ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭೀಷ್ಮವಧ ಪರ್ವ
ಅಧ್ಯಾಯ 47
ಸಾರ
ಕೌರವ ಸೇನೆಯ ವ್ಯೂಹ ರಚನೆ (1-20). ಸಿಂಹನಾದ-ಶಂಖನಾದಗಳು (21-30).
06047001 ಸಂಜಯ ಉವಾಚ।
06047001a ಕ್ರೌಂಚಂ ತತೋ ಮಹಾವ್ಯೂಹಮಭೇದ್ಯಂ ತನಯಸ್ತವ।
06047001c ವ್ಯೂಢಂ ದೃಷ್ಟ್ವಾ ಮಹಾಘೋರಂ ಪಾರ್ಥೇನಾಮಿತತೇಜಸಾ।।
06047002a ಆಚಾರ್ಯಮುಪಸಂಗಮ್ಯ ಕೃಪಂ ಶಲ್ಯಂ ಚ ಮಾರಿಷ।
06047002c ಸೌಮದತ್ತಿಂ ವಿಕರ್ಣಂ ಚ ಅಶ್ವತ್ಥಾಮಾನಮೇವ ಚ।।
06047003a ದುಃಶಾಸನಾದೀನ್ ಭ್ರಾತೄಂಶ್ಚ ಸ ಸರ್ವಾನೇವ ಭಾರತ।
06047003c ಅನ್ಯಾಂಶ್ಚ ಸುಬಹೂನ್ ಶೂರಾನ್ಯುದ್ಧಾಯ ಸಮುಪಾಗತಾನ್।।
06047004a ಪ್ರಾಹೇದಂ ವಚನಂ ಕಾಲೇ ಹರ್ಷಯಂಸ್ತನಯಸ್ತವ।
ಸಂಜಯನು ಹೇಳಿದನು: “ಭಾರತ! ಆಗ ಅಮಿತತೇಜಸ ಪಾರ್ಥರ ಮಹಾಘೋರ ಅಭೇದ್ಯ ಕ್ರೌಂಚವ್ಯೂಹವನ್ನು ನೋಡಿ ನಿನ್ನ ಮಗನು ಆಚಾರ್ಯ, ಕೃಪ, ಶಲ್ಯ, ಸೌಮದತ್ತಿ, ವಿಕರ್ಣ, ಅಶ್ವತ್ಥಾಮ, ದುಃಶಾಸನನೇ ಮೊದಲಾದ ಸಹೋದರರೆಲ್ಲರ ಹಾಗೂ ಯುದ್ಧಕ್ಕಾಗಿ ಸೇರಿರುವ ಬಹಳಷ್ಟು ಅನ್ಯ ಶೂರರ ಬಳಿಸಾರಿ ಅವರನ್ನು ಹರ್ಷಗೊಳಿಸುತ್ತಾ ಕಾಲಕ್ಕೆ ತಕ್ಕುದಾದ ಈ ಮಾತನ್ನು ಆಡಿದನು:
06047004c ನಾನಾಶಸ್ತ್ರಪ್ರಹರಣಾಃ ಸರ್ವೇ ಶಸ್ತ್ರಾಸ್ತ್ರವೇದಿನಃ।।
06047005a ಏಕೈಕಶಃ ಸಮರ್ಥಾ ಹಿ ಯೂಯಂ ಸರ್ವೇ ಮಹಾರಥಾಃ।
06047005c ಪಾಂಡುಪುತ್ರಾನ್ರಣೇ ಹಂತುಂ ಸಸೈನ್ಯಾನ್ಕಿಮು ಸಂಹತಾಃ।।
“ನೀವೆಲ್ಲರೂ ನಾನಾ ಶಸ್ತ್ರಪ್ರಹರಣಮಾಡಬಲ್ಲರಿ ಮತ್ತು ಶಸ್ತ್ರಾಸ್ತ್ರಗಳನ್ನು ತಿಳಿದಿರುವಿರಿ. ನೀವೆಲ್ಲರಲ್ಲಿ ಒಬ್ಬೊಬ್ಬರೂ ಸೈನ್ಯದೊಂದಿಗಿರುವ ಪಾಂಡುಪುತ್ರರನ್ನು ರಣದಲ್ಲಿ ಕೊಲ್ಲಲು ಸಮರ್ಥರಾಗಿದ್ದೀರಿ. ನೀವೆಲ್ಲ ಒಟ್ಟಿಗೆ ಇರುವಾಗ ಇನ್ನೇನು?
