ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 63
ಸಾರ
ದುರ್ಯೋಧನನ ಪ್ರಶ್ನೆಗೆ ಭೀಷ್ಮನು ಹಿಂದೆ ಮಾರ್ಕಂಡೇಯನು ಹೇಳಿದ್ದ ವಾಸುದೇವನ ಆಗಮ-ಪ್ರತಿಷ್ಠೆಗಳ ಕುರಿತು ಹೇಳಿದುದು (1-21).
06063001 ದುರ್ಯೋಧನ ಉವಾಚ।
06063001a ವಾಸುದೇವೋ ಮಹದ್ಭೂತಂ ಸರ್ವಲೋಕೇಷು ಕಥ್ಯತೇ।
06063001c ತಸ್ಯಾಗಮಂ ಪ್ರತಿಷ್ಠಾಂ ಚ ಜ್ಞಾತುಮಿಚ್ಛೇ ಪಿತಾಮಹ।।
ದುರ್ಯೋಧನನು ಹೇಳಿದನು: “ವಾಸುದೇವನು ಮಹಾಭೂತನೆಂದು ಸರ್ವಲೋಕಗಳಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಪಿತಾಮಹ! ಅವನ ಆಗಮ ಮತ್ತು ಪ್ರತಿಷ್ಠೆಗಳನ್ನು ತಿಳಿಯಲು ಬಯಸುತ್ತೇನೆ.”
06063002 ಭೀಷ್ಮ ಉವಾಚ।
06063002a ವಾಸುದೇವೋ ಮಹದ್ಭೂತಂ ಸಂಭೂತಂ ಸಹ ದೈವತೈಃ।
06063002c ನ ಪರಂ ಪುಂಡರೀಕಾಕ್ಷಾದ್ದೃಶ್ಯತೇ ಭರತರ್ಷಭ।
06063002e ಮಾರ್ಕಂಡೇಯಶ್ಚ ಗೋವಿಂದಂ ಕಥಯತ್ಯದ್ಭುತಂ ಮಹತ್।।
ಭೀಷ್ಮನು ಹೇಳಿದನು: “ಭರತರ್ಷಭ! ವಾಸುದೇವನು ದೇವತೆಗಳೊಂದಿಗೆ ಅವತರಿಸಿದ ಮಹಾಭೂತ. ಪುಂಡರೀಕಾಕ್ಷನಿಗಿಂತಲೂ ಹೆಚ್ಚಿನವನು ಯಾರೂ ಕಾಣುವುದಿಲ್ಲ. ಮಾರ್ಕಂಡೇಯನೂ ಕೂಡ ಗೋವಿಂದನ ಕುರಿತಾದ ಮಹಾ ಅದ್ಭುತವಾದುದನ್ನು ಹೇಳಿದ್ದಾನೆ.
06063003a ಸರ್ವಭೂತಾನಿ ಭೂತಾತ್ಮಾ ಮಹಾತ್ಮಾ ಪುರುಷೋತ್ತಮಃ।
06063003c ಆಪೋ ವಾಯುಶ್ಚ ತೇಜಶ್ಚ ತ್ರಯಮೇತದಕಲ್ಪಯತ್।।
“ಭೂತಾತ್ಮ ಮಹಾತ್ಮ ಪುರುಷೋತ್ತಮನು ಸರ್ವಭೂತಗಳನ್ನೂ, ಆಪ-ವಾಯು-ತೇಜಸ್ಸುಗಳನ್ನೂ ಸೃಷ್ಟಿಸಿದನು.
