ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 36
ಸಾರ
06036001 ಶ್ರೀಭಗವಾನುವಾಚ।
06036001a ಪರಂ ಭೂಯಃ ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಂ।
06036001c ಯಜ್ಜ್ಞಾತ್ವಾ ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ।।
ಶ್ರೀಭಗವಾನನು ಹೇಳಿದನು: “ಇನ್ನೊಮ್ಮೆ ಜ್ಞಾನಗಳಲ್ಲಿ ಉತ್ತಮವಾದ ಪರಮ ಜ್ಞಾನವನ್ನು ಹೇಳುತ್ತೇನೆ. ಇದನ್ನರಿತ ಮುನಿಗಳೆಲ್ಲರೂ ಪರಮ ಸಿದ್ಧಿಯನ್ನು ಪಡೆದರು.
06036002a ಇದಂ ಜ್ಞಾನಮುಪಾಶ್ರಿತ್ಯ ಮಮ ಸಾಧರ್ಮ್ಯಮಾಗತಾಃ।
06036002c ಸರ್ಗೇಽಪಿ ನೋಪಜಾಯಂತೇ ಪ್ರಲಯೇ ನ ವ್ಯಥಂತಿ ಚ।।
ಈ ಜ್ಞಾನವನ್ನು ಆಶ್ರಯಿಸಿ ನನ್ನ ಸಾಧರ್ಮ್ಯವನ್ನು ಹೊಂದಿದವರು ಸೃಷ್ಟಿಯಲ್ಲಿಯೂ ಹುಟ್ಟುವುದಿಲ್ಲ ಮತ್ತು ಪ್ರಲಯದಲ್ಲಿಯೂ ವ್ಯಥೆಪಡುವುದಿಲ್ಲ.
06036003a ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ಗರ್ಭಂ ದಧಾಮ್ಯಹಂ।
06036003c ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ।।
ಮಹಾ ಬ್ರಹ್ಮವು ನನ್ನ ಯೋನಿಯು. ಅದರಲ್ಲಿ ನಾನು ಗರ್ಭವನ್ನು ಇಡುತ್ತೇನೆ. ಭಾರತ! ಆಗ ಸರ್ವಭೂತಗಳ ಸಂಭವವಾಗುತ್ತದೆ.
06036004a ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ।
06036004c ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ।।
ಕೌಂತೇಯ! ಸರ್ವಯೋನಿಗಳಲ್ಲಿ ಯಾವ ಮೂರ್ತಿಗಳು ಸಂಭವಿಸುತ್ತವೆಯೋ ಅವುಗಳೆಲ್ಲವಕ್ಕೆ ಬ್ರಹ್ಮವು ಮಹಾಯೋನಿ ಮತ್ತು ನಾನು ಬೀಜವನ್ನು ನೀಡುವ ತಂದೆ.
06036005a ಸತ್ತ್ವಂ ರಜಸ್ತಮ ಇತಿ ಗುಣಾಃ ಪ್ರಕೃತಿಸಂಭವಾಃ।
06036005c ನಿಬಧ್ನಂತಿ ಮಹಾಬಾಹೋ ದೇಹೇ ದೇಹಿನಮವ್ಯಯಂ।।
ಮಹಾಬಾಹೋ! ಸತ್ತ್ವ, ರಜ, ತಮ ಎಂಬ ಪ್ರಕೃತಿಯಿಂದುಂಟಾದ ಗುಣಗಳು ದೇಹದಲ್ಲಿ ಅವ್ಯಯ ದೇಹಿಯನ್ನು ಬಂಧಿಸುತ್ತವೆ.
