ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಭೀಷ್ಮ ಪರ್ವ
ಜಂಬೂಖಂಡವಿನಿರ್ಮಾಣ ಪರ್ವ
ಅಧ್ಯಾಯ 11
ಸಾರ
ಯುಗವರ್ಣನೆ (1-14)
06011001 ಧೃತರಾಷ್ಟ್ರ ಉವಾಚ।
06011001a ಭಾರತಸ್ಯಾಸ್ಯ ವರ್ಷಸ್ಯ ತಥಾ ಹೈಮವತಸ್ಯ ಚ।
06011001c ಪ್ರಮಾಣಮಾಯುಷಃ ಸೂತ ಫಲಂ ಚಾಪಿ ಶುಭಾಶುಭಂ।।
06011002a ಅನಾಗತಮತಿಕ್ರಾಂತಂ ವರ್ತಮಾನಂ ಚ ಸಂಜಯ।
06011002c ಆಚಕ್ಷ್ವ ಮೇ ವಿಸ್ತರೇಣ ಹರಿವರ್ಷಂ ತಥೈವ ಚ।।
ಧೃತರಾಷ್ಟ್ರನು ಹೇಳಿದನು: “ಸೂತ! ಸಂಜಯ! ಈ ಭಾರತ ವರ್ಷದ, ಹೈಮವತದ ಮತ್ತು ಹಾಗೆಯೇ ಹರಿವರ್ಷದ ಆಯುಷ್ಯ ಪ್ರಮಾಣಗಳನ್ನೂ, ವರ್ತಮಾನದ, ಕಳೆದುಹೋದ, ಮತ್ತು ಮುಂದೆ ಆಗಲಿರುವ ಶುಭಾಶುಭ ಫಲಗಳನ್ನೂ ವಿಸ್ತಾರವಾಗಿ ನನಗೆ ಹೇಳು.”
06011003 ಸಂಜಯ ಉವಾಚ।
06011003a ಚತ್ವಾರಿ ಭಾರತೇ ವರ್ಷೇ ಯುಗಾನಿ ಭರತರ್ಷಭ।
06011003c ಕೃತಂ ತ್ರೇತಾ ದ್ವಾಪರಂ ಚ ಪುಷ್ಯಂ ಚ ಕುರುವರ್ಧನ।।
ಸಂಜಯನು ಹೇಳಿದನು: “ಭರತರ್ಷಭ! ಕುರುವರ್ಧನ! ಭಾರತ ವರ್ಷದಲ್ಲಿ ನಾಲ್ಕು ಯುಗಗಳಿವೆ - ಕೃತ, ತ್ರೇತಾ, ದ್ವಾಪರ ಮತ್ತು ಪುಷ್ಯ.
06011004a ಪೂರ್ವಂ ಕೃತಯುಗಂ ನಾಮ ತತಸ್ತ್ರೇತಾಯುಗಂ ವಿಭೋ।
06011004c ಸಂಕ್ಷೇಪಾದ್ದ್ವಾಪರಸ್ಯಾಥ ತತಃ ಪುಷ್ಯಂ ಪ್ರವರ್ತತೇ।।
ವಿಭೋ! ಮೊದಲನೆಯದರ ಹೆಸರು ಕೃತಯುಗ, ಅನಂತರದ್ದು ತ್ರೇತಾಯುಗ. ಅದು ಕಳೆದ ನಂತರ ದ್ವಾಪರ. ಮತ್ತೆ ಪುಷ್ಯಯುಗವು ಬರುತ್ತದೆ.
06011005a ಚತ್ವಾರಿ ಚ ಸಹಸ್ರಾಣಿ ವರ್ಷಾಣಾಂ ಕುರುಸತ್ತಮ।
06011005c ಆಯುಃಸಂಖ್ಯಾ ಕೃತಯುಗೇ ಸಂಖ್ಯಾತಾ ರಾಜಸತ್ತಮ।।
ಕುರುಸತ್ತಮ! ರಾಜಸತ್ತಮ! ಕೃತಯುಗದಲ್ಲಿ ಆಯಸ್ಸಿನ ಪ್ರಮಾಣ ನಾಲ್ಕು ಸಾವಿರ ವರ್ಷಗಳು.
