ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಸಾರಸ್ವತ ಪರ್ವ
ಅಧ್ಯಾಯ 44
ಸಾರ
ಸ್ಕಂದನಿಗೆ ದೇವಸೇನಪತ್ಯಾಭಿಷೇಕ (1-110).
09044001 ವೈಶಂಪಾಯನ ಉವಾಚ 09044001a ತತೋಽಭಿಷೇಕಸಂಭಾರಾನ್ಸರ್ವಾನ್ಸಂಭೃತ್ಯ ಶಾಸ್ತ್ರತಃ।
09044001c ಬೃಹಸ್ಪತಿಃ ಸಮಿದ್ಧೇಽಗ್ನೌ ಜುಹಾವಾಜ್ಯಂ ಯಥಾವಿಧಿ।।
ವೈಶಂಪಾಯನನು ಹೇಳಿದನು: “ಅನಂತರ ಬೃಹಸ್ಪತಿಯು ಶಾಸ್ತ್ರಸಮ್ಮತವಾದ ಎಲ್ಲ ಅಭಿಷೇಕಸಾಮಾಗ್ರಿಗಳನ್ನೂ ಸಂಗ್ರಹಿಸಿ ಯಥಾವಿಧಿಯಾಗಿ ಅಗ್ನಿಯಲ್ಲಿ ಸಮಿತ್ತು-ತುಪ್ಪಗಳ ಆಹುತಿಗಳನ್ನಿತ್ತನು.
09044002a ತತೋ ಹಿಮವತಾ ದತ್ತೇ ಮಣಿಪ್ರವರಶೋಭಿತೇ।
09044002c ದಿವ್ಯರತ್ನಾಚಿತೇ ದಿವ್ಯೇ ನಿಷಣ್ಣಃ ಪರಮಾಸನೇ।।
09044003a ಸರ್ವಮಂಗಲಸಂಭಾರೈರ್ವಿಧಿಮಂತ್ರಪುರಸ್ಕೃತಂ।
09044003c ಆಭಿಷೇಚನಿಕಂ ದ್ರವ್ಯಂ ಗೃಹೀತ್ವಾ ದೇವತಾಗಣಾಃ।।
ಆಗ ಹಿಮವತನು ನೀಡಿದ್ದ ಮಣಿಪ್ರವರಶೋಭಿತ ದಿವ್ಯರತ್ನಗಳಿಂದ ಅಲಂಕೃತ ದಿವ್ಯ ಪರಮಾಸನದಲ್ಲಿ ಕುಮಾರನನ್ನು ಕುಳ್ಳಿರಿಸಿ ದೇವಗಣಗಳು ವಿಧಿವತ್ತಾಗಿ ಮಂತ್ರಪೂರ್ವಕವಾಗಿ ಅಭಿಷೇಕಕ್ಕೆ ಬೇಕಾಗುವ ಸರ್ವ ಮಂಗಲದ್ರವ್ಯಗಳನ್ನೂ ಹಿಡಿದು ಬಂದರು.
09044004a ಇಂದ್ರಾವಿಷ್ಣೂ ಮಹಾವೀರ್ಯೌ ಸೂರ್ಯಾಚಂದ್ರಮಸೌ ತಥಾ।
09044004c ಧಾತಾ ಚೈವ ವಿಧಾತಾ ಚ ತಥಾ ಚೈವಾನಿಲಾನಲೌ।।
09044005a ಪೂಷ್ಣಾ ಭಗೇನಾರ್ಯಮ್ಣಾ ಚ ಅಂಶೇನ ಚ ವಿವಸ್ವತಾ।
09044005c ರುದ್ರಶ್ಚ ಸಹಿತೋ ಧೀಮಾನ್ಮಿತ್ರೇಣ ವರುಣೇನ ಚ।।
09044006a ರುದ್ರೈರ್ವಸುಭಿರಾದಿತ್ಯೈರಶ್ವಿಭ್ಯಾಂ ಚ ವೃತಃ ಪ್ರಭುಃ।
09044006c ವಿಶ್ವೇದೇವೈರ್ಮರುದ್ಭಿಶ್ಚ ಸಾಧ್ಯೈಶ್ಚ ಪಿತೃಭಿಃ ಸಹ।।
09044007a ಗಂಧರ್ವೈರಪ್ಸರೋಭಿಶ್ಚ ಯಕ್ಷರಾಕ್ಷಸಪನ್ನಗೈಃ।
09044007c ದೇವರ್ಷಿಭಿರಸಂಖ್ಯೇಯೈಸ್ತಥಾ ಬ್ರಹ್ಮರ್ಷಿಭಿರ್ವರೈಃ।।
09044008a ವೈಖಾನಸೈರ್ವಾಲಖಿಲ್ಯೈರ್ವಾಯ್ವಾಹಾರೈರ್ಮರೀಚಿಪೈಃ।
09044008c ಭೃಗುಭಿಶ್ಚಾಂಗಿರೋಭಿಶ್ಚ ಯತಿಭಿಶ್ಚ ಮಹಾತ್ಮಭಿಃ।।
09044008e ಸರ್ವೈರ್ವಿದ್ಯಾಧರೈಃ ಪುಣ್ಯೈರ್ಯೋಗಸಿದ್ಧೈಸ್ತಥಾ ವೃತಃ।
09044009a ಪಿತಾಮಹಃ ಪುಲಸ್ತ್ಯಶ್ಚ ಪುಲಹಶ್ಚ ಮಹಾತಪಾಃ।।
09044009c ಅಂಗಿರಾಃ ಕಶ್ಯಪೋಽತ್ರಿಶ್ಚ ಮರೀಚಿರ್ಭೃಗುರೇವ ಚ।
09044010a ಕ್ರತುರ್ಹರಃ ಪ್ರಚೇತಾಶ್ಚ ಮನುರ್ದಕ್ಷಸ್ತಥೈವ ಚ।।
09044010c ಋತವಶ್ಚ ಗ್ರಹಾಶ್ಚೈವ ಜ್ಯೋತೀಂಷಿ ಚ ವಿಶಾಂ ಪತೇ।
09044011a ಮೂರ್ತಿಮತ್ಯಶ್ಚ ಸರಿತೋ ವೇದಾಶ್ಚೈವ ಸನಾತನಾಃ।।
09044011c ಸಮುದ್ರಾಶ್ಚ ಹ್ರದಾಶ್ಚೈವ ತೀರ್ಥಾನಿ ವಿವಿಧಾನಿ ಚ।
09044011e ಪೃಥಿವೀ ದ್ಯೌರ್ದಿಶಶ್ಚೈವ ಪಾದಪಾಶ್ಚ ಜನಾಧಿಪ।।
09044012a ಅದಿತಿರ್ದೇವಮಾತಾ ಚ ಹ್ರೀಃ ಶ್ರೀಃ ಸ್ವಾಹಾ ಸರಸ್ವತೀ।
09044012c ಉಮಾ ಶಚೀ ಸಿನೀವಾಲೀ ತಥಾ ಚಾನುಮತಿಃ ಕುಹೂಃ।।
09044012e ರಾಕಾ ಚ ಧಿಷಣಾ ಚೈವ ಪತ್ನ್ಯಶ್ಚಾನ್ಯಾ ದಿವೌಕಸಾಂ 09044013a ಹಿಮವಾಂಶ್ಚೈವ ವಿಂಧ್ಯಶ್ಚ ಮೇರುಶ್ಚಾನೇಕಶೃಂಗವಾನ್।
09044013c ಐರಾವತಃ ಸಾನುಚರಃ ಕಲಾಃ ಕಾಷ್ಠಾಸ್ತಥೈವ ಚ।।
09044013e ಮಾಸಾರ್ಧಮಾಸಾ ಋತವಸ್ತಥಾ ರಾತ್ರ್ಯಹನೀ ನೃಪ।।
09044014a ಉಚ್ಚೈಃಶ್ರವಾ ಹಯಶ್ರೇಷ್ಠೋ ನಾಗರಾಜಶ್ಚ ವಾಮನಃ।
09044014c ಅರುಣೋ ಗರುಡಶ್ಚೈವ ವೃಕ್ಷಾಶ್ಚೌಷಧಿಭಿಃ ಸಹ।।
09044015a ಧರ್ಮಶ್ಚ ಭಗವಾನ್ದೇವಃ ಸಮಾಜಗ್ಮುರ್ಹಿ ಸಂಗತಾಃ।
09044015c ಕಾಲೋ ಯಮಶ್ಚ ಮೃತ್ಯುಶ್ಚ ಯಮಸ್ಯಾನುಚರಾಶ್ಚ ಯೇ।।
09044016a ಬಹುಲತ್ವಾಚ್ಚ ನೋಕ್ತಾ ಯೇ ವಿವಿಧಾ ದೇವತಾಗಣಾಃ।
09044016c ತೇ ಕುಮಾರಾಭಿಷೇಕಾರ್ಥಂ ಸಮಾಜಗ್ಮುಸ್ತತಸ್ತತಃ।।
ವಿಶಾಂಪತೇ! ಜನಾಧಿಪ! ಮಹಾವೀರ್ಯ ಇಂದ್ರ ಮತ್ತು ವಿಷ್ಣು, ಸೂರ್ಯ-ಚಂದ್ರರು, ಧಾತಾ-ವಿಧಾತರು, ಅನಿಲ-ಅನಲರು, ಪೂಷ್ಣಾ-ಭಗಾರ್ಯಮರು, ಅಂಶ-ವಿವಸ್ವತರು, ಧೀಮಾನ್ ರುದ್ರನೊಂದಿಗೆ ಮಿತ್ರ-ವರುಣರು, ರುದ್ರ-ವಸು-ಆದಿತ್ಯ-ಅಶ್ವಿನಿಯರಿಂದ ಸುತ್ತುವರೆಯಲ್ಪಟ್ಟ ಪ್ರಭು ರುದ್ರ, ವಿಶ್ವೇದೇವರು, ಮರುತರು, ಸಾಧ್ಯರು, ಪಿತೃಗಳು, ಗಂಧರ್ವರು, ಅಪ್ಸರೆಯರು, ಯಕ್ಷರು, ರಾಕ್ಷಸರು, ಪನ್ನಗಗಳು, ಅಸಂಖ್ಯ ದೇವರ್ಷಿಗಳು, ಬ್ರಹ್ಮರ್ಷಿ ಶ್ರೇಷ್ಠರು, ವೈಖಾನಸರು, ವಾಲಖಿಲ್ಯರು, ಯಾಯ್ವಾಹಾರರು, ಮರೀಚಿಪರು, ಭೃಗುಗಳು, ಆಂಗೀರಸರು, ಮಹಾತ್ಮ ಯತಿಗಳು, ಸರ್ವ ವಿದ್ಯಾಧರರು, ಪುಣ್ಯಯೋಗಸಿದ್ಧರು, ಮಹಾತಪಸ್ವಿ ಪುಲಸ್ತ್ಯ-ಪುಲಹ-ಅಂಗಿರಸ-ಕಶ್ಯಪ-ಅತ್ರಿ-ಮರೀಚಿ-ಭೃಗುಗಳಿಂದ ಆವೃತನಾದ ಪಿತಾಮಹ, ಕ್ರತು, ಹರ, ಪ್ರಚೇತಸರು, ಮನು, ದಕ್ಷ, ಋತುಗಳು, ಗ್ರಹಗಳು, ನಕ್ಷತ್ರಗಳು, ಮೂರ್ತಿಮತ್ತಾದ ನದಿಗಳು ಮತ್ತು ಸನಾತನ ವೇದಗಳು, ಸಮುದ್ರ-ಸರೋವರಗಳು, ವಿವಿಧ ತೀರ್ಥಗಳು, ಪೃಥ್ವಿ-ಆಕಾಶ-ದಿಕ್ಕು-ವೃಕ್ಷಗಳು, ದೇವಮಾತೆ ಅದಿತಿ, ಹ್ರೀ, ಶ್ರೀ, ಸ್ವಾಹಾ, ಸರಸ್ವತೀ, ಉಪಾ, ಶಚೀ, ಸಿನೀವಾಲೀ, ಅನುಮತಿ, ಕುಹೂ, ರಾಕಾ, ದಿಷಣಾ, ಮತ್ತು ಅನ್ಯ ದೇವಪತ್ನಿಯರು, ಹಿಮವಂತ, ವಿಂಧ್ಯ ಮತ್ತು ಅನೇಕ ಶಿಖರಗಳ ಮೇರು, ಅನುಚರರೊಂದಿಗೆ ಐರಾವತ, ಕಲಾ, ಕಾಷ್ಠ, ಮಾಸ, ಪಕ್ಷ, ಋತು, ರಾತ್ರಿ, ಹಗಲು, ಕುದುರೆಗಳಲ್ಲಿ ಶ್ರೇಷ್ಠ ಉಚ್ಛೈಶ್ರವಸ್, ನಾಗರಾಜ ವಾಸುಕಿ, ಅರುಣ, ಗರುಡ, ಔಷಧಿಯುಕ್ತ ವೃಕ್ಷಗಳು, ಭಗವಾನ್ ಧರ್ಮದೇವ, ಕಾಲ, ಯಮ, ಮೃತ್ಯು, ಯಮನ ಅನುಯಾಯಿಗಳು - ಇವರೆಲ್ಲರೂ ಕುಮಾರನ ಅಭಿಷೇಖಾರ್ಥವಾಗಿ ಅಲ್ಲಿ ನೆರೆದಿದ್ದರು.
