ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 53
ಸಾರ
ಸಂಕುಲ ಯುದ್ಧ (1-34).
06053001 ಸಂಜಯ ಉವಾಚ।
06053001a ತತೋ ವ್ಯೂಢೇಷ್ವನೀಕೇಷು ತಾವಕೇಷ್ವಿತರೇಷು ಚ।
06053001c ಧನಂಜಯೋ ರಥಾನೀಕಮವಧೀತ್ತವ ಭಾರತ।
06053001e ಶರೈರತಿರಥೋ ಯುದ್ಧೇ ಪಾತಯನ್ರಥಯೂಥಪಾನ್।।
ಸಂಜಯನು ಹೇಳಿದನು: “ಭಾರತ! ಆಗ ನಿನ್ನವರು ಮತ್ತು ಶತ್ರುಸೇನೆಗಳು ವ್ಯೂಹವನ್ನು ರಚಿಸಿಕೊಂಡಿರಲು ಅತಿರಥ ಧನಂಜಯನು ಯುದ್ಧಲ್ಲಿ ಅಲ್ಪವೇ ಸಮಯದಲ್ಲಿ ಶರಗಳಿಂದ ನಿನ್ನ ರಥಸೇನೆಯನ್ನು ವಧಿಸಿ ರಥಯೂಥಪರನ್ನು ಬೀಳಿಸಿದನು.
06053002a ತೇ ವಧ್ಯಮಾನಾಃ ಪಾರ್ಥೇನ ಕಾಲೇನೇವ ಯುಗಕ್ಷಯೇ।
06053002c ಧಾರ್ತರಾಷ್ಟ್ರಾ ರಣೇ ಯತ್ತಾಃ ಪಾಂಡವಾನ್ಪ್ರತ್ಯಯೋಧಯನ್।
06053002e ಪ್ರಾರ್ಥಯಾನಾ ಯಶೋ ದೀಪ್ತಂ ಮೃತ್ಯುಂ ಕೃತ್ವಾ ನಿವರ್ತನಂ।।
ಯುಗಕ್ಷಯದಲ್ಲಿ ಕಾಲನಂತೆ ಪಾರ್ಥನು ಅವರನ್ನು ವಧಿಸುತ್ತಿರಲು ಬೆಳಗುವ ಯಶಸ್ಸನ್ನು ಬಯಸುತ್ತಾ ಮೃತ್ಯುವನ್ನೇ ಪಲಾಯನವನ್ನಾಗಿ ಮಾಡಿಕೊಂಡು ಧಾರ್ತರಾಷ್ಟ್ರರು ರಣದಲ್ಲಿ ಪಾಂಡವನೊಂದಿಗೆ ಪ್ರತಿಯುದ್ಧಮಾಡಲು, ಪ್ರಯತ್ನಿಸಿದರು.
06053003a ಏಕಾಗ್ರಮನಸೋ ಭೂತ್ವಾ ಪಾಂಡವಾನಾಂ ವರೂಥಿನೀಂ।
06053003c ಬಭಂಜುರ್ಬಹುಶೋ ರಾಜಂಸ್ತೇ ಚಾಭಜ್ಯಂತ ಸಮ್ಯುಗೇ।।
ಸಂಯುಗದಲ್ಲಿ ಏಕಾಗ್ರಚಿತ್ತರಾಗಿ ಅವರು ಪಾಂಡವರ ಸೇನೆಗಳನ್ನು ಅನೇಕ ಬಾರಿ ಧ್ವಂಸಗೊಳಿಸಿದರು.
06053004a ದ್ರವದ್ಭಿರಥ ಭಗ್ನೈಶ್ಚ ಪರಿವರ್ತದ್ಭಿರೇವ ಚ।
06053004c ಪಾಂಡವೈಃ ಕೌರವೈಶ್ಚೈವ ನ ಪ್ರಜ್ಞಾಯತ ಕಿಂ ಚನ।।
ರಥಗಳು ಮುರಿದು ಓಡಿಹೋಗುತ್ತಿದ್ದರು. ಹಿಂದಿರುಗಿ ಬರುತ್ತಿದ್ದರು ಕೂಡ. ಅವರಲ್ಲಿ ಪಾಂಡವರ್ಯಾರು ಕೌರವರ್ಯಾರು ಯಾರಿಗೂ ಗೊತ್ತಾಗುತ್ತಿರಲಿಲ್ಲ.
