ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಸಾರಸ್ವತ ಪರ್ವ
ಅಧ್ಯಾಯ 45
ಸಾರ
ಮಾತೃಗಣಗಳ ವರ್ಣನೆ (1-40). ಸ್ಕಂದನಿಂದ ತಾರಕಾಸುರ-ಮಹಿಷಾಸುರರ ಸಂಹಾರ (41-95).
09045001 ವೈಶಂಪಾಯನ ಉವಾಚ 09045001a ಶೃಣು ಮಾತೃಗಣಾನ್ರಾಜನ್ಕುಮಾರಾನುಚರಾನಿಮಾನ್।
09045001c ಕೀರ್ತ್ಯಮಾನಾನ್ಮಯಾ ವೀರ ಸಪತ್ನಗಣಸೂದನಾನ್।।
ವೈಶಂಪಾಯನನು ಹೇಳಿದನು: “ರಾಜನ್! ವೀರ! ಕುಮಾರನ ಅನುಚರರಾದ ಮತ್ತು ರಾಕ್ಷಸಗಣಗಳನ್ನು ಸಂಹರಿಸಿದ ಮಾತೃಗಣಗಳ ಕುರಿತು ಕೇಳು.
09045002a ಯಶಸ್ವಿನೀನಾಂ ಮಾತೄಣಾಂ ಶೃಣು ನಾಮಾನಿ ಭಾರತ।
09045002c ಯಾಭಿರ್ವ್ಯಾಪ್ತಾಸ್ತ್ರಯೋ ಲೋಕಾಃ ಕಲ್ಯಾಣೀಭಿಶ್ಚರಾಚರಾಃ।।
ಭಾರತ! ಯಾರಿಂದ ಈ ಚರಾಚರ ಲೋಕಗಳು ವ್ಯಾಪ್ತವಾಗಿಯೋ ಆ ಯಶಸ್ವಿನೀ-ಕಲ್ಯಾಣೀ ಮಾತೃಗಳ ಹೆಸರುಗಳನ್ನು ಕೇಳು.
09045003a ಪ್ರಭಾವತೀ ವಿಶಾಲಾಕ್ಷೀ ಪಲಿತಾ ಗೋನಸೀ ತಥಾ।
09045003c ಶ್ರೀಮತೀ ಬಹುಲಾ ಚೈವ ತಥೈವ ಬಹುಪುತ್ರಿಕಾ।।
09045004a ಅಪ್ಸುಜಾತಾ ಚ ಗೋಪಾಲೀ ಬೃಹದಂಬಾಲಿಕಾ ತಥಾ।
09045004c ಜಯಾವತೀ ಮಾಲತಿಕಾ ಧ್ರುವರತ್ನಾ ಭಯಂಕರೀ।।
09045005a ವಸುದಾಮಾ ಸುದಾಮಾ ಚ ವಿಶೋಕಾ ನಂದಿನೀ ತಥಾ।
09045005c ಏಕಚೂಡಾ ಮಹಾಚೂಡಾ ಚಕ್ರನೇಮಿಶ್ಚ ಭಾರತ।।
09045006a ಉತ್ತೇಜನೀ ಜಯತ್ಸೇನಾ ಕಮಲಾಕ್ಷ್ಯಥ ಶೋಭನಾ।
09045006c ಶತ್ರುಂಜಯಾ ತಥಾ ಚೈವ ಕ್ರೋಧನಾ ಶಲಭೀ ಖರೀ।।
09045007a ಮಾಧವೀ ಶುಭವಕ್ತ್ರಾ ಚ ತೀರ್ಥನೇಮಿಶ್ಚ ಭಾರತ।
09045007c ಗೀತಪ್ರಿಯಾ ಚ ಕಲ್ಯಾಣೀ ಕದ್ರುಲಾ ಚಾಮಿತಾಶನಾ।।
09045008a ಮೇಘಸ್ವನಾ ಭೋಗವತೀ ಸುಭ್ರೂಶ್ಚ ಕನಕಾವತೀ।
09045008c ಅಲಾತಾಕ್ಷೀ ವೀರ್ಯವತೀ ವಿದ್ಯುಜ್ಜಿಹ್ವಾ ಚ ಭಾರತ।।
09045009a ಪದ್ಮಾವತೀ ಸುನಕ್ಷತ್ರಾ ಕಂದರಾ ಬಹುಯೋಜನಾ।
09045009c ಸಂತಾನಿಕಾ ಚ ಕೌರವ್ಯ ಕಮಲಾ ಚ ಮಹಾಬಲಾ।।
09045010a ಸುದಾಮಾ ಬಹುದಾಮಾ ಚ ಸುಪ್ರಭಾ ಚ ಯಶಸ್ವಿನೀ।
09045010c ನೃತ್ಯಪ್ರಿಯಾ ಚ ರಾಜೇಂದ್ರ ಶತೋಲೂಖಲಮೇಖಲಾ।।
09045011a ಶತಘಂಟಾ ಶತಾನಂದಾ ಭಗನಂದಾ ಚ ಭಾಮಿನೀ।
09045011c ವಪುಷ್ಮತೀ ಚಂದ್ರಶೀತಾ ಭದ್ರಕಾಲೀ ಚ ಭಾರತ।।
09045012a ಸಂಕಾರಿಕಾ ನಿಷ್ಕುಟಿಕಾ ಭ್ರಮಾ ಚತ್ವರವಾಸಿನೀ।
09045012c ಸುಮಂಗಲಾ ಸ್ವಸ್ತಿಮತೀ ವೃದ್ಧಿಕಾಮಾ ಜಯಪ್ರಿಯಾ।।
09045013a ಧನದಾ ಸುಪ್ರಸಾದಾ ಚ ಭವದಾ ಚ ಜಲೇಶ್ವರೀ।
09045013c ಏಡೀ ಭೇಡೀ ಸಮೇಡೀ ಚ ವೇತಾಲಜನನೀ ತಥಾ।।
09045013e ಕಂಡೂತಿಃ ಕಾಲಿಕಾ ಚೈವ ದೇವಮಿತ್ರಾ ಚ ಭಾರತ 09045014a ಲಂಬಸೀ ಕೇತಕೀ ಚೈವ ಚಿತ್ರಸೇನಾ ತಥಾ ಬಲಾ।
09045014c ಕುಕ್ಕುಟಿಕಾ ಶಂಖನಿಕಾ ತಥಾ ಜರ್ಜರಿಕಾ ನೃಪ।।
09045015a ಕುಂಡಾರಿಕಾ ಕೋಕಲಿಕಾ ಕಂಡರಾ ಚ ಶತೋದರೀ।
09045015c ಉತ್ಕ್ರಾಥಿನೀ ಜರೇಣಾ ಚ ಮಹಾವೇಗಾ ಚ ಕಂಕಣಾ।।
09045016a ಮನೋಜವಾ ಕಂಟಕಿನೀ ಪ್ರಘಸಾ ಪೂತನಾ ತಥಾ।
09045016c ಖಶಯಾ ಚುರ್ವ್ಯುಟಿರ್ವಾಮಾ ಕ್ರೋಶನಾಥ ತಡಿತ್ಪ್ರಭಾ।।
09045017a ಮಂಡೋದರೀ ಚ ತುಂಡಾ ಚ ಕೋಟರಾ ಮೇಘವಾಸಿನೀ।
09045017c ಸುಭಗಾ ಲಂಬಿನೀ ಲಂಬಾ ವಸುಚೂಡಾ ವಿಕತ್ಥನೀ।।
09045018a ಊರ್ಧ್ವವೇಣೀಧರಾ ಚೈವ ಪಿಂಗಾಕ್ಷೀ ಲೋಹಮೇಖಲಾ।
09045018c ಪೃಥುವಕ್ತ್ರಾ ಮಧುರಿಕಾ ಮಧುಕುಂಭಾ ತಥೈವ ಚ।।
09045019a ಪಕ್ಷಾಲಿಕಾ ಮಂಥನಿಕಾ ಜರಾಯುರ್ಜರ್ಜರಾನನಾ।
09045019c ಖ್ಯಾತಾ ದಹದಹಾ ಚೈವ ತಥಾ ಧಮಧಮಾ ನೃಪ।।
09045020a ಖಂಡಖಂಡಾ ಚ ರಾಜೇಂದ್ರ ಪೂಷಣಾ ಮಣಿಕುಂಡಲಾ।
09045020c ಅಮೋಚಾ ಚೈವ ಕೌರವ್ಯ ತಥಾ ಲಂಬಪಯೋಧರಾ।।
09045021a ವೇಣುವೀಣಾಧರಾ ಚೈವ ಪಿಂಗಾಕ್ಷೀ ಲೋಹಮೇಖಲಾ।
09045021c ಶಶೋಲೂಕಮುಖೀ ಕೃಷ್ಣಾ ಖರಜಂಘಾ ಮಹಾಜವಾ।।
09045022a ಶಿಶುಮಾರಮುಖೀ ಶ್ವೇತಾ ಲೋಹಿತಾಕ್ಷೀ ವಿಭೀಷಣಾ।
09045022c ಜಟಾಲಿಕಾ ಕಾಮಚರೀ ದೀರ್ಘಜಿಹ್ವಾ ಬಲೋತ್ಕಟಾ।।
