ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 33
ಸಾರ
06033001 ಅರ್ಜುನ ಉವಾಚ।
06033001a ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಂ।
06033001c ಯತ್ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ।।
ಅರ್ಜುನನು ಹೇಳಿದನು: “ನನ್ನಮೇಲಿನ ಅನುಗ್ರಹದಿಂದ ಆಧ್ಯಾತ್ಮವೆಂದು ಕರೆಯಲ್ಪಡುವ ಯಾವ ಪರಮಗುಹ್ಯವಾದ ಮಾತನ್ನು ನೀನು ಹೇಳಿದೆಯೋ ಅದರಿಂದ ನನ್ನೀ ಮೋಹವು ತೊಲಗಿತು.
06033002a ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ।
06033002c ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಂ।।
ಕಮಲಪತ್ರಾಕ್ಷ! ಭೂತಗಳ ಹುಟ್ಟುವಿಕೆ ಮತ್ತು ನಾಶದ ಕುರಿತು ಮತ್ತು ನಿನ್ನ ಅವ್ಯಯ ಮಹಾತ್ಮೆಯನ್ನೂ ವಿಸ್ತಾರವಾಗಿ ನಾನು ಕೇಳಿದೆ.
06033003a ಏವಮೇತದ್ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ।
06033003c ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ।।
ಪರಮೇಶ್ವರ! ನಿನ್ನನ್ನು ನೀನು ಹೇಗೆಂದು ಹೇಳಿಕೊಂಡಿರುವೆಯೋ ಅದು ಹಾಗೆಯೇ ಸರಿ. ಪುರುಷೋತ್ತಮ! ನಿನ್ನ ಐಶ್ವರ ರೂಪವನ್ನು ನೋಡಲು ಬಯಸುತ್ತೇನೆ.
06033004a ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ।
06033004c ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಂ।।
ಪ್ರಭೋ! ಒಂದುವೇಳೆ ನಾನು ಅದನ್ನು ನೋಡಲು ಶಕ್ಯನಾಗಿದ್ದರೆ ಯೋಗೇಶ್ವರ! ನನಗೆ ನಿನ್ನ ಅವ್ಯಯ ಆತ್ಮನನ್ನು ತೋರಿಸು!”
06033005 ಶ್ರೀಭಗವಾನುವಾಚ।
06033005a ಪಶ್ಯ ಮೇ ಪಾರ್ಥ ರೂಪಾಣಿ ಶತಶೋಽಥ ಸಹಸ್ರಶಃ।
06033005c ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ।।
ಶ್ರೀಭಗವಾನನು ಹೇಳಿದನು: “ಪಾರ್ಥ! ನನ್ನ ನೂರಾರು ಸಹಸ್ರಾರು ನಾನಾವಿಧಗಳ, ನಾನಾ ವರ್ಣ-ಆಕೃತಿಗಳ ದಿವ್ಯ ರೂಪಗಳನ್ನು ನೋಡು!
06033006a ಪಶ್ಯಾದಿತ್ಯಾನ್ವಸೂನ್ರುದ್ರಾನಶ್ವಿನೌ ಮರುತಸ್ತಥಾ।
06033006c ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ।।
ಭಾರತ! ಆದಿತ್ಯರನ್ನೂ, ವಸುಗಳನ್ನೂ, ರುದ್ರರನ್ನೂ, ಅಶ್ವಿಯರನ್ನೂ, ಮತ್ತು ಮರುತರನ್ನೂ ನೋಡು. ಹಿಂದೆ ನೋಡದೇ ಇರದ ಆಶ್ಚರ್ಯಗಳನ್ನೂ ನೋಡು!
06033007a ಇಹೈಕಸ್ಥಂ ಜಗತ್ಕೃತ್ಸ್ನಂ ಪಶ್ಯಾದ್ಯ ಸಚರಾಚರಂ।
06033007c ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ದ್ರಷ್ಟುಮಿಚ್ಛಸಿ।।
ಗುಡಾಕೇಶ! ಇಂದು ಚರಾಚರಗಳಿಂದ ಕೂಡಿದ ಸಂಪೂರ್ಣ ಜಗತ್ತು ಇಲ್ಲಿಯೇ ಇದೆ. ನೋಡು! ಬೇರೆ ಯಾವುದನ್ನು ನೋಡಲಿಚ್ಛಿಸುತ್ತೀಯೋ ಅವುಗಳನ್ನು ನನ್ನ ದೇಹದಲ್ಲಿಯೇ ನೋಡು!
06033008a ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ।
06033008c ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಂ।।
ಆದರೆ ನಿನ್ನ ಇದೇ ಕಣ್ಣುಗಳಿಂದ ನನ್ನನ್ನು ನೀಡು ನೋಡಲು ಶಕ್ತನಿಲ್ಲ. ನಿನಗೆ ದಿವ್ಯಚಕ್ಷುಗಳನ್ನು ಕೊಡುತ್ತೇನೆ. ನನ್ನ ಐಶ್ವರಯೋಗವನ್ನು ನೋಡು!””