06053005a ಉದತಿಷ್ಠದ್ರಜೋ ಭೌಮಂ ಚಾದಯಾನಂ ದಿವಾಕರಂ।
06053005c ದಿಶಃ ಪ್ರತಿದಿಶೋ ವಾಪಿ ತತ್ರ ಜಜ್ಞುಃ ಕಥಂ ಚನ।।
ದಿವಾಕರನನ್ನು ಮುಸುಕುವಷ್ಟು ಧೂಳು ಭೂಮಿಯಲ್ಲಿ ಎದ್ದಿತು. ಅಲ್ಲಿ ದಿಕ್ಕುಗಳ್ಯಾವುವು ಉಪದಿಕ್ಕುಗಳ್ಯಾವು ಯಾವುದೂ ತಿಳಿಯುತ್ತಿರಲಿಲ್ಲ.
06053006a ಅನುಮಾನೇನ ಸಂಜ್ಞಾಭಿರ್ನಾಮಗೋತ್ರೈಶ್ಚ ಸಂಯುಗೇ।
06053006c ವರ್ತತೇ ಸ್ಮ ತದಾ ಯುದ್ಧಂ ತತ್ರ ತತ್ರ ವಿಶಾಂ ಪತೇ।।
ವಿಶಾಂಪತೇ! ಸಂಯುಗದ ಅಲ್ಲಲ್ಲಿ ಅನುಮಾನದಿಂದ ಹೆಸರು-ಗೋತ್ರಗಳನ್ನು ಹೇಳಿಕೊಂಡು ಯುದ್ಧಮಾಡುತ್ತಿದ್ದರು.
06053007a ನ ವ್ಯೂಹೋ ಭಿದ್ಯತೇ ತತ್ರ ಕೌರವಾಣಾಂ ಕಥಂ ಚನ।
06053007c ರಕ್ಷಿತಃ ಸತ್ಯಸಂಧೇನ ಭಾರದ್ವಾಜೇನ ಧೀಮತಾ।।
ಅಲ್ಲಿ ಏನು ಮಾಡಿದರೂ ಧೀಮತ ಸತ್ಯಸಂಧ ಭಾರದ್ವಾಜನಿಂದ ರಕ್ಷಿತವಾದ ಕೌರವರ ವ್ಯೂಹವನ್ನು ಭೇದಿಸಲು ಸಾಧ್ಯವಾಗಲಿಲ್ಲ.
06053008a ತಥೈವ ಪಾಂಡವೇಯಾನಾಂ ರಕ್ಷಿತಃ ಸವ್ಯಸಾಚಿನಾ।
06053008c ನಾಭಿಧ್ಯತ ಮಹಾವ್ಯೂಹೋ ಭೀಮೇನ ಚ ಸುರಕ್ಷಿತಃ।।
ಹಾಗೆಯೇ ಸವ್ಯಸಾಚಿಯಿಂದ ರಕ್ಷಿತವಾದ, ಭೀಮನಿಂದ ಸುರಕ್ಷಿತವಾದ ಮಹಾವ್ಯೂಹವನ್ನು ಭೇದಿಸಲಾಗಲಿಲ್ಲ.
06053009a ಸೇನಾಗ್ರಾದಭಿನಿಷ್ಪತ್ಯ ಪ್ರಾಯುಧ್ಯಂಸ್ತತ್ರ ಮಾನವಾಃ।
06053009c ಉಭಯೋಃ ಸೇನಯೋ ರಾಜನ್ವ್ಯತಿಷಕ್ತರಥದ್ವಿಪಾಃ।।
ರಾಜನ್! ಎರಡೂ ಸೇನೆಗಳಲ್ಲಿ ಸೇನೆಯ ಅಗ್ರಭಾಗವನ್ನು ಬಿಟ್ಟು, ರಥ-ಗಜಗಳನ್ನು ತೊರೆದು ಹೊರಗೆ ನಿಂತು ಯುದ್ಧಮಾಡುತ್ತಿದ್ದರು.
