ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 72
ಸಾರ
ಧೃತರಾಷ್ಟ್ರನ ಚಿಂತೆ (1-26).
06072001 ಧೃತರಾಷ್ಟ್ರ ಉವಾಚ।
06072001a ಏವಂ ಬಹುಗುಣಂ ಸೈನ್ಯಮೇವಂ ಬಹುವಿಧಂ ಪರಂ।
06072001c ವ್ಯೂಢಮೇವಂ ಯಥಾಶಾಸ್ತ್ರಮಮೋಘಂ ಚೈವ ಸಂಜಯ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ನಮ್ಮ ಸೇನೆಯು ಅನೇಕ ಉತ್ತಮ ಗುಣಗಳನ್ನು ಹೊಂದಿದೆ. ಬಹುವಿಧವಾಗಿದೆ. ಶ್ರೇಷ್ಠವಾಗಿದೆ ಮತ್ತು ಯಥಾಶಾಸ್ತ್ರವಾಗಿ ವ್ಯೂಹದಲ್ಲಿ ರಚಿಸಲ್ಪಟ್ಟಿದೆ. ಅಮೋಘವಾಗಿದೆ.
06072002a ಪುಷ್ಟಮಸ್ಮಾಕಮತ್ಯಂತಮಭಿಕಾಮಂ ಚ ನಃ ಸದಾ।
06072002c ಪ್ರಹ್ವಮವ್ಯಸನೋಪೇತಂ ಪುರಸ್ತಾದ್ದೃಷ್ಟವಿಕ್ರಮಂ।।
ಇದು ನಮಗೆ ಅಂಟಿಕೊಂಡಿದೆ ಮತ್ತು ಸದಾ ನಮ್ಮ ಒಳಿತನ್ನೇ ಅತ್ಯಂತವಾಗಿ ಬಯಸುತ್ತಿದೆ. ಇದು ವಿನೀತವಾಗಿದೆ ಮತ್ತು ಕುಡಿತ ಮೊದಲಾದ ದುಶ್ಚಟಗಳಿಂದ ರಹಿತವಾಗಿದೆ.
06072003a ನಾತಿವೃದ್ಧಮಬಾಲಂ ಚ ನ ಕೃಶಂ ನ ಚ ಪೀವರಂ।
06072003c ಲಘುವೃತ್ತಾಯತಪ್ರಾಯಂ ಸಾರಗಾತ್ರಮನಾಮಯಂ।।
ಅತಿಯಾದ ವೃದ್ಧರೂ ಬಾಲಕರೂ ಸೇನೆಯಲ್ಲಿಲ್ಲ. ಕೃಶರಾದವರೂ ಅತಿದಪ್ಪನಾದವರೂ ಇಲ್ಲ. ಲಘುವಾಗಿದ್ದಾರೆ. ಸಾರ-ಗಾತ್ರ-ಪ್ರಾಯಗಳಲ್ಲಿ ಅನಾಮಯರಾಗಿದ್ದಾರೆ.
06072004a ಆತ್ತಸನ್ನಾಹಶಸ್ತ್ರಂ ಚ ಬಹುಶಸ್ತ್ರಪರಿಗ್ರಹಂ।
06072004c ಅಸಿಯುದ್ಧೇ ನಿಯುದ್ಧೇ ಚ ಗದಾಯುದ್ಧೇ ಚ ಕೋವಿದಂ।।
ಅವರು ಕವಚಗಳನ್ನೂ ಅಸ್ತ್ರಗಳನ್ನೂ ಅನೇಕ ಶಸ್ತ್ರಗಳನ್ನೂ ಹಿಡಿದು ಸನ್ನದ್ಧರಾಗಿದ್ದಾರೆ. ಅವರು ಖಡ್ಗಯುದ್ಧ, ಶಕ್ತಿಯುದ್ಧ ಮತ್ತು ಗದಾಯುದ್ಧಗಳಲ್ಲಿ ಕೋವಿದರಾಗಿದ್ದಾರೆ.
