ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 3
ಸಾರ
ಕೃಪ-ದುರ್ಯೋಧನ ಸಂವಾದ (1-50)
09003001 ಸಂಜಯ ಉವಾಚ 09003001a ಶೃಣು ರಾಜನ್ನವಹಿತೋ ಯಥಾ ವೃತ್ತೋ ಮಹಾನ್ ಕ್ಷಯಃ।
09003001c ಕುರೂಣಾಂ ಪಾಂಡವಾನಾಂ ಚ ಸಮಾಸಾದ್ಯ ಪರಸ್ಪರಂ।।
ಸಂಜಯನು ಹೇಳಿದನು: “ರಾಜನ್! ಕುರು-ಪಾಂಡವರು ಪರಸ್ಪರರನ್ನು ಎದುರಿಸಿದಾಗ ಆ ಮಹಾಕ್ಷಯವು ಹೇಗೆ ನಡೆಯಿತು ಎನ್ನುವುದನ್ನು ಏಕಾಗ್ರತೆಯಿಂದ ಕೇಳು!
09003002a ನಿಹತೇ ಸೂತಪುತ್ರೇ ತು ಪಾಂಡವೇನ ಮಹಾತ್ಮನಾ।
09003002c ವಿದ್ರುತೇಷು ಚ ಸೈನ್ಯೇಷು ಸಮಾನೀತೇಷು ಚಾಸಕೃತ್।।
ಮಹಾತ್ಮ ಪಾಂಡವನಿಂದ ಸೂತಪುತ್ರನು ಹತನಾಗಲು, ಒಂದುಗೂಡಿಸಲು ಪ್ರಯತ್ನಿಸಿದರೂ, ಸೇನೆಗಳು ಓಡಿಹೋದವು. 1009003003a ವಿಮುಖೇ ತವ ಪುತ್ರೇ ತು ಶೋಕೋಪಹತಚೇತಸಿ।
09003003c ಭೃಶೋದ್ವಿಗ್ನೇಷು ಸೈನ್ಯೇಷು ದೃಷ್ಟ್ವಾ ಪಾರ್ಥಸ್ಯ ವಿಕ್ರಮಂ।।
ಶೋಕದಿಂದ ಚೇತನವನ್ನೇ ಕಳೆದುಕೊಂಡ ನಿನ್ನ ಮಗನು ವಿಮುಖನಾಗಿದ್ದನು ಮತ್ತು ಪಾರ್ಥನ ವಿಕ್ರಮವನ್ನು ನೋಡಿ ಸೇನೆಗಳಲ್ಲಿ ತುಂಬಾ ಭಯ-ಉದ್ವೇಗಗಳುಂಟಾಗಿದ್ದವು.
09003004a ಧ್ಯಾಯಮಾನೇಷು ಸೈನ್ಯೇಷು ದುಃಖಂ ಪ್ರಾಪ್ತೇಷು ಭಾರತ।
09003004c ಬಲಾನಾಂ ಮಥ್ಯಮಾನಾನಾಂ ಶ್ರುತ್ವಾ ನಿನದಮುತ್ತಮಂ।।
09003005a ಅಭಿಜ್ಞಾನಂ ನರೇಂದ್ರಾಣಾಂ ವಿಕೃತಂ ಪ್ರೇಕ್ಷ್ಯ ಸಮ್ಯುಗೇ।
09003005c ಪತಿತಾನ್ರಥನೀಡಾಂಶ್ಚ ರಥಾಂಶ್ಚಾಪಿ ಮಹಾತ್ಮನಾಂ।।
09003006a ರಣೇ ವಿನಿಹತಾನ್ನಾಗಾನ್ದೃಷ್ಟ್ವಾ ಪತ್ತೀಂಶ್ಚ ಮಾರಿಷ।
09003006c ಆಯೋಧನಂ ಚಾತಿಘೋರಂ ರುದ್ರಸ್ಯಾಕ್ರೀಡಸಂನಿಭಂ।।
09003007a ಅಪ್ರಖ್ಯಾತಿಂ ಗತಾನಾಂ ತು ರಾಜ್ಞಾಂ ಶತಸಹಸ್ರಶಃ।
09003007c ಕೃಪಾವಿಷ್ಟಃ ಕೃಪೋ ರಾಜನ್ವಯಃಶೀಲಸಮನ್ವಿತಃ।।
09003008a ಅಬ್ರವೀತ್ತತ್ರ ತೇಜಸ್ವೀ ಸೋಽಭಿಸೃತ್ಯ ಜನಾಧಿಪಂ।
09003008c ದುರ್ಯೋಧನಂ ಮನ್ಯುವಶಾದ್ವಚನಂ ವಚನಕ್ಷಮಃ।।
ರಾಜನ್! ಭಾರತ! ದುಃಖವನ್ನು ಪಡೆದು ಚಿಂತಿಸುತ್ತಿರುವ ಸೇನೆಯನ್ನು ನೋಡಿ, ಸೇನೆಯನ್ನು ಸದೆಬಡಿಯುತ್ತಿರುವವರ ಸಿಂಹನಾದಗಳನ್ನು ಕೇಳಿ, ಯುದ್ಧಭೂಮಿಯಲ್ಲಿ ನರೇಂದ್ರರ ಧ್ವಜಗಳು ಛಿನ್ನವಿಚ್ಛಿನ್ನವಾದುದನ್ನು ನೋಡಿ, ಮಹಾತ್ಮರ ರಥನೀಡಗಳೂ ರಥಗಳೂ ಬಿದ್ದಿರುವುದನ್ನು ನೋಡಿ, ರಣದಲ್ಲಿ ಹತರಾಗಿ ಬಿದ್ದಿದ್ದ ಆನೆಗಳನ್ನೂ ಪದಾತಿಗಳನ್ನೂ ನೋಡಿ, ರುದ್ರನ ಆಟದ ಮೈದಾನವಾದ ಸ್ಮಶಾನದಂತೆ ಕಾಣುತ್ತಿದ್ದ ಆ ರಣಭೂಮಿಯನ್ನು ನೋಡಿ, ಲಕ್ಷಗಟ್ಟಲೆ ರಾಜರುಗಳು ನಿರ್ನಾಮವಾದುದನ್ನು ನೋಡಿ, ಕೃಪಾವಿಷ್ಟನಾದ, ವಯಸ್ಸಿಗೆ ತಕ್ಕಂತಹ ನಡತೆಗಳನ್ನುಳ್ಳ, ಮಾತನಾಡುವುದರಲ್ಲಿ ಚತುರನಾಗಿದ್ದ ತೇಜಸ್ವಿ ಕೃಪನು ಜನಾಧಿಪ ದುರ್ಯೋಧನನ ಬಳಿಸಾರಿ ದೈನ್ಯದಿಂದ ಈ ಮಾತುಗಳನ್ನಾಡಿದನು:
09003009a ದುರ್ಯೋಧನ ನಿಬೋಧೇದಂ ಯತ್ತ್ವಾ ವಕ್ಷ್ಯಾಮಿ ಕೌರವ।
09003009c ಶ್ರುತ್ವಾ ಕುರು ಮಹಾರಾಜ ಯದಿ ತೇ ರೋಚತೇಽನಘ।।
“ದುರ್ಯೋಧನ! ಕೌರವ! ನಾನು ಹೇಳುವುದನ್ನು ಕೇಳು! ಮಹಾರಾಜ! ಅನಘ! ಅದನ್ನು ಕೇಳಿ ನಿನಗೆ ಯಾವುದು ಸೂಕ್ತವೆಂದು ತೋರುವುದೋ ಅದರಂತೆಯೇ ಮಾಡು!
09003010a ನ ಯುದ್ಧಧರ್ಮಾಚ್ಚ್ರೇಯಾನ್ವೈ ಪಂಥಾ ರಾಜೇಂದ್ರ ವಿದ್ಯತೇ।
09003010c ಯಂ ಸಮಾಶ್ರಿತ್ಯ ಯುಧ್ಯಂತೇ ಕ್ಷತ್ರಿಯಾಃ ಕ್ಷತ್ರಿಯರ್ಷಭ।।
ಕ್ಷತ್ರಿಯರ್ಷಭ! ರಾಜೇಂದ್ರ! ಯುದ್ಧಧರ್ಮವನ್ನಾಶ್ರಯಿಸಿ ಯುದ್ಧಮಾಡುವುದಕ್ಕಿಂತ ಶ್ರೇಯಸ್ಕರವಾದ ಇನ್ನೊಂದು ಮಾರ್ಗವು ಕ್ಷತ್ರಿಯರಿಗಿಲ್ಲ!
09003011a ಪುತ್ರೋ ಭ್ರಾತಾ ಪಿತಾ ಚೈವ ಸ್ವಸ್ರೇಯೋ ಮಾತುಲಸ್ತಥಾ।
09003011c ಸಂಬಂಧಿಬಾಂಧವಾಶ್ಚೈವ ಯೋಧ್ಯಾ ವೈ ಕ್ಷತ್ರಜೀವಿನಾ।।
ಕ್ಷತ್ರಿಯನಾಗಿ ಜೀವಿಸುವವನಿಗೆ ಪುತ್ರ, ಭ್ರಾತಾ, ಪಿತ, ಸೋದರಳಿಯ, ಸೋದರ ಮಾವ, ಮತ್ತು ಇತರ ಬಂಧು-ಬಾಂಧವರೊಡನೆ ಯುದ್ಧಮಾಡುವುದು ಅನಿವಾರ್ಯವಾಗುತ್ತದೆ.
09003012a ವಧೇ ಚೈವ ಪರೋ ಧರ್ಮಸ್ತಥಾಧರ್ಮಃ ಪಲಾಯನೇ।
09003012c ತೇ ಸ್ಮ ಘೋರಾಂ ಸಮಾಪನ್ನಾ ಜೀವಿಕಾಂ ಜೀವಿತಾರ್ಥಿನಃ।।
ಯುದ್ಧದಲ್ಲಿ ಶತ್ರುಗಳನ್ನು ವಧಿಸುವುದು ಅಥವಾ ಅವರಿಂದ ವಧಿಸಲ್ಪಡುವುದು ಪರಮ ಧರ್ಮವೆನಿಸಿಕೊಳ್ಳುತ್ತದೆ. ಪಲಾಯನಮಾಡುವುದು ಅಧರ್ಮ. ಕ್ಷತ್ರಿಯನಾಗಿ ಜೀವಿಸುವವನು ಈ ರೀತಿಯ ಘೋರ ಜೀವನಶೈಲಿಯನ್ನು ಪಾಲಿಸುತ್ತಾನೆ.
09003013a ತತ್ರ ತ್ವಾಂ ಪ್ರತಿವಕ್ಷ್ಯಾಮಿ ಕಿಂ ಚಿದೇವ ಹಿತಂ ವಚಃ।
09003013c ಹತೇ ಭೀಷ್ಮೇ ಚ ದ್ರೋಣೇ ಚ ಕರ್ಣೇ ಚೈವ ಮಹಾರಥೇ।।
09003014a ಜಯದ್ರಥೇ ಚ ನಿಹತೇ ತವ ಭ್ರಾತೃಷು ಚಾನಘ।
09003014c ಲಕ್ಷ್ಮಣೇ ತವ ಪುತ್ರೇ ಚ ಕಿಂ ಶೇಷಂ ಪರ್ಯುಪಾಸ್ಮಹೇ।।
ಅದಕ್ಕೆ ಸಂಬಂಧಿಸಿದಂತೆ ನಿನಗೆ ಒಂದಿಷ್ಟು ಹಿತವಚನವನ್ನು ಹೇಳುತ್ತೇನೆ. ಅನಘ! ಮಹಾರಥರಾದ ಭೀಷ್ಮ, ದ್ರೋಣ, ಕರ್ಣ, ಜಯದ್ರಥ, ನಿನ್ನ ಸಹೋದರರು ಮತ್ತು ನಿನ್ನ ಮಗ ಲಕ್ಷ್ಮಣರು ಹತರಾಗಿರಲು ನಾವು ಬೇರೆ ಯಾರನ್ನು ಆಶ್ರಯಿಸೋಣ?