06036006a ತತ್ರ ಸತ್ತ್ವಂ ನಿರ್ಮಲತ್ವಾತ್ಪ್ರಕಾಶಕಮನಾಮಯಂ।
06036006c ಸುಖಸಂಗೇನ ಬಧ್ನಾತಿ ಜ್ಞಾನಸಂಗೇನ ಚಾನಘ।।
ಅನಘ! ಇವುಗಳಲ್ಲಿ ಸತ್ತ್ವವು ನಿರ್ಮಲವಾಗಿರುವುದರಿಂದ, ಪ್ರಕಾಶಕವೂ ಅನಾಮಯವೂ ಆಗಿದ್ದು ಅದು ದೇಹಿಯನ್ನು ಸುಖಸಂಗ ಮತ್ತು ಜ್ಞಾನಸಂಗಗಳಿಂದ ಬಂಧಿಸುತ್ತದೆ.
06036007a ರಜೋ ರಾಗಾತ್ಮಕಂ ವಿದ್ಧಿ ತೃಷ್ಣಾಸಂಗಸಮುದ್ಭವಂ।
06036007c ತನ್ನಿಬಧ್ನಾತಿ ಕೌಂತೇಯ ಕರ್ಮಸಂಗೇನ ದೇಹಿನಂ।।
ರಜವು ರಾಗಾತ್ಮಕವಾಗಿರುವುದೆಂದು ತಿಳಿ. ತೃಷ್ಣೆ-ಅಸಂಗಗಳನ್ನುಂಟುಮಾಡುತ್ತದೆ. ಕೌಂತೇಯ! ಇದು ದೇಹಿಯನ್ನು ಕರ್ಮಸಂಗದಿಂದ ಬಂಧಿಸುತ್ತದೆ.
06036008a ತಮಸ್ತ್ವಜ್ಞಾನಜಂ ವಿದ್ಧಿ ಮೋಹನಂ ಸರ್ವದೇಹಿನಾಂ।
06036008c ಪ್ರಮಾದಾಲಸ್ಯನಿದ್ರಾಭಿಸ್ತನ್ನಿಬಧ್ನಾತಿ ಭಾರತ।।
ತಮಸ್ಸು ಅಜ್ಞಾನದಿಂದ ಹುಟ್ಟಿರುವುದೆಂದೂ, ಸರ್ವ ದೇಹಿಗಳನ್ನೂ ಮೋಹಗೊಳಿಸುವುದೆಂದೂ ತಿಳಿ. ಭಾರತ! ಅದು ಪ್ರಮಾದ, ಆಲಸ್ಯ, ಮತ್ತು ನಿದ್ದೆಗಳಿಂದ ದೇಹಿಯನ್ನು ಬಂಧಿಸುತ್ತದೆ.
06036009a ಸತ್ತ್ವಂ ಸುಖೇ ಸಂಜಯತಿ ರಜಃ ಕರ್ಮಣಿ ಭಾರತ।
06036009c ಜ್ಞಾನಮಾವೃತ್ಯ ತು ತಮಃ ಪ್ರಮಾದೇ ಸಂಜಯತ್ಯುತ।।
ಭಾರತ! ಸತ್ತ್ವವು ದೇಹಿಯನ್ನು ಸುಖಕ್ಕೆ ಅಂಟಿಸುತ್ತದೆ. ರಜವು ದೇಹಿಯನ್ನು ಕರ್ಮಗಳಿಗೆ ಮತ್ತು ತಮವು ಜ್ಞಾನವನ್ನು ಆವರಿಸಿಕೊಂಡು ಪ್ರಮಾದಕ್ಕೆ ಅಂಟಿಸುತ್ತದೆ.
06036010a ರಜಸ್ತಮಶ್ಚಾಭಿಭೂಯ ಸತ್ತ್ವಂ ಭವತಿ ಭಾರತ।
06036010c ರಜಃ ಸತ್ತ್ವಂ ತಮಶ್ಚೈವ ತಮಃ ಸತ್ತ್ವಂ ರಜಸ್ತಥಾ।।
ಭಾರತ! ರಜ ಮತ್ತು ತಮಗಳನ್ನು ಗೆದ್ದ ನಂತರವೇ ಸತ್ತ್ವವುಂಟಾಗುತ್ತದೆ. ಹಾಗೆಯೇ ಸತ್ತ್ವ-ತಮಗಳನ್ನು ಗೆದ್ದು ರಜವೂ, ಸತ್ತ್ವ-ರಜಗಳನ್ನು ಗೆದ್ದು ತಮವೂ ಉಂಟಾಗುತ್ತದೆ.
