ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 58
ಸಾರ
ಸಂಕುಲ ಯುದ್ಧ (1-28). ಭೀಮಸೇನನು ಮಾಗಧ ಗಜಸೇನೆಯನ್ನು ನಾಶಗೊಳಿಸಿದುದು (29-61).
06058001 ಧೃತರಾಷ್ಟ್ರ ಉವಾಚ।
06058001a ದೈವಮೇವ ಪರಂ ಮನ್ಯೇ ಪೌರುಷಾದಪಿ ಸಂಜಯ।
06058001c ಯತ್ಸೈನ್ಯಂ ಮಮ ಪುತ್ರಸ್ಯ ಪಾಂಡುಸೈನ್ಯೇನ ವಧ್ಯತೇ।।
ಧೃತರಾಷ್ಟ್ರನು ಹೇಳಿದನು: “ಸಂಜಯ! ನನ್ನ ಪುತ್ರನ ಸೇನೆಯು ಈ ರೀತಿ ಪಾಂಡುಸೈನ್ಯದಿಂದ ವಧಿಸಲ್ಪಡುತ್ತಿದೆಯೆಂದರೆ ಪುರುಷ ಪ್ರಯತ್ನಕ್ಕಿಂತಲೂ ದೈವವೇ ಹೆಚ್ಚಿನದೆಂದು ನನಗನ್ನಿಸುತ್ತಿದೆ.
06058002a ನಿತ್ಯಂ ಹಿ ಮಾಮಕಾಂಸ್ತಾತ ಹತಾನೇವ ಹಿ ಶಂಸಸಿ।
06058002c ಅವ್ಯಗ್ರಾಂಶ್ಚ ಪ್ರಹೃಷ್ಟಾಂಶ್ಚ ನಿತ್ಯಂ ಶಂಸಸಿ ಪಾಂಡವಾನ್।।
ಅಯ್ಯಾ! ಪ್ರತಿದಿನವೂ ನೀನು ನನ್ನವರು ಸತ್ತುದನ್ನೇ ಹೇಳುತ್ತಿರುವೆ. ಪ್ರತಿದಿನವೂ ಪಾಂಡವರು ಅವ್ಯಗ್ರರೂ ಪ್ರಹೃಷ್ಟರೂ ಆಗಿರುವರೆಂದು ಹೇಳುತ್ತಿರುವೆ.
06058003a ಹೀನಾನ್ಪುರುಷಕಾರೇಣ ಮಾಮಕಾನದ್ಯ ಸಂಜಯ।
06058003c ಪತಿತಾನ್ಪಾತ್ಯಮಾನಾಂಶ್ಚ ಹತಾನೇವ ಚ ಶಂಸಸಿ।।
ಸಂಜಯ! ಇಂದು ನನ್ನವರು ಪುರುಷಪ್ರಯತ್ನದಲ್ಲಿಯೂ ಹೀನರಾಗಿ ಬಿದ್ದರು, ಕೆಡವಿಸಲ್ಪಟ್ಟರು, ಸಂಹರಿಸಲ್ಪಟ್ಟರು ಎಂದು ಹೇಳುತ್ತಿದ್ದೀಯೆ.
06058004a ಯುಧ್ಯಮಾನಾನ್ಯಥಾಶಕ್ತಿ ಘಟಮಾನಾಂ ಜಯಂ ಪ್ರತಿ।
06058004c ಪಾಂಡವಾ ವಿಜಯಂತ್ಯೇವ ಜೀಯಂತೇ ಚೈವ ಮಾಮಕಾಃ।।
ನನ್ನವರು ಜಯಕ್ಕಾಗಿಯೇ ಯಥಾಶಕ್ತಿ ಯುದ್ಧಮಾಡುತ್ತಿದ್ದರೂ ಪಾಂಡವರು ವಿಜಯಿಳಾಗುತ್ತಿದ್ದಾರೆ ಮತ್ತು ನನ್ನವರು ಸೋಲುತ್ತಿದ್ದಾರೆ.
06058005a ಸೋಽಹಂ ತೀವ್ರಾಣಿ ದುಃಖಾನಿ ದುರ್ಯೋಧನಕೃತಾನಿ ಚ।
06058005c ಅಶ್ರೌಷಂ ಸತತಂ ತಾತ ದುಃಸಹಾನಿ ಬಹೂನಿ ಚ।।
ಅಯ್ಯಾ! ದುರ್ಯೋಧನನು ಮಾಡಿದುದಕ್ಕಾಗಿ ನಾನು ಈ ರೀತಿಯ ಇನ್ನೂ ಅನೇಕ ತೀವ್ರ ಸಹಿಸಲಸಾಧ್ಯ ದುಃಖಗಳನ್ನು ಕೇಳಬೇಕಾಗಿ ಬರಬಹುದು.
06058006a ತಮುಪಾಯಂ ನ ಪಶ್ಯಾಮಿ ಜೀಯೇರನ್ಯೇನ ಪಾಂಡವಾಃ।
06058006c ಮಾಮಕಾ ವಾ ಜಯಂ ಯುದ್ಧೇ ಪ್ರಾಪ್ನುಯುರ್ಯೇನ ಸಂಜಯ।।
ಸಂಜಯ! ನನ್ನವರು ಯುದ್ಧದಲ್ಲಿ ಜಯವನ್ನು ಹೊಂದಲು ಅಥವಾ ಪಾಂಡವರು ಪರಾಜಿತಗೊಳ್ಳಲು ಯಾವ ಉಪಾಯವನ್ನೂ ನಾನು ಕಾಣುತ್ತಿಲ್ಲ.”
06058007 ಸಂಜಯ ಉವಾಚ।
06058007a ಕ್ಷಯಂ ಮನುಷ್ಯದೇಹಾನಾಂ ಗಜವಾಜಿರಥಕ್ಷಯಂ।
06058007c ಶೃಣು ರಾಜನ್ ಸ್ಥಿರೋ ಭೂತ್ವಾ ತವೈವಾಪನಯೋ ಮಹಾನ್।।
ಸಂಜಯನು ಹೇಳಿದನು: “ರಾಜನ್! ಮನುಷ್ಯ ದೇಹಗಳ, ಗಜ-ವಾಜಿ-ರಥಗಳ ಮಹಾ ಕ್ಷಯವು ನಡೆದುದನ್ನು ಸ್ಥಿರನಾಗಿದ್ದುಕೊಂಡು ಕೇಳು.
