ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಭಗವದ್ಗೀತಾ ಪರ್ವ
ಅಧ್ಯಾಯ 18
ಸಾರ
ಕುರುಸೇನಾವರ್ಣನೆ (1-18).
06018001 ಸಂಜಯ ಉವಾಚ।
06018001a ತತೋ ಮುಹೂರ್ತಾತ್ತುಮುಲಃ ಶಬ್ದೋ ಹೃದಯಕಂಪನಃ।
06018001c ಅಶ್ರೂಯತ ಮಹಾರಾಜ ಯೋಧಾನಾಂ ಪ್ರಯುಯುತ್ಸತಾಂ।।
ಸಂಜಯನು ಹೇಳಿದನು: “ಮಹಾರಾಜ! ಆಗ ಮುಹೂರ್ತಕಾಲದಲ್ಲಿಯೇ ಉತ್ಸಾಹದಿಂದ ಬಂದಿರುವ ಯೋಧರ ಹೃದಯವನ್ನು ಕಂಪಿಸುವ ತುಮುಲ ಶಬ್ಧವು ಕೇಳಿಬಂದಿತು.
06018002a ಶಂಖದುಂದುಭಿನಿರ್ಘೋಷೈರ್ವಾರಣಾನಾಂ ಚ ಬೃಂಹಿತೈಃ।
06018002c ರಥಾನಾಂ ನೇಮಿಘೋಷೈಶ್ಚ ದೀರ್ಯತೀವ ವಸುಂಧರಾ।।
ಶಂಖ-ದುಂದುಭಿಗಳ ನಿರ್ಘೋಷದಿಂದ, ಆನೆಗಳ ಘೀಳಿನಿಂದ, ರಥಚಕ್ರಗಳ ಘೋಷದಿಂದ ವಸುಂಧರೆಯು ಅತೀವ ನೋವಿಗೊಳಗಾದಳು.
06018003a ಹಯಾನಾಂ ಹೇಷಮಾಣಾನಾಂ ಯೋಧಾನಾಂ ತತ್ರ ಗರ್ಜತಾಂ।
06018003c ಕ್ಷಣೇನ ಖಂ ದಿಶಶ್ಚೈವ ಶಬ್ದೇನಾಪೂರಿತಂ ತದಾ।।
ಆಗ ಕ್ಷಣದಲ್ಲಿ ಆಕಾಶ ದಿಕ್ಕುಗಳು ಕುದುರೆಗಳ ಹೇಂಕಾರ ಮತ್ತು ಯೋಧರ ಗರ್ಜನೆಗಳ ಶಬ್ಧಗಳಿಂದ ತುಂಬಿದವು.
06018004a ಪುತ್ರಾಣಾಂ ತವ ದುರ್ಧರ್ಷ ಪಾಂಡವಾನಾಂ ತಥೈವ ಚ।
06018004c ಸಮಕಂಪಂತ ಸೈನ್ಯಾನಿ ಪರಸ್ಪರಸಮಾಗಮೇ।।
ನಿನ್ನ ದುರ್ಧರ್ಷ ಪುತ್ರರ ಮತ್ತು ಪಾಂಡವರ ಸೇನೆಗಳು ಪರಸ್ಪರರನ್ನು ಸೇರಿ ತತ್ತರಿಸಿದವು.
06018005a ತತ್ರ ನಾಗಾ ರಥಾಶ್ಚೈವ ಜಾಂಬೂನದವಿಭೂಷಿತಾಃ।
06018005c ಭ್ರಾಜಮಾನಾ ವ್ಯದೃಶ್ಯಂತ ಮೇಘಾ ಇವ ಸವಿದ್ಯುತಃ।।
ಅಲ್ಲಿ ಬಂಗಾರದಿಂದ ವಿಭೂಷಿತರಾದ ಆನೆ-ರಥಗಳು ಮಿಂಚಿನಿಂದ ಕೂಡಿದ ಮೋಡಗಳಂತೆ ಹೊಳೆಯುತ್ತಿದ್ದವು.
06018006a ಧ್ವಜಾ ಬಹುವಿಧಾಕಾರಾಸ್ತಾವಕಾನಾಂ ನರಾಧಿಪ।
06018006c ಕಾಂಚನಾಂಗದಿನೋ ರೇಜುರ್ಜ್ವಲಿತಾ ಇವ ಪಾವಕಾಃ।।
ನರಾಧಿಪ! ನಿನ್ನ ಸೇನೆಯ ಬಹುವಿಧಾಕಾರದ ಧ್ವಜಗಳು ಮತ್ತು ಕಾಂಚನಾಂಗದರ ಸುರುಳಿಗಳು ಉರಿಯುತ್ತಿರುವ ಪಾವಕನಂತೆ ತೋರಿದವು.
