ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ದ್ರೋಣ ಪರ್ವ
ಜಯದ್ರಥವಧ ಪರ್ವ
ಅಧ್ಯಾಯ 72
ಸಾರ
ಯುದ್ಧ ವರ್ಣನೆ (1-20). ದ್ರೋಣ-ಧೃಷ್ಟದ್ಯುಮ್ನರ ಯುದ್ಧ (21-35).
07072001 ಸಂಜಯ ಉವಾಚ।
07072001a ತಥಾ ತಸ್ಮಿನ್ಪ್ರವೃತ್ತೇ ತು ಸಂಗ್ರಾಮೇ ಲೋಮಹರ್ಷಣೇ।
07072001c ಕೌರವೇಯಾಂಸ್ತ್ರಿಧಾಭೂತಾನ್ಪಾಂಡವಾಃ ಸಮುಪಾದ್ರವನ್।।
ಸಂಜಯನು ಹೇಳಿದನು: “ಆಗ ಆ ಲೋಮಹರ್ಷಣ ಸಂಗ್ರಾಮವು ಪ್ರಾರಂಭವಾಗಲು ಪಾಂಡವರು ಮೂರು ಭಾಗಗಳಾಗಿ ಒಡೆದಿದ್ದ ಕೌರವೇಯರ ಸೇನೆಯೊಂದಿಗೆ ಹೋರಾಡಿದರು.
07072002a ಜಲಸಂಧಂ ಮಹಾಬಾಹುರ್ಭೀಮಸೇನೋ ನ್ಯವಾರಯತ್।
07072002c ಯುಧಿಷ್ಠಿರಃ ಸಹಾನೀಕಃ ಕೃತವರ್ಮಾಣಮಾಹವೇ।।
ಮಹಾಬಾಹು ಭೀಮಸೇನನು ಜಲಸಂಧನನ್ನು ಎದುರಿಸಿದನು. ಯಧಿಷ್ಠಿರನು ಸೇನೆಯೊಂದಿಗೆ ಯುದ್ಧದಲ್ಲಿ ಕೃತವರ್ಮನನ್ನು ಎದುರಿಸಿದನು.
07072003a ಕಿರಂತಂ ಶರವರ್ಷಾಣಿ ರೋಚಮಾನ ಇವಾಂಶುಮಾನ್।
07072003c ಧೃಷ್ಟದ್ಯುಮ್ನೋ ಮಹಾರಾಜ ದ್ರೋಣಮಭ್ಯದ್ರವದ್ರಣೇ।।
ಮಹಾರಾಜ! ಸೂರ್ಯನು ಕಿರಣಗಳನ್ನು ಪಸರಿಸುವಂತೆ ಬಾಣಗಳ ಮಳೆಯನ್ನು ಸುರಿಸುತ್ತಿದ್ದ ಧೃಷ್ಟದ್ಯುಮ್ನನು ದ್ರೋಣನನ್ನು ಆಕ್ರಮಣಿಸಿದನು.
07072004a ತತಃ ಪ್ರವವೃತೇ ಯುದ್ಧಂ ತ್ವರತಾಂ ಸರ್ವಧನ್ವಿನಾಂ।
07072004c ಕುರೂಣಾಂ ಸೋಮಕಾನಾಂ ಚ ಸಂಕ್ರುದ್ಧಾನಾಂ ಪರಸ್ಪರಂ।।
ಆಗ ತ್ವರೆಯಲ್ಲಿದ್ದ ಪರಸ್ಪರ ಸಂಕ್ರುದ್ಧರಾಗಿದ್ದ ಕುರುಗಳ ಮತ್ತು ಸೋಮಕರ ಸರ್ವಧನ್ವಿಗಳ ನಡುವೆ ಯುದ್ಧವು ನಡೆಯಿತು.
07072005a ಸಂಕ್ಷಯೇ ತು ತಥಾ ಭೂತೇ ವರ್ತಮಾನೇ ಮಹಾಭಯೇ।
07072005c ದ್ವಂದ್ವೀಭೂತೇಷು ಸೈನ್ಯೇಷು ಯುಧ್ಯಮಾನೇಷ್ವಭೀತವತ್।।
ಹಾಗೆ ಮಹಾಭಯದ ವಿನಾಶವು ನಡೆಯುತ್ತಿರಲು ಎರಡೂ ಸೇನೆಗಳಲ್ಲಿ ಭಯಗೊಳ್ಳದೇ ಯುದ್ಧಮಾಡುತ್ತಿದ್ದರು.
