ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 96
ಸಾರ
ಸಾತ್ಯಕಿಯು ದುರ್ಯೋಧನನನ್ನು ಪಲಾಯನಗೊಳಿಸಿದುದು (1-45).
07096001 ಸಂಜಯ ಉವಾಚ।
07096001a ಜಿತ್ವಾ ಯವನಕಾಂಬೋಜಾನ್ಯುಯುಧಾನಸ್ತತೋಽರ್ಜುನಂ।
07096001c ಜಗಾಮ ತವ ಸೈನ್ಯಸ್ಯ ಮಧ್ಯೇನ ರಥಿನಾಂ ವರಃ।।
ಸಂಜಯನು ಹೇಳಿದನು: “ಯುಯುಧಾನನು ಯವನರನ್ನೂ ಕಾಂಬೋಜರನ್ನೂ ಗೆದ್ದು ನಿನ್ನ ಸೇನೆಯ ಮಧ್ಯದಿಂದಲೇ ಅರ್ಜುನನ ಕಡೆಗೆ ಹೋದನು.
07096002a ಶರದಂಷ್ಟ್ರೋ ನರವ್ಯಾಘ್ರೋ ವಿಚಿತ್ರಕವಚಚ್ಚವಿಃ।
07096002c ಮೃಗಾನ್ವ್ಯಾಘ್ರ ಇವಾಜಿಘ್ರಂಸ್ತವ ಸೈನ್ಯಮಭೀಷಯತ್।।
ವಿಚಿತ್ರ ಕವಚವನ್ನೂ ಧ್ವಜವನ್ನೂ ಹೊಂದಿದ್ದ ಆ ಶರದಂಷ್ಟ್ರ ನರವ್ಯಾಘ್ರನು ಮೂಸುತ್ತಾ ಹೋಗುವ ಹುಲಿಯು ಜಿಂಕೆಗಳನ್ನು ಹೇಗೋ ಹಾಗೆ ನಿನ್ನ ಸೇನೆಗಳಿಗೆ ಭಯವನ್ನುಂಟುಮಾಡುತ್ತಿದ್ದನು.
07096003a ಸ ರಥೇನ ಚರನ್ಮಾರ್ಗಾನ್ಧನುರಭ್ರಾಮಯದ್ಭೃಶಂ।
07096003c ರುಕ್ಮಪೃಷ್ಠಂ ಮಹಾವೇಗಂ ರುಕ್ಮಚಂದ್ರಕಸಂಕುಲಂ।।
ರಥದ ಮೇಲೆ ಕುಳಿತು ಬಂಗಾರದ ಬೆನ್ನುಳ್ಳ ಬಂಗಾರದ ಚಂದ್ರಾಕಾರದ ಚಿಹ್ನೆಗಳನ್ನುಳ್ಳ ಮಹಾವೇಗಯುಕ್ತ ಧನುಸ್ಸನ್ನು ಜೋರಾಗಿ ತಿರುಗಿಸುತ್ತ ಅವನು ಅನೇಕ ಮಾರ್ಗಗಳಲ್ಲಿ ಸಂಚರಿಸುತ್ತಿದ್ದನು.
07096004a ರುಕ್ಮಾಂಗದಶಿರಸ್ತ್ರಾಣೋ ರುಕ್ಮವರ್ಮಸಮಾವೃತಃ।
07096004c ರುಕ್ಮಧ್ವಜವರಃ ಶೂರೋ ಮೇರುಶೃಂಗ ಇವಾಬಭೌ।।
ಸುವರ್ಣಮಯ ಭುಜಕೀರ್ತಿಯನ್ನೂ, ಸುವರ್ಣಮಯ ಕಿರೀಟವನ್ನೂ, ಸುವರ್ಣಮಯ ಕವಚವನ್ನೂ ಧರಿಸಿದ್ದ, ಸುವರ್ಣಮಯ ಧ್ವಜವನ್ನೂ ಧನುಸ್ಸನ್ನೂ ಹೊಂದಿದ್ದ ಆ ಶೂರನು ಮೇರುಶೃಂಗದಂತೆಯೇ ಪ್ರಕಾಶಿಸುತ್ತಿದ್ದನು.