06011006a ತಥಾ ತ್ರೀಣಿ ಸಹಸ್ರಾಣಿ ತ್ರೇತಾಯಾಂ ಮನುಜಾಧಿಪ।
06011006c ದ್ವಿಸಹಸ್ರಂ ದ್ವಾಪರೇ ತು ಶತೇ ತಿಷ್ಠತಿ ಸಂಪ್ರತಿ।।
ಹಾಗೆಯೇ ಮನುಜಾಧಿಪ! ತ್ರೇತದಲ್ಲಿ ಮೂರು ಸಾವಿರ. ಈಗ ದ್ವಾಪರದಲ್ಲಿ ಸದ್ಯ ಎರಡು ಸಾವಿರ ವರ್ಷಗಳು.
06011007a ನ ಪ್ರಮಾಣಸ್ಥಿತಿರ್ಹ್ಯಸ್ತಿ ಪುಷ್ಯೇಽಸ್ಮಿನ್ಭರತರ್ಷಭ।
06011007c ಗರ್ಭಸ್ಥಾಶ್ಚ ಮ್ರಿಯಂತೇಽತ್ರ ತಥಾ ಜಾತಾ ಮ್ರಿಯಂತಿ ಚ।।
ಭರತರ್ಷಭ! ಪುಷ್ಯದಲ್ಲಿ ಇಂತಿಷ್ಟೇ ಪ್ರಮಾಣವೆಂದಿರುವುದಿಲ್ಲ. ಆಗ ಗರ್ಭಾವಸ್ಥೆಯಲ್ಲಿಯೂ ಸಾಯಬಹುದು ಅಥವಾ ಹುಟ್ಟಿದ ಕೂಡಲೇ ಸಾಯಬಹುದು.
06011008a ಮಹಾಬಲಾ ಮಹಾಸತ್ತ್ವಾಃ ಪ್ರಜಾಗುಣಸಮನ್ವಿತಾಃ।
06011008c ಅಜಾಯಂತ ಕೃತೇ ರಾಜನ್ಮುನಯಃ ಸುತಪೋಧನಾಃ।।
ರಾಜನ್! ಕೃತಯುಗದಲ್ಲಿ ಮಹಾಬಲರೂ, ಮಹಾಸತ್ವರೂ, ಪ್ರಜಾಗುಣಸಮನ್ವಿತರೂ ಆದ ಮುನಿಗಳು, ಉತ್ತಮ ತಪೋಧನರು ಹುಟ್ಟುತ್ತಾರೆ.
06011009a ಮಹೋತ್ಸಾಹಾ ಮಹಾತ್ಮಾನೋ ಧಾರ್ಮಿಕಾಃ ಸತ್ಯವಾದಿನಃ।
06011009c ಜಾತಾಃ ಕೃತಯುಗೇ ರಾಜನ್ಧನಿನಃ ಪ್ರಿಯದರ್ಶನಾಃ।।
ರಾಜನ್! ಕೃತಯುಗದಲ್ಲಿ ಮಹೋತ್ಸಾಹಿಗಳು, ಮಹಾತ್ಮರು, ಧಾರ್ಮಿಕರು, ಸತ್ಯವಾದಿಗಳು, ಧನಿಕರು ಮತ್ತು ಅತೀವ ಸುಂದರರು ಜನಿಸುತ್ತಾರೆ.
06011010a ಆಯುಷ್ಮಂತೋ ಮಹಾವೀರಾ ಧನುರ್ಧರವರಾ ಯುಧಿ।
06011010c ಜಾಯಂತೇ ಕ್ಷತ್ರಿಯಾಃ ಶೂರಾಸ್ತ್ರೇತಾಯಾಂ ಚಕ್ರವರ್ತಿನಃ।।
ತ್ರೇತದಲ್ಲಿ ಆಯುಷ್ಮಂತರೂ, ಮಹಾವೀರರೂ, ಯುದ್ಧದಲ್ಲಿ ಶ್ರೇಷ್ಠ ಧನುರ್ಧರರೂ ಆದ ಶೂರ ಕ್ಷತ್ರಿಯ ಚಕ್ರವರ್ತಿಗಳು ಜನಿಸುತ್ತಾರೆ.