06047006a ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಂ।
06047006c ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಪಾರ್ಥಿವಸತ್ತಮಾಃ।।
ಭೀಷ್ಮನಿಂದ ರಕ್ಷಿತವಾದ ನಮ್ಮ ಸೇನೆಯು ಅಪರ್ಯಾಪ್ತವಾದುದು. ಆದರೆ ಪಾರ್ಥಿವಸತ್ತಮರ ಅವರ ಬಲವು ಪರ್ಯಾಪ್ತವಾದುದು.
06047007a ಸಂಸ್ಥಾನಾಃ ಶೂರಸೇನಾಶ್ಚ ವೇಣಿಕಾಃ ಕುಕುರಾಸ್ತಥಾ।
06047007c ಆರೇವಕಾಸ್ತ್ರಿಗರ್ತಾಶ್ಚ ಮದ್ರಕಾ ಯವನಾಸ್ತಥಾ।।
06047008a ಶತ್ರುಂಜಯೇನ ಸಹಿತಾಸ್ತಥಾ ದುಃಶಾಸನೇನ ಚ।
06047008c ವಿಕರ್ಣೇನ ಚ ವೀರೇಣ ತಥಾ ನಂದೋಪನಂದಕೈಃ।।
06047009a ಚಿತ್ರಸೇನೇನ ಸಹಿತಾಃ ಸಹಿತಾಃ ಪಾಣಿಭದ್ರಕೈಃ।
06047009c ಭೀಷ್ಮಮೇವಾಭಿರಕ್ಷಂತು ಸಹ ಸೈನ್ಯಪುರಸ್ಕೃತಾಃ।।
ಸಂಸ್ಥಾನಿಕರು, ಶೂರಸೇನರು, ವೇಣಿಕರು, ಕುಕುರರು, ಆರೇವಕರು, ತ್ರಿಗರ್ತರು, ಮದ್ರಕರು, ಯವನರು ಶತ್ರುಂಜಯನ ಸಹಿತ ಮತ್ತು ದುಃಶಾಸನ, ವೀರ ವಿಕರ್ಣ, ನಂದೋಪನಂದಕರು ಮತ್ತು ಚಿತ್ರಸೇನನ ಸಹಿತ, ಪಾಣಿಭದ್ರಕರ ಸಹಿತ ಸೈನ್ಯವನ್ನು ಮುಂದಿಟ್ಟುಕೊಂಡು ಭೀಷ್ಮನನ್ನು ರಕ್ಷಿಸಲಿ.”
06047010a ತತೋ ದ್ರೋಣಶ್ಚ ಭೀಷ್ಮಶ್ಚ ತವ ಪುತ್ರಶ್ಚ ಮಾರಿಷ।
06047010c ಅವ್ಯೂಹಂತ ಮಹಾವ್ಯೂಹಂ ಪಾಂಡೂನಾಂ ಪ್ರತಿಬಾಧನೇ।।
ಆಗ ಪಾಂಡವರನ್ನು ಪ್ರತಿಬಾಧಿಸಲು ದ್ರೋಣ, ಭೀಷ್ಮ ಮತ್ತು ನಿನ್ನ ಪುತ್ರರು ಮಹಾವ್ಯೂಹವನ್ನು ರಚಿಸಿದರು.