06033009 ಸಂಜಯ ಉವಾಚ।
06033009a ಏವಮುಕ್ತ್ವಾ ತತೋ ರಾಜನ್ಮಹಾಯೋಗೇಶ್ವರೋ ಹರಿಃ।
06033009c ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಂ।।
06033010a ಅನೇಕವಕ್ತ್ರನಯನಮನೇಕಾದ್ಭುತದರ್ಶನಂ।
06033010c ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಂ।।
06033011a ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಂ।
06033011c ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಂ।।
ಸಂಜಯನು ಹೇಳಿದನು: “ರಾಜನ್! ಹೀಗೆ ಹೇಳಿ ಮಹಾಯೋಗೇಶ್ವರ ಹರಿಯು ಪಾರ್ಥನಿಗೆ ಅನೇಕ ವಕ್ತ್ರನಯನಗಳುಳ್ಳ, ಅನೇಕ ಅದ್ಭುತದರ್ಶನಗಳುಳ್ಳ, ಅನೇಕದಿವ್ಯಾಭರಣಗಳ, ಅನೇಕ ದಿವ್ಯ ಆಯುಧಗಳನ್ನು ಹಿಡಿದಿರುವ, ದಿವ್ಯಮಾಲಾಂಬರಧರನಾಗಿ, ದಿವ್ಯಗಂಧಾನುಲೇಪನನಾಗಿ, ಸರ್ವವೂ ಆಶ್ಚರ್ಯಮಯವಾಗಿರುವ, ದೇವ, ಅನಂತ, ವಿಶ್ವತೋಮುಖವಾದ ತನ್ನ ಪರಮ ಐಶ್ವರ ರೂಪವನ್ನು ತೋರಿಸಿದನು.
06033012a ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ।
06033012c ಯದಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ।।
ಒಂದುವೇಳೆ ದಿವಿಯಲ್ಲಿ ಒಮ್ಮೆಗೇ ಸಹಸ್ರ ಸೂರ್ಯರ ಬೆಳಕು ಉದ್ಭವಾದರೆ ಅದು ಆ ಮಹಾತ್ಮನ ಬೆಳಕಿಗೆ ಸಮಾನವಾದೀತು!
06033013a ತತ್ರೈಕಸ್ಥಂ ಜಗತ್ಕೃತ್ಸ್ನಂ ಪ್ರವಿಭಕ್ತಮನೇಕಧಾ।
06033013c ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ।।
ಆಗ ಪಾಂಡವನು ಅನೇಕಪ್ರಕಾರವಾಗಿ ವಿಂಗಡವಾಗಿರುವ ಜಗತ್ತೆಲ್ಲವೂ ಆ ದೇವದೇವನ ಶರೀರದಲ್ಲಿ ಏಕಸ್ಥವಾಗಿದ್ದುದನ್ನು ನೋಡಿದನು.
06033014a ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ।
06033014c ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ।।
ಆಗ ಧನಂಜಯನು ವಿಸ್ಮಯಾವಿಷ್ಟನಾಗಿ, ರೋಮಾಂಚನಗೊಂಡು, ದೇವನಿಗೆ ಶಿರಸಾ ಸಮಸ್ಕರಿಸಿ, ಕೈಮುಗಿದು ಹೇಳಿದನು:
06033015 ಅರ್ಜುನ ಉವಾಚ।
06033015a ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್।
06033015c ಬ್ರಹ್ಮಾಣಮೀಶಂ ಕಮಲಾಸನಸ್ಥಂ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್।।
ಅರ್ಜುನನು ಹೇಳಿದನು: “ದೇವಾ! ನಿನ್ನ ದೇಹದಲ್ಲಿ ಎಲ್ಲ ದೇವತೆಗಳನ್ನೂ, ಬೇರೆಬೇರೆ ಪ್ರಾಣಿಗಳ ಗುಂಪುಗಳನ್ನು, ಕಮಲಾಸನಸ್ಥನಾಗಿರುವ ಈಶ ಬ್ರಹ್ಮನನ್ನೂ, ಸರ್ವ ಋಷಿಗಳನ್ನೂ ಉರುಗರನ್ನೂ ಕಾಣುತ್ತಿದ್ದೇನೆ.
06033016a ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾ ಸರ್ವತೋಽನಂತರೂಪಂ।
06033016c ನಾಂತಂ ನ ಮಧ್ಯಂ ನ ಪುನಸ್ತವಾದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ।।
ವಿಶ್ವೇಶ್ವರ! ವಿಶ್ವರೂಪ! ನಿನ್ನನ್ನು ಅನೇಕ ಬಾಹು, ಉದರ, ವಕ್ತ್ರ, ನೇತ್ರಗಳುಳ್ಳವನಾಗಿ ಸರ್ವತವೂ ಅನಂತರೂಪನನ್ನಾಗಿ ನೋಡುತ್ತಿದ್ದೇನೆ. ಅಂತವೂ ಇಲ್ಲ. ಮದ್ಯವೂ ಇಲ್ಲ. ಮತ್ತೆ ಪ್ರಾರಂಭವೂ ಇಲ್ಲವೆಂದು ಕಾಣುತ್ತಿದ್ದೇನೆ.
06033017a ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಂ।
06033017c ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾದ್ ದೀಪ್ತಾನಲಾರ್ಕದ್ಯುತಿಮಪ್ರಮೇಯಂ।।
ಕಿರೀಟಿಯೂ, ಗದಿಯೂ, ಚಕ್ರಿಯೂ, ತೇಜೋರಾಶಿಯೂ, ಸರ್ವತವೂ ಬೆಳಗುತ್ತಿರುವ, ದುರ್ನಿರೀಕ್ಷ್ಯನಾದ, ಎಲ್ಲೆಲ್ಲಿಯೂ ಅನಲ ಮತ್ತು ಅರ್ಕರಂತೆ ಜ್ವಾಲೆಗಳಿಂದ ಬೆಳಗುತ್ತಿರುವ ಅಪ್ರಮೇಯನಾದ ನಿನ್ನನ್ನು ನೋಡುತ್ತಿದ್ದೇನೆ.