07072006a ದ್ರೋಣಃ ಪಾಂಚಾಲಪುತ್ರೇಣ ಬಲೀ ಬಲವತಾ ಸಹ।
07072006c ವಿಚಿಕ್ಷೇಪ ಪೃಷತ್ಕೌಘಾಂಸ್ತದದ್ಭುತಮಿವಾಭವತ್।।
ಬಲೀ ದ್ರೋಣನು ಬಲವಂತನಾದ ಪಾಂಚಾಲಪುತ್ರನೊಂದಿಗೆ ಯುದ್ಧಮಾಡಿದನು. ಅವನು ಕಳುಹಿಸಿದ ಬಾಣಗಳ ಸಮೂಹಗಳು ಎಲ್ಲಕಡೆ ತುಂಬಿಕೊಳ್ಳಲು ಅದೊಂದು ಅದ್ಭುತವಾಯಿತು.
07072007a ಪುಂಡರೀಕವನಾನೀವ ವಿಧ್ವಸ್ತಾನಿ ಸಮಂತತಃ।
07072007c ಚಕ್ರಾತೇ ದ್ರೋಣಪಾಂಚಾಲ್ಯೌ ನೃಣಾಂ ಶೀರ್ಷಾಣ್ಯನೇಕಶಃ।।
ಕಮಲಗಳ ವನವನ್ನು ಎಲ್ಲಕಡೆಗಳಿಂದ ಧ್ವಂಸಗೊಳಿಸುವಂತೆ ದ್ರೋಣ ಮತ್ತು ಪಾಂಚಾಲ್ಯರು ಅನೇಕ ನರರ ಶಿರಗಳನ್ನು ಉರುಳಿಸಿದರು.
07072008a ವಿನಿಕೀರ್ಣಾನಿ ವೀರಾಣಾಮನೀಕೇಷು ಸಮಂತತಃ।
07072008c ವಸ್ತ್ರಾಭರಣಶಸ್ತ್ರಾಣಿ ಧ್ವಜವರ್ಮಾಯುಧಾನಿ ಚ।।
ಸೇನೆಗಳಲ್ಲಿ ಎಲ್ಲ ಕಡೆಗಳಲ್ಲಿ ವೀರರ ವಸ್ತ್ರಾಭರಣ ಶಸ್ತ್ರಗಳು, ಧ್ವಜ-ಕವಚ-ಆಯುಧಗಳು ಹರಡಿ ಬಿದ್ದಿದ್ದವು.
07072009a ತಪನೀಯವಿಚಿತ್ರಾಂಗಾಃ ಸಂಸಿಕ್ತಾ ರುಧಿರೇಣ ಚ।
07072009c ಸಂಸಕ್ತಾ ಇವ ದೃಶ್ಯಂತೇ ಮೇಘಸಂಘಾಃ ಸವಿದ್ಯುತಃ।।
ಬಂಗಾರದ ಕವಚಗಳು ರಕ್ತದಿಂದ ತೋಯ್ದು ಹೋಗಿ ಮಿಂಚಿನಿಂದ ಕೂಡಿದ ಮೇಘಗಳ ರಾಶಿಗಳಂತೆ ಕಾಣುತ್ತಿದ್ದವು.
07072010a ಕುಂಜರಾಶ್ವನರಾನ್ಸಂಖ್ಯೇ ಪಾತಯಂತಃ ಪತತ್ರಿಭಿಃ।
07072010c ತಾಲಮಾತ್ರಾಣಿ ಚಾಪಾನಿ ವಿಕರ್ಷಂತೋ ಮಹಾರಥಾಃ।।
ಮಹಾರಥರು ತಾಲಮಾತ್ರದ ಚಾಪಗಳನ್ನು ಸೆಳೆಯುತ್ತಾ ಪತತ್ರಿಗಳಿಂದ ಯುದ್ಧದಲ್ಲಿ ಆನೆ-ಕುದುರೆ-ನರರನ್ನು ಬೀಳಿಸುತ್ತಿದ್ದರು.