06063004a ಸ ಸೃಷ್ಟ್ವಾ ಪೃಥಿವೀಂ ದೇವಃ ಸರ್ವಲೋಕೇಶ್ವರಃ ಪ್ರಭುಃ।
06063004c ಅಪ್ಸು ವೈ ಶಯನಂ ಚಕ್ರೇ ಮಹಾತ್ಮಾ ಪುರುಷೋತ್ತಮಃ।
06063004e ಸರ್ವತೋಯಮಯೋ ದೇವೋ ಯೋಗಾತ್ಸುಷ್ವಾಪ ತತ್ರ ಹ।।
ಆ ದೇವ ಸರ್ವಲೋಕೇಶ್ವರ ಪ್ರಭುವು ಪೃಥ್ವಿಯನ್ನು ಸೃಷ್ಟಿಸಿ ನೀರಿನಲ್ಲಿ ಪವಡಿಸಿದನು. ಆ ಮಹಾತ್ಮ ಪುರುಷೋತ್ತಮನು ಸರ್ವತೋಮಯ ದೇವ ಯೋಗದಿಂದ ಅಲ್ಲಿಯೇ ನಿದ್ರಿತನಾದನು.
06063005a ಮುಖತಃ ಸೋಽಗ್ನಿಮಸೃಜತ್ಪ್ರಾಣಾದ್ವಾಯುಮಥಾಪಿ ಚ।
06063005c ಸರಸ್ವತೀಂ ಚ ವೇದಾಂಶ್ಚ ಮನಸಃ ಸಸೃಜೇಽಚ್ಯುತಃ।।
ಅಚ್ಯುತನು ಮುಖದಿಂದ ಅಗ್ನಿಯನ್ನೂ, ಪ್ರಾಣದಿಂದ ವಾಯುವನ್ನೂ, ಮನಸ್ಸಿನಿಂದ ಸರಸ್ವತೀ ಮತ್ತು ವೇದಗಳನ್ನೂ ಸೃಷ್ಟಿಸಿದನು.
06063006a ಏಷ ಲೋಕಾನ್ಸಸರ್ಜಾದೌ ದೇವಾಂಶ್ಚರ್ಷಿಗಣೈಃ ಸಹ।
06063006c ನಿಧನಂ ಚೈವ ಮೃತ್ಯುಂ ಚ ಪ್ರಜಾನಾಂ ಪ್ರಭವೋಽವ್ಯಯಃ।।
ಪ್ರಭು ಅವ್ಯಯನು ಆದಿಯಲ್ಲಿ ದೇವ-ಋಷಿಗಣಗಳೊಂದಿಗೆ ಈ ಲೋಕಗಳನ್ನೂ, ನಿಧನ, ಮೃತ್ಯುಗಳನ್ನೂ, ಪ್ರಜೆಗಳನ್ನೂ ಸೃಷ್ಟಿಸಿದನು.
06063007a ಏಷ ಧರ್ಮಶ್ಚ ಧರ್ಮಜ್ಞೋ ವರದಃ ಸರ್ವಕಾಮದಃ।
06063007c ಏಷ ಕರ್ತಾ ಚ ಕಾರ್ಯಂ ಚ ಪೂರ್ವದೇವಃ ಸ್ವಯಂಪ್ರಭುಃ।।
ಇವನು ಧರ್ಮ, ಧರ್ಮಜ್ಞ, ವರದ, ಸರ್ವಕಾಮದ. ಇವನು ಕರ್ತನೂ ಕಾರ್ಯನೂ ಹೌದು. ಇವನು ಪೂರ್ವದೇವ. ಸ್ವಯಂ ಪ್ರಭು.
06063008a ಭೂತಂ ಭವ್ಯಂ ಭವಿಷ್ಯಚ್ಚ ಪೂರ್ವಮೇತದಕಲ್ಪಯತ್।
06063008c ಉಭೇ ಸಂಧ್ಯೇ ದಿಶಃ ಖಂ ಚ ನಿಯಮಂ ಚ ಜನಾರ್ದನಃ।।
ಜನಾರ್ದನನು ಮೊದಲೇ ಭೂತ, ಭವ್ಯ ಮತ್ತು ಭವಿಷ್ಯಗಳನ್ನು, ಎರಡೂ ಸಂಧ್ಯೆಗಳನ್ನು, ದಿಕ್ಕು, ಆಕಾಶ ಮತ್ತು ನಿಯಮಗಳನ್ನು ಸೃಷ್ಟಿಸಿದನು.