09003015a ಯೇಷು ಭಾರಂ ಸಮಾಸಜ್ಯ ರಾಜ್ಯೇ ಮತಿಮಕುರ್ಮಹಿ।
09003015c ತೇ ಸಂತ್ಯಜ್ಯ ತನೂರ್ಯಾತಾಃ ಶೂರಾ ಬ್ರಹ್ಮವಿದಾಂ ಗತಿಂ।।
ನಾವು ಯಾರ ಯಾರ ಮೇಲೆ ಭಾರವನ್ನು ಹೊರಿಸಿ ಈ ರಾಜ್ಯದ ಆಸೆಯನ್ನಿಟ್ಟುಕೊಂಡಿದ್ದೆವೋ ಆ ಶೂರರೆಲ್ಲರೂ ತಮ್ಮ ದೇಹಗಳನ್ನು ತ್ಯಾಗಮಾಡಿ ಬ್ರಹ್ಮವಿದರ ಗತಿಯನ್ನು ಹೊಂದಿದರು.
09003016a ವಯಂ ತ್ವಿಹ ವಿನಾಭೂತಾ ಗುಣವದ್ಭಿರ್ಮಹಾರಥೈಃ।
09003016c ಕೃಪಣಂ ವರ್ತಯಿಷ್ಯಾಮ ಪಾತಯಿತ್ವಾ ನೃಪಾನ್ಬಹೂನ್।।
ಗುಣವತ್ತರಾದ ಮಹಾರಥರಿಂದ ಈಗ ನಾವು ವಿಹೀನರಾಗಿದ್ದೇವೆ. ಅನೇಕ ನೃಪರನ್ನು ಬಲಿಗೊಟ್ಟು ನಾವೀಗ ಶೋಕಸ್ಥಿತಿಯಲ್ಲಿದ್ದೇವೆ.
09003017a ಸರ್ವೈರಪಿ ಚ ಜೀವದ್ಭಿರ್ಬೀಭತ್ಸುರಪರಾಜಿತಃ।
09003017c ಕೃಷ್ಣನೇತ್ರೋ ಮಹಾಬಾಹುರ್ದೇವೈರಪಿ ದುರಾಸದಃ।।
ಅವರೆಲ್ಲರೂ ಜೀವಿತರಾಗಿದ್ದು ಒಟ್ಟಾಗಿ ಸೆಣೆಸಿದ್ದರೂ ಬೀಭತ್ಸುವನ್ನು ಸೋಲಿಸಲಾಗುತ್ತಿರಲಿಲ್ಲ. ಕೃಷ್ಣನನ್ನೇ ಕಣ್ಣಾಗುಳ್ಳ ಆ ಮಹಾಬಾಹುವು ದೇವತೆಗಳಿಗೂ ಕಷ್ಟಸಾಧ್ಯನು.
09003018a ಇಂದ್ರಕಾರ್ಮುಕವಜ್ರಾಭಮಿಂದ್ರಕೇತುಮಿವೋಚ್ಚ್ರಿತಂ।
09003018c ವಾನರಂ ಕೇತುಮಾಸಾದ್ಯ ಸಂಚಚಾಲ ಮಹಾಚಮೂಃ।।
ಇಂದ್ರಧನುಸ್ಸಿನಂತೆ ಹೊಳೆಯುತ್ತಿರುವ, ಇಂದ್ರಧ್ವಜದಂತೆ ಎತ್ತರವಾಗಿರುವ ವಾನರಧ್ವಜವನ್ನು ಎದುರಿಸಿ ಮಹಾಸೇನೆಯು ನಡುಗಿದೆ.
09003019a ಸಿಂಹನಾದೇನ ಭೀಮಸ್ಯ ಪಾಂಚಜನ್ಯಸ್ವನೇನ ಚ।
09003019c ಗಾಂಡೀವಸ್ಯ ಚ ನಿರ್ಘೋಷಾತ್ಸಂಹೃಷ್ಯಂತಿ ಮನಾಂಸಿ ನಃ।।
ಭೀಮನ ಸಿಂಹನಾದ, ಪಾಂಚಜನ್ಯದ ಧ್ವನಿ ಮತ್ತು ಗಾಂಡೀವದ ನಿರ್ಘೋಷದಿಂದ ನಮ್ಮವರ ಮನಸ್ಸುಗಳು ಮೋಹಗೊಳ್ಳುತ್ತಿವೆ.
09003020a ಚರಂತೀವ ಮಹಾವಿದ್ಯುನ್ಮುಷ್ಣಂತಿ ನಯನಪ್ರಭಾಂ।
09003020c ಅಲಾತಮಿವ ಚಾವಿದ್ಧಂ ಗಾಂಡೀವಂ ಸಮದೃಶ್ಯತ।।
ಕಣ್ಣಿನ ಪ್ರಭೆಯನ್ನು ಅಪಹರಿಸಿ ತಿರುಗುತ್ತಿರುವ ಮಹಾ ಮಿಂಚಿನಂತೆ ಮತ್ತು ಕೊಳ್ಳಿಯ ಚಕ್ರದಂತೆ ಅರ್ಜುನನ ಗಾಂಡೀವವು ಕಾಣುತ್ತಿದೆ.
