ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 66
ಸಾರ
ಮಿಶ್ರ ಯುದ್ಧ (1-22).
06066001 ಸಂಜಯ ಉವಾಚ।
06066001a ಅಕರೋತ್ತುಮುಲಂ ಯುದ್ಧಂ ಭೀಷ್ಮಃ ಶಾಂತನವಸ್ತದಾ।
06066001c ಭೀಮಸೇನಭಯಾದಿಚ್ಛನ್ಪುತ್ರಾಂಸ್ತಾರಯಿತುಂ ತವ।।
ಸಂಜಯನು ಹೇಳಿದನು: “ನಿನ್ನ ಪುತ್ರರನ್ನು ಭೀಮಸೇನನ ಭಯದಿಂದ ಪಾರುಗೊಳಿಸಲು ಬಯಸಿ ಭೀಷ್ಮ ಶಾಂತನವನು ತುಮುಲ ಯುದ್ಧವನ್ನು ಮಾಡಿದನು.
06066002a ಪೂರ್ವಾಹ್ಣೇ ತನ್ಮಹಾರೌದ್ರಂ ರಾಜ್ಞಾಂ ಯುದ್ಧಮವರ್ತತ।
06066002c ಕುರೂಣಾಂ ಪಾಂಡವಾನಾಂ ಚ ಮುಖ್ಯಶೂರವಿನಾಶನಂ।।
ಆ ಪೂರ್ವಾಹ್ಣದಲ್ಲಿ ಶೂರಮುಖ್ಯರ ವಿನಾಶಕಾರಕ ಮಹಾರೌದ್ರ ಯುದ್ಧವು ಕುರು ಮತ್ತು ಪಾಂಡವ ರಾಜರ ನಡುವೆ ನಡೆಯಿತು.
06066003a ತಸ್ಮಿನ್ನಾಕುಲಸಂಗ್ರಾಮೇ ವರ್ತಮಾನೇ ಮಹಾಭಯೇ।
06066003c ಅಭವತ್ತುಮುಲಃ ಶಬ್ದಃ ಸಂಸ್ಪೃಶನ್ಗಗನಂ ಮಹತ್।।
ಆ ಮಹಾಭಯಂಕರ ಮಿಶ್ರ ಸಂಗ್ರಾಮವು ನಡೆಯುತ್ತಿರಲು ಗಗನವನ್ನು ಮುಟ್ಟುವ ಮಹಾ ತುಮುಲ ಶಬ್ಧವು ಉಂಟಾಯಿತು.
06066004a ನದದ್ಭಿಶ್ಚ ಮಹಾನಾಗೈರ್ಹೇಷಮಾಣೈಶ್ಚ ವಾಜಿಭಿಃ।
06066004c ಭೇರೀಶಂಖನಿನಾದೈಶ್ಚ ತುಮುಲಃ ಸಮಪದ್ಯತ।।
ಮಹಾ ಆನೆಗಳ ಘೀಳು, ಕುದುರೆಗಳ ಹೇಷಾವರ, ಭೇರಿ-ಶಂಖಗಳ ನಾದದ ತುಮುಲ ಶಬ್ಧವು ಉಂಟಾಯಿತು.
06066005a ಯುಯುತ್ಸವಸ್ತೇ ವಿಕ್ರಾಂತಾ ವಿಜಯಾಯ ಮಹಾಬಲಾಃ।
06066005c ಅನ್ಯೋನ್ಯಮಭಿಗರ್ಜಂತೋ ಗೋಷ್ಠೇಷ್ವಿವ ಮಹರ್ಷಭಾಃ।।
ವಿಜಯಕ್ಕಾಗಿ ವಿಕ್ರಾಂತರಾಗಿ ಯುದ್ಧಮಾಡುತ್ತಿದ್ದ ಮಹಾಬಲ ಮಹರ್ಷಭರು ಕೊಟ್ಟಿಗೆಯಲ್ಲಿ ಗೂಳಿಗಳಂತೆ ಅನ್ಯೋನ್ಯರ ಮೇಲೆ ಗರ್ಜಿಸುತ್ತಿದ್ದರು.