06063009a ಋಷೀಂಶ್ಚೈವ ಹಿ ಗೋವಿಂದಸ್ತಪಶ್ಚೈವಾನು ಕಲ್ಪಯತ್।
06063009c ಸ್ರಷ್ಟಾರಂ ಜಗತಶ್ಚಾಪಿ ಮಹಾತ್ಮಾ ಪ್ರಭುರವ್ಯಯಃ।।
ಜಗತ್ತುಗಳ ಸೃಷ್ಟಾರ ಮಹಾತ್ಮಾ ಪ್ರಭು ಅವ್ಯಯ ಗೋವಿಂದನು ಸಪ್ತಋಷಿಗಳನ್ನೂ ಸೃಷ್ಟಿಸಿದನು.
06063010a ಅಗ್ರಜಂ ಸರ್ವಭೂತಾನಾಂ ಸಂಕರ್ಷಣಮಕಲ್ಪಯತ್।
06063010c ಶೇಷಂ ಚಾಕಲ್ಪಯದ್ದೇವಮನಂತಮಿತಿ ಯಂ ವಿದುಃ।।
ಸರ್ವಭೂತಗಳಿಗೂ ಅಗ್ರಜನಾದ ಸಂಕರ್ಷಣನನ್ನು ಸೃಷ್ಟಿಸಿದನು. ಶೇಷ, ದೇವ ಅನಂತನೆಂದು ತಿಳಿಯಲ್ಪಟ್ಟವನನ್ನೂ ಸೃಷ್ಟಿಸಿದನು.
06063011a ಯೋ ಧಾರಯತಿ ಭೂತಾನಿ ಧರಾಂ ಚೇಮಾಂ ಸಪರ್ವತಾಂ।
06063011c ಧ್ಯಾನಯೋಗೇನ ವಿಪ್ರಾಶ್ಚ ತಂ ವದಂತಿ ಮಹೌಜಸಂ।।
ಆ ಮಹೌಜಸನು ಧ್ಯಾನಯೋಗದಿಂದ ಪರ್ವತಗಳೊಡನೆ ಈ ಧರೆಯನ್ನೂ ಅದರಲ್ಲಿರುವವುಗಳನ್ನೂ ಹೊರುತ್ತಾನೆಂದು ವಿಪ್ರರು ಹೇಳುತ್ತಾರೆ.
06063012a ಕರ್ಣಸ್ರೋತೋದ್ಭವಂ ಚಾಪಿ ಮಧುಂ ನಾಮ ಮಹಾಸುರಂ।
06063012c ತಮುಗ್ರಮುಗ್ರಕರ್ಮಾಣಮುಗ್ರಾಂ ಬುದ್ಧಿಂ ಸಮಾಸ್ಥಿತಂ।
06063012e ಬ್ರಹ್ಮಣೋಽಪಚಿತಿಂ ಕುರ್ವನ್ಜಘಾನ ಪುರುಷೋತ್ತಮಃ।।
ಅವನ ಕಿವಿಯ ಮಲದಿಂದ ಮಧು ಎಂಬ ಹೆಸರಿನ ಮಹಾಸುರನು ಉದ್ಭವಿಸಿದನು. ಉಗ್ರಕರ್ಮಿಯೂ ಉಗ್ರ ಬುದ್ಧಿಯುಳ್ಳವನೂ ಆಗಿದ್ದ ಅವನನ್ನು ಉಗ್ರ ಪುರುಷೋತ್ತಮನು ಬ್ರಹ್ಮನನ್ನು ಸಂತೈಸಿ ಕೊಂದನು.
06063013a ತಸ್ಯ ತಾತ ವಧಾದೇವ ದೇವದಾನವಮಾನವಾಃ।
06063013c ಮಧುಸೂದನಮಿತ್ಯಾಹುರೃಷಯಶ್ಚ ಜನಾರ್ದನಂ।
ಮಗೂ! ಅವನ ವಧೆಯಿಂದಾಗಿ ಜನಾರ್ದನನನ್ನು ದೇವ-ದಾನವ-ಮಾನವರೂ, ಋಷಿಗಳೂ ಮಧುಸೂದನನೆಂದು ಕರೆಯುತ್ತಾರೆ.