07072011a ಅಸಿಚರ್ಮಾಣಿ ಚಾಪಾನಿ ಶಿರಾಂಸಿ ಕವಚಾನಿ ಚ।
07072011c ವಿಪ್ರಕೀರ್ಯಂತ ಶೂರಾಣಾಂ ಸಂಪ್ರಹಾರೇ ಮಹಾತ್ಮನಾಂ।।
ಮಹಾತ್ಮ ಶೂರರು ಪ್ರಹರಿಸುತ್ತಿದ್ದ ಖಡ್ಗ, ಗುರಾಣಿ, ಬಿಲ್ಲುಗಳು, ಶಿರಗಳು, ಕವಚಗಳು ಹರಡಿ ಬಿದ್ದಿದ್ದವು.
07072012a ಉತ್ಥಿತಾನ್ಯಗಣೇಯಾನಿ ಕಬಂಧಾನಿ ಸಮಂತತಃ।
07072012c ಅದೃಶ್ಯಂತ ಮಹಾರಾಜ ತಸ್ಮಿನ್ಪರಮಸಂಕುಲೇ।।
ಮಹಾರಾಜ! ಆ ಪರಮ ಸಂಕುಲಯುದ್ಧದಲ್ಲಿ ಎಲ್ಲ ಕಡೆಗಳಲ್ಲಿ ಮೇಲೆ ಏಳುತ್ತಿದ್ದ ಅನೇಕ ಕಬಂಧಗಳು ಕಾಣುತ್ತಿದ್ದವು.
07072013a ಗೃಧ್ರಾಃ ಕಂಕಾ ವಡಾಃ ಶ್ಯೇನಾ ವಾಯಸಾ ಜಂಬುಕಾಸ್ತಥಾ।
07072013c ಬಹವಃ ಪಿಶಿತಾಶಾಶ್ಚ ತತ್ರಾದೃಶ್ಯಂತ ಮಾರಿಷ।।
07072014a ಭಕ್ಷಯಂತಃ ಸ್ಮ ಮಾಂಸಾನಿ ಪಿಬಂತಶ್ಚಾಪಿ ಶೋಣಿತಂ।
07072014c ವಿಲುಂಪಂತಃ ಸ್ಮ ಕೇಶಾಂಶ್ಚ ಮಜ್ಜಾಶ್ಚ ಬಹುಧಾ ನೃಪ।।
07072015a ಆಕರ್ಷಂತಃ ಶರೀರಾಣಿ ಶರೀರಾವಯವಾಂಸ್ತಥಾ।
07072015c ನರಾಶ್ವಗಜಸಂಘಾನಾಂ ಶಿರಾಂಸಿ ಚ ತತಸ್ತತಃ।।
ಮಾರಿಷ! ಹದ್ದುಗಳು, ಕಂಕಗಳು, ತೋಳಗಳು, ನರಿಗಳು, ಕಾಗೆಗಳು, ಜಂಬುಕಗಳು ಮತ್ತು ಇನ್ನೂ ಅನೇಕ ಮಾಂಸಾಹಾರಿಗಳು ಮಾಂಸಗಳನ್ನು ಭಕ್ಷಿಸುತ್ತಿರುವುದು, ರಕ್ತವನ್ನು ಕುಡಿಯುತ್ತಿರುವುದು, ಕೇಶಗಳನ್ನೂ, ಎಲುಬುಗಳನ್ನು ನೆಕ್ಕುತ್ತಿರುವುದು, ಅನೇಕ ಶರೀರಗಳಿಂದ ಶರೀರದ ಅವಯವಗಳನ್ನು ಕಿತ್ತು ಎಳೆಯುತ್ತಿರುವುದು, ನರರು-ಅಶ್ವ-ಗಜ ಸಮೂಹಗಳ ಶಿರಗಳನ್ನೂ ಎಳೆಯುತ್ತಿರುವುದು ಅಲ್ಲಲ್ಲಿ ಕಂಡಿತು.
07072016a ಕೃತಾಸ್ತ್ರಾ ರಣದೀಕ್ಷಾಭಿರ್ದೀಕ್ಷಿತಾಃ ಶರಧಾರಿಣಃ।
07072016c ರಣೇ ಜಯಂ ಪ್ರಾರ್ಥಯಂತೋ ಭೃಶಂ ಯುಯುಧಿರೇ ತದಾ।।
ಅಸ್ತ್ರವಿದರಾದ, ರಣದೀಕ್ಷೆಯ ದೀಕ್ಷಿತರಾದ, ರಣದಲ್ಲಿ ಜಯವನ್ನು ಬಯಸುವ ಶರಧಾರಿಗಳು ಜೋರಾಗಿ ಯುದ್ಧ ಮಾಡಿದರು.
