ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಶಲ್ಯ ಪರ್ವ
ಶಲ್ಯವಧ ಪರ್ವ
ಅಧ್ಯಾಯ 2
ಸಾರ
ಧೃತರಾಷ್ಟ್ರ ವಿಲಾಪ (1-65).
09002001 ವೈಶಂಪಾಯನ ಉವಾಚ 09002001a ವಿಸೃಷ್ಟಾಸ್ವಥ ನಾರೀಷು ಧೃತರಾಷ್ಟ್ರೋಂúಽಬಿಕಾಸುತಃ।
09002001c ವಿಲಲಾಪ ಮಹಾರಾಜ ದುಃಖಾದ್ದುಃಖತರಂ ಗತಃ।।
ವೈಶಂಪಾಯನನು ಹೇಳಿದನು: “ಮಹಾರಾಜ! ಸ್ತ್ರೀಯರು ಹೊರಟುಹೋದನಂತರ ಒಂದು ದುಃಖದಿಂದ ಇನ್ನೊಂದು ದುಃಖವನ್ನು ಪಡೆದ ಅಂಬಿಕಾಸುತ ಧೃತರಾಷ್ಟ್ರನು ವಿಲಪಿಸಿದನು.
09002002a ಸಧೂಮಮಿವ ನಿಃಶ್ವಸ್ಯ ಕರೌ ಧುನ್ವನ್ಪುನಃ ಪುನಃ।
09002002c ವಿಚಿಂತ್ಯ ಚ ಮಹಾರಾಜ ತತೋ ವಚನಮಬ್ರವೀತ್।।
ಮಹಾರಾಜ! ಹೊಗೆಯನ್ನು ಹೊರಬಿಡುವಂತೆ ನಿಟ್ಟುಸಿರು ಬಿಡುತ್ತಾ, ಪುನಃ ಪುನಃ ಕೈಗಳನ್ನು ಕೊಡವುತ್ತಾ, ಯೋಚಿಸಿ ಅವನು ಈ ಮಾತನ್ನಾಡಿದನು:
09002003a ಅಹೋ ಬತ ಮಹದ್ದುಃಖಂ ಯದಹಂ ಪಾಂಡವಾನ್ರಣೇ।
09002003c ಕ್ಷೇಮಿಣಶ್ಚಾವ್ಯಯಾಂಶ್ಚೈವ ತ್ವತ್ತಃ ಸೂತ ಶೃಣೋಮಿ ವೈ।।
“ಅಯ್ಯೋ ಸೂತ! ರಣದಲ್ಲಿ ಪಾಂಡವರು ಅವ್ಯಯರೂ ಕ್ಷೇಮಿಗಳೂ ಆಗಿದ್ದಾರೆಂದು ನಿನ್ನಿಂದ ಕೇಳಿದೆನಲ್ಲಾ ಅದೇ ಮಹಾ ದುಃಖಕರವಾದುದು!
09002004a ವಜ್ರಸಾರಮಯಂ ನೂನಂ ಹೃದಯಂ ಸುದೃಢಂ ಮಮ।
09002004c ಯಚ್ಚ್ರುತ್ವಾ ನಿಹತಾನ್ಪುತ್ರಾನ್ದೀರ್ಯತೇ ನ ಸಹಸ್ರಧಾ।।
ಪುತ್ರರು ಹತರಾದರೆಂದು ಕೇಳಿಯೂ ಸಹಸ್ರಚೂರುಗಳಾಗಿ ಸೀಳಿಹೋಗದಿರುವ ಈ ಹೃದಯವು ಸುದೃಢ ವಜ್ರದಿಂದ ಮಾಡಲ್ಪಟ್ಟಿಲ್ಲ ತಾನೇ?
09002005a ಚಿಂತಯಿತ್ವಾ ವಚಸ್ತೇಷಾಂ ಬಾಲಕ್ರೀಡಾಂ ಚ ಸಂಜಯ।
09002005c ಅದ್ಯ ಶ್ರುತ್ವಾ ಹತಾನ್ಪುತ್ರಾನ್ಭೃಶಂ ಮೇ ದೀರ್ಯತೇ ಮನಃ।।
ಸಂಜಯ! ಅವರ ಬಾಲಕ್ರೀಡೆಗಳನ್ನೂ ಮಾತುಗಳನ್ನೂ ನೆನಪಿಸಿಕೊಂಡು ಮತ್ತು ಇಂದು ಆ ಪುತ್ರರು ಹತರಾದರೆಂದು ಕೇಳಿ ನನ್ನ ಮನಸ್ಸು ಅತ್ಯಂತ ಗೋಳಿಡುತ್ತಿದೆ.
09002006a ಅಂಧತ್ವಾದ್ಯದಿ ತೇಷಾಂ ತು ನ ಮೇ ರೂಪನಿದರ್ಶನಂ।
09002006c ಪುತ್ರಸ್ನೇಹಕೃತಾ ಪ್ರೀತಿರ್ನಿತ್ಯಮೇತೇಷು ಧಾರಿತಾ।।
ಅಂಧತ್ವದಿಂದಾಗಿ ಅವರ ರೂಪಗಳನ್ನು ಕಾಣದಿದ್ದರೂ ಪುತ್ರಸ್ನೇಹದಿಂದುಂಟಾದ ಪ್ರೀತಿಯು ಸದಾ ಅವರಮೇಲಿತ್ತು.
09002007a ಬಾಲಭಾವಮತಿಕ್ರಾಂತಾನ್ಯೌವನಸ್ಥಾಂಶ್ಚ ತಾನಹಂ।
09002007c ಮಧ್ಯಪ್ರಾಪ್ತಾಂಸ್ತಥಾ ಶ್ರುತ್ವಾ ಹೃಷ್ಟ ಆಸಂ ತಥಾನಘ।।
ಅನಘ! ಅವರು ಬಾಲಭಾವವನ್ನು ದಾಟಿ ಯೌವನಸ್ಥರಾದರೆಂದೂ ನಂತರ ಮಧ್ಯವಯಸ್ಕರಾದರೆಂದೂ ಕೇಳಿದಾಗ ನಾನು ಅತ್ಯಂತ ಹರ್ಷಿತನಾಗುತ್ತಿದ್ದೆ.
09002008a ತಾನದ್ಯ ನಿಹತಾನ್ ಶ್ರುತ್ವಾ ಹೃತೈಶ್ವರ್ಯಾನ್ ಹೃತೌಜಸಃ।
09002008c ನ ಲಭೇ ವೈ ಕ್ವ ಚಿಚ್ಚಾಂತಿಂ ಪುತ್ರಾಧಿಭಿರಭಿಪ್ಲುತಃ।।
ಇಂದು ಅವರು ಐಶ್ವರ್ಯಗಳನ್ನೂ ತೇಜಸ್ಸನ್ನೂ ಕಳೆದುಕೊಂಡು ಹತರಾದರೆಂದು ಕೇಳಿ ಮನಸ್ಸಿಗೆ ಸ್ವಲ್ಪವೂ ಶಾಂತಿ ದೊರೆಯುತ್ತಿಲ್ಲ.