09044017a ಜಗೃಹುಸ್ತೇ ತದಾ ರಾಜನ್ಸರ್ವ ಏವ ದಿವೌಕಸಃ।
09044017c ಆಭಿಷೇಚನಿಕಂ ಭಾಂಡಂ ಮಂಗಲಾನಿ ಚ ಸರ್ವಶಃ।।
ರಾಜನ್! ಎಲ್ಲ ದಿವೌಕಸರೂ ಅಭಿಷೇಕಕ್ಕಾಗಿ ಮಂಗಲ ದ್ರವ್ಯಗಳ ಪಾತ್ರೆಗಳನ್ನು ಹಿಡಿದು ಎಲ್ಲೆಡೆ ನಿಂತಿದ್ದರು.
09044018a ದಿವ್ಯಸಂಭಾರಸಮ್ಯುಕ್ತೈಃ ಕಲಶೈಃ ಕಾಂಚನೈರ್ನೃಪ।
09044018c ಸರಸ್ವತೀಭಿಃ ಪುಣ್ಯಾಭಿರ್ದಿವ್ಯತೋಯಾಭಿರೇವ ತು।।
09044019a ಅಭ್ಯಷಿಂಚನ್ಕುಮಾರಂ ವೈ ಸಂಪ್ರಹೃಷ್ಟಾ ದಿವೌಕಸಃ।
09044019c ಸೇನಾಪತಿಂ ಮಹಾತ್ಮಾನಮಸುರಾಣಾಂ ಭಯಾವಹಂ।।
ನೃಪ! ದಿವ್ಯಸಂಭಾರಸಂಯುಕ್ತ ಕಾಂಚನ ಕಲಶಗಳಲ್ಲಿ ಸರಸ್ವತಿಯೇ ಮೊದಲಾದ ಪುಣ್ಯ ತೀರ್ಥಗಳನ್ನು ತುಂಬಿಸಿ ಸಂಪ್ರಹೃಷ್ಟ ದಿವೌಕಸರು ಅಸುರರಿಗೆ ಭಯಂಕರನಾದ ಮಹಾತ್ಮ ಕುಮಾರನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದರು.
09044020a ಪುರಾ ಯಥಾ ಮಹಾರಾಜ ವರುಣಂ ವೈ ಜಲೇಶ್ವರಂ।
09044020c ತಥಾಭ್ಯಷಿಂಚದ್ಭಗವಾನ್ಬ್ರಹ್ಮಾ ಲೋಕಪಿತಾಮಹಃ।।
09044020e ಕಶ್ಯಪಶ್ಚ ಮಹಾತೇಜಾ ಯೇ ಚಾನ್ಯೇ ನಾನುಕೀರ್ತಿತಾಃ।।
ಮಹಾರಾಜ! ಹಿಂದೆ ಜಲೇಶ್ವರ ವರುಣನನ್ನು ಹೇಗೆ ಅಭಿಷೇಕಿಸಿದ್ದರೋ ಹಾಗೆ ಲೋಕಪಿತಾಮಹ ಭಗವಾನ್ ಬ್ರಹ್ಮ, ಮಹಾತೇಜಸ್ವಿ ಕಶ್ಯಪ ಮತ್ತು ಇಲ್ಲಿ ಹೆಸರಿಸದ ಅನ್ಯರು ಕುಮಾರನನ್ನು ಅಭಿಷೇಕಿಸಿದರು.
09044021a ತಸ್ಮೈ ಬ್ರಹ್ಮಾ ದದೌ ಪ್ರೀತೋ ಬಲಿನೋ ವಾತರಂಹಸಃ।
09044021c ಕಾಮವೀರ್ಯಧರಾನ್ಸಿದ್ಧಾನ್ಮಹಾಪಾರಿಷದಾನ್ಪ್ರಭುಃ।।
09044022a ನಂದಿಷೇಣಂ ಲೋಹಿತಾಕ್ಷಂ ಘಂಟಾಕರ್ಣಂ ಚ ಸಮ್ಮತಂ।
09044022c ಚತುರ್ಥಮಸ್ಯಾನುಚರಂ ಖ್ಯಾತಂ ಕುಮುದಮಾಲಿನಂ।।
ಅವನ ಮೇಲೆ ಪ್ರೀತನಾದ ವಾತರಂಹಸ ಪ್ರಭುವು ಕುಮಾರನಿಗೆ ಬೇಕಾದ ವೀರ್ಯಸಂಪತ್ತನ್ನು ಪಡೆದುಕೊಳ್ಳಬಲ್ಲ ಬಲಶಾಲೀ ನಾಲ್ಕು ಸಿದ್ಧರನ್ನು ಮಹಾ ಪಾರಿತೋಷವಾಗಿ ಕೊಟ್ಟನು. ನಂದಿಷೇಣ, ಲೋಹಿತಾಕ್ಷ, ಘಂಟಕರ್ಣಾ ಮತ್ತು ಕುಮುದಮಾಲಿನಿ ಇವರೇ ಕುಮಾರನ ವಿಖ್ಯಾತ ನಾಲ್ವರು ಅನುಚರರು.
09044023a ತತಃ ಸ್ಥಾಣುಂ ಮಹಾವೇಗಂ ಮಹಾಪಾರಿಷದಂ ಕ್ರತುಂ।
09044023c ಮಾಯಾಶತಧರಂ ಕಾಮಂ ಕಾಮವೀರ್ಯಬಲಾನ್ವಿತಂ।।
09044023e ದದೌ ಸ್ಕಂದಾಯ ರಾಜೇಂದ್ರ ಸುರಾರಿವಿನಿಬರ್ಹಣಂ।।
ರಾಜೇಂದ್ರ! ಆಗ ಸ್ಥಾಣುವು ಮಹಾವೇಗಯುಕ್ತ, ನೂರಾರು ಮಾಯೆಗಳನ್ನು ಅರಿತಿದ್ದ, ಬೇಕಾದ ವೀರ್ಯಬಲಗಳನ್ನು ಪಡೆಯಬಲ್ಲ, ಸುರಾರಿಗಳನ್ನು ಸಂಹರಿಸಬಲ್ಲ ಕಾಮನನ್ನು ಸ್ಕಂದನಿಗೆ ಮಹಾ ಪಾರಿತೋಷವಾಗಿ ನೀಡಿದನು.
09044024a ಸ ಹಿ ದೇವಾಸುರೇ ಯುದ್ಧೇ ದೈತ್ಯಾನಾಂ ಭೀಮಕರ್ಮಣಾಂ।
09044024c ಜಘಾನ ದೋರ್ಭ್ಯಾಂ ಸಂಕ್ರುದ್ಧಃ ಪ್ರಯುತಾನಿ ಚತುರ್ದಶ।।
ಆ ಭೀಮಕರ್ಮಿಯೇ ದೇವಾಸುರ ಯುದ್ಧದಲ್ಲಿ ಸಂಕ್ರುದ್ಧನಾಗಿ ತನ್ನ ಎರಡು ಬಾಹುಗಳಿಂದಲೇ ಹದಿನಾಲ್ಕು ದಶಲಕ್ಷ ದೈತ್ಯರನ್ನು ಸಂಹರಿಸಿದನು.
09044025a ತಥಾ ದೇವಾ ದದುಸ್ತಸ್ಮೈ ಸೇನಾಂ ನೈರೃತಸಂಕುಲಾಂ।
09044025c ದೇವಶತ್ರುಕ್ಷಯಕರೀಮಜಯ್ಯಾಂ ವಿಶ್ವರೂಪಿಣೀಂ।।
ಹಾಗೆಯೇ ದೇವತೆಗಳು ಅವನಿಗೆ ನೈರೃತ್ತರಿಂದ ಕೂಡಿದ್ದ ದೇವಶತ್ರುಗಳನ್ನು ನಾಶಪಡಿಸಬಲ್ಲ, ಅಜೇಯವಾದ ವಿಶ್ವರೂಪಿಣೀ ಸೇನೆಯನ್ನು ಒಪ್ಪಿಸಿದರು.
09044026a ಜಯಶಬ್ದಂ ತತಶ್ಚಕ್ರುರ್ದೇವಾಃ ಸರ್ವೇ ಸವಾಸವಾಃ।
09044026c ಗಂಧರ್ವಯಕ್ಷರಕ್ಷಾಂಸಿ ಮುನಯಃ ಪಿತರಸ್ತಥಾ।।
ವಾಸವನೊಂದಿಗೆ ಸರ್ವ ದೇವತೆಗಳೂ, ಗಂಧರ್ವ-ಯಕ್ಷ-ರಾಕ್ಷಸರೂ, ಮುನಿ-ಪಿತೃಗಳೂ ಜಯಕಾರ ಮಾಡಿದರು.
09044027a ಯಮಃ ಪ್ರಾದಾದನುಚರೌ ಯಮಕಾಲೋಪಮಾವುಭೌ।
09044027c ಉನ್ಮಾಥಂ ಚ ಪ್ರಮಾಥಂ ಚ ಮಹಾವೀರ್ಯೌ ಮಹಾದ್ಯುತೀ।।
ಯಮನು ಸ್ಕಂದನಿಗೆ ಯಮ-ಕಾಲರಂತಿದ್ದ ಉನ್ಮಾಥ-ಪ್ರಮಾಥರೆಂಬ ಇಬ್ಬರು ಮಹಾವೀರ್ಯ ಮಹಾದ್ಯುತೀ ಅನುಚರರನ್ನು ಕೊಟ್ಟನು.