06066006a ಶಿರಸಾಂ ಪಾತ್ಯಮಾನಾನಾಂ ಸಮರೇ ನಿಶಿತೈಃ ಶರೈಃ।
06066006c ಅಶ್ಮವೃಷ್ಟಿರಿವಾಕಾಶೇ ಬಭೂವ ಭರತರ್ಷಭ।।
ಭರತರ್ಷಭ! ಸಮರದಲ್ಲಿ ತಲೆಯ ಮೇಲೆ ಬೀಳುತ್ತಿದ್ದ ನಿಶಿತ ಬಾಣಗಳು ಆಕಾಶದಿಂದ ಬೀಳುವ ಕಲ್ಲಿನ ಮಳೆಗಳಂತಿದ್ದವು.
06066007a ಕುಂಡಲೋಷ್ಣೀಷಧಾರೀಣಿ ಜಾತರೂಪೋಜ್ಜ್ವಲಾನಿ ಚ।
06066007c ಪತಿತಾನಿ ಸ್ಮ ದೃಶ್ಯಂತೇ ಶಿರಾಂಸಿ ಭರತರ್ಷಭ।।
ಭರತರ್ಷಭ! ಹೊಳೆಯುವ ಬಂಗಾರದ ಕುಂಡಲ-ಕಿರೀಟಗಳನ್ನು ಧರಿಸಿದ್ದ ಶಿರಗಳು ಬೀಳುತ್ತಿರುವುದು ಕಾಣುತ್ತಿತ್ತು.
06066008a ವಿಶಿಖೋನ್ಮಥಿತೈರ್ಗಾತ್ರೈರ್ಬಾಹುಭಿಶ್ಚ ಸಕಾರ್ಮುಕೈಃ।
06066008c ಸಹಸ್ತಾಭರಣೈಶ್ಚಾನ್ಯೈರಭವಚ್ಚಾದಿತಾ ಮಹೀ।।
ವಿಶಿಖಗಳಿಂದ ಕತ್ತರಿಸಲ್ಪಟ್ಟ ದೇಹಗಳು, ಬಾಹುಗಳು, ಕಾರ್ಮುಕಗಳು, ಆಭರಣಗಳೊಂದಿಗೆ ಕೈಗಳು ಇವುಗಳಿಂದ ಭೂಮಿಯು ಮುಚ್ಚಿ ಹೋಯಿತು.
06066009a ಕವಚೋಪಹಿತೈರ್ಗಾತ್ರೈರ್ಹಸ್ತೈಶ್ಚ ಸಮಲಂಕೃತೈಃ।
06066009c ಮುಖೈಶ್ಚ ಚಂದ್ರಸಂಕಾಶೈ ರಕ್ತಾಂತನಯನೈಃ ಶುಭೈಃ।।
06066010a ಗಜವಾಜಿಮನುಷ್ಯಾಣಾಂ ಸರ್ವಗಾತ್ರೈಶ್ಚ ಭೂಪತೇ।
06066010c ಆಸೀತ್ಸರ್ವಾ ಸಮಾಕೀರ್ಣಾ ಮುಹೂರ್ತೇನ ವಸುಂಧರಾ।।
ಭೂಪತೇ! ಮುಹೂರ್ತದಲ್ಲಿ ವಸುಂಧರೆಯ ಮೇಲೆ ಕವಚಗಳು ಅಪ್ಪಿರುವ ದೇಹಗಳು, ಸಮಲಂಕೃತ ಕೈಗಳು, ಚಂದ್ರಸಂಕಾಶ ಮುಖಗಳು, ರಕ್ತಾಂತ ಶುಭ ನಯನಗಳು, ಗಜ-ವಾಜಿ-ಮನುಷ್ಯರೆಲ್ಲರ ದೇಹಗಳು ಎಲ್ಲ ಕಡೆ ಹರಡಿ ಹೋಗಿತ್ತು.
06066011a ರಜೋಮೇಘೈಶ್ಚ ತುಮುಲೈಃ ಶಸ್ತ್ರವಿದ್ಯುತ್ಪ್ರಕಾಶಿತೈಃ।
06066011c ಆಯುಧಾನಾಂ ಚ ನಿರ್ಘೋಷಃ ಸ್ತನಯಿತ್ನುಸಮೋಽಭವತ್।।
ಧೂಳು ಮೋಡಗಳಂತೆಯೂ ತುಮುಲ ಶಸ್ತ್ರಗಳು ಮಿಂಚಿನಂತೆಯೂ ಪ್ರಕಾಶಿಸಿದವು. ಆಯುಧಗಳ ನಿರ್ಘೋಷವು ಗುಡುಗಿನಂತೆ ಕೇಳಿದವು.
