ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಾಂತಿ ಪರ್ವ
ರಾಜಧರ್ಮ ಪರ್ವ
ಅಧ್ಯಾಯ 33
ಸಾರ
ಪ್ರಾಯಶ್ಚಿತ್ತೀಯೋಪಾಖ್ಯಾನ (1-12)
12033001 ಯುಧಿಷ್ಠಿರ ಉವಾಚ।
12033001a ಹತಾಃ ಪುತ್ರಾಶ್ಚ ಪೌತ್ರಾಶ್ಚ ಭ್ರಾತರಃ ಪಿತರಸ್ತಥಾ।
12033001c ಶ್ವಶುರಾ ಗುರವಶ್ಚೈವ ಮಾತುಲಾಃ ಸಪಿತಾಮಹಾಃ।।
12033002a ಕ್ಷತ್ರಿಯಾಶ್ಚ ಮಹಾತ್ಮಾನಃ ಸಂಬಂಧಿಸುಹೃದಸ್ತಥಾ।
12033002c ವಯಸ್ಯಾ ಜ್ಞಾತಯಶ್ಚೈವ ಭ್ರಾತರಶ್ಚ ಪಿತಾಮಹ।।
ಯುಧಿಷ್ಠಿರನು ಹೇಳಿದನು: “ಪಿತಾಮಹ! ಪುತ್ರ-ಪೌತ್ರರು, ಸಹೋದರರು, ತಂದೆಯರು, ಮಾವಂದಿರು, ಗುರುಗಳು, ಸೋದರಮಾವಂದಿರು, ಪಿತಾಮಹರು, ಹಾಗೆಯೇ ಮಹಾತ್ಮ ಕ್ಷತ್ರಿಯ ಸಂಬಂಧಿಗಳು, ಸಮಾನ ವಯಸ್ಕರು, ಬಾಂಧವರು ಮತ್ತು ಭ್ರಾತರರು ಹತರಾದರು!
12033003a ಬಹವಶ್ಚ ಮನುಷ್ಯೇಂದ್ರಾ ನಾನಾದೇಶಸಮಾಗತಾಃ।
12033003c ಘಾತಿತಾ ರಾಜ್ಯಲುಬ್ಧೇನ ಮಯೈಕೇನ ಪಿತಾಮಹ।।
ಪಿತಾಮಹ! ನಾನಾ ದೇಶಗಳಿಂದ ಬಂದು ಸೇರಿದ್ದ ಅನೇಕ ಮನುಷ್ಯೇಂದ್ರರೂ ಕೂಡ ನನ್ನ ಒಬ್ಬನ ರಾಜ್ಯಲೋಭದಿಂದಾಗಿ ಹತರಾದರು!
12033004a ತಾಂಸ್ತಾದೃಶಾನಹಂ ಹತ್ವಾ ಧರ್ಮನಿತ್ಯಾನ್ಮಹೀಕ್ಷಿತಃ।
12033004c ಅಸಕೃತ್ಸೋಮಪಾನ್ವೀರಾನ್ಕಿಂ ಪ್ರಾಪ್ಸ್ಯಾಮಿ ತಪೋಧನ।।
ತಪೋಧನ! ಅಂಥಹ ಧರ್ಮನಿತ್ಯ ರಾಜರನ್ನು, ಸೋಮವನ್ನು ಕುಡಿದಿದ್ದ ವೀರರನ್ನು ಸಂಹರಿಸಿದ ನಾನು ಎಂಥಹ ಫಲವನ್ನು ಅನುಭವಿಸಿಯೇನು?
12033005a ದಃಶ್ಯಾಮನಿಶಮದ್ಯಾಹಂ ಚಿಂತಯಾನಃ ಪುನಃ ಪುನಃ।
12033005c ಹೀನಾಂ ಪಾರ್ಥಿವಸಿಂಹೈಸ್ತೈಃ ಶ್ರೀಮದ್ಭಿಃ ಪೃಥಿವೀಮಿಮಾಮ್।।
ಶ್ರೀಮಂತರಾಗಿದ್ದ ಪಾರ್ಥಿವಸಿಂಹರಿಂದ ಹೀನಗೊಂಡಿರುವ ಈ ಪೃಥ್ವಿಯ ಕುರಿತು ಪುನಃ ಪುನಃ ಚಿಂತಿಸುತ್ತಾ ಸಂಕಟದಿಂದ ಬೆಂದುಹೋಗಿದ್ದೇನೆ.
12033006a ದೃಷ್ಟ್ವಾ ಜ್ಞಾತಿವಧಂ ಘೋರಂ ಹತಾಂಶ್ಚ ಶತಶಃ ಪರಾನ್।
12033006c ಕೋಟಿಶಶ್ಚ ನರಾನನ್ಯಾನ್ಪರಿತಪ್ಯೇ ಪಿತಾಮಹ।।
ಪಿತಾಮಹ! ಘೋರವಾದ ಕುಲವಧೆಯನ್ನೂ, ನೂರಾರು ಶತ್ರುಗಳು ಮತ್ತು ಕೋಟಿ-ಕೋಟಿ ಅನ್ಯರು ಹತರಾದುದನ್ನು ನೋಡಿ ಪರಿತಪಿಸುತ್ತಿದ್ದೇನೆ.