09044028a ಸುಭ್ರಾಜೋ ಭಾಸ್ಕರಶ್ಚೈವ ಯೌ ತೌ ಸೂರ್ಯಾನುಯಾಯಿನೌ।
09044028c ತೌ ಸೂರ್ಯಃ ಕಾರ್ತ್ತಿಕೇಯಾಯ ದದೌ ಪ್ರೀತಃ ಪ್ರತಾಪವಾನ್।।
ಪ್ರತಾಪವಾನ್ ಸೂರ್ಯನು ಪ್ರೀತಿಯಿಂದ ಕಾರ್ತಿಕೇಯನಿಗೆ ಸೂರ್ಯಾನುಯಾಯಿಗಳಾಗಿದ್ದ ಸುಭ್ರಾಜ-ಭಾಸ್ಕರರನ್ನು ಒಪ್ಪಿಸಿದನು.
09044029a ಕೈಲಾಸಶೃಂಗಸಂಕಾಶೌ ಶ್ವೇತಮಾಲ್ಯಾನುಲೇಪನೌ।
09044029c ಸೋಮೋಽಪ್ಯನುಚರೌ ಪ್ರಾದಾನ್ಮಣಿಂ ಸುಮಣಿಮೇವ ಚ।।
ಸೋಮನು ಕೈಲಾಸಶೃಂಗದಂತಿದ್ದ, ಶ್ವೇತಮಾಲೆ-ಲೇಪನಗಳನ್ನು ಧರಿಸಿದ್ದ ಮಣಿ-ಸುಮಣಿ ಎನ್ನುವ ಇಬ್ಬರು ಅನುಚರರನ್ನು ನೀಡಿದನು.
09044030a ಜ್ವಾಲಾಜಿಹ್ವಂ ತಥಾ ಜ್ಯೋತಿರಾತ್ಮಜಾಯ ಹುತಾಶನಃ।
09044030c ದದಾವನುಚರೌ ಶೂರೌ ಪರಸೈನ್ಯಪ್ರಮಾಥಿನೌ।।
ಹುತಾಶನನು ತನ್ನ ಮಗನಿಗೆ ಜ್ವಾಲಾಜಿಹ್ವ ಮತ್ತು ಜ್ಯೋತಿ ಎನ್ನುವ ಇಬ್ಬರು ಶೂರ ಪರಸೈನ್ಯ ಪ್ರಮಥಿಗಳನ್ನು ಅನುಚರರನ್ನಾಗಿ ಕೊಟ್ಟನು.
09044031a ಪರಿಘಂ ಚ ವಟಂ ಚೈವ ಭೀಮಂ ಚ ಸುಮಹಾಬಲಂ।
09044031c ದಹತಿಂ ದಹನಂ ಚೈವ ಪ್ರಚಂಡೌ ವೀರ್ಯಸಮ್ಮತೌ।।
09044031e ಅಂಶೋಽಪ್ಯನುಚರಾನ್ಪಂಚ ದದೌ ಸ್ಕಂದಾಯ ಧೀಮತೇ।।
ಅಂಶನೂ ಕೂಡ ಪರಿಘ, ವಟ, ಮಹಾಬಲ ಭೀಮ, ದಹತಿ, ಮತ್ತು ದಹನ ಎನ್ನುವ ಪ್ರಚಂಡ ವೀರಸಮನ್ವಿತ ಐವರನ್ನು ಅನುಚರರನ್ನಾಗಿ ಧೀಮತ ಸ್ಕಂದನಿಗೆ ನೀಡಿದನು.
09044032a ಉತ್ಕ್ರೋಶಂ ಪಂಕಜಂ ಚೈವ ವಜ್ರದಂಡಧರಾವುಭೌ।
09044032c ದದಾವನಲಪುತ್ರಾಯ ವಾಸವಃ ಪರವೀರಹಾ।।
09044032e ತೌ ಹಿ ಶತ್ರೂನ್ಮಹೇಂದ್ರಸ್ಯ ಜಘ್ನತುಃ ಸಮರೇ ಬಹೂನ್।।
ಪರವೀರಹ ವಾಸವನು ಉತ್ಕ್ರೋಶ ಮತ್ತು ಪಂಕಜ ಎನ್ನುವ ಇಬ್ಬರು ವಜ್ರ-ದಂಡಧಾರಿಗಳನ್ನು ಅನಲಪುತ್ರನಿಗೆ ನೀಡಿದನು. ಅವರಿಬ್ಬರೂ ಸಮರದಲ್ಲಿ ಅನೇಕ ಮಹೇಂದ್ರ ಶತ್ರುಗಳನ್ನು ಸಂಹರಿಸಿದರು.
09044033a ಚಕ್ರಂ ವಿಕ್ರಮಕಂ ಚೈವ ಸಂಕ್ರಮಂ ಚ ಮಹಾಬಲಂ।
09044033c ಸ್ಕಂದಾಯ ತ್ರೀನನುಚರಾನ್ದದೌ ವಿಷ್ಣುರ್ಮಹಾಯಶಾಃ।।
ಮಹಾಯಶಸ್ವಿ ವಿಷ್ಣುವು ಸ್ಕಂದನಿಗೆ ಚಕ್ರ, ವಿಕ್ರಮಕ ಮತ್ತು ಮಹಾಬಲ ಸಂಕ್ರಮ ಈ ಮೂವರು ಅನುಚರರನ್ನು ನೀಡಿದನು.
09044034a ವರ್ಧನಂ ನಂದನಂ ಚೈವ ಸರ್ವವಿದ್ಯಾವಿಶಾರದೌ।
09044034c ಸ್ಕಂದಾಯ ದದತುಃ ಪ್ರೀತಾವಶ್ವಿನೌ ಭರತರ್ಷಭ।।
ಭರತರ್ಷಭ! ಅಶ್ವಿನಿಯರು ಪ್ರೀತಿಯಿಂದ ಸ್ಕಂದನಿಗೆ ಸರ್ವವಿದ್ಯಾವಿಶಾರದರಾದ ವರ್ಧನ ಮತ್ತು ನಂದನರನ್ನು ನೀಡಿದರು.
09044035a ಕುಂದನಂ ಕುಸುಮಂ ಚೈವ ಕುಮುದಂ ಚ ಮಹಾಯಶಾಃ।
09044035c ಡಂಬರಾಡಂಬರೌ ಚೈವ ದದೌ ಧಾತಾ ಮಹಾತ್ಮನೇ।।
ಆ ಮಹಾತ್ಮನಿಗೆ ಧಾತನು ಕುಂದನ, ಕುಸುಮ, ಕುಮುದ ಮತ್ತು ಮಹಾಯಶರಾದ ಡಂಬರ-ಆಡಂಬರರನ್ನು ನೀಡಿದನು.
09044036a ವಕ್ರಾನುವಕ್ರೌ ಬಲಿನೌ ಮೇಷವಕ್ತ್ರೌ ಬಲೋತ್ಕಟೌ।
09044036c ದದೌ ತ್ವಷ್ಟಾ ಮಹಾಮಾಯೌ ಸ್ಕಂದಾಯಾನುಚರೌ ವರೌ।।
ತ್ವಷ್ಟನು ಸ್ಕಂದನ ಅನುಚರರನ್ನಾಗಿ ಶ್ರೇಷ್ಠ-ಬಲೋತ್ಕಟ-ಮೇಷದ ಮುಖವುಳ್ಳ-ಬಲಶಾಲೀ ವಕ್ರ-ಅನುವಕ್ರರನ್ನು ನೀಡಿದನು.
09044037a ಸುವ್ರತಂ ಸತ್ಯಸಂಧಂ ಚ ದದೌ ಮಿತ್ರೋ ಮಹಾತ್ಮನೇ।
09044037c ಕುಮಾರಾಯ ಮಹಾತ್ಮಾನೌ ತಪೋವಿದ್ಯಾಧರೌ ಪ್ರಭುಃ।।
ಪ್ರಭು ಮಿತ್ರನು ಮಹಾತ್ಮ ಕುಮಾರನಿಗೆ ಮಹಾತ್ಮರೂ, ತಪೋವಿದ್ಯಾಧರರೂ ಆದ ಸುವ್ರತ ಮತ್ತು ಸತ್ಯಸಂಧರನ್ನು ನೀಡಿದನು.
09044038a ಸುದರ್ಶನೀಯೌ ವರದೌ ತ್ರಿಷು ಲೋಕೇಷು ವಿಶ್ರುತೌ।
09044038c ಸುಪ್ರಭಂ ಚ ಮಹಾತ್ಮಾನಂ ಶುಭಕರ್ಮಾಣಮೇವ ಚ।।
09044038e ಕಾರ್ತ್ತಿಕೇಯಾಯ ಸಂಪ್ರಾದಾದ್ವಿಧಾತಾ ಲೋಕವಿಶ್ರುತೌ।।
ವಿಧಾತನು ಕಾರ್ತಿಕೇಯನಿಗೆ ಮೂರುಲೋಕಗಳಲ್ಲಿ ವಿಶ್ರುತರಾದ, ನೋಡಲು ಸುಂದರರಾಗಿದ್ದ, ಲೋಕವಿಶ್ರುತ ಸುಪ್ರಭ ಮತ್ತು ಮಹಾತ್ಮ ಶುಭಕರ್ಮರನ್ನು ನೀಡಿದನು.
09044039a ಪಾಲಿತಕಂ ಕಾಲಿಕಂ ಚ ಮಹಾಮಾಯಾವಿನಾವುಭೌ।
09044039c ಪೂಷಾ ಚ ಪಾರ್ಷದೌ ಪ್ರಾದಾತ್ಕಾರ್ತ್ತಿಕೇಯಾಯ ಭಾರತ।।
ಭಾರತ! ಪೂಷನು ಕಾರ್ತಿಕೇಯನಿಗೆ ಪಾಲಿತಕ ಮತ್ತು ಕಾಲಿಕರೆಂಬ ಇಬ್ಬರು ಮಹಾ ಮಾಯಾವಿಗಳನ್ನು ಪಾರ್ಷದರನ್ನಾಗಿ ನೀಡಿದನು.
09044040a ಬಲಂ ಚಾತಿಬಲಂ ಚೈವ ಮಹಾವಕ್ತ್ರೌ ಮಹಾಬಲೌ।
09044040c ಪ್ರದದೌ ಕಾರ್ತ್ತಿಕೇಯಾಯ ವಾಯುರ್ಭರತಸತ್ತಮ।।
ಭರತಸತ್ತಮ! ವಾಯುವು ಕಾರ್ತಿಕೇಯನಿಗೆ ಮಹಾಮುಖಗಳುಳ್ಳ ಮಹಾಬಲಶಾಲೀ ಬಲ ಮತ್ತು ಅತಿಬಲರನ್ನು ಕೊಟ್ಟನು.