07096005a ಸಧನುರ್ಮಂಡಲಃ ಸಂಖ್ಯೇ ತೇಜೋಭಾಸ್ವರರಶ್ಮಿವಾನ್।
07096005c ಶರದೀವೋದಿತಃ ಸೂರ್ಯೋ ನೃಸೂರ್ಯೋ ವಿರರಾಜ ಹ।।
ಯುದ್ಧದಲ್ಲಿ ಧನುಸ್ಸನ್ನು ಮಂಡಲಾಕಾರವಾಗಿ ತಿರುಗಿಸುತ್ತಿದ್ದ ಸೂರ್ಯನ ರಶ್ಮಿಗೆ ಸಮಾನ ತೇಜಸ್ಸಿನಿಂದ ಕೂಡಿದ್ದ ಆ ನರಸೂರ್ಯನು ಶರತ್ಕಾಲದ ನಿರಭ್ರ ಆಕಾಶದಲ್ಲಿ ಉದಯಿಸಿದ ಸೂರ್ಯನಂತೆ ವಿರಾಜಿಸುತ್ತಿದ್ದನು.
07096006a ವೃಷಭಸ್ಕಂಧವಿಕ್ರಾಂತೋ ವೃಷಭಾಕ್ಷೋ ನರರ್ಷಭಃ।
07096006c ತಾವಕಾನಾಂ ಬಭೌ ಮಧ್ಯೇ ಗವಾಂ ಮಧ್ಯೇ ಯಥಾ ವೃಷಃ।।
ಆ ವೃಷಭಸ್ಕಂಧ, ವೃಷಭಾಕ್ಷ, ವಿಕ್ರಾಂತ, ನರರ್ಷಭನು ನಿನ್ನವರ ಮಧ್ಯೆ ಗೋವುಗಳ ನಡುವೆ ಕಾಣುವ ಹೋರಿಯಂತೆ ಕಾಣಿಸಿದನು.
07096007a ಮತ್ತದ್ವಿರದಸಂಕಾಶಂ ಮತ್ತದ್ವಿರದಗಾಮಿನಂ।
07096007c ಪ್ರಭಿನ್ನಮಿವ ಮಾತಂಗಂ ಯೂಥಮಧ್ಯೇ ವ್ಯವಸ್ಥಿತಂ।
07096007e ವ್ಯಾಘ್ರಾ ಇವ ಜಿಘಾಂಸಂತಸ್ತ್ವದೀಯಾಭ್ಯದ್ರವನ್ರಣೇ।।
ನಿನ್ನ ಸೇನೆಗಳ ಮಧ್ಯೆ ಮದಿಸಿದ ಆನೆಯಂತಿದ್ದ, ಮದಿಸಿದ ಆನೆಯ ನಡುಗೆಯುಳ್ಳ, ಮದೋದಕವನ್ನು ಸುರಿಸುತ್ತಿದ್ದ ಸಲಗದಂತಿದ್ದ ಸಾತ್ಯಕಿಯ ಮೇಲೆ ನಿನ್ನವರು ಕೊಲ್ಲಲು ಬಯಸಿದ ಹುಲಿಗಳಂತೆ ಎರಗಿದರು.
07096008a ದ್ರೋಣಾನೀಕಮತಿಕ್ರಾಂತಂ ಭೋಜಾನೀಕಂ ಚ ದುಸ್ತರಂ।
07096008c ಜಲಸಂಧಾರ್ಣವಂ ತೀರ್ತ್ವಾ ಕಾಂಬೋಜಾನಾಂ ಚ ವಾಹಿನೀಂ।।
07096009a ಹಾರ್ದಿಕ್ಯಮಕರಾನ್ಮುಕ್ತಂ ತೀರ್ಣಂ ವೈ ಸೈನ್ಯಸಾಗರಂ।
07096009c ಪರಿವವ್ರುಃ ಸುಸಂಕ್ರುದ್ಧಾಸ್ತ್ವದೀಯಾಃ ಸಾತ್ಯಕಿಂ ರಥಾಃ।।
ದ್ರೋಣನ ಸೇನೆಯನ್ನೂ, ಭೋಜನ ದುಸ್ತರ ಸೇನೆಯನ್ನೂ ದಾಟಿ, ಜಲಸಂಧನೆನ್ನುವ ಸಮುದ್ರವನ್ನೂ, ಕಾಂಬೋಜರ ಸೇನೆಯನ್ನೂ ದಾಟಿ, ಹಾರ್ದಿಕ್ಯನೆಂಬ ಮೊಸಳೆಯಿಂದಲೂ ಮುಕ್ತನಾಗಿ ಆ ಸೈನ್ಯಸಾಗರವನ್ನೇ ದಾಟಿಬಂದ ಸಾತ್ಯಕಿಯನ್ನು ನಿನ್ನಕಡೆಯ ಮಹಾರಥರು ಸುತ್ತುವರೆದರು.