06072005a ಪ್ರಾಸರ್ಷ್ಟಿತೋಮರೇಷ್ವಾಜೌ ಪರಿಘೇಷ್ವಾಯಸೇಷು ಚ।
06072005c ಭಿಂಡಿಪಾಲೇಷು ಶಕ್ತೀಷು ಮುಸಲೇಷು ಚ ಸರ್ವಶಃ।।
06072006a ಕಂಪನೇಷು ಚ ಚಾಪೇಷು ಕಣಪೇಷು ಚ ಸರ್ವಶಃ।
06072006c ಕ್ಷೇಪಣೀಷು ಚ ಚಿತ್ರಾಸು ಮುಷ್ಟಿಯುದ್ಧೇಷು ಕೋವಿದಂ।।
ಪ್ರಾಸ-ಋಷ್ಟಿ-ತೋಮರಗಳಲ್ಲಿ ಪ್ರಣೀತರಾಗಿದ್ದಾರೆ. ಪರಿಘ-ಹಾರೆಕೋಲುಗಳಲ್ಲಿ, ಭಿಂಡಿಪಾಲಗಳಲ್ಲಿ, ಶಕ್ತಿ ಮುಸಲಗಳಲ್ಲಿ, ಕಂಪನಗಳಲ್ಲಿ, ಚಾಪಗಳಲ್ಲಿ, ಕಣಪಗಳಲ್ಲಿ, ಕ್ಷೇಪಣಿಗಳಲ್ಲಿ ಮತ್ತು ಚಿತ್ರ ಮುಷ್ಟಿಯುದ್ಧಗಳಲ್ಲಿ ಎಲ್ಲರೂ ಕೋವಿದರಾಗಿದ್ದಾರೆ.
06072007a ಅಪರೋಕ್ಷಂ ಚ ವಿದ್ಯಾಸು ವ್ಯಾಯಾಮೇಷು ಕೃತಶ್ರಮಂ।
06072007c ಶಸ್ತ್ರಗ್ರಹಣವಿದ್ಯಾಸು ಸರ್ವಾಸು ಪರಿನಿಷ್ಠಿತಂ।।
ಅಪರೋಕ್ಷವಿದ್ಯೆಯಲ್ಲಿ, ವ್ಯಾಯಾಮ ಕೃತಶ್ರಮಗಳಲ್ಲಿ, ಶಸ್ತ್ರಗಳ ವಿದ್ಯೆ ಎಲ್ಲವುಗಳಲ್ಲಿ ಪರಿಣಿತರಾಗಿದ್ದಾರೆ.
06072008a ಆರೋಹೇ ಪರ್ಯವಸ್ಕಂದೇ ಸರಣೇ ಸಾಂತರಪ್ಲುತೇ।
06072008c ಸಮ್ಯಕ್ಪ್ರಹರಣೇ ಯಾನೇ ವ್ಯಪಯಾನೇ ಚ ಕೋವಿದಂ।।
ಅವರು ಆನೆಗಳ ಮೇಲೆ ಏರುವುದರಲ್ಲಿ ಮತ್ತು ಅವುಗಳಿಂದ ಕೆಳಗೆ ಇಳಿಯುವುದರಲ್ಲಿ, ಮುಂದೆ ಹೋಗುವುದರಲ್ಲಿ ಮತ್ತು ಹಿಂದೆ ಸರಿಯುವುದರಲ್ಲಿ ಕೋವಿದರಾಗಿದ್ದಾರೆ.
06072009a ನಾಗಾಶ್ವರಥಯಾನೇಷು ಬಹುಶಃ ಸುಪರೀಕ್ಷಿತಂ।
06072009c ಪರೀಕ್ಷ್ಯ ಚ ಯಥಾನ್ಯಾಯಂ ವೇತನೇನೋಪಪಾದಿತಂ।।
06072010a ನ ಗೋಷ್ಠ್ಯಾ ನೋಪಚಾರೇಣ ನ ಚ ಬಂಧುನಿಮಿತ್ತತಃ।
06072010c ನ ಸೌಹೃದಬಲೈಶ್ಚಾಪಿ ನಾಕುಲೀನಪರಿಗ್ರಹೈಃ।।
ಆನೆ-ಅಶ್ವ-ರಥ ಯಾನಗಳಲ್ಲಿ ಬಹಳಷ್ಟು ಪರೀಕ್ಷಿಸಲ್ಪಟ್ಟಿದ್ದಾರೆ. ಯಥಾನ್ಯಾಯವಾಗಿ ಪರೀಕ್ಷಿಸಲ್ಪಟ್ಟೇ ವೇತನಗಳನ್ನು ನೀಡಲಾಗುತ್ತಿದೆ. ಅವರ ಕುಲಕ್ಕಾಗಿಯಾಗಲೀ, ಉಪಚಾರಕ್ಕಾಗಲೀ, ಬಂಧುವೆಂಬ ಕಾರಣದಿಂದಾಗಲೀ, ಸೌಹೃದಯರೆಂದಾಗಲೀ ಅಲ್ಲ.