09045023a ಕಾಲೇಡಿಕಾ ವಾಮನಿಕಾ ಮುಕುಟಾ ಚೈವ ಭಾರತ।
09045023c ಲೋಹಿತಾಕ್ಷೀ ಮಹಾಕಾಯಾ ಹರಿಪಿಂಡೀ ಚ ಭೂಮಿಪ।।
09045024a ಏಕಾಕ್ಷರಾ ಸುಕುಸುಮಾ ಕೃಷ್ಣಕರ್ಣೀ ಚ ಭಾರತ।
09045024c ಕ್ಷುರಕರ್ಣೀ ಚತುಷ್ಕರ್ಣೀ ಕರ್ಣಪ್ರಾವರಣಾ ತಥಾ।।
09045025a ಚತುಷ್ಪಥನಿಕೇತಾ ಚ ಗೋಕರ್ಣೀ ಮಹಿಷಾನನಾ।
09045025c ಖರಕರ್ಣೀ ಮಹಾಕರ್ಣೀ ಭೇರೀಸ್ವನಮಹಾಸ್ವನಾ।।
09045026a ಶಂಖಕುಂಭಸ್ವನಾ ಚೈವ ಭಂಗದಾ ಚ ಮಹಾಬಲಾ।
09045026c ಗಣಾ ಚ ಸುಗಣಾ ಚೈವ ತಥಾಭೀತ್ಯಥ ಕಾಮದಾ।।
09045027a ಚತುಷ್ಪಥರತಾ ಚೈವ ಭೂತಿತೀರ್ಥಾನ್ಯಗೋಚರಾ।
09045027c ಪಶುದಾ ವಿತ್ತದಾ ಚೈವ ಸುಖದಾ ಚ ಮಹಾಯಶಾಃ।।
09045027e ಪಯೋದಾ ಗೋಮಹಿಷದಾ ಸುವಿಷಾಣಾ ಚ ಭಾರತ 09045028a ಪ್ರತಿಷ್ಠಾ ಸುಪ್ರತಿಷ್ಠಾ ಚ ರೋಚಮಾನಾ ಸುರೋಚನಾ।
09045028c ಗೋಕರ್ಣೀ ಚ ಸುಕರ್ಣೀ ಚ ಸಸಿರಾ ಸ್ಥೇರಿಕಾ ತಥಾ।।
09045028e ಏಕಚಕ್ರಾ ಮೇಘರವಾ ಮೇಘಮಾಲಾ ವಿರೋಚನಾ
ಪ್ರಭಾವತೀ, ವಿಶಾಲಾಕ್ಷೀ, ಪಾಲಿತಾ, ಗೋನಸೀ, ಶ್ರೀಮತೀ, ಬಹುಲಾ, ಬಹುಪುತ್ರಿಕಾ, ಅಪ್ಸುಜಾತಾ, ಗೋಪಾಲೀ, ಬೃಹದಂಬಾಲಿಕಾ, ಜಯಾವತೀ, ಮಾಲತಿಕಾ, ಧ್ರುವರತ್ನಾ, ಭಯಂಕರೀ, ವಸುದಾಮಾ, ಸುದಾಮಾ, ವಿಶೋಕಾ, ನಂದಿನೀ, ಏಕಚೂಡಾ, ಮಹಾಚೂಡಾ, ಚಕ್ರನೇಮಿ, ಉತ್ತೇಜನೀ, ಜಯತ್ಸೇನಾ, ಕಮಲಾಕ್ಷೀ, ಶೋಭನಾ, ಶತ್ರುಂಜಯಾ, ಕ್ರೋಧನಾ, ಶಲಭೀ, ಖರೀ, ಮಾಧವೀ, ಶುಭವಕ್ತ್ರಾ, ತೀರ್ಥನೇಮಿ, ಗೀತಪ್ರಿಯಾ, ಕಲ್ಯಾಣೀ, ಕದ್ರುಲಾ, ಅಮಿತಾಶನಾ, ಮೇಘಸ್ವನಾ, ಭೋಗವತೀ, ಸುಭ್ರೂ, ಕನಕಾವತೀ, ಅಲಾತಾಕ್ಷೀ, ವೀರ್ಯವತೀ, ವಿದ್ಯುಜ್ಜಿಹ್ವಾ, ಪದ್ಮಾವತೀ, ಸುನಕ್ಷತ್ರಾ, ಕಂದರಾ, ಬಹುಯೋಜನಾ, ಸಂತಾನಿಕಾ, ಕಮಲಾ, ಮಹಾಬಲಾ, ಸುದಾಮಾ, ಬಹುದಾಮಾ, ಸುಪ್ರಭಾ, ಯಶಸ್ವಿನೀ, ನೃತ್ಯಪ್ರಿಯಾ, ಶತೋಲೂಖಲಮೇಖಲ, ಶತಘಂಟಾ, ಶತಾನಂದಾ, ಭಗನಂದಾ, ಭಾಮಿನೀ, ವಪುಷ್ಮತೀ, ಚಂದ್ರಶೀತಾ, ಭದ್ರಕಾಲೀ, ಸಂಕಾರಿಕಾ, ನಿಷ್ಕುಟಿಕಾ, ಭ್ರಮಾ, ಚತ್ವರವಾಸಿನೀ, ಸುಮಂಗಲಾ, ಸ್ವಸ್ತಿಮತೀ, ವೃದ್ಧಿಕಾಮಾ, ಜಯಪ್ರಿಯಾ, ಧನದಾ, ಸುಪ್ರಸಾದಾ, ಭವದಾ, ಜಲೇಶ್ವರೀ, ಏಡೀ, ಭೇಡೀ, ಸಮೇಡೀ, ವೇತಾಲಜನನೀ, ಕಂಡೂತೀ, ಕಾಲಿಕಾ, ದೇವಮಿತ್ರಾ, ಲಂಬಸೀ, ಕೇತಕೀ, ಚಿತ್ರಸೇನಾ, ಬಲಾ, ಕುಕ್ಕುಟಿಕಾ, ಶಂಖನಿಕಾ, ಜರ್ಜರಿಕಾ, ಕುಂಡಾರಿಕಾ, ಕೋಕಲಿಕಾ, ಕಂಡರಾ, ಶತೋದರೀ, ಉತ್ಕ್ರಾಥಿನೀ, ಜರೇಣಾ, ಮಹಾವೇಗಾ, ಕಂಕಣಾ, ಮನೋಜವಾ, ಕಂಟಕಿನೀ, ಪ್ರಘಸಾ, ಪೂತನಾ, ಖಶಯಾ, ಚುರ್ವ್ಯುಟೀ, ವಾಮಾ, ಕ್ರೋಶನಾಥ, ತಡಿತ್ಪ್ರಭಾ, ಮಂಡೋದರೀ, ತುಂಡಾ, ಕೋಟರಾ, ಮೇಘವಾಸಿನೀ, ಸುಭಗಾ, ಲಂಬಿನೀ, ಲಂಬಾ, ವಸುಚೂಡಾ, ವಿಕತ್ಥನೀ, ಊರ್ಧ್ವವೇಣೀಧರಾ, ಪಿಂಗಾಕ್ಷೀ, ಲೋಹಮೇಖಲಾ, ಪೃಥುವಕ್ತ್ರಾ, ಮಧುರಿಕಾ, ಮಧುಕುಂಭಾ, ಪಕ್ಷಾಲಿಕಾ, ಮಂಥನಿಕಾ, ಧಮಧಮಾ, ಖಂಡಖಂಡಾ, ಪೂಷಣಾ, ಮಣಿಕುಂಡಲಾ, ಅಮೋಚಾ, ಲಂಬಪಯೋಧರಾ, ವೇಣುವೀಣಾಧರಾ, ಪಿಂಗಾಕ್ಷೀ, ಲೋಹಮೇಖಲಾ, ಶಶೋಲೂಕಮುಖೀ, ಕೃಷ್ಣಾ, ಖರಜಂಘಾ, ಮಹಾಜವಾ, ಶಿಶುಮಾರಮುಖೀ, ಶ್ವೇತಾ, ಲೋಹಿತಾಕ್ಷೀ, ವಿಭೀಷಣಾ, ಜಟಾಲಿಕಾ, ಕಾಮಚರೀ, ದೀರ್ಘಜಿಹ್ವಾ, ಬಲೋತ್ಕಟಾ, ಕಾಲೇಡಿಕಾ, ವಾಮನಿಕಾ, ಮುಕುಟಾ, ಲೋಹಿತಾಕ್ಷೀ, ಮಹಾಕಾಯಾ, ಹರಿಪಿಂಡೀ, ಏಕಾಕ್ಷರಾ, ಸುಕುಸುಮಾ, ಕೃಷ್ಣಕರ್ಣೀ, ಕ್ಷುರಕರ್ಣೀ, ಚತುಷ್ಕರ್ಣೀ, ಕರ್ಣಪ್ರಾವರಣಾ, ಚತುಷ್ಪಥನಿಕೇತಾ, ಗೋಕರ್ಣೀ, ಮಹಿಷಾನನಾ, ಖರಕರ್ಣೀ, ಮಹಾಕರ್ಣೀ, ಭೇರೀಸ್ವನಮಹಾಸ್ವನಾ, ಶಂಖಕುಂಭಸ್ವನಾ, ಭಂಗದಾ, ಮಹಾಬಲಾ, ಗಣಾ, ಸುಗಣಾ, ಕಾಮದಾ, ಚತುಷ್ಪಥರತಾ, ಭೂತಿತೀರ್ಥಾ, ಅನ್ಯಗೋಚರಾ, ಪಶುದಾ, ವಿತ್ತದಾ, ಸುಖದಾ, ಪಯೋದಾ, ಗೋಮಹಿಷದಾ, ಸುವಿಷಾಣಾ, ಪ್ರತಿಷ್ಠಾ, ಸುಪ್ರತಿಷ್ಠಾ, ರೋಚಮಾನಾ, ಸುರೋಚನಾ, ಗೋಕರ್ಣೀ, ಸುಕರ್ಣೀ, ಸಸಿರಾ, ಸ್ಥೇರಿಕಾ, ಏಕಚಕ್ರಾ, ಮೇಘರವಾ, ಮೇಘಮಾಲಾ, ವಿರೋಚನಾ.