09044041a ಘಸಂ ಚಾತಿಘಸಂ ಚೈವ ತಿಮಿವಕ್ತ್ರೌ ಮಹಾಬಲೌ।
09044041c ಪ್ರದದೌ ಕಾರ್ತ್ತಿಕೇಯಾಯ ವರುಣಃ ಸತ್ಯಸಂಗರಃ।।
ಸತ್ಯಸಂಗರ ವರುಣನು ತಿಮಿಂಗಿಲಗಳ ಮುಖವುಳ್ಳ ಮಹಾಬಲಶಾಲೀ ಘಸ ಮತ್ತು ಅತಿಘಸರನ್ನು ಕೊಟ್ಟನು.
09044042a ಸುವರ್ಚಸಂ ಮಹಾತ್ಮಾನಂ ತಥೈವಾಪ್ಯತಿವರ್ಚಸಂ।
09044042c ಹಿಮವಾನ್ಪ್ರದದೌ ರಾಜನ್ ಹುತಾಶನಸುತಾಯ ವೈ।।
ರಾಜನ್! ಹಿಮವಾನನು ಹುತಾಶನಸುತನಿಗೆ ಮಹಾತ್ಮ ಸುವರ್ಚಸ ಮತ್ತು ಹಾಗೆಯೇ ಅತಿವರ್ಚಸರನ್ನು ಕೊಟ್ಟನು.
09044043a ಕಾಂಚನಂ ಚ ಮಹಾತ್ಮಾನಂ ಮೇಘಮಾಲಿನಮೇವ ಚ।
09044043c ದದಾವನುಚರೌ ಮೇರುರಗ್ನಿಪುತ್ರಾಯ ಭಾರತ।।
ಭಾರತ! ಮೇರುವು ಅಗ್ನಿಪುತ್ರನಿಗೆ ಮಹಾತ್ಮ ಕಾಂಚನ ಮತ್ತು ಮೇಘಮಾಲಿನಿಯರನ್ನು ಅನುಚರರನ್ನಾಗಿ ಕೊಟ್ಟನು.
09044044a ಸ್ಥಿರಂ ಚಾತಿಸ್ಥಿರಂ ಚೈವ ಮೇರುರೇವಾಪರೌ ದದೌ।
09044044c ಮಹಾತ್ಮನೇಽಗ್ನಿಪುತ್ರಾಯ ಮಹಾಬಲಪರಾಕ್ರಮೌ।।
ಇವರಲ್ಲದೇ ಮೇರುವು ಮಹಾತ್ಮ ಅಗ್ನಿಪುತ್ರನಿಗಾಗಿ ಮಹಾಬಲಪರಾಕ್ರಮಗಳುಳ್ಳ ಸ್ಥಿರ ಮತ್ತು ಅತಿಸ್ಥಿರರಿಬ್ಬರನ್ನೂ ಕೊಟ್ಟನು.
09044045a ಉಚ್ಚ್ರಿತಂ ಚಾತಿಶೃಂಗಂ ಚ ಮಹಾಪಾಷಾಣಯೋಧಿನೌ।
09044045c ಪ್ರದದಾವಗ್ನಿಪುತ್ರಾಯ ವಿಂಧ್ಯಃ ಪಾರಿಷದಾವುಭೌ।।
ವಿಂಧ್ಯನು ಅಗ್ನಿಪುತ್ರನಿಗೆ ದೊಡ್ಡ ಬಂಡೆಗಳಿಂದ ಯುದ್ಧಮಾಡಬಲ್ಲ ಉಚ್ಚಿತ್ರ ಮತ್ತು ಜಾತಿಶ್ರುಂಗರನ್ನು ಪಾರಿಷದರನ್ನಾಗಿ ಕೊಟ್ಟನು.
09044046a ಸಂಗ್ರಹಂ ವಿಗ್ರಹಂ ಚೈವ ಸಮುದ್ರೋಽಪಿ ಗದಾಧರೌ।
09044046c ಪ್ರದದಾವಗ್ನಿಪುತ್ರಾಯ ಮಹಾಪಾರಿಷದಾವುಭೌ।।
ಸಮುದ್ರನೂ ಕೂಡ ಅಗ್ನಿಪುತ್ರನಿಗೆ ಗದಾಧರರಾದ ಸಂಗ್ರಹ ಮತ್ತು ವಿಗ್ರಹರನ್ನು ಮಹಾಪಾರ್ಷದರನ್ನಾಗಿ ಕೊಟ್ಟನು.
09044047a ಉನ್ಮಾದಂ ಪುಷ್ಪದಂತಂ ಚ ಶಂಕುಕರ್ಣಂ ತಥೈವ ಚ।
09044047c ಪ್ರದದಾವಗ್ನಿಪುತ್ರಾಯ ಪಾರ್ವತೀ ಶುಭದರ್ಶನಾ।।
ಶುಭದರ್ಶನೆ ಪಾರ್ವತಿಯು ಅಗ್ನಿಪುತ್ರನಿಗೆ ಉನ್ಮಾದ, ಪುಷ್ಪದಂತ ಮತ್ತು ಶಂಕುಕರ್ಣರನ್ನು ಕೊಟ್ಟಳು.
09044048a ಜಯಂ ಮಹಾಜಯಂ ಚೈವ ನಾಗೌ ಜ್ವಲನಸೂನವೇ।
09044048c ಪ್ರದದೌ ಪುರುಷವ್ಯಾಘ್ರ ವಾಸುಕಿಃ ಪನ್ನಗೇಶ್ವರಃ।।
ಪುರುಷವ್ಯಾಘ್ರ! ಪನ್ನಗೇಶ್ವರ ವಾಸುಕಿಯು ಜ್ವಲನಸೂನುವಿಗೆ ಜಯ ಮತ್ತು ಮಹಾಜಯರೆಂಬ ನಾಗರನ್ನು ಕೊಟ್ಟನು.
09044049a ಏವಂ ಸಾಧ್ಯಾಶ್ಚ ರುದ್ರಾಶ್ಚ ವಸವಃ ಪಿತರಸ್ತಥಾ।
09044049c ಸಾಗರಾಃ ಸರಿತಶ್ಚೈವ ಗಿರಯಶ್ಚ ಮಹಾಬಲಾಃ।।
09044050a ದದುಃ ಸೇನಾಗಣಾಧ್ಯಕ್ಷಾನ್ ಶೂಲಪಟ್ಟಿಶಧಾರಿಣಃ।
09044050c ದಿವ್ಯಪ್ರಹರಣೋಪೇತಾನ್ನಾನಾವೇಷವಿಭೂಷಿತಾನ್।।
ಹಾಗೆಯೇ ಸಾಧ್ಯರು, ರುದ್ರರು, ವಸುಗಳು, ಪಿತೃಗಳು, ಸಾಗರಗಳು, ನದಿಗಳು, ಮತ್ತು ಮಹಾಬಲ ಗಿರಿಗಳು ಸೇನಾಗಣಾಧ್ಯಕ್ಷನಿಗೆ ಶೂಲ-ಪಟ್ಟಿಶಗಳನ್ನು ಹಿಡಿದಿದ್ದ, ನಾನಾ ವೇಷವಿಭೂಷಿತ ದಿವ್ಯ ಪ್ರಹರಿಗಳನ್ನು ಕೊಟ್ಟರು.
09044051a ಶೃಣು ನಾಮಾನಿ ಚಾನ್ಯೇಷಾಂ ಯೇಽನ್ಯೇ ಸ್ಕಂದಸ್ಯ ಸೈನಿಕಾಃ।
09044051c ವಿವಿಧಾಯುಧಸಂಪನ್ನಾಶ್ಚಿತ್ರಾಭರಣವರ್ಮಿಣಃ।।
ವಿವಿಧ ಆಯುಧಸಂಪನ್ನರೂ ವಿಚಿತ್ರ ಆಭರಣ-ಕವಚಧಾರಿಗಳೂ ಆದ ಸ್ಕಂದನ ಅನ್ಯ ಸೈನಿಕರ ಹೆಸರುಗಳನ್ನು ಕೇಳು.
09044052a ಶಂಕುಕರ್ಣೋ ನಿಕುಂಭಶ್ಚ ಪದ್ಮಃ ಕುಮುದ ಏವ ಚ।
09044052c ಅನಂತೋ ದ್ವಾದಶಭುಜಸ್ತಥಾ ಕೃಷ್ಣೋಪಕೃಷ್ಣಕೌ।।
09044053a ದ್ರೋಣಶ್ರವಾಃ ಕಪಿಸ್ಕಂಧಃ ಕಾಂಚನಾಕ್ಷೋ ಜಲಂಧಮಃ।
09044053c ಅಕ್ಷಸಂತರ್ಜನೋ ರಾಜನ್ಕುನದೀಕಸ್ತಮೋಭ್ರಕೃತ್।।
09044054a ಏಕಾಕ್ಷೋ ದ್ವಾದಶಾಕ್ಷಶ್ಚ ತಥೈವೈಕಜಟಃ ಪ್ರಭುಃ।
09044054c ಸಹಸ್ರಬಾಹುರ್ವಿಕಟೋ ವ್ಯಾಘ್ರಾಕ್ಷಃ ಕ್ಷಿತಿಕಂಪನಃ।।
09044055a ಪುಣ್ಯನಾಮಾ ಸುನಾಮಾ ಚ ಸುವಕ್ತ್ರಃ ಪ್ರಿಯದರ್ಶನಃ।
09044055c ಪರಿಶ್ರುತಃ ಕೋಕನದಃ ಪ್ರಿಯಮಾಲ್ಯಾನುಲೇಪನಃ।।
09044056a ಅಜೋದರೋ ಗಜಶಿರಾಃ ಸ್ಕಂಧಾಕ್ಷಃ ಶತಲೋಚನಃ।
09044056c ಜ್ವಾಲಾಜಿಹ್ವಃ ಕರಾಲಶ್ಚ ಸಿತಕೇಶೋ ಜಟೀ ಹರಿಃ।।
09044057a ಚತುರ್ದಂಷ್ಟ್ರೋಽಷ್ಟಜಿಹ್ವಶ್ಚ ಮೇಘನಾದಃ ಪೃಥುಶ್ರವಾಃ।
09044057c ವಿದ್ಯುದಕ್ಷೋ ಧನುರ್ವಕ್ತ್ರೋ ಜಠರೋ ಮಾರುತಾಶನಃ।।
09044058a ಉದರಾಕ್ಷೋ ಝಷಾಕ್ಷಶ್ಚ ವಜ್ರನಾಭೋ ವಸುಪ್ರಭಃ।
09044058c ಸಮುದ್ರವೇಗೋ ರಾಜೇಂದ್ರ ಶೈಲಕಂಪೀ ತಥೈವ ಚ।।
09044059a ಪುತ್ರಮೇಷಃ ಪ್ರವಾಹಶ್ಚ ತಥಾ ನಂದೋಪನಂದಕೌ।
09044059c ಧೂಮ್ರಃ ಶ್ವೇತಃ ಕಲಿಂಗಶ್ಚ ಸಿದ್ಧಾರ್ಥೋ ವರದಸ್ತಥಾ।।
09044060a ಪ್ರಿಯಕಶ್ಚೈವ ನಂದಶ್ಚ ಗೋನಂದಶ್ಚ ಪ್ರತಾಪವಾನ್।
09044060c ಆನಂದಶ್ಚ ಪ್ರಮೋದಶ್ಚ ಸ್ವಸ್ತಿಕೋ ಧ್ರುವಕಸ್ತಥಾ।।
