006 ಧೃತರಾಷ್ಟ್ರಶೋಕಕರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಸ್ತ್ರೀ ಪರ್ವ

ವಿಶೋಕ ಪರ್ವ

ಅಧ್ಯಾಯ 6

ಸಾರ

ವಿದುರನು ಸಂಸಾರದ ಅರ್ಥವನ್ನು ತಿಳಿಸುತ್ತಾ ಧೃತರಾಷ್ಟ್ರನನ್ನು ಸಂತವಿಸಿದುದು (1-17).

11006001 ಧೃತರಾಷ್ಟ್ರ ಉವಾಚ।
11006001a ಅಹೋ ಖಲು ಮಹದ್ದುಃಖಂ ಕೃಚ್ಚ್ರವಾಸಂ ವಸತ್ಯಸೌ।
11006001c ಕಥಂ ತಸ್ಯ ರತಿಸ್ತತ್ರ ತುಷ್ಟಿರ್ವಾ ವದತಾಂ ವರ।।

ಧೃತರಾಷ್ಟ್ರನು ಹೇಳಿದನು: “ಶ್ರೇಷ್ಠ ಮಾತುಗಾರನೇ! ಅಯ್ಯೋ! ಅಂಥಹ ಮಹಾದುಃಖ ಮತ್ತು ಕಷ್ಟದಲ್ಲಿ ಬದುಕಿದ್ದ ಅವನು ಹೇಗೆ ತಾನೇ ಅಲ್ಲಿ ಆನಂದಿಸುತ್ತಿದ್ದನು ಅಥವಾ ತೃಪ್ತಿಹೊಂದುತ್ತಿದ್ದನು?

11006002a ಸ ದೇಶಃ ಕ್ವ ನು ಯತ್ರಾಸೌ ವಸತೇ ಧರ್ಮಸಂಕಟೇ।
11006002c ಕಥಂ ವಾ ಸ ವಿಮುಚ್ಯೇತ ನರಸ್ತಸ್ಮಾನ್ಮಹಾಭಯಾತ್।।

ಅವನು ಧರ್ಮಸಂಕಟದಲ್ಲಿ ಬದುಕಿದ್ದ ಅದು ಯಾವ ಪ್ರದೇಶವಾಗಿತ್ತು? ಅಂಥಹ ಮಹಾಭಯಗಳಿಂದ ಮನುಷ್ಯನು ಹೇಗೆ ಬಿಡುಗಡೆಹೊಂದಬಲ್ಲನು?

11006003a ಏತನ್ಮೇ ಸರ್ವಮಾಚಕ್ಷ್ವ ಸಾಧು ಚೇಷ್ಟಾಮಹೇ ತಥಾ।
11006003c ಕೃಪಾ ಮೇ ಮಹತೀ ಜಾತಾ ತಸ್ಯಾಭ್ಯುದ್ಧರಣೇನ ಹಿ।।

ಏನು ಮಾಡಿದರೆ ಅವನಿಗೆ ಒಳ್ಳೆಯದಾಗುತ್ತದೆ? ಇವೆಲ್ಲವನ್ನೂ ನನಗೆ ಹೇಳು. ಅವನ ಮೇಲೆ ನನಗೆ ತುಂಬಾ ಮರುಕವುಂಟಾಗುತ್ತಿದೆ. ಅವನ ಉದ್ಧಾರಕ್ಕೆ ಪ್ರಯತ್ನಿಸಬೇಕೆನಿಸುತ್ತದೆ!”

11006004 ವಿದುರ ಉವಾಚ।
11006004a ಉಪಮಾನಮಿದಂ ರಾಜನ್ಮೋಕ್ಷವಿದ್ಭಿರುದಾಹೃತಮ್।
11006004c ಸುಗತಿಂ ವಿಂದತೇ ಯೇನ ಪರಲೋಕೇಷು ಮಾನವಃ।।

ವಿದುರನು ಹೇಳಿದನು: “ರಾಜನ್! ಮೋಕ್ಷವನ್ನು ತಿಳಿದಿರುವವರು ಸಂಸಾರವನ್ನು ಉದಾಹರಿಸಿ ಕೊಟ್ಟಿರುವ ಉಪಮಾನವಿದು. ಇದನ್ನು ತಿಳಿದುಕೊಂಡ ಮನುಷ್ಯನು ಪರಲೋಕದಲ್ಲಿ ಉತ್ತಮ ಗತಿಯನ್ನು ಹೊಂದುತ್ತಾನೆ.