09045029a ಏತಾಶ್ಚಾನ್ಯಾಶ್ಚ ಬಹವೋ ಮಾತರೋ ಭರತರ್ಷಭ।
09045029c ಕಾರ್ತ್ತಿಕೇಯಾನುಯಾಯಿನ್ಯೋ ನಾನಾರೂಪಾಃ ಸಹಸ್ರಶಃ।।
ಭರತರ್ಷಭ! ಇವರು ಮತ್ತು ಇನ್ನೂ ಅನೇಕ ಸಹಸ್ರ ನಾನಾರೂಪೀ ಮಾತೃಗಳು ಕಾರ್ತಿಕೇಯನ ಅನುಯಾಯಿಗಳಾಗಿದ್ದರು.
09045030a ದೀರ್ಘನಖ್ಯೋ ದೀರ್ಘದಂತ್ಯೋ ದೀರ್ಘತುಂಡ್ಯಶ್ಚ ಭಾರತ।
09045030c ಸರಲಾ ಮಧುರಾಶ್ಚೈವ ಯೌವನಸ್ಥಾಃ ಸ್ವಲಂಕೃತಾಃ।।
ಭಾರತ! ಅವರ ಉಗುರುಗಳು ದೀರ್ಘವಾಗಿದ್ದವು, ಹಲ್ಲುಗಳು ದೀರ್ಘವಾಗಿದ್ದವು, ಮುಖಗಳೂ ದೀರ್ಘವಾಗಿದ್ದವು. ಅವರು ಸುಂದರಿಯರೂ, ಮಧುರರೂ, ಯೌವನಸ್ಥರೂ, ಸ್ವಲಂಕೃತರೂ ಆಗಿದ್ದರು.
09045031a ಮಾಹಾತ್ಮ್ಯೇನ ಚ ಸಮ್ಯುಕ್ತಾಃ ಕಾಮರೂಪಧರಾಸ್ತಥಾ।
09045031c ನಿರ್ಮಾಂಸಗಾತ್ರ್ಯಃ ಶ್ವೇತಾಶ್ಚ ತಥಾ ಕಾಂಚನಸಂನಿಭಾಃ।।
ಮಹಾತ್ಮೆಗಳಿಂದ ಸಂಯುಕ್ತರಾಗಿದ್ದರು. ಬೇಕಾದ ರೂಪಗಳನ್ನು ಧರಿಸಬಲ್ಲವರಾಗಿದ್ದರು, ದೇಹಗಳಲ್ಲಿ ಮಾಂಸಗಳೇ ಇರಲಿಲ್ಲ. ಬಿಳುಪಾಗಿ ಬಂಗಾರದ ಕಾಂತಿಯನ್ನು ಹೊಂದಿದ್ದರು.
09045032a ಕೃಷ್ಣಮೇಘನಿಭಾಶ್ಚಾನ್ಯಾ ಧೂಮ್ರಾಶ್ಚ ಭರತರ್ಷಭ।
09045032c ಅರುಣಾಭಾ ಮಹಾಭಾಗಾ ದೀರ್ಘಕೇಶ್ಯಃ ಸಿತಾಂಬರಾಃ।।
ಭರತರ್ಷಭ! ಕೆಲವರು ಕಪ್ಪುಮೋಡಗಳ ಕಾಂತಿಯುಕ್ತರಾಗಿದ್ದರೆ, ಇನ್ನು ಕೆಲವರು ಹೊಗೆ ಮತ್ತು ಕೆಂಪು ಬಣ್ಣಗಳನ್ನು ಹೊಂದಿದ್ದರು. ಆ ಮಹಾಭಾಗೆಯರ ಕೂದಲುಗಳು ಉದ್ದವಾಗಿದ್ದವು, ಮತ್ತು ಅವರು ಬಿಳಿಯ ವಸ್ತ್ರಗಳನ್ನು ಧರಿಸಿದ್ದರು.
09045033a ಊರ್ಧ್ವವೇಣೀಧರಾಶ್ಚೈವ ಪಿಂಗಾಕ್ಷ್ಯೋ ಲಂಬಮೇಖಲಾಃ।
09045033c ಲಂಬೋದರ್ಯೋ ಲಂಬಕರ್ಣಾಸ್ತಥಾ ಲಂಬಪಯೋಧರಾಃ।।
ಕೆಲವರು ತಲೆಗೂದಲನ್ನು ಮೇಲಕ್ಕೆ ಕಟ್ಟಿದ್ದರು. ಕಣ್ಣುಗಳು ಕಂದುಬಣ್ಣದ್ದಾಗಿದ್ದವು. ಉದ್ದವಾದ ಒಡ್ಯಾಣಗಳನ್ನು ಧರಿಸಿದ್ದರು. ಕೆಲವರಿಗೆ ನೀಳವಾದ ಹೊಟ್ಟೆ, ನೀಳವಾದ ಕಿವಿಗಳು ಮತ್ತು ನೀಳವಾದ ಮೊಲೆಗಳಿದ್ದವು.
09045034a ತಾಮ್ರಾಕ್ಷ್ಯಸ್ತಾಮ್ರವರ್ಣಾಶ್ಚ ಹರ್ಯಕ್ಷ್ಯಶ್ಚ ತಥಾಪರಾಃ।
09045034c ವರದಾಃ ಕಾಮಚಾರಿಣ್ಯೋ ನಿತ್ಯಪ್ರಮುದಿತಾಸ್ತಥಾ।।
ರಕ್ತಾಕ್ಷಿಯರೂ, ರಕ್ತವರ್ಣದವರೂ ಆಗಿದ್ದರು. ಇನ್ನು ಕೆಲವರ ಕಣ್ಣುಗಳು ಹಸಿರುಬಣ್ಣದ್ದಾಗಿದ್ದವು. ವರಗಳನ್ನೀಯುವ ಅವರು ಬೇಕಾದಲ್ಲಿಗೆ ಹೋಗುವವರೂ ನಿತ್ಯ ಪ್ರಮೋದದಲ್ಲಿರುವವರೂ ಆಗಿದ್ದರು.
09045035a ಯಾಮ್ಯೋ ರೌದ್ರ್ಯಸ್ತಥಾ ಸೌಮ್ಯಾಃ ಕೌಬೇರ್ಯೋಽಥ ಮಹಾಬಲಾಃ।
09045035c ವಾರುಣ್ಯೋಽಥ ಚ ಮಾಹೇಂದ್ರ್ಯಸ್ತಥಾಗ್ನೇಯ್ಯಃ ಪರಂತಪ।।
09045036a ವಾಯವ್ಯಶ್ಚಾಥ ಕೌಮಾರ್ಯೋ ಬ್ರಾಹ್ಮ್ಯಶ್ಚ ಭರತರ್ಷಭ।
09045036c ರೂಪೇಣಾಪ್ಸರಸಾಂ ತುಲ್ಯಾ ಜವೇ ವಾಯುಸಮಾಸ್ತಥಾ।।
ಪರಂತಪ! ಭರತರ್ಷಭ! ಆ ಮಹಾಬಲರು ಯಮ-ರುದ್ರ-ಸೋಮ-ಕುಬೇರ-ವರುಣ-ಮಹೇಂದ್ರ-ಅಗ್ನಿ-ವಾಯು-ಕುಮಾರ-ಬ್ರಹ್ಮರ ಶಕ್ತಿಗಳನ್ನು ಹೊಂದಿದ್ದರು. ರೂಪದಲ್ಲಿ ಅಪ್ಸರೆಯರಿಗೆ ಸಮನಾಗಿದ್ದರು ಮತ್ತು ವೇಗದಲ್ಲಿ ವಾಯುವಿಗೆ ಸಮನಾಗಿದ್ದರು.
09045037a ಪರಪುಷ್ಟೋಪಮಾ ವಾಕ್ಯೇ ತಥರ್ದ್ಧ್ಯಾ ಧನದೋಪಮಾಃ।
09045037c ಶಕ್ರವೀರ್ಯೋಪಮಾಶ್ಚೈವ ದೀಪ್ತ್ಯಾ ವಹ್ನಿಸಮಾಸ್ತಥಾ।।
ಅವರು ಮಾತಿನಲ್ಲಿ ಕೋಗಿಲೆಗಳಂತೆ, ಸಂಪತ್ತಿನಲ್ಲಿ ಕುಬೇರನಂತೆ, ವೀರ್ಯದಲ್ಲಿ ಶಕ್ರನಂತೆ, ಕಾಂತಿಯಲ್ಲಿ ಅಗ್ನಿಯಂತೆ ಇದ್ದರು.
09045038a ವೃಕ್ಷಚತ್ವರವಾಸಿನ್ಯಶ್ಚತುಷ್ಪಥನಿಕೇತನಾಃ।
09045038c ಗುಹಾಶ್ಮಶಾನವಾಸಿನ್ಯಃ ಶೈಲಪ್ರಸ್ರವಣಾಲಯಾಃ।।
ಅವರು ವೃಕ್ಷಗಳಲ್ಲಿಯೂ, ಮನೆಯ ಮುಂಬಾಗದ ಅಂಗಳಗಳಲ್ಲಿಯೂ, ನಾಲ್ಕು ದಾರಿಗಳು ಸೇರುವ ಚೌಕಗಳಲ್ಲಿಯೂ, ಗುಹೆಗಳಲ್ಲಿಯೂ, ಶ್ಮಶಾನಗಳಲ್ಲಿಯೂ, ಪರ್ವತಗಳಲ್ಲಿಯೂ, ಝರಿಗಳು ಹರಿಯುವಲ್ಲಿಯೂ ವಾಸಮಾಡುವರು.