09002009a ಏಹ್ಯೇಹಿ ಪುತ್ರ ರಾಜೇಂದ್ರ ಮಮಾನಾಥಸ್ಯ ಸಾಂಪ್ರತಂ।
09002009c ತ್ವಯಾ ಹೀನೋ ಮಹಾಬಾಹೋ ಕಾಂ ನು ಯಾಸ್ಯಾಮ್ಯಹಂ ಗತಿಂ।।
ಮಗನೇ! ರಾಜೇಂದ್ರ! ಇಲ್ಲಿ ಬಾ! ಅನಾಥನಾಗಿರುವ ನನ್ನ ಬಳಿ ಬಾ! ಮಹಾಬಾಹೋ! ನಿನ್ನನ್ನು ಕಳೆದುಕೊಂಡ ನನ್ನ ಗತಿಯೇನಾಗಬಹುದು?
09002010a ಗತಿರ್ಭೂತ್ವಾ ಮಹಾರಾಜ ಜ್ಞಾತೀನಾಂ ಸುಹೃದಾಂ ತಥಾ।
09002010c ಅಂಧಂ ವೃದ್ಧಂ ಚ ಮಾಂ ವೀರ ವಿಹಾಯ ಕ್ವ ನು ಗಚ್ಚಸಿ।।
ಮಹಾರಾಜ! ವೀರ! ಕುಲದವರ ಮತ್ತು ಸುಹೃದಯರ ಹಾಗೂ ಈ ಅಂಧ ವೃದ್ಧನ ಗತಿಯಾಗಿದ್ದ ನೀನು ನನ್ನನ್ನು ಬಿಟ್ಟು ಎಲ್ಲಿ ಹೋಗಿರುವೆ?
09002011a ಸಾ ಕೃಪಾ ಸಾ ಚ ತೇ ಪ್ರೀತಿಃ ಸಾ ಚ ರಾಜನ್ಸುಮಾನಿತಾ।
09002011c ಕಥಂ ವಿನಿಹತಃ ಪಾರ್ಥೈಃ ಸಮ್ಯುಗೇಷ್ವಪರಾಜಿತಃ।।
ರಾಜನ್! ನಿನ್ನಲ್ಲಿದ್ದ ಕೃಪೆ, ಪ್ರೀತಿ ಮತ್ತು ಅಭಿಮಾನಗಳು ಎಲ್ಲಿ ಹೋದವು? ಯುದ್ಧದಲ್ಲಿ ಅಪರಾಜಿತನಾದ ನೀನು ಪಾರ್ಥನಿಂದ ಹೇಗೆ ಸಂಹರಿಸಲ್ಪಟ್ಟೆ?
09002012a ಕಥಂ ತ್ವಂ ಪೃಥಿವೀಪಾಲಾನ್ಭುಕ್ತ್ವಾ ತಾತ ಸಮಾಗತಾನ್।
09002012c ಶೇಷೇ ವಿನಿಹತೋ ಭೂಮೌ ಪ್ರಾಕೃತಃ ಕುನೃಪೋ ಯಥಾ।।
ಮಗನೇ! ನಿನ್ನಲ್ಲಿಗೆ ಬಂದಿದ್ದ ಪೃಥಿವೀಪಾಲರನ್ನು ಬಿಟ್ಟು ಪ್ರಾಕೃತ ಹೀನ ರಾಜನಂತೆ ಏಕೆ ನೆಲದಮೇಲೆ ಮಲಗಿರುವೆ?
09002013a ಕೋ ನು ಮಾಮುತ್ಥಿತಂ ಕಾಲ್ಯೇ ತಾತ ತಾತೇತಿ ವಕ್ಷ್ಯತಿ।
09002013c ಮಹಾರಾಜೇತಿ ಸತತಂ ಲೋಕನಾಥೇತಿ ಚಾಸಕೃತ್।।
ಪ್ರಾತಃ ಕಾಲ ಏಳುವಾಗ ಸತತವೂ “ಅಪ್ಪಾ! ಅಪ್ಪಾ! ಲೋಕನಾಥ! ಮಹಾರಾಜ!” ಎಂದು ನನ್ನನ್ನು ಇನ್ನು ಯಾರು ಕರೆಯುತ್ತಾರೆ?
09002014a ಪರಿಷ್ವಜ್ಯ ಚ ಮಾಂ ಕಂಠೇ ಸ್ನೇಹೇನಾಕ್ಲಿನ್ನಲೋಚನಃ।
09002014c ಅನುಶಾಧೀತಿ ಕೌರವ್ಯ ತತ್ಸಾಧು ವದ ಮೇ ವಚಃ।।
ಸ್ನೇಹದಿಂದ ಕಣ್ಣುಗಳು ತುಂಬಿ ನನ್ನ ಕತ್ತನ್ನು ಆಲಂಗಿಸಿ “ಕೌರವ್ಯ! ಏನು ಮಾಡಬೇಕೆಂದು ಹೇಳು!” ಎಂಬ ಆ ಸುಮಧುರ ಮಾತನ್ನು ಇನ್ನೊಮ್ಮೆ ಹೇಳು.
09002015a ನನು ನಾಮಾಹಮಶ್ರೌಷಂ ವಚನಂ ತವ ಪುತ್ರಕ।
09002015c ಭೂಯಸೀ ಮಮ ಪೃಥ್ವೀಯಂ ಯಥಾ ಪಾರ್ಥಸ್ಯ ನೋ ತಥಾ।।
ಅಂದು “ಈ ಇಡೀ ಪೃಥ್ವಿಯು ನನ್ನದಾಗಿದೆ. ಇಷ್ಟೊಂದು ಭೂಮಿ ಪಾರ್ಥನಲ್ಲಿ ಎಂದೂ ಇರಲಿಲ್ಲ!” ಎಂದು ಪುತ್ರಕ! ನೀನು ನನ್ನೊಡನೆ ಹೇಳುತ್ತಿರಲಿಲ್ಲವೇ?