09044061a ಕ್ಷೇಮವಾಪಃ ಸುಜಾತಶ್ಚ ಸಿದ್ಧಯಾತ್ರಶ್ಚ ಭಾರತ।
09044061c ಗೋವ್ರಜಃ ಕನಕಾಪೀಡೋ ಮಹಾಪಾರಿಷದೇಶ್ವರಃ।।
09044062a ಗಾಯನೋ ಹಸನಶ್ಚೈವ ಬಾಣಃ ಖಡ್ಗಶ್ಚ ವೀರ್ಯವಾನ್।
09044062c ವೈತಾಲೀ ಚಾತಿತಾಲೀ ಚ ತಥಾ ಕತಿಕವಾತಿಕೌ।।
09044063a ಹಂಸಜಃ ಪಘ್ಕದಿಗ್ಧಾಂಗಃ ಸಮುದ್ರೋನ್ಮಾದನಶ್ಚ ಹ।
09044063c ರಣೋತ್ಕಟಃ ಪ್ರಹಾಸಶ್ಚ ಶ್ವೇತಶೀರ್ಷಶ್ಚ ನಂದಕಃ।।
09044064a ಕಾಲಕಂಠಃ ಪ್ರಭಾಸಶ್ಚ ತಥಾ ಕುಂಭಾಂಡಕೋಽಪರಃ।
09044064c ಕಾಲಕಾಕ್ಷಃ ಸಿತಶ್ಚೈವ ಭೂತಲೋನ್ಮಥನಸ್ತಥಾ।।
09044065a ಯಜ್ಞವಾಹಃ ಪ್ರವಾಹಶ್ಚ ದೇವಯಾಜೀ ಚ ಸೋಮಪಃ।
09044065c ಸಜಾಲಶ್ಚ ಮಹಾತೇಜಾಃ ಕ್ರಥಕ್ರಾಥೌ ಚ ಭಾರತ।।
09044066a ತುಹನಶ್ಚ ತುಹಾನಶ್ಚ ಚಿತ್ರದೇವಶ್ಚ ವೀರ್ಯವಾನ್।
09044066c ಮಧುರಃ ಸುಪ್ರಸಾದಶ್ಚ ಕಿರೀಟೀ ಚ ಮಹಾಬಲಃ।।
09044067a ವಸನೋ ಮಧುವರ್ಣಶ್ಚ ಕಲಶೋದರ ಏವ ಚ।
09044067c ಧಮಂತೋ ಮನ್ಮಥಕರಃ ಸೂಚೀವಕ್ತ್ರಶ್ಚ ವೀರ್ಯವಾನ್।।
09044068a ಶ್ವೇತವಕ್ತ್ರಃ ಸುವಕ್ತ್ರಶ್ಚ ಚಾರುವಕ್ತ್ರಶ್ಚ ಪಾಂಡುರಃ।
09044068c ದಂಡಬಾಹುಃ ಸುಬಾಹುಶ್ಚ ರಜಃ ಕೋಕಿಲಕಸ್ತಥಾ।।
09044069a ಅಚಲಃ ಕನಕಾಕ್ಷಶ್ಚ ಬಾಲಾನಾಮಯಿಕಃ ಪ್ರಭುಃ।
09044069c ಸಂಚಾರಕಃ ಕೋಕನದೋ ಗೃಧ್ರವಕ್ತ್ರಶ್ಚ ಜಂಬುಕಃ।।
09044070a ಲೋಹಾಶವಕ್ತ್ರೋ ಜಠರಃ ಕುಂಭವಕ್ತ್ರಶ್ಚ ಕುಂಡಕಃ।
09044070c ಮದ್ಗುಗ್ರೀವಶ್ಚ ಕೃಷ್ಣೌಜಾ ಹಂಸವಕ್ತ್ರಶ್ಚ ಚಂದ್ರಭಾಃ।।
09044071a ಪಾಣಿಕೂರ್ಮಾ ಚ ಶಂಬೂಕಃ ಪಂಚವಕ್ತ್ರಶ್ಚ ಶಿಕ್ಷಕಃ।
09044071c ಚಾಷವಕ್ತ್ರಶ್ಚ ಜಂಬೂಕಃ ಶಾಕವಕ್ತ್ರಶ್ಚ ಕುಂಡಕಃ।।
ಶಂಕುಕರ್ಣ, ನಿಕುಂಭ, ಪದ್ಮ, ಕುಮುದ, ಅನಂತ, ದ್ವಾದಶಭುಜ, ಕೃಷ್ಣ, ಉಪಕೃಷ್ಣ, ದ್ರೋಣಶ್ರವ, ಕಪಿಸ್ಕಂಧ, ಕಾಂಚನಾಕ್ಷ, ಜಲಂಧಮ, ಅಕ್ಷ, ಸಂತರ್ಜನ, ಕುನದೀಕ, ತಮೋಭ್ರಕೃತ್, ಏಕಾಕ್ಷ, ದ್ವಾದಶಾಕ್ಷ, ಏಕಜಟ, ಪ್ರಭು, ಸಹಸ್ರಬಾಹು, ವಿಕಟ, ವ್ಯಾಘ್ರಾಕ್ಷ, ಕ್ಷಿತಿಕಂಪನ, ಪುಣ್ಯನಾಮ, ಸುನಾಮ, ಸುವಕ್ತ್ರ, ಪ್ರಿಯದರ್ಶನ, ಪರಿಶ್ರುತ, ಕೋಕನದ, ಪ್ರಿಯಮಾಲ್ಯಾನುಲೇಪನ, ಅಜೋದರ, ಗಜಶಿರ, ಸ್ಕಂಧಾಕ್ಷ, ಶತಲೋಚನ, ಜ್ವಾಲಜಿಹ್ವ, ಕರಾಲ, ಸಿತಕೇಶ, ಜಟೀ, ಹರಿ, ಚತುರ್ದಂಷ್ಟ್ರ, ಅಷ್ಟಜಿಹ್ವ, ಮೇಘನಾದ, ಪೃಥುಶ್ರವ, ವಿದ್ಯುದಕ್ಷ, ಧನುವ್ರಕ್ತ್ರ, ಜಠರ, ಮಾರುತಾಶನ, ಉದರಾಕ್ಷ, ಝುಷಾಕ್ಷ, ವಜ್ರನಾಭ, ವಸುಪ್ರಭ, ಸಮುದ್ರವೇಗ, ಶೈಲಕಂಪೀ, ಪುತ್ರಮೇಷ, ಪ್ರವಾಹ, ನಂದ, ಉಪನಂದಕ, ಧೂಮ್ರ, ಶ್ವೇತ, ಕಲಿಂಗ, ಸಿದ್ಧಾರ್ಥ, ವರದ, ಪ್ರಿಯಕ, ನಂದ, ಪ್ರತಾಪವಾನ್ ಗೋನಂದ, ಆನಂದ, ಪ್ರಮೋದ, ಸ್ವಸ್ತಿಕ, ಧ್ರುವಕ, ಕ್ಷೇಮವಾಪ, ಸುಜಾತ, ಸಿದ್ಧಯಾತ್ರ, ಗೋವ್ರಜ, ಕನಕಾಪೀಡ, ಮಹಾಪಾರಿದೇಶ್ವರ, ಗಾಯನ, ಹಸನ, ಬಾಣ, ವೀರ್ಯವಾನ್ ಖಡ್ಗ, ವೈತಾಲೀ, ಜಾತಿತಾಲೀ, ಕತಿಕ, ಅತಿಕ, ಹಂಸಜ, ಪಂಕದಿಗ್ಧಾಂಗ, ಸಮುದ್ರ, ಉನ್ಮಾದನ, ರಣೋತ್ಕಟ, ಪ್ರಹಾಸ, ಶ್ವೇತಶೀರ್ಷ, ನಂದಕ, ಕಾಲಕಂಠ, ಪ್ರಭಾಸ, ಕುಂಭಾಂಡಕ, ಅಪರ, ಕಾಲಕಾಕ್ಷ, ಸಿತ, ಭೂತಲೋನ್ಮಥ, ಯಜ್ಞವಾಹ, ಪ್ರವಾಹ, ದೇವಯಾಜೀ, ಸೋಮಪ, ಸಜಾಲ, ಮಹಾತೇಜ ಕ್ರಥ, ಅಕ್ರಥ, ತುಹನ, ತುಹಾನ, ವೀರ್ಯವಾನ್ ಚಿತ್ರದೇವ, ಮಧುರ, ಸುಪ್ರಸಾದ, ಕಿರೀಟೀ, ಮಹಾಬಲ, ಮಸನ, ಮಧುವರ್ಣ, ಕಲಶೋದರ, ಧಮಂತ, ಮನ್ಮಥಕರ, ವೀರ್ಯವಾನ್ ಸೂಚೀವಕ್ತ್ರ, ಶ್ವೇತವಕ್ತ್ರ, ಸುವಕ್ತ್ರ, ಚಾರುವಕ್ತ್ರ, ಪಾಂಡುರ, ದಂಡಬಾಹು, ಸುಬಾಹು, ರಜ, ಕೋಕಿಲ, ಅಚಲ, ಕನಕಾಕ್ಷ, ಬಾಲಾನಾಮಯಿಕ, ಪ್ರಭು, ಸಂಚಾರಕ, ಕೋಕನದ, ಗೃಧ್ರವಕ್ತ್ರ, ಜಂಬುಕ, ಲೋಹಾಶವಕ್ತ್ರ, ಜಠರ, ಕುಂಭವಕ್ತ್ರ, ಕುಂಡಕ, ಮದ್ಗುಗ್ರೀವ, ಕೃಷ್ಣೌಜ, ಹಂಸವಕ್ತ್ರ, ಚಂದ್ರಭ, ಪಾಣಿಕೂರ್ಮ, ಶಂಬೂಕ, ಪಂಚವಕ್ತ್ರ, ಶಿಕ್ಷಕ, ಚಾಷವಕ್ತ್ರ, ಜಂಬೂಕ, ಶಾಕವಕ್ತ್ರ, ಮತ್ತು ಕುಂಡಕ.
09044072a ಯೋಗಯುಕ್ತಾ ಮಹಾತ್ಮಾನಃ ಸತತಂ ಬ್ರಾಹ್ಮಣಪ್ರಿಯಾಃ।
09044072c ಪೈತಾಮಹಾ ಮಹಾತ್ಮಾನೋ ಮಹಾಪಾರಿಷದಾಶ್ಚ ಹ।।
09044072e ಯೌವನಸ್ಥಾಶ್ಚ ಬಾಲಾಶ್ಚ ವೃದ್ಧಾಶ್ಚ ಜನಮೇಜಯ 09044073a ಸಹಸ್ರಶಃ ಪಾರಿಷದಾಃ ಕುಮಾರಮುಪತಸ್ಥಿರೇ।
09044073c ವಕ್ತ್ರೈರ್ನಾನಾವಿಧೈರ್ಯೇ ತು ಶೃಣು ತಾನ್ ಜನಮೇಜಯ।।
ಆ ಎಲ್ಲ ಮಹಾತ್ಮರೂ ಯೋಗಯುಕ್ತರೂ ಸತತ ಬ್ರಾಹ್ಮಣಪ್ರಿಯರೂ ಆಗಿದ್ದರು. ಮಹಾತ್ಮ ಪಿತಾಮಹನು ನೀಡಿದ ಮಹಾ ಪಾರಿಷದರೂ ಬಾಲ-ಯುವಕ-ವೃದ್ಧ ಪಾರಿಷದರೂ ಸಹಸ್ರಾರು ಸಂಖ್ಯೆಗಳಲ್ಲಿ ಕುಮಾರನ ಸೇವೆಯಲ್ಲಿ ನಿರತರಾಗಿದ್ದರು. ಜನಮೇಜಯ! ನಾನಾವಿಧದ ಮುಖಗಳಿದ್ದ ಅವರ ಕುರಿತು ಹೇಳುತ್ತೇನೆ ಕೇಳು.