09045039a ನಾನಾಭರಣಧಾರಿಣ್ಯೋ ನಾನಾಮಾಲ್ಯಾಂಬರಾಸ್ತಥಾ।
09045039c ನಾನಾವಿಚಿತ್ರವೇಷಾಶ್ಚ ನಾನಾಭಾಷಾಸ್ತಥೈವ ಚ।।
ನಾನಾಭರಣಗಳನ್ನು ಧರಿಸಿದ್ದರು. ಹಾಗೆಯೇ ನಾನಾ ಮಾಲೆ-ವಸ್ತ್ರಗಳನ್ನು ಧರಿಸಿದ್ದರು. ನಾನಾ ವಿಚಿತ್ರ ವೇಷಗಳನ್ನು ಧರಿಸಿದ್ದ ಅವರು ನಾನಾ ಭಾಷೆಗಳಲ್ಲಿ ಮಾತನಾಡುತ್ತಿದ್ದರು.
09045040a ಏತೇ ಚಾನ್ಯೇ ಚ ಬಹವೋ ಗಣಾಃ ಶತ್ರುಭಯಂಕರಾಃ।
09045040c ಅನುಜಗ್ಮುರ್ಮಹಾತ್ಮಾನಂ ತ್ರಿದಶೇಂದ್ರಸ್ಯ ಸಮ್ಮತೇ।।
ಇವರು ಮತ್ತು ಇನ್ನೂ ಅನೇಕ ಶತ್ರುಭಯಂಕರ ಗಣಗಳು ತ್ರಿದಶೇಂದ್ರನ ಸಮ್ಮತಿಯಂತೆ ಮಹಾತ್ಮ ಸ್ಕಂದನನ್ನು ಬಂದು ಸೇರಿದವು.
09045041a ತತಃ ಶಕ್ತ್ಯಸ್ತ್ರಮದದದ್ಭಗವಾನ್ಪಾಕಶಾಸನಃ।
09045041c ಗುಹಾಯ ರಾಜಶಾರ್ದೂಲ ವಿನಾಶಾಯ ಸುರದ್ವಿಷಾಂ।।
09045042a ಮಹಾಸ್ವನಾಂ ಮಹಾಘಂಟಾಂ ದ್ಯೋತಮಾನಾಂ ಸಿತಪ್ರಭಾಂ।
09045042c ತರುಣಾದಿತ್ಯವರ್ಣಾಂ ಚ ಪತಾಕಾಂ ಭರತರ್ಷಭ।।
ಭರತರ್ಷಭ! ರಾಜಶಾರ್ದೂಲ! ಅನಂತರ ಸುರದ್ವೇಷಿಗಳ ವಿನಾಶಕ್ಕಾಗಿ ಭಗವಾನ್ ಪಾಕಶಾಸನನು ಗುಹನಿಗೆ ಶಕ್ತಿಯನ್ನೂ, ಬಿಳೀ ಪ್ರಭೆಯಿಂದ ಬೆಳಗುತ್ತಿದ್ದ ಮಹಾಧ್ವನಿಯ ಮಹಾಘಂಟವನ್ನೂ, ಉದಯಿಸುವ ಸೂರ್ಯನ ಬಣ್ಣದ ಪತಾಕೆಯನ್ನೂ ಕೊಟ್ಟನು.
09045043a ದದೌ ಪಶುಪತಿಸ್ತಸ್ಮೈ ಸರ್ವಭೂತಮಹಾಚಮೂಂ।
09045043c ಉಗ್ರಾಂ ನಾನಾಪ್ರಹರಣಾಂ ತಪೋವೀರ್ಯಬಲಾನ್ವಿತಾಂ।।
ಪಶುಪತಿಯೂ ಕೂಡ ಆ ಸರ್ವಭೂತಗಳ ಮಹಾಸೇನೆಗೆ ಉಗ್ರವೂ ತಪೋವೀರ್ಯಬಲಾನ್ವಿತವೂ ಆದ ನಾನಾ ಆಯುಧಗಳನ್ನಿತ್ತನು.
09045044a ವಿಷ್ಣುರ್ದದೌ ವೈಜಯಂತೀಂ ಮಾಲಾಂ ಬಲವಿವರ್ಧಿನೀಂ।
09045044c ಉಮಾ ದದೌ ಚಾರಜಸೀ ವಾಸಸೀ ಸೂರ್ಯಸಪ್ರಭೇ।।
ವಿಷ್ಣುವು ಬಲವನ್ನು ವರ್ಧಿಸುವ ವೈಜಯಂತೀ ಮಾಲೆಯನ್ನು ಕೊಟ್ಟನು. ಉಮೆಯು ಸೂರ್ಯಪ್ರಭೆಯುಳ್ಳ ನಿರ್ಮಲ ವಸ್ತ್ರಗಳನ್ನಿತ್ತಳು.
09045045a ಗಂಗಾ ಕಮಂಡಲುಂ ದಿವ್ಯಮಮೃತೋದ್ಭವಮುತ್ತಮಂ।
09045045c ದದೌ ಪ್ರೀತ್ಯಾ ಕುಮಾರಾಯ ದಂಡಂ ಚೈವ ಬೃಹಸ್ಪತಿಃ।।
ಗಂಗೆಯು ಅಮೃತವನ್ನು ನೀಡುವ ಉತ್ತಮ ಕಮಂಡಲುವನ್ನು, ಮತ್ತು ಬೃಹಸ್ಪತಿಯು ದಂಡವನ್ನು ಪ್ರೀತಿಯಿಂದ ಕುಮಾರನಿಗೆ ಕೊಟ್ಟರು.
09045046a ಗರುಡೋ ದಯಿತಂ ಪುತ್ರಂ ಮಯೂರಂ ಚಿತ್ರಬರ್ಹಿಣಂ।
09045046c ಅರುಣಸ್ತಾಮ್ರಚೂಡಂ ಚ ಪ್ರದದೌ ಚರಣಾಯುಧಂ।।
ಗರುಡನು ಪ್ರೀತಿಯ ಪುತ್ರ, ಬಣ್ಣಬಣ್ಣದ ಗರಿಗಳ ಮಯೂರನನ್ನು ಮತ್ತು ಅರುಣನು ಕೆಂಪು ಪುಚ್ಚದ, ಪಂಜುಗಳೇ ಆಯುಧವಾಗಿದ್ದ ಹುಂಜವನ್ನು ನೀಡಿದರು.
09045047a ಪಾಶಂ ತು ವರುಣೋ ರಾಜಾ ಬಲವೀರ್ಯಸಮನ್ವಿತಂ।
09045047c ಕೃಷ್ಣಾಜಿನಂ ತಥಾ ಬ್ರಹ್ಮಾ ಬ್ರಹ್ಮಣ್ಯಾಯ ದದೌ ಪ್ರಭುಃ।।
09045047e ಸಮರೇಷು ಜಯಂ ಚೈವ ಪ್ರದದೌ ಲೋಕಭಾವನಃ।।
ರಾಜಾ! ವರುಣನು ಬಲವೀರ್ಯಸಮಾನ್ವಿತ ಪಾಶವನ್ನೂ ಹಾಗೆಯೇ ಪ್ರಭು ಲೋಕಭಾವನ ಬ್ರಹ್ಮನು ಆ ಬ್ರಹ್ಮಣ್ಯನಿಗೆ ಕೃಷ್ಣಾಜಿನವನ್ನೂ ಸಮರದಲ್ಲಿ ಜಯವನ್ನೂ ನೀಡಿದನು.
09045048a ಸೇನಾಪತ್ಯಮನುಪ್ರಾಪ್ಯ ಸ್ಕಂದೋ ದೇವಗಣಸ್ಯ ಹ।
09045048c ಶುಶುಭೇ ಜ್ವಲಿತೋಽರ್ಚಿಷ್ಮಾನ್ ದ್ವಿತೀಯ ಇವ ಪಾವಕಃ।।
ದೇವಗಣದ ಸೇನಾಪತ್ಯವನ್ನು ಪಡೆದ ಸ್ಕಂದನು ಎರಡನೇ ಪಾವಕನೋ ಎನ್ನುವಂತೆ ತೇಜಸ್ಸಿನಿಂದ ಪ್ರಜ್ವಲಿಸಿ ಶೋಭಿಸಿದನು.
09045048e ತತಃ ಪಾರಿಷದೈಶ್ಚೈವ ಮಾತೃಭಿಶ್ಚ ಸಮನ್ವಿತಃ।।
09045049a ಸಾ ಸೇನಾ ನೈರೃತೀ ಭೀಮಾ ಸಘಂಟೋಚ್ಚ್ರಿತಕೇತನಾ।
09045049c ಸಭೇರೀಶಂಖಮುರಜಾ ಸಾಯುಧಾ ಸಪತಾಕಿನೀ।।
09045049e ಶಾರದೀ ದ್ಯೌರಿವಾಭಾತಿ ಜ್ಯೋತಿರ್ಭಿರುಪಶೋಭಿತಾ
ಆಗ ಪಾರಿಷದರು ಮತ್ತು ಮಾತೃಗಣಗಳಿಂದ ಸಮಾವೃತವಾದ ಆ ನೈಋತೀ ಸೇನೆಯು ಗಂಟೆಗಳು ಮತ್ತು ಹಾರಾಡುತ್ತಿದ್ದ ಧ್ವಜಗಳಿಂದ, ಭೇರೀ-ಶಂಖಗಳ ಧ್ವನಿಗಳಿಂದ ಕೂಡಿ ಭಯಂಕರವಾಗಿತ್ತು. ಆಯುಧ-ಪತಾಕೆಗಳಿಂದ ಕೂಡಿದ ಆ ಸೇನೆಯು ನಕ್ಷತ್ರಗಳಿಂದ ಕೂಡಿದ ಶರತ್ಕಾಲದ ಆಕಾಶದಂತೆ ಪ್ರಕಾಶಿಸುತ್ತಿತ್ತು.