07072017a ಅಸಿಮಾರ್ಗಾನ್ಬಹುವಿಧಾನ್ವಿಚೇರುಸ್ತಾವಕಾ ರಣೇ।
07072017c ಋಷ್ಟಿಭಿಃ ಶಕ್ತಿಭಿಃ ಪ್ರಾಸೈಃ ಶೂಲತೋಮರಪಟ್ಟಿಶೈಃ।।
07072018a ಗದಾಭಿಃ ಪರಿಘೈಶ್ಚಾನ್ಯೇ ವ್ಯಾಯುಧಾಶ್ಚ ಭುಜೈರಪಿ।
07072018c ಅನ್ಯೋನ್ಯಂ ಜಘ್ನಿರೇ ಕ್ರುದ್ಧಾ ಯುದ್ಧರಂಗಗತಾ ನರಾಃ।।
ಯುದ್ಧರಂಗದಲ್ಲಿ ಇಳಿದಿದ್ದ ನರರು ರಣದಲ್ಲಿ ನಿನ್ನವರು ಬಹುವಿಧದ ವರಸೆಗಳಲ್ಲಿ ಖಡ್ಗಗಳನ್ನು ತಿರುಗಿಸುತ್ತಾ, ಋಷ್ಟಿ-ಶಕ್ತಿ-ಪ್ರಾಸ-ಶೂಲ-ತೋಮರ-ಪಟ್ಟಿಶ-ಗದೆ-ಪರಿಘ ಮತ್ತು ಇನ್ನೂ ಇತರ ಆಯುಧಗಳಿಂದ ಮತ್ತು ಭುಜಗಳಿಂದಲೂ ಅನ್ಯೋನ್ಯರನ್ನು ಕ್ರುದ್ಧರಾಗಿ ಸಂಹರಿಸಿದರು.
07072019a ರಥಿನೋ ರಥಿಭಿಃ ಸಾರ್ಧಮಶ್ವಾರೋಹಾಶ್ಚ ಸಾದಿಭಿಃ।
07072019c ಮಾತಂಗಾ ವರಮಾತಂಗೈಃ ಪದಾತಾಶ್ಚ ಪದಾತಿಭಿಃ।।
07072020a ಕ್ಷೀಬಾ ಇವಾನ್ಯೇ ಚೋನ್ಮತ್ತಾ ರಂಗೇಷ್ವಿವ ಚ ಚಾರಣಾಃ।
07072020c ಉಚ್ಚುಕ್ರುಶುಸ್ತಥಾನ್ಯೋನ್ಯಂ ಜಘ್ನುರನ್ಯೋನ್ಯಮಾಹವೇ।।
ರಥಿಗಳು ರಥಿಗಳೊಡನೆ, ಅಶ್ವಾರೋಹಿಗಳು ಅಶ್ವಾರೋಹಿಗಳೊಂದಿಗೆ, ಮಾತಂಗರು ಶ್ರೇಷ್ಠ ಮಾತಂಗರೊಂಡನೆ, ಪದಾತಿಗಳು ಪದಾತಿಗಳೊಡನೆ, ಮತ್ತು ಇತರರು ಉನ್ಮತ್ತರಾದವರಂತೆ ಕ್ರೀಡಾಂಗಣದಲ್ಲಿ ಸಂಚರಿಸುತ್ತಿರೋ ಎನ್ನುವವರಂತೆ ಅನ್ಯೋನ್ಯರನ್ನು ಕಿರುಚಾಡಿ ಕರೆದರು ಮತ್ತು ಅನ್ಯೋನ್ಯರನ್ನು ಸಂಹರಿಸಿದರು.
07072021a ವರ್ತಮಾನೇ ತಥಾ ಯುದ್ಧೇ ನಿರ್ಮರ್ಯಾದೇ ವಿಶಾಂ ಪತೇ।
07072021c ಧೃಷ್ಟದ್ಯುಮ್ನೋ ಹಯಾನಶ್ವೈರ್ದ್ರೋಣಸ್ಯ ವ್ಯತ್ಯಮಿಶ್ರಯತ್।।
ವಿಶಾಂಪತೇ! ಮರ್ಯಾದೆಗಳಿಲ್ಲದೇ ನಡೆಯುತ್ತಿರುವ ಆ ಯುದ್ಧದಲ್ಲಿ ಧೃಷ್ಟದ್ಯುಮ್ನನು ತನ್ನ ಕುದುರೆಗಳು ದ್ರೋಣನ ಕುದುರೆಗಳೊಡನೆ ಬೆರೆಯಿಸಿದನು.