06072011a ಸಮೃದ್ಧಜನಮಾರ್ಯಂ ಚ ತುಷ್ಟಸತ್ಕೃತಬಾಂಧವಂ।
06072011c ಕೃತೋಪಕಾರಭೂಯಿಷ್ಠಂ ಯಶಸ್ವಿ ಚ ಮನಸ್ವಿ ಚ।।
ಅವರೆಲ್ಲರೂ ಸಮೃದ್ಧರೂ ಆರ್ಯಜನರೂ ಆಗಿದ್ದಾರೆ. ಮತ್ತು ಅವರ ಬಾಂಧವರು ತುಷ್ಟರೂ ಸತ್ಕೃತರೂ ಆಗಿದ್ದಾರೆ. ತುಂಬಾ ಉಪಕಾರಗಳನ್ನು ಮಾಡಿದ್ದಾರೆ. ಯಶಸ್ವಿಗಳೂ ಮನಸ್ವಿಗಳೂ ಆಗಿದ್ದಾರೆ.
06072012a ಸಜಯೈಶ್ಚ ನರೈರ್ಮುಖ್ಯೈರ್ಬಹುಶೋ ಮುಖ್ಯಕರ್ಮಭಿಃ।
06072012c ಲೋಕಪಾಲೋಪಮೈಸ್ತಾತ ಪಾಲಿತಂ ಲೋಕವಿಶ್ರುತೈಃ।।
ಅಯ್ಯಾ! ಅವರೆಲ್ಲರೂ ಅನೇಕ ಮುಖ್ಯಕರ್ಮಗಳನ್ನು ಮಾಡಿರುವ ಜಯಶಾಲಿಗಳಾದ ಲೋಕಪಾಲಕರಂತಿರುವ ಲೋಕವಿಶ್ರುತ ನರಮುಖ್ಯರಿಂದ ಪಾಲಿತರಾಗಿದ್ದಾರೆ.
06072013a ಬಹುಭಿಃ ಕ್ಷತ್ರಿಯೈರ್ಗುಪ್ತಂ ಪೃಥಿವ್ಯಾಂ ಲೋಕಸಮ್ಮತೈಃ।
06072013c ಅಸ್ಮಾನಭಿಗತೈಃ ಕಾಮಾತ್ಸಬಲೈಃ ಸಪದಾನುಗೈಃ।।
ಭೂಮಿಯ ಅನೇಕ ಲೋಕಸಮ್ಮತ ಕ್ಷತ್ರಿಯರು ಬಯಸಿಯೇ ರಕ್ಷಣೆಗೆಂದು ನಮ್ಮಕಡೆ ಸಸೇನೆ ಸಪದಾನುಗರೊಂದಿಗೆ ಬಂದಿದ್ದಾರೆ.
06072014a ಮಹೋದಧಿಮಿವಾಪೂರ್ಣಮಾಪಗಾಭಿಃ ಸಮಂತತಃ।
06072014c ಅಪಕ್ಷೈಃ ಪಕ್ಷಸಂಕಾಶೈ ರಥೈರ್ನಾಗೈಶ್ಚ ಸಂವೃತಂ।।
ನಮ್ಮ ಸೇನೆಯು ಎಲ್ಲಕಡೆಯಿಂದ ಹರಿದುಬಂದ ನದಿಗಳು ಸೇರುವ ಮಹಾಸಾಗರದಂತಿದೆ. ರಥ-ಆನೆಗಳಿಂದ ತುಂಬಿಕೊಂಡು ರೆಕ್ಕೆಗಳಿಲ್ಲದೆಯೂ ಹಾರಿಹೋಗಬಲ್ಲ ಪಕ್ಷಿಯಂತಿದೆ.
06072015a ನಾನಾಯೋಧಜಲಂ ಭೀಮಂ ವಾಹನೋರ್ಮಿತರಂಗಿಣಂ।
06072015c ಕ್ಷೇಪಣ್ಯಸಿಗದಾಶಕ್ತಿಶರಪ್ರಾಸಸಮಾಕುಲಂ।।
ನಾನಾ ಯೋಧರು ನೀರಿನಂತೆ, ವಾಹನಗಳು ಭೀಕರ ತರಂಗಗಳಂತೆ. ಖಡ್ಗ, ಗದೆ, ಶಕ್ತಿ, ಪ್ರಾಸ ಸಮಾಕುಲಗಳು ಹುಟ್ಟಿನಂತಿವೆ.
06072016a ಧ್ವಜಭೂಷಣಸಂಬಾಧಂ ರತ್ನಪಟ್ಟೇನ ಸಂಚಿತಂ।
06072016c ವಾಹನೈಃ ಪರಿಸರ್ಪದ್ಭಿರ್ವಾಯುವೇಗವಿಕಂಪಿತಂ।।
ಧ್ವಜ ಭೂಷಣಗಳು, ರತ್ನಗಳ ಪಟ್ಟಿಗಳು ಮತ್ತು ವಾಹನಗಳ ಪರಿಸರ್ಪಗಳು ವಾಯುವೇಗಗಳಂತಿವೆ.
