ ವಿಕ್ರೇತುಮಿಚ್ಚಂತಿ ನ ವೃಥಾ ವೃತ್ತಿರಿಷ್ಯತೇ।
12080013e ತೇನ ಕ್ರೀತೇನ ಧರ್ಮೇಣ ತತೋ ಯಜ್ಞಃ ಪ್ರತಾಯತೇ।।
ಸೋಮನು ಬ್ರಾಹ್ಮಣರ ರಾಜನೆನ್ನುವ ವೇದವಾಕ್ಯವಿದೆ. ಅದನ್ನು ವಿಕ್ರಯಿಸಲು ಬಯಸಿದರೆ ಅದು ವ್ಯರ್ಥ ವೃತ್ತಿಯೇನೂ ಅಲ್ಲ. ಹಾಗೆ ವಿಕ್ರಯಿಸಿದ ಸೋಮದಿಂದ ಯಜ್ಞವು ವೃದ್ಧಿಯಾಗುತ್ತದೆ.
12080014a ಇತ್ಯೇವಂ ಧರ್ಮತಃ ಖ್ಯಾತಮೃಷಿಭಿರ್ಧರ್ಮವಾದಿಭಿಃ।
12080014c ಪುಮಾನ್ಯಜ್ಞಶ್ಚ ಸೋಮಶ್ಚ ನ್ಯಾಯವೃತ್ತೋ ಯಥಾ ಭವೇತ್।
12080014e ಅನ್ಯಾಯವೃತ್ತಃ ಪುರುಷೋ ನ ಪರಸ್ಯ ನ ಚಾತ್ಮನಃ।।
ಹೀಗೆ ಧರ್ಮವಾದೀ ಖ್ಯಾತ ಋಷಿಗಳು ಧರ್ಮದ ಕುರಿತು ಹೇಳಿದ್ದಾರೆ. ಯಜ್ಞದ ಯಜಮಾನ, ಸೋಮ ಮತ್ತು ಯಜ್ಞ ಇವು ನ್ಯಾಯಸಂಪನ್ನವಾಗಿದ್ದರೆ ಯಜ್ಞವೂ ಯಥಾರ್ಥರೂಪದಲ್ಲಿ ಪರ್ಯವಸಾನವಾಗುತ್ತದೆ. ಅನ್ಯಾಯವೃತ್ತಿಯ ಪುರುಷನು ತನಗೂ ಮತ್ತ ಇತರರಿಗೂ ಒಳ್ಳೆಯದನ್ನುಂಟುಮಾಡುವುದಿಲ್ಲ.
12080015a ಶರೀರಂ ಯಜ್ಞಪಾತ್ರಾಣಿ206 ಇತ್ಯೇಷಾ ಶ್ರೂಯತೇ ಶ್ರುತಿಃ।
12080015c ತಾನಿ ಸಮ್ಯಕ್ಪ್ರಣೀತಾನಿ207 ಬ್ರಾಹ್ಮಣಾನಾಂ ಮಹಾತ್ಮನಾಮ್।।
ಶರೀರವೇ ಯಜ್ಞಪಾತ್ರೆಗಳೆಂದು ಶ್ರುತಿಯ ಹೇಳುತ್ತದೆ. ಮಹಾತ್ಮ ಬ್ರಾಹ್ಮಣರಿಗೆ ಅದೇ ಪ್ರಣೀತಾಗ್ನಿಯಾಗುತ್ತದೆ.
12080016a ತಪೋ ಯಜ್ಞಾದಪಿ ಶ್ರೇಷ್ಠಮಿತ್ಯೇಷಾ ಪರಮಾ ಶ್ರುತಿಃ।
12080016c ತತ್ತೇ ತಪಃ ಪ್ರವಕ್ಷ್ಯಾಮಿ ವಿದ್ವಂಸ್ತದಪಿ ಮೇ ಶೃಣು।।
ತಪಸ್ಸು ಯಜ್ಞಕ್ಕಿಂತಲೂ ಶ್ರೇಷ್ಠವಾದುದು ಎಂಬ ಪರಮ ಶ್ರುತಿವಚನವಿದೆ. ವಿದ್ವನ್! ಆ ತಪಸ್ಸು ಎಂಥಹುದು ಎನ್ನುವುದನ್ನು ಹೇಳುತ್ತೇನೆ. ಕೇಳು.