06018007a ಸ್ವೇಷಾಂ ಚೈವ ಪರೇಷಾಂ ಚ ಸಮದೃಶ್ಯಂತ ಭಾರತ।
06018007c ಮಹೇಂದ್ರಕೇತವಃ ಶುಭ್ರಾ ಮಹೇಂದ್ರಸದನೇಷ್ವಿವ।।
ಭಾರತ! ನಿನ್ನ ಮತ್ತು ಶತ್ರುಗಳ ಶುಭವಾದ ಮಹೇಂದ್ರ ಧ್ವಜಗಳು ಮಹೇಂದ್ರನ ಸದನದಂತೆ ತೋರಿದವು.
06018008a ಕಾಂಚನೈಃ ಕವಚೈರ್ವೀರಾ ಜ್ವಲನಾರ್ಕಸಮಪ್ರಭೈಃ।
06018008c ಸನ್ನದ್ಧಾಃ ಪ್ರತ್ಯದೃಶ್ಯಂತ ಗ್ರಹಾಃ ಪ್ರಜ್ವಲಿತಾ ಇವ।।
ಸನ್ನದ್ಧರಾಗಿದ್ದ ಪ್ರಜ್ವಲಿಸುವ ಸೂರ್ಯನಂತೆ ಪ್ರಭೆಯಿದ್ದ ಕಾಂಚನ ಕವಚಗಳಿದ್ದ ಆ ವೀರರು ಪ್ರಜ್ವಲಿಸುತ್ತಿರುವ ಗ್ರಹಗಳಂತೆ ಕಂಡುಬಂದರು.
06018009a ಉದ್ಯತೈರಾಯುಧೈಶ್ಚಿತ್ರೈಸ್ತಲಬದ್ಧಾಃ ಪತಾಕಿನಃ।
06018009c ಋಷಭಾಕ್ಷಾ ಮಹೇಷ್ವಾಸಾಶ್ಚಮೂಮುಖಗತಾ ಬಭುಃ।।
ಬಣ್ಣ ಬಣ್ಣದ ಕರಬಂಧಗಳನ್ನು ಧರಿಸಿದ್ದ, ಆಯುಧಗಳನ್ನು ಎತ್ತಿಹಿಡಿದ ಋಷಭಾಕ್ಷ ಮಹೇಷ್ವಾಸ ಪತಾಕಿಗಳು ಸೇನೆಗಳ ಮುಂದೆ ಇದ್ದರು.
06018010a ಪೃಷ್ಠಗೋಪಾಸ್ತು ಭೀಷ್ಮಸ್ಯ ಪುತ್ರಾಸ್ತವ ನರಾಧಿಪ।
06018010c ದುಃಶಾಸನೋ ದುರ್ವಿಷಹೋ ದುರ್ಮುಖೋ ದುಃಸಹಸ್ತಥಾ।।
06018011a ವಿವಿಂಶತಿಶ್ಚಿತ್ರಸೇನೋ ವಿಕರ್ಣಶ್ಚ ಮಹಾರಥಃ।
ನರಾಧಿಪ! ಭೀಷ್ಮನನ್ನು ಹಿಂದಿನಿಂದ ನಿನ್ನ ಪುತ್ರರಾದ ದುಃಶಾಸನ, ದುರ್ವಿಷಹ, ದುರ್ಮುಖ, ವಿವಿಂಶತಿ, ಚಿತ್ರಸೇನ ಮತ್ತು ಮುಹಾರಥಿ ವಿಕರ್ಣರು ರಕ್ಷಿಸುತ್ತಿದ್ದರು.
06018011c ಸತ್ಯವ್ರತಃ ಪುರುಮಿತ್ರೋ ಜಯೋ ಭೂರಿಶ್ರವಾಃ ಶಲಃ।।
06018012a ರಥಾ ವಿಂಶತಿಸಾಹಸ್ರಾಸ್ತಥೈಷಾಮನುಯಾಯಿನಃ।
ಅವರನ್ನು ಅನುಸರಿಸಿ ಸತ್ಯವ್ರತ, ಪುರುಮಿತ್ರ, ಜಯ, ಭೂರಿಶ್ರವ, ಶಲ, ಹಾಗೂ ಇಪ್ಪತ್ತು ಸಾವಿರ ರಥಗಳು ಹೋದವು.