06072017a ಅಪಾರಮಿವ ಗರ್ಜಂತಂ ಸಾಗರಪ್ರತಿಮಂ ಮಹತ್।
06072017c ದ್ರೋಣಭೀಷ್ಮಾಭಿಸಂಗುಪ್ತಂ ಗುಪ್ತಂ ಚ ಕೃತವರ್ಮಣಾ।।
06072018a ಕೃಪದುಃಶಾಸನಾಭ್ಯಾಂ ಚ ಜಯದ್ರಥಮುಖೈಸ್ತಥಾ।
06072018c ಭಗದತ್ತವಿಕರ್ಣಾಭ್ಯಾಂ ದ್ರೌಣಿಸೌಬಲಬಾಹ್ಲಿಕೈಃ।।
ಗರ್ಜಿಸುವ ಮಹಾ ಸಾಗರದಂತೆ ಅಪಾರವಾಗಿರುವ ಈ ಸೇನೆಯನ್ನು ದ್ರೋಣ-ಭೀಷ್ಮಾದಿಗಳು ರಕ್ಷಿಸುತ್ತಿದ್ದಾರೆ. ಕೃತವರ್ಮ, ಕೃಪ, ದುಃಶಾಸನ, ಜಯದ್ರಥ, ಭಗದತ್ತ, ವಿಕರ್ಣ, ದ್ರೌಣಿ, ಸೌಬಲ, ಬಾಹ್ಲೀಕರಿಂದ ರಕ್ಷಣೆಗೊಂಡಿದೆ.
06072019a ಗುಪ್ತಂ ಪ್ರವೀರೈರ್ಲೋಕಸ್ಯ ಸಾರವದ್ಭಿರ್ಮಹಾತ್ಮಭಿಃ।
06072019c ಯದಹನ್ಯತ ಸಂಗ್ರಾಮೇ ದಿಷ್ಟಮೇತತ್ಪುರಾತನಂ।।
ಲೋಕದ ಪ್ರವೀರರಿಂದ, ಶಕ್ತಿಮಂತ ಮಹಾತ್ಮರಿಂದ ರಕ್ಷಿಸಲ್ಪಟ್ಟಿದ್ದರೂ ಈ ಸೇನೆಯು ಸಂಗ್ರಾಮದಲ್ಲಿ ಹತವಾಗುತ್ತಿದೆಯೆಂದರೆ ಇದು ಮೊದಲೇ ನಿರ್ಧರಿಸಲ್ಪಟ್ಟ ದೈವವೇ ಸರಿ.
06072020a ನೈತಾದೃಶಂ ಸಮುದ್ಯೋಗಂ ದೃಷ್ಟವಂತೋಽಥ ಮಾನುಷಾಃ।
06072020c ಋಷಯೋ ವಾ ಮಹಾಭಾಗಾಃ ಪುರಾಣಾ ಭುವಿ ಸಂಜಯ।।
ಸಂಜಯ! ಮನುಷ್ಯರಾಗಲೀ ಮಹಾಭಾಗ ಋಷಿಗಳಾಗಲೀ ಭೂಮಿಯ ಮೇಲೆ ಇಷ್ಟು ಅಪಾರ ಸೇನಾಸಂಗ್ರಹವನ್ನು ಈ ಹಿಂದೆ ನೋಡಿಯೇ ಇರಲಿಲ್ಲ.
06072021a ಈದೃಶೋ ಹಿ ಬಲೌಘಸ್ತು ಯುಕ್ತಃ ಶಸ್ತ್ರಾಸ್ತ್ರಸಂಪದಾ।
06072021c ವಧ್ಯತೇ ಯತ್ರ ಸಂಗ್ರಾಮೇ ಕಿಮನ್ಯದ್ಭಾಗಧೇಯತಃ।।
ಶಸ್ತ್ರಾಸ್ತ್ರಸಂಪದ ಬಲದಿಂದ ಕೂಡಿದ ಈ ಸೇನೆಯೂ ಕೂಡ ಸಂಗ್ರಾಮದಲ್ಲಿ ವಧಿಸಲ್ಪಡುತ್ತಿದೆಯೆಂದರೆ ಇದು ಕೇವಲ ಅದೃಷ್ಟದ ವಿಷಯವಲ್ಲದೇ ಮತ್ತೇನು?