06036011a ಸರ್ವದ್ವಾರೇಷು ದೇಹೇಽಸ್ಮಿನ್ಪ್ರಕಾಶ ಉಪಜಾಯತೇ।
06036011c ಜ್ಞಾನಂ ಯದಾ ತದಾ ವಿದ್ಯಾದ್ವಿವೃದ್ಧಂ ಸತ್ತ್ವಮಿತ್ಯುತ।।
ಈ ದೇಹದ ಸರ್ವದ್ವಾರಗಳಲ್ಲಿಯೂ ಯಾವಾಗ ಜ್ಞಾನವೆಂಬ ಪ್ರಕಾಶವು ಉಂಟಾಗುವುದೋ ಆಗ ಸತ್ತ್ವವು ಬೆಳೆದುಕೊಂಡಿದೆ ಎಂದು ಹೇಳಬಹುದು.
06036012a ಲೋಭಃ ಪ್ರವೃತ್ತಿರಾರಂಭಃ ಕರ್ಮಣಾಮಶಮಃ ಸ್ಪೃಹಾ।
06036012c ರಜಸ್ಯೇತಾನಿ ಜಾಯಂತೇ ವಿವೃದ್ಧೇ ಭರತರ್ಷಭ।।
ಭರತರ್ಷಭ! ಲೋಭ, ಪ್ರವೃತ್ತಿ, ಕರ್ಮಗಳ ಆರಂಭ, ಅಶಮ, ಸ್ಪೃಹಾ ಇವುಗಳು ರಜವು ವೃದ್ಧಿಯಾಗುವಾಗ ಉಂಟಾಗುವವು.
06036013a ಅಪ್ರಕಾಶೋಽಪ್ರವೃತ್ತಿಶ್ಚ ಪ್ರಮಾದೋ ಮೋಹ ಏವ ಚ।
06036013c ತಮಸ್ಯೇತಾನಿ ಜಾಯಂತೇ ವಿವೃದ್ಧೇ ಕುರುನಂದನ।।
ಕುರುನಂದನ! ಅಪ್ರಕಾಶ, ಅಪ್ರವೃತ್ತಿ, ಪ್ರಮಾದ, ಮತ್ತು ಮೋಹ ಇವು ತಮಸ್ಸು ವೃದ್ಧಿಯಾದಾಗ ಉಂಟಾಗುವವು.
06036014a ಯದಾ ಸತ್ತ್ವೇ ಪ್ರವೃದ್ಧೇ ತು ಪ್ರಲಯಂ ಯಾತಿ ದೇಹಭೃತ್।
06036014c ತದೋತ್ತಮವಿದಾಂ ಲೋಕಾನಮಲಾನ್ಪ್ರತಿಪದ್ಯತೇ।।
ಸತ್ತ್ವವು ಪ್ರವೃದ್ಧವಾಗಿರುವಾಗ ದೇಹಧಾರಿಯು ಪ್ರಲಯಹೊಂದಿದರೆ ಅವನು ಉತ್ತಮ ಜ್ಞಾನಿಗಳ ಅಮಲ ಲೋಕಗಳನ್ನು ಹೊಂದುತ್ತಾನೆ.
06036015a ರಜಸಿ ಪ್ರಲಯಂ ಗತ್ವಾ ಕರ್ಮಸಂಗಿಷು ಜಾಯತೇ।
06036015c ತಥಾ ಪ್ರಲೀನಸ್ತಮಸಿ ಮೂಢಯೋನಿಷು ಜಾಯತೇ।।
ರಜಸ್ಸಿನಲ್ಲಿ ಪ್ರಲಯವಾದರೆ ಕರ್ಮಸಂಗಿಗಳಲ್ಲಿ ಹುಟ್ಟುತ್ತಾನೆ. ಹಾಗೆಯೇ ತಮಸ್ಸಿನಲ್ಲಿ ಪ್ರಲೀನನಾದರೆ ಮೂಢಯೋನಿಗಳಲ್ಲಿ ಹುಟ್ಟುತ್ತಾನೆ.