06047011a ಭೀಷ್ಮಃ ಸೈನ್ಯೇನ ಮಹತಾ ಸಮಂತಾತ್ಪರಿವಾರಿತಃ।
06047011c ಯಯೌ ಪ್ರಕರ್ಷನ್ಮಹತೀಂ ವಾಹಿನೀಂ ಸುರರಾಡಿವ।।
ಮಹಾಸೇನೆಯಿಂದ ಎಲ್ಲ ಕಡೆಗಳಿಂದಲೂ ಸುತ್ತುವರೆಯಲ್ಪಟ್ಟು ಭೀಷ್ಮನು ಸುರರಾಜನಂತೆ ಮಹಾ ಸೇನೆಯನ್ನು ಎಳೆದುಕೊಂಡು ಹೋದನು.
06047012a ತಮನ್ವಯಾನ್ಮಹೇಷ್ವಾಸೋ ಭಾರದ್ವಾಜಃ ಪ್ರತಾಪವಾನ್।
06047012c ಕುಂತಲೈಶ್ಚ ದಶಾರ್ಣೈಶ್ಚ ಮಾಗಧೈಶ್ಚ ವಿಶಾಂ ಪತೇ।।
06047013a ವಿದರ್ಭೈರ್ಮೇಕಲೈಶ್ಚೈವ ಕರ್ಣಪ್ರಾವರಣೈರಪಿ।
06047013c ಸಹಿತಾಃ ಸರ್ವಸೈನ್ಯೇನ ಭೀಷ್ಮಮಾಹವಶೋಭಿನಂ।।
ವಿಶಾಂಪತೇ! ಅವನನ್ನು ಹಿಂಬಾಲಿಸಿ ಪ್ರತಾಪವಾನ್ ಮಹೇಷ್ವಾಸ ಭಾರದ್ವಾಜನು ಕುಂತಲ, ದಶಾರ್ಣ, ಮಾಗಧ, ವಿದರ್ಭ, ಮೇಕಲ, ಮತ್ತು ಕರ್ಣಪ್ರಾವರರ ಸರ್ವಸೇನೆಗಳ ಸಹಿತ ಭೀಷ್ಮನ ಯುದ್ಧವನ್ನು ಶೋಭಿಸುತ್ತಾ ನಡೆದನು.
06047014a ಗಾಂಧಾರಾಃ ಸಿಂಧುಸೌವೀರಾಃ ಶಿಬಯೋಽಥ ವಸಾತಯಃ।
06047014c ಶಕುನಿಶ್ಚ ಸ್ವಸೈನ್ಯೇನ ಭಾರದ್ವಾಜಮಪಾಲಯತ್।।
ಗಾಂಧಾರರು, ಸಿಂಧು-ಸೌವೀರರು, ಶಿಬಿ, ವಸಾತಯರು ಮತ್ತು ಶಕುನಿಯರು ಸ್ವಸೇನೆಗಳೊಂದಿಗೆ ಭಾರದ್ವಾಜನನ್ನು ರಕ್ಷಿಸಿದರು.
06047015a ತತೋ ದುರ್ಯೋಧನೋ ರಾಜಾ ಸಹಿತಃ ಸರ್ವಸೋದರೈಃ।
06047015c ಅಶ್ವಾತಕೈರ್ವಿಕರ್ಣೈಶ್ಚ ತಥಾ ಶರ್ಮಿಲಕೋಸಲೈಃ।।
06047016a ದರದೈಶ್ಚೂಚುಪೈಶ್ಚೈವ ತಥಾ ಕ್ಷುದ್ರಕಮಾಲವೈಃ।
06047016c ಅಭ್ಯರಕ್ಷತ ಸಂಹೃಷ್ಟಃ ಸೌಬಲೇಯಸ್ಯ ವಾಹಿನೀಂ।।
ಆಗ ರಾಜಾ ದುರ್ಯೋಧನನು ಸರ್ವಸೋದರರೊಂದಿಗೆ ಅಶ್ವಾತಕ-ವಿಕರ್ಣ-ಶರ್ಮಿಲ-ಕೋಸಲ-ದರದ-ಚೂಚುಪ-ಕ್ಷುದ್ರಕ-ಮಾಲವರನ್ನು ಕೂಡಿಕೊಂಡು ಸಂತೋಷದಿಂದ ಸೌಬಲನ ವಾಹಿನಿಯನ್ನು ರಕ್ಷಿಸಿದನು.