06053010a ಹಯಾರೋಹೈರ್ಹಯಾರೋಹಾಃ ಪಾತ್ಯಂತೇ ಸ್ಮ ಮಹಾಹವೇ।
06053010c ಋಷ್ಟಿಭಿರ್ವಿಮಲಾಗ್ರಾಭಿಃ ಪ್ರಾಸೈರಪಿ ಚ ಸಂಯುಗೇ।।
ಆ ಮಹಾಹವ ಸಂಯುಗದಲ್ಲಿ ಹೊಳೆಯುತ್ತಿರುವ ತುದಿಯ ಋಷ್ಟಿಗಳಿಂದ ಮತ್ತು ಪ್ರಾಸಗಳಿಂದ ಹಯಾರೋಹಿಗಳು ಹಯಾರೋಹಿಗಳನ್ನು ಬೀಳಿಸುತ್ತಿದ್ದರು.
06053011a ರಥೀ ರಥಿನಮಾಸಾದ್ಯ ಶರೈಃ ಕನಕಭೂಷಣೈಃ।
06053011c ಪಾತಯಾಮಾಸ ಸಮರೇ ತಸ್ಮಿನ್ನತಿಭಯಂಕರೇ।।
ಆ ಅತಿಭಯಂಕರ ಸಮರದಲ್ಲಿ ರಥಿಗಳು ಕನಕಭೂಷಣ ಶರಗಳಿಂದ ಹೊಡೆದು ರಥಿಗಳನ್ನು ಕೆಳಗುರುಳಿಸುತ್ತಿದ್ದರು.
06053012a ಗಜಾರೋಹಾ ಗಜಾರೋಹಾನ್ನಾರಾಚಶರತೋಮರೈಃ।
06053012c ಸಂಸಕ್ತಾಃ ಪಾತಯಾಮಾಸುಸ್ತವ ತೇಷಾಂ ಚ ಸಂಘಶಃ।।
ನಿನ್ನವರಲ್ಲಿರುವ ಮತ್ತು ಅವರಲ್ಲಿರುವ ಗಜಾರೋಹಿಗಳು ಗಜಾರೋಹಿಗಳನ್ನು ಒಟ್ಟುಗೂಡಿ, ಸಂಸಕ್ತರಾಗಿ, ನಾರಾಚ-ಶರ-ತೋಮರಗಳಿಂದ ಬೀಳಿಸುತ್ತಿದ್ದರು.
06053013a ಪತ್ತಿಸಂಘಾ ರಣೇ ಪತ್ತೀನ್ಭಿಂಡಿಪಾಲಪರಶ್ವಧೈಃ।
06053013c ನ್ಯಪಾತಯಂತ ಸಂಹೃಷ್ಟಾಃ ಪರಸ್ಪರಕೃತಾಗಸಃ।।
ರಣದಲ್ಲಿ ಪರಸ್ಪರರನ್ನು ಕೊಲ್ಲಲು ಬಯಸಿ ಸಂಹೃಷ್ಟ ಪದಾತಿಗಳು ಪದಾತಿಗಳನ್ನು ಭಿಂಡಿಪಾಲ-ಪರಶುಗಳಿಂದ ಹೊಡೆದು ಕೆಳಗುರುಳಿಸುತ್ತಿದ್ದರು.
06053014a ಪದಾತೀ ರಥಿನಂ ಸಂಖ್ಯೇ ರಥೀ ಚಾಪಿ ಪದಾತಿನಂ।
06053014c ನ್ಯಪಾತಯಚ್ಚಿತೈಃ ಶಸ್ತ್ರೈಃ ಸೇನಯೋರುಭಯೋರಪಿ।।
ಯುದ್ಧದಲ್ಲಿ ಎರಡೂ ಸೇನೆಗಳಲ್ಲಿ ಪದಾತಿಗಳು ರಥಿಗಳನ್ನೂ, ರಥಿಗಳು ಪದಾತಿಗಳನ್ನೂ ನಿಶಿತ ಶರಗಳಿಂದ ಕೆಳಗೆ ಬೀಳಿಸುತ್ತಿದ್ದರು.