06033018a ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ।
06033018c ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ।।
ಅರಿತುಕೊಳ್ಳಬೇಕಾಗಿರುವ ಪರಮ ಅಕ್ಷರನು ನೀನು. ಈ ವಿಶ್ವದ ಪರಮ ನಿಧಾನನು ನೀನು. ನೀನು ಅವ್ಯಯ, ಶಾಶ್ವತ ಮತ್ತು ಧರ್ಮಗೋಪ್ತ. ನೀನು ಸನಾತನ ಪುರುಷನೆಂದು ನನಗನ್ನಿಸುತ್ತಿದೆ.
06033019a ಅನಾದಿಮಧ್ಯಾಂತಮನಂತವೀರ್ಯಂ ಅನಂತಬಾಹುಂ ಶಶಿಸೂರ್ಯನೇತ್ರಂ।
06033019c ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಂ।।
ಆದಿ, ಮಧ್ಯ, ಅಂತಗಳಿಲ್ಲದ, ಅನಂತವೀರ್ಯನಾದ, ಅನಂತಬಾಹುಗಳನ್ನುಳ್ಳ, ಶಶಿ-ಸೂರ್ಯರನ್ನೇ ನೇತ್ರಗಳನ್ನಾಗುಳ್ಳ, ಅಗ್ನಿಯಂತೆ ಉರಿಯುತ್ತಿರುವ, ನಿನ್ನದೇ ತೇಜಸ್ಸಿನಿಂದ ಈ ವಿಶ್ವವನ್ನು ಸುಡುತ್ತಿರುವ ನಿನ್ನನ್ನು ನೋಡುತ್ತಿದ್ದೇನೆ.
06033020a ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ।
06033020c ದೃಷ್ಟ್ವಾದ್ಭುತಂ ರೂಪಮಿದಂ ತವೋಗ್ರಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್।।
ದಿವಿ ಮತ್ತು ಭೂಮಿಯ ನಡುವಿನದೆಲ್ಲವೂ ನಿನ್ನೊಬ್ಬನಿಂದಲೇ ವ್ಯಾಪ್ತವಾಗಿರುವುದು. ಮಹಾತ್ಮನ್! ನಿನ್ನ ಈ ಉಗ್ರ ಅದ್ಭುತ ರೂಪವನ್ನು ನೋಡಿ ಲೋಕತ್ರಯಗಳು ಪ್ರವ್ಯಥಿತವಾಗುತ್ತಿವೆ.
06033021a ಅಮೀ ಹಿ ತ್ವಾ ಸುರಸಂಘಾ ವಿಶಂತಿ ಕೇ ಚಿದ್ಭೀತಾಃ ಪ್ರಾಂಜಲಯೋ ಗೃಣಂತಿ।
06033021c ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ।।
ಈ ಸುರಸಂಘಗಳು ನಿನ್ನನ್ನೇ ಪ್ರವೇಶಿಸುತ್ತಿವೆ. ಕೆಲವರು ಭೀತರಾಗಿ ಕೈಮುಗಿದು ನಿಂತಿರುವರು. ಮಹರ್ಷಿ-ಸಿದ್ಧ ಗಣಗಳು “ಸ್ವಸ್ತಿ” ಎಂದು ಹೇಳುತ್ತಾ ನಿನ್ನನ್ನು ಪುಷ್ಕಲ ಸ್ತುತಿಗಳಿಂದ ಸ್ತುತಿಸುತ್ತಿದ್ದಾರೆ.
06033022a ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ ವಿಶ್ವೇಽಶ್ವಿನೌ ಮರುತಶ್ಚೋಷ್ಮಪಾಶ್ಚ।
06033022c ಗಂಧರ್ವಯಕ್ಷಾಸುರಸಿದ್ಧಸಂಘಾ ವೀಕ್ಷಂತೇ ತ್ವಾ ವಿಸ್ಮಿತಾಶ್ಚೈವ ಸರ್ವೇ।।
ರುದ್ರರು, ಆದಿತ್ಯರು, ಸಾಧ್ಯರು, ವಿಶ್ವೇದೇವರು, ಅಶ್ವಿನಿಗಳು, ಮರುತರು, ಊಷ್ಮಪರು, ಗಂಧರ್ವರು, ಯಕ್ಷರು, ಅಸುರರು, ಮತ್ತು ಸಿದ್ಧ ಸಂಘಗಳೆಲ್ಲರೂ ವಿಸ್ಮಿತರಾಗಿ ನಿನ್ನನ್ನು ನೋಡುತ್ತಿದ್ದಾರೆ.
06033023a ರೂಪಂ ಮಹತ್ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಂ।
06033023c ಬಹೂದರಂ ಬಹುದಂಷ್ಟ್ರಾಕರಾಲಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಂ।।
ಮಹಾಬಾಹೋ! ಬಹುವಕ್ತ್ರನೇತ್ರಗಳುಳ್ಳ, ಬಹು ಬಾಹು, ತೊಡೆ, ಪಾದಗಳನ್ನುಳ್ಳ, ಬಹು ಉದರಗಳುಳ್ಳ, ಬಹುದಂಷ್ಟ್ರಕರಾಲನಾಗಿರುವ ನಿನ್ನನ್ನು ನೋಡಿ ನಾನೂ ಲೋಕಗಳೂ ಪ್ರವ್ಯಥಿತರಾಗಿದ್ದೇವೆ.