09002016a ಭಗದತ್ತಃ ಕೃಪಃ ಶಲ್ಯ ಆವಂತ್ಯೋಽಥ ಜಯದ್ರಥಃ।
09002016c ಭೂರಿಶ್ರವಾಃ ಸೋಮದತ್ತೋ ಮಹಾರಾಜೋಽಥ ಬಾಹ್ಲಿಕಃ।।
09002017a ಅಶ್ವತ್ಥಾಮಾ ಚ ಭೋಜಶ್ಚ ಮಾಗಧಶ್ಚ ಮಹಾಬಲಃ।
09002017c ಬೃಹದ್ಬಲಶ್ಚ ಕಾಶೀಶಃ ಶಕುನಿಶ್ಚಾಪಿ ಸೌಬಲಃ।।
09002018a ಮ್ಲೇಚ್ಛಾಶ್ಚ ಬಹುಸಾಹಸ್ರಾಃ ಶಕಾಶ್ಚ ಯವನೈಃ ಸಹ।
09002018c ಸುದಕ್ಷಿಣಶ್ಚ ಕಾಂಬೋಜಸ್ತ್ರಿಗರ್ತಾಧಿಪತಿಸ್ತಥಾ।।
09002019a ಭೀಷ್ಮಃ ಪಿತಾಮಹಶ್ಚೈವ ಭಾರದ್ವಾಜೋಽಥ ಗೌತಮಃ।
09002019c ಶ್ರುತಾಯುಶ್ಚಾಚ್ಯುತಾಯುಶ್ಚ ಶತಾಯುಶ್ಚಾಪಿ ವೀರ್ಯವಾನ್।।
09002020a ಜಲಸಂಧೋಽಥಾರ್ಶ್ಯಶೃಂಗೀ ರಾಕ್ಷಸಶ್ಚಾಪ್ಯಲಾಯುಧಃ।
09002020c ಅಲಂಬುಸೋ ಮಹಾಬಾಹುಃ ಸುಬಾಹುಶ್ಚ ಮಹಾರಥಃ।।
09002021a ಏತೇ ಚಾನ್ಯೇ ಚ ಬಹವೋ ರಾಜಾನೋ ರಾಜಸತ್ತಮ।
09002021c ಮದರ್ಥಮುದ್ಯತಾಃ ಸರ್ವೇ ಪ್ರಾಣಾಂಸ್ತ್ಯಕ್ತ್ವಾ ರಣೇ ಪ್ರಭೋ।।
“ಪ್ರಭೋ! ರಾಜಸತ್ತಮ! ಭಗದತ್ತ, ಕೃಪ, ಶಲ್ಯ, ಅವಂತಿಯವರು, ಜಯದ್ರಥ, ಭೂರಿಶ್ರವ, ಸೋಮದತ್ತ, ಬಾಹ್ಲಿಕ ಮಹಾರಾಜ, ಅಶ್ವತ್ಥಾಮ, ಭೋಜ, ಮಹಾಬಲ ಮಾಗಧ, ಕಾಶೀಶ ಬೃಹದ್ಬಲ, ಸೌಬಲ ಶಕುನಿ, ಶಕರು ಮತ್ತು ಯವನರೊಂದಿಗೆ ಅನೇಕ ಸಹಸ್ರ ಮ್ಲೇಚ್ಛರು, ಕಾಂಬೋಜ, ತ್ರಿಗರ್ತಾಧಿಪತಿ ಸುದಕ್ಷಿಣ, ಪಿತಾಮಹ ಭೀಷ್ಮ, ಭಾರದ್ವಾಜ, ಗೌತಮ, ಶ್ರುತಾಯು, ಅಚ್ಯುತಾಯು, ವೀರ್ಯವಾನ್ ಶತಾಯು, ಜಲಸಂಧ, ಆರ್ಶ್ಯಶೃಂಗಿ, ರಾಕ್ಷಸ ಅಲಾಯುಧ, ಮಹಾಬಾಹು ಅಲಂಬುಸ, ಮಹಾರಥ ಸುಬಾಹು, ಇವರು ಮತ್ತು ಅನ್ಯ ಅನೇಕ ರಾಜರು ಎಲ್ಲರೂ ನನಗಾಗಿ ಪ್ರಾಣಗಳನ್ನೇ ತೊರೆದು ರಣದಲ್ಲಿ ಸಿದ್ಧರಾಗಿದ್ದಾರೆ!
09002022a ಯೇಷಾಂ ಮಧ್ಯೇ ಸ್ಥಿತೋ ಯುದ್ಧೇ ಭ್ರಾತೃಭಿಃ ಪರಿವಾರಿತಃ।
09002022c ಯೋಧಯಿಷ್ಯಾಮ್ಯಹಂ ಪಾರ್ಥಾನ್ಪಾಂಚಾಲಾಂಶ್ಚೈವ ಸರ್ವಶಃ।।
ಇವರ ಮಧ್ಯದಲ್ಲಿ ನಿಂತು, ಸಹೋದರರಿಂದ ಪರಿವಾರಿತನಾಗಿ ನಾನು ಪಾರ್ಥರು ಮತ್ತು ಪಾಂಚಾಲರೆಲ್ಲರೊಡನೆ ಯುದ್ಧಮಾಡುತ್ತೇನೆ.
09002023a ಚೇದೀಂಶ್ಚ ನೃಪಶಾರ್ದೂಲ ದ್ರೌಪದೇಯಾಂಶ್ಚ ಸಂಯುಗೇ।
09002023c ಸಾತ್ಯಕಿಂ ಕುಂತಿಭೋಜಂ ಚ ರಾಕ್ಷಸಂ ಚ ಘಟೋತ್ಕಚಂ।।
09002024a ಏಕೋಽಪ್ಯೇಷಾಂ ಮಹಾರಾಜ ಸಮರ್ಥಃ ಸಂನಿವಾರಣೇ।
09002024c ಸಮರೇ ಪಾಂಡವೇಯಾನಾಂ ಸಂಕ್ರುದ್ಧೋ ಹ್ಯಭಿಧಾವತಾಂ।।
09002024e ಕಿಂ ಪುನಃ ಸಹಿತಾ ವೀರಾಃ ಕೃತವೈರಾಶ್ಚ ಪಾಂಡವೈಃ।।
ಮಹಾರಾಜ! ನಾನೊಬ್ಬನೇ ಚೇದಿಯ ನೃಪಶಾರ್ದೂಲ, ದ್ರೌಪದೇಯರು, ಸಾತ್ಯಕಿ, ಕುಂತಿಭೋಜ, ರಾಕ್ಷಸ ಘಟೋತ್ಕಚರನ್ನು ಯುದ್ಧದಲ್ಲಿ ಎದುರಿಸುತ್ತೇನೆ. ನನ್ನ ಈ ಸಹಯೋಗಿಗಳಲ್ಲಿ ಒಬ್ಬೊಬ್ಬರೂ ಸಮರಾಂಗಣದಲ್ಲಿ ಕುಪಿತರಾಗಿ ನನ್ನಮೇಲೆ ಆಕ್ರಮಣ ಮಾಡುವ ಸಮಸ್ತ ಪಾಂಡವರನ್ನು ತಡೆಯಲು ಸಮರ್ಥರಾಗಿದ್ದಾರೆ. ಹೀಗಿದ್ದಾಗ, ಪಾಂಡವರೊಂದಿಗೆ ವೈರವನ್ನು ಸಾಧಿಸುವ ಇವರೆಲ್ಲ ವೀರರೂ ಒಂದಾಗಿ ಒಟ್ಟಿಗೇ ಯುದ್ಧಮಾಡಿದರೆ ಮತ್ತೆ ಇನ್ನೇನು?