06058008a ಧೃಷ್ಟದ್ಯುಮ್ನಸ್ತು ಶಲ್ಯೇನ ಪೀಡಿತೋ ನವಭಿಃ ಶರೈಃ।
06058008c ಪೀಡಯಾಮಾಸ ಸಂಕ್ರುದ್ಧೋ ಮದ್ರಾಧಿಪತಿಮಾಯಸೈಃ।।
ಶಲ್ಯನ ಒಂಭತ್ತು ಬಾಣಗಳಿಂದ ಪೀಡಿತನಾದ ಧೃಷ್ಟದ್ಯುಮ್ನನು ಸಂಕ್ರುದ್ಧನಾಗಿ ಮದ್ರಾಧಿಪತಿಯನ್ನು ಆಯಸಗಳಿಂದ ಪೀಡಿಸತೊಡಗಿದನು.
06058009a ತತ್ರಾದ್ಭುತಮಪಶ್ಯಾಮ ಪಾರ್ಷತಸ್ಯ ಪರಾಕ್ರಮಂ।
06058009c ನ್ಯವಾರಯತ ಯತ್ತೂರ್ಣಂ ಶಲ್ಯಂ ಸಮಿತಿಶೋಭನಂ।।
ಅಲ್ಲಿ ಸಮಿತಿ ಶೋಭನ ಶಲ್ಯನ ವೇಗವನ್ನು ತಡೆದ ಪಾರ್ಷತನ ಅದ್ಭುತ ಪರಾಕ್ರಮವನ್ನು ನೋಡಿದೆವು.
06058010a ನಾಂತರಂ ದದೃಶೇ ಕಶ್ಚಿತ್ತಯೋಃ ಸಂರಬ್ಧಯೋ ರಣೇ।
06058010c ಮುಹೂರ್ತಮಿವ ತದ್ಯುದ್ಧಂ ತಯೋಃ ಸಮಮಿವಾಭವತ್।।
ರಣದಲ್ಲಿ ಸಂರಬ್ಧರಾಗಿದ್ದ ಅವರಿಬ್ಬರ ನಡುವೆ ಯಾವುದೇ ವ್ಯತ್ಯಾಸವು ಕಾಣುತ್ತಿರಲಿಲ್ಲ. ಮುಹೂರ್ತಕಾಲ ಇಬ್ಬರೂ ಒಂದೇ ಸಮನಾಗಿ ಯುದ್ಧಮಾಡಿದರು.
06058011a ತತಃ ಶಲ್ಯೋ ಮಹಾರಾಜ ಧೃಷ್ಟದ್ಯುಮ್ನಸ್ಯ ಸಂಯುಗೇ।
06058011c ಧನುಶ್ಚಿಚ್ಛೇದ ಭಲ್ಲೇನ ಪೀತೇನ ನಿಶಿತೇನ ಚ।।
ಆಗ ಮಹಾರಾಜ! ಶಲ್ಯನು ಸಂಯುಗದಲ್ಲಿ ಧೃಷ್ಟದ್ಯುಮ್ನನ ಧನುಸ್ಸನ್ನು ಹಳದೀ ಬಣ್ಣದ ನಿಶಿತ ಭಲ್ಲದಿಂದ ಕತ್ತರಿಸಿದನು.
06058012a ಅಥೈನಂ ಶರವರ್ಷೇಣ ಚಾದಯಾಮಾಸ ಭಾರತ।
06058012c ಗಿರಿಂ ಜಲಾಗಮೇ ಯದ್ವಜ್ಜಲದಾ ಜಲಧಾರಿಣಃ।।
ಭಾರತ! ಮಳೆಗಾಲದಲ್ಲಿ ಮೋಡಗಳು ಒಂದೇ ಸಮನೆ ಮಳೆಸುರಿಸಿ ಗಿರಿಯನ್ನು ಮಚ್ಚಿಬಿಡುವಂತೆ ಶರವರ್ಷದಿಂದ ಅವನನ್ನು ಮುಚ್ಚಿಬಿಟ್ಟನು.
06058013a ಅಭಿಮನ್ಯುಸ್ತು ಸಂಕ್ರುದ್ಧೋ ಧೃಷ್ಟದ್ಯುಮ್ನೇ ನಿಪೀಡಿತೇ।
06058013c ಅಭಿದುದ್ರಾವ ವೇಗೇನ ಮದ್ರರಾಜರಥಂ ಪ್ರತಿ।।
ಅಭಿಮನ್ಯುವಾದರೋ ಧೃಷ್ಟದ್ಯುಮ್ನನು ಪೀಡಿತನಾದುದನ್ನು ನೋಡಿ ಸಂಕ್ರುದ್ಧನಾಗಿ ವೇಗದಿಂದ ಮದ್ರರಾಜನ ರಥದ ಬಳಿ ಧಾವಿಸಿ ಬಂದನು.
06058014a ತತೋ ಮದ್ರಾಧಿಪರಥಂ ಕಾರ್ಷ್ಣಿಃ ಪ್ರಾಪ್ಯಾತಿಕೋಪನಃ।
06058014c ಆರ್ತಾಯನಿಮಮೇಯಾತ್ಮಾ ವಿವ್ಯಾಧ ವಿಶಿಖೈಸ್ತ್ರಿಭಿಃ।।
ಮದ್ರಾದಿಪನ ರಥದ ಸಮೀಪ ಬರುತ್ತಲೇ ಅತಿ ಕೋಪದಿಂದ ಕಾರ್ಷ್ಣಿಯು ಅಮೇಯಾತ್ಮ ಆರ್ತಯನಿ1ಯನ್ನು ಮೂರು ವಿಶಿಖಗಳಿಂದ ಹೊಡೆದನು.
06058015a ತತಸ್ತು ತಾವಕಾ ರಾಜನ್ಪರೀಪ್ಸಂತೋಽರ್ಜುನಿಂ ರಣೇ।
06058015c ಮದ್ರರಾಜರಥಂ ತೂರ್ಣಂ ಪರಿವಾರ್ಯಾವತಸ್ಥಿರೇ।।
ರಾಜನ್! ಆಗ ಆರ್ಜುನಿಯನ್ನು ರಣದಲ್ಲಿ ಎದುರಿಸಲು ಬಯಸಿ ನಿನ್ನವರು ಕೂಡಲೇ ಮದ್ರರಾಜನ ರಥವನ್ನು ಸುತ್ತುವರೆದು ನಿಂತರು.