06018012c ಅಭೀಷಾಹಾಃ ಶೂರಸೇನಾಃ ಶಿಬಯೋಽಥ ವಸಾತಯಃ।।
06018013a ಶಾಲ್ವಾ ಮತ್ಸ್ಯಾಸ್ತಥಾಂಬಷ್ಠಾಸ್ತ್ರಿಗರ್ತಾಃ ಕೇಕಯಾಸ್ತಥಾ।
06018013c ಸೌವೀರಾಃ ಕಿತವಾಃ ಪ್ರಾಚ್ಯಾಃ ಪ್ರತೀಚ್ಯೋದೀಚ್ಯಮಾಲವಾಃ।।
06018014a ದ್ವಾದಶೈತೇ ಜನಪದಾಃ ಸರ್ವೇ ಶೂರಾಸ್ತನುತ್ಯಜಃ।
06018014c ಮಹತಾ ರಥವಂಶೇನ ತೇಽಭ್ಯರಕ್ಷನ್ಪಿತಾಮಹಂ।।
ಅಭೀಷಾಹರು, ಶೂರಸೇನರು, ಶಿಬಿಗಳು, ವಸಾತಯರು, ಶಾಲ್ವರು, ಮತ್ಸ್ಯರು, ಅಂಬಷ್ಠರು, ತ್ರಿಗರ್ತರು, ಕೇಕಯರು, ಸೌವೀರರು, ಕಿತವರು, ಪ್ರಾಚ್ಯರು, ಪತೀಚ್ಯರು, ಉದೀಚ್ಯರು, ಮಾಲವರು ಈ ಹನ್ನೆರಡು ಜನಪದಗಳು, ಎಲ್ಲರೂ ತನುವನ್ನು ತ್ಯಜಿಸಿದ ಶೂರರು, ಮಹಾ ರಥಗುಂಪುಗಳೊಂದಿಗೆ ಪಿತಾಮಹನನ್ನು ರಕ್ಷಿಸುತ್ತಿದ್ದರು.
06018015a ಅನೀಕಂ ದಶಸಾಹಸ್ರಂ ಕುಂಜರಾಣಾಂ ತರಸ್ವಿನಾಂ।
06018015c ಮಾಗಧೋ ಯೇನ ನೃಪತಿಸ್ತದ್ರಥಾನೀಕಮನ್ವಯಾತ್।।
ಹತ್ತು ಸಾವಿರ ತರಸ್ವಿ ಆನೆಗಳ ಸೇನೆಯೊಂದಿಗೆ ನೃಪತಿ ಮಾಗಧನು ಆ ಸೇನೆಯನ್ನು ಅನುಸರಿಸಿದನು.
06018016a ರಥಾನಾಂ ಚಕ್ರರಕ್ಷಾಶ್ಚ ಪಾದರಕ್ಷಾಶ್ಚ ದಂತಿನಾಂ।
06018016c ಅಭೂವನ್ವಾಹಿನೀಮಧ್ಯೇ ಶತಾನಾಮಯುತಾನಿ ಷಟ್।।
ಸೇನೆಗಳ ಮಧ್ಯೆ ರಥಗಳ ಚಕ್ರಗಳನ್ನು ಕಾಯುವವರು ಮತ್ತು ಆನೆಗಳ ಪಾದಗಳನ್ನು ರಕ್ಷಿಸುತ್ತಿದ್ದವರ ಸಂಖ್ಯೆಯೇ ೬೦ ಲಕ್ಷವಾಗಿತ್ತು.
06018017a ಪಾದಾತಾಶ್ಚಾಗ್ರತೋಽಗಚ್ಛನ್ಧನುಶ್ಚರ್ಮಾಸಿಪಾಣಯಃ।
06018017c ಅನೇಕಶತಸಾಹಸ್ರಾ ನಖರಪ್ರಾಸಯೋಧಿನಃ।।
ದನುಸ್ಸು, ಖಡ್ಗ ತೋಮರಗಳನ್ನು ಹಿಡಿದು ಸೇನೆಗಳ ಮುಂದೆ ಹೋಗುತ್ತಿದ್ದ ಪದಾತಿಗಳ ಸಂಖ್ಯೆಯು ಅನೇಕ ಲಕ್ಷಗಳಾಗಿತ್ತು. ಅವರು ಉಗುರು ಮತ್ತು ಪ್ರಾಸಗಳನ್ನೂ ಬಳಸಿ ಹೋರಾಡುವವರಾಗಿದ್ದರು.
06018018a ಅಕ್ಷೌಹಿಣ್ಯೋ ದಶೈಕಾ ಚ ತವ ಪುತ್ರಸ್ಯ ಭಾರತ।
06018018c ಅದೃಶ್ಯಂತ ಮಹಾರಾಜ ಗಂಗೇವ ಯಮುನಾಂತರೇ।।
ಭಾರತ! ಮಹಾರಾಜ! ಹನ್ನೊಂದು ಅಕ್ಷೌಹಿಣಿಯ ನಿನ್ನ ಪುತ್ರನ ಸೇನೆಯು ಗಂಗೆಯಿಂದ ಅಗಲಿದ ಯಮುನೆಯಂತೆ ತೋರಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಭಗವದ್ಗೀತಾ ಪರ್ವಣಿ ಸೈನ್ಯವರ್ಣನೇ ಅಷ್ಟಾದಶೋಽಧ್ಯಾಯಃ।।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಭಗವದ್ಗೀತಾ ಪರ್ವದಲ್ಲಿ ಸೈನ್ಯವರ್ಣನೆಯೆಂಬ ಹದಿನೆಂಟನೇ ಅಧ್ಯಾಯವು.