07072022a ತೇ ಹಯಾ ಸಾಧ್ವಶೋಭಂತ ವಿಮಿಶ್ರಾ ವಾತರಂಹಸಃ।
07072022c ಪಾರಾವತಸವರ್ಣಾಶ್ಚ ರಕ್ತಶೋಣಾಶ್ಚ ಸಂಯುಗೇ।
07072022e ಹಯಾಃ ಶುಶುಭಿರೇ ರಾಜನ್ಮೇಘಾ ಇವ ಸವಿದ್ಯುತಃ।।
ರಾಜನ್! ಗಾಳಿಯ ವೇಗದಲ್ಲಿ ಹೋಗಬಲ್ಲ ಆ ಪಾರಿವಾಳದ ಬಣ್ಣದ ಕುದುರೆಗಳು ಕೆಂಪುಬಣ್ಣದ ಕುದುರೆಗಳೊಡನೆ ಸೇರಿ ರಣರಂಗದಲ್ಲಿ ಅವು ಮಿಂಚಿನಿಂದೊಡಗೂಡಿದ ಮೋಡಗಳಂತೆ ಚೆನ್ನಾಗಿ ಶೋಭಿಸಿದವು.
07072023a ಧೃಷ್ಟದ್ಯುಮ್ನಶ್ಚ ಸಂಪ್ರೇಕ್ಷ್ಯ ದ್ರೋಣಮಭ್ಯಾಶಮಾಗತಂ।
07072023c ಅಸಿಚರ್ಮಾದದೇ ವೀರೋ ಧನುರುತ್ಸೃಜ್ಯ ಭಾರತ।।
ಭಾರತ! ದ್ರೋಣನು ತುಂಬಾ ಹತ್ತಿರ ಬಂದುದನ್ನು ನೋಡಿದ ವೀರ ಧೃಷ್ಟದ್ಯುಮ್ನನು ಧನುಸ್ಸನ್ನು ಬಿಸುಟು ಖಡ್ಗ-ಗುರಾಣಿಗಳನ್ನು ತೆಗೆದುಕೊಂಡನು.
07072024a ಚಿಕೀರ್ಷುರ್ದುಷ್ಕರಂ ಕರ್ಮ ಪಾರ್ಷತಃ ಪರವೀರಹಾ।
07072024c ಈಷಯಾ ಸಮತಿಕ್ರಮ್ಯ ದ್ರೋಣಸ್ಯ ರಥಮಾವಿಶತ್।।
ಆಗ ಪರವೀರಹ ಪಾರ್ಷತನು ಈಶಾದಂಡವನ್ನು ಹಿಡಿದು ಹಾರಿ ದ್ರೋಣನ ರಥವನ್ನು ಪ್ರವೇಶಿಸಿ, ದುಷ್ಕರವಾದ ಕರ್ಮವನ್ನೇ ಮಾಡಿದನು.
07072025a ಅತಿಷ್ಠದ್ಯುಗಮಧ್ಯೇ ಸ ಯುಗಸನ್ನಹನೇಷು ಚ।
07072025c ಜಘಾನಾರ್ಧೇಷು ಚಾಶ್ವಾನಾಂ ತತ್ಸೈನ್ಯಾನ್ಯಭ್ಯಪೂಜಯನ್।।
ನೊಗದ ಮೇಲೆ, ಸ್ವಲ್ಪ ಸಮಯ ನೊಗದ ಜೋಡಿನ ಮೇಲೆ ಮತ್ತು ಕುದುರೆಗಳ ಮೇಲೆ ನಿಂತುಕೊಂಡು ಸಂಚರಿಸುತ್ತಿದ್ದನು.
07072026a ಖಡ್ಗೇನ ಚರತಸ್ತಸ್ಯ ಶೋಣಾಶ್ವಾನಧಿತಿಷ್ಠತಃ।
07072026c ನ ದದರ್ಶಾಂತರಂ ದ್ರೋಣಸ್ತದದ್ಭುತಮಿವಾಭವತ್।।
ಕೆಂಪುಕುದುರೆಗಳ ಮೇಲೆ ನಿಂತು ಖಡ್ಗವನ್ನು ತಿರುಗಿಸುತ್ತಿದ್ದ ಅವನನ್ನು ಹೊಡೆಯಲು ದ್ರೋಣನಿಗೆ ಅವಕಾಶವೇ ಸಿಗಲಿಲ್ಲ. ಅದೊಂದು ಅದ್ಭುತವಾಗಿತ್ತು.