06058016a ದುರ್ಯೋಧನೋ ವಿಕರ್ಣಶ್ಚ ದುಃಶಾಸನವಿವಿಂಶತೀ।
06058016c ದುರ್ಮರ್ಷಣೋ ದುಃಸ್ಸಹಶ್ಚ ಚಿತ್ರಸೇನಶ್ಚ ದುರ್ಮುಖಃ।।
06058017a ಸತ್ಯವ್ರತಶ್ಚ ಭದ್ರಂ ತೇ ಪುರುಮಿತ್ರಶ್ಚ ಭಾರತ।
06058017c ಏತೇ ಮದ್ರಾಧಿಪರಥಂ ಪಾಲಯಂತಃ ಸ್ಥಿತಾ ರಣೇ।।
ಭಾರತ! ನಿನಗೆ ಮಂಗಳವಾಗಲಿ! ದುರ್ಯೋಧನ, ವಿಕರ್ಣ, ದುಃಶಾಸನ, ವಿವಿಂಶತಿ, ದುರ್ಮರ್ಷಣ, ದುಃಸ್ಸಹ, ಚಿತ್ರಸೇನ, ದುರ್ಮುಖ, ಸತ್ಯವ್ರತ, ಪುರುಮಿತ್ರ ಇವರು ಮದ್ರಾಧಿಪನ ರಥವನ್ನು ರಕ್ಷಿಸುತ್ತಾ ರಣದಲ್ಲಿ ನಿಂತರು.
06058018a ತಾನ್ಭೀಮಸೇನಃ ಸಂಕ್ರುದ್ಧೋ ಧೃಷ್ಟದ್ಯುಮ್ನಶ್ಚ ಪಾರ್ಷತಃ।
06058018c ದ್ರೌಪದೇಯಾಭಿಮನ್ಯುಶ್ಚ ಮಾದ್ರೀಪುತ್ರೌ ಚ ಪಾಂಡವೌ।।
06058019a ನಾನಾರೂಪಾಣಿ ಶಸ್ತ್ರಾಣಿ ವಿಸೃಜಂತೋ ವಿಶಾಂ ಪತೇ।
06058019c ಅಭ್ಯವರ್ತಂತ ಸಂಹೃಷ್ಟಾಃ ಪರಸ್ಪರವಧೈಷಿಣಃ।
06058019e ತೇ ವೈ ಸಮೀಯುಃ ಸಂಗ್ರಾಮೇ ರಾಜನ್ದುರ್ಮಂತ್ರಿತೇ ತವ।।
ವಿಶಾಂಪತೇ! ಅವರನ್ನು ಸಂಕ್ರುದ್ಧನಾದ ಭೀಮಸೇನ, ಪಾರ್ಷತ ಧೃಷ್ಟದ್ಯುಮ್ನ, ದ್ರೌಪದೇಯರು, ಅಭಿಮನ್ಯು, ಮಾದ್ರೀಪುತ್ರ ಪಾಂಡವರಿಬ್ಬರು ನಾನಾ ರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಸಂತೋಷದಿಂದ ಪರಸ್ಪರರನ್ನು ವಧಿಸಲು ಬಯಸಿ ಎದುರಿಸಿದರು. ರಾಜನ್! ನಿನ್ನ ದುರ್ಮಂತ್ರದಿಂದಾಗಿ ಅವರು ಸಂಗ್ರಾಮದಲ್ಲಿ ಸೇರಿದ್ದರು.
06058020a ತಸ್ಮಿನ್ದಾಶರಥೇ ಯುದ್ಧೇ ವರ್ತಮಾನೇ ಭಯಾವಹೇ।
06058020c ತಾವಕಾನಾಂ ಪರೇಷಾಂ ಚ ಪ್ರೇಕ್ಷಕಾ ರಥಿನೋಽಭವನ್।।
ಭಯವನ್ನುಂಟು ಮಾಡುತ್ತಿದ್ದ ನಿನ್ನವರ ಮತ್ತು ಶತ್ರುಗಳ ಆ ಹತ್ತು ಹತ್ತು ರಥಿಕರ ನಡುವೆ ಯುದ್ಧವು ನಡೆಯುತ್ತಿರಲು ಇತರ ರಥಿಕರು ಪ್ರೇಕ್ಷಕರಾದರು.
06058021a ಶಸ್ತ್ರಾಣ್ಯನೇಕರೂಪಾಣಿ ವಿಸೃಜಂತೋ ಮಹಾರಥಾಃ।
06058021c ಅನ್ಯೋನ್ಯಮಭಿನರ್ದಂತಃ ಸಂಪ್ರಹಾರಂ ಪ್ರಚಕ್ರಿರೇ।।
ಆ ಮಹಾರಥರು ಅನೇಕರೂಪದ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಅನ್ಯೋನ್ಯರನ್ನು ಹೊಡೆಯುತ್ತಾ ಪ್ರಹರಿಸಲು ತೊಡಗಿದರು.
06058022a ತೇ ಯತ್ತಾ ಜಾತಸಂರಂಭಾಃ ಸರ್ವೇಽನ್ಯೋನ್ಯಂ ಜಿಘಾಂಸವಃ।
06058022c ಮಹಾಸ್ತ್ರಾಣಿ ವಿಮುಂಚಂತಃ ಸಮಾಪೇತುರಮರ್ಷಣಾಃ।।
ಎಲ್ಲರೂ ಅನ್ಯೋನ್ಯರನ್ನು ಕೊಲ್ಲಲು ತವಕರಾಗಿದ್ದರು. ಮಹಾಸ್ತ್ರಗಳನ್ನು ಪ್ರಯೋಗಿಸುತ್ತಾ ಸಹನೆಯಿಲ್ಲದೇ ಅವರು ಅನ್ಯೋನ್ಯರ ಮೇಲೆ ಎರಗಿದರು.