06033024a ನಭಃಸ್ಪೃಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೀಪ್ತವಿಶಾಲನೇತ್ರಂ।
06033024c ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ।।
ವಿಷ್ಣೋ! ನಭವನ್ನು ಸ್ಪರ್ಶಿಸುವ, ಅನೇಕ ವರ್ಣಗಳಲ್ಲಿ ಬೆಳಗುತ್ತಿರುವ, ಅಗಲ ತೆರೆದ ಬಾಯಿಯುಳ್ಳ, ಹೊಳೆಯುವ ವಿಶಾಲನೇತ್ರಗಳನ್ನುಳ್ಳ ನಿನ್ನನ್ನು ನೋಡಿಯೇ ನಾನು ಅಂತರಾತ್ಮದಲ್ಲಿ ಪ್ರವಥಿತನಾಗಿದ್ದೇನೆ. ಧೃತಿ ಮತ್ತು ಶಾಂತಿಯನ್ನು ಪಡೆಯದಂತಾಗಿದ್ದೇನೆ.
06033025a ದಂಷ್ಟ್ರಾಕರಾಲಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ।
06033025c ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ।।
ಕಾಲಾನಲನಂತಿರುವ ದಂಷ್ಟ್ರಾಕರಾಲ ಮುಖಗಳನ್ನು ನೋಡಿಯೇ ನನಗೆ ದಿಕ್ಕು ತೋಚದಂತಾಗಿದೆ. ನೆಲೆಯು ದೊರೆಯುತ್ತಿಲ್ಲ. ದೇವೇಶ! ಜಗನ್ನಿವಾಸ! ಪ್ರಸನ್ನನಾಗು.
06033026a ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ।
06033026c ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ ಸಹಾಸ್ಮದೀಯೈರಪಿ ಯೋಧಮುಖ್ಯೈಃ।।
06033027a ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಕಾನಿ।
06033027c ಕೇ ಚಿದ್ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ।।
ಅವನಿಪಾಲಸಂಘಗಳೊಡನೆ ಈ ಧೃತರಾಷ್ಟ್ರನ ಮಕ್ಕಳೆಲ್ಲರೂ, ಭೀಷ್ಮ, ದ್ರೋಣ, ಸೂತಪುತ್ರರೊಂದಿಗೆ ನಮ್ಮ ಯೋಧಮುಖ್ಯರೊಂದಿಗೆ ಕೋರೆದಾಡೆಗಳಿಂದ ವಿಕಾರವಾಗಿ ಭಯಂಕರವಾಗಿರುವ ನಿನ್ನ ಮುಖಗಳನ್ನು ತ್ವರೆಮಾಡಿ ಹೊಗುತ್ತಿರುವರು. ಕೆಲವರು ಹಲ್ಲುಸಂದುಗಳಲ್ಲಿ ಸಿಲುಕಿಕೊಂಡು ಚೂರ್ಣಿತ ಉತ್ತಮಾಂಗಗಳೊಡನೆ ಕಾಣುತ್ತಿದ್ದಾರೆ.
06033028a ಯಥಾ ನದೀನಾಂ ಬಹವೋಽಂಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ।
06033028c ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ।।
ಹೇಗೆ ನದಿಗಳ ನೀರು ಬಹುವೇಗದಿಂದ ಸಮುದ್ರಕ್ಕೆ ಅಭಿಮುಖವಾಗಿಯೇ ಓಡುತ್ತದೆಯೋ ಹಾಗೆ ಈ ನರಲೋಕವೀರರು ಪ್ರಜ್ವಲಿಸುತ್ತಿರುವ ನಿನ್ನ ಬಾಯಿಗಳೊಳಗೆ ಹೊಗುತ್ತಿರುವರು.
06033029a ಯಥಾ ಪ್ರದೀಪ್ತಂ ಜ್ವಲನಂ ಪತಂಗಾ ವಿಶಂತಿ ನಾಶಾಯ ಸಮೃದ್ಧವೇಗಾಃ।
06033029c ತಥೈವ ನಾಶಾಯ ವಿಶಂತಿ ಲೋಕಾಸ್ ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ।।
ನಾಶಗೊಳ್ಳಲು ಹೇಗೆ ಪತಂಗಗಳು ಸಮೃದ್ಧವೇಗದಿಂದ ಧಗಧಗನೆ ಉರಿಯುತ್ತಿರುವ ಬೆಂಕಿಯಕಡೆ ಮುನ್ನುಗ್ಗುತ್ತವೆಯೋ ಹಾಗೆ ಲೋಕಗಳು ನಾಶಗೊಳ್ಳಲು ನಿನ್ನ ಮುಖಗಳನ್ನೂ ಸಮೃದ್ಧವೇಗದಿಂದ ಹೊಗುತ್ತಿವೆ.
06033030a ಲೇಲಿಹ್ಯಸೇ ಗ್ರಸಮಾನಃ ಸಮಂತಾಲ್ ಲೋಕಾನ್ ಸಮಗ್ರಾನ್ವದನೈರ್ಜ್ವಲದ್ಭಿಃ।
06033030c ತೇಜೋಭಿರಾಪೂರ್ಯ ಜಗತ್ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ।।
ಸುತ್ತಲೂ ಸಮಗ್ರವಾದ ಲೋಕಗಳನ್ನೂ ಉರಿಯುತ್ತಿರುವ ವದನಗಳಿಂದ ನುಂಗುತ್ತಾ ಚಪ್ಪರಿಸುತ್ತಿದ್ದೀಯೆ. ವಿಷ್ಣೋ! ಸಮಗ್ರ ಜಗತ್ತೂ ನಿನ್ನ ತೇಜಸ್ಸಿನಿಂದ ತುಂಬಿಕೊಂಡು ಉಗ್ರ ಪ್ರಭೆಗಳಿಂದ ಪರಿತಪಿಸುತ್ತಿವೆ.