07096010a ದುರ್ಯೋಧನಶ್ಚಿತ್ರಸೇನೋ ದುಃಶಾಸನವಿವಿಂಶತೀ।
07096010c ಶಕುನಿರ್ದುಃಸ್ಸಹಶ್ಚೈವ ಯುವಾ ದುರ್ಮರ್ಷಣಃ ಕ್ರಥಃ।
07096011a ಅನ್ಯೇ ಚ ಬಹವಃ ಶೂರಾಃ ಶಸ್ತ್ರವಂತೋ ದುರಾಸದಾಃ।
07096011c ಪೃಷ್ಠತಃ ಸಾತ್ಯಕಿಂ ಯಾಂತಮನ್ವಧಾವನ್ನಮರ್ಷಿತಾಃ।।
ದುರ್ಯೋಧನ, ಚಿತ್ರಸೇನ, ದುಃಶಾಸನ, ವಿವಿಂಶತೀ, ಶಕುನಿ, ದುಃಸ್ಸಹ, ಯುವಕರಾದ ದುರ್ಮರ್ಷಣ, ಕ್ರಥ ಮತ್ತು ಇನ್ನೂ ಅನೇಕ ದುರಾಸದ ಶಸ್ತ್ರವಂತ ಅಸಹನಶೀಲ ಶೂರರು ಹೋಗುತ್ತಿದ್ದ ಸಾತ್ಯಕಿಯನ್ನು ಬೆನ್ನಟ್ಟಿದರು.
07096012a ಅಥ ಶಬ್ದೋ ಮಹಾನಾಸೀತ್ತವ ಸೈನ್ಯಸ್ಯ ಮಾರಿಷ।
07096012c ಮಾರುತೋದ್ಧೂತವೇಗಸ್ಯ ಸಾಗರಸ್ಯೇವ ಪರ್ವಣಿ।।
ಮಾರಿಷ! ಆಗ ಪರ್ವಕಾಲದಲ್ಲಿ ಭಿರುಗಾಳಿಯ ವೇಗಕ್ಕೆ ಸಿಲುಕಿದ ಸಮುದ್ರದಂತೆ ನಿನ್ನ ಸೇನೆಯಿಂದ ಮಹಾಶಬ್ಧವು ಕೇಳಿಬಂದಿತು.
07096013a ತಾನಭಿದ್ರವತಃ ಸರ್ವಾನ್ಸಮೀಕ್ಷ್ಯ ಶಿನಿಪುಂಗವಃ।
07096013c ಶನೈರ್ಯಾಹೀತಿ ಯಂತಾರಮಬ್ರವೀತ್ಪ್ರಹಸನ್ನಿವ।।
ತನ್ನನ್ನು ಆಕ್ರಮಿಸಲು ಹಿಂದಿನಿಂದ ವೇಗವಾಗಿ ಬರುತ್ತಿದ್ದ ಅವರೆಲ್ಲರನ್ನು ನೋಡಿ ಶಿನಿಪುಂಗವನು ನಗುತ್ತಾ ಮೆಲ್ಲನೆ ಹೋಗೆಂದು ತನ್ನ ಸಾರಥಿಗೆ ಹೇಳಿದನು.