06036016a ಕರ್ಮಣಃ ಸುಕೃತಸ್ಯಾಹುಃ ಸಾತ್ತ್ವಿಕಂ ನಿರ್ಮಲಂ ಫಲಂ।
06036016c ರಜಸಸ್ತು ಫಲಂ ದುಃಖಮಜ್ಞಾನಂ ತಮಸಃ ಫಲಂ।।
ಸುಕೃತವಾದ ಸಾತ್ತ್ವಿಕ ಕರ್ಮಗಳಿಗೆ ನಿರ್ಮಲ ಫಲವೆನ್ನುವರು. ರಜಸ್ಸಿನ ಫಲ ದುಃಖ. ಮತ್ತು ತಮಸ್ಸಿನ ಫಲ ಅಜ್ಞಾನ.
06036017a ಸತ್ತ್ವಾತ್ಸಂಜಾಯತೇ ಜ್ಞಾನಂ ರಜಸೋ ಲೋಭ ಏವ ಚ।
06036017c ಪ್ರಮಾದಮೋಹೌ ತಮಸೋ ಭವತೋಽಜ್ಞಾನಮೇವ ಚ।।
ಸತ್ತ್ವದಿಂದ ಜ್ಞಾನವು ಹುಟ್ಟುತ್ತದೆ. ರಜಸ್ಸಿನಿಂದ ಲೋಭವುಂಟಾಗುತ್ತದೆ. ತಮಸ್ಸಿನಿಂದ ಪ್ರಮಾದ-ಮೋಹಗಳೂ ಅಜ್ಞಾನವೂ ಉಂಟಾಗುತ್ತವೆ.
06036018a ಊರ್ಧ್ವಂ ಗಚ್ಛಂತಿ ಸತ್ತ್ವಸ್ಥಾ ಮಧ್ಯೇ ತಿಷ್ಠಂತಿ ರಾಜಸಾಃ।
06036018c ಜಘನ್ಯಗುಣವೃತ್ತಸ್ಥಾ ಅಧೋ ಗಚ್ಛಂತಿ ತಾಮಸಾಃ।।
ಸತ್ತ್ವದಲ್ಲಿರುವವವರು ಊರ್ಧ್ವಲೋಕಗಳಿಗೆ ಹೋಗುತ್ತಾರೆ. ರಾಜಸರು ಮಧ್ಯಮ ಲೋಕಗಳಲ್ಲಿ ಇರುವರು. ಕೆಳಗಿನ ಗುಣದ ವೃತ್ತದಲ್ಲಿರುವ ತಾಮಸರು ಅಧೋಲೋಕಗಳಿಗೆ ಹೋಗುತ್ತಾರೆ.
06036019a ನಾನ್ಯಂ ಗುಣೇಭ್ಯಃ ಕರ್ತಾರಂ ಯದಾ ದ್ರಷ್ಟಾನುಪಶ್ಯತಿ।
06036019c ಗುಣೇಭ್ಯಶ್ಚ ಪರಂ ವೇತ್ತಿ ಮದ್ಭಾವಂ ಸೋಽಧಿಗಚ್ಛತಿ।।
ದ್ರಷ್ಟನು ಯಾವಾಗ ಗುಣಗಳಿಗಿಂತ ಬೇರೊಬ್ಬ ಕರ್ತೃವಿಲ್ಲವೆಂದು ಕಂಡುಕೊಳ್ಳುತ್ತಾನೋ ಮತ್ತು ಗುಣಗಳಿಗಿಂತ ಆಚಿನದ್ದನ್ನು ಅರಿತುಕೊಳ್ಳುತ್ತಾನೋ ಆಗ ಅವನು ನನ್ನ ಭಾವವನ್ನು ಹೊಂದುವನು.