06053015a ಗಜಾರೋಹಾ ಹಯಾರೋಹಾನ್ಪಾತಯಾಂ ಚಕ್ರಿರೇ ತದಾ।
06053015c ಹಯಾರೋಹಾ ಗಜಸ್ಥಾಂಶ್ಚ ತದದ್ಭುತಮಿವಾಭವತ್।।
ಆಗ ಗಜಾರೋಹಿಗಳು ಹಯಾರೋಹಿಗಳನ್ನೂ ಹಯಾರೋಹಿಗಳು ಗಜಾರೋಹಿಗಳನ್ನೂ ಬೀಳಿಸಲು ತೊಡಗಿ ಅಲ್ಲಿ ಅದ್ಭುತವಾಯಿತು.
06053016a ಗಜಾರೋಹವರೈಶ್ಚಾಪಿ ತತ್ರ ತತ್ರ ಪದಾತಯಃ।
06053016c ಪಾತಿತಾಃ ಸಮದೃಶ್ಯಂತ ತೈಶ್ಚಾಪಿ ಗಜಯೋಧಿನಃ।।
ಅಲ್ಲಲ್ಲಿ ಪದಾತಿಗಳು ಗಜಾರೋಹಿಗಳನ್ನೂ, ಅವರನ್ನು ಗಜಯೋಧರೂ ಉರುಳಿಸುವುದು ಕಂಡುಬಂದಿತು.
06053017a ಪತ್ತಿಸಂಘಾ ಹಯಾರೋಹೈಃ ಸಾದಿಸಂಘಾಶ್ಚ ಪತ್ತಿಭಿಃ।
06053017c ಪಾತ್ಯಮಾನಾ ವ್ಯದೃಶ್ಯಂತ ಶತಶೋಽಥ ಸಹಸ್ರಶಃ।।
ನೂರಾರು ಸಹಸ್ರಾರು ಹಯಾರೋಹಿಗಳು ಪದಾತಿಸಂಘಗಳನ್ನು ಮತ್ತು ಪದಾತಿಸಂಘಗಳು ಸಾದಿಸಂಘಗಳನ್ನು ಬೀಳಿಸುವುದು ಕಂಡುಬಂದಿತು.
06053018a ಧ್ವಜೈಸ್ತತ್ರಾಪವಿದ್ಧೈಶ್ಚ ಕಾರ್ಮುಕೈಸ್ತೋಮರೈಸ್ತಥಾ।
06053018c ಪ್ರಾಸೈಸ್ತಥಾ ಗದಾಭಿಶ್ಚ ಪರಿಘೈಃ ಕಂಪನೈಸ್ತಥಾ।।
06053019a ಶಕ್ತಿಭಿಃ ಕವಚೈಶ್ಚಿತ್ರೈಃ ಕಣಪೈರಂಕುಶೈರಪಿ।
06053019c ನಿಸ್ತ್ರಿಂಶೈರ್ವಿಮಲೈಶ್ಚಾಪಿ ಸ್ವರ್ಣಪುಂಖೈಃ ಶರೈಸ್ತಥಾ।।
06053020a ಪರಿಸ್ತೋಮೈಃ ಕುಥಾಭಿಶ್ಚ ಕಂಬಲೈಶ್ಚ ಮಹಾಧನೈಃ।
06053020c ಭೂರ್ಭಾತಿ ಭರತಶ್ರೇಷ್ಠ ಸ್ರಗ್ದಾಮೈರಿವ ಚಿತ್ರಿತಾ।।
ಆ ರಣಾಂಗಣದ ಸುತ್ತಲೂ ಧ್ವಜಗಳು, ಧನುಸ್ಸುಗಳು, ತೋಮರಗಳು ಪ್ರಾಸಗಳು, ಗದೆಗಳು, ಪರಿಘಗಳು, ಕಂಪನಗಳು, ಶಕ್ತ್ಯಾಯುಧಗಳು, ಚಿತ್ರ-ವಿಚಿತ್ರ ಕವಚಗಳು, ಕಣಪಗಳು, ಅಂಕುಶಗಳು, ಥಳಥಳಿಸುತ್ತಿದ್ದ ಖಡ್ಗಗಳು, ಸುವರ್ಣಮಯ ರೆಕ್ಕೆಗಳಿದ್ದ ಬಾಣಗಳು, ಶೂಲಗಳು, ಬಣ್ಣದ ಕಂಬಳಿಗಳು, ಬಹುಮೂಲ್ಯ ರತ್ನಗಂಬಳಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರಲು ಆ ಭೂಮಿಯು ನಾನಾ ಬಣ್ಣದ ಪುಷ್ಪಹಾರಗಳಿಂದ ಅಲಂಕೃತವಾಗಿದೆಯೋ ಎನ್ನುವಂತೆ ತೋರುತ್ತಿತ್ತು.