07096014a ಇದಮೇತಿ ಸಮುದ್ಧೂತಂ ಧಾರ್ತರಾಷ್ಟ್ರಸ್ಯ ಯದ್ಬಲಂ।
07096014c ಮಾಮೇವಾಭಿಮುಖಂ ತೂರ್ಣಂ ಗಜಾಶ್ವರಥಪತ್ತಿಮತ್।।
07096015a ನಾದಯನ್ವೈ ದಿಶಃ ಸರ್ವಾ ರಥಘೋಷೇಣ ಸಾರಥೇ।
07096015c ಪೃಥಿವೀಂ ಚಾಂತರಿಕ್ಷಂ ಚ ಕಂಪಯನ್ಸಾಗರಾನಪಿ।।
07096016a ಏತದ್ಬಲಾರ್ಣವಂ ತಾತ ವಾರಯಿಷ್ಯೇ ಮಹಾರಣೇ।
07096016c ಪೌರ್ಣಮಾಸ್ಯಾಮಿವೋದ್ಧೂತಂ ವೇಲೇವ ಸಲಿಲಾಶಯಂ।।
07096017a ಪಶ್ಯ ಮೇ ಸೂತ ವಿಕ್ರಾಂತಮಿಂದ್ರಸ್ಯೇವ ಮಹಾಮೃಧೇ।
07096017c ಏಷ ಸೈನ್ಯಾನಿ ಶತ್ರೂಣಾಂ ವಿಧಮಾಮಿ ಶಿತೈಃ ಶರೈಃ।।
07096018a ನಿಹತಾನಾಹವೇ ಪಶ್ಯ ಪದಾತ್ಯಶ್ವರಥದ್ವಿಪಾನ್।
07096018c ಮಚ್ಚರೈರಗ್ನಿಸಂಕಾಶೈರ್ವಿದೇಹಾಸೂನ್ಸಹಸ್ರಶಃ।।
07096019a ಇತ್ಯೇವಂ ಬ್ರುವತಸ್ತಸ್ಯ ಸಾತ್ಯಕೇರಮಿತೌಜಸಃ।
07096019c ಸಮೀಪಂ ಸೈನಿಕಾಸ್ತೇ ತು ಶೀಘ್ರಮೀಯುರ್ಯುಯುತ್ಸವಃ।
07096019e ಜಹ್ಯಾದ್ರವಸ್ವ ತಿಷ್ಠೇತಿ ಪಶ್ಯ ಪಶ್ಯೇತಿ ವಾದಿನಃ।।
07096020a ತಾನೇವಂ ಬ್ರುವತೋ ವೀರಾನ್ಸಾತ್ಯಕಿರ್ನಿಶಿತೈಃ ಶರೈಃ।
07096020c ಜಘಾನ ತ್ರಿಶತಾನಶ್ವಾನ್ಕುಂಜರಾಂಶ್ಚ ಚತುಃಶತಾನ್।।
07096021a ಸ ಸಂಪ್ರಹಾರಸ್ತುಮುಲಸ್ತಸ್ಯ ತೇಷಾಂ ಚ ಧನ್ವಿನಾಂ।
07096021c ದೇವಾಸುರರಣಪ್ರಖ್ಯಃ ಪ್ರಾವರ್ತತ ಜನಕ್ಷಯಃ।।
07096022a ಮೇಘಜಾಲನಿಭಂ ಸೈನ್ಯಂ ತವ ಪುತ್ರಸ್ಯ ಮಾರಿಷ।
07096022c ಪ್ರತ್ಯಗೃಹ್ಣಾಚ್ಚಿನೇಃ ಪೌತ್ರಃ ಶರೈರಾಶೀವಿಷೋಪಮೈಃ।।
07096023a ಪ್ರಚ್ಚಾದ್ಯಮಾನಃ ಸಮರೇ ಶರಜಾಲೈಃ ಸ ವೀರ್ಯವಾನ್।
07096023c ಅಸಂಭ್ರಮಂ ಮಹಾರಾಜ ತಾವಕಾನವಧೀದ್ಬಹೂನ್।।
07096024a ಆಶ್ಚರ್ಯಂ ತತ್ರ ರಾಜೇಂದ್ರ ಸುಮಹದ್ದೃಷ್ಟವಾನಹಂ।
07096024c ನ ಮೋಘಃ ಸಾಯಕಃ ಕಶ್ಚಿತ್ಸಾತ್ಯಕೇರಭವತ್ಪ್ರಭೋ।।
07096025a ರಥನಾಗಾಶ್ವಕಲಿಲಃ ಪದಾತ್ಯೂರ್ಮಿಸಮಾಕುಲಃ।