06047017a ಭೂರಿಶ್ರವಾಃ ಶಲಃ ಶಲ್ಯೋ ಭಗದತ್ತಶ್ಚ ಮಾರಿಷ।
06047017c ವಿಂದಾನುವಿಂದಾವಾವಂತ್ಯೌ ವಾಮಂ ಪಾರ್ಶ್ವಮಪಾಲಯನ್।।
ಮಾರಿಷ! ಭೂರಿಶ್ರವ, ಶಲ, ಶಲ್ಯ, ಭಗದತ್ತ, ಮತ್ತು ಅವಂತಿಯ ವಿಂದಾನುವಿಂದರು ಎಡಪಾರ್ಶ್ವವನ್ನು ರಕ್ಷಿಸುತ್ತಿದ್ದರು.
06047018a ಸೌಮದತ್ತಿಃ ಸುಶರ್ಮಾ ಚ ಕಾಂಬೋಜಶ್ಚ ಸುದಕ್ಷಿಣಃ।
06047018c ಶತಾಯುಶ್ಚ ಶ್ರುತಾಯುಶ್ಚ ದಕ್ಷಿಣಂ ಪಾರ್ಶ್ವಮಾಸ್ಥಿತಾಃ।।
ಸೌಮದತ್ತಿ, ಸುಶರ್ಮ, ಕಾಂಬೋಜ, ಸುದಕ್ಷಿಣ, ಶತಾಯು, ಶ್ರುತಾಯುಗಳು ಬಲಭಾಗದಲ್ಲಿದ್ದರು.
06047019a ಅಶ್ವತ್ಥಾಮಾ ಕೃಪಶ್ಚೈವ ಕೃತವರ್ಮಾ ಚ ಸಾತ್ವತಃ।
06047019c ಮಹತ್ಯಾ ಸೇನಯಾ ಸಾರ್ಧಂ ಸೇನಾಪೃಷ್ಠೇ ವ್ಯವಸ್ಥಿತಾಃ।।
ಅಶ್ವತ್ಥಾಮ, ಕೃಪ ಮತ್ತು ಸಾತ್ವತ ಕೃತವರ್ಮರು ಒಟ್ಟಿಗೇ ಮಹಾಸೇನೆಗಳೊಂದಿಗೆ ಸೇನೆಯ ಪೃಷ್ಠಭಾಗದಲ್ಲಿದ್ದರು.
06047020a ಪೃಷ್ಠಗೋಪಾಸ್ತು ತಸ್ಯಾಸನ್ನಾನಾದೇಶ್ಯಾ ಜನೇಶ್ವರಾಃ।
06047020c ಕೇತುಮಾನ್ವಸುದಾನಶ್ಚ ಪುತ್ರಃ ಕಾಶ್ಯಸ್ಯ ಚಾಭಿಭೂಃ।।
ಅವರನ್ನು ಹಿಂಬಾಲಿಸಿ ಹೋಗುತ್ತಿದ್ದ ನಾನಾ ದೇಶಗಳ ಜನೇಶ್ವರರು, ಕೇತುಮಾನ್, ವಸುದಾನ ಮತ್ತು ಕಾಶ್ಯನ ಮಗ ಅಭಿಭೂ ಇವರು ಹಿಂಭಾಗವನ್ನು ರಕ್ಷಿಸಿದರು.