06058023a ದುರ್ಯೋಧನಸ್ತು ಸಂಕ್ರುದ್ಧೋ ಧೃಷ್ಟದ್ಯುಮ್ನಂ ಮಹಾರಣೇ।
06058023c ವಿವ್ಯಾಧ ನಿಶಿತೈರ್ಬಾಣೈಶ್ಚತುರ್ಭಿಸ್ತ್ವರಿತೋ ಭೃಶಂ।।
06058024a ದುರ್ಮರ್ಷಣಶ್ಚ ವಿಂಶತ್ಯಾ ಚಿತ್ರಸೇನಶ್ಚ ಪಂಚಭಿಃ।
06058024c ದುರ್ಮುಖೋ ನವಭಿರ್ಬಾಣೈರ್ದುಃಸ್ಸಹಶ್ಚಾಪಿ ಸಪ್ತಭಿಃ।।
06058024e ವಿವಿಂಶತಿಃ ಪಂಚಭಿಶ್ಚ ತ್ರಿಭಿರ್ದುಃಶಾಸನಸ್ತಥಾ।।
ಮಹಾರಣದಲ್ಲಿ ಸಂಕ್ರುದ್ಧರಾಗಿ ತುಂಬಾ ವೇಗದಿಂದ ಧೃಷ್ಟದ್ಯುಮ್ನನನ್ನು ದುರ್ಯೋಧನು ನಾಲ್ಕು ನಿಶಿತ ಬಾಣಗಳಿಂದಲೂ, ದುರ್ಮರ್ಷಣನು ಇಪ್ಪತ್ತು, ಚಿತ್ರಸೇನನು ಐದು, ದುರ್ಮುಖನು ಒಂಭತ್ತು, ದುಃಸ್ಸಹನು ಏಳರಿಂದ, ವಿವಿಂಶತಿಯು ಐದರಿಂದ ಮತ್ತು ದುಃಶಾಸನನು ಮೂರು ಬಾಣಗಳಿಂದ ಹೊಡೆದರು.
06058025a ತಾನ್ಪ್ರತ್ಯವಿಧ್ಯದ್ರಾಜೇಂದ್ರ ಪಾರ್ಷತಃ ಶತ್ರುತಾಪನಃ।
06058025c ಏಕೈಕಂ ಪಂಚವಿಂಶತ್ಯಾ ದರ್ಶಯನ್ಪಾಣಿಲಾಘವಂ।।
ರಾಜೇಂದ್ರ! ಅವರಲ್ಲಿ ಒಬ್ಬೊಬ್ಬರನ್ನೂ ಇಪ್ಪತ್ತೈದು ಬಾಣಗಳಿಂದ ಹೊಡೆದು ಶತ್ರುತಾಪನ ಪಾರ್ಷತನು ತನ್ನ ಹಸ್ತಲಾಘವವನ್ನು ಪ್ರದರ್ಶಿಸಿದನು.
06058026a ಸತ್ಯವ್ರತಂ ತು ಸಮರೇ ಪುರುಮಿತ್ರಂ ಚ ಭಾರತ।
06058026c ಅಭಿಮನ್ಯುರವಿಧ್ಯತ್ತೌ ದಶಭಿರ್ದಶಭಿಃ ಶರೈಃ।।
ಭಾರತ! ಸಮರದಲ್ಲಿ ಸತ್ಯವ್ರತ ಮತ್ತು ಪುರುಮಿತ್ರರನ್ನು ಹತ್ತು-ಹತ್ತು ಬಾಣಗಳಿಂದ ಹೊಡೆದನು.
06058027a ಮಾದ್ರೀಪುತ್ರೌ ತು ಸಮರೇ ಮಾತುಲಂ ಮಾತೃನಂದನೌ।
06058027c ಚಾದಯೇತಾಂ ಶರವ್ರಾತೈಸ್ತದದ್ಭುತಮಿವಾಭವತ್।।
ಮಾತೃನಂದನರಾದ ಮಾದ್ರೀಪುತ್ರರಿಬ್ಬರೂ ಸಮರದಲ್ಲಿ ಮಾತುಲನನ್ನು ಶರವ್ರಾತಗಳಿಂದ ಪ್ರಹರಿಸಿದುದು ಒಂದು ಅದ್ಭುತವೆನಿಸಿತು.
06058028a ತತಃ ಶಲ್ಯೋ ಮಹಾರಾಜ ಸ್ವಸ್ರೀಯೌ ರಥಿನಾಂ ವರೌ।
06058028c ಶರೈರ್ಬಹುಭಿರಾನರ್ಚತ್ಕೃತಪ್ರತಿಕೃತೈಷಿಣೌ।
06058028e ಚಾದ್ಯಮಾನೌ ತತಸ್ತೌ ತು ಮಾದ್ರೀಪುತ್ರೌ ನ ಚೇಲತುಃ।।
ಮಹಾರಾಜ! ಆಗ ಶಲ್ಯನು ರಥಿಗಳಲ್ಲಿ ಶ್ರೇಷ್ಠರಾದ ತನ್ನ ತಂಗಿಯ ಮಕ್ಕಳಾದ ಅವರಿಬ್ಬರನ್ನು ಅನೇಕ ಶರಗಳಿಂದ ಹೊಡೆದನು. ಪ್ರತಿಯಾಗಿ ಮಾಡಲು ಬಯಸಿದ ಮಾದ್ರೀಪುತ್ರರಿಬ್ಬರೂ ವಿಚಲಿತರಾಗಲಿಲ್ಲ.
06058029a ಅಥ ದುರ್ಯೋಧನಂ ದೃಷ್ಟ್ವಾ ಭೀಮಸೇನೋ ಮಹಾಬಲಃ।
06058029c ವಿಧಿತ್ಸುಃ ಕಲಹಸ್ಯಾಂತಂ ಗದಾಂ ಜಗ್ರಾಹ ಪಾಂಡವಃ।।
ಅದೇ ಸಮಯದಲ್ಲಿ ಮಹಾಬಲ ಪಾಂಡವ ಭೀಮಸೇನನು ದುರ್ಯೋಧನನನ್ನು ನೋಡಿ ಯುದ್ಧವನ್ನೇ ಮುಗಿಸಲು ನಿಶ್ಚಯಿಸಿ ಗದೆಯನ್ನು ಕೈಗೆ ತೆಗೆದುಕೊಂಡನು.
06058030a ತಮುದ್ಯತಗದಂ ದೃಷ್ಟ್ವಾ ಕೈಲಾಸಮಿವ ಶೃಂಗಿಣಂ।
06058030c ಭೀಮಸೇನಂ ಮಹಾಬಾಹುಂ ಪುತ್ರಾಸ್ತೇ ಪ್ರಾದ್ರವನ್ಭಯಾತ್।।
ಅದನ್ನು ಹಿಡಿದು ಶಿಖರದಿಂದ ಕೂಡಿದ ಕೈಲಾಸ ಪರ್ವತದಂತೆ ತೋರುತ್ತಿದ್ದ ಆ ಮಹಾಬಾಹು ಭೀಮಸೇನನನ್ನು ನೋಡಿ ನಿನ್ನ ಪುತ್ರರು ಭಯದಿಂದ ಪಲಾಯನಗೈದರು.