09002025a ಅಥ ವಾ ಸರ್ವ ಏವೈತೇ ಪಾಂಡವಸ್ಯಾನುಯಾಯಿಭಿಃ।
09002025c ಯೋತ್ಸ್ಯಂತಿ ಸಹ ರಾಜೇಂದ್ರ ಹನಿಷ್ಯಂತಿ ಚ ತಾನ್ಮೃಧೇ।।
ರಾಜೇಂದ್ರ! ಅಥವಾ ಇವರೆಲ್ಲರೂ ರಣದಲ್ಲಿ ಪಾಂಡವರ ಅನುಯಾಯಿಗಳೊಂದಿಗೆ ಯುದ್ಧಮಾಡುತ್ತಾರೆ ಮತ್ತು ರಣಾಂಗಣದಲ್ಲಿ ಅವರೆಲ್ಲರನ್ನೂ ಸಂಹರಿಸುತ್ತಾರೆ.
09002026a ಕರ್ಣಸ್ತ್ವೇಕೋ ಮಯಾ ಸಾರ್ಧಂ ನಿಹನಿಷ್ಯತಿ ಪಾಂಡವಾನ್।
09002026c ತತೋ ನೃಪತಯೋ ವೀರಾಃ ಸ್ಥಾಸ್ಯಂತಿ ಮಮ ಶಾಸನೇ।।
ನನ್ನೊಡನೆ ಕರ್ಣನೊಬ್ಬನೇ ಪಾಂಡವರನ್ನು ಸಂಹರಿಸುತ್ತಾನೆ. ಆಗ ವೀರ ನೃಪತಿಗಳು ನನ್ನ ಶಾಸನದಡಿಯಲ್ಲಾಗುತ್ತಾರೆ.
09002027a ಯಶ್ಚ ತೇಷಾಂ ಪ್ರಣೇತಾ ವೈ ವಾಸುದೇವೋ ಮಹಾಬಲಃ।
09002027c ನ ಸ ಸಂನಹ್ಯತೇ ರಾಜನ್ನಿತಿ ಮಾಮಬ್ರವೀದ್ವಚಃ।।
ರಾಜನ್! ಅವರ ನಾಯಕ ಮಹಾಬಲ ವಾಸುದೇವನು ಯುದ್ಧಕ್ಕಾಗಿ ಕವಚವನ್ನು ತೊಡುವುದಿಲ್ಲ!” ಎಂದು ನನಗೆ ದುರ್ಯೋಧನನು ಹೇಳುತ್ತಿದ್ದನು.
09002028a ತಸ್ಯಾಹಂ ವದತಃ ಸೂತ ಬಹುಶೋ ಮಮ ಸಂನಿಧೌ।
09002028c ಯುಕ್ತಿತೋ ಹ್ಯನುಪಶ್ಯಾಮಿ ನಿಹತಾನ್ಪಾಂಡವಾನ್ಮೃಧೇ।।
ಸೂತ! ನನ್ನ ಸನ್ನಿಧಿಯಲ್ಲಿ ಹೀಗೆ ಅವನು ಅನೇಕಬಾರಿ ಹೇಳುತ್ತಿದ್ದನು. ರಣದಲ್ಲಿ ಪಾಂಡವರು ಹತರಾದರೆಂದೇ ನಾನು ತಿಳಿದಿದ್ದೆ.
09002029a ತೇಷಾಂ ಮಧ್ಯೇ ಸ್ಥಿತಾ ಯತ್ರ ಹನ್ಯಂತೇ ಮಮ ಪುತ್ರಕಾಃ।
09002029c ವ್ಯಾಯಚ್ಚಮಾನಾಃ ಸಮರೇ ಕಿಮನ್ಯದ್ಭಾಗಧೇಯತಃ।।
ಅವರ ಮಧ್ಯದಲ್ಲಿದ್ದ ನನ್ನ ಪುತ್ರರು ಹತರಾದರೆಂದರೆ ಸಮರದಲ್ಲಿ ಪಾಂಡವರೇ ಭಾಗ್ಯವಂತರೆಂದಾಯಿತಲ್ಲವೇ?
09002030a ಭೀಷ್ಮಶ್ಚ ನಿಹತೋ ಯತ್ರ ಲೋಕನಾಥಃ ಪ್ರತಾಪವಾನ್।
09002030c ಶಿಖಂಡಿನಂ ಸಮಾಸಾದ್ಯ ಮೃಗೇಂದ್ರ ಇವ ಜಂಬುಕಂ।।
09002031a ದ್ರೋಣಶ್ಚ ಬ್ರಾಹ್ಮಣೋ ಯತ್ರ ಸರ್ವಶಸ್ತ್ರಾಸ್ತ್ರಪಾರಗಃ।
09002031c ನಿಹತಃ ಪಾಂಡವೈಃ ಸಂಖ್ಯೇ ಕಿಮನ್ಯದ್ಭಾಗಧೇಯತಃ।।
ಲೋಕನಾಥ ಪ್ರತಾಪವಾನ್ ಭೀಷ್ಮನೂ ಕೂಡ ಮೃಗೇಂದ್ರ ಸಿಂಹವು ನರಿಯನ್ನು ಎದುರಿಸಿದಂತೆ ಶಿಖಂಡಿಯನ್ನು ಎದುರಿಸಿ ಹತನಾದನೆಂದರೆ, ಸರ್ವಶಸ್ತ್ರಪಾರಗ ಬ್ರಾಹ್ಮಣ ದ್ರೋಣನೂ ಯುದ್ಧದಲ್ಲಿ ಪಾಂಡವರಿಂದ ಹತನಾದನೆಂದರೆ ಅದೃಷ್ಟವಲ್ಲದೇ ಇನ್ನೇನು? 409002032a ಭೂರಿಶ್ರವಾ ಹತೋ ಯತ್ರ ಸೋಮದತ್ತಶ್ಚ ಸಂಯುಗೇ।
09002032c ಬಾಹ್ಲೀಕಶ್ಚ ಮಹಾರಾಜ ಕಿಮನ್ಯದ್ಭಾಗಧೇಯತಃ।।
ಯುದ್ಧದಲ್ಲಿ ಸೋಮದತ್ತ-ಭೂರಿಶ್ರವ ಮತ್ತು ಮಹಾರಾಜ ಬಾಹ್ಲೀಕ ಇವರೂ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? 509002033a ಸುದಕ್ಷಿಣೋ ಹತೋ ಯತ್ರ ಜಲಸಂಧಶ್ಚ ಕೌರವಃ।
09002033c ಶ್ರುತಾಯುಶ್ಚಾಚ್ಯುತಾಯುಶ್ಚ ಕಿಮನ್ಯದ್ಭಾಗಧೇಯತಃ।।
ಸುದಕ್ಷಿಣ, ಕೌರವ ಜಲಸಂಧ, ಶ್ರುತಾಯು, ಮತ್ತು ಅಚ್ಯುತಾಯು ಇವರೂ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು?