09045050a ತತೋ ದೇವನಿಕಾಯಾಸ್ತೇ ಭೂತಸೇನಾಗಣಾಸ್ತಥಾ।
09045050c ವಾದಯಾಮಾಸುರವ್ಯಗ್ರಾ ಭೇರೀಶಂಖಾಂಶ್ಚ ಪುಷ್ಕಲಾನ್।।
09045051a ಪಟಹಾನ್ ಝರ್ಝರಾಂಶ್ಚೈವ ಕೃಕಚಾನ್ಗೋವಿಷಾಣಿಕಾನ್।
09045051c ಆಡಂಬರಾನ್ಗೋಮುಖಾಂಶ್ಚ ಡಿಂಡಿಮಾಂಶ್ಚ ಮಹಾಸ್ವನಾನ್।।
ಆಗ ದೇವಸೇನೆ ಮತ್ತು ಭೂತಸೇನಾಗಣಗಳು ಅವ್ಯಗ್ರ ಮಹಾಸ್ವನ ಭೇರೀ-ಶಂಖ-ಪಟಹ-ಝರ್ಝರ-ಕೃಕಚ-ಗೀವಿಷಾಣಿಕ-ಆಡಂಬರ-ಗೋಮುಖ-ಡಿಂಡಿಮಗಳನ್ನು ಬಾರಿಸಿದರು.
09045052a ತುಷ್ಟುವುಸ್ತೇ ಕುಮಾರಂ ಚ ಸರ್ವೇ ದೇವಾಃ ಸವಾಸವಾಃ।
09045052c ಜಗುಶ್ಚ ದೇವಗಂಧರ್ವಾ ನನೃತುಶ್ಚಾಪ್ಸರೋಗಣಾಃ।।
ವಾಸವನೊಂದಿಗೆ ಸರ್ವದೇವತೆಗಳೂ ಕುಮಾರನನ್ನು ಸ್ತೋತ್ರಮಾಡಿದರು. ದೇವ-ಗಂಧರ್ವ-ಅಪ್ಸರಗಣಗಳು ನೃತ್ಯಮಾಡಿದವು.
09045053a ತತಃ ಪ್ರೀತೋ ಮಹಾಸೇನಸ್ತ್ರಿದಶೇಭ್ಯೋ ವರಂ ದದೌ।
09045053c ರಿಪೂನ್ ಹಂತಾಸ್ಮಿ ಸಮರೇ ಯೇ ವೋ ವಧಚಿಕೀರ್ಷವಃ।।
ಆಗ ಪ್ರೀತನಾದ ಮಹಾಸೇನನು ತ್ರಿದಶರಿಗೆ “ನಿಮ್ಮನ್ನು ವಧಿಸಲು ಬಯಸಿರುವ ರಿಪುಗಳನ್ನು ಸಮರದಲ್ಲಿ ಸಂಹರಿಸುತ್ತೇನೆ!” ಎಂದು ವರವನ್ನಿತ್ತನು.
09045054a ಪ್ರತಿಗೃಹ್ಯ ವರಂ ದೇವಾಸ್ತಸ್ಮಾದ್ವಿಬುಧಸತ್ತಮಾತ್।
09045054c ಪ್ರೀತಾತ್ಮಾನೋ ಮಹಾತ್ಮಾನೋ ಮೇನಿರೇ ನಿಹತಾನ್ರಿಪೂನ್।।
ಆ ವಿಬುಧಸತ್ತಮನಿಂದ ವರವನ್ನು ಪಡೆದ ಮಹಾತ್ಮ ದೇವತೆಗಳು ಪ್ರೀತಾತ್ಮರಾಗಿ ರಿಪುಗಳು ಹತರಾದರೆಂದೇ ತಿಳಿದರು.
09045055a ಸರ್ವೇಷಾಂ ಭೂತಸಂಘಾನಾಂ ಹರ್ಷಾನ್ನಾದಃ ಸಮುತ್ಥಿತಃ।
09045055c ಅಪೂರಯತ ಲೋಕಾಂಸ್ತ್ರೀನ್ವರೇ ದತ್ತೇ ಮಹಾತ್ಮನಾ।।
ಮಹಾತ್ಮನು ಆ ವರವನ್ನು ನೀಡಲು ಸರ್ವ ಭೂತಸಂಘಗಳೂ ಹರ್ಷನಾದಗೈಯಲು ಅದು ಮೂರು ಲೋಕಗಳನ್ನೂ ತುಂಬಿತು.
09045056a ಸ ನಿರ್ಯಯೌ ಮಹಾಸೇನೋ ಮಹತ್ಯಾ ಸೇನಯಾ ವೃತಃ।
09045056c ವಧಾಯ ಯುಧಿ ದೈತ್ಯಾನಾಂ ರಕ್ಷಾರ್ಥಂ ಚ ದಿವೌಕಸಾಂ।।
ಮಹಾಸೇನೆಯಿಂದ ಆವೃತನಾಗಿ ಮಹಾಸೇನನು ಯುದ್ಧದಲ್ಲಿ ದೈತ್ಯರನ್ನು ವಧಿಸಲು ಮತ್ತು ದಿವೌಕಸರನ್ನು ರಕ್ಷಿಸಲು ಹೊರಟನು.
09045057a ವ್ಯವಸಾಯೋ ಜಯೋ ಧರ್ಮಃ ಸಿದ್ಧಿರ್ಲಕ್ಷ್ಮೀರ್ಧೃತಿಃ ಸ್ಮೃತಿಃ।
09045057c ಮಹಾಸೇನಸ್ಯ ಸೈನ್ಯಾನಾಮಗ್ರೇ ಜಗ್ಮುರ್ನರಾಧಿಪ।।
ನರಾಧಿಪ! ವ್ಯವಸಾಯ, ಜಯ, ಧರ್ಮ, ಸಿದ್ಧಿ, ಲಕ್ಷ್ಮಿ, ಧೃತಿ, ಸ್ಮೃತಿಗಳು ಮಹಾಸೇನನ ಸೇನೆಯ ಮುಂದೆ ನಡೆದರು.
09045058a ಸ ತಯಾ ಭೀಮಯಾ ದೇವಃ ಶೂಲಮುದ್ಗರಹಸ್ತಯಾ।
09045058c ಗದಾಮುಸಲನಾರಾಚಶಕ್ತಿತೋಮರಹಸ್ತಯಾ।।
09045058e ದೃಪ್ತಸಿಂಹನಿನಾದಿನ್ಯಾ ವಿನದ್ಯ ಪ್ರಯಯೌ ಗುಹಃ।।
ಶೂಲ-ಮುದ್ಗರ-ಗದೆ-ಮುಸಲ-ನಾರಾಚ-ಶಕ್ತಿ-ತೋಮರಗಳನ್ನು ಹಿಡಿದು ದೃಪ್ತರಾಗಿ ಸಿಂಹನಾದಗೈಯುತ್ತಾ ಗರ್ಜಿಸುತ್ತಾ ಆ ಭಯಂಕರ ಸೇನೆಯೊಂದಿಗೆ ದೇವ ಗುಹನು ಪ್ರಯಾಣಿಸಿದನು.
09045059a ತಂ ದೃಷ್ಟ್ವಾ ಸರ್ವದೈತೇಯಾ ರಾಕ್ಷಸಾ ದಾನವಾಸ್ತಥಾ।
09045059c ವ್ಯದ್ರವಂತ ದಿಶಃ ಸರ್ವಾ ಭಯೋದ್ವಿಗ್ನಾಃ ಸಮಂತತಃ।।
09045059e ಅಭ್ಯದ್ರವಂತ ದೇವಾಸ್ತಾನ್ವಿವಿಧಾಯುಧಪಾಣಯಃ।।
ಅವನನ್ನು ನೋಡಿ ಸರ್ವ ದೈತ್ಯ-ರಾಕ್ಷಸ-ದಾನವರೂ ಭಯೋದ್ವಿಗ್ನರಾಗಿ ಸರ್ವ ದಿಕ್ಕುಗಳಲ್ಲಿಯೂ ಓಡತೊಡಗಿದರು. ದೇವತೆಗಳು ವಿವಿಧ ಆಯುಧಗಳನ್ನು ಹಿಡಿದು ಅವರನ್ನು ಬೆನ್ನಟ್ಟಿ ಹೋದರು.
09045060a ದೃಷ್ಟ್ವಾ ಚ ಸ ತತಃ ಕ್ರುದ್ಧಃ ಸ್ಕಂದಸ್ತೇಜೋಬಲಾನ್ವಿತಃ।
09045060c ಶಕ್ತ್ಯಸ್ತ್ರಂ ಭಗವಾನ್ಭೀಮಂ ಪುನಃ ಪುನರವಾಸೃಜತ್।।
09045060e ಆದಧಚ್ಚಾತ್ಮನಸ್ತೇಜೋ ಹವಿಷೇದ್ಧ ಇವಾನಲಃ।।
ಆಗ ಅವರನ್ನು ನೋಡಿ ಕ್ರುದ್ಧನಾಗಿ ತೇಜೋಬಲಾನ್ವಿತ ಭಗವಾನ್ ಸ್ಕಂದನು ಪುನಃ ಪುನಃ ಭಯಂಕರ ಶಕ್ತ್ಯಾಸ್ತ್ರವನ್ನು ಪ್ರಕಟಿಸಿ ಹವಿಸ್ಸನ್ನು ಪಡೆದ ಅಗ್ನಿಯು ಹೇಗೋ ಹಾಗೆ ಆತ್ಮತೇಜಸ್ಸನ್ನು ಪ್ರಕಟಿಸಿದನು.