06058031a ದುರ್ಯೋಧನಸ್ತು ಸಂಕ್ರುದ್ಧೋ ಮಾಗಧಂ ಸಮಚೋದಯತ್।
06058031c ಅನೀಕಂ ದಶಸಾಹಸ್ರಂ ಕುಂಜರಾಣಾಂ ತರಸ್ವಿನಾಂ।
06058031e ಮಾಗಧಂ ಪುರತಃ ಕೃತ್ವಾ ಭೀಮಸೇನಂ ಸಮಭ್ಯಯಾತ್।।
ಸಂಕ್ರುದ್ಧನಾದ ದುರ್ಯೋಧನನಾದರೋ ವೇಗಶಾಲಿಗಳಾದ ಮಾಗಧರ ಹತ್ತು ಸಾವಿರ ಆನೆಗಳ ಸೇನೆಯನ್ನು ಪ್ರಚೋದಿಸಿ, ಮಾಗಧನನ್ನು ಮುಂದೆ ಮಾಡಿಕೊಂಡು ಭೀಮಸೇನನನ್ನು ಎದುರಿಸಿದನು.
06058032a ಆಪತಂತಂ ಚ ತಂ ದೃಷ್ಟ್ವಾ ಗಜಾನೀಕಂ ವೃಕೋದರಃ।
06058032c ಗದಾಪಾಣಿರವಾರೋಹದ್ರಥಾತ್ಸಿಂಹ ಇವೋನ್ನದನ್।।
ತನ್ನ ಮೇಲೆ ಎರಗುತ್ತಿರುವ ಆ ಗಜಸೇನೆಯನ್ನು ನೋಡಿ ವೃಕೋದರನು ಗದೆಯನ್ನು ಹಿಡಿದು ರಥದಿಂದ ಧುಮುಕಿ ಸಿಂಹದಂತೆ ಗರ್ಜಿಸಿದನು.
06058033a ಅದ್ರಿಸಾರಮಯೀಂ ಗುರ್ವೀಂ ಪ್ರಗೃಹ್ಯ ಮಹತೀಂ ಗದಾಂ।
06058033c ಅಭ್ಯಧಾವದ್ಗಜಾನೀಕಂ ವ್ಯಾದಿತಾಸ್ಯ ಇವಾಂತಕಃ।।
ಲೋಹಮಯ ಭಾರ ಮಹಾ ಗದೆಯನ್ನು ಹಿಡಿದು ಬಾಯಿ ಕಳೆದು ಬರುತ್ತಿರುವ ಅಂತಕನಂತೆ ಗಜಸೇನೆಯ ಮೇಲೆ ಎರಗಿದನು.
06058034a ಸ ಗಜಾನ್ಗದಯಾ ನಿಘ್ನನ್ವ್ಯಚರತ್ಸಮರೇ ಬಲೀ।
06058034c ಭೀಮಸೇನೋ ಮಹಾಬಾಹುಃ ಸವಜ್ರ ಇವ ವಾಸವಃ।।
ವಜ್ರವನ್ನು ಹಿಡಿದ ವಾಸವನಂತೆ ಮಹಾಬಾಹು ಬಲೀ ಭೀಮಸೇನನು ಗದೆಯಿಂದ ಆನೆಗಳನ್ನು ಸಂಹರಿಸುತ್ತಾ ಸಮರದಲ್ಲಿ ಸಂಚರಿಸಿದನು.
06058035a ತಸ್ಯ ನಾದೇನ ಮಹತಾ ಮನೋಹೃದಯಕಂಪಿನಾ।
06058035c ವ್ಯತ್ಯಚೇಷ್ಟಂತ ಸಂಹತ್ಯ ಗಜಾ ಭೀಮಸ್ಯ ನರ್ದತಃ।।
ಮನೋಹೃದಯಗಳನ್ನು ಕಂಪಿಸುವಂತೆ ಕೂಗುತ್ತಿದ್ದ ಭೀಮನ ಮಹಾ ಗರ್ಜನೆಯಿಂದಲೇ ಆನೆಗಳು ಒಂದುಕಡೆ ಸೇರಿ ಪ್ರಾಣತೊರೆಯುತ್ತಿದ್ದವು.
06058036a ತತಸ್ತು ದ್ರೌಪದೀಪುತ್ರಾಃ ಸೌಭದ್ರಶ್ಚ ಮಹಾರಥಃ।
06058036c ನಕುಲಃ ಸಹದೇವಶ್ಚ ಧೃಷ್ಟದ್ಯುಮ್ನಶ್ಚ ಪಾರ್ಷತಃ।।
06058037a ಪೃಷ್ಠಂ ಭೀಮಸ್ಯ ರಕ್ಷಂತಃ ಶರವರ್ಷೇಣ ವಾರಣಾನ್।
06058037c ಅಭ್ಯಧಾವಂತ ವರ್ಷಂತೋ ಮೇಘಾ ಇವ ಗಿರೀನ್ಯಥಾ।।
ಆಗ ದ್ರೌಪದೀಪುತ್ರರು, ಮಹಾರಥ ಸೌಭದ್ರ, ನಕುಲ, ಸಹದೇವರು ಮತ್ತು ಪಾರ್ಷತ ಧೃಷ್ಟದ್ಯುಮ್ನರು ಗಿರಿಗಳ ಮೇಲೆ ಮೋಡಗಳು ಮಳೆಸುರಿಸುವಂತೆ ಆನೆಗಳ ಮೇಲೆ ಬಾಣಗಳ ಮಳೆಯನ್ನು ಸುರಿಸುತ್ತಾ ಭೀಮನನ್ನು ಹಿಂದಿನಿಂದ ರಕ್ಷಿಸುತ್ತಿದ್ದರು.
06058038a ಕ್ಷುರೈಃ ಕ್ಷುರಪ್ರೈರ್ಭಲ್ಲೈಶ್ಚ ಪೀತೈರಂಜಲಿಕೈರಪಿ।
06058038c ಪಾತಯಂತೋತ್ತಮಾಂಗಾನಿ ಪಾಂಡವಾ ಗಜಯೋಧಿನಾಂ।।
ಕ್ಷುರ, ಕ್ಷುರಪ್ರ, ಭಲ್ಲ, ಪೀತ, ಅಂಜಲಿಕಗಳಿಂದ ಪಾಂಡವರು ಗಜಯೋಧಿಗಳ ಶಿರಗಳನ್ನು ಕತ್ತರಿಸುತ್ತಿದ್ದರು.
