ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 42
ಸಾರ
ಶ್ರಾದ್ಧಕ್ರಿಯಾ (1-12).
12042001 ವೈಶಂಪಾಯನ ಉವಾಚ।
12042001a ತತೋ ಯುಧಿಷ್ಠಿರೋ ರಾಜಾ ಜ್ಞಾತೀನಾಂ ಯೇ ಹತಾ ಮೃಧೇ।
12042001c ಶ್ರಾದ್ಧಾನಿ ಕಾರಯಾಮಾಸ ತೇಷಾಂ ಪೃಥಗುದಾರಧೀಃ।।
ವೈಶಂಪಾಯನನು ಹೇಳಿದನು: “ಅನಂತರ ಉದಾರಮತಿ ರಾಜಾ ಯುಧಿಷ್ಠಿರನು ಯುದ್ಧದಲ್ಲಿ ಹತರಾದ ಜ್ಞಾತಿ-ಬಾಂಧವರಿಗೆ ಪ್ರತ್ಯೇಕ-ಪ್ರತ್ಯೇಕವಾಗಿ ಶ್ರಾದ್ಧಗಳನ್ನು ಮಾಡಿಸಿದನು.
12042002a ಧೃತರಾಷ್ಟ್ರೋ ದದೌ ರಾಜಾ ಪುತ್ರಾಣಾಮೌರ್ಧ್ವದೇಹಿಕಮ್।
12042002c ಸರ್ವಕಾಮಗುಣೋಪೇತಮನ್ನಂ ಗಾಶ್ಚ ಧನಾನಿ ಚ।।
12042002e ರತ್ನಾನಿ ಚ ವಿಚಿತ್ರಾಣಿ ಮಹಾರ್ಹಾಣಿ ಮಹಾಯಶಾಃ।।
ಮಹಾಯಶಸ್ವೀ ರಾಜಾ ಧೃತರಾಷ್ಟ್ರನು ತನ್ನ ಮಕ್ಕಳ ದೇಹಾವಸಾನದ ನಂತರದ ಕರ್ಮಗಳನ್ನು ಮಾಡಿ ಸರ್ವಕಾಮಗುಣೋಪೇತ ಅನ್ನ, ಗೋವುಗಳು, ಧನ, ವಿಚಿತ್ರ ಬೆಲೆಬಾಳುವ ರತ್ನಗಳನ್ನಿತ್ತು ನೆರವೇರಿಸಿದನು.
12042003a ಯುಧಿಷ್ಠಿರಸ್ತು ಕರ್ಣಸ್ಯ ದ್ರೋಣಸ್ಯ ಚ ಮಹಾತ್ಮನಃ।
12042003c ಧೃಷ್ಟದ್ಯುಮ್ನಾಭಿಮನ್ಯುಭ್ಯಾಂ ಹೈಡಿಂಬಸ್ಯ ಚ ರಕ್ಷಸಃ।।
12042004a ವಿರಾಟಪ್ರಭೃತೀನಾಂ ಚ ಸುಹೃದಾಮುಪಕಾರಿಣಾಮ್।
12042004c ದ್ರುಪದದ್ರೌಪದೇಯಾನಾಂ ದ್ರೌಪದ್ಯಾ ಸಹಿತೋ ದದೌ।।
12042005a ಬ್ರಾಹ್ಮಣಾನಾಂ ಸಹಸ್ರಾಣಿ ಪೃಥಗೇಕೈಕಮುದ್ದಿಶನ್।
12042005c ಧನೈಶ್ಚ ವಸ್ತ್ರೈ ರತ್ನೈಶ್ಚ ಗೋಭಿಶ್ಚ ಸಮತರ್ಪಯತ್।।
ಯುಧಿಷ್ಠಿರನು ದ್ರೌಪದೀ ಸಮೇತನಾಗಿ ಮಹಾತ್ಮ ದ್ರೋಣ, ಧೃಷ್ಟದ್ಯುಮ್ನ, ಅಭಿಮನ್ಯು, ರಾಕ್ಷಸ ಹೈಡಿಂಬಿ, ವಿರಾಟನೇ ಮೊದಲಾದ ಸುಹೃದಯ-ಉಪಕಾರಿಗಳ, ದ್ರುಪದ-ದ್ರೌಪದೇಯರು ಒಬ್ಬೊಬ್ಬರನ್ನೂ ಉದ್ದೇಶಿಸಿ ಸಹಸ್ರಾರು ಬ್ರಾಹ್ಮಣರಿಗೆ ಧನ-ವಸ್ತ್ರ-ರತ್ನ-ಗೋವುಗಳನ್ನಿತ್ತು ತರ್ಪಣಗಳನ್ನಿತ್ತನು.
12042006a ಯೇ ಚಾನ್ಯೇ ಪೃಥಿವೀಪಾಲಾ ಯೇಷಾಂ ನಾಸ್ತಿ ಸುಹೃಜ್ಜನಃ।
12042006c ಉದ್ದಿಶ್ಯೋದ್ದಿಶ್ಯ ತೇಷಾಂ ಚ ಚಕ್ರೇ ರಾಜೌರ್ಧ್ವದೈಹಿಕಮ್।।
ಸುಹೃಜ್ಜನರು ಯಾರೂ ಇಲ್ಲದಿದ್ದ ಇನ್ನೂ ಅನ್ಯ ಪೃಥಿವೀಪಾಲರನ್ನು ಉದ್ದೇಶಿಸಿ ಅವರ ಔರ್ಧ್ವದೈಹಿಕ ಕರ್ಮಗಳನ್ನೂ ಮಾಡಿದನು.