09003021a ಜಾಂಬೂನದವಿಚಿತ್ರಂ ಚ ಧೂಯಮಾನಂ ಮಹದ್ಧನುಃ।
09003021c ದೃಶ್ಯತೇ ದಿಕ್ಷು ಸರ್ವಾಸು ವಿದ್ಯುದಭ್ರಘನೇಷ್ವಿವ।।
ಸೆಳೆಯಲ್ಪಡುತ್ತಿರುವ ಆ ಚಿನ್ನ-ಚಿತ್ರಿತ ಮಹಾ ಧನುಸ್ಸು ಮೋಡಗಳ ಮಧ್ಯದಲ್ಲಿ ಕಾಣಿಸಿಕೊಳ್ಳುವ ಮಿಂಚಿನಂತೆ ಸರ್ವ ದಿಕ್ಕುಗಳಲ್ಲಿ ಕಾಣಿಸುತ್ತಿದೆ.
1109003022a ಉಹ್ಯಮಾನಶ್ಚ ಕೃಷ್ಣೇನ ವಾಯುನೇವ ಬಲಾಹಕಃ।
1209003022c ತಾವಕಂ ತದ್ಬಲಂ ರಾಜನ್ನರ್ಜುನೋಽಸ್ತ್ರವಿದಾಂ ವರಃ।।
09003022e ಗಹನಂ ಶಿಶಿರೇ ಕಕ್ಷಂ ದದಾಹಾಗ್ನಿರಿವೋತ್ಥಿತಃ।।
ರಾಜನ್! ಕೃಷ್ಣನಿಂದ ನಡೆಸಲ್ಪಡುತ್ತಿರುವ ವಾಯುವಿನಂತೆಯೇ ಅತಿವೇಗವುಳ್ಳ ರಥದಲ್ಲಿ ಕುಳಿತು ಅಸ್ತ್ರವಿದರಲ್ಲಿ ಶ್ರೇಷ್ಠ ಅರ್ಜುನನು ಶಿಶಿರ ಋತುವಿನಲ್ಲಿ ಗಹನವಾಗಿ ಹುಲ್ಲು ಮೆದೆಗಳನ್ನು ಹೇಗೋ ಹಾಗೆ ನಿನ್ನ ಸೇನೆಯನ್ನು ದಹಿಸಿಬಿಟ್ಟಿದ್ದಾನೆ.
09003023a ಗಾಹಮಾನಮನೀಕಾನಿ ಮಹೇಂದ್ರಸದೃಶಪ್ರಭಂ।
09003023c ಧನಂಜಯಮಪಶ್ಯಾಮ ಚತುರ್ದಂತಮಿವ ದ್ವಿಪಂ।।
ಮಹೇಂದ್ರನ ಪ್ರಭೆಯುಳ್ಳ ಧನಂಜಯನು ನಾಲ್ಕು ದಂತಗಳಿರುವ ಸಲಗದಂತೆ ಸೇನೆಗಳಲ್ಲಿ ನುಗ್ಗಿ ಹೋಗುತ್ತಿರುವುದನ್ನು ನಾವು ನೋಡಿದೆವು.
09003024a ವಿಕ್ಷೋಭಯಂತಂ ಸೇನಾಂ ತೇ ತ್ರಾಸಯಂತಂ ಚ ಪಾರ್ಥಿವಾನ್।
09003024c ಧನಂಜಯಮಪಶ್ಯಾಮ ನಲಿನೀಮಿವ ಕುಂಜರಂ।।
ಕಮಲಗಳ ಸರೋವರಕ್ಕೆ ಆನೆಯು ಹೇಗೋ ಹಾಗೆ ಧನಂಜಯನು ನಿನ್ನ ಸೇನೆಗಳನ್ನು ನುಗ್ಗಿ ಅಲ್ಲೋಲಕಲ್ಲೋಲಗೊಳಿಸಿ ಪಾರ್ಥಿವರನ್ನು ನಡುಗಿಸಿದುದನ್ನು ನಾವು ನೋಡಿದೆವು.
09003025a ತ್ರಾಸಯಂತಂ ತಥಾ ಯೋಧಾನ್ಧನುರ್ಘೋಷೇಣ ಪಾಂಡವಂ।
09003025c ಭೂಯ ಏನಮಪಶ್ಯಾಮ ಸಿಂಹಂ ಮೃಗಗಣಾ ಇವ।।
ಸಿಂಹವು ಮೃಗಗಣಗಳನ್ನು ಹೇಗೋ ಹಾಗೆ ಪಾಂಡವನು ತನ್ನ ಧನುರ್ಷೋಷದಿಂದ ಯೋಧರನ್ನು ಪುನಃ ಪುನಃ ಭಯಗೊಳಿಸುತ್ತಿರುವುದನ್ನು ನಾವು ನೋಡಿದೆವು.
09003026a ಸರ್ವಲೋಕಮಹೇಷ್ವಾಸೌ ವೃಷಭೌ ಸರ್ವಧನ್ವಿನಾಂ।
09003026c ಆಮುಕ್ತಕವಚೌ ಕೃಷ್ಣೌ ಲೋಕಮಧ್ಯೇ ವಿರೇಜತುಃ।।
ಸರ್ವಲೋಕ ಮಹೇಷ್ವಾಸರಾದ, ಸರ್ವಧನ್ವಿಗಳಲ್ಲಿ ವೃಷಭರಾದ, ಕವಚಗಳನ್ನು ಧರಿಸಿರುವ ಕೃಷ್ಣರಿಬ್ಬರೂ ಲೋಕಮಧ್ಯದಲ್ಲಿ ವಿರಾಜಿಸುತ್ತಿದ್ದಾರೆ.