11006005a ಯತ್ತದುಚ್ಯತಿ ಕಾಂತಾರಂ ಮಹತ್ಸಂಸಾರ ಏವ ಸಃ।
11006005c ವನಂ ದುರ್ಗಂ ಹಿ ಯತ್ತ್ವೇತತ್ಸಂಸಾರಗಹನಂ ಹಿ ತತ್।।

ಸಂಸಾರವನ್ನೇ ಇಲ್ಲಿ ಮಹಾವನವೆಂದು ಹೇಳಿದ್ದಾರೆ. ಆ ವನವು ಎಷ್ಟು ದುರ್ಗಮವಾಗಿತ್ತೋ ಸಂಸಾರವೂ ಅಷ್ಟೇ ಗಹನವಾದುದು ಎಂದರ್ಥ.

11006006a ಯೇ ಚ ತೇ ಕಥಿತಾ ವ್ಯಾಲಾ ವ್ಯಾಧಯಸ್ತೇ ಪ್ರಕೀರ್ತಿತಾಃ।
11006006c ಯಾ ಸಾ ನಾರೀ ಬೃಹತ್ಕಾಯಾ ಅಧಿತಿಷ್ಠತಿ ತತ್ರ ವೈ।।
11006006e ತಾಮಾಹುಸ್ತು ಜರಾಂ ಪ್ರಾಜ್ಞಾ ವರ್ಣರೂಪವಿನಾಶಿನೀಮ್।।

ಅಲ್ಲಿ ಹೇಳಿರುವ ಕ್ರೂರ ಮೃಗಗಳೇ ವ್ಯಾಧಿಗಳು. ಬಲೆಯನ್ನು ಬೀಸುತ್ತಿದ್ದ ಆ ದೊಡ್ಡದೇಹದ ನಾರಿಯನ್ನು ಪ್ರಾಜ್ಞರು ವರ್ಣ-ರೂಪಗಳನ್ನು ನಾಶಗೊಳಿಸುವ ಮುಪ್ಪು ಎಂದು ಕರೆಯುತ್ತಾರೆ.

11006007a ಯಸ್ತತ್ರ ಕೂಪೋ ನೃಪತೇ ಸ ತು ದೇಹಃ ಶರೀರಿಣಾಮ್।
11006007c ಯಸ್ತತ್ರ ವಸತೇಽಧಸ್ತಾನ್ಮಹಾಹಿಃ ಕಾಲ ಏವ ಸಃ।
11006007e ಅಂತಕಃ ಸರ್ವಭೂತಾನಾಂ ದೇಹಿನಾಂ ಸರ್ವಹಾರ್ಯಸೌ।।

ನೃಪತೇ! ಅಲ್ಲಿದ್ದ ಬಾವಿಯೇ ಶರೀರಿಗಳ ದೇಹ. ಅದರೊಳಗೆ ವಾಸಿಸುತ್ತಿದ್ದ ಸರ್ಪವೇ ಇರುವ ಎಲ್ಲವುಗಳ ದೇಹಗಳಲ್ಲಿ ವಾಸಿಸುತ್ತಿರುವ, ಸರ್ವವನ್ನೂ ಅಪಹರಿಸುವ, ಅಂತಕ ಮಹಾಕಾಲ.

11006008a ಕೂಪಮಧ್ಯೇ ಚ ಯಾ ಜಾತಾ ವಲ್ಲೀ ಯತ್ರ ಸ ಮಾನವಃ।
11006008c ಪ್ರತಾನೇ ಲಂಬತೇ ಸಾ ತು ಜೀವಿತಾಶಾ ಶರೀರಿಣಾಮ್।।

ಆ ಬಾವಿಯ ಮಧ್ಯದಲ್ಲಿ ಬೆಳೆದಿದ್ದ ಮತ್ತು ಆ ಮನುಷ್ಯನು ಸಿಲುಕಿ ನೇತಾಡುತ್ತಿದ್ದ ಬಳ್ಳಿಯೇ ಶರೀರಿಗಳ ಜೀವದ ಆಶೆ.