07072027a ಯಥಾ ಶ್ಯೇನಸ್ಯ ಪತನಂ ವನೇಷ್ವಾಮಿಷಗೃದ್ಧಿನಃ।
07072027c ತಥೈವಾಸೀದಭೀಸಾರಸ್ತಸ್ಯ ದ್ರೋಣಂ ಜಿಘಾಂಸತಃ।।
ವನದಲ್ಲಿ ಮಾಂಸದ ಆಸೆಯಿಂದ ಗಿಡುಗವು ಹಾರಿ ಎರಗುವಂತೆ ದ್ರೋಣನನ್ನು ಕೊಲ್ಲಲು ಬಯಸಿದ ಅವನ ವರ್ತನೆಯಾಗಿತ್ತು.
07072028a ತತಃ ಶರಶತೇನಾಸ್ಯ ಶತಚಂದ್ರಂ ಸಮಾಕ್ಷಿಪತ್।
07072028c ದ್ರೋಣೋ ದ್ರುಪದಪುತ್ರಸ್ಯ ಖಡ್ಗಂ ಚ ದಶಭಿಃ ಶರೈಃ।।
07072029a ಹಯಾಂಶ್ಚೈವ ಚತುಃಷಷ್ಟ್ಯಾ ಶರಾಣಾಂ ಜಘ್ನಿವಾನ್ಬಲೀ।
07072029c ಧ್ವಜಂ ಚತ್ರಂ ಚ ಭಲ್ಲಾಭ್ಯಾಂ ತಥೋಭೌ ಪಾರ್ಷ್ಣಿಸಾರಥೀ।।
ಆಗ ಬಲೀ ದ್ರೋಣನು ನೂರು ಶರಗಳಿಂದ ದ್ರುಪದಪುತ್ರನ ನೂರುಚಂದ್ರರಿದ್ದ ಗುರಾಣಿಯನ್ನೂ, ಹತ್ತು ಶರಗಳಿಂದ ಖಡ್ಗವನ್ನೂ, ಅರವತ್ನಾಲ್ಕು ಬಾಣಗಳಿಂದ ಕುದುರೆಗಳನ್ನೂ, ಭಲ್ಲಗಳೆರಡರಿಂದ ಧ್ವಜ-ಚತ್ರಗಳನ್ನು ಮತ್ತು ಇನ್ನೆರಡರಿಂದ ಅವನ ಪಾರ್ಷ್ಣಿಸಾರಥಿಗಳನ್ನೂ ಹೊಡೆದನು.
07072030a ಅಥಾಸ್ಮೈ ತ್ವರಿತೋ ಬಾಣಮಪರಂ ಜೀವಿತಾಂತಕಂ।
07072030c ಆಕರ್ಣಪೂರ್ಣಂ ಚಿಕ್ಷೇಪ ವಜ್ರಂ ವಜ್ರಧರೋ ಯಥಾ।।
ಆಗ ತ್ವರೆಮಾಡಿ ಇನ್ನೊಂದು ಜೀವಿತವನ್ನು ಅಂತ್ಯಗೊಳಿಸಬಲ್ಲ ಬಾಣವನ್ನು ವಜ್ರಧರನು ವಜ್ರವನ್ನು ಹೇಗೋ ಹಾಗೆ ಆಕರ್ಣಪೂರ್ಣಾಂತವಾಗಿ ಎಳೆದು ಪ್ರಯೋಗಿಸಿದನು.
07072031a ತಂ ಚತುರ್ದಶಭಿರ್ಬಾಣೈರ್ಬಾಣಂ ಚಿಚ್ಚೇದ ಸಾತ್ಯಕಿಃ।
07072031c ಗ್ರಸ್ತಮಾಚಾರ್ಯಮುಖ್ಯೇನ ಧೃಷ್ಟದ್ಯುಮ್ನಮಮೋಚಯತ್।।
ಆ ಬಾಣವನ್ನು ಹದಿನಾಲ್ಕು ಬಾಣಗಳಿಂದ ತುಂಡರಿಸಿ ಸಾತ್ಯಕಿಯು ಆಚಾರ್ಯಮುಖ್ಯನ ಹಿಡಿತದಿಂದ ಧೃಷ್ಟದ್ಯುಮ್ನನನ್ನು ಬಿಡುಗಡೆಗೊಳಿಸಿದನು.