09003027a ಅದ್ಯ ಸಪ್ತದಶಾಹಾನಿ ವರ್ತಮಾನಸ್ಯ ಭಾರತ।
09003027c ಸಂಗ್ರಾಮಸ್ಯಾತಿಘೋರಸ್ಯ ವಧ್ಯತಾಂ ಚಾಭಿತೋ ಯುಧಿ।।
ಭಾರತ! ಯುದ್ಧದಲ್ಲಿ ವಧೆಯಾಗುತ್ತಿರುವ ಈ ಅತಿ ಘೋರ ಸಂಗ್ರಾಮದ ಹದಿನೇಳನೇ ದಿನವು ಇಂದು ನಡೆಯುತ್ತಿದೆ.
09003028a ವಾಯುನೇವ ವಿಧೂತಾನಿ ತವಾನೀಕಾನಿ ಸರ್ವಶಃ।
09003028c ಶರದಂಭೋದಜಾಲಾನಿ ವ್ಯಶೀರ್ಯಂತ ಸಮಂತತಃ।।
ಶರತ್ಕಾಲದ ಮೋಡ ಸಮೂಹಗಳು ಗಾಳಿಯಿಂದ ಚದುರಿಹೋಗುವಂತೆ ನಿನ್ನ ಸೇನೆಗಳೆಲ್ಲವೂ ಎಲ್ಲ ಕಡೆ ಚದುರಿಹೋಗಿವೆ.
09003029a ತಾಂ ನಾವಮಿವ ಪರ್ಯಸ್ತಾಂ ಭ್ರಾಂತವಾತಾಂ ಮಹಾರ್ಣವೇ।
09003029c ತವ ಸೇನಾಂ ಮಹಾರಾಜ ಸವ್ಯಸಾಚೀ ವ್ಯಕಂಪಯತ್।।
ಮಹಾರಾಜ! ಮಹಾಸಮುದ್ರದಲ್ಲಿ ಭಿರುಗಾಳಿಗೆ ಸಿಲುಕಿ ನಡುಗುತ್ತಿರುವ ಹಡಗಿನಂತೆ ಸವ್ಯಸಾಚಿಯು ನಿನ್ನ ಸೇನೆಯನ್ನು ನಡುಗಿಸುತ್ತಿದ್ದಾನೆ!
09003030a ಕ್ವ ನು ತೇ ಸೂತಪುತ್ರೋಽಭೂತ್ಕ್ವ ನು ದ್ರೋಣಃ ಸಹಾನುಗಃ।
09003030c ಅಹಂ ಕ್ವ ಚ ಕ್ವ ಚಾತ್ಮಾ ತೇ ಹಾರ್ದಿಕ್ಯಶ್ಚ ತಥಾ ಕ್ವ ನು।।
09003030e ದುಃಶಾಸನಶ್ಚ ಭ್ರಾತಾ ತೇ ಭ್ರಾತೃಭಿಃ ಸಹಿತಃ ಕ್ವ ನು।।
09003031a ಬಾಣಗೋಚರಸಂಪ್ರಾಪ್ತಂ ಪ್ರೇಕ್ಷ್ಯ ಚೈವ ಜಯದ್ರಥಂ।
ಜಯದ್ರಥನು ಅವನ ಬಾಣದ ಲಕ್ಷ್ಯವಾಗಿದ್ದಾಗ ಸೂತಪುತ್ರನು ಎಲ್ಲಿದ್ದನು? ಅನುಯಾಯಿಗಳೊಡನೆ ದ್ರೋಣನು ಎಲ್ಲಿದ್ದನು? ನಾನು ಅಥವಾ ನೀನು ಎಲ್ಲಿದ್ದೆವು? ಹಾಗೆಯೇ ಹಾರ್ದಿಕ್ಯನು ಎಲ್ಲಿದ್ದನು? ನಿನ್ನ ಭ್ರಾತಾ ದುಃಶಾಸನನು ಸಹೋದರರೊಂದಿಗೆ ಎಲ್ಲಿದ್ದನು?
09003031c ಸಂಬಂಧಿನಸ್ತೇ ಭ್ರಾತೄಂಶ್ಚ ಸಹಾಯಾನ್ಮಾತುಲಾಂಸ್ತಥಾ।।
09003032a ಸರ್ವಾನ್ವಿಕ್ರಮ್ಯ ಮಿಷತೋ ಲೋಕಾಂಶ್ಚಾಕ್ರಮ್ಯ ಮೂರ್ಧನಿ।
09003032c ಜಯದ್ರಥೋ ಹತೋ ರಾಜನ್ಕಿಂ ನು ಶೇಷಮುಪಾಸ್ಮಹೇ।।
ರಾಜನ್! ನಿನ್ನ ಸಹಾಯಕರಾಗಿದ್ದ ಸಂಬಂಧಿಗಳು, ಸಹೋದರರು, ಸೋದರ ಮಾವಂದಿರು ಮತ್ತು ಎಲ್ಲರ ನೆತ್ತಿಯ ಮೇಲೆ ಕಾಲಿಟ್ಟು ಅರ್ಜುನನು ಒಂದೇ ಕ್ಷಣದಲ್ಲಿ ಜಯದ್ರಥನನು ಸಂಹರಿಸಿದನು. ಇನ್ನೇನು ನಾವು ಮಾಡಬಹುದಾಕಿತ್ತು?