12080017a ಅಹಿಂಸಾ ಸತ್ಯವಚನಮಾನೃಶಂಸ್ಯಂ ದಮೋ ಘೃಣಾ।
12080017c ಏತತ್ತಪೋ ವಿದುರ್ಧೀರಾ ನ ಶರೀರಸ್ಯ ಶೋಷಣಮ್।।
ಕೇವಲ ಶರೀರ ಶೋಷಣೆಯೇ ತಪಸ್ಸಲ್ಲ. ಅಹಿಂಸೆ, ಸತ್ಯವಚನ, ಅಕ್ರೌರ್ಯ, ಜಿತೇಂದ್ರಿಯತೆ ಮತ್ತು ದಯಾಪರತೆ ಇವುಗಳನ್ನು ತಪಸ್ಸೆಂದು ಧೀರರು ಹೇಳುತ್ತಾರೆ.
12080018a ಅಪ್ರಾಮಾಣ್ಯಂ ಚ ವೇದಾನಾಂ ಶಾಸ್ತ್ರಾಣಾಂ ಚಾತಿಲಂಘನಮ್।
12080018c ಅವ್ಯವಸ್ಥಾ ಚ ಸರ್ವತ್ರ ತದ್ವೈ ನಾಶನಮಾತ್ಮನಃ।।
ವೇದಕ್ಕೆ ಪ್ರಮಾಣವಿಲ್ಲವೆಂದು ಹೇಳುವುದು, ಶಾಸ್ತ್ರಗಳನ್ನು ಉಲ್ಲಂಘಿಸಿ ನಡೆಯುವುದು ಮತ್ತು ಎಲ್ಲೆಡೆಗಳಲ್ಲಿಯೂ ಅವ್ಯವಸ್ಥೆಯಿಂದ ನಡೆದುಕೊಳ್ಳುವುದು – ಇವು ಆತ್ಮನಾಶಕವಾದವುಗಳು.
12080019a ನಿಬೋಧ ದಶಹೋತೃಣಾಂ ವಿಧಾನಂ ಪಾರ್ಥ ಯಾದೃಶಮ್।
12080019c ಚಿತ್ತಿಃ ಸ್ರುಕ್ಚಿತ್ತಮಾಜ್ಯಂ ಚ ಪವಿತ್ರಂ ಜ್ಞಾನಮುತ್ತಮಮ್।।
ಪಾರ್ಥ! ಹೋತೃಗಳ ಹತ್ತು ವಿಧಾನಗಳ ಕುರಿತು ಕೇಳು208. ಬುದ್ಧಿಯೇ ಸ್ರುಕ್. ಮನಸ್ಸೇ ಆಜ್ಯ. ಉತ್ತಮ ಜ್ಞಾನವೇ ಯಜ್ಞಸಮಯದಲ್ಲಿ ಧರಿಸುವ ಪವಿತ್ರ.
12080020a ಸರ್ವಂ ಜಿಹ್ಮಂ ಮೃತ್ಯುಪದಮಾರ್ಜವಂ ಬ್ರಹ್ಮಣಃ ಪದಮ್।
12080020c ಏತಾವಾಂಜ್ಞಾನವಿಷಯಃ ಕಿಂ ಪ್ರಲಾಪಃ ಕರಿಷ್ಯತಿ।।
ಎಲ್ಲ ತರಹದ ಕುಟಿಲತೆಗಳೂ ಮೃತ್ಯುಸ್ಥಾನಗಳು. ಸರಳತೆಯು ಬ್ರಹ್ಮಪದವು. ಜ್ಞಾನದ ವಿಷಯವು ಇಷ್ಟುಮಾತ್ರವಾಗಿದೆ. ಉಳಿದುದೆಲ್ಲವೂ ವ್ಯರ್ಥಪ್ರಲಾಪಗಳು. ಅವುಗಳೇನು ಮಾಡುತ್ತವೆ?”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಅಶೀತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಎಂಭತ್ತನೇ ಅಧ್ಯಾಯವು.