06033031a ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋಽಸ್ತು ತೇ ದೇವವರ ಪ್ರಸೀದ।
06033031c ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಂ।।
ಉಗ್ರರೂಪನಾದ ನೀನು ಯಾರು? ನನಗೆ ಹೇಳು. ದೇವವರ! ಪ್ರಸನ್ನನಾಗು. ನಿನಗೆ ನಮಸ್ಕಾರ. ಆದ್ಯನಾದ ನಿನ್ನನ್ನು ಅರಿಯಲಿಚ್ಛಿಸುತ್ತೇನೆ. ನಿನ್ನ ಪ್ರವೃತ್ತಿಯನ್ನು ನಾನು ತಿಳಿಯಲಾರೆನು.”
06033032 ಶ್ರೀಭಗವಾನುವಾಚ।
06033032a ಕಾಲೋಽಸ್ಮಿ ಲೋಕಕ್ಷಯಕೃತ್ಪ್ರವೃದ್ಧೋ ಲೋಕಾನ್ಸಮಾಹರ್ತುಮಿಹ ಪ್ರವೃತ್ತಃ।
06033032c ಋತೇಽಪಿ ತ್ವಾ ನ ಭವಿಷ್ಯಂತಿ ಸರ್ವೇ ಯೇಽವಸ್ಥಿತಾಃ ಪ್ರತ್ಯನೀಕೇಷು ಯೋಧಾಃ।।
ಶ್ರೀಭಗವಾನನು ಹೇಳಿದನು: “ಲೋಕವನ್ನು ಕ್ಷಯಗೊಳಿಸುವ, ಪ್ರವೃದ್ಧನಾಗಿರುವ ಕಾಲನು ನಾನು (I am time grown old). ಇಲ್ಲಿ ನಾನು ಲೋಕಗಳನ್ನು ಸಮಾಹರಣಮಾಡಲು ತೊಡಗಿರುವೆನು. ನೀನಿಲ್ಲದಿದ್ದರೂ ಅಲ್ಲಿ ಒಂದೊಂದು ಸೇನೆಯಲ್ಲಿಯೂ ನಿಂತಿರುವ ಯೋಧರು ಇಲ್ಲವಾಗುವರು.
06033033a ತಸ್ಮಾತ್ತ್ವಮುತ್ತಿಷ್ಠ ಯಶೋ ಲಭಸ್ವ ಜಿತ್ವಾ ಶತ್ರೂನ್ಭುಂಕ್ಷ್ವ ರಾಜ್ಯಂ ಸಮೃದ್ಧಂ।
06033033c ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್।।
ಆದುದರಿಂದ ಎದ್ದೇಳು. ಯಶಸ್ಸನ್ನು ಪಡೆ. ಶತ್ರುಗಳನ್ನು ಗೆದ್ದು ಸಮೃದ್ಧ ರಾಜ್ಯವನ್ನು ಗೆಲ್ಲು! ಇವರೆಲ್ಲರೂ ಈ ಮೊದಲೇ ನನ್ನಿಂದ ಹತರಾಗಿರುವರು. ಸವ್ಯಸಾಚಿನ್! ನೀನು ನಿಮಿತ್ತಮಾತ್ರನಾಗು!
06033034a ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನಪಿ ಯೋಧವೀರಾನ್।
06033034c ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್।।
ನನ್ನಿಂದ ಹತರಾಗಿರುವ ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮತ್ತು ಇತರ ಯೋಧವೀರರನ್ನೂ ಕೊಲ್ಲು. ವ್ಯಥೆಪಡಬೇಡ. ಯುದ್ಧಮಾಡು. ರಣದಲ್ಲಿ ನಿನ್ನ ದಾಯಾದಿಗಳನ್ನು ಗೆಲ್ಲುವೆ.””
06033035 ಸಂಜಯ ಉವಾಚ।
06033035a ಏತಚ್ಛೃತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ।
06033035c ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ।।
ಸಂಜಯನು ಹೇಳಿದನು: “ಕೇಶವನ ಈ ಮಾತನ್ನು ಕೇಳಿ ನಡುಗುತ್ತಿದ್ದ ಕಿರೀಟಿಯು ಅಂಜಲೀಬದ್ಧನಾಗಿ ಕೃಷ್ಣನಿಗೆ ಮತ್ತೆ ಮತ್ತೆ ನಮಸ್ಕರಿಸುತ್ತಾ, ಹೆದರಿಕೊಂಡು ನಮಸ್ಕರಿಸುತ್ತಾ, ಕಣ್ಣೀರುತುಂಬಿದ ಕಂಠದಲ್ಲಿ ಹೇಳಿದನು:
06033036 ಅರ್ಜುನ ಉವಾಚ।
06033036a ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ಪ್ರಹೃಷ್ಯತ್ಯನುರಜ್ಯತೇ ಚ।
06033036c ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ।।
ಅರ್ಜುನನು ಹೇಳಿದನು: “ಹೃಷೀಕೇಶ! ನಿನ್ನ ಪ್ರಕೀರ್ತಿಯಿಂದ ಜಗತ್ತು ಪ್ರಹರ್ಷಗೊಂಡಿದೆ. ಅನುರಾಗದಿಂದ ಕೂಡಿಕೊಂಡಿದೆ. ರಾಕ್ಷಸರು ಭೀತರಾಗಿ ದಿಕ್ಕು ದಿಕ್ಕುಗಳಲ್ಲಿ ಓಡಿ ಹೋಗುತ್ತಿದ್ದಾರೆ. ಮತ್ತು ಸಿದ್ಧಸಂಘಗಳೆಲ್ಲವೂ ನಮಸ್ಕರಿಸುತ್ತಿವೆ.