09044074a ಕೂರ್ಮಕುಕ್ಕುಟವಕ್ತ್ರಾಶ್ಚ ಶಶೋಲೂಕಮುಖಾಸ್ತಥಾ।
09044074c ಖರೋಷ್ಟ್ರವದನಾಶ್ಚೈವ ವರಾಹವದನಾಸ್ತಥಾ।।
09044075a ಮನುಷ್ಯಮೇಷವಕ್ತ್ರಾಶ್ಚ ಸೃಗಾಲವದನಾಸ್ತಥಾ।
09044075c ಭೀಮಾ ಮಕರವಕ್ತ್ರಾಶ್ಚ ಶಿಂಶುಮಾರಮುಖಾಸ್ತಥಾ।।
09044076a ಮಾರ್ಜಾರಶಶವಕ್ತ್ರಾಶ್ಚ ದೀರ್ಘವಕ್ತ್ರಾಶ್ಚ ಭಾರತ।
09044076c ನಕುಲೋಲೂಕವಕ್ತ್ರಾಶ್ಚ ಶ್ವವಕ್ತ್ರಾಶ್ಚ ತಥಾಪರೇ।।
09044077a ಆಖುಬಭ್ರುಕವಕ್ತ್ರಾಶ್ಚ ಮಯೂರವದನಾಸ್ತಥಾ।
09044077c ಮತ್ಸ್ಯಮೇಷಾನನಾಶ್ಚಾನ್ಯೇ ಅಜಾವಿಮಹಿಷಾನನಾಃ।।
09044078a ಋಕ್ಷಶಾರ್ದೂಲವಕ್ತ್ರಾಶ್ಚ ದ್ವೀಪಿಸಿಂಹಾನನಾಸ್ತಥಾ।
09044078c ಭೀಮಾ ಗಜಾನನಾಶ್ಚೈವ ತಥಾ ನಕ್ರಮುಖಾಃ ಪರೇ।।
09044079a ಗರುಡಾನನಾಃ ಖಡ್ಗಮುಖಾ ವೃಕಕಾಕಮುಖಾಸ್ತಥಾ।
09044079c ಗೋಖರೋಷ್ಟ್ರಮುಖಾಶ್ಚಾನ್ಯೇ ವೃಷದಂಶಮುಖಾಸ್ತಥಾ।।
ಆಮೆ-ಕೋಳಿಯ ಮುಖದವರು, ಮೊಲ-ಗೂಬೆಯ ಮುಖದವರು, ಕತ್ತೆ-ಒಂಟೆಯ ಮುಖದವರು, ಹಂದಿಯ ಮುಖದವರು, ಮನುಷ್ಯ-ಆಡಿನ ಮುಖದವರು, ಮೊಲದ ಮುಖದವರು, ಸೃಗಾಲದ ಮುಖವುಳ್ಳವರು, ಭಯಂಕರ ಮೊಸಳೆಯ ಮುಖವುಳ್ಳವರು, ಶಿಂಶುಮಾರದ ಮುಖವುಳ್ಳವರು, ಬೆಕ್ಕು-ಮೊಲಗಳ ಮುಖವುಳ್ಳವರು, ಉದ್ದನೆಯ ಮುಖವುಳ್ಳವರು, ಮುಂಗಸಿ-ಗೂಬೆಯ ಮುಖವುಳ್ಳವರು, ನಾಯಿಯ ಮುಖವುಳ್ಳವರು, ಕಾಗೆ-ಇಲಿಗಳ ಮುಖವುಳ್ಳವರು, ನವಿಲಿನ ಮುಖವುಳ್ಳವರು, ಮೀನು-ಆಡುಗಳ ಮುಖವುಳ್ಳವರು, ಕುರಿ-ಎಮ್ಮೆಗಳ ಮುಖವುಳ್ಳವರು, ಭಯಂಕರ ಆನೆಗಳ ಮುಖವುಳ್ಳವರು, ಗರುಡನ ಮುಖವುಳ್ಳವರು, ಖಡ್ಗದಂತಹ ಮುಖವುಳ್ಳವರು, ತೋಳ-ಕಾಗೆಗಳ ಮುಖವುಳ್ಳವರು, ಗೋವು-ಕತ್ತೆ-ಒಂಟೆಗಳ ಮುಖವುಳ್ಳವರು, ಕಾಡುಬೆಕ್ಕಿನ ಮುಖದವರೂ ಇದ್ದರು.
09044080a ಮಹಾಜಠರಪಾದಾಂಗಾಸ್ತಾರಕಾಕ್ಷಾಶ್ಚ ಭಾರತ।
09044080c ಪಾರಾವತಮುಖಾಶ್ಚಾನ್ಯೇ ತಥಾ ವೃಷಮುಖಾಃ ಪರೇ।।
ಭಾರತ! ಕೆಲವರಿಗೆ ದೊಡ್ಡ ದೊಡ್ಡ ಹೊಟ್ಟೆ-ಕಾಲುಗಳಿದ್ದವು. ಕೆಲವರಿಗೆ ನಕ್ಷತ್ರಗಳಂತೆ ಹೊಳೆಯುವ ಕಣ್ಣುಗಳಿದ್ದವು. ಕೆಲವರ ಮುಖಗಳು ಪಾರಿವಾಳಗಳಂತಿದ್ದರೆ ಇನ್ನು ಕೆಲವರಿಗೆ ಎತ್ತಿನ ಮುಖಗಳಿದ್ದವು.
09044081a ಕೋಕಿಲಾವದನಾಶ್ಚಾನ್ಯೇ ಶ್ಯೇನತಿತ್ತಿರಿಕಾನನಾಃ।
09044081c ಕೃಕಲಾಸಮುಖಾಶ್ಚೈವ ವಿರಜೋಂಬರಧಾರಿಣಃ।।
ಅನ್ಯರು ಕೋಕಿಲವದನರೂ, ಗಿಡುಗ-ಅಗ್ನಿಪಕ್ಷಿಗಳ ಮುಖಗಳುಳ್ಳವರೂ, ಓತಿಕೇತದ ಮುಖವುಳ್ಳವರೂ ಆಗಿದ್ದು ಧೂಳಿಲ್ಲದ ಶುಭ್ರ ವಸ್ತ್ರಗಳನ್ನು ಧರಿಸಿದ್ದರು.
09044082a ವ್ಯಾಲವಕ್ತ್ರಾಃ ಶೂಲಮುಖಾಶ್ಚಂಡವಕ್ತ್ರಾಃ ಶತಾನನಾಃ।
09044082c ಆಶೀವಿಷಾಶ್ಚೀರಧರಾ ಗೋನಾಸಾವರಣಾಸ್ತಥಾ।।
ಹಾವಿನ ಮುಖದವರು, ಶೂಲಮುಖರು, ಚಂಡವಕ್ತ್ರರು, ಶತಾನನರು, ನಾಗರಹಾವಿನ ಮುಖದವರು ಮತ್ತು ಹಾಗೆಯೇ ಗೋವಿನ ಮೂಗನ್ನು ಹೊಂದಿದ್ದ ಅವರು ನಾರುಮಡಿಗಳನ್ನು ಧರಿಸಿದ್ದರು.
09044083a ಸ್ಥೂಲೋದರಾಃ ಕೃಶಾಂಗಾಶ್ಚ ಸ್ಥೂಲಾಂಗಾಶ್ಚ ಕೃಶೋದರಾಃ।
09044083c ಹ್ರಸ್ವಗ್ರೀವಾ ಮಹಾಕರ್ಣಾ ನಾನಾವ್ಯಾಲವಿಭೂಷಿತಾಃ।।
ನಾನಾ ಸರ್ಪಗಳಿಂದ ವಿಭೂಷಿತರಾದ ಅವರು ದೊಡ್ಡ ಹೊಟ್ಟೆಯುಳ್ಳವರೂ, ಬಡಕಲು ದೇಹದವರೂ, ದಪ್ಪ ಅಂಗಾಂಗಗಳು ಮತ್ತು ಸಣ್ಣ ಹೊಟ್ಟೆಯವರು, ಗಿಡ್ಡ ಕತ್ತುಳ್ಳವರೂ, ಮಹಾಕಿವಿಯುಳ್ಳವರೂ ಆಗಿದ್ದರು.
09044084a ಗಜೇಂದ್ರಚರ್ಮವಸನಾಸ್ತಥಾ ಕೃಷ್ಣಾಜಿನಾಂಬರಾಃ।
09044084c ಸ್ಕಂಧೇಮುಖಾ ಮಹಾರಾಜ ತಥಾ ಹ್ಯುದರತೋಮುಖಾಃ।।
ಮಹಾರಾಜ! ಗಜೇಂದ್ರ ಚರ್ಮ-ಕೃಷ್ಣಾಜಿನಗಳನ್ನು ಉಡುಪಾಗಿ ಉಟ್ಟಿದ್ದರು. ಕೆಲವರ ಮುಖಗಳು ಭುಜಗಳಲ್ಲಿದ್ದರೆ ಇನ್ನು ಕೆಲವರ ಮುಖಗಳು ಹೊಟ್ಟೆಯಲ್ಲಿದ್ದವು.
09044085a ಪೃಷ್ಠೇಮುಖಾ ಹನುಮುಖಾಸ್ತಥಾ ಜಂಘಾಮುಖಾ ಅಪಿ।
09044085c ಪಾರ್ಶ್ವಾನನಾಶ್ಚ ಬಹವೋ ನಾನಾದೇಶಮುಖಾಸ್ತಥಾ।।
ಅನೇಕರ ಮುಖಗಳು ದೇಹದ ನಾನಾಕಡೆಗಳಲ್ಲಿದ್ದವು: ಬೆನ್ನಿನಲ್ಲಿ ಮುಖಗಳಿದ್ದವು, ಬಾಯಿಯ ಪಕ್ಕದಲ್ಲಿ ಮುಖಗಳಿದ್ದವು, ಮೊಣಕಾಲಿನಲ್ಲಿ ಮುಖಗಳಿದ್ದವು.
09044086a ತಥಾ ಕೀಟಪತಂಗಾನಾಂ ಸದೃಶಾಸ್ಯಾ ಗಣೇಶ್ವರಾಃ।
09044086c ನಾನಾವ್ಯಾಲಮುಖಾಶ್ಚಾನ್ಯೇ ಬಹುಬಾಹುಶಿರೋಧರಾಃ।।
ಕೆಲವು ಗಣೇಶ್ವರ ಮುಖಗಳು ಕೀಟ-ಪತಂಗಗಳಂತೆ ಇದ್ದವು. ಅನ್ಯರ ಮುಖಗಳು ಹಾವುಗಳಂತಿದ್ದವು. ಅನೇಕ ಬಾಹು-ಶಿರ-ಹೊಟ್ಟೆಗಳಿದ್ದವು.