06058039a ಶಿರೋಭಿಃ ಪ್ರಪತದ್ಭಿಶ್ಚ ಬಾಹುಭಿಶ್ಚ ವಿಭೂಷಿತೈಃ।
06058039c ಅಶ್ಮವೃಷ್ಟಿರಿವಾಭಾತಿ ಪಾಣಿಭಿಶ್ಚ ಸಹಾಂಕುಶೈಃ।।
ಕಲ್ಲಿನ ಮಳೆಯಂತೆ ತಲೆಗಳು, ವಿಭೂಷಿತ ಬಾಹುಗಳು, ಅಂಕುಶಗಳನ್ನು ಹಿಡಿದಿದ್ದ ಕೈಗಳು ಬೀಳುತ್ತಿದ್ದವು.
06058040a ಹೃತೋತ್ತಮಾಂಗಾಃ ಸ್ಕಂಧೇಷು ಗಜಾನಾಂ ಗಜಯೋಧಿನಃ।
06058040c ಅದೃಶ್ಯಂತಾಚಲಾಗ್ರೇಷು ದ್ರುಮಾ ಭಗ್ನಶಿಖಾ ಇವ।।
ಗಜಯೋಧಿಗಳ ತಲೆಗಳು ಕತ್ತರಿಸಿ ಬಿದ್ದು ಕೇವಲ ಮುಂಡಗಳು ಆನೆಗಳ ಮೇಲಿರಲು ಅವು ಪರ್ವತದ ಮೇಲಿರುವ ರೆಂಬೆಗಳು ತುಂಡಾದ ಬೋಳು ಮರಗಳಂತೆ ತೋರಿದವು.
06058041a ಧೃಷ್ಟದ್ಯುಮ್ನಹತಾನನ್ಯಾನಪಶ್ಯಾಮ ಮಹಾಗಜಾನ್।
06058041c ಪತಿತಾನ್ಪಾತ್ಯಮಾನಾಂಶ್ಚ ಪಾರ್ಷತೇನ ಮಹಾತ್ಮನಾ।।
ಮಹಾತ್ಮ ಪಾರ್ಷತ ಧೃಷ್ಟದ್ಯುಮ್ನನಿಂದ ಕೆಳಗುರುಳಿಸಲ್ಪಟ್ಟ, ಬೀಳಿಸಲ್ಪಡುತ್ತಿರುವ ಮಹಾ ಗಜಗಳನ್ನು ನೋಡಿದೆವು.
06058042a ಮಾಗಧೋಽಥ ಮಹೀಪಾಲೋ ಗಜಮೈರಾವತೋಪಮಂ।
06058042c ಪ್ರೇಷಯಾಮಾಸ ಸಮರೇ ಸೌಭದ್ರಸ್ಯ ರಥಂ ಪ್ರತಿ।।
ಆಗ ಮಹೀಪಾಲ ಮಾಗಧನು ಐರಾವತದಂತಿರುವ ಆನೆಯೊಂದನ್ನು ಸಮರದಲ್ಲಿ ಸೌಭದ್ರನ ರಥದ ಕಡೆ ಕಳುಹಿಸಿದನು.
06058043a ತಮಾಪತಂತಂ ಸಂಪ್ರೇಕ್ಷ್ಯ ಮಾಗಧಸ್ಯ ಗಜೋತ್ತಮಂ।
06058043c ಜಘಾನೈಕೇಷುಣಾ ವೀರಃ ಸೌಭದ್ರಃ ಪರವೀರಹಾ।।
ಮಾಗಧನ ಆ ಉತ್ತಮ ಗಜವು ಮೇಲೆ ಬೀಳುತ್ತಿರುವುದನ್ನು ಕಂಡು ಪರವೀರಹ ವೀರ ಸೌಭದ್ರನು ಅದನ್ನು ಒಂದೇ ಬಾಣದಿಂದ ಸಂಹರಿಸಿದನು.
06058044a ತಸ್ಯಾವರ್ಜಿತನಾಗಸ್ಯ ಕಾರ್ಷ್ಣಿಃ ಪರಪುರಂಜಯಃ।
06058044c ರಾಜ್ಞೋ ರಜತಪುಂಖೇನ ಭಲ್ಲೇನಾಪಹರಚ್ಚಿರಃ।।
ಪರಪುರಂಜಯ ಕಾರ್ಷ್ಣಿಯು ತಕ್ಷಣವೇ ರಜತಪುಂಖ ಭಲ್ಲದಿಂದ ಆನೆಯನ್ನು ಕಳೆದುಕೊಂಡ ಆ ರಾಜನ ಶಿರವನ್ನು ತುಂಡರಿಸಿದನು.
06058045a ವಿಗಾಹ್ಯ ತದ್ಗಜಾನೀಕಂ ಭೀಮಸೇನೋಽಪಿ ಪಾಂಡವಃ।
06058045c ವ್ಯಚರತ್ಸಮರೇ ಮೃದ್ನನ್ಗಜಾನಿಂದ್ರೋ ಗಿರೀನಿವ।।
ಇಂದ್ರನು ಗಿರಿಗಳ ರೆಕ್ಕೆಗಳನ್ನು ಕತ್ತರಿಸಿದಂತೆ ಪಾಂಡವ ಭೀಮಸೇನನೂ ಕೂಡ ಆ ಗಜಸೇನೆಯನ್ನು ಕತ್ತರಿಸುತ್ತಾ ಹೋದನು.
06058046a ಏಕಪ್ರಹಾರಾಭಿಹತಾನ್ಭೀಮಸೇನೇನ ಕುಂಜರಾನ್।
06058046c ಅಪಶ್ಯಾಮ ರಣೇ ತಸ್ಮಿನ್ಗಿರೀನ್ವಜ್ರಹತಾನಿವ।।
ವಜ್ರದ ಹೊಡೆತಕ್ಕೆ ಸಿಕ್ಕ ಗಿರಿಗಳಂತೆ ಭೀಮಸೇನನ ಒಂದೊಂದು ಗದಾ ಪ್ರಹಾರಕ್ಕೆ ಒಂದೊಂದು ಆನೆಯು ಸತ್ತು ಬೀಳುತ್ತಿರುವುದನ್ನು ಕಂಡೆವು.
06058047a ಭಗ್ನದಂತಾನ್ಭಗ್ನಕಟಾನ್ಭಗ್ನಸಕ್ಥಾಂಶ್ಚ ವಾರಣಾನ್।
06058047c ಭಗ್ನಪೃಷ್ಠಾನ್ಭಗ್ನಕುಂಭಾನ್ನಿಹತಾನ್ಪರ್ವತೋಪಮಾನ್।।
ಆ ಪರ್ವತೋಪಮ ಗಜಗಳು ದಂತಗಳು ಮುರಿದು, ಸೊಂಡಿಲುಗಳು ತುಂಡಾಗಿ, ತೊಡೆಗಳು ಒಡೆದು ಹೋಗಿ, ಹಿಂಬಾಗಗಳು ಭಗ್ನವಾಗಿ, ಕುಂಭಗಳು ಒಡೆದುಹೋಗಿ ಬಿದ್ದಿದ್ದವು.