06033037a ಕಸ್ಮಾಚ್ಚ ತೇ ನ ನಮೇರನ್ಮಹಾತ್ಮನ್ ಗರೀಯಸೇ ಬ್ರಹ್ಮಣೋಽಪ್ಯಾದಿಕರ್ತ್ರೇ।
06033037c ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ತತ್ಪರಂ ಯತ್।।
ಮಹಾತ್ಮನ್! ಬ್ರಹ್ಮನಿಗೂ ಆದಿಕರ್ತೃವಾಗಿರುವ, ದೊಡ್ಡವನಾಗಿರುವ ನಿನಗೆ ಏಕೆ ನಮಸ್ಕರಿಸುವುದಿಲ್ಲ? ಅನಂತ! ದೇವೇಶ! ಜಗನ್ನಿವಾಸ! ಸತ್ತ-ಅಸತ್ತರನ್ನೂ ಮೀರಿರುವವ ಅಕ್ಷರನು ನೀನು.
06033038a ತ್ವಮಾದಿದೇವಃ ಪುರುಷಃ ಪುರಾಣಸ್ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಂ।
06033038c ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ।।
ನೀನು ಆದಿದೇವ. ಪುರುಷ. ಪುರಾಣ. ನೀನು ಈ ವಿಶ್ವದ ಪರಮ ನಿಧಾನ. ತಿಳಿಯಬೇಕಾದುದೆಲ್ಲವನ್ನೂ ತಿಳಿತಿರುವೆ. ತಿಳಿಯಬೇಕಾಗಿರುವವನೂ ನೀನೆ. ನೀನು ಪರಂಧಾಮ. ಅನಂತರೂಪ! ವಿಶ್ವವೆಲ್ಲವೂ ನಿನ್ನಿಂದಲೇ ವ್ಯಾಪ್ತವಾಗಿದೆ.
06033039a ವಾಯುರ್ಯಮೋಽಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ।
06033039c ನಮೋ ನಮಸ್ತೇಽಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋಽಪಿ ನಮೋ ನಮಸ್ತೇ।।
ನೀನು ವಾಯು, ಯಮ, ಅಗ್ನಿ, ವರುಣ, ಶಶಾಂಕ, ಪ್ರಜಾಪತಿ ಪ್ರಪಿತಾಮಹನೂ ಕೂಡ. ನಿನಗೆ ನಮಸ್ಕಾರ! ಸಾವಿರ ನಮಸ್ಕಾರಗಳು! ಮತ್ತೆ ಇನ್ನೊಮ್ಮೆ ನಮಸ್ಕಾರ! ನಿನಗೆ ನಮಸ್ಕಾರ!
06033040a ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋಽಸ್ತು ತೇ ಸರ್ವತ ಏವ ಸರ್ವ।
06033040c ಅನಂತವೀರ್ಯಾಮಿತವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋಽಸಿ ಸರ್ವಃ।।
ಸರ್ವ! ನಿನಗೆ ಮುಂದಿನಿಂದ ನಮಸ್ಕಾರ. ಹಿಂದಿನಿಂದ ನಮಸ್ಕಾರ. ಎಲ್ಲ ಕಡೆಗಳಿಂದ ನಿನಗೆ ನಮಸ್ಕಾರ. ಅನಂತ ವೀರ್ಯ ಮತ್ತು ಅಮಿತವಿಕ್ರಮನು ನೀನು. ಸರ್ವವನ್ನೂ ಚೆನ್ನಾಗಿ ವ್ಯಾಪಿಸಿರುವೆ. ಆದುದರಿಂದ ಸರ್ವನಾಗಿರುವೆ.
06033041a ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ।
06033041c ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ಪ್ರಣಯೇನ ವಾಪಿ।।
06033042a ಯಚ್ಚಾವಹಾಸಾರ್ಥಮಸತ್ಕೃತೋಽಸಿ ವಿಹಾರಶಯ್ಯಾಸನಭೋಜನೇಷು।
06033042c ಏಕೋಽಥ ವಾಪ್ಯಚ್ಯುತ ತತ್ಸಮಕ್ಷಂ ತತ್ ಕ್ಷಾಮಯೇ ತ್ವಾಮಹಮಪ್ರಮೇಯಂ।।
ನಿನ್ನ ಈ ಮಹಿಮೆಗಳನ್ನು ಅರಿಯದೆ, ಸಖನೆಂದು ತಿಳಿದು, “ಎಲೆ ಕೃಷ್ಣ!”, “ಎಲೆ ಯಾದವ!”, “ಎಲೆ ಗೆಳೆಯ!” ಎಂದು ದಿಟ್ಟತನದಿಂದ ಅಥವಾ ಪ್ರಣಯದಿಂದ ಅಥವಾ ಪ್ರಮಾದದಿಂದ ಏನು ಹೇಳಿರುವೆನೋ; ವಿಹಾರ, ಶಯ್ಯೆ, ಆಸನ ಮತ್ತು ಭೋಜನಗಳಲ್ಲಿ ಅಪಹಾಸಕ್ಕಾಗಿ ಒಬ್ಬನೇ ಇರುವಾಗ ಅಥವಾ ಇತರರ ಸಮಕ್ಷಮದಲ್ಲಿ ಏನು ಅಸತ್ಕಾರ ಮಾಡಿದೆನೋ ಅದನ್ನು ಅಪ್ರಮೇಯನಾದ ನೀನು ಕ್ಷಮಿಸಬೇಕು!