09003033a ಕೋ ವೇಹ ಸ ಪುಮಾನಸ್ತಿ ಯೋ ವಿಜೇಷ್ಯತಿ ಪಾಂಡವಂ।
09003033c ತಸ್ಯ ಚಾಸ್ತ್ರಾಣಿ ದಿವ್ಯಾನಿ ವಿವಿಧಾನಿ ಮಹಾತ್ಮನಃ।।
09003033e ಗಾಂಡೀವಸ್ಯ ಚ ನಿರ್ಘೋಷೋ ವೀರ್ಯಾಣಿ ಹರತೇ ಹಿ ನಃ।
ಪಾಂಡವನನ್ನು ಜಯಿಸಬಲ್ಲ ಪುರುಷನು ನಮ್ಮವರಲ್ಲಿ ಯಾರಿದ್ದಾರೆ? ಆ ಮಹಾತ್ಮನ ವಿವಿಧ ದಿವ್ಯಾಸ್ತ್ರಗಳು ಮತ್ತು ಗಾಂಡೀವದ ನಿರ್ಘೋಷವು ನಮ್ಮ ವೀರ್ಯಗಳನ್ನು ಅಪಹರಿಸಿಬಿಟ್ಟಿವೆ!
09003034a ನಷ್ಟಚಂದ್ರಾ ಯಥಾ ರಾತ್ರಿಃ ಸೇನೇಯಂ ಹತನಾಯಕಾ।
09003034c ನಾಗಭಗ್ನದ್ರುಮಾ ಶುಷ್ಕಾ ನದೀವಾಕುಲತಾಂ ಗತಾ।।
ನಾಯಕನನ್ನು ಕಳೆದುಕೊಂಡ ನಮ್ಮ ಈ ಸೇನೆಯು ಚಂದ್ರನಿಲ್ಲದ ರಾತ್ರಿಯಂತೆ, ಆನೆಗಳಿಂದ ವೃಕ್ಷಗಳು ನಾಶವಾಗಿದ್ದ ವನದಂತೆ ಮತ್ತು ಬತ್ತಿಹೋದ ನದಿಯಂತೆ ವ್ಯಾಕುಲಗೊಂಡಿದೆ.
09003035a ಧ್ವಜಿನ್ಯಾಂ ಹತನೇತ್ರಾಯಾಂ ಯಥೇಷ್ಟಂ ಶ್ವೇತವಾಹನಃ।
09003035c ಚರಿಷ್ಯತಿ ಮಹಾಬಾಹುಃ ಕಕ್ಷೇಽಗ್ನಿರಿವ ಸಂಜ್ವಲನ್।।
ನೇತಾರನನ್ನು ಕಳೆದುಕೊಂಡ ನಮ್ಮ ಸೇನೆಯೊಳಗೆ ನುಗ್ಗಿ ಮಹಾಬಾಹು ಶ್ವೇತವಾಹನನು ಅಗ್ನಿಯು ಹುಲ್ಲುಮೆದೆಗಳನ್ನು ಹೇಗೋ ಹಾಗೆ ಸುಡುತ್ತಾ ಸಂಚರಿಸುತ್ತಿದ್ದಾನೆ.
09003036a ಸಾತ್ಯಕೇಶ್ಚೈವ ಯೋ ವೇಗೋ ಭೀಮಸೇನಸ್ಯ ಚೋಭಯೋಃ।
09003036c ದಾರಯೇತ ಗಿರೀನ್ಸರ್ವಾನ್ ಶೋಷಯೇತ ಚ ಸಾಗರಾನ್।।
ಸಾತ್ಯಕಿ ಮತ್ತು ಭೀಮಸೇನರಿಬ್ಬರೂ ಮಹಾ ವೇಗಶಾಲಿಗಳು ಮತ್ತು ಇವರು ಗಿರಿಗಳೆಲ್ಲವನ್ನೂ ಸೀಳಬಲ್ಲರು ಮತ್ತು ಸಾಗರಗಳನ್ನು ಬತ್ತಿಸಬಲ್ಲರು.
09003037a ಉವಾಚ ವಾಕ್ಯಂ ಯದ್ಭೀಮಃ ಸಭಾಮಧ್ಯೇ ವಿಶಾಂ ಪತೇ।
09003037c ಕೃತಂ ತತ್ಸಕಲಂ ತೇನ ಭೂಯಶ್ಚೈವ ಕರಿಷ್ಯತಿ।।
ವಿಶಾಂಪತೇ! ಸಭಾಮಧ್ಯದಲ್ಲಿ ಭೀಮನು ಏನೆಲ್ಲ ಮಾತುಗಳನ್ನು ಆಡಿದ್ದನೋ ಅವೆಲ್ಲವನ್ನು ಮಾಡಿದ್ದಾನೆ ಮತ್ತು ಮುಂದೆ ಮಾಡುತ್ತಾನೆ ಕೂಡ!
09003038a ಪ್ರಮುಖಸ್ಥೇ ತದಾ ಕರ್ಣೇ ಬಲಂ ಪಾಂಡವರಕ್ಷಿತಂ।
09003038c ದುರಾಸದಂ ತಥಾ ಗುಪ್ತಂ ಗೂಢಂ ಗಾಂಡೀವಧನ್ವನಾ।।
ಗಾಂಡೀವ ಧನ್ವಿಯಿಂದ ವ್ಯೂಹಿಸಲ್ಪಟ್ಟು ರಕ್ಷಿತಗೊಂಡಿರುವ ಮತ್ತು ಪಾಂಡವರಿಂದ ರಕ್ಷಿತವಾದ ಆ ಸೇನೆಯು ಕರ್ಣನ ನಾಯಕತ್ವದಲ್ಲಿ ಕೂಡ ದುರಾಸದವಾಗಿತ್ತು.
09003039a ಯುಷ್ಮಾಭಿಸ್ತಾನಿ ಚೀರ್ಣಾನಿ ಯಾನ್ಯಸಾಧೂನಿ ಸಾಧುಷು।
09003039c ಅಕಾರಣಕೃತಾನ್ಯೇವ ತೇಷಾಂ ವಃ ಫಲಮಾಗತಂ।।
ಸಾಧುಗಳೊಂದಿಗೆ ಅಕಾರಣವಾಗಿ ಅಸಾಧುಗಳಂತೆ ವರ್ತಿಸಿದುದಕ್ಕಾಗಿ ಅದರ ಫಲವು ನಮಗೆ ದೊರೆಯುತ್ತಿದೆ.