609002034a ಬೃಹದ್ಬಲೋ ಹತೋ ಯತ್ರ ಮಾಗಧಶ್ಚ ಮಹಾಬಲಃ।
709002034c ಆವಂತ್ಯೋ ನಿಹತೋ ಯತ್ರ ತ್ರಿಗರ್ತಶ್ಚ ಜನಾಧಿಪಃ।।
09002034e ಸಂಶಪ್ತಕಾಶ್ಚ ಬಹವಃ ಕಿಮನ್ಯದ್ಭಾಗಧೇಯತಃ।।
ಬೃಹದ್ಬಲ, ಮಹಾಬಲ ಮಾಗಧ, ಅವಂತಿಯವರು, ಜನಾಧಿಪ ತ್ರಿಗರ್ತ, ಮತ್ತು ಅನೇಕ ಸಂಶಪ್ತಕರು ಕೂಡ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು?
09002035a ಅಲಂಬುಸಸ್ತಥಾ ರಾಜನ್ರಾಕ್ಷಸಶ್ಚಾಪ್ಯಲಾಯುಧಃ।
09002035c ಆರ್ಶ್ಯಶೃಂಗಶ್ಚ ನಿಹತಃ ಕಿಮನ್ಯದ್ಭಾಗಧೇಯತಃ।।
ರಾಜ ಅಲಂಬುಸ, ರಾಕ್ಷಸ ಅಲಾಯುಧ, ಮತ್ತು ಆರ್ಶ್ಯಶೃಂಗ ಇವರೂ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು?
09002036a ನಾರಾಯಣಾ ಹತಾ ಯತ್ರ ಗೋಪಾಲಾ ಯುದ್ಧದುರ್ಮದಾಃ।
09002036c ಮ್ಲೇಚ್ಛಾಶ್ಚ ಬಹುಸಾಹಸ್ರಾಃ ಕಿಮನ್ಯದ್ಭಾಗಧೇಯತಃ।।
ಯುದ್ಧದುರ್ಮದ ನಾರಾಯಣ ಗೋಪಾಲರು ಮತ್ತು ಅನೇಕ ಸಹಸ್ರ ಮ್ಲೇಚ್ಛರು ಕೂಡ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು?
09002037a ಶಕುನಿಃ ಸೌಬಲೋ ಯತ್ರ ಕೈತವ್ಯಶ್ಚ ಮಹಾಬಲಃ।
09002037c ನಿಹತಃ ಸಬಲೋ ವೀರಃ ಕಿಮನ್ಯದ್ಭಾಗಧೇಯತಃ।।
ವೀರ ಸೌಬಲ ಶಕುನಿ ಮತ್ತು ಮಹಾಬಲ ಕೈತವರು ಸೇನೆಗಳೊಂದಿಗೆ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? 809002038a ರಾಜಾನೋ ರಾಜಪುತ್ರಾಶ್ಚ ಶೂರಾಃ ಪರಿಘಬಾಹವಃ।
09002038c ನಿಹತಾ ಬಹವೋ ಯತ್ರ ಕಿಮನ್ಯದ್ಭಾಗಧೇಯತಃ।।
ಪರಿಘಗಳಂತಹ ಬಾಹುಗಳಿದ್ದ ಅನೇಕ ಶೂರ ರಾಜರು ಮತ್ತು ರಾಜಪುತ್ರರು ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು? 909002039a ನಾನಾದೇಶಸಮಾವೃತ್ತಾಃ ಕ್ಷತ್ರಿಯಾ ಯತ್ರ ಸಂಜಯ।
09002039c ನಿಹತಾಃ ಸಮರೇ ಸರ್ವೇ ಕಿಮನ್ಯದ್ಭಾಗಧೇಯತಃ।।
ಸಂಜಯ! ನಾನಾದೇಶಗಳಿಂದ ಬಂದು ಸೇರಿದ್ದ ಕ್ಷತ್ರಿಯರು ಎಲ್ಲರೂ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು?
09002040a ಪುತ್ರಾಶ್ಚ ಮೇ ವಿನಿಹತಾಃ ಪೌತ್ರಾಶ್ಚೈವ ಮಹಾಬಲಾಃ।
09002040c ವಯಸ್ಯಾ ಭ್ರಾತರಶ್ಚೈವ ಕಿಮನ್ಯದ್ಭಾಗಧೇಯತಃ।।
ನನ್ನ ಪುತ್ರರೂ, ಮಹಾಬಲ ಪೌತ್ರರೂ, ವಯಸ್ಕರೂ, ಭ್ರಾತೃಗಳೂ ಹತರಾದರೆಂದರೆ ಅದೃಷ್ಟವಲ್ಲದೇ ಇನ್ನೇನು?
09002041a ಭಾಗಧೇಯಸಮಾಯುಕ್ತೋ ಧ್ರುವಮುತ್ಪದ್ಯತೇ ನರಃ।
09002041c ಯಶ್ಚ ಭಾಗ್ಯಸಮಾಯುಕ್ತಃ ಸ ಶುಭಂ ಪ್ರಾಪ್ನುಯಾನ್ನರಃ।।
ಮನುಷ್ಯನು ತನ್ನ ಭಾಗ್ಯವನ್ನು ಹೊತ್ತುಕೊಂಡೇ ಹುಟ್ಟುತ್ತಾನೆ ಎನ್ನುವುದು ಸತ್ಯ. ಯಾವ ಭಾಗ್ಯದಿಂದ ಮನುಷ್ಯನು ಹುಟ್ಟಿರುತ್ತಾನೋ ಅದೇ ಶುಭಗಳನ್ನು ಅವನು ಪಡೆಯುತ್ತಾನೆ.