06011011a ಸರ್ವವರ್ಣಾ ಮಹಾರಾಜ ಜಾಯಂತೇ ದ್ವಾಪರೇ ಸತಿ।
06011011c ಮಹೋತ್ಸಾಹಾ ಮಹಾವೀರ್ಯಾಃ ಪರಸ್ಪರವಧೈಷಿಣಃ।।
ಮಹಾರಾಜ! ದ್ವಾಪರದಲ್ಲಿ ಎಲ್ಲ ವರ್ಣದವರೂ ಮಹೋತ್ಸಾಹಿಗಳಾಗಿಯೂ, ಮಹಾವೀರ್ಯವಂತರಾಗಿಯೂ, ಪರಸ್ಪರರನ್ನು ಸಂಹರಿಸಲು ಇಚ್ಛೆಯುಳ್ಳವರೂ ಆಗಿ ಹುಟ್ಟುತ್ತಾರೆ.
06011012a ತೇಜಸಾಲ್ಪೇನ ಸಂಯುಕ್ತಾಃ ಕ್ರೋಧನಾಃ ಪುರುಷಾ ನೃಪ।
06011012c ಲುಬ್ಧಾಶ್ಚಾನೃತಕಾಶ್ಚೈವ ಪುಷ್ಯೇ ಜಾಯಂತಿ ಭಾರತ।।
ಭಾರತ! ಪುಷ್ಯದಲ್ಲಿ ಅಲ್ಪ ತೇಜಸ್ಸುಳ್ಳವರಾಗಿ ಕ್ರೋಧ, ಸೊಕ್ಕು, ದುರಾಸೆ, ಸುಳ್ಳುಗಳಿಂದೊಡಗೂಡಿದವರು ಹುಟ್ಟುತ್ತಾರೆ.
06011013a ಈರ್ಷ್ಯಾ ಮಾನಸ್ತಥಾ ಕ್ರೋಧೋ ಮಾಯಾಸೂಯಾ ತಥೈವ ಚ।
06011013c ಪುಷ್ಯೇ ಭವಂತಿ ಮರ್ತ್ಯಾನಾಂ ರಾಗೋ ಲೋಭಶ್ಚ ಭಾರತ।।
ಭಾರತ! ಪುಷ್ಯದಲ್ಲಿ ಮನುಷ್ಯರು ಈರ್ಷೆ, ಮಾನ, ಕ್ರೋಧ, ಮಾಯೆ, ಅಸೂಯೆ, ರಾಗ, ಲೋಭಗಳಿಗೊಳಗಾಗುತ್ತಾರೆ.
06011014a ಸಂಕ್ಷೇಪೋ ವರ್ತತೇ ರಾಜನ್ದ್ವಾಪರೇಽಸ್ಮಿನ್ನರಾಧಿಪ।
06011014c ಗುಣೋತ್ತರಂ ಹೈಮವತಂ ಹರಿವರ್ಷಂ ತತಃ ಪರಂ।।
ರಾಜನ್! ನರಾಧಿಪ! ವರ್ತಮಾನದ ದ್ವಾಪರವು ಸ್ವಲ್ಪವೇ ಉಳಿದಿದೆ. ಭಾರತವರ್ಷಕ್ಕಿಂತ ಹೈಮವತ ವರ್ಷದ ಗುಣವು ಹೆಚ್ಚಿನದು. ಹರಿ ವರ್ಷದ ಗುಣವು ಅದಕ್ಕಿಂತಲೂ ಹೆಚ್ಚಿನದು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಣಿ ಭಾರತವರ್ಷೇಕೃತಾದ್ಯನಿರೋಧೇನಾಯುರ್ನಿರೂಪಣೇ ಏಕಾದಶೋಽಧ್ಯಾಯಃ।।
ಇದು ಶ್ರೀಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವದಲ್ಲಿ ಭಾರತವರ್ಷದಲ್ಲಿ ಕೃತಾದಿ ಅನುರೋಧೇನ ಆಯುರ್ನಿರೂಪಣ ಎಂಬ ಹನ್ನೊಂದನೇ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಭೀಷ್ಮ ಪರ್ವಣಿ ಜಂಬೂಖಂಡವಿನಿರ್ಮಾಣ ಪರ್ವಃ।
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮ ಪರ್ವದಲ್ಲಿ ಜಂಬೂಖಂಡವಿನಿರ್ಮಾಣ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-5/18, ಉಪಪರ್ವಗಳು-61/100, ಅಧ್ಯಾಯಗಳು-871/1995, ಶ್ಲೋಕಗಳು-28152/73784.