09003040a ಆತ್ಮನೋಽರ್ಥೇ ತ್ವಯಾ ಲೋಕೋ ಯತ್ನತಃ ಸರ್ವ ಆಹೃತಃ।
09003040c ಸ ತೇ ಸಂಶಯಿತಸ್ತಾತ ಆತ್ಮಾ ಚ ಭರತರ್ಷಭ।।
ಅಯ್ಯಾ ಭರತರ್ಷಭ! ನಿನಗೋಸ್ಕರವಾಗಿ ನೀನು ಕರೆದಿರುವ ಎಲ್ಲರೂ ಪ್ರಯತ್ನಪಟ್ಟರೂ ಅವರಾಗಲೀ ಅಥವಾ ನೀನಾಗಲೀ ಉಳಿಯುವುದು ಸಂಶಯವೇ ಆಗಿದೆ.
09003041a ರಕ್ಷ ದುರ್ಯೋಧನಾತ್ಮಾನಮಾತ್ಮಾ ಸರ್ವಸ್ಯ ಭಾಜನಂ।
09003041c ಭಿನ್ನೇ ಹಿ ಭಾಜನೇ ತಾತ ದಿಶೋ ಗಚ್ಚತಿ ತದ್ಗತಂ।।
ಮಗೂ! ದುರ್ಯೋಧನ! ನಿನ್ನನ್ನು ನೀನು ರಕ್ಷಿಸಿಕೋ! ಈ ಶರೀರವೇ ಸರ್ವ ಸುಖಗಳ ಅನುಭವಸ್ಥಾನವಾಗಿದೆ. ಪಾತ್ರೆಯು ಒಡೆದಾಗ ಅದರಲ್ಲಿರುವ ನೀರು ಎಲ್ಲ ಕಡೆ ಹರಿದುಹೋಗುವಂತೆ ಶರೀರವು ನಾಶವಾಗಲು ಸರ್ವ ಸುಖಗಳೂ ಅಂತ್ಯಗೊಳ್ಳುತ್ತವೆ.
09003042a ಹೀಯಮಾನೇನ ವೈ ಸಂಧಿಃ ಪರ್ಯೇಷ್ಟವ್ಯಃ ಸಮೇನ ಚ।
09003042c ವಿಗ್ರಹೋ ವರ್ಧಮಾನೇನ ನೀತಿರೇಷಾ ಬೃಹಸ್ಪತೇಃ।।
ತನ್ನ ಬಲವು ಶತ್ರುಬಲಕ್ಕಿಂತ ಕಡಿಮೆಯಾಗಿರುವಾಗ ಅಥವಾ ಸಮನಾಗಿರುವಾಗ ಶತ್ರುಗಳೊಡನೆ ಸಂಧಿಯ ಮಾರ್ಗವನ್ನು ಹುಡುಕಬೇಕು. ಅಧಿಕವಾಗಿರುವಾಗ ಯುದ್ಧಮಾಡಬೇಕು. ಇದೇ ಬೃಹಸ್ಪತಿಯ ನೀತಿ.
09003043a ತೇ ವಯಂ ಪಾಂಡುಪುತ್ರೇಭ್ಯೋ ಹೀನಾಃ ಸ್ವಬಲಶಕ್ತಿತಃ।
09003043c ಅತ್ರ ತೇ ಪಾಂಡವೈಃ ಸಾರ್ಧಂ ಸಂಧಿಂ ಮನ್ಯೇ ಕ್ಷಮಂ ಪ್ರಭೋ।।
ಪ್ರಭೋ! ಈಗ ನಾವು ನಮ್ಮ ಶಕ್ತಿಯಲ್ಲಿ ಪಾಂಡುಪುತ್ರರಿಗಿಂತಲೂ ಹೀನರಾಗಿದ್ದೇವೆ. ಆದುದರಿಂದ ಪಾಂಡವರೊಂದಿಗೆ ಸಂಧಿಯೇ ಸರಿಯಾದುದೆಂದು ಅನ್ನಿಸುತ್ತಿದೆ.
09003044a ನ ಜಾನೀತೇ ಹಿ ಯಃ ಶ್ರೇಯಃ ಶ್ರೇಯಸಶ್ಚಾವಮನ್ಯತೇ।
09003044c ಸ ಕ್ಷಿಪ್ರಂ ಭ್ರಶ್ಯತೇ ರಾಜ್ಯಾನ್ನ ಚ ಶ್ರೇಯೋಽನುವಿಂದತಿ।।
ಯಾವ ರೀತಿಯಲ್ಲಿ ನಡೆದರೆ ಶ್ರೇಯಸ್ಸುಂಟಾಗುತ್ತದೆ ಎನ್ನುವುದನ್ನು ಅರಿಯದವನು ಶ್ರೇಯಸ್ಸನ್ನು ಅಪಮಾನಿಸಿದಂತೆ. ಅವನು ಕ್ಷಿಪ್ರವಾಗಿ ರಾಜ್ಯ-ಶ್ರೇಯಸ್ಸುಗಳನ್ನು ಕಳೆದುಕೊಳ್ಳುತ್ತಾನೆ.