07096025c ಶೈನೇಯವೇಲಾಮಾಸಾದ್ಯ ಸ್ಥಿತಃ ಸೈನ್ಯಮಹಾರ್ಣವಃ।।
07096026a ಸಂಭ್ರಾಂತನರನಾಗಾಶ್ವಮಾವರ್ತತ ಮುಹುರ್ಮುಹುಃ।
07096026c ತತ್ಸೈನ್ಯಮಿಷುಭಿಸ್ತೇನ ವಧ್ಯಮಾನಂ ಸಮಂತತಃ।
07096026e ಬಭ್ರಾಮ ತತ್ರ ತತ್ರೈವ ಗಾವಃ ಶೀತಾರ್ದಿತಾ ಇವ।।
07096027a ಪದಾತಿನಂ ರಥಂ ನಾಗಂ ಸಾದಿನಂ ತುರಗಂ ತಥಾ।
07096027c ಅವಿದ್ಧಂ ತತ್ರ ನಾದ್ರಾಕ್ಷಂ ಯುಯುಧಾನಸ್ಯ ಸಾಯಕೈಃ।।
07096028a ನ ತಾದೃಕ್ಕದನಂ ರಾಜನ್ಕೃತವಾಂಸ್ತತ್ರ ಫಲ್ಗುನಃ।
07096028c ಯಾದೃಕ್ಕ್ಷಯಮನೀಕಾನಾಮಕರೋತ್ಸಾತ್ಯಕಿರ್ನೃಪ।
07096028e ಅತ್ಯರ್ಜುನಂ ಶಿನೇಃ ಪೌತ್ರೋ ಯುಧ್ಯತೇ ಭರತರ್ಷಭ।।
07096029a ತತೋ ದುರ್ಯೋಧನೋ ರಾಜಾ ಸಾತ್ವತಸ್ಯ ತ್ರಿಭಿಃ ಶರೈಃ।
07096029c ವಿವ್ಯಾಧ ಸೂತಂ ನಿಶಿತೈಶ್ಚತುರ್ಭಿಶ್ಚತುರೋ ಹಯಾನ್।।
07096030a ಸಾತ್ಯಕಿಂ ಚ ತ್ರಿಭಿರ್ವಿದ್ಧ್ವಾ ಪುನರ್ವಿವ್ಯಾಧ ಸೋಽಷ್ಟಭಿಃ।
07096030c ದುಃಶಾಸನಃ ಷೋಡಶಭಿರ್ವಿವ್ಯಾಧ ಶಿನಿಪುಂಗವಂ।।
07096031a ಶಕುನಿಃ ಪಂಚವಿಂಶತ್ಯಾ ಚಿತ್ರಸೇನಶ್ಚ ಪಂಚಭಿಃ।
07096031c ದುಃಸ್ಸಹಃ ಪಂಚದಶಭಿರ್ವಿವ್ಯಾಧೋರಸಿ ಸಾತ್ಯಕಿಂ।।
07096032a ಉತ್ಸ್ಮಯನ್ವೃಷ್ಣಿಶಾರ್ದೂಲಸ್ತಥಾ ಬಾಣೈಃ ಸಮಾಹತಃ।
07096032c ತಾನವಿಧ್ಯನ್ಮಹಾರಾಜ ಸರ್ವಾನೇವ ತ್ರಿಭಿಸ್ತ್ರಿಭಿಃ।।
07096033a ಗಾಢವಿದ್ಧಾನರೀನ್ಕೃತ್ವಾ ಮಾರ್ಗಣೈಃ ಸೋಽತಿತೇಜನೈಃ।
07096033c ಶೈನೇಯಃ ಶ್ಯೇನವತ್ಸಂಖ್ಯೇ ವ್ಯಚರಲ್ಲಘುವಿಕ್ರಮಃ।।
07096034a ಸೌಬಲಸ್ಯ ಧನುಶ್ಚಿತ್ತ್ವಾ ಹಸ್ತಾವಾಪಂ ನಿಕೃತ್ಯ ಚ।
07096034c ದುರ್ಯೋಧನಂ ತ್ರಿಭಿರ್ಬಾಣೈರಭ್ಯವಿಧ್ಯತ್ಸ್ತನಾಂತರೇ।।
07096035a ಚಿತ್ರಸೇನಂ ಶತೇನೈವ ದಶಭಿರ್ದುಃಸ್ಸಹಂ ತಥಾ।
07096035c ದುಃಶಾಸನಂ ಚ ವಿಂಶತ್ಯಾ ವಿವ್ಯಾಧ ಶಿನಿಪುಂಗವಃ।।
07096036a ಅಥಾನ್ಯದ್ಧನುರಾದಾಯ ಸ್ಯಾಲಸ್ತವ ವಿಶಾಂ ಪತೇ।
