ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಕರ್ಣ ಪರ್ವ
ಕರ್ಣವಧ ಪರ್ವ
ಅಧ್ಯಾಯ 41
ಸಾರ
ಕೃಷ್ಣನು ಅರ್ಜುನನಿಗೆ ರಣರಂಗದಲ್ಲಿ ಯುದ್ಧಮಾಡುತ್ತಿರುವವರನ್ನು ತೋರಿಸಿದುದು (1-7).
08041001 ಸಂಜಯ ಉವಾಚ।
08041001a ತ್ವರಮಾಣಃ ಪುನಃ ಕೃಷ್ಣಃ ಪಾರ್ಥಮಭ್ಯವದಚ್ಚನೈಃ।
08041001c ಪಶ್ಯ ಕೌರವ್ಯ ರಾಜಾನಮಪಯಾತಾಂಶ್ಚ ಪಾಂಡವಾನ್।।
ಸಂಜಯನು ಹೇಳಿದನು: “ತ್ವರೆಮಾಡಿ ಹೋಗುತ್ತಿದ್ದ ಕೃಷ್ಣನು ಪುನಃ ಅರ್ಜುನನಿಗೆ ಮೆಲ್ಲನೆ ಹೇಳಿದನು: “ಕೌರವ್ಯ! ಪಲಾಯನ ಮಾಡುತ್ತಿರುವ ಪಾಂಡವ ರಾಜರನ್ನು ನೋಡು!
08041002a ಕರ್ಣಂ ಪಶ್ಯ ಮಹಾರಂಗೇ ಜ್ವಲಂತಮಿವ ಪಾವಕಂ।
08041002c ಅಸೌ ಭೀಮೋ ಮಹೇಷ್ವಾಸಃ ಸಂನಿವೃತ್ತೋ ರಣಂ ಪ್ರತಿ।।
ಮಹಾರಂಗದಲ್ಲಿ ಜ್ವಲಿಸುತ್ತಿರುವ ಪಾವಕನಂತಿರುವ ಕರ್ಣನನ್ನು ನೋಡು! ಇಗೋ ಮಹೇಷ್ವಾಸ ಭೀಮನು ರಣರಂಗಕ್ಕೆ ಹಿಂದಿರುಗಿ ಬರುತ್ತಿದ್ದಾನೆ.
08041003a ತಮೇತೇಽನು ನಿವರ್ತಂತೇ ಧೃಷ್ಟದ್ಯುಮ್ನಪುರೋಗಮಾಃ।
08041003c ಪಾಂಚಾಲಾನಾಂ ಸೃಂಜಯಾನಾಂ ಪಾಂಡವಾನಾಂ ಚ ಯನ್ಮುಖಂ।
08041003e ನಿವೃತ್ತೈಶ್ಚ ತಥಾ ಪಾರ್ಥೈರ್ಭಗ್ನಂ ಶತ್ರುಬಲಂ ಮಹತ್।।
ಅವನನ್ನೇ ಅನುಸರಿಸಿ ಧೃಷ್ಟದ್ಯುಮ್ನಪುರೋಗಮರಾದ ಪಾಂಚಾಲರು, ಸೃಂಜಯರು ಮತ್ತು ಪಾಂಡವರು ಹಿಂದಿರುಗುತ್ತಿದ್ದಾರೆ. ಹಾಗೆ ಹಿಂದಿರುಗುವಾಗಲೇ ಪಾರ್ಥ ಭೀಮನು ಶತ್ರುಬಲವನ್ನು ಮಹಾಸಂಖ್ಯೆಗಳಲ್ಲಿ ಧ್ವಂಸಗೊಳಿಸುತ್ತಿದ್ದಾನೆ.
08041004a ಕೌರವಾನ್ದ್ರವತೋ ಹ್ಯೇಷ ಕರ್ಣೋ ಧಾರಯತೇಽರ್ಜುನ।
08041004c ಅಂತಕಪ್ರತಿಮೋ ವೇಗೇ ಶಕ್ರತುಲ್ಯಪರಾಕ್ರಮಃ।।
ಅರ್ಜುನ! ಓಡಿಹೋಗುತ್ತಿರುವ ಕೌರವರನ್ನು ಶಕ್ರತುಲ್ಯಪರಾಕ್ರಮಿ ಅಂತಕಪ್ರತಿಮ ಕರ್ಣನು ಇಲ್ಲಿ ತಡೆಯುತ್ತಿದ್ದಾನೆ!
08041005a ಅಸೌ ಗಚ್ಚತಿ ಕೌರವ್ಯ ದ್ರೌಣಿರಸ್ತ್ರಭೃತಾಂ ವರಃ।
08041005c ತಮೇಷ ಪ್ರದ್ರುತಃ ಸಂಖ್ಯೇ ಧೃಷ್ಟದ್ಯುಮ್ನೋ ಮಹಾರಥಃ।।
ಕೌರವ್ಯ! ಇಗೋ ಇಲ್ಲಿ ಶಸ್ತ್ರಭೃತರಲ್ಲಿ ಶ್ರೇಷ್ಠ ದ್ರೌಣಿಯು ಹೋಗುತ್ತಿದ್ದಾನೆ ಮತ್ತು ರಣದಲ್ಲಿ ಅವನನ್ನೇ ಅನುಸರಿಸಿ ಮಹಾರಥ ಧೃಷ್ಟದ್ಯುಮ್ನನು ಹೋಗುತ್ತಿದ್ದಾನೆ!”
08041006a ಸರ್ವಂ ವ್ಯಾಚಷ್ಟ ದುರ್ಧರ್ಷೋ ವಾಸುದೇವಃ ಕಿರೀಟಿನೇ।
08041006c ತತೋ ರಾಜನ್ಪ್ರಾದುರಾಸೀನ್ಮಹಾಘೋರೋ ಮಹಾರಣಃ।।
ಹೀಗೆ ದುರ್ಧರ್ಷ ವಾಸುದೇವನು ಕಿರೀಟಿಗೆ ಎಲ್ಲವನ್ನು ತೋರಿಸಿ ಹೇಳಿದನು. ರಾಜನ್! ಆಗ ಮಹಾಘೋರ ಮಹಾರಣವು ನಡೆಯಿತು.
08041007a ಸಿಂಹನಾದರವಾಶ್ಚಾತ್ರ ಪ್ರಾದುರಾಸನ್ಸಮಾಗಮೇ।
08041007c ಉಭಯೋಃ ಸೇನಯೋ ರಾಜನ್ಮೃತ್ಯುಂ ಕೃತ್ವಾ ನಿವರ್ತನಂ।।
ರಾಜನ್! ಮೃತ್ಯುವನ್ನೇ ಹಿಂದಿರುಗುವ ಸ್ಥಾನವನ್ನಾಗಿರಿಸಿಕೊಂಡಿದ್ದ ಎರಡೂ ಸೇನೆಗಳು ಯುದ್ಧದಲ್ಲಿ ತೊಡಗಲು ಅಲ್ಲಿ ಸಿಂಹನಾದಗಳಾದವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಕರ್ಣಪರ್ವಣಿ ಸಂಕುಲಯುದ್ಧೇ ಏಕಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಕರ್ಣಪರ್ವದಲ್ಲಿ ಸಂಕುಲಯುದ್ಧ ಎನ್ನುವ ನಲ್ವತ್ತೊಂದನೇ ಅಧ್ಯಾಯವು.