09002042a ಅಹಂ ವಿಯುಕ್ತಃ ಸ್ವೈರ್ಭಾಗ್ಯೈಃ ಪುತ್ರೈಶ್ಚೈವೇಹ ಸಂಜಯ।
09002042c ಕಥಮದ್ಯ ಭವಿಷ್ಯಾಮಿ ವೃದ್ಧಃ ಶತ್ರುವಶಂ ಗತಃ।।
ಸಂಜಯ! ನನ್ನ ಮಕ್ಕಳು ಮತ್ತು ಭಾಗ್ಯಗಳಿಂದ ನಾನು ವಿಹೀನನಾಗಿದ್ದೇನೆ. ವೃದ್ಧನಾದ ನಾನು ಶತ್ರುಗಳ ವಶನಾಗಿ ಹೇಗಿರಲಿ?
09002043a ನಾನ್ಯದತ್ರ ಪರಂ ಮನ್ಯೇ ವನವಾಸಾದೃತೇ ಪ್ರಭೋ।
09002043c ಸೋಽಹಂ ವನಂ ಗಮಿಷ್ಯಾಮಿ ನಿರ್ಬಂಧುರ್ಜ್ಞಾತಿಸಂಕ್ಷಯೇ।।
ಪ್ರಭೋ! ವನವಾಸದ ಹೊರತಾದ ಬೇರೆ ಯಾವ ದಾರಿಯೂ ನನಗೆ ತೋರುತ್ತಿಲ್ಲ! ಬಂಧು-ಕುಲದವರ ನಾಶವಾಗಿರುವ ನಾನು ವನಕ್ಕೇ ಹೋಗುತ್ತೇನೆ!
09002044a ನ ಹಿ ಮೇಽನ್ಯದ್ಭವೇಚ್ಚ್ರೇಯೋ ವನಾಭ್ಯುಪಗಮಾದೃತೇ।
09002044c ಇಮಾಮವಸ್ಥಾಂ ಪ್ರಾಪ್ತಸ್ಯ ಲೂನಪಕ್ಷಸ್ಯ ಸಂಜಯ।।
ಸಂಜಯ! ರೆಕ್ಕೆಗಳನ್ನು ಕತ್ತರಿಸಿದ ಪಕ್ಷಿಗಾಗುವ ಈ ಅವಸ್ಥೆಯನ್ನು ಹೊಂದಿರುವ ನನಗೆ ವನಕ್ಕೆ ಸೇರುವುದರ ಹೊರತಾಗಿ ಬೇರೆ ಯಾವ ಶ್ರೇಯಸ್ಸೂ ಇಲ್ಲ!
09002045a ದುರ್ಯೋಧನೋ ಹತೋ ಯತ್ರ ಶಲ್ಯಶ್ಚ ನಿಹತೋ ಯುಧಿ।
09002045c ದುಃಶಾಸನೋ ವಿಶಸ್ತಶ್ಚ ವಿಕರ್ಣಶ್ಚ ಮಹಾಬಲಃ।।
ಯುದ್ಧದಲ್ಲಿ ದುರ್ಯೋಧನನು ಹತನಾದನು. ಶಲ್ಯ, ದುಃಶಾಸನ, ವಿಶಸ್ತ, ಮಹಾಬಲ ವಿಕರ್ಣರೂ ಹತರಾದರು.
09002046a ಕಥಂ ಹಿ ಭೀಮಸೇನಸ್ಯ ಶ್ರೋಷ್ಯೇಽಹಂ ಶಬ್ದಮುತ್ತಮಂ।
09002046c ಏಕೇನ ಸಮರೇ ಯೇನ ಹತಂ ಪುತ್ರಶತಂ ಮಮ।।
ಸಮರದಲ್ಲಿ ಒರ್ವನೇ ನನ್ನ ನೂರು ಮಕ್ಕಳನ್ನೂ ಸಂಹರಿಸಿದ ಭೀಮಸೇನನ ಗರ್ಜನೆಯನ್ನು ನಾನು ಹೇಗೆ ತಾನೇ ಕೇಳಬಲ್ಲೆ?
09002047a ಅಸಕೃದ್ವದತಸ್ತಸ್ಯ ದುರ್ಯೋಧನವಧೇನ ಚ।
09002047c ದುಃಖಶೋಕಾಭಿಸಂತಪ್ತೋ ನ ಶ್ರೋಷ್ಯೇ ಪರುಷಾ ಗಿರಃ।।
ದುರ್ಯೋಧನನ ವಧೆಯಿಂದ ದುಃಖಶೋಕ ಸಂತಪ್ತನಾಗಿರುವ ನಾನು ಹೇಳಿದಂತೆ ಮಾಡಿದ ಭೀಮನ ಕಠೋರ ಮಾತುಗಳನ್ನು ಹೇಗೆ ತಾನೇ ಕೇಳಿಕೊಂಡಿರಲಿ?”
09002048a ಏವಂ ಸ ಶೋಕಸಂತಪ್ತಃ ಪಾರ್ಥಿವೋ ಹತಬಾಂಧವಃ।
09002048c ಮುಹುರ್ಮುಹುರ್ಮುಹ್ಯಮಾನಃ ಪುತ್ರಾಧಿಭಿರಭಿಪ್ಲುತಃ।।
ಬಾಂಧವರನ್ನು ಕಳೆದುಕೊಂಡ ಪಾರ್ಥಿವನು ಹೀಗೆ ಶೋಕಸಂತಪ್ತನಾಗಿರಲು ಅವನು ಪುನಃ ಪುನಃ ಮೂರ್ಛೆಹೋಗುತ್ತಿದ್ದನು ಮತ್ತು ಪುತ್ರಶೋಕದಲ್ಲಿ ಮುಳುಗಿಹೋಗಿದ್ದನು.
09002049a ವಿಲಪ್ಯ ಸುಚಿರಂ ಕಾಲಂ ಧೃತರಾಷ್ಟ್ರೋಽಮ್ಬಿಕಾಸುತಃ।
09002049c ದೀರ್ಘಮುಷ್ಣಂ ಚ ನಿಃಶ್ವಸ್ಯ ಚಿಂತಯಿತ್ವಾ ಪರಾಭವಂ।।
09002050a ದುಃಖೇನ ಮಹತಾ ರಾಜಾ ಸಂತಪ್ತೋ ಭರತರ್ಷಭ।
09002050c ಪುನರ್ಗಾವಲ್ಗಣಿಂ ಸೂತಂ ಪರ್ಯಪೃಚ್ಚದ್ಯಥಾತಥಂ।।
ಭರತರ್ಷಭ! ಬಹಳ ಹೊತ್ತು ವಿಲಪಿಸಿ ರಾಜಾ ಅಂಬಿಕಾಸುತ ಧೃತರಾಷ್ಟ್ರನು ಪರಾಭವದ ಕುರಿತು ಚಿಂತಿಸುತ್ತಾ ದೀರ್ಘವಾಗಿ ಬಿಸಿಯಾದ ನಿಟ್ಟುಸಿರು ಬಿಡುತ್ತಾ, ಮಹಾ ದುಃಖದಿಂದ ಸಂತಪ್ತನಾಗಿ ನಡೆದುಹೋದುದರ ಕುರಿತು ಪುನಃ ಸೂತ ಗಾವಲ್ಗಣಿಯನ್ನು ಪ್ರಶ್ನಿಸಿದನು.