06033043a ಪಿತಾಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್।
06033043c ನ ತ್ವತ್ಸಮೋಽಸ್ತ್ಯಭ್ಯಧಿಕಃ ಕುತೋಽನ್ಯೋ ಲೋಕತ್ರಯೇಽಪ್ಯಪ್ರತಿಮಪ್ರಭಾವ।।
ಈ ಲೋಕದ ಚರಾಚರಗಳ ಪಿತನಾಗಿರುವೆ. ನೀನು ಇದರ ಗರೀಯ ಗುರುವೂ ಪೂಜ್ಯನೂ ಆಗಿರುವೆ. ಅಪ್ರತಿಮಪ್ರಭಾವ! ಲೋಕತ್ರಯದಲ್ಲಿಯೂ ನಿನ್ನ ಸಮನಾದವನು ಇಲ್ಲ. ಇನ್ನು ನಿನಗಿಂತ ಹೆಚ್ಚಿನವನು ಎಲ್ಲಿ?
06033044a ತಸ್ಮಾತ್ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಂ।
06033044c ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿ ದೇವ ಸೋಢುಂ।।
ಆದುದರಿಂದ ಪ್ರಣಾಮಮಾಡಿ, ಕಾಯದಿಂದ ಅಡ್ಡಬಿದ್ದು ಈಶ ಈಡ್ಯನಾದ ನಿನ್ನನ್ನು ಪ್ರಸನ್ನಗೊಳಿಸುತ್ತಿದ್ದೇನೆ. ತಂದೆಯು ಮಗನನ್ನು, ಸಖನು ಸಖನನ್ನು ಮತ್ತು ಪ್ರಿಯನು ಪ್ರಿಯೆಯನ್ನು ಸಹಿಸಿಕೊಳ್ಳುವಂತೆ ದೇವ! ಸಹಿಸಿಕೊಳ್ಳಬೇಕು.
06033045a ಅದೃಷ್ಟಪೂರ್ವಂ ಹೃಷಿತೋಽಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ।
06033045c ತದೇವ ಮೇ ದರ್ಶಯ ದೇವ ರೂಪಂ ಪ್ರಸೀದ ದೇವೇಶ ಜಗನ್ನಿವಾಸ।।
ಹಿಂದೆ ಎಂದೂ ನೋಡಿರದುದನ್ನು ಕಂಡು ಹರ್ಷಿತನಾಗಿದ್ದೇನೆ. ಮತ್ತು ಭಯದಿಂದ ನನ್ನ ಮನಸ್ಸು ತುಂಬಾ ವ್ಯಥಿತಗೊಂಡಿದೆ. ದೇವ! ನನಗೆ ಅದೇ ರೂಪವನ್ನು ತೋರಿಸು. ದೇವೇಶ! ಜಗನ್ನಿವಾಸ! ಪ್ರಸನ್ನನಾಗು!
06033046a ಕಿರೀಟಿನಂ ಗದಿನಂ ಚಕ್ರಹಸ್ತಂ ಇಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ।
06033046c ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ।।
ಕಿರೀಟಿಯೂ, ಗದಿಯೂ, ಚಕ್ರವನ್ನು ಹಿಡಿದಿರುವವನೂ ಆಗಿದ್ದ ಅದೇ ನಿನ್ನನ್ನು ನೋಡಲು ಬಯಸುತ್ತೇನೆ. ಸಹಸ್ರಬಾಹೋ! ವಿಶ್ವಮೂರ್ತೇ! ಅದೇ ಚತುರ್ಭುಜಗಳ ರೂಪದಿಂದ ತೋರು!”
06033047 ಶ್ರೀಭಗವಾನುವಾಚ।
06033047a ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್।
06033047c ತೇಜೋಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಂ।।
ಶ್ರೀಭಗವಾನನು ಹೇಳಿದನು: “ಅರ್ಜುನ! ನಾನು ನಿನ್ನ ಮೇಲೆ ಪ್ರಸನ್ನನಾಗಿರುವುದರಿಂದ ನಿನಗೆ ನಾನು ತೇಜೋಮಯವೂ, ವಿಶ್ವವೂ, ಅನಂತವೂ, ಆದಿಯಲ್ಲಿರುವುದೂ ಆದ ಈ ಪರಮ ರೂಪವನ್ನು ಆತ್ಮಯೋಗದಿಂದ ತೋರಿಸಿದೆ. ಇದಕ್ಕೂ ಮೊದಲು ನೀನಲ್ಲದೇ ಬೇರೆ ಯಾರೂ ನನ್ನನ್ನು ಹೀಗೆ ಕಂಡದ್ದಿಲ್ಲ.
06033048a ನ ವೇದಯಜ್ಞಾಧ್ಯಯನೈರ್ನ ದಾನೈರ್ ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ।
06033048c ಏವಂರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ।।
ಕುರುಪ್ರವೀರ! ವೇದ, ಯಜ್ಞ, ಅಧ್ಯಯನ, ದಾನಗಳಿಂದಾಗಲೀ ಕ್ರಿಯೆಗಳಿಂದಾಗಲೀ, ಉಗ್ರ ತಪಸ್ಸುಗಳಿಂದಾಗಲೀ ನನ್ನ ಈ ರೂಪವನ್ನು ನರಲೋಕದಲ್ಲಿ ನಿನ್ನ ಹೊರತು ಮತ್ತೊಬ್ಬನಿಂದ ನೋಡಲು ಶಕ್ಯವಿಲ್ಲ.