06036020a ಗುಣಾನೇತಾನತೀತ್ಯ ತ್ರೀನ್ದೇಹೀ ದೇಹಸಮುದ್ಭವಾನ್।
06036020c ಜನ್ಮಮೃತ್ಯುಜರಾದುಃಖೈರ್ವಿಮುಕ್ತೋಽಮೃತಮಶ್ನುತೇ।।
ದೇಹಿಯು ದೇಹಕ್ಕೆ ಕಾರಣವಾಗಿರುವ ಈ ಮೂರು ಗುಣಗಳನ್ನೂ ದಾಟಿದರೆ ಜನ್ಮ-ಮೃತ್ಯು-ಜರಾ-ದುಃಖಗಳಿಂದ ವಿಮುಕ್ತನಾಗಿ ಅಮೃತತ್ವವನ್ನು ಪಡೆಯುತ್ತಾನೆ.”
06036021 ಅರ್ಜುನ ಉವಾಚ।
06036021a ಕೈರ್ಲಿಂಗೈಸ್ತ್ರೀನ್ಗುಣಾನೇತಾನತೀತೋ ಭವತಿ ಪ್ರಭೋ।
06036021c ಕಿಮಾಚಾರಃ ಕಥಂ ಚೈತಾಂಸ್ತ್ರೀನ್ಗುಣಾನತಿವರ್ತತೇ।।
ಅರ್ಜುನನು ಹೇಳಿದನು: “ಪ್ರಭೋ! ಈ ಮೂರೂ ಗುಣಗಳನ್ನು ದಾಟಿದವನ ಗುರುತುಗಳೇನು? ಅವನ ಆಚಾರಗಳೇನು? ಮತ್ತು ಈ ಮೂರೂ ಗುಣಗಳನ್ನು ಹೇಗೆ ಮೀರಬಹುದು?”
06036022 ಶ್ರೀಭಗವಾನುವಾಚ।
06036022a ಪ್ರಕಾಶಂ ಚ ಪ್ರವೃತ್ತಿಂ ಚ ಮೋಹಮೇವ ಚ ಪಾಂಡವ।
06036022c ನ ದ್ವೇಷ್ಟಿ ಸಂಪ್ರವೃತ್ತಾನಿ ನ ನಿವೃತ್ತಾನಿ ಕಾಂಕ್ಷತಿ।।
ಶ್ರೀಭಗವಾನನು ಹೇಳಿದನು: “ಪಾಂಡವ! ಗುಣಗಳನ್ನು ಮೀರಿದವನು ಪ್ರಕಾಶ, ಪ್ರವೃತ್ತಿ ಮತ್ತು ಮೋಹಗಳನ್ನು ದ್ವೇಷಿಸುವುದಿಲ್ಲ. ನಡೆಯುತ್ತಿರುವುದನ್ನು ಮತ್ತು ನಡೆದುಹೋದವುಗಳನ್ನು ಬಯಸುವುದೂ ಇಲ್ಲ.