06063013e ವರಾಹಶ್ಚೈವ ಸಿಂಹಶ್ಚ ತ್ರಿವಿಕ್ರಮಗತಿಃ ಪ್ರಭುಃ।।
06063014a ಏಷ ಮಾತಾ ಪಿತಾ ಚೈವ ಸರ್ವೇಷಾಂ ಪ್ರಾಣಿನಾಂ ಹರಿಃ।
06063014c ಪರಂ ಹಿ ಪುಂಡರೀಕಾಕ್ಷಾನ್ನ ಭೂತಂ ನ ಭವಿಷ್ಯತಿ।।
ಪ್ರಭುವು ವರಾಹ, ಸಿಂಹ ಮತ್ತು ತ್ರಿವಿಕ್ರಮ ಗತಿ. ಈ ಹರಿಯು ಸರ್ವ ಪ್ರಾಣಿಗಳ ಮಾತಾ ಪಿತನು. ಪುಂಡರೀಕಾಕ್ಷನಿಗಿಂತಲೂ ಹೆಚ್ಚಿನದು ಹಿಂದಿರಲಿಲ್ಲ. ಮುಂದೆ ಇರುವುದೂ ಇಲ್ಲ.
06063015a ಮುಖತೋಽಸೃಜದ್ಬ್ರಾಹ್ಮಣಾನ್ಬಾಹುಭ್ಯಾಂ ಕ್ಷತ್ರಿಯಾಂಸ್ತಥಾ।
06063015c ವೈಶ್ಯಾಂಶ್ಚಾಪ್ಯೂರುತೋ ರಾಜನ್ಶೂದ್ರಾನ್ಪದ್ಭ್ಯಾಂ ತಥೈವ ಚ।
ರಾಜನ್! ಮುಖದಿಂದ ಬ್ರಾಹ್ಮಣರನ್ನೂ, ಬಾಹುಗಳಿಂದ ಕ್ಷತ್ರಿಯರನ್ನೂ, ತೊಡೆಗಳಿಂದ ವೈಶ್ಯರನ್ನೂ, ಪಾದಗಳಿಂದ ಶೂದ್ರರನ್ನೂ ಸೃಷ್ಟಿಸಿದನು.
06063015e ತಪಸಾ ನಿಯತೋ ದೇವೋ ನಿಧಾನಂ ಸರ್ವದೇಹಿನಾಂ।।
06063016a ಬ್ರಹ್ಮಭೂತಮಮಾವಾಸ್ಯಾಂ ಪೌರ್ಣಮಾಸ್ಯಾಂ ತಥೈವ ಚ।
06063016c ಯೋಗಭೂತಂ ಪರಿಚರನ್ಕೇಶವಂ ಮಹದಾಪ್ನುಯಾತ್।।
ತಪಸ್ಸಿನಿಂದ ನಿಯತನಾಗಿ ಅಮವಾಸ್ಯೆ ಪೌರ್ಣಿಮೆಗಳಲ್ಲಿ ಸರ್ವದೇಹಿಗಳ ನಿಧಾನ, ಬ್ರಹ್ಮಭೂತ, ಯೋಗಭೂತ, ಕೇಶವನನ್ನು ಪರಿಚರಿಸಿ ಮಹತ್ತರ ಫಲವನ್ನು ಪಡೆಯಬಹುದು.
06063017a ಕೇಶವಃ ಪರಮಂ ತೇಜಃ ಸರ್ವಲೋಕಪಿತಾಮಹಃ।
06063017c ಏವಮಾಹುರ್ಹೃಷೀಕೇಶಂ ಮುನಯೋ ವೈ ನರಾಧಿಪ।।
ನರಾಧಿಪ! ಕೇಶವನು ಪರಮ ತೇಜಸ್ವಿ. ಸರ್ವಲೋಕಪಿತಾಮಹ. ಮುನಿಗಳು ಇವನನ್ನು ಹೃಷೀಕೇಶ ಎಂದೂ ಕರೆಯುತ್ತಾರೆ.