09002051a ಭೀಷ್ಮದ್ರೋಣೌ ಹತೌ ಶ್ರುತ್ವಾ ಸೂತಪುತ್ರಂ ಚ ಪಾತಿತಂ।
09002051c ಸೇನಾಪತಿಂ ಪ್ರಣೇತಾರಂ ಕಿಮಕುರ್ವತ ಮಾಮಕಾಃ।।
“ಭೀಷ್ಮ-ದ್ರೋಣರು ಮತ್ತು ನೇತಾರ ಸೇನಾಪತಿ ಸೂತಪುತ್ರನೂ ಕೆಳಗುರುಳಿದುದನ್ನು ಕೇಳಿ ನಮ್ಮವರು ಏನು ಮಾಡಿದರು?
09002052a ಯಂ ಯಂ ಸೇನಾಪ್ರಣೇತಾರಂ ಯುಧಿ ಕುರ್ವಂತಿ ಮಾಮಕಾಃ।
09002052c ಅಚಿರೇಣೈವ ಕಾಲೇನ ತಂ ತಂ ನಿಘ್ನಂತಿ ಪಾಂಡವಾಃ।।
ನಮ್ಮವರು ಯಾರ್ಯಾರನ್ನು ಯುದ್ಧದಲ್ಲಿ ಸೇನಾಪತಿಗಳನ್ನಾಗಿ ಮಾಡಿದರೋ ಅವರೆಲ್ಲರನ್ನೂ ಸ್ವಲ್ಪ ಕಾಲದಲ್ಲಿಯೇ ಪಾಂಡವರು ಸಂಹರಿಸಿದರು.
09002053a ರಣಮೂರ್ಧ್ನಿ ಹತೋ ಭೀಷ್ಮಃ ಪಶ್ಯತಾಂ ವಃ ಕಿರೀಟಿನಾ।
09002053c ಏವಮೇವ ಹತೋ ದ್ರೋಣಃ ಸರ್ವೇಷಾಮೇವ ಪಶ್ಯತಾಂ।।
ನಾವು ನೋಡುತ್ತಿದ್ದಂತೆಯೇ ರಣಮೂರ್ಧನಿಯಲ್ಲಿ ಭೀಷ್ಮನು ಕಿರೀಟಿಯಿಂದ ಹತನಾದನು. ಹಾಗೆಯೇ ಎಲ್ಲರೂ ನೋಡುತ್ತಿರುವಾಗಲೇ ದ್ರೋಣನು ಹತನಾದನು.
09002054a ಏವಮೇವ ಹತಃ ಕರ್ಣಃ ಸೂತಪುತ್ರಃ ಪ್ರತಾಪವಾನ್।
09002054c ಸ ರಾಜಕಾನಾಂ ಸರ್ವೇಷಾಂ ಪಶ್ಯತಾಂ ವಃ ಕಿರೀಟಿನಾ।।
ಹಾಗೆಯೇ ನಮ್ಮ ಎಲ್ಲ ರಾಜರು ನೋಡುತ್ತಿರುವಾಗಲೇ ಪ್ರತಾಪವಾನ್ ಸೂತಪುತ್ರ ಕರ್ಣನು ಕಿರೀಟಿಯಿಂದ ಹತನಾದನು.
09002055a ಪೂರ್ವಮೇವಾಹಮುಕ್ತೋ ವೈ ವಿದುರೇಣ ಮಹಾತ್ಮನಾ।
09002055c ದುರ್ಯೋಧನಾಪರಾಧೇನ ಪ್ರಜೇಯಂ ವಿನಶಿಷ್ಯತಿ।।
“ದುರ್ಯೋಧನನ ಅಪರಾಧದಿಂದ ಪ್ರಜೆಗಳು ನಾಶವಾಗುತ್ತಾರೆ!” ಎಂದು ಹಿಂದೆಯೇ ಮಹಾತ್ಮ ವಿದುರನು ನನಗೆ ಹೇಳಿದ್ದನು.
09002056a ಕೇ ಚಿನ್ನ ಸಮ್ಯಕ್ಪಶ್ಯಂತಿ ಮೂಢಾಃ ಸಮ್ಯಕ್ತಥಾಪರೇ।
09002056c ತದಿದಂ ಮಮ ಮೂಢಸ್ಯ ತಥಾಭೂತಂ ವಚಃ ಸ್ಮ ಹ।।
ಕೆಲವು ಮೂಢರು ವಿಷಯಗಳನ್ನು ಚೆನ್ನಾಗಿ ಪರಿಶೀಲಿಸಿದ್ದರೂ ಅದರ ಕಡೆ ಗಮನಕೊಡದೇ ಬೇರೆ ಕಡೆಯೇ ನೋಡುತ್ತಿರುತ್ತಾರೆ. ಮೂಢನಾದ ನನ್ನಲ್ಲಿಯೂ ವಿದುರನ ಮಾತಿನ ವಿಷಯದಲ್ಲಿ ಇದೇ ರೀತಿ ನಡೆದುಹೋಯಿತು.
09002057a ಯದಬ್ರವೀನ್ಮೇ ಧರ್ಮಾತ್ಮಾ ವಿದುರೋ ದೀರ್ಘದರ್ಶಿವಾನ್।
09002057c ತತ್ತಥಾ ಸಮನುಪ್ರಾಪ್ತಂ ವಚನಂ ಸತ್ಯವಾದಿನಃ।।
ದೀರ್ಘದರ್ಶಿ ಧರ್ಮಾತ್ಮ ವಿದುರನು ಏನು ಹೇಳಿದ್ದನೋ ಅದು ಹಾಗೆಯೇ ಆಗಿ ಆ ಸತ್ಯವಾದಿನಿಯ ವಚನವು ನಿಜವಾಗಿ ಹೋಯಿತು!
09002058a ದೈವೋಪಹತಚಿತ್ತೇನ ಯನ್ಮಯಾಪಕೃತಂ ಪುರಾ।
09002058c ಅನಯಸ್ಯ ಫಲಂ ತಸ್ಯ ಬ್ರೂಹಿ ಗಾವಲ್ಗಣೇ ಪುನಃ।।
ಗಾವಲ್ಗಣೇ! ಹಿಂದೆ ದೈವವು ನನ್ನ ಚಿತ್ತವನ್ನು ಅಪಹರಿಸಿದುದರಿಂದ ನಾನು ಮಾಡಿದ ಅಪಕೃತದ ಫಲವಿದು. ಅದರ ಕುರಿತು ಪುನಃ ಹೇಳು.