06047021a ತತಸ್ತೇ ತಾವಕಾಃ ಸರ್ವೇ ಹೃಷ್ಟಾ ಯುದ್ಧಾಯ ಭಾರತ।
06047021c ದಧ್ಮುಃ ಶಂಖಾನ್ಮುದಾ ಯುಕ್ತಾಃ ಸಿಂಹನಾದಾಂಶ್ಚ ನಾದಯನ್।।
ಭಾರತ! ಆಗ ನಿನ್ನವರೆಲ್ಲರೂ ಯುದ್ಧಕ್ಕೆ ಹರ್ಷಿತರಾಗಿ ಶಂಖಗಳನ್ನು ಊದಿದರು ಮತ್ತು ಮುದಿತರಾಗಿ ಸಿಂಹನಾದಗೈದರು.
06047022a ತೇಷಾಂ ಶ್ರುತ್ವಾ ತು ಹೃಷ್ಟಾನಾಂ ಕುರುವೃದ್ಧಃ ಪಿತಾಮಹಃ।
06047022c ಸಿಂಹನಾದಂ ವಿನದ್ಯೋಚ್ಚೈಃ ಶಂಖಂ ದಧ್ಮೌ ಪ್ರತಾಪವಾನ್।।
ಹೃಷ್ಟರಾಗಿದ್ದ ಅವರನ್ನು ಕೇಳಿ ಕುರುವೃದ್ಧ ಪಿತಾಮಹ ಪ್ರತಾಪವಾನನು ಸಿಂಹನಾದವನ್ನು ಮಾಡಿ ಜೋರಾಗಿ ಶಂಖವನ್ನು ಊದಿದನು.
06047023a ತತಃ ಶಂಖಾಶ್ಚ ಭೇರ್ಯಶ್ಚ ಪೇಶ್ಯಶ್ಚ ವಿವಿಧಾಃ ಪರೈಃ।
06047023c ಆನಕಾಶ್ಚಾಭ್ಯಹನ್ಯಂತ ಸ ಶಬ್ದಸ್ತುಮುಲೋಽಭವತ್।।
ಆಗ ಶಂಖ, ಭೇರಿ, ಪಣವ, ಢಕ್ಕೆ, ಮೃದಂಗ, ಅನಕ ಮೊದಲಾದವುಗಳು ಮೊಳಗಿದವು ಮತ್ತು ತುಮುಲಶಬ್ದವುಂಟಾಯಿತು.
06047024a ತತಃ ಶ್ವೇತೈರ್ಹಯೈರ್ಯುಕ್ತೇ ಮಹತಿ ಸ್ಯಂದನೇ ಸ್ಥಿತೌ।
06047024c ಪ್ರದಧ್ಮತುಃ ಶಂಖವರೌ ಹೇಮರತ್ನಪರಿಷ್ಕೃತೌ।।
ಶ್ವೇತಹಯಗಳನ್ನು ಕಟ್ಟಿದ್ದ ಮಹಾ ರಥದಲ್ಲಿ ಕುಳಿತಿದ್ದ ಕೃಷ್ಣಾರ್ಜುನರಿಬ್ಬರೂ ಹೇಮರತ್ನ ಪರಿಷ್ಕೃತವಾದ ಶ್ರೇಷ್ಠ ಶಂಖಗಳನ್ನು ಊದಿದರು.
06047025a ಪಾಂಚಜನ್ಯಂ ಹೃಷೀಕೇಶೋ ದೇವದತ್ತಂ ಧನಂಜಯಃ।
06047025c ಪೌಂಡ್ರಂ ದಧ್ಮೌ ಮಹಾಶಂಖಂ ಭೀಮಕರ್ಮಾ ವೃಕೋದರಃ।।
06047026a ಅನಂತವಿಜಯಂ ರಾಜಾ ಕುಂತೀಪುತ್ರೋ ಯುಧಿಷ್ಠಿರಃ।
06047026c ನಕುಲಃ ಸಹದೇವಶ್ಚ ಸುಘೋಷಮಣಿಪುಷ್ಪಕೌ।।
ಹೃಷೀಕೇಶನು ಪಾಂಚಜನ್ಯವನ್ನೂ, ಧನಂಜಯನು ದೇವದತ್ತವನ್ನೂ, ಭೀಮಕರ್ಮಿ ವೃಕೋದರನು ಮಹಾಶಂಖ ಪೌಂಡ್ರವನ್ನೂ, ರಾಜಾ ಕುಂತೀಪುತ್ರ ಯುಧಿಷ್ಠಿರನು ಅನಂತವಿಜಯವನ್ನೂ, ನಕುಲ-ಸಹದೇವರು ಸುಘೋಷ-ಮಣಿಪುಷ್ಪಕಗಳನ್ನೂ ಊದಿದರು.