09045061a ಅಭ್ಯಸ್ಯಮಾನೇ ಶಕ್ತ್ಯಸ್ತ್ರೇ ಸ್ಕಂದೇನಾಮಿತತೇಜಸಾ।
09045061c ಉಲ್ಕಾಜ್ವಾಲಾ ಮಹಾರಾಜ ಪಪಾತ ವಸುಧಾತಲೇ।।
ಮಹಾರಾಜ! ಅಮಿತತೇಜಸ್ವಿ ಸ್ಕಂದನ ಆ ಶಕ್ತ್ಯಾಸ್ತ್ರವು ಉಲ್ಕೆಯಂತೆ ಉರಿಯುತ್ತಾ ವಸುಧಾತಲದಲ್ಲಿ ಬಿದ್ದಿತು.
09045062a ಸಂಹ್ರಾದಯಂತಶ್ಚ ತಥಾ ನಿರ್ಘಾತಾಶ್ಚಾಪತನ್ ಕ್ಷಿತೌ।
09045062c ಯಥಾಂತಕಾಲಸಮಯೇ ಸುಘೋರಾಃ ಸ್ಯುಸ್ತಥಾ ನೃಪ।।
ನೃಪ! ಅಂತಕಾಲ ಸಮಯದಲ್ಲಿ ಮಹಾಶಬ್ಧದೊಂದಿಗೆ ಸಿಡಿಲು ಬೀಳುವಂತೆ ಆಗ ಭಯಂಕರ ಗರ್ಜನೆಯೊಂದಿಗೆ ಸಿಡಿಲುಗಳು ಭೂಮಿಯ ಮೇಲೆ ಬಿದ್ದವು.
09045063a ಕ್ಷಿಪ್ತಾ ಹ್ಯೇಕಾ ತಥಾ ಶಕ್ತಿಃ ಸುಘೋರಾನಲಸೂನುನಾ।
09045063c ತತಃ ಕೋಟ್ಯೋ ವಿನಿಷ್ಪೇತುಃ ಶಕ್ತೀನಾಂ ಭರತರ್ಷಭ।।
ಭರತರ್ಷಭ! ಅಗ್ನಿಪುತ್ರನು ಒಂದೊಂದು ಬಾರಿ ಘೋರ ಶಕ್ತಿಯನ್ನು ಪ್ರಯೋಗಿಸಿದಾಗಲೂ ಅದರಿಂದ ಕೋಟಿ ಕೋಟಿ ಶಕ್ತಿಗಳು ಹೊರಬರುತ್ತಿದ್ದವು.
09045064a ಸ ಶಕ್ತ್ಯಸ್ತ್ರೇಣ ಸಂಗ್ರಾಮೇ ಜಘಾನ ಭಗವಾನ್ಪ್ರಭುಃ।
09045064c ದೈತ್ಯೇಂದ್ರಂ ತಾರಕಂ ನಾಮ ಮಹಾಬಲಪರಾಕ್ರಮಂ।।
09045064e ವೃತಂ ದೈತ್ಯಾಯುತೈರ್ವೀರೈರ್ಬಲಿಭಿರ್ದಶಭಿರ್ನೃಪ।।
ಭಗವಾನ್ ಪ್ರಭುವು ಸಂಗ್ರಾಮದಲ್ಲಿ ಶಕ್ತ್ಯಾಸ್ತ್ರದಿಂದ ಬಲಿಷ್ಠರಾದ ಒಂದು ಲಕ್ಷ ದೈತ್ಯರಿಂದ ಆವೃತನಾದ ತಾರಕನೆಂಬ ಹೆಸರಿನ ಮಹಾಬಲಪರಾಕ್ರಮಿ ದೈತ್ಯೇಂದ್ರನನ್ನು ಸಂಹರಿಸಿದನು.
09045065a ಮಹಿಷಂ ಚಾಷ್ಟಭಿಃ ಪದ್ಮೈರ್ವೃತಂ ಸಂಖ್ಯೇ ನಿಜಘ್ನಿವಾನ್।
09045065c ತ್ರಿಪಾದಂ ಚಾಯುತಶತೈರ್ಜಘಾನ ದಶಭಿರ್ವೃತಂ।।
ಬಳಿಕ ಅವನು ಎಂಟು ಪದ್ಮ ಸಂಖ್ಯಾತ ದೈತ್ಯರಿಂದ ಪರಿವೃತನಾಗಿದ್ದ ಮಹಿಷನನ್ನೂ ರಣದಲ್ಲಿ ವಧಿಸಿದನು. ಅನಂತರ ಹತ್ತು ಲಕ್ಷ ಅಸುರರಿಂದ ಆವೃತನಾಗಿದ್ದ ತ್ರಿಪಾದನನ್ನೂ ಸಂಹರಿಸಿದನು.
09045066a ಹ್ರದೋದರಂ ನಿಖರ್ವೈಶ್ಚ ವೃತಂ ದಶಭಿರೀಶ್ವರಃ।
09045066c ಜಘಾನಾನುಚರೈಃ ಸಾರ್ಧಂ ವಿವಿಧಾಯುಧಪಾಣಿಭಿಃ।।
ಈಶ್ವರನು ವಿವಿಧ ಆಯುಧಗಳನ್ನು ಹಿಡಿದಿದ್ದ ಹತ್ತು ನಿಖರ್ವ ಅನುಚರರೊಂದಿಗೆ ಹ್ರದೋದರನನ್ನೂ ಸಂಹರಿಸಿದನು.
09045067a ತತ್ರಾಕುರ್ವಂತ ವಿಪುಲಂ ನಾದಂ ವಧ್ಯತ್ಸು ಶತ್ರುಷು।
09045067c ಕುಮಾರಾನುಚರಾ ರಾಜನ್ಪೂರಯಂತೋ ದಿಶೋ ದಶ।।
ರಾಜನ್! ಶತ್ರುಗಳು ವಧಿಸಲ್ಪಡಲು ಕುಮಾರನ ಅನುಚರರು ಹತ್ತು ದಿಕ್ಕುಗಳನ್ನೂ ಮೊಳಗಿಸುವಂತೆ ವಿಪುಲ ಸಿಂಹನಾದಗೈದರು.
09045068a ಶಕ್ತ್ಯಸ್ತ್ರಸ್ಯ ತು ರಾಜೇಂದ್ರ ತತೋಽರ್ಚಿರ್ಭಿಃ ಸಮಂತತಃ।
09045068c ದಗ್ಧಾಃ ಸಹಸ್ರಶೋ ದೈತ್ಯಾ ನಾದೈಃ ಸ್ಕಂದಸ್ಯ ಚಾಪರೇ।।
ರಾಜೇಂದ್ರ! ಸರ್ವತ್ರ ಪಸರಿಸುತ್ತಿದ್ದ ಶಕ್ತ್ಯಾಸ್ತ್ರದ ಮಹಾಜ್ವಾಲೆಯಿಂದ ಸಹಸ್ರಾರು ದೈತ್ಯರು ಭಸ್ಮೀಭೂತರಾದರು. ಇತರರು ಸ್ಕಂದನ ಸಿಂಹನಾದದಿಂದಲೇ ನಾಶಹೊಂದಿದರು.
09045069a ಪತಾಕಯಾವಧೂತಾಶ್ಚ ಹತಾಃ ಕೇ ಚಿತ್ಸುರದ್ವಿಷಃ।
09045069c ಕೇ ಚಿದ್ಘಂಟಾರವತ್ರಸ್ತಾ ನಿಪೇತುರ್ವಸುಧಾತಲೇ।।
09045069e ಕೇ ಚಿತ್ಪ್ರಹರಣೈಶ್ಚಿನ್ನಾ ವಿನಿಪೇತುರ್ಗತಾಸವಃ।।
ಕೆಲವು ಸುರದ್ವಿಷರು ಪಾತಾಕೆಯ ಹಾರಾಡುವಿಕೆಗೆ ಸಿಲುಕಿ ಹತರಾದರು. ಕೆಲವರು ಘಂಟಾರವವನ್ನು ಕೇಳಿಯೇ ವಸುಧಾತಲದಲ್ಲಿ ಬಿದ್ದರು. ಇನ್ನು ಕೆಲವರು ಆಯುಧಪ್ರಹರಗಳಿಂದ ಛಿನ್ನರಾಗಿ ಪ್ರಾಣತೊರೆದು ಬಿದ್ದರು.
09045070a ಏವಂ ಸುರದ್ವಿಷೋಽನೇಕಾನ್ಬಲವಾನಾತತಾಯಿನಃ।
09045070c ಜಘಾನ ಸಮರೇ ವೀರಃ ಕಾರ್ತ್ತಿಕೇಯೋ ಮಹಾಬಲಃ।।
ಹೀಗೆ ಮಹಾಬಲ ವೀರ ಕಾರ್ತಿಕೇಯನು ಸಮರದಲ್ಲಿ ಅನೇಕ ಬಲವಾನ್ ಸುರದ್ವೇಷೀ ಆತತಾಯಿಗಳನ್ನು ಸಂಹರಿಸಿದನು.
09045071a ಬಾಣೋ ನಾಮಾಥ ದೈತೇಯೋ ಬಲೇಃ ಪುತ್ರೋ ಮಹಾಬಲಃ।
09045071c ಕ್ರೌಂಚಂ ಪರ್ವತಮಾಸಾದ್ಯ ದೇವಸಂಘಾನಬಾಧತ।।
ಆಗ ದೈತ್ಯ ಬಲಿಯ ಪುತ್ರ ಬಾಣನೆಂಬ ಮಹಾಬಲನು ಕ್ರೌಂಚಪರ್ವತವನ್ನೇರಿ ದೇವಸಂಘಗಳನ್ನು ಬಾಧಿಸಿದನು.
09045072a ತಮಭ್ಯಯಾನ್ಮಹಾಸೇನಃ ಸುರಶತ್ರುಮುದಾರಧೀಃ।
09045072c ಸ ಕಾರ್ತ್ತಿಕೇಯಸ್ಯ ಭಯಾತ್ಕ್ರೌಂಚಂ ಶರಣಮೇಯಿವಾನ್।।
ಉದಾರಧೀ ಮಹಾಸೇನನು ಆ ಸುರಶತ್ರುವನ್ನು ಹಿಂಬಾಲಿಸಿ ಹೋಗಲು ಕಾರ್ತಿಕೇಯನ ಭಯದಿಂದ ಅವನು ಕ್ರೌಂಚವನ್ನೇ ಮೊರೆಹೊಕ್ಕನು.