09002059a ಕೋ ವಾ ಮುಖಮನೀಕಾನಾಮಾಸೀತ್ಕರ್ಣೇ ನಿಪಾತಿತೇ।
09002059c ಅರ್ಜುನಂ ವಾಸುದೇವಂ ಚ ಕೋ ವಾ ಪ್ರತ್ಯುದ್ಯಯೌ ರಥೀ।।
ಕರ್ಣನು ಬಿದ್ದ ನಂತರ ನಮ್ಮ ಸೇನೆಗಳ ಮುಖ್ಯರಾಗಿ ಯಾರಿದ್ದರು? ಯಾವ ರಥಿಯು ಅರ್ಜುನ-ವಾಸುದೇವರ ವಿರುದ್ಧ ಯುದ್ಧಮಾಡಿದನು?
09002060a ಕೇಽರಕ್ಷನ್ದಕ್ಷಿಣಂ ಚಕ್ರಂ ಮದ್ರರಾಜಸ್ಯ ಸಮ್ಯುಗೇ।
09002060c ವಾಮಂ ಚ ಯೋದ್ಧುಕಾಮಸ್ಯ ಕೇ ವಾ ವೀರಸ್ಯ ಪೃಷ್ಠತಃ।।
ಯುದ್ಧದಲ್ಲಿ ಮದ್ರರಾಜನ ಬಲಚಕ್ರವನ್ನು ಯಾರು ರಕ್ಷಿಸುತ್ತಿದ್ದರು? ಯುದ್ಧಮಾಡಲು ಬಯಸಿದ್ದ ಆ ವೀರನ ಎಡಭಾಗದಲ್ಲಿ ಮತ್ತು ಹಿಂದೆ ಯಾರಿದ್ದರು?
09002061a ಕಥಂ ಚ ವಃ ಸಮೇತಾನಾಂ ಮದ್ರರಾಜೋ ಮಹಾಬಲಃ।
09002061c ನಿಹತಃ ಪಾಂಡವೈಃ ಸಂಖ್ಯೇ ಪುತ್ರೋ ವಾ ಮಮ ಸಂಜಯ।।
ಸಂಜಯ! ನಾವೆಲ್ಲರೂ ಹೀಗೆ ಒಟ್ಟಾಗಿರುವಾಗ ಮಹಾಬಲ ಮದ್ರರಾಜ ಅಥವಾ ನನ್ನ ಪುತ್ರರು ಹೇಗೆ ಯುದ್ಧದಲ್ಲಿ ಪಾಂಡವರಿಂದ ಹತರಾದರು?
09002062a ಬ್ರೂಹಿ ಸರ್ವಂ ಯಥಾತತ್ತ್ವಂ ಭರತಾನಾಂ ಮಹಾಕ್ಷಯಂ।
09002062c ಯಥಾ ಚ ನಿಹತಃ ಸಂಖ್ಯೇ ಪುತ್ರೋ ದುರ್ಯೋಧನೋ ಮಮ।।
ಭಾರತರ ಮಹಾಕ್ಷಯದ ಕುರಿತು ಸರ್ವವನ್ನು - ಯುದ್ಧದಲ್ಲಿ ನನ್ನ ಮಗ ದುರ್ಯೋಧನನು ಹೇಗೆ ಹತನಾದನು ಎನ್ನುವುದನ್ನೂ - ಯಥಾವತ್ತಾಗಿ ಹೇಳು.
09002063a ಪಾಂಚಾಲಾಶ್ಚ ಯಥಾ ಸರ್ವೇ ನಿಹತಾಃ ಸಪದಾನುಗಾಃ।
09002063c ಧೃಷ್ಟದ್ಯುಮ್ನಃ ಶಿಖಂಡೀ ಚ ದ್ರೌಪದ್ಯಾಃ ಪಂಚ ಚಾತ್ಮಜಾಃ।।
ಧೃಷ್ಟದ್ಯುಮ್ನ, ಶಿಖಂಡೀ, ದ್ರೌಪದಿಯ ಐವರು ಮಕ್ಕಳು ಮತ್ತು ಅನುಯಾಯಿಗಳೊಂದಿಗೆ ಪಾಂಚಾಲರೆಲ್ಲರೂ ಹೇಗೆ ಹತರಾದರು?
09002064a ಪಾಂಡವಾಶ್ಚ ಯಥಾ ಮುಕ್ತಾಸ್ತಥೋಭೌ ಸಾತ್ವತೌ ಯುಧಿ।
09002064c ಕೃಪಶ್ಚ ಕೃತವರ್ಮಾ ಚ ಭಾರದ್ವಾಜಸ್ಯ ಚಾತ್ಮಜಃ।।
ಯುದ್ಧದಿಂದ ಹೇಗೆ ಪಾಂಡವರು, ಇಬ್ಬರು ಸಾತ್ವತರು, ಕೃಪ, ಕೃತವರ್ಮ ಮತ್ತು ಭಾರದ್ವಾಜನ ಮಗ ಅಶ್ವತ್ಥಾಮ ಇವರು ಮುಕ್ತರಾದರು?
09002065a ಯದ್ಯಥಾ ಯಾದೃಶಂ ಚೈವ ಯುದ್ಧಂ ವೃತ್ತಂ ಚ ಸಾಂಪ್ರತಂ।
09002065c ಅಖಿಲಂ ಶ್ರೋತುಮಿಚ್ಚಾಮಿ ಕುಶಲೋ ಹ್ಯಸಿ ಸಂಜಯ।।
ಸಂಜಯ! ಯಾವುದು ಹೇಗೆ ನಡೆಯಿತು? ಯುದ್ಧವು ಹೇಗೆ ನಡೆಯಿತು? ಈ ಎಲ್ಲ ವಿಷಯಗಳನ್ನೂ ಸಂಪೂರ್ಣವಾಗಿ ಕೇಳಲು ಬಯಸುತ್ತೇನೆ. ನೀನು ವರದಿಮಾಡುವುದರಲ್ಲಿ ಕುಶಲನಾಗಿರುವೆ!”
ಸಮಾಪ್ತಿ
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಶಲ್ಯವಧಪರ್ವಣಿ ಧೃತರಾಷ್ಟ್ರವಿಲಾಪೇ ದ್ವಿತೀಯೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಶಲ್ಯವಧಪರ್ವದಲ್ಲಿ ಧೃತರಾಷ್ಟ್ರವಿಲಾಪ ಎನ್ನುವ ಎರಡನೇ ಅಧ್ಯಾಯವು.