06033049a ಮಾ ತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಂ।
06033049c ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ।।
ನನ್ನ ಈ ಘೋರ ರೂಪವನ್ನು ಕಂಡು ನಿನಗೆ ವ್ಯಥೆಯಾಗದಿರಲಿ. ವಿಮೂಢಭಾವವೂ ಆಗದಿರಲಿ. ಭಯವನ್ನು ಕಳೆದುಕೊಂಡು ಪುನಃ ನೀನು ಪ್ರೀತಮನಸ್ಕನಾಗು. ನನ್ನ ಅದೇ ರೂಪವನ್ನು ಇಗೋ ನೋಡು!””
06033050 ಸಂಜಯ ಉವಾಚ।
06033050a ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ।
06033050c ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ।।
ಸಂಜಯನು ಹೇಳಿದನು: “ಅರ್ಜುನನಿಗೆ ಹೀಗೆ ಹೇಳಿ ವಾಸುದೇವನು ಮತ್ತೆ ತನ್ನ ಮೊದಲಿನ ರೂಪವನ್ನೇ ತೋರಿಸಿದನು. ಪುನಃ ಸೌಮ್ಯರೂಪವನ್ನು ತಳೆದ ಆ ಮಹಾತ್ಮನು ಭೀತನಾಗಿದ್ದ ಅರ್ಜುನನನ್ನು ಸಂತವಿಸಿದನು.
06033051 ಅರ್ಜುನ ಉವಾಚ।
06033051a ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ।
06033051c ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ।।
ಅರ್ಜುನನು ಹೇಳಿದನು: “ಜನಾರ್ದನ! ಸೌಮ್ಯವಾದ ನಿನ್ನ ಈ ಮಾನುಷರೂಪವನ್ನು ನೋಡಿ ಈಗ ಸಚೇತನಗೊಂಡು ಸ್ವಭಾವವನ್ನು ಹಿಂದೆ ಪಡೆದಿದ್ದೇನೆ.”
06033052 ಶ್ರೀಭಗವಾನುವಾಚ।
06033052a ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ।
06033052c ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಮ್ಕ್ಷಿಣಃ।।
ಶ್ರೀಭಗವಾನನು ಹೇಳಿದನು: “ದೊರೆಯಲು ತುಂಬಾ ಕಷ್ಟವಾದ ಆದರೆ ನೀನು ನೋಡಿದ ನನ್ನ ಈ ರೂಪವನ್ನು ನೋಡಲು ದೇವತೆಗಳೂ ಕೂಡ ನಿತ್ಯವೂ ಬಯಸುತ್ತಿರುತ್ತಾರೆ.
06033053a ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ।
06033053c ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ।।
ನೀನು ಹೇಗೆ ನನ್ನನ್ನು ನೋಡಿದೆಯೋ ಹಾಗೆ ನೋಡಲು ವೇದಗಳಿಂದ ಸಾಧ್ಯವಿಲ್ಲ. ತಪಸ್ಸಿನಿಂದ ಆಗುವುದಿಲ್ಲ. ದಾನಗಳಿಂದ ಮತ್ತು ಇಜ್ಯಗಳಿಂದ ಆಗುವುದಿಲ್ಲ.
06033054a ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋಽರ್ಜುನ।
06033054c ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ।।
ಅರ್ಜುನ! ಪರಂತಪ! ಅನನ್ಯ ಭಕ್ತಿಯಿಂದ ಈ ವಿಧದ ನನ್ನನ್ನು ಇದ್ದಹಾಗೆ ತಿಳಿದುಕೊಳ್ಳಲು ಮತ್ತು ನೋಡಲು ಸಾಧ್ಯ.
06033055a ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ।
06033055c ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ।।
ಪಾಂಡವ! ನನಗಾಗಿಯೇ ಮಾಡುವವನು, ನಾನೇ ಪರಮಗತಿಯೆಂದು ತಿಳಿದುಕೊಂಡಿರುವವನು, ನನ್ನ ಭಕ್ತನು, ಸಂಗವರ್ಜಿತನಾಗಿ, ಸರ್ವಭೂತಗಳಲ್ಲಿ ನಿರ್ವೈರನಾಗಿರುವವನು ನನ್ನನ್ನೇ ಸೇರುತ್ತಾನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಶ್ರೀಮದ್ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನಸಂವಾದೇ ವಿಶ್ವರೂಪದರ್ಶನಯೋಗೋ ನಾಮ ಏಕಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಶ್ರೀಮದ್ಭಗವದ್ಗೀತಾ ಉಪನಿಷತ್ತಿನಲ್ಲಿ ಬ್ರಹ್ಮವಿದ್ಯೆಯ ಯೋಗಶಾಸ್ತ್ರದಲ್ಲಿ ಶ್ರೀಕೃಷ್ಣಾರ್ಜುನಸಂವಾದದಲ್ಲಿ ವಿಶ್ವರೂಪದರ್ಶನಯೋಗವೆಂಬ ಹನ್ನೊಂದನೇ ಅಧ್ಯಾಯವು.
ಭೀಷ್ಮ ಪರ್ವಣಿ ತ್ರಯಸ್ತ್ರಿಂಶೋಽಧ್ಯಾಯಃ।।
ಭೀಷ್ಮ ಪರ್ವದಲ್ಲಿ ಮೂವತ್ಮೂರನೇ ಅಧ್ಯಾಯವು.