06053021a ನರಾಶ್ವಕಾಯೈಃ ಪತಿತೈರ್ದಂತಿಭಿಶ್ಚ ಮಹಾಹವೇ।
06053021c ಅಗಮ್ಯರೂಪಾ ಪೃಥಿವೀ ಮಾಂಸಶೋಣಿತಕರ್ದಮಾ।।
ಮಹಾಹವದಲ್ಲಿ ಬಿದ್ದಿದ್ದ ನರ-ಅಶ್ವ-ಆನೆಗಳ ಕಾಯಗಳಿಂದ ಮತ್ತು ಮಾಂಸಶೋಣಿತಕರ್ದಮಗಳಿಂದ ಕೂಡಿದ ಭೂಮಿಯು ಅಗಮ್ಯರೂಪವಾಗಿದ್ದಿತು.
06053022a ಪ್ರಶಶಾಮ ರಜೋ ಭೌಮಂ ವ್ಯುಕ್ಷಿತಂ ರಣಶೋಣಿತೈಃ।
06053022c ದಿಶಶ್ಚ ವಿಮಲಾಃ ಸರ್ವಾಃ ಸಂಬಭೂವುರ್ಜನೇಶ್ವರ।।
ಜನೇಶ್ವರ! ಭೂಮಿಯ ಧೂಳು ರಣಶೋಣಿತದೊಂದಿಗೆ ಸೇರಿ ಕೆಸರುಂಟಾಯಿತು. ಎಲ್ಲ ದಿಕ್ಕುಗಳೂ ಧೂಳಿಲ್ಲದೇ ನಿರ್ಮಲವಾದವು.
06053023a ಉತ್ಥಿತಾನ್ಯಗಣೇಯಾನಿ ಕಬಂಧಾನಿ ಸಮಂತತಃ।
06053023c ಚಿಹ್ನಭೂತಾನಿ ಜಗತೋ ವಿನಾಶಾರ್ಥಾಯ ಭಾರತ।।
ಭಾರತ! ಎಲ್ಲೆಡೆಯಲ್ಲಿಯೂ ಅಗಣಿತ ಕಬಂಧಗಳು (ರುಂಡಗಳಿಲ್ಲದ ಮುಂಡಗಳು) ಎದ್ದು ಓಡಾಡುತ್ತಿರುವುದು ಕಂಡುಬಂದಿತು. ಇದು ಜಗತ್ತಿನ ಭೂತಗಳ ವಿನಾಶದ ಚಿಹ್ನೆ.
06053024a ತಸ್ಮಿನ್ಯುದ್ಧೇ ಮಹಾರೌದ್ರೇ ವರ್ತಮಾನೇ ಸುದಾರುಣೇ।
06053024c ಪ್ರತ್ಯದೃಶ್ಯಂತ ರಥಿನೋ ಧಾವಮಾನಾಃ ಸಮಂತತಃ।।
ನಡೆಯುತ್ತಿದ್ದ ಆ ಮಹಾರೌದ್ರ ಸುದಾರುಣ ಯುದ್ಧದಲ್ಲಿ ರಥಿಗಳು ಎಲ್ಲಕಡೆ ಓಡಿಹೋಗುತ್ತಿರುವುದು ಕಂಡುಬಂದಿತು.