06066012a ಸ ಸಂಪ್ರಹಾರಸ್ತುಮುಲಃ ಕಟುಕಃ ಶೋಣಿತೋದಕಃ।
06066012c ಪ್ರಾವರ್ತತ ಕುರೂಣಾಂ ಚ ಪಾಂಡವಾನಾಂ ಚ ಭಾರತ।।
ಭಾರತ! ಕುರುಗಳ ಮತ್ತು ಪಾಂಡವರ ಆ ಕಟುಕ ಸಂಪ್ರಹಾರ ತುಮುಲವು ರಕ್ತವೇ ನೀರಾಗಿರುವ ನದಿಯನ್ನೇ ಹರಿಸಿತು.
06066013a ತಸ್ಮಿನ್ಮಹಾಭಯೇ ಘೋರೇ ತುಮುಲೇ ಲೋಮಹರ್ಷಣೇ।
06066013c ವವರ್ಷುಃ ಶರವರ್ಷಾಣಿ ಕ್ಷತ್ರಿಯಾ ಯುದ್ಧದುರ್ಮದಾಃ।।
ಆ ಮಹಾಭಯಂಕರ ಲೋಮಹರ್ಷಣ ಘೋರ ತುಮುಲದಲ್ಲಿ ಯುದ್ಧದುರ್ಮದ ಕ್ಷತ್ರಿಯರು ಶರಗಳ ಮಳೆಯನ್ನೇ ಸುರಿಸಿದರು.
06066014a ಕ್ರೋಶಂತಿ ಕುಂಜರಾಸ್ತತ್ರ ಶರವರ್ಷಪ್ರತಾಪಿತಾಃ।
06066014c ತಾವಕಾನಾಂ ಪರೇಷಾಂ ಚ ಸಂಯುಗೇ ಭರತೋತ್ತಮ।
ಭರತೋತ್ತಮ! ಸಂಯುಗದಲ್ಲಿ ಶರವರ್ಷದಿಂದ ಪೀಡಿತರಾದ ನಿನ್ನ ಮತ್ತು ಅವರ ಕಡೆಯ ಆನೆಗಳು ಚೀರಿಕೊಳ್ಳುತ್ತಿದ್ದವು.
06066014e ಅಶ್ವಾಶ್ಚ ಪರ್ಯಧಾವಂತ ಹತಾರೋಹಾ ದಿಶೋ ದಶ।।
06066015a ಉತ್ಪತ್ಯ ನಿಪತಂತ್ಯನ್ಯೇ ಶರಘಾತಪ್ರಪೀಡಿತಾಃ।
ಆರೋಹಿಗಳನ್ನು ಕಳೆದುಕೊಂಡ ಶರಘಾತ ಪೀಡಿತ ಕುದುರೆಗಳು ಹತ್ತೂ ದಿಕ್ಕುಗಳಲ್ಲಿ ಓಡಿ, ಹಾರಿ, ಇನ್ನು ಕೆಲವು ಬೀಳುತ್ತಿದ್ದವು.
06066015c ತಾವಕಾನಾಂ ಪರೇಷಾಂ ಚ ಯೋಧಾನಾಂ ಭರತರ್ಷಭ।।
06066016a ಅಶ್ವಾನಾಂ ಕುಂಜರಾಣಾಂ ಚ ರಥಾನಾಂ ಚಾತಿವರ್ತತಾಂ।
06066016c ಸಂಘಾತಾಃ ಸ್ಮ ಪ್ರದೃಶ್ಯಂತೇ ತತ್ರ ತತ್ರ ವಿಶಾಂ ಪತೇ।।
ಭರತರ್ಷಭ! ವಿಶಾಂಪತೇ! ಅಲ್ಲಲ್ಲಿ ಪಲಾಯನ ಮಾಡುತ್ತಿದ್ದ ಅಥವಾ ಹೊಡೆದು ಬಿದ್ದಿದ್ದ ನಿನ್ನ ಮತ್ತು ಅವರ ಕಡೆಯ ಯೋಧರು, ಕುದುರೆಗಳು, ಆನೆಗಳು, ರಥಗಳು ಕಂಡುಬಂದವು.
06066017a ಗದಾಭಿರಸಿಭಿಃ ಪ್ರಾಸೈರ್ಬಾಣೈಶ್ಚ ನತಪರ್ವಭಿಃ।
06066017c ಜಘ್ನುಃ ಪರಸ್ಪರಂ ತತ್ರ ಕ್ಷತ್ರಿಯಾಃ ಕಾಲಚೋದಿತಾಃ।।
ಕಾಲಚೋದಿತ ಕ್ಷತ್ರಿಯರು ಅಲ್ಲಿ ಗದೆ, ಖಡ್ಗ, ಪ್ರಾಸ, ನತಪರ್ವ ಬಾಣಗಳಿಂದ ಪರಸ್ಪರರನ್ನು ಕೊಂದರು.