07072032a ಸಿಂಹೇನೇವ ಮೃಗಂ ಗ್ರಸ್ತಂ ನರಸಿಂಹೇನ ಮಾರಿಷ।
07072032c ದ್ರೋಣೇನ ಮೋಚಯಾಮಾಸ ಪಾಂಚಾಲ್ಯಂ ಶಿನಿಪುಂಗವಃ।।
ಮಾರಿಷ! ಸಿಂಹದಿಂದ ಹಿಡಿಯಲ್ಪಟ್ಟಿದ್ದ ಜಿಂಕೆಯನ್ನು ಹೇಗೋ ಹಾಗಿ ಆ ನರಸಿಂಹ ಶಿನಿಪುಂಗವನು ಪಾಂಚಾಲ್ಯನನ್ನು ದ್ರೋಣನಿಂದ ಬಿಡುಗಡೆಗೊಳಿಸಿದನು.
07072033a ಸಾತ್ಯಕಿಂ ಪ್ರೇಕ್ಷ್ಯ ಗೋಪ್ತಾರಂ ಪಾಂಚಾಲ್ಯಸ್ಯ ಮಹಾಹವೇ।
07072033c ಶರಾಣಾಂ ತ್ವರಿತೋ ದ್ರೋಣಃ ಷಡ್ವಿಂಶತ್ಯಾ ಸಮರ್ಪಯತ್।।
ಮಹಾಹವದಲ್ಲಿ ಪಾಂಚಾಲ್ಯನನ್ನು ಸಾತ್ಯಕಿಯು ರಕ್ಷಿಸಿದುದನ್ನು ನೋಡಿ ದ್ರೋಣನು ತ್ವರೆಮಾಡಿ ಇಪ್ಪತ್ತಾರು ಬಾಣಗಳಿಂದ ಅವನನ್ನು ಹೊಡೆದನು.
07072034a ತತೋ ದ್ರೋಣಂ ಶಿನೇಃ ಪೌತ್ರೋ ಗ್ರಸಂತಮಿವ ಸೃಂಜಯಾನ್।
07072034c ಪ್ರತ್ಯವಿಧ್ಯಚ್ಚಿತೈರ್ಬಾಣೈಃ ಷಡ್ವಿಂಶತ್ಯಾ ಸ್ತನಾಂತರೇ।।
ಆಗ ಶಿನಿಯ ಪೌತ್ರನು ಸೃಂಜಯರನ್ನು ನುಂಗುವಂತಿದ್ದ ದ್ರೋಣನ ಎದೆಗೆ ಗುರಿಯಿಟ್ಟು ನಿಶಿತವಾದ ಇಪ್ಪತ್ತಾರು ಬಾಣಗಳಿಂದ ತಿರುಗಿ ಹೊಡೆದನು.
07072035a ತತಃ ಸರ್ವೇ ರಥಾಸ್ತೂರ್ಣಂ ಪಾಂಚಾಲಾ ಜಯಗೃದ್ಧಿನಃ।
07072035c ಸಾತ್ವತಾಭಿಸೃತೇ ದ್ರೋಣೇ ಧೃಷ್ಟದ್ಯುಮ್ನಮಮೋಚಯನ್।।
ದ್ರೋಣನು ಸಾತ್ವತನೊಡನೆ ಯುದ್ಧದಲ್ಲಿ ತೊಡಗಲು ವಿಜಯೇಚ್ಛಿಗಳಾದ ಪಾಂಚಾಲ ರಥರು ಧೃಷ್ಟದ್ಯುಮ್ನನನ್ನು ಬೇಗನೆ ಬಿಡಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಜಯದ್ರಥವಧ ಪರ್ವಣಿ ದ್ರೋಣಧೃಷ್ಟದ್ಯುಮ್ನಯುದ್ಧೇ ದ್ವಿಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಜಯದ್ರಥವಧ ಪರ್ವದಲ್ಲಿ ದ್ರೋಣಧೃಷ್ಟದ್ಯುಮ್ನಯುದ್ಧ ಎನ್ನುವ ಎಪ್ಪತ್ತೆರಡನೇ ಅಧ್ಯಾಯವು.