06058048a ನದತಃ ಸೀದತಶ್ಚಾನ್ಯಾನ್ವಿಮುಖಾನ್ಸಮರೇ ಗಜಾನ್।
06058048c ವಿಮೂತ್ರಾನ್ಭಗ್ನಸಂವಿಗ್ನಾಂಸ್ತಥಾ ವಿಶಕೃತೋಽಪರಾನ್।।
ಕೆಲವು ಕೂಗುತ್ತಿದ್ದವು, ಕೆಲವು ಸಂಕಟಪಡುತ್ತಿದ್ದವು, ಕೆಲವು ಆನೆಗಳು ಸಮರದಿಂದ ಓಡಿ ಹೋಗುತ್ತಿದ್ದವು, ಕೆಲವು ಮಲಮೂತ್ರ ವಿಸರ್ಜನೆ ಮಾಡುತ್ತಿದ್ದವು.
06058049a ಭೀಮಸೇನಸ್ಯ ಮಾರ್ಗೇಷು ಗತಾಸೂನ್ಪರ್ವತೋಪಮಾನ್।
06058049c ಅಪಶ್ಯಾಮ ಹತಾನ್ನಾಗಾನ್ನಿಷ್ಟನಂತಸ್ತಥಾಪರೇ।।
ಭೀಮಸೇನನ ಮಾರ್ಗದಲ್ಲಿ ಸತ್ತು ಬಿದ್ದಿದ್ದ ಪರ್ವತೋಪಮ ಆನೆಗಳನ್ನು ನೋಡಿದೆವು. ಕೆಲವು ಮೂರ್ಛೆಹೋಗಿ ಬಾಯಲ್ಲಿ ನೊರೆಯನ್ನು ಸುರಿಸುತ್ತಿದ್ದವು.
06058050a ವಮಂತೋ ರುಧಿರಂ ಚಾನ್ಯೇ ಭಿನ್ನಕುಂಭಾ ಮಹಾಗಜಾಃ।
06058050c ವಿಹ್ವಲಂತೋ ಗತಾ ಭೂಮಿಂ ಶೈಲಾ ಇವ ಧರಾತಲೇ।।
ಕೆಲವು ಮಹಾಗಜಗಳು ಕುಂಭವು ಒಡೆದು ರಕ್ತವನ್ನು ಕಾರುತ್ತಿದ್ದವು. ಕೆಲವು ಧರೆಗುರುಳಿದ ಪರ್ವತಗಳಂತೆ ಭೂಮಿಯಮೇಲೆ ಒದ್ದಾಡುತ್ತಿದ್ದವು.
06058051a ಮೇದೋರುಧಿರದಿಗ್ಧಾಂಗೋ ವಸಾಮಜ್ಜಾಸಮುಕ್ಷಿತಃ।
06058051c ವ್ಯಚರತ್ಸಮರೇ ಭೀಮೋ ದಂಡಪಾಣಿರಿವಾಂತಕಃ।।
ರಕ್ತ-ಮೇದಸ್ಸಿನಿಂದ ತೋಯ್ದುಹೋದ ಅಂಗಾಗಗಳಿಂದ, ಮಾಂಸಮಜ್ಜೆಗಳು ಮೆತ್ತಿಕೊಂಡಿದ್ದ ಭೀಮನು ಸಮರದಲ್ಲಿ ದಂಡವನ್ನು ಹಿಡಿದ ಅಂತಕನಂತೆ ಸಂಚರಿಸುತ್ತಿದ್ದನು.
06058052a ಗಜಾನಾಂ ರುಧಿರಾಕ್ತಾಂ ತಾಂ ಗದಾಂ ಬಿಭ್ರದ್ವೃಕೋದರಃ।
06058052c ಘೋರಃ ಪ್ರತಿಭಯಶ್ಚಾಸೀತ್ಪಿನಾಕೀವ ಪಿನಾಕಧೃಕ್।।
ಆನೆಗಳ ರಕ್ತದಿಂದ ಲೇಪನಗೊಂಡ ಆ ಗದೆಯಿಂದ ವೃಕೋದರನು ಪಿನಾಕವನ್ನು ಹಿಡಿದ ಪಿನಾಕಿಯಂತೆ ಘೋರನೂ ಭಯಂಕರನೂ ಆಗಿ ತೋರುತ್ತಿದ್ದನು.
06058053a ನಿರ್ಮಥ್ಯಮಾನಾಃ ಕ್ರುದ್ಧೇನ ಭೀಮಸೇನೇನ ದಂತಿನಃ।
06058053c ಸಹಸಾ ಪ್ರಾದ್ರವಂ ಶಿಷ್ಟಾ ಮೃದ್ನಂತಸ್ತವ ವಾಹಿನೀಂ।।
ಕ್ರುದ್ಧ ಭೀಮಸೇನನನಿಂದ ತಪ್ಪಿಸಿಕೊಳ್ಳುತ್ತಿರುವ ಆ ಆನೆಗಳು ಅವಸರದಲ್ಲಿ ಓಡುತ್ತ ನಿನ್ನದೇ ಸೇನೆಯವರನ್ನು ತುಳಿಯುತ್ತಿದ್ದವು.
06058054a ತಂ ಹಿ ವೀರಂ ಮಹೇಷ್ವಾಸಾಃ ಸೌಭದ್ರಪ್ರಮುಖಾ ರಥಾಃ।
06058054c ಪರ್ಯರಕ್ಷಂತ ಯುಧ್ಯಂತಂ ವಜ್ರಾಯುಧಮಿವಾಮರಾಃ।।
ಸೌಭದ್ರ ಪ್ರಮುಖರಾದ ಮಹೇಷ್ವಾಸ ಮಹಾರಥರು ಯುದ್ಧಮಾಡುತ್ತಿರುವ ಆ ವೀರನನ್ನು ದೇವತೆಗಳು ವಜ್ರಾಯುಧವನ್ನು ರಕ್ಷಿಸುವಂತೆ ರಕ್ಷಿಸುತ್ತಿದ್ದರು.