06036023a ಉದಾಸೀನವದಾಸೀನೋ ಗುಣೈರ್ಯೋ ನ ವಿಚಾಲ್ಯತೇ।
06036023c ಗುಣಾ ವರ್ತಂತ ಇತ್ಯೇವ ಯೋಽವತಿಷ್ಠತಿ ನೇಂಗತೇ।।
06036024a ಸಮದುಃಖಸುಖಃ ಸ್ವಸ್ಥಃ ಸಮಲೋಷ್ಟಾಶ್ಮಕಾಂಚನಃ।
06036024c ತುಲ್ಯಪ್ರಿಯಾಪ್ರಿಯೋ ಧೀರಸ್ತುಲ್ಯನಿಂದಾತ್ಮಸಂಸ್ತುತಿಃ।।
06036025a ಮಾನಾವಮಾನಯೋಸ್ತುಲ್ಯಸ್ತುಲ್ಯೋ ಮಿತ್ರಾರಿಪಕ್ಷಯೋಃ।
06036025c ಸರ್ವಾರಂಭಪರಿತ್ಯಾಗೀ ಗುಣಾತೀತಃ ಸ ಉಚ್ಯತೇ।।
ಗುಣಗಳಿಂದ ಚಲಿತನಾಗಿದೇ ಉದಾಸೀನನಾಗಿ ಕುಳಿತಿರುವವನು, ಗುಣಗಳು ವರ್ತಿಸುತ್ತಿವೆ ಎಂದು ಅಲುಗಾಡದೇ ನಿಂತಿರುವವನು, ದುಃಖ-ಸುಖಗಳಲ್ಲಿ ಸಮನಾಗಿರುವವನು, ಸ್ವಸ್ಥನಾಗಿರುವವನು, ಮಣ್ಣು-ಕಲ್ಲು-ಕಾಂಚನಗಳನ್ನು ಸಮನಾಗಿ ನೋಡುವವನು, ಪ್ರಿಯ-ಅಪ್ರಿಯಗಳನ್ನು ಸಮನಾಗಿ ಕಾಣುವವನು, ನಿಂದೆ-ಸಂಸ್ತುತಿಗಳನ್ನು ಸಮವೆಂದು ತೆಗೆದುಕೊಳ್ಳುವ ಧೀರನು, ಮಾನ-ಅಪಮಾನಗಳನ್ನು ಸಮವೆಂದೂ, ಮಿತ್ರ-ಅಮಿತ್ರರ ಪಕ್ಷಗಳನ್ನು ಸಮನಾಗಿ ನೋಡುವ, ಸರ್ವಾರಂಭಪರಿತ್ಯಾಗಿಯು ಗುಣಾತೀತನೆಂದು ಕರೆಯಲ್ಪಡುತ್ತಾನೆ.
06036026a ಮಾಂ ಚ ಯೋಽವ್ಯಭಿಚಾರೇಣ ಭಕ್ತಿಯೋಗೇನ ಸೇವತೇ।
06036026c ಸ ಗುಣಾನ್ಸಮತೀತ್ಯೈತಾನ್ಬ್ರಹ್ಮಭೂಯಾಯ ಕಲ್ಪತೇ।।
ಯಾರು ನನ್ನನ್ನು ಅವ್ಯಭಿಚಾರದ ಭಕ್ತಿಯೋಗದಿಂದ ಸೇವಿಸುತ್ತಾನೋ ಅವನು ಈ ಗುಣಗಳನ್ನು ಸಂಪೂರ್ಣವಾಗಿ ದಾಟಿ ಬ್ರಹ್ಮಭೂಯನಂತಾಗುತ್ತಾನೆ.
06036027a ಬ್ರಹ್ಮಣೋ ಹಿ ಪ್ರತಿಷ್ಠಾಹಮಮೃತಸ್ಯಾವ್ಯಯಸ್ಯ ಚ।
06036027c ಶಾಶ್ವತಸ್ಯ ಚ ಧರ್ಮಸ್ಯ ಸುಖಸ್ಯೈಕಾಂತಿಕಸ್ಯ ಚ।।
ಏಕೆಂದರೆ ನನ್ನಲ್ಲಿ ಬ್ರಹ್ಮ, ಅಮೃತ, ಅವ್ಯಯ, ಶಾಶ್ವತ ಧರ್ಮ, ಮತ್ತು ಏಕಾಂತಿಕ ಸುಖಗಳು ನೆಲೆಸಿವೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ಗುಣತ್ರಯವಿಭಾಗಯೋಗೋ ನಾಮ ಚತುರ್ದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ಗುಣತ್ರಯವಿಭಾಗಯೋಗವೆಂಬ ಹದಿನಾಲ್ಕನೇ ಅಧ್ಯಾಯವು.
ಭೀಷ್ಮ ಪರ್ವಣಿ ಷಡ್ತ್ರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಮೂವತ್ತಾರನೇ ಅಧ್ಯಾಯವು.