09045073a ತತಃ ಕ್ರೌಂಚಂ ಮಹಾಮನ್ಯುಃ ಕ್ರೌಂಚನಾದನಿನಾದಿತಂ।
09045073c ಶಕ್ತ್ಯಾ ಬಿಭೇದ ಭಗವಾನ್ಕಾರ್ತ್ತಿಕೇಯೋಽಗ್ನಿದತ್ತಯಾ।।
ಆಗ ಮಹಾಕುಪಿತನಾದ ಭಗವಾನ್ ಕಾರ್ತಿಕೇಯನು ಅಗ್ನಿಯು ಕೊಟ್ಟಿದ್ದ ಶಕ್ತಿಯಿಂದ ಕ್ರೌಂಚಪಕ್ಷಿಗಳ ನಿನಾದಗಳಿಂದ ತುಂಬಿದ್ದ ಕ್ರೌಂಚಪರ್ವತವನ್ನೇ ಸೀಳಿದನು.
09045074a ಸಶಾಲಸ್ಕಂಧಸರಲಂ ತ್ರಸ್ತವಾನರವಾರಣಂ।
09045074c ಪುಲಿನತ್ರಸ್ತವಿಹಗಂ ವಿನಿಷ್ಪತಿತಪನ್ನಗಂ।।
09045075a ಗೋಲಾಂಗೂಲರ್ಕ್ಷಸಂಘೈಶ್ಚ ದ್ರವದ್ಭಿರನುನಾದಿತಂ।
09045075c ಕುರಂಗಗತಿನಿರ್ಘೋಷಮುದ್ಭ್ರಾಂತಸೃಮರಾಚಿತಂ।।
09045076a ವಿನಿಷ್ಪತದ್ಭಿಃ ಶರಭೈಃ ಸಿಂಹೈಶ್ಚ ಸಹಸಾ ದ್ರುತೈಃ।
09045076c ಶೋಚ್ಯಾಮಪಿ ದಶಾಂ ಪ್ರಾಪ್ತೋ ರರಾಜೈವ ಸ ಪರ್ವತಃ।।
09045077a ವಿದ್ಯಾಧರಾಃ ಸಮುತ್ಪೇತುಸ್ತಸ್ಯ ಶೃಂಗನಿವಾಸಿನಃ।
09045077c ಕಿನ್ನರಾಶ್ಚ ಸಮುದ್ವಿಗ್ನಾಃ ಶಕ್ತಿಪಾತರವೋದ್ಧತಾಃ।।
ವಿಶಾಲವೃಕ್ಷಗಳಿಂದ ಹಚ್ಚಹಸಿರಾಗಿದ್ದ ಆ ಪರ್ವತದಲ್ಲಿ ವಾಸಿಸುತ್ತಿದ್ದ ವಾನರರು ಮತ್ತು ಆನೆಗಳು ನಡುಗಿದವು. ಭಯಗೊಂಡ ಪಕ್ಷಿಗಳು ಹಾರಿದವು. ಹಾವುಗಳು ಬಿದ್ದವು. ಲಕ್ಷಾನುಗಟ್ಟಲೆ ಗೋಲಾಂಗೂಲ ಕಪಿಗಳು ಮತ್ತು ಕರಡಿಗಳು ಚೀತ್ಕರಿಸಿ ಕೂಗುತ್ತಾ ಓಡಿಹೋಗುತ್ತಿದ್ದಾಗ ಅವುಗಳ ಚೀತ್ಕಾರವು ಪರ್ವತದಲ್ಲಿ ಪ್ರತಿಧ್ವನಿಸಿದವು. ಶೋಚನೀಯ ದಶೆಯನ್ನು ಹೊಂದಿದ್ದರೂ ಆ ಪರ್ವತವು ರಾರಾಜಿಸುತ್ತಿತ್ತು. ಅದರ ಶೃಂಗದಲ್ಲಿ ವಾಸಿಸುತ್ತಿದ್ದ ವಿದ್ಯಾಧರರು ಆಕಾಶಕ್ಕೆ ಹಾರಿದರು. ಶಕ್ತಿಯ ಪತನದಿಂದ ಉದ್ವಿಗ್ನರಾದ ಕಿನ್ನರರೂ ಮೇಲೆ ಹಾರಿದರು.
09045078a ತತೋ ದೈತ್ಯಾ ವಿನಿಷ್ಪೇತುಃ ಶತಶೋಽಥ ಸಹಸ್ರಶಃ।
09045078c ಪ್ರದೀಪ್ತಾತ್ಪರ್ವತಶ್ರೇಷ್ಠಾದ್ವಿಚಿತ್ರಾಭರಣಸ್ರಜಃ।।
ಆಗ ವಿಚಿತ್ರಾಭರಣ ಮಾಲೆಗಳನ್ನು ಧರಿಸಿದ್ದ ನೂರಾರು ಸಹಸ್ರಾರು ದೈತ್ಯರು ಉರಿಯುತ್ತಿದ್ದ ಆ ಶ್ರೇಷ್ಠ ಪರ್ವತದಿಂದ ಹೊರಬಿದ್ದರು.
09045079a ತಾನ್ನಿಜಘ್ನುರತಿಕ್ರಮ್ಯ ಕುಮಾರಾನುಚರಾ ಮೃಧೇ।
09045079c ಬಿಭೇದ ಶಕ್ತ್ಯಾ ಕ್ರೌಂಚಂ ಚ ಪಾವಕಿಃ ಪರವೀರಹಾ।।
ಕುಮಾರನ ಅನುಚರರು ಅವರನ್ನು ಆಕ್ರಮಿಸಿ ಯುದ್ಧದಲ್ಲಿ ಸಂಹರಿಸಿದರು. ಪರವೀರಹ ಪಾವಕಿಯು ಶಕ್ತಿಯಿಂದ ಕ್ರೌಂಚವನ್ನು ತುಂಡುಮಾಡಿದನು.
09045080a ಬಹುಧಾ ಚೈಕಧಾ ಚೈವ ಕೃತ್ವಾತ್ಮಾನಂ ಮಹಾತ್ಮನಾ।
09045080c ಶಕ್ತಿಃ ಕ್ಷಿಪ್ತಾ ರಣೇ ತಸ್ಯ ಪಾಣಿಮೇತಿ ಪುನಃ ಪುನಃ।।
ತನ್ನನ್ನು ತಾನೇ ಒಬ್ಬನಾಗಿಯೂ ಅನೇಕನಾಗಿಯೂ ಮಾಡಿಕೊಂಡು ಮಹಾತ್ಮನು ರಣದಲ್ಲಿ ಶಕ್ತಿಯನ್ನು ಪ್ರಯೋಗಿಸುತ್ತಿರಲು ಪುನಃ ಪುನಃ ಬಂದು ಅದು ಅವನ ಕೈಸೇರುತ್ತಿತ್ತು.
09045081a ಏವಂಪ್ರಭಾವೋ ಭಗವಾನತೋ ಭೂಯಶ್ಚ ಪಾವಕಿಃ।
09045081c ಕ್ರೌಂಚಸ್ತೇನ ವಿನಿರ್ಭಿನ್ನೋ ದೈತ್ಯಾಶ್ಚ ಶತಶೋ ಹತಾಃ।।
ಈ ರೀತಿ ಪ್ರಭಾವಶಾಲಿ ಭಗವಾನ್ ಪಾವಕಿಯು ಮತ್ತೊಮ್ಮೆ ಕ್ರೌಂಚವನ್ನು ಒಡೆಯಲು ನೂರಾರು ದೈತ್ಯರು ಹತರಾದರು.
09045082a ತತಃ ಸ ಭಗವಾನ್ದೇವೋ ನಿಹತ್ಯ ವಿಬುಧದ್ವಿಷಃ।
09045082c ಸಭಾಜ್ಯಮಾನೋ ವಿಬುಧೈಃ ಪರಂ ಹರ್ಷಮವಾಪ ಹ।।
ಅನಂತರ ವಿಬುಧದ್ವೇಷಿಗಳನ್ನು ಸಂಹರಿಸಿ ಭಗವಾನ್ ದೇವನು ವಿಬುಧರಿಂದ ಸ್ತುತಿಸಲ್ಪಟ್ಟು ಪರಮ ಹರ್ಷಿತನಾದನು.
09045083a ತತೋ ದುಂದುಭಯೋ ರಾಜನ್ನೇದುಃ ಶಂಖಾಶ್ಚ ಭಾರತ।
09045083c ಮುಮುಚುರ್ದೇವಯೋಷಾಶ್ಚ ಪುಷ್ಪವರ್ಷಮನುತ್ತಮಂ।।
ರಾಜನ್! ಭಾರತ! ಆಗ ದುಂದುಭಿ-ಶಂಖಗಳು ಮೊಳಗಿದವು. ದೇವಸ್ತ್ರೀಯರು ಮೇಲಿಂದ ಅನುತ್ತಮ ಪುಷ್ಪವೃಷ್ಟಿಯನ್ನು ಸುರಿಸಿದರು.
09045084a ದಿವ್ಯಗಂಧಮುಪಾದಾಯ ವವೌ ಪುಣ್ಯಶ್ಚ ಮಾರುತಃ।
09045084c ಗಂಧರ್ವಾಸ್ತುಷ್ಟುವುಶ್ಚೈನಂ ಯಜ್ವಾನಶ್ಚ ಮಹರ್ಷಯಃ।।
ಮಾರುತನು ಪುಣ್ಯ ದಿವ್ಯಗಂಧಗಳನ್ನು ಹೊತ್ತು ಬೀಸಿದನು. ಗಂಧರ್ವರು ಮತ್ತು ಯಜ್ಞಪರಾಯಣ ಮಹರ್ಷಿಗಳು ಅವನನ್ನು ಸ್ತುತಿಸಿದರು.