09003045a ಪ್ರಣಿಪತ್ಯ ಹಿ ರಾಜಾನಂ ರಾಜ್ಯಂ ಯದಿ ಲಭೇಮಹಿ।
09003045c ಶ್ರೇಯಃ ಸ್ಯಾನ್ನ ತು ಮೌಢ್ಯೇನ ರಾಜನ್ಗಂತುಂ ಪರಾಭವಂ।।
ರಾಜನ್! ರಾಜ ಯುಧಿಷ್ಠಿರನಿಗೆ ತಲೆಬಾಗಿ ನಮ್ಮ ರಾಜ್ಯವನ್ನು ಪಡೆದುಕೊಂಡೆವೆಂದರೆ ಅದರಿಂದ ನಮಗೆ ಶ್ರೇಯಸ್ಸೇ ಉಂಟಾಗುತ್ತದೆ. ಮೌಡ್ಯತನದಿಂದ ಹೀಗೆಯೇ ಮುಂದುವರೆದರೆ ಪರಾಭವವನ್ನು ಹೊಂದುತ್ತೇವೆಯೇ ವಿನಃ ಶ್ರೇಯಸ್ಸು ದೊರಕುವುದಿಲ್ಲ.
09003046a ವೈಚಿತ್ರವೀರ್ಯವಚನಾತ್ಕೃಪಾಶೀಲೋ ಯುಧಿಷ್ಠಿರಃ।
09003046c ವಿನಿಯುಂಜೀತ ರಾಜ್ಯೇ ತ್ವಾಂ ಗೋವಿಂದವಚನೇನ ಚ।।
ಕೃಪಾಶೀಲ ಯುಧಿಷ್ಠಿರನು ವೈಚಿತ್ರವೀರ್ಯನ ಮಾತು ಅಥವಾ ಗೋವಿಂದನ ಹೇಳಿಕೆಯಂತೆ ನಿನಗೇ ರಾಜ್ಯವೆಲ್ಲವನ್ನು ನೀಡಿಯಾನು!
09003047a ಯದ್ಬ್ರೂಯಾದ್ಧಿ ಹೃಷೀಕೇಶೋ ರಾಜಾನಮಪರಾಜಿತಂ।
09003047c ಅರ್ಜುನಂ ಭೀಮಸೇನಂ ಚ ಸರ್ವಂ ಕುರ್ಯುರಸಂಶಯಂ।।
ಹೃಷೀಕೇಶನು ರಾಜ ಅಪರಾಜಿತ ಯುಧಿಷ್ಠಿರನಿಗೆ ಏನನ್ನು ಹೇಳುವನೋ ಅದರಂತೆಯೇ ಭೀಮಾರ್ಜುನರೆಲ್ಲರೂ ಮಾಡುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
09003048a ನಾತಿಕ್ರಮಿಷ್ಯತೇ ಕೃಷ್ಣೋ ವಚನಂ ಕೌರವಸ್ಯ ಹ।
09003048c ಧೃತರಾಷ್ಟ್ರಸ್ಯ ಮನ್ಯೇಽಹಂ ನಾಪಿ ಕೃಷ್ಣಸ್ಯ ಪಾಂಡವಃ।।
ಕೌರವ ಧೃತರಾಷ್ಟ್ರನ ಮಾತನ್ನು ಕೃಷ್ಣನು ಉಲ್ಲಂಘಿಸುವುದಿಲ್ಲ, ಮತ್ತು ಅಂತೆಯೇ ಕೃಷ್ಣನ ಮಾತನ್ನು ಪಾಂಡವರು ಉಲ್ಲಂಘಿಸುವುದಿಲ್ಲ ಎಂದು ನನಗನ್ನಿಸುತ್ತದೆ.
09003049a ಏತತ್ ಕ್ಷಮಮಹಂ ಮನ್ಯೇ ತವ ಪಾರ್ಥೈರವಿಗ್ರಹಂ।
09003049c ನ ತ್ವಾ ಬ್ರವೀಮಿ ಕಾರ್ಪಣ್ಯಾನ್ನ ಪ್ರಾಣಪರಿರಕ್ಷಣಾತ್।।
09003049e ಪಥ್ಯಂ ರಾಜನ್ಬ್ರವೀಮಿ ತ್ವಾಂ ತತ್ಪರಾಸುಃ ಸ್ಮರಿಷ್ಯಸಿ।।
ರಾಜನ್! ನೀನು ಪಾರ್ಥರೊಂದಿಗೆ ಯುದ್ಧವನ್ನು ನಿಲ್ಲಿಸುವುದೇ ಉತ್ತಮವೆಂದು ನನಗನ್ನಿಸುತ್ತಿದೆ. ಇದನ್ನು ನಾನು ಯುದ್ಧಮಾಡುವುದು ಕಷ್ಟವೆಂಬ ಕಾರಣದಿಂದಾಗಲೀ ಪ್ರಾಣರಕ್ಷಣೆಯ ಸಲುವಾಗಲೀ ಹೇಳುತ್ತಿಲ್ಲ. ನಿನಗೆ ಪಥ್ಯ-ಹಿತವಾಗುವ ಮಾತನ್ನು ಹೇಳುತ್ತಿದ್ದೇನೆ.”
09003050a ಇತಿ ವೃದ್ಧೋ ವಿಲಪ್ಯೈತತ್ಕೃಪಃ ಶಾರದ್ವತೋ ವಚಃ।
09003050c ದೀರ್ಘಮುಷ್ಣಂ ಚ ನಿಃಶ್ವಸ್ಯ ಶುಶೋಚ ಚ ಮುಮೋಹ ಚ।।
ಹೀಗೆ ಹೇಳಿ ವೃದ್ಧ ಶಾರದ್ವತ ಕೃಪನು ಬಿಸಿಬಿಸಿಯಾದ ನಿಟ್ಟುಸಿರು ಬಿಡುತ್ತಾ, ಬಹಳವಾಗಿ ಶೋಕಿಸುತ್ತಾ, ದುಃಖಾತಿರೇಕದಿಂದ ಮೂರ್ಛಿತನಾದನು.”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಕೃಪವಾಕ್ಯೇ ತೃತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಕೃಪವಾಕ್ಯ ಎನ್ನುವ ಮೂರನೇ ಅಧ್ಯಾಯವು.