06063018a ಏವಮೇನಂ ವಿಜಾನೀಹಿ ಆಚಾರ್ಯಂ ಪಿತರಂ ಗುರುಂ।
06063018c ಕೃಷ್ಣೋ ಯಸ್ಯ ಪ್ರಸೀದೇತ ಲೋಕಾಸ್ತೇನಾಕ್ಷಯಾ ಜಿತಾಃ।।
ಇವನನ್ನೇ ಆಚಾರ್ಯ, ಗುರು, ತಂದೆಯೆಂದು ಭಾವಿಸು. ಕೃಷ್ಣನು ಯಾರಿಗೆ ಪ್ರಸನ್ನನಾಗುತ್ತಾನೋ ಅವನು ಅಕ್ಷಯ ಲೋಕಗಳನ್ನು ಗೆಲ್ಲಬಹುದು.
06063019a ಯಶ್ಚೈವೈನಂ ಭಯಸ್ಥಾನೇ ಕೇಶವಂ ಶರಣಂ ವ್ರಜೇತ್।
06063019c ಸದಾ ನರಃ ಪಠಂಶ್ಚೇದಂ ಸ್ವಸ್ತಿಮಾನ್ಸ ಸುಖೀ ಭವೇತ್।।
ಭಯಸ್ಥಾನದಲ್ಲಿರುವವರು ಕೇಶವನಲ್ಲಿ ಶರಣು ಹೊಗಬೇಕು. ಇದನ್ನು ಸದಾ ಪಠಿಸುವ ನರನು ಸ್ವಸ್ತಿಮಾನನೂ ಸುಖಿಯೂ ಆಗುತ್ತಾನೆ.
06063020a ಯೇ ಚ ಕೃಷ್ಣಂ ಪ್ರಪದ್ಯಂತೇ ತೇ ನ ಮುಹ್ಯಂತಿ ಮಾನವಾಃ।
06063020c ಭಯೇ ಮಹತಿ ಯೇ ಮಗ್ನಾಃ ಪಾತಿ ನಿತ್ಯಂ ಜನಾರ್ದನಃ।।
ಯಾರು ಕೃಷ್ಣನಿಗೆ ಮೊರೆಹೋಗುತ್ತಾರೋ ಆ ಮಾನವರು ಮೋಹಗೊಳ್ಳುವುದಿಲ್ಲ. ಮಹಾಭಯದಲ್ಲಿ ಮುಳುಗಿರುವವರನ್ನೂ ಜನಾರ್ದನನು ನಿತ್ಯವೂ ಉದ್ಧರಿಸುತ್ತಾನೆ.”
06063021a ಏತದ್ಯುಧಿಷ್ಠಿರೋ ಜ್ಞಾತ್ವಾ ಯಾಥಾತಥ್ಯೇನ ಭಾರತ।
06063021c ಸರ್ವಾತ್ಮನಾ ಮಹಾತ್ಮಾನಂ ಕೇಶವಂ ಜಗದೀಶ್ವರಂ।
06063021e ಪ್ರಪನ್ನಃ ಶರಣಂ ರಾಜನ್ಯೋಗಾನಾಮೀಶ್ವರಂ ಪ್ರಭುಂ।।
ಭಾರತ! ರಾಜನ್! ಯುಧಿಷ್ಠಿರನು ಇದನ್ನು ಇದ್ದಹಾಗೆ ತಿಳಿದುಕೊಂಡೇ ಸರ್ವಾತ್ಮಭಾವದಿಂದ ಈ ಮಹಾತ್ಮ, ಕೇಶವ, ಜಗದೀಶ್ವರ, ಯೋಗಗಳ ಈಶ್ವರ ಪ್ರಭು ಶರಣನನ್ನು ಮೊರೆಹೊಕ್ಕಿದ್ದಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ವಿಶ್ವೋಪಾಖ್ಯಾನೇ ತ್ರಿಷಷ್ಠಿತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ವಿಶ್ವೋಪಾಖ್ಯಾನ ಎನ್ನುವ ಅರವತ್ಮೂರನೇ ಅಧ್ಯಾಯವು.