12042007a ಸಭಾಃ ಪ್ರಪಾಶ್ಚ ವಿವಿಧಾಸ್ತಡಾಗಾನಿ ಚ ಪಾಂಡವಃ।
12042007c ಸುಹೃದಾಂ ಕಾರಯಾಮಾಸ ಸರ್ವೇಷಾಮೌರ್ಧ್ವದೈಹಿಕಮ್।।
ಆ ಪಾಂಡವನು ಸಭೆಗಳನ್ನೂ, ಅರವಟ್ಟಿಗೆಗಳನ್ನೂ, ವಿವಿಧ ತಟಾಕಗಳನ್ನೂ ನಿರ್ಮಿಸಿ ಸರ್ವ ಸುಹೃದಯರ ಶ್ರಾದ್ಧಕರ್ಮಗಳನ್ನು ನೆರವೇರಿಸಿದನು.
12042008a ಸ ತೇಷಾಮನೃಣೋ ಭೂತ್ವಾ ಗತ್ವಾ ಲೋಕೇಷ್ವವಾಚ್ಯತಾಮ್।
12042008c ಕೃತಕೃತ್ಯೋಽಭವದ್ರಾಜಾ ಪ್ರಜಾ ಧರ್ಮೇಣ ಪಾಲಯನ್।।
ಅವರ ಋಣಗಳಿಂದ ಮುಕ್ತನಾಗಿ, ಯಾರ ಆಕ್ಷೇಪ-ನಿಂದನೆಗಳಿಗೂ ಒಳಗಾಗದೇ ಧರ್ಮದಿಂದ ಪ್ರಜೆಗಳನ್ನು ಪಾಲಿಸಿ ರಾಜನು ಕೃತಕೃತ್ಯನಾದನು.
12042009a ಧೃತರಾಷ್ಟ್ರಂ ಯಥಾಪೂರ್ವಂ ಗಾಂಧಾರೀಂ ವಿದುರಂ ತಥಾ।
12042009c ಸರ್ವಾಂಶ್ಚ ಕೌರವಾಮಾತ್ಯಾನ್ಭೃತ್ಯಾಂಶ್ಚ ಸಮಪೂಜಯತ್।।
ಹಿಂದಿನಂತೆ ಧೃತರಾಷ್ಟ್ರ, ಗಾಂಧಾರೀ, ವಿದುರ, ಕೌರವರ ಸರ್ವ ಅಮಾತ್ಯರನ್ನೂ ಸೇವಕರನ್ನೂ ಸಮನಾಗಿ ಪೂಜಿಸಿದನು.
12042010a ಯಾಶ್ಚ ತತ್ರ ಸ್ತ್ರಿಯಃ ಕಾಶ್ಚಿದ್ಧತವೀರಾ ಹತಾತ್ಮಜಾಃ।
12042010c ಸರ್ವಾಸ್ತಾಃ ಕೌರವೋ ರಾಜಾ ಸಂಪೂಜ್ಯಾಪಾಲಯದ್ಘೃಣೀ।।
ವೀರಪತಿಗಳನ್ನು ಮತ್ತು ಮಕ್ಕಳನ್ನು ಕಳೆದುಕೊಂಡಿದ್ದ ಸ್ತ್ರೀಯರೆಲ್ಲರನ್ನೂ ದಯಾಪರ ಕೌರವ ರಾಜನು ಗೌರವಿಸಿ ಪಾಲಿಸಿದನು.
12042011a ದೀನಾಂಧಕೃಪಣಾನಾಂ ಚ ಗೃಹಾಚ್ಚಾದನಭೋಜನೈಃ।
12042011c ಆನೃಶಂಸ್ಯಪರೋ ರಾಜಾ ಚಕಾರಾನುಗ್ರಹಂ ಪ್ರಭುಃ।।
ರಾಜಾ ಪ್ರಭುವು ದೀನರನ್ನೂ, ಅಂಧ-ಕೃಪಣರನ್ನೂ ಮನೆ-ವಸ್ತ್ರ-ಬೋಜನಗಳಿಂದ ಕೃಪೆದೋರಿ ಅನುಗ್ರಹಿಸಿದನು.
12042012a ಸ ವಿಜಿತ್ಯ ಮಹೀಂ ಕೃತ್ಸ್ನಾಮಾನೃಣ್ಯಂ ಪ್ರಾಪ್ಯ ವೈರಿಷು।
12042012c ನಿಃಸಪತ್ನಃ ಸುಖೀ ರಾಜಾ ವಿಜಹಾರ ಯುಧಿಷ್ಠಿರಃ।।
ಅಖಂಡ ಭೂಮಂಡಲವನ್ನೂ ಜಯಿಸಿ, ವೈರಿಗಳ ಋಣಗಳಿಂದಲೂ ಮುಕ್ತನಾಗಿ, ಶತ್ರುರಹಿತನಾದ ರಾಜಾ ಯುಧಿಷ್ಠಿರನು ಸುಖಿಯಾಗಿ ವಿಹರಿಸತೊಡಗಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಶ್ರಾದ್ಧಕ್ರಿಯಾಯಾಂ ದ್ವಿಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಶ್ರಾದ್ಧಕ್ರಿಯೆಗಳು ಎನ್ನುವ ನಲ್ವತ್ತೆರಡನೇ ಅಧ್ಯಾಯವು.