06072022a ವಿಪರೀತಮಿದಂ ಸರ್ವಂ ಪ್ರತಿಭಾತಿ ಸ್ಮ ಸಂಜಯ।
06072022c ಯತ್ರೇದೃಶಂ ಬಲಂ ಘೋರಂ ನಾತರದ್ಯುಧಿ ಪಾಂಡವಾನ್।।
ಸಂಜಯ! ಈ ಬಲವಾದ ಘೋರ ಸೇನೆಯು ಪಾಂಡವರನ್ನು ಮೀರಲಿಕ್ಕಾಗಲಿಲ್ಲ ಎಂದರೆ ನನಗೆ ಎಲ್ಲವೂ ವಿಪರೀತವಾಗಿಯೇ ತೋರುತ್ತಿವೆ.
06072023a ಅಥ ವಾ ಪಾಂಡವಾರ್ಥಾಯ ದೇವಾಸ್ತತ್ರ ಸಮಾಗತಾಃ।
06072023c ಯುಧ್ಯಂತೇ ಮಾಮಕಂ ಸೈನ್ಯಂ ಯದವಧ್ಯಂತ ಸಂಜಯ।।
ಸಂಜಯ! ಅಥವಾ ಅಲ್ಲಿ ಸಮಾಗತರಾಗಿರುವ ದೇವತೆಗಳು ಹೋರಾಡುತ್ತಿರುವ ನನ್ನ ಸೇನೆಯೊಂದಿಗೆ ಯುದ್ಧ ಮಾಡುತ್ತಿದ್ದಾರೆ.
06072024a ಉಕ್ತೋ ಹಿ ವಿದುರೇಣೇಹ ಹಿತಂ ಪಥ್ಯಂ ಚ ಸಂಜಯ।
06072024c ನ ಚ ಗೃಹ್ಣಾತಿ ತನ್ಮಂದಃ ಪುತ್ರೋ ದುರ್ಯೋಧನೋ ಮಮ।।
ಸಂಜಯ! ವಿದುರನು ಹಿತವೂ ಪಥ್ಯವೂ ಆದುದನ್ನು ಹೇಳಿದ್ದನು, ಆದರೆ ನನ್ನ ಮಂದ ಮಗ ದುರ್ಯೋಧನನು ಅವುಗಳನ್ನು ಸ್ವೀಕರಿಸಲಿಲ್ಲ.
06072025a ತಸ್ಯ ಮನ್ಯೇ ಮತಿಃ ಪೂರ್ವಂ ಸರ್ವಜ್ಞಸ್ಯ ಮಹಾತ್ಮನಃ।
06072025c ಆಸೀದ್ಯಥಾಗತಂ ತಾತ ಯೇನ ದೃಷ್ಟಮಿದಂ ಪುರಾ।।
ಅಯ್ಯಾ! ಆ ಸರ್ವಜ್ಞ ಮಹಾತ್ಮನಿಗೆ ಹೀಗಾಗುವುದೆಂದು ಮೊದಲೇ ತಿಳಿದಿತ್ತು. ಇಂದು ಏನು ನಡೆಯುತ್ತಿದೆಯೋ ಅದು ಅವನ ದೃಷ್ಟಿಗೆ ಮೊದಲೇ ಗೋಚರವಾಗಿತ್ತು.
06072026a ಅಥ ವಾ ಭಾವ್ಯಮೇವಂ ಹಿ ಸಂಜಯೈತೇನ ಸರ್ವಥಾ।
06072026c ಪುರಾ ಧಾತ್ರಾ ಯಥಾ ಸೃಷ್ಟಂ ತತ್ತಥಾ ನ ತದನ್ಯಥಾ।।
ಅಥವಾ ಸಂಜಯ! ಇದು ಹೀಗೆಯೇ ಆಗಬೇಕೆಂದಿತ್ತೋ ಏನೋ ಯಾರು ಬಲ್ಲರು? ಹಿಂದೆ ಧಾತ್ರನು ಹೇಗೆ ಸೃಷ್ಟಿಸಿದ್ದನೋ ಹಾಗೆಯೇ ಆಗುತ್ತದೆಯಲ್ಲದೇ ಅನ್ಯಥಾ ಆಗುವುದಿಲ್ಲ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಧೃತರಾಷ್ಟ್ರಚಿಂತಾಯಾಂ ದ್ವಿಸಪ್ತತಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಧೃತರಾಷ್ಟ್ರಚಿಂತೆ ಎನ್ನುವ ಎಪ್ಪತ್ತೆರಡನೇ ಅಧ್ಯಾಯವು.