06047027a ಕಾಶಿರಾಜಶ್ಚ ಶೈಬ್ಯಶ್ಚ ಶಿಖಂಡೀ ಚ ಮಹಾರಥಃ।
06047027c ಧೃಷ್ಟದ್ಯುಮ್ನೋ ವಿರಾಟಶ್ಚ ಸಾತ್ಯಕಿಶ್ಚ ಮಹಾಯಶಾಃ।।
06047028a ಪಾಂಚಾಲ್ಯಶ್ಚ ಮಹೇಷ್ವಾಸೋ ದ್ರೌಪದ್ಯಾಃ ಪಂಚ ಚಾತ್ಮಜಾಃ।
06047028c ಸರ್ವೇ ದಧ್ಮುರ್ಮಹಾಶಂಖಾನ್ಸಿಂಹನಾದಾಂಶ್ಚ ನೇದಿರೇ।।
ಕಾಶಿರಾಜ, ಶೈಭ್ಯ, ಮಹಾರಥ ಶಿಖಂಡೀ, ಧೃಷ್ಟದ್ಯುಮ್ನ, ವಿರಾಟ, ಮಹಾಯಶ ಸಾತ್ಯಕಿ, ಮಹೇಷ್ವಾಸ ಪಾಂಚಾಲ್ಯ, ಮತ್ತು ದ್ರೌಪದಿಯ ಐವರು ಮಕ್ಕಳೂ ಎಲ್ಲರೂ ಮಹಾಶಂಖಗಳನ್ನು ಊದಿದರು ಮತ್ತು ಸಿಂಹನಾದ ಗೈದರು.
06047029a ಸ ಘೋಷಃ ಸುಮಹಾಂಸ್ತತ್ರ ವೀರೈಸ್ತೈಃ ಸಮುದೀರಿತಃ।
06047029c ನಭಶ್ಚ ಪೃಥಿವೀಂ ಚೈವ ತುಮುಲೋ ವ್ಯನುನಾದಯತ್।।
ಅಲ್ಲಿ ಸೇರಿದ್ದ ವೀರರ ಆ ಸುಮಹಾ ಘೋಷದ ತುಮುಲವು ಭೂಮಿ-ಆಕಾಶಗಳಲ್ಲಿ ಮೊಳಗಿತು.
06047030a ಏವಮೇತೇ ಮಹಾರಾಜ ಪ್ರಹೃಷ್ಟಾಃ ಕುರುಪಾಂಡವಾಃ।
06047030c ಪುನರ್ಯುದ್ಧಾಯ ಸಂಜಗ್ಮುಸ್ತಾಪಯಾನಾಃ ಪರಸ್ಪರಂ।।
ಹೀಗೆ ಮಹಾರಾಜ! ಪ್ರಹೃಷ್ಟರಾದ ಕುರುಪಾಂಡವರು ಪರಸ್ಪರರನ್ನು ಸುಡುತ್ತಾ ಪುನಃ ಯುದ್ಧಕ್ಕೆ ತೊಡಗಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭೀಷ್ಮವಧ ಪರ್ವಣಿ ಕೌರವವ್ಯೂಹರಚನಾಯಾಂ ಸಪ್ತಚತ್ವಾರಿಂಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭೀಷ್ಮವಧ ಪರ್ವದಲ್ಲಿ ಕೌರವವ್ಯೂಹರಚನೆ ಎನ್ನುವ ನಲ್ವತ್ತೇಳನೇ ಅಧ್ಯಾಯವು.