12033007a ಕಾ ನು ತಾಸಾಂ ವರಸ್ತ್ರೀಣಾಮವಸ್ಥಾದ್ಯ ಭವಿಷ್ಯತಿ।
12033007c ವಿಹೀನಾನಾಂ ಸ್ವತನಯೈಃ ಪತಿಭಿರ್ಭ್ರಾತೃಭಿಸ್ತಥಾ।।
ತಮ್ಮ ಪುತ್ರರು ಮತ್ತು ಪತಿಯಂದಿರಿಂದ ವಿಹೀನರಾದ ಈ ವರಸ್ತ್ರೀಯರ ಅವಸ್ಥೆಯು ಏನಾಗುವುದು?
12033008a ಅಸ್ಮಾನಂತಕರಾನ್ಘೋರಾನ್ಪಾಂಡವಾನ್ವೃಷ್ಣಿಸಂಹಿತಾನ್।
12033008c ಆಕ್ರೋಶಂತ್ಯಃ ಕೃಶಾ ದೀನಾ ನಿಪತಂತ್ಯಶ್ಚ ಭೂತಲೇ।।
ಅವರ ಘೋರ ಅಂತ್ಯಕ್ಕೆ ಕಾರಣರಾದ ನಮ್ಮನ್ನು - ಪಾಂಡವರು ಮತ್ತು ವೃಷ್ಣಿಗಳನ್ನು - ಒಟ್ಟಿಗೇ ಸೇರಿಸಿ ಶಪಿಸುತ್ತಾ ಅವರು ಕೃಶ-ದೀನರಾಗಿ ಭೂಮಿಯ ಮೇಲೆ ಬೀಳುತ್ತಿದ್ದಾರೆ.
12033009a ಅಪಶ್ಯಂತ್ಯಃ ಪಿತೃನ್ ಭ್ರಾತೃನ್ಪತೀನ್ಪುತ್ರಾಂಶ್ಚ ಯೋಷಿತಃ।
12033009c ತ್ಯಕ್ತ್ವಾ ಪ್ರಾಣಾನ್ಪ್ರಿಯಾನ್ಸರ್ವಾ ಗಮಿಷ್ಯಂತಿ ಯಮಕ್ಷಯಮ್।।
12033010a ವತ್ಸಲತ್ವಾದ್ದ್ವಿಜಶ್ರೇಷ್ಠ ತತ್ರ ಮೇ ನಾಸ್ತಿ ಸಂಶಯಃ।
12033010c ವ್ಯಕ್ತಂ ಸೌಕ್ಷ್ಮ್ಯಾಚ್ಚ ಧರ್ಮಸ್ಯ ಪ್ರಾಪ್ಸ್ಯಾಮಃ ಸ್ತ್ರೀವಧಂ ವಯಮ್।।
ದ್ವಿಜಶ್ರೇಷ್ಠ! ತಂದೆಯರು, ಸಹೋದರರು, ಪತಿಗಳು, ಮತ್ತು ಪುತ್ರರನ್ನು ಕಾಣದೇ ಈ ಎಲ್ಲ ಸ್ತ್ರೀಯರೂ ಅವರ ಮೇಲಿನ ವಾತ್ಸಲ್ಯದಿಂದ ತಮ್ಮ ಪ್ರಿಯ ಪ್ರಾಣಗಳನ್ನೇ ತೊರೆದು ಯಮಕ್ಷಯಕ್ಕೆ ಹೋಗುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ! ಧರ್ಮದ ಸೂಕ್ಷ್ಮತೆಯನ್ನು ನೋಡಿದರೆ ಈ ಸ್ತ್ರೀವಧೆಯ ಪಾಪವನ್ನೂ ನಾವು ಪಡೆಯುತ್ತೇವೆ ಎನ್ನುವುದು ವ್ಯಕ್ತವಾಗುತ್ತಿದೆ.
12033011a ತೇ ವಯಂ ಸುಹೃದೋ ಹತ್ವಾ ಕೃತ್ವಾ ಪಾಪಮನಂತಕಮ್।
12033011c ನರಕೇ ನಿಪತಿಷ್ಯಾಮೋ ಹ್ಯಧಃಶಿರಸ ಏವ ಚ।।
ಸುಹೃದಯರ ಈ ವಧೆಯನ್ನು ಮಾಡಿ ನಾವು ಕೊನೆಯಿಲ್ಲದ ಪಾಪವನ್ನು ಮಾಡಿದ್ದೇವೆ. ಇದಕ್ಕಾಗಿ ನಾವು ನರಕದಲ್ಲಿ ತಲೆಕೆಳಗಾಗಿ ಬಿದ್ದಿರುತ್ತೇವೆ!
12033012a ಶರೀರಾಣಿ ವಿಮೋಕ್ಷ್ಯಾಮಸ್ತಪಸೋಗ್ರೇಣ ಸತ್ತಮ।
12033012c ಆಶ್ರಮಾಂಶ್ಚ ವಿಶೇಷಾಂಸ್ತ್ವಂ ಮಮಾಚಕ್ಷ್ವ ಪಿತಾಮಹ।।
ಪಿತಾಮಹ! ಸತ್ತಮ! ಆದುದರಿಂದ ಉಗ್ರ ತಪಸ್ಸಿನಿಂದ ಈ ಶರೀರಗಳನ್ನು ತೊರೆಯುತ್ತೇವೆ. ಈ ಆಶ್ರಮಗಳ ವಿಶೇಷಗುಣಗಳನ್ನು ತಿಳಿಸು!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತೀಯೋಪಾಖ್ಯಾನೇ ತ್ರಯೋತ್ರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತೀಯೋಪಾಖ್ಯಾನ ಎನ್ನುವ ಮೂವತ್ಮೂರನೇ ಅಧ್ಯಾಯವು.