11006009a ಸ ಯಸ್ತು ಕೂಪವೀನಾಹೇ ತಂ ವೃಕ್ಷಂ ಪರಿಸರ್ಪತಿ।
11006009c ಷಡ್ವಕ್ತ್ರಃ ಕುಂಜರೋ ರಾಜನ್ಸ ತು ಸಂವತ್ಸರಃ ಸ್ಮೃತಃ।
11006009e ಮುಖಾನಿ ಋತವೋ ಮಾಸಾಃ ಪಾದಾ ದ್ವಾದಶ ಕೀರ್ತಿತಾಃ।।

ರಾಜನ್! ಬಾವಿಯ ಸಮೀಪದಲ್ಲಿ ಒಂದು ಮರದ ಕಡೆ ಹೋಗುತ್ತಿದ್ದ ಆನೆಯೇ ಸಂವತ್ಸರವು. ಅದರ ಆರು ಮುಖಗಳು ಋತುಗಳು ಮತ್ತು ಪಾದಗಳೇ ಹನ್ನೆರಡು ಮಾಸಗಳು.

11006010a ಯೇ ತು ವೃಕ್ಷಂ ನಿಕೃಂತಂತಿ ಮೂಷಕಾಃ ಸತತೋತ್ಥಿತಾಃ।
11006010c ರಾತ್ರ್ಯಹಾನಿ ತು ತಾನ್ಯಾಹುರ್ಭೂತಾನಾಂ ಪರಿಚಿಂತಕಾಃ।

ಎಚ್ಚರದಿಂದಿದ್ದು ಆ ಮರವನ್ನು ಕಡಿಯುತ್ತಿದ್ದ ಬಿಳಿ ಮತ್ತು ಕಪ್ಪುಬಣ್ಣದ ಇಲಿಗಳು ಹಗಲು-ರಾತ್ರಿಗಳೆಂದು ಹೇಳುತ್ತಾರೆ.

11006010e ಯೇ ತೇ ಮಧುಕರಾಸ್ತತ್ರ ಕಾಮಾಸ್ತೇ ಪರಿಕೀರ್ತಿತಾಃ।।
11006011a ಯಾಸ್ತು ತಾ ಬಹುಶೋ ಧಾರಾಃ ಸ್ರವಂತಿ ಮಧುನಿಸ್ರವಮ್।
11006011c ತಾಂಸ್ತು ಕಾಮರಸಾನ್ವಿದ್ಯಾದ್ಯತ್ರ ಮಜ್ಜಂತಿ ಮಾನವಾಃ।।

ಅಲ್ಲಿದ್ದ ಜೇನುಹುಳುಗಳೇ ಕಾಮಗಳು. ಅನೇಕ ಧಾರೆಗಳಾಗಿ ಸುರಿಯುತ್ತಿದ್ದ ಜೇನುತುಪ್ಪವೇ ಮಾನವರನ್ನು ಮುಳುಗಿಸುವ ಕಾಮರಸಗಳೆಂದು ತಿಳಿಯಬೇಕು.

11006012a ಏವಂ ಸಂಸಾರಚಕ್ರಸ್ಯ ಪರಿವೃತ್ತಿಂ ಸ್ಮ ಯೇ ವಿದುಃ।
11006012c ತೇ ವೈ ಸಂಸಾರಚಕ್ರಸ್ಯ ಪಾಶಾಂಶ್ಚಿಂದಂತಿ ವೈ ಬುಧಾಃ।।

ಈ ರೀತಿ ಸಂಸಾರಚಕ್ರವು ತಿರುಗುತ್ತಿರುತ್ತದೆಯೆಂದು ತಿಳಿದವರು ಹೇಳುತ್ತಾರೆ. ತಿಳಿದವರು ಅದೇ ಸಂಸಾರಚಕ್ರದ ಪಾಶಗಳನ್ನು ಕಡಿದುಹಾಕುತ್ತಾರೆ.”

ಸಮಾಪ್ತಿ

ಇತಿ ಶ್ರೀಮಹಾಭಾರತೇ ಸ್ತ್ರೀಪರ್ವಣಿ ವಿಶೋಕಪರ್ವಣಿ ಧೃತರಾಷ್ಟ್ರಶೋಕಕರಣೇ ಷಷ್ಟೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಸ್ತ್ರೀಪರ್ವದಲ್ಲಿ ವಿಶೋಕಪರ್ವದಲ್ಲಿ ಧೃತರಾಷ್ಟ್ರಶೋಕಕರಣ ಎನ್ನುವ ಆರನೇ ಅಧ್ಯಾಯವು.