06053025a ತತೋ ದ್ರೋಣಶ್ಚ ಭೀಷ್ಮಶ್ಚ ಸೈಂಧವಶ್ಚ ಜಯದ್ರಥಃ।
06053025c ಪುರುಮಿತ್ರೋ ವಿಕರ್ಣಶ್ಚ ಶಕುನಿಶ್ಚಾಪಿ ಸೌಬಲಃ।।
06053026a ಏತೇ ಸಮರದುರ್ಧರ್ಷಾಃ ಸಿಂಹತುಲ್ಯಪರಾಕ್ರಮಾಃ।
06053026c ಪಾಂಡವಾನಾಮನೀಕಾನಿ ಬಭಂಜುಃ ಸ್ಮ ಪುನಃ ಪುನಃ।।
ಆಗ ದ್ರೋಣ, ಭೀಷ್ಮ, ಸೈಂಧವ ಜಯದ್ರಥ, ಪುರುಮಿತ್ರ, ವಿಕರ್ಣ, ಸೌಬಲ ಶಕುನಿ - ಈ ಸಮರದುರ್ಧರ್ಷ ಸಿಂಹತುಲ್ಯಪರಾಕ್ರಮಿಗಳು ಪುನಃ ಪುನಃ ಪಾಂಡವರ ಸೇನೆಗಳನ್ನು ಸದೆಬಡಿದರು.
06053027a ತಥೈವ ಭೀಮಸೇನೋಽಪಿ ರಾಕ್ಷಸಶ್ಚ ಘಟೋತ್ಕಚಃ।
06053027c ಸಾತ್ಯಕಿಶ್ಚೇಕಿತಾನಶ್ಚ ದ್ರೌಪದೇಯಾಶ್ಚ ಭಾರತ।।
06053028a ತಾವಕಾಂಸ್ತವ ಪುತ್ರಾಂಶ್ಚ ಸಹಿತಾನ್ಸರ್ವರಾಜಭಿಃ।
06053028c ದ್ರಾವಯಾಮಾಸುರಾಜೌ ತೇ ತ್ರಿದಶಾ ದಾನವಾನಿವ।।
ಭಾರತ! ಹಾಗೆಯೇ ಭೀಮಸೇನ, ರಾಕ್ಷಸ ಘಟೋತ್ಕಚ, ಸಾತ್ಯಕಿ, ಚೇಕಿತಾನ ಮತ್ತು ದ್ರೌಪದೇಯರೂ ಕೂಡ ನಿನ್ನವರನ್ನು, ಸರ್ವರಾಜರೊಂದಿಗೆ ನಿನ್ನ ಪುತ್ರರನ್ನು ದೇವತೆಗಳು ದಾನವರನ್ನು ಹೇಗೋ ಹಾಗೆ ಓಡಿಸಿದರು.
06053029a ತಥಾ ತೇ ಸಮರೇಽನ್ಯೋನ್ಯಂ ನಿಘ್ನಂತಃ ಕ್ಷತ್ರಿಯರ್ಷಭಾಃ।
06053029c ರಕ್ತೋಕ್ಷಿತಾ ಘೋರರೂಪಾ ವಿರೇಜುರ್ದಾನವಾ ಇವ।।
ಹಾಗೆ ಸಮರದಲ್ಲಿ ಅನ್ಯೋನ್ಯರನ್ನು ಸಂಹರಿಸುತ್ತಿದ್ದ ಕ್ಷತ್ರಿಯರ್ಷಭರು ರಕ್ತದಿಂದ ತೋಯ್ದು ಘೋರರೂಪಿಗಳಾಗಿ ದಾನವರಂತೆ ರಾಜಿಸಿದರು.