07096036c ಅಷ್ಟಭಿಃ ಸಾತ್ಯಕಿಂ ವಿದ್ಧ್ವಾ ಪುನರ್ವಿವ್ಯಾಧ ಪಂಚಭಿಃ।।
07096037a ದುಃಶಾಸನಶ್ಚ ದಶಭಿರ್ದುಃಸ್ಸಹಶ್ಚ ತ್ರಿಭಿಃ ಶರೈಃ।
07096037c ದುರ್ಮುಖಶ್ಚ ದ್ವಾದಶಭೀ ರಾಜನ್ವಿವ್ಯಾಧ ಸಾತ್ಯಕಿಂ।।
07096038a ದುರ್ಯೋಧನಸ್ತ್ರಿಸಪ್ತತ್ಯಾ ವಿದ್ಧ್ವಾ ಭಾರತ ಮಾಧವಂ।
07096038c ತತೋಽಸ್ಯ ನಿಶಿತೈರ್ಬಾಣೈಸ್ತ್ರಿಭಿರ್ವಿವ್ಯಾಧ ಸಾರಥಿಂ।।
07096039a ತಾನ್ಸರ್ವಾನ್ಸಹಿತಾಂ ಶೂರಾನ್ಯತಮಾನಾನ್ಮಹಾರಥಾನ್।
07096039c ಪಂಚಭಿಃ ಪಂಚಭಿರ್ಬಾಣೈಃ ಪುನರ್ವಿವ್ಯಾಧ ಸಾತ್ಯಕಿಃ।।
07096040a ತತಃ ಸ ರಥಿನಾಂ ಶ್ರೇಷ್ಠಸ್ತವ ಪುತ್ರಸ್ಯ ಸಾರಥಿಂ।
07096040c ಆಜಘಾನಾಶು ಭಲ್ಲೇನ ಸ ಹತೋ ನ್ಯಪತದ್ಭುವಿ।।
07096041a ಪಾತಿತೇ ಸಾರಥೌ ತಸ್ಮಿಂಸ್ತವ ಪುತ್ರರಥಃ ಪ್ರಭೋ।
07096041c ವಾತಾಯಮಾನೈಸ್ತೈರಶ್ವೈರಪಾನೀಯತ ಸಂಗರಾತ್।।
07096042a ತತಸ್ತವ ಸುತಾ ರಾಜನ್ಸೈನಿಕಾಶ್ಚ ವಿಶಾಂ ಪತೇ।
07096042c ರಾಜ್ಞೋ ರಥಮಭಿಪ್ರೇಕ್ಷ್ಯ ವಿದ್ರುತಾಃ ಶತಶೋಽಭವನ್।।
07096043a ವಿದ್ರುತಂ ತತ್ರ ತತ್ಸೈನ್ಯಂ ದೃಷ್ಟ್ವಾ ಭಾರತ ಸಾತ್ಯಕಿಃ।
07096043c ಅವಾಕಿರಚ್ಚರೈಸ್ತೀಕ್ಷ್ಣೈ ರುಕ್ಮಪುಂಖೈಃ ಶಿಲಾಶಿತೈಃ।।
07096044a ವಿದ್ರಾವ್ಯ ಸರ್ವಸೈನ್ಯಾನಿ ತಾವಕಾನಿ ಸಮಂತತಃ।
07096044c ಪ್ರಯಯೌ ಸಾತ್ಯಕೀ ರಾಜಂ ಶ್ವೇತಾಶ್ವಸ್ಯ ರಥಂ ಪ್ರತಿ।।
07096045a ತಂ ಶರಾನಾದದಾನಂ ಚ ರಕ್ಷಮಾಣಂ ಚ ಸಾರಥಿಂ।
07096045c ಆತ್ಮಾನಂ ಮೋಚಯಂತಂ ಚ ತಾವಕಾಃ ಸಮಪೂಜಯನ್।।
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ಸಾತ್ಯಕಿಪ್ರವೇಶೇ ದುರ್ಯೋಧನಪಲಾಯನೇ ಷಷ್ಠನವತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ಸಾತ್ಯಕಿಪ್ರವೇಶೇ ದುರ್ಯೋಧನಪಲಾಯನ ಎನ್ನುವ ತೊಂಭತ್ತಾರನೇ ಅಧ್ಯಾಯವು.