09045085a ಕೇ ಚಿದೇನಂ ವ್ಯವಸ್ಯಂತಿ ಪಿತಾಮಹಸುತಂ ಪ್ರಭುಂ।
09045085c ಸನತ್ಕುಮಾರಂ ಸರ್ವೇಷಾಂ ಬ್ರಹ್ಮಯೋನಿಂ ತಮಗ್ರಜಂ।।
ಕೆಲವರು ಆ ಪ್ರಭುವನ್ನು ಪಿತಾಮಹನ ಸುತನೆಂದೂ ಎಲ್ಲರಿಗೂ ಮೊದಲು ಬ್ರಹ್ಮಯೋನಿಯಲ್ಲಿ ಹುಟ್ಟಿದ ಸನತ್ಕುಮಾರನೆಂದೂ ಹೇಳುತ್ತಿದ್ದರು.
09045086a ಕೇ ಚಿನ್ಮಹೇಶ್ವರಸುತಂ ಕೇ ಚಿತ್ಪುತ್ರಂ ವಿಭಾವಸೋಃ।
09045086c ಉಮಾಯಾಃ ಕೃತ್ತಿಕಾನಾಂ ಚ ಗಂಗಾಯಾಶ್ಚ ವದಂತ್ಯುತ।।
ಕೆಲವರು ಅವನನ್ನು ಮಹೇಶ್ವರ ಸುತನೆಂದೂ ಕೆಲವರು ವಿಭಾವಸುವಿನ ಪುತ್ರನೆಂದು, ಉಮೆ, ಕೃತ್ತಿಕರು ಮತ್ತು ಗಂಗೆಯ ಪುತ್ರನೆಂದೂ ಹೇಳುತ್ತಿದ್ದರು.
09045087a ಏಕಧಾ ಚ ದ್ವಿಧಾ ಚೈವ ಚತುರ್ಧಾ ಚ ಮಹಾಬಲಂ।
09045087c ಯೋಗಿನಾಮೀಶ್ವರಂ ದೇವಂ ಶತಶೋಽಥ ಸಹಸ್ರಶಃ।।
ಯೋಗಿಗಳ ಈಶ್ವರನಾದ ಆ ದೇವ ಮಹಾಬಲನನ್ನು ಒಬ್ಬನನ್ನಾಗಿಯೂ, ಇಬ್ಬರನ್ನಾಗಿಯೂ, ನಾಲ್ವರನ್ನಾಗಿಯೂ, ನೂರಾರು ಸಹಸ್ರಾರು ರೂಪಗಳಲ್ಲಿ ಕಾಣುತ್ತಿದ್ದರು.
09045088a ಏತತ್ತೇ ಕಥಿತಂ ರಾಜನ್ಕಾರ್ತ್ತಿಕೇಯಾಭಿಷೇಚನಂ।
09045088c ಶೃಣು ಚೈವ ಸರಸ್ವತ್ಯಾಸ್ತೀರ್ಥವಂಶಸ್ಯ ಪುಣ್ಯತಾಂ।।
ರಾಜನ್! ಕಾರ್ತಿಕೇಯನ ಅಭಿಷೇಕಕ್ಕೆ ಸಂಬಂಧಿಸಿದಂತೆ ಹೇಳಿಯಾಯಿತು. ಈಗ ಸರಸ್ವತೀ ತೀರದ ತೀರ್ಥಗಳ ಪುಣ್ಯತೆಗಳ ಕುರಿತು ಕೇಳು.
09045089a ಬಭೂವ ತೀರ್ಥಪ್ರವರಂ ಹತೇಷು ಸುರಶತ್ರುಷು।
09045089c ಕುಮಾರೇಣ ಮಹಾರಾಜ ತ್ರಿವಿಷ್ಟಪಮಿವಾಪರಂ।।
ಮಹಾರಾಜ! ಕುಮಾರನಿಂದ ಸುರಶತ್ರುಗಳು ಹತರಾಗಲು ಆ ಶ್ರೇಷ್ಠ ತೀರ್ಥವು ಇನ್ನೊಂದು ಸ್ವರ್ಗದಂತೆಯೇ ಆಯಿತು.
09045090a ಐಶ್ವರ್ಯಾಣಿ ಚ ತತ್ರಸ್ಥೋ ದದಾವೀಶಃ ಪೃಥಕ್ಪೃಥಕ್।
09045090c ತದಾ ನೈರೃತಮುಖ್ಯೇಭ್ಯಸ್ತ್ರೈಲೋಕ್ಯೇ ಪಾವಕಾತ್ಮಜಃ।।
ಅಲ್ಲಿದ್ದ ಪಾವಕಾತ್ಮಜ ಈಶನು ಐಶ್ವರ್ಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೈರೃತನೇ ಮೊದಲಾದ ಲೋಕಪಾಲಕರಿಗಿತ್ತನು.
09045091a ಏವಂ ಸ ಭಗವಾಂಸ್ತಸ್ಮಿಂಸ್ತೀರ್ಥೇ ದೈತ್ಯಕುಲಾಂತಕಃ।
09045091c ಅಭಿಷಿಕ್ತೋ ಮಹಾರಾಜ ದೇವಸೇನಾಪತಿಃ ಸುರೈಃ।।
ಮಹಾರಾಜ! ಹೀಗೆ ಆ ತೀರ್ಥದಲ್ಲಿ ದೈತ್ಯಕುಲಾಂತಕ ಭಗವಾನನು ದೇವಸೇನಾಪತಿಯಾಗಿ ಸುರರಿಂದ ಅಭಿಷಿಕ್ತನಾಗಿದ್ದನು.
09045092a ಔಜಸಂ ನಾಮ ತತ್ತೀರ್ಥಂ ಯತ್ರ ಪೂರ್ವಮಪಾಂ ಪತಿಃ।
09045092c ಅಭಿಷಿಕ್ತಃ ಸುರಗಣೈರ್ವರುಣೋ ಭರತರ್ಷಭ।।
ಭರತರ್ಷಭ! ಹಿಂದೆ ಪೂರ್ವದಲ್ಲಿ ಅಪಾಂಪತಿ ವರುಣನು ಸುರಗಣಗಳಿಂದ ಅಭಿಷಿಕ್ತನಾದ ತೀರ್ಥವು ಔಜಸ ಎಂಬ ಹೆಸರಿನ ತೀರ್ಥವು.
09045093a ತಸ್ಮಿಂಸ್ತೀರ್ಥವರೇ ಸ್ನಾತ್ವಾ ಸ್ಕಂದಂ ಚಾಭ್ಯರ್ಚ್ಯ ಲಾಂಗಲೀ।
09045093c ಬ್ರಾಹ್ಮಣೇಭ್ಯೋ ದದೌ ರುಕ್ಮಂ ವಾಸಾಂಸ್ಯಾಭರಣಾನಿ ಚ।।
ಆ ಶ್ರೇಷ್ಠ ತೀರ್ಥದಲ್ಲಿ ಸ್ನಾನಮಾಡಿ ಸ್ಕಂದನನ್ನು ಅರ್ಚಿಸಿ ಲಾಂಗಲಿ ಬಲರಾಮನು ಬ್ರಾಹ್ಮಣರಿಗೆ ಚಿನ್ನ-ವಸ್ತ್ರ-ಆಭರಣಗಳನ್ನು ದಾನಮಾಡಿದನು.
09045094a ಉಷಿತ್ವಾ ರಜನೀಂ ತತ್ರ ಮಾಧವಃ ಪರವೀರಹಾ।
09045094c ಪೂಜ್ಯ ತೀರ್ಥವರಂ ತಚ್ಚ ಸ್ಪೃಷ್ಟ್ವಾ ತೋಯಂ ಚ ಲಾಂಗಲೀ।।
09045094e ಹೃಷ್ಟಃ ಪ್ರೀತಮನಾಶ್ಚೈವ ಹ್ಯಭವನ್ಮಾಧವೋತ್ತಮಃ।।
ಆ ಪೂಜ್ಯ ಶ್ರೇಷ್ಠ ತೀರ್ಥದಲ್ಲಿ ನೀರನ್ನು ಮುಟ್ಟಿ ರಾತ್ರಿಯನ್ನು ಕಳೆದ ಪರವೀರಹ, ಮಾಧವೋತ್ತಮ, ಮಾಧವ ಲಾಂಗಲಿಯು ಪ್ರೀತಮನಸ್ಕನಾಗಿ ಹರ್ಷಿತನಾದನು.
09045095a ಏತತ್ತೇ ಸರ್ವಮಾಖ್ಯಾತಂ ಯನ್ಮಾಂ ತ್ವಂ ಪರಿಪೃಚ್ಚಸಿ।
09045095c ಯಥಾಭಿಷಿಕ್ತೋ ಭಗವಾನ್ಸ್ಕಂದೋ ದೇವೈಃ ಸಮಾಗತೈಃ।।
ನೀನು ಕೇಳಿದಂತೆ ದೇವತೆಗಳು ಒಂದಾಗಿ ಭಗವಾನ್ ಸ್ಕಂದನನ್ನು ಅಭಿಷೇಕಿಸಿದ ಕುರಿತು ಎಲ್ಲವನ್ನೂ ಹೇಳಿದ್ದೇನೆ.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ತಾರಕವಧೇ ಪಂಚಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ತಾರಕವಧ ಎನ್ನುವ ನಲ್ವತ್ತೈದನೇ ಅಧ್ಯಾಯವು.