06053030a ವಿನಿರ್ಜಿತ್ಯ ರಿಪೂನ್ವೀರಾಃ ಸೇನಯೋರುಭಯೋರಪಿ।
06053030c ವ್ಯದೃಶ್ಯಂತ ಮಹಾಮಾತ್ರಾ ಗ್ರಹಾ ಇವ ನಭಸ್ತಲೇ।।
ಎರಡೂ ಸೇನೆಗಳಲ್ಲಿ ವೀರರು ರಿಪುಗಳನ್ನು ಸೋಲಿಸಿ ನಭಸ್ತಲದಲ್ಲಿರುವ ಮಹಾಮಾತ್ರ ಗ್ರಹಗಳಂತೆ ತೋರುತ್ತಿದ್ದರು.
06053031a ತತೋ ರಥಸಹಸ್ರೇಣ ಪುತ್ರೋ ದುರ್ಯೋಧನಸ್ತವ।
06053031c ಅಭ್ಯಯಾತ್ಪಾಂಡವಾನ್ಯುದ್ಧೇ ರಾಕ್ಷಸಂ ಚ ಘಟೋತ್ಕಚಂ।।
ಆಗ ನಿನ್ನ ಪುತ್ರ ದುರ್ಯೋಧನನು ಸಹಸ್ರ ರಥಗಳೊಂದಿಗೆ ಯುದ್ಧದಲ್ಲಿ ಪಾಂಡವರನ್ನು ಮತ್ತು ರಾಕ್ಷಸ ಘಟೋತ್ಕಚನನ್ನು ಎದುರಿಸಿದನು.
06053032a ತಥೈವ ಪಾಂಡವಾಃ ಸರ್ವೇ ಮಹತ್ಯಾ ಸೇನಯಾ ಸಹ।
06053032c ದ್ರೋಣಭೀಷ್ಮೌ ರಣೇ ಶೂರೌ ಪ್ರತ್ಯುದ್ಯಯುರರಿಂದಮೌ।।
ಹಾಗೆಯೇ ಪಾಂಡವರೆಲ್ಲರೂ ಮಹಾಸೇನೆಯೊಂದಿಗೆ ರಣದಲ್ಲಿ ಅರಿಂದಮ ಶೂರ ದ್ರೋಣ-ಭೀಷ್ಮರೊಂದಿಗೆ ಪ್ರತಿಯುದ್ಧ ಮಾಡಿದರು.
06053033a ಕಿರೀಟೀ ತು ಯಯೌ ಕ್ರುದ್ಧಃ ಸಮರ್ಥಾನ್ಪಾರ್ಥಿವೋತ್ತಮಾನ್।
06053033c ಆರ್ಜುನಿಃ ಸಾತ್ಯಕಿಶ್ಚೈವ ಯಯತುಃ ಸೌಬಲಂ ಬಲಂ।।
ಕ್ರುದ್ಧ ಕಿರೀಟಿಯು ಸಮರ್ಥಿಸುತ್ತಿದ್ದ ಪಾರ್ಥಿವೋತ್ತಮರ ಮೇಲೆರಗಿದನು. ಆರ್ಜುನಿ-ಸಾತ್ಯಕಿಯರು ಸೌಬಲನ ಬಲವನ್ನು ಎದುರಿಸಿದರು.
06053034a ತತಃ ಪ್ರವವೃತೇ ಭೂಯಃ ಸಂಗ್ರಾಮೋ ಲೋಮಹರ್ಷಣಃ।
06053034c ತಾವಕಾನಾಂ ಪರೇಷಾಂ ಚ ಸಮರೇ ವಿಜಿಗೀಷತಾಂ।।
ಆಗ ಪುನಃ ಸಮರದಲ್ಲಿ ಜಯವನ್ನು ಬಯಸುತ್ತಿದ್ದ ನಿನ್ನವರು ಮತ್ತು ಶತ್ರುಗಳ ನಡುವೆ ಲೋಮಹರ್ಷಣ ಸಂಗ್ರಾಮವು ನಡೆಯಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ತೃತೀಯಯುದ್ಧದಿವಸೇ ಸಂಕುಲಯುದ್ಧೇ ತ್ರಿಪಂಚಾಶತ್ತಮೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ತೃತೀಯಯುದ್ಧದಿವಸೇ ಸಂಕುಲಯುದ್ಧ ಎನ್ನುವ ಐವತ್ಮೂರನೇ ಅಧ್ಯಾಯವು.