09044087a ನಾನಾವೃಕ್ಷಭುಜಾಃ ಕೇ ಚಿತ್ಕಟಿಶೀರ್ಷಾಸ್ತಥಾಪರೇ।
09044087c ಭುಜಂಗಭೋಗವದನಾ ನಾನಾಗುಲ್ಮನಿವಾಸಿನಃ।।
ಕೆಲವರಿಗೆ ವೃಕ್ಷಗಳಂತೆ ನಾನಾಭುಜಗಳಿದ್ದವು. ಇನ್ನು ಕೆಲವರ ತಲೆಗಳು ಕಟೀಪ್ರದೇಶದಲ್ಲಿದ್ದವು. ನಾಗರ ಹಾವಿನ ಹೆಡೆಯ ಮುಖಗಳಿದ್ದವು. ನಾನಾ ಗುಲ್ಮಗಳಲ್ಲಿ ವಾಸಿಸುವರಾಗಿದ್ದರು.
09044088a ಚೀರಸಂವೃತಗಾತ್ರಾಶ್ಚ ತಥಾ ಫಲಕವಾಸಸಃ।
09044088c ನಾನಾವೇಷಧರಾಶ್ಚೈವ ಚರ್ಮವಾಸಸ ಏವ ಚ।।
ನಾರುಮಡಿಗಳನ್ನು ದೇಹಕ್ಕೆ ಸುತ್ತಿಕೊಂಡಿದ್ದರು. ಹಾಗೆಯೇ ಕೆಲವರು ಚಿನ್ನದ ವಸ್ತ್ರಗಳನ್ನು ಧರಿಸಿದ್ದರು. ನಾನಾವೇಷಗಳನ್ನು ದರಿಸಿದ್ದ ಕೆಲವರು ಚರ್ಮಗಳನ್ನೇ ವಸ್ತ್ರವಾಗಿ ಉಟ್ಟಿದ್ದರು.
09044089a ಉಷ್ಣೀಷಿಣೋ ಮುಕುಟಿನಃ ಕಂಬುಗ್ರೀವಾಃ ಸುವರ್ಚಸಃ।
09044089c ಕಿರೀಟಿನಃ ಪಂಚಶಿಖಾಸ್ತಥಾ ಕಠಿನಮೂರ್ಧಜಾಃ।।
ಕೆಲವರು ಮುಂಡಾಸುಗಳನ್ನು ಧರಿಸಿದ್ದರು. ಕೆಲವರು ಮುಕುಟಗಳನ್ನು ಧರಿಸಿದ್ದರು. ಕೆಲವರಿಗೆ ಸುಂದರ ಕಂಠಗಳಿದ್ದವು. ಸುಂದರ ಮುಖಗಳಿದ್ದವು. ಕಿರೀಟಗಳನ್ನು ಧರಿಸಿದ್ದರು. ಐದು ಜುಟ್ಟುಗಳಿದ್ದವು. ಚಿನ್ನದ ಕೂದಲಿನವರಿದ್ದರು.
09044090a ತ್ರಿಶಿಖಾ ದ್ವಿಶಿಖಾಶ್ಚೈವ ತಥಾ ಸಪ್ತಶಿಖಾಃ ಪರೇ।
09044090c ಶಿಖಂಡಿನೋ ಮುಕುಟಿನೋ ಮುಂಡಾಶ್ಚ ಜಟಿಲಾಸ್ತಥಾ।।
ಮೂರು ಜುಟ್ಟುಗಳು, ಎರಡು ಜುಟ್ಟುಗಳು ಮತ್ತು ಇತರರಿಗೆ ಏಳು ಜುಟ್ಟುಗಳು ಇದ್ದವು. ಕೆಲವರು ನವಿಲುಗರಿಯನ್ನು ಧರಿಸಿದ್ದರು. ಕೆಲವರು ಮುಕುಟಗಳನ್ನು ಧರಿಸಿದ್ದರು. ಕೆಲವರು ಬೋಳಾಗಿದ್ದರು. ಕೆಲವರು ಜಟೆಯನ್ನು ಧರಿಸಿದ್ದರು.
09044091a ಚಿತ್ರಮಾಲ್ಯಧರಾಃ ಕೇ ಚಿತ್ ಕೇ ಚಿದ್ರೋಮಾನನಾಸ್ತಥಾ।
09044091c ದಿವ್ಯಮಾಲ್ಯಾಂಬರಧರಾಃ ಸತತಂ ಪ್ರಿಯವಿಗ್ರಹಾಃ।।
ಬಣ್ಣಬಣ್ಣದ ಮಾಲೆಗಳನ್ನು ಕೆಲವರು ಧರಿಸಿದ್ದರೆ ಇನ್ನು ಕೆಲವರ ಮುಖದ ತುಂಬಾ ಕೂದಲುಗಳಿದ್ದವು. ದಿವ್ಯಮಾಲಾಂಬರಗಳನ್ನು ಧರಿಸಿದ್ದ ಕೆಲವರು ಸತತವೂ ಸುಂದರರಾಗಿ ಕಾಣುತ್ತಿದ್ದರು.
09044092a ಕೃಷ್ಣಾ ನಿರ್ಮಾಂಸವಕ್ತ್ರಾಶ್ಚ ದೀರ್ಘಪೃಷ್ಠಾ ನಿರೂದರಾಃ।
09044092c ಸ್ಥೂಲಪೃಷ್ಠಾ ಹ್ರಸ್ವಪೃಷ್ಠಾಃ ಪ್ರಲಂಬೋದರಮೇಹನಾಃ।।
ಕಪ್ಪಾಗಿದ್ದವರು, ಮಾಂಸವೇ ಇಲ್ಲದ ಮುಖವುಳ್ಳವರು, ಉದ್ದವಾದ ಕುಂಡೆಗಳುಳ್ಳ, ಉದ್ದವಾದ ದೇಹಗಳುಳ್ಳ, ದೊಡ್ಡ ಕುಂಡೆಗಳುಳ್ಳ, ಸಣ್ಣ ಕುಂಡೆಗಳುಳ್ಳ, ಉದ್ದವಾದ ಹೊಟ್ಟೆಗಳುಳ್ಳವರು ಅಲ್ಲಿದ್ದರು.
09044093a ಮಹಾಭುಜಾ ಹ್ರಸ್ವಭುಜಾ ಹ್ರಸ್ವಗಾತ್ರಾಶ್ಚ ವಾಮನಾಃ।
09044093c ಕುಬ್ಜಾಶ್ಚ ದೀರ್ಘಜಘ್ಘಾಶ್ಚ ಹಸ್ತಿಕರ್ಣಶಿರೋಧರಾಃ।।
09044094a ಹಸ್ತಿನಾಸಾಃ ಕೂರ್ಮನಾಸಾ ವೃಕನಾಸಾಸ್ತಥಾಪರೇ।
09044094c ದೀರ್ಘೋಷ್ಠಾ ದೀರ್ಘಜಿಹ್ವಾಶ್ಚ ವಿಕರಾಲಾ ಹ್ಯಧೋಮುಖಾಃ।।
09044095a ಮಹಾದಂಷ್ಟ್ರಾ ಹ್ರಸ್ವದಂಷ್ಟ್ರಾಶ್ಚತುರ್ದಂಷ್ಟ್ರಾಸ್ತಥಾಪರೇ।
09044095c ವಾರಣೇಂದ್ರನಿಭಾಶ್ಚಾನ್ಯೇ ಭೀಮಾ ರಾಜನ್ ಸಹಸ್ರಶಃ।।
ರಾಜನ್! ಮಹಾಭುಜಗಳುಳ್ಳವರು, ಸಣ್ಣ ಭುಜಗಳುಳ್ಳವರು, ಸಣ್ಣದೇಹದವರು, ವಾಮನರು, ಕುಬ್ಜರು, ದೀರ್ಘ ಮೊಣಕಾಲಿನವರು, ಆನೆಯ ಕಿವಿ-ಶಿರಗಳನ್ನು ಧರಿಸಿದವರು, ಆನೆಯ ಮೂಗಿರುವ, ಆಮೆಯ ಮೂಗಿರುವ, ತೋಳದ ಮೂಗಿರುವ, ಉದ್ದ ತುಟಿಗಳುಳ್ಳ, ಉದ್ದ ನಾಲಗೆಯ, ವಿಕಾರಮುಖವುಳ್ಳ, ಅಧೋಮುಖವುಳ್ಳ, ದೊಡ್ಡ ಹಲ್ಲುಗಳಿದ್ದ, ಸಣ್ಣ ಹಲ್ಲುಗಳಿದ್ದ, ನಾಲ್ಕು ಹಲ್ಲುಗಳಿದ್ದ, ಮತ್ತು ಆನೆಗಳಂತೆ ಭಯಂಕರರಾಗಿ ಕಾಣುತ್ತಿದ್ದ ಸಹಸ್ರಾರು ಪಾರ್ಷದರು ಅಲ್ಲಿದ್ದರು.
09044096a ಸುವಿಭಕ್ತಶರೀರಾಶ್ಚ ದೀಪ್ತಿಮಂತಃ ಸ್ವಲಂಕೃತಾಃ।
09044096c ಪಿಂಗಾಕ್ಷಾಃ ಶಂಕುಕರ್ಣಾಶ್ಚ ವಕ್ರನಾಸಾಶ್ಚ ಭಾರತ।।
09044097a ಪೃಥುದಂಷ್ಟ್ರಾ ಮಹಾದಂಷ್ಟ್ರಾಃ ಸ್ಥೂಲೌಷ್ಠಾ ಹರಿಮೂರ್ಧಜಾಃ।
09044097c ನಾನಾಪಾದೌಷ್ಠದಂಷ್ಟ್ರಾಶ್ಚ ನಾನಾಹಸ್ತಶಿರೋಧರಾಃ।।
09044097e ನಾನಾವರ್ಮಭಿರಾಚ್ಚನ್ನಾ ನಾನಾಭಾಷಾಶ್ಚ ಭಾರತ 09044098a ಕುಶಲಾ ದೇಶಭಾಷಾಸು ಜಲ್ಪಂತೋಽನ್ಯೋನ್ಯಮೀಶ್ವರಾಃ।
09044098c ಹೃಷ್ಟಾಃ ಪರಿಪತಂತಿ ಸ್ಮ ಮಹಾಪಾರಿಷದಾಸ್ತಥಾ।।
ಭಾರತ! ಸರಿಯಾದ ಅಳತೆಯಲ್ಲಿದ್ದ ಶರೀರಿಗಳೂ, ಅಲಂಕಾರಗಳಿಂದ ಬೆಳಗುತ್ತಿದ್ದವರೂ, ಪಿಂಗಾಕ್ಷರೂ, ಶಂಖುಕರ್ಣರು, ವಕ್ರಮೂಗುಳ್ಳವರೂ, ದಪ್ಪ ಹಲ್ಲಿರುವವರು, ಮಹಾದಂಷ್ಟ್ರಗಳುಳ್ಳವರು, ದಪ್ಪ ತುಟಿಗಳಿದ್ದವರು, ಹಸಿರು ಕೂದಲಿದ್ದವರು, ನಾನಾ ಪಾದ-ತುಟಿ-ಹಲ್ಲುಗಳಿದ್ದವರು, ನಾನಾ ಹಸ್ತ-ಶಿರಗಳಿದ್ದವರು, ನಾನಾ ಕವಚಗಳನ್ನು ಧರಿಸಿದ್ದವರು, ನಾನಾಭಾಷೆಗಳುಳ್ಳವರು, ದೇಶ-ಭಾಷೆಗಳಲ್ಲಿ ಕುಶಲರಾದವರು, ಅನ್ಯೋನ್ಯರೊಂದಿಗೆ ಮಾತನಾಡಿಕೊಳ್ಳುತ್ತಿದ್ದವರು ಹೃಷ್ಟರಾಗಿ ಎಲ್ಲಕಡೆಗಳಲ್ಲಿ ಸಂಚರಿಸುತ್ತಿದ್ದವರು ಆ ಮಹಾಪರಿಷದದಲ್ಲಿದ್ದರು.