06066018a ಅಪರೇ ಬಾಹುಭಿರ್ವೀರಾ ನಿಯುದ್ಧಕುಶಲಾ ಯುಧಿ।
06066018c ಬಹುಧಾ ಸಮಸಜ್ಜಂತ ಆಯಸೈಃ ಪರಿಘೈರಿವ।।
ಇನ್ನು ಕೆಲವು ಯುದ್ಧ ಕುಶಲ ವೀರರು ಯುದ್ಧದಲ್ಲಿ ಉಕ್ಕಿನ ಪರಿಘಗಳಂತಿರುವ ಬಾಹುಗಳಿಂದಲೇ ಹಲವರನ್ನು ಜಜ್ಜಿ ಹಾಕಿದರು.
06066019a ಮುಷ್ಟಿಭಿರ್ಜಾನುಭಿಶ್ಚೈವ ತಲೈಶ್ಚೈವ ವಿಶಾಂ ಪತೇ।
06066019c ಅನ್ಯೋನ್ಯಂ ಜಘ್ನಿರೇ ವೀರಾಸ್ತಾವಕಾಃ ಪಾಂಡವೈಃ ಸಹ।।
ವಿಶಾಂಪತೇ! ನಿನ್ನವರ ಮತ್ತು ಪಾಂಡವರ ವೀರರು ಮುಷ್ಟಿಗಳಿಂದ, ಒದೆಗಳಿಂದ, ಹೊಡೆತದಿಂದ ಅನ್ಯೋನ್ಯರನ್ನು ಸಂಹರಿಸಿದರು.
06066020a ವಿರಥಾ ರಥಿನಶ್ಚಾತ್ರ ನಿಸ್ತ್ರಿಂಶವರಧಾರಿಣಃ।
06066020c ಅನ್ಯೋನ್ಯಮಭಿಧಾವಂತ ಪರಸ್ಪರವಧೈಷಿಣಃ।।
ಅಲ್ಲಿ ವಿರಥರೂ ಮತ್ತು ರಥಿಗಳೂ ಶ್ರೇಷ್ಠ ಖಡ್ಗಗಳನ್ನು ಹಿಡಿದು ಪರಸ್ಪರರನ್ನು ದ್ವೇಷಿಸಿ ಅನ್ಯೋನ್ಯರನ್ನು ಹೊಡೆಯತ್ತಿದ್ದರು.
06066021a ತತೋ ದುರ್ಯೋಧನೋ ರಾಜಾ ಕಲಿಂಗೈರ್ಬಹುಭಿರ್ವೃತಃ।
06066021c ಪುರಸ್ಕೃತ್ಯ ರಣೇ ಭೀಷ್ಮಂ ಪಾಂಡವಾನಭ್ಯವರ್ತತ।।
ಆಗ ರಾಜಾ ದುರ್ಯೋಧನನು ಅನೇಕ ಕಲಿಂಗರಿಂದ ಆವೃತನಾಗಿ ರಣದಲ್ಲಿ ಭೀಷ್ಮನನ್ನು ಮುಂದಿರಿಸಿಕೊಂಡು ಪಾಂಡವರ ಮೇಲೆ ಎರಗಿದನು.
06066022a ತಥೈವ ಪಾಂಡವಾಃ ಸರ್ವೇ ಪರಿವಾರ್ಯ ವೃಕೋದರಂ।
06066022c ಭೀಷ್ಮಮಭ್ಯದ್ರವನ್ಕ್ರುದ್ಧಾ ರಣೇ ರಭಸವಾಹನಾಃ।।
ಹಾಗೆಯೇ ಪಾಂಡವರೆಲ್ಲರೂ ವೃಕೋದರನನ್ನು ಸುತ್ತುವರೆದು ರಭಸ ವಾಹನರಾಗಿ ಕ್ರುದ್ಧರಾಗಿ ಭೀಷ್ಮನನ್ನು ಎದುರಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಸಂಕುಲಯುದ್ಧೇ ಷಟ್ಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಸಂಕುಲಯುದ್ಧ ಎನ್ನುವ ಅರವತ್ತಾರನೇ ಅಧ್ಯಾಯವು.