06058055a ಶೋಣಿತಾಕ್ತಾಂ ಗದಾಂ ಬಿಭ್ರದುಕ್ಷಿತೋ ಗಜಶೋಣಿತೈಃ।
06058055c ಕೃತಾಂತ ಇವ ರೌದ್ರಾತ್ಮಾ ಭೀಮಸೇನೋ ವ್ಯದೃಶ್ಯತ।।
ಆನೆಗಳ ರಕ್ತದಿಂದ ನೆನೆದು ರಕ್ತದಿಂದ ಬಳಿಯಲ್ಪಟ್ಟ ಗದೆಯನ್ನು ತಿರುಗಿಸುತ್ತಿದ್ದ ಭೀಮಸೇನನು ಕೃತಾಂತನಂತೆ ರೌದ್ರಾತ್ಮನಾಗಿ ಕಂಡನು.
06058056a ವ್ಯಾಯಚ್ಛಮಾನಂ ಗದಯಾ ದಿಕ್ಷು ಸರ್ವಾಸು ಭಾರತ।
06058056c ನೃತ್ಯಮಾನಮಪಶ್ಯಾಮ ನೃತ್ಯಂತಮಿವ ಶಂಕರಂ।।
ಭಾರತ! ಗದೆಯನ್ನು ಎಲ್ಲ ದಿಕ್ಕುಗಳಲ್ಲಿಯೂ ವ್ಯಾಯಾಮ ಮಾಡುತ್ತಿದ್ದಾನೋ ಎನ್ನುವಂತೆ ತಿರುಗಿಸುತ್ತಿದ್ದ ಅವನು ಪ್ರಳಯಕಾಲದಲ್ಲಿ ಶಂಕರನು ನರ್ತಿಸುವಂತೆ ನರ್ತಿಸುತ್ತಿರುವುದು ಕಂಡುಬಂದಿತು.
06058057a ಯಮದಂಡೋಪಮಾಂ ಗುರ್ವೀಮಿಂದ್ರಾಶನಿಸಮಸ್ವನಾಂ।
06058057c ಅಪಶ್ಯಾಮ ಮಹಾರಾಜ ರೌದ್ರಾಂ ವಿಶಸನೀಂ ಗದಾಂ।।
ಮಹಾರಾಜ! ಯಮನ ದಂಡದಂತಿರುವ ಇಂದ್ರನ ವಜ್ರಾಯುಧ ಸಮಾನ ಧ್ವನಿಯಿಂದ ಕೂಡಿದ್ದ ರೌದ್ರ ಭಾರ ಗದೆಯನ್ನು ನೋಡಿದೆವು.
06058058a ವಿಮಿಶ್ರಾಂ ಕೇಶಮಜ್ಜಾಭಿಃ ಪ್ರದಿಗ್ಧಾಂ ರುಧಿರೇಣ ಚ।
06058058c ಪಿನಾಕಮಿವ ರುದ್ರಸ್ಯ ಕ್ರುದ್ಧಸ್ಯಾಭಿಘ್ನತಃ ಪಶೂನ್।।
ಕೂದಲು-ಮಜ್ಜೆಗಳಿಂದ ಮಿಶ್ರಿತ ಲೇಪನಗೊಂಡು, ರಕ್ತದಿಂದ ತೋಯ್ದು ಅದು ಪಶುಗಳನ್ನು ಸಂಹರಿಸುವ ಕ್ರುದ್ಧ ರುದ್ರನ ಪಿನಾಕದಂತಿತ್ತು.
06058059a ಯಥಾ ಪಶೂನಾಂ ಸಂಘಾತಂ ಯಷ್ಟ್ಯಾ ಪಾಲಃ ಪ್ರಕಾಲಯೇತ್।
06058059c ತಥಾ ಭೀಮೋ ಗಜಾನೀಕಂ ಗದಯಾ ಪರ್ಯಕಾಲಯತ್।।
ಪ್ರಳಯಕಾಲದಲ್ಲಿ ಪಶುಗಳನ್ನು ಹೊಡೆದು ಕೊಲ್ಲುವಂತೆ, ಗೋಪಾಲಕನು ಹೊಡೆದೋಡಿಸುವಂತೆ ಭೀಮನು ಗಜಸೇನೆಯನ್ನು ಬೆನ್ನಟ್ಟಿ ಹೊಡೆಯುತ್ತಿದ್ದನು.
06058060a ಗದಯಾ ವಧ್ಯಮಾನಾಸ್ತೇ ಮಾರ್ಗಣೈಶ್ಚ ಸಮಂತತಃ।
06058060c ಸ್ವಾನ್ಯನೀಕಾನಿ ಮೃದ್ನಂತಃ ಪ್ರಾದ್ರವನ್ ಕುಂಜರಾಸ್ತವ।।
ಮಾರ್ಗದಲ್ಲಿ ಎಲ್ಲ ಕಡೆಗಳಿಂದಲೂ ಗದೆಯ ಪ್ರಹಾರಕ್ಕೆ ಸಿಲುಕಿದ ಆನೆಗಳು ನಿನ್ನದೇ ಸೇನೆಗಳನ್ನು ತುಳಿದು ಪಲಾಯನ ಮಾಡುತ್ತಿದ್ದವು.
06058061a ಮಹಾವಾತ ಇವಾಭ್ರಾಣಿ ವಿಧಮಿತ್ವಾ ಸ ವಾರಣಾನ್।
06058061c ಅತಿಷ್ಠತ್ತುಮುಲೇ ಭೀಮಃ ಶ್ಮಶಾನ ಇವ ಶೂಲಭೃತ್।।
ಭಿರುಗಾಳಿಯು ಮೋಡಗಳನ್ನು ಚಿಂದಿಮಾಡಿ ಚದುರಿಸುವಂತೆ ಭೀಮನು ಆನೆಗಳನ್ನು ತುಂಡುಮಾಡಿ ಶ್ಮಶಾನದಲ್ಲಿ ಶೂಲಪಾಣಿಯಂತೆ ಯುದ್ಧದಲ್ಲಿ ನಿಂತಿದ್ದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಚತುರ್ಥದಿವಸೇ ಭೀಮಯುದ್ಧೇ ಅಷ್ಠಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಚತುರ್ಥದಿವಸೇ ಭೀಮಯುದ್ಧ ಎನ್ನುವ ಐವತ್ತೆಂಟನೇ ಅಧ್ಯಾಯವು.
-
ಋತಾಯನನ ಮಗ ಶಲ್ಯ (ಭಾರತ ದರ್ಶನ, ಸಂಪುಟ 15, ಪುಟ 1810) ↩︎