09044099a ದೀರ್ಘಗ್ರೀವಾ ದೀರ್ಘನಖಾ ದೀರ್ಘಪಾದಶಿರೋಭುಜಾಃ।
09044099c ಪಿಂಗಾಕ್ಷಾ ನೀಲಕಂಠಾಶ್ಚ ಲಂಬಕರ್ಣಾಶ್ಚ ಭಾರತ।।
ಭಾರತ! ಉದ್ದ ಕಂಠಗಳುಳ್ಳವರು, ಉದ್ದ ಉಗುರುಗಳುಳ್ಳವರು, ಉದ್ದವಾದ ಪಾದ-ಶಿರ-ಭುಜಗಳುಳ್ಳವರು, ಪಿಂಗಾಕ್ಷರು, ನೀಲಕಂಠರು, ಲಂಬಕರ್ಣರು ಅಲ್ಲಿದ್ದರು.
09044100a ವೃಕೋದರನಿಭಾಶ್ಚೈವ ಕೇ ಚಿದಂಜನಸಂನಿಭಾಃ।
09044100c ಶ್ವೇತಾಂಗಾ ಲೋಹಿತಗ್ರೀವಾಃ ಪಿಂಗಾಕ್ಷಾಶ್ಚ ತಥಾಪರೇ।।
09044100e ಕಲ್ಮಾಷಾ ಬಹವೋ ರಾಜಂಶ್ಚಿತ್ರವರ್ಣಾಶ್ಚ ಭಾರತ
ರಾಜನ್! ಭಾರತ! ತೋಳದ ಹೊಟ್ಟೆಯವರಿದ್ದರು. ಕೆಲವರು ಕಾಡಿಗೆಯಂತೆ ಕಪ್ಪಾಗಿದ್ದರು. ಕೆಲವರು ಬಿಳಿಯಾಗಿದ್ದರು. ಕೆಲವರ ಕತ್ತುಗಳು ಕೆಂಪಾಗಿದ್ದವು. ಇನ್ನು ಇತರರ ಕಣ್ಣುಗಳು ಪಿಂಗಳ ವರ್ಣದ್ದಾಗಿದ್ದವು. ಅನೇಕರು ಮಿಶ್ರವಾದ ವಿಚಿತ್ರ ಬಣ್ಣದವರಾಗಿದ್ದರು.
09044101a ಚಾಮರಾಪೀಡಕನಿಭಾಃ ಶ್ವೇತಲೋಹಿತರಾಜಯಃ।
09044101c ನಾನಾವರ್ಣಾಃ ಸವರ್ಣಾಶ್ಚ ಮಯೂರಸದೃಶಪ್ರಭಾಃ।।
ಕೆಲವರು ಚಾಮರಗಳಂತೆ ಶ್ವೇತವರ್ಣದವರಾಗಿದ್ದರು ಇನ್ನು ಕೆಲವರು ಬಿಳಿಪು-ಕೆಂಪುಬಣ್ಣದವರಾಗಿದ್ದರು. ಕೆಲವರು ನವಿಲುಗಳಂತೆ ನಾನಾವರ್ಣಗಳು ಮತ್ತು ಸುವರ್ಣದ ಬಣ್ಣವನ್ನು ಹೊಂದಿದ್ದರು.
09044102a ಪುನಃ ಪ್ರಹರಣಾನ್ಯೇಷಾಂ ಕೀರ್ತ್ಯಮಾನಾನಿ ಮೇ ಶೃಣು।
09044102c ಶೇಷೈಃ ಕೃತಂ ಪಾರಿಷದೈರಾಯುಧಾನಾಂ ಪರಿಗ್ರಹಂ।।
ಉಳಿದ ಪಾರಿಷದರು ಹೇಗಿದ್ದರು ಮತ್ತು ಯಾವ ಆಯುಧ ಪ್ರಹರಣಗಳನ್ನು ಹಿಡಿದಿದ್ದರು ಎನ್ನುವುದನ್ನು ಹೇಳುತ್ತೇನೆ. ಕೇಳು.
09044103a ಪಾಶೋದ್ಯತಕರಾಃ ಕೇ ಚಿದ್ವ್ಯಾದಿತಾಸ್ಯಾಃ ಖರಾನನಾಃ।
09044103c ಪೃಥ್ವಕ್ಷಾ ನೀಲಕಂಠಾಶ್ಚ ತಥಾ ಪರಿಘಬಾಹವಃ।।
ಬಾಯಿಗಳನ್ನು ತೆರೆದಿದ್ದ ಕೆಲವರು ಕತ್ತೆಗಳ ಮುಖಗಳುಳ್ಳವರು, ಅಗಲ ಕಣ್ಣುಗಳುಳ್ಳವರು, ನೀಲಕಂಠರು ಮತ್ತು ಪರಿಘದಂತಹ ಬಾಹುಗಳುಳ್ಳವರು ಪಾಶಗಳನ್ನು ಎತ್ತಿಹಿಡಿದಿದ್ದರು.
09044104a ಶತಘ್ನೀಚಕ್ರಹಸ್ತಾಶ್ಚ ತಥಾ ಮುಸಲಪಾಣಯಃ।
09044104c ಶೂಲಾಸಿಹಸ್ತಾಶ್ಚ ತಥಾ ಮಹಾಕಾಯಾ ಮಹಾಬಲಾಃ।।
ಆ ಮಹಾಕಾಯ ಮಹಾಬಲರು ಶತಘ್ನೀ-ಚಕ್ರಗಳನ್ನು ಹಿಡಿದಿದ್ದರು. ಮುಸಲಗಳನ್ನು ಹಿಡಿದಿದ್ದರು. ಶೂಲ-ಖಡ್ಗಗಳನ್ನು ಹಿಡಿದಿದ್ದರು.
09044105a ಗದಾಭುಶುಂಡಿಹಸ್ತಾಶ್ಚ ತಥಾ ತೋಮರಪಾಣಯಃ।
09044105c ಅಸಿಮುದ್ಗರಹಸ್ತಾಶ್ಚ ದಂಡಹಸ್ತಾಶ್ಚ ಭಾರತ।।
ಭಾರತ! ಗದೆ-ಭುಶುಂಡಿಗಳನ್ನು ಹಿಡಿದಿದ್ದರು. ತೋಮರಗಳನ್ನು ಹಿಡಿದಿದ್ದರು. ಖಡ್ಗ-ಮುದ್ಗರಗಳನ್ನು ಹಿಡಿದಿದ್ದರು. ಮತ್ತು ದಂಡಗಳನ್ನು ಹಿಡಿದಿದ್ದರು.
09044106a ಆಯುಧೈರ್ವಿವಿಧೈರ್ಘೋರೈರ್ಮಹಾತ್ಮಾನೋ ಮಹಾಜವಾಃ।
09044106c ಮಹಾಬಲಾ ಮಹಾವೇಗಾ ಮಹಾಪಾರಿಷದಾಸ್ತಥಾ।।
ವಿವಿಧ ಘೋರ ಆಯುಧಗಳನ್ನು ಹಿಡಿದ ಮಹಾತ್ಮ, ಮಹಾವೇಗವುಳ್ಳ ಮಹಾಬಲ ಮಹಾವೇಗರು ಆ ಮಹಾಪಾರಿಷದರಲ್ಲಿದ್ದರು.
09044107a ಅಭಿಷೇಕಂ ಕುಮಾರಸ್ಯ ದೃಷ್ಟ್ವಾ ಹೃಷ್ಟಾ ರಣಪ್ರಿಯಾಃ।
09044107c ಘಂಟಾಜಾಲಪಿನದ್ಧಾಂಗಾ ನನೃತುಸ್ತೇ ಮಹೌಜಸಃ।।
ಕುಮಾರನ ಅಭಿಷೇಕವನ್ನು ನೋಡಿ ಹೃಷ್ಟರಾಗಿ ಆ ರಣಪ್ರಿಯ ಮಹೌಜಸರು ಘಂಟೆಗಳ ಬಲೆಯನ್ನು ಶರೀರಕ್ಕೆ ಸುತ್ತಿಕೊಂಡು ನೃತ್ಯಮಾಡುತ್ತಿದ್ದರು.
09044108a ಏತೇ ಚಾನ್ಯೇ ಚ ಬಹವೋ ಮಹಾಪಾರಿಷದಾ ನೃಪ।
09044108c ಉಪತಸ್ಥುರ್ಮಹಾತ್ಮಾನಂ ಕಾರ್ತ್ತಿಕೇಯಂ ಯಶಸ್ವಿನಂ।।
ನೃಪ! ಇವರು ಮತ್ತು ಅನ್ಯ ಅನೇಕ ಮಹಾಪಾರಿಷದರು ಯಶಸ್ವಿ ಮಹಾತ್ಮ ಕಾರ್ತಿಕೇಯನ ಉಪಸ್ಥಿತಿಯಲ್ಲಿದ್ದರು.
09044109a ದಿವ್ಯಾಶ್ಚಾಪ್ಯಾಂತರಿಕ್ಷಾಶ್ಚ ಪಾರ್ಥಿವಾಶ್ಚಾನಿಲೋಪಮಾಃ।
09044109c ವ್ಯಾದಿಷ್ಟಾ ದೈವತೈಃ ಶೂರಾಃ ಸ್ಕಂದಸ್ಯಾನುಚರಾಭವನ್।।
ಪಾರ್ಥಿವ! ಸ್ವರ್ಗ-ಅಂತರಿಕ್ಷ-ಭೂಲೋಕಗಳ ವಾಯುಸದೃಶ ಪರಿಷದ್ವರ್ಗದವರು ದೇವತೆಗಳ ಆದೇಶದಂತೆ ಸ್ಕಂದನ ಅನುಚರರಾದರು.
09044110a ತಾದೃಶಾನಾಂ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ।
09044110c ಅಭಿಷಿಕ್ತಂ ಮಹಾತ್ಮಾನಂ ಪರಿವಾರ್ಯೋಪತಸ್ಥಿರೇ।।
ಅಂತಹ ಸಹಸ್ರಾರು ಲಕ್ಷೋಪಲಕ್ಷ ಕೋಟ್ಯಾನುಕೋಟಿ ಮಹಾಪಾರ್ಷದರು ಅಭಿಷಿಕ್ತನಾದ ಆ ಮಹಾತ್ಮನನ್ನು ಸುತ್ತುವರೆದು ನಿಂತಿದ್ದರು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸ್ಕಂದಾಭಿಷೇಕೇ ಚತುಶ್ಚತ್ವಾರಿಂಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ ಎನ್ನುವ ನಲ್ವತ್ನಾಲ್ಕನೇ ಅಧ್ಯಾಯವು.